ನಾರುವಿಕೆ ಹಾರುವಿಕೆಯೊಟ್ಟಿಗಿರಲೆಂದ ಕಾಣೆಮೀನಪ್ಪ ಸಲಹೆಗಾರ

ನಾರುವಿಕೆ ಹಾರುವಿಕೆಯೊಟ್ಟಿಗಿರಲೆಂದ ಕಾಣೆಮೀನಪ್ಪ ಸಲಹೆಗಾರ

ಎಲ್ಲಿಂದ ಆರಂಭಿಸಲಿ ಮತ್ತು ಎಲ್ಲಿಂದ ಮುಗಿಸಲಿ ಎಂಬುದು ಹಲವು ಕತೆಗಾರರ ಸಮಸ್ಯೆ. ತುಮರಿಯ ಸಮಸ್ಯೆ ಅದಕ್ಕೆ ಭಿನ್ನವಾಗೇನೂ ಇಲ್ಲ. ಬಿಡಿ ಅತ್ಲಾತೆ, ನಮ್ಮ ಹೋರಿಸ್ವಾಮ್ಗಳಿಂದ್ಲೇ ಆರಂಭಿಸಿಬಿಡೋಣ.

ಗುಮ್ಮಣ್ಣ ಹೆಗಡೇರು ಗುಪ್ತಚಿತ್ರನನ್ನು ಸಂದರ್ಶನ ಮಾಡಿ ಎರಡು ತಾಜಾ ಸುದ್ದಿಗಳನ್ನು ತಂದಿದ್ದಾರೆ-

ಮೊದಲನೇದು-ಚತುರ್ಮೋಸದ ಸಮಯದಲ್ಲಿ ಪ್ರಶಸ್ತಿ ಮತ್ತು ಬಣ್ಣದ ಅಕ್ಕಿ ಪಡೆದುಹೋದ ರಾಂಗ್ ವೇಷದ ಪರಮ ಭಕ್ತನೊಬ್ಬ ಬೈಕ್ ಅಪಘಾತದಲ್ಲಿ ತಲೆ ಒಡೆದುಕೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಬಹಳ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನಂತೆ! ಪ್ರಶಸ್ತಿ ಪಡೆದದ್ದರ ಅಡ್ಡಪರಿಣಾಮವೇ ಇರಬೇಕು!

ಎರಡನೇದು-ಸ್ತ್ರೀಕುಮಾರನ ಬಸ್ಸೊಂದು ತುಮಕೂರಿನಲ್ಲಿ ನಿಂತಿದ್ದ ಲಾರಿಗೆ ಗುದ್ದಿಕೊಂಡು ಚಾಲಕ ಸ್ಪಾಟ್ ಔಟ್ ಆಗಿದ್ದಾನಂತೆ. ಬಸ್ಸಿನಲ್ಲಿದ್ದ 28-30 ಮಂದಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರಂತೆ! ಎಲ್ಲರಿಗೂ ಬಣ್ಣದ ಅಕ್ಕಿಯ ಅನುಗ್ರಹವೇ ಆಗಿರಬೇಕು.

ಅಂದಹಾಗೆ ಇವೆರಡೂ ಘಟನೆಗಳು ರಾಂಗಾನುಗ್ರಹ-ಭಾಗ3ರಲ್ಲಿ ದಾಖಲೆಗೊಳ್ಳಬೇಕು ಎಂಬುದು ಗುಪ್ತಚಿತ್ರನ ಬಯಕೆಯಂತೆ. ಹಾಗಂತ ಬಿಸಿಮಸಾಲೆಯ ಗುಮ್ಮಣ್ಣ ಹೆಗಡೇರು ಹೇಳಿದ್ದಾರೆ.

’ಮಹಾಸ್ವಾಮಿಗಳು’ ಪಕ್ಷ ಬಲವರ್ಧನೆಗಾಗಿ ಹಸುವಿನ ಹೆಸರಿನಲ್ಲಿ ತಿರುಬೋಕಿ ನಾಯಿಯಂತೆ ಅಲೆಯುತ್ತಿರೋದು ಮತ್ತು ಅಲ್ಲೆಲ್ಲ ಆಣೆ-ಪ್ರಮಾಣಗಳನ್ನು ಮಾಡಿಸಿಕೊಳ್ಳುತ್ತಿರೋದು ನಿಮಗೆಲ್ಲ ಗೊತ್ತಿರದ ವಿಷಯವೇನಲ್ಲವಲ್ಲ? ಒಂದು ಕಾಲು ಶಿಖರನಗರದಲ್ಲಿ ಇನ್ನೊಂದು ಕಾಲು ಇನ್ನಾವುದೋ ಊರಲ್ಲಿ ಇಟ್ಟುಕೊಂಡು ಬಿಡುಬೀಸಾಗಿ ಓಡುತ್ತಲಿದೆ ಸವಾರಿ.

ಹಳ್ಳಿಗಳಲ್ಲಿ ಗುರಿಕಾರರು ಎಂಬ ವರ್ಗ ಬ್ರಿಟಿಷ್ ಕಾಲದಂತೆ ಮನೆಮನೆಗೆ ಡಬ್ಬಿ ಕೊಡುತ್ತ, ಮಠದ ಸ್ವಾಮಿಗಳಿಗೆ ಕಾಣಿಕೆ ಎತ್ತಿಡಿ, ಅಕ್ಕಿ ಎತ್ತಿಡಿ ಎಂದು ತಾಕೀತು ಮಾಡುತ್ತಿದ್ದಾರಂತೆ. ಗ್ರಾಮಗಳಲ್ಲಿ ಕೆಲವು ದಂಡುಗಳನ್ನು ಕಟ್ಟಿಕೊಂಡು ಮನೆಮನೆಗೆ ಭೇಟಿ ನೀಡಿ ಹೊಸದಾಗಿ ವಸೂಲಿಗೆ ತೊಡಗಿದ್ದಾರೆ ಎಂಬ ಅಧಿಕೃತ ವಾರ್ತೆಯೂ ಬಂದಿದೆ. ಪಾಪ ’ಮಹಾಸ್ವಾಮಿಗಳ’ ಸಮಾಜಮುಖಿ ಕಾರ್ಯಕ್ರಮ ಅಂದರೆ ಏಕಾಂತ, ಕನ್ಯಾಸಂಸ್ಕಾರ ಮೊದಲಾದ ಕಾರ್ಯಗಳ ಖರ್ಚಿಗೆ ಬೇಕಲ್ಲ? ಎಲ್ಲಕ್ಕಿಂತ ಹೆಚ್ಚಾಗಿ ಕಚ್ಚೆಕೇಸುಗಳನ್ನು ಮುಚ್ಚಲಿಕ್ಕೆ ಬೇಕಲ್ಲ? ಕೊಡುವವರು ಕೊಡ್ತಾರೆ ಬಿಡಿ, ಅದು ಅವರವರ ಹಣೆಬರಹ. ಕೆಲವರಂತೂ ಮನೆಗ ಬಂದ ದಂಡನ್ನು ಡಬ್ಬಿಗಳ ಸಮೇತ ಅಟ್ಟಿಸಿ ಓಡಿಸಿದ್ದಾರಂತೆ. ಈ ಬೆಳವಣಿಗೆಯ ಚಿತ್ರಣ ತುಮರಿಗೆ ಬಹಳ ನಗು ತಂತು. 🙂 🙂

ಕಳ್ಳ-ಕುಳ್ಳರ ಭಲೇ ಜೋಡಿ ಭಾವಚಿತ್ರ ಬಹಳ ಕಲರ್ ಫುಲ್ ಆಗಿದೆ; ಎರಡೂ ಜೀವಗಳೂ ಅದೆಷ್ಟು ದೇಹಗಳನ್ನು ಆಕ್ರಮಿಸಿ ತೆಕ್ಕೆಹಾಕಿ ಮೋಕ್ಷಕ್ಕಾಗಿ ಹಂಬಲಿಸಿದವೋ ಶ್ರೀರಾಮಚಂದ್ರನೇ ಬಲ್ಲ. ಇನ್ನೂ ಅದೆಷ್ಟು ಹುಡುಗಿಯರು ಮತ್ತು ಹೆಂಗಸರ ಶೀಲಹರಣ ಆಗಬೇಕೋ ಗೊತ್ತಿಲ್ಲ.

ಸಮಸ್ಯೆ ನೋಡಿ, ಇಂಥವರ ಕಾಲದಲ್ಲಿ ನಾರುವಿಕೆ ಹಾರುವಿಕೆಯೊಟ್ಟಿಗೆ ಇರಬೇಕು ಎಂದು ಕಾಣೆಮೀನಪ್ಪ ಸಭೆ ಸಮಾರಂಭ ನಡೆಸುತ್ತಿದ್ದಾನೆ. ಅವನ ’ಚರಿತ್ರೆ’ಗಳನ್ನು ಕುರಿತು ಅಸಂಖ್ಯ ಜನ ಇಡೀ ಸಾಮಾಜಿಕ ತಾಣಗಳಲ್ಲೆಲ್ಲ ಸಿಕ್ಕ ಸಿಕ್ಕಲ್ಲಿ ವಿವರಿಸಿ ಛೀ ಥೂ ಎಂದು ಉಗುಳಿದ್ದಾರೆ.

ಓದುಪ ಚಪಲದ ತುಮರಿಗೆ ಹಿಂದೆಲ್ಲೋ ಓದಿದ ಕತೆಯೊಂದು ನೆನಪಿಗೆ ಬಂತು. ಯಾವುದೋ ರಾಜ್ಯದಲ್ಲಿ ರಾಜ-ರಾಣಿ ಉದ್ಯಾನಕ್ಕೆ ತೆರಳಿದ್ದರಂತೆ. ಮತಿಹೀನ ಮಹಾರಾಜರು ಉದ್ಯಾನದ ಕಡೆಗೆ ಬಿಜಯಂಗೈದರು ಅಂತಾಯ್ತು. ಆ ರಾಜ್ಯದಲ್ಲಿ ಉದ್ಯಾನದ ಕಾವಲುಗಾರ ಹುದ್ದೆಯನ್ನು ಮತಿಹೀನ ಮಹಾರಾಜರು ಕಪಿಯೊಂದಕ್ಕೆ ನೀಡಿದ್ದರಂತೆ.

ರಾಜ-ರಾಣಿ ಉದ್ಯಾನಕ್ಕೆ ಬಂದುದನ್ನು ನೋಡಿ ಕಪಿ ಮಹಾಶಯ ಬಹಳ ಆನಂದದಿಂದ ಸ್ವಾಗತಿಸಿತು. ಹೇಳಿಕೇಳಿ ಅದು ಉದ್ಯಾನ; ಜನ ಅಲ್ಲಿಗೆ ಬರೋದು ವಿಶ್ರಾಂತಿಗಾಗಿ. ಹಾಗೆಯೇ ರಾಜ-ರಾಣಿಯರು ಅಲ್ಲಿಗೆ ಬಂದದ್ದೂ ಅದಕ್ಕೇ. ರಾಜ-ರಾಣಿಯರು ಉದ್ಯಾನದಲ್ಲಿ ಸ್ವಲ್ಪ ಹೊತ್ತು ವಿಹರಿಸಿ ನಂತರ ಒಂದೆಡೆ ವಿಶ್ರಾಂತಿಗಾಗಿ ಕುಳಿತಾಗ ಅವರಿಗೆ ನಿದ್ದೆ ಆವರಿಸಿತು.

ನಿದ್ದೆ ಮಾಡುತ್ತಿದ್ದ ಮಹಾರಾಜನ ಮುಖ ಮೇಲೆ ಒಂದು ನೊಣ ಕುಳಿತು ಅತ್ತಿಂದಿತ್ತ ಹಾರುತೊಡಗಿತಂತೆ. ರಾಜ-ರಾಣಿಯರ ರಕ್ಷಣೆಯ ಉಸ್ತುವಾರಿ ಸದ್ಯ ವನಪಾಲಕರಾದ ಕಪಿ ಮಹಾಶಯರದ್ದಾಗಿತ್ತಲ್ಲ? ಕಪಿಮಹಾಶಯರು ಖಡ್ಗ ಹಿಡಿದು ಉದ್ಯಾನದ ಉದ್ದಗಲಕ್ಕೂ ಸುತ್ತುತ್ತ ಕಾವಲು ಕಾಯುತ್ತಿದ್ದವರು ಅಚಾನಕ್ಕಾಗಿ ರಾಜ-ರಾಣಿಯರು ವಿಶ್ರಮಿಸಿಕೊಳ್ಳುತ್ತಿರುವ ಕಡೆಗೆ ಬಂದಿದ್ದಾರೆ.

ನೋಡುತ್ತಾರೆ, ಅರಿಭಯಂಕರ ಮಹಾರಾಜರ ಮುಖದ ಮೇಲೆ ಪುಟ್ಟ ನೊಣ ಅಟ್ಟಹಾಸದಿಂದ ನೆಗೆದಾಡುತ್ತಿದೆ. ವನರಕ್ಷಕ ಕಪೀಶರಿಗೆ ಅಸಾಧ್ಯ ಕೋಪ ಬಂತು. ಕೈಯಲ್ಲಿದ್ದ ಖಡ್ಗದಿಂದ ನೊಣವನ್ನು ಕತ್ತರಿಸಿಯೇಬಿಟ್ಟರು! ತೋಂದರೆಯಾಗಿದ್ದೆಲ್ಲೆಂದರೆ, ಮತಿಹೀನ ಮಹಾರಾಜನ ಮುಖದ ಮೇಲೆ ನೊಣ ಕುಳಿತಾಗ ಖಡ್ಗದ ಹೊಡೆತ ಬಿದ್ದಿದ್ದರಿಂದ ನೊಣ ಹಾರಿಹೋಯ್ತು, ರಾಜ ಕೈಲಾಸ ಕಂಡ!

ಅದಾವುದೋ ರಾಜ್ಯದದಲ್ಲಿ ಚೊದ್ದಣ್ಣನೆಂಬವನ ಆಡಳಿತವಂತೆ. ಚೊದ್ದಣ್ಣ ’ಮಹಾರಾಜ’ರು ಸಾರ್ವಜನಿಕರಿಗೆ ಏನು ಹೇಳಬೇಕು, ಏನು ಬಿಡಬೇಕು ಎಂದು ಸಲಹೆ ನೀಡೋದಕ್ಕೆ ಮೇಲೆ ಹೇಳಿದ ಕಪಿಯ ಬುದ್ಧಿಮಟ್ಟದ ಕಾಣೆಮೀನಪ್ಪನನ್ನು ಸಲಹೆಗಾರನನ್ನಾಗಿ ನೇಮಿಸಿಕೊಂಡಿದ್ದಾರಂತೆ. ಕಾಣೆಮೀನಪ್ಪನಿಗೆ ಬಲೆ ಕೊಟ್ಟು ಸಮುದ್ರಕ್ಕೆ ಬಿಟ್ಟರೆ ಸ್ವಲ್ಪ ತಲೆ ಓಡೀತೇ ವಿನಃ ಆಡಳಿತದ ಬಗ್ಗೆ, ಸಾರ್ವಜನಿಕ ಸಂಪರ್ಕದ ಬಗ್ಗೆ ಅವನಲ್ಲಿ ಸಲಹೆ ಕೇಳೋದು ಕಪೀಶನನ್ನು ಕಾವಲಿಗೆ ಬಿಟ್ಟುಕೊಂಡಂತೆ ಎಂದು ಆ ರಾಜ್ಯದ ಜನ ತೀರ್ಮಾನಿಸಿಬಿಟ್ಟಿದ್ದಾರಂತೆ.

ಕಾಣೆಮೀನಪ್ಪನಿಗೆ ಅಧಿಕಾರ ಸಿಕ್ಕಿದ್ದೇ ಒಂದು ಚೋದ್ಯವಂತೆ. ಸಿಕ್ಕಿದ ಅಧಿಕಾರವನ್ನು ಹೇಗೆಲ್ಲ ದುರುಪಯೋಗಮಾಡಿಕೊಳ್ಳಬಹುದೋ ಅಷ್ಟೂ ದುರುಪಯೋಗ ಮಾಡಿಕೊಳ್ಳುತ್ತಿದ್ದಾನಂತೆ.

ಕವಳದ ಗೋಪಣ್ಣ ಮೊನ್ನೆ ಹೇಳುತ್ತಿದ್ದದ್ದು ನೆನಪಿಗೆ ಬಂತು. ತಿಂಗಳು ಗಟ್ಟಲೆ ಸ್ನಾನ ಮಾಡದೆ, ಹಲ್ಲುಜ್ಜದೆ, ಅಂಡು ತೊಳೆಯದೆ ಇರುವುದಕ್ಕೂ ನಿತ್ಯ ಸ್ನಾನಾದಿ ನೈಮಿತ್ತಿಕಗಳಿಂದ ಸ್ವಚ್ಛತೆ ಕಾಯ್ದುಕೊಳ್ಳುವುದಕ್ಕೂ ಬಹಳ ವೈಜ್ಞಾನಿಕ ಮಹತ್ವವಿದೆ. ಕುಡಿದವನ ಕಣ್ಣಿಗೆ ಒಂದೇ ದೃಶ್ಯ ಎರಡೆರಡಾಗಿ ಅಥವಾ ಹಲವಾಗಿ, ಏಕ ಅನೇಕವಾಗಿ ತೋರುವುದಂತೆ. ಅಂತಹ ಸಂಸ್ಕಾರಗಳಲ್ಲೆ ಅರಳಿದ ನಾರುವಿಕೆ ಸ್ವಚ್ಛವಿಲ್ಲವೆಂದು ದೂರ ವಿರುವ ಸಲುವಾಗಿ, ಹಾರುವಿಕೆ ಬಯಸುವುದರೊಟ್ಟಿಗೆ ಕೂರುತ್ತೇನೆ ಅಂದರೆ ಸಹ್ಯವಾಗಬಹುದೇ?

ಕಾಣೆಮೀನಪ್ಪ ಸಲಹೆಗಾರರ ಪ್ರಬಲ ಸಮಸ್ಯೆಯೇ ಅದು. ಹಿಂದೆ ನಾನೊಂದು ಕತೆಯನ್ನು ಹೇಳಿದ್ದು ನಿಮಗೆಲ್ಲ ನೆನಪಿದ್ದಿರಲು ಸಾಕು. ಮೀನು ಮಾರುವ ಹೆಂಗಸರು ಮತ್ತು ಮಲ್ಲಿಗೆಯ ನರುಗಂಪು ಸೂಸುತ್ತಿದ್ದ ಜಾಗದ ಕತೆ. ಅದು ಕತೆಯಲ್ಲ ಘಟನೆ ಎಂದು ಯಾರೋ ಹೇಳಿದರು. ರಾತ್ರಿ ಮಲ್ಲಿಗೆಯ ಘಮದಲ್ಲಿ ಅವರಿಗೆ ನಿದ್ದೆ ಬಾರದಾದಾಗ ಸತ್ತಮೀನಿನ ನಾತವುಳ್ಳ ಖಾಲಿ ಬುಟ್ಟಿಗಳನ್ನು ಮುಖದ ಮೇಲೆ ಬೋರಲು ಹಾಕಿ, ಪರಮಾನಂದತುಂದಿಲರಾಗಿ ಗಾಢವಾಗಿ ನಿದ್ರಿಸಿದರಂತೆ, ಪಾಪ.

ಮಲ್ಲಿಗೆಯ ಸುಗಂಧಕ್ಕೂ ಸತ್ತ ಮೀನಿನ ದುರ್ಗಂಧಕ್ಕೂ ವೈಜ್ಞಾನಿಕವಾಗಿ ಬಹಳ ಅಂತರವಿದೆ. ಯಾವುದೇ ಜೀವಿಯ ಸತ್ತ ಶರೀರ ಕೊಳೆಯತೊಡಗಿದಾಗ ಹುಟ್ಟಿಕೊಳ್ಳುವ ಕೆಟ್ಟ ಬ್ಯಾಕ್ಟೀರಿಯಗಳಿಂದ ಅಂತಹ ದುರ್ಗಂಧ ಹರಡಿಕೊಳ್ಳುವುದಂತೆ. ಸುಗಂಧವಿರುವಲ್ಲಿ ಜಿರಲೆ, ನೊಣ, ಸೊಳ್ಳೆ, ತಿಗಣೆ ಇತ್ಯಾದಿ ಕೀಟ-ಕೀಟಾಣುಗಳ ಉಪದ್ರವ ಕಡಿಮೆ ಇರುತ್ತದೆ. ಗಲೀಜು ಇರುವಲ್ಲೆ ಅವೆಲ್ಲ ಮನೆಮಾಡುತ್ತವೆ.

ವೈಜ್ಞಾನಿಕವಾಗಿ ಬಹಳ ಮುಂದುವರಿದ ಮನುಷ್ಯನಿಗೆ ಇಂದು ಸತ್ತ ಅಥವಾ ಕೊಂದ ಪ್ರಾಣಿಗಳೆ ಆಹಾರವಾಗಬೇಕೆಂದಿಲ್ಲ. ಪ್ರಾಣಿಗಳಿಗಿಂತ ಭಿನ್ನವಾದ ಮತ್ತು ಕಡಿಮೆ ದರ್ಜೆಯ ಮೆದುಳನ್ನೋ ಅಥವಾ ಸೀಮಿತ ದಿನಗಳ ಬದುಕನ್ನೋ ಹೊಂದಿದ ಸಸ್ಯಮೂಲಗಳಿವೆ. ಅವುಗಳನ್ನು ಬಳಸಿ ಬದುಕಬಹುದು. ಸತ್ತ ಪ್ರಾಣಿಗಳ ಶರೀರದಲ್ಲಿ ಅಸಾಧ್ಯ ಮೀಥೇನ್ ಬಿಡುಗಡೆಯಾಗುವುದಂತೆ. ಇನ್ನೂ ಹಲವು ಮಾರಕ ರಾಸಾಯನಿಕಗಳಿರುವ ಅವುಗಳ ಹೆಣವನ್ನು ತಿನ್ನುತ್ತೇನೆ ಎನ್ನುವವರಿಗೆ 365 x 24 ಆಹಾರದ್ದೇ ಚಿಂತೆ.

“ಅದು ನಮ್ಮ ಆಹಾರ, ಇದು ನಮ್ಮ ಆಹಾರ; ಅದು ನಮ್ಮ ಹಕ್ಕು” ಎಂಬುದೇ ಇಡೀ ದಿನದ ವರಾತ. ಹೌದಪ್ಪಾ ಅದು ನಿಮ್ಮ ಆಹಾರ, ನಿಮ್ಮ ಹಕ್ಕು, ನಿಮಗೆ ಹೇಗೆ ಹಕ್ಕಿದೆಯೋ ಅದನ್ನು ತಿನ್ನದ ಜನರಿಗೂ ಅವರದ್ದೇ ಆದ ಮಾನವ ಹಕ್ಕುಗಳಿದೆಯೆಲ್ಲವೇ? ಅವರಿಗೆ ಬೇಡವಾದದ್ದನ್ನು ಬಲವಂತವಾಗಿ ಹೇರುವ ಕಾರ್ಯ ಸರಿಯೇ?

ಆಹಾರ ಮತ್ತು ಭಾಷೆಯಿಂದ ಮನುಷ್ಯನ ಸಖ್ಯ ಹೆಚ್ಚುವುದಂತೆ. ಕಾಣೆಮೀನನ್ನು ತಿನ್ನುವವರೊಟ್ಟಿಗೆ ಊಟಕ್ಕೆ ಹೋದರೆ, ಅವನ ಊಟದ ಬಗ್ಗೆ ಕುತೂಹಲ ಬೆಳೆಸಿಕೊಂಡು, ಮೂರನೆ ದಿನ ತಿನ್ನದವನೂ “ಹೇಗಿರುತ್ತೋ? ಚೆನ್ನಾಗಿರುತ್ತಿರಬೇಕು, ಯಾರಿಗೂ ತಿಳಿಯದ ಹಾಗೆ ಒಮ್ಮೆ ನೋಡಬೇಕಿತ್ತು” ಎಂಬ ತೀರ್ಮಾನಕ್ಕೆ ಬರಬಹುದು, ಬರ್ತಾರೆ; ಹಾಗಾಗೇ ಇಂದು ಅಂಥವರನ್ನು ನಾವು ಅಲ್ಲಲ್ಲಿ ಕಾಣ್ತಾನೇ ಇರ್ತೇವೆ. ಪಶ್ಚಿಮ ಬಂಗಾಲದಲ್ಲಿ ಅದೇ ರೀತಿ ಆಗಿ, ಅಲ್ಲಿ ಮೀನು ತಿನ್ನದವರು ಸಿಗೋದೇ ದುರ್ಲಭ!

ಹಾಗಂತ ಜೊತೆಗೆ ಕೂತರೂ ಅದನ್ನು ನಿಗ್ರಹಿಸಿಕೊಳ್ಳಬಲ್ಲವರು ಆಗಲೇ ಹಾಗೆ ಮಾಡುತ್ತಿದ್ದಾರಲ್ಲ? ಅದು ಕಾಣೆಮೀನಪ್ಪನಿಗೆ ಇನ್ನೂ ಕಾಣಲಿಲ್ಲವೇ?

ಸನ್ಯಾಸಾಶ್ರಮದಿಂದ ಗೃಹಸ್ಥಾಶ್ರಮಕ್ಕೆ ಡಿಮೋಶನ್ ಆಗೋದು ಸುಲಭ; ಅದೇ ಸನ್ಯಾಸಾಶ್ರಮವನ್ನು ಅನುಸರಿಸೋದು ಕಷ್ಟ. ಹಲವು ರಾಸಾಯನಿಕಗಳಿರುವ ಮಾಂಸಾಹಾರ ವ್ಯಕ್ತಿಯನ್ನು ವಿರಾಗಿಯನ್ನಾಗಲು ಬಿಡದೆ ಸದಾ ರಾಗ-ದ್ವೇಷಗಳತ್ತ ಸೆಳೆಯುತ್ತದೆ. ಹುಲಿ-ಸಿಂಹಗಳಿಗಿರುವ ರೋಷ, ಕ್ರೂರ-ಕಠೋರ ಭಾವನೆ, ಜಿಂಕೆ-ಕಡವೆ-ಸಾರಂಗಗಳಲ್ಲಿ ಇರೋದಿಲ್ಲ. ಮಹಾಬಲಾಢ್ಯವೆನಿಸಿದ ಆನೆ ಕೂಡ ಅಷ್ಟು ಕ್ರೂರಿಯಲ್ಲ; ತನ್ನ ಉಳಿವಿಗಾಗಿ, ತನ್ನವರಿಗೆ ಧಕ್ಕೆಯಾಗುತ್ತದೆಂಬ ಅಂಜಿಕೆಯಿಂದ ದಾಳಿ ನಡೆಸಿದ್ದಿರಬಹುದಷ್ಟೆ.

ಈರುಳ್ಳಿ ಉಪ್ಪಿಟ್ಟು ತಿನ್ನೋದು ಸುಲಭ. ಬೆಳ್ಳುಳ್ಳಿ ಚಟ್ನಿ ಹಚ್ಚಿದ ಮಸಾಲೆದೋಸೆ ತಿನ್ನೋದು ರುಚಿಕರ; ಅವುಗಳನ್ನು ತಿಂದಾಗಲೂ ಕೂಡ ಒಂದಷ್ಟು ಹಂತಕ್ಕೆ ನಮ್ಮ ಮನಸ್ಸು ಲೌಕಿಕವಾಗುತ್ತದೆ. ಮೋಕ್ಷದ ಮಾರ್ಗವೆಂದರೆ ಗಡಸುಳ್ಳ ಎಣ್ಣೆಯನ್ನು ಸವರಿದ ಬಲು ಎತ್ತರದ ಏಣಿಯ ಮೆಟ್ಟಿಲುಗಳಿದ್ದಂತೆ. ಒಂದು ಹಂತ ಮೇಲಕ್ಕೆ ಹೋದಾಗಲೂ ಜಾರಿ ಕೆಳಗೆ ಬರುತ್ತಲೇ ಇರುತ್ತೇವೆ.

ಭೂಮಿಕಾಂತದಿಂದ ಅರೆಕ್ಷಣದಲ್ಲಿ ತಪ್ಪಿಸಿಕೊಂಡು ಆಕಾಶಕಕ್ಷೆ ಸೇರಿಕೊಳ್ಳುವ ಉಪಗ್ರಹದಂತೆ, ಪರಮ ವೈರಾಗ್ಯದಿಂದ ಈ ಪ್ರಪಂಚದ ವ್ಯಾಮೋಹ-ಬಂಧನಗಳನ್ನು ಕಡಿದುಕೊಳ್ಳಬೇಕಾಗುತ್ತದೆ. ಉಪಗ್ರಹ ಉಡಾವಣೆಗೆ ವೇಗದ ರಾಕೆಟ್ಟಿನ ಅವಶ್ಯಕತೆಯಿರುವಂತೆ ಪರಮ ವೈರಾಗ್ಯಕ್ಕೆ ಅತ್ಯಂತ ಉನ್ನತ ಮತ್ತು ಅಗ್ನಿಯಂತೆ ಜ್ವಲಿಸುವ ಪರಿಶುಭ್ರ ಮನಸ್ಸು ಬೇಕಾಗುತ್ತದೆ. ಅಂತಹ ಮನಸ್ಸಿಗೆ ಸಂಸ್ಕಾರ-ಆಚಾರ ಮತ್ತು ಆಹಾರಗಳೇ ಕಾರಣವಾಗುತ್ತವೆ ಎಂದು ಮಹರ್ಷಿ ಪತಂಜಲಿಯಂತಹ ಪ್ರಾಜ್ಞರು, ದೈವತ್ವ ಸಂಪಾದಿಸಿಕೊಂಡವರು ಹೇಳಿದ್ದಾರೆ.

ಪೀಠ ಹತ್ತಿದಾಕ್ಷಣ ಜಗದ್ಗುರುವಾಗಲು ಸಾಧ್ಯವಿಲ್ಲ, ಕುರ್ಚಿ ಹತ್ತಿದಾಕ್ಷಣ ಮಂತ್ರಿಯಾಗಲು ಸಾಧ್ಯವಿಲ್ಲ. ಅದಕ್ಕೆಲ್ಲ ಒಂದಷ್ಟು ನಿಯಮಾವಳಿಗಳಿವೆ. ಪಕ್ಕದಲ್ಲಿ ಕೂತಾಕ್ಷಣ ಅವರ ಮಟ್ಟಕ್ಕೆ ಏರಿಬಿಟ್ಟೆವೆಂದುಕೊಳ್ಳೋದು ಮೂರ್ಖರ ಪಟ್ಟು; ಆದರೆ ಹಾಗಂದುಕೊಳ್ಳುವವರಿದ್ದಾರೆ! ಪ್ರಶಸ್ತಿಗಳನ್ನು ಪಡೆದುಕೊಳ್ಳೋದಕ್ಕೂ ಹೊಡೆದುಕೊಳ್ಳೋದಕ್ಕೂ ಅಜಗಜಾಂತರವಿದೆ.

ಕೊಲೆಗಾರನನ್ನು, ಪಾತಕಿಯನ್ನು ಬೇರೆಯವರು ಮೆಚ್ಚಿಕೊಳ್ಳೋದು ಹಾಗಿರಲಿ, ಅವನದ್ದೇ ಅಂತರಂಗ ಅವನನ್ನು ಒಪ್ಪೋದಿಲ್ಲ. ಕೇಸುಗಳಿಂದ ಅವನು ತಪ್ಪಿಸಿಕೊಂಡಿರಬಹುದು. ಅಂತರಂಗದ ದಾಖಲೆಗಳಿಂದ ಅವ ತಪ್ಪಿಸಿಕೊಳ್ಳಲಾರ. ಅದೇರೀತಿ ಪ್ರಶಸ್ತಿಗಳನ್ನು ಹೊಡೆದುಕೊಂಡೋರ ಅಂತರಂಗ ಸಾಯುವವರೆಗೂ ಅವರನ್ನು ಹಂಗಿಸುತ್ತಲೇ ಇರುತ್ತದೆ. ಅತ್ಯಾಚಾರ ಮಾಡಿದೋರ ಅಂತರಂಗ ನೀನೊಬ್ಬ ಕಚ್ಚೆಹರುಕ, ನೀನೊಬ್ಬ ಅತ್ಯಾಚಾರಿ ಎಂದು ಹಂಗಿಸುತ್ತಲೇ ಇರುತ್ತದೆ.

ಮನಸ್ಸಿನಲ್ಲಿ ಕರಿನಾಯಿ ಮತ್ತು ಬಿಳಿನಾಯಿಗಳೆರಡೂ ಇರುತ್ತವಂತೆ. ಕರಿನಾಯಿ ಕ್ರೂರ, ಘೋರ, ಅದಕ್ಕೆ ರಾಗ-ದ್ವೇಷಗಳೇ ಹೆಚ್ಚಂತೆ. ಅದರ ಬಯಕೆಗಳೂ ಅಂತವೇ. ಬಿಳಿ ನಾಯಿ ಸೌಮ್ಯ, ಸಾತ್ವಿಕ, ಅದರ ಬಯಕೆಗಳೂ ಸಾತ್ವಿಕ. ಯಾವ ನಾಯಿಗೆ ನಾವು ಜಾಸ್ತಿ ಬಿಸ್ಕಿಟ್ ಹಾಕ್ತೇವೋ ಅದೇ ನಾಯಿ ಬಲಾಢ್ಯವಾಗುತ್ತದೆ, ಏಳಿಗೆಯನ್ನು ಪಡೆಯುತ್ತದೆ. ಇದನ್ನೀಗ ಸಿನಿಮಾಗಳಲ್ಲೂ ಡೈಲಾಗ್ ಮಾಡಿದ್ದಾರೆಂದು ಗೋಪಣ್ಣ ಹೇಳುತ್ತಿದ್ದ.

ಇತ್ತೀಚೆಗೆ ಸಮಾಜದಲ್ಲೂ ಬಿಳಿನಾಯಿ ಮತು ಕರಿನಾಯಿಗಳು ನಮಗೆ ಕಾಣುತ್ತಲೇ ಇವೆ. ಬಿಳಿನಾಯಿಗಳನ್ನು ಕರಿನಾಯಿಗಳು ಕಚ್ಚಲು ಅಟ್ಟಿಸಿಕೊಂಡು ಬರುತ್ತವೆ! ಅವುಗಳಿಗೆ ಗೊತ್ತಿಲ್ಲ, ಅವುಗಳ ತಿಳುವಳಿಕೆಯೇ ಅಷ್ಟು ಪಾಪ! ನಮಗೇ ಅಧಿಕಾರ ಬೇಕು, ನಮಗೇ ಎಲ್ಲವೂ ಬೇಕು. ನಮಗೆ ಸಿಕ್ಕದಿದ್ದರೂ ಪರವಾಗಿಲ್ಲ ಬಿಳಿನಾಯಿಗಳಿಗೆ ಮಾತ್ರ ಏನೂ ಸಿಕ್ಕಬಾರದು; ಅವು ಉಪವಾಸ ಬಿದ್ದು ಸಾಯಬೇಕು ಎಂಬ ಕ್ರೂರ ಬಯಕೆ.

ಶೃಂಗೇರಿ ಜಗದ್ಗುರುಗಳು ತಮ್ಮ ಪ್ರವಚನದಲ್ಲಿ ಹೇಳಿದರು-ಪಂಡಿತ “ವಿಷ್ಣವೇ” ಅನ್ನುತ್ತಾನೆ; ಮೂರ್ಖ “ವಿಷ್ಣಾಯ” ಅನ್ನುತ್ತಾನೆ. ಇಬ್ಬರಲ್ಲೂ ಭಕ್ತಿಯಿದ್ದುದರಿಂದ ಭಾವಗ್ರಾಹಿ ಭಗವಂತ ಇಬ್ಬರಿಗೂ ದರ್ಶನಕೊಟ್ಟುಬಿಟ್ಟ. ತನಗೆ ದರ್ಶನಕೊಟ್ಟ ದೇವರನ್ನು ಕಂಡು ಪಂಡಿತ ಖುಷಿ ಪಡಲಿಲ್ಲ; “ನಿನ್ನನ್ನು “ವಿಷ್ಣಾಯ” ಅಂತ ತಪ್ಪಾಗಿ ಕರೆದ ಆ ಮೂರ್ಖನಿಗೇಕೆ ದರ್ಶನಕೊಟ್ಟೆ?” ಎಂದು ತಕರಾರು ತೆಗೆದ.

ಸಮಾಜದ ಕರಿನಾಯಿಗಳ ಪಾಡೂ ಕತೆಯ ಪಂಡಿತರ ಪಾಡಿನಂತೆ; ಕರಿನಾಯಿಗಳಿಗೆ ರಾಜಾಶ್ರಯದ ಕೃಪೆಯಿದೆ. ಬಿಳಿನಾಯಿಗಳಿಗೆ ಅದಿಲ್ಲ. ಧುರ್ಯೋಧನನಿಗೆ ಅಂದರೆ ಕೌರವರಿಗೆ ಅಕ್ಷೋಹಿಣಿ ಸೈನ್ಯ ಬಲವಿತ್ತು, ಪಾಂಡವರಿಗೆ ಅದಿರಲಿಲ್ಲ. ನಂತರ ನಡೆದದ್ದೇನೆಂಬುದು ನಿಮಗೆಲ್ಲ ಗೊತ್ತು.

ಕಾಲ ಎಲ್ಲಿಗೆ ಬಂದಿದೆಯೆಂದರೆ ಬಿಳಿನಾಯಿಗಳು ಸ್ವಚ್ಛಚಾಗಿರಿಸಿಕೊಳ್ಳಲಿಕ್ಕೂ ಸಹ ರಾಜಭಟರ ಅನುಮತಿಸಬೇಕಾಗುತ್ತದೆ!! ಎಂತಹ ವಿಪರ್ಯಾಸವಲ್ಲವೇ? ಯಾಕೆಂದರೆ ಗಬ್ಬು ನಾರಬೇಕೆಂದು ಕರಿನಾಯಿಗಳು ಬೇಡಿಕೆ ಇಡುತ್ತವೆ. ಗಬ್ಬುನಾರಬೇಕೆಂದು ಬೇಡಿಕೆ ಇಡುವುದು ಕರಿನಾಯಿಗಳ ಹಕ್ಕಂತೆ; ಸ್ವಚ್ಛವಾಗಿರಬೇಕೆಂಬ ಅನಿಸಿಕೆ ಬಿಳಿನಾಯಿಗಳ ಹಕ್ಕಲ್ಲವೇ?

ಅಷ್ಟಕ್ಕೂ ತೊನೆಯಪ್ಪನವರು ಕರಿನಾಯಿಗಳಿಗೆ ಮುಸುಕಿನಲ್ಲಿ ಬಿಸ್ಕಿಟ್ ಹಾಕಿದ್ದಾರೆ. ಮನಸ್ಸಿನಲ್ಲಿದ್ದ ಕರಿನಾಯಿಗೆ ಬಿಸ್ಕಿಟ್ ಹಾಕಿದ್ದರಿಂದ ಸನ್ಯಾಸಾಶ್ರಮ ತೆಗೆದುಕೊಂಡಮೇಲೂ ಸಹ ಲಲನೆಯರನ್ನು ತೆಕ್ಕೆಗೆ ಸೆಳೆದುಕೊಂಡು ಭೋಗಿಸುವ ಸಮಾಜಿಕ ಕಾರ್ಯ ನಡೆಸಿದರು! ಕನ್ಯಾಸಂಸ್ಕಾರದ ಹೆಸರಿನಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಹೊಸ ಅನುಭವವನ್ನು ನೀಡಿ ಶೀಲಹರಣ ಮಾಡುವ ಸಾಮಾಜಿಕ ಕಾರ್ಯವನ್ನು ಮಾಡಿದ್ದಾರೆ! ತನ್ನ ಕಚ್ಚೆಕೇಸನ್ನು ಮುಚ್ಚೋದಕ್ಕೋಸ್ಕರ ಹಲವು ಕರಿನಾಯಿಗಳನ್ನು ಬಳಸಿಕೊಂಡಿದ್ದಾರೆ. ಆದರೆ ಮುಂದಿನಿಂದ ಬಿಳಿನಾಯಿಗಳಿಗೆ ಬೆಂಬಲ ಸೂಚಿಸುತ್ತಾರೆ.

’ಮಹಾಸ್ವಾಮಿಗಳಿ’ಗೂ ಒಬ್ಬ ಕಾಣೆಮೀನಪ್ಪ ಸಲಹೆಗಾರ ಸಿಕ್ಕಿದ್ದರೆ ಅನುಕೂಲವಾಗುತ್ತಿತ್ತು. ಅದಿರಲಿ ಹೆಣ್ಣುಗಳ ಕೊರತೆಯಾದರೆ ’ಮಹಾಸ್ವಾಮಿಗಳು’ ಹೆಣ್ಣು ನಾಯಿಗಳನ್ನೂ ಬಳಸಿಕೊಳ್ಳಬಹುದು’ ಯಾಕೆಂದರೆ ವಿಕೃತ ಕಾಮದ ಮನಸ್ಸಿನ ಕಪ್ಪು ನಾಯಿಗೆ ಬಿಸ್ಕಿಟ್ ಹಾಕಬೇಕಲ್ಲ?

ಇಂತಹ ’ಜಗದ್ಗುರು’ವನ್ನು ಪಡೆದ ಪೀಠವೇ ಧನ್ಯ! ಇಂತಹ ಶೋಭರಾಜಾಚಾರ್ಯರನ್ನು ಪಡೆದ ಗುರಿಕಾರ ಬಳಗವೇ ಧನ್ಯ! ನಡೀಲಿ ಇನ್ನಷ್ಟು ದಬ್ಬಾಳಿಕೆ, ನಡೀಲಿ ಇನ್ನಷ್ಟು ಸಂಗ್ರಹ. ಕಾಲ ಬಂದೇ ಬರುತ್ತದೆ. ವಿಟಪುರುಷನ ಕಪಟ ನಾಟಕಗಳನ್ನು ಪುಟ ಪುಟದಲ್ಲೂ ವರ್ಣರಂಜಿತವಾಗಿ [ಸದ್ಯ ಸುವರ್ಣ ಮಂತ್ರಾಕ್ಷತೆ ಪಡೆದು ಅವನನ್ನು ಹೊಗಳುತ್ತಿರುವ] ಇದೇ ಮಾಧ್ಯಮಗಳು ಬಣ್ಣಿಸುತ್ತವೆ.

kp

Thumari Ramachandra

source: https://www.facebook.com/groups/1499395003680065/permalink/1846637868955775/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s