ಕತ್ತಲಕೋಣೆಯಲ್ಲಿ ವೀರ್ಯಪ್ಪನ್ ಸಾಮ್ಗಳ ಲದ್ದಿಯ ಬೆತ್ತಲೆ ನರ್ತನವಲ್ಲದೆ ಸೂರ್ಯಪ್ರಕಾಶ ಬರಲುಂಟೆ?

ಕತ್ತಲಕೋಣೆಯಲ್ಲಿ ವೀರ್ಯಪ್ಪನ್ ಸಾಮ್ಗಳ ಲದ್ದಿಯ ಬೆತ್ತಲೆ ನರ್ತನವಲ್ಲದೆ ಸೂರ್ಯಪ್ರಕಾಶ ಬರಲುಂಟೆ?

ವೀರ್ಯಪ್ಪನ್ ಸಾಮ್ಗಳು ನಮಗೆ ದೂರದವರಲ್ಲ; ನಾವೆಲ್ಲ ಅಕ್ಕಪಕ್ಕದವರೇ. ಸಾಮ್ಗಳ ಅಪ್ಪ ಮತ್ತು ಅಜ್ಜ ಎಲ್ಲರ ಜಾತಕ ತಿಳಿದವರೇ. ಮಠದಲ್ಲೆ ಸದಾ ಠಿಕಾಣಿ ಹೂಡುತ್ತಿದ್ದ ಸಾಮ್ಗಳ ಅಜ್ಜ ಮತ್ತು ಆಗಾಗ ಹೋಗಿ ಬರುತ್ತಿದ್ದ ಸಾಮ್ಗಳ ಅಪ್ಪ ಇಬ್ಬರಿಗೂ ಮಠದ ಹಣ ಮತ್ತು ಆಸ್ತಿ-ಪಾಸ್ತಿಗಳ ಮೇಲೆ ಕಣ್ಣಿತ್ತು. ಹೇಗಾದರೂ ಮಾಡಿ ಮಠದ ಸೀಟಿಗೆ ತಮ್ಮವನನ್ನೇ ಕೂರಿಸಿದರೆ ಬೇಕಾದ್ದನ್ನು ಆರಾಮಾಗಿ ಹೊಡೆದುಕೊಳ್ಳಬಹುದೆಂಬ ದುರಾಲೋಚನೆಯಿತ್ತು.

ಹಿಂದಿನವರನ್ನು ಹೇಗೆ ಬುಟ್ಟಿಗೆ ಹಾಕಿಕೊಳ್ಳಬೇಕೆಂಬುದನ್ನೂ ಅವರು ಅರಿತಿದ್ದರು. ಆದರೆ ಹಿಂದಿನವರು “ವಟುವಿನ ಜಾತಕ”,”ವಟುವಿನ ಜಾತಕ” ಅಂತ ಹಲುಬತೊಡಗಿದಾಗ ವೀರ್ಯಪ್ಪನ್ ಸಾಮ್ಗಳ ಅಪ್ಪ ಸ್ತ್ರೀನಿವಾಸ ಮಗನ ಜಾತಕ ತಿದ್ದಿ ಯಾವೆಲ್ಲ ಯೋಗಗಳನ್ನು ಸೇರಿಸಬೇಕೋ ಅಷ್ಟನ್ನೂ ಸೇರಿಸಿದ. ತಿದ್ದಿದ ಜಾತಕವನ್ನು ಆಯ್ಕೆ ಸಮಿತಿಯ ಧುರೀಣರಿಗೆ ತಲುಪಿಸಿ ಅವರುಗಳ ಮನೆವಾರ್ತೆ ಕೆಲಸದವರಂತೆ ಅವರುಗಳ ಮನೆಗಳಿಗೆ ಅಂಡಲೆದ. ಕೆಲಸ ಆಗುವವರೆಗೆ ಸಗಣಿ ತಿನ್ನು ಎಂದರೂ ತಿನ್ನುವ ಮೆಂಟಾಲಿಟಿಯ ಸ್ತ್ರೀನಿವಾಸ, ಮಗ ಮಠದ ಸೀಟಿಗೆ ಆಯ್ಕೆಯಾಗುವವರೆಗೂ ಸ್ವತಃ ಲೋಕಸಭೆ ಚುನಾವಣೆಗೆ ನಿಂತು ಫಲಿತಾಂಶ ಕಾಯುತ್ತಿರುವವರಂಥ ಮನಸ್ಥಿತಿಯಲ್ಲಿದ್ದ.

ನರಿಯ ಹೊಟ್ಟೆಯಲ್ಲಿ ನರಿಯೇ ಜನಿಸಿದಂತೆ ಅಥವಾ ತೋಳದ ಹೊಟ್ಟೆಯಲ್ಲಿ ತೋಳವೇ ಜನಿಸಿದಂತೆ, ಅದೇ ವೀರ್ಯದಿಂದ ಜನಿಸಿದ ಮಗ ಸಹ ಅಪ್ಪನಂತೆ ಹಿಡಿದ ಕೆಲಸ ಆಗುವವರೆಗೆ ಕತ್ತೆಯ ಕಾಲನ್ನೂ ಹಿಡೀಬಲ್ಲ; ಸಗಣಿಯನ್ನಾದ್ರೂ ತಿನ್ನಬಲ್ಲ! ಹಾಗಾಗಿಯೇ ಗಾಂಜಾ-ಅಫೀಮು ಮಂಡಳಿಯ ಸಾವಿರಾರು ಜನರನ್ನು ಕರೆಸಿದ್ದು ಮೊನ್ನೆ! ಈಗ ಯಾವುದಕ್ಕೇ ಕೇಳಿ “ಲಕ್ಷಾಂತರ”ಎಂಬ ಸಂಖ್ಯೆಯ ಹೊರತು ಬೇರೆ ಮಾತೇ ಇಲ್ಲ.

ತನ್ನ ಕಚ್ಚೆಹರುಕು ಚಾಳಿಯನ್ನು ಬಯಲಿಗೆಳೆದ ಬರಹಗಾರರಮೇಲೆ ತೀರಾ ರಾಂಗಾಗಿದ್ದ ರಾಂಗೂ ಮಾಣಿ ಮಾಧ್ಯಮಗಳಲ್ಲಿ ತನಗೆ ಬೇಕಾದವರನ್ನೆಲ್ಲ ಹುಡುಕುತ್ತ ಸಮಯ ಕಳೆದ. ನಿರ್ಭಿಡೆಯವಾಗಿ ನಿರ್ಭೀತನಾಗಿ ಬರೆಯುತ್ತಿದ್ದ ಬರಹಾಗರರ ವಿರುದ್ಧ ಹಲ್ಲು ಮಸೆದ ಸದ್ದು ಹಸುವಿನ ಕಿವಿಯೂರಿನಿಂದ ಬೆಂಗಳೂರಿಗೂ ಕೇಳಿತು! ಮೈಯೆಲ್ಲ ವಿಷಪೂರಿತವಾದ ಕಾರ್ಕೋಟಕ ಘಟಸರ್ಪದಂತಹ ರಾಂಗೂ ಮಾಣಿ ತನ್ನ ವಿಕೃತಿಗಳನ್ನು ಬಯಲು ಮಾಡಲು ಹೊರಟವರನ್ನು ಬಗ್ಗುಬಡಿಯಲು ಮುಂದಾಗುತ್ತಿದ್ದ.

ಕಚ್ಚೆಕೇಸುಗಳ ಆರಂಭದ ದಿನಗಳಲ್ಲಿ ದೂರುದಾರರು ಎಲ್ಲೂ ಮಾತನಾಡದಂತೆ, ಸಾರ್ವಜನಿಕರಲ್ಲಿ ತಮ್ಮ ನೋವನ್ನು, ಅಳಲನ್ನು ತೋಡಿಕೊಳ್ಳಲು ಆಸ್ಪದವಿರದಂತೆ ಕಾಯ್ದೆಯನ್ನು ದುರುಪಯೋಗಿಸಿಕೊಂಡು ಲಗಾಮು ಹಾಕಿದ್ದ. ಎಲ್ಲೇ ನೋಡಿದರೂ ವೀರ್ಯಪ್ಪನ್ ಸಾಮ್ಗಳ ಬಗ್ಗೆ ಜೈಕಾರಗಳೇ ಕೇಳಿಬರಬೇಕು ಹಾಗೆ ನೋಡಿಕೊಂಡಿದ್ದ. ತನ್ನ ವಿರುದ್ಧ ಯಾರಾದರೂ ಏನಾದರೂ ಹೇಳಿದರೆ ಅವರನ್ನು ಬಂಧಿಸಿ ಕ್ರಮ ಜರುಗಿಸುವುದಕ್ಕೆ ಯಾವುದಾದರೂ ಒಂದು ಪಾಯಿಂಟ್ ಹುಡುಕಿಸುತ್ತಿದ್ದ. ಕೆಲವರು ನೇರಾನೇರ ಬರೆದರು; ಅಂಥವರಮೇಲೆ ಕೇಸು ದಾಖಲಿಸಿದ.

ವೀರ್ಯಪ್ಪನ್ ಸಾಮ್ಗಳು ಕತ್ತಲಕೋಣೆಯಲ್ಲೊಂದಷ್ಟು ಲದ್ದಿ ಹಾಕಿದರು. ವರ್ಷದಲ್ಲಿ 365 ಸೂರ್ಯನ ಪ್ರಕಾಶವನ್ನೇ ಕಾಣದ ಕತ್ತಲಕೋಣೆ ಅದು ಎಂಬುದನ್ನು ಜನತೆ ಬಲ್ಲರು!! ಪ್ರಕಾಶವೇ ಇಲ್ಲದ ಕತ್ತಲ ಕೋಣೆಯಿಂದ ಬೆಳಕನ್ನು ನಿರೀಕ್ಷಿಸುವ ನಿರೀಕ್ಷೆಯನ್ನೂ ಅವರು ಇಟ್ಟುಕೊಂಡಿರಲಾರರು. ಹಾಗಾಗಿ ಕತ್ತಲಕೋಣೆ ವಾಣಿಯಲ್ಲಿ ವೀರ್ಯಪ್ಪನ್ ಸಾಮ್ಗಳ ಲದ್ದಿಯ ಬೆತ್ತಲೆ ನರ್ತನ ನಡೆಯುತ್ತಲೇ ಇರುತ್ತದೆ.

ಛತ್ರಿ ಚತುರ್ಮೋಸದಲ್ಲಿ ಒಮ್ಮೆ ಹಾಗೆ ನಡೆದಿತ್ತು; ಮಂಗನಾಗೋ ಯಾತ್ರೆಯ ವೇಳೆಯಲ್ಲೂ ಇನ್ನೊಮ್ಮೆ ಹಾಗೆ ನಡೆಯಿತು. ವಿಷಯ ಹೊಂದಾಣಿಕೆಗೆ ಸ್ಥಳಾವಕಾಶವೇ ಇಲ್ಲ ಮತ್ತು ತಾವು ಯಾರ ಪರವಾಗಿಯಾಗಲೀ ವಿರೋಧವಾಗಿಯಾಗಲೀ ಇಲ್ಲ ಎಂಬ ಕತ್ತಲೆಕೋಣೆ ತನ್ನ ವಾಣಿಯಲ್ಲಿ ಸುದೀರ್ಘವಾಗಿ, ಕಲರ್ ಫುಲ್ ಆಗಿ ವೀರ್ಯಪ್ಪನ್ ಸಾಮ್ಗಳ ವಿಷಯನ್ನೇ ತುಂಬಿಸಿ ಜನತೆಯ ಮೇಲೆ ಹೇರಲಿಲ್ಲವೇ? ಆಗಲೇ ಜನ ಮಾತಾಡಿಕೊಂಡರು-ವಾಣಿಗೆ ಮಾಲೀಕರಿಲ್ಲವೇ? ಅಥವಾ ಮಾಲೀಕರು ಮತ್ತು ವೀರ್ಯಪ್ಪನ್ ಸಾಮ್ಗಳ ನಡುವೆ ಡೀಲ್ ಕುದುರಿದೆಯೇ? ಎಂದು. ಡೀಲ್ ಕುದುರಿದ್ದು ಸುಳ್ಳಲ್ಲ ಬಿಡಿ! ಆದರೆ ಡೀಲ್ ನಲ್ಲಿ ಕತ್ತಲಕೋಣೆಯಲ್ಲಿ ಎಷ್ಟು ಲದ್ದಿ ಬಿತ್ತು ಎಂಬುದು ಗೊತ್ತಾಗಲಿಲ್ಲ.

ತಮ್ಮದೇ ಶಂಖ ಅದರಿಂದ ಬಂದದ್ದೇ ತೀರ್ಥ ಎಂದುಕೊಂಡವರು ಚಕ್ರದಿಂದ ಬಂದ ತೀರ್ಥವನ್ನು ತೀರ್ಥವೇ ಅಲ್ಲವೆಂದರು! ಅಷ್ಟೇ ಅಲ್ಲ, ಚಕ್ರವಿದ್ದರಲ್ಲವೇ ತೀರ್ಥ ಬರೋದು ಅಂತ ಚಕ್ರವನ್ನೇ ತಿರುಗಿಸುವ ದುಸ್ಸಾಹಸಕ್ಕೆ ಮುಂದಾದರು. ತೀರ್ಥ ದ್ರವ ಪದಾರ್ಥ, ಮೂಲವಸ್ತು ನೀರು. ಎತ್ತರದಿಂದ ತಗ್ಗಿನೆಡೆಗೆ ಹರಿಯುವುದು ನೀರಿನ ಸಹಜ ಸ್ವಭಾವ. ನಿರಂತರ ಬಲವಾದ ಪ್ರಮಾಣದಲ್ಲಿ ಹರಿಯುವ ನೀರಿಗೆ ಎಷ್ಟೇ ಒಡ್ಡು ಕಟ್ಟಿದರೂ ಎಲ್ಲೋ ಒಂದುಕಡೆ ಅದು ಹರಿದುಹೋಗಲೇಬೇಕು. ಇಲ್ಲದಿದ್ದರೆ ಒಡ್ಡು ಒಡೆದುಹೋಗುತ್ತದೆ. ಆದರೆ ತೀರ್ಥಕ್ಕೊಂದು ಮಹತ್ವವಿದೆ; ಅದು ಸಾದಾ ನೀರಲ್ಲ, ಅಭಿಮಂತ್ರಿತ ನೀರು; ಅದರೊಳಗಿನ ಶಕ್ತಿಯೇ ಅದನ್ನು ತೀರ್ಥವೆನ್ನಲು ಕಾರಣವಾಗಿದೆ.

ವೀರ್ಯಪ್ಪನ್ ಸಾಮ್ಗಳ ಲದ್ದಿಯನ್ನು ತುಂಬಿಸಿಕೊಂಡ ಕತ್ತಲಕೋಣೆ, ಮಡಿವಾಳನ ಕತ್ತೆಯಂತೆ ಆಡಹತ್ತಿದ್ದು ಬಹಳ ವಿಶೇಷ. ಅಂದಹಾಗೆ, ಬೆಳೆವ ಸಿರಿ ಮೊಳಕೆಯಲ್ಲಿ ಅಂತಾರಲ್ಲ, ಈ ಕೋಣೆಯನ್ನು ಕಟ್ಟುವ ಹಂತದಲ್ಲಿ ಕಂಡವರೆಲ್ಲ ಕೋಣೆಯಲ್ಲಿ ಪ್ರಕಾಶವಿಲ್ಲ ಎಂದವರೇ! ಎಲ್ಲರಿಗೂ ಆಗಲೇ ಗೊತ್ತಾಗಿಬಿಟ್ಟಿತ್ತು!

ಉತ್ತರ ಕರ್ನಾಟಕದ ಅದಾವುದೋ ಸೇನೆ ಕತ್ತಲಕೋಣೆಯಲ್ಲಿ ಪ್ರಕಾಶ ಹರಿಯಬಹುದೆ ಎಂದು ಪ್ರಯತ್ನಿಸಲು ನಾಲ್ಕೈದು ವರ್ಷ ಕಚೇರಿ ತೆರೆದಿತ್ತಂತೆ. ಆ ಸೇನೆಯ ಮಂದಿ ಎಷ್ಟೇ ಪ್ರಯತ್ನಿಸಿದರೂ ಈ ಕತ್ತಲಕೋಣೆಯಲ್ಲಿ ಪ್ರಕಾಶ ಕಾಣಲೇ ಇಲ್ಲ-ಹಾಗಾಗಿ ಬಿಟ್ಟುಬಿಟ್ಟರು. ಅವರು ಖಾಲಿಬಿಟ್ಟು ಖುಲ್ಲಾಬಿದ್ದ ಕತ್ತಲೆಕೋಣೆ ತಿರುಪತಿ ತಿಮ್ಮಪ್ಪನ ಪಾದವನ್ನು ಹಿಡೀತು. ತಿಮ್ಮಪ್ಪನ ಕೃಪೆಯಾದರೂ ಕತ್ತಲಕೋಣೆಯಲ್ಲಿ ಪ್ರಕಾಶ ಮೂಡಲೇ ಇಲ್ಲ!

ರಾಜಕೀಯದವರಿಗೆ, ಹಣಮಾಡುವವರಿಗೆ, ರೌಡಿಗಳಿಗೆ ಕತ್ತಲಕೋಣೆ ಸ್ವಲ್ಪ ಆಸ್ಪದ ನೀಡಿತು; ಅಂಥವರ ಬಳಕೆಗೆ ಯೋಗ್ಯವಾದ ಕತ್ತಲಕೋಣೆಯಲ್ಲಿ ಇನ್ನು ಪ್ರಕಾಶ ಬರೋದಿಲ್ಲ ಅಂತ ತೀರ್ಮಾನಿಸಿದ ತಿರುಪತಿ ತಿಮ್ಮಪ್ಪನೇ ಕತ್ತಲೆಕೋಣೆ ವಾಣಿಯನ್ನು ಮರೆತುಬಿಟ್ಟ! ವೀರ್ಯಪ್ಪನ್ ಸಾಮ್ಗಳ ಲಡ್ಡುವಿಗೆ ಆಗಾಗ ಕೈಯೊಡ್ಡಿದ್ದ ತಿಮ್ಮಪ್ಪ ನಾಟಕ ಕಂಪನಿ ಸೇರಿ ಅಲ್ಲಿ ಸ್ತ್ರೀನಿವಾಸನ ಮಗನ ಕಲ್ಯಾಣಗುಣಗಳ ಬಗ್ಗೆ ಹೇಳಹತ್ತಿದ.

ಮೊನ್ನೆ ಮೊನ್ನೆ ಅನಿರೀಕ್ಷಿತವಾಗಿ ತನ್ನಲ್ಲೂ ಪ್ರಕಾಶವಿದೆ ಎಂದು ತೋರಿಸುವ ಹುಮ್ಮಸ್ಸಿನಿಂದ ಚಕ್ರವನ್ನು ತನ್ನ ಕತ್ತಲಿನಲ್ಲಿ ಮರೆಮಾಚುವ ಸಾಹಸವನ್ನು ಮಾಡಿತು ಕತ್ತಲಕೋಣೆ. ಹುಲಿಯ ಚರ್ಮವನ್ನು ಹೊದ್ದು ಕೆಲವು ಕಾಲ ಹುಲಿಯಂತೆ ಪೋಸುಕೊಡತೊಡಗಿದ್ದ ಕತ್ತೆ ಕೂಗಿದಾಗ ಅದರ ಬಣ್ಣ ಬಯಲಾಗಿ ಹೋಯಿತು! ’ಕತ್ತೆ ಬಲ್ಲುದೆ ತಾನು ಕತ್ತುರಿಯ ಪರಿಮಳವ’ ಅಂತಾರಲ್ಲ? ಕತ್ತೆಗೆ ತಾನು ಹುಲಿಯಂತೆ ಕೂಗಬೇಕೆಂಬ ಹಪಾಹಪಿಯಿದ್ದರೂ ದೇವರು ಕೊಟ್ಟ ಕಂಠ ಆ ಮಟ್ಟಕ್ಕಿರಲಿಲ್ಲ; ಅದು ಬೇರೆಯದೇ ಆಗಿತ್ತು. ಹುಲಿ ವೇಷದಲ್ಲಿ ತಮ್ಮನ್ನು ನಂಬಿಸಿದ್ದ ಕತ್ತೆಯ ದುಂಡಾವರ್ತನೆ ಕಂಡ ಜನ ಕತ್ತೆಗೆ ಧಿಕ್ಕಾರ ಹಾಕಿದರು!!

ಚಕ್ರ ಹೇಳಿಕೇಳಿ ತಿರುಗುವ ವ್ಯವಸ್ಥೆಯದ್ದು. ಕತ್ತಲೆಕೋಣೆಯಾದರೇನು ಬೆಳಕಿನ ಪುಂಜವಾದರೇನು ಇರುವಲ್ಲೆ ತಿರುಗಬಲ್ಲ ಸ್ವಂತಿಕೆ ಅದಕ್ಕಿದೆ; ಅದು ತಿರುಗುತ್ತದೆ. ಕತ್ತಲೆಕೋಣೆಗೆ ನಿನ್ನಲ್ಲಿ ಪ್ರಕಾಶವಿಲ್ಲ ಎಂದುಬಿಟ್ಟರೆ ಸಾಕು ವೀರ್ಯಪ್ಪನ್ ಸಾಮ್ಗಳ ಹಾಗೆ ವಿಪರೀತ ಕೋಪ ಬರುತ್ತದೆ! ತನ್ನ ಅಂಡಲ್ಲೆ ಬೆಳಕಿದೆ ಎಂದುಕೊಂಡಿದ್ದ ಅಂಡೆಪಿರ್ಕಿಗೆ ಈಗ ಅಸಲೀಯತ್ತು ಗೊತ್ತಾಗಿದೆ.

ಕೋಣೆವಾಣಿ ಆರಂಭವಾದಾಗಲೇ ಅಂದುಕೊಂಡಿದ್ದೆ; ಅದೊಂದು ಅಡ್ಡಕಸುಬಿಗಳ ಮೇಳ ಅಂತ; ಈಗ ಪಕ್ಕಾ ಆಗಿದೆ. ಕಂಡಿದ್ದನ್ನೆಲ್ಲ ತುರುಕಬೇಕು, ಆದರೆ ಯಾರನ್ನೂ ವಿರೋಧಿಸಿದಂತಿರಬಾರದು. ಹಣ ತೆಗೆದುಕೊಂಡರೆ ಮಾತ್ರ ಕೊಟ್ಟವರ ಪರವಾಗಿ ವಕಾಲತ್ತು ಹಾಕಬಹುದು! ಎಂಬ ಧೋರಣೆಯ ಕೋಣೆವಾಣಿ ವೀರ್ಯಪ್ಪನ್ ಸಾಮ್ಗಳ ಬಗ್ಗೆ ಜನತೆಯಲ್ಲಿ ಭಕ್ತಿ ಮೂಡಿಸೋದಕ್ಕೆ ಪ್ರಯತ್ನಿಸುತ್ತ ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತದೆ. ಮಾಲೀಕರಿಗೆ ಯಾರಾದರೂ ಕೇಸು ಹಾಕುತ್ತಾರೆಂಬ ಭೀತಿಯಂತೆ; ಭೀತಿ ಮಾಲೀಕರಿಗೋ ಅಥವಾ ಮಾಲೀಕರು ಇರಿಸಿಕೊಂಡ ಹುಲಿವೇಷದ ಕತ್ತೆಗೋ ಗೊತ್ತಾಗಲಿಲ್ಲ. ಎಲ್ಲವನ್ನೂ ಆ ಶ್ರೀಹರಿಯೇ ಬಲ್ಲ!! 🙂 🙂

[ಒಂದು ಮಾತನ್ನು ಹೇಳಲು ಮರೆತಿದ್ದೆ-ಚಕ್ರಕ್ಕೆ ವೀರ್ಯಪ್ಪನ್ ಸಾಮ್ಗಳ ನಿಜರೂಪದ ದರ್ಶನ ಇನ್ನೂ ಆಗಿಲ್ಲ. ಹಾಗಾಗಿ ಕತ್ತಲೆಕೋಣೆಯಂತೆ ಚಕ್ರದಲ್ಲೂ ವೀರ್ಯಪ್ಪನ್ ಸಾಮ್ಗಳ ಗುಣಗಾನ ಮಾಡುವ ’ತೀರ್ಥ’ ಹೊರಹರಿಯುತ್ತದೆ. ಯಾರಾದರೂ ಚಕ್ರಕ್ಕೆ ವೀರ್ಯಪ್ಪನ್ ಸಾಮ್ಗಳ ನಿಜರೂಪದರ್ಶನ ಭಾಗ್ಯ ಕರುಣಿಸಿ. ವೀರ್ಯಪ್ಪನ್ ಭಕ್ತಿ ವಿಷಯದಲ್ಲಿ ಮಾತ್ರ ಕತ್ತಲೆಕೋಣೆ ಮತ್ತು ಚಕ್ರದಿಂದ ಹರಿಯುವ ತೀರ್ಥ ಒಂದೇ ರೀತಿ ಕಾಣುತ್ತದೆ! ಸ್ವಂತಿಕೆ ಇರುವ ಚಕ್ರ ಯಾಕೆ ವೀರ್ಯಪ್ಪನ್ ಸಾಮ್ಗಳ ನಿಜರೂಪವನ್ನು ಅರಿಯಲಿಲ್ಲ ಎಂಬುದು ಆಶ್ಚರ್ಯಕರವೇ! ]

Thumari Ramachandra
12/02/2017
source: https://www.facebook.com/groups/1499395003680065/permalink/1906998689586359/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s