ಪರಮ ಋಷಿ ಮಂಡಲದ ಮಧ್ಯದಿ ಮೆರೆವ ಯಜ್ಞೇಶ್ವರನ ಪ್ರಭೆಯಲಿ

ಪರಮ ಋಷಿ ಮಂಡಲದ ಮಧ್ಯದಿ ಮೆರೆವ ಯಜ್ಞೇಶ್ವರನ ಪ್ರಭೆಯಲಿ

ಅಂದಹಾಗೆ ನಮ್ಮ ತೊನೆಯಪ್ಪ ಸ್ವಾಮಿಗಳು ಮಗಂದೂರಿನಲ್ಲಿ ಗೂಟ ಅಲ್ಲಾಡಿಸುತ್ತ ಕೂತಿದ್ದಾರೆ. ಮಗಂದೂರು ಭಟ್ಟ ಪಾಪ ಎಂಟು ಕೋಟಿ ಕೊಟ್ಟಿದ್ದ; ದುಡ್ಡು ಬರಲಿಲ್ಲ; ಕೊಡ್ತೇನೆ ಎಂದು ಕಾಗೆ ಹಾರಿಸುತ್ತಲೇ ಇರುವ ತೊನೆಯಪ್ಪನ ಮಾತಿನಲ್ಲಿ ಇನ್ನೂ ವಿಶ್ವಾಸ ಕಳೆದುಕೊಳ್ಳದೆ ಮತ್ತೆ ಹೊರಗಿನಿಂದ ಬೆಂಬಲಿಸಿದ್ದಾನೆ; ಒಳಗಿನ ಗುಟ್ಟು ಪರಬ್ರಹ್ಮನೇ ಬಲ್ಲ!

ತೊನೆಯಪ್ಪ ಮಗಂದೂರಿನಲ್ಲಿ ಠಿಕಾಣಿ ಹೂಡಿರುವುದು ದುಡ್ಡು ಗುಮ್ಮಲಿಕ್ಕಾಗಿ. ನಿತ್ಯ ಲಕ್ಷೋಪಲಕ್ಷ ಹರಿದು ಬರುತ್ತದೆ. ಅದರಲ್ಲೂ ಹಬ್ಬದ ಸಮಯದಲ್ಲಿ ಒಂದು ತಿಂಗಳು ಅಲ್ಲೇ ಇದ್ದುಬಿಟ್ಟರೆ ಎರಡೂ ಕೈಗಳಲ್ಲೂ ಮೊಗೆದು ತನ್ನ ಬೊಕ್ಕಸ ತುಂಬಿಸಿಕೊಳ್ಳಬಹುದು ಎಂಬ ದುರಾಲೋಚನೆಯಿಂದಲೇ ಅಲ್ಲಿಗೆ ಹೋಗಿ ಕೂತಿರೋದು. ಅಲ್ಲಿಂದ ತುಂಬಿಸಿಕೊಂಡುಬಂದು ಮುಂದೆ ಕಚ್ಚೆಕತೆ ಮುಚ್ಚಲು ಬೇಕಾದಾಗ ಅದನ್ನು ಬಳಸಿಕೊಳ್ಳೋದು!! ಹಾಗಾಗಿಯೇ “ಗುಳುಂ ಸ್ವಾಹಾ” ಕಾರ್ಯಕ್ರಮಕ್ಕೆ ಬೇರೆ ಹೆಸರಿಟ್ಟುಕೊಂಡು ಅಲ್ಲಿ ಕೂತಿದ್ದಾನೆ. ಭಟ್ಟನ ಎಂಟು ಕೋಟಿ….ಗೋವಿಂದ ಗೋವಿಂದ.

ಅಲ್ಲ ಸ್ವಾಮಿ, ಯಾವುದೋ ದೇವಸ್ಥಾನ ಅದನ್ನು ಮೊದಲು ನೋಡಿಕೊಳ್ತಿದ್ದವರು ಪುನಃ ತೆಗೆದುಕೊಂಡರೆ ಇವನ ಗಂಟೇನು ಹೋಗುತ್ತೆ? ವಿಷಯ ಇರೋದು ಅಲ್ಲೇ ನೋಡಿ. ಆಳುವವರೇ ಲೂಟಿ ಮಾಡ್ತಾರೆ ಅಂತ ಹೇಳಿದ್ದಾನೆ.ಸಾರ್ವಜನಿಕರ ದುಡ್ಡು ಹೋದರೆ ಹೋಗಲಿ ಬಿಡಿ, ಇವನಿಗೇನು ಕಷ್ಟ? ಇಅವನು ಇವನ ಮಠವನ್ನು ನೆಟ್ಟಗೆ ನೋಡಿಕೊಂಡರೆ ಸಾಕಲ್ಲ?ದೇವಸ್ಥಾನದಿಂದ ಪೈಸೆಯನ್ನೂ ತೆಗೆದುಕೊಳ್ಳದ ಮಹಾತ್ಮನಿಗೆ ಸದಾ ಬೊಕ್ಕಸದ್ದೇ ಚಿಂತೆ!ಅವನ ಮಾತುಗಳಲ್ಲಿ ಎಲ್ಲಿಂದ ಎಲ್ಲಿಗೆ ಹೋದರೂ ಹಣದ ದಾಹ ಕಂಡೆ ಕಾಣುತ್ತದೆ. ಹಾದರದವರೇ ಹಾಗೆ; ಅವರಿಗೆ ಚಟ್ಟ ಏರುವವರೆಗೂ ಚಟಕ್ಕೊಂದಷ್ಟು ರೆಡಿ ಮಾಡಿಕೊಳ್ಳುತ್ತಲೆ ಇರಬೇಕಾಗುತ್ತದಂತೆ.

ಯಾರದೋ ಬಂಧನ ಮತ್ತು ಬಿಡುಗಡೆಯ ಬಗ್ಗೆ ಕೆಲವರು ಒಳ್ಳೆಯ ಮಾತನಾಡಿದರಲ್ಲ, ಬಂಧನಗೊಂಡ ವ್ಯಕ್ತಿಯ ಚಹರೆ-ಚರಿತ್ರೆಯನ್ನು ಗಮನಿಸಿದರೆ ಆ ವ್ಯಕ್ತಿಗೆ ಇನ್ನೊಬ್ಬರ ಬಗ್ಗೆ ಹೇಳುವ ಯಾವುದೇ ಅರ್ಹತೆಯೂ ಇಲ್ಲ. 35 ಹೆಚ್ಚು PCRಗಳಿವೆ. ಆದರೂ ಕಾಮಿಸ್ವಾಮಿಯ ಕಾಮದ ಮಜಲುಗಳನ್ನು ಬರೆದಿದ್ದಕ್ಕಷ್ಟೆ ನೀವಿಲ್ಲಿ ಹಾಗೆ ಹಾಕಿರಬಹುದು ಎಂದುಕೊಳ್ತೇನೆ.

ಇಂದಿನ ಪ್ರಸಂಗವನ್ನು ವಿಸ್ತರಿಸಲು ಕೆಲವು ಉಪಕಥೆಗಳು ಸಹಜ ಮತ್ತು ಅನಿವಾರ್ಯ. ಹಿಂದೊಂದು ಸಮಯದಲ್ಲಿ ಜ್ಞಾನ ಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ಕ್ರಿಯಾಯೋಗದ ತಲಾ ಒಬ್ಬೊಬ್ಬರು ಒಂದೆಡೆ ವಾದಕ್ಕಿಳಿದರಂತೆ. ಆ ’ಮಹಾಪಂಡಿತರುಗಳಿಗೆ’ ಅವರವರ ಯೋಗದ ವ್ಯಾಪ್ತಿಯೇ ಸರಿಯಾಗಿ ಗೊತ್ತಿರಲಿಲ್ಲ. ಆದರೂ, ಜ್ಞಾನಯೋಗದವ ಉಳಿದ ಮೂರನ್ನು ಅನುಸರಿಸುವವರನ್ನೂ, ಭಕ್ತಿಯೋಗದವ ಉಳಿದ ಮೂರು ಯೋಗದವರನ್ನೂ, ಕರ್ಮಯೋಗದವ ಉಳಿದ ಮೂರು ಯೋಗದವರನ್ನೂ ಹಾಗೂ ಕ್ರಿಯಾಯೋಗದವ ಉಳಿದ ಮೂವರನ್ನೂ ವ್ಯಾಖ್ಯಾನಿಸುತ್ತ ತಮ್ಮ ತಮ್ಮ ಯೋಗಮಾರ್ಗಗಳೇ ಸರಿ ಎನ್ನುತಿದ್ದರು.

ಈ ನಾಲ್ಕು ಯೋಗಗಳವರು ಒಮ್ಮತ ಬರುವುದು ಸಾಧ್ಯವೇ ಇಲ್ಲ. ಆದರೆ ಅವರೆಲ್ಲರ ಗುರಿಯೊಂದೆ: ಉತ್ತಮ ಮಾರ್ಗದಲ್ಲಿ ದೇವರನ್ನು ಕಾಣೋದು. ಆದರೆ ಯಾರಿಗೂ ಬಹಳ ಕಾಲ ದೇವರು ಕಾಣಲೇ ಇಲ್ಲವಂತೆ. ವಾದ ನಡೆಯುತ್ತಿದ್ದ ಕಾಡಿನ ಭಾಗದಲ್ಲಿ ಜೋರಾಗಿ ಮಳೆ ಆರಂಭವಾಯ್ತಂತೆ. ಮಳೆ ಅಷ್ಟು ಬೇಗ ನಿಲ್ಲುವಂತಿರಲಿಲ್ಲ. ವಾದ ಹಾಗಿರಲಿ, ಸದ್ಯಕ್ಕೆ ಆಶ್ರಯ ಬೇಕಾಯ್ತಲ್ಲ? ಹೀಗಾಗಿ ಜೋರಾಗಿ ಓಡುತ್ತ ಕಾಡೊಳಗಿನ ಹಾಳುಬಿದ್ದ ಗುಡಿಯೊಂದನ್ನು ಕಂಡರಂತೆ.

ಆ ಗುಡಿಯ ಹೊರಾವರಣದ ಗೋಡೆಗಳೆಲ್ಲ ಹರಿದುಬಿದ್ದು ಕೇವಲ ಗರ್ಭಗುಡಿ ಮಾತ್ರ ಉಳಿದುಕೊಂಡಿತ್ತಂತೆ. ನಾಲ್ಕೂ ಜನ ’ಪಂಡಿತರು’ ಅನಿವಾರ್ಯವಾಗಿ ಅತಿಚಿಕ್ಕದಾಗಿದ್ದ ಒಂದೇ ಗರ್ಭಗುಡಿಗೆ ನುಗ್ಗಿ ಅಲ್ಲಿ ಪರಸ್ಪರ ಮೈಕೈ ತಾಗಿಸಿಕೊಂಡು ನಿಂತರಂತೆ. ಕತ್ತಲಾವರಿಸಿ ಮಿಂಚು ಸುಳಿದು ಮಿಂಚಿನ ಬೆಳಕಲ್ಲಿ ದೇವರು ಕಾಣಿಸಿಕೊಂಡನಂತೆ.

“ಅಲ್ಲಯ್ಯ ಭಗವಂತ, ನಾವು ಎಷ್ಟೆಲ್ಲ ಕರೆದೆವು ಆಗ ನೀನು ಬರಲಿಲ್ಲ. ಈಗ ಏಕೆ ಬಂದೆ?” ಎಂದು ಎಲ್ಲರೂ ಒಕ್ಕೊರಲಿನಿಂದ ಕೇಳಿದರಂತೆ. ದೇವರು ನಗುತ್ತ ಹೇಳಿದನಂತೆ-“ನೀವೆಲ್ಲ ಎಂದೂ ಒಂದಾಗುವವರಲ್ಲ ಎಂಬುದು ನನಗೆ ಖಚಿತವಾಗಿತ್ತು. ಇಂದು ಇಲ್ಲಿ ಹೀಗಾದರೂ ಒಂದಾಗಿ ನಿಂತಿರಲ್ಲ ಎಂದು ಸಂತೋಷವಾಯ್ತು. ಅದಕ್ಕೇ ಪ್ರತ್ಯಕ್ಷನಾದೆ.”

ಕಚ್ಚೆಶೀಗಳ ವಿಷಯದಲ್ಲಿ ಸಮಾಜವೂ ಹಾಗೆ. ಅವ ಕಚ್ಚೆಹರುಕ ಎಂಬುದಕ್ಕೆ ಹೊಸ ಪುರಾವೆಗಳ ಅಗತ್ಯವಿಲ್ಲ. ಪರಂಪರೆಯ ಧರ್ಮಪೀಠದಲ್ಲಿ ಕಚ್ಚೆಹರುಕನೊಬ್ಬ ಕುಳಿತು ಗುರುವೆಂದು ಹೇಳಿಕೊಳ್ಳುವುದು ತಾನೇ ದೇವರ ಅವತಾರಿ ಎಂದು ಹೇಳಿಕೊಳ್ಳುವುದು ಕಾಣುತ್ತಲೇ ಇದೆ. ಮತ್ತು ಅಂತಹ ವ್ಯಕ್ತಿ ಪೀಠದಲ್ಲಿ ಇರಬಾರದೆಂದು ಧರ್ಮ ಸಾರುತ್ತದೆ.

ಕಚ್ಚೆಶೀಯ ವಿಷಯದಲ್ಲೂ ನಾಲ್ಕು ಮಾರ್ಗದ ’ಪಂಡಿತರುಗಳಿ’ದ್ದಾರೆ. ಮೊದಲನೆಯವರು ಜ್ಞಾನಮಾರ್ಗದವರು, ಅವರು ತಾವು ಓದಿಕೊಂಡ-ತೊನೆಯಪ್ಪ ಮುದ್ರಿಸಿದ ಮಠದ ಪಠ್ಯವೇ ಪರಮಜ್ಞಾನ ಎಂಬ ಅಹಂಕಾರವುಳ್ಳವರು. ಎರಡನೆಯವರು ಕುರಿ ಬಳಗ ಮೇಯಲು ಹೋದಂತೆ ತಲೆತಲಾಂತರದಿಂದ ಮಠಕ್ಕೆ ಕಣ್ಮುಚ್ಚಿ ತೆರಳಿ ಅಡ್ಡಬೀಳುವವರು;ಮಠದಲ್ಲಿ ಏನು ನಡೆಯುತ್ತದೆ ಎಂಬುದರ ಬಗ್ಗೆ ಆಸಕ್ತಿಯಿಲ್ಲದವರು.

ಸ್ವಗತದಲ್ಲಿ “ಗಂಡನಲ್ಲಿ ಸಿಗದ ಮಜ ಮಿಂಡನಲ್ಲಿ ಸಿಗುತ್ತಿದೆಯಲ್ಲ”ಎಂಬ ಅನುಭವದಿಂದ ತೊನೆಯಪ್ಪನೇ ಭಗವಂತ ಎಂದು ಹೇಳುತ್ತ ಸಮಾಜದ ಕಣ್ಣುಮುಚ್ಚಿಸಲು ಯತ್ನಿಸುವ ’ಫಲಾನುಭವಿ ಏಕಾಂತ ಭಕ್ತೆಯರು’ ಕರ್ಮಮಾರ್ಗಿಗಳು. ತೊನೆಯಪ್ಪನಿಂದ ಪ್ರಾಯೋಜಿತರಾಗಿ ತಮ್ಮ ಬ್ಯುಸಿನೆಸ್ಸುಗಳನ್ನು[ಉದಾಹರಣೆಗೆ ಆಸ್ಪತ್ರೆ, ಬಸ್ಸುಗಳು ಇತ್ಯಾದಿ] ನಡೆಸುತ್ತಿರುವವರು ಮತ್ತು ಇದಲ್ಲದೆ ಹಲವಾರು ವಿಷಯಗಳಲ್ಲಿ ಮಠಕ್ಕೆ ಬರುವ ನಗ-ನಗದುಗಳನ್ನು ನಗುತ್ತ ತಮ್ಮ ಬೊಕ್ಕಸಕ್ಕೆ ಬಾಚಿಕೊಳ್ಳುವವರು. ವಿಚಿತ್ರವೆಂದರೆ ಇಲ್ಲಿ ಈ ನಾಲ್ಕೂ ಮಾರ್ಗಗಳವರು ತೊನೆಯಪ್ಪನ ರಕ್ಷಣೆಗೆ ಒಟ್ಟಾಗಿದ್ದಾರೆ!

ಈಗ ಎರಡನೆಯ ಕತೆಯನ್ನು ಕೇಳಿ-ಕುರುಡು ಸನ್ಯಾಸಿಯೊಬ್ಬ ಕಾಡಿನ ನಡುವೆ ಮರದ ಬುಡದಲ್ಲಿ ಕುಳಿತು ತಪಸ್ಸಿಗೆ ತೊಡಗಿದ್ದನಂತೆ. [ಯಾರದೋ ಸಹಾಯದಿಂದ ಅಲ್ಲಿಗೆ ಹೋಗಿರಬಹುದು ಎಂದೇ ಇಟ್ಟುಕೊಳ್ಳಿ, ಪರವಾಗಿಲ್ಲ.] ಬಹಳ ಉನ್ನತಮಟ್ಟದ ಸನ್ಯಾಸಿ; ಅವನಿಗೆ ಹಗಲು-ರಾತ್ರಿಗಳ ಭೇದಗಳಿರಲಿಲ್ಲ, ಹಸಿವು-ಆಯಾಸಗಳ ಪರಿವೆಯಿರಲಿಲ್ಲ. ಧ್ಯಾನಸ್ಥನಾಗಿ ಕುಳಿತು ಈ ಲೋಕವನ್ನೆ ಮರೆತಿದ್ದ.

ನಾಡಿನ ದೊರೆ ಬೇಟೆಯಾಡುತ್ತ ಅನಿರೀಕ್ಷಿತವಾಗಿ ಆ ಕಾಡಿಗೆ ಬಂದನಂತೆ. ಮೃಗಗಳನ್ನು ಬೆಂಬತ್ತಿ ಕಾಡೊಳಗೆ ಓಡುತ್ತ ಅರಸ, ಮಂತ್ರಿ, ಸೇನಾಧಿಪತಿ ಮತ್ತು ಸೈನಿಕರೆಲ್ಲ ದಿಕ್ಕಾಪಾಲಾಗಿ ಚದುರಿಹೋದರಂತೆ. ನಿತ್ಯಹರಿದ್ವರ್ಣ ದಟ್ಟ ಕಾಡು-ಸೂರ್ಯನ ಬೆಳಕೂ ಅಷ್ಟಕ್ಕಷ್ಟೆ. ಪ್ರೋಟೋಕಾಲ್ ಪ್ರಕಾರ ಉಳಿದವರೆಲ್ಲ ತಮ್ಮ ದೊರೆಯನ್ನು ಹುಡುಕತೊಡಗಿದರಂತೆ.

ಸೈನಿಕರು ಕೆಲವರು ಹುಡುಕುತ್ತ ಹಾದಿಯಲ್ಲಿ ಕುರುಡು ಮಹಾಮುನಿ ಕುಳಿತಿದ್ದನ್ನು ಕಂಡು, ಸಮೀಪಿಸಿ,”ಏ ಮುದಿಯ, ಇಲ್ಲಿಗೇನಾದರೂ ನಮ್ಮ ಮಹಾರಾಜರು ಬಂದಿದ್ದನ್ನು ನೋಡಿದೆಯೋ”ಎಂದು ಕೇಳಿದರು. ಸನ್ಯಾಸಿ ಸುಮ್ಮನಿದ್ದ. ಅವರಿ ಹೊರಟುಹೋದರು. ನಂತರ ಹುಡುಕುತ್ತ ಬಂದ ಸೇನಾಧಿಪತಿ ಕುರುಡು ಸನ್ಯಾಸಿಯನ್ನು ಕಂಡು, “ಮುನಿಗಳೇ ನಮ್ಮ ಮಹಾರಾಜರನ್ನು ಕಂಡಿದ್ದರೆ ಹೇಳಬೇಕಾಗಿ ಅಪ್ಪಣೆ” ಎಂದ. ಸನ್ಯಾಸಿ ಆಗಲೂ ಸುಮ್ಮನಿದ್ದ. ಸೇನಾಧಿಪತಿ ಹೊರಟುಹೋದ.

ಮಹಾಮಂತ್ರಿಗಳು ಅಲ್ಲಿಗೆ ಚಿತ್ತೈಸಿ ಕುರುಡು ಮುನಿಯಲ್ಲಿ, “ಮುನಿಗಳೇ ಇಲ್ಲೆಲ್ಲಾದರೂ ನಮ್ಮ ಮಹಾರಾಜರನ್ನು ತಾವು ಕಂಡಿರೇ?” ಎಂದು ವಿನಮ್ರನಾಗಿ ಕೇಳಿದ. ಆಗಲೂ ಸನ್ಯಾಸಿ ಮೌನಿಯಾಗಿದ್ದ. ಮಂತ್ರಿ ಹೊರಟುಹೋದ. ಕೊನೆಗೆ ತನ್ನ ಪರಿವಾರಗಣವನ್ನು ಹುಡುಕುತ್ತ ಸ್ವತಃ ರಾಜನೇ ಕುರುಡು ಮುನಿಯಿದ್ದೆಡೆಗೆ ಧಾವಿಸಿ, ಮುನಿಯನ್ನು ಕಂಡು ಅತ್ಯಂತ ವಿನೀತನಾಗಿ, ಮಂಡಿಯೂರಿ ಕೈಮುಗಿದು,”ಮಹಾಸ್ವಾಮಿ ನನ್ನ ಮಂತ್ರಿ, ಸೇನಾಧಿಪತಿ, ಸೈನಿಕರು ಎಲ್ಲರೂ ಕಾಡಿನಲ್ಲಿ ಕಳೆದುಹೋಗಿದ್ದಾರೆ. ತಮ್ಮಲ್ಲಿಗೇನಾದರೂ ಅವರು ಬಂದದ್ದು ತಮ್ಮ ಗಮನಕ್ಕೆ ಬಂದಿದ್ದರೆ ಅರುಹಬೇಕಾಗಿ ವಿನಂತಿಸಿಕೊಳ್ಳುತ್ತೇನೆ” ಎಂದ.

ಪ್ರಸನ್ನನಾದ ಕುರುಡು ಮುನಿ ಆಗ ಹೇಳಿದ-“ರಾಜಾ, ನಾನೋರ್ವ ಕುರುಡು ಮುನಿ, ಅದರಲ್ಲೂ ತಪಸ್ಸಿಗೆ ಕುಳಿತವನು. ನಿನ್ನ ಮಂತ್ರಿ, ಸೇನಾಧಿಪತಿ ಮತ್ತು ಸೈನಿಕರೆಲ್ಲ ನಿನ್ನನ್ನೆ ಹುಡುಕುತ್ತ ಇಲ್ಲಿಗೆ ಬಂದಿದ್ದರು. ಮೊದಲು ಸೈನಿಕರು ಬಂದಿದ್ದರು, ನಂತರ ಸೇನಾಧಿಪತಿ ಬಂದಿದ್ದ, ನಂತರ ಮಂತ್ರಿ ಬಂದಿದ್ದ, ಈಗ ನೀನು ಬಂದಿದ್ದೀಯೆ. ಅವರೆಲ್ಲ ಹುಡುಕುತ್ತ ಹೊರಟು ಹೋದರು.” ಎಂದು ಹೇಳಿದ.

ಕುರುಡುಮುನಿಯ ಮಾತಿನಿಂದ ಅಚ್ಚರಿಗೊಂಡ ರಾಜ ಕೇಳಿದ,”ಮಹಾಮುನಿಗಳೇ, ತಮಗೆ ಕಣ್ಣು ಕಾಣುವುದಿಲ್ಲ ಎಂದು ಹೇಳುತ್ತೀರಿ. ಹಾಗಾದರೆ ಬಂದವರು ಕ್ರಮವಾಗಿ ಸೈನಿಕರು, ಸೇನಾಧಿಪತಿ, ಮಂತ್ರಿ ಮತ್ತು ಈಗ ರಾಜ ಎಂದು ಹೇಗೆ ಗುರುತಿಸಿದಿರಿ?”

“ರಾಜಾ, ಬಂದವರ ಮಾತುಗಳಿಂದ ಅವರ ಸಂಸ್ಕಾರವೆಂಥದ್ದು ಎಂಬುದು ಗೊತ್ತಾಯಿತು. ಮೊದಲನೆಯವ ಏಕವಚನದಲ್ಲಿ ಅಬ್ಬರಿಸಿದ, ಅವ ಸೈನಿಕನೇ ಎಂದು ಅರ್ಥವಿಸಿದೆ, ನಂತರ ಬಂದವ ಅಪ್ಪಣೆ ನೀಡುವ ರೀತಿಯಲ್ಲಿ ಕೇಳಿದ, ಅವ ಸೇನಾಧಿಪತಿ ಎಂದರ್ಥವಾಯ್ತು, ನಂತರ ಬಂದವ ಸಲಹೆಗಾರನಂತೆ ಸಲುಗೆಯಿಂದ ಕೇಳಿದ, ಅವ ಮಂತ್ರಿ ಎಂಬುದು ಸ್ಪಷ್ಟವಾಯ್ತು. ನಿನ್ನ ವಿನೀತ ದೈನ್ಯ ಪ್ರಾರ್ಥನೆ ನೀನು ಜವಾಬ್ದಾರಿಯುಳ್ಳ ರಾಜನ ಹುದ್ದೆಯಲ್ಲಿರುವೆಯೆಂದು ತಿಳಿಸಿತು” -ಕುರುಡು ಮುನಿ ವಿಷಯ ಮುಗಿಸಿದ.

ನಮ್ಮ ಶೋಭರಾಜಾಚಾರ್ಯ ಜಗದ್ಗುರುಗಳ ಸಂಸ್ಥಾನದಲ್ಲಿ ಇದೆಲ್ಲವೂ ಉಲ್ಟಾ. ವಿನೀತರಾದ ಬಕರಾ ಭಕ್ತರು ಅಲ್ಲಿದ್ದಾರೆ; ಆದರೆ ಅವರು ಸಂಪರ್ಕಕ್ಕೆ ಸಿಗುವುದಿಲ್ಲ. ಗುರುಪೀಠವೆಂದು ಹೆದರಿಸಿ,ಬೆದರಿಸಿ ವಸೂಲಿಗಿಳಿಯುವ ಗುರಿಕಾರರಿದ್ದಾರೆ, ಅವರು ಬಿಡುವುದಿಲ್ಲ. ಮಠದ ಹಣವನ್ನು ಸೂರೆಗೊಂಡ ಕುಲಪತಿ ಕುಳ್ಳ ಬಾವಯ್ಯ ಮಂತ್ರಿಗಳಾಗಿದ್ದು ಸಭೆಗಳಲ್ಲಿ ವಿನಮ್ರಭಾವವನ್ನು ಪ್ರದರ್ಶಿಸುತ್ತಾರೆ. ಕಚ್ಚೆಸಮಸ್ಯೆಗಳನ್ನು ಮುಚ್ಚಿಹಾಕುವುದಕ್ಕೆ ಸಹಾಯ ಬಯಸಿ ಹಾದಿಬೀದಿಹೋಕ ಕಾವಿಧಾರಿಗಳನ್ನೆಲ್ಲ ಕರೆದು ಫಲತಾಂಬೂಲ ಶಾಲು ಭಕ್ಷೀಸು ಕೊಟ್ಟು “ಒಟ್ಟಿಗೇ ಇರೋಣ, ಒಟ್ಟಾಗಿ ಎದುರಿಸೋಣ” ಎಂದು ವಿನೀತನಾಗಿ ವಿನಂತಿಸಿಕೊಳ್ಳುವ ಮಾಹಾರಾಜಾಧಿರಾಜ ತೊನೆಯಪ್ಪ ಪ್ರಭುಗಳು ಅಲ್ಲಿದ್ದಾರೆ; ತಮ್ಮ ’ಪ್ರವಚನ’ಗಳಲ್ಲಿ ರೌಡಿಗಳ ರೀತಿ ಭೀತಿ ಹುಟ್ಟಿಸುವ ಮಾತುಗಳನ್ನೇ ಆಡುತ್ತಾರೆ ಅವರು.

ತಮಾಷೆಯ ಎರಡು ಕತೆಗಳ ನಂತರ ನಾವೀಗ ಗಂಭೀರ ವಿಷಯದತ್ತ ತೆರಳೋಣ. ಯಾವುದು ಪ್ರಾಚೀನ ಆರ್ಷ ಪಥ, ಯಾವ ಮಾರ್ಗದಲ್ಲಿ ಪರಮಾತ್ಮನನ್ನು ಕಾಣಬಹುದು ಎಂಬ ಕಾತರದಿಂದ ಬಹಳ ಅಧ್ಯಯನ ನಡೆಸಿದ್ದೇನೆ. ಪಾರಮಾರ್ಥಿಕ ಪಥದವರಿಗೆ ಪತಂಜಲಿಗಳ ಹಠಯೋಗವೇ ಮೊದಲ ಮೆಟ್ಟಿಲು. ಯೋಗ ಎಂಬುದು ಹೀಗೇನೆ ಎನ್ನುವ ಯಾವ ಗ್ರಂಥಗಳಾಗಲೀ ಕರಾರುವಾಕ್ಕಾದ ನೀತಿನಿಯಮಗಳಾಗಲೀ ದೊರೆಯದಿದ್ದ ಕಾಲದಲ್ಲಿ ಮಹರ್ಷಿ ಪತಂಜಲಿ ಭರತವರ್ಷಕ್ಕೆ ಕೊಟ್ಟ ಕೊಡುಗೆಯೇ ಯೋಗದರ್ಶನ.

ಯೋಗದರ್ಶನವನ್ನು ಅರ್ಧಂಬರ್ಧ ಬಳಸಿಕೊಂಡು ಮಧ್ಯಂತರದಲ್ಲಿ ಸಿಗುವ ಸಿದ್ಧಿಗಳಲ್ಲೆ ತೃಪ್ತಿಪಟ್ಟುಕೊಂಡು ತಂತ್ರಮಾರ್ಗವನ್ನು ಅನುಸರಿಸುವ ಹಲವು ಸಾಧಕರು ಹಿಮಾಲಯದೆಲ್ಲೆಡೆ ನಮಗೆ ಸಿಗುತ್ತಾರೆ; ಆದರೆ ಅದೇ ಮೋಕ್ಷವಲ್ಲ. ಪತಂಜಲಿಯೇ ಹೇಳಿದಂತೆ ದಾರಿಯಲ್ಲಿ ಅಡ್ಡಬರುವ ಸಿದ್ಧಿಗಳನ್ನು ಲೆಕ್ಕಿಸದೆ ಮುಂದೆ ಸಾಗುತ್ತ ಎಲ್ಲಾ ಹಂತಗಳನ್ನು ಮೀರಿದವ ಮಾತ್ರ ಭಗವಂತನನ್ನು ತಲುಪಲು ಸಾಧ್ಯ ಅಂತ.

ಹಾಗಾದರೆ ಹಲವು ಚಮತ್ಕಾರಗಳ್ನೋ ಪವಾಡಗಳನ್ನೋ ತೋರಿಸುವ ತಂತ್ರಮಾರ್ಗಿಗಳೆಲ್ಲ ಮೋಕ್ಷವನ್ನು ಪಡೆದವರು ಎನ್ನಲು ಸಾಧ್ಯವಿಲ್ಲ ಎಂದಾಯ್ತು. ಭಕ್ತಿಮಾರ್ಗದಲ್ಲಿ ಭಗವಂತನನ್ನು ಸೇವಿಸುವವರು ದೇವರನ್ನು ಮೂರ್ತಿರೂಪದಲ್ಲಿ ಅಷ್ಟು ದೂರ ಇಟ್ಟು ಆರಾಧಿಸುತ್ತಾರೆ. ಸೂರ್ಯನಿಗೆ ಮೋಡ ಕವಿದಾಗ ನಮಗೆ ಬಿಸಿಲು ದೊರೆಯುವುದೇ? ಇಲ್ಲ. ಆತ್ಮಸೂರ್ಯನ ಸುತ್ತ ಕರ್ಮಗಳ ಮೋಡ ಕವಿದುಕೊಂಡಿರುತ್ತದೆ.

ಜೀವಿ ದೇಹವನ್ನು ಬಿಟ್ಟುಹೋಗುವಾಗಲೂ ಆತ್ಮದೊಡನೆಯೇ ಮೆತ್ತಿಕೊಂಡು ಸಾಗುವುದು ಕರ್ಮಫಲಗಳು ಮಾತ್ರ. ಸುಗಂಧ ಸೂಸುವ ವಸ್ತುಗಳ ಗಂಧವನ್ನು ಗಾಳಿಯು ಎಲ್ಲೆಲ್ಲಿಗೋ ಹೊತ್ತೊಯ್ಯುವುದನ್ನು ನಾವು ಕಾಣುತ್ತೇವಲ್ಲ? ಪರಿಮಳವನ್ನು ಕಾಣುವುದು ಸಾಧ್ಯವೇ? ಅದು ಆಘ್ರಾಣಿಸುವಿಕೆಗೆ ನಿಲುಕುವ ವಿಷಯ. ಗಾಳಿಯು ಗಂಧವನ್ನು ಹೊತ್ತೊಯ್ದಂತೆ ಆತ್ಮವು ಕರ್ಮಫಲಗಳನ್ನು ಹೊತ್ತೊಯ್ಯುವುದು.

ಹಾಗಾದರೆ ಅತ್ಮಜ್ಞಾನ ಉಂಟಾಗುವುದು ಯಾವಾಗ? ಕರ್ಮಗಳ ಮೋಡ ಕರಗಿದಾಗ. ಹಾಗಾಗಿಯೇ ಸನ್ಯಾಸಿಗಳಿಗೆ ಕರ್ಮಗಳನ್ನು ಮಾಡುವುದನ್ನು ನಿಷೇಧಿಸಿದ್ದಾರೆ. ಪೂಜೆ ಮತ್ತು ಜಪ-ತಪ-ಧ್ಯಾನಗಳಿಗೆ ಸಂಬಂಧಿಸಿದ ಕರ್ಮಗಳನ್ನು ಬಿಟ್ಟರೆ ಉಳಿದ ಲೌಕಿಕ ಕರ್ಮಗಳಲ್ಲಿ ಅವರು ಪಾಲ್ಗೊಳ್ಳಬಾರದು ಎನ್ನುತ್ತದೆ ಯತಿನಿಯಮ. ತೊನೆಯಪ್ಪಾಚಾರ್ಯರಿಗೆ ಇದೆಲ್ಲ ಅನ್ವಯವಾಗುವುದಿಲ್ಲ; ಯಾಕೆಂದರೆ ಅವರು ಸಾಕ್ಷಾತ್ ಕಾಮಾವತಾರಿ!!

ಮಾಡುವ ಕರ್ಮಗಳಲ್ಲೇ ಭಗವಂತನನ್ನು ಕಾಣುತ್ತೇನೆ ಎನ್ನುವ ಒಂದು ವರ್ಗವಿದೆ; ಆದರೆ ಅವರು ಮಾಡುವ ಕರ್ಮಗಳೆಲ್ಲವೂ ನಿಷ್ಕಾಮ ಕರ್ಮಗಳೆನ್ನಲು ಸಾಧ್ಯವಿಲ್ಲ. ಎಲ್ಲಿಯವರೆಗೆ ನಿಷ್ಕಾಮ ಕರ್ಮಗಳನ್ನು ಮಾತ್ರ ನಡೆಸುತ್ತ ಬದುಕೋದು ಅವರಿಗೆ ಸಾಧ್ಯವಾಗೋದಿಲ್ಲವೋ ಅಲ್ಲಿಯವರೆಗೆ ಭಗವಂತನನ್ನು ತಲುಪೋದು ಸಾಧ್ಯವಿಲ್ಲ.

ನಮ್ಮಿಂದಲೇ ಜಗತ್ತಿಗೆ ಅನ್ನ, ನಮ್ಮ ವೃತ್ತಿ, ವ್ಯಾಪಾರ ಮೊದಲಾದವುಗಳಿಂದಲೇ ಜಗತ್ತು ನಡೆಯುತ್ತಿದೆ. ನಮ್ಮ ಕ್ರಿಯೆಗಳಲ್ಲೇ ನಾವು ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತೇವೆ ಎಂದುಕೊಳ್ಳುವ ವರ್ಗವೂ ಇದೆ. ಆದರೆ ಮಾಡುವ ವೃತ್ತಿ, ವ್ಯಾಪಾರ ಮೊದಲಾದವುಗಳಲ್ಲಿ ಅವರ ಸ್ವಾರ್ಥವೂ ಅಡಗಿರುತ್ತದೆ. ನಿರ್ವಿಕಾರ ಭಾವನೆಯಿಂದ ಕ್ರಿಯೆಗಳನ್ನು ನಡೆಸುವುದು ಅವರಿಂದ ಸಾಧ್ಯವಿಲ್ಲ ಎಂದಾದಾಗ ಭಗವಂತ ಸಿಕ್ಕೇ ಬಿಟ್ಟ ಎನ್ನುವುದು ಸರಿಯಲ್ಲ.

ಇನ್ನುಳಿದದ್ದು ಜ್ಞಾನಮಾರ್ಗದವರು. ಜ್ಞಾನಮಾರ್ಗ ಎಂದರೆ ಎರಡಕ್ಷರ ಕಲಿತು, ಯಾರೋ ಭಾಷಾಂತರಿಸಿದ ಒಂದೆರಡು ಗ್ರಂಥಗಳನ್ನು ಓದಿಕೊಂಡು, ತಮ್ಮ ಸಾಹಿತ್ಯದಿಂದಲೇ ಜಗತ್ತು ಬೆಳಗುತ್ತದೆ ಮತ್ತು ಬೆಳೆಯುತ್ತದೆ ಎಂದುಕೊಳ್ಳುವ ವರ್ಗವಲ್ಲ. ಈ ಜ್ಞಾನ ಪಾರಮಾರ್ಥಿಕ ಜ್ಞಾನ. ಹಾಗೆಂದರೇನು? ರಾಮಕೃಷ್ಣ ಪರಮಹಂಸರು ಹೇಳ್ತಾರೆ-

ಉಪ್ಪಿನ ಬೊಂಬೆಯಲ್ಲಿ ಹಲವರು ಕೇಳಿದರಂತೆ,”ಅಯ್ಯ, ಮೋಕ್ಷವೆಂದರೇನು? ನೀನು ದೇವರನ್ನು ಕಂಡಿದ್ದೀಯಾ? ದೇವಲೋಕ ಹೇಗಿರುತ್ತದೆ?” ಮೊದಲಾದ ಪ್ರಶ್ನೆಗಳು. ಉಪ್ಪಿನ ಬೊಂಬೆ ಅನುಭವವನ್ನು ಹಂಚಿಕೊಳ್ಳುವುದಕ್ಕಾಗಿ ಒಂದೆರಡು ಬಾರಿ ಸಮುದ್ರಕ್ಕಿಳಿದು ಮೇಲಕ್ಕೆ ಬಂತು. ಆಗ ಅದಕ್ಕೆ ಇಡಿಯಾಗಿ ಉತ್ತರ ಹೇಳೋದು ಸಾಧ್ಯವಾಗಲಿಲ್ಲ. ಪರಿಪೂರ್ಣ ಉತ್ತರವನ್ನು ಹೇಳುವುದಕ್ಕಾಗಿ ಪೂರ್ಣಾನುಭವ ಪಡೆದುಕೊಳ್ಳಲಿಕ್ಕೆ ಮತ್ತೆ ಸಮುದ್ರದಾಳಕ್ಕೆ ಇಳಿದದ್ದು ಮೇಲಕ್ಕೆ ಬರಲಿಲ್ಲ; ಉಪ್ಪಿನ ಬೊಂಬೆ ನೀರಿಗೆ ಇಳಿದರೆ ಏನಾಗುತ್ತದೆಂಬುದು ನಿಮಗಾದರೂ ತಿಳಿದಿರಬಹುದಷ್ಟೇ?

ಮಣ್ಣಿನ ಮಡಕೆಗಳಿಗೆ ಟೆರ್ರಾ ಕೋಟಾ ಪಾಟ್ ಎನ್ನುತ್ತಾರೆ. ಮೂಲವಸ್ತು ಕೇವಲ ಮಣ್ಣು. ಕುಂಬಾರ ಅದನ್ನು ಹದಗೊಳಿಸಿ, ಆಕಾರಕೊಟ್ಟು, ಬೆಂಕಿಯಲ್ಲಿ ಬೇಯಿಸಿದಾಗ ಅದು ಮಡಕೆಯಾಯ್ತು. ಸಾವಿರಾರು ವರ್ಷಗಳು ಮಣ್ಣಿನಲ್ಲೆ ಹೂತಿದ್ದರೂ ಮಡಕೆ ತನ್ನ ಆಕಾರವನ್ನು ಕಳೆದುಕೊಳ್ಳೋದು ಕಷ್ಟ. [ಯಾರೋ ಒಡೆದು ಹಾಕಿದರೂ ಗಟ್ಟಿ ಚೂರುಗಳು ಹಾಗೇ ಉಳಿಯುತ್ತವೆ.] ಹರಪ್ಪ-ಮೊಹೆಂಜೋದಾರೋಗಳ ಉತ್ಖನನಗಳಲ್ಲಿ ಅಂಥವು ಕಂಡಿವೆ ಅಲ್ಲವೇ?

ಇನ್ನೊಂದು ಉದಾಹರಣೆಯೆಂದರೆ, ಮಡಕೆಯನ್ನು ಅಥವಾ ಯವುದೋ ಪಾತ್ರೆಯನ್ನು ಸಮುದ್ರದಲ್ಲಿ ಅರ್ಧ ಮುಳುಗಿಸಿ. ಪಾತ್ರೆಯ ಒಳಗೂ ನೀರಿದೆ, ಹೊರಗೂ ನೀರಿದೆ. ಪಾತ್ರೆಯೊಳಗಿನ ನೀರು ಪಾತ್ರೆಯಾಕಾರವನ್ನು ಪಡೆದುಕೊಂಡಿದೆ. ಸಮುದ್ರದ ನೀರು ಯಾವ ಆಕಾರದಲ್ಲಿದೆ? ಉತ್ತರಿಸಲು ಸಾಧ್ಯವಿಲ್ಲ. ಪಾತ್ರೆಯೊಳಗಿನ ನೀರನ್ನು ಹೊರಗಿನ ನೀರಿಗೆ ಸೇರಿಸುವ ಕೆಲಸ ಆಗಬೇಕು. ಪಾತ್ರೆಯ ನೀರನ್ನು ಹೊರಗಿನ ನೀರಿನೊಡನೆ ಸೇರಿಸಿದರೆ ಅದು ಪ್ರತ್ಯೇಕವಾಗಿ ಕಾಣುವುದಿಲ್ಲ; ಒಂದಾಗಿಹೋಗುತ್ತದೆ.

ಪ್ರತ್ಯೇಕವಾಗಿ ಕಾಣದೆ ಪರಮಾತ್ಮನಲ್ಲಿ ನಮ್ಮಾತ್ಮ ಒಂದಾಗಿ ಹೋಗುವುದೇ ಮೋಕ್ಷ.[ಮೋಹ ಕ್ಷಯ.] ಅದಕ್ಕೆ ಈ ಲೋಕದ ಮೋಹ ಸಂಪೂರ್ಣ ಕ್ಷಯವಾಗಬೇಕು. ಮೋಹ ಕ್ಷಯವಾಗಲು ಪಾರಮಾರ್ಥಿಕ ಜ್ಞಾನದ ದಾಹ ಹೆಚ್ಚಬೇಕು. ಭಗವಂತನೇ ನಿಜವಾದ ಜ್ಞಾನ. ಉಳಿದದ್ದೆಲ್ಲ ಅಜ್ಞಾನ. ಹಳ್ಳಿಗರೆಷ್ಟೋ ಜನ ಅಧುನಿಕ ವಿದ್ಯೆ ಕಲಿಯದಿರಬಹುದು; ಅವರಲ್ಲಿ ಉತ್ತಮ ಸಂಸ್ಕಾರಗಳಿರುವುದನ್ನು ನೀವು ಗಮನಿಸಬಹುದು. ಲೌಕಿಕವಾಗಿ ಅವರು ಅಜ್ಞಾನಿಗಳೆಂದು ಸಮಾಜ ಹೇಳಬಹುದು. ಈ ಪ್ರಪಂಚಕ್ಕೆ ಬಂದ ಪ್ರತಿಯೊಂದೂ ಜೀವಿಯ ಒಳಗೆ ದೇವನಿದ್ದಾನೆ. ಆದರೆ ಯಾರಿಗೂ ಅವರವರ ಆತ್ಮದರ್ಶನವಿಲ್ಲ! ನಿಜವಾದ ಸ್ವಸಾಮರ್ಥ್ಯದ ಅರಿವಿಲ್ಲಾ-ಅದು ನಿಜವಾದ ಅಜ್ಞಾನ.

ವೈಜ್ಞಾನಿಕ ತಳಿ ಸಂಶೋಧಕರು ಇಲಿ ಮತ್ತು ಮೊಲಗಳ ಮೇಲೆ ಪ್ರಯೋಗವನ್ನು ನಡೆಸಿದರು; ಅವುಗಳಿಗೆ ಕರೆಂಟ್ ಶಾಖ್ ಅನುಭವ ಮಾಡಿಸಿದರು. ಅವುಗಳ ವಂಶಾವಳಿಯನ್ನು ಹಲವು ತಲೆಮಾರುಗಳ ವರೆಗೆ ಅಧ್ಯಯನ ಮಾಡುತ್ತಲೇ ಇದ್ದರು. ಶಾಕ್ ತಗುಲಿದ ಇಲಿ ಮತ್ತು ಮೊಲಗಳಲ್ಲಿದ್ದ ಕ್ರೋಮೋಸೋಮ್ ಗಳಲ್ಲಿ ಜೀನ್ಸ್ ಗಳಲ್ಲಿ ಅದರ ಅನುಭವ ಸುಪ್ತಮುದ್ರೆಯಾಗಿ[Imprint] ನಿಂತಿತು; ಎಲ್ಲಿಯವರೆಗೆ?-ಏಳು ತಲೆಮಾರಿನ ವರೆಗೆ! ನಮ್ಮಲ್ಲಿ ಹತ್ತಿರದ ದಾಯಾದರು ಎಂದರೆ ಏಳು ತಲೆಗಳಿಯ ಒಳಗಿನವರು-ಅದಕ್ಕೆ ಕಾರಣ ನಿಮಗೀಗ ಅರ್ಥವಾಗಿರಬೇಕಲ್ಲ? ಯಾವುದೇ ವಿಜ್ಞಾನ ಬೆಳೆದಿರದ ಆ ಕಾಲದಲ್ಲಿ ಋಷಿಗಳ ಸುಜ್ಞಾನ ಅದನ್ನು ಶಾಸ್ತ್ರವಾಗಿ ಬರೆಯಿತು. ಏಳುತಲೆಮಾರೊಳಗಿನ ದಾಯಾದರಿಗೆ ಹುಟ್ಟು-ಸಾವುಗಳಲ್ಲಿ ಸೂತಕವನ್ನು ಹೇಳಿತು.

ಅಗಾಧ ಸೃಷ್ಟಿಯಲ್ಲಿ ನಾವಿರುವ ಬ್ರಹ್ಮಾಂಡ ಕೇವಲ 0.01% ಅಂತೆ. ಈ ಬ್ರಹ್ಮಾಂಡವನ್ನೇ ನಾವು ಸಂಪೂರ್ಣವಾಗಿ ನೋಡಲು ಸಾಧ್ಯವಿಲ್ಲ ಅಂದರೆ ನಮಗೆ ಕಂಡಿದ್ದೆಷ್ಟು?ನಮ್ಮರಿವಿಗಿರುವುದೆಷ್ಟು? ಇದೆಲ್ಲ ಆಧುನಿಕ ವಿಜ್ಞಾನಿಗಳು ಈಗೀಗ ಸಂಶೋಧಿಸುತ್ತಿರುವ ವಿಷಯ. ನಮ್ಮ ಶರೀರದಲ್ಲಿ ಏನಿದೆ? 60% ನೀರಿದೆ. ಉಳಿದದ್ದು? ನಾವು ಹೇಳ್ತೇವೆ ಮಾಂಸ, ಮಜ್ಜೆ, ಅಸ್ತಿ ಇತ್ಯಾದಿ ಇತ್ಯಾದಿ. ಗಹನವಾಗಿ ಪರಿಶೀಲಿಸಿದರೆ ಇಡೀ ಶರೀರ ಹಲವು ವಿಧದ ಬ್ಯಾಕ್ಟೀರಿಯಾಗಳ ಸಂದೋಹ! ಹಾಗಾಗಿಯೇ ಶರೀರ ಪಂಚಭೂತಾತ್ಮಕ ಎನ್ನುತ್ತಾರೆ-ತಲೆಯಿಲ್ಲದೆ ಹೇಳಿದ ಮಾತಲ್ಲ ಅದು.

ಹುಣ್ಣಿಮೆ-ಅಮಾವಾಸ್ಯೆಗಳು ಜರುಗುತ್ತಲೇ ಇರುತ್ತವೆ. ಆಕಾಶ ಕಾಯಗಳು ತಿರುಗುತ್ತಲೇ ಇರುತ್ತವೆ. ಅವುಗಳಿಗೆಲ್ಲ ಸೂತ್ರ ಯಾವುದು? ಘನೀಭೂತ ಘನಾಕೃತಿಗಳಾಗಿರುವ ಗ್ರಹಗಳಿವೆ, ತೇಜಃಪುಂಜವಾದ ನಕ್ಷತ್ರರಾಶಿಗಳಿವೆ, ಗುರುತ್ವ ಪೊಳ್ಳುಗಳಿವೆ, ಇನ್ನೇನೇನೋ ಇವೆ, ಅವುಗಳಲ್ಲೆಲ್ಲ ಏನಿವೆ? ನಾವು ಕಾಣುವ ಆಕಾಶ ಯಾವುದರಿಂದ ನಿರ್ಮಿತವಾಗಿದೆ? ದಯಮಾಡಿ ಉತ್ತರವನ್ನು ನೆನಪಿಟ್ಟುಕೊಳ್ಳಿ-ನಾವು ಕಾಣುತ್ತಿರುವ ಯಾವ ಆಕಾರಗಳೂ ಶಾಶ್ವತ ಘನವಸ್ತುಗಳಲ್ಲ! ಎಲ್ಲವೂ ಹಲವಾರು ಅಣುಗಳ, ಬ್ಯಾಕ್ಟೀರಿಯಗಳ ರಾಶಿ ರಾಶಿಗಳಷ್ಟೆ! ಇದನ್ನೆಲ್ಲ ಈಗ ಹೇಳುತ್ತಿರೋದು ನಮ್ಮ ಆಧುನಿಕ ವಿಜ್ಞಾನಿಗಳು. ಹಾಗಾದರೆ ಈ ಜಗತ್ತಿನ ಚಮತ್ಕಾರಗಳಿಗೆ ಕಾರಣವಾದರೂ ಯಾವುದು?

ತನೀಯಾಂಸುಂ ಪಾಂಸುಂ ತವ ಚರಣ ಪಂಕೇರುಹ-ಭವಂ
ವಿರಿಂಚಿಃ ಸಂಚಿನ್ವನ್ ವಿರಚಯತಿ ಲೋಕಾ-ನವಿಕಲಮ್ |
ವಹತ್ಯೇನಂ ಶೌರಿಃ ಕಥಮಪಿ ಸಹಸ್ರೇಣ ಶಿರಸಾಂ
ಹರಃ ಸಂಕ್ಷುದ್-ಯೈನಂ ಭಜತಿ ಭಸಿತೋದ್ಧೂಳ ನವಿಧಿಮ್ || 2 ||-ಸೌಂದರ್ಯ ಲಹರಿ

ಅರ್ಥ-ಬ್ರಹ್ಮಾಂಡವನ್ನು ಸೃಷ್ಟಿಸಿದ ಬ್ರಹ್ಮ ನಿನ್ನ ಪಾದಧೂಳಿಯನ್ನು ತೆಗೆದುಕೊಂಡು ಸೃಷ್ಟಿಸುತ್ತಾನೆ. ಸಾವಿರ ಹೆಡೆಯ ಆದಿಶೇಷ ಭಾರವನ್ನು ಹೇಗೋ ಸಹಿಸಿ ಅಂತೂ ಹೊತ್ತು ನಿಲ್ಲುತ್ತಾನೆ. ರುದ್ರ ಅದನ್ನು ಸ್ವೀಕರಿಸಿ ಹಿಟ್ಟಿನಂತೆ ಬೂದಿಮಾಡಿ ವಿಭೂತಿಯಾಗಿ ಧರಿಸುತ್ತಾನೆ.

ಮೇಲುನೋಟಕ್ಕೆ ಸೌಂದರ್ಯ ಲಹರಿ ಕೇವಲ ಕೆಲವು ಶ್ಲೋಕಗಳ ಕಂತೆಯಂತೆ ಕಾಣಿಸಬಹುದು. ಅದರಲ್ಲಿ ಸೃಷ್ಟಿಯ ರಹಸ್ಯವನ್ನೇ ಹೇಳಿದ್ದಾರೆ ಶಂಕರರು.
ಸ್ವಾಮಿ ರಾಮ ‘The Wave of Beauty’ ಎಂದು ಅದನ್ನು ಹೇಳಿದ್ದೂ ಸಹ ಅದಕ್ಕೇ ಇದ್ದಿರಬಹುದು. ಸೌಂದರ್ಯ ಲಹರಿ ಮತ್ತು ಆನಂದ ಲಹರಿಗಳು ಯಾವುದೋ ಸ್ತ್ರೀ ವರ್ಣನೆಗಳಲ್ಲ; ಅವು ಆದಿ ಶಕ್ತಿ, ಆದಿ ಮಾಯೆಯ ವರ್ಣನೆಗಳು. ಹೇಳಲಿಕ್ಕೆ ಹತ್ತುಸಾವಿರ ಪುಟಗಳಿಗೂ ಮೀರಿದ ವಿಷಯಗಳಿವೆ. ಮಿತಿಯಲ್ಲಿ ಹೇಳಲು ಹೋಗಿ ಮಿತಿ ಮೀರಿ ಬೆಳೆಯುತ್ತಿದೆ, ಕ್ಷಮೆಯಿರಲಿ.

ತಂತ್ರಮಾರ್ಗಿಗಳು ಕಾಳಿ, ಚಂಡಿ, ದುರ್ಗೆ ಹೀಗೇ ದೇವರಲ್ಲಿನ ತಮೋಶಕ್ತಿಯ ಆರಾಧಕರು. ತಾಂತ್ರಿಕ ವಿಧಾನದಿಂದ ಸಿದ್ಧಿಗಳನ್ನು ಬಳಸಿಕೊಳ್ಳುವವರು. ಭಕ್ತಿಮಾರ್ಗಿಗಳು ಮೂರ್ತಿಗಳಲ್ಲಷ್ಟೆ ದೇವರನ್ನು ಕಾಣುವವರು, ರಜೋಗುಣದ ಆರಾಧಕರು,[ಲಕ್ಷ್ಮಿ, ಕುಬೇರ ಇತ್ಯಾದಿ] ದೇವರಲ್ಲಿ ನಮಗೆ ಇದುಕೊಡು, ಅದುಕೊಡು ಎಂದು ಪ್ರಾರ್ಥಿಸುವವರು, ಕಾಮ್ಯ ಕರ್ಮಗಳನ್ನು ನಡೆಸುವವರು. ಕರ್ಮಯೋಗಿಗಳು ಕರ್ಮದಲ್ಲಿಯೇ ದೇವರೆನ್ನುವವರು, ಕ್ರಿಯಾಯೋಗಿಗಳು ಕ್ರಿಯೆಗಳಲ್ಲೆ ದೇವರೆನ್ನುವವರು, ಹಾಗಾದರೆ ಭಗವಂತ ನಿನ್ನ ಅಕ್ಷೋಹಿಣಿ ಸೈನ್ಯ ನಮಗೆ ಬೇಡ, ನಮಗೆ ನೀನೇ ಖುದ್ದಾಗಿ ಬೇಕೆನ್ನುವವರು ಜ್ಞಾನಮಾರ್ಗಿಗಳು-ಅವರು ಆದಿಶಕ್ತಿಯನ್ನು ಸಾತ್ವಿಕ [ಸರಸ್ವತಿಯ, ಶಾರದೆಯ]ರೂಪದಲ್ಲಿ ಆರಾಧಿಸಲು ಇಷ್ಟಪಡುತ್ತಾರೆ.

ಶಂಕರರು ಇವೆಲ್ಲವನ್ನೂ ಆಳವಾಗಿ ಅರಿತವರು. ಅವರು ಯಾವ ಮಾರ್ಗವನ್ನೂ ತಳ್ಳಿಹಾಕಲಿಲ್ಲ. ತಂತ್ರಮಾರ್ಗದಲ್ಲಿ ಉತ್ತಮಭಾಗಗಳನ್ನು ಆಯ್ಕೆಮಾಡಿಕೊಂಡರು. ಭಕ್ತಿಮಾರ್ಗದಲ್ಲಿ ಮೂರ್ತಿ ಪೂಜೆ-ಪುನಸ್ಕಾರಗಳನ್ನು ಒಪ್ಪಿಕೊಂಡರು; ಹರಿ-ಹರ ಭೇದವನ್ನಳಿದು ಪಂಚಾಯತನ ಪೂಜ ಪದ್ಧತಿಯನ್ನು ಅನುಷ್ಠಾನಕ್ಕೆ ತಂದವರು. ಕರ್ಮಮಾರ್ಗದಲ್ಲಿ “ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್” ಎಂದವರು. ಕ್ರಿಯಾಮಾರ್ಗದಲ್ಲಿ ಕುಂಡಲಿನಿ ಶಕ್ತಿಯನ್ನು ಸಹಸ್ರಾರಕ್ಕೆ ತಲುಪಿಸುವುದನ್ನೂ ಅಲ್ಲಗಳೆದವರಲ್ಲ. ಎಲ್ಲದಕ್ಕೂ ಮಿಗಿಲಾಗಿ ಭಗವಂತನನ್ನು ತಲುಪುವ ಅತ್ಯುತ್ತಮ ವಿಧಾನವೆಂದರೆ ಜ್ಞಾನ ಮಾರ್ಗ ಎಂದು ಹೇಳಿದ್ದಾರೆ.

ಅನುಭವವಿಲ್ಲದೆ ಶಂಕರರು ಏನನ್ನೂ ಹೇಳಲಿಲ್ಲ; ಅನುಭವವಿಲ್ಲದ ನಮಗೆ ಅವರು ಹೇಳಿದ್ದನ್ನು ಅರ್ಥಮಾಡಿಕೊಳ್ಳುವ ತಾಕತ್ತೂ ಇಲ್ಲ; ಅದೆಂದೋ ಅರ್ಥವಾಗಿದ್ದರೆ, ಊಟಕ್ಕೆ ಬಡಿದಾಡುವ ಗಂಜಿಪಡಿಯವರೊಡನೆ ನಾವು ಗುದ್ದಾಡುವ ಪ್ರಮೇಯ ಬರುತ್ತಿರಲಿಲ್ಲ. ಬೊಕ್ಕಸಕ್ಕೆ ಸೇರಿಸುತ್ತ ಏಕಾಂತ ನಡೆಸುವ ರಾಂಗ್ ವೇಷದಂಥವರು ನಮಗೆ ಗುರುವಾಗಿ ಬಂದರೆ ಸಮಾಜ ಏನನ್ನು ಅರಿಯಲು ಸಾಧ್ಯ? ಯಾವ ಧರ್ಮಮಾರ್ಗದಲ್ಲಿ ಎತ್ತ ಸಾಗಲು ಸಾಧ್ಯ?

ಹೆಜ್ಜೆಹೆಜ್ಜೆಗೆ ಶಂಕರರ ದಿವ್ಯಾನುಭೂತಿ ಆಗುತ್ತದೆ. ಅವರ ಹೇಳಿಕೆಗಳು ನಿರ್ಣಯಗಳು ಅತ್ಯಂತ ಸಮಂಜಸವೆಂದು ವಿಜ್ಞಾನಿಗಳು ಒಪ್ಪುತ್ತಲೇ ಹೋಗ್ತಾರೆ. ಮೋಕ್ಷ ಬಯಸುವ ಮುಮುಕ್ಷುವೊಬ್ಬ ಭಗವಂತನ ಧ್ಯಾನದಲ್ಲಿ ಆನಂದಿಸುತ್ತ ಕೊನೆಯುಸಿರೆಳೆದ ವಿಡೀಯೋ ಲಿಂಕ್ ಹಾಕಿದ್ದೇನೆ. ಸ್ವಾಮಿ ದಯಾನಂದ ಸರಸ್ವತಿ [ಆರ್ಯ ಸಮಾಜದವರಲ್ಲ, ಇವರು ಅದ್ವೈತ ಪರಂಪರೆಯವರು]ಯವರ ಹಲವು ಉಪನ್ಯಾಸಗಳನ್ನು ಕೇಳಿದ್ದೇನೆ. ಕೇವಲ ಅವರದ್ದಷ್ಟೆ ಅಲ್ಲ, ಅನೇಕ ಸಂತ-ಸನ್ಯಾಸಿಗಳ ಉಪನ್ಯಾಸಗಳು ನನಗೆ ದೊರೆತದ್ದು ಪೂರ್ವದ ಪುಣ್ಯ. ಎಲ್ಲರೂ ಭಗವಂತನನ್ನು ಕಾಣಲು ಹಾದಿ ಹುಡುಕಿದವರೇ, ಎಲ್ಲರಿಗೂ ಸಾಷ್ಟಾಂಗ ನಮನಗಳು.

ಪರಮ ಋಷಿ ಮಂಡಲದಲ್ಲಿ ಮೆರೆವ ಯಜ್ಞೇಶ್ವರನಂತೆ ಕಾಣುವ ಶಂಕರರ ಹೆಸರನ್ನು ಕೆಲವು ಢೋಂಗಿಗಳು ದುರ್ಬಳಕೆ ಮಾಡುತ್ತಿದ್ದಾರೆ. ಸಾವಿರಾರು ವರ್ಷಗಳ ಸಹಸ್ರಾರು ಸಂತ-ಸನ್ಯಾಸಿ ಸಾಧಕರ ನೆಲೆವೀಡಾಗಿ, ದಿವ್ಯಾತ್ಮಗಳಿಂದ ಕೂಡಿದ ದಿವ್ಯಪ್ರಭೆಯ ಹಿಮಾಲಯದಂತಹ ಪ್ರದೇಶ ಈ ಜಗತ್ತಿನಲ್ಲಿ ಮತ್ತೊಂದಿಲ್ಲ. ಅಂತಹ ಪ್ರದೇಶದಲ್ಲಿ ಕಿರಾತಕ ತೊನೆಯಪ್ಪ ’ಏಕಾಂತ’ವನ್ನು ನಡೆಸಿದ್ದ; ಅದೇ ಮರುದಿನ ಅನತಿ ದೂರದ ಕೇದಾರದಲ್ಲಿ ಜಲಪ್ರಳಯ ನಡೆದುಹೋಯಿತು.

ಹೇಳಿಕೇಳಿ ನಾವೆಷ್ಟೇ ಹರಸಾಹಸ ನಡೆಸುತ್ತಿದ್ದರೂ ಕಾಂಚಾಣದ ಕಲಿಯುಗದಲ್ಲಿ ಪಾಪಿಯ ಕೊಡ ತುಂಬುವವರೆಗೆ ಅವ ಮೆರೆಯುತ್ತಲೇ ಇರುತ್ತಾನೆ; ತನಗೆ ಬೇಕಾದ್ದನ್ನು ಹಣಕೊಟ್ಟು ಖರೀದಿಸುತ್ತಲೇ ಇರುತ್ತಾನೆ. ಬಕರಾ ಭಕ್ತರಿಗೆ ತಾನು ಬಹುದೊಡ್ಡ ಆಧ್ಯಾತ್ಮ ಪ್ರವರ್ತಕನೆಂಬಂತೆ ಪೋಸು ಕೊಡುತ್ತಾನೆ. ಮಾಧ್ಯಮಗಳಲ್ಲಿ ಎಲ್ಲಿ ನೋಡಿದರೂ ಇವನದ್ದೇ ವರಾತ-ದುಡ್ಡಿನ ಮಹಾತ್ಮೆ. ಶಂಕರರ ತತ್ವಗಳನ್ನೇ ಸ್ಪಷ್ಟವಾಗಿ ಅರಿಯದ ಜನ ಕಳ್ಳಸನ್ಯಾಸಿ ಮತ್ತು ಕುಳ್ಳ ಭಾವಯ್ಯನ ಕ್ರಿಮಿನಲ್ ಯೋಜನೆಗಳಿಗೆ ಮಾರುಹೋಗಿದ್ದಾರೆ.

Thumari Ramachandra

source: https://www.facebook.com/groups/1499395003680065/permalink/1832955173657378/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s