ಸಾಮಾನು ಸ್ವಾಮಿಯ ಸಾಧನಾ ಪಂಚಕ

ಸಾಮಾನು ಸ್ವಾಮಿಯ ಸಾಧನಾ ಪಂಚಕ

ಪರದೇಶಿಗಳಾಗಿ ಬಂದ ಪಾರ್ಸಿ ಜನರು ಭಾರತದ ಗುಜರಾತ್ ನಲ್ಲಿ ರಾಜಾಶ್ರಯ ಪಡೆಯುವಾಗ ಅಲ್ಲಿನ ದೊರೆಗೆ ಮಾತು ಕೊಟ್ಟಿದ್ದರಂತೆ-“ನಮಗೆ ಆಶ್ರಯಕೊಟ್ಟರೆ ನಮ್ಮಿಂದಾದ ಎಲ್ಲ ರೀತಿಯಲ್ಲಿ ಇಲ್ಲಿನ ಜನ-ಜೀವನದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ” ಅಂತ; ಅದರಂತೆ ಅವರು ನಡೆದುಕೊಂಡರು.

ಕರ್ನಾಟಕಕ್ಕೆ ನಾವು ಉತ್ತರ ಭಾರತದಿಂದ ಬಂದವರು ಎನ್ನುತ್ತದೆ ಇತಿಹಾಸ. ಇಲ್ಲಿನ ಮೊದಲ ಸ್ವತಂತ್ರ ಚಕ್ರವರ್ತಿ ನಮ್ಮನ್ನು ಅಲ್ಲಿಂದ ಇಲ್ಲಿಗೆ ಗೌರವದಿಂದ ಬರಮಾಡಿಕೊಂಡು ಆಶ್ರಯವಿತ್ತನಂತೆ; ಅವನಿತ್ತ ಆಶ್ರಯಕ್ಕೆ ಪ್ರತಿಯಾಗಿ ಇಲ್ಲಿನ ನೆಲ-ಜಲ-ಕಲೆ-ಸಂಸ್ಕೃತಿ-ಜನರ ಪ್ರಗತಿ ಮತ್ತು ಪುರೋಭಿವೃದ್ಧಿಯಲ್ಲಿ ನಮ್ಮವರು ಗಣನೀಯ ಪಾತ್ರ ವಹಿಸಿದ್ದಾರೆ ಎಂಬುದು ಚರಿತ್ರೆಯಲ್ಲಿ ಕಾಣಸಿಗುವ ಸಂಗತಿ. ಇಂತಹ ಕುಲೀನ ಜನಾಂಗದಲ್ಲಿ ಸೋಣೆ ನಾಯಿಯ ರೀತಿಯ ಸ್ವಾಮಿ ಹುಟ್ಟಿಕೊಂಡಿದ್ದು ಮಾತ್ರ ಇಡೀ ಜನಾಂಗಕ್ಕೆ ಚೇತರಿಸಿಕೊಳ್ಳಲಾರದ ಆಘಾತ.

ಬಹುತೇಕ ಸುದ್ದಿಮಾಡುವವರಲ್ಲಿ ನಮ್ಮ ಜನರೇ ಪ್ರಮುಖರಾಗಿದ್ದು ಸಾಮಾನು ಸ್ವಾಮಿಯ ಸುವರ್ಣ ಮಂತ್ರಾಕ್ಷತೆಗೆ ಹಾತೊರೆದು ಇಲ್ಲಿಯವರೆಗೆ ಅವನ ಅಂಡು ನೆಕ್ಕಿದವರಲ್ಲಿ ನಾಟಕದ ತಿಮ್ಮಪ್ಪ, ಕತ್ತಲೆಮನೆ ಮಾಣಿ, ಉದಯರವಿ ಎದ್ದು ಕಾಣುತ್ತಾರೆ. ಇಮ್ಮಡಿ ವಿಶ್ವೇಶ್ವರಯ್ಯನದ್ದು ಮತ್ತು ಸಾಮಾನು ಸ್ವಾಮಿಯದ್ದು ಕೆಲವು ವಿಷಯಗಳಲ್ಲಿ ಜಾಯಿಂಟ್ ಅಕೌಂಟು ಎಂದು ಕಂಡುಬಂದಿದ್ದು, ಬಿಲ್ಡಪ್ ಕೊಡುವುದಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನೂ ಅವ ವಹಿಸಿಕೊಂಡಿದ್ದು ಕಂಡುಬಂದಿದೆ ಎಂದು ಗುಮ್ಮಣ್ಣ ಹೆಗಡೇರು ಹೇಳಿದ್ದಾರೆ. ಸಾಮಾನು ಸ್ವಾಮಿ ತೊನೆಯಪ್ಪನ ನೈಜ ಹಕೀಕತ್ತನ್ನು ಮರೆಮಾಚಿ ಅವನೊಬ್ಬ ಮಹಾಪುರುಷನೆಂಬಂತೆ ಚಿತ್ರಿಸಿ, ಸಮಾಜವನ್ನು ದಿಕ್ಕುತಪ್ಪಿಸಿದ ’ಕೀರ್ತಿ’ ಅವರಿಗೆಲ್ಲ ಸಲ್ಲುತ್ತದೆ.

ಜೆನ್ ಸಾಧುಗಳ ಬಗೆಗಿನ ಕತೆಗಳಲ್ಲಿ ಇಲ್ಲೊಂದು ಕಥೆಯಿದೆ. ಒಬ್ಬ ಸಾಧು ತನ್ನನ್ನು “ಮೌನಿಸ್ವಾಮಿ” ಎಂದು ಹೇಳಿಕೊಂಡಿದ್ದ. ಅವನೊಬ್ಬ ಮೋಸಗಾರನಾಗಿದ್ದು ಅವನಿಗೆ ಧರ್ಮ ಅಥವಾ ಸನ್ಯಾಸದ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಆಧ್ತಾತ್ಮ ಮಾರ್ಗದಲ್ಲಿ ತಾನೊಬ್ಬ ಮಹಾನ್ ಸಾಧಕ ಎಂದು ಹೇಳುವುದಕ್ಕಾಗಿ ಮತ್ತು ತನಗೆ ಜನರು ಹಾಕುವ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಚತುರ ಮಾತುಗಾರರಾದ ಇಬ್ಬರು ಸನ್ಯಾಸಿಗಳನ್ನು ಜೊತೆಗೆ ಇಟ್ಟುಕೊಂಡಿದ್ದ.

ಒಂದುದಿನ ಪರಿಚಾಕರ ಸನ್ಯಾಸಿಗಳು ಇಲ್ಲದ ಸಮಯದಲ್ಲಿ ಯಾತ್ರಾರ್ಥಿಯಾಗಿ ಬಂದ ಇನ್ನೊಬ್ಬ ಯಾವುದೋ ಸಾಧುವು ಈ “ಮೌನಿಸಾಧು”ವನ್ನು ಸಮೀಪಿಸಿ,”ಗುರುಗಳೇ, ಬುದ್ಧ ಎಂದರೇನು?” ಎಂದು ಪ್ರಶ್ನಿಸಿದ. ಏನುತ್ತರಿಸಬೇಕು ಎಂದರಿಯದ ’ಮೌನಿಸ್ವಾಮಿ’ ಏನೂ ಮಾಡಲು ತಿಳಿಯದೆ, ಪೂರ್ವ-ಪಶ್ಚಿಮ ಮತ್ತು ಎಲ್ಲಾ ದಿಕ್ಕುಗಳೆಡೆಗೂ ನೋಡುತ್ತ ಕಾಣದ ತನ್ನ ಸೇವಕ ಸಾಧುಗಳಿಗಾಗಿ ಹುಡುಕಿದ.

ಅಷ್ಟರಿಂದಲೇ ಏನನ್ನೋ ಅರ್ಥೈಸಿಕೊಂಡ ಯಾತ್ರಾರ್ಥಿ ಸ್ವಾಮಿಯು, “ಧರ್ಮ ಎಂದರೆ ಯಾವುದು” ಎಂದು ಮುಂದಿನ ಪ್ರಶ್ನೆ ಹಾಕಿದ. ಮತ್ತೆ ಪ್ರಶ್ನೆಯಿಂದ ವಿಚಲಿತನಾದ ’ಮೌನಿಸ್ವಾಮಿ’ಯು ಏನೂ ತೋಚದೆ, ಸ್ವರ್ಗ ಮತ್ತು ನರಕಗಳಿಂದಲೂ ಸಹಾಯ ಪಡೆಯುತ್ತಿರುವಂತೆ ಒಮ್ಮೆ ಆಕಾಶದತ್ತಲೂ ಮತ್ತು ಇನ್ನೊಮ್ಮೆ ಕೆಳಗೆ ಭೂಮಿಯತ್ತಲೂ ದೃಷ್ಟಿಸಿದ.

ಬಂದವನು ಸುಮ್ಮನಿರಬೇಕಲ್ಲ! ಮತ್ತೆ ಕೇಳಿದ, “ಝೆನ್ ಎಂದರೇನು?” ಈಗ ’ಮೌನಿಸ್ವಾಮಿ’ಯು ಬೇರಾವುದೇ ಉಪಾಯ ಕಾಣದೆ ಕಣ್ಣುಗಳನ್ನು ಮುಚ್ಚಿಕೊಂಡ.

ಇನ್ನೇನು ಇದೊಂದೇ ಕೊನೆಯ ಪ್ರಶ್ನೆ ಎನ್ನುತ್ತ ಬಂದಾತ, “ಆಶೀರ್ವಾದ ಎಂದರೇನು?” ಎಂದು ಕೇಳಿದ. ಹತಾಶನಾದ ’ಮೌನಿಸ್ವಾಮಿ’ಯು ತನ್ನೆರಡೂ ಹಸ್ತಗಳನ್ನು ಶರಣಾಗತಿಯ ಸೂಚನೆ ಎಂಬಂತೆ ಅವನೆಡೆಗೆ ಹರಡಿದ.

ಅದೇನೇ ಇರಲಿ, ಬಂದಿದ್ದ ಯಾತ್ರಾರ್ಥಿ ಸ್ವಾಮಿಯು ’ಮೌನಿಸ್ವಾಮಿ’ಯ ಸಂದರ್ಶನದಿಂದ ಬಹಳ ಸಂತೃಪ್ತನಾಗಿದ್ದ! ’ಮೌನಿಸ್ವಾಮಿ’ಗೆ ವಂದಿಸಿ ಅವನು ಮುಂದಿನ ಯಾತ್ರೆಗೆ ಹೊರಟುಹೋದ. ದಾರಿಯಲ್ಲಿ ’ಮೌನಿಸ್ವಾಮಿ’ಯ ಪರಿಚಾರಕ ಸಾಧುಗಳು ಅವನಿಗೆ ಎದುರಾದರು. ತಾನು ಸಂದರ್ಶಿಸಿ ಬಂದ ’ಮೌನಿಸ್ವಾಮಿ’ಯ ಬಗೆಗೆ ಹೇಳುತ್ತ “ಅಹಹಾ! ಎಂಥಾ ಪರಮಜ್ಞಾನಿಗಳು” ಎಂದು ಬಣ್ಣಿಸಿದ.

” ಅವರಲ್ಲಿ ಬುದ್ಧ ಏನೆಂದು ಕೇಳಿದೆ, ಕೂಡಲೇ ಪೂರ್ವಕ್ಕೂ ಮತ್ತು ಪಶ್ಚಿಮಕ್ಕೂ ಮುಖವನ್ನು ಹೊರಳಿಸಿ, ಮಾನವರು ಬುದ್ಧನಿಗಾಗಿ ಅಲ್ಲಿ ಇಲ್ಲಿ ಹುಡುಕುತ್ತಿರುತ್ತಾರೆ, ಬುದ್ಧ ಪೂರ್ವದಲ್ಲೋ ಅಥವಾ ಪಶ್ಚಿಮದಲ್ಲೋ ಇಲ್ಲ ಎಂದು ಸೂಚಿಸಿದರು.

ನಂತರ ನಾನು ಧರ್ಮ ಎಂದರೇನೆಂದು ಕೇಳಿದೆ. ಅದಕ್ಕುತ್ತರವಾಗಿ ಅವರು ಮೇಲಕ್ಕೊ ಕೆಳಕ್ಕೂ ನೋಡಿದರು, ಅದರರ್ಥ ಧರ್ಮದ ಸತ್ಯವು ಸರ್ವ ಸಮಾನತೆ, ಮೇಲು ಮತ್ತು ಕೀಳು ಎಂಬ ಭೇದ ಭಾವ ಇಲ್ಲದ್ದು. ಶುದ್ಧ ಮತ್ತು ಅಶುದ್ಧ ಎರಡನ್ನೂ ಅಲ್ಲೇ ನಾವು ಕಾಣಬಹುದು ಎಂದರು.

ಆಮೇಲೆ ಝೆನ್ ಅಂದರೆ ಯಾರೆಂದು ಕೇಳಿದ್ದಕ್ಕೆ ಕಣ್ಣುಮುಚ್ಚಿಕೊಂಡರು, ಮೋಡ ಮುಸುಕಿದ ಪರ್ವತಗಳಲ್ಲಿ ಒಬ್ಬನು ಕಣ್ಣುಮುಚ್ಚಿಕೊಂಡು ಗಾಢ ನಿದ್ದೆಗೆ ಜಾರಿದರೆ ಅವನು ಬಹುದೊಡ್ಡ ಸನ್ಯಾಸಿಯೇ ಸರಿ.

ಕೊನೆಯದಾಗಿ, ಆಶೀರ್ವಾದ ಎಂದರೇನು? ಎಂಬ ಪ್ರಶ್ನೆಗೆ ತನ್ನ ತೋಳುಗಳನ್ನು ಹೊರಚಾಚಿ ಎರಡೂ ಹಸ್ತಗಳನ್ನು ತೋರಿಸಿದರು. ಅದರರ್ಥ ಸಾಧಕರಿಗೆ ಅವರು ಸದಾ ತನ್ನ ಸಹಾಯಹಸ್ತವನ್ನು ನೀಡುತ್ತಾರೆ ಎಂದಾಯಿತು. ಇಂತಹ ಪರಮಜ್ಞಾನಿ ಗುರುಗಳು ಸಿಗೋದಕ್ಕೆ ಶಿಷ್ಯರು ಪುಣ್ಯ ಮಾಡಿರಬೇಕು.”

ಪರಿಚಾಕರ ಸಾಧುಗಳು ಆಶ್ರಮಕ್ಕೆ ಮರಳಿದ ಮೇಲೆ ’ಮೌನಿಸ್ವಾಮಿ’ಯು,”ಎಲ್ಲಿಗೆ ಹೋಗಿದ್ದಿರಿ ನೀವು? ಯಾತ್ರಾರ್ಥಿ ಸನ್ಯಾಸಿಯಿಂದ ಒಂದೇ ಸಮನೆ ಬರುತ್ತಿದ್ದ ಪ್ರಶ್ನೆಗಳಿಂದ ನನಗೆ ಸಾಯುವಷ್ಟು ಮುಜುಗರ ಉಂಟಾಗಿತ್ತು.” ಎಂದು ಅವರನ್ನು ಬೈದ.

ಸಾಮಾನು ಸ್ವಾಮಿಗೂ ಈ ಝೆನ್ ಸಾಧುಗಳ ಬಗೆಗಿನ ಈ ಕಥೆಗೂ ಎಷ್ಟೊಂದು ಹೋಲಿಕೆಯಿದೆ ನೋಡಿ. ಸಾಮಾನು ಸ್ವಾಮಿ ಎಂದೇ ಪ್ರಪಂಚದಲ್ಲಿ ಗುರುತಿಸಿಕೊಂಡು ಶಂಕರರ ಹೆಸರು ಬಳಸಿಕೊಂಡ ಪೀಠಕ್ಕೆ ಮಸಿಬಳಿದ ಈ ಐನಾತಿ ಆಸಾಮಿಯ ಸಾಧನಾ ಪಂಚಕವೇನು ಕಡಿಮೆಯದ್ದು ಅಂದುಕೊಂಡಿರೇ? ಛೆ ಛೆ

ಸಾಮಾನು ಸ್ವಾಮಿ ಯಾತ್ರೆ ಹಮ್ಮಿಕೊಂಡು ಹೊರಟು ನಿಂತ ರಾತ್ರಿಯಲ್ಲೇ ಮೋದೀಜಿಯವರು ಕಾಳಧನದ ನಿಯಂತ್ರಣಕ್ಕಾಗಿ ಅಚಾನಕ್ಕಾಗಿ ಐದುನೂರು ಮತ್ತು ಸಾವಿರದ ನೋಟುಗಳಿಗೆ ಬೆಲೆಯಿಲ್ಲವೆಂದುಬಿಟ್ಟಿದ್ದು ಕಾಕತಾಳೀಯವಾಗಿಯಾದರೂ, ತೊನೆಯಪ್ಪನಿಗೆ ನಾಟಿದ ಮೊದಲ ಅಸ್ತ್ರ ಎನ್ನಬಹುದು. ಪಾಪ, ಮಾರನೇದಿನದಿಂದ ತಾಲಿಬಾನಿನ ಟೆಂಟುಗಳಲ್ಲಿ ಎಣ್ಣೆ ಖರ್ಚಿಗೂ ಕಾಸಿಲ್ಲದ ಪರಿಸ್ಥಿತಿ ಕಂಡುಬಂದಿತ್ತಂತೆ!

ಯಾತ್ರೆ ಹೊರಟಿತು ಅಂತ ಭಯಂಕರ ಭಾಜಾ-ಭಜಂತ್ರಿಗಳ ಜೊತೆಗೆ ತೋರಿಸಿದ್ದಾರೆ, ನಿಲ್ಲಿಸಿದರೆ ಮರ್ಯಾದೆ ಪ್ರಶ್ನೆ. ಹಾದಿ ಹೋದಲ್ಲೆಲ್ಲ ಯಾರೂ ಕಾಸು ಹಾಕುವವರಿಲ್ಲ. ಕಾಸು ಹಾಕಲಿ ಅಂತ ವಾಹನದ ಸುತ್ತಮುತ್ತ ಕಂಡಲ್ಲೆಲ್ಲ ಇರಿಸಿಕೊಂಡ ಖಾಲಿ ಡಬ್ಬಗಳು ಖಾಲಿಯಾಗಿಯೇ ಬಿದ್ದಿವೆಯಂತೆ. ಅದೇ ಸಮಯದಲ್ಲಿ ಇತ್ಲಕಡೆಗೆ ಅದ್ಯಾರೋ ಪೀಠದಿಂದ ಒದ್ದೋಡಿಸಿ ಎಂದು ಫರ್ಮಾನು ಹೊರಡಿಸುತ್ತಿದ್ದಾರೆ ಎಂದು ತಿಳಿದು ಬರುತ್ತಿದೆ.

ಮಾಸ್ವಾಮಿಗಳು ಹಿಂದೆಲ್ಲ ಅಲ್ಲಿಲ್ಲಿ ಹಲ್ಲು ಗಿಂಜುತ್ತ ಒಟ್ಟುಮಾಡಿದ ಚಿಲ್ಲರೆ ಹಣ ಮತ್ತು ಗುರಿಕಾರರ ಮೂಲಕ ಶಿಷ್ಯರನ್ನು ಬೆದರಿಸಿ ಕಲೆಹಾಕಿದ ಹಣದಲ್ಲಿ ಕೋಟಿಗಳನ್ನೆತ್ತಿ ರಾಜಕಾರಣಿಗಳಿಗೆ ಕೊಟ್ಟು ಕೈಮುಗಿದು ಕೇಸುಗಳನ್ನು ನಿವಾರಿಸಿಕೊಳ್ಳಲೋ ಮುಂದೂಡುತ್ತ ಕಾಲ ಕಳೆಯಲೋ ಮಹಾಪ್ರಯತ್ನ ನಡೆಸುತ್ತಲೇ ಬಂದಿದ್ದರು; ತಕ್ಕ ಮಟ್ಟಿಗೆ ಅದರಲ್ಲಿ ತಾತ್ಕಾಲಿಕ ಯಶಸ್ಸನ್ನೂ ಪಡೆದು ಪಟಾಕಿ ಹಾರಿಸಿದ್ದರು! ಈಗ ಪಟಾಕಿ ಕೊಳ್ಳಲೂ ಕಾಸಿಲ್ಲದಂತಾಗಿದೆ. ಪಟಾಕಿಯ ಮನೆ ಹಾಳಾಯ್ತು, ಪಟಾಲಮ್ಮಿನ ಸದಸ್ಯರ ದಿನದ ಖರ್ಚಿಗೆ ಇಲ್ಲದಂತಾಗಿದೆ.

ಮೇಲಾಗಿ ಮೋದೀಜಿಯವರು ಇಂತಹ ಸಾಮಾನು ಸ್ವಾಮಿಗಳು ಹೋಗಬಹುದಾದ ಎಲ್ಲಾ ಕಳ್ಳರಸ್ತೆಗಳಲ್ಲೂ ರಿಪೇರಿ ಬೋರ್ಡು ಹಾಕಿರಿಸಿಬಿಟ್ಟಿದ್ದಾರೆ! ಹೀಗಾಗಿ ಐನೂರು ಸಾವಿರದ ಕಂತೆಗಳನ್ನು ಬದಲಾಯಿಸಿಕೊಳ್ಳೋದು ಬಹಳ ಕಷ್ಟವಾಗಿದೆ. ಚೇಲಾಗಳನ್ನು ಬ್ಯಾಂಕಿಗೆ ಕಳಿಸಿ ನಾಲ್ಕು ಸಾವಿರದಂತೆ ಬದಲಾಯಿಸೋಣವೆಂದರೆ ಅದೂ ಸಹ ಮುಗಿಯದ ಕೆಲಸ.

ಏಕಾದಶಿ ಮನೆಗೆ ಶಿವರಾತ್ರಿಯೂ ಸೇರಿಕೊಂಡಿದೆ ಎಂಬಂತೆ ಮುಂದಿನ ಹಂತದಲ್ಲಿ ಮಠಮಾನ್ಯಗಳು ಮತ್ತು ಟ್ರಸ್ಟುಗಳ ಮೇಲೆ ನಿಗಾ ಇಡುವಂತೆ ತೆರಿಗೆ ಇಲಾಖೆಗೆ ಸೂಚನೆ ಬಂದಿದೆಯಂತೆ. ಸೇಫ್ ಲಾಕರ್ ಗಳಲ್ಲಿ ಇಟ್ಟಿದ್ದ ಬಂಗಾರವನ್ನು ಬಾಗಿಲು ತೆಗೆದು ನೋಡಲೂ ತೆರಿಗೆ ಅಧಿಕಾರಿಗಳ ಅನುಮತಿ ಬೇಕಾಗಿದೆಯಂತೆ! ಹಾಗಾದರೆ ಮಠದೊಳಗೇ ಲೆಕ್ಕ ಕೊಡದೆ ದಾಸ್ತಾನು ಮಡಗಿದ್ದ ಬೆಳ್ಳಿ-ಬಂಗಾರವಿದ್ದರೆ ಅದನ್ನೆಲ್ಲಿ ಇಡೋದು? ಸಾಮಾನು ಸ್ವಾಮಿ ತನ್ನ ಏಕಾಂತದ ಲಲನೆಯರನ್ನೆಲ್ಲ ಕರೆದು ಹಂಚಿಬಿಡೋದೇ ಎಂದು ಯೋಚಿಸಿರಬಹುದು.

ಕೋಟಿಗಟ್ಟಲೆ ಹಣವನ್ನು ಇರುವ ಅಕೌಂಟುಗಳಿಗೇ ಹಾಕಿದರೆ ತೆರಿಗೆ ಇಲಾಖೆಯವರಿಗೆ ವರದಿ ಹೋಗುತ್ತದೆ! ಯಾವುದು ವಿನಾಯತಿ ಅಡಿ ಬಂದರೂ ಅದನ್ನೆಲ್ಲ ಆಡಿಟ್ ಮಾಡಿಸಿ ಹಣದ ಮೂಲವನ್ನು ಹೇಳಬೇಕಾಗುತ್ತದೆ. ಸಾಮಾನು ಸ್ವಾಮಿಯ ಖಾಸಾ ಭಕ್ತ ಎಂದುಕೊಳ್ಳುತ್ತ ಯಾರೋ ಕೋಟಿಗಳಲ್ಲಿ ಕೊಟ್ಟರೆ, ಕೊಡುವವ ಅವನ ಆದಾಯ ಮೂಲವನ್ನು ತಿಳಿಸಬೇಕಾಗುತ್ತದೆ. ಹೀಗಾಗಿ, ದೊಡ್ಡಗೌಡರು ಹೇಳುತ್ತಿದ್ದಂತೆ ಇಲ್ಲಿ ಒಳ ಒಳ ಮೀಸಲಾತಿಗಳೆಲ್ಲ ಹೊರಗೆ ಬಂದು ಎಲ್ಲದರ ಅಂತರ್ಜಲದ ಮಟ್ಟ ಹೊರಗಿನಿಂದಲೇ ಕಾಣಿಸುತ್ತದೆ-ಇನ್ನುಮುಂದೆ.

ಅಕ್ರಮವಾಗಿ ಬೇನಾಮಿ ಹೆಸರುಗಳಲ್ಲಿ ಮಾಡಿಟ್ಟುಕೊಂಡ ಕೋಟ್ಯಂತರ ಮೌಲ್ಯದ ಸ್ಥಿರಾಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ಕೊಡಬೇಕಾಗುತ್ತದೆ. ಒಂದೊಂದು ಸೈಟಿನ ಮಾಲೀಕರೂ ಯಾರು ಎಂದು ಕಡ್ಡಿ ಹಾಕಿ ಪರಿಶೀಲಿಸಿ ನೋಡ್ತಾರೆ. ಹಾಗೆ ಕಡ್ಡಿ ಹಾಕುವಾಗ ಕಳ್ಳಬಾವಯ್ಯನ ಕುಳ್ಳಬಾವಯ್ಯ ಸಿಕ್ಕಿಹಾಕಿಕೊಳ್ಳದೇ ಹೋಗ್ತಾನ್ಯೇ? ಹಾಕಿದ ಕಡ್ಡಿ ಕೊನೆಗೆ ಮರ್ಮಾಂಗದ ವರೆಗೂ ಹರಿದು ಮಠದ ಹಣ ಹೊಡೆದು ಸಂಪಾದಿಸಿದ ಆಸ್ತಿಗಳ ವರದಿ ಮುಂದೊಂದು ದಿನ ದಿನಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ಬಂದರೂ ಆಶ್ಚರ್ಯವಿಲ್ಲ.

ಹಾಗಾಗಿ, ಸಾಮಾನು ಸ್ವಾಮಿಯ ಜಂಬೂ ಸವಾರಿಗೆ ಬೇಕಾದ ಎಲ್ಲಾ ತಯಾರಿಗಳೂ ನಡೆದಿದ್ದು, ಕೆಲವೆಡೆ ಕೆಲವು ವರ್ಗಗಳ ಜನಬಳಸುವ ಕೀಳು ಭಾಷೆಯಲ್ಲಿ ಹೇಳೋದಾದರೆ, ಸದ್ಯಕ್ಕೆ ಮೋದಿಯವರ ಅಸ್ತ್ರದಿಂದ ತೊನೆಯಪ್ಪನಿಗೆ ತಿಕ-ಮುಖ ಎರಡೂ ಕಡೆ ಚೆನ್ನಾಗಿ ಗುದ್ದಿದಂತಾಗಿದೆ ಎಂಬುದು ಸುಳ್ಳಲ್ಲ. ಅತ್ಲಕಡೆ ಬಳಕೆಗೆ ನಗದು ಹಣವಿಲ್ಲ, ಬೇನಾಮಿ ಆಸ್ತಿಗಳನ್ನು ಬಹಿರಂಗಪಡಿಸುವಂತಿಲ್ಲ, ಅನ್ನೌಕೆಂಟೆಡ್ ಬಂಗಾರ ಹಾಗೇ ಇಟ್ಟುಕೊಳ್ಳುವಂತಿಲ್ಲ, ಕೇಸುಗಳಲ್ಲಿ ಝಾಡಿಸಿ ಒದೆಯುತ್ತಿದ್ದಾರೆ, ಹಿಂದೆ ಜಾತ್ರೆಯಂತಿದ್ದ ಯಾತ್ರೆ ಈಗ ಮೂರು ಮತ್ತೊಂದು ಜನರನ್ನು ಮಾತ್ರ ಕಾಣುತ್ತಿದೆ.

“ಏನು ಮಾಡ್ಬೇಕು ನಾವೀಗ. ಪೀಠ ಇಳಿದು ಹೋಗಿ ಎಂದು ಹೇಳುತ್ತಾರೆ, ಎಲ್ಲಿಗೆ ಹೋಗಬೇಕೆಂದು ಹೇಳೋದಿಲ್ಲ” ಎಂದು ಕೇಸಿನ ಆರಂಭದಲ್ಲೆ ಹೇಳಿದ್ದಾರೆ-ಶೋಭರಾಜಾಚಾರ್ಯರು. ’ಜಂಬೂಸವಾರಿ’ ಇನ್ನೆಲ್ಲಿಗೆ ಹೋಗಬೇಕು? ಸೀದಾ ಪರಪ್ಪ ವನಕ್ಕೆ ಹೋಗಿ ಮುದ್ದೆ ಮುರಿಯಬೇಕಾಗುತ್ತದೆ; ಮತ್ತು ಆ ಕಾಲ ತೀರಾ ಹತ್ತಿರಕ್ಕೆ ಬಂದು ಬೃಹದಾಕಾರವಾಗಿ ಗಹಗಹಿಸಿ ನಕ್ಕು ಬಲಿಷ್ಠ ತೋಳುಗಳನ್ನು ಚಾಚಿ ನಿಂತುಬಿಟ್ಟಿದೆ.

ಪಾಪ, ಸಾಮಾನು ಸ್ವಾಮಿಗಳು ಹೋಗದ ಗುಡಿಗುಂಡಾರಗಳಿಲ್ಲ, ಕೊಳೆಗೇರಿಗಳಲ್ಲಿ “ಮಠ” ಅಂತ ಬರೆದುಕೊಂಡಿರುವ ಕಡೆಗೂ ಸಹಿತ ಹೋಗಿದ್ದಾರೆ. ಬಾವಾಜಿಗಳನ್ನೆಲ್ಲ ಭೇಟಿ ಮಾಡಿ “ನೀವೆಲ್ಲ ನಮ್ಮ ಜೊತೆಗಿರಬೇಕು, ಷಡ್ಯಂತ್ರ ಷಡ್ಯಂತ್ರ, ಬಹಳ ವ್ಯೂಹಗಳ ರಚನೆಯಾಗಿದೆ ನಮ್ಮ ಸುತ್ತ. ನೋಡಿ ನಾವೆಷ್ಟು ಸಮಾಜಮುಖಿ ಕೆಲಸ ಮಾಡ್ತಿದ್ದೇವೆ. [ಫೈಬರ್] ದನ ತೆಗೆದುಕೊಂಡು ಯಾತ್ರೆ ಮಾಡ್ತೇವೆ ನಾವು. ಏನೇ ಬಂದ್ರೂ ನಾವೆಲ್ಲ ಒಂದಾಗಿರಬೇಕು, ಹಿಂದೂ ಮಠಗಳ ಮೇಲೆ ದಾಳಿ ಆಗ್ತಿದೆ” ಅಂತೆಲ್ಲ ಹಲುಬುತ್ತ ಬಾವಾಜಿಗಳನ್ನೆಲ್ಲ ಸಂಘಟಿಸಲು ಹೋಗಿಬಂದಿದ್ದಾರೆ.

ತಮ್ಮ ತಮ್ಮದೇ ಆದ ಹಲವು ಹಗರಣಗಳಲ್ಲಿ ತಪ್ಪಿಸಿಕೊಂಡರೆ ಸಾಕು ಎನ್ನುತ್ತಿರುವ ಬಾವಾಜಿಗಳೆಲ್ಲ ಸಾಮಾನು ಸ್ವಾಮಿಗಳ ಜೊತೆಗೆ ಗುರುತಿಸಿಕೊಂಡು ತಾವೂ ತಪ್ಪಿಸಿಕೊಳ್ಳೋದಕ್ಕೆ ಮಾರ್ಗೋಪಾಯ ಹುಡುಕುತ್ತಿದ್ದಾರೆ. ಸಮಾನ ಶೀಲ-ವ್ಯಸನಿಗಳಾದ ಜನರೆಲ್ಲ ಸಾಮಾನು ಸ್ವಾಮಿಯಿಂದ ಚಿಲ್ಲರೆ ಭಕ್ಷೀಸು ತೆಗೆದುಕೊಂಡು ಜೈಲ್ ಭರೋ ಚಳುವಳಿಗೆ ಬರುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದಾರೆ; ಪೋಲೀಸರು ಬೀನ್ಸ್ ಬಿಡಿಸುತ್ತಾರೆ ಎಂಬ ವಾಕ್ಯ ಕಿವಿಗೆ ಬಿದ್ದರೆ ಸಾಕು, ಮಹಾನಗರಗಳಲ್ಲಿ ಮೋರಿಯ ಸಂದುಗಳಲ್ಲಿ ಸೇರಿಕೊಳ್ಳುವ ಬೀದಿನಾಯಿ-ಇಲಿ-ಹೆಗ್ಗಣಗಳಂತೆ ನಾಪತ್ತೆಯಾಗುತ್ತಾರೆ.

ಹಾಗಾದರೆ ಸಾಮಾನು ಸ್ವಾಮಿಯ ಜಂಬೂ ಸವಾರಿಗೆ ಯಾರೆಲ್ಲ ಜೊತೆಗಿರ್ತಾರೆ? ಸದ್ಯ ಲೆಟರ್ ಹೆಡ್ ಹಿಡಿದು ಸಭೆಯ ಮತ್ತು ಮಠದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಐನಾತಿ ಮಂದಿಯೆಲ್ಲ ಮಾಯವಾಗ್ತಾರೆ. ಇಷ್ಟುದಿನ ಸಾಮಾನುಸ್ವಾಮಿಯ ವಿರೋಧಿಗಳನ್ನು ಅಂತರ್ಜಾಲದಲ್ಲಿ ಅಶ್ಲೀಲ-ಅವಾಚ್ಯ ಪದಗಳ ಮೂಲಕ ಹೀನಾಯವಾಗಿ ನಿಂದಿಸುತ್ತಿದ್ದ ಜಾಲಕೋಣಗಳೆಲ್ಲ ಕಪ್ಪೆಗುಂಡಿಯಲ್ಲಿ ಮುಳುಗಿಕೊಂಡು ಆಗಾಗ ಉಸಿರು ತೆಗೆದುಕೊಳ್ಳಲು ಮಾತ್ರ ತಲೆ ಎತ್ತಿ ಮತ್ತೆ ಮುಳುಗುತ್ತವೆ.

ಮಠದ ಭಕ್ತರ ಹುಲುಸಾದ ಪೈರನ್ನು ಇಲ್ಲಿಯವರೆಗೆ ತಿಂದು ಕೊಬ್ಬಿದ್ದ ಚಂಬು, ಲೋಟ, ತಾಟುಗಳೆಲ್ಲ ದಾಖಲೆಗಳ ಕೊರತೆ ಎಂದು ತಪ್ಪಿಸಿಕೊಳ್ಳುತ್ತವೆ. ಹಾಗಾದ್ರೆ ಇನ್ನು ಯಾರೂ ಬರೋದಿಲ್ವೇ? ಬರ್ತಾರೆ, ಕಳ್ಳಯ್ಯನ ಜೊತೆ ಕುಳ್ಳಯ್ಯ, ನಮೇಸಣ್ಣ, ಮಧ್ಯಸ್ಥಿಕೆ ಮಾಡುವವ, ಕನಂತಣ್ಣ ಇಂತಹ ಕೆಲವರೆಲ್ಲ ಇರ್ತಾರೆ. ಮೆವರಣಿಗೆಯ ವಿಶೇಷ ಆಕರ್ಷಣೆ-ಕಳ್ಳಯ್ಯ ಮತ್ತು ಕುಳ್ಳಯ್ಯರಿಗೆ ಒಂದೇ ಕೋಳ ತೊಡಿಸಿ ಎಳೆದೊಯ್ಯುವ ಕಿರೀಟೋತ್ಸವ ನಡೆಯುತ್ತದೆ.

ಹೋಗಲಿಬಿಡಿ, ಸಕಾಲದಲ್ಲಿ ನೀವೇ ಅದನ್ನೆಲ್ಲ ನೋಡ್ತೀರಿ. ಈಗ ಸಾಮಾನು ಸ್ವಾಮಿಗಳ ಸಾಧನಾ ಪಂಚಕದತ್ತ ಒಂದು ನೋಟ ಹರಿಸೋಣ.

ಈ ಸಾಮಾನು ಸ್ವಾಮಿ ಮೊದಲು ಮಠಕ್ಕೆ ಪ್ರವೇಶಿಸಿದಾಗ ಮರದ ಕೆಳಗೆ ಬಿದ್ದ ಮಂಗದಂತಿದ್ದ. ಅವನಿಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಯಾರೋ ಕಿವಿಯೂದಿದಂತೆ ಏನೇನನ್ನೋ ಬಡಬಡಿಸುತ್ತಿದ್ದ. ಕೆಲವೇದಿನಗಳಲ್ಲಿ ದೀಕ್ಷೆ ಕೊಟ್ಟ ಗುರುವಿನ ವಿರುದ್ಧವೇ ತಿರುಗಿ ಬಿದ್ದ; ಅವರ ವಿರುದ್ಧ ಮಾಧ್ಯಮಗಳಲ್ಲಿ ಯದ್ವತದ್ವಾ ಹೇಳಿಕೆ ಕೊಟ್ಟ. ಅವರು ಮಠದ ಕೆಲವು ಕೀಲಿ ಇತ್ಯಾದಿಗಳನ್ನು ಆಯ್ಕೆ ಸಮಿತಿಯಲ್ಲಿದ್ದ ಸಾಗರದ ಒಬ್ಬ ಮುಖಂಡರಿಗೆ ಕೊಟ್ಟು ಜವಾಬ್ದಾರಿಯನ್ನು ಸಮಿತಿಗೆ ವಹಿಸಿದ್ದರು. ಈ ರೌಡಿಸ್ವಾಮಿ ಆಗಲೇ ಕೀಲಿಕೈ ಕೊಡಲಿಲ್ಲವೆನ್ನುತ್ತ ಸಾಗರದ ಮುಖಂಡರ ಮನೆಮೇಲೆ ದಾಳಿ ನಡೆಸಿ ದಾಖಲೆ ಮಾಡಿದ್ದ! ಆಗಲೇ ಜನ ಎಚ್ಚೆತ್ತುಕೊಂಡರೆ ಪೂರ್ತಿ ಅಧಿಕಾರವನ್ನು ವಹಿಸುವ ಬದಲು ಇವನನ್ನು ಅಪ್ಪನೊಟ್ಟಿಗೆ ಮನೆಗೆ ಕಳಿಸಬಹುದಿತ್ತು; ಆದರೆ ಸಮಾಜದ ಹಣೆಬರಹ ಈ ರೀತಿ ಇತ್ತು ಎಂಬುದು ಈಗ ಗೊತ್ತಾಗ್ತಾ ಇದೆ.

ಸಾಧನ ಒಂದು-ಸಾಮಾನುಸ್ವಾಮಿಗೆ ವೇದಗಳಾಗಲೀ ಪುರಾಣಗಳಾಗಲೀ ಗೊತ್ತಿಲ್ಲ, ಸತ್ಯನಾರಾಯಣ ಪೂಜೆಗೆ ಸಾಕಾಗುವಷ್ಟು ಚಿಲ್ಲರೆ ಖರ್ಚಿನ ಮಂತ್ರಗಳಷ್ಟೇ ಗೊತ್ತು. ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿರಲಿಲ್ಲ. ಬೇಕಾಗುವಷ್ಟು ಇಂಗ್ಲೀಷ್ ಪದಗಳು ಮತ್ತು ತಿಣುಕುತ್ತ ಹರುಕು ಮುರುಕು ವಾಕ್ಯ ಮಾಡುವಷ್ಟು ಹಿಂದಿ ಭಾಷೆಯನ್ನು ಕಲಿತುಕೊಂಡಿದ್ದು ಅವನ ಮೊದಲನೆ ಸಾಧನ ಮತ್ತು ಸಾಧನೆ. [ಸಾಧನ ಯಾಕೆಂದರೆ ಈ ಐದು ಸಾಧನಗಳ ಮೂಲಕವೇ ಭಾವುಕ ಸಮಾಜದ ಮೇಲೆ ಹಿಡಿತ ಸಾಧಿಸಿದ]

ಸಾಧನ ಎರಡು-ಈ ಸ್ವಾಮಿಗೆ ಅಧಿಕಾರ ಕೈಗೆ ಬಂದಾಗ ನೆಂಟಯ್ಯನಾದ ಕುಳ್ಳಯ್ಯ ಮಠದೊಳಗೇ ಜೊತೆಗಿದ್ದ. ತಾನೇ ಸ್ವಾಮಿಯಾಗಬೇಕೆಂಬ ಮಹದಾಸೆ ಹೊತ್ತಿದ್ದ ಸೊಟ್ಟಮುಖದ ಕುಳ್ಳಯ್ಯನಿಗೆ ಕಳ್ಳಯ್ಯನನ್ನು ಹದಹಚ್ಚುವ ಸಂಕಲ್ಪವೂ ಇತ್ತು. ಇಬ್ಬರೂ ಆಗಲೇ ಹಸುವಿನಕಿವಿಯೂರಿನ ಕಡಲ ಕಿನಾರೆಗಳಲ್ಲಿ ವಿದೇಶೀ ಮಹಿಳೆಯರ ನಂಗಾ ನಾಚ್ ನೋಡುತ್ತ ಜೊಲ್ಲು ಸುರಿಸುತ್ತ ಬೆಳೆದವರು, ಇನ್ನೇನು ಮಾಡ್ತಾರೆ ಪಾಪ, ಆಧುನಿಕ ಮಾರ್ಗದಲ್ಲಿ ಮಠಕ್ಕೆ ಬರುವ ಸುಂದರ ಮಹಿಳೆಯರಿಗೆ ಗಾಳ ಹಾಕೋದನ್ನು ಪ್ರಾಕ್ಟೀಸ್ ಮಾಡತೊಡಗಿದರು.

ಕಂಪ್ಯೂಟರ್ ಬಳಕೆ ಗೊತ್ತಿರಲಿಲ್ಲ; ಉತ್ಸವ-ಸಮಾವೇಶಗಳನ್ನು ನಡೆಸಿದರೆ ಜನರನ್ನು ಮರುಳುಮಾಡಬಹುದು ಎಂಬುದು ಗೊತ್ತಿತ್ತು; ಮತ್ತು ಅಂತಹ ದಿನಗಳಲ್ಲಿ ಹೆಂಗಸರೂ ಹೆಣ್ಣುಮಕ್ಕಳೂ ವಾರಗಳ ಕಾಲ ಮಠದಲ್ಲೇ ವಾಸ್ತವ್ಯ ಹೂಡುವುದಕ್ಕೆ ಬೇಕಾದ ಏರ್ಪಾಡು ಮಾಡಿ ಡಂಗುರ ಸಾರಿಸಿದ. ಆರಂಭದಿಂದಲೂ “ಮಾತೆಯರು” ಮತ್ತು ” ಮಹಿಳಾ ಸಬಲೀಕರಣ”ದಂತಹ ಪದಗಳನ್ನೇ ಬಳಸುತ್ತಿದ್ದ. ಐಪ್ಯಾಡ್ ಮತ್ತು ಐಫೋನ್ ತರಿಸಿಕೊಂಡು ಅಂತರ್ಜಾಲದಲ್ಲಿ ನೀಲಿ ಚಿತ್ರಗಳನ್ನು ನೋಡಲು ಕಲಿತದ್ದು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರೊಡನೆ ಗುಪ್ತ ಸಂಭಾಷಣೆ ನಡೆಸಲು ಕಲಿತದ್ದು ಎರಡನೇ ಸಾಧನ ಮತ್ತು ಸಾಧನೆ.

ಸಾಧನ ಮೂರು-ಬಿಡುವಿನಲ್ಲಿ ಕಳ್ಳಯ್ಯ ಮತ್ತು ಕುಳ್ಳಯ್ಯ ಕೂತು ಹಣಪೀಕುವ ಹೊಸ ಹೊಸ ಯೋಜನೆಗಳನ್ನು ಹಾಕಿದರು. ಅದನ್ನು ಕಾರ್ಯರೂಪಕ್ಕೆ ತರಲು ಮಠದ ಖಟ್ಟರ್ ಭಕ್ತರನ್ನು ಆಯ್ಕೆಮಾಡಿಕೊಂಡು ಅವರನ್ನೆಲ್ಲ ಒಂದೊಂದು ಹುದ್ದೆಯಲ್ಲಿ ಕೂರಿಸಿದರು. ಹುದ್ದೆಯಲ್ಲಿ ಕುಳಿತ ಬುದ್ದುಗಳಿಗೆ ಇವರೀರ್ವರ ಧೂರ್ತ ಆಲೋಚನೆಗಳು ಗೊತ್ತಿರಲಿಲ್ಲ; ಸಾಮಾನುಸ್ವಾಮಿಗಳು ಮಾಡ್ತಿರೋದೆಲ್ಲ ಸಮಾಜಮುಖಿ ಕೆಲಸ ಅಂದುಕೊಂಡರು; ಯುವ ಜನರನ್ನೆಲ್ಲ ಮಠಕ್ಕೆ ಕರೆದರು, ಕೆಳಹಂತದಲ್ಲಿ ಹಲವು ಹುದ್ದೆಗಳನ್ನು ನೀಡುತ್ತ “ಸಮಾಜದಲ್ಲಿ, ಮಠದಲ್ಲಿ ಅವರಿಗೊಂದು ಹೆಸರಿದೆ” ಎಂಬ ಭಾವನೆ ಮೂಡುವಂತೆ ಮಾಡಿದರು. ಮ್ಯಾಂಗೋಕುಳಿಗಳಂತಹ ಐಡೆಂಟಿಟಿ ಕ್ರೈಸಿಸ್ ಮ್ಯಾನೇಜರುಗಳು ಮಠ ಸೇರಿಕೊಂಡಿದ್ದು ಆವಾಗಲೇ.

“ಸಮಾಜದಲ್ಲಿ ಹುಡುಗರಿಗೆ ಉಪನಯನ ಮೊದಲಾದ ಸಂಸ್ಕಾರಗಳಿವೆ, ಹೆಣ್ಣುಮಕ್ಕಳಿಗೆ ಏನೂ ಇಲ್ಲ. ಧರ್ಮಬೋಧನೆ ಮಾಡೋ ನಾವು ಹೆಣ್ಣುಮಕ್ಕಳನ್ನು ಹಾಗೇ ಬಿಡುವಂತಿಲ್ಲ. ಅವರಿಗೂ ಒಂದು ಸಂಸ್ಕಾರ ಆಗಬೇಕು ಮತ್ತು ಆ ಸಂಸ್ಕಾರ ಪೀಠದ ಗುರುವಿನಿಂದಲೇ ಆಗಬೇಕು” ಎಂಬ ಹೊಸ ಯೋಜನೆ ರೂಪುಗೊಂಡಿತು. ಮಠದ ಗಿಂಡಿ ಮಧ್ಯಸ್ಥಿಕೆ ಮಾಡುವವನನ್ನು ಹೆಣ್ಣುಮಕ್ಕಳ ಬೇಟೆಗೆ ಬಿಟ್ಟರು.

ಹೆಣ್ಣುಮಕ್ಕಳಿಗೆ ಕನ್ಯಾಸಂಸ್ಕಾರ ಮಾಡಿಸಬೇಕೆಂದು ’ಮಹಾಸಂಸ್ಥಾನದವರ’ ಅಪ್ಪಣೆಯಾಗಿದೆ ಎಂದು ಮಧ್ಯಸ್ಥಿಕೆ ಮಾಡುವವ ಹೆಣ್ಣುಮಕ್ಕಳ ಪಾಲಕರನ್ನು ಕೋಣೆಗೆ ಕರೆದು ಗುಟ್ಟಾಗಿ ಹೇಳತೊಡಗಿದ. ತಮ್ಮ ಮಗಳಿಗೆ ಮಠದಲ್ಲಿ ಸಂಸ್ಕಾರ ಕೊಡಿಸದಿದ್ದರೆ ತಾವು ಹಿಂದೆಬಿದ್ದಂತೆ ಎಂದುಕೊಂಡ ಭಕ್ತಬಾವಯ್ಯಂದಿರು ತಮ್ಮ ಹೆಣ್ಣುಮಕ್ಕಳನ್ನು ಒತ್ತಾಯಪೂರ್ವಕವಾಗಿ ಕನ್ಯಾಸಂಸ್ಕಾರಕ್ಕಾಗಿ ಮಠಕ್ಕೆ ಕರೆದುಕೊಂಡು ಹೋಗತೊಡಗಿದರು. ಕನ್ಯಾ ಸಂಸ್ಕಾರದ ನೆಪದಲ್ಲಿ ಹದಿಹರೆಯದ ಹೆಣ್ಣುಮಕ್ಕಳನ್ನು ಏಕಾಂತಕ್ಕೆ ಸೆಳೆದದ್ದು ಮೂರನೇ ಸಾಧನ ಮತ್ತು ಸಾಧನೆ.

ಸಾಧನ ನಾಲ್ಕು-“ನಮ್ಮ ಸಮಾಜ ಬಹಳ ವಿಶಿಷ್ಟ. ಅದರಲ್ಲೂ ನಮ್ಮ ಶಿಷ್ಯರು ಅತಿ ವಿಶಿಷ್ಟ” ಎಂಬ ತೈಲ ಸವರಿ ಬೋಳೆ ಬಸವಣ್ಣಗಳನ್ನು ಬಳಸಿಕೊಂಡು ಅವರಿಗೆಲ್ಲ ಮಠದಲ್ಲಿ ಬೇರೆ ಬೇರೆ ಯೋಜನೆಗಳಲ್ಲಿ ಯಾವ್ಯಾವುದೋ ಕೆಲಸಕ್ಕೆ ಹಚ್ಚಿದ. ಇಡೀ ಮಠ ಹಳದೀಮಯವಾಯಿತು! ಬೋಳೆ ಭಕ್ತರು ನಿಂತಲ್ಲಿ ಕುಂತಲ್ಲಿ ಹೋದಲ್ಲಿ ಬಂದಲ್ಲಿ ತಮ್ಮ ’ಮಹಾನ್ ಗುರು’ವು ಅವತಾರಿ ಎನ್ನತೊಡಗಿದರು. ಮಹಾತಪಸ್ವಿ ಎನ್ನತೊಡಗಿದರು.

ನಡುವಯಸ್ಸು ಮೀರಿದ ಸುಂದರ ಮಹಿಳೆಯರಿಗೂ ಐಡೆಂಟಿಟಿ ಕ್ರೈಸಿಸ್ ಇತ್ತಲ್ಲ? ಗಂಡಂದಿರ ಜೊತೆ ಅವರೂ ಮಠಕ್ಕೆ ಬರತೊಡಗಿದರು. ’ಮಹಿಳಾ ಸಬಲೀಕರಣ’ ಆಗಲೇ ಹುಟ್ಟಿಕೊಂಡದ್ದು! ಯೋಜನೆಯ ಅನುಷ್ಠಾನಕ್ಕಾಗಿ ’ಸಂಸ್ಥಾನ’ದವರೊಟ್ಟಿಗೆ ಮಹಿಳೆಯರು ಒಬ್ಬೊಬ್ಬರಂತೆ ಏಕಾಂತದಲ್ಲಿ ಮೀಟಿಂಗ್ ನಡೆಸಬೇಕಾಯ್ತು!!

ಮೀಟಿಂಗಿಗೆ ಬಂದ ಹೆಂಗಸರ ಕೆನ್ನೆ-ಕತ್ತು ಇನ್ನೆಲ್ಲೆಲ್ಲೋ ಸವರಿ ಅವರಿಗೆ ದಿವ್ಯಳು ಭವ್ಯಳು ರಾಮ ನಿನ್ನಿಂದ ವಿಶೇಷ ಸೇವೆ ಬಯಸುತ್ತಾನೆ ಎನ್ನತೊಡಗಿದ. ಸಹಜ ಸ್ಥಿತಿಯಲ್ಲಿ ಹಾರಿದರೆ ಕೂಗಿಕೊಂಡಾರು ಎಂದು ವಿಶೇಷ ಖಾದ್ಯ ಪ್ರಸಾದವನ್ನು ತಯಾರಿಸಲಾಯ್ತು. ಅನ್ಯ ಮತೀಯ ವ್ಯಕ್ತಿಯೊಬ್ಬ ಅಫೀಮಿನಂತಹ ಮಂಪರು ಬರುವ ಡ್ರಗ್ಸ್ ಸಪ್ಲೈ ಮಾಡತೊಡಗಿದ. ಪ್ರಸಾದದಲ್ಲಿ ಮಂಪರು ಬರುವ ಡ್ರಗ್ಸ್ ಹಾಕಿಕೊಟ್ಟಾಗ ಮುಗ್ಧ ಹೆಂಗಸರು ಅದನ್ನು ಭಕ್ತಿಯಿಂದ ತಿಂದರು. ತಿಂದ ಮರುಕ್ಷಣ ಎಲ್ಲಿದ್ದೇವೆ, ಏನಾಗ್ತಿದೆ ಎಂಬುದನ್ನು ಮರೆತರು. ಸಾಮಾನುಸ್ವಾಮಿ ತಾನೇ ರಾಮನೆಂದ. ತನಗೆ ಅರ್ಪಿಸಿಕೊಂಡು ಸೀದಾ ಮೋಕ್ಷವನ್ನು ಪಡೆಯಬಹುದೆಂದ. ಕೊಸರಿಕೊಂಡವರನ್ನು ಬಲಾತ್ಕರಿಸಿದ. ಕೂದಲ ಬಣ್ಣ ತಿರುಗಿ ಬೋಳಾಗತೊಡಗಿದ ಐವತ್ತರ ಅಂಕಲ್ ಗಳಿಗೆ ಬೋಳೆಣ್ಣೆ ಸವರಿ ಅವರ ಮಡದಿಯರನ್ನು ಏಕಾಂತಕ್ಕೆ ಸೆಳೆದು ಕಾಯಂ ಮಾಡಿಕೊಂಡದ್ದು ನಾಲ್ಕನೆಯ ಸಾಧನ ಮತ್ತು ಸಾಧನೆ.

ಸಾಧನ ಐದು-ಭಕ್ತಜನರಲ್ಲಿ ಅಲ್ಲಲ್ಲಿ ಗುಸುಗುಸು ಸುದ್ದಿಗಳು ಹಬ್ಬತೊಡಗಿದವು. ಕಳ್ಳಯ್ಯನ ಕುಲಪತಿ ಕುಳ್ಳಬಾವಯ್ಯ ಸಾಗರದ ಪಾನಿಪೂರಿಯವರ ಮಗಳು ಸೇರಿದಂತೆ ಕನಿಷ್ಠ ಹದಿನೆಂಟು ಹದಿಹರೆಯದ ಹೆಣ್ಣುಮಕ್ಕಳನ್ನು ಉಂಡು ಮುಗಿಸಿದ್ದ!! ಅವರಲ್ಲಿ ಪಾನಿಪೂರಿಯವರ ಮಗಳು ಒಂದು ಸಲ ಅಬಾರ್ಷನ್ ಆದಮೇಲೆ ಮತ್ತೆ ಎರಡನೇ ಸಲ ಗರ್ಭಧರಿಸಿದ್ದಳು!! ಅಹವಾಲು ಕಳ್ಳಯ್ಯನ ’ಮಹಾಸನ್ನಿದಾನ’ಕ್ಕೆ ಹೋಯಿತು.

ಹಿತ್ತಲ ಬಾಗಿಲಿನಿಂದ ಎಸ್ಕೇಪ್ ಆಗೋದಕ್ಕೆ ಯಾವೆಲ್ಲ ಉಪಾಯಗಳು ಬೇಕೋ ಅದನ್ನೆಲ್ಲ ಮಾಡಿದ ಕಳ್ಳಯ್ಯ ಕುಳ್ಳಬಾವಯ್ಯನನ್ನು ಬೆಂಗಳೂರಿಗೆ ಸಾಗಹಾಕಿದ. ಬೆಂಗಳೂರು ಸೇರಿದ ಕುಳ್ಳಬಾವಯ್ಯ ಐದಾರುತಿಂಗಳು ತಲೆಮರೆಸಿಕೊಂಡು ತಿರುಗಾಡುತ್ತಿದ್ದ. ಸಾಗರ ಪ್ರಾಂತದಲ್ಲಿ ಒಮ್ಮೆ ಚೆನ್ನಾಗಿ ಒದೆಯನ್ನೂ ತಿಂದಿದ್ದ ಅಂತಾರೆ ಅಲ್ಲಿನ ಜನ. ಅಧಿಕಾರ, ಹಣ, ರಾಜಕಾರಣಿಗಳ ಬೆಂಬಲ ಇತ್ತಲ್ಲ? ಕಳ್ಳಯ್ಯ-ಕುಳ್ಳಯ್ಯ ಅದನ್ನೆಲ್ಲ ದುರುಪಯೋಗಿಸಿ ಬಚಾವಾದರು. ಪಾನಿಪೂರಿಯವರ ಕುಟುಂಬ ಒಡೆದು ಹಾಳು ಮಾಡಿದರು. ಅದೇರೀತಿ ಹಲವು ಸುಂದರ ಕುಟುಂಬಗಳನ್ನು ಒಡೆದ ಹಾದರ ವೀರರು ಈ ಸಾಮಾನುಸ್ವಾಮಿ ಮತ್ತು ಕುಲಪತಿ ಕುಳ್ಳಬಾವಯ್ಯ ಜೋಡಿ.

ಎಲ್ಲವನ್ನೂ ಮೀರಿದ ಶಕ್ತಿಯೊಂದು ಇರುತ್ತದಲ್ಲ? ಅದು ಇವರು ಹೇಳಿದ ಹಾಗೆ ಕೇಳುತ್ತದೋ? ಇಲ್ಲ. “ನಿತ್ಯ ಎರಡುಹೊತ್ತು ನಾನಾವಿಧದ ಹೂವುಹಾಕಿ ಪೂಜೆ ಮಾಡ್ತೀಮಿ, ಸುಮ್ನೆ ಕೊತ್ಕೊ ರಾಮ” ಅಂದರೆ ರಾಮ ಕೇಳ್ತಾನ? ಇಲ್ಲ. “ನಿನಗೇನ್ಬೇಕು? ರುದ್ರ ಹೇಳಿಸಿ ಅಭಿಷೇಕ ಮಾಡುಸ್ತೀಮಿ, ಗಂಧ ಇಟ್ಟು ಆರತಿ ಮಾಡ್ತೀಮಿ, ಸಾಕಲ್ಲ, ಆಮೇಲೆ ನಾಮೇನಾದ್ರೂ ಮಾಡ್ಕತೀಮಿ. ನೀನು ಸುಮ್ನೆ ಕೂತ್ಕೋಬೇಕು” ಅಂದ್ರೆ ಈಶ್ವರ ಕೇಳ್ತಾನ? ಇಲ್ಲ. ಹಾಗಾಗಿಯೇ ಹಾದರದ ಸ್ವಾಮಿಯ ಹಾದರದ ಕಥೆಗಳು ಒಂದೊಂದಾಗಿ ಹೊರಬರಲು ಆರಂಭವಾಗಿದ್ದು.

ಅದೇನು ಒಂದೇ? ಎರಡೇ? ಧ್ವನಿ ಸುರುಳಿ ಬಿಚ್ಚಿಕೊಂಡಾಗ ಬರುತ್ತಲೇ ಇರುವಂತೆ ಬರುತ್ತಲೇ ಹೋಯಿತು. ಸುದ್ದಿಮನೆಗಳಲ್ಲಿ ಕುಳಿತ ಮೇಲಿನ ಅಂಡೆಪಿರ್ಕಿಗಳನ್ನು ಕಾಂಟ್ರಾಕ್ಟ್ ಮೇಲೆ ಹಿಡಿಯಲಾಯಿತು; ವಿಷಯ ಎಲ್ಲೂ ಬಿತ್ತರಗೊಳ್ಳದಂತೆ ಗೋಪ್ಯತೆ ಕಾಪಾಡಿಕೊಳ್ಳಲು ಹೇಳಲಾಯಿತು. ಸಾಮಾನುಸ್ವಾಮಿಯ ಅಂಡುನೆಕ್ಕಿ ರುಚಿ ಕಂಡವರು ಶಿವ ಶಿವ…ಮತ್ತೆ ಮತ್ತೆ ಅದೇ ರುಚಿಯೆಂದರು! ಮಿಕ್ಕಿದ ಎಲ್ಲ ವಿಷಯ ಹಂತಹಂತವಾಗಿ ನಿಮಗೆ ಹೇಳುತ್ತಲೇ ಬಂದಿದ್ದೇನೆ, ಈಗ ಮತ್ತದೇ ಪ್ಲೇಟ್ ಹಾಕೋದು-ಕೊರೆಯೋದು ಬೇಡ.

ಸಾಮಾನುಸ್ವಾಮಿಯ ಮೇಲೆ ಹಾದರದ ಕೇಸುಗಳು ಬಿದ್ದವಲ್ಲ? ಅವುಗಳನ್ನು ಸುಳ್ಳೆಂದು ಸಾಧಿಸಬೇಕಲ್ಲ? ಸಮಷ್ಟಿ ಸಮಾಜದಲ್ಲಿ ತಾನು ಸುಭಗ-ಸಂಭಾವಿತನೆಂದು ಬಿಂಬಿಸಬೇಕಲ್ಲ? ಹಾಗಾಗಿ ನಾನಾ ವಿಧದ ಡೊಂಬರಾಟಗಳನ್ನು ಆಯೋಜಿಸಿದರು ಕಳ್ಳಯ್ಯ-ಕುಳ್ಳಯ್ಯ. ಕುಳ್ಳಯ್ಯನಿಗೆ ಒಂದೇ ಹೆದರಿಕೆ-ಕಳ್ಳಯ್ಯ ಸೇಫಾಗಿದ್ದರೆ ಮಾತ್ರ ತಾನೂ ಸೇಫು, ಕಳ್ಳಯ್ಯ ಒಳಗೆ ಹೋಗಿ ಇರುವುದನ್ನೆಲ್ಲ ಹೇಳಿಬಿಟ್ಟರೆ ಮಾವಂದಿರು ಕುಳ್ಳಯ್ಯನ ಮಗ್ಗಲು ಮುರೀತಾರೆ! ಅದಕ್ಕೆ ಕಳ್ಳಯ್ಯನ ರಕ್ಷಣೆಗೆ ಕುಳ್ಳಯ್ಯನೂ ರೆಡಿಯಾಗಿ ನಿಂತ. ಆದರೂ ಬೇನಾಮಿ ಹೆಸರಿನಲ್ಲಿ ಮಾಡಿಕೊಂಡ ಆಸ್ತಿಗಳಿಗಾಗಿ ಆಗಾಗ ಇಬ್ಬರಲ್ಲೂ ತಕರಾರು ಆಗುತ್ತದಂತೆ.

ಹೊರಗೆ ಅವುಗಳನ್ನೆಲ್ಲ ಹೇಳಲಾದೀತೇ? ಹೇಳಿದರೆ ಇಬ್ಬರ ಮಾನವೂ ಕ್ಷಣದಲ್ಲಿ ಹರಾಜಾದೀತು ಮತ್ತು ಇಬ್ಬರನ್ನೂ ಮಾವಂದಿರು ಆ ಕ್ಷಣದಲ್ಲೇ ಜಂಬೂಸವಾರಿಗೆ ರೆಡಿ ಮಾಡಿಬಿಡ್ತಾರೆ! ಹೀಗಾಗಿ ಹೊರಗಿನ ಬಿಲ್ಡಪ್ಪೇ ಬೇರೆ. ಅಲ್ಲಿ ಏನಿದ್ದರೂ ಹೋಮ-ಹವನ, ಯಾತ್ರೆ, ಪೂಜೆ ಇತ್ಯಾದಿ ಡೊಂಬರಾಟಗಳು. ಸಾವಿರಾರು ಸಂಖ್ಯೆಯಲ್ಲಿ ’ಹಾದರೇಶ್ವರ ಚಾದರ’ಗಳನ್ನು ಮಾಡಿಸಿ ಇಟ್ಟುಕೊಳ್ಳಲಾಗಿದೆ. ಕಚ್ಚೆ ಕೇಸುಗಳನ್ನು ಮುಚ್ಚುವ ಪ್ರಯತ್ನವಾಗಿ, ’ಹಾದರೇಶ್ವರ ಚಾದರ’ಗಳನ್ನು ಹೊದೆಸಿ ಬಾವಾಜಿಗಳ ಸಂಘ ಕಟ್ಟಿದ್ದು ಸಾಮಾನುಸ್ವಾಮಿಯ ಐದನೇ ಸಾಧನ ಮತ್ತು ಸಾಧನೆ.

ಈ ಐದು ’ಸಾಧನೆ’ಗಳನ್ನು ಸಾಧನಮಾಡಿಕೊಂಡ ಸಾಮಾನುಸ್ವಾಮಿ ತೊನೆಯಪ್ಪ ತನ್ನನ್ನು ವಿರೋಧಿಸುವವರ ವಿರುದ್ಧ ಸಮರ ಸಾರಲು ಇವುಗಳನ್ನೇ ಬಳಸಿಕೊಂಡ!! ಈಗ ತಾನೇ ತೆಗೆದ ಖೆಡ್ಡಾದಲ್ಲಿ ತಾನೇ ಬೀಳುವ ಹಂತ ಹತ್ತಿರವಾಗಿದೆ.

Thumari Ramachandra

source: https://www.facebook.com/groups/1499395003680065/permalink/1858984711054424/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s