ಇಬ್ಬಂದಿತನ ತಂದಿಟ್ಟು ತಬ್ಬಿಬ್ಬು ಮಾಡುತ್ತಾನೆ ತೊನೆಯಪ್ಪ

ಇಬ್ಬಂದಿತನ ತಂದಿಟ್ಟು ತಬ್ಬಿಬ್ಬು ಮಾಡುತ್ತಾನೆ ತೊನೆಯಪ್ಪ

ಸನ್ಯಾಸಿ ಎಂದರೆ ವಿರಾಗಿ. ವಿರಾಗಿ ಎಂದರೆ ರಾಗಿ ಇಲ್ಲದವನು ಎಂಬರ್ಥವಲ್ಲ; ರಾಗಗಳಿಂದ ಮುಕ್ತ ಎಂಬರ್ಥ. ರಾಗಗಳಿಂದ ಮುಕ್ತನಾದವನಿಗೆ ಈ ಲೋಕದ ಪ್ರೀತಿ ಮಮತೆ ವಾತ್ಸಲ್ಯ ಇತ್ಯಾದಿಗಳ ಹಂಗೆಲ್ಲಿ? ಇದೆಲ್ಲ ರಾಗದ್ವೇಷಗಳನ್ನು ಜನಸಾಮಾನ್ಯರಿಗಿಂತ ಹೆಚ್ಚಿಗೆ ಇರಿಸಿಕೊಂಡ ಕಾವಿವೇಷದ ಡೂಪ್ಲಿಕೇಟ್ ಸನ್ಯಾಸಿಗೆ ಮಾತ್ರ. ಬಾಯಿತೆಗೆದರೆ ಶ್ರುತಿ,ಸ್ಮೃತಿ, ಪುರಾಣಗಳು, ಶಾಸ್ತ್ರಗಳು ಬರುವುದಿಲ್ಲ; ಯಾಕೆ ಬರೋದಿಲ್ಲ? ಯಾಕೆ ಬರೋದಿಲ್ಲ ಅಂದ್ರೆ ತೊನೆಯಪ್ಪಾಚಾರ್ಯರಿಗೆ ಅವುಗಳಲ್ಲಿ ರಾಗಿಯಷ್ಟೂ ಆಸಕ್ತಿಯೂ ಇಲ್ಲ, ಶ್ರದ್ಧೆಯೂ ಇಲ್ಲ, ಕಲಿಯಲೂ ಇಲ್ಲ; ಆದರೂ ಅಲ್ಲಿ ಇಲ್ಲಿ ಕನ್ನಡ ಅನುವಾದಗಳಿಂದ ಒಂದಷ್ಟು ಕದ್ದು ಬಕರಾ ಭಕ್ತರ ಮುಂದೆ ಘನಪಂಡಿತನಂತೆ ಅದನ್ನು ಹೇಳಿ ಮತ್ತಷ್ಟು ಬಕರಾ ಮಾಡುವುದಷ್ಟೆ ಸಾಮ್ಗಳ ಕೆಲಸ.

ಎಲ್ಲಿಂದ ಎಲ್ಲಿಯವರೆಗೂ ನೋಡಿ, ಮಗುವನ್ನು ಚೂಟಿ ತೊಟ್ಟಿಲನ್ನು ತೂಗುವ ಕರಾಮತ್ತು ಕಾಣಿಸುತ್ತದೆ. ಗಂಡಂದಿರ ಬೋಳಿಗೆ ಎಣ್ಣೆ ಸವರಿ ಅವರ ಹೆಂಡಿರನ್ನೆಲ್ಲ ಉಂಡು ಮುಗಿಸುವಾಗ ಭಂಡ ಮಾಡಿದ್ದು ಅದೇ ಕೆಲಸವನ್ನೇ. ಯಾವುದೋ ಕಾರಣಗಳನ್ನು ನೀಡಿ ಹೆಂಗಸರನ್ನು ಒಬ್ಬೊಬ್ಬರನ್ನಾಗಿ ಏಕಾಂತದ ಖೆಡ್ಡಾದಲ್ಲಿ ಕೆಡವಿಕೊಂಡು ಹಾರೋದು; ಆಮೇಲೆ ಕೇಳಿದರೆ ಯಾವುದೋ ಯೋಜನೆಯ ನಿಮಿತ್ತ ಮೀಟಿಂಗ್ ಇತ್ತು ಅನ್ನೋದು!

ಯಾವ ಸೀಮೆಯ ಯಾವ ಸನ್ಯಾಸಿ ಬಾಗಿಲು ಮುಚ್ಚಿದ ಕೋಣೆಯಲ್ಲಿ ಏಕಾಂಗಿ ಹೆಂಗಸು ಮತ್ತು ಹುಡುಗಿಯೊಂದಿಗೆ ಇರಲು ಅಪ್ಪಣೆಯಿದೆ? ಹೊರಗೆ ಸಭೆಗಳಲ್ಲೂ ಸಹ ಮಹಿಳೆಯರೆಂದರೆ ಅಷ್ಟು ದೂರ ಇಟ್ಟುಕೊಳ್ಳಬೇಕೆಂಬ ನಿಯಮವಿದೆ, ಉಳಿದ ಅನೇಕ ಸನ್ಯಾಸಿಗಳು ಹಾಗೆ ಮಾಡ್ತಾರೆ; ಆದರೆ ತೊನೆಯಪ್ಪನದು ಹಾಗಿಲ್ಲ, ಇದು 21ನೇ ಸೆಂಚುರಿಯ ನಕಲಿ ಸನ್ಯಾಸಿಯ ವೈಖರಿ ಎನ್ನದೆ ವಿಧಿಯಿಲ್ಲ.

ಸಮಾಜದಲ್ಲಿ ಇವನು ಮಾಡಿದ್ದೇ ಆಟ; ಕೇಳುವವರೇ ಗತಿಯಿಲ್ಲ ಎಂಬಂತಾಗಿದೆ. ಯಾರೋ ಕೆಲವರು ಧೈರ್ಯಮಾಡಿ ಕೇಳಿದರೆ ಅವರು ಉಸಿರೆತ್ತದಂತೆ ವ್ಯವಸ್ಥೆ ಮಾಡ್ತಾನೆ ಆ ಕ್ರಿಮಿನಲ್ಲು. ತನ್ನ ವಿರುದ್ಧ ಸೊಲ್ಲೆತ್ತಿದವರಮೇಲೆ ಸಮಯ ಸಾಧಿಸಿ ಹಲ್ಲೆಮಾಡಿಸುವ ಕಳ್ಳ ಸನ್ಯಾಸಿ ಕಾನೂನಿಗೆ ಸಿಕ್ಕಿಹಾಕಿಕೊಳ್ಳದಂತೆ ನುಣುಚಿಕೊಳ್ಳುತ್ತಾನೆ. ಸೊಳ್ಳೆ ಕಾಯಿಲ್ ಹಾಕಿದರೂ ಸೊಳ್ಳೆಗಳು ಮಾತ್ರ ಹಾಗೇ ಇರುವಂತೆ ಯಾವ ಕಾಯಿದೆಗಳಿದ್ದರೂ ಅವನಿಗೆ ನಾಟೋದಿಲ್ಲ!

ಈಗೀಗ ಹಳ್ಳಿಗಳಲ್ಲಿ ಅಲ್ಲಲ್ಲಿ ಕೆಲವರು ನೇರವಾಗಿಯೇ ತಿರುಗಿ ಬೀಳುತ್ತಿದ್ದಾರೆ; ಆದರೆ ಅಂತವರ ಮೇಲೆ ಹಳದೀ ತಾಲಿಬಾನುಗಳು ಮಾರಣಾಂತಿಕ ಹಲ್ಲೆ ನಡೆಸುತ್ತವೆ. ಅವರು ಉಪಯೋಗಿಸುವ ಶಬ್ದಗಳನ್ನೆಲ್ಲ ನೋಡಬೇಕು; ಎಷ್ಟೆಂದರೂ ಅದು ತೊನೆಯಪ್ಪ ಶೋಭರಾಜಾಚಾರ್ಯರ ಗರಡಿಯ ತರಬೇತಿಯಲ್ಲವೇ?

ಸಾಮಾನು ಸಾಮ್ಗಳದ್ದು ಇನ್ನೊಂದು ವೈಶಿಷ್ಟ್ಯ ನೋಡಿ: ತಾನು 4 ಕ್ಲಾಸ್ ಫೇಲು, ವೇದ ಗೊತ್ತಿಲ್ಲ, ಶಾಸ್ತ್ರ ಗೊತ್ತಿಲ್ಲ, ತಿನ್ನೋದು ಈರುಳ್ಳಿ ಉಪ್ಪಿಟ್ಟು ಅಂತ ಯಾರಿಗೂ ಗೊತ್ತಾಗದಂತೆ ನೋಡಿಕೊಂಡರು ಶೋಭರಾಜಾಚಾರ್ಯರು. ಎಷ್ಟೋ ಮಹಿಳೆಯರು ಸಾಮ್ಗಳು ಘನಪಾಠಿಗಳೆಂದೂ ಬಹಳ ಓದಿಕೊಂಡಿದ್ದಾರೆಂದೂ, ಮಹಾಜ್ಞಾನಿಗಳೆಂದೂ ನಂಬಿ ಖೆಡ್ಡಾಕ್ಕೆ ಬಿದ್ದರು; ದೂರುದಾರ ಮಹಿಳೆಯರೂ ಬಿದ್ದಿದ್ದು ಹಾಗೇನೆ. ಅವರಿಗೆಲ್ಲ ಬಹಳ ತಡವಾಗಿಯೇ ಇದು ಗೊತ್ತಾದದ್ದು! ಬಾಯಿ ದುರ್ನಾತ ಹೊಡೆದರೂ ಪರವಾಗಿಲ್ಲ, ಹಾವು ನಾಲಿಗೆ ಹೊರಹಾಕಿದಂತೆ ನಾಲಿಗೆಯಿಂದ ಎರಡೂ ತುಟಿಗಳನ್ನು ನೆಕ್ಕಿಕೊಳ್ಳುತ್ತ ಮಾತಿನಲ್ಲಿ ಮಲ್ಲಿಗೆ ಅರಳಿಸಬೇಕು, ಕೇಳುತ್ತಿರುವ ಯಾವನೇ ಆದರೂ ಹಳ್ಳಕ್ಕೆ ಬೀಳಬೇಕು.

ಜನರನ್ನೂ ಅಷ್ಟೆ, ಸಮಷ್ಟಿ ಸಮಾಜದಲ್ಲಿ ಅನೇಕ ಜನರಿಗೆ ಅವನ ಕಚ್ಚೆಕತೆಯ ವಿಸ್ತಾರವ್ಯಾಪ್ತಿ ಗೊತ್ತಿಲ್ಲ. ಕಚ್ಚೆಕತೆಯೇ ಕಟ್ಟು ಕತೆ ಎಂದು ಹೇಳುವ ಬುದ್ಧುಗಳೂ ಅಲ್ಲಿದ್ದಾವೆ. ಅವರಿಗೆಲ್ಲ ಕಾಣೋದು ಸಾಮ್ಗಳು ದನ ಸಾಕ್ಕಂಡಿದ್ದಾರೆ, ಅವರಿಲ್ಲದಿದ್ರೆ ದನಗಳು ಇರ್ತಾ ಇರ್ಲಿಲ್ಲ. ಇಷ್ಟೇ. ಹಾಗಾಗಿಯೇ ಸಾಮ್ಗಳು ಅಂಥದ್ದನ್ನೇ ಹಿಡ್ಕೊಂಡು ಬುಲ್ ಪೀನದಲ್ಲಿ ಬಸಿದ ರಸದ ಕಲೆಗಳನ್ನು ಒರೆಸಿ ತೆಗೆಯೋ ಪ್ರಯತ್ನ ಮಾಡ್ತಿದಾರೆ.

ಇನ್ನಾಯ್ತು ಬಿಡಿ, ನಾಳೆಯಿಂದ ನಿರ್ಭಯಾ ಚತುರ್ಮೋಸ; ಎರಡು ತಿಂಗಳು ಪ್ರತಿದಿನವೂ ವಿರೋಧಿಗಳನ್ನು ಬಗ್ಗುಬಡಿಯುವ ತಂತ್ರಗಾರಿಕೆಯ ಕೆಲಸ. ಅವ ಧ್ಯಾನ ಮಾಡಲ್ಲ, ಜಪ ಮಾಡಲ್ಲ. ಹಿಂದಿನಿಂದ್ಲೂ ಅವ ಮಾಡ್ತಿದ್ದದ್ದು ಸ್ತ್ರೀಧ್ಯಾನವಷ್ಟೇ. ’ಮಹಿಳಾಧ್ಯಾನ ಪರಾಯಣ’, ’ಏಕಾಂತಕಲಾ ಪ್ರವೀಣ’ ಎಂದೆಲ್ಲ ಹೊಸ ನಾಮಾಂಕಿತಗಳನ್ನು ಕೊಡಬಹುದು.

ಕಳ್ಳಬಾವಯ್ಯ ಕುಳ್ಳಬಾವಯ್ಯರ ಒಳ ತಂತ್ರಶಾಸನ ಮತ್ತು ಕಚ್ಚೆತಂತ್ರಶಾಸನ ಯಾರಿಗೂ ಗೊತ್ತಾಗೋದಿಲ್ಲ ಹಳದೀ ತಾಲಿಬಾನುಗಳಲ್ಲಿ ಅನೇಕರು ಸುವರ್ಣ ಮಂತ್ರಾಕ್ಷತೆಗೆ ಇರೋರು; ಅವರಿಗೇನಾಗ್ಬೇಕು? ಸಮಯಕ್ಕೆ ಸಿಗಬೇಕಾದ್ದು ಸಿಗಬೇಕು, ಜೊತೆಗೆ ಮಠದ ಮೃಷ್ಟಾನ್ನ, ಆಲ್ಲಲ್ಲಿ ಹಾರಲು ವ್ಯವಸ್ಥೆ, ಇಷ್ಟೇ ಅವರ ಕೆಲಸ. ಧರ್ಮದ ಕತೆ ಕಟ್ಗಂಡು ಅವರಿಗೇನಾಗ್ಬೇಕು, ಆರಾಮಾಗಿ ಅಲ್ಲಾಡಿಸ್ಕಂಡಿದ್ರೆ ಸಾಕು.

ತೊನೆಯಪ್ಪಾಚಾರ್ಯರು ಹೊರನೊಟಕ್ಕೆ ಕಾಣುವಂತೆ ಬಹಳ ಸಮಾಜಮುಖಿ; ಸಮಾಜಕ್ಕಾಗಿ ಸ್ಪಂದಿಸ್ತಾರೆ; ಕೆಲಸ ಆಗ್ಬೇಕು ಅಂದ್ರೆ ಕತ್ತಲಲ್ಲಿ ಪುಡಿ ರಾಜಕಾರಣಿಗಳ ಕಾಲಾದ್ರೂ ಹಿಡೀತಾರೆ. ನಂತ್ರ ಹಲ್ಲು ಕಿತ್ತುಕೊಡ್ತಾನೇನೋ ಅನ್ನಿಸುವ ಮಲ್ಲಿಗೆ ಮಾತಿನಿಂದ ಕೆಲವು ಸಭೆಗಳಲ್ಲಿ ಬೇಕಾದವರ ಹೆಸರುಗಳನ್ನು ಮತ್ತೆ ಮತ್ತೆ ಎತ್ತಿ ಎತ್ತಿ ಹೇಳಿ ಬೋಳೆಣ್ಣೆ ಹಚ್ಚೋದಕ್ಕೆ ಕೋಲೆ ಬಸವಣ್ಣನನ್ನು ತಯಾರುಮಾಡಿಕೊಳ್ತಾರೆ.

ರಾಜಕಾರಾಣಿಗಳಲ್ಲಿ ಕಚ್ಚೆಹರುಕರಲ್ಲದಿರೋರು ಬಹಳ ಕಡಿಮೆ ಪ್ರಮಾಣದಲ್ಲಿರ್ತಾರೆ ಅನ್ನೋದು ನಮ್ಗೆಲ್ಲ ಗೊತ್ತಿಲ್ವೇ? ಬೇಕಾದ್ರೆ ಮಿಲ್ಕಪ್ಪನನ್ನು ಕೇಳಿ ಉತ್ತರ ಸಿಗುತ್ತೆ. ಮಿಲ್ಕಪ್ಪ, ಡಮಾರಣ್ಣ, ಬೋಳೂರು ಎಲ್ಲರೂ ಶಿಖರ ನಗರದ ಮಠಕ್ಕೆ ರಾತ್ರಿ ಹನ್ನೆರಡರ ನಂತರ ಬಂದಿದ್ದು ಹೋದೋರೇ! ಸಾಮ್ಗಳು ಸಮಾಜದ ಮಹಿಳೆಯರಿಂದ ಬಲವಂತವಾಗಿ ಮೈದಾನ ಮಾಡಿಸಿದ್ದು ಬಕರಾಭಕ್ತರಿಗೆ ಎಲ್ಲಿ ಗೊತ್ತಾಗಬೇಕು? ಭಕ್ತರಿಗೆ ಹಾಗಿರ್ಲಿ, ಹಳದಿಗಳಲ್ಲೆ ಅನೇಕರಿಗೆ ಈ ವಿಷಯ ಗೊತ್ತಿರಲಿಲ್ಲ; ತುಮರಿ ಹಿಂದಿನಸಲ ಹೇಳಿದಮೇಲೆ ತಲೆ ಕೆರ್ಕಂಡಿದಾವೆ ಪಾಪ!

ರಾವಣನನ್ನು ವಧೆ ಮಾಡೋದಕ್ಕೆ ಸಾವಿರ ವರ್ಷಗಳ ತನಕ ಭಗವಂತ ಕಾಯ್ಬೇಕಾಯ್ತು. ವಾಲಿವಧೆಯನ್ನು ಎದುರುಗಡೆಯಿಂದ ಮಾಡಲಿಕ್ಕೆ ಸಾಧ್ಯವಾಗಲೇ ಇಲ್ಲ. ಕೆಲವರ ವಿಷಯದಲ್ಲಿ ಹಾಗೇ-ಎದುರುಗಡೆಯಿಂದ ಹೊಡೆಯೋಕಾಗಲ್ಲ. ಮರೆಯಿಂದಲೇ ಅವರನ್ನು ಜಪ್ಪಬೇಕಾಗುತ್ತದೆ. ಜಪ್ಪುವಾಗ ಹೇಗೆ ಜಪ್ಪಬೇಕೆಂದ್ರೆ ಜಪ್ಪಿದ ಯಾವ ಕುರುಹೂ ಅಲ್ಲಿ ಉಳೀಬಾರ್ದು ಹಾಗೆ ಜಪ್ಪಬೇಕು! ಕುರುಹು ಮೂಡದಂತೆ ಜಪ್ಪೋದನ್ನು ಯಾರಿಂದ ಕಲಿಯಬಹುದು ಎಂದರೆ ಮತ್ತೆ ಕಾಣೋದು ಕ್ರಿಮಿನಲ್ ತೊನೆಯಪ್ಪಾಚಾರ್ಯರೇ!

ಕೆಲವು ಸಂಘಟನೆಗಳಿಗೆ ತೊನೆಯಪ್ಪ ಅಂದ್ರೆ ಇಬ್ಬಂದಿತನ ಕಾಡ್ತಾ ಇದೆ. ಮುಂದಿನಿಂದ ಅವರು ವಿರೋಧಿಸೋ ಹಾಗಿಲ್ಲ; ಅದರಿಂದ ಅವರಿಗೆ ಬೇರೆ ರೀತಿ ತೊಂದ್ರೆಗಳಾಗ್ತವೆ. ಹಾಗಂತ ಒಳಗಿನಿಂದ ತೊನೆಯಪ್ಪನನ್ನು ಕಂಡ್ರೆ ಆಗಲ್ಲ-ಅವ ಸನ್ಯಾಸಿಯಲ್ಲ ಅಂತ ಗೊತ್ತಾಗಿಬಿಟ್ಟಿದೆ, ಕಾವಿ ಬಟ್ಟೆಗೇ ಕಳಂಕ ಹಚ್ಚೋ ಕೆಲಸ ಮಾಡಿದ್ದಾನೆ ಅಂತ ಗರಮ್ಮಾಗಿದ್ದಾರೆ. ಹಾಗಾಗಿ ವಾಲಿವಧೆಗಾಗಿ ಅವರೆಲ್ಲ ಕಾದಿದ್ದಾರೆ.

ವಾಲಿ ಸಣ್ಣ ಸಾಹಸಿಯಲ್ಲ; ಅವನ ಸಾಮರ್ಥ್ಯವನ್ನು ಅರಿಯುವಾಗ ವಾಲ್ಮೀಕಿ ರಾಮಾಯಣವನ್ನೇ ಓದಬೇಕು-ಅದರ ಅನುವಾದಗಳನ್ನಲ್ಲ. ತೊನೆಯಪ್ಪನೋರಿಗೆ ಭಾಷೆ ಇಡಿಯಾಗಿ ಅರ್ಥವಾಗಲ್ಲ ಹಾಗಾಗಿ ಅನುವಾದಗಳನ್ನು ಬೇಕಷ್ಟೇ ಓದಿಕೊಳ್ಳುತ್ತಾರೆ; ಐಪ್ಯಾಡಿನಲ್ಲಿ ಹಾಕ್ಕೊಂಡು ಕತೆ ಮಾಡ್ತಾರೆ. ವಾಲಿಯನ್ನು ಹೊಡೆಯಬೇಕೆಂದು ರಾಮ ಬಂದರೆ ವಾಲಿ-ಸುಗ್ರೀವರಲ್ಲಿ ಯಾರು ಯಾರೆಂಬುದೇ ಗೊತ್ತಾಗದಷ್ಟು ಅವಳಿಜವಳಿಗಳಂತಿದ್ದರು. ಸುಗ್ರೀವನಿಗೆ ಗುರುತಿನ ಹಾರಹಾಕಿ ಯುದ್ಧಕ್ಕೆ ಬಿಟ್ಟ ಮೇಲೆ ರಾಮನಿಗೆ ವಾಲಿ ಇಂಥವನೇ ಎಂದು ಗುರುತಿಸೋದು ಸಾಧ್ಯವಾಯ್ತು.

ಇಲ್ಲಿ ಅಷ್ಟೊಂದು ಕೆಲಸವಿಲ್ಲ. ಆದರೆ ಇಲ್ಲಿ ಅಡ್ಡಗೊಡೆಮೇಲಿನ ದೀಪಗಳಂತೆ ಕಾಣುವ ಕೆಲವು ಕಾನೂನುಗಳನ್ನೇ ಪ್ರತಿತಂತ್ರವಾಗಿ ಬಳಸಿಕೊಂಡು ತೊನೆಯಪ್ಪ ಆಟ ಆಡ್ತಿದಾನೆ. ವಾಮಾಚಾರದ ಮೂಲಕ ಪರಮನಸ್ಪರ್ಶ ಮಾಡಿಸಿ ಯಾರ ಬಾಯಲ್ಲಿ ತನ್ನ ಪರವಾಗಿಯೋ ಅಥವಾ ತನಗೆ ಬೇಕಾದ್ದನ್ನು ಹೇಳಿಸಬೇಕೋ ಹಾಗೆ ಹೇಳಿಸ್ತಾ ಇದಾನೆ. ಹಾಗೆ ಹಿಂದೆಮುಂದೆ ಸರಿಯೋದೆಲ್ಲ ನಡೀತಾ ಇದೆ. ಬಹಳ ದಿನ ದೂರವಿಲ್ಲ. ವಾಮಾಚಾರಕ್ಕೆ ದೀರ್ಘಾಯುಸ್ಸಿಲ್ಲ. ಅದು ಕ್ಷಣಿಕ. ಅಲ್ಲಿಯವರೆಗೆ ಅವನನ್ನು ಸಹಿಸಿಕೊಂಡಿರಬೇಕಲ್ಲ ಎಂಬುದಷ್ಟೇ ಕಷ್ಟದ ಕೆಲಸ.

ಕಾಯೋಣ, ಇಷ್ಟೆಲ್ಲ ಕಾದವರಿಗೆ ಅಷ್ಟು ಕಾಯೋದೇನು ಕಷ್ಟವೇ? ಕಳ್ಳಯ್ಯ-ಕುಳ್ಳಯ್ಯ ಒಳಗೆ ಹೋಗೋ ದಿನ ಬಂದೇ ಬರುತ್ತೆ. ಮಠದ ದಿವಾನರು ಅದಕ್ಕೆ ಈಗಿನಿಂದಲೇ ಅಕೌಂಟಿನಲ್ಲಿ ಮಠದಿಂದ ಹೊಡೆದುಕೊಂಡ ಸಾವಿರಾರು ಕೋಟಿಗಳ ಜೊತೆಗೆ ಹಂಚಲಿಕ್ಕೆ ಇನ್ನೆರಡು ಕೋಟಿ ಇಟ್ಟುಕೊಳ್ಳೋ ವ್ಯವಸ್ಥೆ ಮಾಡಿಕೊಳ್ಳಲಿ.

ಬರೇಕಾಮ

ಬರೇಕಾಮ

Thumari Ramachandra
08/07/2017
source: https://www.facebook.com/groups/1499395003680065/permalink/1988672554752305/

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s