ಸಾವಿಗೆ ಪ್ರೇರೇಪಿಸುವ, ಸತ್ತಾಗಲೂ ಬಹಿಷ್ಕಾರ ಹಾಕುವ, ವಿರೋಧಿಗಳಮೇಲೆ ಹಲ್ಲೆ ನಡೆಸುವ ಪಾತಕಿ ಯಾವ ಸೀಮೆಯ ಸನ್ಯಾಸಿ?

ಸಾವಿಗೆ ಪ್ರೇರೇಪಿಸುವ, ಸತ್ತಾಗಲೂ ಬಹಿಷ್ಕಾರ ಹಾಕುವ, ವಿರೋಧಿಗಳಮೇಲೆ ಹಲ್ಲೆ ನಡೆಸುವ ಪಾತಕಿ ಯಾವ ಸೀಮೆಯ ಸನ್ಯಾಸಿ?

ಯಾವುದೇ ಜೀವಿಯ ಶರೀರದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸಿದಾಗ ವೈರಾಣುಗಳ ಸಂಖ್ಯಾವೃದ್ಧಿಯಾಗಿ ಜೀವಿ ಬಲಿಯಾಗುತ್ತದೆ. ಯಾವುದೇ ವ್ಯವಸ್ಥೆಯಲ್ಲಿ ಕಳ್ಳರ ಸೈನ್ಯಾಬಲವೇ ಹೆಚ್ಚಿದಾಗ ವ್ಯವಸ್ಥೆಯೂ ಹದಗೆಡುತ್ತದೆ. ಮೋದಿಯವರ ಬಗ್ಗೆ ನಾವೆಲ್ಲ ಹೆಮ್ಮೆಪಡಬೇಕು. ಆದರೆ ಅವರೊಡನಿರುವ ಕೆಲವರು ರಾಡಿಗಳಲ್ಲಿ ಬಿದ್ದವರು! ಸಾಮಾನುಸ್ವಾಮಿಯ ದಿನಚರ್ಯೆಯಂತೆ ಅವರದ್ದೂ ಒಳಗೊಂದು ಹೊರಗೊಂದು. ಅನೇಕ ಸಲ ಚಿಂತನೆ ನಡೆಸಿದಾಗ ಅನ್ನಿಸಿದ್ದು ದೇಶದಲ್ಲಿ ನರೇಂದ್ರ ಮೋದಿಯಂಥವರು ಎಷ್ಟಿದ್ದಾರೆ? ಪ್ರಾಯಶಃ ಐದಾರು ಪರ್ಸೆಂಟು ಅಷ್ಟೆ!!

ರಾಡಿಯೆಬ್ಬಿಸಿದ ಹೆಂಗಸೊಬ್ಬಳು ಇದ್ದಳಲ್ಲ? ಅದೇ ಸಮಯಕ್ಕೆ ಕರ್ನಾಟಕದಲ್ಲಿ ತೆಂಗಿನ ಮರದಿಂದ ನೀರಾ ತೆಗೆಯುವ ಸುದ್ದಿ ರಾಡಿಯಾಗಿತ್ತು ನೋಡಿ. ಅದಕ್ಕಿಂತಲೂ ಮುಂಚೆಯೇ ಅನಾಥನೆಂಬ ಫಟಿಂಗರು ಕಾಳಧನಿಕರು ರಾಡಿ ಎಬ್ಬಿಸಿದ ಹೆಂಗಸಿನ ಜೊತೆ ರಾಸಲೀಲೆಯಾಡಲು ಬಯಸಿ ’ಹೆಸರು’ ಮಾಡಿದ್ದರು; ಅದು ಕ್ಯಾಪಿಟಲ್ ಪ್ರದೇಶದ ಫಾರ್ಮ್ ಹೌಸಿನಲ್ಲಿ. ಅಂತಹ ರಾಡಿಯೆಬ್ಬಿಸಿದವರೆಲ್ಲ ಮೋದಿಯವರ ಜೊತೆ ನಿಂತಾಗ ನಮಗೆಲ್ಲ ಬೇಸರವಾಗುತ್ತದೆ. ಮೋದಿಯವರ ಗಾಜಿನ ಮನೆಯೊಳಗಿನ ಪಾರದರ್ಶಕ ಜೀವನಕ್ಕೂ ಮತ್ತು ಜೊತೆಗೆ ನಿಲ್ಲುವವರ ಅಪಾರದರ್ಶಕ ಜೀವನಕ್ಕೂ ವ್ಯತ್ಯಾಸವಿದೆ.

ಹಾಗಾಗೇ ಅಲ್ಲವೇ? ಸಾಮಾನುಸ್ವಾಮಿ ಅಪಾರದರ್ಶಕ ಜೀವನದ ರಾಜಕಾರಣಿಗಳ ಹೆಗಲಮೇಲೆ ಕೈಹಾಕಿ ಭಾಯಿ ಭಾಯಿಯಂತಾಗಿದ್ದು? ಸಭೆಗಳಲ್ಲಿ ಅವರು ಸಾಮಾನುಸ್ವಾಮಿಗೆ ಹಾರ ಹಾಕಿ, ಫಲತಾಂಬೂಲ ಅರ್ಪಣೆ ಮಾಡಿ ಅಡ್ಡಬೀಳುತ್ತಾರೆ. ಒಳಗಿನಿಂದ ಅವರ ಕಾಳಧನವನ್ನು ಸಾಮಾನುಸ್ವಾಮಿಗೆ ಇಟ್ಟುಕೊಳ್ಳಲು ನೀಡುತ್ತಾರೆ. ಕಾಳಧನ ತರಿಸಿಕೊಳ್ಳುವ ಸಲುವಾಗಿಯೇ ಶಿಖರನಗರದಲ್ಲಿ ರಾತ್ರಿ ವಿಐಪಿಗಳಿಗೆ ಏಕಾಂತ ಭಕ್ತೆಯರನ್ನು ಕೊಟ್ಟಿದ್ದು!!

ಕಾಳಧನ ಇಟ್ಟವರೆಲ್ಲ ಸಾಮಾನುಸ್ವಾಮಿಯ ಬೆಂಗಾವಲಿಗೆ ಇಲ್ಲಿಯವರೆಗೂ ನಿಂತೇ ಇದ್ದಾರೆ!! ಇಲ್ಲದಿದ್ದರೆ ಇಷ್ಟು ಸಮಯ ಕಾಯಬೇಕಿರಲಿಲ್ಲ; ಸೀದಾ ಪರಪ್ಪವನಕ್ಕೆ ಮೆರವಣಿಗೆ ಹೊರಡುತ್ತಿತ್ತು!!

ತೆಗೆದುಕೊಂಡಿದ್ದ ಕಾಳಧನ ಎಲ್ಲೆಲ್ಲಿ ಇರಿಸಲ್ಪಟ್ಟಿತು ಎಂಬುದು ಮಾತ್ರ ಗೋಪ್ಯ! ಅದರಲ್ಲಿ ಮರಳಿ ಪಡೆದುಕೊಂಡ ರಾಜಕಾರಣಿಗಳೆಷ್ಟು; ಅವರಿಗೆಲ್ಲ ಇಡಿಯಾಗಿ ಸಂದಾಯವಾಯಿತೇ ಅಥವಾ ಭಾಗಶಃ ಕೊಟ್ಟು ’ಕೆಲವು ಸಮಯ ಬಿಟ್ಟು ಕೊಡ್ತೇವೆ ನಾವು, ತಪ್ಪಿಸಿಕೊಳ್ಳುವ ಪ್ರಶ್ನೇಯೇ ಇಲ್ಲ ಎಂದು ಸಾಗಹಾಕಿದನೇ? ಗೊತ್ತಿಲ್ಲ. ಜೈಕಾರದ ಬಳಗದಲ್ಲಿ ಟಾಪ್ ಲೆವಲ್ಲಿನಲ್ಲಿರುವವರೆಲ್ಲ ಮನೆಕಟ್ಟಿದ್ದು, ಹೊಸ ಕಾರು ತೆಗೆದುಕೊಂಡಿದ್ದು ಎಲ್ಲ ನಿಜ! ಇನ್ನು ಸ್ತ್ರೀಕುಮಾರ ಬಸ್ಸಣ್ಣ ಮತ್ತು ಕಜ್ಜಿವೈದ್ಯನಿಗೆ ಕೊಟ್ಟದ್ದು ಯಾವ ಹಣ ಅಂತ ಗೊತ್ತಾಗಿಲ್ಲ? ಅದು ಭಕ್ತರಿಂದ ಪೀಕಿದ ಹಣವೇ ಇರಬಹುದು.

ಸಾಮಾನುಸ್ವಾಮಿಯ ಮಠವೆಂದರೆ ಸಾಮಾನ್ಯವೇ? ಹಳದಿ ತಾಲಿಬಾನಿಗಳನ್ನು ಕೇಳಿ-ದೇಶದಲ್ಲಿ ಉಳಿದೆಲ್ಲ ಶಂಕರ ಮಠಗಳವರಿಗೆ ಸಾಮಾನುಸ್ವಾಮಿಯ ಮಠದ ದಿಢೀರ್ ಔನ್ನತ್ಯವನ್ನು ಕಂಡು ಹೊಟ್ಟೆಕಿಚ್ಚು! ಹೀಗಾಗಿ ಅವರಿಗೆಲ್ಲ ಅವರ ಸ್ವಾಮಿಗಳು ಅಂತರ್ಜಾಲದ ಮೂಲಕ ಹಲವು ರೀತಿಯಲ್ಲಿ ದಾಳಿ ಮಾಡಲು ಹೇಳಿಕೊಟ್ಟಿದ್ದಾರೆ.

ಅಂತರ್ಜಾಲದಲ್ಲಿ ಸಾಮಾನುಸ್ವಾಮಿಯ ಬಳಗ ಮಾರ್ಜಾಲಗಳಂತೆ ಜಾಲತಾಣಗಳಲ್ಲಿ ವಿಹರಿಸುತ್ತಾರೆ. ಸಾಮಾನುಸ್ವಾಮಿಯೂ ಸಹ, ಹಲವು ಫೇಕ್ ಅಕೌಂಟುಗಳಿಂದ ವ್ಯವಹರಿಸುತ್ತಿರುವುದು ಗೊತ್ತಿರದ ವಿಷಯವೇನಲ್ಲ. ಸಾಮಾನುಸ್ವಾಮಿಯ ವಿರೋಧಿಗಳೆನಿಸಿಕೊಂಡವರ ಬಗ್ಗೆ ಅವನ ಮಾಯಾವಿ ಇಂದ್ರಜಾಲಿಗರೆಲ್ಲ ಬಳಸುವ ಅವಾಚ್ಯ ಮತ್ತು ಅಶ್ಲೀಲ ಪದಗಳನ್ನೆಲ್ಲ ಗಮನಿಸಿದರೆ ಅವರೆಲ್ಲ ನಿಜವಾದ ಸನ್ಯಾಸಿಯ ಸತ್ಸಂಗದಲ್ಲಿ ಇರುವ ಜನವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಲವು ಮಾರ್ಗಗಳಲ್ಲಿ ತನ್ನ ಚೇಲಾಗಳನ್ನು ಛೂ ಬಿಡುವ ಸಾಮಾನುಸ್ವಾಮಿ ಅವರಿಗೂ ಮಠಕ್ಕೂ ಸಂಬಂಧವೇ ಇಲ್ಲ ಅಂತಾನೆ; ಅವರದ್ದೇ ಒಂದು ವಲಯ ಅಂತ ಮಾಡಿಕೊಳ್ತಾನೆ; ಆ ವಲಯದಿಂದ ಕಳ್ಳನಿಗೆ ಕಳ್ಳರ ಚತುರ್ಮೋಸದಲ್ಲಿ ವಿಶೇಷ ಸೇವೆ ನಡೆಯುತ್ತದೆ; ಅವರಿಗೆಲ್ಲ ಅದೆಂತದೋ ಬೆಳ್ಳಿ ನಾಣ್ಯ ಕೊಟ್ಟು ಮುಂದಿನ ಕೆಲಸಕ್ಕೆ ಅಣಿಗೊಳಿಸುತ್ತಾನೆ!

ಅವನ / ಅವನ ಮಠದ ಹೆಸರಲ್ಲಿ ಹಾಗೆ ನಡೆದುಕೊಳ್ಳುವ ಅವರ ಮಾತುಗಳಿಗೆ ಹಾಗಾದರೆ ಅವನು ಕಡಿವಾಣ ಹಾಕಬಹುದಿತ್ತಲ್ಲವೇ? ಇಲ್ಲ, ಅವನೇ ಅವರನ್ನೆಲ್ಲ ಛೂ ಬಿಟ್ಟಿದ್ದು; ಕೆಲವು ತಿಂಗಳ ಹಿಂದೆ ವಾಹಿನಿಯ ವರದಿಗಾರನೊಬ್ಬನಮೇಲೆ ಅವನ ಚೇಲಾಗಳು ಹರಿಹಾಯ್ದಿದ್ದು ನೋಡಿಲ್ಲವೇ? ಅವರನ್ನೆಲ್ಲ ಅವನೇ ಪೋಷಿಸಿಕೊಂಡಿದ್ದಾನೆ; ರಾಂಪಾಲನಂತೆ ಅಂಥದ್ದೊಂದು ಸೈನ್ಯವೇ ಇದೆ!

ಸಾಮಾನುಸ್ವಾಮಿಯ ಸಾಮಾನ್ಯ ಲಕ್ಷಣಗಳಲ್ಲಿ ಪ್ರಮುಖವಾದದ್ದು Use & Throw Culture. ಅವನ ಪರವಾಗಿ ಅವನಿಗೆ ಬೇಕಾದಂತೆ ನಡೆದುಕೊಳ್ಳುವವರೆಲ್ಲ ಅವನ ಭಕ್ತರು. ಅವನ ಅಧಾರ್ಮಿಕ, ಅನೈತಿಕ, ಮನೆಮುರುಕ ಕೆಲಸಗಳಿಗೆ, ಭಕ್ತರ ರಕ್ತಹಿಂಡಿ ಹಣಪೀಕುವ ದುರ್ಯೋಜನೆಗಳಿಗೆ, ಇತಿಹಾಸ ತಿರುಚಿ ಬೋಳೆಣ್ಣೆ ಸವರಿ ಯಾತ್ರಿಕರನ್ನು ಆಕರ್ಷಿಸಲು ಹನುಮ ಜನುಮದ ಭೂಮಿಯನ್ನು ಸೃಷ್ಟಿಸುವಂತಹ ಧೂರ್ತ ಯೋಜನೆಗಳಿಗೆ, ಆದಾಯವಿರುವ ದೇವಸ್ಥಾನಗಳ ಮತ್ತು ವಿದ್ಯಾಸಂಸ್ಥೆಗಳ ಅತಿಕ್ರಮಣ-ಕಬಳಿಕೆಗೆ, ಕಳ್ಳಮಾರ್ಗದ ರಿಯಲ್ ಎಸ್ಟೇಟ್ ಧಂದೆಗೆ, ಎಲ್ಲಕ್ಕಿಂತ ಹೆಚ್ಚಾಗಿ ’ಏಕಾಂತ’ ಮತ್ತು ಕನ್ಯಾಸಂಸ್ಕಾರ ವೆಂಬ ಅನೈತಿಕ ಚಟುವಟಿಕೆಗಳಿಗೆ, ಸನ್ಯಾಸಧರ್ಮ ಮೀರಿದ ನಡತೆಗೆ ಭಕ್ತರಲ್ಲಿ ಯಾರೋ ತಿರುಗಿಬಿದ್ದರೆ ಅವರೇ ವಿರೋಧಿಗಳೆಂದು ಪರಿಗಣಸಲ್ಪಟ್ಟು ಮಠದಿಂದ ಹೊರಗೆ ಹಾಕಲ್ಪಡುತ್ತಾರೆ. ವಿರೋಧಿಸುವವರಮೇಲೆ ಹಳದಿ ತಾಲಿಬಾನ್ ಪಡೆ ದಾಳಿಯನ್ನು ನಡೆಸುತ್ತದೆ.

ತಾನು ಮಾಡಿದ ತಪ್ಪುಗಳನ್ನೆಲ್ಲ ಅನುಮೋದಿಸುವ, ತನ್ನ ಕಚ್ಚೆಹರುಕು ಹಾದರದ ಕೃತ್ಯಗಳನ್ನು ಕಂಡರೂ ಕಾಣದಂತಿರುವ ಅಥವಾ ಗೊತ್ತಾದರೂ ಗೊತ್ತಾಗದಂತಿರುವ ಬಾವಾಜಿ ಮನೆಗಳೆಲ್ಲ ಮಹಾನ್ ಮಠಗಳಾಗುತ್ತವೆ ಸಾಮಾನುಸ್ವಾಮಿಗೆ. ಅವನ ತಪ್ಪುಗಳನ್ನು ಸಮರ್ಥಿಸಲಿಲ್ಲ ಎಂಬ ಕಾರಣಕ್ಕೆ ಉಳಿದ ಸನ್ಮಾರ್ಗನಿರತ ಮಠಗಳನ್ನು ಹಿಗ್ಗಾ ಮುಗ್ಗಾ ಬೈಯೋದು ಟೀಕಿಸೋದು ನಡೆಯುತ್ತದೆ ಅವನಿಂದ. ಕೆಲವು ವರ್ಷಗಳಿಂದ ಅವನ ಪ್ರತಿಯೊಂದು ’ಪ್ರವಚನ’ವನ್ನು ಗಮನಿಸಿ-ಅದೇನು ಪ್ರವಚನವೇ? ಯಾವ ವಿಷಯದಮೇಲೆ? ಸಾಮಾನುಸ್ವಾಮಿಗೆ ಪ್ರವಚನ ನೀಡುವಷ್ಟು ವಿದ್ವತ್ತು ಇದೆಯೇ? ಐಪ್ಯಾಡ್, ಟ್ಯಾಬ್ಲೆಟ್ ಗಳಿಲ್ಲದಿದ್ದರೆ ಸಾಮಾನುಸ್ವಾಮಿಯ ಕತೆ ನೋಡಬೇಕಿತ್ತು!

ವಿರೋಧಿಗಳ ಕುಟುಂಬದವನೆಂಬ ಕಾರಣಕ್ಕೆ ಅವನನ್ನು ಬಗ್ಗುಬಡಿದು ಇಂತಿಷ್ಟು ಹೊತ್ತಿನೊಳಗೆ ತನ್ನ ಕಾಲಿಗೆ ಬಂದು ಬೀಳು ಎಂದು ಸಿಕ್ಕಿದಲ್ಲಡಕ್ಕೊ ಭಟ್ಟನಿಂದ ಫೋನ್ ಮಾಡಿಸಿ, ಬೆದರಿಕೆ ಒಡ್ಡಿ, ಅವನ ಆತ್ಮಹತ್ಯೆಗೆ ಪ್ರಚೋದಿಸಿದ ವ್ಯಕ್ತಿಯನ್ನು ಯಾರಾದರೂ ಸನ್ಯಾಸಿಯೆನ್ನಲು ಸಾಧ್ಯವೇ? ಅವನೊಬ್ಬ ಪರೋಕ್ಷ ಕೊಲೆಗಾರನಲ್ಲವೇ? ತನ್ನನ್ನು ವಿರೋಧಿಸಿದವರ ಕುಟುಂಬದವನೆಂದು ಸತ್ತನಂತರ ಆ ವ್ಯಕ್ತಿಯ ಕಳೇಬರದ ಅಂತ್ಯಸಂಸ್ಕಾರಕ್ಕೆ ಬೇಕಾದ ಪರಿಕರಗಳನ್ನು ಯಾರೂ ಕೊಡದಂತೆ, ಸಮಾಜದ ಯಾವ ಪುರೋಹಿತನೂ ಆ ಕಾರ್ಯಕ್ಕೆ ಹೋಗದಂತೆ, ಆ ಸೀಮೆಯ ಯಾವೊಬ್ಬನೂ ಅಲ್ಲಿಗೆ ಹೋಗದಂತೆ ಬಹಿಷ್ಕರಿಸುವಂತೆ ಮಾಡಿದ ಸಾಮಾನುಸ್ವಾಮಿ ಒಬ್ಬ ಸನ್ಯಾಸಿಯೇ?

ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಭೀಮನ ಹೊಡೆತದ ಆಘಾತದಿಂದ ದುರ್ಯೋಧನ ಮಡಿದುಬಿದ್ದಾಗ, ದುರ್ಯೋಧನನ ಕಳೇಬರದ ಶಿರಸ್ಸಿಗೆ ಭೀಮ ತನ್ನ ಕಾಲಿನಿಂದ ತುಳಿಯಲು ಮುಂದಾದಾಗ ಕೃಷ್ಣ, “ಇಷ್ಟುದಿನ ರಾಜ್ಯವನ್ನಾಳಿದ ರಾಜನ ತಲೆಯದು, ಶರೀರದಲ್ಲಿ ತಲೆ ಎಲ್ಲರಿಗೂ ಶ್ರೇಷ್ಠವಾದ ಅಂಗ, ಸತ್ತನಂತರದಲ್ಲೂ ಅದನ್ನು ಕಾಲಿನಲ್ಲಿ ತುಳಿಯುವ ಕೆಲಸ ಬೇಡ”ವೆನ್ನುತ್ತಾನೆ. “ನಮಗೆ ವೈರಿಯೇ ಆದರೂ ಸತ್ತ ನಂತರ ಆ ವ್ಯಕ್ತಿಯಮೇಲೆ ದ್ವೇಷವನ್ನು ಇರಿಸಿಕೊಳ್ಳಬಾರದು” ಎಂದು ಶ್ರೀರಾಮ ತನ್ನವರಲ್ಲಿ ಹೇಳಿದ್ದಾನೆ. ಸಾಮಾನುಸ್ವಾಮಿಯ ಭಕ್ತ ಬಳಗ ಎನಿಸಿಕೊಂಡ್ವರಿಗೆ ಇದೆಲ್ಲ ಗೊತ್ತಿಲ್ಲವೇ?

ಹೋರಿ ತೊನೆಯಪ್ಪನ ಮೈಮನವೆಲ್ಲ ವಿಷಮಯವಾಗಿದೆ. ಕಾಳಿಂದಿಯ ಮಡುವಿನಲ್ಲಿ ಕಾಳಸರ್ಪವಡಗಿ ನೀರಿನಲ್ಲಿ ವಿಷ ಸುರಿಸುತ್ತಿದ್ದರೆ, ಆ ನೀರನ್ನು ಕುಡಿಯುವ ಹಸುಗಳ ಪ್ರಾಣಹರಣವಾಗುತ್ತಲೇ ಇತ್ತು. ಕಾಳೀಯಮರ್ದನ ಮರ್ದಿಸದಿದ್ದರೆ ಜನರಿಗೆ ಬೇರೆ ಮಾರ್ಗವೇ ಇರಲಿಲ್ಲ. ನದಿಯ ಆಳದೊಳಕ್ಕೆ ಹುದುಗಿದ್ದ ಹಾವನ್ನು ಎಲ್ಲಿದೆಯೆಂದು ನೆಟ್ಟಗೆ ಕಂಡವರಿಲ್ಲ; ನದಿಯೊಳಕ್ಕೆ ಇಳಿದರೆ ಬದುಕಿ ಬರುವ ಯಾವ ವಿಶ್ವಾಸವೂ ಇರಲಿಲ್ಲ.

ಮಠವೆಂಬ ಯಮುನೆಯಲ್ಲಿ ಸಾಮಾನುಸ್ವಾಮಿಯೆಂಬ ಕಾಳೀಯ ಸೇರಿಕೊಂಡಿದ್ದಾನೆ. ಹಳದೀ ತಾಲಿಬಾನು ಅವನಿಂದ ಹೊಮ್ಮುವ ವಿಷ-ಹೀಗಾಗಿ ಮಠವೆಲ್ಲ ವಿಷಮಯವಾಗಿದೆ. ಮಠಕ್ಕೆ ಬರುವ ಬಕರಾಭಕ್ತರು ಹಣವನ್ನೂ ತೆತ್ತು, ತಮ್ಮ ಹೆಂಗಸರು ಮತ್ತು ಹರೆಯದ ಹೆಣ್ಣುಮಕ್ಕಳನ್ನು ಅವನಿಗೆ ಭೋಗಿಸಲು ಅರ್ಪಿಸುವ ಮೋಸದಾಟಕ್ಕೆ ಬಲಿಯಾಗಬೇಕಾಗಿದೆ. ಪ್ರಜಾತಂತ್ರದ ನ್ಯಾಯವ್ಯವಸ್ಥೆಯೆಂಬ ಕೃಷ್ಣ ಈ ಕಾಳೀಯನನ್ನು ಮರ್ದಿಸಿ ಪರಪ್ಪವನಕ್ಕೆ ಅಟ್ಟಬೇಕಾಗಿದೆ. ನ್ಯಾಯವ್ಯವಸ್ಥೆಯೆಂಬ ಕೃಷ್ಣನಿಗೆ ಅರಿವುಳ್ಳ ಸಮಾಜದ ಪ್ರೋತ್ಸಾಹ ಬೇಕಾಗಿದೆ.

ಇಬ್ಬರು ಕುಂಬಾರರಿದ್ದರಂತೆ. ಸಣ್ಣಪ್ಪ ಮತ್ತು ದೊಡ್ಡಪ್ಪ ಅಂತ ಬೇಕಾದರೆ ಹೆಸರಿಟ್ಟುಕೊಳ್ಳಿ. ಸಣ್ಣಪ್ಪನಿಗೆ ಶ್ರಮದ ಕೆಲಸ ಬಹಳ ಇಷ್ಟ. ಆತ ಶ್ರಮವಹಿಸಿ ತಯಾರಿಸುತ್ತಿದ್ದ ಗುಣಮಟ್ಟದ ಮಡಕೆಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ದೊಡ್ಡಪ್ಪ ಬಲು ಸೋಮಾರಿ. ತೀರಾ ಗಮನ ನೀಡದೆ ಆತ ತಯಾರಿಸುತ್ತಿದ್ದ ಮಡಕೆಗಳನ್ನು ಕೇಳೋರೇ ಇರಲಿಲ್ಲ. ಗುಣಮಟ್ಟವನ್ನು ಕಾಪಾಡಿಕೊಂಡರೆ ಗಿರಾಕಿ ಬರ್ತಾರೆ ಅಂತ ಸಣ್ಣಪ್ಪ ಸಲಹೆ ಕೊಡ್ತಿದ್ದದ್ದು ದೊಡ್ಡಪ್ಪನಿಗೆ ಹಿಡಿಸ್ತಾ ಇರಲಿಲ್ಲ.

ಹೀಗಿರುತ್ತ ಒಮ್ಮೆ, ಸಣ್ಣಪ್ಪನ ಬೆಳವಣಿಗೆ ನೋಡಿ ದೊಡ್ಡಪ್ಪನಿಗೆ ಒಳಗೊಳಗೆ ಮನಸ್ಸು ಕುದ್ದುಹೋಯಿತು, ಹೊಟ್ಟೆಯುರಿಯೆದ್ದು ಸಣ್ಣಪ್ಪನನ್ನು ಗಡೀಪಾರು ಮಾಡಿಸೋದಕ್ಕೆ ಬೇಕಾದ ಪ್ಲಾನು ಮಾಡ ಹತ್ತಿದ. ರಾಜಾಡಳಿತದ ಕಾಲವಾಗಿತ್ತು; ರಾಜರಿಗೆ ಸಣ್ಣಪ್ಪನ ವಿರುದ್ಧ ಸುಳ್ಳೇ ದೂರು ಕೊಡಲು ಹೋದ. ಅರಮನೆಯ ಹೊರವಲಯದಲ್ಲಿ ಆನೆಯನ್ನು ಕಟ್ಟಿದ್ದರು. ಆನೆಯನ್ನು ಕಂಡ ದೊಡ್ಡಪ್ಪನಿಗೆ ಆರ್ಕಿಮಿಡೀಸ್ ಬಾತ್ ಟಬ್ಬಿನಲ್ಲಿದ್ದಾಗ ಸಾಂದ್ರತೆಯ ಸೂತ್ರ ಹೊಳೆದಂತೆ ದುರುಪಾಯವೊಂದು ಹೊಳೆಯಿತು.

ರಾಜಾಂಗಣದಲ್ಲಿ ಕೈಮುಗಿದು ನಿಂತ ದೊಡ್ಡಪ್ಪ, “ಮಹಾಸ್ವಾಮಿ, ನಮ್ಮೂರಲ್ಲಿ ಸಣ್ಣಪ್ಪನೆಂಬ ಕುಂಬಾರ ಇದ್ದಾನೆ. ನಿಮ್ಮ ಕರಿ ಅನೆಯನ್ನು ತೊಳೆದು ಬಿಳಿ ಆನೆಯನ್ನು ಮಾಡುವ ಚಮತ್ಕಾರ ಅವನಲ್ಲಿದೆ. ಕೇಳಿದರೆ ಅಗೋದಿಲ್ಲ ಅಂತಾನೆ. ಮಾಡಿಕೊಡದಿದ್ದರೆ ತಲೆ ತೆಗೆಸ್ತೀನಿ ಅಂತ ಕಟ್ಟಪ್ಪಣೆ ಮಾಡಿದ್ರೆ ಮಾಡಿಕೊಡ್ತಾನೆ” ಅಂತ ಹೇಳಿದ.

ರಾಜನಿಗೆ ಬಹಳ ಕುತೂಹಲ; ತನ್ನ ಭಟರನ್ನು ಕಳಿಸಿ ಸಣ್ಣಪ್ಪನಿಗೆ ಸಂದೇಶ ತಲುಪಿಸಿದ. ಭಟರು ಸಣ್ಣಪ್ಪನನ್ನು ರಾಜನಲ್ಲಿಗೆ ಕರೆತಂದರು. ರಾಜ ವಿಷಯವನ್ನು ಹೇಳಿ, ಆಜ್ಞೆಮಾಡಿದ. ರಾಜಾಂಗಣದಲ್ಲಿ ಕೈಮುಗಿದು ನಿಂತಿದ್ದ ಸಣ್ಣಪ್ಪನಿಗೆ, ಹೇಗೂ ಇನ್ನು ಕೆಲವೇ ದಿನಗಳಲ್ಲಿ ಬದುಕು ಮುಗಿದುಹೋಗುತ್ತದೆ ಎನಿಸಿತು. ಚಿಂತೆಯಲ್ಲಿ ಸ್ವಲ್ಪ ಆ ಕಡೆ ಈ ಕಡೆ ನೋಡಿದ. ಒಂದು ಮೂಲೆಯಲ್ಲಿ ನಿಂತಿದ್ದ ದೊಡ್ಡಪ್ಪ ಸಣ್ಣಪ್ಪನನ್ನು ನೋಡಿ ನಗುತ್ತಿದ್ದ.

ಸಣ್ಣಪ್ಪ ಬಾಯ್ದೆರೆದು,”ಮಹಾಸ್ವಾಮಿ, ನಿಮ್ಮ ಕಪ್ಪು ಆನೆಯನ್ನು ಬಿಳಿ ಆನೆಯನ್ನಾಗಿ ಮಾಡಲು ಅದರ ಮಜ್ಜನಕ್ಕೆ ಅದನ್ನು ನಿಲ್ಲಿಸುವಂತಹ ಮಣ್ಣಿನ ಒಂದು ದೊಡ್ಡ ಬೋಗುಣಿ ಬೇಕು. ಅಂತಹ ಕೆಲಸದಲ್ಲಿ ನಿಷ್ಣಾತನಾದ ನಮ್ಮೂರ ದೊಡ್ಡಪ್ಪ ಇಲ್ಲೇ ನಿಂತಿದ್ದಾನೆ. ದಯಮಾಡಿ ಅವನಿಂದ ಅದನ್ನು ಮಾಡಿಸಿ ತರಿಸಿದರೆ ನಾನು ಆನೆಯನ್ನು ತೊಳೆಯುವ ಕೆಲಸ ಮಾಡಿಕೊಡಬಲ್ಲೆ” ಎಂದ.

“ದೊಡ್ಡಪ್ಪ, ಇನ್ನೊಂದು ವಾರದೊಳಗೆ ಆನೆ ನಿಲ್ಲುವಷ್ಟು ದೊಡ್ಡ ಬೋಗುಣಿ ಮಾಡಿ ತರತಕ್ಕದ್ದು” ಎಂದು ರಾಜಾಜ್ಞೆಯಾಯಿತು. ಒಂದೇವಾರದಲ್ಲಿ ದೊಡ್ಡಪ್ಪ ದೊಡ್ಡ ಬೋಗುಣಿಯನ್ನು ತಯಾರಿಸಿಕೊಂಡು ಬಂದ. ಸಣ್ಣಪ್ಪ ಅದರಲ್ಲಿ ಆನೆಯನ್ನು ನಿಲಿಸುವ ಹೊತ್ತಿಗೆ ಬೋಗುಣಿ ಒಡೆದು ಚೂರಾಗಿಹೋಯ್ತು! ವಿನಾಕಾರಣ ರಾಜನ ಆಸ್ಥಾನಕ್ಕೆ ನುಗ್ಗಿ ಮಜಾ ತೆಗೆದುಕೊಂಡ ದೊಡ್ಡಪ್ಪನನ್ನು ರಾಜ ಗಡೀಪಾರು ಮಾಡಿದ.

ಸಾಮಾನುಸ್ವಾಮಿಗಳ ಕಥೆಯೂ ಅಷ್ಟೆ. ಕತೆಯಲ್ಲಿನ ದೊಡ್ಡಪ್ಪನಂಥದ್ದೇ ಯೋಜನೆ ಮತ್ತು ಯೋಚನೆ ಅವರದ್ದು. ವಿರೋಧಿಸುವ ಸಣ್ಣಪ್ಪನಂಥವರು ಹೇಳುವುದೆಲ್ಲ ಆಧಾರ ರಹಿತ ಮತ್ತು ಶುಷ್ಕ ಹೇಳಿಕೆ ಎಂಬುದು ಸಾಮಾನುಸ್ವಾಮಿ ಮತ್ತು ಬಳಗದ ಆರೋಪ. ನ್ಯಾಯಾಧೀಶರ ಮೇಲೂ ಸಹ ಅಂತಹ ಆರೋಪವನ್ನು ಹೊರಿಸಬಲ್ಲಷ್ಟು ನಿಪುಣಾಗ್ರೇಸರರು ಮತ್ತು ಕ್ರಿಮಿನಲ್ ಮೈಂಡ್ ಉಳ್ಳವರು.

ತಮ್ಮ ಕೆಲಸವಾಗುವವರೆಗೆ ಯಾರ ಕಾಲನ್ನಾದರೂ ಹಿಡಿಯಲು ಸಿದ್ಧ; ಕೆಲಸವಾದಮೇಲೆ ಕೆಲಸಮಾಡಿಕೊಟ್ಟ ನಂತರ ನೀಚನೊಬ್ಬನಿಗೆ ಕೆಲಸಮಾಡಿಕೊಟ್ಟೆವಲ್ಲ ಎಂದು ಗೊತ್ತಾಗಿ ಅದನ್ನು ಹೇಳಿಬಿಟ್ಟರೆ ಆ ಕ್ಷಣದಿಂದಲೇ ಕೆಲಸ ಮಾಡಿಕೊಟ್ಟವರೆಲ್ಲ ವಿರೋಧಿಗಳು. ಸಾಮಾನುಸ್ವಾಮಿಯ ಹಳದೀ ತಾಲಿಬಾನಿನಲ್ಲಿರುವ ಪ್ರತಿಯೊಬ್ಬರೂ ಅದೇ [Use & Throw Culture] ಸ್ವಭಾವದವರು.

ಹಾಗಾಗಿಯೇ ಇಂದು ಮಠದ ಬೆಳವಣಿಗೆಗೆ ಅತ್ಯಂತ ಶ್ರಮವಹಿಸಿ ಯೋಗದಾನಮಾಡಿದ ಮಹನೀಯರೆಲ್ಲ ಮಠದಿಂದ ಹೊರಹಾಕಲ್ಪಟ್ಟಿದ್ದಾರೆ. ಇಂದು ಅಲ್ಲಿರುವವರೆಲ್ಲ ತಮ್ಮ ಬೇಳೆ ಬೇಯಿಸಿಕೊಳ್ಳಲು ಸೇರಿಕೊಂಡ ಮಕ್ಮಲ್ ಟೋಪಿಗಳೇ!! ಅವರಿಗೆ ಧರ್ಮ, ಸನ್ಯಾಸಾಶ್ರಮದ ಆಚಾರ-ವಿಚಾರ, ವೇದ-ಶಾಸ್ತ್ರ ಯಾವುದರಲ್ಲೂ ಪರಿಣತಿಯಿಲ್ಲ. ಹಳ್ಳಿಗಳಲ್ಲಿರುವ ಸಮಾಜದ ಮುಗ್ಧಭಕ್ತರಲ್ಲಿ ಪಾಂಡಿತ್ಯವಿರುವ ಜನ ಬಂದು ಹೇಳಿದರೆ ಸಾಮಾನುಸ್ವಾಮಿ ಮತ್ತವನ ಬಳಗ ಅವರನ್ನೆಲ್ಲ ವಿರೋಧಿ ಬಣಕ್ಕೆ ಸೇರಿಸುತ್ತದೆ; ಹಾಗಾಗಿಯೇ ಈಗ ಹೆದರಿಕೆಯಿಂದ ಬಹಿರಂಗವಾಗಿ ಹೇಳದಿದ್ದರೂ 75%ಭಕ್ತರು ವಿರೋಧಿಗಳಾಗಿದ್ದಾರೆ!!

ಮಠಕ್ಕೊಂದು ಶಾಸನತಂತ್ರ ಅಂತ ಸಾಮಾನುಸ್ವಾಮಿಯೇ ಒಂದನ್ನು ಸೃಷ್ಟಿಸಿಕೊಂಡಿದ್ದಾನೆ. ಅದರಲ್ಲಿ ಅವನು ಹೇಳಿದ್ದೇ ಶಾಸನ; ಅದೇ ಸಂವಿಧಾನ. ತನ್ನ ವ್ಯಭಿಚಾರ, ದುರಾಚಾರ, ಭ್ರಷ್ಟಾಚಾರ, ನಾನಾಚಾರಗಳನ್ನು ಕಂಡು ಯಾವುದೋ ಭಕ್ತ ತನ್ನನ್ನು ವಿರೋಧಿಸಿದರೆ ಅಂಥವನಿಗೆ ಬಹಿಷ್ಕಾರ ಹಾಕಲಾಗುತ್ತದೆ. ಮಠದಲ್ಲಿ ನಾಮ ಕೇ ವಾಸ್ಥೆಗೆ ಕೆಲವು ಹುದ್ದೆಗಳಿದ್ದು, ಅಲ್ಲಿರುವವರಿಗೆ ಯಾವ ಪರಮಾಧಿಕಾರವೂ ಇರೋದಿಲ್ಲ. ಮಠವನ್ನು ತನ್ನ ಸ್ವಂತ ಮನೆಯ ಸೊತ್ತಿನಂತೆ ಮಾಡಿಕೊಂಡಿದ್ದಾನೆ; ಭಕ್ತರಿಂದ ಹಣ ಪೀಕೋದು ಹಾದರದಂತಹ ಕೆಲಸಗಳಿಗೆ ಬಳಸೋದು, ಅಷ್ಟೇ ನಡೀತಿದೆ.

ಅವತ್ತು ಮಂಗ ಬುತ್ತಿ ತಿಂದು ಎತ್ತಿನ ಬಾಯಿಗೆ ಒರೆಸುತ್ತಿದ್ದ ಕತೆ ಕೇಳಿದ್ದೀರಲ್ಲ? ಅದರಂತೆ, ಅಷ್ಟಿಷ್ಟು ಖರ್ಚುಮಾಡಿ ಅಲ್ಲಿ ಇಲ್ಲಿ ಕೆಲವು ಕೆಲಸಗಳನ್ನು ತೋರಿಸುತ್ತ ಮತ್ತೆ ಅದಕ್ಕೆ ಎತ್ತುವಳಿಗೆ ಮುಂದಾಗುತ್ತಾನೆ. ವರ್ಷದಲ್ಲಿ 365 ದಿನವೂ ಎತ್ತುವಳಿ ನಡೆದೇ ಇರುತ್ತದೆ. ಸೀಮೆಗಳಲ್ಲಿ ಬದುಕುವ ಮಠದ ಸಾಂಪ್ರದಾಯಿಕ ಭಕ್ತರು ಅವ ವಿಧಿಸುವ ತೆರಿಗೆಗಳನ್ನು ಕಡ್ಡಾಯವಾಗಿ ಕೊಡಲೇಬೇಕು. ತೆರಿಗೆ ಹಲವು ರೂಪಗಳಲ್ಲಿದೆ-ಅಕ್ಕಿ, ಭತ್ತ, ಹಣ, ಬೆಳ್ಳಿ, ಬಂಗಾರ, ಜಮೀನು ಯಾವ ರೂಪದಲ್ಲಾದರೂ ಆಗಬಹುದು.

ಇಲ್ಲಿಯವರೆಗೆ ಸಂಗ್ರಹಿಸಿದ ಸಂಪತ್ತಿನಲ್ಲಿ ಕಳ್ಳಯ್ಯ-ಕುಳ್ಳಯ್ಯ ಸೇರಿ ಬೆಂಗಳೂರು, ಮೈಸೂರು, ಶಿವಮೊಗ್ಗ ಮೊದಲಾದ ನಗರಗಳಲ್ಲಿ ಬೇನಾಮಿ ಹೆಸರುಗಳಲ್ಲಿ ಹಲವಾರು ಸೈಟುಗಳನ್ನು ತಮ್ಮ ಸ್ವಂತಕ್ಕಾಗಿ ಖರೀದಿಸಿದ್ದಾರೆ, ಬಂಗಲೆಗಳನ್ನು ಕಟ್ಟಿಸಿದ್ದಾರೆ. ’ಸರ್ವಸಂಗ ಪರಿತ್ಯಾಗಿ’ಗಳಾದ ಸಾಮಾನುಸ್ವಾಮಿಗಳು ತಮ್ಮ ಸ್ವಂತಕ್ಕೆ ಎಲ್ ಐ ಸಿ ಮಾಡಿಸಿದ್ದಾರೆ! ತಮಗೆ ಬೇಕಾದ ಏಕಾಂತ ಮಹಿಳೆಯರಿಗೆ ಸಾಮಾನುಸ್ವಾಮಿಗಳು ಸೈಟು-ಮನೆಗಳನ್ನು ಮಾಡಿಕೊಟ್ಟಿದ್ದಾರೆ; ಇನ್ನೂ ಕೆಲವು ಏಕಾಂತ ಭಕ್ತೆಯರ ಗಂಡಂದಿರಿಗೆ ನೌಕರಿ ಕೊಡಿಸಿದ್ದಾರೆ ಅಥವಾ ಇಂಡಸ್ಟ್ರಿ ಹಾಕಲು ’ಸುವರ್ಣ ಮಂತ್ರಾಕ್ಷತೆ’ ಕೊಟ್ಟಿದ್ದಾರೆ.

ಕಚ್ಚೆಕೇಸುಗಳು ದಾಖಲಾದಮೇಲೆ ’ಮುಂಡೆ ಮದುವೇಲಿ ಉಂಡೋನೆ ಜಾಣ’ ಅನ್ನೋ ಹಾಗೆ ಹಲವಾರು ಜನ ಹಣವನ್ನು ಉಂಡುಹೋಗಿದ್ದಾರೆ. ರಾಜಕಾರಣಿಗಳು, ಕಾಯ್ದೆ ಸಲಹೆಗಾರರು, ಮಾವಂದಿರು, ಮಧ್ಯವರ್ತಿಗಳು, ಮಠದ ಸುರಕ್ಷಾ ಪಾಳಿ ಎಂಬುದಕ್ಕೆ ಕಾಯಲು ಬರುವವರು, ಸಾಮಾನುಸ್ವಾಮಿಯ ಗುಣಗಾನ ಮಾಡುವವರು, ಸಾಮಾನುಸ್ವಾಮಿಗಳಿಗೆ ಬೇಕಾದಂತೆ ಸುದ್ದಿ ಪ್ರಚಾರ ಮಾಡುವವರು, ಕೋಟಿ ಕೋಟಿಗಳಲ್ಲಿ ಹಣದ ಹೊಳೆ ಬೇಡದ ವ್ಯಸನಕ್ಕೆ, ವ್ಯಭಿಚಾರಕ್ಕೆ ಹರಿದುಹೋಗಿದೆ.

“ಭಕ್ತರ ಹಣದ ವಿನಿಯೋಗ ಹೇಗಾಯ್ತು?” ಅಂತ ಕೇಳಿದರೆ, ನಾಲ್ಕು ಗೋಡೆಯೊಳಗೆ ಮಾತಾಡಲು ಕರೆದು ಧಮ್ಕಿ ಹಾಕಿ ಕೈಕಾಲು ಮುರೀತಾರೆ! ದುಡ್ಡು ಕೊಡಲು ಮಾತ್ರ ನೀವೆಲ್ಲ ಬೇಕೇ ಹೊರತು “ಕೊಟ್ಟ ದುಡ್ಡನ್ನು ಏನು ಮಾಡಿದೆ?” ಎಂದು ಕೇಳುವ ಹಕ್ಕು ನಿಮಗಿರೋದಿಲ್ಲ-ಯಾಕೆಂದರೆ ಸಾಮಾನುಸ್ವಾಮಿಗಳನ್ನು ಹಾಗೆಲ್ಲ ಪ್ರಶ್ನೆಮಾಡುವಂತಿಲ್ಲ-ಗುರುಗಳು ಅವರು!!

ಇದನ್ನೆಲ್ಲ ಕಂಡೂ ಕಾಣದಂತಿರುವ ಚೇಲಾಗಳು ಮಾತೆತ್ತಿದರೆ ಷಡ್ಯಂತ್ರ, ಸುಳ್ಳು ಆರೋಪ ಅಂತಾರೆ. ತಮ್ಮ ಸ್ವಾಮಿಗಳ ಸಾಧನೆ ಸಹಿಸಲಾರದೆ ಮಠವನ್ನು ಹಾಳುಗೆಡವಲು ವ್ಯೂಹರಚಹನೆಯಾಗಿದೆ ಅಂತಾರೆ, ಸಂಚು ರೂಪಿಸಿದ್ದಾರೆ ಅಂತಾರೆ. ಹಾಗಾದರೆ ತೊನೆಯಪನ ಮಠಕ್ಕಿಂತ ಉಚ್ಛ್ರಾಯ ಸ್ಥಿತಿಯಲ್ಲಿರೋ ಮಠಗಳೇ ಇಲ್ವೇ? ಅವುಗಳ ವಿರುದ್ಧ ಯಾಕೆ ಆಪಾದನೆಗಳು ಬರೋದಿಲ್ಲ? ನೆಟ್ಟಗಿರುವ ಯಾವ ಮಠದ ಯತಿಯ ಮೇಲೂ ಹಾದರದ ಕೇಸುಗಳು ದಾಖಲಾಗಿಲ್ಲವಲ್ಲ? ವಿಜ್ಞಾನಯುಗದ ವೈಜ್ಞಾನಿಕ ಪರೀಕ್ಷೆಯಲ್ಲಿ ರುಜುವಾತಾದ ವಿಷಯವನ್ನು ನಂಬಬಾರದೇ?

ಅರಿಷಡ್ವರ್ಗಗಳನ್ನು ಜನಸಾಮಾನ್ಯರಿಗಿಂತ ಹೆಚ್ಚಾಗಿ ಅಳವಡಿಸಿಕೊಂಡಿರುವ ವಿಕೃತ ಕಾಮುಕನನ್ನು ಪೀಠದ ಗುರುವೆನ್ನುತ್ತ ಇನ್ನೆಷ್ಟು ದಿನ ಹೀಗೇ ಕಳೀತೀರಿ? ಸರಕಾರವೆಂಬ ರಾಜನಿಗೆ ಮಠವೆಂಬ ಆನೆಯನ್ನು ಬೆಳ್ಳಗೆ ಹೊಳೆಯುವಂತೆ ಮಾಡುತ್ತೇನೆಂಬ ಢೋಂಗಿ ಯೋಜನೆಗಳನ್ನು ರೂಪಿಸಿದ ಸಾಮಾನುಸ್ವಾಮಿಯೆಂಬ ದೊಡ್ಡಪ್ಪ ಕುಂಬಾರನನ್ನು ತೋರಿಸಿ ಬೋಗುಣಿ ಮಾಡಿಸಲು ಹೇಳಿ. ಬೋಗುಣಿಯಲ್ಲಿ ಮಠವನ್ನು ನಿಲ್ಲಿಸಿದಾಗ ಅವನು ಕಟ್ಟಿದ ಹಳದೀ ಬಣ್ಣದ ಬೋಗುಣಿ ಒಡೆದುಹೋಗುತ್ತದೆ. ಸಾಮಾನುಸ್ವಾಮಿಯನ್ನು ಸರಕಾರ ಪರಪ್ಪವನಕ್ಕೆ ಅಟ್ಟುತ್ತದೆ. ಆದಷ್ಟು ಶೀಘ್ರ ಹಾಗಾಗಲಿ ಎಂದು ಸಮಾಜದ ನೊಂದ ಹಸ್ತುಸಮಸ್ತರ ಪರವಾಗಿ ತುಮರಿ ಹಾರೈಸುತ್ತಿದ್ದಾನೆ.

Thumari Ramachandra
20/11/2016

source: https://www.facebook.com/groups/1499395003680065/permalink/1861470624139166/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s