ಸುಲಗ್ನೇ ಸಾವಧಾನ, ಸುಮುಹೂರ್ತೇ ಸಾವಧಾನ, ತನ್ಮಧ್ಯೆ ತೊನೆಯಪ್ಪ ಧ್ಯಾನ ಸಾವಧಾನ…….!
ತುಮರಿ ಬರೆಯಲಿಲ್ಲ; ಬರೆದರೂ ಅಷ್ಟೆ ಬಿಟ್ಟರೂ ಅಷ್ಟೆ ಎಂಬುದು ತುಮರಿಯ ಅನಿಸಿಕೆ. ಮೂರೂ ಬಿಟ್ಟವನಿಗೆ ಯಾವುದೂ ನಾಟುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಸನಾತನ ಧರ್ಮ ಸಂವರ್ಧಿನೀ ಸಭಾದವರು ಝಾಡಿಸಿ ಹೊರಗೆ ಹಾಕಿದ ಮೇಲೆ ತುಮರಿಗೂ ಬಹಳ ಖುಷಿಯಾಗಿದೆ. ಇಲ್ಲಿಯವರೆಗೆ ಯಾರೂ ಹೇಳೋರು ಕೇಳೋರು ಇಲ್ಲ, ತಾನು ನಡೆದದ್ದೇ ದಾರಿ, ತನ್ನನ್ನು ಎದುರುಹಾಕಿಕೊಂಡು ಬದುಕುವವರುಂಟೇ ಎಂದು ಮೆರೆಯುತ್ತಿದ್ದ, ಈಗ ಬಾಲ ಕಟ್ ಮಾಡಿದ್ದಾರೆ!
ಅಮುಲ್ ಮಾಂತ್ರಿಕ ವರ್ಗೀಸ್ ಕುರಿಯನ್ ಬಗ್ಗೆ ನೀವು ಕೇಳಿರಬಹುದು; ಕೇರಳ ಮೂಲದ ವ್ಯಕ್ತಿ ಉದ್ದೇಶ ಸಾಫಲ್ಯಕ್ಕಾಗಿ ಜೀವನ ನಡೆಸಿದ್ದು, ಸಾಧಿಸಿದ್ದು ಎಲ್ಲವೂ ದೂರದ ಗುಜರಾತ್ ನಲ್ಲಿ. ಅವರು ಅಲ್ಲಿಗೆ ಹೋದ ಆ ಕಾಲದಲ್ಲಿ ಡೈರಿ ನಿರ್ಮಾಣಕ್ಕೆ ಯಾವ ಅನುಕೂಲವೂ ಇರಲಿಲ್ಲ. ಕೃಷಿಕರಿಗೆ ನಂಬಿಕೆಯೂ ಇರಲಿಲ್ಲ. ಹೊಸದೊಂದು ಅಲೆಯನ್ನು ಎಬ್ಬಿಸಿ, ಕ್ಷೀರಕ್ರಾಂತಿ ಎಂಬ ಹೆಸರಿನಲ್ಲಿ ಡೈರಿಯನ್ನು ಕಟ್ಟಿ, ಬೆಳೆಸಿ, ರೈತರಿಗೂ, ದೇಶಕ್ಕೂ ಉಪಕಾರಿಯಾದವರು ಕುರಿಯನ್. ಅವರ ಜನ್ಮಕ್ಕೆ ಅದೊಂದು ದೊಡ್ಡ ತಪಸ್ಸಾಗಿತ್ತು. ಅಂತಹ ತಪಸ್ಸಿನ ಗುರಿತಲುಪಿ ಜಗದ್ವಿಖ್ಯಾತರಾದವರು ಕುರಿಯನ್.
ಪ್ರತಿಯೊಬ್ಬ ಸನ್ಯಾಸಿಗೂ ಹಾಗೇ ಗುರಿಯಿರುತ್ತದೆ. ಸನ್ಯಾಸಿಯ ಗುರಿ ಸ್ವಾತ್ಮೋದ್ಧಾರದ ಜೊತೆಗೆ ಶಿಷ್ಯಗಡಣವನ್ನು ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆಸುವುದು. ಸ್ವಾತ್ಮೋದ್ಧಾರ ಮಾಡಿಕೊಳ್ಳುವುದು ಎಂದರೆ ಈರುಳ್ಳಿ ಉಪ್ಪಿಟ್ಟು, ಪಕೋಡ, ಬಜೆ ತಿಂದಷ್ಟು ಸುಲಭವಲ್ಲ. ಸನ್ಯಾಸಿ ಸನ್ಯಾಸ ಧರ್ಮವನ್ನು ಚಾಚೂತಪ್ಪದೆ ಪಾಲಿಸಬೇಕು. ಅಷ್ಟೈಶ್ವರ್ಯ ತುಂಬಿದ ಪರಿಸರದಲ್ಲಿ ಲೌಕಿಕ ಸುಖೋಪಭೋಗಗಳನ್ನು ತೊರೆದು ಪರಿವ್ರಾಜಕನಾಗುವುದು ಸುಲಭಸಾಧ್ಯವಲ್ಲ.
ವೈದಿಕರು ವೇದಘೋಷ ಮಾಡುವಾಗ, ಕಾವಿಹಾಕಿಕೊಂಡು, ತೊನೆಯುತ್ತ ಪೂಜೆ ಮಾಡೋದು, ಆರತಿ ಎತ್ತೋದು, ಎದುರು ಕುಳಿತ ಜನರೆಡೆಗೆ ’ಪವರ್ ಫುಲ್’ ಕಣ್ಣು ಬಿಡೋದು ಇಂಥಾದ್ನೆಲ್ಲ ಯಾರಾದರೂ ಮಾಡಬಹುದು. ಪೂಜೆಮಾಡುವಾಗಲೂ ಎದುರು ಕುಳಿತವರಲ್ಲಿ ಏಕಾಂತಕ್ಕೆ ಬೇಕಾದವರನ್ನು ಹುಡುಕೋದೂ ನಡೆಯಬಹುದು. ಸನ್ಯಾಸ ಅಂದರೆ ಅದಲ್ಲ, ಸನ್ಯಾಸದ ನ್ಯಾಸವೇ ವಿರಕ್ತಿ ಆಧಾರಿತ. ಅಲ್ಲಿ ಕಾಮಿನಿ, ಕಾಂಚಾಣಗಳ ಆಸೆಯಿರುವುದಿಲ್ಲ. ಅಷ್ಟೇ ಅಲ್ಲ, ಲೌಕಿಕವಾದ ಯಾವ ಆಸೆಯನ್ನೂ ಸನ್ಯಾಸಿಯಾದವ ಇಟ್ಟುಕೊಳ್ಳೋದಿಲ್ಲ. ಅವನ ಗುರಿಯೊಂದೇ-ಮೋಕ್ಷ ಸಾಧನೆ.
ಬಹಳದಿನಗಳಿಂದ ಗುಮ್ಮಣ್ಣ ಹೆಗಡೇರು ಸಿಕ್ಕಿರಲಿಲ್ಲ. ಅಂತೂ ಎರಡು ದಿನಗಳ ಹಿಂದೆ ವಾಟ್ಸಾಪ್ ಮೂಲಕ ಅವರ ಸಂವಹನ ಆಯಿತು. ಬೆಂಗಳೂರಿನಲ್ಲಿ ಬ್ರಾಹ್ಮಣ ಸಮಾವೇಶ ಬಹಳ ಚೆನ್ನಾಗಿ ನಡೆಯಿತಂತೆ. ಅದಕ್ಕೆ ಹಾಜರಿದ್ದವರಲ್ಲಿ ಗುಮ್ಮಣ್ಣ ಹೇಗಡೇರೂ ಒಬ್ಬರು. ಭಾನುವಾರದ ಮಧ್ಯಾಹ್ನದಲ್ಲಿ ಯದುಗಿರಿ ಯತಿರಾಜ ನಾರಾಯಣ ಜೀಯರ್ ಸ್ವಾಮಿಗಳು ಬಹಳ ಅದ್ಭುತ ಪ್ರವಚನವನ್ನು ನಡೆಸಿದರಂತೆ. ಅಂಥವರನ್ನೆಲ್ಲ ನೋಡಿಯಾದರೂ ತೊನೆಯಪ್ಪ ಸನ್ಯಾಸ ಧರ್ಮವನ್ನು ಅರ್ಥಮಾಡಿಕೊಳ್ಳಬಹುದಿತ್ತು, ಅರ್ಥಮಾಡಿಕೊಳ್ಳೋದು ಹಾಗಿರಲಿ, ತೊನೆಯಪ್ಪ ಪೀಠವನ್ನು ಆಕ್ರಮಿಸಿಕೊಂಡ ಉದ್ದೇಶವೇ ಬೇರೆ ಇತ್ತು ಎಂಬುದು ಈಗೀಗ ಇಡೀ ಸಮಾಜಕ್ಕೆ ಅರ್ಥವಾಗಿದೆ.
ಸಮಾವೇಶಕ್ಕೆ ಹೋಗಿದ್ದ ಗುಮ್ಮಣ್ಣ ಹೆಗಡೇರಿಗೆ ಬೇರೆ ಬೇರೆ ಪ್ರಾಂತದ ಹಲವಾರು ಜನ ಸಿಕ್ಕಿದ್ದರಂತೆ, ಸಮಾವೇಶದ ಸಭಾಂಗಣದಲ್ಲಿ ಉಳಿದೆಲ್ಲ ಸ್ವಾಮಿಗಳ ಭಾವಚಿತ್ರಗಳಿದ್ದವು, ಉಚ್ಚಾಟಿತ ತೊನೆಯಪ್ಪನ ಭಾವಚಿತ್ರ ಮಾತ್ರ ಅಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಜನ ತೊನೆಯಪ್ಪನ ಉಚ್ಚಾಟನೆಯ ಸುದ್ದಿಯನ್ನೇ ಮಾತಾಡಿಕೊಳ್ಳುತ್ತಿದ್ದರಂತೆ. ಹಿಂದೂ ಸಮಾಜಕ್ಕೆ ಇಂತಹ ಕಳ್ಳ ಸನ್ಯಾಸಿಗಳೊಂದು ಕಳಂಕ ಎಂದು ಹೇಳುತ್ತಿದ್ದರಂತೆ. ’ಸಾಮಾನು ಸ್ವಾಮಿ’ಯ ಬಗ್ಗೆ ಯಾರ ಬಾಯಲ್ಲಿ ಕೇಳಿದರೂ ಛೀ ಥೂ ಎಂಬ ಛೀತ್ಕಾರವೇ ಕೇಳಿಬರುತ್ತಿತ್ತು ಎಂದರು.
“ಆಂಟಿಯ ಪ್ಯಾಂಟಿಗೆ ಗಮ್ಮು ಅಂಟಿಕೊಂಟಿದೆ ಅಂತ ಹೇಳಿದಾಗ ಕಂಗಾಲಾಗಿದ್ದನಂತೆ ಮುಂಡೆಗಂಡ, ಆಗಲೇ ಪೀಠ ಬಿಟ್ಟು, ಹಿಮಾಲಯಕ್ಕೋ ಮತ್ತೊಂದಕ್ಕೋ ಹೋಗಿದ್ದರೆ ಬಚಾವಾಗ್ತಿದ್ದ, ಈಗ ಖಂಡಿತ ಬಚಾವಾಗೋದಿಲ್ಲ. ಪೀಠ ಬಿಟ್ಟು ಹೋದರೆ, ಹೋದಮೇಲೆ ತಾನಿರೋ ಊರ ತುಂಬೆಲ್ಲ ಹಾದರ ನಡೆಸಿ ಮಕ್ಕಳನ್ನು ಮಾಡಿಕೊಂಡಿದರೂ ನಮಗೆ ಸಂಬಂಧವಿರಲಿಲ್ಲ. ಆದರೆ ತಾನು ಮಾಡಿದ್ದೇ ಸರಿ, ತನ್ನನ್ನು ಯಾರೂ ವಿರೋಧಿಸಿ ಗೆಲ್ಲಲು ಸಾಧ್ಯವಿಲ್ಲ ಅಂದ್ಕಂಡು ಗಟ್ಟಿ ಕೂತ. ಈಗ ಉರುಳು ಹತ್ತಿರ ಬರ್ತಾ ಇದೆ. ಪಾಪಿಗೆ ತಕ್ಕ ಶಿಕ್ಷೆ ಆಗೇ ಆಗ್ತದೆ” ಎಂದರು ಗುಮ್ಮಣ್ಣ ಹೆಗಡೇರು.
ಅಂದಹಾಗೆ ಜಗದ್ಗುರು ಶೋಭರಾಜಾಚಾರ್ಯರ ಕುರಿವಾಡೆ ಮಠದ ಆವಾರದಲ್ಲಿ ನಾಳೆ ಒಂದು ಮದುವೆ. ಅದೇ-ಕಳೆದ ದಸರಾದಲ್ಲಿ ತೊನೆಯಪ್ಪನವರು ಖುದ್ದಾಗಿ ನಿಂತು ಗಿಂಡಿಯೊಂದಿಗೆ ಭಕ್ತೆಯೋರ್ವಳ ವಿವಾಹ ನಿಶ್ಚಿತಾರ್ಥ ನಡೆಸಿದ್ದರಲ್ಲ, ಆ ಮದುವೆ. ಪ್ರಿಯವದನೆಯ ಅಪ್ಪ ಅಮ್ಮಂದಿರು ಮಠದ ಹೋರಿಯ ಖಾಸಾ ಭಕ್ತರು. ಅದಕ್ಕೆಂತಲೇ ಊರಕಡೆಗೆ ಆ ದಂಪತಿಯನ್ನು ಇನ್ನಷ್ಟು ಕಾಡಿನ ಮೂಲೆಗೆ ಸೇರಿಸಿ ಕೃತಾರ್ಥರನ್ನಾಗಿ ಮಾಡಿದ್ದಾನೆ ತೊನೆಯಪ್ಪ ಎಂದು ಗುಮ್ಮಣ್ಣ ಹೆಗಡೇರು ನಗುತ್ತಿದ್ದರು. ಹುಡುಗಿಗೆ ಗಿಂಡಿ ಇಷ್ಟವೇ ಇಲ್ಲವಂತೆ; ಆದರೂ ಅಪ್ಪ-ಅಮ್ಮ ಹೇಳಿದಂತೆ ಕೇಳಬೇಕಲ್ಲ? ಹೀಗಾಗಿ ನಾಳೆ ಕುರಿವಾಡೆ ಮಠದಲ್ಲಿ ಸುಲಗ್ನೇ ಸಾವಧಾನ, ಸುಮುಹೂರ್ತೇ ಸಾವಧಾನ….ತನ್ಮಧ್ಯೆ ತೊನೆಯಪ್ಪ ಧ್ಯಾನ ಸಾವಧಾನ!
“ತೊನೆಯಪ್ಪ ಜೈಲುಪಾಲಾದ ಮೇಲೆ ಅವನು ಬಲವಂತವಾಗಿ ಮಾಡಿಸಿದ ಅಷ್ಟೂ ಮದುವೆಗಳು ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತವೆ. ಹಲವು ಹುಡುಗೀರು ಪೀಡೆ ತೊಲಗಿತೆಂದು ನಿಟ್ಟುಸಿರುಬಿಡ್ತಾರೆ. ನಿಕ್ಕಿ ಬೇಜಾರು ಮಾಡಿಕೊಳ್ಳೋರು ಏಕಾಂತದ ಆಂಟೀರು ಮಾತ್ರ. ಇದ್ದಾರಲ್ಲ ನೀತಾ ಗುಂಜಪ್ಪ, ಅನುರಾಗ, ಮಾದಕ್ಕಿ ತಿಮ್ಮಕ್ಕನ ಕತೆಯಂತು ಮುಗಿದು ಹೋಗಿದೆ, ಪಾಪ ಆಕೆ ಬರಬಾರದ ಕಾಯಿಲೆ ಅಂಟಿಕೊಂಡಿದ್ಯಂತೆ. ಏಕಾಂತದ ಆಂಟೀರಿಗೆ ಮುಂದೆ ತೆವಲು ತೀರಿಸಿಕೊಳ್ಳಲು ಮಠದಲ್ಲಿ ಅವಕಾಶವಿರೋದಿಲ್ಲ” ಅಂತಿದ್ರು ಗುಮ್ಮಣ್ಣ ಹೆಗಡೇರು.
“ತೊನೆಯಪ್ಪ ಪೀಠ ಇಳಿದು ಹೋದರೆ ಅಥವಾ ಒಳಗೆ ಹೋದರೆ ತಮ್ಮ ಬೇಳೆ ಬೇಯೋದಿಲ್ಲ ಅಂತ ಗೊತ್ತಿರುವ ಒಂದಷ್ಟು ಸಮಾನ ಮನಸ್ಕರು ಹಳದೀ ತಾಲೀಬಾನ್ ಮುಂಚೂಣಿಯಲ್ಲಿದ್ದಾರೆ. ಅವರೇ ಮಾಧ್ಯಮಗಳಿಗೆ ಹೇಳಿಕೆ ಕೊಡ್ತಾರೆ. ಪ್ರಚಾರ ಕೈಗೊಳ್ತಾರೆ, ಜೈಕಾರ ಹಾಕ್ತಾರೆ, ಯಾತ್ರೆಗಳನ್ನು ಆಯೋಜಿಸುತ್ತಾರೆ ಇನ್ನೂ ಏನೇನೋ….ಎಲ್ಲದರಲ್ಲೂ ದುಡ್ಡು ಹೊಡ್ಕಳ್ಳೋದು ಅವರ ಮುಖ್ಯ ಗುರಿ. ಏನೂ ಇಲ್ಲದೆ ಮಠಕ್ಕೆ ಬಂದಿದ್ದ ಅಂತಹ ಕೆಲವರು ಇಂದು ಕಬ್ಬಿಣದ ರಾಡ್ ಗಾತ್ರದ ಬಂಗಾರದ ಸರಗಳನ್ನು ಹಾಕಿಕೊಂಡಿದ್ದಾರೆ, ಮನೆ ಕಟ್ಟಿದ್ದಾರೆ, ಫ್ಲಾಟ್ ಖರೀದಿಸಿದ್ದಾರೆ. ಹಾಗೆ ತೊನೆಯಪ್ಪನ ಸೇವೆಯಲ್ಲಿರುವ ಬಹುತೇಕ ಮಂದಿ ತೊನೆಯಪ್ಪನಂತೆ ಕಚ್ಚೆಹರುಕರೇ. ಮೇಲಾಗಿ ಉಂಡಾಡಿಗಳು, ಮೈಗಳ್ಳರು. ಮಠದಲ್ಲಿ ಮೇಯಲು ಸಿಗ್ತದೆ ಅಂತ ಗೊತ್ತಾಗೇ ಮಠಕ್ಕೆ ಸೇರ್ಕೊಂಡು ಈ ಹಂತಕ್ಕೆ ತಂದಿಟ್ಟಿದ್ದಾರೆ” ಗುಮ್ಮಣ್ಣರು ಭೋರ್ಗರೆಯುತ್ತಿದ್ದರು.
“ಉತ್ತರಕ್ಕೆ ಹೋಗಿದ್ನಲ್ರೀ, ಯಾಕ್ ಹೋಗಿದ್ದಾಂತ ತಿಳಿದಿದ್ದ್ರಿ? ಮುಂದೆ ಬರ್ತಾ ಇರೋ ಸರ್ವೋಚ್ಚ ಉರುಳಿನಿಂದ ತಪ್ಪಿಸಿಕೊಳ್ಳೋ ಸಲುವಾಗಿ ಬಲೆ ಹೆಣೀಲಿಕ್ಕೆ ಹೋಗಿದ್ದ. ಇಲ್ದಿದ್ರೆ ಹಸುವಿನ ಕಿವಿಯೂರಿನ ಜಾತ್ರೆ ಸಮಯದಲ್ಲಿ ಅಲ್ಲಿಗೆ ಹೋಗ್ದೆ ದಿಡೀರನೆ ಉತ್ತರಕ್ಕೆ ಯಾಕೆ ಹೋಗ್ತಿದ್ದ? ಅಲ್ಲಿ ಒಂದ್ ಲೆವೆಲ್ಲಿಗೆ ವ್ಯವಸ್ಥೆ ಆಯ್ತು ಅಂತ ಅಂದ್ಕಂಡು ಮರಳಿ ಬಂದಿದಾನೆ. ಅಲ್ಲೆಲ್ಲ ಇಲ್ಲಿನ ಹಾಗ ಆಗೋದಿಲ್ಲ. ಇವನ ಹಣ, ವಶೀಲಿ ಎಲ್ಲ ಅಲ್ಲಿ ನಡೆಯೋದಿಲ್ಲ. ಸರಿಯಾಗಿ ಇಡ್ತಾರೆ ನೋಡಿ ಮುಂಡೆಗಂಡಂಗೆ”ಗುಮ್ಮಣ್ಣರ ಘರ್ಜನೆ ಮುಂದುವರಿದಿತ್ತು.
ಹಾಗಾದರೆ ತೊನೆಯಪ್ಪ ಜೈಲು ಸೇರೋದು ನಿಶ್ಚಿತ ಅಂತಾಯ್ತಲ್ಲ. ಅದಕ್ಕೂ ಅದೇ ಮಂತ್ರ-ಸುಲಗ್ನೇ ಸಾವಧಾನ, ಸುಮುಹೂರ್ತೇ ಸಾವಧಾನ, ತನ್ಮಧ್ಯೆ ತೊನೆಯಪ್ಪ ಧ್ಯಾನ ಸಾವಧಾನ…….!
Thumari Ramachandra
04/03/2018
source: https://www.facebook.com/groups/1499395003680065/permalink/2118940531725506/