ಸಮಾನ ಶೀಲೇಷು ವ್ಯಸನೇಷು ಸಖ್ಯಂ

ಸಮಾನ ಶೀಲೇಷು ವ್ಯಸನೇಷು ಸಖ್ಯಂ

ಜಗದ್ಗುರು ಶೋಭರಾಜಾಚಾರ್ಯ ಗಂಜಿ ತೊನೆಯಪ್ಪ ಸ್ವಾಮಿಗಳು ಪೀಠದಲ್ಲಿ ವಿರಾಜಮಾನರಾಗಿ ಛತ್ರಿ ಅಡಿಯಲ್ಲಿ ತಮ್ಮ ಛತ್ರಿತನದ ಭಾಷಣವನ್ನು ಆರಂಭಿಸಿದ್ದರು. ಭಾಷಣ ಅರ್ಧಕ್ಕೆ ಬಂದಿತ್ತು. ಸಭೆಯಲ್ಲಿ ಸ್ವಾಮಿಗಳ ಮಾತನ್ನು ಕೇಳುತ್ತಿದ್ದ ಹಳದೀ ಪಟಾಲಂ ಬಂಧುಗಳು ಆಗಾಗ ಬರೇಕಾಮ ಕೂಗುತ್ತ ಜೈಕಾರ ಹಾಕುತ್ತ ಕುರಿಗಳು ಹಿಕ್ಕೆ ಹಾಕುವಂತೆ ಚಪ್ಪಾಳೆಗಳ ಮೇಲೆ ಚಪ್ಪಾಳೆ ತಟ್ಟುತ್ತಲೇ ಇದ್ದರು. ಬುದ್ಧು ಭಕ್ತರು ಪೀಠದ ಸ್ವಾಮಿಗಳೆಂಬ ಏಕಮಾತ್ರ ಕಾರಣದಿಂದ ಅವರು ಹೇಳಿದ್ದಕ್ಕೆಲ್ಲ ಗೋಣು ಹಾಕುತ್ತಿದ್ದರು. ನಾಳೆಯಿಂದ ಮಠದ ಮಹಿಳಾ ಭಕ್ತರೆಲ್ಲ ನಮ್ಮ ’ಗಂಜಿ ಪ್ರಸಾದ’ ಸ್ವೀಕಾರ ಮಾಡಬೇಕು ಎಂದರೂ ಭೇದವಿರಲಿಲ್ಲ. ಹೆಂಡಿರನ್ನೆಲ್ಲ ಏಕಾಂತಕ್ಕೆ ಕಳಿಸಿ ನೀವು ಭಜನೆ ಮಾಡುತ್ತ ಕೂತುಕೊಳ್ಳಿ ಎಂದರೂ ಖೇದವಿರಲಿಲ್ಲ!

ಸಮಾಜದಲ್ಲಿ ತನ್ನ ಧರ್ಮ ಬಾಹಿರ ನಡತೆಗಳಿಂದ ಕುಖ್ಯಾತಿಗಳಿಸಿದ ’ಮಹಾಮಹಿಮ’ ತೊನೆಯಪ್ಪನವರು ತನ್ನನ್ನು ವಿರೋಧಿಸುವವರನ್ನು ಚಿತ್ರವಿಚಿತ್ರ ಮಾತುಗಳಲ್ಲಿ ಕಠೋರವಾಗಿ ನಿಂದಿಸುತ್ತಿದ್ದರು. ಅವರೆಲ್ಲರ ಮೇಲೆ ಕೇಸು ಜಡಿಯುವಂತೆ ಮೂಢ ಭಕ್ತರನ್ನು ಪ್ರಚೋದಿಸುತ್ತಿದ್ದರು. ಹೀಗಿರುತ್ತ ನಕಲೀ ರಾಮನ ಸಭೆಗೆ ನಕಲೀ ಕಾಲನ ಪ್ರವೇಶವಾಗಿಬಿಟ್ಟಿತು! ಬಂದವರು ಖಾಕೀ ದಿರಿಸಿನ ಮಾವಯ್ಯಂದಿರು!! ದೂರದಲ್ಲಿ ಜೀಪುಗಳಿಂದ ಮಾವಯ್ಯಂದಿರು ಇಳಿದು ಬರುತ್ತಿರುವುದು ’ಮಹಾಸ್ವಾಮಿಗಳಿ’ಗೆ ಕಾಣಿಸಿಬಿಟ್ಟಿತು.

“ಬನ್ನಿ ನಿಮ್ಮನ್ನು ಬಂಧಿಸುವಂತೆ ನಮಗೆ ಆಜ್ಞೆಯಾಗಿದೆ. ಏಳಿ, ಏನ್ ಅಂಗೆ ಮಿಕಿ ಮಿಕಿ ನೋಡ್ತೀರಾ? ನಾವೇನು ಮಹಿಳೆಯರಲ್ಲ ನೀವು ಏಕಾಂತಕ್ಕೆ ಕರೆಯೋದಕ್ಕೆ” ಎನ್ನುತ್ತ ಗದರುತ್ತಿದ್ದಂತೆ ಸ್ವಾಮಿಗಳು ಹೌಹಾರಿ ಕುಳಿತಲ್ಲೆ ಬುಲ್ ಪೀನ ಒದ್ದೆ ಮಾಡಿಕೊಂಡರು. “ನಾವು ನಾವಾಗೇ ಬರ್ತೇವೆ, ತಪ್ಪಿಸಿಕೊಳ್ಳೋ ಪ್ರಶ್ನೆಯೇ ಇಲ್ಲ. ನಮಗೆ ಕಾಲಾವಕಾಶ ಬೇಕು. ಈಗ ನಾವು ನಿರ್ಭಯಾ ಚತುರ್ಮೋಸ ವ್ರತದಲ್ಲಿದ್ದೇವೆ. ಅದು ಮುಗಿದಮೇಲೆ ನಾವೇ ಬರುತ್ತೇವೆ” ಎಂದು ತೊನೆಯಪ್ಪನವರು ಯಾವ ಪರಿಯಲ್ಲಿ ಗೋಗರೆದರೂ ಮಾವಯ್ಯಂದಿರು ಕೇಳಲೇ ಇಲ್ಲ. ಎಳೆದುಕೊಂಡೊಯ್ದು ಜೀಪು ಹತ್ತಿಸಿಟ್ಟರು.

ಭಂಡತನದಿಂದ ಅಲ್ಲಿಯವರೆಗೆ ಮೆರೆಯುತ್ತಿದ್ದ ’ಮಹಾಸ್ವಾಮಿಗಳು’ ವಿಕಾರ ಧ್ವನಿಯಲ್ಲಿ ಭಯದಿಂದ ಕೂಗಿಕೊಂಡರು. ಆಗ ಸ್ವಾಮಿಗಳಿಗೆ ಎಚ್ಹರವಾಯಿತು. ಹಾಸಿಗೆಯೆಲ್ಲ ಒದ್ದೆಯಾಗಿತ್ತು. ಆ ರಾತ್ರಿ ಮೊದಲಜಾವದಲ್ಲಷ್ಟೆ ಏಕಾಂತ ಮುಗಿಸಿ ಮಹಿಳೆಯನ್ನು ಹೊರಗೆ ಕಳಿಸಿ ನಿದ್ದೆಗೆ ಜಾರಿದ್ದ ’ಸಾಮಾನು ಸ್ವಾಮಿಗಳು’ ಸಚಿನ್ ತೆಂಡೂಲ್ಕರ್ ಕೋಕಾಕೋಲಾ ಜಾಹೀರಾತಿನಲ್ಲಿ “ಮೈ ಕೌನ್ ಹೂಂ” ಎಂದಂತಹ ಸ್ಥಿತಿಗೆ ತಲುಪಿಬಿಟ್ಟಿದ್ದರು. ಕನಸಿನಲ್ಲಿ ಗಂಜಿ ಸಂಸ್ಥಾನ ಕೂಗಿಕೊಂಡದ್ದನ್ನು ಹೊರಗೆ ಪಹರೆಕಾಯುತ್ತಿದ್ದ ಸುರಕ್ಷಾ ಪಡೆಯ ಹಳದಿಗಳು ತಪ್ಪಾಗಿ ಅರ್ಥೈಸಿಕೊಂಡು “ಬರೇಕಾಮ”, “ಬರೇಕಾಮ” ಎಂದು ಜೋರಾಗಿ ಕೂಗುತ್ತ ಚಪ್ಪಾಳೆ ತಟ್ಟಿದವು. ಸಾಮಾನು ಸ್ವಾಮಿಗಳು ಅಂತಃಪುರದ ಬಾಗಿಲನ್ನು ತೆರೆದು ಚಪ್ಪಾಳೆ ತಟ್ಟಿದ ಹಳದಿಗಳನ್ನು ನುಂಗಿಬಿಡುವಂತೆ ನೋಡಿದರು. ಇದು ಸ್ವಪ್ನ ವಾಸ್ತವದತ್ತ ನಡೆಯುತ್ತಿರುವ ಪರಿ.

ಅದಿರಲಿ, ಸಂಪಾದಕರ ಕುರಿತು ಹೊಗಳಿದ್ದಕ್ಕೆ ತಿರುಮಲೇಶರು ಬೇಜಾರು ಮಾಡಿಕೊಂಡರು. ಸಂಪಾದಕರನ್ನು ತುಮರಿ ಹೊಗಳಿದ್ದು ಕೇವಲ ಒಂದು ವಿಷಯಕ್ಕಾಗಿ ಮಾತ್ರ. ಅದು ಮಂತ್ರಿಗಳು ನಡೆಸಿದ ಪೂಜೆಯ ಬಗೆಗೆ ಉಳಿದೆಲ್ಲ ಪತ್ರಿಕೆಗಳು ಮೂಢನಂಬಿಕೆ ಎಂದು ಬರೆದಾಗ ಈ ಸಂಪಾದಕರು ಮಾತ್ರ ಹಾಗೆ ಹೇಳಲಿಲ್ಲ ಎಂಬುದಕ್ಕೆ ಮತ್ತು ಮೋದಿಯವರು ಗೋಹತ್ಯಾ ನಿಷೇಧವನ್ನು ಜಾರಿಗೊಳಿಸಿದಾಗ ನೆಟ್ಟಗೆ ಯಾವ ಪತ್ರಿಕೆಯೂ ಅನುಮೋದಿಸದಿದ್ದ ವಾತಾವರಣದಲ್ಲಿ ಈ ಸಂಪಾದಕರು ಅದನ್ನು ಅನುಮೋದಿಸುವ ಲೇಖನಗಳನ್ನು ಪ್ರಕಟಿಸಿದರು ಎಂಬ ಕಾರಣಗಳಿಗಾಗಿ ತುಮರಿ ಅವರನ್ನು ಹೊಗಳಿದ್ದಿದೆ.

ಉಳಿದಂತೆ ಈ ಸಂಪಾದಕರು ಗಂಜಿ ಸ್ವಾಮಿಗಳ ಖಾಸಾ ಶಿಷ್ಯರು ಅಷ್ಟೇ ಅಲ್ಲ ಖಾಸಾ ದೋಸ್ತರೂ ಸಹ. ಅವರೀರ್ವರಲ್ಲಿ ಹಲವು ಸ್ತರಗಳಲ್ಲಿ ಹಾವು-ಕಪ್ಪೆಗಳ ನಡುವಿನ ವಿಶ್ವಾಸವಿದೆ. ತೊನೆಯಪ್ಪನವರು ಮಠದ ಶಿಷ್ಯಸ್ತೋಮಕ್ಕೆ ಬೋಳೆಣ್ಣೆ ಹಚ್ಚಿ ನಾಮ ತೀಡಿ ಕೋಟಿಗಳಲ್ಲಿ ಎಣಿಸಿಕೊಂಡರು; ಅದರಲ್ಲಿ ಐವತ್ತು ಲಕ್ಷವೆಲ್ಲ ಯಾವ ಮಹಾ? ತಮ್ಮ ತೆವಲು ತೀರಿಸಿಕೊಳ್ಳಲು ಇಡೀದಿನ ತಾವು ಹೊಡೆದ ಹೂಸಿನಿಂದ ಹಿಡಿದು ಎಲ್ಲವನ್ನೂ ಪ್ರದರ್ಶಿಸುತ್ತಿರಲು ಚಾನೆಲ್ ಮಾಡಬೇಕು ಎಂಬ ಮಹದಾಸೆ ತೊನೆಯಪ್ಪನವರಲ್ಲಿತ್ತು. ಅದನ್ನು ಗಾಢವಾಗಿ ಗಮನಿಸಿದ ಸಮಾನ ಶೀಲ ಸಂಪಾದಕರು, ಗೂಢವಾಗಿ ಆಲೋಚಿಸಿ ವೀಳ್ಯವನ್ನು ಹಿಡಿದು, ಐವತ್ತು ಲಕ್ಷ ಇಸಿದುಕೊಂಡು ’ಗಂಜಿ ಸಂಸ್ಥಾನ’ದ ಹಣೆಗೆ ಉಂಡೆನಾಮ ಬಳಿದರು.

ತೊನೆಯಪ್ಪ ಸ್ವಾಮಿಗಳು ಉಚ್ಚೆಹೊಯ್ದರೂ ಹೇತರೂ ಅದನ್ನೆಲ್ಲ ತಮ್ಮ ಪೇಪರಿನಲ್ಲಿ ಪ್ರಮುಖ ಮಹಾವರದಿಯೆಂಬಂತೆ ಸಚಿತ್ರ ಪ್ರಕಟಿಸುವ ಸದರೀ ಸಂಪಾದಕರು ನಿಜ ಜೀವನದಲ್ಲಿ ಬಹುದೊಡ್ಡ ಅವಕಾಶವಾದಿಗಳು ಮತ್ತು ’ಗಂಜಿ ಸಂಸ್ಥಾನದಂತೆ’ ನಾಟಕವನ್ನು ಬಲ್ಲವರು. ಸಾಮಾನ್ಯವಾಗಿ ಸಂಪಾದಕರ ಜೀವನವೆಲ್ಲ ಸಾಮಾನ್ಯ ಮಧ್ಯಮವರ್ಗದ್ದಾದರೆ ಇವರದ್ದು ಮಾತ್ರ ಸ್ಟಾರ್ ಲೈಫು. ಯಾರನ್ನೋ ಹೊಗಳಿ ಪುಟಗಟ್ಟಲೆ ವೈಭವೀಕರಿಸಿ ವರದಿಗಳನ್ನು ಪ್ರಕಟಿಸುವ ಸ್ವಭಾವ ಇರಿಸಿಕೊಂಡ ಅವರು ಕೋಟಿ ಬೆಲೆಯ ಸೈಟನ್ನೇ ಖರೀದಿಸಿದರು, ಕೋಟಿಗಳನ್ನು ಸುರಿದು ಬಂಗಲೆ ಕಟ್ಟಿದರು, ಕೋಟಿಗಳನ್ನು ದುಬೈ ಮೊದಲಾದ ಕಡೆಗಳ ಬ್ಯಾಂಕುಗಳಲ್ಲಿ ಗೋಪ್ಯವಾಗಿ ಇರಿಸಿದ್ದಾರೆ. ಕೋಟಿಗಳಲ್ಲಿ ಕೆಲವು ಬಿಜನೆಸ್ಸುಗಳ ಪಾಲುದಾರರಾಗಿದ್ದಾರೆ.

ಮೊದಲ ಮದುವೆಯನ್ನು ಯಾಕೆ ಮುರಿದುಕೊಂಡರು? ಎಂಬುದು ಅವರಿಗೆ ಮತ್ತು ಅವರನ್ನು ಅರಿವಿಲ್ಲದೆ ವರಿಸಿದ್ದ ಮೊದಲ ಕನ್ನಿಕೆಗೆ ಮಾತ್ರ ಗೊತ್ತು, ಬಿಟ್ಟರೆ ಭಗವಂತನಿಗಷ್ಟೆ ಗೊತ್ತು. ಈ ಸ್ಟಾರ್ ಸಂಪಾದಕರಿಗೆ ಒಂದು ಕಾಲದಲ್ಲಿ ದೈತ್ಯರಾಜ ಸಂಪಾದಕನೊಬ್ಬ ಗೆಳೆಯನಾಗಿದ್ದ. ಆಗಾಗ ಜೊತೆಯಾಗಿ ಗುಂಡು ತುಂಡು ಹೆಣ್ಣು ಮುಂತಾದ್ದಕ್ಕೆ ಇಬ್ಬರೂ ಸಂಗಳು ಒಟ್ಟಾಗಿ ಭಾಗವಹಿಸಿದ್ದೂ ಇದೆ. ಆಮೇಲೊಂದು ದಿನ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಜಗಳವಾಗಿ ತಮ್ಮತಮ್ಮ ಪೇಪರುಗಳಲ್ಲಿ ಪರಸ್ಪರ ಕಿತ್ತಾಡಿದ್ದನ್ನು ಇಡೀ ರಾಜ್ಯ ಬಲ್ಲದು. ಆಗ ಸ್ಟಾರ್ ಸಂಪಾದಕರ ಅಂತರಂಗವೆಲ್ಲ ಬಹಿರಂಗಗೊಂಡು ಹಲವು ವಿಷಯಗಳು ಜನರಿಗೆ ಗೊತ್ತಾಗಿಬಿಟ್ಟಿವೆ.

ಹಣಪೀಕುವ ಅವಕಾಶವಾದಿಯಾಗಿ, ಯಾರದೋ ಓಲೈಕೆಗಾಗಿ ಜನತೆಗೆ ಬೇಡದ್ದನ್ನೆಲ್ಲ ಪ್ರಕಟಿಸುತ್ತಿದ್ದ ಸಮಯದಲ್ಲಿ ಸೀಟು ಕಳೆದುಕೊಂಡು ಮುಗ್ಗರಿಸುತ್ತ ಬೇಲಿ ಹಾರುತ್ತ ಬೇರೆ ಸೀಟು ಹುಡುಕುತ್ತ ಹೋದರು. ಯಾರೋ ಹೇಳಿದರು “ಇನ್ನುಮುಂದೆ ಅವರ ಕತೆ ಅಷ್ಟೆ, ಇಲ್ಲಿಯವರೆಗೆ ಮಾಡಿಕೊಂಡ ಹಣದಲ್ಲಿ ಬದುಕಬೇಕು”ಅಂತ. ಅವಕಾಶವಾದಿಗಳು ಹೇಗಿರ್ತಾರೆ ಎಂದರೆ ಯಾವುದೇ ಗಳಿಗೆಯಲ್ಲಿ ಎಡವಿಬಿದ್ದರೂ ಮತ್ತೆ ಮೇಲೆದ್ದು ಸಾಗುವುದಕ್ಕೆ ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ. ಸ್ಟಾರ್ ಸಂಪಾದಕರೂ ಹಾಗೇ ಮಾಡಿದರು. ಅಷ್ಟುಹೊತ್ತಿಗೆ ಸರಿಯಾಗಿ ಗಂಜಿ ತೊನೆಯಪ್ಪನವರಿಗೆ ಮತ್ತೆ ಪೇಪರುಗಳಲ್ಲಿ ಮಿಂಚಬೇಕಾಗಿತ್ತು. ಹೀಗಾಗಿ ಮತ್ತೆ ಮಠದಿಂದ ಗುತ್ತಿಗೆ ದೊರೆಯಿತು.

ವ್ಯಸನಗಳಲ್ಲಿ ಸಾಮ್ಗಳು ಮತ್ತು ಈ ಸಂಪಾದಕರು ಇಬ್ಬರಲ್ಲೂ ಬಹಳ ಸಾಮ್ಯತೆಯಿದೆ. ಸ್ವಭಾವದಲ್ಲೂ ಬಹಳ ವ್ಯತ್ಯಾಸವೇನಿಲ್ಲ. ಇದು ಸ್ಟಾರ್ ಸಂಪಾದಕರ ಮಹಿಮೆ! ಸಾಕಲ್ಲ?

ಇನ್ನು ಸ್ತ್ರೀ ಡಮಾರ್ ಬಸ್ಸಣ್ಣನವರು ಗಂಜಿ ಸಾಮ್ಗಳ ಇತ್ತೀಚಿನ ಇನ್ನೊಬ್ಬ ಪ್ರಮುಖ ’ಭಕ್ತ’ರು. ಚಟ್ನೆ ತಿಮ್ಮಣ್ಣ ಹೆಗಡೇರು ಹೇಳ್ತಾರೆ “ಆ ಆಸಾಮಿ ಮೊದಲು ಟೆಂಪೋ ನಡೆಸ್ತಾ ಇದ್ದ. ಆ ಕಾಲದಲ್ಲಿ ಮದುವೆ ದಿಬ್ಬಣಗಳಲ್ಲಿ ಚಂದದ ಹುಡುಗಿಯರನ್ನು ಹಿಂದುಗಡೆ ಸೀಟಿನಲ್ಲಿ ಕೂರಿಸಿಕೊಂಡು ಅನಂಗನಾಟವಾಡುತ್ತಿದ್ದ! ಎಷ್ಟು ಹುಡಿಗೀರು ಆಗ ಬಸುರಾದರೋ ಪುಳಕಿತರಾದರೋ ಗೊತ್ತಿಲ್ಲ. ಗುಂಡು ತುಂಡು ಎಲ್ಲ ಮಾಮೂಲಿ. ಕಲಿದದ್ದು ಎಸ್ ಎಸ್ ಎಲ್ ಸಿ ವರೆಗೆ, ನಂತರ ಗೋತಾ. ಗುಂಪುಗಾರಿಕೆ ಮಾಡೋದರಲ್ಲಿ ಗಂಜಿ ಸಾಮ್ಗಳಂತೆ ನಿಸ್ಸೀಮ.”

ಗಂಜಿ ಸ್ವಾಮಿಯ ಪರಮ ಭಕ್ತನ ಪೋಸು ಕೊಡುವ ಬಸ್ಸಣ್ಣನ ಕತೆ ಹೀಗಿದೆ. ಅವನೂ ಸಹ ಸಾಮ್ಗಳಂತೆ ಸಕಲಕಲಾವಲ್ಲಭ, ಸಮಾನಶೀಲ. ಹೀಗಿರುವ ಸಮಾನಶೀಲರೆಲ್ಲ ಒಂದಾಗಿ ತಮ್ಮ ವ್ಯಸನಗಳಿಗೆ ಅಡ್ಡೆಗಳನ್ನು ಮಾಡಿಕೊಳ್ಳುವುದಕ್ಕಾಗಿ ಗಂಜಿಸ್ವಾಮಿಯನ್ನು ಬೆಂಬಲಿಸುತ್ತಿದ್ದಾರೆ. ಗಂಜಿ ಸ್ವಾಮಿಯ ಸುತ್ತ ಇರುವ ಪಟಾಲಂ ಗಳಲ್ಲಿ ಒಬ್ಬೊಬ್ಬರ ಕತೆಯೂ ಹೀಗೆ ವಿಭಿನ್ನ ಖತರ್ನಾಕ್ ಹಿನ್ನೆಲೆಯುಳ್ಳದ್ದು.

ಅಂದಹಾಗೆ ಸಾಮ್ಗಳು ದನದ ಬಾಲವನ್ನು ಗಟ್ಟಿಯಾಗಿ ಹಿಡಿದುಕೊಂಡು ಒಂದು ನಾಟಕ ಮುಗಿಸಿ, ಅಂಕದಪರದೆ ಎಳೆದು, ಈಗ ಮುಂದಿನ ನಾಟಕಕ್ಕೆ ಸಜ್ಜಾಗುತ್ತಿದ್ದಾರೆ. ನಡುವೆಯೇ ಬಹುಮಾನ್ಯರಿಗೆ ಪ್ರಶಸ್ತಿಗಳನ್ನು ಕೊಟ್ಟು ತಮ್ಮ ಮಾನ್ಯತೆ ಹೆಚ್ಚಿಸಿಕೊಳ್ಳಲು ಹವಣಿಸಿದ್ದಾರೆ. ಪಾಪ, ಏನೆಲ್ಲ ನಾಟಕ ಮಾಡಿದರೂ ಗಂಜಿ ಕಲೆ ಮಾತ್ರ ಹೋಗುತ್ತಲೇ ಇಲ್ಲ. ಈ ಪ್ರಪಂಚದಲ್ಲಿ ಸಿಗುವ ಯಾವ ಸೋಪು ಡಿಟರ್ಜೆಂಟು ಹಾಕಿ ನೆನೆಸಿ ಉಜ್ಜಿದರೂ ಗಂಜಿಕಲೆ ಶಾಶ್ವತವಾಗಿಬಿಟ್ಟಿತು. ಅದೊಂದೇ ಅವರ ಕೊರಗು.

ಹಾಗಂತ ಈಗಲೂ ಹಾರೋದನ್ನು ನಿಲ್ಲಿಸಿಲ್ಲ. ತ್ರಿಕಾಲದಲ್ಲೂ ಅದಕ್ಕೆ ವ್ಯವಸ್ಥೆಯಾಗಲೇಬೇಕು. ತೀರಾ ಎಳೆ ವಯಸ್ಸಿಗರು ಸಿಗದಿದ್ದರೆ ಅರುವತ್ತು ವರ್ಷದ ಆಸುಪಾಸಿನವರಾದರೂ ಪರವಾಗಿಲ್ಲ. ಅಂತೂ ಬೇಕು. ಗಂಜಿ ಹಾರಿಸಲೇಬೇಕು.

ಇಡೀ ಪ್ರಪಂಚಕ್ಕೆಲ್ಲ ಗಂಜೀ ತೊನೆಯಪ್ಪನವರ ಗಂಜೀ ನಾತ ಪಸರಿಸಿ ಎಲ್ಲಾ ಸ್ತ್ರೀಯರೂ ಅದನ್ನು ಆಘ್ರಾಣಿಸಿ ಕೃತಾರ್ಥರಾಗಬೇಕೆಂದು ಶೀ ಮಹಾಸಂಸ್ಥಾನ ಶೋಭರಾಜಾಚಾರ್ಯ ಗಂಜೀ ತೊನೆಯಪ್ಪನವರ ಅಪ್ಪಣೆಯಾಗಿದೆ!

ಜೈ ಬಾಬಾ ಗಂಜೀ ನಾತ, ವಂದೇ ಗಂಜೀ ನಾತ ಹಾದರಮ್

ಬರೇ ಕಾಮ

ಬರೇ ಕಾಮ

Thumari Ramachandra
11/06/2017
source: https://www.facebook.com/groups/1499395003680065/permalink/1973084429644451/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s