’ಪರಮಹಂಸ’ ಪಿಕ್‍ಪಾಕೆಟಾನಂದ

’ಪರಮಹಂಸ’ ಪಿಕ್‍ಪಾಕೆಟಾನಂದ

ಜಗದ್ಗುರು ಗಂಜಿ ತೊನೆಯಪ್ಪನವರಿಗೆ ಕವಳದ ಗೋಪಣ್ಣ ನೀಡಿದ ಹೊಸ ಬಿರುದು ಕೇಳಿ ನಗು ತಡೆಯಲಾಗಲಿಲ್ಲ! ಗೋಪಣ್ಣನಂತ ಗ್ರಾಮೀಣ ಹಾಸ್ಯ ಕಲಾವಿದರು ಎಲೆಮರೆಯ ಕಾಯಿಗಳಂತಿರುತ್ತಾರೆ; ತಮ್ಮ ಹಾಸ್ಯ ಸ್ಪಂದನಗಳ ಮೂಲಕ ಸಮಾಜಕ್ಕೆ ರಂಜನೆ ನೀಡುತ್ತಲೇ ಬಿಸಿಯನ್ನೂ ಮುಟ್ಟಿಸುತ್ತಾರೆ.

ಭಟ್ಟರು ಹೋಗಿಬಂದರು, ವಿಷಯ ಎಲ್ಲ ಇತ್ಯರ್ಥವಾಗಿಬಿಟ್ಟಿತು, ಹೀಗಾಗಿ ಮುಂದೇನ್ಮಾಡೋದು ಎಂಬ ಚರ್ಚೆಯಲ್ಲಿ ’ಮಹಾಸ್ವಾಮಿ ಕಳ್ಳಬಾವಯ್ಯ’ನವರಿಗೆ ಮಠದ ದಿವಾನ ಕುಲಪತಿ ಕುಳ್ಳಬಾವಯ್ಯನವರು ಮತ್ತು ಬಸ್ಸಣ್ಣ ಮುಂತಾದ ಕಿಚನ್ ಕ್ಯಾಬಿನೆಟ್ ಸದಸ್ಯರು ಕೆಲವು ಸಲಹೆಗಳನ್ನು ಕೊಟ್ಟರು. ಅದರ ಪ್ರಕಾರ ಮಾಸಾಮ್ಗಳು ಸದಾ ಬೀಜಿಯಾಗಿರಬೇಕು. ಯಾವುದಾದರೊಂದು ಕಾರ್ಯಕ್ರಮ ಅಂತ ನಡೆಸುತ್ತಲೇ ಇರಬೇಕು ಮತ್ತು ಆದಷ್ಟು ಹಣ ಸಂಗ್ರಹ ಆಗುತ್ತಲೇ ಇರಬೇಕು.

ಕಳೆದ ಸಲ ‘ಬಾವಯ್ಯ ಪೂಜೆ’ ಅದು ಇದು ಡಂಗಾ ಡಿಂಗಿ ವೇಷ ಮಾಡಿ ಜನರನ್ನು ಮರುಳು ಮಾಡಿದ್ದಾಯ್ತು; ಈಗ ಜನರಿಗೆ ಅದಕ್ಕಿಂತ ಭಿನ್ನವಾದದ್ದನ್ನು ತೋರಿಸ್ಬೇಕು. ಹಾಗಾಗಿ ಏನ್ಮಾಡೋದು? ಅದಕ್ಕೆ ಸಾಮ್ಗಳು ಭಜನೆಗೆ ಕುಳಿತುಬಿಡೋದು ಅನ್ನೋ ತೀರ್ಮಾನಕ್ಕೆ ಬಂದಿದಾರೆ. ಕತೆಯ ಕಲಾವಿದರಲ್ಲಿ ಹಲವರು ಬರುವ ಲಕ್ಷಣ ಕಾಣ್ತಿಲ್ಲ; ಯಾಕೆಂದರೆ ಇತ್ತೀಚೆಗೆ ನಡೆದ ಕತೆಯಲ್ಲಿ ಅವರಿಗೆ ಸಂಭಾವನೆ ಕೊಡಲಿಲ್ಲವಂತೆ. ಸಂಭಾವನೆ ಸಿಗೋವರೆಗೆ ಅವರೆಲ್ಲ ಸಾಮ್ಗಳಿಗೆ ಜೈಕಾರ ಹಾಕುತ್ತಲೇ ಇದ್ದವರು, ಈಗ ನಿಧಾನವಾಗಿ ಸಾಮ್ಗಳ ಗಂಜಿ ಮೆತ್ತಿದ ಹಾದರ ರಥವನ್ನು ಹಿಂಬದಿಯಿಂದ ಇಳಿದುಹೋಗಿದ್ದಾರೆ; ಪಾಪ, ಸುಧಾರಿಸಿಕೊಂಡು ಪಕ್ಷಾಂತರಿಗಳಂತಾಗಲು ಸ್ವಲ್ಪ ಸಮಯಬೇಕು.

“ಕಲಾವಿದರಿಲ್ಲ, ಕತೆ ನಡೀತಿಲ್ಲ” ಅಂತಾಗಬಾರದು ಎಂದು ತೋರಿಸಲು ಮಧ್ಯೆ ಮಧ್ಯೆ ಇರುವ ಕೆಲವರನ್ನೆ ಸೇರಿಸಿಕೊಂಡು ಕತೆ ಮಾಡ್ತಾರಂತೆ ಸಾಮ್ಗಳು. ಭೀಷ್ಮ, ದ್ರೋಣ, ಕೃಪ, ಕರ್ಣಾದಿ ಮಹಾಸೇನಾನಿಗಳ ಕತೆ ಮುಗಿದಮೇಲೂ, ಅಕ್ಷೋಹಿಣಿ ಸೈನ್ಯಗಳ ಸಂಖ್ಯೆ ಕುಸಿದು ಜಂಘಾಬಲ ಅಡಗಿದ ಮೇಲೂ, ಕೌರವ ತನ್ನ ಅಹಂಕಾರವನ್ನು ಬಿಟ್ಟಿರಲಿಲ್ಲ. ಜಲಸ್ತಂಭನಕ್ಕೆ ಹೋಗುವವರೆಗೂ ಆತ ಮೆರೆಯುತ್ತಲೇ ಇದ್ದ. ಕುರುಕ್ಷೇತ್ರದ ಹೆಣಗಳ ರಾಶಿಗಳ ನಡುವೆ ಹಲವು ಆಪ್ತ ಬಂಧುಗಳ ಕಳೇಬರಗಳನ್ನು ಕಾಣುತ್ತ, ರಕ್ತದ ಕಾಲುವೆಗಳನ್ನು ದಾಟುತ್ತ, ಅಲ್ಲಲ್ಲಿ ಕಾಣುವ ಭೂತಚೇಷ್ಟೆಗಳಿಗೆ ಬೆದರದೆ ಸಾವಧಾನವಾಗಿ ಜಾಗ ಹುಡುಕಿದನಂತೆ-ತಪ್ಪಿಸಿಕೊಳ್ಳಲಿಕ್ಕೆ! ಇನ್ನೂ ಅವನಿಗೆ ಬದುಕಿದ್ದು, ಸಾಮ್ರಾಜ್ಯವನ್ನಾಳುವ ಆಸೆ!!

ಕುರುವಂಶದ ’ಸಂಸ್ಥಾನ’ ಹಾಗೆ ಏಕಾಂಗಿಯಾಗಿ ಸ್ಮಶಾನದಂತಿದ್ದ ರಣಕಣದಲ್ಲಿ ತೂರಾಡುತ್ತ ಹೆಜ್ಜೆಯಿಡುತ್ತಿರುವಾಗ ಕೂಗುತ್ತ ಬಂದಿದ್ದು ಸಂಜಯ ಮಾತ್ರ! ನೈತಿಕತೆಯನ್ನು ಕಳೆದುಕೊಂಡು ಹಣ ಚೆಲ್ಲಿ ಹೋರಾಡುತ್ತ ಬಸವಳಿದ ಗಂಜಿ ’ಸಂಸ್ಥಾನ’ ದ್ವೈಶಂಪಾಯನಕ್ಕೆ ಹಿಂಗಾಲಿನಲ್ಲಿ ಹೋಗುವಾಗ ಯಾರೆಲ್ಲ ಬರಬಹುದು? ಕುಳ್ಳಯ್ಯ ಜೊತೆಯಾಗುವನೇ? ಏಕಾಂತ ಸಖಿಯರು ಜಲಕ್ರೀಡೆಗೆ ಜೊತೆಯಾಗುವರೇ? ವಿವಾದದ ನಾಮಣ್ಣ ಸೌಂಡ್ ಬಾಕ್ಸ್ ತೆಗೆದುಕೊಂಡು ಬರುವನೇ? ಆದಿಮಾನವ ಶರ್ಮ ಕವಿತೆ ಬರೆದುಕೊಡುವನೇ? ಫೋನುಪಧ್ವ್ಯಾಪಿ ರೂಪಕ ನಡೆಸುವನೇ? ಮರುಳು ಕಲಾವಿದ ಮರುಳು ಚಿತ್ರ ಬಿಡಿಸುತ್ತೇನೆಂದು ಬರುವನೇ? ಜಲಹಳ್ಳಿ ಕಾಗದಕ್ಕೆ ಬಣ್ಣಹೊಸೆದು ಸಾಮ್ಗಳನ್ನು ಬಿಡಿಸುತ್ತ ಕೃತಾರ್ಥನಾಗುವನೇ? ಸ್ವತಃ ತೊನೆಯಪ್ಪನವರಿಗೇ ಅದು ಗೊತ್ತಿಲ್ಲ; ಊಹಿಸಲೂ ಸಾಧ್ಯವಿಲ್ಲ.

ಆದರೂ, ಹೋಗುವವರೆಗೆ ಖರ್ಚಿಗೆ ಬೇಕಲ್ಲ? ದಿನದ ಖರ್ಚೇನು ಕಡಿಮೆ ಇದೆಯೇ? ಜೊತೆಗೆ ಏಕಾಂತ ಸಖಿಯರ ಖರ್ಚುವೆಚ್ಚಗಳ ಬಾಧೆ ಬೇರೆ ಇದ್ದೇ ಇದೆ. ಏಕಾಂತ ಸಖಿಯರಲ್ಲಿ ಯಾರನ್ನೂ ದೂರಿ ಹೊರಹಾಕೋ ಹಾಗಿಲ್ಲ; ಅವರಲ್ಲಿ ಯಾರೊಬ್ಬರು ದೂರುಕೊಟ್ಟರು ಪಡೆದ ಜಾಮೀನು ತಕ್ಷಣಕ್ಕೆ ಹೋಗಿ ಪರಪ್ಪವನವೇ ಗತಿಯಾಗುತ್ತದೆ. ಹೌದೂ… ಸಾಮ್ಗಳು ಒಮ್ಮೆ ಪರಪ್ಪವನದ ಖೈದಿಗಳಿಗಾಗಿ ಕತೆ ಮಾಡುವ ನೆಪದಲ್ಲಿ ಅಲ್ಲಿ ಹೇಗಿದೆ ಅಂತ ನೋಡಿಕೊಂಡು ಬರುವುದು ಒಳ್ಳೇದಾಗಿತ್ತು. ಯಾಕೆಂದರೆ ಅಕ್ಟೋಬರ್ ನಲ್ಲಿ ನೇರವಾಗಿ ಅಲ್ಲಿಗೆ ಹೋಗಿ ಕೂರಬೇಕಾದಾಗ ಅಲ್ಲಿ ಯಾರೆಲ್ಲ ಸಿಗ್ತಾರೆ, ಎಷ್ಟು ಕೊಟ್ಟರೆ ಯಾವಯಾವ ಕೆಲಸ ಆಗ್ತದೆ. ಯಾರನ್ನ ಎಲ್ಲಿ ಹಿಡೀಬೇಕು ಎಂಬಂತಹ ವಿಷಯಗಳನ್ನು ತಿಳಿದಿಟ್ಟುಕೊಳ್ಳೋದು ಉತ್ತಮ.

ಅದಿರಲಿ, ಸುಖಾಸುಮ್ಮನೆ ಮತ್ಸರವಿಲ್ಲ, ಇಮ್ಮಡಿ ವಿಶ್ವೇಶ್ವರಯ್ಯನೋರನ್ನು ಕೆಲವು ವಿಷಯಗಳಿಗೆ ಹೊಗಳಲೇಬೇಕು. ಇಲ್ಲಿ ನಮ್ಮ ಮಿತ್ರರು ಕೆಲವರು ಪರ್ಜನ್ಯ ಜಪದ ಬಗ್ಗೆ ಮತ್ತು ಕೆಲವು ಪೂಜೆ ಪುನಸ್ಕಾರಗಳ ಬಗ್ಗೆ ಆಡಿಕೊಳ್ಳುತ್ತಾರೆ. ಇಮ್ಮಡಿಯವರು ಹಾಗೆ ಮಾಡೋದಿಲ್ಲ ಎಂಬುದು ಸಮಾಧಾನ. ಮಿತ್ರರಲ್ಲಿ ಕೇಳೋದಿಷ್ಟೆ-ನಿಮಗೆ ಗೊತ್ತಿಲ್ಲದ ವಿಷಯಗಳಲ್ಲಿ ಪಿ.ಎಚ್.ಡಿ ಮಾಡುವ ಮೊದಲೇ ತೀರ್ಮಾನಕ್ಕೆ ಬರಬೇಡಿ. ಅಷ್ಟಕ್ಕೂ ನೀವು ಮಾಡಬಹುದಾದ ಪಿ.ಎಚ್.ಡಿ ಗೂ ಕೂಡ ಒಂದು ಮಿತಿಯಿದೆ.

ಮಿತಿಯಿಲ್ಲದ್ದೆಲ್ಲ ಭಗವಂತನದ್ದು; ಮಿತಿಯುಳ್ಳದ್ದೆಲ್ಲ ಮನುಷ್ಯನದ್ದು. ನಾವೇರಿದ ವಾಹನ ಸರಿಯಾಗಿ ಚಲಾಯಿಸಿದರೂ, ಗಮ್ಯ ತಲುಪುವ ತನಕ ಹಿಂದೆ-ಮುಂದೆ ಯಾರೂ ಗುದ್ದದಂತೆ ರಕ್ಷಿಸುವುದು ಯಾವುದೋ ಶಕ್ತಿ. ಘಟ್ಟದ ಏರಿನಲ್ಲಿ ಅಥವಾ ಇಳುಕಲಿನಲ್ಲಿ ಜಾಯಿಂಟ್ ಕಟ್ಟಾಗದಂತೆ ಬಸ್ಸಿನಂತಹ ದೊಡ್ಡ ವಾಹನಗಳನ್ನು ರಕ್ಷಿಸುವುದು ಅದೇ ಶಕ್ತಿ. ಆಗಸಕ್ಕೇರಿದ ವಿಮಾನ ಸುರಕ್ಷಿತವಾಗಿ ನೆಲಕ್ಕೆ ಇಳಿಯುವವರೆಗೆ ಕಾಯೋದು ಅದೇ ಶಕ್ತಿ. ಮಹಾಸಾಗರದಲ್ಲಿ ಸಾಗುವ ಹಡಗು ಮುಳುಗದಂತೆ ರಕ್ಷಿಸೋದು ಅದೇ ಶಕ್ತಿ.

ಹಿಂದೆ ಅನೇಕಸಲ ತುಮರಿ ಈ ವಿಷಯವಾಗಿ ಹೇಳಿದ್ದಿದೆ. ಇರುವೆ ಸರಿಯುವ ಸದ್ದು, ಮೊಗ್ಗು ಬಿರಿಯುವ ಸದ್ದು, ಮಂಜು ಇಳಿಯುವ ಸದ್ದು ಎಲ್ಲವನ್ನೂ ಆ ಶಕ್ತಿ ಕೇಳಬಲ್ಲುದು. ನೀರು ಆವಿಯಾಗಿ, ನೀರಾವಿ ಮೋಡವಾಗಿ, ಮೋಡ ಮಡುಗಟ್ಟಿ ಮಳೆಯಾಗಿ ಧರೆಗಿಳಿಯುವುದಕ್ಕೆ ಬೇಕಾದ್ದು ಅದೇ ಶಕ್ತಿಯ ಕೃಪೆ. ಆ ಕೃಪೆ ಅಂಗಡಿಯಲ್ಲಿ ಕ್ರಯಕ್ಕೆ ಸಿಗೋದಾದ್ರೆ ಸರಕಾರದೋರು ಖರೀದಿಸ್ತಿದ್ರು. ಅಥವಾ ಇಲ್ಲಿ ಪರ್ಜನ್ಯ ಜಪವನ್ನು ಮೂಢನಂಬಿಕೆಯೆಂಬಂತೆ ಬಿಂಬಿಸುವವರು ಬೇಕಾದಲ್ಲಿ ತಮ್ಮ ಅಧುನಿಕ ವೈಜ್ಞಾನಿಕ ಪ್ರಯೋಗದಿಂದ ಮಳೆತರಿಸುತ್ತಿದ್ದರು. ವಸ್ತುಸ್ಥಿತಿ ಹಾಗಿಲ್ಲ. ಮನುಷ್ಯನ ಇತಿಮಿತಿ ಅರ್ಥವಾಯ್ತಲ್ಲ?

ಕವಳದ ಗೋಪಣ್ಣ ಹೇಳ್ತಾನೆ ತೊನೆಯಪ್ಪನಂತ ಕೆಲವರು ಲಂಗದಮೇಲೆ, ಮಹಿಳೆಯರ ಚಡ್ಡಿಯಮೇಲೆ ಗಂಜಿಯ ಮಳೆ ಸುರಿಸುವಷ್ಟು ಸಮರ್ಥ ಪುರುಷರೆಂದು ಮರ್ಯಾದೆಬಿಟ್ಟು ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರ ಬಣ್ಣದ ಅಕ್ಕಿಯೂ ಕೂಡ ಮಳೆ ತರಿಸೋದು ಸಾಧ್ಯವಿಲ್ಲ. ವಿಚಿತ್ರವೆಂದರೆ ರಾಂಗಾನುಗ್ರಹವೆಂಬ ಪವಾಡ ಪುಸ್ತಕಕ್ಕೆ ಸುವರ್ಣಮಂತ್ರಾಕ್ಷೆತೆ ತೆಗೆದುಕೊಂಡು ಬೆನ್ನುಡಿ ಗೀಚಿದ ಸಂಪಾದಕನೊಬ್ಬ ಇದೆಲ್ಲ ಗೊತ್ತಿದ್ದೂ ಪರ್ಜನ್ಯಜಪ ಹೋಮವನ್ನು ಮೂಢನಂಬಿಕೆ ಎಂಬಂತೆ ಟೀಕಿಸುವ ವರದಿ ಹಾಕಿದ್ದಾನೆ. ಈ ವಿಷಯದಲ್ಲಿ ಇಮ್ಮಡಿಯವರು ಮಾತ್ರ ಹಾಗೆ ಮಾಡಲಿಲ್ಲ.

ಕತ್ತಲೆಕೋಣೆ ಮಾಣಿ ವಾಣಿ, ತಿನ್ನಪ್ಪನ ನಾಟಕ, ಪವಾಡೀ ಹೆಗಡೆಯ ಪ್ರಭೆ ಎಲ್ಲದಕ್ಕೆ ಹೋಲಿಸಿದರೆ ಇಮ್ಮಡಿ ವಿಶ್ವೇಶ್ವರಯ್ಯನವರ ವಾಣಿಯೇ ವಾಸಿ ಎನಿಸುತ್ತದೆ ಎನ್ನಲು ಯಾವ ಸಂಕೋಚವೂ ಇಲ್ಲ, ಮತ್ಸರವೂ ಇಲ್ಲ, ದ್ವೇಷವೂ ಇಲ್ಲ. ಅಷ್ಟಕ್ಕೂ ಇಮ್ಮಡಿಯವರದ್ದು ಸಾಮ್ಗಳ ಜೊತೆ ಜಾಯಿಂಟ್ ಅಕೌಂಟು ಮತ್ತು ಕಚ್ಚೆಹರುಕನಿಂದ ಸುವರ್ಣ ಮಂತ್ರಾಕ್ಷತೆ ಪಡೆದುಕೊಂಡು ಅವನನ್ನು ಸೇಫ್ ಗಾರ್ಡ್ ಮಾಡುವುದಕ್ಕೆ ಕೆಲವು ಮಾಧ್ಯಮಗಳನ್ನು ಗುತ್ತಿಗೆ ಹಿಡಿಯೋದರಿಂದ ಇಮ್ಮಡಿಯವರ ಮೇಲೆ ನಮಗೆ ಅಸಾಧ್ಯ ಕೋಪ. ಹಾಗಂತ ಸಾಮ್ಗಳ ಗಂಜಿ ಹಾರಿದ ಸದ್ದನ್ನು ಇಮ್ಮಡಿ ಕೇಳಿದ್ದಾರೆ, ತಾವೂ ಅಲ್ಲಲ್ಲಿ ಗಂಜಿ ಹಾರಿಸಿದ್ದಾರೆ ಆ ಪ್ರಶ್ನೆ ಬೇರೆ.

ಗುಂಡು ಹಾಕೋದು, ಗಂಜಿ ಹಾರಿಸೋದು ಅದೆಲ್ಲ ಅವರ ವೈಯಕ್ತಿಕ, ನಾವದನ್ನು ಕೇಳೋದಿಲ್ಲ. ಆದರೆ ಸಮಾಜದ ಧಾರ್ಮಿಕ ಮುಖಂಡನ ವಿಷಯಗಳಲ್ಲಿ ಸತ್ಯ ಗೊತ್ತಿದ್ದೂ ಅದರ ವಿರುದ್ಧ ಗುತ್ತಿಗೆ ವೀಳ್ಯ ಹಿಡಿದು ಬರೆಯುವುದು ಅಕ್ಷ್ಯಮ್ಯ ಅಪರಾಧ. ಯಾಕೆಂದರೆ ಮಠದ ಧಾರ್ಮಿಕ ಮುಖಂಡನ ಖಾಸಗಿ ಬದುಕು ಕೂಡ ಶಿಷ್ಯರಿಗೆ, ಅನುಯಾಯಿಗಳಿಗೆ ಬಹಳ ಮುಖ್ಯ. ಖಾಸಗಿ ಬದುಕಿನಲ್ಲಿ ಚಾರಿತ್ರ್ಯಹೀನನಾದ ವ್ಯಕ್ತಿ ಸಮಾಜಕ್ಕೆ ಉಪದೇಶ ಕೋಡೋದಾದರೂ ಹೇಗೆ? ಚಾರಿತ್ರ್ಯಹೀನ ವ್ಯಕ್ತಿ ಸ್ವಾಮಿಯಾದರೇನು ಸಾಮಾಜಿಕ ಮುಖಂಡನಾದರೇನು ಅವನನ್ನು ಉಚ್ಛಾಟಿಸೋದು ಸಮಾಜದ ಕರ್ತವ್ಯ ಮತ್ತು ಮಾಧ್ಯಮಗಳ ಮಂದಿಕೂಡ ಅದನ್ನು ಗಮನಿಸಬೇಕು. ಹಣಕ್ಕಾಗಿ ಹೇಗೆ ಬೇಕಾದರೂ ವರ್ತಿಸೋದಾದರೆ ಜನ ಅದನ್ನು ಕ್ಷಮಿಸೋದಿಲ್ಲ ಎಂಬುದನ್ನು ಅವರೆಲ್ಲ ಅರಿತುಕೊಳ್ಳಬೇಕು.

ಬೆಕ್ಕು ಹಾಲು ಕುಡಿಯೋವಾಗ ಜಗತ್ತಿಗೆಲ್ಲ ಕಾಣಬಾರದು ಅಂತ ಕಣ್ಮುಚ್ಚಿ ಕುಡಿಯುತ್ತಂತೆ. ಹಾಗಂತ ಸುತ್ತಲ ಜಗತ್ತಿಗೆ ಅದು ಗೋಚರವಾಗದಿರುತ್ತೋ? ತೊನೆಯಪ್ಪ ಹಾರುವಾಗ ಕಿಟಕಿ-ಬಾಗಿಲುಗಳನ್ನು ಮುಚ್ಚಿ ಏಕಾಂತ ಅಂತ ತಯಾರಿಮಾಡಿಕೊಂಡು ದಿವ್ಯಳು ಭವ್ಯಳು ಎನ್ನುತ್ತ ಹಾರಿದರೂ ಒಳಗೆ ಹೋದ ಏಕಾಂಗಿ ಮಹಿಳೆ ಬಹಳ ಹೊತ್ತಿನ ನಂತರ ’ಸನ್ಯಾಸಿ’ ಕೊಠಡಿಯಿಂದ ಹೊರಗೆ ಕಾಲಿಡುವಾಗ ಅಲ್ಲಿರುವ ಗಂಡಸರೆಂಬ ಜೀವಿಗಳಿಗೆ ಅರ್ಥವಾಗುತ್ತದೆ. ಆದರೂ ಗುರುವೆಂಬ ಸ್ಥಾನಕ್ಕೆ ಹಿಂದಿನಿಂದ ನೀಡಿರುವ ಗೌರವವನ್ನು ಮರೆಯದೆ ವಿಟಪುರುಷನೆಂಬ ಸಂದೇಹಗಳನ್ನೂ ಮೀರಿ ಕೆಲವೊಂದಷ್ಟು ದಿನ ಕೈಮುಗಿದಾರು. ಹತ್ತುಸಲ ಕದ್ದ ಕಳ್ಳ ಕೊನೆಗೊಮ್ಮೆ ಸಿಕ್ಕಿಬೀಳ್ತಾನೆ ಎಂದಂತೆ ಹತ್ತುಸಲ ಹಾರಿದ ಕಳ್ಳ ಹನ್ನೊಂದನೇ ಸಲವೋ ಇನ್ನೊಂದನೇ ಸಲವೋ ಸಿಕ್ಕಿಹಾಕಿಕೊಳ್ತಾನೆ.

ವಿರಾಗಿಯಾದ ಯೋಗಿ, ರಾಗಿಯಾದ ಭೋಗಿ, ಈರ್ವರ ನಡತೆಯಲ್ಲೆ ಹಲವು ಚಹರೆಗಳನ್ನು ಕಾಣಬಹುದು. ವಿರಾಗಿಯಾದ ಯೋಗಿ ಸದಾ ಜನಜಂಗುಳಿಯ ಮಧ್ಯೆಯೇ ಇರುವುದು ಸಾಧ್ಯವಿಲ್ಲ. ನಿತ್ಯವೂ ತಪ್ಪದೆ ಸಕಾಲದಲ್ಲಿ ಜಪತಪಾನುಷ್ಠಾನಗಳನ್ನು ನಡೆಸುತ್ತಾನೆ. ನೈಷ್ಠಿಕ ಬ್ರಹ್ಮಚರ್ಯ ವಿರಾಗಿಯ ಜೀವನದ ಮುಖ್ಯ ಅಂಗ. ರಾಗಿಯಾದ ಭೋಗಿ ವಿರಾಗಿಯ ವೇಷವನ್ನು ತೊಟ್ಟರೆ ಕತ್ತೆ ಹುಲಿಚರ್ಮವನ್ನು ಹೊದ್ದು ಹೊಲ ಹೊಕ್ಕಂತಿರುತ್ತದೆ; ಅದು ಬಹಳಕಾಲ ನಿಲ್ಲೋದಿಲ್ಲ. ಹಸಿವಾದಾಗ ಕತ್ತೆ ಹುಲ್ಲುತಿನ್ನುತ್ತದಲ್ಲ? ಬಾಯ್ದೆರೆದರೆ ಹುಲಿಯ ಘರ್ಜನೆಗೂ ಗರ್ದಭ ಗಾನಕ್ಕೂ ವ್ಯತ್ಯಾಸವುಂಟಲ್ಲ? ಸಾಮ್ಗಳು ವಿರಾಗಿಯ ವೇಷಧರಿಸಿದ ರಾಗಿ-ಭೋಗಿ ಎಂಬುದು ಇಡೀ ಸಮಷ್ಟಿ ಸಮಾಜಕ್ಕೆ ಗೊತ್ತಾಗಿರುವ ವಿಷಯ.

ವಿಷಯ ಗೊತ್ತಿರುವ ಕೆಲವರು ಮನಸ್ಸಿಲ್ಲದ ಮನಸ್ಸಿನಿಂದ “ಬೇರೆಯವರ ಹೆಂಡಿರನ್ನು ಮುಕ್ಕುವ ಈ ಕಳ್ಳ ಬೋ….ಮಗ ಸನ್ಯಾಸಿಯಂತೆ, ಸ್ವಾಮಿಯಂತೆ” ಎಂದು ಮನದಲ್ಲೇ ಬೈಯುತ್ತ ಇನ್ನೂ ಈ ಸಾಮ್ಗಳಿಗೆ ನಮಸ್ಕಾರ ಹಾಕ್ತಾರೆ. ನಮಸ್ಕಾರ ಹಾಕೋದರಲ್ಲಿ ಸ್ವಹಿತಾಸಕ್ತಿ ಅಡಗಿರ್ತದೆ. ಅದರಲ್ಲಿ ರಾಜಕಾರಣಿಗಳೂ ಇದ್ದಾರೆ. ಅದನ್ನು ಬಿಟ್ಟು ನೆಟ್ಟಗಿರುವ ಯಾರೊಬ್ಬರೂ ಈ ಸಾಮಿಗೆ ಅಡ್ಡಬೀಳುವ ’ಮಹತ್ಕಾರ್ಯ’ಕ್ಕೆ ಇಳಿಯೋದಿಲ್ಲ.

ಸಾಮ್ಗಳು ಭಜನೆ ಮಾಡ್ತಾರೆ…ಎಲ್ಲಾ ಬಿಟ್ಟ ಭಂಗಿ ನೆಟ್ಟ ಅಂತಾರಲ್ಲ ಹಾಗೇ. ಭಜನೆಗೆ ಮಹಿಳೆಯರು ಹುಡುಗೀರು ಬರ್ತಾರೆ. ಸಾಮ್ಗಳು ಅವರಿಂದ ಹಾಡಿಸಿ ಹಾಡುವಾಗ ಅವರನ್ನು ತದೇಕಚಿತ್ತವಾಗಿ ಕಣ್ಣಲ್ಲೇ ಆಘ್ರಾಣಿಸುತ್ತಾರೆ. ಭಜನೆ ಮಾಡಿಸೋದಕ್ಕೆ ಒಂದಷ್ಟು ಕೊಡಿ ಅಂತಾರೆ ಹಳದೀ ತಾಲಿಬಾನಿಗಳು. ಜನ ತಮ್ಮ ಬೆಳೆಯಲ್ಲಿ, ಆದಾಯದಲ್ಲಿ ಇಪ್ಪತ್ತು ಪರ್ಸೆಂಟ್ ಕೊಡಬೇಕಂತೆ. ಅದು ದೀಪಕಾಣಿಕೆಯಲ್ಲ. ಈಗ ದೀಪಕಾಣಿಕೆ ಎಂಬ ಹೇಳಿಕೆಗೆ ಬೆಲೆಯೇ ಇಲ್ಲ ಈ ಹಾವಾಡಿಗ ಮಠದಲ್ಲಿ. ಅಲ್ಲೇನಿದ್ರೂ ನೂರಾರು ಸ್ಕೀಮುಗಳು ಮತ್ತು ಪಾವತಿ ಪುಸ್ತಕಗಳು ಮಾತ್ರ. ಎತ್ತುವಳಿಗೆ ಯಾವ ರೀತಿ ಹೇಳಿದರೆ ವಸೂಲಾಗುತ್ತೋ ಆಲೋಚಿಸಿ ಅದಕ್ಕೆ ತಕ್ಕಂತೆ ಯೋಜನೆ ಹೊಸೆಯೋದು ಕುಳ್ಳಬಾವಯ್ಯನ ಕೆಲಸ.

ಯಾವ ಸೀಮೆಯ ಯಾವ ಪೀಠದ ಸನ್ಯಾಸಿಯನ್ನಾದರೂ ಗಮನಿಸಿ. ಉತ್ತರ ಭಾರತದ ಕೆಲವು ಢೋಂಗಿ ಬಾಬಾಗಳನ್ನು ಬಿಟ್ಟು ಬೇರೆಲ್ಲೂ ಇಷ್ಟು ಹಣ ಪೀಕುವ ಸನ್ಯಾಸಿಯನ್ನು ನೀವು ಕಾಣೋದಿಲ್ಲ. ಕಾಸಿದ್ದವರ ಜೇಬಿನ ಸಾಮರ್ಥ್ಯವನ್ನು ನೋಡಿ ಮಠದಲ್ಲಿ ಮಾನ-ಮನ್ನಣೆ. ಕಾಸು ಸಿಗುವವರೆಗೆ ಮತ್ತು ತನ್ನ ಅನೈತಿಕ ಸ್ವೇಚ್ಛಾಚಾರತೆಯನ್ನು ಮನ್ನಿಸುವ, ಒಪ್ಪುವ, ಪ್ರಶ್ನಿಸದಿರುವ ಧನಿಕರಿಗೆ ಮಾತ್ರ ಮಠದಲ್ಲಿ ಹೆಚ್ಚಿನ ಸ್ಥಾನಮಾನ, ಯಾವಾಗಲೋ ನಿಜ ಅರಿತು ಅವರು ಪ್ರಶ್ನಿಸಿದರೆ ತಕ್ಷಣಕ್ಕೇ ಅಂತವರು ಮಠದಿಂದ ಔಟ್. ಈ ಸಾಮಿ ಮಠಕ್ಕೆ ವಕ್ಕರಿಸಿಕೊಳ್ಳುವ ಮುಂಚಿನಿಂದ ಮಠದ ಶಿಷ್ಯರಾಗಿ ಸೇವೆ ಸಲ್ಲಿಸುತ್ತ ಈಗ ಮಠದ ಶಿಷ್ಯರೇ ಅಲ್ಲವೆಂದು ಹೊರಗೆಸೆಯಲ್ಪಟ್ಟ ಜನ ಅದೆಷ್ಟಿಲ್ಲ? ಅವಮಾನಿತರಾದ ಗಣ್ಯರೆಷ್ಟಿಲ್ಲ?

ಯಸ್ ಯಸ್ ಯಸ್, ಗೋಪಣ್ಣ ಹೇಳಿದ್ದರಲ್ಲಿ ತಪ್ಪಿರಲು ಸಾಧ್ಯವೇ ಇಲ್ಲ. ಈ ಸಾಮಿ ಕಣ್ಣಿಡೋದೇ ಶಿಷ್ಯರ ಪಾಕೆಟ್ ಮೇಲೆ. ಆದರೆ ಇವ ನೇರವಾಗಿ ಜೇಬಿಗೆ ಕೈಬಿಟ್ಟು ಎಗರಿಸೋ ಪಿಕ್‍ಪಾಕೆಟಾನಂದನಲ್ಲ; ಹಣ ಎಗರಿಸೋದಕ್ಕೆ ಹಲವು ಪರ್ಯಾಯ ಮಾರ್ಗಗಳನ್ನು ಹಿಡಿಯುವ ಹೈಟೆಕ್ ಪಿಕ್ ಪಾಕೆಟರ್. ತರಾವರಿ ಬೋಗಸ್ ಯೋಜನೆಗಳನ್ನು ಹಾಕ್ತಾನೆ. ಸಾಕಿಕೊಂಡ ಚೇಲಾಗಳನ್ನು ಎತ್ತುವಳಿಗೆ ಬಿಡ್ತಾನೆ. ಅವರಿಗೆಲ್ಲ ಒಂದಷ್ಟು ಪಾಲು ಇದ್ದೇ ಇರ್ತದೆ; ಜೇನು ತೆಗೆದವರು ಕೈ ನೆಕ್ಕದೆ ಇರ್ತಾರ ಅಂತ ಯಾರೋ ಹೇಳಿದ್ದರು ಹಾಗೆ. ಎಲ್ಲೀವರೆಗೆ ಸಾಮಿ ಮಠದಲ್ಲಿರ್ತಾನೋ ಅಲ್ಲೀವರೆಗೆ ಅವರೆಲ್ಲ ಅಲ್ಲೇ ಇರ್ತಾರೆ. ಬೇರೆ ಉದ್ಯೋಗ ಬೇಕಾಗಿಲ್ಲ.

ಸಾಮ್ಗಳು ಹಸುವಿನ ಬಾಲ ಹಿಡಿದಿದ್ದಾರೆ. ಹಲವು ಮುಖ-ಮಜಲುಗಳಲ್ಲಿ, ವಿಭಿನ್ನ ಕೋನಗಳಲ್ಲಿ ಹಸುವನ್ನು ಫೋಕಸ್ ಮಾಡುತ್ತ ಗಂಜಿತಾಗಿದ ಚಡ್ಡಿ-ಲಂಗಗಳ ಕತೆಗಳನ್ನು ನೇಪಥ್ಯಕ್ಕೆ ಸರಿಸುವ ಪ್ರಯತ್ನ ಮಾಡ್ತಿದಾರೆ. ಜನರಲ್ಲಿ ಅದನ್ನು ಬಿಡಿ ಇದನ್ನು ಕೊಡಿ ಅಂತಾರೆ, ತಮ್ಮ ವೇದಿಕೆಗಳ ಅಲಂಕಾರಕ್ಕೆ, ಶಾಮಿಯಾನ ಟೆಂಟು ವ್ಯವಸ್ಥೆಗೆ, ಬಣ್ಣಬಣ್ಣದ ಫಾಂಪ್ಲೆಟ್ಟುಗಳಿಗೆ ಲಕ್ಷಗಳಲ್ಲಿ ಖರ್ಚುಮಾಡೋದು ನಿಲ್ಲಿಸಲ್ಲ; ಯಾಕೆ ಗೊತ್ತೆ ಡಲ್ ಹೊಡೆದರೆ ಅಲ್ಲಿ ಮಹಿಳೆಯರು ಬರಲ್ಲ! ಜನ ಮಳ್ಳು ಬೀಳಲ್ಲ. ಮಾಧ್ಯಮದಲ್ಲಿ ಬಣ್ಣದ ಮ್ಯಾಜಿಕ್ ಮಾಡೋಕಾಗಲ್ಲ. ಅದಕ್ಕಾಗಿ ಸಾಮ್ಗಳಿಗೆ ಅವೆಲ್ಲ ಬೇಕೇ ಬೇಕು.

ಈಗ ಸದ್ಯಕ್ಕೆ ಮುಂದಿರೋದು ಕೇಸುಗಳ ಖರ್ಚಿನ ವ್ಯವಹಾರ. ಅದರ ನಿಭಾವಣೆಗಾಗಿ ಕಳ್ಳ-ಕುಳ್ಳ ಸೇರಿ ಇನ್ನಷ್ಟು ಯೋಜನೆಗಳನ್ನು ಹಾಕ್ಕೊಂಡಿದಾರೆ. ಜನರಿಗೆ ಬೋಳೆಣ್ಣೆ ಹಚ್ಚೋದು ಅವರಿಗೆ ನೀರು ಕುಡಿದಷ್ಟೇ ಸುಲಭದ ಕೆಲಸ. ’ಪರಮಹಂಸ’ ಪಿಕ್‍ಪಾಕೆಟಾನಂದರ [ಖಾಸಗಿ]ವಿವಿಧೋದ್ದೇಶ ಯೋಜನೆಗಳಿಗೆ ಸಹಾಯ ಮಾಡಿ ಅಂತಾರೆ ಹಳದೀ ಜನ. ಉಂಡೆನಾಮ ತಿಡಿಸಿಕೊಳ್ಳುವವರು ಚತುರ್ಮೋಸಕ್ಕೆ ತಯಾರಿ ಮಾಡ್ಕೊಳಿ ಪ್ಲೀಸ್. ಭಾರೀ ಮೆರವಣಿಗೆ, ಭಾಜಾಭಜಂತ್ರಿಗಳು, ತಟ್ಟೀರಾಯ ಎಲ್ಲ ಬೇಕು-ಪುರಪ್ರವೇಶಕ್ಕೆ. ಸಾಮ್ಗಳೇ ಖುದ್ದಾಗಿ ನಿಂತು ಮಠವನ್ನು ಮದುವೆಮನೆಯಂತೆ ಅಲಂಕರಿಸೋದಕ್ಕೆ ಹೇಳ್ತಾರೆ ಅನ್ನೋದು ’ಸನ್ಯಾಸಿ’ಯ ’ಪರಮ ವೈರಾಗ್ಯ’.

ಸಾಮ್ಗಳು ಎರಡುಮೂರು ವರ್ಷಗಳಿಂದ ಶಿಖರನಗರದಲ್ಲೇ ಸತತ ಚತುರ್ಮೋಸ ನಡೆಸುತ್ತಿದ್ದಾರೆ ಏಕೆಂದ್ರೆ ಮಾವಂದಿರು ಎತ್ತಾಕ್ಕೊಂಡೋಗಕ್ಕೆ ಬರದಂತೆ ರಾಜಕೀಯ ಮಸಲತ್ತು ನಡೆಸೋದು ಅಲ್ಲಿದ್ರೆ ಮಾತ್ರೆ ಸಾಧ್ಯ ಅದಕ್ಕೆ. ಇನ್ನೊಂದು ಕಾರಣ ಅಂದ್ರೆ ಇನ್ನೆಲ್ಲೂ ಯಾವ ಸೀಮೆ ಶಿಷ್ಯರೂ ಸಾಮ್ಗಳನ್ನು ಚತುರ್ಮೋಸ ತಮ್ಮಲ್ಲೇ ಮಾಡಿ ಅಂತ ಹೇಳೋದಕ್ಕೆ ತಯಾರಿಲ್ಲ. ನಿಮ್ಕೈಲಿ ಏನಿರುತ್ತೋ ಅದನ್ನೆಲ್ಲ ಕೊಡಿ ಬಂಗಾರ, ಬೆಳ್ಳಿ ಯಾವುದೂ ಆಗಬಹುದು. ನಿಮ್ಮ ಮನೇಲಿ ಹಳೇಕಾಲದ ಪಿತ್ರಾರ್ಜಿತ ಒಡವೆಗಳಿದ್ದರೆ ಸಾಮ್ಗಳ ಸೇವೆಗೆ ಅರ್ಪಿಸಿ, ನಿಮಗೆ ಒಳ್ಳೇದಾಗ್ತದೆ.

ಬರೇ ನಾಮ

ಬರೇ ಕಾಮ

ಬರೇ ನಾಮ

ಬರೇ ಕಾಮ

Thumari Ramachandra
04/06/2017
source: https://www.facebook.com/groups/1499395003680065/permalink/1969465203339707/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s