ಗುದದ್ವಾರಕ್ಕೆ ಹಸಿಮೆಣಸು ಅರೆದು ಹಚ್ಚಿದಂತೆ ಒದ್ದಾಡುತ್ತಿದ್ದಾನೆ ಸಾಮಾನುಸ್ವಾಮಿ!!

ಗುದದ್ವಾರಕ್ಕೆ ಹಸಿಮೆಣಸು ಅರೆದು ಹಚ್ಚಿದಂತೆ ಒದ್ದಾಡುತ್ತಿದ್ದಾನೆ ಸಾಮಾನುಸ್ವಾಮಿ!!

“ಥೂ! ಅದೂ ಒಂದು ಹಿಮಾಲಯಕ್ಕೆ ತಪಸ್ಸಿಗೆ ಹೋಗುವ ಮುಖವೇ? ಮಲ್ಲಿಕಾ ಶರಬತ್ತಿನಂತೋರು ಯಾರಾದ್ರೂ ಏಕಾಂತಕ್ಕೆ ಸಿಕ್ಕೋದಾದ್ರೆ ಮಜಾ ಉಡಾಯ್ಸೋದಕ್ಕೆ ಒಂದು ವಾರ ಹೀಗೆ ಹೋಗಿ ಬರಬಹುದು. ಸಮಾಜದಲ್ಲಿ ಅವನನ್ನು ಹೊತ್ಕೊಂಡಿರೋ ಜನರೀಗಾದ್ರೂ ದೇವರು ಯಾವಾಗ ಬುದ್ಧಿ ಕೊಡ್ತಾನೋ” ಅಂದ್ರು ಗುಮ್ಮಣ್ಣ ಹೆಗಡೇರು.

ಹಿಂದಿನ ಶತಕಗಳಲ್ಲಿ ಮಾಧ್ಯಮಗಳು ಹೀಗಿರಲಿಲ್ಲ. ಸಮೂಹ ಮಾಧ್ಯಮಗಳೇ ಇರಲಿಲ್ಲ. ಜನಸಂಪರ್ಕ ನೇರವಾಗಿ ಆಗಬೇಕಾಗಿತ್ತು. ಗುರುಗಳು ಹೇಳಿದ್ದನ್ನು ಗುರಿಕಾರರು ಕೇಳಿಕೊಂಡು ಪ್ರಾಮಾಣಿಕವಾಗಿ ಹಳ್ಳಿಗಳಿಗೆ ವರದಿ ಮಾಡುತ್ತಿದ್ದರು. ವರ್ಷಪೂರ್ತಿ ಎತ್ತುವಳಿ ಇರಲೇ ಇಲ್ಲ. ವರ್ಷಕ್ಕೊಮ್ಮೆ ದೀಪಕಾಣಿಕೆ [ನಮ್ಮ ಮಠ, ಮಠದಲ್ಲಿ ದೀಪ ಉರಿಯಬೇಕು, ಸ್ವಾಮಿಗಳು ಧ್ಯಾನ-ಅನುಷ್ಠಾನ-ತಪಸ್ಸುಗಳನ್ನು ನಡೆಸುತ್ತ ನಮ್ಮನ್ನೆಲ್ಲ ಹರಸಲು ಅವರಿಗೆ ಲೌಕಿಕ ಪರಮಸಾತ್ವಿಕ ಯತಿ ಜೀವನಕ್ಕೆ ಸಮಾಜದ ಜನ ಸೇರಿ ಏರ್ಪಡಿಸುತ್ತಿದ್ದ ಅನುಕೂಲವದು.

ಐಶಾರಾಮಿ ಏಸಿ ಕಾರಿರಲಿಲ್ಲ! ಏಸಿ ರೂಮುಗಳೂ ಇರಲಿಲ್ಲ. ಮೇಲೊಂದು ಸೂರು, ಸುತ್ತ ನಾಲ್ಕು ಗೋಡೆಗಳು. ಕೆಲವೊಮ್ಮೆ ಆರಾಧಿಸುವ ವಿಗ್ರಹಗಳನ್ನೆಲ್ಲ ಇಟ್ಟುಕೊಳ್ಳಲು ಒಳಗೆ ಒಂದೆರಡು ಕೋಣೆಗಳು. ಅದುಬಿಟ್ಟರೆ ಇಂದಿನಂತಹ ವ್ಯವಸ್ಥೆಗಳು ಇರಲಿಲ್ಲ. ಈಗ ಬರುಬರುತ್ತ ಮಠವೆಂಬುದು ರಾಜಕಾರಣಿಗಳ ಬಂಗಲೆಗಳಂತಾಗಿಬಿಟ್ಟಿದೆ. ಅದರಲ್ಲಂತೂ ಹಾವಾಡಿಗನ ಮಠ ಸೂಳೆಯರ[ಹಾಗೆನ್ನದೆ ವಿಧಿಯಿಲ್ಲ ಕ್ಷಮಿಸಿ] ಕೇಂದ್ರವಾಗಿದೆ.

ಇಷ್ಟೆಲ್ಲ ನಡೆದಿದ್ದರಲ್ಲಿ ಜನರಿಗೆ ಬಹುಪಾಲು ಕಳ್ಳಸ್ವಾಮಿಯನ್ನು ’ಮಹಾಸ್ವಾಮಿಗಳೆ’ಂದು ಸುದ್ದಿಗಳಲ್ಲಿ ಬಿಂಬಿಸಿದ ಮಾಧ್ಯಮಗಳ ಪಾಲು ಬಹುದೊಡ್ಡದು! ಪ್ರಜಾಸತ್ತೆಯಲ್ಲಿ ಮಾಧ್ಯಮ ಎಂಬುದು ನಾಲ್ಕನೆಯ ಅಂಗವೆಂದು ಹೇಳ್ತಾರೆ; ಆದರೆ ಮಾಧ್ಯಮಗಳು ಒಳಗಿನಿಂದ ನಡೆಸುವ ಮಸಲತ್ತನ್ನು ಬುದ್ಧಿಯುಳ್ಳ ಜನ ಬಲ್ಲರು!! ಇತ್ತೀಚೆಗೆ ಗುಮ್ಮಣ್ಣ ಹೆಗಡೇರು ಖುದ್ದು ಪ್ರೇಕ್ಷಕರಾಗಿ ಭಾಗವಹಿಸಿದ್ದ ಒಂದು ಕಾರ್ಯಕ್ರಮ ತೀರಾ ಅಷ್ಟಾವಕ್ರವಾಗಿತ್ತಂತೆ. ಸೇರಿದ್ದ ಜನ ಕೆಲವು ನೂರು. ಮಾರನೇದಿನ ಕೋಣೆಮಾಣಿಯ ವಾಣಿ, “ಅತ್ಯಂತ ಅದ್ಭುತವಾದ ಕಾರ್ಯಕ್ರಮವನ್ನು ಐದಾರು ಸಾವಿರ ಪ್ರೇಕ್ಷಕರು ವೀಕ್ಷಿಸಿದರು” ಎಂದು ಇಲ್ಲದ್ದನ್ನೆಲ್ಲ ಹೇಳಿ ವರದಿ ಪ್ರಕಟಿಸಿದ್ದನ್ನು ಓದಿದರು!!

ಹಳ್ಳಹಿಡಿದ ಮಾಧ್ಯಮಗಳು ಟಿ.ಆರ್,ಪಿ ಮತ್ತು ಸಿಗುವ ಭಕ್ಷೀಸಿಗಾಗಿ ಕೆಲಸ ಮಾಡುತ್ತವೆ ಎಂಬುದು ಗುಮ್ಮಣ್ಣ ಹೆಗಡೇರ ಅಭಿಪ್ರಾಯ. ಅದಕ್ಕವರು ಸಾಕಷ್ಟು ಪುರಾವೆಗಳನ್ನೂ ಇಟ್ಟುಕೊಂಡಿದ್ದಾರೆ. ಸಾಮಾನುಸ್ವಾಮಿಯ ಕೇಸಿನಲ್ಲಿ ಅವನನ್ನು ಬಚಾವ್ ಮಾಡಲು ಗುತ್ತಿಗೆ ಪಡೆದವರಂತೆ ನಿಂತಿದ್ದು ಸ್ಥಳೀಯ ಮಾಧ್ಯಮಗಳು. ಕೇವಲ ಒಂದೆರಡು ಪತ್ರಿಕೆಗಳು ಮತ್ತು ವಾಹಿನಿ ಬಿಟ್ಟರೆ ಉಳಿದೆಲ್ಲೆಡೆ ಸಾಮಾನುಸ್ವಾಮಿಗಳು ಮಹಾತಪಸ್ವಿಗಳೆಂಬಂತೆ ನಿತ್ಯವೂ ಬಣ್ಣಿಸಿಲಾಗುತ್ತಿತ್ತು.

ಚತುರ್ಮೋಸಕ್ಕೆ ಕುಳಿತ ಸಾಮಾನುಸ್ವಾಮಿಯದ್ದು ದಿನಬೆಳಗಾದರೆ ಬಣ್ಣ ಬಣ್ಣದ ಭಾವಚಿತ್ರಗಳೊಂದಿಗೆ ಪುಟಗಟ್ಟಲೆ ವರದಿಗಳು! ಎಲ್ಲರ ಕಣ್ಣುತಪ್ಪಿಸಿ ಮಠದೊಳಗಡೆ ನಿತ್ಯವೂ ತೊನೆಯಪ್ಪ ರಂಗಿನಾಟಗಳನ್ನು ಆಡುತ್ತಿದ್ದರೆ ಮಾಧ್ಯಮಗಳಲ್ಲಿ ’ಪ್ರವಚನ’ಗಳ ಭಾಗಗಳನ್ನು ತೋರಿಸುತ್ತಿದ್ದರು! ಯತಿಯಾದವ ಯಾವಾಗ ಆ ಮಟ್ಟದ ಸೆಲೆಬ್ರಿಟಿಯಾಗಲು ಇಷ್ಟಪಡುತ್ತಾನೋ ಅಲ್ಲಿಗವನ ಕಚ್ಚೆ ಹರಿದಿದೆ-ಅವನು ಯತಿಯಲ್ಲ ಅಂತಲೇ ಲೆಕ್ಕ! ಆದರೆ ಅವನ ಅಂಧಾಭಿಮಾನಿಗಳು ಕೇಳಬೇಕಲ್ಲ?

ಮಾಧ್ಯಮಗಳನ್ನು ಒಂದೇ ಒಂದು ದಿನವೂ ಬಿಡದೆ ಬಳಸಿಕೊಂಡ ಸಾಮಾನುಸ್ವಾಮಿ ತನ್ನ ಕಚ್ಚೆಹರಿದ ಪ್ರಕರಣಗಳನ್ನು ತನ್ಮೂಲಕ ಮುಚ್ಚುವಷ್ಟು ಪ್ರಭಾವ ಬೀರಲು ಪ್ರಯತ್ನಿಸಿದ. ಹಿಂದೊಂದು ವೀಡಿಯೋ ನೀವು ನೋಡಿರ್ತೀರಿ. ಅದರಲ್ಲಿ ಎರಡು ಕಾಡುದನಗಳು ನದಿದಾಟೋದಕ್ಕೆ ಬರುತ್ತವೆ. ನೀರಿನಲ್ಲಿ ಕಟ್ಟಿಗೆಯಂತಹದ್ದನ್ನು ಕಂಡು ಅರ್ಥೈಸಿಕೊಂಡ ಬುದ್ಧಿವಂತ ದನ, ಅದು ಮೊಸಳೆಯೆಂಬ ತೀರ್ಮಾನಕ್ಕೆ ಬಂದು ದಡದಲ್ಲೇ ನಿಂತುಕೊಂಡಿರುತ್ತದೆ. “ಅದು ಮೊಸಳೆಯಲ್ಲ, ಕಟ್ಟಿಗೆ ತುಂಡು” ಎಂದು ವಾದಿಸುತ್ತಿದ್ದ ದನ ಪರೀಕ್ಷಿಸಲು ಹೋಗಿ ಮೊಸಳೆಗೆ ಅಹಾರವಾಗುತ್ತದೆ!

ಸಮಾಜದಲ್ಲಿ ಯಾರಿಗೆ ತಲೆ ನೆಟ್ಟಗಿದೆಯೋ ಅವರೆಲ್ಲ ಇಂದು ಸಾಮಾನುಸ್ವಾಮಿಯ ವಿರೋಧಿಗಳು ಎನಿಸಿದ್ದಾರೆ. ಅದು ನಿಜವೂ ಹೌದು. ನಮಗೆಲ್ಲ ಧರ್ಮಪೀಠದಲ್ಲಿ ಬೇಕಾದ್ದು ಪರಮಸಾತ್ವಿಕ ಯತಿಧರ್ಮ ಪರಿಪಾಲಕ, ಪರಿವ್ರಾಜಕ, ಪರಮಹಂಸ ಯತಿಯೇ ಹೊರತು ಕಚ್ಚೆಹರುಕನಲ್ಲ. ಬೀದಿ ನಾಯಿಯನ್ನು ಪಲ್ಲಕ್ಕಿಯಲ್ಲಿ ಹೊತ್ತರೆ ಹೇಲು ಕಂಡ ತಕ್ಷಣ ಜಿಗಿದು ಹಾರೋಡುತ್ತದೆ ಎಂಬ ಜಾಣ್ನುಡಿಯಿದೆ. ಸಾಮಾನುಸ್ವಾಮಿಯ ವಂಶಾವಳಿಯ ಹಿನ್ನೆಲೆ ಬೀದಿನಾಯಿಯಷ್ಟೇ ಬಲವಾಗಿದೆ! ಬೀದಿ ನಾಯಿಗಾದರೂ ಅಷ್ಟಿಷ್ಟು ನಿಯತ್ತಿರಬಹುದು; ಆ ವಂಶದವರಿಗಿಲ್ಲ. ಆ ವಂಶದಲ್ಲಿರುವವರೆಲ್ಲ ’ಸಕಲ ಕಲಾವಲ್ಲಭ’ರು, ಚಟಸಾಮ್ರಾಟರು! ಮಗು ಹುಟ್ಟಿದರೆ ಒಬ್ಬನೇ ಅಪ್ಪನಿಗೆ ಹುಟ್ಟಿತೋ ಅಥವಾ ಇಬ್ಬರು ಅಪ್ಪಂದಿರದ್ದು ಸೇರಿ ಹುಟ್ಟಿತೋ ಎಂದು ಅಂದಾಜಿಸಲಾಗದಷ್ಟು ಮಹಿಮಾನ್ವಿತ ’ಪರಿಮಳ’ದ ಕುಟುಂಬ!!

ಅಂತಹ ಹಿನ್ನೆಲೆಯಿಂದ ಬಂದವ ಯತಿಯಾಗ್ತಾನೆ ಎಂದಾಗ ಸಮಾಜದ ಅಂದಿನ ಹಿರಿತಲೆಗಳು ಆಯ್ಕೆಯ ಸಮಿತಿಯಲ್ಲಿರೋರು ಸ್ವಲ್ಪ ಯೋಚಿಸಬೇಕಾಗಿತ್ತು. ಎಲ್ಲರಿಗೂ ನುಣ್ಣಗೆ ಮಸ್ಕಾ ಹೊಡೆದು ಅಧಿಕಾರ ಪಡೆದುಕೊಂಡ ನಂತರ ಸಾಮಾನುಸ್ವಾಮಿ ಭಸ್ಮಾಸುರನಾಗುತ್ತ ನಡೆದ! ಆರಂಭಿದಿಂದ ಇಲ್ಲಿಯವರೆಗೂ ಏನೇನೋ ಯೋಜನೆಗಳು-“ಎಲ್ಲ ಸಮಾಜೋದ್ಧಾರಕ್ಕೆ” ಅಂತ ಮಾಧ್ಯಮಗಳಲ್ಲಿ ಮೆರೆಯುತ್ತಲೇ ಬಂದ. ಜನ ಬೆಪ್ಪತಕ್ಕಡಿಗಳಾಗ್ತೇವೆ ಎಂದು ಊಹಿಸಲೂ ಸಾಧ್ಯವಾಗಲಿಲ್ಲ. ರಾಂಪಾಲನಂತೆ ತಾನು ಹೇಳಿದ್ದೇ ಪರಮ ಸತ್ಯ ಮತ್ತು ಅದನ್ನೇ ನಂಬಬೇಕೆಂದು ಹಠ ಹಿಡಿದ. ಜನಸಾಮಾನ್ಯರಿಗೆ ಕೆಲವೊಮ್ಮೆ ಯತಿನಿಯಮಗಳನ್ನು ಮೀರಿದ ಅವನ ಕಾಮುಕ ನಡತೆಗಳು ಗೊತ್ತಾದರೂ ಯವ್ಯಾವುದೋ ಸಬೂಬು ಕೊಟ್ಟು ಭಕ್ತರ ಕಣ್ಣುಮುಚ್ಚಿಸಿದ! ಬೋಳೆಣ್ಣೆ ಹಚ್ಚಿದ!

“ಇಂತಹ ಸಾಮಾನುಸ್ವಾಮಿ ಹಿಮಾಲಯಕ್ಕೆ ತಪಸ್ಸಿಗೆ ಹೋಗ್ತಾನೆ ಅಂದ್ರೆ ನಂಬ್ತಾರಲ್ಲ ಜನ, ಅದೆಷ್ಟು ಮೂರ್ಖರಲ್ಲವೇ? ಸಾಕುಸಾಕು, ಹೇಳಿದ್ದನ್ನೇ ಇನ್ನೆಷ್ಟು ಸಲ ಹೇಳಬೇಕು, ಬುದ್ಧಿಯುಳ್ಳವರು ತಿದ್ಕೋತಾರೆ, ತಿನ್ನೋದ್ ಬೇಡಾ ಅದು ಸಗಣಿ ಅಂದ್ರೂ ,ಅಲ್ಲ ಉಪ್ಪಿಟ್ಟು ಅಂತ ಅದನ್ನೇ ತಿನ್ನುವವರು ತಿಂದ್ಕೊಂಡು ಹಾಳಾಗಿ ಹೋಗ್ತಾರೆ”” ಎಂದು ಮಾತು ಮುಗಿಸಿದರು ಗುಮ್ಮಣ್ಣ ಹೆಗಡೇರು.

ಇಂಗ್ಲೀಷ್ ನಲ್ಲೊಂದು ಮಾತಿದೆ-If you can’t convince them, confuse them ಎಂಬುದು ಅಲ್ಲಿನ ಕುತಂತ್ರಗಾರಿಕೆಗೆ ಸಂಬಂಧಿಸಿದ ಮಾತು. ಸಾಮಾನುಸ್ವಾಮಿ ಕೇಸುಗಳ ಆರಂಭದಿಂದ ಅನುಸರಿಸಿದ್ದು ಅದೇ ಕುತಂತ್ರ. ಇವತ್ತಿಗೂ ಹಾಗೇ ಮಾಡ್ತಾ ಇದ್ದಾನೆ. ಅಡ್ಡಗೇಟುಗಳು ಇಲ್ಲವೆಂದು ಸಮಯ ಪಡೆಯೋದು, ವಾಮಾಚಾರ, ಕುತಂತ್ರಗಳನ್ನು ನಡೆಸಿ ಮೂಢಭಕ್ತರಲ್ಲಿ ತಾನು ಸರಿಯಾಗಿಯೇ ಇದ್ದೇನೆಂಬ ಭ್ರಮೆ ಹುಟ್ಟಿಸೋದು.

ಇಲ್ಲೀಗ ಜನರಿಗೆ ಬರವಿಲ್ಲ. ಕನಿಷ್ಠ ಲಕ್ಷಾಂತರ ಜನ ಇಲ್ಲಿನ ಬರಹಗಳನ್ನು ಓದುತ್ತಾರೆ. ಅನೇಕ ಜನ ಹೊರಗಡೆಯಿಂದ ಸಾಮಾನುಸ್ವಾಮಿಗೆ ಜೈ ಅನ್ನುತ್ತಲೇ ಒಳಗಿನಿಂದ “ಆ ರಾವಣಾಸುರ ಹೋದ್ರೆ ಸಾಕಪ್ಪ” ಅನ್ನುತ್ತಿದ್ದಾರೆ. ಅಂಥವರೆಲ್ಲ ಇಲ್ಲಿನ ಬರಹಗಳನ್ನು ಓದುತ್ತಾರೆ. ಕಾನೂನಿಗೆ ಕಳ್ಳ ಕಿಂಡಿ ಕೊರೆಯಲು ಹೊರಟ ಸಾಮಾನುಸ್ವಾಮಿ ಪರಪ್ಪವನವನ್ನು ಸೇರುವುದಂತೂ ಗ್ಯಾರಂಟಿ. ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಧಾರವಾಗಹುದೇ ಅಂತ ಯಾರ್ಯಾರನ್ನೋ ಹಿಡಿದು, ತಾನು ಹೇಳಬೇಕಾದ್ದನ್ನು ಅವರ ಬಾಯಿಂದ ಹೇಳಿಸುತ್ತಿದ್ದಾನೆ, ಪಾಪ ಅವರೆಲ್ಲ ಅವನೊಟ್ಟಿಗೆ ಜೈಲಿನಲ್ಲಿ ರಂಭಾರಾಧನೆ ನಡೆಸೋದಕ್ಕೆ ತಯಾರಿ ಮಾಡಿಕೊಳ್ತಾ ಇದ್ದಾರೆ!

ಒಟ್ಟಿನಲ್ಲಿ, ಹಸಿಮೆಣಸನ್ನು ಅರೆದು ಗುದದ್ವಾರಕ್ಕೆ ಹಚ್ಚುತ್ತಿದ್ದಾಗ ತಪ್ಪಿಸಿಕೊಂಡು ಬಿಲಸೇರಿದ ಹೆಗ್ಗಣಕ್ಕೆ, ಮೇಲಿಂದ ಮೆಣಸಿನಕಾಯಿ ಹೊಗೆ ಹಾಕಿದಂತಾಗಿದೆ. ವರ್ಷಗಳಿಂದ ಶ್ರಮಿಸಿದ ಸತ್ಯವಂತರಿಗೆ ಕೆಲವು ತಿಂಗಳು ಕಾಯುವುದು ಕಷ್ಟವಲ್ಲ. ನೋಡ್ತಾ ಇರಿ. ಶಿವಕಾಶಿ ಪಟಾಕಿಗಳನ್ನು ತರಿಸಿ ಜೋಪಾನವಾಗಿ ರೆಡಿ ಇಟ್ಟುಕೊಳ್ಳಿ.

ಈಗ ರಾಂಗಾನುಗ್ರಹದ ಭಾಗ ಮೂರಕ್ಕೆ ಸೇರುವ ಕೆಲವು ಪವಾಡಗಳು

ಪವಾಡ ಒಂದು-

ಚತುರ್ಮೋಸದಲ್ಲಿ ಸಾಮಾನುಸ್ವಾಮಿಯ ಮಂತ್ರಾಕ್ಷತೆ ಪಡೆದ ಗೋಪಾಲ ಅಪಘಾತದಲ್ಲಿ ತಲೆ ಒಡೆದುಕೊಂಡು ಅಂತೂ ಬದುಕಿದ್ದಾನೆ; ಅಪಘಾತವಲ್ಲವೇ? ಅದು ಯಾರಿಗಾದರೂ ಆಗಬಹುದು ಬಿಡಿ, ಅಪಘಾತದಲ್ಲಿ ಬದುಕಿದ್ದಾನಲ್ಲ-ಅದು ಮಂತ್ರಾಕ್ಷತೆ ಮಹಿಮೆ!!

ಪವಾಡ ಎರಡು-

ಬೆಳಗಿನ ಜಾವ ಕನಸಿನಲ್ಲಿ ರಾಣಿ ಜೋರಾಗಿ ಕಿರುಚಿದಳು. ನಿದ್ದೆಯಲ್ಲಿದ್ದ ರಾಜ ಹೌಹಾರಿಬಿದ್ದು ಆಕೆಯನ್ನು ಎಬ್ಬಿಸಿ ಏನಾಯ್ತೆಂದು ಕೇಳಿದ. “ಭಯಂಕರ ಕನಸು, ದೇವಿಯನ್ನು ಕಂಡೆ, “ಇರುವುದನ್ನೆಲ್ಲ ತೆಗೆತೆಗೆದು ತೋರಿಸಿದನಲ್ಲ ಆ ದನಕಾಯೋ ಸ್ವಾಮಿ, ಮೊದಲನೇ ಭೇಟಿಯಲ್ಲೇ ಅವನು ಆಸೆಗಣ್ಣಿನಿಂದ ನಿನ್ನನ್ನು ನೋಡುತ್ತಿದ್ದ. ’ಅರ್ಥವಾಗುತ್ತದೆಯೋ?’ ಎಂದನಲ್ಲ, ಅರ್ಥವಾಗಲಿ ಬಿಡಲಿ ಅರ್ಥ ಹೇಳೋದಕ್ಕೆ ಜೊತೆಗೆ ಗಂಡ ಇದ್ದಾನೆ ಅಂತ ತಿಳ್ಕೋಬೇಕಿತ್ತಲ್ವೇ? ಯಾವ ಸನ್ಯಾಸಿಯೂ ಹಾಗೆಲ್ಲ ಗಮನ ಹರಿಸೋದಿಲ್ಲ ಮಗಳೇ. ನೀನು ನಿನ್ನ ಗಂಡನಿಗೆ ಹೇಳು, ಇನ್ನೆಂದೂ ಆ ಖೂಳನನ್ನು ಭೇಟಿ ಮಾಡಬೇಡಿ. ಅವನ ಯಾತ್ರೆಗೀತ್ರೆ ಡೊಂಬರಾಟಕ್ಕೆಲ್ಲ ನೀವು ಹೋಗೋದು ಬೇಡ” ಎನ್ನುತ್ತಿದ್ದಳು. ಉಗ್ರರೂಪದ ದೇವಿಯನ್ನು ಕಂಡು ಹೆದರಿದ್ದೆ. ನಾವು ಮತ್ತೆ ಆ ಸ್ವಾಮಿಯತ್ತ ತಲೆ ಹಾಕೋದು ಬೇಡ” ಎಂದಳು. ರಾಜ-ರಾಣಿ ಯಾತ್ರೆಗೆ ಬರಲಿಲ್ಲ-ಮಂತ್ರಾಕ್ಷತೆಯ ಮಹಿಮೆ.

ಪವಾಡ ಮೂರು-

ಒತ್ತಾಯಪೂರ್ವಕ ಕನ್ಯಾಸಂಸ್ಕಾರಕ್ಕೆ ಬಂದು ಹೋಗಿದ್ದ ಹದಿನಾರರ ಹುಡುಗಿ ಆ ರಾತ್ರಿ ಕನಸು ಕಂಡಳು. ಕನಸಿನಲ್ಲಿ ಸಾಮಾನು ಗುರುಗಳು ಸಾಮಾನು ಅಲ್ಲಾಡಿಸುತ್ತ ಬಂದರು. “ಸಂಜೂ, ನಿನ್ನಮ್ಮನಿಗೆ ಕನ್ಯಾಸಂಸ್ಕಾರ ನಡೆಸಿರಲಿಲ್ಲ. ರಾಮ ಅವಳಿಗೆ ಬೇರೆ ರೀತಿಯಲ್ಲಿ ಸಂಸ್ಕಾರವನ್ನು ನೀಡಿದ. ಅದರಿಂದ ಬಂಗಾರದಂತಹ ಮಗಳು ನೀನು ಜನಿಸಿದೆ. ನೀನು ಬೆಳೆದು ಹದಿನಾರು ತುಂಬಿದಾಗ ನಿನಗೆ ಶ್ರೀರಾಮನಿಂದ ಇವತ್ತು ಕನ್ಯಾಸಂಸ್ಕಾರವಾಗಿದೆ. ಇಂದಿನಿಂದ ಸರಿಯಾಗಿ ಒಂಬತ್ತು ತಿಂಗಳಿಗೆ ನಿನಗೆ ಹೆಣ್ಣುಮಗುವೊಂದು ಜನಿಸುತ್ತದೆ. ಬಹಳ ಆರೋಗ್ಯವಂತ ಸುಂದರ ಮಗುವದು. ಅದು ಬೆಳೆದು ಹದಿನಾರು ತುಂಬಿದಾಗ ನಮ್ಮಲ್ಲಿಗೆ ಕರೆತಂದು ಕನ್ಯಾಸಂಸ್ಕಾರವನ್ನು ಪೂರೈಸಿಕೊಂಡು ಹೋಗು. ಇಡೀ ನಿಮ್ಮ ವಂಶಕ್ಕೆಲ್ಲ ಒಳ್ಳೇದಾಗ್ತದೆ.” ಕನಸು ಕಾಣುತ್ತ ಹೆದರಿ ಬೇಡವೇ ಬೇಡವೆಂದು ಚೀರಿದಳು. ಯಾವ ಕನಸೆಂಬುದನ್ನೂ ಆಲಿಸದ ಅವಳಪ್ಪ “ಥೋ, ಎಂಥದ್ದದು ಬೆಪ್ಪೆ, ಇಂದಷ್ಟೇ ಗುರುಗಳಿದ್ದಲ್ಲಿಗೆ ಹೋಗಿಬಂದಿದ್ದೇವೆ. ಅವರ ಮಂತ್ರಾಕ್ಷತೆ ಹಾಕ್ತೇನೆ, ಮಲಕ್ಕೋ, ಏನೂ ಆಗೋದಿಲ್ಲ” ಎಂದ!!

Thumari Ramachandra
23/11/2016

source: https://www.facebook.com/groups/1499395003680065/permalink/1863102370642658/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s