ಲಿಂಗದ ಗಮ್ಮು ಲಂಗಕ್ಕೆ ಹತ್ತದಂತೆ ಅಂಗವಸ್ತ್ರದಲ್ಲಿ ವರೆಸುವವನನ್ನು ನರನಾತರಾಯ ರಕ್ಷಿಸಿದ!

ಲಿಂಗದ ಗಮ್ಮು ಲಂಗಕ್ಕೆ ಹತ್ತದಂತೆ ಅಂಗವಸ್ತ್ರದಲ್ಲಿ ವರೆಸುವವನನ್ನು ನರನಾತರಾಯ ರಕ್ಷಿಸಿದ!

ಕೆಲವೊಂದು ವಿಷಯಗಳು ಹಾಗೇನೆ. ಕಾವೇರಿ-ಮಹದಾಯಿ ವಿಷಯದಲ್ಲಿ ನೀವೆಲ್ಲ ನೋಡಿಲ್ಲವೇ? ದೇಶದಲ್ಲಿ ಹಾಗಿರಲಿ ವಿದೇಶೆದಲ್ಲೆಲ್ಲೋ ಸಾವು-ನೋವು ತೊಂದರೆ ಸಂಭವಿಸುತ್ತಿದ್ದರೆ ತಕ್ಷಣಕ್ಕೆ ಸ್ಪಂದಿಸುತ್ತಾರೆಂದು ಜನ ಅಂದುಕೊಳ್ಳುವ ಪ್ರಧಾನಿಯವರು ಯಾಕೆ ಮೂಕರಾದರು?

ದೇಶದ ಯಾವುದೋ ಮೂಲೆಯಿಂದ ಮಗುವೊಂದು ಪತ್ರಬರೆದರೂ ಮನ್ ಕೀ ಬಾತ್ ನಲ್ಲಿ ಅದಕ್ಕೆಲ್ಲ ಸ್ಪಂದಿಸುತ್ತಿದ್ದ ಪ್ರಧಾನಿಯವರು ಇಡೀ ರಾಜ್ಯಕ್ಕೆ ರಾಜ್ಯವೇ ಹೊತ್ತಿ ಉರಿಯುವಂತಹ ಗಂಭೀರ ಪರಿಸ್ಥಿತಿ ಬಂದಾಗ ಮಧ್ಯಸ್ಥಿಕೆ ನಡೆಸಬಹುದಿತ್ತಲ್ಲವೇ? ಪ್ರಜಾತಂತ್ರದ ಒಕ್ಕೂಟ ವ್ಯವಸ್ಥೆಯನ್ನು ನಿರ್ವಹಿಸುವ ಮೂರು ಅಂಗಗಳೊಳಗೆ ಯಾರು ಯಾರನ್ನು ನಿಯಂತ್ರಿಸಬೇಕೆಂಬುದೇ ಗೋಜಲಾಗಿದ್ದಾಗ ಪ್ರಜೆಗಳು ಯಾರನ್ನು ಕೇಳಬೇಕು?

ನಿಜ, ಎಲ್ಲ ರಾಜ್ಯಗಳೂ ಈ ದೇಶದಲ್ಲೇ ಇವೆ-ಒಂದೇ ಕುಟುಂಬದ ಅಣ್ಣ ತಮ್ಮಂದಿರಂತೆ. ತಮ್ಮ ತಮ್ಮ ಹಕ್ಕಿಗಾಗಿ ಅಣ್ಣ-ತಮ್ಮಂದಿರೇ ತಕಾರರು ಮಾಡಿಕೊಳ್ಳುವಂತೆ ಇದು ರಾಜ್ಯ-ರಾಜ್ಯಗಳ ನಡುವಿನ ಸಮಸ್ಯೆ. ರಾಜ್ಯ-ರಾಜ್ಯಗಳ ನಡುವಿನ ಸಮಸ್ಯೆಗಳು ಎಷ್ಟು ಶತಮಾನಗಳ ಕಾಲ ಹಾಗೇ ಮುಂದುವರಿಯಬೇಕೆನ್ನುತ್ತೀರಿ? ಅದಕ್ಕೊಂದು ಇತಿಮಿತಿ ಬೇಕಲ್ಲವೇ?

ನಿನ್ನೆ ನಡೆದ ದಂಗೆಯಲ್ಲಿ ಎಷ್ಟೊಂದು ಜನ ಅಮಾಯಕರಿಗೆ ತೊಂದರೆಯಾಗಿದೆ ಪಾಪ. ಹೊಟ್ಟೆಪಾಡಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದವರಿಗೂ ಪೋಲೀಸರ ಗುಂಡೇಟು ತಗುಲಿದೆ. ಅನ್ಯಾಯವಾಗಿ ಎಳೆಯ ಪ್ರಾಯದ ವ್ಯಕ್ತಿಯೊಬ್ಬ ಸತ್ತುಹೋಗಿದ್ದಾನೆ. ಅವನಿಗೆ ನಾಲ್ಕು ತಿಂಗಳ ಹೆಣ್ಣುಮಗುವಿದೆಯಂತೆ ಪಾಪ. ಹಲವರು ಗಾಯಾಳುಗಳಾಗಿದ್ದಾರೆ.

ವಸ್ತು-ಆಸ್ತಿ ಯಾರದ್ದೇ ಆಗಲಿ, ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಕ್ರೋಧಾಗ್ನಿಗೆ ಸಿಕ್ಕು ಕರಗಿಹೋದ ಆಸ್ತಿಪಾಸ್ತಿಗಳ ಮೊತ್ತ ಬಹುದೊಡ್ಡದು. ಎಷ್ಟೊಂದು ವಾಹನಗಳು ಭಸ್ಮವಾಗಿ ಹೋದವಲ್ಲ? ಇದೆಲ್ಲವೂ ಪರೋಕ್ಷ ದೇಶಕ್ಕುಂಟಾದ ಹಾನಿಯಲ್ಲವೇ?

ರಾಜ್ಯಕ್ಕೆ ಒಟ್ಟೂ 25,000 ಕೋಟಿ ನಷ್ಟವಂತೆ. ಅದು ಅಂದಾಜು ಲೆಕ್ಕ. ಇನ್ನೂ ಜಾಸ್ತಿಯೂ ಇರಬಹುದು. ಬೆಂಗಳೂರಿನ ಮಿತ್ರರ ಪ್ರಕಾರ ರಾಜ್ಯದಲ್ಲಿ ಬಂದ್ ಆಚರಣೆ ತೀರಾ ಹೆಚ್ಚಿದೆಯಂತೆ. ಹಾಗಾದರೆ ಇಂತದ್ದೇ ಮುದುವರಿಯಬೇಕೇ?

ಡಾ.ಸುಬ್ರಹ್ಮಣಿಯನ್ ಸ್ವಾಮಿಯವರ ವೀಡಿಯೋ ಹೇಳಿಕೆಯನ್ನು ನೀವು ನೋಡಿರಬಹುದು. ತಮಿಳುನಾಡಿನಲ್ಲಿ ಆಳರಸರು ನೀರಿಗಾಗಿ ಕರ್ನಾಟಕವನ್ನು ಕೇಳುವ ಬದಲು ಸಮುದ್ರದ ನೀರನ್ನು ಅಧುನಿಕ ಉಪಕರಣಗಳಿಂದ ಪರಿವರ್ತಿಸಿ ಬಳಸಿಕೊಳ್ಳಬಹುದು. ಆದರೆ ಅಲ್ಲಿನ ಸ್ಥಳೀಯ ನೀರಿನ ಟ್ಯಾಂಕರ್ ಬ್ಯುಸಿನೆಸ್ ನವರ ಲಾಬಿಯಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ರಾಜಕೀಯದ ಭಿನ್ನ ಇಚ್ಛಾಶಕ್ತಿ ಹೇಗೆಲ್ಲ ಕೆಲಸಮಾಡಿಸಿ ಪ್ರಜೆಗಳಿಗೆ ಸದಾ ತೊಂದರೆಯೇ ಇರುವಂತೆ ನೋಡಿಕೊಳ್ಳುತ್ತದಲ್ಲವೇ?

ದೇಶದಲ್ಲಾಗಲೀ ರಾಜ್ಯದಲ್ಲಾಗಲೀ ಪ್ರತಿಯೊಬ್ಬರೂ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಬೇಕೆಂಬುದು ಸರಿ. ಶಾಂತಿಯನ್ನು ಕಾಪಾಡಿ ಎಂಬ ಸಂದೇಶವನ್ನು ಕೊಟ್ಟರೆ ಅದರಿಂದ ಪರಿಹಾರ ಸಾಧ್ಯವೇ? ಮತ್ತೆ ಮತ್ತೆ ಶಾಂತಿಭಂಗವಾಗದಂತೆ ಶಾಶ್ವತ ಪರಿಹಾರವೊಂದು ಆಗಬೇಕಲ್ಲವೇ? ಶಾಂತಿಭಂಗವಾಗಿ ಆಸ್ತಿಪಾಸ್ತಿಗಳು ನಾಶವಾಗುತ್ತಲೇ ಇದ್ದರೆ ಅಭಿವೃದ್ಧಿ ಎಲ್ಲಿಸಾಧ್ಯ? ದೇಶದೊಳಗಿನ ಬಾಂಧವರಲ್ಲೆ ಕಿತ್ತಾಟಗಳಾಗುತ್ತಿದ್ದರೆ ವಿರೋಧೀ ರಾಷ್ಟ್ರಗಳಿಗೆ ಅದು ಲಾಭದಾಯಕ ಎನಿಸುವುದಿಲ್ಲವೇ? ವಿನಾಕಾರಣ ನಮ್ಮ ಸಂಪನ್ಮೂಲಗಳೆಲ್ಲ ನಾಶವಾಗುವುದಿಲ್ಲವೇ?

ತಮಿಳುನಾಡಿನಲ್ಲಿ ಅವರಿಗೆ ಸದ್ಯಕ್ಕೆ ಬೆಳೆಗಳಿಗೆ ನೀರು ಬೇಕಿಲ್ಲವೆಂದು ಸಮೀಕ್ಷೆ ನಡೆಸಿದ ಮಾಧ್ಯಮಗಳು ಹೇಳಿವೆ, ಆದರೆ ಕರ್ನಾಟಕದಲ್ಲಿ ಈ ಸಲ ಸರಿಯಾಗಿ ಮಳೆಯಾಗಿಲ್ಲ. ಮುಂಗಾರು ಕೀರಲು ದನಿಯಲ್ಲಿ ರಾಗ ಹಾಡಿ ಎಲ್ಲೋ ಮಾಯವಾಯ್ತು. ಹಿಂಗಾರು ಇನ್ನೂ ಬರುವುದರಲ್ಲೇ ಇದೆ, ಬರುತ್ತೋ ಇಲ್ಲವೋ ಗೊತ್ತಿಲ್ಲ. ಹಾಗಾದರೆ ನೀರು ಬಿಟ್ಟ ನಂತರ ಎರಡು ಮಹಾನಗರಗಳ ಜನತೆಗೆ ಕುಡಿಯಲೂ ನೀರಿಲ್ಲದಿದ್ದರೆ ಅವರು ಎಲ್ಲಿಗೆ ಹೋಗಬೇಕು? ಏನು ಮಾಡಬೇಕು?

ಮಹದಾಯಿಯ ವಿಷಯದಲ್ಲೂ ಹಾಗೇನೆ. ಅಲ್ಲಿಯೂ ಅದರ ನೀರಿನ ತ್ವರಿತತೆ ಏನೂ ಇರಲಿಲ್ಲವೆಂದು ಮಾಧ್ಯಮಗಳು ಸಾರಿವೆ. ಉತ್ತರಕರ್ನಾಟಕದ ಜನತೆ ದಿನನಿತ್ಯ ಒಂದೊಂದು ಬಿಂದಿಗೆ ನೀರಿಗೂ ಹತ್ತಾರು ಮೈಲು ದೂರ ಹೋಗಿ ಬರಬೇಕಾದ ಪರಿಪಾಟಲು. ಹಾಗಾದರೆ ಇದೆಲ್ಲವೂ ಕೇಂದ್ರಕ್ಕೆ ಗೊತ್ತಾಗುವುದೇ ಇಲ್ಲವೇ?

ರಾಜ್ಯದಲ್ಲಿ ವಿರೋಧ ಪಕ್ಷಗಳಲ್ಲಿ ಕುಳಿತವರು ಏನು ಮಾಡ್ತಿದ್ದಾರೆ? ಅವರೇಕೆ ಮೂಕರಾಗಿದ್ದಾರೆ? ಕೇಂದ್ರಕ್ಕೆ ರಾಜ್ಯದ ವಿಷಯವನ್ನು ಸಕಾಲಕ್ಕೆ ತಲುಪಿಸುವಲ್ಲಿ ಅವರ ಪಾತ್ರವೂ ಇರುವುದಿಲ್ಲವೇ? ಅದರಲ್ಲಿ ಅವರೇಕೆ ವಿಫಲರಾಗಿದ್ದಾರೆ?

ಇಡ್ಲಿ ಅಮ್ಮ ಹೊರಗೆ ಬಂದಾಗಲೇ ಇಡೀ ದೇಶ ದಿಗ್ಭ್ರಮೆಗೊಂಡಿತ್ತು! ದೇಶಕ್ಕೆ ಇನ್ನೇನು ಗಂಡಾಂತರ ಕಾದಿದೆಯೋ ಎಂದು ಹಲವು ಮುತ್ಸದ್ದಿಗಳು ಮಾತನಾಡಿಕೊಂಡಿದ್ದರು. ಕನ್ನಡಕದವ ಅಧಿಕಾರದಲ್ಲಿದ್ದಾಗ ಈ ನಮೂನೆಯ ಬೇಡಿಕೆಗಳು ಬರುತ್ತಿರಲಿಲ್ಲ. ಈಯಮ್ಮ ಇರುವಾಗಲೇ ಏಕೆ ಇಂತದ್ದೆಲ್ಲ? ಇದು ಮತದಾರರ ಓಲೈಕೆಯ ಒಂದು ಮುಖವಲ್ಲವೇ? ಪಟ್ಟಗಟ್ಟಿಮಾಡಿಕೊಳ್ಳುವ ಲಕ್ಷಣವಲ್ಲವೇ?

ಹಾಗಾದರೆ ಕೇಂದ್ರವೇ ಮುಂದೆನಿಂತು, ಎರಡೂ ರಾಜ್ಯಗಳಿಗೆ ತಜ್ಞ ಸಮಿತಿಯನ್ನು ಕಳಿಸಿ, ಪಕ್ಷಾತೀತವಾಗಿ ಎಲ್ಲವನ್ನೂ ಪರಿಶೀಲಿಸಿ, ಸರಿಯಾದ ತೀರ್ಮಾನಕ್ಕೆ ಬರಬಹುದಿತ್ತಲ್ಲವೇ? ಯಾಕೆ ಹಾಗೆ ಮಾಡಲಿಲ್ಲ?

ಮಗುವೊಂದು ಪತ್ರ ಬರೆದರೂ ಸ್ಪಂದಿಸುವ ಸ್ಪಂದಿಸುವ ಪ್ರಧಾನಿಗಳು ಅತ್ಯಾಚಾರಕ್ಕೊಳಗಾದ ಮಹಿಳೆಯ ಅಹವಾಲಿಗೆ ಸ್ಪಂದಿಸಲಿಲ್ಲವೇಕೆ?

ಇಂತಹ ಹಲವು ಪ್ರಶ್ನೆಗಳು ನಮ್ಮಲ್ಲೆಲ್ಲ ಹುಟ್ಟುತ್ತವೆ. ಇವು ತುಮರಿಯ ಪ್ರಶ್ನೆಗಳಲ್ಲ; ತುಮರಿಗೆ ಬಂದ ಪ್ರಶ್ನೆಗಳು. ಹಿಂದಿನ ಪ್ರಧಾನಿ ಮೂಕರೆಂಬ ಹೆಸರನ್ನು ಪಡೆದಿದ್ದರು. ಈಗಿನ ಪ್ರಧಾನಿಗಳು ಮಾತಿಗೆ ಸುಪ್ರಸಿದ್ಧರು. ಆದರೂ ಗಂಭೀರ ವಿಷಯಗಳಲ್ಲಿ ತ್ವರಿತವಾಗಿ ತೀರ್ಮಾನಕ್ಕೆ ಬರಬೇಕಾದ ವಿಷಯಗಳಲ್ಲಿ ಅವರೇಕೆ ಮಾತನಾಡೋದಿಲ್ಲ?

ಬಂಗಾರಪ್ಪನವರನ್ನು ಒಂದು ವಿಷಯದಲ್ಲಿ ನಾವೆಲ್ಲ ಮೆಚ್ಚಲೇಬೇಕು; ಕಷ್ಟವೋ ಸುಖವೋ ಮುಂದೇನೋ ಗೊತ್ತಿಲ್ಲ, ತನ್ನಿಂದಾಗದ ಸಮಯದಲ್ಲಿ ಅವರು ರಾಜೀನಾಮೆ ಕೊಟ್ಟುಬಿಟ್ಟಿದ್ದರು. ಈಗಿನವರಿಗೆ ಪಟ್ಟದ್ದೇ ಚಿಂತೆ ಅನ್ನೋದು ಜನಾಭಿಪ್ರಾಯ!

ಪಟ್ಟಭದ್ರ ಹಿತಾಸಕ್ತಿಗಳು ಎಂದರೆ ಹೀಗೇನೇ ಇರಬೇಕು ಅಲ್ಲವೇ?

ಲಿಂಗದ ಗಮ್ಮು ಲಂಗಕ್ಕೆ ಹತ್ತಿದೆ ಎಂದವರ ಕತೆಯನ್ನು ಕೇಳಿದ್ದೀರಿ. ಅದು ಕೇವಲ ಒಂದೇ ಒಂದು ಘಟನೆ. ಇನ್ನುಳಿದ ಐದು ನೂರಕ್ಕೂ ಅಧಿಕ ಏಕಾಂತ ಮಹಿಳೆಯರ ವಿಷಯದಲ್ಲಿ ಲಿಂಗದ ಗಮ್ಮು ಲಂಗಕ್ಕೆ ಹತ್ತದಂತೆ ಅಂಗವಸ್ತ್ರದಲ್ಲಿ ಅವ ತಾನೇ ಒರೆಸಿಬಿಡುತ್ತಿದ್ದನಂತೆ!

ಅಂತಹ ಕ್ರಿಮಿನಲ್ಲಾಚಾರ್ಯರು ಮೊದಲನೇ ಪ್ರಕರಣದಲ್ಲಿ ಒಳಗೆ ಹೋಗುವುದನ್ನು ತಪ್ಪಿಸಲು ಹೆಸರಿಲ್ಲದ ಪಾಟೀಲರ ಮುಖಾಂತರ ನರನಾತರಾಯ ಡೀಲ್ ಕುದುರಿಸಿದ. ಆ ನರನಾತರಾಯನಿಗೇನು ಗೊತ್ತು ಪಾಪ? ಮೊಮ್ಮಗುವನ್ನು ಉಡುಗೊರೆ ಕೊಟ್ಟಿದ್ದೇ ಈ ಕ್ರಿಮಿನಲ್ಲಾಚಾರ್ಯ ಅಂತ? ಜೊತೆಗೆ ಗಡಿಗೆ ಭಟ್ಟರು ಆಗ ತೊನೆಯಪ್ಪನಿಗೆ ಸಾಕಷ್ಟು ಸಹಾಯಮಾಡಿದ್ದರು; ಈಗ ಇಲ್ಲ ಬಿಡಿ.

ಮೊಮ್ಮಗನನ್ನು ಕರುಣಿಸಿದ್ದಷ್ಟೇ ಅಲ್ಲ, ಅದೇ ಮೊಮ್ಮಗನ ಮುಂಜಿಗೂ ಹೋಗಿದ್ದ ಈ ಶೋಭರಾಜಾಚಾರ್ಯ! ಹೀಗಾಗಿ ಜಗದ್ಗುರು ಶೋಭರಾಜಾಚಾರ್ಯನಿಗೆ ಮಕ್ಕಳು ಜನಿಸಿ ದಶಕವೇ ಕಳೆದಿದೆ! ಈಗ ಇನ್ನೊಂದು ರೆಡಿಯಾಗುತ್ತಿದೆ ಎಂಬ ಸುದ್ದಿ!

ದೇಶದಲ್ಲಿ ಸುವ್ಯವಸ್ಥೆ ಇದೆಯೆಂದು ಹೇಳೋದು ಕಷ್ಟ. ಯಾಕೆಂದರೆ ಪ್ರತಿಯೊಂದೂ ವ್ಯವಹಾರ ಪಕ್ಷಗಳ ರಾಜಕೀಯ ಹಿತಾಸಕ್ತಿ ಮತ್ತು ವ್ಯಕ್ತಿಗಳ ಖಾಸಗಿ ಹಿತಾಸಕ್ತಿಗಳನ್ನು ಅವಲಂಬಿಸಿ ನಡೆಯುತ್ತವೆ. ಅದಿಲ್ಲದಿದ್ದರೆ ಕ್ಷುಲ್ಲಕ ಕಾರಣಗಳಿಗೆ ಪಾಪದವರು ಶಿಕ್ಷೆಗೆ ಒಳಗಾಗುತ್ತಿರಲಿಲ್ಲ; ತೊನೆಯಪ್ಪನಂತಹ ಕ್ರಿಮಿನಲ್ಲುಗಳು ತಪ್ಪಿಸಿಕೊಂಡು ಮೆರೆದಾಡುತ್ತಿರಲಿಲ್ಲ.

ಮುಂದೆಯೂ ಸಹ ತೊನೆಯಪ್ಪ ಕಾನೂನು ಕುಣಿಕೆಯಿಂದ ನುಣ್ಣಗೆ ಜಾರಿಕೊಳ್ಳಬಹುದು. ಅದಕ್ಕೆ ಬೇಕಾದ ಹಿನ್ನೆಲೆ ವ್ಯವಸ್ಥೆಯನ್ನು ಆತ ಮಾಡಿಕೊಳ್ಳುತ್ತಿದ್ದಾನಂತೆ. ಅತ್ಲಕಡೆಗೆ ಅವನ ಅಪ್ಪ ಅನಂತವಾಡಿಯಲ್ಲಿ ನಿತ್ಯ ಕೇರಳದ ಮಾಂತ್ರಿಕರಿಂದ ಹೋಮ ಮಾಡಿಸುತ್ತಿದ್ದಾನಂತೆ.

ವಿಜ್ಞಾನ ಎಷ್ಟೇ ಮುಂದುವರಿದರೂ ಅಥರ್ವಣದ ತಾಂತ್ರಿಕತೆಯನ್ನು ತೆಗೆದುಹಾಕುವಂತಿಲ್ಲ; ಯಾಕೆ ನಮ್ಮ ಋಷಿಮುನಿಗಳು ಅದನ್ನೆಲ್ಲ ಸಂಗ್ರಹಿಸಿ ಬಳಕೆಗೆ ಸಿದ್ಧಪಡಿಸಿಟ್ಟರೋ ಗೊತ್ತಿಲ್ಲ. ತೊನೆಯಪ್ಪನಂತಹ ಹಲವು ಮನೆಮುರುಕರಿಗೆ ಅದರಿಂದ ಮಹದುಪಕಾರವಾಗಿದೆ.

ಅದರೊಟ್ಟಿಗೆ ಮುಗ್ಧ ಭಕ್ತರು ಹಿಂದಿನಿಂದ ಕೊಟ್ಟ ಬಂಗಾರದ ಒಡವೆಗಳೆಲ್ಲ ತುಂಬಿದ ಖಜಾನೆ ಇದೆಯಲ್ಲ?; ಅದರಲ್ಲಿ ಹಲವು ಭಾಗವನ್ನು ಕರಗಿಸಿ ಖರ್ಚುಮಾಡಿ ಬದುಕುತ್ತಿದ್ದಾರೆ ಕ್ರಿಮಿನಲ್ಲಾಚಾರ್ಯರು!! ನೋಡೋಣ. ವಿಧಿಯೊಂದಿದೆಯಲ್ಲ? ಈಗ ಮಾಡಿದ್ದನ್ನು ಕೆಲವೇ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ ಎಂಬುದು ಅನೇಕರ ಅನಿಸಿಕೆ. ಅದನ್ನು ನಾವು ತಿಂಗಳ ಹಿಂದೆ ಒಂದು ಘಟನೆಯಲ್ಲಿ ಗಮನಿಸಿದ್ದೇವೆ.

ಇನ್ನೊಂದು ವಿಷಯವನ್ನು ನಿಮಗೆಲ್ಲ ಹೇಳಲೇಬೇಕು. ಯಾರೋ ಕೆಲವರು ನಾಗೇಶ್ ಹೆಗಡೆಯವರ ಪಂಚಗವ್ಯದ ಲೇಖನದ ಬಗ್ಗೆ ವ್ಯಂಗ್ಯವಾಡಿದರಂತೆ. ನಾಗೇಶ್ ಹೆಗಡೆಯವರು ಬರೆದದ್ರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಕಟು ವೈಜ್ಞಾನಿಕ ಸತ್ಯವನ್ನು ಹ್ಯುಮರಸ್ ಆಗಿ ಬರೆಯುವುದು ಹೆಗಡೆಯವರ ಶೈಲಿ. ಹಾಗೆ ಬರೆಯುವುದರ ಮೂಲಕ ಅವರು ಪಂಚಗವ್ಯವನ್ನು ಜಾಸ್ತಿ ಬಳಸುವ ವರ್ಗವನ್ನು ಎಚ್ಚರಿಸಿದ್ದಾರೆ.

ಇಂದಿನ ಹಳ್ಳಿಗಳಲ್ಲಿ ದೇಸೀ ತಳಿಯ ದನಗಳಿಲ್ಲವಲ್ಲ? ಎಷ್ಟೋ ಮನೆಗಳಲ್ಲಿ ದನಗಳೆ ಇಲ್ಲ. ಇದ್ದರೂ ಒಂದೋ ಎರಡೋ ಸಂಕರ ತಳಿಯ ದನಗಳು, ಅವುಗಳಲ್ಲೇ ಅತಿ ಶೀಘ್ರವಾಗಿ ಬ್ರುಸೋಲಿಸಿಸ್ ಕಾಯಿಲೆ ಹಬ್ಬೋದು. ಸಂಕರ ತಳಿಯ ದನಗಳನ್ನು ಸಾಕಿಕೊಂಡವರಲ್ಲೂ ಅನೇಕ ಜನ ಪಂಚಗವ್ಯ ಸೇವಿಸುವವರಿದ್ದಾರೆ. ಗೋಮಯ, ಗಂಜಲ ಬಳಸುವವರಿದ್ದಾರೆ. ಅವರನ್ನೆಲ್ಲ ಎಚ್ಚರಿಸುವ ಸಲುವಾಗಿ ಆ ಲೇಖನ ಬರೆದಿದ್ದಾರೆ ಅನಿಸಿತು.

Thumari Ramachandra

source: https://www.facebook.com/groups/1499395003680065/permalink/1822714418014787/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s