ಮಠದ ಕಾಮಿಯ ಸೆಲ್ ಫೋನ್ ಕರೆಯಿತು ಮತ್ತೇಕಾಂತಕೆ ನಿನ್ನನು!

ಮಠದ ಕಾಮಿಯ ಸೆಲ್ ಫೋನ್ ಕರೆಯಿತು ಮತ್ತೇಕಾಂತಕೆ ನಿನ್ನನು!
[ಹಾಕಿರುವ ಚಿತ್ರಕ್ಕೂ ಈ ತಲೆಬರೆಹಕ್ಕೂ ಸಂಬಂಧವಿಲ್ಲ]

ತುಮರಿಗೆ ಕೆಲವೊಮ್ಮೆ ಸಮಸ್ಯೆ ಎದುರಾಗುತ್ತದೆ: ಧರ್ಮದ ತತ್ವಗಳನ್ನು ಹೇಳುತ್ತ ಹೋಗುವುದೋ ಅಥವಾ ಕಾಮಿಯ ದಶಾವತಾರಗಳನ್ನು ತೆರೆದಿಡುತ್ತ ಹೋಗುವುದೋ ಎಂಬುದೇ ಆ ಸಮಸ್ಯೆ. ತಿಕ್ಕಾಟದಲ್ಲಿ ಬರೆಯುವುದೂ ಬೇಡ ಅನಿಸಿಬಿಡುತ್ತದೆ. ಹಾಗಾಗಿ ಹಲವು ಲೇಖನಗಳಲ್ಲಿ ಧರ್ಮಸೂಕ್ಷ್ಮಗಳನ್ನು ವಿಶದೀಕರಿಸುತ್ತ ಕಾಮಿಯ ಕೃತ್ಯಗಳನ್ನು ಬಹಿರಂಗಗೊಳಿಸುವ ಪ್ರಯತ್ನ ನಡೆಸಿದ್ದೇನೆ.

ಊರೊಂದರ ಮಠದಲ್ಲಿ ಇಬ್ಬರು ವೈಷ್ಣವ ಸ್ವಾಮಿಗಳ ಭೇಟಿಯಾಯಿತು. ಪರಸ್ಪರ ಹಾರತುರಾಯಿ ಗೌರವಗಳು ನಡೆದಮೇಲೆ ಒಬ್ಬರು ಹೇಳಿದರು:”ಹತ್ತು ವರ್ಷಗಳ ಹಿಂದೆ ಇಲ್ಲಿ ವೈಷ್ಣವರ ಮನೆಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಈಗ ಸಾವಿರಾರು ವೈಷ್ಣವ ಮನೆಗಳಿವೆ ಎಂದು ಕೇಳಿ ಸಂತೋಷವಾಯಿತು.”

ಅಲ್ಲಿ ಸೇರಿದ್ದ ಅನುಯಾಯಿಗಳು ಕರತಾಡನ ನಡೆಸಿದರು. ಕೆಲವರು ಅದನ್ನು ಚಿತ್ರೀಕರಿಸಿದರು. ವಿಷಯವನ್ನು ವೈಷ್ಣವರಿಗೆಲ್ಲ ಹೇಳಿಕೊಂಡು ಸಂಭ್ರಮಿಸಿದರು.

ವೈಷ್ಣವರ ಪ್ರಥಮ ನ್ಯೂನತೆ ಎಂದರೆ ಸಂಕುಚಿತ ಮನೋಭಾವ ಮತ್ತು ದೇವರಲ್ಲಿ ಸ್ತರಗಳ ನಿರ್ಮಾಣ. ಅದನ್ನವರು ತಾರತಮ್ಯ ಅಂತಾರೆ. ಜಗತ್ತನ್ನಾಳುವವ ವಿಷ್ಣು ಮತ್ತು ಉಳಿದ ದೇವರುಗಳೆಲ್ಲ ಅವನ ಸೇವಕರು ಎಂಬರ್ಥದಲ್ಲಿ ಅವರ ಭಾವನೆ. ದಾಸಸಾಹಿತ್ಯದಲ್ಲೂ ಆ ಘಾಟು ಅಲ್ಲಲ್ಲಿ ಕಾಣುತ್ತದೆ-

ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ ಶಂಭೋ

ಎಂಬ ಹಾಡನ್ನು ನೀವು ಕೇಳಿದ್ದೀರಿ. ಶಿವನಲ್ಲಿ ವಿಷ್ಣುಭಕ್ತಿಯನ್ನು ಕೊಡು ಎಂದು ಬೇಡುತ್ತಾರೆ. ಹರಿ ಬೇರೆ, ಹರ ಬೇರೆ, ಸಿರಿ ಬೇರೆ, ಶಿವೆ ಬೇರೆ, ಇಂದ್ರಚಂದ್ರಾದಿ ದೇವಾನುದೇವತೆಗಳ ವಸಾಹತುಗಳೆಲ್ಲ ಬೇರೆ ಬೇರೆ. ದೇವತೆಗಳಿಗೆಲ್ಲ ನಾಯಕನಾಗಿ ಸರ್ವೋತ್ತಮ ಎನಿಸಿದವನು ವಿಷ್ಣು ಎಂಬುದು ಅವರ ಹೇಳಿಕೆ. ಬ್ರಹ್ಮಾಂಡವನ್ನು ಸೃಷ್ಟಿಸಿದ ಶಕ್ತಿ ಸ್ತ್ರೀಯೋ ಪುರುಷನೋ ಎಂಬುದೇ ತೀರ್ಮಾನವಾಗಿರದ ಹೊತ್ತಿನಲ್ಲೇ ಹರಿ ಎಂದು ಅವರು ತೀರ್ಮಾನಿಸಿಬಿಟ್ಟಿದ್ದಾರೆ!

ನಾವು ಹರಿಯ ವಿರೋಧಿಗಳಲ್ಲ; ಹರನೇ ಶ್ರೇಷ್ಥ ಎಂಬವರೂ ಅಲ್ಲ. ಹರಿಹರರಲ್ಲಿ ಭೇದವನ್ನು ಕಾಣಬಾರದು ಎಂದ ಆದಿಶಂಕರ ಪರಂಪರೆಯವರು. ಇಲ್ಲೊಂದು ವಿಶೇಷವನ್ನು ನೀವೆಲ್ಲ ಗಮನಿಸಬೇಕು. ವೇದವನ್ನೇ ಆಧಾರವನ್ನಾಗಿ ಇಟ್ಟುಕೊಂಡು ಪ್ರಸ್ಥಾನತ್ರಯಗಳ ಪರಿಧಿಯಲ್ಲಿ ಧರ್ಮಮಾರ್ಗವನ್ನು ಬೋಧಿಸಿದ ಶಂಕರರು ಮೂರ್ತಿ ಪೂಜೆಯೇ ಸರ್ವಶ್ರೇಷ್ಠ ಎಂದು ಪ್ರತಿಪಾದಿಸಲಿಲ್ಲ.

ಯಾರ್ಯಾರು ಯಾವ ಯಾವ ಪಂಥವೆಂದು ಹೇಳಿಕೊಂಡಿದ್ದರೋ ಅದರಲ್ಲೇ ಅವರವರಿಗೆ ಇಷ್ಟವಾಗುವ ವಿಗ್ರಹಗಳನ್ನೇ ಆರಾಧಿಸಲು ಹೇಳಿದರು; ಹಾಗಾಗಿಯೇ ಪಂಚಾಯತನ ಪೂಜಾಪದ್ಧತಿಯನ್ನು ಜಾರಿಗೊಳಿಸಿದರು. ವಿಗ್ರಹಾರಾಧನೆ ಎಂಬುದು ಒಂದು ಹಂತ. ದೇವರು ಕೇವಲ ವಿಗ್ರಹಗಳ ಆಕಾರಗಳಲ್ಲಿ ಬಂಧಿತನಾಗಿಲ್ಲ; ಅವನು ಸರ್ವವ್ಯಾಪಿ ಎಂಬುದು ಅವರ ಹೇಳಿಕೆ.

ಕೆಲವರು ಹೇಳ್ತಾರೆ: ಮನುಷ್ಯರು ಯಾವುದನ್ನು ಕೊಟ್ಟರೂ ತೃಪ್ತರಾಗೋದಿಲ್ಲ; ಆದರೆ, ಊಟ ಕೊಡೋದರಿಂದ ಮಾತ್ರ ತೃಪ್ತರಾಗ್ತಾರೆ. ಹೊಟ್ಟೆ ಒಮ್ಮೆ ತುಂಬಿದ ಬಳಿಕ ಹೆಚ್ಚುವರಿಯಾಗಿ ಒಂದು ಅಗುಳನ್ನೂ ತಿನ್ನಲಾರರು ಹಾಗಾಗಿ ಅವರು ತೃಪ್ತರು ಅಂತ. ಒಂದೆರಡು ತಾಸು ಬಿಡಿ, ಹೊಟ್ಟೆ ತುಂಬಿದವನಿಗೆ ಹಸಿವಾಗ್ತದೆ, ಮತ್ತೆ ಊಟ ಹಾಕಿದರೆ ಬೇಕೆನಿಸುತ್ತದೆ.

ಈ ಲೋಕದಲ್ಲಿ ಕಣ್ಣಿಗೆ ಕಾಣುವ ಕೈಗೆ ಸಿಗುವ ಯಾವುದೇ ವಸ್ತುಗಳಿಂದಲೂ ಮನುಷ್ಯರನ್ನು ತೃಪ್ತಿಗೊಳಿಸಲು ಸಾಧ್ಯವಿಲ್ಲ. ಹಾಗಾದರೆ ತೃಪ್ತಿಗೊಳಿಸುವ ಮಾರ್ಗವೇ ಇಲ್ಲವೇ? ಇದ್ದೇ ಇದೆ. ಸತ್ತ ಮಗನನ್ನು ಬದುಕಿಸಿಕೊಡೆಂದು ಬೇಡಿದ ಮಹಿಳೆಗೆ ಬುದ್ಧ ಹೇಳಿದ, “ಅಮ್ಮಾ, ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತಾ, ನಿನ್ನ ಮಗನನ್ನು ಬದುಕಿಸುತ್ತೇನೆ.”

ಬುದ್ಧ ಪ್ರತ್ಯಕ್ಷವಾಗಿ ಕಾಣುವುದನ್ನು ಮಾತ್ರ ಒಪ್ಪುತ್ತಿದ್ದ. ಎಲ್ಲವೂ ಇಲ್ಲೇ ಈ ಭೂಮಿಯಲ್ಲೇ ಆಗಬೇಕು ಎಂಬುದು ಅವನ ಅಭಿಪ್ರಾಯವಾಗಿತ್ತು. ಅದಕ್ಕಾಗಿ ಭೂಮಿಯೆಡೆಗೆ ಕೈ ತೋರಿಸುತಿದ್ದ; ಭೂಮಿಯೆಡೆಗೆ ಕೈ ತೋರಿಸುವ ಬುದ್ಧನನ್ನು ಅವಲೋಕಿತೇಶ್ವರ ಅಂತಾರೆ. ಸಾವಿಲ್ಲದ ಮನೆಯಿಲ್ಲ ಎಂಬ ಜ್ಞಾನ ಮಹಿಳೆಯ ಅನುಭವಕ್ಕೆ ನಿಲುಕಿದಾಗ ಸತ್ತ ಮಗನನ್ನು ಬದುಕಿಸೆಂದು ಕೇಳೋದನ್ನು ಬಿಟ್ಟಳು.

ಕೊಟ್ಟಷ್ಟೂ ಖಾಲಿಯಾಗದ ದಾನ ಮತ್ತು ಪಡೆದಷ್ಟೂ ಕರಗಿ ಹೋಗದ ದಾನ ಎಂದರೆ ಜ್ಞಾನದಾನ ಮಾತ್ರ; ಕೊಟ್ಟವನಿಗೆ ಅವನಲ್ಲಿನ ಜ್ಞಾನಕ್ಕೆ ಹೊಳಪು ಸಿಗುತ್ತದೆ; ಪಡೆದವನಲ್ಲಿ ಜ್ಞಾನದ ಮಟ್ಟ ಹೆಚ್ಚುತ್ತದೆ. ಜ್ಞಾನಾರ್ಜನೆಯಿಂದ ತೃಪ್ತವಾದ ಮನಸ್ಸು ಮೃಷ್ಟಾನ್ನ ಭೋಜನದಿಂದ ತೃಪ್ತವಾದದ್ದಕ್ಕಿಂತ ಹೆಚ್ಚಿಗೆ ತೃಪ್ತವಾಗುತ್ತದೆ.

ಜ್ಞಾನದಿಂದ ತುಂಬುತ್ತ ಹೋದ ಮನದ ಹೊಟ್ಟೆ ಮತ್ತೆ ಹಸಿಯುವುದಿಲ್ಲ. ಇರುವುದಕ್ಕಿಂತ ಹೆಚ್ಚಿನ ಜ್ಞಾನವನ್ನು ಬಯಸಬಹುದು, ಅದು ಹಸಿದ ಹೊಟ್ಟೆಯನ್ನು ಅನ್ನದಿಂದ ತುಂಬಿಸಿದಷ್ಟು ಮೆಕ್ಯಾನಿಕಲ್ ಮಟ್ಟವಲ್ಲ. ಆ ಜ್ಞಾನ ಹೊಸ ಸಂಸ್ಕಾರವನ್ನು ಕೊಡುತ್ತದೆ. ಜ್ಞಾನದಿಂದ ಪರಿಪೂರ್ಣನಾದಾಗ ವ್ಯಕ್ತಿ ಈ ಲೋಕದ ಸಕಲ ವ್ಯಾಮೋಹಗಳ ಸಂಕೋಲೆಯಿಂದ ಮುಕ್ತನಾಗುತ್ತಾನೆ; ಅದುವೇ ಮೋಹ ಕ್ಷಯ ಅಥವಾ ಮೋಕ್ಷ.

ಜ್ಞಾನಿಗಳಿಗೆ ಅವರ ಮಾರ್ಗದಲ್ಲಿ ಒಂದಾನೊಂದು ದಿನ ದೇವರೆಲ್ಲ ಒಂದೇ ಎಂಬ ಭಾವನೆ ಬಂದೇ ಬರುತ್ತದೆ. ಹರಿಯೇ ಸರ್ವೋತ್ತಮ, ಹರ ಅವನ ಕೆಳಗಿನ ಕೆಲಸದವ, ಇನ್ಯಾರೋ ಮತ್ತೂ ಕೆಳಗಿನವರು ಎಂಬ ತರತಮ ಭಾವ ಮಾಯವಾಗುತ್ತದೆ. ಚಿಂತಕರಾಗಿದ್ದ ಪು.ತಿ. ನರಸಿಂಹಾಚಾರ್ಯರು ಶ್ರೀವೈಷ್ಣವ ಸಂಪ್ರದಾಯಸ್ಥರಾಗಿದ್ದರೂ ಅವರ ಜ್ಞಾನದೃಷ್ಟಿ ಅವರನ್ನು ಕೇವಲ ಸಂಪ್ರದಾಯ ಶರಣತೆಗೆ ಕಟ್ಟಿಹಾಕಲಿಲ್ಲ. ಅವರು ಹೇಳ್ತಾರೆ-

ಹರಿಯ ಹೃದಯದಿ ಹರನ ಕಂಡೆನು ಹರನ ಹೃದಯದಿ ಹರಿಯನು
ಸಿರಿಯ ಹೃದಯದಿ ಶಿವೆಯ ಕಂಡೆನು ಶಿವೆಯ ಹೃದಯದಿ ಸಿರಿಯನು

ಮೇಲೆ ಹೇಳಿದ ಮಠದ ಸ್ವಾಮಿಗಳಿಗೂ ಮತ್ತು ಪುತಿನ ಅವರಿಗೂ ಜ್ಞಾನದಲ್ಲಿರುವ ವ್ಯತ್ಯಾಸವನ್ನು ನೋಡಿ. ಹರಿಯಿದ್ದಲ್ಲಿ ಹರನೂ ಇದ್ದಾನೆ; ಸಿರಿಯಿದ್ದಲ್ಲಿ ಶಿವೆಯೂ ಇದ್ದಾಳೆ. ದೇವರು ಹರಸುವಾಗ “ಓ ಹೋ ನೀನು ವೈಷ್ಣವನೋ ಹಾಗಾದರೆ ಬಾ ನೀನು ನಮ್ಮವ, ನೀನು ಶೈವನೋ ಹಾಗಾದರೆ ಹೋಗು ನಿನ್ನ ಶಿವ ಬರುವವರೆಗೆ ಕಾಯುತ್ತ ಬಿದ್ದಿರು” ಎಂದು ಹೇಳೋದಿಲ್ಲ; ಯಾಕೆಂದರೆ “ಏಕೋ ದೇವಃ ಕೇಶವೋವಾಂ ಶಿವೋವಾಂ”

ಈಗೀಗ ದೇಶದಲ್ಲಿ ಗಂಜಿಕೇಂದ್ರದವರು ಸನಾತನತೆಗೆ ವಿರೋಧವಾದ ಹೇಳಿಕೆಗಳನ್ನು ಕೊಡುತ್ತ ಶ್ರೀರಾಮನನ್ನೂ ಶ್ರೀಕೃಷ್ಣನನ್ನೂ ಪ್ರಶ್ನಿಸುವ ಹೆಚ್ಚುಗಾರಿಕೆ ತಮ್ಮದೆಂದು ಬಡಾಯಿ ಕೊಚ್ಹುತ್ತಾರೆ. ಶ್ರೀರಾಮನಲ್ಲವೇ ಯಾರದೋ ಮಾತು ಕೇಳಿ ಅವ ಹೆಂಡತಿಯನ್ನು ಕಾಡಿಗಟ್ಟಿದ ಅನ್ಯಾಯಿ, ಶ್ರೀಕೃಷ್ಣನಲ್ಲವೇ ತುಂಡುಭೂಮಿಗಾಗಿ ದಾಯಾದಿ ಕಲಹವನ್ನೇ ಬೆಳೆಸಿ ಮಹಾಭಾರತ ಯುದ್ಧ ನಡೆಸಿದವ ಎಂದು ಜರಿಯುತ್ತಾರೆ. ಆದರೆ, ಅವೆರಡು ಮಾನವ ರೂಪಿ ವ್ಯಕ್ತಿಗಳ ಮನವಾತೀತ ಶಕ್ತಿಯ ಅರಿವು ಇವರಿಗೆಲ್ಲ ಎಲ್ಲಿ ಬರಬೇಕು?

ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ |
ಚರಿಸುತಿರೆ ನರನದರ ಗುರುತನರಿಯದೆಯೆ |
ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ |
ತೊರೆಯುವನು ದೊರೆತುದನು – ಮಂಕುತಿಮ್ಮ ||

ಕೃಷ್ಣ ನರಕಾಸುರನನ್ನು ಕೊಂದಿದ್ದು 16,000 ರಾಜಪುತ್ರಿಯರನ್ನು ಮದುವೆಯಾಗಲಿಕ್ಕೆ ಎಂಬ ವಿತಂಡ ವಾದದವರಿದ್ದಾರೆ. ಸೆರೆಗೆ ಹಾಕುವ ಮುನ್ನ ನರಕಾಸುರ ಅವರಲ್ಲಿ ಒಬ್ಬೊಬ್ಬರನ್ನೂ ಭೋಗಿಸಿಬಿಟ್ಟಿದ್ದರಿಂದ ಅಥವಾ ಅವರೆಲ್ಲರೊಟ್ಟಿಗೆ ಪ್ರತ್ಯೇಕವಾಗಿ ’ಏಕಾಂತ’ ನಡೆಸಿಬಿಟ್ಟಿದ್ದರಿಂದ ಸೆರೆಯಿಂದ ಹೊರಬಂದ ಅವರಿಗೆ ತವರಲ್ಲಿ ಅವಕಾಶವಿರಲಿಲ್ಲ, ಮದುವೆಯ ಸಾಧ್ಯತೆಯೂ ಇರಲಿಲ್ಲ; ಅನಾಥರಾಗಿ ಮೈಮಾರಿ ಬದುಕಬೇಕಾದ ಹೊತ್ತಿನಲ್ಲಿ ಕೃಷ್ಣ ಅವರೆಲ್ಲರಿಗೂ ತನ್ನ ಮಡದಿಯರೆಂಬ ಸ್ಥಾನ ಕೊಟ್ಟ! ಅವರು ಬದುಕಿ ಬಾಳಿದರು.

ಕೃಷ್ಣನ ಮಡದಿಯರ ಸಂಖ್ಯೆಯ ಬಗ್ಗೆ ಮಾತನಾಡೋ ಜನ ಕಿರುಬೆರಳಲ್ಲಿ ಗಿರಿಯನ್ನೆತ್ತಿದ್ದ ವಿಷಯ ಪ್ರಸ್ತಾಪ ಮಾಡಿದರೆ ಸೈಲೆಂಟಾಗಿ ಜಾಗ ಖಾಲಿಮಾಡ್ತಾರೆ! ರಾಮನಿನಾಗಾಲೀ ಕೃಷ್ಣನಿಗಾಗಲೀ ಮುಂದೆ ನಡೆಯಲಿರುವ ಘಟನೆಗಳು ಗೊತ್ತಿರಲಿಲ್ಲ ಎಂಬುದು ಶುದ್ಧ ತಪ್ಪು. ಆದರೆ ಬಹಿರ್ಮುಖದಲ್ಲಿ ಇಬ್ಬರೂ ಮನುಷ್ಯ ಮಿತಿಯಲ್ಲಿ ಹಾಗೆ ತೋರ್ಪಡಿಸಿದ್ದಾರೆ. ತಾವಿರುವ ಸ್ಥಾನಕ್ಕೆ ಇದ್ದ ಹಕ್ಕುಬಾಧ್ಯತೆಗಳಿಗೆ ಬದ್ಧರಾಗಿ ನಡೆದುಕೊಂಡಿದ್ದಾರೆ.

ಸಮಸ್ಯೆ ಗಂಜಿ ಪಡಿಯವರದ್ದಲ್ಲ; ಅವರಿಗೆ ಹಾಗೆ ಭಾವನೆ ಬರೋ ಹಾಗೆ ವರ್ತಿಸುವ ಕಾವಿವೇಷದ ನಾಟಕದವರದ್ದು. ಒಬ್ಬ ತಾನೇ ಶ್ರೀರಾಮ ಅಂತಾನೆ; ರಾಮನ ಹೆಸರಿನಲ್ಲಿ ಎಲ್ಲವನ್ನೊ ತನಗರ್ಪಿಸು ಅಂತಾನೆ. ಏಕಪತ್ನಿ ವೃತಸ್ಥನೆನಿಸಿದ್ದ ರಾಮನೆಲ್ಲಿ ಬಹುಮಂದಿ ಪರಸ್ತ್ರೀಯರನ್ನು ಭೋಗಿಸಿದ ಕಾಮಿಯೆಲ್ಲಿ? ಹೋಲಿಕೆಗಾದರೂ ಒಂದು ಮರ್ಯಾದೆ ಬೇಡವೇ?

ಇಲ್ಲಿ ನಮ್ಮ ಮಹಿಳೆಯರದ್ದೂ ಕೆಲ ಮಟ್ಟಿಗೆ ತಪ್ಪಿದೆ. ಗಂಡನಲ್ಲಿ ಸಿಗದ್ದು ಗುರುವಿನ ರೂಪದಲ್ಲಿ ಸುಂದರವಾಗಿ ಸಿಕ್ಕಿದೆಯಲ್ಲ ಯಾರಿಗೂ ಅನುಮಾನ ಕೂಡ ಬರೋದಿಲ್ಲ ಎಂದುಕೊಂಡು ಮತ್ತೆ ಮತ್ತೆ ಕಾಮಿ ಸೆಲ್ ಫೋನ್ ಮೊಲಕ ಕರೆಮಾಡಿದಾಗಲೆಲ್ಲ ಏಕಾಂತಕ್ಕೆ ಬಂದಿದ್ದಾರೆ; ಬರುತ್ತಿದ್ದಾರೆ. ಗಂಡಂದಿರೂ ತಪ್ಪು ಮಾಡಿದ್ದಾರೆ-ಹೆಂಡತಿಯಾಗಲೀ ಅಥವಾ ತಮ್ಮ ಹೆಣ್ಣುಮಕ್ಕಳಾಗಲೀ ಮಠದಲ್ಲಿ ಏನು ಮಾಡುತ್ತಿರಬಹುದೆಂಬ ಕಿಂಚಿತ್ ಪ್ರಜ್ಞೆಯೂ ಇಲ್ಲದೆ ಅವರನ್ನು ಮಠದಲ್ಲಿ ಮತ್ತು ಗುರುವೆಂಬ ಕಾಮಿಯ ಸನಿಹ-ಸಖ್ಯದಲ್ಲಿ ಬಿಟ್ಟದ್ದು ಅವರ ತಪ್ಪು.

ಸನ್ಯಾಸಿ ಹೆಂಗಸರ ಸನಿಹದಲ್ಲಿ ನಿಲ್ಲಬಾರದು ಎನ್ನೋದು ಮನಸ್ಸು ಚಂಚಲವಾಗಬಾರದು ಎಂಬ ಕಾರಣಕ್ಕೆ. ಮನಸ್ಸನ್ನು ಗೆದ್ದು ಜಿತೇಂದ್ರಿಯರಾದ ಬಳಿಕ ದಿಗಂಬರರಾಗಿ ಹೆಂಗಸರ ನಡುವೆಯೇ ಇರಬಹುದು; ಜೈನ ಮುನಿಗಳು ಇರುವುದಿಲ್ಲವೇ? ಹಾಗೆ. ಆದರೆ ನಮ್ಮ ತೊನೆಯಪ್ಪ ’ಮಹಾಸ್ವಾಮಿಗಳು’ ಹುಟ್ಟುವಾಗಲೇ ಜಿತೇಂದ್ರಿಯರಾಗಿದ್ದರಿಂದ ಹೆಂಗಸರ ನಡುವೆ ಕಾವಿಯಲ್ಲೇ ಹಾವಾಡಿಸಿಕೊಂಡಿದ್ದರು; ಏಕಾಂತಕ್ಕೆ ಕರೆದು ಹಾವನ್ನು ಹೊರಗೆ ಬಿಟ್ಟು ಆಡಿಸಿ ತೋರಿಸಿದರು.

ಹಲವಾರು ಆಸೆ-ಆಮಿಷಗಳನ್ನು ಒಡ್ಡುತ್ತ, ಸಾಕಷ್ಟು ಬೆದರಿಕೆಗಳನ್ನೂ ಹಾಕುತ್ತ, ಮಂಪರುಬರುವ ಪ್ರಸಾದ ತಿನ್ನಿಸುತ್ತ ಹಾವಾಡಿಸುವಿಕೆ ನಡೆಸುತ್ತಲೇ ದಶಕ ಕಳೆದರು! ದಶಕದ ಅವಧಿಯಲ್ಲಿ ಶತಕ, ದ್ವಿಶತಕ, ತ್ರಿಶತಕ, ಚತುಶ್ಶತಕ, ಪಂಚಶತಕ ಬಾರಿಸಿ ಷಷ್ಠಮ ಶತಕದಲ್ಲಿ ಮುನ್ನಡೆಯುತ್ತಿದ್ದಾರೆ!

ಇಲ್ಲಿಯವರೆಗೆ ಒಡೆದ ಮನಗಳೆಷ್ಟು, ಒಡೆದ ಮನೆಗಳೆಷ್ಟು, ಶೀಲಹರಣಗೈದ ಮಹಿಳಾ ಸಂಖ್ಯೆ ಎಷ್ಟು ಎಂಬುದು ಅವರಿಗಷ್ಟೇ ಗೊತ್ತು. ವಿಕೃತ ಕಾಮಿಗಳಲ್ಲಿ ಕೆಲವರು ಪ್ರತಿಯೊಬ್ಬರೊಡನೆ ಭೋಗಿಸಿದ ನಂತರ ಅದನ್ನು ವರ್ಣಿಸಿ ಡೈರಿ ಬರೆದಿಡುತ್ತಾರಂತೆ; ನಮ್ಮ ಶೋಭರಾಜಾಚಾರ್ಯರು ಡೈರಿ ಬರೆದಿಟ್ಟಿದ್ದು ಸುಳ್ಳು. ಹಾಗೆ ಬರೆದಿಟ್ಟರೆ ಸಿಕ್ಕಿ ಬೀಳುವ ಸಾಧ್ಯತೆ ಇರುತ್ತದೆಂಬ ಕ್ರಿಮಿನಲ್ ಥಿಂಕಿಂಗ್ ಮೊದಲೇ ಇದ್ದಿರಬೇಕು.

ಸನ್ಯಾಸಿಗಳ ಬಾಹ್ಯ ರೂಪ ಅದಷ್ಟೂ ಸುಂದರವಾಗಿರಬಾರದು ಎಂಬ ತತ್ವವಿದೆ. ರೂಪದಿಂದ ಅವರು ಯಾರನ್ನೂ ಸೆಳೆಯಬೇಕಾಗಿಲ್ಲ. ಹಾಗಾಗಿಯೇ ಅವರು ತೊಡುವ ಬಟ್ಟೆಗಳನ್ನು ಹೊಲಿದಿರಬಾರದು[ಅದು ಆಕಾರಬದ್ಧವಾಗಿರಬಾರದು], ತ್ಯಾಗದ ಸಂಕೇತವಾಗಿ ಅಗ್ನಿಯ ಹೊರಮೈ ಹೋಲುವ ಕಾವಿ ಬಟ್ಟೆಯನ್ನೇ ಧರಿಸಬೇಕು ಎಂಬ ಕಟ್ಟಳೆಯಿದೆ. ತುಳಸೀಹಾರವನ್ನುಳಿದು ಅನ್ಯ ಕಲರ್ ಫುಲ್ ಹೂವುಗಳ ಹಾರ ವರ್ಜ್ಯ. ಆದರೆ ನಮ್ಮ ಹಾವಾಡಿಗ ಜಗದ್ಗುರುಗಳು ಇದಕ್ಕೆಲ್ಲ ಅತೀತರು. ಕೃಷ್ಣ ಗಿರಿಯನ್ನೆತ್ತಿದ್ದ ಎನ್ನುತ್ತೀರಲ್ಲ ತೊನೆಯಪ್ಪನವರು ಕಮಲವನ್ನೇ ಹತ್ತಿ ಕುಳಿತುಕೊಂಡಿರಲಿಲ್ಲವೇ? ಅಂಥದ್ದೇ ಕತೆಗಳನ್ನು ಸೇರಿಸಿ ’ರಾಂಗಾನುಗ್ರಹ’ ಬರೆಸಲಿಲ್ಲವೇ?

ನಮ್ಮ ಜನ ಸನ್ಯಾಸಿಗಳ ಬಗ್ಗೆ ತಿಳಿದುಕೊಳ್ಳಬೇಕಾದ್ದು ಸಾಕಷ್ಟಿದೆ. ಸ್ವಾಮಿ ರಾಮ ತನ್ನ ಪುಸ್ತಕದಲ್ಲಿ ಬರೀತಾರೆ-

The Wave of Bliss

I once visited Chitrakot, one of the holy places where, according to the epic Ramayana, Lord Rama lived
during his exile. This place is situated on the Vindhya Range, one of the longest mountain ranges in India.
According to ancient tradition Vairagi sadhus visit Vrindavan and Chitrakot—Vrindavan for those who love
Krishna, and Chitrakot for those who love Rama. In another part of the Vindhya Range, in a holy place
called Vindhyachal, there lived many Shakti worshippers. Traveling toward the forests of Rewa State, I
went to the Satana forest and there met a swami who was very handsome and highly educated in the
Vedantic and yoga tradition. He knew the scriptures and was a very brilliant sadhaka [spiritual practitioner].
He was later nominated as Shankaracharya of Jyotirmayapitham, which is in the Himalayas on the way to
Badrinath. His name was Brahmananda Sarasvati.

He used to live only on germinated gram seeds mixed with a little bit of salt. He lived on a hillock in a
small natural cave near a mountain pool. I was led by the villagers to that place, but I did not find anyone
there and became disappointed. The next day I went again, and found a few footprints on the edge of the
pool made by his wooden sandals. I tried, but I could not track the footprints. Finally on the fifth day of
effort, early in the morning before sunrise, I went back to the pool and found him taking a bath. I greeted
him saying, “Namo Narayan,” which is a commonly used salutation among swamis, meaning “I bow to the divinity in you.” He was observing silence, so he motioned for me to follow him to his small cave, and I did so gladly. This was the eighth day of his silence, and after staying the night with him he broke his silence and I gently spoke to him about the purpose of my visit. I wanted to know how he was living and the ways and methods of his spiritual practices.
During our conversation he started talking to me about Sri Vidya, the highest of paths, followed only by accomplished Sanskrit scholars of India. It is a path which joins raja yoga, kundalini yoga, bhakti yoga, and advaita Vedanta. There are two books recommended by the teachers of this path: The Wave of Bliss and The Wave of Beauty; the compilation of the two books is called Saundaryalahari in Sanskrit. There is another part of this literature, called Prayoga Shastra, which is in manuscript form and found only in the Mysore
and Baroda libraries. No scholar can understand these spiritual yoga poems without the help of a competent teacher who himself practices these teachings.
Later on I found that Sri Vidya and Madhu Vidya are spiritual practices known to a very few—only ten to twelve people in all of India. I became interested in knowing this science, and whatever little I have today is because of it. In this science the body is seen as a temple and the inner dweller, Atman, as God. A human being is like a miniature universe, and by understanding this, one can understand the whole of the universe and ultimately realize the absolute One. Finally, after studying many scriptures and learning various paths,
my master helped me in choosing to practice the way of Sri Vidya. In this path the kundalini fire is seen as the Mother Divine, and through yoga practices it is awakened from its primal state and raised to the highest
of the chakras. The chakras are wheels of life which form our spiritual body and connect the entire flow of consciousness.

The science of chakra is very terse, but if one knows this science well it serves him on all levels. The
chakras operate on the physical, physiological, energetic, mental, and spiritual levels. These energy centers
correspond in the physical body to points along the spinal cord. The lowest is located at the coccyx, the
second in the sacral area, the third at the navel, the fourth at the heart, the fifth at the base of the throat, the
sixth at the point between the eyebrows, and the seventh at the crown of the head. The lowest chakras are
the grooves toward which the lower mind rushes. The heart (anahata) chakra separates the upper
hemisphere from the lower hemisphere and is accepted as the center of divine tranquility. Buddhism,
Hinduism, Christianity, and Judaism also recognize this center: that which is called anahata chakra in
Hinduism is called the Star of David in Judaism and the Sacred Heart in Christianity. The higher chakras are
the centers of upward-traveling energy. There are many levels of consciousness from the heart chakra to the
thousand-petaled lotus inside the crown of the head. When one sits erectly for meditation these centers are
aligned. Energy can be focused on one chakra or another. Developing the capacity to direct the flow of
energy to the higher chakras is one aspect of spiritual development. Knowledge of pranic vehicles is
important if one wants to experience all the chakras systematically.
There is a bulk of literature on the chakras in Hinduism and Buddhism, which was later explained and
introduced by theosophical writers for Western readers. Western writers have also written many books on
the subject of chakras, although most of them (with the exception of those written by Sir John Woodroffe)
are misleading, for they consist merely of secondhand information, without anything to guide one’s practice.
Such misleading literature on such a highly perfected science is found all over—even in healthfood stores.
How ridiculous!

Swami Brahmananda was one of the rare siddhas [accomplished ones] who had the knowledge of Sri
Vidya. His authoritative knowledge of the Upanishads, and especially of Shankara’s commentaries, was
superb. He was also a very good speaker. Swami Karpatri, a renowned scholar, was the disciple who
requested him to accept the prestige and dignity of Shankaracharya in the North, a seat which had been
vacant for 300 years. Whenever he traveled from one city to another, people flocked in the thousands to
hear him, and after his nomination as Shankaracharya his followers increased. One thing very attractive
about his way of teaching was his combination of the bhakti and advaita systems. During my brief stay with
him he also talked about Madhusudana’s commentary on the Bhagavad Gita.
Swami Brahmananda had a Sri Yantra made out of rubies, and as he showed it to me, he explained the
way he worshipped it. It is interesting to note how the great sages direct all their spiritual, mental, and
physical resources toward their ultimate goal. Among all the swamis of India I met only a few who radiated
such brilliance and yet lived in the public, remaining unaffected by worldly temptations and distractions. I
stayed with him for only a week and then left for Uttarkashi.

[ನಮ್ಮಲ್ಲಿ ಇಂಗ್ಲೀಷ್ ಬಾರದವರೂ ಇದ್ದಾರೆಂಬುದು ಗೊತ್ತು, ಅನುವಾದ ಬೇಕಾದವರು ತಿಳಿಸಿದರೆ ಅನುವಾದಿಸಿ ನಾಳೆ ಹಾಕುತ್ತೇನೆ]

ಶ್ರೀಚಕ್ರದ ಅಧ್ಯಯನದ ಸುಸಂದರ್ಭದಲ್ಲಿ ತುಮರಿ ಬಳಸಿಕೊಂಡ ಹಲವು ಪುಸ್ತಕಗಳಲ್ಲಿ ಸ್ವಾಮಿ ರಾಮರ ಪುಸ್ತಕಗಳೂ ಇದ್ದಾವೆ. ಶಂಕರ ಪರಂಪರೆಯನ್ನು ಅನುಸರಿಸುವ ಕರವೀರ ಮಠದ ಅಧಿಪತಿಯಾಗಿ ಒಂದೆರಡು ವರ್ಷ ನಡೆಸಿದರೂ ವೈಯಕ್ತಿಕ ಆಧ್ಯಾತ್ಮಿಕ ಉನ್ನತ ಸಾಧನೆಗೆ ಮಠಾಧಿಪತ್ಯದ ಜವಾಬ್ದಾರಿಗಳು ಅಡ್ಡಿಪಡಿಸುತ್ತವೆ ಎಂಬ ಕಾರಣಕ್ಕೆ ಪೀಠತ್ಯಾಗ ಮಾಡಿದವರು ಸ್ವಾಮಿ ರಾಮ. ಹಿಮಾಲಯದಲ್ಲಿ ತನ್ನ ಅನುಯಾಯಿಗಳಲ್ಲಿ ಕೆಲವರ ನಡುವೆ ಕುಳಿತು ಧ್ಯಾನಾಸಕ್ತರಾಗಿ ದೇಹ ವಿಸರ್ಜಿಸಿದವರು ಅವರು.

ಹಿಮಾಲಯಕ್ಕೆ ಹೋಗುತ್ತೇನೆ ಎಂದು ಕಾಗೆ ಹಾರಿಸಿ ಅನುಕಂಪ ಗಿಟ್ಟಿಸಿಕೊಂಡ ಕ್ರಿಮಿನಲ್ ಗಳನ್ನು ಕಂಡಾಗ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಅಂಧಾನುಕರಣೆ, ಅತ್ಯಾಚಾರ, ಅನಾಚಾರ, ನಾನಾಚಾರಗಳ ನೆನಪಾಗುತ್ತದೆ. ಮಲಿನ ಶರೀರವನ್ನು ಶುದ್ಧಗಂಗೆಯಿಂದ ತೊಳೆದುಕೊಳ್ಳುವಂತೆ ಬ್ರಹ್ಮಾನಂದರು, ಸ್ವಾಮಿರಾಮ, ರಾಮಕೃಷ್ಣ ಪರಮಹಂಸ, ಶ್ರೀಧರ ಸ್ವಾಮಿಗಳು, ಕಾಂಚಿ ಪರಮಾಚಾರ್ಯರು, ರಮಣ ಮಹರ್ಷಿಗಳು ಮೊದಲಾದವರ ನೆನಪಿನಿಂದ ಮಲಿನಗೊಂಡ ಮನಸ್ಸನ್ನು ಶುದ್ಧೀಕರಿಸಬೇಕಾಗುತ್ತದೆ.

ಏನೂ ಅರಿಯದ ಹರೆಯದ ಹುಡುಗಿಯರನ್ನು ಯದ್ವಾತದ್ವಾ ಸಂಭೋಗಿಸಿದ, ಮಹಿಳೆಯರನ್ನು ಹೊರಗಿನಿಂದ ಮಾತೆಯರೆಂದು ಹೇಳಿಸಿ ಏಕಾಂತದಲ್ಲಿ ತನ್ನ ರಮಣಿಯರನ್ನಾಗಿಸಿಕೊಂಡ ’ಕಾಳಿಂಗನಾಥ’ನಿಗೆ ಕಾಲವೇ ಎಲ್ಲವನ್ನೂ ಕಲಿಸುತ್ತದೆ.

ಸಮಾಜದ ಮುಕ್ಕಾಲುಪಾಲು ಮಂದಿಗೆ ಈಗ ಕಾಳಿಂಗನಾಥನ ಹಾವಾಡಿಗತನದ ನೈಜತೆ ಗೊತ್ತಾಗಿದೆ. ಪಿಳ್ಳೆನೆಪ ಒಡ್ಡಿ ಚತುರ್ಮೋಸದಲ್ಲಿ ಹಾಜರಿಗಾಗಿ ಮಾತ್ರ ಹಾಜರಿದ್ದು ಬಣ್ಣದ ಅಕ್ಕಿ ಪಡೆದುಹೋದ ಅನೇಕರು ಒಳಗೊಳಗೆ ಹಲ್ಲು ಮನೆಯುತ್ತಿದ್ದಾರೆ.

ಮಗಂದೂರಿನ ಭಟ್ಟ ದುಡ್ಡುಕೊಟ್ಟು ಕೈ ಕೈ ಹೊಸಕಿಕೊಳ್ಳುತ್ತಿದ್ದರೆ ಅವನ ಮಗ ಶಿಳ್ಳೆಕ್ಯಾತ, ತೊನೆಯಪ್ಪನ ಪಕ್ಕದಲ್ಲಿ ನಿಂತು ಇನ್ನೂ ಗಾಳಿಹಾಕುತ್ತಾನಂತೆ; ಈ ವಿಷಯ ಪ್ರಸ್ತಾಪಿಸಿ ತನ್ನ ಅನಿವಾರ್ಯತೆಯನ್ನು ಹೇಳಿಕೊಂಡ ಅವನನ್ನು ಹಳದೀತಾಲೀಬಾನು ಹೊಡೆಯದಿದ್ದರೆ ಸಾಕು.

ಮುಂದೆ ಬರಲಿಕ್ಕಿರುವ ಮಾರಿಹಬ್ಬದಲ್ಲಿ ಬಲಿಯಾಗೋದನ್ನು ತಪ್ಪಿಸಿಕೊಳ್ಳಲಿಕ್ಕಾಗಿ ಹೆಸರಿಲ್ಲದ ಮಠಗಳ ಉಸಿರಿಲ್ಲದ ’ಸ್ವಾಮಿ’ಗಳನ್ನೆಲ್ಲ ಕರೆಸಿ ಒಡ್ಡೋಲಗ ನಡೆಸುತ್ತಿದ್ದುದಾಗಿದೆ. ಇಮ್ಮಡಿಯನ್ನು ಬೆಂಬಲಕ್ಕಿಟ್ಟುಕೊಂಡು ಒಮ್ಮೊಮ್ಮೆ ತಾನೂ ಅಲ್ಲಲ್ಲಿ ಹೋಗಿಬಂದಿದ್ದಾಗಿದೆ.

ಇಮ್ಮಡಿ ವಿಶ್ವೇಶ್ವರಯ್ಯನವರಿಗೆ ದಮ್ಮಡಿ ದುಡ್ಡು ಸಿಗದ ಕಷ್ಟ ಎದುರಾಗುವ ಕಾಲ ಬರುತ್ತಲಿದೆ. ಇಮ್ಮಡಿವಾಣಿ ಡಮ್ಮೆನ್ನುವುದಕ್ಕೆ ದಿನಗಳನ್ನು ಎಣಿಸುತ್ತಿರುವುದಂತೆ! ಇಮ್ಮಡಿಗೆ ತೊನೆಯಪ್ಪನ ಬೆಂಬಲ-ತೊನೆಯಪ್ಪನಿಗೆ ಇಮ್ಮಡಿಯ ಬೆಂಬಲ ಬಹಳ ಚೆನ್ನಾಗಿದೆ ಜೋಡಿ. ಏಕಾಂತ ಸಖಿಯರನ್ನೂ ಇಬ್ಬರೂ ಜಾಯಿಂಟ್ ಅಕೌಂಟಿನಲ್ಲೇ ನಿರ್ವಹಿಸಬಹುದು.

ಸೊಟ್ಟ ಮುಖದ ಕುಲಪತಿ ಬಾವಯ್ಯ ನೆಟ್ ನಲ್ಲಿ ಸಿಗುವ ವಿಷಯಗಳನ್ನೆಲ್ಲ ಕದ್ದು ಪುಸ್ತಕಗಳನ್ನು ಬರೆಸಿದ್ದನಂತೆ-ಚತುರ್ಮೋಸದಲ್ಲಿ ಬಿಡುಗಡೆಗೆ ಬೇಕೆಂದು.

ಅತ್ಲಕಡೆಗೆ ತಳ್ಳಿದ ಧೂಳುಮೂಟೆಯನ್ನೆಲ್ಲ ತಿಮಿಂಗಿಲಗಳು ತಿಂದು ಹಾಕಿ ಮುಂದೆ ಮುಂದೆ ಬರುತ್ತಿವೆ. ಆದರೂ ಮಾಧ್ಯಮಗಳಲ್ಲಿ ಅದು ವಜಾ ಆಯಿತು, ಇದು ರದ್ದಾಯಿತು ಎಂದು ಸುದ್ದಿಮಾಡೋದಕ್ಕೆ ನಮ್ಮ ಕ್ರಿಮಿನಲ್ಲಾಚಾರ್ಯರು ಶತಾಯಗತಾಯ ಮುನ್ನಡೆಯನ್ನೇ ಸಾಧಿಸಿದ್ದಾರೆ. ಕೆಲವೇ ಸಮಯದಲ್ಲಿ ಮುಖವಾಡವೆಲ್ಲವೂ ನೆಗೆದುಬಿದ್ದು ಒಳಗಿರುವ ಬೇತಾಳದ ದರ್ಶನವಾದಾಗ ಜನ ಕಲ್ಲುಹೊಡೆಯದೆ ಬಿಟ್ಟಾರೆಯೇ?

Thumari Ramachandra

source: https://www.facebook.com/groups/1499395003680065/permalink/1813698742249688/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s