3,000 = 30,000 = 1; ಬೀಜದ ಹೋರಿ ಮಠದಲ್ಲಿ ಕೊನೆಗುಳಿಯಿವುದು ಕೇವಲ ಒಂದು!

3,000 = 30,000 = 1; ಬೀಜದ ಹೋರಿ ಮಠದಲ್ಲಿ ಕೊನೆಗುಳಿಯಿವುದು ಕೇವಲ ಒಂದು!

PART-1

ಹಳ್ಳಿಕಡೆಗೆ ಹಿಂದೆ ಉಳುಮೆ ಮಾಡುವ ಮತ್ತು ಗಾಡಿ ಎಳೆಯುವ ಎತ್ತುಗಳ ವೃಷಣವನ್ನು ಜಪ್ಪಿ ಒಳಗಿನ ವೀರ್ಯೋತ್ಪಾದಕ ಭಾಗವನ್ನು ನಿಷ್ಕ್ರಿಯಗೊಳಿಸುತ್ತಿದ್ದರು. ಪಾಪದ ಹೋರಿಗಳಿಗೆ ಆ ಸಮಯದಲ್ಲಿ ಅದೆಷ್ಟು ನೋವಾಗುತ್ತಿತ್ತೋ ದೇವರಿಗೇ ಗೊತ್ತು. ವಾರದಕಾಲ ಜ್ವರ-ಅಸಹನೀಯ ನೋವು ಅನುಭವಿಸುತ್ತ, ಆಹಾರ ಸೇವಿಸಲೂ ಆಗದ ಮನಸ್ಥಿತಿಯಲ್ಲಿ ಅವು ನಿಂತಿರುತ್ತಿದ್ದವಂತೆ. ತೀರಾ ಅವೈಜ್ಞಾನಿಕವಾದ ಪದ್ಧತಿ ಅದಾಗಿತ್ತು. ಈಗಲೂ ಹಾಗೆ ಮಾಡ್ತಾ ಇದ್ದಾರೋ ಗೊತ್ತಿಲ್ಲ.

ಮಠದ ಹೋರಿಗಳಿಗೆ ಮಾತ್ರ ವೃಷಣ ಜಪ್ಪಿ ಬೀಜ ಒಡೆದುಹಾಕುವ ಜನರಿಲ್ಲ. ಹೋರಿ ಬೀಜದ್ದು ಎಂಬುದು ಗೊತ್ತಾದಮೇಲೂ ಅದನ್ನು ಗುರುವೆಂದು ಕರೆಯುವುದು ರಾಜಕಾರಣಿಗಳ ನವ ವಿದ್ಯಮಾನ. ಹಾಗಾಗಿಯೇ ಮೂರು ಸಾವಿರ ಜನರನ್ನು ಸೇರಿಸಿ ಮೂವತ್ತುಸಾವಿರ ಎಂದು ಬೊಗಳೆ ಬಿಡುವುದು ಮತ್ತು ಧಮಕಿ ಹಾಕೋದು.

ಶಂಕರರ ಬಗ್ಗೆ ಯಾರೋ ಬರೆದರಲ್ಲ? ಅವರಿಗೆ ಶಂಕರರ ಸಮಗ್ರ ಕೃತಿಗಳ ಮಾಹಿತಿಯ ಕೊರತೆ ಇರೋದು ಕಾಣುತ್ತದೆ. ಶಂಕರರ ವ್ಯಕ್ತಿತ್ವ ಮತ್ತು ಅವರ ಪಾಂಡಿತ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ಅತಿಯಾದ ಅಧ್ಯಯನಶೀಲತೆ ಇರಬೇಕಾಗುತ್ತದೆ ಮತ್ತು ಸ್ವತಃ ಸಂಸ್ಕೃತ ಭಾಷೆಯನ್ನೂ ಸಂಸ್ಕೃತ ಪರಿಭಾಷೆಯನ್ನೂ ಅರಿತವರಾಗಿರಬೇಕಾಗುತ್ತದೆ. ಶಂಕರರ ಪ್ರಶ್ನೋತ್ತರಗಳಿಗೆ ಹಲವು ಆಕರಗ್ರಂಥಗಳ ಆಧಾರವಿರುತ್ತದೆ; ಅದನ್ನೆಲ್ಲ ಚುಟುಕು ಉತ್ತರಗಳಲ್ಲಿ ಪರೋಕ್ಷವಾಗಿ ಅವರು ಹೇಳಿದ್ದಾರಷ್ಟೆ.

ಯಾರು ಗುರು ಮತ್ತು ಯಾವುದು ಧರ್ಮ ಎಂಬುದನ್ನು ಬಹಳ ತೌಲನಿಕ ಅಧ್ಯಯನದಿಂದ ಅರಿಯಬೇಕಾಗುತ್ತದೆ. ಶಂಕರರು ಹೇಳ್ತಾರೆ-ಅಪ್ಪ ಮತ್ತು ಅಮ್ಮನ ಮಾತನ್ನು ಕೇಳು; ಯಾಕೆಂದರೆ ಯಾವ ವ್ಯಕ್ತಿಗೂ ಜನ್ಮಕೊಟ್ಟ ಅಪ್ಪ-ಅಮ್ಮ ಕೇಡು ಬಗೆಯಲಾರರು. ಅದೇನೋ ಸರಿ. ಮುಂದೆ ಗುರು ಹೇಳಿದ್ದನ್ನೂ ಕೇಳು ಎಂದು ಶಂಕರರು ಹೇಳ್ತಾರೆ. ಗುರು ಯಾರು ಎಂಬುದನ್ನು ಅವರು ಅಲ್ಲಿ ಹೇಳಲಿಲ್ಲ; ತನ್ನ ಬೇರೆ ಕೃತಿಗಳಲ್ಲಿ ಹೇಳಿದ್ದಾರೆ.

ಗುರು ಎನಿಸಿಕೊಂಡ ನವ ರಾವಣಾಸುರ ಹೇಳ್ತಾನೆ-“ನೀನು ದಿವ್ಯಳು, ಭವ್ಯಳು, ಮಾನ್ಯಳು. ರಾಮ ನಿನ್ನಿಂದ ವಿಶೇಷ ಸೇವೆಯನ್ನು ಬಯಸಿದ್ದಾನೆ.” ಆತ ತನ್ನನ್ನೇ ರಾಮನೆಂದು ಕರೆದುಕೊಳ್ತಾನೆ! ಶಂಕರರು ತಮ್ಮ ಜೀವಿತಾವಧಿಯಲ್ಲಿ ಎಲ್ಲೂ ತಾನು ಅವತಾರಿಯೆಂದು ಹೇಳಿಕೊಳ್ಳಲಿಲ್ಲ ಮತ್ತು ಹೆಂಗಸರಿರಲಿ, ಯಾವೊಬ್ಬ ಗಂಡಸಿನಿಂದಲೂ ಸಹ ಯಾವ ಸೇವೆಯನ್ನೂ ಬಯಸಲಿಲ್ಲ; ಸೇವೆ ಮಾಡ್ತೇವೆ ಎಂದರೆ ನಯವಾಗಿ ನಿರಾಕರಿಸಿಬಿಡ್ತಿದ್ದರು. ತಾನು ಹೇಳಿದ್ದೇ ಸರಿ, ತನ್ನನ್ನೇ ಅನುಸರಿಸಿ ಎಂದೂ ಹೇಳಲಿಲ್ಲ. ಸಕಲ ವೇದ, ಶಾಸ್ತ್ರ ಪುರಾಣಗಳನ್ನೆಲ್ಲ ಎತ್ತಿ ತೆಗೆದು, ಅಧ್ಯಯನ ಮಾಡಿ, ಅವುಗಳ ಹೇಳಿಕೆಗಳನ್ನು ಅಗಾಧ ಅನುಭವದ ತಕ್ಕಡಿಯಲ್ಲಿಟ್ಟು ತೂಗಿದರು; ವೇದವೇ ಎಲ್ಲದಕ್ಕೂ ಪರಮೋಚ್ಚ ಆಯ್ಕೆ ಎಂಬುದನ್ನು ಮನಗಂಡರು.

ಶಂಕರರು ಹೇಳಿದಹಾಗೆ ಅಪ್ಪ-ಅಮ್ಮನ ಮಾತನ್ನು ಕೇಳಬೇಕಾಗಿದ್ದ ಯುವತಿಯೋರ್ವಳು ಕೇಳಲಿಲ್ಲ; ಅವಳಿಗೆ [ಕಳ್ಳ]’ಗುರು’ವಿನ ಪ್ರೇರಣೆಯಾಗಿತ್ತು. ಕೆಲವೇ ದಿನಗಳಲ್ಲಿ ಸನ್ಯಾಸಿ ವೇಷದ ಆ ಬಿಕನಾಸಿ ರಾಮನ ಹೆಸರಿನಲ್ಲಿ ಅವಳನ್ನು ಉಂಡು ಮುಗಿಸಿದ! ಶೀಲ ಕಳೆದುಕೊಂಡದ್ದು ಮತ್ತು ಹರೆಯದ ದೇಹದ ತುಡಿತಗಳಲ್ಲಿ ಮತ್ತೆ ಮತ್ತೆ ಆ ಕಳ್ಳ ಗುರು ಹೇಳಿದಂತೆಯೇ ಮಾಡುತ್ತಿರೋದು ಯುವತಿಯ ಅಪ್ಪ-ಅಮ್ಮಂದಿರಿಗೆ ಗೊತ್ತಾಗುವಾಗ ಕಾಲ ಮೀರಿಹೋಗಿತ್ತು. ಆ ಕಳ್ಳ ಗುರುವಿನ ಗರಡಿಯಲ್ಲೇ ಇದ್ದ ಒಬ್ಬ ಷಂಡ ಗಿಂಡಿಗೆ, ಹೊರತೋರಿಕೆಗೆ ಬೇಕಾಗಿ ಅವಳನ್ನು ಕೊಟ್ಟು ಮದುವೆ ಮಾಡಿಸಿದ. ಮದುವೆಯ ನಂತರವೂ ಅವಳೊಡನೆ ಸತತವಾಗಿ ಏಕಾಂತವನ್ನು ಮುಂದುವರಿಸಿದ.

ಅಂತಹ ಎಷ್ಟೊಂದು ರಜಿಸ್ಟರ್ಡ್ ಮದುವೆಗಳು ಆ ಹಾವಾಡಿಗನ ಮಠದಲ್ಲಿ ನಡೆದಿಲ್ಲ? ಅನುಭವಿಸಿದ ಪಾಲಕರು ವಿರೋಧಿವಷ್ಟು ಜನಬೆಂಬಲವಾಗಲೀ ಹಣಬೆಂಬಲವಾಗಲೀ ಇಲ್ಲದವರಾದ್ದರಿಂದ ಸುಮ್ಮನಾಗಿಹೋದರು. ಅವರೆಲ್ಲರ ಶಾಪದ ಫಲವಾಗಿ ಆ ಬಿಕನಾಸಿ ಅಂಡುಸುಟ್ಟ ಬೆಕ್ಕಿನಂತಾಗಿದ್ದು ಸುಳ್ಳಲ್ಲ. ಎಷ್ಟೊಂದು ಮಠಗಳಿವೆ ಅವನ ಮಠವೇ ಯಾಕೆ ನಿತ್ಯವೂ ಮಾಧ್ಯಮಗಳಲ್ಲಿ ಮೆರೆಯಬೇಕು? ಆ ಬಿಕನಾಸಿ ಹೂಸು ಬಿಟ್ಟರೂ ಮಾರನೇ ಬೆಳಿಗ್ಗೆ ನಿಯತಕಾಲಿಗಳಲ್ಲಿ ದೊಡ್ಡದೇನೋ ನಡೆಯಿತೆಂಬಂತೆ ಮಹಾಪ್ರಸಾದವೆಂದು ವರ್ಣಿಸಿ ಬರೆಯುವ ಸಂಪಾದಕರುಗಳು ಆ ಬಿಕನಾಸಿಯ ಸುವರ್ಣಮಂತ್ರಾಕ್ಷತೆ ಪಡೆದಿರೋದು ಇಲ್ಲಿ ಸ್ಪಷ್ಟವಾಗುತ್ತದೆ.

ಹಾಗಾದರೆ ಆ ಯುವತಿ ಅಪ್ಪ-ಅಮ್ಮನ ಹೇಳಿದ್ದನ್ನು ಕೇಳಬೇಕಿತ್ತೋ ಅಥವಾ ಗುರುವಿನ ಹೇಳಿಕೆಯನ್ನು ಕೇಳಬೇಕಿತ್ತೋ? ಇಲ್ಲಿ ಅಪ್ಪ-ಅಮ್ಮಂದಿರ ತಪ್ಪು ಎದ್ದು ಕಾಣುತ್ತದೆ. ಅಪ್ಪ-ಅಮ್ಮ ಗುರುವಿನ ಆಯ್ಕೆಯಲ್ಲಿ ಎಡವಿದ್ದಾರೆ. ಗುರುವಿನ ಆಯ್ಕೆ ಈ ಕಾಲಕ್ಕೆ ಅಷ್ಟು ಸುಲಭವಲ್ಲ. ಅರ್ಜುನ ಸನ್ಯಾಸಿಗಳು ಬಹಳ ಜನ ತಯಾರಾಗಿದ್ದಾರೆ; ಜಾತೀವಾರು ಮಠಗಳು ಹುಟ್ಟಿಕೊಂಡಿವೆ; ಯಾರು ದೀಕ್ಷೆ ಕೊಟ್ಟರೋ? ಯಾವ ಧರ್ಮಸೂತ್ರವೋ? ಯಾವ ಅರ್ಹತೆಯನ್ನು ಪಡೆದರೋ ಗೊತ್ತಿಲ್ಲ; ಕಾಣುವುದೊಂದೆ ರಾಜಕೀಯ ಲಾಭಕ್ಕಾಗಿ ಸಭೆಗಳನ್ನು ನಡೆಸೋದು ಮತ್ತು ವಿಧಾನ ಸೌಧಕ್ಕೆ ಹೋಗಿ ಬೇಡಿಕೆ ಇಡೋದು.

ಇನ್ನು ಗುರುವಿನ ವಿಷಯಕ್ಕೆ ಬಂದರೆ ಒಂದಕ್ಷರ ಕಲಿಸಿದವರೂ ಗುರುವೇ ಅಂತೆ. ಅದು ಸರಿಯಿರಬಹುದು. ಆದರೆ ಎಷ್ಟೋ ಕಡೆ ಶಾಲೆಗಳಲ್ಲಿ, ಟ್ಯೂಶನ್ ಸೆಂಟರ್ ಗಳಲ್ಲಿ ಕಲಿಸುವ ಗುರುವೇ ಹರೆಯದ ಹುಡುಗಿಯರನ್ನು ತಮ್ಮ ತೆವಲಿಗೆ ಬಳಸಿಕೊಳ್ಳಬಹುದು. ಹರೆಯದಲ್ಲಿ ಅಪ್ಪ-ಮಗಳು, ಅಮ್ಮ-ಮಗ, ಅಕ್ಕ-ತಮ್ಮ, ಅಣ್ಣ-ತಂಗಿ ಸಹ ಬಾಗಿಲು ಮುಚ್ಚಿದ ಒಂದೇ ಕೋಣೆಯಲ್ಲಿ ಇಬ್ಬರೇ ಇರಬಾರದು ಎನ್ನುತ್ತದೆ ಶಾಸ್ತ್ರ; ಯಾಕೆಂದರೆ ಮೂಲಭೂತವಾಗಿ ಮನುಷ್ಯನೂ ಪ್ರಾಣಿವರ್ಗಕ್ಕೆ ಸೇರಿದವನಾಗಿದ್ದು ಯಾವ ಸಮಯದಲ್ಲೂ ಕಾಮ ಕೆರಳಬಹುದು ಎಂಬ ಕಾರಣಕ್ಕೆ.

ಎಷ್ಟೋ ಸಲ ಧರ್ಮ ಮತ್ತು ಅಧರ್ಮದ ನಡುವಿನ ಅಂತರ ಈರುಳ್ಳಿಯೊಳಗಿನ ಪಾರದರ್ಶಕ ಸಿಪ್ಪೆಯಷ್ಟಿರುತ್ತದೆ. ಅಧರ್ಮವೇ ಧರ್ಮವಾಗಿಬಿಡುವ ಸಾಧ್ಯತೆಗಳೂ ಉದ್ಭವಿಸಬಹುದು. ಯತಿಯಾದವನಿಗೆ ಕಾಮವಿಕಾರಗಳು ಹುಟ್ಟದಿರಲೆಂಬ ಕಾರಣಕ್ಕೆ ಸ್ತ್ರೀಯರ ಸಂಪರ್ಕ ಮತ್ತು ಸಂವಹನಗಳನ್ನು ನಿಯಂತ್ರಣದಲ್ಲಿರಿಸಲಾಗಿದೆ. ಇಂದು ಸನ್ಯಾಸಿನಿಯರೂ ಇರುವುದರಿಂದ ಹೇಳ್ತಾ ಇದ್ದೇನೆ-ಸನ್ಯಾಸಿಯು ಸ್ತ್ರೀಯರನ್ನೂ ಮತ್ತು ಸನ್ಯಾಸಿನಿಯು ಪುರುಷರನ್ನೂ ಅಷ್ಟು ದೂರದಲ್ಲೆ ಇಟ್ಟು ಅಂತರವನ್ನು ಕಾಯ್ದುಕೊಳ್ಳಬೇಕು.

ಬೀಜದ ಹೋರಿಯ ಮಠದಲ್ಲಿ ಹಾಗಾಗಲಿಲ್ಲ. ಸನ್ಯಾಸಿಯು “ಸ್ತ್ರೀಯರಿಗೆ ಪ್ರಾಧಾನ್ಯತೆ ನೀಡ್ತೇನೆ” ಅಂತ ಹತ್ತಿರಕ್ಕೆ ಬಿಟ್ಟುಕೊಂಡ; ಯಾಕೆಂದರೆ ಅಂತರಂಗದಲ್ಲಿ ಕಾಮದ ತೆವಲು ತೀವ್ರವಾಗಿತ್ತು; ಎದುರಿಗೆ ಬಣ್ಣದ ಅಕ್ಕಿಯನ್ನು ಪಡೆಯಲು ಬರುವ ಸುಂದರ ಮಹಿಳೆಯರನ್ನು ತೆಕ್ಕೆಗೆ ಬರಸೆಳೆಯೋದು ಸಾಧ್ಯವಾಗುತ್ತಿರಲಿಲ್ಲ; ಅದಕ್ಕೆಂತಲೇ ಬೇರೆ ತಂತ್ರಗಳನ್ನು ಬಳಸಿ ಮಹಿಳೆಯರನ್ನು ಏಕಾಂತಕ್ಕೆ ಕರೆದ. ಹಿಂದೊಮ್ಮೆ ಹೇಳಿದ್ದೆನಲ್ಲ? ಏಕಾಂತ ಕೋಣೆಗೆ ಹೋದ ಮಹಿಳೆಯರು, ಯುವತಿಯರು [ಕಸಾಯಿಖಾನೆಗೆ ಹೋದ ಗೋವುಗಳು ತಪ್ಪಿಸಿಕೊಳ್ಳಲಾಗದಂತೆ]ಮಂಪರು ಬರಿಸುವ ಪ್ರಸಾದವನ್ನು ತಿಂದು ಅತ್ಯಾಚಾರಕ್ಕೆ ಒಳಗಾದರು.

ಒಮ್ಮೆ ಸಂಭೋಗಿಸಿದವರನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ; ಅವರು ಮತ್ತೆ ಮತ್ತೆ ಏಕಾಂತ ಸೇವೆ ನಡೆಸಿಕೊಟ್ಟರು! ಏಕಾಂತಕ್ಕೆ ಒಗ್ಗಿಕೊಂಡ ಮಹಿಳೆಯರಿಗೆ ಆರ್ಥಿಕ ಸಹಾಯವನ್ನೋ ಅಥವಾ ಇನ್ನೇನೋ ಆಸ್ತಿಪಾಸ್ತಿ ಸಹಾಯವನ್ನೋ ಮಾಡಿದ; ಮಠದ ಸಂಪತ್ತು ಬಕರಾ ಭಕ್ತರು ಕೊಟ್ಟಿದ್ದು ಮತ್ತು ಅವರೇ ಮಠವನ್ನು ಕಟ್ಟಿದ್ದು! ಪರಿಶ್ರಮದ ಗಳಿಕೆಯಾಗಿದ್ದರೆ ಕಳ್ಳ ಸನ್ಯಾಸಿಗೆ ಅದರ ಮಹತ್ವ ಗೊತ್ತಾಗುತ್ತಿತ್ತು. ಹೀಗೆ ಧನ-ಕನಕ, ಹೊರೆ-ಕಾಣಿಕೆಗಳನ್ನು ವಸೂಲು ಮಾಡೋದು ಮತ್ತು ಬಂದಿದ್ದರಲ್ಲಿ ತನಗೆ ಬೇಕಾದಂತೆ ಬದುಕೋದು ಅಭ್ಯಾಸವಾಗಿ ಹೋಯ್ತು.

ಉನ್ನತವಾದ ಶಂಕರರ ಪರಂಪರೆ ಆಚಾರ್ಯ ಪತಂಜಲಿಯ ಯೋಗಸೂತ್ರಗಳನ್ನು ಅಕ್ಷರಶಃ ಅನುಷ್ಠಾನಗೊಳಿಸುವಂತೆ ಹೇಳುತ್ತದೆ. ಅದರಲ್ಲಿ ಇಂದ್ರಿಯ ನಿಗ್ರಹವೇ ಪ್ರಧಾನವಾದುದು. ಜಿತೇಂದ್ರಿಯನಾದಾಗ ಆಸೆಗಳೂ ದಮನ/ದಹನಗೊಳ್ಳುತ್ತವೆ. ವ್ಯಾಮೋಹವೂ ಕುಗ್ಗುತ್ತ ಹೋಗುತ್ತದೆ. ಅದಕ್ಕಾಗಿಯೇ ಇಂದ್ರಿಯಗಳನ್ನು ಒಳಮುಖದಲ್ಲಿ ಪರಿವರ್ತಿಸಿಕೊಳ್ಳುವಂತೆ ಹೇಳಲಾಗುತ್ತದೆ. ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಬಾಹ್ಯೇಂದ್ರಿಯಗಳು ಕೆಲಸ ಮಾಡದಿದ್ದರೂ, ಸಾಧನಾ ಪಥದ ವ್ಯಕ್ತಿಗೆ, ಅಂತರಂಗದಲ್ಲಿ ಅವುಗಳಿಂದ ಒದಗಬೇಕಾದ ಧನಾತ್ಮಕ ಮಾಹಿತಿಗಳು ಮಾತ್ರ ಬರುತ್ತವಂತೆ. ಕಿವಿಯಿಲ್ಲದಿದ್ದರೂ ಕೇಳಬಹುದು, ಕಣ್ಣಿಲ್ಲದಿದ್ದರೂ ಬೆಳಕನ್ನು ಕಾಣಬಹುದು ಇತ್ಯಾದಿ.

ಗಂಜಿಪಡಿಯವರು ಇಂದ್ರಿಯ ನಿಗ್ರಹವನ್ನು ವ್ಯಕ್ತಿಯ ಮೂಲಭೂತ ಹಕ್ಕಿನ ದಮನವೆಂದು ಹೇಳ್ತಾರೆ; ಯಾಕೆಂದರೆ ಇಂದ್ರಿಯ ನಿಗ್ರಹ ಅಂಥವರಿಂದ ಯೋಚಿಸಲೂ ಸಾಧ್ಯವಿಲ್ಲದ್ದು! ಆದರೆ ಸನ್ಯಾಸ ಧರ್ಮವನ್ನು ನಡೆಸಲಾಗದ ಶ್ರಾದ್ಧಭಟ್ಟನ ಪಿಂಡದಂತಹ ಕೆಲವರು ಶಂಕರರ ಹೆಸರಿನ ಸ್ಥಾನಕ್ಕೆ ಬಂದು ಕುಳಿತುಬಿಟ್ಟರು; ಅಲ್ಲಿ ಸಾಂಪ್ರದಾಯಕವಾಗಿ ಬಂದ ಶಾಪ, ಬಹಿಷ್ಕಾರ ಇತ್ಯಾದಿ ಅಸ್ತ್ರಗಳನ್ನೆಲ್ಲ ಆಗಾಗ ನೆನಪಿಸುತ್ತ ಬಕರಾ ಭಕ್ತರಿಗೆ ಬೋಳೆಣ್ಣೆ ಹಚ್ಚಿದರು. ಬಕರಾ ಭಕ್ತರಿಂದ ಸಾಧ್ಯವಾದ ಎಲ್ಲರೀತಿಯಲ್ಲಿ ಸಂಪತ್ತನ್ನು ಪೀಕಿದರು.

ಇನ್ನಷ್ಟು ಶತಮಾನ ಕಳೆದರೂ ಕೆಲವು ಬಕರಾಭಕ್ತರು ಬದಲಾಗುವ ಲಕ್ಷಣ ಕಾಣಿಸುತ್ತಿಲ್ಲ. ಅವರಿಗೆ ಶಾಪ ಮತ್ತು ಬಹಿಷ್ಕಾರಗಳೆಂಬ ಬಟ್ಟೆಹಾವುಗಳೇ ಬಹಳ ಕಾಡುತ್ತಿವೆ! ಶಾಪ ಎಂಬುದು ನಿಜವಾಗೋದು ಗುರುವಾದವ ಅವನಲ್ಲಿ ಆ ಯೋಗ್ಯತೆಯನ್ನು ಇರಿಸಿಕೊಂಡಾಗ ಮಾತ್ರ. ಬಕರಾ ಭಕ್ತರು ಸಂಪತ್ತನ್ನು ಸುರಿಯುವ ವರೆಗೆ ಸರಕಾರದ ಸಹಾಯ ಬೇಕಾಗಿಲ್ಲ. ಹಾಗೆಯೇ ಬಕರಾ ಭಕ್ತರು ಕೊಟ್ಟ ಸಂಪತ್ತನ್ನು ಯಾವುದಕ್ಕೆಲ್ಲ ಬಳಸಿದೆ ಎಂದು ಸರಕಾರ ಪ್ರಶ್ನೆಮಾಡುವಂತಿಲ್ಲ! ಪ್ರಶ್ನಿಸಿದರೆ ಸುಟ್ಟು ಬೂದಿಯಾಗ್ತೀರಿ ಅಂತ ಧಮ್ಕಿ ಹಾಕ್ತಾನೆ ಆ ಬಿಕನಾಸಿ.

3,000 = 30,000 = 1; ಬೀಜದ ಹೋರಿ ಮಠದಲ್ಲಿ ಕೊನೆಗುಳಿಯಿವುದು ಕೇವಲ ಒಂದು!

PART-2

ಬಿಕನಾಸಿ ಮತ್ತು ಅವನ ಹಳದೀ ತಾಲಿಬಾನು ಈಗಲೂ ಹೇಳ್ತಾರೆ-ವಿರೋಧಿಗಳು ಕೇವಲ ಆರೇಳು ಜನ ಅಂತ. ವಿರೋಧಿಗಳ ಅಮ್ಮಂದಿರ ಹೊಟ್ಟೆಯಲ್ಲಿ ಅವರ ಬದಲಿಗೆ ಪ್ರಾಣಿಗಳಾದರೂ ಹುಟ್ಟಬಹುದಿತ್ತು ಅಂತಾನೆ ಆ ಬಿಕನಾಸಿ-ಎಲ್ಲ ಅಂಥದ್ದೇ ರೌಡೀ ’ಪ್ರವಚನ.’ ಮಾಧ್ಯಮಗಳಲ್ಲಿ ಮ್ಯಾಂಗೋಪುಕುಳಿ ಕುಳಿತುಕೊಂಡು, “ವಿರೋಧಿಗಳು ಮಠಕ್ಕೆ ಸಂಬಂಧವೇ ಇಲ್ಲ” ಅಂತಾನೆ. “ಅವರ ಹಿಂದೆಷ್ಟು ಜನ ಇದ್ದಾರೆ?” ಎಂದು ರಾಜಕೀಯ ಬಲಾಬಲದ ಪ್ರಶ್ನೆ ಹಾಕ್ತಾನೆ.

ಮಠದ ವಿಷಯದಲ್ಲಿ ಇನ್ನೂ ಹಾಲುಗಲ್ಲದ ಹಸುಳೆಯಂತಿರುವ ಐಡೆಂಟಿಟಿ ಕ್ರೈಸಿಸ್ ಖ್ಯಾತ ಮ್ಯಾಂಗೋಪುಕುಳಿ ಗಮನಿಸಬೇಕು-ಇಂದು ಮಠದಲ್ಲಿ ಚೇಲಾಗಳಾಗಿ, ಹಳದೀ ತಾಲಿಬಾನುಗಳಾಗಿ ಕುಣಿಯುತ್ತಿರುವ ಹಲವಾರು ಮಂದಿ ಫಲಾನುಭವಿಗಳು ಹುಟ್ಟೋದಕ್ಕಿಂತ ಮೊದಲೆ ಮಠವನ್ನು ಕಟ್ಟಿ ಬೆಳೆಸಿದವರೇ ಇಂದು ವಿರೋಧಿಗಳಾಗಿದ್ದಾರೆ. ಶ್ರಾದ್ಧಭಟ್ಟನ ಪಿಂಡ ಬಿಕನಾಸಿಯಾಗ್ತಾನೆ ಅಂತ ಗೊತ್ತಾಗದೇ, ತಿದ್ದಿದ ಜಾತಕವನ್ನವಲಂಬಿಸಿ ಮಠದ ಸನ್ಯಾಸಿ ಹುದ್ದೆಗೆ ಆಯ್ಕೆ ಮಾಡಿದವರೇ ವಿರೋಧಿಗಳಾಗಿದ್ದಾರೆ.

ಹಾಗಾದರೆ ಅವರಿಗೆಲ್ಲ ಆ ಮಠ, ಆ ಪೀಠ ಬೇಡವೇ? ವಿನಾಕಾರಣ ಅದರ ಸ್ವಾಮಿತ್ವವನ್ನು ಸರಕಾರಕ್ಕೆ ವಹಿಸಬೇಕೆಂದು ಅವರೆಲ್ಲ ಕೇಳ್ತಾರೆಯೇ? ಖಂಡಿತ ಹಾಗಿಲ್ಲ. ಮಠದಲ್ಲಿ ಅನ್ಯಾಯ, ಅವ್ಯವಹಾರ, ಅನಾಚಾರ, ದುರಾಚಾರ, ಅತ್ಯಾಚಾರ, ವ್ಯಭಿಚಾರ ನಡೆಯುತ್ತಿದೆ ಎಂಬುದನ್ನು ಪಕ್ಕಾ ಮಾಡಿಕೊಂಡ, ಹಿಂದೆ ಮಠಕಟ್ಟಿದವರ ವಂಶದರಾಗಿದ್ದು, ಇಂದಿಗೂ ಮಠದ ನಿಜವಾದ ಭಕ್ತರೇ ಆಗಿರುವ 60% ಇಂದು ಮಠವನ್ನು ರಾಂಗ್ ವೇಷದ ರಾವಣನಿಂದ ಬಚಾವು ಮಾಡಲು ಹಾಗೆ ಕೇಳುತ್ತಾರೆ.

ಶಂಕರ ಪರಂಪರೆಯಲ್ಲಿ ಸನ್ಯಾಸಿಗಳು ತಾವೇ ಖುದ್ದಾಗಿ ಸಂಗೀತ, ಹರಿಕಥೆ ಇವುಗಳನ್ನೆಲ್ಲ ಮಾಡಲು ಅನುಮತಿ ಇಲ್ಲ; ಅದು ಯತಿನಿಯಮಗಳಿಗೆ ವಿರೋಧ. ಉತ್ತರ ಭಾರತದಲ್ಲಿ ಭಕ್ತಿ ಪಂಥ ಮತ್ತು ಇನ್ನಿತರ ಕೆಲವು ಸ್ವಘೋಷಿತ ’ಸನ್ಯಾಸಿ’ಗಳು ಸಂಗೀತನಾಟಕ ಮಂಡಳಿಗಳನ್ನು ನಡೆಸುತ್ತಾರೆ. ಅಲ್ಲಿನ ರಾಸಲೀಲೆಗಳ ಬಗ್ಗೆ ಈಗಿಲ್ಲಿ ಹೇಳೋದು ಬೇಡ ಬಿಡಿ. ಸಂಗೀತ ನಾಟಕ ಇದ್ದಲ್ಲಿ ಮಹಿಳೆಯರು ಹೆಚ್ಚುಹೆಚ್ಚು ಬರ್ತಾರೆ. ಹೀಗಾಗಿ ರಾವಣಾಸುರ ತಾನೇ ರಾಮನೆನ್ನುತ್ತ ಸಂಗೀತನಾಟಕ ಕಂಪನಿಯನ್ನು ಸುರುಮಾಡಿ, ಊರಿಂದೂರಿಗೆ ಅಲೆಯುತ್ತ ಹಣ ಪೀಕ ತೊಡಗಿದ. ಅನುಕೂಲಸ್ಥರು, ಸಂಘಸಂಸ್ಥೆಗಳು ಅವನ ಸಂಗೀತ ನಾಟಕಗಳ ಪ್ರದರ್ಶನವನ್ನು ಪ್ರಾಯೋಜಿಸಿದರು.

ಸಂಗೀತ ನಾಟಕದ ತಾಲೀಮಿಗೆ ಮತ್ತು ತಯಾರಿಗೆ ಅಂತ ಕಲಾವಿದೆಯರನ್ನು ತಾನು ಹೋದಲ್ಲೆಲ್ಲ ಜೊತೆಗೆ ಕರೆದುಕೊಂಡು ಹೋಗಿ ಭೋಗಿಸಿದ! ಸಿನಿಮಾ ನಟಿಯರಿಗೆ ಮರುಳುಬಿದ್ದು ಮಲ್ಲಿಕಾ ಶರಬತ್ತನ್ನು ತಯಾರಿಸಿದ. ಏನೆಲ್ಲ ನಡೆದರೂ ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ! ಬಹಳ ಜನ ಪ್ರಶ್ನೆ ಮಾಡಲೇ ಇಲ್ಲ! ಬೆರಳೆಣಿಕೆಯ ಜನ ಪ್ರಶ್ನೆ ಮಾಡಿದರೆ ಅವರಿಗೆ ದರ್ಶನವನ್ನೇ ನಿಲ್ಲಿಸಿಬಿಟ್ಟ. ಆ ವಿಷಯ ಪ್ರಸ್ತಾಪಿಸಿದರೆ ದುರುಗುಟ್ಟಿ ನೋಡುತ್ತ ಎದ್ದು ನಡೆದುಬಿಡುತ್ತಿದ್ದ. ಪ್ರಶ್ನೆಮಾಡಲು ಪ್ರಯತ್ನಿಸುವವರನ್ನು ತಾಲೀಬಾನ್ ಜನ ಧಮಕಿ ಹಾಕಿ ದಮನಿಸಿದರು.

ಹಾಡಹಗಲೇ ಯತಿನಿಯಮಗಳ ಸರ್ವೋಲ್ಲಂಘನೆ ನಡೆಯುತ್ತಿದ್ದರೂ, ಸಮೂಹ ಸನ್ನಿಗೆ ಒಳಗಾಗಿ ಜನ ಅವನನ್ನೇ ಗುರುವೆನ್ನುತ್ತಿದ್ದರು. ಅವನ ಅಡ್ಡವೇಷಗಳನ್ನೆಲ್ಲ ಧರ್ಮವೆಂದೇ ಭಾವಿಸಿದರು. ಮಂಕುಬೂದಿ ಬಳಿಯಲು ದನಗಳನ್ನು ಕಾಪಾಡುವ ವಿಷಯವನ್ನು ದಾಳವಾಗಿ ಆಗಾಗ ಪ್ರಯೋಗಿಸಿದ. ಊರುಮನೆಗಳಲ್ಲಿ ಕೊಟ್ಟಿಗೆಗಳಲ್ಲಿರುವ ದನಗಳಿಗೆ ಹುಲ್ಲು-ನೀರು ಕೊಡದ ಜನ, ಮಠಕ್ಕೆ ಬಂದು ದನಗಳ ರಕ್ಷಣೆಗೆ ಹಣ ಸುರಿದರು, ಪೂಜೆ ಮಾಡಿಸಿದರು, ಆರತಿ ಎತ್ತಿದರು. ನಿಂತಲ್ಲಿ, ಕುಂತಲ್ಲಿ, ಹೋದಲ್ಲಿ, ಬಂದಲ್ಲಿ ಎಲ್ಲೆಡೆಗೂ ಮಠದ ತರಾವರಿ ಯೋಜನೆಗಳ ಪಾಂಪ್ಲೆಟ್ಟುಗಳು ಮತ್ತು ವಸೂಲಿಯ ಹುಡುಗರು! ಜನ ಆಗಲೂ ಎಚ್ಚೆತ್ತುಕೊಳ್ಳಲಿಲ್ಲ. ಈಗ ರಾವಣಾಸುರನ ಕೈಯಿಂದ ಮಠವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ; ಅವನು ತನ್ನದೇ ಸ್ವಾಮಿತ್ವ ಅಂತಿದ್ದಾನೆ.

ಇನ್ನು ಸಂವಿಧಾನದ ಪ್ರಶ್ನೆ ಬಂದಾಗ ಸಂವಿಧಾನ ಎಂಬುದು ಕಾಲಕ್ಕೆ ತಕ್ಕಂತೆ ಪರಿಷ್ಕೃತವಾಗುತ್ತಾ ಹೋಗಬೇಕಾದ ಲೌಕಿಕ ನಿಯಮಗಳ ವಿಧಿವಿಧಾನ. ಹಾಗೆ ನೋಡಿದಾಗ ಯಾವ ಸಂವಿಧಾನವೂ ನೂರಕ್ಕೆ ಎಂಬತ್ತು ಪರ್ಸೆಂಟ್ ಹಂತಕ್ಕೆ ಹೋಗುತ್ತದೆಯೇ ಹೊರತು ನೂರಕ್ಕೆ ನೂರು ಸರಿಯಿರುತ್ತದೆ ಎನ್ನಲು ಸಾಧ್ಯವಿಲ್ಲ. ವೈವಸ್ವತ ಮನು ಹಿಂದೆಂದೋ ಕಾಲಕ್ಕೆ ಬರೆದ ಸ್ಮೃತಿ ಕೇವಲ ಹೂಳುತುಂಬಿದ್ದೆಂದು ಹೇಳುವುದೂ ಸಹ ಸರಿಯಲ್ಲ; ಮನುಸ್ಮೃತಿಯಲ್ಲೂ ಹೇರಳ ಉತ್ತಮಾಂಶಗಳಿವೆ.

ಇತ್ತೀಚೆಗೆ ವರದಕ್ಷಿಣೆ ಕಾಯ್ದೆ ಜಾರಿಗೆ ಬಂದಾಗ ವಿನಾಕಾರಣ ಹಲವು ಅತ್ತೆ-ಮಾವಂದಿರು ತೊಂದರೆಗೊಳಗಾದರು ಎಂದು ಕೇಳಿದ್ದೇನೆ; ಯಾಕೆಂದರೆ ಆ ಕಾಯ್ದೆಯಲ್ಲಿನ ದೋಷಗಳೇ ಅಂತಹ ಸನ್ನಿವೇಶಕ್ಕೆ ಕಾರಣವಾಯಿತು. ಅದೇರೀತಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ತಕ್ಷಣದ ಪರಿಸ್ಥಿತಿಗೆ ತಕ್ಕಂತೆ ರೂಪಿಸಿದ ಸಂವಿಧಾನದಲ್ಲೂ ಲೋಪದೋಷಗಳು ಇರುವುದಿಲ್ಲ ಎನ್ನಲು ಸಾಧ್ಯವಾಗೋದಿಲ್ಲ. ಹೀಗಾಗಿ, ಸಂವಿಧಾನ ನಿಂತ ನೀರಲ್ಲ; ಅದು ನವೀಕೃತಗೊಳ್ಳುವುದು ಸಮಾಜಕ್ಕೆ ಕ್ಷೇಮಕರ.

ಹಿಂದೂ ಜನಾಂಗಕ್ಕೆ ಹಲವು ಸ್ಮೃತಿಗಳಿವೆ. ಕೇವಲ ಮನುಸ್ಮೃತಿ ಮಾತ್ರವೇ ಪೈನಲ್ ಎಂಬ ನಿರ್ಧಾರಕ್ಕೆ ಬಂದವರು ಅದನ್ನೆಲ್ಲ ತಿಳಿದುಕೊಳ್ಳಬೇಕಾಗುತ್ತದೆ. ಯಾಜ್ಞವಲ್ಕ್ಯ ಸ್ಮೃತಿ, ನಾರದ ಸ್ಮೃತಿ, ವಿಷ್ಣು ಸ್ಮೃತಿ, ಬೃಹಸ್ಪತಿ ಸ್ಮೃತಿ, ಕಾತ್ಯಾಯನ ಸ್ಮೃತಿ, ವಶಿಷ್ಠ ಧರ್ಮಸೂತ್ರ, ಗೌತಮ ಧರ್ಮಸೂತ್ರ, ಬೌಧಾಯನ ಧರ್ಮಸೂತ್ರ, ಆಪಸ್ತಂಭ ಧರ್ಮಸೂತ್ರ ಹೀಗೇ ಹಲವು ಸ್ಮೃತಿಗಳನ್ನು ಉದಹರಿಸಬಹುದು. ಪ್ರಾಚೀನ ಭಾರತದ ಪ್ರಾಂತೀಯ ಭಾಗಗಳಲ್ಲಿ ಹಲವು ಧರ್ಮಸ್ಮೃತಿಗಳಿದ್ದವು. ಅವುಗಳ ಒಟ್ಟೂ ಸಂಖ್ಯೆ ಸುಮಾರು 5,000 ಎಂಬುದು ತಿಳಿದು ಬರುತ್ತದೆ.

ಧರ್ಮಶಾಸ್ತ್ರಗಳಲ್ಲಿ ನಾಲ್ಕು ವಿಧಗಳನ್ನು ಹೇಳಿದ್ದಾರೆ-ಸ್ಮೃತಿಗಳು, ಸೂತ್ರಗಳು, ನಿಬಂಧಗಳು ಮತ್ತು ವೃತ್ತಿಗಳು. ಯಾವುದೇ ಧರ್ಮಶಾಸ್ತ್ರದ ಹೇಳಿಕೆಯನ್ನು ಅನುಷ್ಠಾನಕ್ಕೆ ತರುವ ಮುನ್ನ ಉನ್ನತ ಮತ್ತು ಉದಾರ ಮನಸ್ಕ ಜನಸಮುದಾಯದ ಮೀಮಾಂಸೆ ನಡೆಯುತ್ತಿತ್ತು ಎಂದು ಗೊತ್ತಾಗುತ್ತದೆ. ಮೀಮಾಂಸೆ ಎಂದರೆ ವಿಮರ್ಶೆ-ಚರ್ಚೆ ಎಂದು ಸ್ಥೂಲವಾಗಿ ಹೇಳಬಹುದು. ಮನು ಹೇಳಿದ್ದಾನೆ ಅಂತ, ಶೂದ್ರನೆನಿಸಿ ತಪ್ಪು ಮಾಡಿದ ವ್ಯಕ್ತಿಗೆ ಅತಿಕ್ರೂರ ಮತ್ತು ಅತಿಘೋರ ಶಿಕ್ಷೆಯನ್ನು ವಿಧಿಸುತ್ತಿರಲಿಲ್ಲ. ವರ್ಣಾಶ್ರಮಗಳು ಗುಣ ಸ್ವಭಾವ ಮತ್ತು ವೃತ್ತಿಗಳನ್ನವಲಂಬಿಸಿದ್ದವು; ಇಂದಿಗೂ ಅಮೆರಿಕದಂತಹ ರಾಷ್ಟ್ರಗಳಲ್ಲೂ ಸಹ ಈ ವರ್ಗೀಯ ವಿಭಜನೆಗಳನ್ನು ಕಾಣಬಹುದು; ಅವು ಜಾತಿಗಳಲ್ಲ ವರ್ಣಗಳು.

3,000 = 30,000 = 1; ಬೀಜದ ಹೋರಿ ಮಠದಲ್ಲಿ ಕೊನೆಗುಳಿಯಿವುದು ಕೇವಲ ಒಂದು!

PART-3

ಇನ್ನು ಮನುಷ್ಯನ ಆಚಾರ,ವಿಚಾರ, ಆಹಾರ-ವ್ಯವಹಾರಾದಿಗಳಿಗೆ ಸಂಬಂಧಿಸಿದಂತೆ ಭಿನ್ನತೆಗಳು ಹಿಂದಿನಿಂದಲೂ ಇದ್ದವು; ಅವು ಈಗಲೂ ಇವೆ. ನಾಗರಿಕ ಜಗತ್ತಿನ ಸಂಪರ್ಕವನ್ನು ಬಯಸದ ಬುಡಕಟ್ಟು ಜನಾಂಗದವರೊಡನೆ ನೆಂಟಸ್ತನ ಮಾಡಿಕೊಳ್ಳಿ ಎಂದರೆ ಗಂಜಿಪಡಿಯವರೂ ಸಹ ಅದಕ್ಕೆ ಒಪ್ಪೋದಿಲ್ಲ. No one would like to renounce their natural habitat ತಿಂದ ಆಹಾರವೇ ಮನುಷ್ಯನ ಮನಸ್ಸಾಗಿ ಪರಿವರ್ತಿತವಾಗುತ್ತದೆ ಎಂಬ ಸುವಿಜ್ಞಾನ ಆಗಲೇ ನಮ್ಮ ಋಷಿಮುನಿಗಳಿಗೆ ತಿಳಿದಿತ್ತು. ಹಾಗಾಗಿಯೇ ಅವರು ಮಾಂಸವನ್ನು ತಿನ್ನುತ್ತಿರಲಿಲ್ಲ.

ಮಾಂಸವನ್ನು ತಿನ್ನುವ ವರ್ಗ ಆಗಲೂ ಇತ್ತು. ಅವರಲ್ಲಿಯೇ ಹಲವರು ಮಾಂಸವನ್ನು ವರ್ಜಿಸಿ ತಮ್ಮ ಗುಣ ಸ್ವಭಾವಗಳಲ್ಲಿ ಬದಲಾವಣೆಗಳನ್ನು ತಂದುಕೊಂಡು ಮೇಲ್ದರ್ಜೆಗೆ ಏರಿದರು. ಮೇಲಾಗಿ ಮಾಂಸದ ತಯಾರಿಕೆಯಲ್ಲಿ ಬಹಳ ಹಿಂಸೆಯಿದೆ. ಬೆಸ್ತರ ಮಗಳು ಸತ್ಯವತಿಯ ಗರ್ಭದಲ್ಲಿ ಪರಾಶರರ ಸಂಗಮದಿಂದ ಜನಿಸಿದ ವೇದವ್ಯಾಸರು ಮಹರ್ಷಿಗಳಾದರು; ಹಿಂಸೆಗಳನ್ನು ವರ್ಣಿಸುತ್ತ 84 ವಿಧಗಳಲ್ಲಿ ಹಿಂಸೆ ನಡೆಯುವುದನ್ನು ದಾಖಲಿಸಿದ್ದಾರೆ ಮತ್ತು ಅವುಗಳನ್ನು ನಿಲ್ಲಿಸಬೇಕೆಂದು ಹೇಳಿದ್ದಾರೆ. ಹಿಂಸೆಯಲ್ಲಿ ಮಾನಸಿಕ ಹಿಂಸೆ, ಧಾರ್ಮಿಕತೆಯ ಹೆಸರಿನಲ್ಲಿ ಹಿಂಸೆ, ಕಾವಿಯಲ್ಲಿ ಭಯೋತ್ಪಾದನೆ ಎಲ್ಲ ವಿಧದ ಹಿಂಸೆಗಳ ಪ್ರಭೇದಗಳನ್ನೂ ಕಾಣಬಹುದು.

ಬ್ರಿಟಿಷ್ ಜನ ಭಾರತಕ್ಕೆ ಬರುವವರೆಗೆ ಭಾರತ ಪ್ರಶಾಂತವಾಗಿತ್ತು, ಸುಶಾಂತವಾಗಿತ್ತು ಮತ್ತು ಸಮೃದ್ಧವಾಗಿತ್ತು ಎಂದು ಮೇಕಾಲೆ ಹೇಳಿದ್ದನ್ನು ತಿಳಿದಿದ್ದೀರಲ್ಲ? ಬ್ರಿಟಿಷ್ ಜನ ನಮ್ಮ ಸಮಷ್ಟಿ ಸಮಾಜದಲ್ಲಿ ವಿಷಬೀಜಗಳನ್ನು ಬಿತ್ತಿದರು. ಅದರಿಂದ ಭಾರತದ ಜನತೆಯಲ್ಲೂ ಬ್ರಿಟಿಷರ ವಿಷಮನಸ್ಕ ಪ್ರಭೇದಗಳು ಹುಟ್ಟಿಕೊಂಡವು; ಅದರ ಪರಿಣಾಮವನ್ನು ಇಂದು ನಾವೆಲ್ಲ ಅನುಭವಿಸುತ್ತಿದ್ದೇವೆ.

ಬೀಜದ ಹೋರಿಯ ಕಚ್ಚೆ ಸಂಸ್ಕೃತಿಯನ್ನು ಬಲ್ಲ ಯಾವೊಬ್ಬ ಸನ್ಯಾಸಿಯೂ ಅವನನ್ನು ಸಮರ್ಥಿಸಿಕೊಳ್ಳಲು ಮುಂದೆ ಬರಲಿಲ್ಲ; ಬರುವುದೂ ಇಲ್ಲ. ಕಚ್ಚೆಹರುಕನನ್ನು ಸಮರ್ಥಿಸುವವರು ಮತ್ತು ಬೆಂಬಲಿಸುವವರು ಕಚ್ಚೆಹರುಕರೇ ಆಗಿರುತ್ತಾರೆ. ಜೀವ ಹೋದರೂ ಬಿಟ್ಟುಕೊಡುವುದಿಲ್ಲ ಎಂಬ ಹೇಳಿಕೆಯನ್ನು ಗಮನಿಸುವಾಗ ಕಚ್ಚೆಹರುಕನ ಲೌಕಿಕ ವ್ಯಾಮೋಹ ಜನಸಾಮಾನ್ಯನಿಗಿಂತ ಹೆಚ್ಚಿದೆ ಎಂಬುದು ಗೊತ್ತಾಗುತ್ತದೆ. ಕಾಮ-ಕ್ರೋಧಾದಿಗಳನ್ನು ನಿವಾರಿಸಿಕೊಳ್ಳಬೇಕಾದ ವ್ಯಕ್ತಿ ದೇವಸ್ಥಾನದ ಆದಾಯದ ಕಬಳಿಕೆಗೆ ನಿಂತು ಅದು ಮಠಕ್ಕೆ ಸೇರಿದ್ದು ಎಂದು ಸುಳ್ಳು ದಾಖಲೆ ಸೃಷ್ಟಿಸುತ್ತಾನೆ.

ಆರಂಭದಿಂದಲೂ ಬೀಜದ ಹೋರಿ ಮಠದಲ್ಲಿ ಒಂದಿಲ್ಲೊಂದು ಅಸಡ್ಡಾಳ ಸಂಗತಿಗಳು ನಡೆಯುತ್ತಲೇ ಬಂದಿವೆ. ಅಲ್ಲಿರುವ ದಾಖಲೆಗಳೆಲ್ಲ ತಿರುಚಿದ ದಾಖಲೆಗಳೆ. ವಿದ್ವಾಂಸರೊಬ್ಬರು ಹಿಂದೆ ಸಂದೇಹ ಸೂಚಿಸಿ ಮಠದ ಅನಧಿಕೃತ ದಾಖಲೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕಚ್ಚೆಹರುಕನ ಕೋಡಂಗಿ ಕುಣಿತಗಳನ್ನು ಮನಗಂಡ ಜನ ಈಗೀಗ ನಿಧಾನವಾಗಿ ಅವನನ್ನು ವಿರೋಧಿಸಲು ಆರಂಭಿಸಿದ್ದಾರೆ ಎಂಬುದರ ಸೂಚ್ಯಂಕವಾಗಿ ಅವನ ಸಂಕಲ್ಪಿತ 30,000 ಜನರ ಬದಲಿಗೆ 3,000 ಜನ ಸೇರಿದ್ದನ್ನು ಗಮನಿಸಬೇಕು.

ಆಳು ಪಗಾರಿಗೆ ಬರುವವರು, ಲಾಭದ ದೃಷ್ಟಿಯಿಂದ ಬರುವವರು, ಗುರಿಕಾರರು, ಕುರಿಕಾಯುವವರು ಎಲ್ಲ ಸೇರಿ ಅಷ್ಟು ಜನ. ಕೌರವ ಕೊನೆಯವರೆಗೂ ತನ್ನಲ್ಲಿ ಅಕ್ಷೋಹಿಣಿ ಸೈನ್ಯವಿದೆ ಎನ್ನುತ್ತಲೇ ಇದ್ದ. ಒಬ್ಬೊಬ್ಬರಾಗಿ ಕಳಚುತ್ತ ಹೋದರು. ಎಲ್ಲರನ್ನೂ ಕಳೆದುಕೊಂಡ ಕೌರವ ದ್ವೈಶಂಪಾಯನ ಸರೋವರದಲ್ಲಿ ಜಲಸ್ತಂಭನ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಗಾಂಡು ಕಥೆ ನಿಮಗೆಲ್ಲ ಗೊತ್ತಿದೆ. ಬೀಜದಹೋರಿ ಮಠದ ಮಹಾಸ್ವಾಮಿ ತೊನೆಯಪ್ಪನವರ ಸ್ಥಿತಿ ತೀರಾ ಭಿನ್ನವಾಗೇನೂ ಇಲ್ಲ.

ಕಚ್ಚೆಹರಿದುಕೊಂಡು ಹಾರಾಟ ನಡೆಸಿದ್ದಕ್ಕೆ, ಪೀಠ ಆ ತೊನೆಯಪ್ಪ ಜಗದ್ಗುರುವಿಗೆ ಕರುಣಿಸಿದ ಕರುಣಾಜನಕ ಸ್ಥಿತಿ ಇದೆಂದರೆ ತಪ್ಪಲ್ಲ; ಅದು ಅವನ ತಪ್ಪಲ್ಲ-ಅವನ ಜೀನ್ಸ್ ನಲ್ಲಿರುವ ಅನುವಂಶೀಯತೆಯೇ ಹಾಗಿದೆ! ಮಠದ ಸಂಪತ್ತಿನ ಮೇಲೆ ಕಣ್ಣಿಟ್ಟ ಸ್ತ್ರೀನಿವಾಸ ಮಗನನ್ನು ಮಠದ ಸ್ವಾಮಿ ಮಾಡಿದ; ಸುರಸುಂದರಿಯರ ಆಂಗಾಂಗವನ್ನು ಅಪಾದಮಸ್ತಕ ಗುರಾಯಿಸಿ ನೋಡುತ್ತ ಮಠದ ಮಾಣಿ ಮುಷ್ಠಿಮೈಥುನ ಮಾಡಿಕೊಳ್ಳತೊಡಗಿದ. ಅದೇ ಸಮಯಕ್ಕೆ ಮಠದ ಪೀಠಕ್ಕೆ ಗುರಿಯಿಟ್ಟು ಕೈತಪ್ಪಿ ನಿಶ್ಚೇಷ್ಟಿತನಾದ ಶಕುನಿ ಕುಳ್ಳ ಬಾವಯ್ಯ ದಿವಾನನಾಗಿ ಮಠಪ್ರವೇಶ ಮಾಡಿ, ಅಲ್ಲಿಯೇ ಠಿಕಾಣಿ ಹೂಡಿ, ಸ್ವಾಮೀಬಾವಯ್ಯನಿಗೆ ’ಧರ್ಮೋಪದೇಶ’ಕನಾಗಿ ಮಂಥರೆಯ ಸಲಹೆ ನೀಡತೊಡಗಿದ. ಪರಿಣಾಮವಾಗಿ ನಿಜವಾದ ಭಕ್ತರು ಅಜ್ಞಾತವಾಸವನ್ನು ಅನುಭವಿಸುವಂತಾಗಿದೆ.

ಏನಿಲ್ಲವೆಂದರೂ ಮಠದ ಸಂಪತ್ತನ್ನು ಕೊಳ್ಳೆ ಹೊಡೆದ ಕಳ್ಳ-ಕುಳ್ಳರ ಆಸ್ತಿ ಇಂದು ಸುಮಾರು ತಲಾ ಸಾವಿರ ಕೋಟಿ!! ಬೇನಾಮಿ ಹೆಸರುಗಳಲ್ಲಿ ಇವರೀರ್ವರು ನಡೆಸದ ಅವ್ಯವಹಾರಗಳೇ ಇಲ್ಲ. ಅಷ್ಟೆಲ್ಲ ಅವ್ಯವಹಾರಗಳು ಗೊತ್ತಿದ್ದರೂ ನಿವೃತ್ತ ಮಡಿವಾಳರು ಮಠದವನ ಬೆಂಬಲಕ್ಕೆ ಇರುವುದು ಅನೇಕರಿಗೆ “ಹೀಗೂ ಉಂಠೇ” ಅನುಭವ ನೀಡುತ್ತಿದೆ!

ಕಚ್ಚೆಹರಿದ ಕಥೆಗಳನ್ನು ಮುಚ್ಚುವುದಕ್ಕಾಗಿ ಈ ಹೋರಿಸ್ವಾಮಿ ನಡೆಸದ ಡೊಂಬರಾಟವಿಲ್ಲ! ಕಾವಿ ಬಣ್ಣದ ಬಾವಾಜಿಗಳನ್ನೆಲ್ಲ ಮಠಕ್ಕೆ ಕರೆದು “ಇವರು ಉತ್ತರ ಭಾರತದ ಮಹಾನ್ ಸಂತರು” ಎಂದು ಹೇಳ ತೊಡಗಿದ್ದಾನೆ. ಇವನ ಹಾಗೆ ನಾಳೆ ತಮ್ಮ ಮೇಲೂ ಕೇಸುಗಳು ದಾಖಲಾಗುವ ನಿರೀಕ್ಷಣೆಯಲ್ಲಿರುವ ಕಚ್ಚೆಹರುಕರು ಕೆಲವರು ಜೊತೆಯಾಗಿದ್ದಾರೆ. ಇನ್ನೂ ಕೆಲವರು ಅಂದಂದಿನ ಭಕ್ಷೀಸಿಗಾಗಿ ಬಂದುಹೋಗುತ್ತಿದ್ದಾರೆ.

ಅದಾವುದೋ ಸಂಘವಂತಲ್ಲ? ಅದರ ನೀತಿನಿಯಮಗಳೆಲ್ಲ ಗಾಳಿಗೆ ಹಾರಿದ ಹಾಗಿದೆ? ಇಲ್ಲದಿದ್ದರೆ ಯಾಕಿನ್ನೂ ಅವರು ಈ ಕಳ್ಳ ಸನ್ಯಾಸಿಯ ಪರವಾಗಿ ಬ್ಯಾಟಿಂಗ್ ಗೆ ನಿಲ್ಲುತ್ತಿದ್ದರು? ಇಲ್ಲಿ ಯಾರೋ ರಾಜಕಾರಣಿಗಳನ್ನು ಹೇಳಿದಿರಲ್ಲ, ಒಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಆ ಸಂಘದ ನೆರಳಲ್ಲೇ ಬೆಳೆದವರು. ಹಾಗಾಗಿ ಸಂಘ ಹೇಳಿದಂತೆ ಕೇಳುವವರು ಎಂಬುದು ಅರ್ಥವಾಗುತ್ತದೆ. ಊರಪ್ಪನವರು ಮತ್ತೆ ಕಚ್ಚೆಹರುಕನ ಪರ ಬ್ಯಾಟಿಂಗ್ ಆರಂಭಿಸಿರೋದು ಅವರ ಕಪ್ಪುಹಣ ಮಠದಲ್ಲಿದೆ ಅಂತಾಗಿರಬಹುದು ಅಥವಾ ದೇವಸ್ಥಾನ ಕೊಟ್ಟಿದ್ದಕ್ಕೆ ಒಪ್ಪಿಕೊಂಡಿದ್ದ ಡೀಲ್ ನ ಬಾಕಿ ಹಣ ವಸೂಲಿಗಾಗಿ ಒಳಗೊಳಗೆ ಕಸರತ್ತು ನಡೆದಿರಬಹುದು! ಇದೆಲ್ಲ ಅವರವರಿಗೆ ಶೋಭಾ ಯಮಾನವೇ ಹೊರತು ಸಮಾಜಕ್ಕೆ ಶ್ರೇಯಸ್ಸು ತರುವಂಥದ್ದಲ್ಲ.

ಹಸುವಿನ ಕಿವಿಯೂರಿನ ಜನ ವೃತ್ತಿ ಕಳೆದುಕೊಂಡು, ಹೊಟ್ಟೆಯಮೇಲೆ ತಣ್ಣೀರುಪಟ್ಟೆ ಹಾಕಿಕೊಂಡು, ಮಠದ ದಾಂಡಿಗರು ಬುಟ್ಟಿತುಂಬ ಹೊತ್ತುಕೊಂಡು ಹೋಗುವುದನ್ನು ನೋಡುತ್ತಿದ್ದಾರೆ ಪಾಪ. ಸಹಸ್ರಮಾನಗಳಿಂದ ಅಲ್ಲಿ ಪೂಜೆಯನ್ನು ಸ್ವೀಕರಿಸಿದ ಲಿಂಗ ದೇವ ಸದ್ಯದಲ್ಲೆ ತನ್ನ ಇಚ್ಛೆಯನ್ನು ಹೊರಗೆಡಹುವ ದಿನ ಬರಬಹುದು; ಬರುತ್ತದೆ. ಯಾಕೆಂದರೆ ವಾಮಾಚಾರಗಳ ಫಲ ಶಾಶ್ವತವಲ್ಲ; ಅದು ಒಂದಷ್ಟು ಕಾಲ ನಡೆದೀತು. ಅದು ಕೇವಲ ಪೇನ್ ಕಿಲ್ಲರ್ ಅಷ್ಟೇ; ಶಾಶ್ವತ ಕಾಯಿಲೆಯನ್ನು ದೂರಗೊಳಿಸೋದಿಲ್ಲ, ಅವಧಿ ಮುಗಿದ ಮೇಲೆ ಮತ್ತೆ ನೋವು ಕಾಣಿಸಿಕೊಳ್ಳುತ್ತದೆ!

ಎಷ್ಟು ದಿನ ಅಂತ ಡೊಂಬರಾಟ ನಡೆಸ್ತಾನೆ? ಆಟ ನೋಡಿ ಕಾಣಿಕೆ ಹಾಕೋರು ಬೇಕಲ್ಲ? ದಯಮಾಡಿ ಇವನ ಸವಿಸ್ತಾರ ರಾಸಲೀಲೆಗಳನ್ನು ಉತ್ತರ ಭಾರತದಲ್ಲಿ ಪ್ರಚಾರ ಮಾಡಿ. ಯಾಕೆಂದರೆ ಇಲ್ಲಿನ ದುಡ್ಡು ಕಟ್ಟಿಕೊಂಡು ಓಡಿಹೋಗಿ ಉತ್ತರ ಭಾರತದಲ್ಲಿ ರಾಸಲೀಲೆಯ ಮಠ ಕಟ್ಟುವ ಸಾಧ್ಯತೆಯೂ ಇದೆ. ಇವನ ರಾಸಲೀಲೆಗಳ ಸಿಡಿ ನಕಲಿ ಎಂದಾದರೆ ಇವನೇಕೆ ಆಕ್ಷೇಪಣಾ ಅರ್ಜಿ ಹಾಕಲಿಲ್ಲ? ಒಪ್ಪಿತ ಸಂಭೋಗ ಎಂದಾಗಲೂ ಕಂಡರೂ ಕಾಣದಂತೆ ಮುಗುಮ್ಮಾಗಿ ಇದ್ದಿದ್ದೇಕೆ? ಏಕೆ ಗೊತ್ತೇ? ಕೆಣಕಿದರೆ ಮತ್ತೆ ಬಾಕಿ ಇರುವ ಮೂರು ಸೇರಿ ಎಲ್ಲಾ ಟೆಸ್ಟುಗಳಿಗೂ ಎಳೆದುಕೊಂಡು ಹೋಗ್ತಾರೆ! ಹಹಹ.

ಅದೆಲ್ಲ ಹಾಗಿರಲಿ, ಇವ ಹಿಂದೊಮ್ಮೆ ಅಜಾತಶತ್ರುವಾಗಿದ್ದನಲ್ಲ, ಆಗವನಿಗೆ ಉಳಿದ ಸಮಾಜಗಳ ಜನರ ಸಖ್ಯ ಬೇಕಾಗಿರಲಿಲ್ಲ. ಮೂಲವೇ ಸರಿಯಿಲ್ಲದ ಈ ಮಠ ಒಂದೇ ಸಮಾಜದಿಂದ ವರಾಡ ಎತ್ತಿ ತನ್ನ ಆರ್ಥಿಕ ಸಂಪತ್ತನ್ನೂ ಸ್ತಿರಾಸ್ತಿ-ಚರಾಸ್ತಿಗಳನ್ನೂ ಹೆಚ್ಚಿಸಿಕೊಂಡಿತು. ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬಂತೆ ಕಚ್ಚೆಹರುಕ ಕಳ್ಳ ಸನ್ಯಾಸಿಗೆ ರಕ್ಷಣೆಗಾಗಿ ಈಗ ಉಳಿದ ಸಮಾಜಗಳ ಜನ ಬೇಕು; ಸಿಲ್ಲಿಲಲ್ಲಿ ಧಾರಾವಾಹಿಯಲ್ಲಿ “ಒನ್ ಅಂಡ್ ಓನ್ಲಿ….. ನನ್ನನ್ನು ನಂಬಿ ಪ್ಲೀನ್ ಪ್ಲೀಸ್” ಅಂತಿದ್ದ ಹಾಗೆ ಈ ಹೋರಿ ಈಗ ಕಂಡವರ ಕಾಲನ್ನೆಲ್ಲ ನೆಕ್ಕುತ್ತಿದೆ.

ಸಮಾನ ಆಸನಗಳು, ಒಂದೇ ವೇದಿಕೆ, ಛತ್ರಿ, ದಂಡಗಳೆಲ್ಲ ಬೇಡ, ಯಾರನ್ನು ಬೇಕಾದರೂ ಆಲಂಗಿಸಿಕೊಳ್ಳಬಹುದು. ಅದುಸರಿ ಬಿಡಿ, ಹೇಗೂ ಏಕಾಂತದಲ್ಲಿ ಆಲಂಗಿಸಿಕೊಂಡು ಅದೇ ಹೆಚ್ಚಿಗೆ ಅಭ್ಯಾಸವಾಗಿಬಿಟ್ಟಿದೆ. ಗಂಡಸರನ್ನು ತಬ್ಬಿಕೊಂಡಾಗ ಸ್ವಲ್ಪ ತ್ರಾಸಾಗಬಹುದು. ವೇದಿಕೆಯಿಂದ ಇಳಿದು ಏಕಾಂತಕ್ಕೆ ಹೋದಮೇಲೆ ಹೇಗೂ ನೀತಾ ಗುಂಜಪ್ಪ, ಬೇರ್ಪಡುವ ಮಂಡಲಾಧ್ಯಕ್ಷರು ಯಾರೂ ಸಿಗದಿದ್ದರೆ ಅಶ್ವಿನಿ ನಕ್ಷತ್ರ ಇದ್ದೇ ಇದೆಯಲ್ಲ, ಅದೂ ಇಲ್ಲದಿದ್ದರೆ ಗಿಂಡಿಗಳ ಹತ್ತಿರ ಬೋರಲಾಗಿ ಮಲಗಿಕೊಳ್ಳಿ ಎಂದು ಹೇಳಬಹುದು!

ಇನ್ನೂ ಕೆಲವು ಕಾಲ ನಾವೆಲ್ಲ ತಾಳ್ಮೆಯಿಂದಿರಬೇಕಾಬಹುದು. ಜೊತೆಗಿರುವವರು ಒಬ್ಬೊಬ್ಬರಾಗಿ ಅವರವರ ವ್ಯವಹಾರ ಮುಗಿಸಿಕೊಂಡು ಮುರಿದ ಮನಸ್ಸಿನಿಂದ ದೂರವಾಗುವವರೆಗೆ. ಅಮೇಲೊಂದು ದಿನ ಮಠದ ಬಾಗಿಲನ್ನು ತೆರೆಯಲೂ ಜನ ಇರೋದಿಲ್ಲ-ಅಂತಹ ಸ್ಥಿತಿ ಬರುತ್ತದೆ. ಸದ್ಯಕ್ಕೆ ಹಿಂದೂ ಧರ್ಮದ ಮೇಲೆ ದಾಳಿ ಎಂಬ ಟೈಟಲ್ ನಲ್ಲಿ ತನ್ನನ್ನು ಬಚ್ಚಿಟ್ಟುಕೊಂಡು ಮಹಾಸಂಭಾವಿತ ಸಂತನಂತೆ ಪೋಸುಕೊಡುತ್ತಿರುವ ಖದೀಮನನ್ನು ಕಂಡಾಗ ಕೌರವನ ಸರೋವರದ ಕಥೆ ನೆನಪಿಗೆ ಬರುತ್ತದೆ. ಭಗವಂತನ ಶಕ್ತಿ ನಿಸರ್ಗ ಧರ್ಮವಾಗಿ ಮೈವೆತ್ತು ನ್ಯಾಯದ ಭೀಮನನ್ನು ಕಳಿಸುತ್ತದೆ. ಧರ್ಮರಕ್ಷಣೆಯ ಕುರುಡರ ಸರೋವರದಲ್ಲಿ ಮುಳುಗಿದ ಸಗಣಿ ಕೌರವನನ್ನು ಹೊರಗೆಳೆದು ಅವನ ವೃಷಣದಮೇಲೆ ಒದೆದು ಪುಡಿಮಾಡುತ್ತಾನೆ. ಹಸುವಿನ ಕಿವಿಯೂರಿನ ಮಂದಿ ಮಹಾಬಲ ಶಾಲಿಯಾದ ಪಟಾಕಿಗಳನ್ನು ಸಿಡಿಸಿ ಮತ್ತೆ ಬದುಕು ಕಟ್ಟಿಕೊಳ್ಳುತ್ತಾರೆ.

[ಲಿಂಕ್ ನಲ್ಲಿ ತಮಾಷೆಯ ವೀಡಿಯೋ ನೋಡಿ, ಈ ಕಥೆಗೂ ಆ ಕಥೆಗೂ ಹೋಲಿಕೆಮಾಡ್ತಾರೆ ಅನೇಕರು]

Thumari Ramachandra

Part 1:
source: https://www.facebook.com/groups/1499395003680065/permalink/1836817959937766/

Part 2:
source: https://www.facebook.com/groups/1499395003680065/permalink/1836821659937396/

Part 3:
source: https://www.facebook.com/groups/1499395003680065/permalink/1836821826604046/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s