ರಿಪೇರಿಯಾಗಲ್ಲ ಬಿಡಿ ಸಮಾಜ; ಕಾರಿನ ಗೂಟ ಹೋದ್ರೂ ಗೂಟದ ಸ್ವಾಮಿಯ ಕೆಲಸಕ್ಕೆ ಅಡ್ಡಿಯೇ ಇಲ್ಲ

ರಿಪೇರಿಯಾಗಲ್ಲ ಬಿಡಿ ಸಮಾಜ; ಕಾರಿನ ಗೂಟ ಹೋದ್ರೂ ಗೂಟದ ಸ್ವಾಮಿಯ ಕೆಲಸಕ್ಕೆ ಅಡ್ಡಿಯೇ ಇಲ್ಲ

ಹೀಗಂದೋರು ನನ್ನ ಸ್ನೇಹಿತರೊಬ್ರು. ಕನ್ನಡದವರೇ. ಆಗಾಗ ಇಲ್ಲಿ ಸಿಗತಿರ್ತಾರೆ, ಏನೋ ಕಷ್ಟ-ಸುಖ ಹಂಚ್ಕೊಳ್ಳೋಕೆ ನಮ್ಮಲ್ಲಿಯವರೇ ಆಗಿದ್ರೆ ಖುಷಿ ಅಲ್ವಾ? ಸಂಬಂಧಗಳೇ ಹಾಗೆ-ಹಳ್ಳಿಯಿಂದ ಪಟ್ಟಣಕ್ಕೆ ಬಂದಾಗ ನಮ್ಮ ಹಳ್ಳಿಯವರೇ ಸಿಗ್ತಾರಾ ಅಂತ ನೋಡ್ತೀವಿ, ಪಟ್ಟಣದಿಂದ ನಗರಕ್ಕೆ ಬಂದಾಗ ನಮ್ಮ ತಾಲೂಕಿನ ಕಡೆಯವರು ಸಿಗ್ತಾರಾ ಅಂತ ಹುಡುಕುತ್ತೆ ಕಣ್ಣು, ನಗರದಿಂದ ಮಹಾನಗರ, ಮಹಾನಗರದಿಂದ ಬೇರೆ ರಾಜ್ಯ, ಆಮೇಲೆ ಬೇರೆ ದೇಶ ಹೀಗೆ ಹೋಗ್ತಾ ಹೋಗ್ತಾ ನಮ್ಮವರು ಅಂದರೆ ನಮ್ಮ ಮಾತೃ ಭಾಷೆ ಆಡೋರು, ನಮ್ಮ ರಾಜ್ಯದೋರು, ಸಿಗ್ಲಿಲ್ಲ ಅಂದ್ರೆ ನಮ್ಮ ದೇಶದೋರು ಅಂತಾಗ್ಬುಡುತ್ತೆ.

ಹಾಂ… ಆ ರೀಲ್ ಸುತ್ತಿದ್ ಸಾಕು, ಈಗ ಗೂಟದ ಸ್ವಾಮಿ ರೀಲನ್ನು ಸುತ್ತೋಣ; ಇದು ರೈಲಲ್ಲ, ರೀಯಲ್ಲು. ವಿಐಪಿ ಕಾರುಗಳಿಂದ ಗೂಟ ತೆಗೆದಾಯ್ತು ಅನ್ನೋದನ್ನು ಮಾತಾಡ್ತಾ ಇದ್ವಿ ನಾವಿಬ್ರು. ಅದೇ ಸಮಯಕ್ಕೆ ಕವಳದ ಗೋಪಣ್ಣನ ಸ್ಕ್ರಾಪ್ ಬಂತು. ’ಗೂಟದ ಕಾರುಗಳು ಹೋದರೂ ಗೂಟದ ಸ್ವಾಮಿ ಹೋಗಲ್ಲ’ ಅನ್ನೋ ಹೊಸ ಗಾದೆ ಸೃಷ್ಟಿಸಿದ್ದಾನೆ ಗೋಪಣ್ಣ. ನಗೆಯ ಅಬ್ಬರದಲ್ಲಿ ಮೈಮೇಲೆಲ್ಲ ಕವಳದ ರಂಗೋಲಿ ಬಿಡಿಸಿಕೊಂಡನೋ ಏನೋ. ವಿಷಯ ಅರಿತಿದ್ದ ನಮ್ಮ ಸ್ನೇಹಿತರು “ನಿಮ್ ಜನ ರಿಪೇರಿ ಆಗಲ್ಲ ಬಿಡಿ. ತಲೆಹಿಡುಕರು ಅವರು. ಗೋಪಣ್ಣ ಹೇಳಿದ್ದು ಸರಿಯೇ ಇದೆ. ಬುದ್ಧಿಯಿದ್ದೂ ಗೂಟದ ಸ್ವಾಮೀನ ಇನ್ನೂ ಇಟ್ಗಂಡಿದಾರೆ ಪೀಠದಲ್ಲಿ ಅಂದ್ರೆ ಅವರು ಮೂರ್ಖರು ಅಂತ್ಲೇ ಅರ್ಥ. ಮೂರ್ಖರ ಸಮಾಜನ ತಿದ್ದೋದು ಕಷ್ಟ” ಅಂತಂದ್ರು.

ಈಗೀಗ ಸ್ವಾಮಿ, ಗುರುಗಳು, ಸಂಸ್ಥಾನ ಎಂಬ ಪದಗಳನ್ನೆಲ್ಲ ಕೇಳಿದ್ರೆ ಮೈ ಪರಚಿಕೊಳ್ಳೊ ಹಾಗಾಗುತ್ತೆ. ಬಹಳ ಹಿಂದೇನೆ ತುಮರಿ ನಿಮಗೆ ಹೇಳಿದ್ದ-ಬನ್ನಂಜೆಯವರು ಉಪನ್ಯಾಸದಲ್ಲಿ ಹೇಳಿದ್ದು ನಿಜ, ಮೂರ್ನಾಲ್ಕು ತಲೆಮಾರಿನ ಹಿಂದಿನವರಿಗೆ ನಮ್ಮ ಮೂಲಧರ್ಮಕರ್ಮಗಳ ಅರ್ಥ ಸ್ಪಷ್ಟವಾಗಿ ಗೊತ್ತಿತ್ತು. ನಡುವೆ ಬಂದವರಿಗೆ ಅವರು ಹೇಳಲಿಲ್ಲ, ಹೀಗಾಗಿ ನಮ್ಮ ಮತ್ತು ಅವರ ನಡುವಿನ ಅಪ್ಪ-ಅಜ್ಜಂದಿರಿಗೆ ಧರ್ಮಕರ್ಮಗಳ ಸ್ಪಷ್ಟ ಅರ್ಥ ಗೊತ್ತಾಗಲಿಲ್ಲ. ಆದರೂ ಅನುಸರಿಸಬೇಕು ಅಂತ ಅವರು ಅನುಸರಿಸುತ್ತಿದ್ದರು. ಯಾಕೆ ಅನುಸರಿಸಬೇಕು ಅಂತ ನಮಗವರು ಹೇಳಲಿಲ್ಲ. ಅನುಸರಿಸದಿದ್ದರೆ ನಷ್ಟವಾಗುತ್ತದೆ ಅಂತಾನೂ ಹೇಳಲಿಲ್ಲ. ಧನ ಸಂಖ್ಯೆಯ ಮುಂದೆ ಪ್ಲಸ್ ಮಾರ್ಕ್ ಬರೆದರೂ ಬರೆಯದಿದ್ದರೂ ವ್ಯತ್ಯಾಸವೇನಿಲ್ಲ ಎಂಬಂತೆ, ಧರ್ಮಕರ್ಮಗಳನ್ನು ಅನುಸರಿಸಿದರೂ ಅನುಸರಿಸದಿದ್ದರೂ ಎರಡೂ ಒಂದೇ ಎಂದುಕೊಂಡುಬಿಟ್ಟೆವು.

ಅಪ್ಪ-ಅಜ್ಜಂದಿರಿಗೇ ಗೊತ್ತಿಲ್ಲದ ಧರ್ಮಕರ್ಮಗಳ ಅರ್ಥ ನಮಗೆ ಹೇಗೆ ಗೊತ್ತಿರಬೇಕು? ಕಷ್ಟಸಾಧ್ಯ. ಅದಕ್ಕೆ ಮೊದನೇದಾಗಿ ಆಸಕ್ತಿ ಮತ್ತು ಶ್ರದ್ಧೆ ಬೇಕು, ಎರಡನೇದಾಗಿ ಅರ್ಥವನ್ನು ತಿಳಿದುಕೊಳ್ಳೋಕೆ ಆಳವಾದ ಅಧ್ಯಯನ ಬೇಕು. ಹಾಗಿದ್ದಾಗ ಮಾತ್ರ ಧರ್ಮಕರ್ಮಗಳ ಅರ್ಥ ಗೊತ್ತಾಗುತ್ತೆ. ಹುಣ್ಣಿಮೆ ಎಂದರೆ ಇದು-ಅಂದು ಪೂರ್ಣಚಂದ್ರನನ್ನು ಕಾಣಬಹುದು, ಅಮಾವಾಸ್ಯೆ ಎಂದರೆ ಇದು-ಅಂದು ಅಕಾಶದ ತುಂಬೆಲ್ಲ ಬರೇ ಕತ್ತಲು, ಚಂದ್ರ ಕಾಣೋದೇ ಇಲ್ಲ ಎಂಬುದು ಗೊತ್ತಿದ್ದರೆ ಮಾತ್ರ ಇದು ಹುಣ್ಣಿಮೆ, ಇದು ಅಮಾವಾಸ್ಯೆ ಅಂತ ಗುರುತಿಸಬಹುದು. ಹುಣ್ಣಿಮೆ ಅಮಾವಾಸ್ಯೆಗಳ ವ್ಯತ್ಯಾಸವೇ ಗೊತ್ತಿಲ್ಲದಿದ್ದರೆ ಮಠದಮಾಣಿ ಮತ್ತು ಅವನ ಬಾವಯ್ಯ ಸೇರಿ ಆಮಾವಾಸ್ಯೆಯನ್ನೇ ಹುಣ್ಣಿಮೆ ಅಂತಾರೆ-ನಾವು ನಂಬಿ, ಒಪ್ಕೋಬೇಕು.

ಧರ್ಮಕರ್ಮ ಅರಿತ ಯಾರೋ ಮುತ್ಸದ್ದಿಗಳು “ಹೇಯ್ ಅದಲ್ಲಪಾ ಹುಣ್ಣಿಮೆ, ಅದು ಅಮಾವಾಸ್ಯೆ, ಹುಣ್ಣಿಮೆ ಅಂದ್ರೆ ಹೀಗಿರ್ತದೆ ನೋಡು” ಅಂತ ಹೇಳಿದರೆ, ಎಲ್ಲವನ್ನು ಬಲ್ಲ ಮಹಾಮಹಿಮರೆಂದು ಬಿಂಬಿಸಿಕೊಂಡ ’ಮಹಾಸಂಸ್ಥಾನ’ದವರು ಮತ್ತವರ ಕುಲಪತಿ ಕುಳ್ಳಬಾವಯ್ಯನ್ನೆ ನಾವು ಮೊರೆಹೋಗಿ,”ಘನಪಾಠಿಗಳು ಹೀಗೆ ಹೇಳಿದ್ರಲ್ಲ” ಅಂದ್ರೆ, ಕಳ್ಳ-ಕುಳ್ಳ ನಮ್ಮಂತಹ ಹಲವರನ್ನು ಸೇರಿಸಿಕೊಂಡು “ಘನಪಾಠಿಗಳು ಮಠದ ವಿರೋಧಿಗಳು. ಅವರು ಕುಲಕುಟಾರರು, ಅವರು ನಮ್ಮ ಜನಾಂಗದವರು ಅಂತ ಹೇಳೊದಕ್ಕೆ ನಮಗೆ ನಾಚಿಕೆ, ಅವರು ಮಠದ ಶಿಷ್ಯರಲ್ಲ. ಯಾರೋ ತಿರುಬೋಕಿಗಳು, ಹೆಸರನ್ನು ಘನಪಾಠಿಗಳು ಅಂತ ಇಟ್ಕೊಂಬುಟ್ಟಿದಾರೆ” ಅಂತ ಪ್ರವಚನ ಮಾಡ್ತಾರೆ. ಇದೊಂದು ಉದಾಹರಣೆ.

ನಮ್ಮಲ್ಲಿನ ಕೃಷಿ ಕುಟುಂಬದ ಮೂಲದಿಂದ ಬಂದ ಒಬ್ಬರು ಇಲ್ಲಿ ಹೇಳ್ತಿದ್ರು-“ಯಜಮಾನನಿಗೆ ಕೆಲಸ ಗೊತ್ತಿದ್ರೆ ಆಳುಗಳ ಹತ್ರ ಹೇಳಿ ಮಾಡಿಸ್ಬೋದು, ಕೆಲಸ ಮಾಡಿಸೋ ಯಜಮಾನನಿಗೇ ಕೆಲಸ ಗೊತ್ತಿಲ್ಲ ಅಂದ್ರೆ ಆಳುಗಳು ಮಾಡಿದ್ದೆ ಸರಿ ಅಂದ್ಕೋಬೇಕು. ಸಸೀ ನೆಡೋವಾಗ ತಲೆಕೆಳಗಾಗಿ ನೆಟ್ಟರೆ ಬೇಗ ಫಲ ಬರ್ತದೆ ಅಂದ್ರೂ ಒಪ್ಕೋಬೇಕು. ನೆಟ್ಟಮೇಲೆ ದಿನಾ ಒಮ್ಮೆ ಕಿತ್ತು ಬೇರು ಬಂತಾ ಅಂತ ನೋಡ್ತಾ ಇರಬೇಕು ಅಂದ್ರೂ ಒಪ್ಕೋಬೇಕು. ಕಾಲಮೀರಿಹೋದಾಗ ಬೇರೆ ಹೊಲಗಳವರು ಫಸಲು ತೆಗೆಯುವಾಗ ಈ ಯಜಮಾನನಿಗೆ ಗೊತ್ತಾಗ್ತದೆ. ಓಹೋ ಏನೋ ತಪ್ಪಾಗಿದೆ ಅಂತ. ಆಗಲೂ ಏನು ತಪ್ಪಾಗಿದೆ ಮತ್ತು ಎಲ್ಲಿ ತಪ್ಪಾಗಿದೆ ಎಂದು ಅರ್ಥವಾಗಲ್ಲ. ಅರಿತವರು ಹೇಳಿದ್ರೆ ಕೇಳದಷ್ಟು ಅಹಂಕಾರ ಇರುತ್ತಲ್ಲ. ಹಾಳಾಗಿ ಹೋಗ್ತಾನೆ.”

ಸದ್ಯ ಸಮಾಜದಲ್ಲಿರೋ ಅಂಧ ಭಕ್ತರ ಕತೆಯೂ ಹಾಗೇ ಆಗಿದೆ. ಧರ್ಮ ಎಂದರೆ ಯಾವುದು, ಸನ್ಯಾಸಧರ್ಮ ಅಂದರೆ ಯಾವುದು, ಅದರಲ್ಲೂ ಶಾಂಕರ ಸನ್ಯಾಸಧರ್ಮ ಅಂದರೆ ಯಾವುದು? ಅವರಲ್ಲಿ ಯಾರಿಗೂ ಗೊತ್ತಿಲ್ಲ ಮತ್ತು ಅದು ಬೇಕಾಗಿಯೂ ಇಲ್ಲ. “ಧರ್ಮಕರ್ಮ ಕಟ್ಕಂಡು ನಮ್ಗೇನಾಗ್ಬೇಕು. ನಮ್ ಸಂಸ್ಥಾನ ಬಹಳ ಸಮಾಜಮುಖಿ ಕೆಲಸ ಮಾಡ್ತಿದ್ದಾರೆ. ಬಾಕಿ ಅವರು ಏನೇ ಮಾಡದ್ರೂ ನಮಗೇನೂ ತೊಂದರೆಯಿಲ್ಲ. ನಮಗೆ ಸದ್ಯ ಅನುಕೂಲ ಆಗ್ತಾ ಇದೆಯೋ ಇಲ್ವೋ ಅಷ್ಟು ಸಾಕು” ಅಂತಾರೆ. ಸಿನಿಮಾನಟ ನಟಿಯರು ಖಾಸಗಿ ಜೀವನ ಬೇರೆ, ವೃತ್ತಿ ಬೇರೆ ಅಂದಹಾಗೆ ಸಾಮ್ಗಳ ಖಾಸಗಿ ಜೀವನ ಬೇರೆ, ಸ್ವಾಮಿಯಾಗಿ ಅವರ ವೃತ್ತಿ ಬೇರೆ ಅನ್ನೋ ರೀತಿ ನೋಡ್ತಾರೆ ಆ ಜನ!

“ಸದ್ಯ ನಮ್ಗೆ ಒಳ್ಳೇದಾಗ್ತಿದೆಯಲ್ಲ”-ಹೌದಪ್ಪಾ ಒಳ್ಳೇದಾಗ್ತಿದೆ, ನೀವು ಮರದ ಟೊಂಗೆಯ ಮೇಲೆ ನಿಂತ್ಕೊಂಡು ಟೊಂಗೆಯ ಬುಡದ ಭಾಗವನ್ನು ಕತ್ತರಿಸುತ್ತಿದ್ದೀರಿ, ವಿಂಡೋ ಸೀಟು ಪಡೆದ ಖುಷಿಯಲ್ಲಿದ್ದೀರಿ-ಟೈಟಾನಿಕ್ ಮುಳುಗುತ್ತಿರೋ ಮಾಹಿತಿ ನಿಮಗಿನ್ನೂ ಸಿಕ್ಕಿಲ್ಲ!

ಈ ಕಳ್ಳಯ್ಯ-ಕುಳ್ಳಯ್ಯಂದಿರು ಸಾಮಾಜಿಕ ತಾಣಗಳಲ್ಲಿ ತಮ್ಮ ಬರಹಗಳಲ್ಲಿ ಪೋಸು ಕೊಡೋದು ನೋಡ್ಬೇಕು. ಎಂತಹ ಘನ ವಿದ್ವನ್ಮಣಿಗಳಯ್ಯ ಅಂತ ನೋಡಿದವರು ಹೇಳ್ಕೋಬೇಕು. ಗುರುಕುಲ ಅಂದ ತಕ್ಷಣ ಕಳ್ಳಯ್ಯ-ಕುಳ್ಳಯ್ಯರ ಕಿವಿ ನೆಟ್ಟಗಾಗ್ತದೆ. ಯಾಕೆಂದರೆ ಗುರುಕುಲಪತಿ ಕುಳ್ಳ ಬಾವಯ್ಯ ಪಾನಿಪೂರಿಯವರ ಮಗಳನ್ನು ಬಸಿರುಮಾಡಿ ತಪ್ಪಿಸಿಕೊಂಡ ಪ್ರಕರಣ ನೆನಪಿಗೆ ಬರ್ತದೆ ಅವರಿಗೆ. ಹಲವು ಹೆಣ್ಣುಮಕ್ಕಳ ಶೀಲಹರಣ ಮಾಡಿದ ಕುಲಪತಿ ಕುಳ್ಳಬಾವಯ್ಯನೋರು ತಾನು ಕರೆದಲ್ಲಿಗೆ ಹೆಣ್ಣುಮಕ್ಕಳು ಬರಲೊಪ್ಪದಿದ್ದಾಗ ಅಷ್ಟು ಎಳೆಗಂದಮ್ಮಗಳ ಕೂದಲು ಹಿಡಿದು ಗೋಡೆಗೆ ತಲೆಯನ್ನು ಜಪ್ಪಿದ್ದನ್ನು ನೋಡಿದ ಮಾಣಿಗಳೂ ಇದ್ದಾವೆ; ಆದರೆ ಅವುಗಳಿಗೆಲ್ಲ ಮಾತನಾಡಲು ಬಾಯಿಲ್ಲ!

ಪಾನಿಪೂರಿಯವರ ಕೇಸಿನಲ್ಲಿ ದುಡ್ಡುಕೊಟ್ಟು ಕೇಸು ಮುಚ್ಚಿಹಾಕಿಸಿ ಜಯಭೇರಿ ತಮ್ಮದೇ ಎಂದು ಭೋಂಗು ಬಿಟ್ಟರಲ್ಲ ಅವರ ಜಯಭೇರಿಯ ಒಳಮರ್ಮ ಯಾರಿಗೆ ಗೊತ್ತಿಲ್ಲ ಅಂದ್ಕಂಡಿದೀರಿ? ಆದರೆ ದೂರದಿಂದ ಟಿವಿ ವಾಹಿನಿಗಳಲ್ಲಿ ಸದಾ ಸಾಮ್ಗಳ ಪೂಜೆಯನ್ನೇ ನೋಡುತ್ತ ಕೈಮುಗಿಯೋ ಅಂಧಭಕ್ತರಿಗೆ ಮಾತ್ರ ಆ ವಿಷಯ ಗೊತ್ತಾಗಲೇ ಇಲ್ಲ. ಸುದ್ದಿ ಸ್ವಲ್ಪ ಕಿವಿಯಿಂದ ಕಿವಿಗೆ ದಾಟುತ್ತ ಬಂದರೂ ಸರ್ಟಿಫಿಕೇಟ್ ನಿಪುಣರಾದ ಕಳ್ಳಯ್ಯ-ಕುಳ್ಳಯ್ಯ ವಿಜಯಘೋಷವನ್ನು ಸಾರಿದರು, ತಮ್ಮ ತಪ್ಪೇ ಇಲ್ಲವೆಂದರು, ಅಷ್ಟೇಕೆ ಸಾಮ್ಗಳು ಸಭೆಗಳಲ್ಲಿ ಮೊಸಳೆಕಣ್ಣೀರು ಸುರಿಸುತ್ತ, ಒಂದೇಸಮನೆ ಪರಿಷತ್ತುಗಳ ಪದಾಧಿಕಾರಿಗಳನ್ನೆಲ್ಲ ಬದಲಾಯಿಸಿಬಿಟ್ಟರು. ಯಾಕೆ ಹಾಗೆ ಮಾಡಿದ್ರು? ಅದು ’ಮಹಾಸಂಸ್ಥಾನ’ದವರ ಆಡಳಿತ ತಂತ್ರ-ನಾವು ಕೇಳಬಾರದು, ಗುರುಗಳ ಮನಸ್ಸನ್ನು ನೋಯಿಸಬಾರದು ಎಂದುಕೊಂಡ್ರು. ಪಾಪ ಈಗ ಎಲ್ಲ ಗೊತ್ತಾಗಿದ್ದೂ ಏನೂ ಮಾಡಲಾಗದೆ ಅನುಭವಿಸ್ತಿದ್ದಾರೆ.

ಅಂಥವರು ಮತ್ತೆ ಗುರುಕುಲ ನಡೆಸ್ತಾರೆ, ಜನರನ್ನು ಕರೀತಾರೆ, ನೋಡಿ ಎಂತಾ ವಿಪರ್ಯಾಸ. ಅದ್ಯಾರೋ ಅದೇನೋ ಕೊಟ್ರಂತಲ್ಲ? ತಟ್ಟೇಲಿ ಸಾಮ್ಗಳ ಕೈಗೆ. ಅದೆಲ್ಲ ಬರೇ ದೊಂಬರಾಟ. ಗುಡಿಸಲಿನಂತಿದ್ದ ಮನೆ ಈಗ ಮಹಾನಗರದ ಬಂಗಲೆಯಂತಹ ಬಂಗಲೆಯಾಗಿ ನಿಂತಿದೆ! ಅದಕ್ಕೆಲ್ಲ ಹಣವೆಲ್ಲಿಂದ ಬಂತು? ಸಾಮ್ಗಳ ಅಪ್ಪ ಶ್ರಾದ್ಧ ಭಟ್ಟನ ದುಡಿಮೆ ಅಷ್ಟಿದ್ಯೇ? ಅಥವಾ ಸಾಮ್ಗಳ ತಮ್ಮ ಏನಾದ್ರೂ ಅಷ್ಟೊಂದು ಕಾಸು ಮಾಡಿದ್ನೇ? ಈ ಡಬಲ್ ಗೇಮ್ ಎಲ್ಲ ಯಾಕೆ ಸಾಮ್ಗಳೇ ಅಂತ ಯಾವೊಬ್ಬನೂ ಕೇಳಲ್ಲ.

ಭಸ್ಮಾಸುರನ ಎದುರು ವಾದಕ್ಕೆ ನಿಲ್ಲಲು ಪರಮೇಶ್ವರನಿಗೇ ಸಾಧ್ಯವಾಗಲಿಲ್ಲವಂತೆ; ವರಕೊಟ್ಟ ಬೋಳೆಶಂಕ್ರನ ಮಡದಿಯನ್ನೇ ಮೋಹಿಸಿ ತನ್ನವಳಾಗಬೇಕೆಂದು ಪೀಡಿಸಹತ್ತಿದ. “ಅವಳು ನಿನಗೆ ಅಮ್ಮ ಕಣೋ” ಅಂದ್ರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಪಾಪ ಮಹಾವಿಷ್ಣು ಮೋಹಿನಿಯಾಗಿ ಬರದಿದ್ರೆ ಬೋಳೆಶಂಕ್ರನ ಕತೆ ಏನಾಗ್ತಿತ್ತೋ ಗೊತ್ತಿಲ್ಲ! ಹೌದೂ… ಗೂಟದ ಜಗದ್ಗುರು ಭಸ್ಮಾಸುರನಿಗೊಂದು ಮೋಹಿನಿ ಬರಬೇಕಲ್ಲ? ನೋಡೋಣ, ವರಕೊಟ್ಟೋನು ವಾಪಸ್ ತಗೊಳ್ಳೋಕೂ ಸಮರ್ಥನಾಗಿರ್ತಾನೆ. ಬೋಳೆಶಂಕ್ರ ಬೇರೆ ಅಲ್ಲ ಮೋಹಿನಿ ಬೇರೆ ಅಲ್ಲ; ಭಗವಂತನ ನೆಟವರ್ಕ್ ಭಾರೀ ಚೆನ್ನಾಗಿದೆ, ಅಲ್ಲಿ ಕಾಲ್ ಡ್ರಾಪ್ ಆಗೋ ಛಾನ್ಸೇ ಇಲ್ಲ, ಫುಲ್ ಸಿಗ್ನಲ್ಲು, ಸ್ವಲ್ಪ ಬೀಝಿ ಇರಬಹುದಷ್ಟೆ. ಮೋಹಿನಿ ಪಾತ್ರಕ್ಕೆ ಆಯ್ಕೆ ಮಾಡ್ತಾ ಇದಾನೆ ಅನ್ಸುತ್ತೆ!
ಮುಂದಿನ ದಿನಗಳಲ್ಲಿ ರಾಜಕೀಯ ವಿಪ್ಲವಗಳ ಬಗ್ಗೆ ಹೇಳಬೇಕಿಲ್ಲ. ತಮ್ಮ ಜಾಗ ಬಂದೋಬಸ್ತು ಮಾಡ್ಕೊಳೋಕೆ ಗೂಟದ ಸಾಮ್ಗಳು ಗೂಟ ಅಲ್ಲಾಡಿಸುತ್ತ ಮೊದಲಿನವನನ್ನು ಬಿಟ್ಟು ಅವನ ವಿರೋಧಿಯನ್ನು ಜೋತುಕೊಂಡಿದ್ದಾನಂತೆ. ಹೇಗೂ ಗೂಟದ ಸಾಮ್ಗಳು ಬರೋ ಅಕ್ಟೋಬರ್ ನಲ್ಲಿ ಒಳಗೆ ಹೋಗಲೇಬೇಕು. ಅಷ್ಟರೊಳಗೆ ಏನಾದ್ರೂ ಸಾಧ್ಯವಾದ್ರೆ ತಪ್ಪಿಸಿಕೊಳ್ಳೋಕೆ ಅನ್ನೋ ಕಡೆಯ ಪ್ರಯತ್ನಗಳಲ್ಲಿ ಇದೂ ಒಂದು ಅಂತ ತಜ್ಞರು ಹೇಳ್ತಾ ಇದಾರೆ.

ಗೂಟದ ಸಾಮ್ಗಳಿಗೆ ಇದು ಹೊಸದಲ್ಲ; ಇದು ಅಂದರೆ ಯಾವುದು? ಮೊದಲು ಸಹಾಯ ಮಾಡಿದೋರನ್ನೇ ಅಪರಿಚಿತರೆಂಬಂತೆ ನೋಡೋದು, ತಲೆತಲಾಂತರದಿಂದ ಕಾಣಿಕೆ ಕೊಡುತ್ತ ಮಠದ ಸೇವೆಯಲ್ಲಿ ನಿರತರಾಗಿದ್ದ ಮನೆತನದವರೇ ತನ್ನನ್ನು ವಿರೋಧಿಸುತ್ತಾರೆ ಎಂಬ ಕಾರಣಕ್ಕೆ ಅವರು ಮಠದ ಶಿಷ್ಯರೇ ಅಲ್ಲ ಅನ್ನೋದು, ತನ್ನ ಚೇಲಾಗಳಲ್ಲಿ ಯಾರೋ ತಪ್ಪು ಮಾಡಿ ಕಾನೂನಿನ ತೊಡಕಿಗೆ ಸಿಕ್ಕಾಕಿಕೊಂಡಾಗ ಅವನು ತನ್ನ ಶಿಷ್ಯನೇ ಅಲ್ಲವೆನ್ನೋದು, ನಾಲಿಗೆ ಸೀಳಿದರೆ ಮೂರಕ್ಷರ ಇರದ ನಾಲಾಯ್ಕು ಚೇಲಾಗಳನ್ನು ಬಿಟ್ಟು ಸಮಾಜಿಕ ಜಾಲತಾಣಗಳಲ್ಲಿ ಬೇರೆ ಮಠಗಳವರನ್ನೆಲ್ಲ ಅತಿ ಕೀಳುಮಟ್ಟದ ಶಬ್ದಗಳಿಂದ ಟೀಕಿಸೋದು, ಬೇಡವೆನಿಸಿದ ರಾಜಕಾರಣಿಗಳನ್ನೂ ಅದೇರೀತಿ ಟೀಕಿಸಿ ಸಿಕ್ಕಾಕಿಕೊಂಡಾಗ ಏನೂ ನಡೆದೇ ಇಲ್ಲವೆಂಬಂತೆ ಸುಮ್ಮನಿರೋದು, ಇಂತದ್ದೆಲ್ಲ ಗೂಟದ ಸಾಮ್ಗಳಿಗೆ ಹೊಸದಲ್ಲ. ಅವರಿಗೆ ಯಾವುದು ಗೊತ್ತಿಲ್ಲ ಅಂತೀರಿ?

“ಧರ್ಮ ಎಂದರೇನು?”

“ಧರ್ಮ ಅಂದ್ರೆ ಧರ್ಮ”[ಅಪ್ಪ ಅಂದ್ರೆ ಅಪ್ಪ ಅಂತ ಅತಿಚಿಕ್ಕ ಮಗು ಹೇಳುತ್ತಲ್ಲ ಹಾಗೆ]
“ಸನ್ಯಾಸ ಅಂದ್ರೆ ಏನು?”

“ಸನ್ಯಾಸ ಅಂದ್ರೆ ಸನ್ಯಾಸ. ಅದರಲ್ಲೇನಿದೆ ಮಹಾ. ನಿಮ್ದೆಲ್ಲ ಬೇರೆ ಬಣ್ಣದ ಬಟ್ಟೆ, ನಮ್ದು ಕಾವಿ ಬಟ್ಟೆ ಅಷ್ಟೇ”

“ಸನ್ಯಾಸ ಧರ್ಮ ಅಂದ್ರೇನು?”

“ಈರುಳ್ಳಿ ಉಪ್ಪಿಟ್ಟು ಪಕೋಡ ಮಾಡಿಸಿ ತಿಂದು ಹೊರಗೆ ಯಾರಿಗೂ ಹೇಳದಿರೋದು. ಸುಂದರಿಯರನ್ನು ಅನಾಮತ್ತಾಗಿ ಎತ್ತಿ ಮಂಚದಮೇಲೆ ಮಲಗಿಸಿ ’ಏಕಾಂತ’ ನಡೆಸೋದು. ಕನ್ಯಾಸಂಸ್ಕಾರದ ಸೋಗಿನಲ್ಲಿ ಹರೆಯಕ್ಕೆ ಕಾಲಿಟ್ಟ ಸುಂದರ ಹುಡುಗಿಯರ ಕನ್ಯಾಪೊರೆ ಹರಿದು ಸಂಭೋಗಿಸಿ, ಬೇಕಾದವನಿಗೆ ಕಟ್ಟಿ, ’ಏಕಾಂತ’ ಸೇವೆಗೆ ಕಾಯಂ ಮಾಡಿಕೊಳ್ಳೋದು, ಮುಂದೆ ಅವರಿಗೆ ಮಕ್ಕಳನ್ನು ಅನುಗ್ರಹಿಸೋದು. ಸಮಾಜೋದ್ಧಾರದ ಯೋಜನೆಗಳ ಮೀಟಿಂಗು ಅಂತ ಬೋಳೆಭಕ್ತರ ಮಡದಿಯರ ಜೊತೆ ’ಏಕಾಂತ’ದಲ್ಲಿ ಮೇಟಿಂಗ್ ನಡೆಸೋದು”

“ಸಾಧನಾ ಪಂಚಕ ಸನ್ಯಾಸಿಗಳಿಗೆ ಸಂಬಂಧಿಸಿಲ್ಲವೇ?”

“ಅವರು ಬರೆದ ಸಾಧನಾಪಂಚಕ ಜನಸಾಮಾನ್ಯರಿಗೆ ಅದು. ಸನ್ಯಾಸಿಗಳಿಗೆ ಸಾಧನಾ ಪಂಚಕ ಅಂದ್ರೆ ಬೇರೆ. ಮದ್ಯ, ಮಾಂಸ, ಮಾನಿನಿಯರ ಸಹವಾಸಗಳನ್ನೆಲ್ಲ ಗೊತ್ತಾಗದಂತೆ ನಡೆಸೋದು ಮೊದಲನೇ ಸಾಧನೆ. ಕಾವಿಯ ಮರೆಯಲ್ಲಿ ರ್‍ಔಡಿಸಂ ನಡೆಸೋದು ಮತ್ತು ಸುಳ್ಳು ಹೇಳಿ ಸತ್ಯವೆಂದು ಸಾಧಿಸೋದು ಎರ್‍ಅಡನೇ ಸಾಧನೆ. ಶಿಷ್ಯರಿಂದ ಬಂದ ಮಠದ ಸ್ಥಿರ-ಚರಾಸ್ತಿಗಳನ್ನು ಖಾಸಗಿ ಹೆಸರುಗಳಿಗೆ ವರ್ಗಾಯಿಸಿಕೊಳ್ಳೋದು ಮೂರನೇ ಸಾಧನೆ. ಮಾಧ್ಯಮಗಳನ್ನು ಕಟ್ಟಿಕೊಂಡು ತಿಮಿಂಗಿಲಗಳಿಗೆ ಆಹಾರ ನೀಡುತ್ತ ತನಗೆ ಬೇಕಾದ ರೀತಿಯಲ್ಲಿ ಎಲ್ಲವೂ ನಡೆಯುವಂತೆ ಮಾಡಿಕೊಳ್ಳೋದು ನಾಲ್ಕನೇ ಸಾಧನೆ. ಕೆಲಸಕ್ಕೆ/ಸಹಾಯಕ್ಕೆ/ಉಪಕಾರಕ್ಕೆ ಬರುವವರೆಗೆ ಬಳಸಿಕೊಂಡು ಆಮೇಲೆ ಒದ್ದು ಬಿಸಾಕಿ ಬೇರೆ ವ್ಯವಸ್ಥೆ ಮಾಡಿಕೊಳ್ಳೋ ಅವಕಾಶ-ರಾಜಕಾರಣ ಮಾಡೋದು ಐದನೇ ಸಾಧನೆ. ಇವೆಲ್ಲ ಬಹಳ ಉನ್ನತ ವಿಚಾರಗಳು ನಿಮ್ಗೆಲ್ಲ ಅರ್ಥವಾಗಲ್ಲ. ತುರ್ಯಾವಸ್ಥೆಗೆ ಹೋದವರಿಗೆ ಮಾತ್ರ ಗೊತ್ತಾಗುವಂತದು”

“ವಾಗರ್ಥಾಮಿವ ಸಂಪ್ರಕ್ತೌ ವಾಗರ್ಥಃ ಪ್ರತಿಪತ್ತಯೇ….ಸ್ವಾಮಿಗಳೆ ಇದು ಯಾರು ಹೇಳಿದ್ದು ತಮ್ಮ ಕುಲಪತಿ ಬಾವಯ್ಯನೇ? ಇದರ ವ್ಯಖ್ಯಾನ ಮಾಡಬೇಕಲ್ಲ?”

“ಅದಕ್ಕೆಲ್ಲ ಉತ್ತರ ಹೇಳೋದಕ್ಕೆ ನಮಗೀಗ ಸಮಯದ ಅಭಾವ ಇದೆ, ಇಪ್ಪತ್ನಾಲ್ಕು ಗಂಟೇಲಿ ನಿಮ್ಗೆ ಉತ್ತರಿಸ್ತೇವೆ” 😀😂😄😬😆

Thumari Ramachandra
29/04/2017
source: https://www.facebook.com/groups/1499395003680065/permalink/1949587068660854/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s