ಯಾವ ಕವಿಯು ಬರೆಯಲಾರ… ಒಲವಿನಿಂದ.. ಕಣ್ಣೋಟದಿಂದ

ಯಾವ ಕವಿಯು ಬರೆಯಲಾರ… ಒಲವಿನಿಂದ.. ಕಣ್ಣೋಟದಿಂದ
[ಯುಗಾದಿ ವಿಶೇಷಾಂಕ 🙂 🙂 ]

ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು

ಎಂತೆಂತಹ ಪ್ರತಿಭಾನ್ವಿತರಿದ್ದಾರೆ ಈ ಸಮಾಜದಲ್ಲಿ ಎಂಬುದನ್ನು ಅರಿತಾಗ ಬಹಳ ಖುಷಿಯಾಗುತ್ತದೆ; ಆದರೆ ಕಾಲೆಳೆಯುವ ಕುಹಕಿಗಳನ್ನು, ಕುರುಡು ಭಕ್ತರನ್ನು ನಂಬಿಸಿ ಮಜಾ ಉಡಾಯಿಸುತ್ತಿರುವ ಕಪಟ ಸನ್ಯಾಸಿಯನ್ನು ಕಂಡಾಗ ಅಷ್ಟೇ ಖೇದವಾಗುತ್ತದೆ, ವಿಷಾದವಾಗುತ್ತದೆ.

ಪೀಠದಲ್ಲಿರುವವ ಯೋಗಿಯೋ ಭೋಗಿಯೋ ಎಂಬುದನ್ನು ಅರಿಯಲಾರದಷ್ಟು ಮೂರ್ಖ ಭಕ್ತರು ಒಂದೆಡೆ ಮತ್ತು “ಭೋಗಿಯಾದರೆ ನಮಗೇನಂತೆ ಮಠದಿಂದ ನಮ್ಮ ಅಕೌಂಟು ಭರ್ತಿಯಾದರೆ ಸಾಕು” ಎಂಬ ಧೋರಣೆಯ ಪರಮಸ್ವಾರ್ಥಿಗಳು ಇನ್ನೊಂದೆಡೆ; ಸಮಾಜ ಸಹಸ್ರಮಾನದಿಂದ ಕೂಡಿಟ್ಟಿದ್ದ ಬಂಗಾರವೇ ಮೊದಲಾದ ಆಸ್ತಿಯನ್ನು ಉಡಾಯಿಸಿ ಬೇಕಾದವರನ್ನು ಖರೀದಿಸಿ, ವಿರೋಧಿಗಳನ್ನು ನಿಗ್ರಹಿಸುತ್ತಿರುವ ಪರಮ ರಾಜಕಾರಣಿ ತೊನೆಯಪ್ಪನ ಬಹಿಷ್ಕಾರ-ಬೆದರಿಕೆ ಮತ್ತೊಂದೆಡೆ. ಹೀಗಾಗಿಯೇ ಇಂದು ಸಮಾಜದಲ್ಲಿ ಯಾರೆಂದರೆ ಯಾರೂ ಇಲ್ಲಿಯವರೆಗೆ ತೊನೆಯಪ್ಪನನ್ನು ಎಳೆದುಹಾಕಲು ಮುಂದಾಗಲಿಲ್ಲ ಎಂಬುದು ಸ್ಪಷ್ಟ.

ಕನಸು ಮನಸಿನಲ್ಲೂ ಶಾಂಕರ ಪೀಠ ಭೋಗಿಯನ್ನು ಒಪ್ಪಿಕೊಳ್ಳೋದಿಲ್ಲ; ’ಭೋಗವರ್ಧನವಾಲ’ ಎಂಬ ಪದಕ್ಕೆ ಬೇರೆ ಅರ್ಥವಿದೆ-ಅದು ಲೌಕಿಕ ಭೋಗವನ್ನು ವರ್ಧಿಸುವುದು ಎಂಬರ್ಥವಲ್ಲ. ಆದರೆ ಆ ಪದವನ್ನೇ ಬಳಸಿಕೊಂಡು ಸುಂದರ ಮಹಿಳೆಯರಲ್ಲೂ ಹುಡುಗಿಯರಲ್ಲೂ ಕಾಮಾಸಕ್ತಿ ಕೆರಳಿಸಿದ ತೊನೆಯಪ್ಪನಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ ಸರಿ; ಯಾಕೆಂದರೆ ಅವನೊಬ್ಬ ಧಾರ್ಮಿಕ ಮಾರ್ಗದರ್ಶಕ, ಸಮಾಜದ ಮುಖಂಡನ ಜಾಗದಲ್ಲಿರೋನು; ಕುಡುಕ ಚಾಲಕ ಬಸ್ ಓಡಿಸಿ ಅಪಘಾತವೆಸಗಿ ಬಸ್ಸಿನಲ್ಲಿರುವ ಅಷ್ಟೂ ಪ್ರಯಾಣಿಕರನ್ನು ಬಲಿಹಾಕಿದಂತೆ ಸಮಾಜವನ್ನೇ ನೈತಿಕ ಅಧಃಪತನಕ್ಕೆ ತಳ್ಳುತ್ತಿರುವವನು.

ಅಂದಹಾಗೆ ಈ ಸಮಾಜದಲ್ಲಿ ಸುಂದರ ಹೆಣ್ಣುಗಳಿಗೇನು ಕೊರತೆಯೇ? ಹೆಣ್ಣು-ಗಂಡಿನ ಅನುಪಾತದಲ್ಲಿ ಸ್ವಲ್ಪ ಹೆಚ್ಚುಕಡಿಮೆ ಇರಬಹುದು; ವಾಸ್ತವವಾಗಿ ಸಮಾಜದ ಹುಡುಗಿಯರು ಚೆನ್ನಾಗಿ ಓದಿಕೊಂಡು ಕೆಲಸವನ್ನು ಹಿಡಿದು, ಅಲ್ಲೇ ಯಾರನ್ನೋ ಲವ್ ಮಾಡಿಕೊಂಡು ಕಂಡವರೊಟ್ಟಿಗೆ ಓಡಿಹೋಗುತ್ತಿರೋದರಿಂದ ಎಂತೆಂತೆಹ ಅರ್ಹ, ಉತ್ತಮ, ಸಭ್ಯ, ಗುಣಾಢ್ಯ, ಸ್ಫುರದ್ರೂಪಿಯಾದ ಮದುವೆ ವಯಸ್ಸಿನ ಗಂಡುಮಕ್ಕಳು ಮದುವೆಯಿಲ್ಲದೆ ಹಾಗೇ ಇದ್ದಾರೆ.

ಅಧುನಿಕ ವಿದ್ಯೆಯಲ್ಲೂ ಪಾರಂಗತರಾಗದ, ವೇದವನ್ನೂ ನೆಟ್ಟಗೆ ಓದದ ಕಳ್ಳರೆಲ್ಲ ತೊನೆಯಪ್ಪನ ಗಿಂಡಿಗಳಾಗಿ ಸೇರಿಕೊಂಡಿದ್ದಾರೆ; ಯಾಕೆಂದರೆ ಅಲ್ಲಿ ಮಜಾ ಉಡಾಯಿಸಲು ಅವಕಾಶ ಸಿಗುತ್ತದೆ, ತೊನೆಯಪ್ಪ ಬಳಸಿ ಬಿಟ್ಟ ಹುಡುಗಿಯರ ಜೊತೆಗಾದರೂ ಮದುವೆ ಮಾಡಿಕೊಳ್ಳಬಹುದು, ಮಠಕ್ಕೆ ಬರುವ ನಡುವಯಸ್ಸಿನ ಆಂಟಿಯರ ಜೊತೆಗೆ ಖಾಸಗಿ ವ್ಯವಹಾರ ಕುದುರಿಸಿಕೊಳ್ಳಬಹುದು ಎಂಬ ಪಕ್ಕಾ ಕ್ರಿಮಿನಲ್ ಐಡಿಯಾ; ಹಾಗೆ ಹಲವು ಮದುವೆಗಳಾಗಿವೆ ಈಗ; ಅಂತಹ ಮದುವೆಗಳ ನಂತರ ಮಕ್ಕಳನ್ನು ಕರುಣಿಸಿದವನು ತೊನೆಯಪ್ಪನೇ!! ತೊನೆಯಪ್ಪನ ಸಂತಾನಭಾಗ್ಯ ಸ್ಕೀಮ್ ನಲ್ಲಿ ಏನಿಲ್ಲವೆಂದರೂ ಸಂಖ್ಯೆಯಲ್ಲಿ ಹತ್ತುಮಕ್ಕಳಿಗೆ ಕಮ್ಮಿಯಿಲ್ಲ!! ವಿಪರ್ಯಾಸವೆಂದರೆ ಸಂತಾನಭಾಗ್ಯವನ್ನು ಕರುಣಿಸಿದ ಮಿಂಡ ತೊನೆಯಪ್ಪನಮೇಲೆ ಪ್ಯಾಟರ್ನಿಟಿ ಕೇಸು ಜಡಿಯಲು ಯಾವ ಮಹಿಳೆಯೂ ಮುಂದೆ ಬರುತ್ತಿಲ್ಲ!!

ಅಲ್ರೀ, 32 ವರ್ಷ ವಯಸ್ಸಿನವರೆಗೆ ಮದುವೆಯಾಗದೆ ವನಸುಮದಂತಿದ್ದ ಸಾಪ್ಟವೇರ್ ಹುಡುಗಿಯನ್ನು ಮಠಕ್ಕೆ ಆಕರ್ಷಿಸಿ, ಹಲವು ವರಸೆಗಳಿಂದ ಅವಳನ್ನು ಬುಟ್ಟಿಗೆ ಹಾಕಿಕೊಂಡು ಬಸಿರುಮಾಡಿ ಮಗುವನ್ನು ಕರುಣಿಸಿದ್ದು ಯಾರಿಗೆ ಗೊತ್ತಿಲ್ಲ? ಆದರೆ ಯಾರೂ ಬಾಯ್ಬಿಟ್ಟು ಅದನ್ನು ಹೇಳಲು ತಯಾರಿಲ್ಲ! ತನ್ನಿಂದಲೇ ನೋುವುಂಡ ಪ್ಯಾಕಿಂಗ್ ಮಹಿಳೆಗೆ ನೋವು ಶಮನಮಾಡುತ್ತೇನೆಂದು ಸಂತಾನ ಭಾಗ್ಯ ಕೊಟ್ಟಿದ್ದು ಇದೇ ಶೋಭರಾಜಾಚಾರ್ಯ ಎಂಬುದು ತಿಳಿದಿಲ್ಲವೇ? ಆದರೂ ಜನ ಸುಮ್ಮನಿದ್ದಾರೆ!

ಮರುಳು ಜನರಿಗೆ ಬುದ್ಧಿಯಿಲ್ಲ ಅಥವಾ ಕೆಲವರಿಗೆ ಬುದ್ಧಿ ತೀರಾ ಹೆಚ್ಚಾಗಿಬಿಟ್ಟಿದೆ. ವೀರ್ಯಪ್ಪನ್ ಸಾಮಿ ದೀಕ್ಷೆಯಾಗಿ ನಾಲ್ಕಾರು ವರ್ಷ ಈರುಳ್ಳಿ ಉಪ್ಪಿಟ್ಟು, ಪಕೋಡ ತಿಂದುಕೊಂಡು ಕುಳ್ಳ ಬಾವಯ್ಯನೊಟ್ಟಿಗೆ ಸಮಾಜವನ್ನು ಅಳೆಯುತ್ತಿದ್ದ. ಆಗಲೇ ದೇಹ ಹರೆಯದಿಂದ ಮದವೆದ್ದ ಕುದುರೆಯಂತೆ ಕೆನೆಯತೊಡಗಿತ್ತು. ಯಾವ ಪ್ಲಾನ್ ಮಾಡಿದರೆ ಜನರನ್ನು ಅದರಲ್ಲೂ ಮಹಿಳೆಯರನ್ನು ಮಠಕ್ಕೆ ಆಕರ್ಷಿಸಬಹುದು ಎಂದು ಒಂದೇ ಪ್ರಾಯದ, ಸಮಾನ ಶೀಲ-ಮನಸ್ಕರಾದ ಕಳ್ಳಯ್ಯ-ಕುಳ್ಳಯ್ಯ ಲೆಕ್ಕಹಾಕತೊಡಗಿದ್ದರು. ಅವರಿಗಿದ್ದ ಪ್ರಮುಖ ಆಕರ್ಷಣೆಗಳು-ಹೆಣ್ಣು, ಹೊನ್ನು ಮತ್ತು ಮಣ್ಣು!

“ರಾಜೀವ ಮುಖಿಯರ ಗೋಜಿಗೆ ಹೋಗದೆ..” ಎಂದು ದಾಸರು ಹಾಡಿದ್ದಾರಲ್ಲಾ ರಾಜೀವ ಮುಖಿಯರು ನಮ್ಮಲ್ಲೇನು ಕಡಿಮೆಯೇ? ಇರುವವರಲ್ಲಿ ಅನೇಕಜನ ಸ್ಫುರದ್ರೂಪಿಗಳೆ; ಒಬ್ಬರಿಗಿಂತ ಒಬ್ಬರು ಸುಂದರ, ಮನೋಹರ, ರಮ್ಯ ಕಾವ್ಯಕ್ಕೆ ಆಕರ, ರವಿವರ್ಮನ ಕುಂಚದ ಕಲೆಯ ಬಲೆಯ ಸಾಕಾರ! ಬೇಲೂರಿನ ಶಿಲಾಬಾಲಿಕೆಗಳನ್ನೂ ನಾಚಿಸುವಂತಹ ಮುಗ್ಧ-ಸ್ನಿಗ್ಧ ಸೌಂದರ್ಯ; ಸಿನಿಮಾಕ್ಕೆ ಹೋಗಲಿಲ್ಲ ಎಂದಾಕ್ಷಣ ಅವರಲ್ಲಿ ಸೌಂದರ್ಯಕ್ಕೆ ಕೊರತೆಯೆಂದಲ್ಲ; ಸಮಾಜದಲ್ಲಿ ಇಲ್ಲಿಯವರೆಗೆ ಅಂತಹ ರಂಗಗಳಿಗೆ ಹೋಗುವ ಮಹಿಳೆಯರಿಗೆ ಪ್ರೋತ್ಸಾಹವಿರಲಿಲ್ಲ; ಹೋದರೆ ಶೀಲಹರಣವಾಗುತ್ತದೆ-ಹತ್ತುಮಂದಿಯ ಸಹವಾಸಕ್ಕೀಡಾಗಬೇಕಾಗುತದೆ ಎಂಬ ಭಾವನೆಯಿಂದ-ಅದು ನಿಜವೂ ಹೌದು; ಹಾಗಂತ ಕೆಲವು ನಟಿಯರೇ ಹೇಳಿಕೊಂಡಿದ್ದಾರೆ!

ಹಿಂದಿನವರು ತಿದ್ದಿದ ಜಾತಕವನ್ನು ನೋಡಿ ನಂಬಿದರು, ರಾಂಗ್ ವೇಷ ಅಧಿಕಾರಕ್ಕೆ ಬಂದದ್ದು ಮಂಗ ಹುಲುಸಾಗಿ ಬೆಳೆದ ಬಾಳೆಯ ತೋಟಕ್ಕೆ ಹೊಕ್ಕಂತಾಯ್ತು! ಪೀಠಕ್ಕೆ ಬಂದಾಗ ಸರಿಯಾದ ಪ್ರಾಯದ ಕಾಲ, ಸ್ಪಷ್ಟವಾಗಿ ಹೇಳೋದಾದ್ರೆ ಹಾವು ಬುಲ್ ಪೀನ ಒಡೆದುಕೊಂಡು ಹೊರಗೆ ಹಾರುವ ಕಾಲ; ಬೇಕು ಬೇಕಾದ ಅಡುಗೆ ಮಾಡಿಸಿ ಗಡದ್ದಾಗಿ ಹೊಡೆದು ತೇಗಿದ; ಸಮಯ ಸಿಕ್ಕಾಗಲೆಲ್ಲ ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಬಳಸಿಕೊಂಡು ಸಾಮಾಜಿಕ ತಾಣಗಳಲ್ಲಿ ವಿಹರಿಸಿತೊಡಗಿದ. ಐಫೋನ್-ಐಪ್ಯಾಡ್ ತರಿಸಿಕೊಂಡ. ಬುದ್ದು ಜನರಿಗೆ ನಾಮ ಹಾಕುವ ಕಲೆಯನ್ನು ಕರಗತಮಾಡಿಕೊಂಡ. ಮಠದ ಇತಿಹಾಸ ಮತ್ತು ಪ್ರೋಟೋಕಾಲ್ ಗಳ ಬಗ್ಗೆ ಹಿಂದಿನ ಎಲ್ಲ ಸ್ವಾಮಿಗಳಿಗಿಂತ ಹೆಚ್ಚಿಗೆ ಕೆದಕಿ ತಿಳಿದುಕೊಂಡು ನಾವೆಯನ್ನು ತನಗೆ ಬೇಕಾದ ದಿಕ್ಕಿನತ್ತ ಓಡಿಸತೊಡಗಿದ.

ಮಠದಲ್ಲಿ ತಕ್ಕಮಟ್ಟಿಗೆ ಹಣವಿತ್ತು, ಹೇರಳ ಬಂಗಾರವಿತ್ತು, ಭೂಮಿಯೂ ಖರ್ಚಿಗೆ ಹುಟ್ಟಿಸುವಷ್ಟಿತ್ತು, ಇಲ್ಲದಿದ್ದದ್ದು ರಾಜೀವ ಮುಖಿಯರು ಮಾತ್ರ! ಸಭೆಗಳಲ್ಲಿ, ಭಕ್ತರ ಮನೆಗಳಲ್ಲಿ ಸುಂದರಿಯರನ್ನು ಕಂಡಾಗ ಅವರ ಬಳುಕುವ ಸೊಂಟವನ್ನು ಆ ನಿತಂಬವನ್ನು ಕಂಡಾಗ ತೊನೆಯಪ್ಪ ಮನಸೋತ; ಅಷ್ಟಾಂಗಯೋಗ ಕಲಿತಿರಲಿಲ್ಲ, ವೇದ ಕಲಿಯಲಿಲ್ಲ, ಶಾಸ್ತ್ರ ಅರಿಯಲಿಲ್ಲ, ದೇಹದಂಡನೆ ಬೇಕಾಗಿರಲಿಲ್ಲ, ಸನ್ಯಾಸಜೀವನ ವಿಧಾನ ಹಿಡಿಸುತ್ತಿರಲಿಲ್ಲ; ಗೊತ್ತಿದ್ದದ್ದು ಒಂದೇ-ಅದು ’ಗೋವಿಂದ ಕಲೆ.’ ನಿತ್ಯವೂ ಈ ಕಳ್ಳಗೋವಿಂದ ಗೋಪಿಕೆಯರ ಜಾಡನ್ನು ಹಿಡಿದು ಜಾಲಾಡುತ್ತಿದ್ದ; ಸಿಕ್ಕರೆ ಮೀನೂಟ, ಇಲ್ಲದಿದ್ದರೆ ಗಾಳವಂತೂ ಕೈಯಲ್ಲೇ ಇರುತ್ತದಲ್ಲ-ತೊಂದರೆಯಿಲ್ಲ ಎಂದುಕೊಂಡ.

ಸಮಾನಶೀಲನಾದ ಸೊಟ್ಟಮುಖದ ಕುಳ್ಳಬಾವಯ್ಯನಿಗೂ ಸಾಮಾನು ಹಾರಲು ಆರಂಭಿಸಿತ್ತು; ಅವನದ್ದೂ ಅದೇ ಕತೆ! ಇಬ್ಬರೂ ಸೇರಿ ಹಲವಾರು ಪ್ಲಾನ್ ಮಾಡಿದರು; ಹೊರಗಿನಿಂದ ನೋಡೋದಕ್ಕೆ ಸಾಮ್ಗಳು ಅತ್ಯಂತ ಸಮಾಜಮುಖಿ ಎನಿಸಬೇಕು, ’ನ ಭೂತೋ ನ ಭವಿಷ್ಯತಿ’ಎನಿಸಬೇಕು; ಒಳಗಿನಿಂದ ಸ್ವಕಾರ್ಯ ಯಾವ ಬಾಧೆಯಿಲ್ಲದೆ ಸರಾಗವಾಗಿ ಸಾಗುತ್ತಿರಬೇಕು. ಬಾವ-ನೆಂಟ ಅಂಥದ್ದೊಂದಷ್ಟು ಯೋಜನೆಗಳನ್ನು ಮಠದಂಗಳದಲ್ಲಿ ಹರವಿಕೊಂಡು ಕುಳಿತುಬಿಟ್ಟರು. ಇಂದು “ಮುದಿಗುನ್ನಿ” ಎಂದು ಹಳದೀ ತಾಲಿಬಾನುಬಗಳಿಂದ ಜರಿಯಲ್ಪಟ್ಟ ಸದ್ಗುಣಿ ಭಟ್ಟರಂತಹ ಮುತ್ಸದ್ದಿಗಳೆಲ್ಲ ಯೋಜನೆಗಳನ್ನು ಕಂಡು ಆಶ್ಚರ್ಯಪಟ್ಟರು; “ನಮ್ಮ ಸ್ವಾಮಿಗಳನ್ನು ನೋಡಿ, ಯಾವ ಕಾಲೇಜಿಗೆ ಹೋಗಿದ್ದಾರೆ? ಯಾವ ಮ್ಯಾನೇಜ್ ಮೆಂಟ್ ಇನ್‍ಸ್ಟಿಟ್ಯೂಟ್‍ಗೆ ಹೋಗಿದ್ದಾರೆ? ಆದರೆ ಅವರ ಬುದ್ಧಿಮಟ್ಟ ನೋಡಿ, ನಿಜಕ್ಕೂ ನಮಗೆಲ್ಲ ಬಹಳ ಹೆಮ್ಮೆ” ಎಂದು ವೇದಿಕಯಲ್ಲಿ ಹೇಳತೊಡಗಿದರು; ಎಂತೆಂತೆಹ ಅಸಾಮಾನ್ಯರನ್ನೆಲ್ಲ ಖೆಡ್ಡಾಕ್ಕೆ ಕೆಡವಿಕೊಂಡು ತಮಗೆ ಬೇಕಾದಂತೆ ಪಳಗಿಸಿಕೊಂಡರು ಈ ಕಳ್ಳಯ್ಯ-ಕುಳ್ಳಯ್ಯ!!

ಗಂಡಸರೆಲ್ಲ ಅಹೋರಾತ್ರಿ ಮಠಕ್ಕಾಗಿ ಶ್ರಮಿಸಬೇಕು. ಮಠದ ಯೋಜನೆಗಳು ಕಾರ್ಯರೂಪಕ್ಕೆ ಬರಲು ಕನಿಷ್ಠ 25ವರ್ಷವಾದ್ರೂ ಬೇಕು ಅಂತ ’ಮಹಾಸಂಸ್ಥಾನದವರು’ ಅಪ್ಪಣೆ ಕೊಡಿಸಿದ್ರು; ಸದ್ಗುಣಿಗಳು, ಘಣಪಾಠಿಗಳ ಮಗ ಗಡ್ಡದ ಭಟ್ಟರು ಎಲ್ಲ ಅಹರ್ನಿಶಿ ಮನೆಯೇ ಮಠವೆಂಬಷ್ಟು ಕಾಯಾ ವಾಚಾ ಮನಸಾ ಶ್ರಮಿಸಿದ್ರು; ಇವತ್ತು ಅಂಥವರಿಗೆಲ್ಲ ಮಠದೊಳಗೆ ಪ್ರವೇಶವಿಲ್ಲ; ಮಠದ ಶಿಷ್ಯರೇ ಅಲ್ಲ ಎಂಬ ಹೇಳಿಕೆ ಕೊಟ್ಟಿದ್ದು ಬೇರೆ! ಅಬ್ಬೇಪಾರಿಯಾಗಿದ್ದ ತಿರುಬೋಕಿ ಶ್ರಾದ್ಧಭಟ್ಟನ ಪಿಂಡವನ್ನು ಜಗದ್ಗುರು ಎಂದು ಕರೆದು ಪೀಠದಮೇಲಿಟ್ಟು ಪೂಜಿಸಿದ್ದಕ್ಕೆ ಇಂತಹ ಘನಘೋರ ಪಾತಕ ನಡೆಸಿದ್ದಾನಲ್ಲ ವೀರ್ಯಪ್ಪನ್ ಅವನಿಗೆ ಯಾವ ಶಿಕ್ಷೆ ಕೊಟ್ಟರೆ ಚೆನ್ನ ಹೇಳಿ?

ಅದಿರಲಿ, ಯೋಜನೆಗಳಲ್ಲಿ ಒಂದು ಹಸುಗಳ ವಿಷಯದಲ್ಲಿ ವಿಶೇಷ ಕಾರ್ಯಕ್ರಮ. ಅದರ ಉದ್ದೇಶವೇನೋ ಒಳ್ಳೆಯದೇ; ಆದರೆ ಅದರ ಅನುಷ್ಠಾನದ ಭರದಲ್ಲಿ ವೀರ್ಯಪ್ಪನ್ ಸಾಮ್ಗಳು ಮಠಕ್ಕೆ ಹತ್ತಿರವಾಗತೊಡಗಿದ್ದ ರಾಜೀವಮುಖಿಯರನ್ನು ನೋಡುತ್ತ ನೋಡುತ್ತ ತಮ್ಮ ಬುಲ್ ಪೀನದಲ್ಲಿ ವೀರ್ಯ ಸ್ಖಲನವನ್ನು ಅನುಭವಿಸುತ್ತಿದ್ದರು ಪಾಪ!! 🙂 🙂 ನೇರವಾಗಿ ಹೇಳಲಾಗದ್ದನ್ನು ನೆಶೆಯಲ್ಲಿರುವ ಹಸು ಮತ್ತು ಹೋರಿಗಳನ್ನು ಸೇರಿಸುತ್ತ ಮಹಿಳೆಯರಿಗೆ ಸಾಂಕೇತಿಕವಾಗಿ ಹೇಳುತ್ತಿದ್ದರು; ಈಗಲೂ ಆ ಚಾಳಿ ಬಿಟ್ಟಿಲ್ಲ, “ನಾನೂ ನೀನೂ ಸೇರಿ ನಾಕವನ್ನು ಭುವಿಗೆ ಇಳಿಸೋಣ” ಎನ್ನುತ್ತದಂತೆ ಹಸು ಹೋರಿಯ ಕಿವಿಯಲ್ಲಿ; ’ಅಪ್ಪಟ’ ಸನ್ಯಾಸಿಗೆ ಸದಾ ಗರ್ಭ, ಗಬ್ಬ, ಗಬ್ಬ ಕಟ್ಟಿಸೋದು, ಬಸಿರುಮಾಡೋದು, ಸಂಭೋಗ, ಅಂಗಾಂಗ ಮರ್ದನ ಇಂಥಾದ್ದೇ ಆಲೋಚನೆಗಳು!!

ನಾರೀ ಸ್ತನಭರ ನಾಭೀದೇಶಂ
ದೃಷ್ಟ್ವಾ ಮಾ ಗಾ ಮೋಹಾವೇಶಮ್ |
ಏತನ್ಮಾಂಸ ವಸಾದಿ ವಿಕಾರಂ
ಮನಸಿ ವಿಚಿಂತಯಾ ವಾರಂ ವಾರಮ್ ||

ನಳಿನೀ ದಳಗತ ಜಲಮತಿ ತರಳಂ
ತದ್ವಜ್ಜೀವಿತ ಮತಿಶಯ ಚಪಲಮ್ |
ವಿದ್ಧಿ ವ್ಯಾಧ್ಯಭಿಮಾನ ಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ ||

ಯಾವದ್-ವಿತ್ತೋಪಾರ್ಜನ ಸಕ್ತಃ
ತಾವನ್-ನಿಜಪರಿವಾರೋ ರಕ್ತಃ |
ಪಶ್ಚಾಜ್ಜೀವತಿ ಜರ್ಜರ ದೇಹೇ
ವಾರ್ತಾಂ ಕೋಪಿ ನ ಪೃಚ್ಛತಿ ಗೇಹೇ

ಮನುಷ್ಯನ ಮನಸ್ಸೆಷ್ಟು ಚಂಚಲ ಎಂಬುದನ್ನು ಶಂಕರರಷ್ಟು ಸೂಕ್ಷ್ಮವಾಗಿ ಬಣ್ಣಿಸಿದ ಕವಿ ಇನ್ನೊಬ್ಬನಿಲ್ಲವೇನೋ. ಸುಂದರಾಂಗಿಯರ ಕಡೆಗೆ ಸ್ವಲ್ಪ ಗಮನ ಹರಿಸಿದರೆ ವಿರಾಗಿಯು ರಾಗಿಯಾಗುತ್ತಾನೆ; ಅಂತಹ ವೀಕ್ನೆಸ್ ಅರಿತೇ ವಿಶ್ವಾಮಿತ್ರನಲ್ಲಿಗೆ ದೇವತೆಗಳು ಮೇನಕೆಯನ್ನು ಕಳಿಸಿದ್ದರು. ಮಂದಮಾರುತ ಬೀಸಿ ದೂರದಿಂದ ಸುಗಂಧವನ್ನು ಹೊತ್ತುತಂದ, ವನವೆಲ್ಲ ಚಿಗುರಿ ಹೂ-ಹಣ್ಣುಗಳು ಕಾಣಿಸಿದವು, ಗೆಜ್ಜೆಯ ಹೆಜ್ಜೆಗಳ ಜೊತೆ ಮೆಲುದನಿಯಲ್ಲಿ ಕರೆದದ್ದೂ ಸಹ ಸಮಾಧಿಸ್ಥಿತಿಯಲ್ಲಿದ್ದ ವಿಶ್ವಾಮಿತ್ರನ ಕಿವಿಗೆ ಬಿತ್ತು! ಕಣ್ತೆರೆದ ಕೌಶಿಕ ತಪಸ್ಸನ್ನು ಮರೆತು ಮೇನಕೆಯ ಹಿಂದೆ ಬಿದ್ದ!! ದೇವತೆಗಳು ತಮ್ಮ ಕೆಲಸ ಯಶಸ್ವಿಯಾಗಿದ್ದಕ್ಕೆ ಸಂತಸಗೊಂಡರು!!

ಹೆಣ್ಣೆಂದರೆ ಹಾಗೇ; ಹೂವಿನಂತೆ ಸುಕೋಮಲ, ಮನಸ್ಸಿನಿಂದ ಚಂಚಲ, ಸುಂದರ ಹೆಣ್ಣುಗಳು ಹಲವು ಗಂಡುಗಳ ಹೃದಯದಲ್ಲಿ ಬರೆಯುವ ಕಾವ್ಯಗಳಿಗೆ ಯಾವ ಕವಿಯೂ ಅಕ್ಷರರೂಪ ಕೊಡಲಾರನಂತೆ, ಯಾವ ಶಿಲ್ಪಿಯೂ ಅದನ್ನು ಮೂರ್ತರೂಪಕ್ಕೆ ಕಡೆಯಲಾರನಂತೆ! ಅಂತಹ ವಿಷಯಾಸಕ್ತಿಯನ್ನು ಹುಟ್ಟಿಸಬಲ್ಲ ಮಹಾತಾಕತ್ತು ಸುಂದರಿಯರ ಕಣ್ಣೋಟದಲ್ಲಿರುತ್ತದೆ.

ನೋಡಿದಾಕ್ಷಣ ತನ್ನವಳಾಗಬೇಕೆಂಬ ಅಪೇಕ್ಷೆ, ಕೂಡುವ-ಸಂಭೋಗಿಸುವ ಬಯಕೆ-ಇವೆಲ್ಲ ಸಾದಾ ಸಂಸಾರವಂದಿಗರ ಹಳವಂಡಗಳು. ಇವುಗಳನ್ನೆಲ್ಲ ಮೀರಿದವರೇ ನಿಜವಾದ ಸನ್ಯಾಸಿಗಳು; ಜೈನ ದಿಗಂಬರರನ್ನು ನೋಡಿ-ಸುಂದರುಯರ ಸಭೆಯ ಮಧ್ಯೆಯಿದ್ದೂ ಅವರು ನಿರ್ವಿಣ್ಣರಾಗಿರುತ್ತಾರೆ; ಹಾಗಿರಬೇಕು ಸನ್ಯಾಸಿಗಳು-ಅದು ಅಷ್ಟಾಂಗಯೋಗದ ಮತ್ತು ಸನ್ಯಾಸ ಜೀವನ ವಿಧಾನದ ತಾಕತ್ತು. ಹೇಗಿರಬೇಕು ಈ ಜೀವನದಲ್ಲಿ ಸನ್ಯಾಸಿ-ನಳಿನೀ ಜಲಗತ…ನೀರಿನಲ್ಲಿರುವ ಕಮಲದ ಎಲೆಗಳಂತೆ; ನೀರು ಸೋಕಿದರೂ ಅಂಟಿಕೊಳ್ಳೋದಿಲ್ಲ; ಎಲೆ ಒದ್ದೆಯಾಗೋದಿಲ್ಲ.

ಹೆಣ್ಣಿನ ಸಂಪರ್ಕ ಅಥವಾ ಸಾಮೀಪ್ಯ ವೈರಾಗ್ಯಕ್ಕೆ ವಿಮುಕ್ತಿ ಕೊಟ್ಟುಬಿಡುತ್ತದೆ! ಯಾವ ವಿರಾಗಿಯಲ್ಲಿ ರಾಗ ಹುಟ್ಟುತ್ತದೋ ಅದು ಮುಂದೆ ಅನುರಾಗವನ್ನು ಹುಟ್ಟುಹಾಕುತ್ತದೆ. ಅಂತಹ ಅನುರಾಗಗಳನ್ನು ಅನುಭವಿಸಿದ ’ಪರಮಹಂಸ’ರು ಈ ವೀರ್ಯಪ್ಪನ್ ಸಾಮ್ಗಳು!! ಇಂಗ್ಲೀಷ್ ನಲ್ಲೊಂದು ಮಾತಿದೆ-First you take a drink, then the drink takes a drink, then the drink takes you. ಅದೇರೀತಿ ವಿರಾಗಿಯಾಗಿದ್ದವ ರಾಗಿಯಾದಾಗ ಅನುರಾಗದಲ್ಲಿ ಬೀಳುತ್ತಾನೆ. ಮನಸ್ಸಿನ ಮೂಸೆಯಲ್ಲಿ ಅವಿತುಕೊಂಡ ಅನುರಾಗ ಮತ್ತೆ ಹಲವು ಅನುರಾಗಗಳನ್ನು ಬಯಸುತ್ತದೆ! ಅನುರಾಗಗಳು ಅಧಿಕವಾದಾಗ ಸನ್ಯಾಸಿ ವೀರ್ಯಪ್ಪನ್ ಆಗ್ತಾನೆ!!

ಚಂಚಲವಾದ ಮನಸ್ಸು ಯಾವ ಕ್ಷಣದಲ್ಲೂ ವಿರಾಗದಿಂದ ರಾಗದೆಡೆಗೆ ವಾಲಿಬಿಡಬಹುದು ಎಂಬ ಕಾರಣಕ್ಕಾಗಿ ಸನ್ಯಾಸಿಯಾದವ ಹೆಣ್ಣನ್ನು ತೀರಾ ಸನಿಹಕ್ಕೆ ಬಿಟ್ಟುಕೊಳ್ಳೋದಿಲ್ಲ; ಅದು ಶಾಸ್ತ್ರವೂ ಹೌದು, ಸಮರ್ಪಕವೂ ಹೌದು. ಹಸುವಿನ ಕಾರ್ಯಕ್ರಮಗಳ ಅಬ್ಬರದಲ್ಲಿ ಮಠದ ಹೋರಿ ತನ್ನ ಸಾಮಾನನ್ನು ಮಸೆದು ಝಾಡಿಸಿ ಪ್ರಯೋಗಕ್ಕೆ ಇಳಿಸಿತು-ಅದಕ್ಕೀಗ ದಶಮಾನೋತ್ಸವ ಮುಗಿದು ಷೋಡಶ ವರ್ಷಗಳು ತುಂಬಿವೆ! ಮಕ್ಕಳಲ್ಲಿ ಕೆಲವರು ದೊಡ್ಡವರಾಗಿದ್ದಾರೆ!!

ಅಂದು ಮಹಿಳೆಯರನ್ನು ಆಕರ್ಷಿಸಲು ಬಳಸಿದ ಅದೇ ತಂತ್ರವನ್ನು ಇಂದು ಪ್ರತಿತಂತ್ರವನ್ನಾಗಿ ಬಳಸಿ ಕಚ್ಚೆಕತೆಗಳನ್ನು ಮುಗಿಸಿಹಾಕುವ ಹುನ್ನಾರದಲ್ಲಿದೆ ಹೋರಿ. ಎತ್ತರಕ್ಕೆ ಎತ್ತರಕ್ಕೆ ಎಷ್ಟೇ ಎತ್ತರಕ್ಕೆ ಏರಿದರೂ ಹಾರಿದ ವೀರ್ಯದ ಕಲೆಗಳು ಕಾಣದಿರಲು ಸಾಧ್ಯವೇ ಇಲ್ಲ! ಲಂಗಕ್ಕೆ ಮೆತ್ತಿದ ಗಮ್ಮನ್ನು ಅಳಿಸಲು ಅವಕಾಶವೂ ಇಲ್ಲ! ಎಷ್ಟೇ ಹೋರಾಡಿದರೂ ಯಾವ ದೇವರೂ ಕೈಹಿಡಿಯಲಾರ; ಯಾಕೆಂದರೆ ಈ ಕಳ್ಳ ಸನ್ಯಾಸಿಯ ದೇಹದ ಕಣಕಣದಲ್ಲೂ ಮತ್ತು ತ್ರಿಕರಣದಲ್ಲೂ ವಿಕಾರವೇ ತುಂಬಿಕೊಂಡಿದೆ; ಇಡೀ ಆ ವ್ಯಕ್ತಿತ್ವ ಕಾಳೀಯನ ಬಾಯಲ್ಲಿನ ವಿಷಗ್ರಂಥಿಯಂತೆ ವಿಷಮಯವಾಗಿದೆ; ಅವನು ಹೋದಲ್ಲೆಲ್ಲ ನೆಗೆಟಿವ್ ಎನರ್ಜಿ ತುಂಬಿಕೊಳ್ಳುತ್ತದೆ; ಅವನು ಪ್ರತಿಷ್ಠಾಪಿಸಿದ ದೇವವಿಗ್ರಹಗಳಲ್ಲಿ ಭೂತಗಳ ಆವಾಸವಾಗುತ್ತದೆ!

ಇಷ್ಟೆಲ್ಲ ಗೊತ್ತಿದ್ದೂ ಇಂದಿಗೂ ಆಯಕಟ್ಟಿನ ಹುದ್ದೆಯಲ್ಲಿ ಮಹಿಳೆಯರನ್ನಿಟ್ಟು ಹೋದಲ್ಲೆಲ್ಲ ಕರೆದುಕೊಂಡು ಹೋಗಿ ಭೋಗಿಸುತ್ತಾನೆ; ತಾನು ಹಾಲು ಕುಡಿಯೋದು ಜಗತ್ತಿಗೆ ಕಾಣುತ್ತಿಲ್ಲ ಎಂಬ ಭ್ರಮೆಯಲ್ಲಿ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ ತೊನೆಯಪ್ಪ ಹೆಂಗಳೆಯರ ಜೊತೆ ಏಕಾಂತದಲ್ಲಿ ಹಾರಾಡುತ್ತಲೇ ಇದ್ದಾನೆ; ಹೊರಗೆ ವೇದಿಕೆಗಳಲ್ಲಿ ಬುದ್ಧಿಮಾಂದ್ಯರಂತೆ ಬಂದು ಸೆರಗೊಡ್ಡುವ ಜನರಿಗೆ ಸಾಕ್ಷಾತ್ ಶ್ರೀರಾಮಚಂದ್ರನಂತೆ ಪೋಸುಕೊಡುತ್ತ ಬಣ್ಣದ ಅಕ್ಕಿ ವಿತರಿಸುತ್ತಾನೆ.

ಸಿಹಿತಿನಿಸಿನ ತಯಾರಿಯಲ್ಲಿ ಪಾಕ ಎಹ್ಟೇ ಚೆನ್ನಾಗಿ ಬಂದಿರಬಹುದು, ಹಲವು ರೀತಿಯ ಸಿಹಿತಿನಿಸುಗಳೂ ತಯಾರಾಗುತ್ತಿರಬಹುದು, ಆದರೆ ಅವುಗಳಿಗೆಲ್ಲ ದೂರದಿಂದ ಒಂದೇ ಒಂದು ಬಿಂದು ಸೀಮೆ ಎಣ್ಣೆ ಸಿಂಪಡಿಸಿಬಿಟ್ಟರೆ ಇಡೀ ಪಾಕ ಬಳಕೆಗೆ ಅನರ್ಹವಾಗುತ್ತದೆ; ಅದರಂತೆ ವೀರ್ಯಪ್ಪನ್ ಸಾಮ್ಗಳು ಜನತೆಗೆ ಅನುಕೂಲವಾಗಲೆಂದು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ ಎಂದು ವೀಡಿಯೋ ಮಾಡಿಸಿ ಹಾಕಬಹುದು; ಆದರೆ ಅವುಗಳ ಸೆರಗಿನ ಹಿಂದೆ ಕಚ್ಚೆಕತೆಯನ್ನು ಮುಚ್ಚಿಹಾಕಲು ಸಾಧ್ಯವಾಗೋದಿಲ್ಲ. ಸರ್ವಬಣ್ಣವನ್ನು ಮಸಿ ನುಂಗಿತು ಎಂಬಹಾಗೆ ತೊನೆಯಪ್ಪ ಅದಾವ ಕಾರ್ಯಗಳನ್ನು ಮಾಡದಿದ್ದರೂ ಯಾರೂ ಯಾಕೆ ಮಾಡಲಿಲ್ಲ ಎಂದು ಕೇಳ್ತಿರಲಿಲ್ಲ; ಆದರೆ ಸನ್ಯಾಸಿಗೆ ಹೇಳಿದ ಧರ್ಮವನ್ನೇ ಗಾಳಿಗೆ ತೂರಿ ಸಂಸಾರಿಗಳಿಗಿಂತ ಹೀನಾಯವಾಗಿ ವ್ಯಭಿಚಾರದಲ್ಲಿ ತೊಡಗಿ ಮಠವನ್ನು ನಂಬಿದ ಹಲವು ಕುಟುಂಬಗಳಿಗೆ ದೋಖಾ ಕೊಟ್ಟಿರೋದರಿಂದ ಅವನನ್ನು “ದೋಖೇಬಾಜ್” ಅಂತ ಕರೀತಾರೆ.

ಈ ಶೋಭರಾಜಾಚಾರ್ಯ ಮಾಡಿದ ಸಮಾಜಮುಖಿ ಕೆಲಸಗಳಲ್ಲಿ ಎಂಟುನೂರು ಕಮಲದ ಹೂಗಳನ್ನು ಹಾಸಿ ದೇವಿ ಮಲ್ಲಿಕಾ ಶರಬತ್ತನ್ನು ತಯಾರಿಸಿದ್ದೂ ಸೇರಿದೆ; ಹನುಮಂತನ ಹುಟ್ಟಿನ ಜಾಗವನ್ನೇ ಪ್ರಶ್ನಿಸಿ ಬಿಚ್ಚಮ್ಮನಿಂದ ಶಿಲಾನ್ಯಾಸ ಮಾಡಿಸಿದ್ದೂ ಇದೆ; ಸರ್ವಸಂಗ ಪರಿತ್ಯಕ್ತ ವಿರಾಗಿ ಎಲ್ ಐ ಸಿ ಪಾಲಿಸಿ ಮಾಡಿಸಿದ್ದೂ ಇದೆ; ಬೆಂಗಳೂರು-ಮೈಸೂರು-ಶಿವಮೊಗ್ಗ ಮೊದಲಾದೆಡೆಗೆ ರೀಯಲ್ ಎಸ್ಟೇಟ್ ಧಂದೆಗೆ ಇಳಿದಿದ್ದಿದೆ. ಮೇಲಾಗಿ ವರ್ಷದಲ್ಲಿ ಭಕ್ತರನ್ನು ಯಾವ ಯಾವ ರೀತಿಯಲ್ಲಿ ಹೆರೆಯಬಹುದು ಎಂದು ಇವನನ್ನು ನೋಡಿ ಕಲಿಯಬೇಕಾಗಿದೆ! ಹೆಣ್ಣು-ಹೊನ್ನು-ಮಣ್ಣು ಮೂರೂ ವಿಷಯಗಳಲ್ಲಿ ಸಂಸಾರಿಗಿಂತ ಅತಿ ಹೆಚ್ಚಿನ ಆಸಕ್ತಿಯಿರುವ ಕಾರಣ ಇವ ಸನ್ಯಾಸಿಯಲ್ಲ ಎಂದು ಯಾರಾದರೂ ಎತ್ತಿ ಬಿಸಾಡಬಹುದು.

ಟೆಕ್ನಾಲಜಿ ಬಹಳ ಬೆಳೆದಿದೆ. ಮಂಗಳಯಾನವೂ ನಡೆದಿದೆ; ವಿಜ್ಞಾನಿಗಳು ತಯಾರಿಸಿದ ಪರಿಕರಗಳನ್ನಾಗಲೀ ಯಂತ್ರಗಳನ್ನಾಗಲೀ ಮಂತ್ರಾಕ್ಷತೆಯಿಂದ ತಯಾರಿಸಬಲ್ಲ ತಾಕತ್ತು ತೊನೆಯಪ್ಪನಿಗಂತೂ ಇಲ್ಲ. ಆದರೆ ಇಷ್ಟೆಲ್ಲ ಡಿಜಿಟಲ್ ಪುರಾವೆ-ದಾಖಲಾತಿಗಳಿದ್ದರೂ ತೊನೆಯಪ್ಪನ ರಟ್ಟೆ ಹಿಡಿದು ಏಳು ಪೀಠ ಬಿಡು ಎನ್ನಬಲ್ಲ ಗಂಡಸು ಮುಂದೆ ಬಂದಿಲ್ಲ!! ಉತ್ತರ ಕರ್ನಾಟಕದ ಮೇಘಸ್ಫೋಟದಲ್ಲಿ ಸಾವಿರಾರು ಜನ ಸತ್ತು, ಲಕ್ರಾಂತರ ಜನ ನಿರಾಶ್ರಿತರಾದಾಗ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಸಹಾಯಧನಕ್ಕೇ ಕನ್ನಕೊರೆದ ಚೋರನೊಬ್ಬ ಆಳುವವರಿಗೆ ಹೇಳಿ ವೀರ್ಯಪ್ಪನ್ ಸಾಮ್ಗಳನ್ನು ಬಂಧಿಸದಂತೆ ತಡೆದಿದ್ದಾನಂತೆ. ಅದಕ್ಕೆ ಗೋಡು ತಿನ್ನಪ್ಪನೂ ಅನುಮೋದನೆ ನೀಡಿದ್ದಾನಂತೆ.

ಅಧಿಕಾರ ಯಾರಿಗೂ ಶಾಶ್ವತವಲ್ಲ; ಜೀವನವೂ ಸಹ. “ಅಸ್ಥಿರ ದೇಹವಿದು, ನಾನಾವಸ್ಥೆಯಾಗುತಿಹುದು” ಎಂಬ ದಾಸವಾಣಿಯಂತೆ ಶರೀರ ಕೂಡ ಒಂದೇ ರೀತಿಯಲ್ಲಿರಲು ಸಾಧ್ಯವಿಲ್ಲ. ಅನ್ಯಾಯವನ್ನು ಬೆಂಬಲಿಸಿದ ರಾಜಕಾರಣಿಗಳು ಆಶ್ರಯವಿಲ್ಲದ ಅಬ್ಬೇಪಾರಿಗಳಾಗಬಹುದು, ಸನ್ಯಾಸಪಟ್ಟವನ್ನು ಬಳಸಿಕೊಂಡು ದ್ರೋಹವೆಸಗಿದ ಕಪಟಿ ಭಿಕಾರಿಯಂತೆ ಜೈಲುಕೂಳು ತಿನ್ನಬಹುದು. ಕಾಲಾಯ ತಸ್ಮೈ ನಮಃ; ಬಂದೇ ಬರುತೈತಿ ಕಾಲ; ಅಲ್ಲೀವರೆಗೆ ಸಹಿಸಬೇಕಲ್ರೀ ಇಂಥಾ ವ್ಯಾಕುಲ.

Thumari Ramachandra
28/03/2017
source: https://www.facebook.com/groups/1499395003680065/permalink/1931148693838025/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s