ಗೋಧೂಳಿಯಲ್ಲಿ ಕಚ್ಚೆಕತೆ ಮುಚ್ಚುವ ಹತಾಶ ಪ್ರಯತ್ನ

ಗೋಧೂಳಿಯಲ್ಲಿ ಕಚ್ಚೆಕತೆ ಮುಚ್ಚುವ ಹತಾಶ ಪ್ರಯತ್ನ
[’ತೂತೂರೇಶ್ವರ ಚರಿತ್ರೆ’ಯ ಒಂದು ಅಧ್ಯಾಯ]

ಬರೇ ಕಾಮ

ಪೈಗಳು ನನಗೆ ಇಲ್ಲಿವರೆಗೆ ಮಾತನಾಡಿದ್ದಿಲ್ಲ. ಎರಡು ದಶಕಗಳಿಂದ ನೇರ ಸಂಪರ್ಕವೂ ಇರಲಿಲ್ಲ. ಮೊನ್ನೆ ಅನಿರೀಕ್ಷಿತವಾಗಿ ಸ್ಕೈಪ್ ನಲ್ಲಿ ಕಾಣಿಸಿಕೊಂಡು ಮಾತನಾಡಿದರು. ತುಮರಿಯ ಐಡಿ ಅವರಿಗೆ ಕೊಟ್ಟಿದ್ದು ಕವಳದ ಗೋಪಣ್ಣ ಎಂಬುದು ಆಮೇಲೆ ತಿಳಿಯಿತು.

“ಅಲ್ಲಾ ರಾಮಣ್ಣ, ನಿಮ್ಮ ಸಮಾಜದವರಿಗಾದರೂ ಸ್ವಲ್ಪ ಬುದ್ಧಿ ಇರಬೇಕಿತ್ತಲ್ವ? ಸಾಕ್ಷ್ಯಾಧಾರಗಳು ಸ್ವಾಮಿಯ ಅಪರಾಧ ಸಾಬೀತು ಪಡಿಸಿದ್ದರೂ ಕಣ್ಮುಚ್ಚಿ ಜೈಕಾರ ಹಾಕ್ತಾರಲ್ಲ. ಬೇರೆ ಕೆಲವು ಜನಾಂಗಗಳಲ್ಲಾಗಿದ್ರೆ ಸ್ವಾಮಿಯನ್ನು ನಡುರಸ್ತೇಲಿ ಕಂಬಕ್ಕೆ ಕಟ್ಟಿ ಚಪ್ಪಲಿಹಾರ ಹಾಕಿ ಮಾಡಬೇಕಾದ ಮಂಗಳಾರತಿ ಮಾಡ್ತಿದ್ರು. ನಿಮ್ಮ ಜನ ಮಾತ್ರ ಯಾಕೀಂಗಾಡ್ತಾರೆ ಅಂತ ಅರ್ಥ ಆಗ್ಲಿಲ್ಲ. ನಿಮ್ಮ ಬರವಣಿಗೆಗಳನ್ನು ತುಂಬ ದಿವಸದಿಂದ ಓದ್ತಾ ಇದ್ದೆ. ಹಲವು ನಿಜವಿಷಯ ಗೊತ್ತಾಗಿದ್ದೆ ನಿಮ್ಮ ಬರವಣಿಗೆಗಳಿಂದ. ಓದೋದಕ್ಕೆ ಬರಹ ಬಹಳ ಚೆನ್ನಾಗಿರ್ತದೆ. ನಮ್ಗೆಲ್ಲ ಬರೆಯಕ್ಕೆ ಬರದಿಲ್ಲ.”

ಎಂದೆಲ್ಲ ಅರ್ಧಗಂಟೆ ಮಾತನಾಡಿದರು. ಅವರು ಕ್ಯಾಕರಿಸಿ ವೀರ್ಯಪ್ಪನ್ ಸಾಮ್ಗಳಿಗೆ ಉಗುಳುತ್ತಿದ್ದರೆ ಉಗಿದದ್ದು ಇಡೀ ಸಮಾಜಕ್ಕೆ ಅಂತ ನನಗೆ ಭಾವನೆ ಬರ್ತಾ ಇತ್ತು. ಜಗದ್ಗುರು ವೀರ್ಯಪ್ಪನ್ ಸಾಮ್ಗಳು ತನ್ನ ಕಚ್ಚೆಕತೆ ಮುಚ್ಚಿಹಾಕೋ ಸಲುವಾಗಿ ಮಡಿದ ಕ್ರಿಮಿನಲ್ ಪ್ರಯತ್ನಗಳು ಹತ್ತಲ್ಲ ಹಲವು. ಕುಳ್ಳ ಬಾವ ಇಟ್ಟ ಟ್ಯೂನಿಗೆ ಡ್ಯಾನ್ಸ್ ಹೊಡೆಯುತ್ತಲೇ ಹಲವು ನಾಟಕಗಳನ್ನು ಅಡಿದರು.

ಅದ್ಯಾವುದೋ ಊರಲ್ಲಿ ಪೆದ್ದನೊಬ್ಬ ಇದ್ದನಂತೆ. ಅವನಿಗೋ ಯಕ್ಷಗಾನದ ಪಾತ್ರ ಮಾಡೋ ಖಯಾಲಿ. ಪೆದ್ದನಿಗೆ ಯಾರಾದರೂ ಪಾತ್ರಪೋಷಣೆಗೆ ಅವಕಾಶ ಕೊಡ್ತಾರಾ? ಇಲ್ಲ. ಅಕ್ಕಪಕ್ಕದ ಊರುಗಳಲ್ಲಿ ಎಲ್ಲೋ ಬಯಲಾಟ ಇದೆ ಎಂದು ಸುದ್ದಿ ಸಿಕ್ಕಿದರೆ ಓಡುತ್ತಿದ್ದನಂತೆ. ಅಲ್ಲಿ ಕೋಡಂಗಿ ವೇಷ ಅಂತ ಅನುಮತಿ ಕೊಟ್ಟರೆ ಅದನ್ನು ಹಾಕೋದು. ಸಭೆಯಲ್ಲಿರೋ ಮಕ್ಕಳಿಗೆಲ್ಲ ಅವ ಪೆದ್ದ ಅನ್ನೋದು ಗೊತ್ತಾಗಿ ಗುಸುಗುಸು ಕಿವಿಯಲ್ಲಿ ಮಾತಾಡಿಕೊಂಡು “ನಾಲ್ಕಾಣೆ ಕೊಡ್ತೇನೆ ಕಪ್ಪೆ ಕುಣಿತ ಮಾಡು”, “ಎಂಟಾಣೆ ಕೊಡ್ತೇನೆ ಮಂಗನ ಕುಣಿತ ಮಾಡು”, “ನಂದೂ ಎಂಟಾಣೆ ಹಂದಿ ನೆಲ ಅಗೆಯುವ ಪಾತ್ರ ಮಾಡು” ಅಂತೆಲ್ಲ ದುಂಬಾಲು ಬೀಳ್ತಿದ್ರಂತೆ.

ಪೆದ್ದ [ಪೆದ್ದ ಅನ್ನೋದಕ್ಕೆ ತೆಲುಗಿನಲ್ಲಿ ದೊಡ್ಡ ಎಂಬ ಅರ್ಥವೂ ಇದೆ ಎಂದು ಕೇಳಿದ್ದೇನೆ.:) ಇದು ಕನ್ನಡದ ಪೆದ್ದ, ತೆಲುಗಿನದ್ದಲ್ಲ!]ಕಲಾವಿದರಿಗೆ ಬಹುಮಾನ ಪ್ರಶಸ್ತಿಗಳ ಬಯಕೆಯೂ ಇತ್ತು. ಅದನ್ನೆಲ್ಲ ಅರಿಯುವಷ್ಟು ಬುದ್ಧಿವಂತ ಪೆದ್ದ ಆ ಕಲಾವಿದ ಎಂಬುದು ಮಕ್ಕಳಿಗೂ ಗೊತ್ತಿತ್ತು. ನಾಲ್ಕಾಣೆ ಬಹುಮಾನ, ಎಂಟಾಣೆ ಬಹುಮಾನ ಎಲ್ಲ ಬರುತ್ತಲ್ಲ ಅನ್ನೋದನ್ನು ಮನಸ್ಸಿನಲ್ಲಿ ನೆನೆಸಿಕೊಂಡೇ ಪೆದ್ದ ಕಲಾವಿದ ಖುಷಿಗೊಳ್ಳುತ್ತಿದ್ದ; ತಿರುಕ ರಾಜನಾಗಿ ರಾಜ್ಯವಾಳಿದ ಕನಸುಕಂಡನಂತಲ್ಲ ಹಾಗೆ.

ಪೆದ್ದಕಲಾವಿದ ವೇಷ ಮುಗಿಸೋ ಹೊತ್ತಿಗೆ ಮಕ್ಕಳು ಓಡಿಬಿಡುತ್ತಿದ್ದವು. ಕೊನೆಗೆ ಕಂಡವರಲ್ಲಿ ದೂರಿಕೊಂಡಾಗ ಹೃದಯ ಕರಗಿದ ಕೆಲವರು, ಪೆದ್ದ ಪಾಪ ಅಂದುಕೊಂಡು ಮಕ್ಕಳ ಪರವಾಗಿ ಅವರೇ ನಾಲ್ಕಾಣೆ ಎಂಟಾಣೆ ಬಹುಮಾನ ಕೊಡುತ್ತಿದ್ದರಂತೆ. ಪ್ರಶಸ್ತಿ ಅಂದರೆ ಬರೆದ ಪತ್ರವಲ್ಲ, ಏನಾದರೂ ಹಾರ, ಶಾಲು ಇತ್ಯಾದಿ ಮಾತ್ರ ಅನ್ನೋದು ಪೆದ್ದ ಕಲಾವಿದನ ತಿಳುವಳಿಕೆ. ಹಾಗಾಗಿ ದೊಡ್ಡ ಕಲಾವಿದರಿಗೆ ಸನ್ಮಾನವಾಗುವಾಗ ಎಲ್ಲಾದರೂ ತನ್ನನ್ನೂ ಕರೆದಾರು ಅಂತ ಹೋಗಿ ನೋಡುತ್ತ ನಿಲ್ಲೋದಿತ್ತಂತೆ.

ಇದನ್ನು ತುಮರಿಗೆ ಹೇಳಿದೋರು ಗುಮ್ಮಣ್ಣ ಹೆಗಡೇರು; ಅವರಿಗೆ ಹೇಳಿದ್ದು ಘಟ್ಟದ ತಳಗಿನ ಅವರ ಬೀಗರು-ಚಟ್ನೆ ತಿಮ್ಮಣ್ಣ ಹೆಗಡೇರು. ಗುಮ್ಮಣ್ಣ ಹೆಗಡೇರು ಬೀಗರ ಹೆಸರು ಹೇಳಿದಾಗ ನನಗೊಂತರ ಕುತೂಹಲ, “ಅವರಿಗೇಕೆ ಚಟ್ನೆ ಅಂತ ಹೆಸರಿನ ಪೂರ್ವದಲ್ಲಿ ಹಾಗೆ ಹೇಳ್ತಾರೆ?” ಅಂತ ಕೇಳಿದೆ. ದಶಕಗಳ ಹಿಂದೆ ತೋಟದಲ್ಲಿ ಕೆಲಸಮಾಡಲು ಬರುತ್ತಿದ್ದ ಆಳುಗಳಿಗೆ ಕುಡಿಯುವ ನೀರಿನ ಜೊತೆಗೆ ಖಾರವಾಗಿ ನೆಂಜಿಕೊಳ್ಳಲು ಏನಾದರೂ ಬೇಕು ಎಂಬ ಬೇಡಿಕೆಗೆ ತಕ್ಕಂತೆ ಅವರು ಪ್ರತಿದಿನವೂ ಚಟ್ನೆ ತಯಾರಿಸಿಕೊಡುತ್ತಿದ್ದರಂತೆ. ಅವರ ಆಹಾರಗಳಲ್ಲಿ ಚಟ್ನೆಗೇ ಪ್ರಮುಖ ಸ್ಥಾನವಂತೆ. ಹಾಗಾಗಿ ಆಳುಗಳೆಲ್ಲ ಸೇರಿ ಅಘೋಷಿತವಾಗಿ ಕೊಟ್ಟ ಬಿರುದು “ಚಟ್ನೆ ತಿಮ್ಮಣ್ಣ ಹೆಗಡೇರು” ಅಂತ ಹೇಳಿದರು.

ಚಟ್ನೆ ತಿಮ್ಮಣ್ಣ ಹೆಗಡೇರಿಗೆ ಸಾಮ್ಗಳ ವಿಷಯ ಎಲ್ಲವೂ ಗೊತ್ತಿದೆಯಂತೆ. ಅವರು ಜೈಕಾರದ ಮೇಳದಲ್ಲಿಲ್ಲವಂತೆ. ಆದರೆ, ವೀರ್ಯಪ್ಪನ್ ಪಟಾಲಮ್ಮು ಮನೆಗೆ ಬಂದು ಹೊಡದು ಬಡದು ಮಾಡಿ, ಬಹಿಷ್ಕಾರ ಹಾಕಿ, ಆತ್ಮಹತ್ಯೆ ಮಾಡಿಕೊಳ್ಳೋ ಹಾಗೆ ತ್ರಾಸುಕೊಡಬಹುದು ಎಂಬ ಕಾರಣಕ್ಕೆ ಆದಷ್ಟು ತೋರಿಸಿಕೊಳ್ಳದಂತೆ ಇದ್ದಾರಂತೆ. ಕೆಲವೊಮ್ಮೆ ಒತ್ತಾಯಕ್ಕೆ ಸಾಮ್ಗಳ ಸಲುವಾಗಿ ನಡೆಯುವ ಸಭೆಗಳಿಗೆ ಹೋಗೋದಿದೆಯಂತೆ. ಅದು ಕೇವಲ ಶಾರೀರಿಕ ಹಾಜರಿಯೆ ಹೊರತು ಮನಸ್ಸು ಅಲ್ಲಿರೋದಿಲ್ಲ ಅಂತ ಹೇಳಿದ್ದಾರಂತೆ. ಸುಮಾರು ಮಂದಿ ತನ್ನ ನಮೂನಿ ಜನವೇ ಇದ್ದಾರೆ ಅಂತ ಹೇಳಿದ್ದಾರಂತೆ.

ಅದಿರ‍್ಲಿ, ಪೆದ್ದ ಕಲಾವಿದನನ್ನು ಮಕ್ಕಳು ಕುಣಿಸಿದಂತೆ ಜಗದ್ಗುರು ವೀರ್ಯಪ್ಪನ್ ಸಾಮ್ಗಳನ್ನು ಕುಳ್ಳಬಾವಯ್ಯನವರು ಆಗಾಗ ಬೆರಳಲ್ಲೇ ಕುಣಿಸ್ತಾರೆ. ಹಸುವಿನ ಕಿವಿಯೂರಿನಲ್ಲಿದ್ದಾಗಲೇ ಹೆಣ್ಣಿನ ರುಚಿನೋಡು ಚೆನ್ನಾಗಿರ್ತದೆ ಅಂತ ಕಲಿಸಿದವರೇ ಕುಳ್ಳಬಾವಯ್ಯನವರು. ವೀರ್ಯಪ್ಪನ್ ಸಾಮ್ಗಳ ತಂಗಿ ಜೊತೆ ಅವಳ ಸೋ ಕಾಲ್ಡ್ ಗಂಡ ಕುಳ್ಳಬಾವಯ್ಯನ ಜಗಳ ತಾರಕಕ್ಕೇರಿದಾಗ ಇನ್ನು ತಡೆಯೋದಕ್ಕಾಗಲ್ಲ ಮಠದಿಂದ ಹೊರಗೆ ಅಟ್ಟಬೇಕೆಂದು ಸಾಮ್ಗಳು ತೀರ್ಮಾನಿಸಿದ್ದರಂತೆ. “ನನ್ನನ್ನು ಹೊರಹಾಕಿದರೆ ನಿನ್ನ ಸಿಡಿ ಬಿಡ್ಗಡೆ ಮಾಡ್ತೇನೆ” ಎಂಬ ಬ್ರಹ್ಮಾಸ್ತ್ರ ಪ್ರಯೋಗ ಕುಳ್ಳಬಾವಯ್ಯನಿಂದ ನಡೆದಾಗ ವೀರಯೋಧನಿಗೆ ಸಮಾನವೆಂದು ಹೇಳಿಕೊಳ್ಳುವ ಭಂಡ ಜಗದ್ಗುರು ವೀರ್ಯಪ್ಪನ್ ಸಾಮ್ಗಳು ಆಕಾರ ರಹಿತ ನೀರಿನಂತಾಗಿ ” ಅದೊಂದು ಕೆಲಸ ಮಾಡಬೇಡ, ನಾವು ಪೀಠದಲ್ಲಿರೋವರೆಗೆ ನಿನ್ನನ್ನು ಮಠದಿಂದ ಎಂದಿಗೂ ಹೊರಹಾಕೋದಿಲ್ಲ” ಎಂದು ಗೋಗರೆದರಂತೆ.

ಹೀಗೆ ಷರತ್ತಿಗೆ ಒಳಪಟ್ಟು ಒಳಜಾಮೀನು ಪಡೆದುಕೊಂಡ ವೀರ್ಯಪ್ಪನ್ ಸಾಮ್ಗಳನ್ನು ಕುಳ್ಳಬಾವಯ್ಯ ಎರಡೇ ಅಕ್ಷರಗಳಲ್ಲಿ ಆಡಿಸುತ್ತಾನೆ ಎಂಬ ಸುದ್ದಿ ತುಮರಿಗೆ ಬಹಳ ಹಿಂದೆಯೇ ಲಭ್ಯವಾಗಿದೆ. “ಸಿಡಿ” ಎಂದರೆ ಸಾಕು, ಯಾವ ರಾಜಕಾರಣಿಯೂ ಹೆದರದಷ್ಟು ಸಾಮ್ಗಳು ಹೆದರ್ಕೋತಾರಂತೆ. ಪೌರಾಣಿಕ ಕತೆಗಳಲ್ಲಿ ಯಾವುದೋ ರಾಜನ ಬಂಧೀಖಾನೆ ಸೇರುವ ಇನ್ನೊಬ್ಬ ರಾಜ, ಹಸಿದ ಹೊಟ್ಟೆಯಲ್ಲಿ ಕಿಟಕಿಯಲ್ಲಿ ನಾಯಿಗೆ ಎಸೆದಂತೆ ಎಸೆಯುವ ಆಹಾರಕ್ಕಾಗಿ ಹಾರಿ ಹಾರಿ ಹಿಡಿದು ತಿನ್ನುತ್ತಿದ್ದನಂತೆ.

ವೀರ್ಯಪ್ಪನ್ ಸಾಮ್ಗಳೂ ಸಹ ಒಂದು ವಿಧದಲ್ಲಿ ಹಾಗೇನೆ. ಇವರಲ್ಲಿ ಹೊಟ್ಟೆಯ ಹಸಿವಿಗಿಂತ ಕೆಳಭಾಗದ ಹಸಿವು ಬಹಳ ಜಾಸ್ತಿ. ಆ ಬಾವಲಿ ಬಡಿಸಿದಷ್ಟೂ ಮತ್ತೂ ಬೇಕೆನ್ನುವ ಬಕಾಸುರ. ಹಾಗಾಗಿ ಸಾಮ್ಗಳು ಬಂಧೀಖಾನೆಯ ಬದಲಿಗೆ ಇಲ್ಲಿ ಏಕಾಂತದಲ್ಲಿ ಹಾರಿಹಾರಿ ಕಾಮದ ಹೊಟ್ಟೆಯನ್ನು ತುಂಬಿಸೋದಕ್ಕೆ ಪ್ರಯತ್ನಿಸುತ್ತಾರಂತೆ.

ಹೆಂಡದ ಅಭ್ಯಾಸವಾದಮೇಲೆ ಹೆಂಡ ಬೇಕೇಬೇಕು. ಹೆಂಡದ ಚಟವುಳ್ಳ ಯಾರನ್ನೇ ನೀವು ನೋಡಿ, ಬೇರೆ ಊರಿಗೆ ಅವರು ಹೋದ ತಕ್ಷಣ ಮೊದಲು ಪರಿಶೀಲಿಸೋದು ಹೆಂಡದ ಅಂಗಡಿ ಎಲ್ಲಿದೆ ಅಂತ. ಅಧಿಕಾರಿ ವರ್ಗದಲ್ಲಿ ಹೆಂಡದ ಚಟ ಇರುವವರಿರ್ತಾರಲ್ಲ ಅವರು ಬರ್ತಾರೆ ಅಂತಂದ್ರೆ ಕೆಳದರ್ಜೆಯ ಅಧಿಕಾರಿಗಳು ಅವರಿಗೆ ಬೇಕಾದ ಹೆಂಡ ಇತ್ಯಾದಿಗಳನ್ನು ವ್ಯವಸ್ಥೆ ಮಾಡ್ತಾರೆ. ಅದೇರೀತಿ ಹೆಣ್ಣಿನ ಗೀಳು ಹತ್ತಿದವರಿಗೂ. ಮಠದಲ್ಲಿ ಮೇಲಧಿಕಾರಿ ಅಂತ ಇರೋದ್ಯಾರು ಸಾಮ್ಗಳು, ಸಾಮ್ಗಳಿಗೆ ಏನು ಬೇಕೋ ಅದನ್ನೆಲ್ಲ ಅವರ ಕೆಳದರ್ಜೆಯವರು ವ್ಯವಸ್ಥೆ ಮಾಡಿಕೊಡಬೇಕು ಅಲ್ಲವೇ? ಹೀಗಾಗಿ, ವೀರ್ಯಪ್ಪನ್ ಸಾಮ್ಗಳು ಯಾವುದೇ ಊರಿಗೆ ಹೋದರೂ ವಸತಿಯಿರುವಲ್ಲಿ ಏಕಾಂತ ಇದ್ದೇ ಇರುತ್ತದೆ; ಅದಕ್ಕೆ ಮೊದಲೇ ಏರ್ಪಾಡಾಗಿರುತ್ತದೆ.

ಕಾವಿವೇಷದ ಈ ’ಮಹಾಸಂತ’ರು ವೇದಿಕೆಯಲ್ಲಿ ಬಾಯ್ಬಿಟ್ಟರೆ ತಾನೇ ದೇವರೆನ್ನುತ್ತಾರೆ. ಮಾತಾಡಿದರೆ ಹಲ್ಲನ್ನೇ ಕಿತ್ತುಕೊಡುತ್ತಾರೋ ಎಂಬಷ್ಟು ಸೆಂಟಿಮೆಂಟ್ಸ್ ಕ್ರಿಯೇಟ್ ಮಾಡೋದು ಕೆಲವು ಕ್ರಿಮಿನಲ್ ಗಳ ಕರಗತ ಕಲೆ. ವೀರ್ಯಪ್ಪನ್ ಸಾಮ್ಗಳಿಗೆ ಆ ಕಲೆ ಸಿದ್ಧಿಯಾಗಿದೆ. ಯಾವ ಹೂವನ್ನು ಯಾರ ಕಿವಿಗಿಟ್ಟರೆ ಅವರು ಅವರ ಜೀವಮಾನದಲ್ಲಿ ಶಾಶ್ವತವಾಗಿ ಹಾಗೇ ಇರಿಸಿಕೊಂಡಿರುತ್ತಾರೋ ಎಂಬ ನಾಡಿಮಿಡಿತವೂ ಗೊತ್ತಿದೆ. ಹಾಗಾಗೇ, ಆಗಾಗ ಒಂದೊಂದೇ ಬಾಂಬ್ ಹಾಕೋದು. ಹಿಮಾಲಯಕ್ಕೆ ಹೋಗ್ತೇನೆ ಅನ್ನೋದು, ದೇಹ ತ್ಯಾಗ ಮಾಡ್ತೇನೆ ಅನ್ನೋದು.

ಈ ಕಳ್ಳ ಸನ್ಯಾಸಿ ತನ್ನ ರೋಮರೋಮಗಳಲ್ಲೂ ದೇವರೇ ಇದ್ದಾನೆ ಅಂತಾನೆ. ದೇವರ ಪೋಸ್ಟ್ ಮನ್ ಆಗಲೂ ನಾಲಾಯ್ಕಾಗಿರುವ ಇವ, ದೇವರನ್ನು ತಲುಪೋದು ಬಹಳ ದೂರದ ಮಾತು ತಾನೇ ಅವನ ಪ್ರತಿನಿಧಿಯಾಗಿ ಇದ್ದೇನಲ್ಲಾ ಅಂತಾನೆ. ನಿಜವಾದ ಯಾವ ಸನ್ಯಾಸಿಯೂ ದೇವರ ಬದಲಿಗೆ ತನ್ನನ್ನೇ ಪೂಜಿಸಿ ಎಂದಾಗಲೀ ದೇವರನ್ನು ತಲುಪೋದು ದೂರದ ಮಾತು ಎಂದಾಗಲೀ ಹೇಳೋದಿಲ್ಲ. ದೇವರನ್ನು ತಲುಪುವ ಉತ್ತಮ ಮಾರ್ಗವನ್ನು ತೋರಿಸುವುದೇ ಸಂತನ ಒಂದು ಗುರಿಯಾಗಿರುತ್ತದೆ.

ವೀರ್ಯಪ್ಪನ್ ಸಾಮ್ಗಳಿಗೆ ಉಪನಿಷತ್ತುಗಳಲ್ಲಿ ಹೇಳಿದ ಸೂಕ್ತಗಳು ಬರೋದಿಲ್ಲ. ಅವರು ಕನ್ನಡದಲ್ಲೇ ಬುಲೆಟ್ ಎಂಬಂತೆ ಬಿಡುವ ಬಾಲಿಶ ಠೊಳ್ಳು ಮಾತುಗಳನ್ನು ಸೂಕ್ತವೋ ಎಂಬಂತೆ ಹೇಳುತ್ತಿರುತ್ತಾರೆ. ಕಿವಿಯಮೇಲೆ ಪುಷ್ಪ ಧರಿಸಿದವರು ಸಾಮ್ಗಳ ಹೇಳಿಕೆಗಳನ್ನೇ ಮಹಾಪ್ರಸಾದವೆನ್ನುತ್ತ “ಬರೇ ಕಾಮ” ಕೂಗಿ, ಸಾಧ್ಯವಾದ ಮಾಧ್ಯಮಗಳಲ್ಲೆಲ್ಲ ಮರುಪ್ರಸಾರ ಮಾಡಿ ಜನ್ಮ ಪಾವನವಾಯಿತು ಅಂದ್ಕೋತಾರೆ.

ಕಚ್ಚೆಕತೆ ಜೋರಾಗಿ ಹತ್ತಿಕೊಂಡು ಉರಿಯುತ್ತಿರುವಾಗ ಸಾಮ್ಗಳು ’ಆಸ್ಥಾನ ವಿದ್ವಾನ್’ ಕುಮಂತ್ರಿ ಕುಳ್ಳ ಬಾವಯ್ಯನಲ್ಲಿ “ಬಾವ ಈಗ ಏನ್ಮಾಡೋದು?” ಅಂತ ಸಲಹೆ ಕೇಳಿದ್ದಾರೆ. ಬಾವ ಹೋದರೆ ತನಗೂ ಉಳಿಗಾಲವಿಲ್ಲ ಎಂದರಿತ ಮಹಾಮಂತ್ರಿ ಕುಳ್ಳಬಾವಯ್ಯನವರು, “ಬಾವ, ಮತ್ತೆ ಹಸುವಿನ ಬಾಲವನ್ನೇ ಗಟ್ಟಿಯಾಗಿ ಹಿಡ್ಕ, ಅದೊಂದೇ ದಾರಿ, ಆ ದಾರೀಲಿ ಸೆಂಟಿಮೆಂಟ್ಸ್ ಕ್ರಿಯೇಟ್ ಮಾಡಿದರೆ ಸೆಂಟಿಮೆಂಟಲ್ ಫೂಲ್ಸ್ ಎಲ್ಲ ಹಳ್ಳಕ್ಕೆ ಬೀಳ್ತಾರೆ. ನಿನ್ನ ಬೆಂಗಲಿಗರ ಸಂಖ್ಯೆ ಕೋಟ್ಯಾವಧಿಯಲ್ಲಿ ಬೆಳೀತದೆ. ಆಗ ಸರಕಾರಕ್ಕೂ ನಿನ್ನ ಮುಟ್ಟೋ ಧೈರ್ಯ ಬರೋದಿಲ್ಲ” ಅಂತ ಸಲಹೆ ಇತ್ತಿದ್ದಾರೆ.

ಅಂದ್ಹಾಗೆ ವೀರ್ಯಪ್ಪನ್ ಸಾಮ್ಗಳು ಮತ್ತವರ ಕುಲಪತಿ ಕುಳ್ಳ ಬಾವಯ್ಯ ಪೆದ್ದನ ಹಾಗೆ ಸಾಚಾ ಅಲ್ಲ, ಈರ್ವರೂ ಹಿಟ್ಲರ್ ಮತ್ತು ನೆಪೋಲಿಯನ್ ರೀತಿ ಬಿಟ್ಟರೆ ಜಗತ್ತೇ ತಮ್ಮ ಅಂಕಿತದಲ್ಲಿರಬೇಕೆಂಬ ಕ್ರಿಮಿನಲ್ಲುಗಳು. ಕತ್ತಲೆಯಲ್ಲಿ ಕೈಯಾಡಿಸಿ ಸಾಮ್ಗಳ ಭಾವ ಪ್ರಶಸ್ತಿ ಹೊಡೆದುಕೊಟ್ಟ ಅಂತ ಜನರಿಗೆ ಗೊತ್ತಿಲ್ಲವೇ? ಅದು ಸಾಮ್ಗಳ ಬಾವಯ್ಯ ಮಾಡಿದ ಪವಾಡ. ರಾಂಗಾನುಗ್ರಹ ಭಾಗ ಎಷ್ಟರಲ್ಲೋ ಅದೂ ಸೇರ್ಪಡೆಗೊಳ್ಳಲಿದೆ!

ಕತೆಯಲ್ಲಿ ಮರುಳು ಕಲಾವಿದ ಕಾಣಲಿಲ್ಲ ಅಂದ್ರು ನಮ್ಮ ಭಾತ್ಮೀದಾರರು; ಮರುಳು ಕಲಾವಿದರು ಸಾಮ್ಗಳ ಕೃಪೆಯಿಂದ ಮಹಾನಗರದಲ್ಲಿ ಮನೆಕಟ್ಟಿಕೊಂಡ ಹಂಗಿನಲ್ಲಿ ಅಷ್ಟು ಕಾಲ ಜೊತೆಗಿದ್ದರು. ಅಂಹಕಾರವೇ ಮನುಷ್ಯನಾಗಿ ಮೈವೆತ್ತ ಆ ವ್ಯಕ್ತಿಗೆ ಯಾರ್ಯಾರದೋ ಡಿಮಾಂಡ್ ಇದೆಯಂತೆ. ಸಾಮ್ಗಳ ಜೊತೆ ಇನ್ನೂ ಇದ್ದರೆ ಮರ್ಯಾದೆಗೆ ಮೂರುಕಾಸು ಅಂತ ಅನಿಸಿರಬಹುದೋ ಏನೋ. ಅಂತೂ ಮರುಳು ಕಲಾವಿದ ಕಾಣಲಿಲ್ಲ. ಮಠದ ನಾಟಕ ಕಂಪನಿ ತೊರೆದನೇ? ಗೊತ್ತಿಲ್ಲ. ಹೀಗೆ ಹೇಳಿದ್ದಕ್ಕೆ ಮುಂದೆ ಮತ್ತೆ ಜೊತೆಗೆ ಕಾಣಿಸಿಕೊಳ್ಳಲೂಬಹುದು!!

ಪುಣ್ಯದ ಬ್ಯಾಲೆನ್ಸ್ ಖಾಲಿಯಾಗೋವರೆಗೆ ಪಾಪದ ಅಕೌಂಟು ಪ್ಯಾರಾ ಮಿಲಿಟರಿ ಥರ ಹೊರಗಿನಿಂದ ಪಹರೆ ಕಾಯೋದಂತೆ. ಈಗ ಕ್ರಿಮಿನಲ್ ಆಗಿದ್ದರೂ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯ ಇದೆಯಲ್ಲ, ಅದು ಖಾಲಿಯಾಗೋವರೆಗೆ ಅಟ್ಯಾಕ್ ಮಾಡಲು ಪಾಪ ಕಾಯುತ್ತದೆ ಅಂತಾಯ್ತು. ಹೀಗಾಗಿ ವೀರ್ಯಪ್ಪನ್ ಸಾಮ್ಗಳು ಇಷ್ಟುದಿನವೂ ಮೆರೆಯುತ್ತಲೇ ಇದ್ದಾರೆ. ಆದರೆ ಒಳಗಿನ ಬೆಂಕಿ ಆರಲಿಲ್ಲ; ಅದು ಆಗಾಗ ಬಿಪಿ ರೈಸ್ ಮಾಡ್ತಾನೇ ಇರ‍್ತದೆ ಅಂತ ಬಲ್ಲಮೂಲಗಳು ತಿಳಿಸಿವೆ.

ಎಳಬರಿಗೆ ಹಳಬರ ಹಠ, ಸಾಹಸದ ಅರಿವಿಲ್ಲ. ಹಳಬರು ವೀರ್ಯಪ್ಪನ್ ಸಾಮ್ಗಳು ಹೇಳಿದ್ದನ್ನೆಲ್ಲ ಧರ್ಮ ಅಂತ ಒಪ್ಪಿಕೊಳ್ಳುವಷ್ಟು ದಡ್ಡರಲ್ಲ ಮತ್ತು ಕಳ್ಳ ಸನ್ಯಾಸಿಯ ಸನ್ಯಾಸೀಧರ್ಮಬಾಹಿರ ಚಟುವಟಿಕೆಗಳಿಗೆ ಸೊಪ್ಪುಹಾಕುವವರಲ್ಲ. ಹಿಂದೆ ಮಠವನ್ನು ಕಟ್ಟಿಬೆಳೆಸಿದವರಲ್ಲಿ ಬಹಳ ಜನ ಇಂದಿಲ್ಲ; ಬೆರಳೆಣಿಕೆಯ ಜನ ಮುದಿವಯಸ್ಸಿನವರಾಗಿದ್ದಾರೆ. ಕಳ್ಳ ಸನ್ಯಾಸಿಯ ಹಾಡಿಗೆ ಅವರು ನರ್ತಿಸೋದಿಲ್ಲ. ಇದನ್ನರಿತ ವೀರ್ಯಪ್ಪನ್ ಸಾಮ್ಗಳು ಎಳಬರ ಸೇನೆ ಕಟ್ಟಿ ಹಳಬರ ಮೇಲೆ ಛೂ ಬಿಟ್ಟು ಹೊಡೆದು ಬಡಿದು ಎಲ್ಲ ಮಾಡಿಸಿದ್ದಾರೆ.

ಸಮಾಜದಲ್ಲಿ ಹಿಂದೆಂದೂ ಮಠದಲ್ಲಿ ಇಂತಹ ಸೇನೆಗಳಿರಲಿಲ್ಲ; ಮಠವೆಂದರೆ ಶ್ರದ್ಧಾ ಭಕ್ತಿಯ ಧಾರ್ಮಿಕಕೇಂದ್ರ, ಅಲ್ಲಿ ಹೊಡೆದಾಟ, ಬಡಿದಾಟ ನಡೆಸಬೇಕೆ? ಅಂತಹ ಪದಗಳ ಬಳಕೆಯೂ ನಿಷಿದ್ಧವೆನ್ನುವಷ್ಟು ಶಾಂತ ಪರಿಸರ ಅಲ್ಲಿರಬೇಕು. ಅದನ್ನುಬಿಟ್ಟು ಈಗ ಹಾವಾಡಿಗ ಮಠವೆಂದರೆ ವೀರ್ಯ, ಸಂಭೋಗ, ಕಳ್ಳಕೂಡಿಕೆ, ಚಪ್ಪಲಿ-ಪೊರಕೆ ಎಲ್ಲವೂ ಬಳಕೆಯಾಗುವ ಸ್ಥಿತಿ ಆ ಮಠದ್ದಾಗಿದೆ.

’ಆಪ್ತಮಿತ್ರ’ ಸಿನಿಮಾದಲ್ಲಿ ಕಥಾನಾಯಕಿಯಲ್ಲಿ ಎರಡು ಮುಖಗಳಿರುವಂತೆ ವೀರ್ಯಪ್ಪನ್ ಸಾಮ್ಗಳದ್ದೂ ಸ್ಪ್ಲಿಟ್ ಪರ್ಸ್ನಾಲಿಟಿ. ಹೊರನೋಟಕ್ಕೆ ಅವರು ಹಿಮಾಲಯದ ಮಹಾಯೋಗಿಗಳಿಗಿಂತಲೂ ದೇವರಿಗೆ ಹತ್ತಿರವಾದ ಅಪ್ಪಟ ಸನ್ಯಾಸಿ. ಒಳಗೋ ನಿತ್ಯಪೂಜೆಯೆಂಬಂತೆ ತ್ರಿಕಾಲ ಅಥವಾ ಬಹುಕಾಲ ಏಕಾಂತ ಸೇವೆ ನಡೆಯುತ್ತಲೇ ಇರುತ್ತದೆ. ವಿಚಿತ್ರವೇನು ಗೊತ್ತೆ ಹಾರುವ ಚಟ ಹೇಗಿರುತ್ತದೆಂದರೆ ಆರೋಪಿಯೆಂದು ಪ್ರಕರಣ ನಡೆಯುತ್ತಿದ್ದರೂ ಸಹ ಸಾಮ್ಗಳು ಊರೂರು ಹಾದುಹೋಗುವಾಗ ಹಾರುತ್ತಲೇ ಇದ್ದರು. ಅದಿಲ್ಲದಿದ್ದರೆ ಆಗೋದೇ ಇಲ್ಲ!

ತಾನು ಮಾಡಿದ್ದಕ್ಕಿಂತ ಹೆಚ್ಚಿಗೆ ಕೊಚ್ಚಿಕೊಳ್ಳುತ್ತ ಬೆಂಬಲಬಳಗ ಹೆಚ್ಚಿಸಿಕೊಳ್ಳುವ ಬಯಕೆಯ ’ಮಹಾಸ್ವಾಮಿಗಳ’ ಆ ರೂಪಕ್ಕೆ “ತುತ್ತೂರೇಶ್ವರ” ಎಂದು ಮತ್ತು ಹಾರುತ್ತಲೇ ಇರುವ ಅನಿವಾರ್ಯ ಚಟಕ್ಕೆ ಗಂಟುಬಿದ್ದಿದ್ದರಿಂದ “ತೂತೂರೇಶ್ವರ” ಎಂದು ಎರಡು ಬಿರುದುಗಳನ್ನು ಪ್ರದಾನ ಮಾಡಿದವರು ಮತ್ತಿನ್ನಾರು? ಕವಳದ ಗೋಪಣ್ಣ!

ಜಾತ್ರೆಯಲ್ಲಿ ಕೆಲವೊಮ್ಮೆ ಎದ್ದ ಧೂಳಿನಲ್ಲಿ ಏನು ನಡೆಯುತ್ತದೆ ಎಂಬುದು ದೂರದಲ್ಲಿರೋರಿಗೆ ಸ್ಪಷ್ಟವಾಗೋದಿಲ್ಲ. ಹಾಗೇ, ಗೋಧೂಳಿಯಲ್ಲಿ ತೂರಿಕೊಂಡು ಅದೇ ಅಬ್ಬರದಲ್ಲಿ ಕೆಚ್ಚೆಕತೆಯೆಲ್ಲ ಸುಳ್ಳು ಎಂದು ಮುಚ್ಚಿಸುವ ದುಸ್ಸಾಹಸ, ಹತಾಶ ಪ್ರಯತ್ನ ನಡೆಯುತ್ತಿದೆ. ಧೂಳೀಸ್ತಂಭನ ನಡೆಸುತ್ತಿರುವ ಕೌರವ ಧರ್ಮವೆಂಬ ಭೀಮ ಕೂಗಿದಾಗ ಹೊರಬರಲೇಬೇಕಲ್ಲ? ಬರದಿದ್ದರೆ ಭೀಮ ಬಿಟ್ಟಾನೆ? ಯುಗಯುಗದಲ್ಲೂ ಧರ್ಮರಕ್ಷಣೆ ಮಾಡುವ ಭಗವಂತ ಬಿಟ್ಟಾನೆ? ಸಮಯ ಬಹಳವಿಲ್ಲ, ಕಾದು ನೋಡೋಣ.

Thumari Ramachandra
14/05/2017
source: https://www.facebook.com/groups/1499395003680065/permalink/1958026604483567/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s