ಜಗದ್ಗುರು ಶೋಭರಾಜಾಚಾರ್ಯ ವೀರ್ಯಪ್ಪನ್‍ಗೆ ಕಾಂಡೋಮ್ ತುಲಾಭಾರ ಯಾವಾಗ?

ಜಗದ್ಗುರು ಶೋಭರಾಜಾಚಾರ್ಯ ವೀರ್ಯಪ್ಪನ್‍ಗೆ ಕಾಂಡೋಮ್ ತುಲಾಭಾರ ಯಾವಾಗ?

ಕೆಲವು ಮಂದಿ ತಲೆ ಕೆರೆದುಕೊಂಡಿರಬಹುದು-ತುಮರಿ ಯಾಕೆ ಬರುತ್ತಿಲ್ಲ ಅಂತ. ಹಳದೀ ಬಾವಯ್ಯಂದಿರು ದನಗಳ ಸಾಗಾಟದಲ್ಲಿ ಬೀಜಿ ಇರುವುದರಿಂದ ತುಮರಿ ಬಗ್ಗೆ ಯೋಚಿಸಲೂ ತೆರಪಿಲ್ಲ. ಪಾಪ ಅವರಾದರೂ ಏನು ಮಾಡ್ತಾರೆ? ಇವತ್ತಿಗೆ ಇದು ಮುಖ್ಯವೇ ಅಲ್ಲ. ಮುಖ್ಯ ವಿಷಯಗಳನ್ನು ಇಲ್ಲಿನ ಕೆಲವು ಹಿರಿಯ ಸ್ನೇಹಿತರು ಆಗಾಗ ಬಿತ್ತರಿಸುತ್ತಲೇ ಇದ್ದಾರೆ! ಹಾಗಾಗಿ ತುಮರಿ ನಿರಾಳ!! ಶಿರಸಿಯ ’ಮಹಾಮೌನಿ ಸ್ವಾಮಿ’ಗಳಂತೆ ತುಮರಿ ಮೌನಿಯಂತೂ ಅಲ್ಲ. 🙂 🙂

ತುಮರಿಯ ಲೇಖನಗಳಲ್ಲಿ ಸತ್ವ,ರಜ, ತಮ ಮೂರೂ ಗುಣಗಳುಳ್ಳ ಅಂಶಗಳು ಇರುತ್ತವೆ ಎಂಬುದು ಕೆಲವರ ಅನಿಸಿಕೆ; ತುಮರಿ ತುರ್ಯಾನಂದನಾದರೂ ಶೀ ಶೀ ಶೀ ಶೀಮಜ್ಜಗದ್ಗುರು ಶೋಭರಾಜಾಚಾರ್ಯ ಹಾದರೇಶ್ವರ ತೊನೆಯಪ್ಪನಂತೆ ವೇಷ ಮಾತ್ರ ಸನ್ಯಾಸಿಯದ್ದು. ಉಳಿದಂತೆ ತುಮರಿ ಸಾಮಾನ್ಯ ಮನುಷ್ಯ; ಒಂದು ಭಿನ್ನತೆಯೆಂದರೆ ತುಮರಿ ಏಕಪತ್ನಿ ವ್ರತಸ್ಥನಾಗಿ ನಿಷ್ಕಳಂಕ. ವೀರ್ಯಪ್ಪನ್ ಸಾಮ್ಗಳು ಹಾಗಲ್ಲ.

ಅಂದಹಾಗೆ ಸಾಮ್ಗಳಿಗೆ “ವೀರ್ಯಪ್ಪನ್” ಎಂದು ಹೆಸರಿಟ್ಟಿದ್ದು ಎಷ್ಟು ಸಾರ್ಥಕ ಎಂದು ನಿಮಗಿವತ್ತು ಪಕ್ಕಾ ಆಗಿರುತ್ತದೆ ಅಂದುಕೊಳ್ತೇನೆ. ಸನ್ಯಾಸಿ ಏಕಾಂತದಲ್ಲಿ ಕಚ್ಚೆ ಸಡಿಲಿಸಿಕೊಂಡು ಕಳ್ಳನಾಗಿ, ಲಂಪಟನಾಗಿ ಸಮಾಜವನ್ನು ಹಾಳುಗೆಡವುತ್ತಿರುವ ಸನ್ನಿವೇಶದಲ್ಲಿ ವಿಷಯವನ್ನು ಸವಿವರವಾಗಿ ತಲುಪಿಸುವ ಪ್ರಯತ್ನದಲ್ಲಿ ಲೇಖನದಲ್ಲಿ ಸತ್ವ-ರಜ-ತಮ ಅಂಶಗಳು ಅನಿವಾರ್ಯ; ಆ ಬಗ್ಗೆ ನಿಮ್ಮೆಲ್ಲರ ಕ್ಷಮೆಯಿರಲಿ.

ವಿಜಯಕರ್ನಾಟಕದಲ್ಲಿ ಇತ್ತೀಚೆಗೆ ಒಂದು ಲೇಖನ ನೋಡಿದೆ. ಅದರಲ್ಲಿ ಹೀಗಿತ್ತು-
—-
ಮಹಿಳೆಯರ ಸ್ತನಗಳನ್ನು ಒಂದು ದಿನದಲ್ಲಿ 10 ನಿಮಿಷಗಳ ಕಾಲ ನೋಡಿದರೆ ಪುರುಷರ ಆಯಸ್ಸು 5 ವರ್ಷ ವೃದ್ಧಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

’ದಿ ನ್ಯೂ ಇಂಗ್ಲೆಂಡ್ ಜರ್ನಲ್‌ ಆಫ್‌ ಮೆಡಿಸಿನ್‌’ನಲ್ಲಿ ಪ್ರಕಟವಾಗಿರುವ ಜರ್ಮನ್‌ ಸಂಶೋಧನಾ ಅಧ್ಯಯನ ವರದಿಯೊಂದು ಈ ವಿಷಯವನ್ನು ಪ್ರಕಟಿಸಿದೆ. ಯಾವ ಪುರುಷರು ದಿನದಲ್ಲಿ10 ನಿಮಿಷಗಳ ಕಾಲ ಮಹಿಳೆಯರ ಸ್ತನಗಳನ್ನು ನೋಡುತ್ತಾರೋ ಅಂಥವರ ಜೀವಿತಾವಧಿ 5 ವರ್ಷ ಹೆಚ್ಚಾಗಿರುತ್ತದೆ ಎಂದು ವರದಿ ಹೇಳುತ್ತದೆ.

ಮತ್ತೊಂದು ಕುತೂಹಲಕಾರಿ ವಿಷಯವೇನೆಂದರೆ 10 ನಿಮಿಷಗಳ ಕಾಲ ಸ್ತನಗಳನ್ನು ನೋಡುವುದು 30 ನಿಮಿಷಗಳ ಕಾಲ ಜಿಮ್‌ನಲ್ಲಿ ಬೆವರಿಳಿಸಿ ಕಸರತ್ತು ಮಾಡುವುದಕ್ಕೆ ಸಮವಂತೆ. ಈ ಒಂದು ಸಂಶೋಧನೆಗೆ 5 ವರ್ಷಗಳ ಕಾಲ 200 ಪುರುಷರನ್ನು ಬಳಸಿಕೊಳ್ಳಲಾಗಿದೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ.
—-
ಆ ಲೇಖನವನ್ನು ಓದುತ್ತಿರುವಾಗಲೇ ವೀರ್ಯಪ್ಪನ್ ಸಾಮ್ಗಳ ನೆನಪಾಯಿತು. ಆ ಲೇಖನವನ್ನು ಸಾಮ್ಗಳು ತಮ್ಮ ಸಂಗ್ರಹಾಲಯದಲ್ಲಿ ಇಟ್ಟುಕೊಳ್ಳೋದು ಒಳ್ಳೇದು ಅನ್ನಿಸಿತು. ಮೇಲಾಗಿ, ವೀರ್ಯಪ್ಪನ್ ಸಾಮ್ಗಳು ಪ್ರತಿನಿತ್ಯ ಅದೆಷ್ಟು ಜೋಡಿ ಸೂರ್ಯಚಂದ್ರರನ್ನು ಗಂಟೆಗಟ್ಟಲೆ ದಿಟ್ಟಿಸುವುದಿಲ್ಲ? ಏಕಾಂತದಲ್ಲಿ ಅದೆಷ್ಟು ಸೂರ್ಯಚಂದ್ರರ ಪ್ರತ್ಯಕ್ಷ ದರ್ಶನ ಪಡೆದು ಆಡುವುದಿಲ್ಲ? ವಿದೇಶೀ ಸಂಶೋಧಕರು ವೀರ್ಯಪ್ಪನ್ ಸಾಮ್ಗಳನ್ನು ಒಂದು ಮಾತು ಕೇಳಬೇಕಿತ್ತು; ಸಾಮ್ಗಳ ಅನುಭವವನ್ನು ಆಧರಿಸಿ ಮಾಹಿತಿ ಕಲೆಹಾಕಿ ಇನ್ನಷ್ಟು ಸಂಶೋಧನೆ ನಡೆಸಲು ಅನುಕೂಲವಾಗುತ್ತಿತ್ತು, ಏನಂತೀರಿ?

ಕವಳದ ಗೋಪಣ್ಣ ದನಗಳ ಮೈಗೆಲ್ಲ ಮೈಕ್ರೊಸ್ಕೋಪಿಕ್ ಕ್ಯಾಮೆರಾ ಹಚ್ಚಬೇಕಿತ್ತು ಅಂತಾನೆ! ಸಾವಿರ ಸಂಖ್ಯೆಗೆ ಕಮ್ಮಿಯಾಗದ ರೀತಿಯಲ್ಲಿ ಬಾವಾಜಿಗಳು, ಕಳ್ಳರು, ಗೂಂಡಾಗಳು, ವಿಕೃತ ಕಾಮುಕರು ಎಲ್ಲರನ್ನೂ ಕರೆತರಲಾಗುತ್ತಿದೆ. ಎಲ್ಲೆಲ್ಲೂ ಕಾವಿವೇಷವೇ! ಹಸುವಿನ ಕಿವಿಯೂರಿಗೆ ಅವರೆಲ್ಲ ಬಿಜಯಂಗೈದು ಎಂಬತ್ತು ಸಾವಿರ ’ಗೌರವ’ ಸ್ವೀಕರಿಸಿ, ಅಲ್ಲಿರುವ ಉಸ್ತುವಾರಿಯವರು ಮನಸ್ಸಿಲ್ಲದ ಮನಸ್ಸಿನಿಂದ [ಅಂತರಂಗದಲ್ಲಿ ತೊನೆಯಪ್ಪನಿಗೆ ಅಪಾದ ಮಸ್ತಕ ಉಗಿಯುತ್ತ, ತಮ್ಮ ಆರ್ಥಿಕಾನುಕೂಲಕ್ಕಾಗಿ ವಹಿಸಿಕೊಂಡ ಕೆಲಸವನ್ನು ನೆನಪಿಸಿಕೊಂಡು ತಮ್ಮೊಳಗನ್ನು ಹತ್ತಿಕ್ಕಿ] ಅಡ್ಡಬಿದ್ದಾಗ-ಅವರ ನಮಸ್ಕಾರಗಳನ್ನೂ ಸ್ವೀಕರಿಸಿ ಮುಂದಿನ ಟೆಂಟಿಗೆ ಬಿಜಯಂಗೈಯುತ್ತಿದ್ದಾರೆ[ರವಾನೆಯಾಗುತ್ತಿದ್ದಾರೆ]!!

ಬೇಸಿಗೆ ಬಂತೆಂದರೆ ನೀರಿಲ್ಲದ ಊರುಗಳಿಂದ ಇವರೆಲ್ಲ ನೀರಿರುವ ಊರುಗಳಿಗೆ ಗುಳೇ ಹೋಗುತ್ತಿದ್ದರು. ನೀರಿದ್ದರೆ ಸ್ನಾನ; ಇರದಿದ್ದರೆ ಎಣ್ಣೆಸ್ನಾನ!ಪಾನ ಮಾತ್ರ ನಿತ್ಯವೂ ಇರುತ್ತದೆ ಬಿಡಿ-ಶಿವಾಯ ನಮಃ!! ಕೆಲವರ ಮುಖಗಳನ್ನೆಲ್ಲ ನೋಡುತ್ತಿದ್ದರೆ ಇಷ್ಟುಕಾಲ ಇವರೆಲ್ಲ ಯಾವ ಝೂ ನಲ್ಲಿದ್ದರು, ಯಾವ ಸರ್ಕಸ್ಸಿನಲ್ಲಿದ್ದರು ಎಂದೆನಿಸಿದರೂ ತಪ್ಪಿಲ್ಲ!! ಜಗದ್ಗುರು ವೀರ್ಯಪ್ಪನ್ ಸಾಮ್ಗಳು ಯಾತ್ರೆಯ ನೆಪದಲ್ಲಿ, “ಸಂಘ ಕಟ್ಟಿದ್ದೇವೆ ತಾವು ತಪ್ಪದೇ ಬರಬೇಕು. ತಾವು ಬರುವುದಕ್ಕೆ ’ಗೌರವ’ ವ್ಯವಸ್ಥೆ ಮಾಡುತ್ತೇವೆ” ಎಂದು ಅಂಗಲಾಚುತ್ತ ಅಷ್ಟಗಲ ಹೋಗಿಬಂದರು.

ಒಬ್ಬ ಸ್ವಾಮಿ ಹಾದಿ ತಪ್ಪಿದರೆ ಎಂತಹ ಪರಿಪಾಟಲುಗಳನ್ನೆಲ್ಲ ಎದುರಿಸಬೇಕಾದೀತು ಎಂಬುದು ನಮ್ಮಂತಹ ಕೆಲವು ಮತಿಹೀನರಿಗೆ ಆಗಾಗ ಗೋಚರವಾಗುತ್ತದೆ. ಮನೆತನದಲ್ಲಿ ಹಿಂದೆ ಯಾರೋ ಪಾಪ ಮಾಡಿದ್ದರೆ ಅವರ ವಂಶಸ್ಥರೆಲ್ಲ ಆ ಪಾಪದ ಫಲವನ್ನು ಅನುಭವಿಸಬೇಕಾಗಿ ಬರುತ್ತದೆ ಎಂಬ ಹೇಳಿಕೆಯೂ ಇದೆಯಲ್ಲ? ಪೀಠದ ಭಕ್ತರು ಹಿಂದೆಲ್ಲೋ ಮಾಡಿದ ಪಾಪದ ಫಲವಾಗಿ ಇಂದು ಇಂತಹ ಕಪಟನಾಟಕ ಪಾತ್ರಧಾರಿಯನ್ನು ಪೀಠದಲ್ಲಿ ಕಾಣಬೇಕಾಗಿ ಬಂದಿದೆ!

ಅನುದಿನವೂ ಚಿತ್ರವಿಚಿತ್ರ, ಅಸಂಬದ್ಧ, ವಿರೋಧಾಭಾಸದ ಹೇಳಿಕೆಗಳು, ಸನ್ಯಾಸಿಗೆ-ಸನ್ಯಾಸ ಧರ್ಮಕ್ಕೆ ಸಲ್ಲದ ಮಾತುಗಳು, ವ್ಯರ್ಥ ಪ್ರಲಾಪಗಳು, ಬಲವಂತವಾಗಿ ಭಕ್ತರಮೇಲೆ ಹೇರುವ ಹಳವಂಡಗಳು ಎಲ್ಲವನ್ನೂ ಗಮನಿಸಿದಾಗ ಇದೂ ಒಂದು ಮಠವೇ ಎನ್ನುವಷ್ಟು ಕ್ರೋಧ ಭುಗಿಲೇಳುತ್ತದೆ. “ಛೆ, ಮಾನಗೇಡಿ, ಇಷ್ಟೆಲ್ಲ ಹೇಳಿಸಿಕೊಂಡು ಇದ್ದರೆಷ್ಟು ಸತ್ತರೆಷ್ಟು?” ಎಂದು ಸಮಾಜದ ಬಹುತೇಕ ಮಂದಿ ಈಗೀಗ ಶಪಿಸತೊಡಗಿದ್ದಾರೆ; ಆದರೂ ರಾವಣರಾಜ್ಯದಲ್ಲಿ ಬಹಿಷ್ಕಾರ, ಶಾಪಗಳ ಭಯ ಇನ್ನೂ ಪೂರ್ತಿ ತೊಲಗಿಲ್ಲ. ದುಷ್ಟರಿಗೆ ಮೊದಲು ನಮಸ್ಕರಿಸಬೇಕು ಎಂಬ ಸುಭಾಷಿತವೇ ಇದೆಯಲ್ಲ?

ಈಗ ಒಂದು ಉಪಕಥೆಯನ್ನು ತೆಗೆದುಕೊಳ್ಳುತ್ತೇನೆ-ಒಂದು ಸಲ ಕುರುಕ್ಷೇತ್ರದಲ್ಲಿ ಒಂದು ದೊಡ್ಡ ಯಾಗವು ನಡೆಯಿತು. ಜನಮೇಜಯನು ಯಜ್ಞ ಮಂಟಪದ ರಕ್ಷಣೆಗೆ ತನ್ನ ಮೂವರು ತಮ್ಮಂದಿರನ್ನೂ ನೇಮಿಸಿದ್ದನು.

ಸಾರಮೇಯವೆಂಬ ಒಂದು ನಾಯಿಮರಿಯು ಮಧ್ಯಾಹ್ನ ಯಜ್ಞಮಂಟಪದ ಬಳಿಗೆ ಬಂದಿತು. ಅದು ದೂರದಲ್ಲೇ ನಿಂತಿದ್ದರೂ ಜನಮೇಜಯನ ತಮ್ಮಂದಿರು ಅದನ್ನು ಹಿಡಿದು ಬೆತ್ತದಿಂದ ಬಾಸುಂಡೆ ಬರುವಂತೆ ಹೊಡೆದರು. ಅದಕ್ಕೆ ಮೈತುಂಬ ಗಾಯಗಳಾಗಿ ರಕ್ತ ಸುರಿಯತೊಡಗಿತು. ಸಾರಮೇಯವು ನೋವಿನಿಂದ ಅಳುತ್ತಾ ತನ್ನ ತಾಯಿಯಾದ ಸರಮೆಯ ಬಳಿಗೆ ಓಡಿತು.

ತನ್ನ ಮರಿಗಾಗಿ ಕಾಯುತ್ತಾ ಒಂದು ಮರದ ಬಳಿ ಸರಮೆ ಕುಳಿತಿತ್ತು. ತನ್ನ ಮರಿಯ ಮೈಯಲ್ಲಿ ಗಾಯಗಳನ್ನೂ ರಕ್ತವನ್ನೂ ಕಂಡು ಸರಮೆಗೆ ಬಹಳ ದುಃಖವಾಯಿತು. ಅದು ಪ್ರೀತಿಯಿಂದ ಮಗನ ಮೈಯನ್ನು ಸವರಿ “ಮಗೂ, ನಿನ್ನನ್ನು ಯಾರು ಹೊಡೆದರು? ನೀನು ಏನು ತುಂಟತನ ಮಾಡಿದೆ?” ಎಂದು ಕೇಳಿತು. ಸಾರಮೇಯವು ನಡೆದ ಸಂಗತಿಯನ್ನು ವಿವರಿಸಿ, “ಅಮ್ಮಾ, ನಾನು ಯಾವ ತುಂಟತನವನ್ನೂ ಮಾಡಲಿಲ್ಲ. ಸುಮ್ಮನೆ ದೂರದಲ್ಲಿ ನಿಂತಿದ್ದೆ. ಅಲ್ಲಿನ ಪದಾರ್ಥಗಳನ್ನು ಕಣ್ಣೆತ್ತಿಯೂ ನೋಡಲಿಲ್ಲ. ಆದರೂ ರಾಜನ ತಮ್ಮಂದಿರು ನನ್ನನ್ನು ಹೊಡೆದರು” ಎಂದಿತು.

ಸರಮೆಗೆ ಕೋಪ ಬಂದಿತು. ಮಗನೊಡನೆ ಅದು ಕೂಡಲೇ ಯಜ್ಞಮಂಟಪಕ್ಕೆ ಬಂದಿತು. ಜನಮೇಜಯನ ಎದುರಿನಲ್ಲೇ ನಿಂತು, “ಮಹಾರಾಜ, ನಿನ್ನ ತಮ್ಮಂದಿರು ಮಾಡಿರುವ ಕೆಲಸವನ್ನು ನೋಡು. ನನ್ನ ಮಗನನ್ನು ಏಕೆ ಹೊಡೆದಿರಿ?” ಎಂದಿತು.

ರಕ್ತ ಸುರಿಸುತ್ತಿರುವ ಮರಿಯನ್ನು ಕಂಡು ಜನಮೇಜಯನಿಗೂ ಸಹ ಅಯ್ಯೋ ಪಾಪ ಅನಿಸಿತು. ಅವನ ತಮ್ಮಂದಿರು ತಮ್ಮ ತಪ್ಪಿಗಾಗಿ ತಲೆಬಾಗಿ ನಿಂತಿದ್ದರು. ರಾಜನಿಗೆ ಏನು ಹೇಳುವುದಕ್ಕೂ ತೋಚಲಿಲ್ಲ. ಅಷ್ಟರಲ್ಲೇ ಸರಮೆಯು “ಮಹಾರಾಜ, ನಿರಪರಾಧಿಯಾದ ನನ್ನ ಮಗನನ್ನು ಹೊಡೆಸಿದ್ದೀರಿ. ಇದಕ್ಕೆ ತಕ್ಕ ಶಿಕ್ಷೆಯನ್ನು ದೇವರು ನಿಮಗೂ ವಿಧಿಸುತ್ತಾನೆ” ಎಂದು ಹೇಳಿ ಹೊರಟು ಹೋಯಿತು.

ಜನಮೇಜಯನಿಗೆ ತುಂಬಾ ದುಃಖವಾಯಿತು. ತಮ್ಮಂದಿರು ಮಾಡಿದ ತಪ್ಪನ್ನು ಅವನು ತನ್ನದಾಗಿಯೇ ಭಾವಿಸಿದನು. ಸೋಮಶ್ರವನೆಂಬ ಪುರೋಹಿತನನ್ನು ಕರೆಸಿ ಶಾಂತಿಪೂಜೆಯನ್ನು ಮಾಡಿಸಿದನು. ನಿಷ್ಕಾರಣವಾಗಿ ಪ್ರಾಣಿಗಳನ್ನು ಹಿಂಸಿಸುವುದು ಮಹಾಪಾಪ. ಆದ್ದರಿಂದ ಮುಂದೆ ತನ್ನ ರಾಜ್ಯದಲ್ಲಿ ಸಾಧು ಪ್ರಾಣಿಗಳನ್ನು ಯಾರೂ ಹಿಂಸಿಸಕೂಡದೆಂದು ಡಂಗುರ ಹಾಕಿಸಿದನು.

ಇದೇ ಸಮಯಕ್ಕೆ ತಕ್ಷಶಿಲೆಯಲ್ಲಿ ಗಲಭೆಗಳಾದವು. ಶತ್ರುರಾಜರ ಸೈನ್ಯಗಳು ಆ ನಗರದೊಳಕ್ಕೆ ನುಗ್ಗಿ ಬಡವರಾದ ಪ್ರಜೆಗಳನ್ನು ಹೊಡೆದು ಬಡಿದು ಸಂಪತ್ತನ್ನು ದೋಚಿಕೊಳ್ಳತೊಡಗಿದುವು. ಅಲ್ಲಿನ ಜನರು ಹಾಹಾಕಾರ ಮಾಡಿದರು. ಜನಮೇಜಯನಿಗೆ ಸರಮೆಯ ಮಾತು ಜ್ಞಾಪಕಕ್ಕೆ ಬಂದಿತು. ಒಂದು ಸಾಧು ಪ್ರಾಣಿಯನ್ನು ಹಿಂಸಿಸಿದ್ದಕ್ಕೆ ಇಷ್ಟೊಂದು ಆಪತ್ತು ಬಂದಿತೆಂದು ಅವನಿಗೆ ಆಶ್ಚರ್ಯವಾಯಿತು. ಅವನು ಶತ್ರುಗಳನ್ನು ಸೋಲಿಸಿ ಓಡಿಸಿದನು. ಸ್ವಲ್ಪ ಕಾಲ ತಕ್ಷಶಿಲೆಯಲ್ಲಿ ಹೆಂಡತಿಯೊಡನೆ ನಿಂತನು.

ಸರಮೆ ಎಂಬ ನಾಯಿಯ ಹೆಸರನ್ನು ವೇದದಲ್ಲೂ ಕಾಣಬಹುದಷ್ಟೆ! ರಾಜಪ್ರಭುತ್ವದಲ್ಲಿ ಪ್ರಾಣಿಗಳ ದೂರಿನ ಬಗೆಗೂ ಮಹತ್ವವಿತ್ತು; ನ್ಯಾಯ-ಅನ್ಯಾಯಗಳ ತುಲನೆ ನಡೆಯುತ್ತಿತ್ತು. ಯೋಗ್ಯನಾದ ರಾಜ ಅರಿತೋ ಅರಿವಿಲ್ಲದೆಯೋ ಅನ್ಯಾಯವೆಸಗಿದ್ದರೆ ಸ್ವಯಂ ದಂಡನೆಗೆ ಒಳಗಾಗುತ್ತಿದ್ದ. ಹುಟ್ಟಿನಿಂದ ಮನುಷ್ಯರಲ್ಲಿ ಮೂರು ವೈಕಲ್ಯಗಳು ಇದ್ದೇ ಇರುತ್ತವೆಂದಿದ್ದಾರೆ ವೇದರ್ಷಿಗಳು, ವೇದ ದೃಷ್ಟಾರರು. ಅವು ಮನುಷ್ಯನ ಮನಸ್ಸಿಗೆ ಸಂಬಂಧಿಸಿವೆ.

ಮಲ[bad thoughts], ವಿಕ್ಷೇಪ[distractions]ಮತ್ತು ಅಜ್ಞಾನ ಆವರಣ[ignorance]ಗಳೆಂಬ ಮೂರು ವೈಕಲ್ಯಗಳು ಮನುಷ್ಯ ಮನಸ್ಸನ್ನು ಆಳುತ್ತವೆ. ಅವುಗಳ ಮಾರ್ಜನೆಗೆ-ಪರಿಮಾರ್ಜನೆಗೆ ಬೇಕಾಗಿ ವೇದಗಳಲ್ಲಿ ಕರ್ಮಕಾಂಡ, ಉಪಾಸನಾ ಕಾಂಡ ಮತ್ತು ಜ್ಞಾನ ಕಾಂಡಗಳೆಂಬ ಮೂರು ಕಾಂಡಗಳನ್ನು ಹೇಳಿದ್ದಾರೆ.

ಒಬ್ಬ ಮನುಷ್ಯನ ಮನಸ್ಸಿನಲ್ಲಿ ದಿನವೊಂದಕ್ಕೆ 6,000 ಯೋಚನೆಗಳು ಉಗಮಗೊಳ್ಳುತ್ತವೆ; ಅಂದರೆ ನಿಮಿಷಕ್ಕೆ ಹೆಚ್ಚುಕಡಿಮೆ ನಲ್ವತ್ತು ಯೋಚನೆಗಳು; ಅವುಗಳಲ್ಲಿ ಬಹುತೇಕ ಯೋಚನೆಗಳು ನಿಷ್ಪ್ರಯೋಜಕ ಮತ್ತು ನಿರರ್ಥಕ ಮತ್ತು ಹಾನಿಕಾರಕವಾಗಿರುತ್ತವೆ. ಮನದ ಮೂಸೆಯಲ್ಲಿ ನಿತ್ಯ ಏಳುವ ಯೋಚನೆಗಳಲ್ಲಿ ವ್ಯಭಿಚಾರದ ಯೋಚನೆಗಳೂ ಹುಟ್ಟುವುದು ಸಹಜವಂತೆ; ಇನ್ನೊಬ್ಬರ ಮನಸ್ಸಿನಲ್ಲೇಳುವ ಆಲೋಚನೆಗಳನ್ನೆಲ್ಲ ತಿಳಿದುಕೊಳ್ಳಲು ಸಾಧ್ಯವಾಗಿದ್ದರೆ ಯಾರಿಗೆ ಯಾರೂ ಸ್ನೇಹಿತರೋ ಬಂಧುಗಳೋ ಆಗಿರಲಿಕ್ಕೆ ಸಾಧ್ಯವಾಗುತ್ತಿರಲಿಲ್ಲವಂತೆ. ಅದರಲ್ಲಂತೂ ಗಂಡ-ಹೆಂಡತಿಯರ ದಾಂಪತ್ಯ ಎನ್ನುವುದು ಸಾಧ್ಯವೇ ಆಗುತ್ತಿರಲಿಲ್ಲ ಎನ್ನುತ್ತಾರೆ ಆ ಮನೋ ವಿಷಯಕವಾಗಿ ಆಳವಾದ ಅಧ್ಯಯನ ನಡೆಸಿದ ಮಹಾತ್ಮರು.

ಸಾಮಾನ್ಯ ಸ್ಥಿತಿಯಲ್ಲಿ ಮನುಷ್ಯ ಮನಸ್ಸೇ ಒಂದು ಮಲ. ಅದು ನಿರ್ಮಲವಾಗುವುದಕ್ಕೆ ಸಾತ್ವಿಕ ಆಹಾರಗಳನ್ನು ಸೇವಿಸಬೇಕು, ಯೋಗ-ಧ್ಯಾನಗಳನ್ನು ನಡೆಸಬೇಕು, ನಿರ್ಮಲಗೊಳಿಸಬಲ್ಲ ಗ್ರಂಥಗಳನ್ನು ಓದಬೇಕು; ಪ್ರಭೋಧ ಸಾಹಿತ್ಯಗಳ ಅಧ್ಯಯನ ಮಾಡಬೇಕು; ಆಜನ್ಮ ಪರ್ಯಂತ ಸ್ವಾಧ್ಯಾಯಿಗಳಾಗಬೇಕು; ಸಜ್ಜನರ ಸಹವಾಸದಲ್ಲಿಯೇ ಇರಬೇಕು; ಸತ್ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು.

ಹಿಂದಿನ ಲೇಖನದಲ್ಲಿ ಗುರುವಿನ ಬಗ್ಗೆ ಹೇಳಿದ್ದೆ ಎನಿಸುತ್ತದೆ. ವರ್ಣಮಾತ್ರಂ ಗುರುಃ ಎಂದಿದ್ದರೂ ಇಂದು ಅಧುನಿಕ ವಿದ್ಯೆಯನ್ನು ಬೋಧಿಸುತ್ತ ಅನತಿ ಸಮಯದಲ್ಲೇ ಮದ್ಯದಂಗಡಿಗೆ ನುಗ್ಗುವ ಮಾಸ್ತರರನ್ನೆಲ್ಲ ಗುರುವೆನ್ನೋದು ಸಮಂಜಸವಲ್ಲ; ಜರಾಮರಣ ಚಕ್ರದಿಂದ ಬಂಧಮುಕ್ತಗೊಳ್ಳುವ ಆಧ್ಯಾತ್ಮಿಕ ಪಥವನ್ನು ತೋರಿಸುವವನೇ ನಿಜವಾದ ಗುರು ಮತ್ತು ಆಜ್ಞಾಚಕ್ರದಿಂದ ಸಹಸ್ರಾರಕ್ಕೆ ಜಿಗಿಯಲು ಅಂತಹ ಗುರುವಿನ ಆಶೀರ್ವಾವ ಬೇಕು.

ಇವತ್ತು ಸಾಹಿತ್ಯ ಸಮ್ಮೇಳನಗಳನ್ನು ನೋಡುತ್ತೀರಿ. ಸತ್ಯವನ್ನೇ ಹೇಳಿದರೂ ಅದನ್ನು ಸುಳ್ಳೆಂದೂ ಅದು ಸಮಾಜಕ್ಕೆ ಪಥ್ಯವಲ್ಲೆಂದೂ ಅದನ್ನು ಖಂಡಿಸುವ ಸಲುವಾಗಿಯೇ ಒಂದು ಗುಂಪು ಅಲ್ಲಿಗೆ ಬಂದಿರುತ್ತದೆ. ಬುಧಜನರೆಲ್ಲ ಸೇರಿ, ಉನ್ನತವಾದ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತ ಜ್ಞಾನಯಜ್ಞವನ್ನು ನಡೆಸಬೇಕಾದ ಸ್ಥಳಗಳಲ್ಲಿ ’ಚಪ್ಪಲಿ ಸೇವೆ’ಗಳು ನಡೆಯುತ್ತವೆ!! ಅದು ಪರೋಕ್ಷ ಸರಸ್ವತಿಗೆ ಮಾಡುವ ಅಪಚಾರ ಎಂಬ ಕಿಂಚಿತ್ತೂ ಪರಿಜ್ಞಾನ ಇಲ್ಲದ ಖಂಡನಾವರ್ಗದವರು ತಾವು ಹೇಳಿದ್ದೇ ಸರಿಯೆಂದೂ, ಅದೇ ಪರಮವೇದವೆಂದೂ, ಎಲ್ಲರೂ ಒಪ್ಪಿಕೊಂಡು ತಮಗೆ ಶರಣಾಗತಿಯನ್ನು ತೋರ್ಪಡಿಸಬೇಕೆಂಬ ದುರಹಂಕಾರ ಉಳ್ಳವರಾಗಿರುತ್ತಾರೆ-ಪಾಪ, ಅದು ಅವರ ಅಜ್ಞಾನ.

ಮತಿಹೀನರು ಹೇಗೋ ಮಾಡೋದು ಸಹಜಬಿಡಿ, ಆದರೆ ಮತಿಯುಳ್ಳವರು ಎಂದುಕೊಳ್ಳುವ ಹಳದೀ ಬಾವಯ್ಯಂದಿರು ತಮ್ಮ ’ಗುರು’ವಿನ ಆಜ್ಞೆಯಂತೆ, ತಮ್ಮ ಆಪ್ತ ಸಖಿಯರೊಡನೆ ಸೇರಿ, ಕೆಲವು ಸಾತ್ವಿಕರ ಮೇಲೆ ಚಪ್ಪಲಿ-ಪೊರಕೆ ಸೇವೆಗಳನ್ನು ನಡೆಸಿದ್ದು ನಿಮಗೆಲ್ಲ ಹಳೆಯ ವಿಷಯ; ಮುಂದೆ ಖಜಾನೆ ಖಾಲಿಯಾಗಿ, ಯಾತ್ರೆಗಳೆಲ್ಲ ನಿಂತು, ಪ್ರವಾಹ ಇಳಿದು ನದಿ ಮಾಮೂಲಿ ಸ್ಥಿತಿಗೆ ಬಂದಾಗ “ನಿಮ್ಮ ಗುರು ಸ್ವಾಮಿಯಲ್ಲ; ಅವನೊಬ್ಬ ವಿಕೃತ ಕಾಮಿ” ಎನ್ನುತ್ತ ಮಾವಂದಿರು ಚೋರಗುರುವನ್ನು ಬರಸೆಳೆದುಕೊಂಡೊಯ್ದ ನಂತರ ಈ ಸೇವಾಕರ್ತರೆಲ್ಲ ಎಲ್ಲಿಗೆ ಹೋಗುತ್ತಾರೆ? ಯಾರ ಜೊತೆ ಬೆರೆಯುತ್ತಾರೆ? ಈಗ ವಿರೋಧಿಗಳೆಂದು ಅವಾಚ್ಯಪದಗಳಿಂದ ನಿಂದನೆಗೊಳಗಾದ ಭಾಗದೊಡನೆ ಮೊದಲ ಬಾಂಧವ್ಯ ಚಿಗಿತುಕೊಳ್ಳುವುದು ಸಾಧ್ಯವೇ? ಅಥವಾ ಮಾವನ ಮನೆಗೆ ಹೋಗುವ ಮುನ್ನ ಜಗದ್ಗುರು ಶೋಭರಾಚಾಚಾರ್ಯ ವೀರ್ಯಪ್ಪನ್ ಸಾಮ್ಗಳಿಗೆ ಕಾಂಡೋಮ್ ತುಲಾಭಾರ ಮಾಡುತ್ತ ತಾವೂ ಜೊತೆಗೆ ಅಲ್ಲಿಗೇ ಬಿಜಯಂಗೈಯುತ್ತಾರೋ?

“ಅನ್ನಮಯಂ ಮನಃ” ಎನ್ನುವ ಉಲ್ಲೇಖ ಉಪನಿಷತ್ತಿನಲ್ಲಿ ಕಾಣುತ್ತದೆ. ಅದನ್ನು ವೇದವ್ಯಾಸರೂ ವಿಸ್ತಾರವಾಗಿ ಹೇಳಿದ್ದಾರೆ. ಯಾವ ಅನ್ನವನ್ನು ನಾವು ಉಣ್ಣುತ್ತೇವೋ ಅದೇ ಮನಸ್ಸಾಗಿ ಪರಿವರ್ತಿತವಾಗುತ್ತದೆ. ಮನಸ್ಸೆಂದರೆ ಏನು? ತಲೆಯೇ? ಮೆದುಳೇ? ಅಲ್ಲ. ಹಾಗಾದರೆ ಮನಸ್ಸು ಎಂಬುದು ಒಂದು ಸಾಫ್ಟ್ ವೇರ್ ರೀತಿ ಎಂದಾಯಿತು. ಅದು ಸ್ಪರ್ಶಕ್ಕೆ ನಿಲುಕುವುದಲ್ಲ; ಆದರೆ, ಅದರ ಅಸ್ಥಿತ್ವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ! ಭಾವನೆಗಳ ಉಗ್ರಾಣವನ್ನೇ ಮನಸ್ಸು ಎಂದು ಒಟ್ಟಾರೆಯಾಗಿ ಹೇಳಬಹುದಷ್ಟೆ.

ಭಾವನೆಗಳೆಲ್ಲ ಮೆದುಳಿನ ಜೀವಕೋಶಗಳಲ್ಲಿ ಜಿನುಗುವ ಜೀವರಾಸಾಯನಿಕಗಳಿಂದ ಸೃಷ್ಟಿಯಾಗುವಂಥವು! ಸಾತ್ವಿಕ ಆಹಾರದಿಂದ ಸಾತ್ವಿಕ ರಾಸಾಯನಿಕಗಳೂ, ರಾಜಸ ಆಹಾರಗಳಿಂದ ರಾಜಸ ರಾಸಾಯನಿಕಗಳೂ ಮತ್ತು ತಾಮಸ ಆಹಾರಗಳಿಂದ ತಾಮಸ ರಾಸಾಯನಿಕಗಳೂ ಜಿನುಗುತ್ತವೆ ಎಂಬುದು ವೈಜ್ಞಾನಿಕವಾಗಿ ಒಪ್ಪಿತವಾದ ಸತ್ಯ. ಆದರೂ, ಅತಿಯಾದ ಹೆಂಡದ ಸಹಸವಾಸವುಳ್ಳವ ಬಿಡಲು ಸಾಧ್ಯವಾಗದ ಸ್ಥಿತಿಯಲ್ಲಿರುವಂತೆಯೂ, ಅತಿಯಾದ ತಂಬಾಕು ಚಟದವನೂ ಸಹ ಅದನ್ನು ತೊರೆಯಲಾರದ ಸ್ಥಿತಿಯಲ್ಲಿರುವಂತೆಯೂ, ಆಯಾಯ ಆಹಾರಕ್ರಮಗಳಿಗೆ ಒಗ್ಗಿಕೊಂಡವರು ಅದನ್ನೇ ನೆಚ್ಚಿಕೊಳ್ಳುತ್ತಾರೆ.

ಹಾಗಾಗಿಯೇ, ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ ಸಾತ್ವಿಕ ಮನಸ್ಸನ್ನು ಹೊಂದಿದವರಿಗೆ ಜ್ಞಾನಮಾರ್ಗವನ್ನು ಹೇಳಿದ ಋಷಿಗಳು, ಅವರುಗಳನ್ನು ಗುರುವಿನ ಸ್ಥಾನದಲ್ಲಿಟ್ಟರು. ಸಾತ್ವಿಕರು ಅಧ್ಯಯನ ಮಾಡಿ ತಿಳಿದುಕೊಳ್ಳಬಲ್ಲ ಎಲ್ಲವನ್ನು ರಾಜಸರೂ ತಾಮಸರೂ ತಿಳಿದುಕೊಳ್ಳುವುದು ಯಾವ ಕಾಲಕ್ಕೂ ಸಾಧ್ಯವಿಲ್ಲ ಎಂಬುದು ಆಚಂದ್ರಾರ್ಕ ಸತ್ಯ. ಪರಮ ಸಾತ್ವಿಕರಾಗಿದ್ದ ವರ್ಗ ರಾಜಸರ ಲೌಕಿಕ ಜೀವನದ ಓಘಕ್ಕೆ ಮರುಳಾಗಿ ತಮ್ಮತನವನ್ನು ಬಿಟ್ಟುಕೊಟ್ಟಿದ್ದೆ ಇವತ್ತಿನ ಹಲವು ಅವಘಡಗಳಿಗೆ ಕಾರಣ.

ಎಷ್ಟೋ ವೈದಿಕ ಆಚರಣೆಗಳಲ್ಲಿ ಪೂರ್ವಭಾವಿಯಾಗಿ ಅರ್ಹತೆ ಪಡೆದುಕೊಳ್ಳುವುದಕ್ಕೆ ’ಕೃಚ್ಛ್ರಾಚರಣೆ’ ಯನ್ನು ಮಾಡಿಸಲಾಗುತ್ತದೆ; ಅಜ್ಞಾನದಿಂದ ಎಸಗಿದ ದೋಷಗಳನ್ನು, ಪಾಪಗಳನ್ನು ಕಡಿಮೆ ಮಾಡಿಕೊಳ್ಳಲಿಕ್ಕೆ ಹಾಗೊಂದು ದಾನ ವಿಧಾನವನ್ನು ಹೇಳಿದ್ದಾರೆ.It is a way of losing negative energy before tending to draw positive energy. ಅರ್ಹತೆಯಿಲ್ಲದವರಿಗೆ ಅದನ್ನು ಕೊಡಬಾರದು ಎಂದವರು ಋಷಿಗಳೇ-“Share it only with the deserved to enlighten & live a divine healthy life”ಎಂದಿದ್ದರು. ಅರ್ಹತೆಯಿಲ್ಲದವರು ತಾನೇ ’ಭಗವಾನ್’ ಎಂದುಕೊಳ್ಳುತ್ತ ಅರ್ಥಮಾಡಿಕೊಳ್ಳಲು ಮುಂದಾಗಿ, ಅಪಾರ್ಥಮಾಡಿಕೊಂಡಿದ್ದರ ಅನರ್ಥ ಎಲ್ಲೆಡೆಗೂ ಕಾಣಿಸುತ್ತಿದೆ! ಪ್ರಜಾಪ್ರಭುತ್ವ-ಮಾಡಿದ್ದುಣ್ಣೋ ಮಹರಾಯ!!

ಜ್ಞಾನಮಾರ್ಗದ ಪರಿವೆಯೇ ಇಲ್ಲದವರು ಯಾರಿಗೋ ಜೈಕಾರಹಾಕುತ್ತ ತಮ್ಮಬೇಳೆ ಬೇಯಿಸಿಕೊಳ್ಳುತ್ತಾರೆ; ಅವರು ಧರ್ಮಮಾರ್ಗಿಗಳಾಗುವುದಿಲ್ಲ. ಲೇಖಕರೊಬ್ಬರ ಲೇಖನದಲ್ಲಿ ಓದಿದ ನೆನಪು- ಧರ್ಮಾತ್ಮರು ಯಾರು? ಎಂಬ ಪ್ರಶ್ನೆ ಬಂದಾಗ ಸ್ವಯಂ ಧರ್ಮಾತ್ಮರಾಗಿದ್ದ ಮಹಾಪಂಡಿತರೊಬ್ಬರು ಉತ್ತರಿಸಿದ್ದರಂತೆ-“ಸ್ವಹಿತದ ಜೊತೆ ಲೋಕಹಿತವನ್ನು ಕಡೆಗಣಿಸದೆ ಯಾರು ಒಳಗೂ ಹೊರಗೂ ಒಂದೇ ವಿಧದ ಜೀವನವನ್ನು ನಡೆಸುತ್ತಾರೋ ಅವರೇ ಧರ್ಮಾತ್ಮರು.” ಉತ್ತರ ಎಷ್ಟು ಸಮಂಜಸವಾಗಿದೆಯಲ್ಲವೇ?

ಬಾಹ್ಯಾಂತರ್ಯಗಳು ಒಂದಾದಾಗ ಭಕ್ತನೇ ಭಗವಂತನಾಗಿಬಿಡುತ್ತಾನೆ ಎಂಬುದು ತಾತ್ಪರ್ಯ. ಅದರರ್ಥ ಮನಸ್ಸಿನಲ್ಲಿ ವಿಕೃತಗಳನ್ನು ಬಚ್ಚಿಟ್ಟುಕೊಂಡು ಹೊರಗಡೆ ವಿರಕ್ತನಂತೆ ಪೋಸು ಕೊಡೋದು ಬಾಹ್ಯಾಂತರ್ಯ ಭೇದವನ್ನು ನಡೆಸುವುದಾಗುತ್ತದೆ. “ಬೇಡವಯ್ಯ, ನೀನೊಬ್ಬ ಸನ್ಯಾಸಿ, ಅವಕಾಶ ಸಿಕ್ಕಿದೆ ಅಂತ ಕಂಡವರ ಹೆಂಡಿರೊಡನೆ ಸಂಭೋಗಕ್ಕೆಳಸಬೇಡ, ಅದು ನಿನಗೆ ತರವಲ್ಲ” ಎಂದು ಆಂತರ್ಯ ತಿಳಿಹೇಳುತ್ತಿದ್ದರೂ, ಬೀದಿನಾಯಿಯನ್ನು ಬೆದರಿಸಿ ಓಡಿಸಿದಂತೆ ಆಂತರ್ಯದ ಸಲಹೆಯನ್ನು ಬದೊಗೊತ್ತಿ ಆ ಕೆಲಸಕ್ಕೆಳಸುವ ಸನ್ಯಾಸಿ, ಆತ್ಮವಂಚನೆ ಮಾಡಿಕೊಂಡಿದ್ದರ ಫಲವಾಗಿ ಮುಂದೆ ಬಾಹ್ಯಾಡಂಬರಗಳಲ್ಲಿ ಹಲವು ದಂಡಯಾತ್ರೆಗಳನ್ನು ನಡೆಸಿ, ಎಷ್ಟೇ ವಿಧದ ಸಂಘಗಳು, ಭಯೋತ್ಪಾದಕ ಅಭಿಮಾನಿಗಳನ್ನೆಲ್ಲ ಕಟ್ಟಿಕೊಂಡರೂ ಅವನ ಆಂತರ್ಯವೇ ಅವನ ಬೆಂಬಲಕ್ಕೆ ನಿಲ್ಲುವುದಿಲ್ಲ!

ಕಥೆ ಹೇಳುತ್ತ ಹೋದರೆ ಬಹಳ ಉದ್ದವಾಗುತ್ತ ಹೋಗುತ್ತದೆ. ಅಂತೂ ನೂರಾರು ಕೋಟಿ ವ್ಯಯಿಸಿ ಕಳ್ಳರ ಸಮಾವೇಶ ನಡೆಸುವ ದಿನ ಬಂದೇಬಿಟ್ಟಿತು. ವ್ಯಯಿಸುವ ಕೋಟಿಗಳನ್ನು ಹೇಳಿರುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದರೆ ಇಂತಹ ದಗಲುಭಾಜಿತನವೆಲ್ಲ ಬೇಕಾಗುತ್ತಿರಲಿಲ್ಲ. ಆದರೂ ನಾಳೆ ಕೋರ್ಟಿನಲ್ಲಿ ತಪ್ಪಿಸಿಕೊಳ್ಳುವ ಸಲುವಾಗಿ ಜೈಕಾರದ ಅಭಿಮಾನಿಬಳಗವನ್ನು ಹೆಚ್ಚಿಸಿಕೊಂಡು ಸರಕಾರಕ್ಕೆ ಬೆದರಿಕೆಯೊಡ್ಡುವ ಸಲುವಾಗಿ ಅದನ್ನು ನಡೆಸಲಾಗುತ್ತದೆ ಎಂಬುದು ನಿರ್ವಿವಾದ.

ಅಸೇತು ಹಿಮಾಚಲ ಸುತ್ತಿಬಂದು ನೋಡಿ, ಇಡೀ ದೇಶದಲ್ಲಿ ಇಂದು ಹಿಂದೂ ಧರ್ಮಕ್ಕೆ ಕಿರೀಟಪ್ರಾಯವಾಗಿರುವುದು, ನ್ಯಾಯ-ಧರ್ಮ ಯಾವುದೆಂದು ಹೇಳುವುದು, ರಾಜಕೀಯ ರಹಿತ ಧರ್ಮಾಚರಣೆಗಳಿಗೆ ತನ್ನನ್ನು ಸೀಮಿತಗೊಳಿಸಿಕೊಂಡು ಸತ್ಸಂಕಲ್ಪದಿಂದ ದೇಶದ ಸಮಸ್ತರಿಗೆ ಕ್ಷೇಮವನ್ನು ಬಯಸುವುದು ಮತ್ತು ಜ್ಞಾನ ಮಾರ್ಗದಲ್ಲಿ, ಆಧ್ಯಾತ್ಮಿಕ ಪಥದಲ್ಲಿ ಸಂದೇಹಗಳು-ಜಿಜ್ಞಾಸೆಗಳು ಹುಟ್ಟಿಕೊಂಡರೆ ಸಮರ್ಪಕ ಉತ್ತರದಾಯಿತ್ವವನ್ನು ಹೊಂದಿರುವ ಏಕೈಕ ಮಠವೆಂದರೆ ದಕ್ಷಿಣಾಮ್ನಾಯ ಶ್ರೀಶೃಂಗೇರಿ ಜಗದ್ಗುರು ಪೀಠ ಮಾತ್ರ. ಉಳಿದ ಅನೇಕ ಮಠಗಳು ಸನ್ಮಾರ್ಗದಲ್ಲಿದ್ದರೂ ಸಹ ಆಚಾರ್ಯ ಶಂಕರರು ಹೇಳಿದ ಎಲ್ಲವನ್ನೂ ಅರಗಿಸಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವಿಲ್ಲ.

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಃ

Thumari Ramachandra
25/01/2017
source: https://www.facebook.com/groups/1499395003680065/permalink/1897505597202335/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s