ಮಠದ ಪೋಸ್ಟರ್ ಬಾಯ್ ಮದುವೆ ಆಯ್ತಂತೆ-ಸಾಮಾನುಸ್ವಾಮಿಯ ’ಪ್ರಸಾದ’

ಮಠದ ಪೋಸ್ಟರ್ ಬಾಯ್ ಮದುವೆ ಆಯ್ತಂತೆ-ಸಾಮಾನುಸ್ವಾಮಿಯ ’ಪ್ರಸಾದ’

ಸಾಮಾನುಸ್ವಾಮಿಯ ಸುತ್ತ ಈಗಲೂ ಹಾಗೇ ಸುತ್ತುತ್ತಿರುವ ಉಪಗ್ರಹಗಳಲ್ಲಿ ಎಂತೆಂತಹ ಪರಮ ಸ್ವಾರ್ಥಿಗಳು, ನೀಚರು ಇದ್ದಾರೆ ಅಂತ ಎಲ್ಲರಿಗೂ ಆರ್ಥವಾಗುವುದಿಲ್ಲ. ನಮ್ಮ ಗುಪ್ತಚಿತ್ರ ಕೆಲವು ಘಟನೆಗಳನ್ನು ಹೇಳ್ತಾನೆ. ಇನ್ನು ಕೆಲವನ್ನು ಗುಮ್ಮಣ್ಣ ಹೆಗಡೇರು ಹೇಳ್ತಾರೆ. ಇವತ್ತೊಂದು ಕತೆಯನ್ನು ಅವರ ಬಾಯಿಂದಲೇ ಕೇಳಿ-

“ಸೂಜಿಭಟ್ಟನ ಕತೆಗಳನ್ನು ನೀವು ಕೇಳಿದ್ದೀರಿ. ಘಟ್ಟದ ಕೆಳಗಿನ ಚಿನ್ನಾವರದೆಡೆಗೆ ಒಂದು ಅನುದಾನಿತ ಸ್ಕೂಲು. ಮೂರು ದಶಕಗಳ ಹಿಂದೆ ಆ ಸ್ಕೂಲಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದ್ದರಂತೆ. ಇಂದು ಬರೋಬ್ಬರಿ 48 ವಿದ್ಯಾರ್ಥಿಗಳಿಂದ ಭಾರವಾಗಿ ಆಗಲೋ ಈಗಲೋ ಮುಳುಗುವ ಹಡಗಿನಂತಾಗಿದೆಯಂತೆ. ಸೂಜಿಭಟ್ಟ ಅದಕ್ಕೆ ಪ್ರಾಂಶುಪಾಲ. ’ಊರು ಸುಟ್ಟರೂ ಹನುಮಪ್ಪ ಹೊರಗೆ’ ಅನ್ನೋ ಹಾಗೆ ಇನ್ನೂ ನಾಲ್ಕಾರು ವರ್ಷ ಸರ್ವಿಸ್ ಬಾಕಿ ಇದೆಯಂತೆ ಸೂಜಿಭಟ್ಟನಿಗೆ; ಅಲ್ಲೀವರೆಗೆ ಅನುದಾನದ ಸಂಬಳಕ್ಕೆ ಕತ್ರಿ ಬೀಳದಂತೆ ನೋಡಿಕೊಳ್ತಾನೆ.

ಸ್ಕೂಲಿನಲ್ಲಿ ಹೆಚ್ಚಿನ ಕೆಲಸವೇನೂ ಇಲ್ಲದ್ದರಿಂದ ಮತ್ತು ಮುಂದೆ ನಿವೃತ್ತಿಯ ನಂತರ ಮಠದಲ್ಲಿ ಹೆಚ್ಚಿನ ಸಮಯ ಕಳೆಯುತ್ತ ಒಂದಷ್ಟು ಕಾಸು ಮಾಡಿಕೊಳ್ಳುವ ದುರುದ್ದೇಶ ಇರುವುದರಿಂದ ಸಾಮಾನುಸ್ವಾಮಿಯ ಜೈಕಾರದ ತಾಲೀಬಾನ್ ಬಳಗಕ್ಕೆ ಸೇರಿಕೊಂಡು ದಶಕವೇ ಕಳೆದಿದೆ; ಕಳ್ಳರಿಗೆ ಕಳ್ಳರೇ ಹೇಗೆ ಸಾಥ್ ಕೊಡ್ತಾರೆ ನೋಡಿ.

ಸಾಮಾನುಸ್ವಾಮಿ ಘಟ್ಟದ ಕೆಳಗೆ ಚಿನ್ನಾವರದ ಕಡೆಗೆ ಎಲ್ಲೇ ಹೋದರೂ ಅಲ್ಲೆಲ್ಲ ಬುಲ್ ಪೀನ ತೊಳೆಯೋದಕ್ಕೆ ಸೂಜಿಭಟ್ಟ ಹಾಜರು. ಸಭೆಗಳಲ್ಲಿ ಮೈಕು ಹಿಡಿದು ಜೈಕಾರವೋ ಜೈಕಾರ. ಇಂತಹ ಸೂಜಿಭಟ್ಟನ ಮಗನಿಗೆ ಮದುವೆ ಆಯ್ತಂತೆ. ಮದುವೆ ಆಗಬೇಕಾದದ್ದು ಸಹಜ; ಆದರೆ ಮದುವೆಯ ಅಸಲಿ ಕತೆ ಮಾತ್ರ ಗೋಪ್ಯ!

ಸೂಜಿಭಟ್ಟನಿಗೊಬ್ಬ ತಮ್ಮ ಹಿಂಡಿಭಟ್ಟ. ‘Looking To London Talking Tokyo’ ಥರದ ಕಣ್ಣುಳ್ಳ ಪಾರ್ಟಿ. ಅಪ್ಪ ಸುರುಹಚ್ಚಿಕೊಟ್ಟ ಹಿಂಡಿ ವ್ಯಾಪಾರದಿಂದ ಅವನನ್ನು ಜನ ಗುರುತಿಸಿದ್ದು ಹಿಂಡಿಭಟ್ಟ ಅಂತ. ಹಳ್ಳಿಗಳಲ್ಲಿ ದನ-ಎಮ್ಮೆಗಳನ್ನು ಸಾಕಿಕೊಂಡವರಿಗೆ ಹಿಂಡಿ ವ್ಯಾಪಾರ ಮಾಡೋದು ಅವನ ಉದ್ಯೋಗ. ಅಲ್ಲಿನ ಹಳ್ಳಿಗಳಲ್ಲಿ ತಕ್ಷಣಕ್ಕೆ ಹಣಕೊಟ್ಟು ಖರೀದಿಸುವುದಕ್ಕೆ ತೊಂದರೆಯುಳ್ಳ ಜನರಿಗೆ ’ಸಹಾಯ’ ಮಾಡುವ ರೂಪದಲ್ಲಿ ವ್ಯಾಪಾರ. ಹಿಂಡಿಯ ಗುಣಮಟ್ಟ ದೇವರಿಗೆ ಮಾತ್ರ ಗೊತ್ತು. ಚಿಕ್ಕ ಹಿಡುವಳಿದಾರರಲ್ಲಿ ತೂಕ ನೋಡುವ ವ್ಯವಸ್ಥೆ ಇರೋದಿಲ್ಲ; ಚೀಲಗಳಲ್ಲಿ ಎರಡೆರಡು ಕೆಜಿ ತೆಗೆದು ಗುಳುಂ ಸ್ವಾಹಾ ಮಾಡಿದರೂ ಗೊತ್ತಾಗ್ತಿರಲಿಲ್ಲ!

’ಅಕ್ಕಿ ಖಂಡುಗ ಒಂದು ವ ನಗ್ದಿ ರೂಪಾಯಿ ಆರು’ ಎಂದು ಸಾಲದ ಬಾಕಿ ಬರೆದುಕೊಳ್ಳುವ ದಸ್ತಾವೇಜುದಾರರು ಹಳ್ಳಿಗಳಲ್ಲಿ ಹಿಂದೆ ಲೀಡರ್ ಆಗಿದ್ದರಂತೆ. ಮಧ್ಯದಲ್ಲಿರುವ ’ವ’ ಅಕ್ಷರ ಅಥವಾ ಎಂಬ ಅರ್ಥ ಕೊಡುತ್ತಿದ್ದು, ಅದನ್ನು ಅಳಿಸಿಬಿಟ್ಟರೆ, ಬಾಕಿ ತೀರಿಸುವವ ಕೋಡಂಗಿಯಾಗುತ್ತಿದ್ದ! ವಸೂಲಿ ಮಾಡಿಕೊಳ್ಳುವವ ಈರಭದ್ರನಾಗುತ್ತಿದ್ದ. ಹಿಂಡಿಭಟ್ಟನದ್ದು ಅಂಥದ್ದೇ ಲೆಕ್ಕಾಚಾರ. Beggars are not choosers ಎಂದಂತೆ ಉದ್ರಿಯಲ್ಲಿ ಖರೀದಿಸುವ ಜನರಿಗೆ ಪೈಸೆಪೈಸೆ ಲೆಕ್ಕದ ವಿವರ ಕೇಳುವುದಕ್ಕೆ ಮುಜುಗರ; ’ವಿಶ್ವಾಸವೇ ಹಿಂಡಿಭಟ್ಟ’!!!

ಹಿಂಡಿಭಟ್ಟನಿಗೆ ಸ್ಮೃತಿತಪ್ಪಿ ಬೀಳೋ ಕಾಯಿಲೆಯಂತೆ; ಅದನ್ನು ತಿಳಿಯದೆ ದೂರದ ಊರಿನ ವೈದಿಕರೊಬ್ಬರು ಮಗಳನ್ನು ಕೊಟ್ಟು ಮದುವೆ ಮಾಡಿದರು; ಗೊತ್ತಿದ್ದರೆ ಕೊಡ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಈಗೀಗ ಹಳ್ಳಿಗಳಲ್ಲಿ ದನ-ಎಮ್ಮೆ ಸಂಖ್ಯೆಗಿಂತ ಕಿರಾಣಿ ಅಂಗಡಿಗಳ ಸಂಖ್ಯೆನೇ ಜಾಸ್ತಿ ಆಗ್ಬುಟ್ಟಿದೆ. ಎಲ್ಲಾ ಸಾಲ ಕೊಡೋರೆ. ಹೀಗಾಗಿ ಹಿಂಡಿಭಟ್ಟ ಪಿತ್ರಾರ್ಜಿತ ತೋಟದ ತುಂಡಿನಲ್ಲೇ ಬಹಳ ಹೊತ್ತು ಅಲೀತಿರ್ತಾನೆ. ಸಂಸಾರ ಹೇಗೋ ಅಂತೂ ಸಾಗ್ತಿದೆ.

ಅಬ್ಬರದ ದಿನಗಳಲ್ಲಿ ಗೊಬ್ಬರವನ್ನೂ ಮಾರಾಟ ಮಾಡಿದ್ದ ತಿರುಬೋಕಿಗೆ ಸುತ್ತಲ ಹಳ್ಳಿಗಳಲ್ಲಿ ಬೈಕನ್ನೇರಿ ತಿರುಗಾಡುತ್ತ ಹತ್ತಾರುಮನೆಯ ಉಪ್ಪಿನಕಾಯಿ ನೆಕ್ಕುತ್ತ, ಯಾರನ್ನೋ ಅಪಹಾಸ್ಯ ಮಾಡುತ್ತ ಬದುಕುವ ಕಲೆ! ಇಂತಹ ತಿರುಬೋಕಿ ಈಗ ಬಹಳ ಹೊತ್ತು ಖಾಲಿ; ಹೀಗಾಗಿ ಅಣ್ಣ ಸೂಜಿಭಟ್ಟನ ಜೊತೆಗೆ ಸಾಮಾನುಸ್ವಾಮಿಯ ಸೇವೆಗೆ ಅವನೂ ಹೋಗ್ತಾನೆ. ಸೂಜಿಭಟ್ಟನಿಗೆ ಇನ್ನೊಂದಿಬ್ಬರು ತಮ್ಮಂದಿರು, ಅವರೆಲ್ಲ ಸೇರ್ಕೋತಾರೆ.

ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಸಾಮಾನುಸ್ವಾಮಿಯ ಭಿಕ್ಷ-ಪಾದಪೂಜೆ ಮಾಡಿ, ಮುಂಬರುವ ದಿನಗಳಲ್ಲಿ ಭಕ್ಷೀಸು-ಸುವರ್ಣ ಮಂತ್ರಾಕ್ಷತೆಗೆ ಕೊರತೆಯಾಗದಂತೆ ನೋಡಿಕೊಳ್ತಾರೆ. ಎರಡು ವರ್ಷಗಳ ಹಿಂದೆ ಕುರಿವಾಡೆಯಲ್ಲಿ ಚತುರ್ಮೋಸ ನಡೆದಾಗ ಮಾಡಿಕೊಂಡ ಕಾಸಿನಲ್ಲಿ ಸೂಜಿಭಟ್ಟನಿಗೆ ಹೊಸ ಕಾರು ಬಂದಿದೆ. ಈಗ ಸಾಮಾನುಸ್ವಾಮಿಗಳ ಅನುಗ್ರಹದಿಂದ ಮಗನಿಗೆ ಹೆಣ್ಣೂ ಸಿಕ್ಕಿದೆ!

ಸಾಮಾನುಸ್ವಾಮಿಯಿಂದ ’ಕನ್ಯಾಸಂಸ್ಕಾರ’ ಪಡೆದ ಹೆಣ್ಣುಮಕ್ಕಳು ಅಲ್ಲಲ್ಲಿ ಸಾಕಷ್ಟು ಇದ್ದಾವೆ; ಅವುಗಳಲ್ಲಿ ಯಾವುದೋ ಒಂದನ್ನು ಒಪ್ಪಿಸಿ ಬೀಗತನ ಕುದುರಿಸಿಕೊಡ್ತಾನೆ ತೊನೆಯಪ್ಪ ಸ್ವಾಮಿ. ಸೂಜಿಭಟ್ಟನಿಗೂ ಆ ಯೋಗ ಬಂದಿಬಿಟ್ಟಿತು! ಎಂಥಾ ಭಾಗ್ಯ! ಯಾರಿಗುಂಟು ಯಾರಿಗಿಲ್ಲ?

ಸೂಜಿಭಟ್ಟನ ಮಗ ನಾಯಿಕುಮಾರ್ ಭಟ್ಟ ಮಠದ ಪೋಸ್ಟರ್ ಬಾಯ್. ಏನೂ ಅರಿಯದ ಪೋಸ್ಟರ್ ಬಾಯ್ ಪಿ ಎಚ್ ಡಿ ಅಂತ ಬರೆದುಕೊಳ್ಳುತ್ತಾನೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಹಾಸ್ಯಪಾತ್ರದಂತಿದ್ದಾನೆ ಆ ’ಕಲಾವಿದ.’ ಸಾಮಾನುಸ್ವಾಮಿಯ ಚಿತ್ರಗಳು ಮತ್ತು ವೀಡಿಯೋಗಳನ್ನು ತಯಾರಿಸೋದೇ ಅವನ ಕೆಲಸ. ಹೆಸರಿಗೆ ಒಂದು ಪುಟಗೋಸಿ ನೌಕರಿ ಇದೆಯಂತೆ; ಚಟದವರಿಗೆ ತಿಂಗಳ ಬೀಡಿ ಖರ್ಚಿಗೆ ಸಿಗುವಷ್ಟು ಸಂಬಳ. ಮಠದವನ ಭಕ್ಷೀಸು, ’ಸುವರ್ಣ ಮಂತ್ರಾಕ್ಷತೆ’ಯೇ ನಿಜವಾದ ಆದಾಯ.

ಎಂತೆಂತೆಹ ಸಾಫ್ಟ್ ವೇರ್ ಇಂಜಿನೀಯರುಗಳು ಹುಡುಗೀರು ಸಿಗದೆ, ಮದುವೆಯಾಗದೆ ಬಿದ್ದಿದ್ದಾರೆ; ನಿಚ್ಚಳ ಸಂಬಳ ಇದೆ ಅಂತ ತೋರಿಸಿಕೊಳ್ಳತೊಡಗಿದ ನಾನ್ ಟೆಕ್ನಿಕಲ್ ಮಂದಿಯಲ್ಲಿಯೂ ಹಲವರು ಹಾಗೇ ಇದ್ದಾರೆ; ಮ್ಯಾಂಗೋಕುಳಿಯಂತಹ ಕೆಲವರು ಸಾಮಾನುಸ್ವಾಮಿಗೆ ಶರಣೆನ್ನುತ್ತ ಅವನು ಕೊಟ್ಟಿದ್ದನ್ನು ಮದುವೆಯಾಗಿದ್ದಾರೆ; ಮದುವೆಯಾದವರಲ್ಲಿ ಈಗಾಗಲೇ ಕೆಲವರು ಡೈವೋರ್ಸ್ ಕೂಡ ಕೊಟ್ಟಿದ್ದಾರೆ.

ಸಾಮಾನುಸ್ವಾಮಿಗಳು ಅಂತಹ ಹಲವು ಮದುವೆಗಳನ್ನು ಮಾಡಿಸಿದ್ದಾರೆ. ಬರೇ ಮದುವೆಯಷ್ಟೇ ಅಲ್ಲ, ಎಲ್ಲರಿಗೂ ಮಕ್ಕಳ ’ಅನುಗ್ರಹ’ವನ್ನೂ ಖುದ್ದಾಗಿ ಕೊಟ್ಟಿದ್ದಾರೆ. ಅದನ್ನೆಲ್ಲ ಒಪ್ಪಿಕೊಂಡು ’ಗಂಡ ನೆನಿಸಿದವ’ಸುಮ್ಮನಿದ್ದರೆ ಸಂಸಾರ; ಅದಿಲ್ಲದಿದ್ದರೆ ವಿಚ್ಛೇದನ. ಕೆಲವು ಷಂಡರು ಮುಚ್ಚಿಕೊಂಡು ಸಾಮಾನು ಸ್ವಾಮಿಯ ಮಕ್ಕಳನ್ನೇ ತಮ್ಮ ಮಕ್ಕಳೆನ್ನುತ್ತ ಬದುಕಿದ್ದಾರೆ. ನಾಯಿಕುಮಾರ್ ಭಟ್ಟನಿಗೆ ಮುಂದೆ ಎಂತಹ ಅನುಗ್ರಹವಿದೆಯೋ ಗೊತ್ತಿಲ್ಲ. ಮಠದ ಪಕ್ಕದಲ್ಲೇ ಮನೆಯನ್ನೂ ಅನುಗ್ರಹಿಸಬಹುದು! 🙂 🙂

ಸಾಮಾನುಸ್ವಾಮಿಗಳು ಫೈಬರ್ ದನ ತೆಗೆದುಕೊಂಡು ಮದುವೆ ನಡೀತಾ ಇರೋ ಊರಕಡೆಗೇ ಹೋಗಿದ್ದಾರಂತೆ. ಮದುವಣಗಿತ್ತಿಯನ್ನು ಖುದ್ದಾಗಿ ಒಮ್ಮೆ ಕಂಡು ಕಣ್ಣು ಮಿಟುಕಿಸಿದ ಹಾಗೂ ಆಗ್ತದೆ; ಮಚ್ಚಿಗೆ ತಲೆಯೊಡ್ಡುವ ಕುರಿಗೊಡ್ಡುಗಳು “ಗುರುಗಳೇ ಖುದ್ದಾಗಿ ಬಂದು ಮಂತ್ರಾಕ್ಷತೆ ಹಾಕಿದರು” ಎಂದುಕೊಳ್ಳೋದಕ್ಕೂ ಕಾರಣವಾಗ್ತದೆ!

ಸದ್ಯಕ್ಕೆ ಮದುವೆ ಮಾಡಿಸಿದ್ದೇ ಸಾಮಾನುಸ್ವಾಮಿಗಳ ಹೊಸ ಪವಾಡ. ಅದನ್ನು ರಾಂಗಾನುಗ್ರಹ ಭಾಗ ನಾಲ್ಕರಲ್ಲೋ ಐದರಲ್ಲೋ ಪ್ರಕಟಿಸಬಹುದು; ಸುವರ್ಣಮಂತ್ರಾಕ್ಷತೆಗೆ ಸೆರಗೊಡ್ಡುವ ಉದಯರವಿ ಬೆನ್ನುಡಿ ಬರೆಯುತ್ತಾನೆ; ತಿನ್ನಪ್ಪ, ಕೋಣೆಮಾಣಿಗಳು ಚಿಲ್ಲರೆ ಸುವರ್ಣಮಂತ್ರಾಕ್ಷತೆ ಪಡೆದು ಮಾರನೇದಿನವೇ, ಅರ್ಧರ್ಧ ಪುಟ ಸಚಿತ್ರ ವರದಿ ಪ್ರಕಟಿಸುತ್ತಾರೆ! ಇಮ್ಮಡಿಯು ವಿಶೇಷಾಂಕವನ್ನೇ ಮಾಡಿಬಿಡ್ತಾನೆ!” ಗುಮ್ಮಣ್ಣ ಹೆಗಡೇರು ಮಾತು ಮುಗಿಸಿದರು.

ಅಂದಹಾಗೆ, ಅದ್ಯಾರೋ ಸಾಫ್ಟ್ ವೇರ್ ಹುಡುಗಿಯ ಕತೆ ಹೇಳಿದರಲ್ಲ? ಆ ಕತೆಯನ್ನು ವರ್ಷದ ಹಿಂದೆಯೇ ತುಮರಿ ಬರೆದಿದ್ದಾನೆ. ಅವಳ ಸುತ್ತ ಅಹೋರಾತ್ರಿ ಸಾಕುನಾಯಿಗಳ ಸರ್ಪಗಾವಲಿದೆ. ಕೇಸ್ ದಾಖಲಿಸಿದರೆ ಸಾಕುನಾಯಿಗಳು ಅವಳನ್ನು ಕಚ್ಚಿಹರಿದು, ರಕ್ತಹೀರಿ, ಸಾಯಿಸಿಬಿಡುತ್ತವೆ. ತನಗೆ ಬೇಕಾದದ್ದನ್ನೆಲ್ಲ ಮಾಡಿಕೊಡಲಿಕ್ಕೆಂದೇ ಸಾಮಾನುಸ್ವಾಮಿಗಳು ಅಂತಹ ಸಾವಿರಾರು ನಾಯಿಗಳನ್ನು ಸಾಕಿ ಬೆಳೆಸಿದ್ದಾರೆ. ಹಾಗಾಗಿ ಅವಳು ಸುಮ್ಮನೆ ಕೂತಿದ್ದಾಳೆ; ಪ್ಯಾಟರ್ನಿಟಿ ಚೆಕ್ ಮಾಡಿದರೆ ಸಾಮಾನುಸ್ವಾಮಿ ಸೀದಾ ಅಂದರ್!!

ಪ್ರಗತಿಯ ಹೆಸರಿನಲ್ಲಿ ದೇಶದ್ರೋಹಿಗಳು, ಉಗ್ರರು, ನಕ್ಸಲರು ಮೊದಲಾದವರನ್ನು ಬೆಂಬಲಿಸುವವರು ಕೇವಲ ಸಾಮಾನುಸ್ವಾಮಿಯನ್ನು ವಿರೋಧಿಸುತ್ತಾರೆ ಎಂಬ ಒಂದೇ ಕಾರಣಕ್ಕೆ ಅವರನ್ನು ಇಲ್ಲಿ ಕೆಲವರು ಹೊಗಳಿದ್ದಾರೆ, ತಾವೂ ಜೊತೆಗಿದ್ದೇವೆ ಅಂತಾರೆ. ಸಮಷ್ಟಿ ಸಮಾಜ ಅವರ ನಡೆನುಡಿಗಳು ಸರಿಯಿಲ್ಲವೆಂದು ಗುರುತಿಸಿ ತೆಗೆದಿರಿಸಿದೆ. ಅಂಥವರನ್ನು ಹೆಮ್ಮೆಯಿಂದ ಬೆಂಬಲಿಸುವವರಿಗೆ ದೇವರು ಇನ್ನು ಮುಂದಾದರೂ ಚಿಂತನೆ ನಡೆಸುವಷ್ಟು ಬುದ್ಧಿ ಕೊಡಲಿ.

Thumari Ramachandra

01/12/2016

source: https://www.facebook.com/groups/1499395003680065/permalink/1867510156868546/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s