ಸಾಮಾನು ಸ್ವಾಮಿಯ ಚೇಲಾಗಳು ದಬ್ಬಾಳಿಕೆ ನಡೆಸೋದು ಇನ್ನೂ ನಿಂತಿಲ್ಲ

ಸಾಮಾನು ಸ್ವಾಮಿಯ ಚೇಲಾಗಳು ದಬ್ಬಾಳಿಕೆ ನಡೆಸೋದು ಇನ್ನೂ ನಿಂತಿಲ್ಲ
[ಕುಂಬಳಕಾಯಿ ಕಳ್ಳ ಹೆಗಲೊರೆಸಿಕೊಂಡರೆ ಅದಕ್ಕೆ ಯಾರು ಜವಾಬ್ದಾರರು?]

’ಮಹಾಸ್ವಾಮಿಗಳು’ ಪೀಠದಲ್ಲಿ ಕೂತಿರುವಂತೆಯೇ ಒಮ್ಮೆ ತಪಸ್ಸಿಗೆ ತೊಡಗಿಬಿಟ್ಟರು. ಕ್ಷಣಮಾತ್ರದಲ್ಲಿ ಅವರಿಗೆ ಸನ್ನಿದೇವಿಯ ದರ್ಶನವಾಯಿತು. ದೇವಿಯ ಅಪ್ರತಿಮ ಸೌಂದರ್ಯವನ್ನು ’ಸ್ವಾಮಿಗಳು’ ಕಣ್ಣು ಬಿರಿದುಹೋಗುವಷ್ಟು ಕಣ್ತುಂಬಿಸಿಕೊಂಡರು! ಆ ಕಡೆ ಈ ಕಡೆ ಓಲಾಡುತ್ತ ಕ್ಯಾಟ್ ವಾಕ್ ಮಾಡುತ್ತಿರುವ ಸನ್ನಿದೇವಿ ಎರಡೂ ಕೈಗಳನ್ನು ಮೇಲಕ್ಕೆತ್ತಿ ಮೈ ಕುಲುಕಿಸಿದಾಗ ’ಸ್ವಾಮಿಗಳು’ ತಮ್ಮರಿವಿಗಿಲ್ಲದಂತೆಯೆ ಬುಲ್ ಪೀನದಲ್ಲಿ ವೀರ್ಯವೃಷ್ಟಿ ನಡೆಸಿದರು.

ಸನ್ನಿದೇವಿ ಪ್ರಸನ್ನಳಾಗಿ ಏಕಾಂತಕ್ಕೆ ಬರುವುದಕ್ಕೆ ಒಪ್ಪಿಕೊಂಡಳು! ’ಸ್ವಾಮಿಗಳು’ ಸನ್ನಿದೇವಿಯ ಸಂಪೂರ್ಣ ದರ್ಶನಕ್ಕೆ ಇನ್ನೆಷ್ಟು ದಿನವಿದೆಯೆಂದು ಲೆಕ್ಕ ಮಾಡುತ್ತಿರುವಂತೆಯೆ ಮಾವಂದಿರು ನೋಟೀಸು ಹಿಡಿದು ಬಂಧಿಸಲು ಬಂದ ದೃಶ್ಯಾವಳಿಗಳು ಮನದ ಪಟಲದಲ್ಲಿ ಹಾದುಹೋದವು; ನಿಬ್ಬೆರಗಾಗಿ ಬುಲ್ ಪೀನದಲ್ಲಿ ಹನಿಹನಿ ಮೂತ್ರವೂ ಅಸರಿ, ಮೈಯೆಲ್ಲ ಬೆವತು ತಪೋಭಂಗವಾಗಿ ಕಕ್ಕಾವಿಕ್ಕಿಯಾಗಿ ಚಕ್ಕನೆದ್ದು ಸುತ್ತಾಡತೊಡಗಿದರು.

’ಸ್ವಾಮಿಗಳ’ ಘನ ಲೀಲಾವಿನೋದವನ್ನು ಅರಿತ ಗಿಂಡಿಯೊಬ್ಬ “ಗುರುಗಳೇ, ಯಾಕೆ ಹಾಗೆ ಆತಂಕಕ್ಕೊಳಗಾಗಿದ್ದೀರಿ? ಇಲ್ಲಿ ಯಾರೂ ಬರಲಿಲ್ಲ. ಬಂದರೆ ನಾವು ಅಷ್ಟುದೂರದಿಂದಲೆ ಪರಾಂಬರಿಸಿ ಒಳಗೆ ನುಗ್ಗಲಾಗದಂತೆ ವ್ಯವಸ್ಥೆ ಮಾಡುತ್ತೇವೆ” ಎಂದ. ಸಾಮಾನುಸ್ವಾಮಿಗಳಿಗೆ ಆಗ ತಾನು ಧ್ಯಾನಕ್ಕೆ ಕುಳಿತದ್ದು ನೆನಪಾಯಿತು ಮತ್ತು ಆ ದೃಶ್ಯಾವಳಿಗಳೆಲ್ಲ ಧ್ಯಾನದಲ್ಲಿ ನಡೆದದ್ದು ಎಂಬುದು ಗಮನಕ್ಕೆ ಬಂತು.

ಗಿಂಡಿಯ ಮಾತಿನಿಂದ ಸ್ವಲ್ಪ ಸಮಾಧಾನಗೊಂಡರೂ ’ಮಹಾಸ್ವಾಮಿಗಳು’ ಆತಂಕದಿಂದ ಸಂಪೂರ್ಣ ಹೊರಬರಲು ಸಾಧ್ಯವಾಗಲೇ ಇಲ್ಲ. ಆಲೋಚನೆಗಳು ಒಂದೆರಡೆ? ಒಂದರಮೇಲೊಂದು ಪ್ರವಾಹೋಪಾದಿಯಲ್ಲಿ ಸಾಗಿ ಸಾಗಿ ಬರುತ್ತಿದ್ದವು. ಅದೊಂದು ಪ್ರಕರಣವಲ್ಲದಿದ್ದರೆ ತನ್ನ ಪಂಚದಶವರ್ಷಗಳ ಕಾಮೋತ್ಸವಕ್ಕೆ ಯಾವ ಭಂಗವೂ ಇರುತ್ತಿರಲಿಲ್ಲ, ಇಡೀ ಸಮಾಜ ತನ್ನ ಬಣ್ಣದ ಅಕ್ಕಿಯನ್ನು ಪಡೆಯುತ್ತ, ಭೋ ಪರಾಕು ಹಾಕುತ್ತ ತನು-ಮನ-ಧನಗಳಿಂದ ಸೇವೆ ಮಾಡುತ್ತಿತ್ತು. ತಾನೂ ಮತ್ತು ಕುಳ್ಳ ಬಾವಯ್ಯ ನಮಗೆ ಬೇಕಾದ್ದು ನಡೆಸುತ್ತ ಹಾಯಾಗಿ ಬದುಕಬಹುದಿತ್ತು ಎಂದು ಯೋಚಿಸಿದರು.

’ನಾಯಿ ಹಸಿದಿತ್ತು-ಅನ್ನ ಹಳಸಿತ್ತು’ ಅನ್ನೋದು ಕನ್ನಡದ ಹಳೆ ಗಾದೆ. ಹಸಿದ ನಾಯಿಗೆ ಹಳಸಿದ ಅನ್ನವಾದರೂ ಹೊಸ ಅನ್ನವೇ! ದಶಕಗಳಿಂದ ಕಾಶಿಮಾಣಿಗೆ ಎಲ್ಲವನ್ನೂ ಸತತವಾಗಿ ಅರ್ಪಿಸಿಕೊಳ್ಳುತ್ತಲೆ ತನ್ನ ಕಾಮನೆಗಳನ್ನು ಶಮನಮಾಡಿಕೊಳ್ಳುತ್ತಿದ್ದ ಮಾದಕ್ಕಿ ತಿಮ್ಮಕ್ಕ ಮಠದ ಅಂಗಳದಲ್ಲಿ ದನಗಳ ಗುಂಪಿಗೆ ಸ್ವಲ್ಪ ದೂರದಲ್ಲಿ ನಿಂತು ಕೆಲವು ಸ್ನೇಹಿತೆಯರೊಂದಿಗೆ ಏನನ್ನೋ ಹರಟುತ್ತಿದ್ದಳು.

ತನ್ನ ಸೌಂದರ್ಯಕ್ಕೆ ತಾನೇ ಮರುಳಾಗುವ ಕಾಳಿದಾಸನ ಶಕುಂತಲೆಯಂತೆ, ಸ್ನೇಹಿತೆಯರೆಲ್ಲ ಸಖಿಯರು ಮತ್ತು ತಾನು ಶಕುಂತಲೆ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತ, ದೂರದಲ್ಲಿ ಹಸುವಿಗೆ ಹೋರಿ ಹಾರುತ್ತಿರುವೆಡೆಯಿಂದ ’ಮಹಾಸ್ವಾಮಿಗಳು’ ಬರುತ್ತಿರುವುದನ್ನು ಕಂಡು ನಾಚಿ ನೀರಾಗಿದ್ದಳು. ತನ್ನ ಭಾವೀ ಶಕುಂತಲೆಯೆಡೆಗೆ ಬಿಜಯಂಗೈದ ’ಮಹಾಸ್ವಾಮಿಗಳು’ ಮಾದಕ್ಕಿ ತಿಮ್ಮಕ್ಕನನ್ನು ಅಪಾದಮಸ್ತಕ ಭೋಗಿಸುತ್ತಿರುವಂತೆ ನೋಡಿ ಮೂವತ್ತೆರಡು ಹಲ್ಲುಕಿಸಿದರು. ಅವಳ ಕೊರಳಲ್ಲಿದ್ದ ಬಂಗಾರದ ಸರವನ್ನು ಎತ್ತಿ ನೋಡಿ ಬಹಳ ಚೆನ್ನಾಗಿದೆ ಎಂದರು. ’ಸ್ವಾಮಿಗಳ’ ಕಣ್ಣ ಕರೆಯನ್ನು ಮಾದಕ್ಕಿ ತಿಮ್ಮಕ್ಕ ಗಮನಿಸದೆ ಇರಲಿಲ್ಲ; ಅದಾಗಿ ಒಂದೆರಡು ದಿನಗಳಲ್ಲೆ ಮಾದಕ್ಕಿ ತಿಮ್ಮಕ್ಕನ ಜೊತೆಗೆ ಏಕಾಂತ ಪ್ರಾರಂಭವಾಯಿತು.

ಕೆಲವು ಹೆಂಗಸರಲ್ಲೂ ಕಾಮದ ತೆವಲು ಜೋರಾಗಿಯೆ ಇರುತ್ತದೇನೋ. ಅಂಥವರಿಗೆ ಹೆಸರಿಗೊಬ್ಬ ಗಂಡ ಇರಬೇಕಷ್ಟೆ; ಅವನು ಅವರ ಮೇಲೆ ಅಧಿಕಾರ ಚಲಾಯಿಸುವ ಹಾಗಿಲ್ಲ. “ಯಾಕೆ ಗಂಡಸರಂತೆ ನಡುರಾತ್ರಿಗೆ ಮನೆಗೆ ಬಂದೆ, ಇಲ್ಲಿಯವರೆಗೆ ಎಲ್ಲಿದ್ದೆ?” ಎಂದು ಕೇಳುವ ಗಂಡಸುತನ ಅವನಲ್ಲಿರೋದಿಲ್ಲ. ಹೆಂಡತಿ ಆಡಿದ್ದೆ ಆಟ; ಏಕ ಪತಿವ್ರತಸ್ಥೆ ಎಂದುಕೊಳ್ಳದ ಸತಿಮಣಿಗಳು ಗುಟ್ಟಾಗಿ ಬಹುಪತಿತ್ವದಲ್ಲಿ ಕಾಮದ ತೆವಲನ್ನು ನೀಗಿಸಿಕೊಳ್ಳುವರು. ಮಾದಕ್ಕಿ ತಿಮ್ಮಕ್ಕ ಕೂಡ ಹಾಗೆಯೆ. ಕಾಶಿಮಾಣಿಯ ಜೊತೆಗೆ ನಂಟಿದ್ದದ್ದು ಬಹಿರಂಗಗೊಂಡ ಅಂತರಂಗ; ಅಂತರಂಗದಲ್ಲಿ ಹಾಗೇ ಉಳಿದುಬಿಟ್ಟ ಅದೆಷ್ಟು ಕಾಶಿಮಾಣಿಗಳಿದ್ದಾರೊ ಯಾರಿಗೆ ಗೊತ್ತು?

ಆಗಲೆ ಖ್ಯಾತನಾಮರೆಂದು ಹೇಳಿಸಿಕೊಳ್ಳುವ ಹಾದಿಯಲ್ಲಿದ್ದ ’ಮಹಾಸ್ವಾಮಿಗಳ’ ಸಹವಾಸ ಇಟ್ಟುಕೊಂಡರೆ ಬೇಕಾದ್ದನ್ನೆಲ್ಲ ಪಡೆಯಬಹುದು ಎಂಬ ದುರಾಲೋಚನೆ ಮಾದಕ್ಕಿ ತಿಮ್ಮಕ್ಕನಲ್ಲಿತ್ತೊ? ಗೊತ್ತಿಲ್ಲ. ಅಂತೂ ’ಮಹಾಸ್ವಾಮಿಗಳು’ ಮಾದಕ್ಕಿ ತಿಮ್ಮಕ್ಕನೊಂದಿಗೆ ವಾರದಲ್ಲಿ ಹಲವು ಗಂಟೆಗಳ ಕಾಲ ಮೇಟಿಂಗ್ ಆರಂಭಿಸಿದರು. ಯಥಾಪ್ರಕಾರ “ನೀನು ದಿವ್ಯಳು, ಭವ್ಯಳು, ನಿನ್ನಿಂದ ಬಹುದೊಡ್ಡ ಸೇವೆಯನ್ನು ಬಯಸಿದ್ದಾನೆ ದೇವರು, ಈ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಇದನ್ನು ಪಡೆಯೋದಕ್ಕೆ ಜನ್ಮಾಂತರಗಳ ಪುಣ್ಯ ಬೇಕು” ಎಂಬ ಪೀಠಿಕೆಯಿಂದ ಆರಂಭಗೊಂಡ ಕಾಮೋತ್ಸವ ಒಂದೂವರೆ ದಶಕಗಳವರೆಗೂ ನಡೆಯಿತು.

ಅದೊಂದು ಪ್ರಕರಣದಲ್ಲಿ ತಾವೇನಾದರೂ ತಿದ್ದಿಕೊಳ್ಳಲು ಬರುವಂತಿದ್ದರೆ ಎಂಬ ಯೋಚನೆ ’ಮಹಾಸ್ವಾಮಿಗಳಿಗೆ’ ಹಲವು ಸಲ ಬಂದಿದ್ದಿದೆ. ತಿದ್ದಿಕೊಳ್ಳಲು ಬರುವಂತಹ ಘಟನೆಗಳಲ್ಲ, ತಪ್ಪಿಸಿಕೊಳ್ಳೋದು ಸಾಧ್ಯವಿಲ್ಲ, ’ಮಾವನಮನೆಗೆ’ ಹೋಗಲೇಲಾಗುತ್ತದೆ ಎಂಬುದು ನೆನಪಾದಾಗ ಕೆಲವು ಸಮಯ ’ಮಾಸ್ವಾಮಿಗಳು’ ಕರೆಂಟ್ ಹೊಡೆದ ಕಾಗೆಯ ರೀತಿ ಆಡುತ್ತಾರೆ.

ಒಂದೂವರೆ ದಶಕದ ಸತತ ಏರಿಳಿತ ಹಾರಾಟಗಳ ಫಲವಾಗಿ, ತಾನೇ ತ್ರಿಪುರಸುಂದರಿಯೆಂಬ ಭ್ರಮೆಯಲ್ಲಿದ್ದ ಮಾದಕ್ಕಿ ತಿಮ್ಮಕ್ಕನಿಗೆ ಕಾಯಿಲೆ ಅಂಟುಕೊಂಡಿತು. ಕಾಯಿಲೆಯಿಂದ ಏಳಲಾಗದೆ ಇದ್ದಾಗ ಅವಳೊಂದಿಗೆ ಏಕಾಂತ ನಡೆಸೋದು ಸಾಧ್ಯವಾಗಲಿಲ್ಲ. ಆಗ ’ಮಾಸ್ವಾಮಿಗಳೆ’ ಮುಂದಾಗಿ ಊರಕಡೆಗೆ ಜಮೀನು ಕೊಡಿಸಿ ಅಲ್ಲಿಗೆ ಕಳಿಸಿದ್ದಾರೆ. ವರ್ಷದ ಹಿಂದೆ ಮಾಸ್ವಾಮಿಗಳು ಅಲ್ಲಿಗೆ ಹೋಗಿ ನೋಡಿಕೊಂಡು ಬಂದಿದ್ದರು. ಕಳೆದ ಚತುರ್ಮೋಸದ ಆರಂಭದ ದಿನ ಪಟ್ಟು ಹಿಡಿದು ಕರೆಸಿಕೊಂಡಿದ್ದರು.

ಲೈಂಗಿಕ ಕಾಯಿಲೆ ಯಾರಿಂದ ಎಲ್ಲಿ ಹುಟ್ಟಿಕೊಂಡು ಹೇಗೆ ಬರುತ್ತದೆ? ಅದು ವಿಜ್ಞಾನಕ್ಕೆ ಸಂಬಂಧಿಸಿದ ವಿಷಯ. ಮನುಷ್ಯನ ಶರೀರ ಬೇರೆ ಆತ್ಮ ಬೇರೆ. ಪಂಚಭೂತಮಯವಾದ ಶರೀರದಲ್ಲಿ ಅದೆಷ್ಟೊ ಮಿಲಿಯನ್ ಜೀವಕೋಶಗಳಿರುತ್ತವೆ; ಅವೆಲ್ಲವುಗಳಿಗೂ ಪ್ರತ್ಯೇಕ ಜೀವವಿರುತ್ತದೆ! ಚರ್ಮದ ಹೊರಕೋಶಗಳು ಸಾಯುತ್ತವೆ. ಇಡೀ ಶರೀರದ ತುಂಬೆಲ್ಲ ಹಲವು ವಿಧದ ಬ್ಯಾಕ್ಟೀರಿಯಾಗಳಿವೆ. ಅವುಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ಪ್ರಮುಖ ಗುಂಪುಗಳನ್ನು ಮಾಡಬಹುದು.

ಬೆವರು ಹರಿದಾಗ ಬೇಡದ ಬ್ಯಾಕ್ಟೀರಿಯಾಗಳಿಂದ ವಾಸನೆ ಉತ್ಪತ್ತಿಯಾಗುತ್ತದೆ. ಶರೀರದ ವಿವಿಧ ಭಾಗಗಳಲ್ಲಿ ಬ್ಯಾಕ್ಟೀರಿಯಾಗಳ ದುರ್ವರ್ತನೆಯಿಂದಲೆ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಮನುಷ್ಯನಲ್ಲಿ ಹುಟ್ಟಿಕೊಳ್ಳುವ ಹಲವು ಕಾಯಿಲೆಗಳು ಮೊದಲು ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತವೆ. ಮನುಷ್ಯನ ಮನಸ್ಸು ನಿರ್ಮಲವಾಗಿದ್ದರೆ ಅವನ ಶರೀರವೂ ಸಹ ನಿರ್ಮಲವಾಗಿ ರೋಗಮುಕ್ತವಾಗಿರುತ್ತದೆ. ಮನುಷ್ಯ ಗೂಢನಾಗಿ, ಒಳಗೊಳಗೇ ಗೋಪ್ಯವಾಗಿ ರಹಸ್ಯಗಳನ್ನು ಹೆಚ್ಚಿಸಿಕೊಂಡರೆ, ಕಂಡವರಮೇಲೆ ದ್ವೇಷಾಸೂಯೆಗಳನ್ನು ಬೆಳೆಸಿಕೊಂಡರೆ ಶರೀರದಲ್ಲಿರುವ ಬ್ಯಾಕ್ಟೀರಿಯಾಗಳ ವರ್ತನೆಯಲ್ಲಿ ಬದಲಾವಣೆಯಾಗಿಬಿಡುತ್ತದೆ.

ಮನುಷ್ಯ ಅನುಭವಿಸುವ ಕಾಯಿಲೆಗಳನ್ನು ಮುನಿಜನಯೋಗಿಗಳು ಮೂರು ವಿಧವಾಗಿ ವಿಂಗಡಿಸಿದ್ದಾರೆ-ಅಧಿದೈವಿಕ, ಅಧಿಭೌತಿಕ ಮತ್ತು ಆಧ್ಯಾತ್ಮಿಕ ಕಾಯಿಲೆಗಳೆಂದು ಅವುಗಳಿಗೆ ಹೆಸರು. ಜಲಪ್ರಳಯ, ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ, ಸುನಾಮಿ, ಚಂಡಮಾರುತ, ಭೂಕುಸಿತ ಇಂತವೆಲ್ಲ ಅಧಿದೈವಿಕ ತೊಂದರೆಗಳಂತೆ. ಹಾವು, ಚೇಳು, ಸೊಳ್ಳೆ, ತಿಗಣೆ, ನಾಯಿ, ಹಿಂಸ್ರಪಶುಗಳು ಕಚ್ಚೋದು ಕಡಿಯೋದು ಅಧಿಭೌತಿಕವೆಂದು ಹೇಳಿದ್ದಾರೆ. ಮನುಷ್ಯ ಹುಟ್ಟಂದಿನಿಂದ ಮೂಕ, ಕಿವುಡ, ಕುರುಡ, ಅಂಗಹೀನ ಇತ್ಯಾದಿ ತೊಂದರೆಗಳಿಂದ ಬಳಲೋದು ಆಧ್ಯಾತ್ಮಿಕ ಕಾಯಿಲೆಗಳಂತೆ. ಇವೆಲ್ಲ ಮೂಲಭೂತ ಕಾಯಿಲೆಗಳಾದವು.

ಹಾಲಿ ಜೀವನದಲ್ಲಿ ಬರುವ ಇನ್ನೂ ಹಲವು ಕಾಯಿಲೆಗಳು ಇಚ್ಛಾಪ್ರಾರಬ್ಧಕ್ಕೆ ಒಳಪಟ್ಟು ಮಾಡುವ ಕರ್ಮಗಳಿಂದ ಆಗಾಗಲೇ ಹುಟ್ಟಿಕೊಳ್ಳುವವಂತೆ. ಸಂಚಿತ ಕರ್ಮಗಳ ಫಲವಾಗಿ ಎಲ್ಲೆಲ್ಲೊ ಜನ್ಮತಳೆಯುವ ಮನುಷ್ಯ ಮುಂದೆ ಆ ಜನ್ಮದಲ್ಲಿ ಇಂತಿಂತಹ ಕರ್ಮಗಳಲ್ಲಿ ನಿರತನಾಗಿ ಅದರನುಸಾರ ಕರ್ಮಫಲಗಳನ್ನು ಅನುಭವಿಸುತ್ತಾನಂತೆ. ಎರಡು ಸೆಕೆಂಡ್ ಮೊದಲೇ ಬ್ರೇಕ್ ಹಾಕಿದ್ದರೆ ಅಪಘಾತ ತಪ್ಪುತ್ತಿತ್ತು ಎಂದು ಆಮೇಲೆ ಹೇಳಿಕೊಳ್ಳುವುದನ್ನು ನೋಡುತ್ತೇವೆ. “ಮೊದಲೆ ಗೊತ್ತಿದ್ದರೆ ಆ ಕಾಯಿಲೆಗ ನಮ್ಮಲ್ಲಿ ಔಷಧವಿತ್ತು” ಎಂದು ಸತ್ತನಂತರ ಯಾರೋ ಹೇಳುತ್ತಾರೆ. ಜೀವನ್ಮರಣಗಳ ನಡುವಿನ ತೂಗುಯ್ಯಾಲೆಯಲ್ಲಿರುವ ವ್ಯಕ್ತಿಯನ್ನು ಶೀಘ್ರ ಚಿಕಿತ್ಸೆಗೆ ಕರೆದೊಯ್ಯುತ್ತಿರುವ ಆಂಬುಲೆನ್ಸೆ ಅಪಘಾತಕ್ಕೀಡಾಗುವ ಸಂದರ್ಭಗಳಿವೆ.

ಇಷ್ಟೆಲ್ಲ ಸಂಕೀರ್ಣವಾದ ಮನುಷ್ಯ ಜೀವನವನ್ನು ’ಮಹಾಸ್ವಾಮಿಗಳು’ ಅರ್ಥಮಾಡಿಕೊಳ್ಳಲಿಲ್ಲ. ಪ್ರಾಯಬಂತು, ಅಧಿಕಾರ ಬಂತು, ಕಾಲಿಗೆ ಬಿದ್ದು ಸೇವೆ ಮಾಡುವ ಜನಬಲ ಬಂತು. ಅವರಿಂದ ಹಣಬಲ ಬಂತು. ಎಲ್ಲವೂ ಕ್ರೋಡೀಕೃತವಾದಾಗ ’ಸನ್ಯಾಸಿ’ಗೆ ವೈರಾಗ್ಯವೇಕೆ ಎಂಬ ಪ್ರಶ್ನೆ ಬಂತು. ರಾಜಕೀಯ ನಡೆಸಲು ಅಧಿಕಾರವಿರುವ ಸನ್ಯಾಸಿಗಳು ತಾವು ಎಂಬ ಮೇಲ್ಪರದೆಯೊಂದಿತ್ತು. ಆ ಪರದೆಯನ್ನು ದುರುಪಯೋಗಕ್ಕೆ ಬಳಸಿಕೊಂಡು ಬೇಡಾದ್ದನ್ನೆಲ್ಲ ಮಾಡುವುದಕ್ಕೆ ಇಳಿದಿದ್ದೆ ಇಂದಿನ ಸ್ಥಿತಿಗೆ ಕಾರಣವಾಯಿತು.

ನಾಟಕದ ಕಂಪನಿಗಳಲ್ಲಿ ಹಲವು ಪರದೆಗಳನ್ನು ಕಟ್ಟಿರುತ್ತಾರೆ. ಕತೆಯ ಸನ್ನಿವೇಶಕ್ಕೆ ತಕ್ಕಂತೆ [ವೇದಿಕೆಯ ದೀಪಗಳನ್ನು ಆರಿಸಿಕೊಂಡು] ಯಾವುದೋ ಒಂದು ಪರದೆಯನ್ನು ಇಳಿಬಿಟ್ಟು ಉಳಿದವುಗಳನ್ನು ಹಿಂದಕ್ಕಿಟ್ಟು ಅಥವಾ ಮೇಲಕ್ಕೆತ್ತಿ ಕಾಣದಂತೆ ಮಾಡಲಾಗುತ್ತದೆ. ಮಠದ ನಾಟಕ ಕಂಪನಿಯ ಸೂತ್ರಧಾರ ಕಳ್ಳಯ್ಯ ಮತ್ತು ಅವನ ಸೊಟ್ಟಮುಖದ ಬಾವ ಕುಳ್ಳಯ್ಯ ಸೇರಿಕೊಂಡು ಯಾವ ಸನ್ನಿವೇಶದಲ್ಲಿ ಜನರ ಕಣ್ಣಿಗೆ ಯಾವ ಪರದೆ ತೋರಿಸಬೇಕೆಂದು ನಿರ್ಧರಿಸುತ್ತಾರೆ. ಹಾಗಾಗಿಯೆ ಅಂಬಾ ಕತೆಯನ್ನು ಈಗ ಕೈಗೆತ್ತಿಕೊಂಡು, ಕಚ್ಚೆಕತೆಗಳನ್ನೆಲ್ಲ ಅದರ ಹಿಂದೆ ಅಡಗಿಸಿಟ್ಟು ಕೇವಲ ಅಂಬಾ ಕತೆಯೆ ಎದ್ದು ಕಾಣುವಂತೆ ಮಾಡುತ್ತಿದ್ದಾರೆ.

ಮಠವನ್ನು ಹೊಕ್ಕ ಬಾವಲಿ ಬುಲ್ ಪೀನದಲ್ಲಿ ನೇತಾಡತೊಡಗಿತು. ಮಹಿಳಾ ಸಬಲೀಕರಣದ ನೆಪದಲ್ಲಿ ಅಲ್ಲಿಂದಲೆ ಮಹಿಳೆಯರನ್ನು ಕಾಮದ ಕಣ್ಣಿಂದ ನೋಡಲು ಆರಂಭಿಸಿತು. ಅರ್ಥವಾದ ಮಹಿಳೆಯರಲ್ಲಿ ಅದನ್ನು ಒಪ್ಪುವವರು, ಅರೆಮನಸ್ಸುಳ್ಳವರು ಮತ್ತು ಒಪ್ಪದವರೆಂಬ ಮೂರು ವರ್ಗಗಳಿದ್ದವು. ಒಪ್ಪುವವರು ಸೀದಾ ಏಕಾಂತಕ್ಕೆ ಹೋದರು, ಅರೆಮನಸ್ಸುಳ್ಳವರು ಯಾವುದೋ ಸುಖಲೋಕದಲ್ಲಿ ವಿಹರಿಸುವ ಭಾವನೆಯಲ್ಲಿ ಹೋಗುವುದೊ ಬಿಡುವುದೊ ಎಂಬೆರಡನ್ನು ತಕ್ಕಡಿಯಲ್ಲಿಟ್ಟು ತೂಗುತ್ತಿದ್ದರು [ಇದರಲ್ಲಿ ಅಪವಾದವೆಂಬಂತೆ ಕಾಮದ ಒಲವಿಲ್ಲದ ಕೆಲವು ಭಕ್ತಬೋಳೆಗಳೂ ಸೇರಿಕೊಂಡಿದ್ದಾವೆ]; ಮಠದಯ್ಯ ಹಠದಿಂದ ಒಳಗೆ ಕರೆದು, ಮಂಪರು ಬರುವ ಪ್ರಸಾದ ತಿನ್ನಿಸಿ ಕಬ್ಜಾಕ್ಕೆ ತೆಗೆದುಕೊಂಡ! ಮೂರನೆಯ ವರ್ಗದವರು ಮಾತ್ರ ’ಸ್ವಾಮಿಯ’ ಕಾಮದ ಬಾವಲಿ ತಮ್ಮ ಅಂಗಾಂಗಗಳ ಮೇಲೆ ಕಣ್ಣಾಡಿಸುವುದನ್ನು ಕಂಡು ಮಠದ ಸಂಪರ್ಕದಿಂದ ದೂರವೇ ಉಳಿದರು.

ಶೀಲದ ವಿಷಯದಲ್ಲಿ ಯಾವ ಮಹಿಳೆಯೂ ತಾನು[ಹಾಗಿದ್ದರೂ] ಉಸಿರಿರುವವರೆಗೂ ಶೀಲಗೆಟ್ಟವಳು ಎಂದು ಒಪ್ಪಿಕೊಳ್ಳುವುದಿಲ್ಲ. ಮಠಕ್ಕೆ ಹೋದವರು ಶೀಲಗೆಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿದಾಗ ತಾವು ಶೀಲಗೆಟ್ಟವರಲ್ಲ ಎಂದು ಗಂಟಾಘೋಷವಾಗಿ ವಾದಿಸಿದವರಲ್ಲಿ ಹಲವುಜನ ಶೀಲಗೆಟ್ಟವರೆ ಇದ್ದರು! ಸತ್ಯಕ್ಕೆ ತಾನು ಸತ್ಯ ಎಂದು ಹೆಸರಿಸಿಕೊಳ್ಳುವ ಅಗತ್ಯವಿಲ್ಲ. ಸುಳ್ಳು, ಸತ್ಯವೆನ್ನಿಸೋದು ಹಾಗಲ್ಲ; ಅದು ಹುಲಿಯ ಚರ್ಮವನ್ನು ಹೊದ್ದ ಕತ್ತೆಯಂತೆ. ಹೊರನೋಟಕ್ಕೆ ಹೊಲದಲ್ಲಿ ಹುಲಿಯೆ ಎದ್ದು ಕಾಣುತ್ತದೆ! ಹುಲ್ಲು ತಿನ್ನುವುದರಿಂದ ಮತ್ತು ಕೂಗುವಿಕೆಯಿಂದ ಅದು ಹುಲಿಯಲ್ಲ ಕತ್ತೆ ಎಂದು ಗೊತ್ತಾಗಿಬಿಡುತ್ತದೆ!

’ಸ್ವಾಮಿಗಳು’ ಕಚ್ಚೆಹರುಕರು ಎಂದು ಯಾರಿಗೂ ಮೊದಲು ಗೊತ್ತಾಗಿರಲಿಲ್ಲ. ಒಂದು ದಶಕದ ಕಾಲ ಮಾಯಕದ ಮಾಟಗಾರನಂತೆ ಕಾಮಸಾಮ್ರಾಜ್ಯದ ಅನಭಿಷಿಕ್ತ ಅರಸನಾಗಿ ಮೆರೆದ ’ಮಹಾಸ್ವಾಮಿಗಳು’ ಒಂದು ದಿನ ಆರೋಪದಿಂದ ಸಿಕ್ಕಾಕಿಕೊಂಡರು. ಆದರೂ, ಸುತ್ತ ಇರುವ ಸಭ್ಯ ಗೃಹಸ್ಥರು, ಮಠಾಂಧ ಭಕ್ತರು ಸ್ವಾಮಿಗಳು ಕಚ್ಚೆಹರುಕರು ಎಂದು ಒಪ್ಪಿಕೊಳ್ಳಲು ಸಿದ್ಧರಾಗಲಿಲ್ಲ; ಮಠದ ಗೌರವ ಮತ್ತು ಪೀಠದಮೇಲಿನ ಶ್ರದ್ಧೆ ಅವರನ್ನೆಲ್ಲ ಕಟ್ಟಿಹಾಕಿತ್ತು.

ತನ್ನ ಕಚ್ಚೆಹರುಕುತನ ಬಯಲಾಗುತ್ತಿದ್ದಂತೆ ’ಸ್ವಾಮಿಗಳು’ ತಮ್ಮದೇ ಆದ ಟೀಮ್ ತಯಾರಿಸಿಕೊಂಡರು. ಸುರಕ್ಷಾ ಟೀಮ್ ಎಂದೂ ಅದೆಂತದೋ ಸೇನೆಗಳ ಹೆಸರನ್ನೆಲ್ಲ ಕೊಟ್ಟು ಅದರ ಸದಸ್ಯರನ್ನೆಲ್ಲ ಬಣ್ಣದ ಮಾತುಗಳಿಂದ ಬಣ್ಣಿಸಿದರು; ಶಾಲು ಹೊದೆಸಿ ಸನ್ಮಾನಿಸಿದರು. ಕೆಲವರಿಗೆ ಹಣ, ಕೆಲವರಿಗೆ ಹೆಣ್ಣು, ಕೆಲವರಿಗೆ ಹೆಂಡ, ಕೆಲವರಿಗೆ ಭೂಮಿ, ಕೆಲವರಿಗೆ ಬಂಗಾರ, ಕೆಲವರಿಗೆ ಉದ್ಯೋಗ, ಕೆಲವರಿಗೆ ಇಂಡಸ್ಟ್ರಿ ಮೊದಲಾದ ಆಮಿಷಗಳನ್ನೆಲ್ಲ ಮುಂದೊಡ್ಡಿದರು. “ನೀವು ಮಠವನ್ನು ರಕ್ಷಿಸಿ, ಮಠ ನಿಮ್ಮನ್ನು ರಕ್ಷಿಸುತ್ತದೆ” ಎಂದು ಹೇಳಿಕೆಕೊಟ್ಟು ಪರೋಕ್ಷ ಮಠವೆಂದರೆ ತಾನು, ತನ್ನನ್ನು ರಕ್ಷಿಸಿದರೆ ನೀವೆಲ್ಲ ಲಾಭ ಪಡೆಯುತ್ತೀರಿ ಎಂದು ಹೇಳಿದರು.

ಮಠದ ಫಲಾನುಭವಿಗಳಲ್ಲಿ ಬಹುಕೋಟಿ ಸುವರ್ಣಮಂತ್ರಾಕ್ಷತೆ ಪಡೆದವರು, ಕೋಟ್ಯಧಿಕ ಸಹಾಯ ಮತ್ತು ಲಕ್ಷಗಳಲ್ಲಿ ಸಹಾಯ ಪಡೆದವರಿದ್ದಾರೆ. ಮಠದ ಹೆಸರಿನಲ್ಲಿ ಸಂಗ್ರಹಿಸಿದ ಹಣದಲ್ಲಿ ಒಂದಷ್ಟು ತಾವಿಟ್ಟುಕೊಂಡು ಉಳಿದದ್ದನ್ನು ಮಠಕ್ಕೆ ಕೊಟ್ಟ ಕಂತ್ರಿಗಳೂ ಇದ್ದಾವೆ. ಶ್ರದ್ಧಾಳುಗಳಿಗೆಲ್ಲ ಬೋಳೆಣ್ಣೆ ಸವರಿ ಹೇಗೆ ಅವರಿಂದ ಹಣ ಪೀಕಬೇಕೆಂಬುದನ್ನು ಇವರೆಲ್ಲರೂ ಕರತಲಾಮಲಕ ಮಾಡಿಕೊಂಡಿದ್ದಾರೆ.

ನಮ್ಮ ಮನೆ, ತೋಟ ಎಲ್ಲ ನೀರಲ್ಲಿ ಮುಳುಗಿ ನಾವು ನಿರಾಶ್ರಿತರಾದಾಗ ನನಗಿನ್ನೂ ತೀರಾ ಎಳೆಯ ವಯಸ್ಸು. ಮನೆ ಹೇಗಿತ್ತು ನೋಡಿದ ನೆನಪಿಲ್ಲ, ತೋಟಕ್ಕೆ ಹೋಗಿದ್ದೆನೊ ಇಲ್ಲವೊ ಗೊತ್ತಿಲ್ಲ. ಒಂದಷ್ಟು ಸಾಮಗ್ರಿಗಳನ್ನು ಗಂಟುಮೂಟೆಕಟ್ಟಿಕೊಂಡು ನಮ್ಮನ್ನೆಲ್ಲ ಕರೆದುಕೊಂಡು ಅಪ್ಪ ಊರೂರು ದಾಟಿ ಸಾಗಿದರಂತೆ. ಅದೆಷ್ಟು ಕಷ್ಟವಾಯಿತೊ ಅವರು ಒಮ್ಮೆಯೂ ನನ್ನಲ್ಲಿ ಹೇಳಿಕೊಳ್ಳಲಿಲ್ಲ. ಕೇಳಿದರೆ ನೋವಾಗುತ್ತದೆ ಅಂತ ನಾನೂ ಕೆಣಕಲಿಲ್ಲ. ಮನೆ-ತೋಟ ಮುಳುಗದಂತೆ ಬಣ್ಣದ ಅಕ್ಕಿ ಒಗೆದು ರಾಂಗಾನುಗ್ರಹ ಪವಾಡ ನಡೆಸಬಲ್ಲ ’ಸ್ವಾಮಿಗಳು’ ಅಂದು ಇರಲಿಲ್ಲ. ಹೀಗಾಗಿ ನಾವು ಅಲೆಮಾರಿಗಳಂತೆ ಬದುಕಬೇಕಾಯಿತು. ಬಡತನದ ಬವಣೆಗಳ ಬಗ್ಗೆ ಮತ್ತೆ ಕೇಳಬೇಡಿ.

ಉಳ್ಳವರ ಮಕ್ಕಳು ಉಂಡುಟ್ಟು ಕೇಕೇ ಹಾಕುವಾಗ ನಾವು ಕೆಲವಷ್ಟು ದಿನ ಅರೆಹೊಟ್ಟೆ ಉಂಡಿದ್ದೂ ಉಂಟು, ಉಪವಾಸ ಬಿದ್ದಿದ್ದೂ ಉಂಟು; ಹಾಗಂತ ನನ್ನ ತಾಯಿಯೇ ನನ್ನಲ್ಲಿ ಹೇಳಿದ್ದಿದೆ. ಆ ಕ್ಷಣದಲ್ಲಿ ಯಾವ ಪರಿಹಾರವೂ ನಮಗಿರಲಿಲ್ಲ. ಕಷ್ಟಬಂದಾಗ ನೆಂಟರ ಬಾಗಿಲನ್ನು ಸೇರಬಾರದು ಎಂಬ ಕಾರಣಕ್ಕೆ ಅಪ್ಪ ಯಾರಲ್ಲಿಯೂ ಸಹಾಯ ಯಾಚಿಸಲಿಲ್ಲ. ಕೆಲವು ಸಮಯ ಕೃಷಿಕೂಲಿಯನ್ನು ಮಾಡಿ ದುಡಿದರು ಎಂಬುದು ನೆನಪಿದೆ. ಕಷ್ಟದಲ್ಲಿಯೆ ನನಗೊಂದಷ್ಟು ವಿದ್ಯೆ ಕೊಡಿಸಿದರು. ಬಡತನ ಕಲಿಸಿದ ಬದುಕಿನ ಪಾಠ ನನ್ನನ್ನು ಜೀವನಕ್ಕಾಗಿ ಅಮೆರಿಕೆಗೆ ಕರೆತಂದಿತು. ನಾನು ಇಲ್ಲಿದ್ದರೂ ಒಂದೇ ಒಂದು ದಿನ ಭಾರತೀಯ ಸಂಸ್ಕೃತಿಯನ್ನು ಮರೆಯಲಿಲ್ಲ. ಆಸ್ತಿಕತೆಯಲ್ಲೂ ನಿರಾಸಕ್ತನಾಗಲಿಲ್ಲ.

ವರ್ಷಗಳ ಕಾಲ ನನಗೆ ನಮ್ಮಲ್ಲಿನ ವಿದ್ಯಮಾನಗಳನ್ನು ಹಂಚಿಕೊಳ್ಳೋದಕ್ಕೆ ಸಹಕಾರಿಗಳಾದವರು ಕೆಲವರಿದ್ದಾರೆ. ಕವಳದ ಗೋಪಣ್ಣ ಅವರಲ್ಲಿ ಮೊದಲಿಗ. ಘಟ್ಟದ ತಳಗಿನ ಬೀಗರನ್ನು ಹೊಂದಿದ ಗುಮ್ಮಣ್ಣ ಹೆಗಡೇರು ಇನ್ನೊಬ್ಬರು ಮತ್ತು ಮತ್ತೊಬ್ಬರು ತಿಮ್ಮಪ್ಪನವರು. ಇನ್ನು ಕೆಲವು ಜನ ಇದ್ದಾರೆ ಆದರೆ ಅವರ ಹೆಸರುಗಳನ್ನೆಲ್ಲ ಬರೆಯುತ್ತ ಹೋದರೆ ಹೊಸ ವೋಟರ್ಸ್ ಲಿಸ್ಟ್ ತಯಾರಾಗಿಬಿಡುತ್ತದೆ. ಇದೇ ಮೂರುಜನ ಇಂದು ನಮ್ಮ ಪ್ರಮುಖ ವರದಿಗಾರರಾಗಿದ್ದಾರೆ. ಆಗಾಗ ಸ್ಕೈಪ್ ಮತ್ತು ವಾಟ್ಸಾಪ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಬಿಡುತ್ತಿರುತ್ತಾರೆ. ಸಾಮಾನು ಸ್ವಾಮಿಗಳು ಹೋದಲ್ಲೆಲ್ಲ ನಮ್ಮ ನೆಟ್‍ವರ್ಕ್ ಇದ್ದೆ ಇರುತ್ತದೆ. ಅವರ ಆಯಾ ದಿನದ ಗಂಟೆಗಂಟೆಗಳ ವರ್ತಮಾನ ನಮಗೆ ಸಿಗುತ್ತದೆ!

ಸುಸಂಸ್ಕೃತವಾಗಿದ್ದ ಒಂದು ಸಮಾಜವನ್ನು ಕೆಟ್ಟ ರಾಜಕೀಯದಿಂದ ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಸಾಮಾನುಸ್ವಾಮಿಗಳಿಗಿಂತ ಬೇರೆ ಉದಾಹರಣೆ ಬೇಕೆ? ಅಲ್ಲೊಂದು ಮಹಾಸಭೆಯಂತೆ. ಆ ಸಭೆಯನ್ನು ಕಟ್ಟಿದ ಪುಣ್ಯಾತ್ಮರ ಘನ ಉದ್ದೇಶಗಳೆ ಬೇರೆ, ಇಂದು ಕೋಟ್ಯಾವಧಿ ಹಡೆಯುವ ಜಾಗವನ್ನು ಬಹಳ ಹಿಂದೆಯೆ ದಾನಪತ್ರದ ಮೂಲಕ ವರ್ಗಾಯಿಸಿಕೊಟ್ಟ ಮಹಾತ್ಮ ಬೇರೆ. ಹಲವು ದಶಕಗಳ ಕಾಲ ಪೈಸೆ ಪೈಸೆ ಸೇರಿಸುತ್ತ ಸಭೆಯನ್ನು ಕಟ್ಟಿ ಬೆಳೆಸಿ ಇಂದು ವೃದ್ಧಾಪ್ಯಕ್ಕಿಳಿದ ಟೀಮ್ ಬೇರೆ; ಅವರಲ್ಲಿ ಹಲವರು ಕಾಲವಾಗಿದ್ದಾರೆ, ಕೆಲವರು ಮಾತ್ರ ಇದ್ದಾರೆ.

ಇತ್ತೀಚೆಗೆ ಸಾಮಾನುಸ್ವಾಮಿ ತನ್ನ ಫಲಾನುಭವಿ ಬಳಗವನ್ನು ಚುನಾವಣೆಗೆ ನಿಲ್ಲಿಸಿದ್ದ. ವೋಟಿಗೆ ಐದು ಸಾವಿರದಂತೆ ಹಂಚಿ, ಬಸ್ಸುಗಳನ್ನು ಬಿಡಿಸಿ, ಹಳ್ಳಿಮೂಲೆಗಳಿಂದ ಸದಸ್ಯರನ್ನು ಒತ್ತಾಯಪೂರ್ವಕವಾಗಿ ಅಪ್ಪಣೆ ಕೊಟ್ಟು ಕರೆಸಿದ್ದ. ಸುದೀರ್ಘ ಕಾಲ ಸಭೆಯನ್ನು ಮುನ್ನಡೆಸಿದವರಿಗೆ ಯಾವ ಬೆಲೆಯೂ ಇಲ್ಲವಾಯಿತು. ಸಾಮಾನುಸ್ವಾಮಿಯ ಬಳಗ ಅವರನ್ನೆಲ್ಲ ಇನ್ನಿಲ್ಲದಂತೆ ಟೀಕಿಸಿತು. ನಿಂದನೆ ಅಷ್ಟೊಂದು ಕಟುವಾಗಿ ಕೆಟ್ಟ ಬೈಗುಳಗಳಿಂದ ಕೂಡಿತ್ತೆಂದು ಗುಮ್ಮಣ್ಣ ಹೆಗಡೇರು ಹೇಳಿದ್ದಾರೆ. ಒಟ್ಟಿನಲ್ಲಿ ಸಭೆಯ ಅಧಿಕಾರವೂ ಪರೋಕ್ಷವಾಗಿ ಮಠದ ಸುಪರ್ದಿಗೆ ಹೋಯಿತು ಎನ್ನಬಹುದು.

ಸಾಮಾನುಸ್ವಾಮಿಗಳಿಗೆ ಬೇಕಾದವರಿಗೆಲ್ಲ ಪ್ರಶಸ್ತಿಗಳನ್ನೂ ನೀಡಲಾಯಿತು; ಇದು ಹೊಸದಲ್ಲ, ಮಠದಲ್ಲಿ ಸಾಮಾನುಸ್ವಾಮಿ ಹೆಚ್ಚಿಸಿದ ನಾಟಕಗಳಲ್ಲಿ ಇದೂ ಒಂದು. ಮಠವನ್ನು ಮತ್ತು ಮಠಾಧಿಪತಿಯನ್ನು ಹೊಗಳಿದರೆ, ಅವನ ಅಕ್ರಮ ಸಂಬಂಧಗಳನ್ನು ಸಕ್ರಮಗೊಳಿಸಿದರೆ, ಅವನು ಮಾಡಿದ್ದೆಲ್ಲ ಶಾಸ್ತ್ರೋಕ್ತ ಎಂದು ಹೇಳೋದಾದರೆ, ಹಾಗೆ ಹೇಳಿದವರಿಗೆಲ್ಲ ಪ್ರಶಸ್ತಿಯಿದೆ; ವಿತರಣೆಗೆ ನಾಲ್ಕುದಿನ ಹೆಚ್ಚುಕಡಿಮೆಯಾಗಬಹುದು, ಒಂದಲ್ಲ ಒಂದು ಪ್ರಶಸ್ತಿಯನ್ನು [ಹೊಸದಾಗಿ ಸೃಷ್ಟಿಸಿಯಾದರೂ] ಕೊಟ್ಟೇ ಕೊಡ್ತಾರೆ! ಹೊರಗಿನ ಜನತೆಯ ಕಣ್ಣೊರೆಸಲು ಸಮಾಜದ ಬೇರೆ ಮಠಗಳ ವಿದ್ವತ್ತುಳ್ಳ ಶಿಷ್ಯರಿಗೂ ಒಂದೆರಡು ಪ್ರಶಸ್ತಿ ಕೊಟ್ಟಂತೆ ನಾಟಕ ಆಡುತ್ತಾರೆ; ಹಾಗೆ ಪ್ರಶಸ್ತಿ ಪಡೆದುಕೊಂಡೋರು ತಮ್ಮ ವಿರುದ್ಧ ದನಿಯೆತ್ತಲಾರರು, ಹಂಗಿನಲ್ಲಿ ಬೀಳುತ್ತಾರೆ ಎಂಬ ದುರಾಲೋಚನೆ!

ದೇಶಕ್ಕಾಗಿ, ದೇಶದ ಸಂಸ್ಕೃತಿಗಾಗಿ ಜನ್ಮಪೂರ್ತಿ ದುಡಿದ ಜನರಿಗೆ ದೇಶವೆ ಉನ್ನತ ಪ್ರಶಸ್ತಿಯನ್ನು ಕೊಟ್ಟಿದ್ದರೂ ಸಮಾಜದ ಸಭೆಯ ಹಾಲಿ ಆಡಳಿತದವರಿಗೆ ಅವರು ಕಾಣುವುದಿಲ್ಲ; ಯಾಕೆಂದರೆ ಅವರು ಸಾಮಾನು ಸ್ವಾಮಿಗಳ ವೀರ್ಯದ ಗುರುತನ್ನು ಎತ್ತಿ ಹೇಳಿದ್ದಾರಲ್ಲ ಅದಕ್ಕೆ. ಸಮಾಜದಲ್ಲಿ ಇನ್ನೂ ಹಲವು ಮುಂಚೂಣಿಯ ಪ್ರತಿಭೆಗಳಿವೆ, ವಯೋವೃದ್ಧ ಶ್ರಮಜೀವಿ ಪ್ರತಿಭೆಗಳಿವೆ; ಅವರೆಲ್ಲ ಮಠಾಂಧರಾಗಲಿಲ್ಲ; ಸಾಮಾನುಸ್ವಾಮಿಯ ಬಾವಲಿ ಹಾರಾಟವನ್ನು ಅವರೆಲ್ಲ ಅರಿತುಕೊಂಡಿದ್ದಾರೆ. ಹೀಗಾಗಿ ಅವರೆಲ್ಲ ಸಾಮಾನುಸ್ವಾಮಿಯ ವಿರೋಧಿಗಳು, ಅದಕ್ಕಾಗಿ ಪ್ರತಿಭೆಯಿದ್ದರೂ ಈ ಜೀವಮಾನದಲ್ಲಿ ಸಭೆಗೆ ಇದೇ ಆಡಳಿತಮಂಡಳಿ ಇದ್ದರೆ ಅವರು ಸನ್ಮಾನಿತರಾಗೋದು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ, ಕಾಲಾನಂತರದಲ್ಲಿ ಸಭೆ ಎಂದರೆ ಜಗದ್ಗುರು ಶೋಭರಾಜಾಚಾರ್ಯ ಮಠ, ಜಗದ್ಗುರು ಶೋಭರಾಜಾಚಾರ್ಯ ಮಠ ಎಂದರೆ ಸಭೆ ಎಂಬಂತಾಗುತ್ತದೆ.

ಕ್ರಿಮಿನಲ್ ಸ್ವಾಮಿಯ ದಬ್ಬಾಳಿಕೆ ಇನ್ನೂ ನಿಂತಿಲ್ಲ. ಅವನ ಜನ ಅಲ್ಲಲ್ಲಿ ಗುಟುರುತ್ತಲೆ ಇರುತ್ತಾರೆ. ಹೀಗಾಗಿ ನನಗೂ ಬರಹ ನಿಲ್ಲಿಸೆಂದು ಫರ್ಮಾನು ಹೊರಡಿಸಿದ್ದಾರೆ; ನನ್ನ ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತುಕೊಳ್ಳಬಯಸಿದ್ದಾರೆ. ಬರಹಗಳನ್ನು ಆರಂಭಿಸುವಾಗ ನಾನು ಅವರಲ್ಲಿ ಕೇಳಲಿಲ್ಲ. ನಿಲ್ಲಿಸೋದಕ್ಕೆ ಅವರ ಸಲಹೆಯ ಅಗತ್ಯವಿಲ್ಲ; ಅಪ್ಪಣೆಯೋ ಫರ್ಮಾನೊ ನಾಟೋದಿಲ್ಲ. ಸಮಾಜದಲ್ಲಿ ಬಡವರ ಪೈಸೆಯ ಮಹತ್ವ ನನಗೆ ಚೆನ್ನಾಗಿ ಗೊತ್ತಿದೆ. ಇಂದಿಗೂ ಕೆಲವರು ಪೀಠಕ್ಕೆ, ಶಾಪಕ್ಕೆ ಹೆದರುತ್ತ ಮುದುರುತ್ತ ಕಷ್ಟದಿಂದ ಸಂಪಾದಿಸಿರುವ ಮನೆಯಲ್ಲಿರುವ ವಸ್ತುಗಳನ್ನೂ ಮಠಕ್ಕೆ ಕೊಡುತ್ತಿದ್ದಾರೆ; ಸದುಪಯೋಗಗೊಳ್ಳುತಿದ್ದರೆ ಏನೂ ಹೇಳುತ್ತಿರಲಿಲ್ಲ, ಈ ರೂಪದಲ್ಲಿ ಮತ್ತೆ ಕಚ್ಚೆಕೇಸುಗಳ ಖರ್ಚಿಗೆ ಧನಸಂಗ್ರಹಣೆ ನಡೀತಾ ಇದೆ.

ಬಾವಲಿ ಸ್ವಾಮಿಯ ಕತೆ ಮುಂದೊಂದು ದಿನ ಮಠದ ಇತಿಹಾಸದಲ್ಲಿ ಮಹಾಪುರುಷನಂತೆ ಬಿಂಬಿತವಾಗಬಹುದು. ಅದಕ್ಕೆ ಪೂರಕವಾಗಿ ರಾಂಗಾನುಗ್ರಹಗಳನ್ನು ಬರೆಸಲಾಗಿದೆ. ಡೂಂಗಾ ಜೋಯ್ಸರು ತಾಮ್ರಪತ್ರ ಬರೆದದ್ದು ಮಠಾಂಧರಿಗಷ್ಟೆ ಗೊತ್ತಿರದ ಗೋಪ್ಯ ವಿಷಯ!

ಎಣ್ಣೆಯ ದೀಪ ಆರುವಾಗ ಜೋರಾಗಿ ಉರಿಯುತ್ತದಂತೆ; ಈ ಮಾತು ವಿದ್ಯುದ್ದೀಪಕ್ಕೆ ಅನ್ವಯವಾಗದಿರಬಹುದು. ವಿದ್ಯುದ್ದೀಪವೂ ಸಹ ಆರುವವರೆಗೂ ಜೋರಾಗೇ ಉರಿಯುತ್ತದೆ; ಆದರೆ ಒಮ್ಮೆಲೆ ಆರಿಹೋಗುತ್ತದೆ. ಕಾಮಾಂಧನ ಕಬಂಧ ಬಾಹುಗಳಲ್ಲಿ ಸಿಲುಕಿ, ಬೆದರಿಕೆಗೆ, ದಬ್ಬಾಳಿಕೆಗೆ ಒಳಗಾಗಿ ಬದುಕುತ್ತಿರುವ ಸಜ್ಜನ ಸಮಾಜ ಬಾಂಧವರು ಇದಕ್ಕೆಲ್ಲ ಮೂಕ ಸಾಕ್ಷಿಗಳಾಗಿದ್ದಾರೆ. ’ಗೆದ್ದೇ ಗೆಲುವೆವು ಒಂದು ದಿನ ಗೆಲ್ಲಲೆಬೇಕು ಒಳ್ಳೆತನ’ ಎಂದುಕೊಳ್ಳುತ್ತ ದಿನದೂಡುತ್ತಿದ್ದಾರೆ.

Thumari Ramachandra
15/04/2017
source: https://www.facebook.com/groups/1499395003680065/permalink/1941747159444845/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s