ಆಕಾಶ ದೀಪದ ಕಥೆ, ವಿಗ್ರಹಗಳನ್ನು ವರ್ಣಿಸಿ ಬೇಳೆಬೇಯಿಸಿಕೊಳ್ಳೋನ ಕಥೆ ಹೀಗೆ ಒಂದೆರಡು ಕಥೆಗಳು

ಆಕಾಶ ದೀಪದ ಕಥೆ, ವಿಗ್ರಹಗಳನ್ನು ವರ್ಣಿಸಿ ಬೇಳೆಬೇಯಿಸಿಕೊಳ್ಳೋನ ಕಥೆ ಹೀಗೆ ಒಂದೆರಡು ಕಥೆಗಳು

ಬೆಳಕಿನ ಹಬ್ಬ ದೀಪಾವಳಿ ಎಂಬುದು ಎಲ್ಲರಿಗೂ ಗೊತ್ತು, ಅದರಲ್ಲೇನು ವಿಶೇಷವೆಂದು ಕೇಳಬೇಡಿ. ದೀಪ ಪ್ರಜ್ವಾಲನೆಯೇ ಬೆಳಕಿನ ಹಬ್ಬದ ಮುಖ್ಯಾಂಶ. ಶಿರಡಿ ಸಾಯಿಬಾಬ ಒಮ್ಮೆ ದೀಪಾವಳಿಯಲ್ಲಿ ದೀಪಗಳನ್ನು ಉರಿಸಲು ಎಣ್ಣೆ ಬೇಡಲು ಹೋದರಂತೆ; ಆ ಗ್ರಾಮಗಳ ಜನ ಎಣ್ಣೆ ನೀಡಲಿಲ್ಲವಂತೆ; ತನ್ನ ಶಿಷ್ಯರಿಂದ ಹಣತೆಗಳಲ್ಲಿ ನೀರನ್ನೇ ತುಂಬಿಸಿ ಎಣ್ಣೆಯ ದೀಪಗಳಂತೆ ಉರಿಸಿದರು ಅಂತಾರೆ.

ದೀಪಾವಳಿಯ ದಿನಗಳಲ್ಲೂ ಇಂದಿನ ನಮ್ಮ ಹಳ್ಳಿಗಳಲ್ಲಿ, ನಗರಗಳಲ್ಲಿ ’ಎಣ್ಣೆ’ಯ ಪ್ರಭಾವವನ್ನು ಗಾಢವಾಗಿ ಕಾಣಬಹುದು ಎಂಬುದು ಗುಮ್ಮಣ್ಣ ಹೆಗಡೇರ ಹೇಳಿಕೆ. ಆದರೆ, ಈ ’ಎಣ್ಣೆ’ಗೂ ದೀಪದ ಎಣ್ಣೆಗೂ ಬಹಳ ವ್ಯತ್ಯಾಸವಿದೆ. ತಾತ್ತ್ವಿಕವಾಗಿ ಮೊದಲನೆಯದು ಜ್ಯೋತಿರ್ಮಯ ಜೀವನದಿಂದ ತಮಸ್ಸಿನ ಜೀವನದೆಡೆಗೆ ಕರೆದೊಯ್ಯುವಂಥದ್ದು; ದೀಪದ ಎಣ್ಣೆ ಅದಕ್ಕೆ ವಿರುದ್ಧ ದಿಸೆಯಲ್ಲಿ ಮನೆಗಳಲ್ಲಿ ಮನಗಳಲ್ಲಿ ಇರುವ ಅಂಧಕಾರವನ್ನು ಹೋಗಲಾಡಿಸುವಂಥದ್ದು.

ಸಾಹಿತಿ ಭೈರಪ್ಪನವರ ಬಗ್ಗೆ ಪ್ರೊ.ಕೃಷ್ಣೇಗೌಡರು ಬರೆದಿದ್ದನ್ನು ನಿದ್ದೆಗಣ್ಣುಗಳಲ್ಲೇ ಓದಿದೆ; ಅಂತರ್ಜಾಲ ಜಗತ್ತನ್ನು ಕಿರಿದಾಗಿಸಿದ್ದರಿಂದ ದೂರದಿಂದಲೂ ಕರ್ನಾಟಕದ ವಿದ್ಯಮಾನಗಳನ್ನು ಓದಲು ಸಾಧ್ಯವಾಗುತ್ತಿದೆ. ಅಂತರ್ಜಾಲ ಜಗತ್ತನ್ನು ಕಿರಿದಾಗಿಸಿದ್ದರಿಂದ ಕೆಲವು ಸನ್ಯಾಸಿ ವೇಷಗಳಿಗೆ ಸುಂದರ ಲಲನೆಯರನ್ನು ಆ ಮೂಲಕವೇ ಸಂಪರ್ಕಿಸಲೂ ಸಾಧ್ಯವಾಗುತ್ತದೆ. ನೋಡಿ, ಇಲ್ಲಿಯ ಎಣ್ಣೆ[ಮಾಧ್ಯಮ] ಒಂದೇ, ಆದರೆ ಗುರಿ ಬೇರೆ ಬೇರೆ.

ಭೈರಪ್ಪನವರು ಲೋಕ ಸಂಚಾರದಲ್ಲಿ ಹೇಗಿರುತ್ತಾರೆ, ಜನರೊಡನೆ ಹೇಗೆ ಬೆರೆಯುತ್ತಾರೆ ಎಂಬುದನ್ನೆಲ್ಲ ಕೃಷ್ಣೇಗೌಡರು ವಿವರಿಸಿದ್ದಾರೆ. ಬಹುಶಃ ಕಾರಂತರಿಗೂ ಮತ್ತು ಭೈರಪ್ಪನವರಿಗೂ ಆ ವಿಷಯದಲ್ಲಿ ಸಾಮ್ಯವಿದೆ. ದೇಶ ತಿರುಗುವಾಗ ಕಂಡುಂಡ ಸ್ವಾನುಭವಗಳನ್ನು ಮನದ ಉಗ್ರಾಣದಲ್ಲಿ ಮೂಟೆಕಟ್ಟಿಟ್ಟುಕೊಂಡು ಮತ್ತೆಂದೋ ಅದನ್ನು ಜನಸಾಮಾನ್ಯರ ಅನುಭವಕ್ಕೆ ಕೃತಿಗಳ ರೂಪದಲ್ಲಿ ವಿಲೇವಾರಿ ಮಾಡ್ತಾರೆ. ಕಾರಂತರ ಹಲವು ಕಾದಂಬರಿಗಳು ಹಾಗಿವೆ; ಭೈರಪ್ಪನವರ ಕಾದಂಬರಿಗಳ ಬಗ್ಗೆ ಹೇಳುವುದು ಬೇಕಿಲ್ಲವಲ್ಲ?

ಬರಹಗಾರರು, ಸಾಹಿತಿಗಳು ಒಂದುಮಟ್ಟಕ್ಕೆ ಮಾತ್ರ ಹೋಗಬಹುದು; ಅದು ಲೌಕಿಕ, ಪ್ರಾಪಂಚಿಕ, ಐಹಿಕ ವಿಷಯಗಳ ಪರಿಮಿತಿಯಲ್ಲಿ ಮಾತ್ರ. ’ರವಿ ಕಾಣದ್ದನ್ನೂ ಕವಿ ಕಂಡ’ ಅನ್ನೋದು ಆ ಪ್ರಪಂಚಕ್ಕಷ್ಟೇ ಸೀಮಿತ. ರವಿ ಏನನ್ನು, ಎಷ್ಟನ್ನು ಮತ್ತು ಎಂತೆಂಥದ್ದನ್ನು ಕಂಡ ಎಂಬ ಮಾಹಿತಿ ಈ ಗಾದೆಯನ್ನು ಹೊಸೆದವರಿಗೆ ಇರಲಿಕ್ಕೆ ಸಾಧ್ಯವಿಲ್ಲ. ಆದರೂ ಲೌಕಿಕವಾಗಿ ವಿವಿಧ ಜೀವನಾನುಭವಗಳನ್ನು ಹಂಚುವ ಕವಿಗಳು, ಸಾಹಿತಿಗಳು ಒಂದರ್ಥದಲ್ಲಿ ಅರೆಸನ್ಯಾಸಿಗಳೇ.

ದೀಪಾವಳಿಯ ದೀಪಗಳತ್ತ ಮರಳುತ್ತ ದೀಪ ಪ್ರಜ್ವಾಲನೆಗೆ ಬೇಕಾದ ಮೂಲವಸ್ತುಗಳಲ್ಲಿ ಭೇದಗಳನ್ನು ಗಮನಿಸೋಣ. ಕೆಲವರು ದೀಪಾವಳಿಯಲ್ಲಿ ಮೊಂಬತ್ತಿಗಳನ್ನು ಬಳಸುತ್ತಾರೆ. ಇನ್ನು ಹಲವರು ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ, ಪಾಮೆಣ್ಣೆ, ಎಳ್ಳೆಣ್ಣೆ, ಹರಳೆಣ್ಣೆ, ಕೆಲವರು ಕರಂಜಿ ಎಣ್ಣೆ ಹೀಗೆ ಬೇರೆ ಬೇರೆ ಎಣ್ಣೆಗಳನ್ನು ಬಳಸುತ್ತಾರೆ. ದೀಪದ ಗುಣಮಟ್ಟ ಮತ್ತು ಅದು ಹೊಮ್ಮಿಸುವ ಘಮ ಅದರ ಮೂಲವಸ್ತುವನ್ನೇ ಅವಲಂಬಿಸಿರುತ್ತದೆ. ಶುದ್ಧ ತುಪ್ಪದ ದೀಪದಿಂದ ಉರಿಸುವ ದೀಪದ ಗುಣಮಟ್ಟ ಬಹಳ ಉನ್ನತವೂ ಹಿತವೂ ಆಗಿರುತ್ತದೆ. ತುಪ್ಪದ ದೀಪ ಉರಿಯುತ್ತಿರುವ ಪರಿಸರದಲ್ಲಿ ಅದರ ಘಮವೇ ಆಹ್ಲಾದಕರವಾಗಿರುತ್ತದೆ.

ತ್ರೇತಾಯುಗದಲ್ಲಿ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ತೆರಳಿದ್ದ ಶ್ರೀರಾಮ, ಸೀತೆಯನ್ನು ಕಳೆದುಕೊಂಡು, ರಾವಣನನ್ನು ವಧಿಸಿ, ಹದಿನಾಲ್ಕು ವರ್ಷಗಳ ನಂತರ ವಿಜಯಿಯಾಗಿ ಅಯೋಧ್ಯೆಗೆ ಮರಳುತ್ತಾನೆ. ಶ್ರೀರಾಮನ ಆಗಮನದ ದಿನದಂದು ಸ್ವಾಗತಿಸುವ ಮುನ್ನಾದಿನದ ರಾತ್ರಿಯಲ್ಲಿ ಕೋಸಲ ದೇಶದ ಜನತೆ ರಾಮನಿಗಾಗಿ ಒಂದು ದೀಪವನ್ನು ಬೆಳಗಿ ಸಂಭ್ರಮಿಸಿದರಂತೆ; ಅದೇ “ಆಕಾಶದೀಪ”, “ಆಕಾಶ ಕಂದೀಲು”, “ಜ್ಯೋತಿ ಕಳಶ” ಎಂಬೆಲ್ಲ ಹೆಸರಿನಿಂದ ಗುರುತಿಸಲ್ಪಟ್ಟಿತು.

ಮಣ್ಣಿನ ಹೂಜಿಯಾಕಾರದ ಪಾತ್ರೆಯ ಮೈಸುತ್ತ ಉರುಟುರುಟಾದ ರಂಧ್ರಗಳಿರುತ್ತವೆ. ಅದರ ತಳದಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿ ಅದರ ಮೇಲೆ ಶುದ್ಧ, ತಾಜಾ ತುಪ್ಪದ ದೀಪವನ್ನು ಇಡುತ್ತಾರೆ. ಹೂಜಿಯ ಬಾಯನ್ನು ಮಣ್ಣಿನ ಮುಚ್ಚಳದಿಂದಲೇ ಮುಚ್ಚಿ, ಪಾತ್ರೆಯ ಕಂಠದ ಸುತ್ತ ಹಗ್ಗವೊಂದನ್ನು ಕಟ್ಟಿ, ಮನೆಯ ಹೊರಭಾಗದಲ್ಲಿ, ಎತ್ತರದಲ್ಲಿ ಅದನ್ನು ನೇತುಬಿಡುತ್ತಾರೆ.

ಶ್ರೀರಾಮನಿಗೆ ಭಕ್ತಿಪೂರ್ವಕವಾಗಿ ಅಂದು ಪ್ರಜೆಗಳು ಅರ್ಪಿಸಿದ ಆಕಾಶ ಕಂದೀಲು ನಂತರದ ದಿನಗಳಲ್ಲಿ ದೀಪಾವಳಿಯ ಸಮಯದಲ್ಲಿ ಅಥವಾ ಕಾರ್ತೀಕ ಮಾಸದಲ್ಲಿ ಪ್ರತಿರಾತ್ರಿ ಹಚ್ಚಲ್ಪಟ್ಟು ಆಕಾಶ ದೀಪ, ಆಕಾಶ ಬುಟ್ಟಿ ಎಂದೆಲ್ಲ ಕರೆಸಿಕೊಂಡಿತು. ಆಕಾಶ ದೀಪವನ್ನು ದೇವರು, ಪೂರ್ವಜರು, ಪಿತೃಗಳು ಎಲ್ಲರ ನೆನಪಿನಲ್ಲಿ, ಭಕ್ತಿಯಲ್ಲಿ ಹಚ್ಚಲಾಗುತ್ತದೆ. ಅದಕ್ಕಾಗಿಯೇ ಕೆಲವು ಮಂತ್ರಗಳೂ ಬಳಕೆಯಲ್ಲಿವೆ. ಉದಾಹರಣೆಗೆ-

दामोदराय नभसि तुलायां दोलया सह ।
प्रदीपं ते प्रयच्छामि नमोऽनन्ताय वेधसे ॥

Meaning : I offer this lit lamp to Damodar, the Almighty Supreme God. I pay obeisance to that radiant Deity Anant. The result of this ritual is acquiring wealth.’

ಇತ್ತೀಚೆಗೆ ನಮ್ಮ ಸ್ನೇಹಿತರ ಬಳಗದಲ್ಲಿ ಒಬ್ಬರು ಆಕಾಶ ದೀಪದ ಬಗ್ಗೆ ಪ್ರಸ್ತಾಪಿಸುತ್ತ, ಅದು ಕ್ರಿಶ್ಚಿಯಾನಿಟಿಯಿಂದ ಎರವಲು ಪಡೆದಿದ್ದು ಎಂದರು. ವಾಸ್ತವಿಕತೆ ಹಾಗಿಲ್ಲ; ಸತತ ಯಜ್ಞ-ಯಾಗ-ದೀಪಾರಾಧನೆಗಳಲ್ಲೇ ಮುಳುಗಿರುವ ಹಿಂದೂಗಳಿಗೆ ದೀಪಗಳ ಪರಿಚಯ ಇಂದು ನಿನ್ನೆಯದಲ್ಲ. ದೀಪಗಳ ಮಹತ್ವವನ್ನು ಮಹರ್ಷಿ ಯಾಜ್ಜವಲ್ಕ್ಯರೇ ಅಂದಿನ ವಿದೇಹದ ಚಕ್ರವರ್ತಿಗಳಿಗೆ ವಿವರಿಸಿದ್ದರು.

ಆತ್ಮ-ಪರಮಾತ್ಮರ ನಡುವೆ ನೇರ ಸಂಬಂಧವನ್ನು ಕಲ್ಪಿಸುವ ಶಕ್ತಿ ತುಪ್ಪದ ದೀಪದಂತಹ ಶುದ್ಧ ದೀಪಕ್ಕಿದೆ. [ನಾನಾ ವಿಧವಾದ ನೀರಿನಲ್ಲಿ ನಿರ್ಮಲ ಗಂಗಾಜಲ ವಿಶಿಷ್ಟವಾಗಿರುವಂತೆ ದೀಪಗಳಲ್ಲಿ ಶುದ್ಧ ತುಪ್ಪದ ದೀಪ ಮಹತ್ವವುಳ್ಳದ್ದು ಎನ್ನಬಹುದು]. ಮಂಗಲಾರತಿ ಮಾಡುವಾಗ ಒಂದು ಕೊನೆಯಲ್ಲಿ ವಿಗ್ರಹದೊಳಗಿನ ಪರಮಾತ್ಮ ಮತ್ತು ಇನ್ನೊಂದು ಕೊನೆಯಲ್ಲಿ ಶರೀರದೊಳಗಿನ ಆತ್ಮ ಇರುವಾಗ, ಸರಳರೇಖೆಯಲ್ಲಿ ದೀಪವನ್ನು ಕಾಣಬೇಕು; ಆತ್ಮದ ಅಂಧಕಾರವನ್ನು ಕಳೆದು ಪರಮಾತ್ಮನಲ್ಲಿ ಲೀನಮಾಡುವ ಶಕ್ತಿಯ ಇನ್ನೊಂದು ರೂಪವೇ ದೀಪವಾಗಿದೆ.

ವಿದೇಹದ ಚಕ್ರವರ್ತಿ ಯಾಜ್ಞವಲ್ಕ್ಯರಲ್ಲಿ ಕೇಳಿದ ಪ್ರಶ್ನೆ ಹೀಗಿತ್ತು: ಯಾವ ಬೆಳಕೂ ಇಲ್ಲದ ಗಾಢ ಕತ್ತಲೆಯಲ್ಲಿ ಮನುಷ್ಯನಿಗೆ ಯಾವುದು ಬೆಳಕು?

ಮಹರ್ಷಿಗಳು ಉತ್ತರಿಸಿದ್ದು- “ಮನುಷ್ಯನ ಆತ್ಮದಲ್ಲೇ ಇರುವ ಬೆಳಕು.”

ಹಾಗಾಗಿಯೇ ಆತ್ಮವನ್ನು ಜ್ಯೋತಿಸ್ವರೂಪವೆಂದೂ ಹೇಳಲಾಗುತ್ತದೆ. ದೀಪಗಳ ವರ್ಣನೆಯನ್ನು ಆರಂಭಿಸಿದರೆ ಅದೇ ಒಂದು ಸಂಶೋಧನಾ ಗ್ರಂಥವಾದೀತು! ಸುಮ್ನೆ ಶಾರ್ಟ್ ಆಗಿ ದೀಪಗಳ ಬಗ್ಗೆ ಹೇಳಿದ್ದೇನಷ್ಟೆ. ಇಂದು ಎಷ್ಟೋ ವೇದಿಕೆಗಳಲ್ಲಿ, ಸಭೆ-ಸಮಾರಂಭಗಳಲ್ಲಿ ದೀಪವನ್ನು ಬೆಳಗಿಸಿ ಉದ್ಘಾಟಿಸುವ ಸನ್ನಿವೇಶ ಇರುತ್ತದೆ. ದಿವಂಗತ ಅಬ್ದುಲ್ ಕಲಾಂ ಅವರು ದೀಪ ಬೆಳಗಿ ಉದ್ಘಾಟಿಸುವ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರೆ ಶೂ ಅಥವಾ ಚಪ್ಪಲಿಗಳನ್ನು ತೆಗೆದಿಟ್ಟು ದೀಪ ಪ್ರಜ್ವಲಿಸುತ್ತಿದ್ದರು ಎಂಬುದನ್ನು ನಾವೆಲ್ಲ ನೆನಪಿಟ್ಟುಕೊಳ್ಳಬೇಕು. ಕೇವಲ ಶೋ ಆಫ್ ಮಾಡುವ ಅನೇಕ ಜನ ಚಪ್ಪಲಿ ಬಿಚ್ಚಿಡದೆ ದೀಪವನ್ನು ಹಚ್ಚುವುದನ್ನು ಕಂಡಾಗ ಅವರ ಅಂಧಕಾರ ಕಳೆಯಲಿ ಎಂದು ಪ್ರಾರ್ಥಿಸೋಣ.

ಕಾಲ ಬದಲಾಗುತ್ತಿರುತ್ತದೆ, ಪೂಜಾರ್ಹರಾಗಿದ್ದ ಸುಭಾಶ್ಚಂದ್ರ ಬೋಸ್ ರನ್ನು ನಾವು ಜೀವಂತ ಇರುವಾಗಲೇ ಮುಗಿಸಿಬಿಟ್ಟಿದ್ದೆವು! ಕೇರಳದಲ್ಲಿ ರಾಜಕೀಯ ಸಭೆಗಳಲ್ಲಿ ದೀಪ ಬೆಳಗುವುದುದನ್ನು ಕೈಬಿಡಲಾಗಿದೆ!! ಯಾಕೆಂದರೆ ಅಲ್ಲಿನವರ ಪ್ರಕಾರ ಅವರಲ್ಲಿ ಅಂಧಕಾರ ಇಲ್ಲವೇ ಇಲ್ಲ!! ದೇಶದಲ್ಲಿ ಪರಮತೀಯರ ಬದ್ಧ ದ್ವೇಷಿಯಾಗಿ ಅನೇಕ ಸಾವಿರ ಜನರ ಮಾರಣಹೋಮ ನಡೆಸಿದ ಟಿಪ್ಪು ಜಯಂತಿಗೆ ಕರ್ನಾಟಕ ತಯಾರಿ ನಡೆಸಿದೆ. ವಿದ್ಯಮಾನಗಳನ್ನು ಗಮನಿಸಿದರೆ ಕರ್ನಾಟಕದಲ್ಲಿಯೂ ಅಂತಹ ತುಘಲಕ್ ದರ್ಬಾರ್ ನಡೆದರೆ ಆಶ್ಚರ್ಯವೇನೂ ಇಲ್ಲ.

ಈಗೀಗ ವಿದ್ಯುದ್ದೀಪ ಬಳಕೆಗೆ ಬಂದ ಮೇಲೆ ಎಣ್ಣೆಯ ದೀಪಗಳೂ ಕಡಿಮೆಯಾಗಿವೆ ಮತ್ತು ತುಪ್ಪದ ದೀಪಗಳಂತೂ ಅಪರೂಪ. ಆಕಾಶ ದೀಪವನ್ನು ಬಣ್ಣದ ಕಾಗದದ ಬುಟ್ಟಿಗಳಲ್ಲಿ ಬಿಂಬಿಸಲಾಗುತ್ತದೆ. ಸುಲಭವಾಗುತ್ತದೆ ಎಂದು ಮಾರುಕಟ್ಟೆಗಳಲ್ಲಿ ವಿವಿಧ ಆಕಾರ ಮತ್ತು ಬಣ್ಣಗಳಲ್ಲಿ ಸಿಗುವ ಕಾಗದ ಅಥವಾ ಪ್ಲಾಸ್ಟಿಕ್ ಹಾಳೆಗಳಿಂದ ತಯಾರಿಸಿದ ಬುಟ್ಟಿಗಳ ನಡುವೆ ವಿದ್ಯುತ್ ಬಲ್ಬ್ ಇಟ್ಟು ಅದನ್ನೇ ಆಕಾಶ ದೀಪವೆಂದು ಕರೆಯುತ್ತೇವಷ್ಟೆ; ಆದರೆ ಮೂಲದಲ್ಲಿ ಆಕಾಶ ದೀಪ ಎಂಬುದು ಎರವಲು ಪಡೆದ ಕ್ರಮವಲ್ಲ.

ಬನ್ನಂಜೆ ಗೋವಿಂದಾಚಾರ್ಯರು ಬೈಬಲ್ ಕುರಿತು ವ್ಯಾಖ್ಯಾನಿಸುವಾಗ ಬೈಬಲ್ ನಲ್ಲಿ ’ಯೋಗ’ ಶಬ್ದ ಪ್ರಯೋಗವಾಗಿದ್ದನ್ನು ಹುಡುಕಿ ಹೇಳಿದ್ದಾರೆ. ಹಾಗಾದರೆ ಯೋಗವೂ ಕ್ರಿಶ್ಚಿಯಾನಿಟಿಯಿಂದ ಹಿಂದೂಗಳಿಗೆ ಬಂದಿತೆನ್ನಲಾದೀತೇ? ಕ್ರಿಸ್ತ ಹುಟ್ಟುವುದಕ್ಕೂ ಸಹಸ್ರಮಾನಗಳ ಹಿಂದೆಯೇ ನಮ್ಮಲ್ಲಿ ಯೋಗವಿತ್ತು; ಅದರಂತೆಯೇ ದೀಪಗಳೂ ಮತ್ತು ಆಕಾಶ ದೀಪವೂ.

ಪಂಡಿತ್ ನರೇಂದ್ರ ಶರ್ಮ ’ಜ್ಯೋತಿ ಕಲಶ ಚಲಕೆ’ ಎಂಬ ಹಾಡನ್ನು ದೇವನಾಗರಿ ಲಿಪಿಯಲ್ಲಿ ಬರೆದರು. 1961ರಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ ಕರ್ ಅದನ್ನು ಹಾಡಿದರು.

ज्योति कलश छलके
हु‌ए गुलाबी, लाल सुनहरे
रंग दल बादल के
ज्योति कलश छलके

Translation-
An urn of (divine) light overflows.
Turned pink, red and golden
did the colors of clusters of clouds.
An urn of (divine) light overflows.

घर आंगन वन उपवन उपवन
करती ज्योति अमृत से सींचन
मंगल घट ढल के
ज्योति कलश छलके

Translation-
Home, courtyard, garden, garden
(Divine) light irrigates them with nectar
Goodness poured from sacred pot everywhere
An urn of (divine) light overflows

पात पात बिरवा हरियाला
धरती का मुख हु‌आ उजाला
सच सपने कल के
ज्योति कलश छलके

Translation-
Leaves and branches are green
The face of the earth is radiant
The dreams of tomorrow are true
An urn of (divine) light overflows

ऊषा ने आँचल फैलाया
फैली सुख की शीतल छाया
नीचे आँचल के
ज्योति कलश छलके

Translation-
Dawn has spread a gossamery sheet,
Spreading cool shades of happiness.
Beneath the gossamery sheet,
An urn of (divine) light overflows.

ज्योति यशोदा धरती मैय्या
नील गगन गोपाल कन्हैय्या
श्यामल छवि झलके
ज्योति कलश छलके

Translation-
Light Yashoda Earth Mother
Blue skies Gopal Krishna
Glimpses of Krishna’s image (everywhere)
An urn of (divine) light overflows.

अम्बर कुमकुम कण बरसाये
फूल पँखुड़ियों पर मुस्काये
बिन्दु तुहिन जल के
ज्योति कलश छलके

Translation-
The sky pours specks of saffron
Smiles on flowers and petals
Dew, dots of water
An urn of (divine) light overflows.

ಹಿಂದಿನ ಸಿನಿಮಾ ಗೀತರಚನೆಕಾರರಲ್ಲೂ ಸಹ ಅಧ್ಯಯನ ಶೀಲತೆ ಇರುತ್ತಿತ್ತು; ಅವರ ಗೀತೆಗಳಲ್ಲಿ ಪ್ರಜ್ಞಾವಂತಿಕೆಯನ್ನು, ಜೀವಂತಿಕೆಯನ್ನು ಕಾಣಬಹುದಿತ್ತು. ಇಂದು ಪರಿಸ್ಥಿತಿ ಬದಲಾಗಿದೆ; ಹಳೆ ಪಾತ್ರೆ, ಹಳೇ ಸಾಮಾನು, ಖಾಲಿ ಬಾಟ್ಲಿ ಇಂಥದ್ದನ್ನೆಲ್ಲ ಸುರುವಿಕೊಂಡು ಜನರಿಗೆ ತಾತ್ಕಾಲಿಕ ಜಾಮೂನು ತಿನ್ನಿಸುವ ಗೀತರಚನೆಕಾರರು ಹುಟ್ಟಿಕೊಂಡಿದ್ದಾರೆ. ಅವರ ಹಾಡುಗಳೂ ಹಾಗೇ; ಅವರ ಕೇಳುಗರೂ ಹಾಗೇ.

ಮನುಷ್ಯ ವಿಕಸನ ವಾದದ ಬೆನ್ನುಹತ್ತಬೇಕು. ನಮ್ಮ ಪರಿಜ್ಞಾನವನ್ನು ಮಿತಿಗೊಳಿಸಿಕೊಂಡರೆ ಮೂಲಮಾಹಿತಿಯಿಂದ ನಮ್ಮನ್ನೆ ನಾವು ವಂಚಿಸಿಕೊಂಡಂತಾಗುತ್ತದೆ. ಶಂಕರರ ಹೇಳಿಕೆಗಳ ಅರ್ಥವನ್ನು ಗ್ರಹಿಸಲಾಗದ ಕೆಲವರು ಅನ್ಯ ಮಾರ್ಗಗಳನ್ನು ಹುಡುಕಲು ಯತ್ನಿಸಿದರು. ಎಲ್ಲೇ ಮನೆಯನ್ನು ಕಟ್ಟಿದರೂ ಮನೆಯಿರೋದು ಭೂಮಿಯಮೇಲೆಯೇ ತಾನೇ? ಶಂಕರರು ’ಅದ್ವೈತ’ವೆಂಬ ಭೂಮಿಯನ್ನು ಎತ್ತಿ ತೋರಿಸಿದರು; ಆಳವಾದ ಮತ್ತು ಗಹನವಾದ, ಪೂರ್ವಾಗ್ರಹ ರಹಿತ ಅಧ್ಯಯನಕ್ಕೆ ಇಳಿಯಲಾರದ ಕೆಲವರು ಬೇರೆ ಬೇರೆ ಹೆಸರುಗಳಲ್ಲಿ ಅಲ್ಲಿ ಸೈಟು, ಮನೆ ಮಾಡಿಕೊಂಡರು!

ಶಂಕರ ಪರಂಪರೆ ಎಂದು ಹೇಳಿಕೊಳ್ಳುವ ಕಚ್ಚೆಹರುಕನ ಪರಿಸ್ಥಿತಿ ನೋಡಿ-ಈಗ ಈ ಕಳ್ಳರಾಮನಲ್ಲಿ ಶಕ್ತಿಯಿಲ್ಲ; ವಿಗ್ರಹಗಳಲ್ಲಿ, ಪ್ರತಿಮೆಗಳಲ್ಲಿ ಮಾತ್ರ ಬಹಳ ಶಕ್ತಿಯಿದೆ ಎಂದು ಹಲುಬುತ್ತ ಜನರನ್ನು ತನ್ನೆಡೆಗೆ ಕರೆಯುತ್ತಿದ್ದಾನೆ. ವಾಸ್ತವವಾಗಿ ಯತಿ ಪೂಜಿತ ದೇವ ವಿಗ್ರಹಗಳನ್ನು ಹಾಗೆಲ್ಲ ಜನರಿಗೆ ಮನಸ್ಸು ಬಂದಂತೆ ಎತ್ತಿ ತೋರಿಸುವ ಪರಿಪಾಟ ಇರೋದಿಲ್ಲ. ಅದಕ್ಕೆಲ್ಲ ಒಂದಷ್ಟು ನಿಯಮಾವಳಿಗಳಿವೆ; ಇವನದ್ದು ಹಾಗಲ್ಲ ಕಂಡಲ್ಲೆಲ್ಲ ಅವುಗಳನ್ನು ತೆಗೆದು ತೋರಿಸುತ್ತ ತನ್ನ ಯೋಜನೆಗಳ ಬಗ್ಗೆ ಹಲುಬುತ್ತ ಬೆಂಬಲಿಸುವಂತೆ ಕೇಳಬೇಕಾಗಿದೆ.

“ನಿಮಗೆ ಇನ್ನು ಮುಂದೆ ನಮ್ಮ ಆಶೀರ್ವಾದದ ಅಗತ್ಯವಿದೆ. ನಿಮ್ಮ ಬೆಳವಣಿಗೆಗೆ ಅದು ಸಹಕಾರಿಯಾಗಲಿ” ಎಂದು ತನ್ನ ಬಗ್ಗೆ ತಾನೇ ಕೊಚ್ಚಿಕೊಳ್ಳತೊಡಗಿದ ’ಮಹಾತಪಸ್ವಿಗಳು’ ಯಾವ ಬೀದಿ ಬಾವಾಜಿಗೂ ಕಡಿಮೆಯಿಲ್ಲ! ನಿಜಹೇಳಬೇಕೆಂದರೆ ಈಗ ಬೇರೆ ಯಾರಿಗೂ ಅವನ ಆಶೀರ್ವಾದ ಬೇಕಾಗಿಲ್ಲ; ಅವನಿಗೆ ಜನರ ಆಶೀರ್ವಾದ ಬೇಕಾಗಿದೆ ಏಕೆಂದರೆ ಕಚ್ಚೆಹರುಕನ ಹಾದರದ ಕೇಸುಗಳನ್ನು ಮುಚ್ಚಿಹಾಕಿ ಬಚಾವಾಗಬೇಕಲ್ಲ?

ಸಾಲದ್ದಕ್ಕೆ “ಅಪ್ಪಣೆ ಕೊಡಬೇಕು” ಅನ್ನೋ ಖಾಸಾ ಭಕ್ತ ಬೇರೆ ಕೇಡು. ’ಮಹಾತಪಸ್ವಿಗಳು’ ಅಪ್ಪಣೆ ಕೊಟ್ಟು ಕೊಟ್ಟು ಪಾಪ ಇಂದು ಕೋರ್ಟ್ ನಿಂದ ಏನಪ್ಪಣೆಯಾಗುತ್ತದೆ ಎಂದು ಕಾಯುವ ಸ್ಥಿತಿಯನ್ನು ತಲುಪಿದ್ದಾರೆ ಅಂತ ಅವನಿಗೆ ಗೊತ್ತಿಲ್ಲವೇ?

ಭೈರಪ್ಪನವರು ಈ ಮಠದಲ್ಲಿ ಒಂದಷ್ಟು ಕಾಲ ತಂಗಬೇಕಿತ್ತು. ಅವರಿಗೆ ಎಲ್ಲೆಲ್ಲೂ ಮುಕ್ತ ಪ್ರವೇಶ ಮತ್ತು ಸಂಪೂರ್ಣ ಸ್ವಾತಂತ್ರ್ಯವಿರಬೇಕಿತ್ತು. ಆಗ ಮಠದ ಹೋರಿಯ ಕಥೆಯನ್ನು ಹೊಸ ಕಾದಂಬರಿಗೆ ಬಳಸಿಕೊಳ್ಳುತ್ತಿದ್ದರು; ತನ್ಮೂಲಕ ಸಮಾಜದಲ್ಲಿ ಕಣ್ಣಿದ್ದೂ ಕುರುಡರಾದವರನ್ನು ಎಚ್ಚರಿಸುತ್ತಿದ್ದರು.

ಭೈರಪ್ಪನವರಂಥವರಿಗೆ ಅಲ್ಲಿ ಅವಕಾಶವಿಲ್ಲ; ಇದ್ದರೂ ತೊನೆಯಪ್ಪನ ಅರಗಿಣಿಗಳ ಏಕಾಂತವಾಸದ ಅಂತಃಪುರ ಕಾಣಿಸಲು ಸಾಧ್ಯವೇ ಇಲ್ಲ!! ಇಂಥ ಕಳ್ಳಸ್ವಾಮಿಯನ್ನು ಬಗ್ಗು ಬಡಿಯಲು ಭೈರಪ್ಪನವರಂತಹ ಮಹಾನ್ ಸಾಹಿತಿಗಳೂ ಸಹ ಅನೇಕ ಜನ್ಮಗಳಲ್ಲಿ ಸಂಶೋಧನಾ ನಿರತರಾಗಬೇಕಾದೀತು!! ಯಾಕೆಂದರೆ ತೊನೆಯಪ್ಪನವರ ಖಾಸಾಗೃಹದ ಜಾಡು ಸಿಗೋದಕ್ಕೇ ಒಂದು ಜನ್ಮ ಕಳೆದುಹೋಗುತ್ತದೆ!

ಅದೆಲ್ಲ ಹಾಗಿರಲಿ, ಸದ್ಯ ನಿಮಗೆಲ್ಲ ದೀಪಾವಳಿಯ ನಂತರದಲ್ಲಿ ದೀಪಾವಳಿಯ ಹಾರ್ದಿಕ ಶುಭಾಶಯಗಳು.

Thumari Ramachandra

source: https://www.facebook.com/groups/1499395003680065/permalink/1854131601539735/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s