ನಕಲೀ ರಾಮನಿಂದ ವಶೀಕರಣಕ್ಕೊಳಗಾದ ಮಿಥಿಲಾನಗರದ ’ಸೀತೆ’

ನಕಲೀ ರಾಮನಿಂದ ವಶೀಕರಣಕ್ಕೊಳಗಾದ ಮಿಥಿಲಾನಗರದ ’ಸೀತೆ’

ರಾಮಜನ್ಮ ದಿನದಂದು ಆದಿಕವಿಯ ಸಂಸ್ಕೃತದ ಮಹಾಕಾವ್ಯವನ್ನು ಹೇಳೋದು ಬಿಟ್ಟು ನಕಲಿರಾಮನ ಕತೆಯನ್ನು ಹೇಳಬೇಕಾಗಿ ಬಂದದ್ದು ಬಹಳ ವಿಷಾದನೀಯ; ಆದರೆ ಇದು ಇಂದು ನಿನ್ನೆಯದಲ್ಲ, ವರ್ಷಗಳಿಂದ ನಡೆದುಬಂದ ಕಥಾಸಾಗರದಲ್ಲಿ ಇದೂ ಒಂದಷ್ಟೆ. ಆದರೂ, ನಕಲೀರಾಮನನ್ನು ಹೇಳುವ ಮುನ್ನ ಅಸಲೀ ಶ್ರೀರಾಮನಲ್ಲಿ ವಂದಿಸಿ ಕ್ಷಮೆಯಾಚಿಸುತ್ತೇನೆ.

ವಾಮೇ ಭೂಮಿಸುತಾ ಪುರಶ್ಚ ಹನುಮಾನ್ ಪಶ್ಚಾತ್ ಸುಮಿತ್ರಾಸುತಃ
ಶತ್ರುಘ್ನೋ ಭರತಶ್ಚ ಪಾರ್ಶ್ವದಲಯೋರ್ವಾಯ್ವಾದಿಕೋಣೇಷು ಚ|
ಸುಗ್ರೀವಶ್ಚ ವಿಭೀಷಣಶ್ಚ ಯುವರಾಟ್ ತಾರಾಸುತೋ ಜಾಂಬವಾನ್
ಮಧ್ಯೇ ನೀಲಸರೋಜಕೋಮಲರುಚಿಂ ರಾಮಂ ಭಜೇ ಶ್ಯಾಮಲಮ್ ||

ಸುಶ್ರಾವ್ಯವಾಗಿ ಆ ಭಟ್ಟ ಹಾಡುತ್ತಿದ್ದರೆ ಸಭೆಯಲ್ಲಿ ಶಾಂತ ಸರೋವರದ ಮೇಲಿಂದ ಹಾದ ಸುಗಂಧಭರಿತ ತಂಗಾಳಿ ಸೋಕಿದ ಅನುಭವ ಶ್ರೋತೃಗಳ ಪಾಲಿನದ್ದಾಗುತ್ತಿತ್ತು; ಹಾಗೆ ಹಾಡನ್ನು ಹಾಡಿಸುತ್ತಿದ್ದ ಕಪಟಮುನಿಯ ಮನದಲ್ಲಿ ಅದೇ ಹೊತ್ತಿಗೆ ಯಾರ್ಯಾರನ್ನೋ ನೆನೆದು ಕಾಮದ ಅಲೆಗಳು ಭುಗಿಲೇಳುತ್ತಿದ್ದವು! ಅಯೋಧ್ಯೆಯ ಶ್ರೀರಾಮನೆಲ್ಲಿ ಮಠದ ಹುಳ ಈ ನಕಲೀರಾಮನೆಲ್ಲಿ! ಎತ್ತಣಿಂದೆತ್ತಣ ಸಂಬಂಧವಯ್ಯ? ಆದರೂ ನಕಲೀರಾಮನ ಅಂಧಾನಿಯಾಯಿಗಳಾದ ಮಠಾಂಧರು ಅವನನ್ನು ಅಸಲೀರಾಮನಿಗೆ ಹೋಲಿಸುವುದನ್ನು ನೋಡಿದಾಗ ಸಖೇದಾಶ್ಚರ್ಯವಾಗಿ ಕೋಪವುಕ್ಕಿಬರುವುದು ಸಹಜ.

ರಾಂಗೂಮಾಣಿಯ ಅಪ್ಪ ಶ್ರಾದ್ಧಭಟ್ಟ ಅಲಿಯಾಸ ಸ್ತ್ರೀನಿವಾಸ, ಮಗನ ಪ್ರಕರಣಗಳು ತಾರಕಕ್ಕೇರಿದ ತರುವಾಯ ಬಹಳಹಿಂದೆಯೇ, ಕಂಕಾಲವೈದ್ಯನ ತವರೂರ ಕಡೆಗೆ ಅನಂತವಾಡಿಯಲ್ಲಿ, ಜಟಾಜೂಟಧಾರಿಯಾಗಿ ವಲ್ಕಲಗಳನ್ನು ಹೊದ್ದು ಆಶ್ರಮವೊಂದನ್ನು ಸಿದ್ಧಪಡಿಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ತುಮರಿಗೆ ಸಿಕ್ಕಿತ್ತು ಮತ್ತು ಅದನ್ನು ಹೇಳಿಯೂ ಆಗಿತ್ತು.

ನಿಮಗೊಂದು ವಿಷಯ ಗೊತ್ತಿರಲಿ-ಇಡೀ ಭಾರತದಲ್ಲಿ ಅಥರ್ವಣ ವೇದದ ತಂತ್ರಭಾಗವನ್ನು ದುರುದ್ದೇಶಗಳಿಗಾಗಿ ಬಳಸಿಕೊಂಡು ವಾಮಾಚಾರಗಳನ್ನು ನಡೆಸುವುದಲ್ಲಿ ಉತ್ತರಪ್ರದೇಶ, ಪಶ್ಚಿಮಬಂಗಾಲ ಮತ್ತು ಕೇರಳರಾಜ್ಯಗಳಲ್ಲಿನ ಮಾಂತ್ರಿಕರು ಮಾತ್ರ ನಿಸ್ಸೀಮರು. ಅಂತಹ ರಾಜ್ಯಗಳಲ್ಲಿ ಕೇರಳದಲ್ಲಿ ಕಾರ್ಯಾನುವರ್ತಿಗಳಾಗಿರುವ ವಾಮಾಚಾರಿಗಳನ್ನು ಗೌಪ್ಯವಾಗಿ ಕರೆಸಿಕೊಂಡು ತನ್ನ ಉದ್ದೇಶಕ್ಕಾಗಿ ಬೇಕುಬೇಕಾದ ವಾಮಾಚಾರಗಳನ್ನು ಮಾಡಿಸೋದಕ್ಕಾಗಿ ’ಮಹಾಮುನಿ’ಗಳ ಅಪ್ಪ ಶ್ರಾದ್ಧಭಟ್ಟ ಅನಂತವಾಡಿಯಲ್ಲಿ ಠಿಕಾಣಿ ಹೂಡಿದ್ದು ಈಗಾಗಲೇ ಹಲವು ಕೋಟಿರೂಪಾಯಿಗಳನ್ನು ಅದಕ್ಕಾಗಿ ವಿನಿಯೋಗಿಸಲಾಗಿದೆ!

ಅಲ್ಲಿಂದ ಮಾಹಿತಿ ಬರುತ್ತಿದ್ದಂತೆಯೇ ಹನುಮಾನ ಚಾಲೀಸಾ ಹೇಳೋದು, ಕುಂಕುಮಾರ್ಚನೆ ಮಾಡಿಸೋದು, ಸೌಂದರ್ಯಲಹರಿಯ ಎಂಟನೇ ಶ್ಲೋಕ ಪಠಿಸೋದು ಮೊದಲಾದ ಸಾಮೂಹಿಕ ಧ್ಯಾನ ಮತ್ತು ಅರ್ಚನೆ ಕಾರ್ಯಕ್ರಮಗಳನ್ನು ಅಂಧಾನುಯಾಯಿಗಳಿಗೆ ಒತ್ತಾಯಪೂರ್ವಕವಾಗಿ ’ಅಪ್ಪಣೆ’ಮಾಡಲಾಗುತ್ತಿತ್ತು. ಸರ್ವಸಂಗ ಪರಿತ್ಯಾಗಿಯೆಂದ ಛದ್ಮವೇಷದ ’ಸನ್ಯಾಸಿ’ಗೆ ಸಾಗರದ ಕಡೆಯ ಮುದುಕನೊಬ್ಬ ಆಗಾಗ ಬಂದು ದೃಷ್ಟಿ ಬಳಿಯುತ್ತಿದ್ದ!!

’ಮಹಾಸ್ವಾಮಿಗಳು’ ಅಂಡುಸುಟ್ಟ ಬೆಕ್ಕಿನಂತೆ ಓಡಾಡಿ ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಸಂತವೇಷದ ಗಣವನ್ನು ಸೃಷ್ಟಿಸಿಕೊಳ್ಳೋದಕ್ಕೆ ಶತಾಯಗತಾಯ ಸುರುಹಚ್ಚಿಕೊಂಡು ತಾಟಿನಲ್ಲಿ ಫಲತಾಂಬೂಲ ಸಹಿತ’ಗೌರವ’ಕೊಟ್ಟೂ ಕೊಟ್ಟೂ ಸುಸ್ತಾದರೂ ನಿಜವಾದ ಸನ್ಯಾಸಿಗಳ ಬೆಂಬಲ ಸಿಕ್ಕೋದು ಅಷ್ಟರಲ್ಲೇ ಇದೆ; ರಾಜಕಾರಣಿಗಳು ಯಾವ ಸಮಯದಲ್ಲಾದರೂ ಪ್ಲೇಟ್ ಬದಲಾಯಿಸಬಹುದು ಯಾಕೆಂದರೆ ಅವರು ರಾಜಕಾರಣಿಗಳು! ಹೀಗಾಗಿ ಮುಂಬರುವ ಅಕ್ಟೋಬರಿನಲ್ಲಿ ಹೇಗೂ ಬಂಧನವೆಂದು ಜ್ಯೋತಿಷಿಯೊಬ್ಬ ನಾಷ್ಟ್ರೋಡಾಮಸ್ ರೀತಿ ಬರೆದಿಟ್ಟಿದ್ದಾನಂತೆ! ಅದನ್ನು ಅರಿತೋ ಅರಿಯದೆಯೋ ಜಗದ್ಗುರು ತೊನೆಯಪ್ಪ ಶೋಭರಾಜಾಚಾರ್ಯರು ಒಂದು ದಿನವೂ ನಿಂತಲ್ಲಿ ನಿಲ್ಲದೆ, ’ಮಹಾಮಂಡಲ’ದ ಅಧ್ಯಕ್ಷರನ್ನು ಬಗಲಲ್ಲೇ ಇಟ್ಟುಕೊಂಡು ಏಕಾಂತ ನಡೆಸುತ್ತಲೇ ಸಾಗುತ್ತಿದ್ದಾರೆ. “ಹೊಸತು ಗಾಳಕ್ಕೆ ಬಿದ್ದರೆ ವಾಕೆ; ಬೀಳದಿದ್ದರೆ ನೀನಿದೀಯಲ್ಲ ಸಾಕೆ” ಎಂದು ಹೇಳಿದ್ದಾರಂತೆ ಕಿವಿಯಲ್ಲಿ.

ಮಹಿಳೆಯರನ್ನು ತೆಕ್ಕೆಗೆ ಸೆಳೆದುಕೊಂಡು ಕಿವಿಯಲ್ಲಿ ಉಸುರಿದ ರಹಸ್ಯಗಳು ಅದಿನ್ನೆಷ್ಟೋ ಗೊತ್ತಿಲ್ಲ. ಆದರೆ ಸೌಮ್ಯವಾಗಿ ಕಾಲಮೇಲೆಳೆದುಕೊಂಡು ಲೊಚಕ್ಕನೆ ಮುತ್ತಿಕ್ಕಿದ ಮರುದಿನವೇ ಸುಂದರಿಯೊಬ್ಬಳು ಸೌಮ್ಯವಾಗಿ ದೂಡಿಹೋದಳು ಮತ್ತಿನ್ನೆಂದೂ ಮುಖಹಾಕಲಿಲ್ಲ. ನಯವಾಗಿ ಬರಸೆಳೆದು ತಾಗಿಸಿದ್ದ ಅನುಭವವನ್ನು ಹೊಂದಿದ್ದ ಮಿಥಿಲೆಯ ’ಸೀತೆ’ಗೆ ಅದೇ ನೆನಪು ಕಾಡುತ್ತಿತ್ತೋ ಗೊತ್ತಿಲ್ಲ. ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆಯಬೇಕೆಂದುಕೊಂಡು ಮಠ ಹೊಕ್ಕಿದ್ದ ಸೀಮೆಯ ಶಿಷ್ಯೆಯವಳು; ಅಮ್ಮನಂತೆ ತೋರಿಕೆಯ ಆಧ್ಯಾತ್ಮದ ಗೀಳು. ಅಮ್ಮನಿಗೂ ಮಗಳಿಗೂ ಏಕಾಕಾಲಕ್ಕೆ ಅನೇಕವನ್ನು ತೋರಿದ ಕಾವೀಧಾರಿ ತೊನೆಯಪ್ಪ ಅವರೀರ್ವರ ಅಪ್ಪುಗೆಯಲ್ಲೆ ಬುಲ್ ಪೀನದಲ್ಲಿ ವೀರ್ಯವಿಸರ್ಜನೆ ಮಾಡಿಕೊಂಡಿರಬಹುದು!

ಮಿಥಿಲಾನಗರದ ಆ ’ಸೀತೆ’ ಮಠಬಿಟ್ಟು ಮದುವೆಯಾಗಿ ಸಂಸಾರಿಯಾಗೋದಕ್ಕೆ ಬಹಳಕಾಲ ಮುಂಚೆಯೇ ಅಮ್ಮ-ಮಕ್ಕಳು ಮಠಕ್ಕೆ ಹೋಗೋದು ಬಿಟ್ಟರು, ಮನೆಯಲ್ಲಿದ್ದ ರಾಂಗೂಮಾಣಿಯ ಫೋಟೋಗಳನ್ನು ಸುಟ್ಟರು, ಊರು ಟೂರುಗಳಲ್ಲಿ ಸಿಕ್ಕಸಿಕ್ಕವರ ಕೈಲಿ ವೀರ್ಯಪ್ಪನ್ ಸಾಮ್ಗಳಿಗೆ ವಾಚಾಮಗೋಚರವಾಗಿ ಬೈದರು, ಬೈಯುತ್ತಿದ್ದರು. ಈ ನಡುವೆ ಗಂಡಬಿಟ್ಟ ನಾರಿಯಂತಾದ ನಕಲೀ ಸೀತೆ ಉದರಂಭರಣಕ್ಕಾಗಿ ಯಾವುದೋ ಕೆಲಸ ಮಾಡಿಕೊಂಡಿದ್ದಳು.

ಇತ್ತ ನಕಲೀರಾಮನ ಮಂಗನಾಗೋ ಯಾತ್ರೆಗಳು ಮತ್ತು ಇನ್ನಿತರ ಹಲವು ಚಿಲ್ಲರೆ ಯಾತ್ರೆಗಳು ತಿರುಗಾಟ ಎಲ್ಲವುಗಳನ್ನು ಅಲ್ಲಿಂದಲೇ ಮಾಧ್ಯಮಗಳಲ್ಲಿ ನೋಡುತ್ತಿದ್ದಳು. ಇದ್ದಕ್ಕಿದ್ದಂತೆ ಬುದ್ಧನಿಗೆ ಜ್ಞಾನೋದಯವಾಯಿತಲ್ಲ ಹಾಗೆ ಕೆಲವು ವಾರಗಳ ಹಿಂದೆ ಮಿಥಿಲಾನಗರದ ನಕಲೀ ಸೀತೆಗೆ ವೀರ್ಯಪ್ಪನ್ ಸಾಮ್ಗಳ ಕುರಿತು ಜ್ಞಾನೋದಯವಾಯಿತು[ಕಾಮೋದಯವಾಯಿತು ಎಂದರೂ ತಪ್ಪಲ್ಲ.] ಅಲ್ಲಿಂದೀಚೆಗೆ ನಡೆದ ಬೆಳವಣಿಗೆಗಳಲ್ಲಿ, ನಾಲ್ಕಾರು ವರ್ಷಗಳ ಹಿಂದೆ ನಕಲೀರಾಮನ ಸಾಮಾನುತಾಗಿ ಬೆಚ್ಚಿಬಿದ್ದು ಮಠಕ್ಕೆ ಹೋಗುವುದನ್ನೆ ಬಿಟ್ಟಿದ್ದ ಅಮ್ಮ-ಮಕ್ಕಳು ಮತ್ತೆ ನಕಲೀರಾಮನನ್ನು ಹುಡುಕಿ ಸೇರಿಕೊಂಡಿದ್ದಾರೆ! ಅಂದರೆ ನಕಲೀರಾಮ ನಡೆಸುತ್ತಿರುವ ವಾಮಾಚಾರದ ವಶೀಕರಣ ವಿದ್ಯೆಯ ಪ್ರಭಾವ ಎಷ್ಟರಮಟ್ಟಿಗೆ ಇದ್ದಿರಬಹುದು ಎಂದು ನೀವೇ ಊಹಿಸಿ. ಯಾವ ಹುತ್ತದಲ್ಲಿ ಯಾವ ಹಾವಿದೆಯೆಂದು ಯಾರೂ ಊಹಿಸಲು ಸಾಧ್ಯವಿಲ್ಲ; ಕವಿಗಳಂತೆ ಸದಾನಂದವಾಗಿರುವವರು ತಮ್ಮ ಆನಂದ ಕೆಡದಂತೆ ಜಾಗ್ರತರಾಗಿರಿ.

ಕಂಡಾಗ ಕಣ್ಣಲ್ಲೇ ಕಾಮಿಸಿ, ಕಣ್ಣಲ್ಲೇ ಭೋಗಿಸಬಲ್ಲ ಘನಕಾಮಿ ರಾಂಗೂಮಾಣಿಯ ಏಕಾಂತದ ಅಖಾಡಾಕ್ಕೆ ತಾವಾಗಿಯೆ ಕೆಲವರು ಮರಳಿಬಂದು ಬೀಳುತ್ತಾರೆಂಬುದು ಸುಳ್ಳಲ್ಲ; ಕಾಮದ ತೆವಲು ಒಂದೆಡೆಯಾದರೆ, ಮಠದ ಬಿಟ್ಟಿಕೂಳು, ರೊಕ್ಕದ ಆಸೆ ಎಲ್ಲವೂ ಮೇಳೈಸಿರುವುದು ಸುಳ್ಳಲ್ಲ. “ನಮ್ಮ ಸಂಸ್ಥಾನ” “ನಮ್ಮ ಸಂಸ್ಥಾನ” ಅಂತ ಸಾಮ್ಗಳ ಹಿಂದೆ ಮುಂದೆ ಬೆಕ್ಕಿನಂತೆ ಹೊಸೆಯುತ್ತ ತಿರುಗುತ್ತಿದ್ದರೆ ಉದ್ರೇಕಗೊಳ್ಳುವ ಸಾಮ್ಗಳಿಂದ ತಕ್ಷಣದಲ್ಲೆ ಕೈಕೇಯಿ ದಶರಥನಲ್ಲಿ ವರ ಪಡೆದಂತೆ ಕೆಲವನ್ನು ಕೇಳಿಪಡೆಯುತ್ತಾರೆ; ಅಷ್ಟರಲ್ಲೆ ಸಾಮಾನು ನಿಯಂತ್ರಣ ತಪ್ಪಿ ಎತ್ತರಕ್ಕೆ ಎತ್ತರಕ್ಕೆ ಹಾರುತ್ತಿರೋದರಿಂದ ಸಾಮ್ಗಳು ಕೇಳಿದ್ದಕ್ಕೆಲ್ಲ ತಥಾಸ್ತು ಅಂದುಬಿಡ್ತಾರೆ. ಮತ್ತೊಮ್ಮೆ ಏಕಾಂತ ನಡೆಸೋ ಮುನ್ನ ಹಿಂದಿನ ವರಗಳು ಫಲಿಸುವಂತೆ ಪಕ್ಕಾ ಮಾಡಿಕೊಳ್ಳುವ ಮಹಿಳಾಮಣಿಗಳಿದ್ದಾವೆ. ಪ್ರಾಯಶಃ ಅಂಥದ್ದೇ ದುರಾಲೋಚನೆಯಿಂದ ಮಿಥಿಲಾನಗರದ ನಕಲೀ ಸೀತೆ ಮತ್ತವಳ ತಾಯಿ ಮಠವನ್ನು ಮತ್ತೆ ಸೇರಿಕೊಂಡಿರಬಹುದು.

ಜನಸಾಮಾನ್ಯರು ಉಪವಾಸ ಮಾಡಬೇಕು, ದಾನಮಾಡಬೇಕು ಎಂದೆಲ್ಲ ಬೊಗಳುವ ಈ ಬಿಕನಾಸಿಯ ಕಾರ್ಯಕ್ರಮಗಳ ವೇದಿಕೆಗಳ ತಯಾರಿಗೆ ಮತ್ತು ಮುದ್ರಿತ ಬಹುವರ್ಣದ ಕರಪತ್ರಗಳ ತಯಾರಿಗೆ ತಗಲುವ ವೆಚ್ಚಗಳೆಷ್ಟು ಗೊತ್ತೇ? ನಿರಾಡಂಬರವಾಗಿಸಿ ಎನ್ನುವ ’ಸರ್ವಸಂಗ ಪರಿತ್ಯಾಗಿ’ಯಾದ ತೊನೆಯಪ್ಪನಿಗೆ ಮಾತ್ರ ಆ ನೀತಿ ಅನ್ವಯವಾಗೋದಿಲ್ಲ ಅಲ್ಲವೇ? ಅವನು ಸತತ ಒಂದು ವರ್ಷ ಎಲ್ಲಾಕಡೆಗೂ ಕಾಲ್ನಡಿಗೆಯಲ್ಲೇ ಪ್ರಯಾಣಿಸಲಿ, ಐಶಾರಾಮಿ ವಾಹನಗಳು, ವಿಮಾನಯಾನಗಳು ಎಲ್ಲವನ್ನೂ ನಿಲ್ಲಿಸಲಿ ನೋಡೋಣ. ಅಂದಹಾಗೆ ಈ ನಕಲೀರಾಮ ದೋರೆಕತೆಯ ಮರುದಿನ ದೀವಿಗೆ ಹಚ್ಚುವ ಸ್ವಾಮಿಗಳಿಗೆ ಕೊಟ್ಟ ಬಿಲ್ ನಲ್ಲಿ ಅಂತರ್ಜಾಲಾದಿ ವ್ಯವಹಾರಗಳಿಗೆ ಹದಿನೈದು ಲಕ್ಷ ಎಂದು ನಮೂದಿಸಿದ್ದ! ಅಂದರೆ ಅವನ ದೈನಂದಿನ ಸಂಪರ್ಕ ವ್ಯವಹಾರಾದಿಗಳ ಖರ್ಚು ಎಷ್ಟಿರಬಹುದು? ಅದು ಅವನ ಹಾದರದಿಂದ ಹುಟ್ಟುವ ಉತ್ಪನ್ನವೇ? ಅಲ್ಲ ಹಾಗಾದರೆ ಅದೆಲ್ಲ ಎಲ್ಲಿಂದ ಬರ್ತದೆ? ಭಕ್ತರಿಂದಲ್ಲವೇ?

ತನ್ನ ನಿತ್ಯ ಜೀವನದಲ್ಲಿ ಯಾವುದನ್ನೂ ಬದಲಿಸಲಾಗದ ’ಸನ್ಯಾಸಿ’ವೇಷಧಾರಿಗೆ ಇತರರಿಗೆ ಆ ಕುರಿತು ಹೇಳುವ ಅಧಿಕಾರ ಇದೆಯೇ? ಇಲ್ಲ. ಆದರೂ ಮಾಧ್ಯಮಗಳಲ್ಲಿ ಏನಾದ್ರೂ ಹೇಳಿಕೆ ಕೊಡುತ್ತ ಮಿಂಚುತ್ತಿರಬೇಕು ಎಂಬ ಕೆಟ್ಟ ಧೋರಣೆಯಿಂದ ಶಾಂಕರ ಸನ್ಯಾಸಿಯ ಬಾಯಲ್ಲಿ ಬರಬಾರದ ಮಾತುಗಳನ್ನೆಲ್ಲ ಬೊಗಳುತ್ತಾನೆ; ತೂಕವಿಲ್ಲದ ಅಸಹ್ಯಕರ ಮಾತುಗಳು.

ಮಠದೊಳಗೆ ರಾಮನ ಲೆಕ್ಕ ಇದ್ದಷ್ಟನ್ನು ತೋರಿಸಿ, ಅವರಿಗೆ ಬೇಕಾದಷ್ಟು ಹಣಕೊಟ್ಟು ಅದೆಂಥದೋ ಅಂತೋನಿಯ ಕಂಪನಿ ಕೊಡುವ ಸರ್ಟಿಫಿಕೇಟು ಪಡೆದುಕೊಂಡ. ಪಾಪ ವಿದೇಶದ ಅಂತೋನಿಯ ಕಂಪನಿಗೆ ಸ್ವದೇಶದ ಮಂಚದ ಕೆಳಗಿನ ವ್ಯವಹಾರ ಗೊತ್ತಾಗಲಿಲ್ಲ, ಏಕಾಂತದ ಕೋಣೆಗೆ ಪ್ರವೇಶವಿರಲಿಲ್ಲ, ಹಲವು ಕೋಣೆಗಳನ್ನು ಅವರು ನೋಡಲೇ ಇಲ್ಲ! ಪರಿಶೀಲನೆಗೆ ಬಂದೋರು ಕೂರೋದು ಕಚೇರಿಯ ಕಾಗದಪತ್ರಗಳ ಮುಂದೆ ಮಾತ್ರ’; ಕಾಗದಪತ್ರಗಳಲ್ಲಿ ನಮೂದಿಸಿದ ಮಾಹಿತಿಗಳಂತೆ ಎಲ್ಲವೂ ಕ್ಲೀಯರ್ ಇದೆ ಎಂದುಬಿಟ್ಟರು ಪಾಪ; ನಮೂದನೆಗೆ ಒಳಪಡದ ಇನ್ನೆಷ್ಟೋ ಆದಾಯ ಮೂಲಗಳು ಮತ್ತು ಸಂಪತ್ತು-ಆಸ್ತಿಗಳು ಇದ್ದಾವೆ ಎನ್ನೋದು ಬಂದವರಿಗೆ ಗೊತ್ತಾಗಲಿಲ್ಲ. ಹೇಗೂ ಹಣಪಡೆದು ಕೊಡುವ ಕೆಲಸ; ಯಾರಾದರೂ ಕೇಳಿದರೆ ಸಾರಿಸಿ ಮುಚ್ಚಿದ್ದೇವೆ ಎಂದು ತೋರಿಸಲಿಕ್ಕೆ ಬೇಕಾಗಿ ಪರಿಶೀಲಿಸಿದಂತೆ ನಾಟಕವಾಡ್ತಾರೆ.

ಮಠದೊಳಗಿನ ಕೃಷ್ಣನ ಲೆಕ್ಕದಲ್ಲಿ ಛದ್ಮವೇಷಧಾರಿಯ ಅಷ್ಟೂ ರಂಗೀಲಾ ಕತೆಗಳ ವೆಚ್ಚ ನಿಭಾಯಿಸಲ್ಪಡುತ್ತದೆ ಮತ್ತು ಬೇಕಾದವರಿಗೆ, ಅನುಕೂಲಕ್ಕಾಗಿಯೇ ಇರುವವರಿಗೆ ಎಲ್ಲರಿಗೂ ಅಲ್ಲಿಂದಲೇ ನೀಡಲ್ಪಡುತ್ತದೆ ಅನ್ನೋದು ಅನೇಕರಿಗೆ ಇನ್ನೂ ತಿಳಿದಿಲ್ಲ! ಹಾಗಾಗಿಯೇ ಪೆದ್ದ ಬುದ್ದಿವಂತರನೇಕರು ಬಹಳಕಾಲ ಮಠದಲ್ಲೆ ಭಜನೆ ಮಾಡುತ್ತಿದ್ದರು; ಅಂಥವರಲ್ಲಿ ಕೆಲವರ ಮಹಿಳೆಯರು ಸಾಮಾನು ಸ್ವಾಮಿಯ ಸಾಮಾನುಸೇವೆಯಲ್ಲಿ ನಿರತರಾಗುತ್ತಿದ್ದರು!

ಸಾಮಾನುಸ್ವಾಮಿಯ ಸಂತಾನ ಭಾಗ್ಯ ಆರಂಭವಾಗಿ ಪಂಚದಶವರ್ಷಗಳೆ ಕಳೆದಿವೆ! ತುಮರಿಗೆ ಸಿಕ್ಕ ಲೆಕ್ಕದ ಪ್ರಕಾರ ಕನಿಷ್ಠ ಹತ್ತು ಮಕ್ಕಳಿದ್ದಾವೆ! ಕದ್ದಹಣ್ಣನ್ನು ತಿನ್ನೋ ಕಳ್ಳಖುಷಿ ಕೆಲವರಿಗೆ ಒಂದು ಖಯಾಲಿ, ಅದರಂತೆ ಪರಸ್ತ್ರೀಯರನ್ನು ಬಸಿರುಮಾಡಿ ಅವರ ಮಕ್ಕಳಿಗೆ ಅಪ್ಪ ಎನಿಸಿಕೊಳ್ಳೋದು ಕೂಡ ಒಂದು ನಮೂನೆಯ ಖಯಾಲಿ! ಪಾಪ ಆ ಮಕ್ಕಳಿಗೆಲ್ಲ ಹೆಸರಿಗೆ ಬೇರೆ ಅಪ್ಪ, ಅಸಲಿಗೆ ಅಪ್ಪ ಮಠದ ತೊನೆಯಪ್ಪ!! ಎರಡು ಹೋರಿಗಳು ಒಂದೇ ದಿನ ಹಾರಿದರೆ ಮರಿ ಯಾವುದರದ್ದು ಎಂಬ ಸಂದೇಹ ಹುಟ್ಟಿಕೊಳ್ಳೋದು ಸಹಜ; ತಮ್ಮ ಮಕ್ಕಳ ನಿಜವಾದ ಅಪ್ಪ ಯಾರು ಎಂದು ಅರ್ಥವಾಗದ ಅತಂತ್ರ ಸ್ಥಿತಿಯಲ್ಲಿ ಇರುವ ಮಹಿಳೆಯರೂ ಕೆಲವರಿದ್ದಾರೆ! ಅಂತೂ ವೀರ್ಯಪ್ಪನ್ ಸಾಮ್ಗಳು ಸಮರ್ಥ ಪುರುಷ ಎಂದಿದ್ದೂ ಸಾರ್ಥಕಬಿಡಿ; ಸಮರ್ಥ ವಿಟಪುರುಷ ಎಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅಂತಾರೆ ಗುಮ್ಮಣ್ಣ ಹೆಗಡೇರು.

ಅಂದಹಾಗೆ ತಿಂಗಳ ಉತ್ತರಾರ್ಧದಲ್ಲಿ ಬಸ್ಸಣ್ಣನ ಹವನ ವ್ಯಜನಗಳು ಏರ್ಪಟ್ಟಿವೆಯಂತೆ. ಒಂದು ಕಿ.ಮೀ ಶೋಭಾಯಾತ್ರೆ ತೆಗೆದು ವೀರ್ಯಪ್ಪನ್ ಸಾಮ್ಗಳನ್ನು ಪೂರ್ಣಕುಂಭದ ಮಹಿಳೆಯರನ್ನು ಮುಂದೆ ನಿಲ್ಲಿಸಿ ಸ್ವಾಗತಗೈದು ಕರೆತಂದು ಭಯಂಕರ ಹೋಮ ಹವನಾದಿಗಳನ್ನು ನಡೆಸುತ್ತಾನಂತೆ. ಪ್ರತೀವರ್ಷವೂ ಬಸ್ಸಣ್ಣ, ಕಜ್ಜಿವೈದ್ಯ ಇವರೆಲ್ಲ ವಿಶೇಷ ಸೇವೆ ಮಾಡ್ತಾರೆ ವೀರ್ಯಪ್ಪನ್ ಸಾಮ್ಗಳಿಗೆ; ಯಾಕೆಂದರೆ ಅವರೆಲ್ಲ ಬಹುಕೋಟಿಗಳಲ್ಲಿ ಸುವರ್ಣ ಮಂತ್ರಾಕ್ಷತೆ ಪಡೆದಿದ್ದು ಈಗ ಎಲ್ಲರಿಗೂ ಗೊತ್ತಾಗಿಟ್ಟಿದೆಯಾದರೂ ಹೊರಗೆ ಹಾಗೆ ಹೇಳಲು ಸಾಧ್ಯವೇ?

ಸಮಾಜದ ಭಕ್ತರನ್ನು ಮೇಲಿಂದ ಕೆಳವರೆಗೆ ಒಂದೇ ಒಂದು ಕೂದಲು ಬಿಡದಂತೆ ವರ್ಷವಿಡೀ ಹೆರೆಯುವ ಈ ಕಳ್ಳ ಸನ್ಯಾಸಿ ಸಂಗ್ರಹಿಸಿದ ಹಣದಲ್ಲ್ಲಿ ಅದೆಷ್ಟುಕೋಟಿಗಳನ್ನು ದುಂದುವೆಚ್ಚ ಮಾಡಿಲ್ಲ? ಅದೆಷ್ಟು ಕೋಟಿಗಳನ್ನು ಕಚ್ಚೆಕೇಸುಗಳಿಗೆ ವ್ಯಯಮಾಡಿಲ್ಲ? ಇರುಳು ಕಂಡ ಬಾವಿಗೆ ಹಗಲಿನಲ್ಲಿ ಬಿದ್ದಂತೆ ಮಠದ ತೊನೆಯಪ್ಪನ ಅವ್ಯವಹಾರಗಳು ಗೊತ್ತಿದ್ದೂ ದೀಪಕಾಣಿಕೆ, ಆ ಕಾಣಿಕೆ ಈ ಕಾಣಿಕೆ ಅಂತ ಇನ್ನೂ ಕೊಡ್ತಾ ಇದ್ದಾರಲ್ಲ ಜನ ಹಾಗೆ ಕೊಡುತ್ತಲೇ ಇರುವಂತೆ ಮತ್ತು ಅಂಜಿಕೆಯಿಂದ ಜೈಕಾರ ಹಾಕುತ್ತಲೇ ಇರುವಂತೆ ತೊನೆಯಪ್ಪನ ಅಪ್ಪ ಶ್ರಾದ್ಧ ಸ್ತ್ರೀನಿವಾಸ ಭಟ್ಟ ಸಮೂಹಸನ್ನಿಯಾಗುವಂತೆ ವಾಮಾಚಾರ ನಡೆಸುತ್ತಲೇ ಇದ್ದಾನೆ.

ವಿಪರೀತ ಜ್ವರ ಏರಿದಾಗ ಪ್ಯರಾಸಿಟಾಮಾಲ್ ಮಾತ್ರೆ ತೆಗೆದುಕೊಂಡಿದ್ದು ಆರುಗಂಟೆ ಮುಗಿಯುತ್ತಿದ್ದಂತೆ ಮತ್ತೊಂದನ್ನು ನುಂಗುವಂತೆ ವಾಮಾಚಾರದ ಹೋಮಗಳು ನಡೆಯುತ್ತಲೇ ಇವೆ! ಪ್ಯಾರಾಸಿಟಾಮಾಲ್ ಮಾತ್ರೆ ಜ್ವರವನ್ನು ಆ ಕ್ಷಣಕ್ಕೆ ತಡೆಯಬಲ್ಲುದೇ ವಿನಃ ಜ್ವರದ ಮೂಲಕಾರಣಗಳಿಗೆ ಔಷಧವಾಗಲಾರದಲ್ಲ ಹಾಗೆ ವಾಮಾಚಾರದ ಹೋಮಗಳ ಫಲಗಳು ಕ್ಷಣಿಕವಾಗಿ ತೊನೆಯಪ್ಪನಿಗೆ ಬಲವನ್ನೋ ಗೆಲುವನ್ನೋ ಕೊಡಬಹುದು; ಕಾಲ ಸರಿದಾಗ ಮೂಲಕಾರಣಗಳು ಮತ್ತೆ ಕಾಣಿಸಿಕೊಂಡು ಉಲ್ಬಣಿಸಿ ಆಪೋಷನ ತೆಗೆದುಕೊಳ್ಳೋದರಲ್ಲಿ ಅನುಮಾನವಿಲ್ಲ.

ಜೈಲಿನಲ್ಲಿ ಕುಳಿತು ಹಲುಬತೊಡಗುವ ಬಿಕನಾಸಿ ಮುಂದಿನವರ್ಷದ ಈ ದಿನಗಳಲ್ಲಿ ಬಸ್ಸಣ್ಣ, ಕಜ್ಜಿವೈದ್ಯ ಮೊದಲಾದವರನ್ನೆಲ್ಲ ಕಂಡರೆ ಕೆಂಡ ಉಗುಳಿದಂತೆ ನಡೆದುಕೊಳ್ಳಬಹುದು; ಯಾಕೆಂದರೆ ಕೃಷ್ಣನ ಲೆಕ್ಕದಲ್ಲಿ ಪಾಲುಪಡೆದ ಆ ’ಸಾಮಾಜಿಕ ಮುಖಂಡರು’ ಮರುಪಾವತಿ ಮಾಡಲಾರರು! ಕೊಟ್ಟಿದ್ದಕ್ಕೆ ಪಕ್ಕಾ ದಾಖಲೆಯಿಲ್ಲದ್ದರಿಂದ ಕೊಟ್ಟ ಹಣ ಮರಳಿ ಬರಲಿಲ್ಲವೆಂದು ವೀರ್ಯಪ್ಪನ್ ಸಾಮ್ಗಳು ತಮ್ಮನ್ನು ಇಟ್ಟಿರುವ ಅಗ್ರಹಾರದ ಕೋಣೆಯಲ್ಲೆ ಆ ಮೂಲೆಯಿಂದ ಈ ಮೂಲೆಗೆ ತೊನೆಯುತ್ತ ಶಪಿಸುತ್ತ ತಿರುಗಾಡಬಹುದು!

ಮುಂಡೆ ಮದುವೇಲಿ ಉಂಡೋನೆ ಜಾಣ ಅನ್ನೋ ಹಾಗೆ ಬಸ್ಸಣ್ಣ ಮತ್ತು ಕಜ್ಜಿವೈದ್ಯರಂತಹ ಕೆಲವು ಪರಮ ಸ್ವಾರ್ಥಿಗಳು ಬಹುಕೋಟಿಗಳನ್ನು ಹೊಡೆದುಕೊಂಡರು! ಕೆಲವರು ಮನೆಕಟ್ಟಿದರು, ಕೆಲವರು ಸೈಟು ಖರೀದಿಸಿದರು, ಕೆಲವರು ಮೈತುಂಬ ಬಂಗಾರದ ಕಡಗಗಳನ್ನು ಮಾಡಿಸಿಕೊಂಡರು, ಎಷ್ಟೋ ಜನ ತಮ್ಮ ಬರ್ಕಾಸ್ತುಬಿದ್ದಿದ್ದ ಬ್ಯಾಂಕ್ ಖಾತೆಗಳನ್ನು ಭರ್ತಿ ಮಾಡಿಕೊಂಡರು.

ಮಠದಲ್ಲಿ ಹುಟ್ಟಿ ಬೆಳೆವ ಮಕ್ಕಳಿಗೆಲ್ಲ ಸಂ
ಪುಟದಲ್ಲೆ ’ಸಾಮಗ್ರಿ’ ಒದಗಿಸುವರಾರು
ವಿಟಪುರುಷ ನಕಲಿ ರಾಮನ ನೆನೆವ ಹೆಂಗಳಿಗೆ
ಚಟದೊಡೆಯ ಕದ್ದ ಹಣ ಕರುಣಿಸುವ ನೋಡ

ವರ್ಷದ ಹಿಂದೆ ಶಿಖರ ನಗರದಲ್ಲಿ ಮಠದ ಹತ್ತಿರದ ಮನೆಯೊಂದರಲ್ಲಿ ಗಂಡುಮಗುವೊಂದು ಹುಟ್ಟಿತು! ನವಮಾಸಗಳವರೆಗೆ ತೊನೆಯಪ್ಪ ದೇವರ ಪ್ರಸಾದವೆನ್ನುತ್ತ ನಿತ್ಯವೂ ಡ್ರೈ ಫ್ರೂಟ್ಸ್ ಕಳಿಸಿಕೊಡುತ್ತಿದ್ದ! ಮಗುವಿನ ಅಪ್ಪಯಾರೆಂದು ನೀವು ಕೇಳಬೇಡಿ, ಅದು ನಕಲೀರಾಮನ ಪರಮಾನುಗ್ರಹ!!

Thumari Ramachandra
05/04/2017
source: https://www.facebook.com/groups/1499395003680065/permalink/1935561146730113/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s