ಶಂಕರ, ನಾಥಪಂಥ ಮತ್ತು ಅಘೋರಿಗಳಲ್ಲಿ ಕ್ರಿಮಿನಲ್ಲಾಚಾರ್ಯರು ಯಾವುದನ್ನು ಆತುಕೊಂಡಿದ್ದಾರೆ?

ಶಂಕರ, ನಾಥಪಂಥ ಮತ್ತು ಅಘೋರಿಗಳಲ್ಲಿ ಕ್ರಿಮಿನಲ್ಲಾಚಾರ್ಯರು ಯಾವುದನ್ನು ಆತುಕೊಂಡಿದ್ದಾರೆ?

ತಾಂತ್ರಿಕರು ಈ ಜಗತ್ತು ಶಿವ ಮತ್ತು ಶಕ್ತಿ ಎಂಬೆರಡು ತತ್ತ್ವಗಳಿಂದಾಗಿದೆ ಎನ್ನುತ್ತಾರೆ. ಶ್ರೀಚಕ್ರದ ತಂತ್ರೋಪಾಸನೆಯ ಬಗ್ಗೆ ವಿವರಿಸುತ್ತ ಸ್ವಾಮಿ ರಾಮ ಹೇಳ್ತಾರೆ-ಅದರಲ್ಲಿ ಮೂರು ವಿಧವಾದ ಉಪಾಸನೆಗಳಿವೆಯಂತೆ. ಕೌಲ, ಮಿಶ್ರ ಮತ್ತು ಸಮಯ ಎಂದು ಅದನ್ನು ವಿಂಗಡಿಸುತ್ತಾರಂತೆ.

ಕೌಲ ಎಂಬ ತಾಂತ್ರಿಕ ಆರಾಧನಾ ಪದ್ಧತಿಯವರು ವಾಮಪಂಥದವರಾಗಿದ್ದು ಶಕ್ತಿಯನ್ನು ಆರಾಧಿಸುತ್ತಾರೆ. ಅವರಲ್ಲಿ ಆಡಂಬರದ ಪೂಜೆಗಳು ಮತ್ತು ತಾಂತ್ರಿಕ ಕಾಮದ ಬಳಕೆಯೂ ಕಂಡುಬರೋದರಿಂದ ಹೆಚ್ಚಾಗಿ ಲೌಕಿಕಾಸಕ್ತಿಯ ತಾಂತ್ರಿಕರು ಈ ಪದ್ಧತಿಯನ್ನು ಬಳಸುತ್ತಾರಂತೆ. ಮೂಲಾಧಾರದಲ್ಲಿ ಕುಂಡಲಿನಿಯನ್ನು ಜಾಗೃತಗೊಳಿಸೋದು ಇವರ ಮುಖ್ಯ ಉದ್ದೇಶ. ಜನಸಾಮಾನ್ಯರು ಇದನ್ನು ದುರುಪಯೋಗಪಡಿಸಿಕೊಳ್ಳೋದೂ ಉಂಟಂತೆ.

ಮಿಶ್ರ-ಹೆಸರೇ ಹೇಳುವಂತೆ ಇದು ಸಮ್ಮಿಶ್ರಣ ರೂಪ. ಅತ್ಲಾಗೆ ಕೌಲವೂ ಅಲ್ಲ ಇತ್ಲಾಗೆ ಸಮಯವೂ ಅಲ್ಲ. ನಡುವಿನ ಒಂದು ಆರಾಧನಾ ಕ್ರಮ. ಇಲ್ಲಿಯೂ ಅಪರೂಪಕ್ಕೆ ಕಾಮದ ಛಾಯೆ ಕಾಣಿಸುವುದಂತೆ. ಬಾಹ್ಯ ಪೂಜೆಗಳ ಜೊತೆಗೆ ಆಂತರ್ಯದಲ್ಲಿಯೂ ಇವರು ಆರಾಧನೆ ನಡೆಸುವರಂತೆ-ಹೀಗಾಗಿ ಮಿಶ್ರ! ಜಾಗೃತ ಗೊಳಿಸಿದ ಕುಂಡಲಿನಿ ಶಕ್ತಿಯನ್ನು ಅನಾಹತ ಚಕ್ರಕ್ಕೆ ಸಾಗಿಸಿ ಅಲ್ಲಿ ಅದನ್ನವರು ಆರಾಧಿಸುವರಂತೆ.

ಶುದ್ಧ ಮತ್ತು ಉನ್ನತ ಆರಾಧನಾ ಕ್ರಮವೆಂದರೆ ಸಮಯ ಎಂಬ ವಿಧಾನ. ಇದು ನೇರಮಾರ್ಗದಲ್ಲಿ ನಡೆಸುವ ಆರಾಧನಾ ಕ್ರಮ. ಇದು ಯೋಗದ ಮೂಲಕವೇ ನಡೆಯುವ ಆರಾಧನೆಯಾಗಿದ್ದು ಬಾಹ್ಯಾಚರಣೆಗಳಿಗೆ ಅವಕಾಶವಿಲ್ಲ ಮತ್ತು ತಾಂತ್ರಿಕ ಕಾಮಕ್ಕೆ ಇಲ್ಲಿ ಅವಕಾಶವಿಲ್ಲ. ಕುಂದಲಿನಿ ಶಕ್ತಿಯನ್ನು ಸಹಸ್ರಾರದಲ್ಲಿರುವ ಸಹಸ್ರದಳ ಕಮಲದಲ್ಲಿ ನಿಲ್ಲಿಸಿ, ನಡೆಸುವ ಈ ಕ್ರಮವನ್ನು ಅಂತರ್ಯಾಗ ಎನ್ನುತ್ತಾರಂತೆ. ಚಕ್ರಗಳು, ನರಗಳು, ನರಮಂಡಲ, ನಾಡಿಗಳು, ಪ್ರಾಣವಾಯುಗಳು ಎಲ್ಲದರ ಮಾಹಿತಿ ಇದ್ದವ ಮಾತ್ರ ಈ ಪದ್ಧತಿಯಲ್ಲಿ ಶಿಷ್ಯನಾಗಲು ಸಾಧ್ಯವಂತೆ.

ಆದಿ ಶಂಕರರ ಆನಂದ ಲಹರಿ ಮತ್ತು ಸೌಂದರ್ಯ ಲಹರಿಗಳು ಸಮಯ ಪದ್ಧತಿಯಲ್ಲಿ ಅನುಭವಕ್ಕೆ ನಿಲುಕುವ ಶ್ರೀಚಕ್ರದ ಬಗೆಗೆ ಹೇಳುತ್ತವಂತೆ. ಕಾಲಕಾಲಕ್ಕೆ ಈ ದೇಶದುದ್ದಗಲಕ್ಕೂ ಅಸಂಖ್ಯ ಸಾಧು-ಸಂತರು ಆಗಿಹೋಗಿದ್ದಾರೆ. ಕೆಲವರು ಮಾತ್ರ ಸಂಪೂರ್ಣ ಮೋಕ್ಷದ ಹಂತವನ್ನು ತಲುಪಿರುತ್ತಾರೆ. ಮೋಕ್ಷಕ್ಕಾಗಿ ಹಂಬಲಿಸಿ, ಪ್ರಯತ್ನಿಸಿ, ವಿಫಲರಾದವರು ಬ್ಯಾಂಕ್ ಬ್ಯಾಲೆನ್ಸ್ ನಂತೆ ಅವರ ಪ್ರಯತ್ನವನ್ನು ಹಾಗೇ ಉಳಿಸಿಕೊಂಡು ಮುಂದಿನ ಜನ್ಮಗಳಲ್ಲಿ ಸಾಧನೆ ಮಾಡುತ್ತಾರೆಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ.

ಒಂದೆಡೆಗೆ ಒಮ್ಮೆ ಇಬ್ಬರ ನಡುವೆ ತರ್ಕ ನಡೆದಿತ್ತಂತೆ. ಹಿಂದೂ ಜನರಲ್ಲಿ ಇರುವ ಯಾವ ಆರಾಧನಾ ವಿಧಾನದಿಂದ ಬೇಗ ಮೋಕ್ಷವನ್ನು ಪಡೆಯಬಹುದು ಎಂಬುದು ತರ್ಕದ ಮುಖ್ಯ ವಸ್ತುವಾಗಿತ್ತು. ತರ್ಕದಲ್ಲಿ ಅಘೋರಿಗಳು, ನಾಗಾ ಸಾಧುಗಳು, ನಾಥಪಂಥದವರು, ಪತಂಜಲಿ, ಶಂಕರ ಎಲ್ಲರ ತತ್ತ್ವ ಸಿದ್ಧಾಂತಗಳ ಬಗೆಗೆ ವಾದವಿವಾದಗಳು ನಡೆದಿದ್ದವಂತೆ.

ಮಹರ್ಷಿ ಪತಂಜಲಿಯ ಕಾಲಮಾನ ಕ್ರಿಸ್ತ ಪೂರ್ವ 250 ವರ್ಷಗಳ ಹಿಂದೆ ಎನ್ನಲಾಗುತ್ತದೆ; ಅದು ಅದಕ್ಕೂ ಹಿಂದೆಯೂ ಇದ್ದಿರಬಹುದು, ಇದೊಂದು ಅಂದಾಜು ಲೆಕ್ಕವಷ್ಟೆ. ಭಾರತದಲ್ಲಿ ಯೋಗದರ್ಶನವೆಂಬ ಶಾಸ್ತ್ರವನ್ನು ಅನುಷ್ಠಾನಕ್ಕೆ ತಂದವರು ಪತಂಜಲಿ.

ಧೃತಿಕ್ಷಮಾದಮೋ ಅಸ್ತೇಯಂ ಶೌಚಂ ಇಂದ್ರಿಯ ನಿಗ್ರಹಂ | ಧೀರ್ವಿದ್ಯಾಸತ್ಯಂ ಅಕ್ರೋಧೋ ದಶಕಂ ಧರ್ಮ ಲಕ್ಷಣಂ || ಎಂಬ ಮನುವಿನ ಹೇಳಿಕೆಯ ಜೊತೆಗೆ ಶಿಷ್ಟಮಾರ್ಗದಲ್ಲಿ, ಸಮಾಧಿಪಾದ, ಸಾಧನಾ ಪಾದ, ವಿಭೂತಿ ಪಾದ ಮತ್ತು ಕೈವಲ್ಯ ಪಾದಗಳೆಂಬ ನಾಲ್ಕು ವಿಭಾಗಗಳಿಂದ ಕೂಡಿದ ಯೋಗಸೂತ್ರದಲ್ಲಿ 196 ಸೂತ್ರಗಳನ್ನು ಹೇಳಿದ್ದಾರೆ ಪತಂಜಲಿ.

ನಾಥ ಪಂಥದ ಮೂಲಪುರುಷ ಮತ್ಸ್ಯೇಂದ್ರ ನಾಥರ ಕಾಲಮಾನ ಹತ್ತನೇ ಶತಮಾನ. ಬೌದ್ದ ಮತ್ತು ಹಿಂದೂ ಸಂಪ್ರದಾಯಗಳ ಜೊತೆಗೆ ಹಠಯೋಗವನ್ನು ಸಮೀಕರಿಸಿ ನಾಥಪಂಥವನ್ನು ಹುಟ್ಟುಹಾಕಿದವರು ಇವರು. ನಾಥ ಪಂಥದವರು ಮೇಲೆ ಹೇಳಿದ ಕೌಲಶೈವ ಪಂಥವನ್ನು ಅನುಸರಿಸುತ್ತಾರೆ ಎನ್ನಲಾಗಿದೆ.

ಮತ್ಸ್ಯೇಂದ್ರನಾಥರ ಶಿಷ್ಯನೆಂಬ ಖ್ಯಾತಿ ಗೋರಕ್ಷನಾಥ ಅಥವಾ ಗೋರಖನಾಥರದ್ದು; ಇವರ ಕಾಲಮಾನ ಹನ್ನೊಂದನೇ ಶತಮಾನ. ಗೋರಖನಾಥರು ಹಠಯೋಗದಲ್ಲಿ ಸಾಧನೆ ಮಾಡಿ ಭಾರತದ ಹಳ್ಳಿಹಳ್ಳಿಗಳಲ್ಲಿ ಹೆಸರು ಪಡೆದರು. ಅಂದಿನ ಕಾಲಘಟ್ಟದಲ್ಲಿ ನಾಥಪಂಥದ ಸಂಪ್ರದಾಯಗಳಿಗೆ ಸರಿಯಾದ ಗ್ರಂಥಗಳಿರದ್ದರಿಂದಲೋ ಏನೋ ಕೆಲವು ಕಡೆ ಅಲ್ಲಲ್ಲಿ ನಾಥ ಪಂಥದ ಹೆಸರಿನಲ್ಲಿ ಪೂಜೆಗಳಲ್ಲಿ ಪ್ರಾಣಿ ಬಲಿಗಳೂ ನಡೆಯುತ್ತಿದ್ದವಂತೆ. ನೇಪಾಳದ ನಾಥ ಪರಂಪರೆಯ ಕೇಂದ್ರಗಳಲ್ಲಿ ಇಂದಿಗೂ ಪ್ರಾಣಿ ಬಲಿಗಳು ನಡೆಯುತ್ತವಂತೆ.

ಇನ್ನು ಅಘೋರಕ್ಕೆ ಬರೋಣ. ಅಘೋರಿ ಪಂಥವೊಂದು ಹಿಂದೆಂದೋ ಇತ್ತೆಂದು ಸತ್ಯಕಾಮರಂತಹ ಕಾದಂಬರಿಕಾರರು ಬರೆಯುತ್ತಾರೆ; ಆದರೆ ಅದಕ್ಕೆ ಯಾವುದೇ ಪುರಾವೆಗಳಿಲ್ಲ. ಆದಿ ಶಂಕರರ ಕಾಲದಲ್ಲಿ ಶೈವರು, ಶಾಕ್ತರು, ಗಾಣಪತ್ಯರು, ಸ್ಕಾಂದರು ಇತ್ಯಾದಿ ಹಲವು ಪಂಗಡಗಳಿದ್ದು ಕಾಪಾಲಿಕರೆಂಬ ಉಗ್ರ ಶೈವ ಪಂಥವೊಂದು ಊರ್ಜಿತದಲ್ಲಿತ್ತು. ಅವರೇ ಮುಂದೆ ಅಘೋರಿಗಳು ಎನಿಸಿಕೊಂಡರಿ.

ಹದಿನೇಳನೇ ಶತಮಾನದ ಆದಿಭಾಗದಲ್ಲಿ ಜನಿಸಿ ಹದಿನೆಂಅಟನೇ ಶತಮಾನದ ಮಧ್ಯಭಾಗದ ವರೆಗೆ ನೂರೈವತ್ತು ವರ್ಷಗಳ ಕಾಲ ಬದುಕಿದ್ದ ಕೀನಾರಾಮ್ ಎಂಬವರು ಅಘೋರಿ ಪಂಥದ ಸ್ಥಾಪಕರೆಂದು ಆರೋಪಿಸಲ್ಪಟ್ಟಿದ್ದಾರೆ. ಹೀಗಾಗಿ ಅಘೋರಿಗಳು ಹೆಚ್ಚಿಗೆ ಕಾಣಿಸತೊಡಗಿದ್ದು ಹದಿನೆಂಟನೇ ಶತಮಾನದಿಂದೀಚೆಗೆ ಎನ್ನಬಹುದು.

ಸಾಮಾಜಿಕವಾಗಿ ಯಾವೆಲ್ಲವನ್ನೂ ಮಾಡಬಾರದು, ಮಾಡಿದರೆ ಅನ್ಯರ ಬದುಕಿಗೆ ತೊಂದರೆಯಾಗುತ್ತದೆ ಎನ್ನುವರೋ ಅಂಥದ್ದನ್ನೆಲ್ಲ ಮಾಡುವ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡ ಉಗ್ರ ಶೈವರಿವರು. ಸ್ಮಶಾನದಲ್ಲಿ ಹೆಣದಮೇಲೆ ಕುಳಿತು ಅದನ್ನೇ ಹರಿದು ತಿನ್ನೋದು, ಮಾನವ ಕಪಾಲದಲ್ಲಿ ಹೆಂಡ ಬಸಿದುಕೊಂಡು ಕುಡಿಯೋದು ಇತ್ಯಾದಿ ಚಿತ್ರವಿಚಿತ್ರ ನಡವಳಿಕೆ ಮತ್ತು ಆಚರಣೆಗಳಿಂದ ಜನರಲ್ಲಿ ಭಯಹುಟ್ಟಿಸಿದ್ದಾರೆ.

ಸಾಮಾನ್ಯವಾಗಿ ಅಘೋರಿಗಳು ಸಮಾಜದ ಮಧ್ಯೆ ಇರುವುದು ಕಡಿಮೆ. ಕಾಶಿಯಲ್ಲಿ ಅವರು ಹೆಚ್ಚಾಗಿ ಕಾಣಿಸುತ್ತಾರೆ. ಯಾವುದೇ ಕಟ್ಟುಪಾಡಿಗಳಿಲ್ಲದ ಜೀವನ ಅವರದ್ದು. ಏನುಬೇಕಾದರೂ ಮಾಡಲು ಅವರು ಸ್ವತಂತ್ರರು. ಹೀಗಾಗಿ ಸಂಭೋಗದ ಆಸೆಯಾದರೆ ಅದನ್ನೂ ತೀರಿಸಿಕೊಳ್ಳಬಹುದು, ಈರುಳ್ಳಿ ಉಪ್ಪಿಟ್ಟಿನ ಆಸೆಯಾದರೆ ಅದನ್ನೂ ತಿನ್ನಬಹುದು. ಎಲ್ಲ ಆಸೆಗಳನ್ನು ತೀರಿಸಿಕೊಂಡು, ರೋಸಿಹೋಗಿ, ಹೇಸಿಹೋಗಿ ಕೊನೆಯಲ್ಲಿ ವೈರಾಗ್ಯ ಬರಬೇಕೆಂಬುದು ಅವರ ಉದ್ದೇಶ. ಇವರೂ ಸಹ ಹಠಯೋಗವನ್ನು ಫಾಲೋ ಮಾಡುತ್ತಾರೆ.

ಮೊಘಲರ ಉಪಟಳ ಜಾಸ್ತಿಯಾದಾಗ ಹಿಂದೂಗಳ ರಕ್ಷಣೆಗಾಗಿ, ಹದಿನಾರನೇ ಶತಮಾನದಲ್ಲಿ ಬಂಗಾಲದ ಮಧುಸೂದನ ಸರಸ್ವತಿ ಸ್ವಾಮೀಜಿ ನಾಗಾಸಾಧುಗಳನ್ನು ಒಂದೆಡೆ ಸೇರಿಸಿ, ಅವರ ಕೈಗಳಲ್ಲಿ ತ್ರಿಶೂಲಗಳಂತಹ ಆಯುಧಗಳು ಇರುವಂತೆ ಪ್ರೇರೇಪಿಸಿದರಂತೆ. ದಿಗಂಬರರಾದ ನಾಗಾಗಳನ್ನು ಈಗಲೂ ನಾವು ಉತ್ತರಭಾರತದಲ್ಲಿ ಕಾಣುತ್ತೇವೆ. ಇವರೊ ಸಹ ಹಠಯೋಗವನ್ನು ಪ್ರಾಕ್ಟೀಸು ಮಾಡುತ್ತಾರೆ.

ಭಾಗಶಃ ಯೋಗವನ್ನು ಅನುಸರಿಸುತ್ತ ಖಾಸಗಿ ಹಿತಾಸಕ್ತಿ-ಮನೆ-ಮಠಗಳಿಲ್ಲದ ಇಂತಹ ಸಾಧುಗಳಲ್ಲಿ ಕೆಲವು ವಿಶಿಷ್ಟ ಶಕ್ತಿಗಳಿರುವುದು ನಿಜ. ಸಮಾಜದಲ್ಲಿ ಅನೇಕರಿಗೆ ಉಪಕಾರ ಮಾಡುವ ಮನೋಭಾವವುಳ್ಳ ಅವರನ್ನು ಜನ ಭಯಭಕ್ತಿಯಿಂದ ಗೌರವಿಸುತ್ತಾರೆ. ಕಾಣಿಕೆ ನೀಡುತ್ತಾರೆ.

ಎಂಟನೇ ಶತಮಾನದಲ್ಲಿದ್ದ ಆದಿ ಶಂಕರರ ಕಾಲದಲ್ಲಿ ಆಚರಣೆಗಳಲ್ಲಿ ಕುರುಡು ಸಂಪ್ರದಾಯಗಳು ಸೇರಿಕೊಂಡು ಧರ್ಮ ಮತ್ತು ಅಧರ್ಮಗಳಲ್ಲಿ ವ್ಯತ್ಯಾಸವೇ ಕಾಣುತ್ತಿರಲಿಲ್ಲ. ವೇದಗಳೆಲ್ಲ ಮರೆಯಾಗಿ ಕೇವಲ ಬಾಹ್ಯಾಚರಣೆಗಳು, ಅಂಧಾನುಕರಣೆಗಳು ನಡೆಯುತ್ತಿದ್ದವಂತೆ. ಪಶುಬಲಿಗಳ ಜೊತೆಗೆ ಮಾನವ ಬಲಿಗಳೂ ನಡೆಯುತ್ತಿದ್ದವಂತೆ!

ಸಮಾಜ ತೀವ್ರತರ ಸಂಕಷ್ಟದಲ್ಲಿ ಸಾಗುತ್ತಿದ್ದಾಗ ಶಂಕರರು ಬಂದರು, ಮಹರ್ಷಿ ಪತಂಜಲಿ ಹೇಳಿದ ಶಿಷ್ಟ ಯೋಗ ಸಂಪ್ರದಾಯಗಳನ್ನು ಆಚರಣೆಯಲ್ಲಿ ತಂದರು. ಪ್ರಸ್ಥಾನತ್ರಯಗಳ ಭಾಷ್ಯ ಬರೆದು, ಮಥಿತಾರ್ಥಗಳನ್ನು ಕ್ರೋಡೀಕರಿಸಿ ಸ್ತುತಿ ಮತ್ತು ಶ್ಲೋಕಗಳ ರೂಪದಲ್ಲಿ ಸಮಾಜಕ್ಕೆ ಕೊಟ್ಟರು. ಸಮಾಜವೆಂದರೆ ಕೇವಲ ಸನ್ಯಾಸಿಗಳು, ಸಾಧಕರು ತುಂಬಿದ ಜಾಗವಲ್ಲ. ಸನ್ಯಾಸಿಗಳಿಗೆ ಲೌಕಿಕ ಪೋಷಕರಾಗಿ ಗೃಹಸ್ಥರೂ ಬೇಕಾಗ್ತಾರೆ.

ಸಾನಂದಂ ಸದನಂ ಸುತಾಸ್ತು ಸುಧಿಯಃ ಕಾಂತಾ ಪ್ರಿಯಾಲಾಪಿನೀ
ಇಚ್ಛಾಪೂರ್ತಿಧನಂ ಸ್ವಯೋಷಿತಿ ರತಿಃ ಸ್ವಾಜ್ಞಾಪರಾಃ ಸೇವಕಾಃ |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋಃ ಸಂಗಮುಪಾಸತೇ ಚ ಸತತಂ ಧನ್ಯೊ ಗೃಹಸ್ಥಾಶ್ರಮಃ || ೧೨-೦೧ ||

ಯಾವ ನಿವಾಸದಲ್ಲಿ ಸದಾ ಸ೦ತಸದ ಅಲೆಗಳು ಉಕ್ಕುತ್ತವೆಯೋ, ಮಕ್ಕಳೆಲ್ಲರೂ ಬುದ್ಧಿವ೦ತರಾಗಿರುವರೋ, ಪ್ರಿಯವಚನಳಾದ ಪತ್ನಿಯಿರುವಳೋ, ಇಷ್ಟಾರ್ಥಗಳನ್ನೀಡೇರಿಸುವಷ್ಟು ಧನಕನಕಗಳಿರುವುದೋ, ಆಜ್ಞಾನುವರ್ತಿಗಳಾದ ಸೇವಕರಿರುವರೋ, ಅತಿಥಿ ಸತ್ಕಾರ ಸಾಧು ಸತ್ಸ೦ಗಗಳು ನಡೆಯುತ್ತಿರುವುದೋ ಅ೦ತಹ ಒ೦ದು ಗೃಹಸ್ಥಾಶ್ರಮ ನಿಜಕ್ಕೂ ಧನ್ಯ. ಇದು ಗುರು ಚಾಣಕ್ಯರ ನೀತಿ ಶಾಸ್ತ್ರದ ಉಲ್ಲೇಖ.

ಸಾಧು ಸಂತರಿಗೆ ಗೃಹಸ್ಥರೇ ಒಂದರ್ಥದಲ್ಲಿ ಸೇವಕರು; ಮಕ್ಕಳಿಲ್ಲದ ಅವರಿಗೆ ಇವರೇ ಮಕ್ಕಳು. ಸಾಧಕರು, ಸಂತರು ಗೃಹಸ್ಥರಿಂದ ಸೇವೆಯನ್ನು ಪಡೆದುಕೊಂಡು ಅವರ ಕುಟುಂಬ ಸಮಸ್ತರನ್ನೂ ಹರಸಬೇಕು. ಸೇವೆ-ಕಾಣಿಕೆ ಸ್ವೀಕರಿಸುವ ನೆಪದಲ್ಲಿ ಶಿಷ್ಯವರ್ಗದ ಕುಟುಂಬಗಳ ಮಹಿಳೆಯರನ್ನೂ ಹೆಣ್ಣುಮಕ್ಕಳನ್ನೂ ಕಾಮತೃಷೆಗೆ ಬಳಸಿಕೊಳ್ಳುವ ಕಳ್ಳಸಾಧುವಾಗಬಾರದು.

ಸಾಧು-ಸಂತರನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳುವಾಗಾಗಲೀ ಅಥವಾ ಅವರಿರುವ ಮಠಮಾನ್ಯಗಳಿಗೆ ತಾವು ತೆರಳುವಾಗಾಗಲೀ, ಸಾಧು ನಿಜವಾಗಿಯೂ ಸಾಧುವೋ ಅಥಬಾ ಢೋಂಗಿ ಸಾಧುವೋ ಎಂದು ಪರಿಶೀಲಿಸಬೇಕು ಮತ್ತು ಆಗಾಗ ಸಾಧುವಿನ ನಡಾವಳಿಗಳ ಮೇಲೆ ಕಣ್ಣಿಟ್ಟಿರಬೇಕು. ಸಾಧುವು ಸಾಧುವಿಗೆ ಹೇಳಿದ ಪರಿವ್ರಾಜಕ ಲಕ್ಷಣಗಳನ್ನು ಕಳೆದುಕೊಂಡಿದ್ದರೆ, ಸಾಧುವು ಐಹಿಕ ಜೀವನದ ಭೋಗವಸ್ತುಗಳ ದಾಸನಾಗಿದ್ದರೆ ಅಂತಹ ಸಾಧು ವೇಷದವನನ್ನು ಸಾಧು ಎಂದು ಗುರುತಿಸುವುದು ಸಂಸಾರಿಯ ತಪ್ಪು.

ಅದಿರಲಿ ನಾವೀಗ ನಮ್ಮ ಪರಂಪರಾಗತ ಸಂಪ್ರದಾಯಗಳತ್ತ ಮುಖ ಮಾಡೋಣ. ಸಾಧುವಾದವರು ಸನ್ಯಾಸಿಗಳಾದವರು ಎಲ್ಲರೂ ಅಘೋರಿಗಳಾಗಿಬಿಟ್ಟರೆ ಈ ಸಮಾಜದಲ್ಲಿ ಅವರನ್ನು ನಿಗ್ರಹಿಸುವುದು ಸಾಧ್ಯವಿಲ್ಲ. ಸಾಧಕರಿಗೆ ವೈರಾಗ್ಯ ಬೇಕು ನಿಜ, ಮೋಕ್ಷ ಬೇಕು ಸಹಜ; ವೈರಾಗ್ಯ ಹೊಂದುವುದಜ್ಜಾಗಿ ಅಘೋರಿಯಾಗುವುದು ತರವಲ್ಲ.

ಅಘೋರ ಪಂಥ ಹುಟ್ಟುವುದಕ್ಕಿಂತ ಸಹಸ್ರಮಾನಗಳ ಅಥವಾ ಯುಗಗಳ ಮುಂಚೆಯೇ ಸನ್ಯಾಸ ಧರ್ಮ ಎಂಬುದು ಹುಟ್ಟಿದೆ; ಅಲ್ಲಿ ಸಾಧಕರೆಲ್ಲ ಶಿಷ್ಟರಾಗಿದ್ದೂ ವಿರಕ್ತರಾಗಿದ್ದಾರೆ. ಬೆಂಕಿ ಸುಡುತ್ತದೆ ಎಂಬುದನ್ನು ಹಿತೈಷಿ ಅನುಭವಿಗಳು ಹೇಳಿದ್ದು ಕೇಳಿದರೆ ಸಾಕು; ಸ್ವಾನುಭವಕ್ಕಾಗಿ ಬೆಂಕಿಯೊಳಗೇ ಹಾರುವುದು ಉತ್ತಮವಲ್ಲ ಸರಿಯಷ್ಟೇ? ಹಾಗಾಗಿ ಎಲ್ಲ ಪಂಥಗಳ ಗುರಿ ಮೋಕ್ಷವೇ ಆಗಿದ್ದರೂ ಶಾಂಕರ ಮುಖ್ಯ ಪಂಥ ಶಿಷ್ಟವಾಗಿದೆ, ’ಸಮಯ’ವಾಗಿದೆ, ಉನ್ನತವೂ ಆಗಿದೆ.

ಬೆಳೆಸಿಬಂದ ಧಾನ್ಯ ಕಾಳುಕಡಿಗಳಲ್ಲಿ ಜೊಳ್ಳನ್ನೆಲ್ಲ ಬೇರ್ಪಡಿಸಿ ಗಟ್ಟಿಯಾದ ಧಾನ್ಯಗಳನ್ನು ಎತ್ತಿಕೊಳ್ಳುವಂತೆ ಮಹರ್ಷಿ ಪತಂಜಲಿಯು ತಮ್ಮ ಯೋಗಸೂತ್ರದ ಮೂಲಕ ಸಾಧಕರಿಗೂ ಮತ್ತು ಸಂಸಾರಿಗಳಿಗೂ ಜ್ಞಾನದ ಮಾರ್ಗೋಪಾಯಗಳನ್ನು ಹೇಳಿದ್ದಾರೆ.

ಆಹಾರನಿದ್ರಾಭಯಮೈಥುನಾನಿ
ಸಮಾನಿ ಚೈತಾನಿ ನೃಣಾಂ ಪಶೂನಾಮ್ |
ಜ್ಞಾನಂ ನರಾಣಾಮಧಿಕೋ ವಿಶೇಷೋ
ಜ್ಞಾನೇನ ಹೀನಾಃ ಪಶುಭಿಃ ಸಮಾನಾಃ || 17-17

ಆಹಾರ, ನಿದ್ರೆ, ಮೈಥುನಗಳು ಪಶುಗಳಲ್ಲಿಯೂ ಇವೆ. ಮನುಷ್ಯನಲ್ಲಿ ಅದಕ್ಕಿಂತ ಹೆಚ್ಚಿನದೇನಿದೆ ಎಂದರೆ-ಜ್ಜಾನ. ಜ್ಞಾನ ಶೂನ್ಯನಾದವರು ಪಶುವಿದ್ದಂತೆ. ಶಂಕರರು ಜ್ಞಾನಕ್ಕೆ ಪ್ರಾಮುಖ್ಯತೆ ಕೊಟ್ಟಂತೆ ಆಚಾರ್ಯ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲೂ ಅದನ್ನು ಹೇಳಿದ್ದಾರೆ.

ಕುರಿಯೊಂದು ಹಳ್ಳಕ್ಕೆ ಬಿತ್ತು. ಅದನ್ನು ನೋಡಿ ಉಳಿದ ಕುರಿಗಳೆಲ್ಲ ದಬದಬನೆ ಹೋಗಿ ಬಿದ್ದವಂತೆ. ಹಾಗಾಗಬಾರದಲ್ಲ?

ಬಂಧಾಯ ವಿಷಯಾಸಂಗೋ ಮುಕ್ತ್ಯೈ ನಿರ್ವಿಷಯಂ ಮನಃ |
ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ || 13-12

ಮನುಷ್ಯನ ಮನಸ್ಸಿಗೆ ಮಾತ್ರ ದೇವರು ಬಹಳ ವಿಶಿಷ್ಟ ಶಕ್ತಿಯನ್ನು ಕೊಟ್ಟ. ಇಂದು ನಾವು ಹಡಗಿನಲ್ಲಿ, ವಿಮಾನದಲ್ಲಿ, ಮೋಟಾರು ವಾಹನಗಳಲ್ಲಿ ಚಲಿಸುತ್ತೇವೆ. ಅವುಗಳ ಆವಿಷ್ಕಾರ ಮನುಷ್ಯನ ಮನಸ್ಸಿನ ಯೋಚನಾ ಲಹರಿಗಳಿಂದಲೇ ಆಗಿದೆ. ಅಂತಹ ಮನಸ್ಸಿಗೆ ಯಾವುದು ನಿತ್ಯ ಮತ್ತು ಯಾವುದು ಅನಿತ್ಯ ಎಂಬುದು ಗೊತ್ತಾದರೆ ವಿರಕ್ತಿಯನ್ನು ಹೊಂದುವುದು ಪ್ರಯಾಸದ ಕೆಲಸವಲ್ಲ. ಇಷ್ಟೆಲ್ಲ ಮಾಹಿತಿಗಳಿದ್ದೂ ತಿದ್ದಿಕೊಳ್ಳಲಾಗದ ಸಮಾಜವನ್ನು ಕಂಡಾಗ ಚಾಣಕ್ಯರ ಈ ನೀತಿ ಕಣ್ಣಿಗೆ ಕಟ್ಟುತ್ತದೆ-

ಪತ್ರಂ ನೈವ ಯದಾ ಕರೀಲವಿಟಪೇ ದೋಷೋ ವಸಂತಸ್ಯ ಕಿಂ
ನೋಲೂಕೋಽಪ್ಯವಲೋಕತೇ ಯದಿ ದಿವಾ ಸೂರ್ಯಸ್ಯ ಕಿಂ ದೂಷಣಮ್ |
ವರ್ಷಾ ನೈವ ಪತಂತಿ ಚಾತಕಮುಖೇ ಮೇಘಸ್ಯ ಕಿಂ ದೂಷಣಂ
ಯತ್ಪೂರ್ವಂ ವಿಧಿನಾ ಲಲಾಟಲಿಖಿತಂ ತನ್ಮಾರ್ಜಿತುಂ ಕಃ ಕ್ಷಮಃ || 12-06

It is not the fault of spring season, if leaves don’t grow on a KARIRA tree. It is not the fault of the sun if the owl can’t see during the day. Cloud is not to be blamed if no raindrops fall into the mouth of chaataka. One is powerless to wipe off the destiny inscribed on one’s forehead

ಮಠದ ಹೋರಿಯಲ್ಲಿ ಕಾಮುಕನನ್ನು ಕಾಣಲಾಗದ್ದು ನಮ್ಮ ಕ್ರಿಮಿನಲ್ಲಾಚಾರ್ಯರ ತಪ್ಪಲ್ಲ; ನೋಡುವ ಭಂಡ ಭಕ್ತರಲ್ಲಿರುವ ದೃಷ್ಟಿದೋಷ. ನಮ್ಮ ತೊನೆಯಪ್ಪ ಸ್ವಾಮಿಗಳು ನಾಥ ಪಂಥದವರೇ? ಅಲ್ಲಿ ಅವರಿಗೆ ಜಾಗವಿಲ್ಲ, ನಾಗಾ ಸಾಧುವೇ? ಬಟ್ಟೆಯಿದೆ ಹೀಗಾಗಿ ಅದಲ್ಲ, ಅಘೋರಿಯೇ? ಸಂಭೋಗಿಸುತ್ತಾರೆ ಎಂಬುದನ್ನು ಬಿಟ್ಟರೆ ಬಹಿರಂಗವಾಗಿ ಗಿಂಡಿಗಳ ಜೊತೆ ಗುದ ಸಂಭೋಗ ಅಥವಾ ’ಸೋಮರಸ’ ಸೇವನೆ ನಡೆಸುವುದಿಲ್ಲ. ಹೀಗಾಗಿ ಅಘೋರಿಯಾಗಿರಲಿಕ್ಕಿಲ್ಲ.

ಶಾಂಕರ ತತ್ವದವರೇ? ಶಿಷ್ಟ ಪರಂಪರೆಯ ಪೀಠದ ಯತಿಧರ್ಮ ಶಾಸನವನ್ನು ಸಕಲ ರೀತಿಯಿಂದಲೂ ಉಲ್ಲಂಘಿಸಿದ್ದರಿಂದ ಶಂಕರ ಪರಂಪರೆಯವರೂ ಅಲ್ಲ; ಹಾಗಾದರೆ ಈ ಮಹಾಮುನಿ’ಗಳು ಯಾವ ಪಂಥದವರಪ್ಪ? ಇಂತಹ ’ಮಹಾಮುನಿ’ಯನ್ನು ಗುರುವೆಂದು ಸ್ವೀಕರಿಸಿದ್ದೂ ಅಲ್ಲದೆ ಅವನ ಹಲವು ಪ್ರಮಾದಗಳು ಹಾಡುಹಗಲೇ ಕಾಣುತ್ತಿದ್ದರೂ ಇನ್ನೂ ಸಹ ಗುರುವೆಂದು ಒಪ್ಪಿಕೊಳ್ಳೋದು ಪ್ರಾಯಶಃ ಈ ಸಮಾಜದ ಹಣೆಬರಹವೇ ಇರಬೇಕು; ಹೀಗಾಗಿ ಇದು ಶೋಭರಾಚಾಚಾರ್ಯರ ತಪ್ಪಲ್ಲ.

ಅಶಕ್ತಸ್ತು ಭವೇತ್ಸಾಧುರ್ಬ್ರಹ್ಮಚಾರೀ ವಾ ನಿರ್ಧನಃ |
ವ್ಯಾಧಿತೋ ದೇವಭಕ್ತಶ್ಚ ವೃದ್ಧಾ ನಾರೀ ಪತಿವ್ರತಾ || 17-06

ಅಶಕ್ತನಾದವ ಸಾಧುಸ್ವಭಾವವುಳ್ಳವನಾಗುವುದು, ಹಣವಿಲ್ಲದವ ಬ್ರಹ್ಮಚಾರಿಯಾಗುವುದು, ವ್ಯಾಧಿಗ್ರಸ್ತನು ದೈವಭಕ್ತನಾಗುವುದು ಮತ್ತು ವೃದ್ಧನಾರಿಯು ಪತಿವ್ರತೆಯಾಗುವುದು ಲೋಕರೂಢಿ. ಅದರರ್ಥ ಬ್ರಹ್ಮಚಾರಿಗಳಾದವರೆಲ್ಲ ಹಣವಿಲ್ಲದವರೆಂದಲ್ಲ, ದೈವ ಭಕ್ತರೆಲ್ಲ ಖಾಯಿಲೆಯವರೆಂದಲ್ಲ, ಪತಿವ್ರತೆಯರೆಲ್ಲ ವೃದ್ಧರೇ ಆಗಿರಬೇಕೆಂದಿಲ್ಲ; ಆದರೆ ಹಲವು ಸಲ ಚಾಣಕ್ಯರು ಹೇಳಿದ್ದು ನಿಜವಾಗಿ ಕಾಣುವುದುಂಟು.

ದಶಕದ ಹಿಂದಿನಿಂದ ನಮ್ಮ ’ಸ್ವಾಮಿಗಳ’ ಜೊತೆ ಏಕಾಂತ ನಡೆಸುತ್ತ ಬಂದ ಬೇರ್ಪಡುವ ಮಂಡಲಾಧ್ಯಕ್ಷರು, ಹಾಸ್ಟೆಲ್ ವಿಶಾರದರು ತೊನೆಯಪ್ಪನವರಿಗೆ ಜಯಜಯ ಗೋವಿಂದನೆನ್ನುತ್ತ ಈಗ ಪಿಂಪ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕಣ್ಣಿಗೆ ಕಾಣಿಸದ ಹಲವು ಏಕಾಂತ ಮಹಿಳೆಯರು ವಯೋಮಾನದಿಂದ ಈಗೀಗ ವೃದ್ಧಾಪ್ಯ ಸಮೀಪಿಸುತ್ತಿರುವುದರಿಂದ ಪತಿಯೇ ದೇವರೆನ್ನುತ್ತಾರೆ; ಹಳೆಯದೆಲ್ಲ ಈಗವರಿಗೆ ನೆನಪು ಮಾತ್ರ.

ತೊನೆಯಪ್ಪನವರ ಪ್ರಕರಣಗಳು ಹೊರಬೀಳುತ್ತಿದ್ದಂತೆ ತಮಗೂ ’ಸ್ವಾಮಿ’ಗೂ ಸಂಪರ್ಕವೇ ಇಲ್ಲವೇನೋ ಎಂಬಂತಿದ್ದು, “ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿ ಚರಾಮಿ” ಎಂಬುದನ್ನು ಘೋಷವಾಕ್ಯದಂತೆ ಪಠಿಸುತ್ತಿರುವ ’ಪತಿವ್ರ್‍ಅತೆ’ಯರೂ ಇದ್ದಾರೆ; ಅದರಂತೆ ಕೆಲವು ಪ್ರಕರಣಗಳಲ್ಲಿ ಏಕಾಂತಾರಂಭದಲ್ಲಿ ಹೋರಿಗೆ ಒದ್ದು ಹೋದ ಮಿಥಿಲಾ ನಗರಿಯ ಸೀತೆಯರೂ ಇದ್ದಾರೆ. ತೊಡೆಯಮೇಲೆಳೆದು ಚುಂಬಿಸಿದ ನಂತರ ಸೈಲೆಂಟಾಗಿ ಮಠಬಿಟ್ಟು ಬೇಗ ಮದುವೆಯಾಗಿ ದೂರ ತೆರಳಿದ ಸೌಮ್ಯ ಸ್ವಭಾವದವರೂ ಇದ್ದಾರೆ.

ದಾನೇನ ಪಾಣಿರ್ನ ತು ಕಂಕಣೇನ
ಸ್ನಾನೇನ ಶುದ್ಧಿರ್ನ ತು ಚಂದನೇನ |
ಮಾನೇನ ತೃಪ್ತಿರ್ನ ತು ಭೋಜನೇನ
ಜ್ಞಾನೇನ ಮುಕ್ತಿರ್ನ ತು ಮುಂಡನೇನ || 17-12

ದಾನ ಮಾಡ್ತೇನೆಂತ ಕಂಕಣ ಕಟ್ಟಿಕೊಳ್ಳೋದರಿಂದ ದಾನಿಯಾಗೋದಿಲ್ಲ, ಸ್ನಾನಮಾಡದೇ ಚಂದನ-ಸುಗಂಧಗಳನ್ನು ಪೂಸಿಕೊಂಡರೆ ಸ್ವಚ್ಛತೆಯಾಗೋದಿಲ್ಲ, ಮಾನ ಉಳಿಸಿಕೊಳ್ಳೋದರಿಂದ ನಿಜವಾದ ತೃಪ್ತಿಯೇ ಹೊರತು ಊಟಮಾಡೋದರಿಂದಲ್ಲ, ಜ್ಞಾನಾರ್ಜನೆಯಿಂದ ಮುಕ್ತಿಯೇ ಹೊರತು ಮುಂಡನ ಮಾಡಿಸಿ[ಇಸ್ತ್ರಿ ಮಾಡಿದ ಕಾವಿಯ ಮಧ್ಯ ಭಾಗ ತಲೆಯ ಮಧ್ಯಭಾಗಕ್ಕೆ ಸರಿಹೊಂದುವಂತೆ ನೋಡಿಕೊಳ್ಳುತ್ತ ಹೊದ್ದು]ಕೊಳ್ಳೋದರಿಂದ ಮುಕ್ತಿ ಸಿಗೋದಿಲ್ಲ. ದೇಶಾದ್ಯಂತ ಗೋವಧೆಯನ್ನು ಪ್ರತ್ಯಕ್ಷವಾಗಿ ನಿಲ್ಲಿಸುವುದು ಗೋರಕ್ಷಣೆಯೇ ಹೊರತು ದನಗಳನ್ನು ರಕ್ಷಿಸುವ ಸಂಕಲ್ಪ ಮತ್ತು ಸಭೆಗಳಿಂದ ಯಾತ್ರೆಗಳಿಂದಲ್ಲ-ಅದು ಅಬ್ಬರದ ಪ್ರಚಾರ ಮತ್ತು ಆದಾಯದ ಮೂಲ ಮಾತ್ರ.

ಹೇಳುತ್ತ ಹೋದರೆ ಚಾಣಕ್ಯರ ಇಡೀ ನೀತಿ ಶಾಸ್ತ್ರದ ಬಹುಭಾಗ ನಮ್ಮ ಕ್ರಿಮಿನಲ್ಲಾಚಾರ್ಯರನ್ನು ಕಂಡೇ ಬರೆದಂತಿದೆ. ಕ್ರಿಸ್ತ ಪೂರ್ವ 371ರಲ್ಲಿ ಜನಿಸಿದ್ದರೆನ್ನಲಾದ ಚಾಣಕ್ಯರಿಗೆ ಭವಿಷ್ಯತ್ ಕಾಲದ ಜ್ಞಾನ ಮೊದಲೇ ಇತ್ತೇ? ಅವರ ನೀತಿಶಾಸ್ತ್ರ ಸಾರ್ವಕಾಲಿಕ ಎನಿಸಿಕೊಳ್ಳುವುದು ಇದರಿಂದಲ್ಲವೇ?

“ಶಂಕರರಿಗೆ ಹಿಮಾಲಯದಲ್ಲಿ ಬಾಬಾಜಿ ಎಂಬ ಸಂತರ ದರ್ಶನವಾಯ್ತು; ಅದರಿಂದ ಶಂಕರರು ಬಹಳಷ್ಟನ್ನು ತಿಳಿದುಕೊಳ್ಳಲು ಸಾಧ್ಯವಾಯ್ತು” ಎಂಬಂತಹ ಹಲವು ಕಟ್ಟುಕಥೆಗಳಿವೆ. ಶಂಕರರು ಹುಟ್ಟು ಪ್ರತಿಭೆ. ಇವತ್ತಿಗೂ ಸಹ ಸಂಗೀತದಲ್ಲಿ, ನಾಟ್ಯದಲ್ಲಿ ಬಹುದೊಡ್ಡ ವಿದ್ವಾಂಸರನ್ನೂ ಮೀರಿಸುವಂತಹ ಐದಾರು ವರ್ಷದ ಮಕ್ಕಳನ್ನು ನಾವು ಕಾಣುತ್ತೇವೆ; ಅದು ಪಡೆದುಬಂದ ವಿದ್ಯೆ-ಪೂರ್ವಜನ್ಮದ ಸಂಸ್ಕಾರದ ಫಲ. ಹುಟ್ಟಿದಾಕ್ಷಣ ಸೂರ್ಯನೆತ್ತರಕ್ಕೆ ಜಿಗಿದ ಹನುಮ ಸಾಗರೋಲ್ಲಂಘನ ಮಾಡುವ ಸಂದರ್ಭದಲ್ಲಿ ಜೊತೆಗಾರರು ಅವನ ಶಕ್ತಿಯನ್ನು ನೆನಪಿಸಬೇಕಾಯ್ತಲ್ಲವೇ? ತನ್ನಲ್ಲಿದ್ದ ಸುಪ್ತ ವಿದ್ಯೆಯನ್ನು ಜಾಗೃತಿಗೊಳಿಸೋದಕ್ಕೆ ಶಂಕರರಿಗೆ ವೇದಾಧ್ಯಯನ ಕೇವಲ ಶಾಸ್ತ್ರಕ್ಕಷ್ಟೆ ಬೇಕಾಯಿತು.

ಕಾಮಾವತಾರಿ ಜಗದ್ಗುರು ತೊನೆಯಪ್ಪನವರೂ ಸಹ ಚೈಲ್ಡ್ ಪ್ರಾಡಿಜಿಯೇ; ಅವರ ಅಜ್ಜ ಕಚ್ಚೆಹರುಕರಾಗಿದ್ದರು, ಅವರ ಅಪ್ಪ ಕಚ್ಚೆಹರುಕರೆಂಬುದನ್ನು ಎಲ್ಲರೂ ಬಲ್ಲರು, ಅದೇ ವಂಶದಲ್ಲಿ ಹುಟ್ಟಿದ ಕಾಮಾವತಾರಿಗಳೂ ಸಹ ಹುಟ್ಟುವಾಗಲೇ ಕಾಮವಿಕಾರಗಳಲ್ಲಿ ವಿದ್ವತ್ತನ್ನು ಪಡೆದು ಬಂದಿದ್ದಾರೆ; ಬಹಳ ಹಿಂದೆ ಹಸುವಿನ ಕಿವಿಯೂರಿನ ಸಾಗರ ಕಿನಾರೆಯಲ್ಲಿ ಕಳ್ಳಬಾವ ಮತ್ತು ಕುಳ್ಳಬಾವ ವಿದೇಶೀ ಮಹಿಳೆಯರನ್ನು ಕಣ್ತುಂಬ ತುಂಬಿಕೊಳ್ಳುತ್ತ ರಾಸಲೀಲೆಗೆ ಪ್ರಯತ್ನಿಸುತ್ತಿದ್ದುದನ್ನು ಅದೇ ಸಮಯದಲ್ಲಿ ಅಲ್ಲಿ ಸುತ್ತುತ್ತಿದ್ದ ನಮ್ಮ ಗುಪ್ತಚಿತ್ರ ಕಂಡು ತನ್ನ ವರದಿಯಲ್ಲಿ ದಾಖಲಿಸಿದ್ದಾನೆ!

ಬಿಡದಿಯ ’ಮಹಾಮುನಿ’ಗಳನ್ನು ಬಹಳ ವಿಷಯಗಳಲ್ಲಿ ಹೋಲುವ ಕಾಮಾವತಾರಿಗಳು ಕೌಲ ತಂತ್ರಾರಾಧನೆಯನ್ನು ಅನುಸರಿಸುವರೇ? ಗೊತ್ತಿಲ್ಲ; ಕೌಲ ತಾಂತ್ರಿಕ ಮಾರ್ಗವಾದರೆ ಅದು ಶಂಕರ ತತ್ವಕ್ಕೆ ವಿರುದ್ಧವಾಗಿರುತ್ತದೆ. ಅಘೋರಿಯಲ್ಲ, ನಾಥನಲ್ಲ, ನಾಗಾ ಸಾಧುವಲ್ಲ [ಏಕಾಂತದಲ್ಲಿ ನಾಗನನ್ನು ಆಡಿಸುವುದು ಬಿಟ್ಟರೆ ಹೊರಗೆ ನಾಗನನ್ನು ಬಿಟ್ಟುಕೊಂಡು ತಿರುಗೋ ಮನುಷ್ಯನಲ್ಲ], ಆದರೆ ಶಂಕರ ಮಹಾನುಶಾಸನವನ್ನು ಪಾಲಿಸುವ ಯತಿಯೂ ಅಲ್ಲ. ಇಂತಹ ಮುಠ್ಠಾಳನನ್ನು ಪರಂಪರೆಯ ಪೀಠದಲ್ಲಿ ಗುರುವೆಂದು ಆರಾಧಿಸುವ ಮತಿಹೀನರಿಗೆ ದೇವರೇ ಬುದ್ದಿಕೊಡಬೇಕು.

ಮೋಕ್ಷಕ್ಕೆ ಹಲವು ಮಾರ್ಗಗಳಿರಬಹುದು. ಯಾವುದು ಹೆಚ್ಚು ಯಾವುದು ಕಡಿಮೆ ಅನ್ನೋದಕ್ಕಿಂತ, we should select the ripened-pure form. ಸಾಂಸಾರಿಕ ಪ್ರಪಂಚದ ಶಿಷ್ಟಾಚಾರಗಳಿಗೆ ಅಡ್ಡಿಯಾಗದಂತೆ ಶಿಷ್ಟಮಾರ್ಗದಲ್ಲಿ ಮೋಕ್ಷವನ್ನು ಪಡೆಯುವುದು ಪತಂಜಲಿಯು ಹೇಳಿದ ಯೋಗಸೂತ್ರವನ್ನಾಧರಿಸಿದ ಶಾಂಕರ ಪ್ರೇರಿತ ಸಮಯವೆಂಬ ಉನ್ನತ ಪದ್ಧತಿಯಿಂದ ಮಾತ್ರ ಸಾಧ್ಯ.

ಮೊಸರನ್ನು ಮಥಿಸಿ ನವನೀತವನ್ನು ತೆಗೆದು ಮಗುವಿಗೆ ತಿನ್ನಲು ಕೊಡುವ ಅಮ್ಮನ ಮಮತೆಯೋಪಾದಿಯಲ್ಲಿ, ಶಂಕರರು ಈ ಜಗತ್ತಿಗೆ ವಿಹಿತವಾದ ಅಂಶಗಳನ್ನು ಮಾತ್ರ ಕ್ರೋಡೀಕರಿಸಿ ನೀಡಿರುವುದರಿಂದ ಹಿಂದೂ ಜನ ಅವರ ಋಣಭಾರಿಗಳಾಗಿ, ಆಭಾರಿಗಳಾಗಿ ಅವರನ್ನು ನಿತ್ಯ ವಂದಿಸಬೇಕಾಗಿದೆ. ಆವರ ಹೆಸರನ್ನು ಬಳಸಿಕೊಂಡು, ಅವರ ಹೆಸರಿಗೆ ಮಸಿ ಬಳಿಯುವ ಕಳ್ಳ ಸನ್ಯಾಸಿಗಳನ್ನು ದಂಡಿಸಬೇಕಾಗಿದೆ.

tr1

Thumari Ramachandra

source: https://www.facebook.com/groups/1499395003680065/permalink/1821567774796118/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s