ಕುಚ್ ಕಟ್ಟಾ ಕುಚ್ ಮೀಟಾ: ಎಲ್ಲೆಲ್ಲೂ ಕಾಂಚಾಣದ್ದೇ ಆಟ!

ಕುಚ್ ಕಟ್ಟಾ ಕುಚ್ ಮೀಟಾ: ಎಲ್ಲೆಲ್ಲೂ ಕಾಂಚಾಣದ್ದೇ ಆಟ!

ತುಮರಿ ಯಾಕೆ ನಾಪತ್ತೆ ಎಂದು ಕೆಲವರು ಮತ್ತೆ ಯೋಚಿಸುತ್ತಿರಬಹುದು. ತುಮರಿ ತುರ್ಯಾನಂದಾವಸ್ಥೆಯಲ್ಲಿ ಚಾತುರ್ಮಾಸ ನಡೆಸುವುದನ್ನು ಮರೆಯಬಾರದು. ತುಮರಿಗೂ ಒಂದಷ್ಟು ಕರ್ತವ್ಯದ ಕರೆಗಳಿರುತ್ತವೆ ಎನ್ನುತ್ತ ಇವತ್ತಿನ ಕಥಾನಕದತ್ತ ನಿಮ್ಮೆಲ್ಲರನ್ನು ತುಮರಿ ತುರ್ಯಾನಂದಾಶ್ರಮದ ಪರವಾಗಿ ಸ್ವಾಗತಿಸುತ್ತಿದ್ದೇನೆ.

ಕೆಲವು ತಿಂಗಳುಗಳ ಹಿಂದೆ ಶ್ರೀಚಕ್ರದ ಬಗ್ಗೆ ವ್ಯಾಖ್ಯಾನಕ್ಕೆ ತೊಡಗಿದ್ದೆ. ಅದರ ಕುರಿತು ಇನ್ನಷ್ಟು ಸರಕುಗಳು ಸಿಗುತ್ತಲೇ ಇವೆ. ಕೆಲವುದಿನಗಳ ಹಿಂದೆ ಒಂದೆರಡು ವೀಡಿಯೋಗಳು ಮತ್ತು ವಿದೇಶೀ ಸಂಶೋಧಕರ ವಿವರಣೆಗಳು ದೊರೆತವು. ಅವುಗಳಲ್ಲಿ ಅಲ್ಪಸ್ವಲ್ಪ ಬಳಸಿಕೊಂಡು ಮಿಕ್ಕಂತೆ ನಮ್ಮಲ್ಲಿನ ಪ್ರಾಜ್ಞರು ದಾಖಲಿಸಿದ ಅಂಶಗಳನ್ನೇ ಹೇಳುತ್ತೇನೆ. ಅದರ ಪಶ್ಚಾತ್ ಗೋ ಸೇವೆ ಎಂಬ ಡೊಂಬರಾಟದ ಕತೆಯನ್ನು ಹೇಳುತ್ತೇನೆ.

ಪರಬ್ರಹ್ಮ ನಿರಾಕಾರವೋ ಸಾಕಾರವೋ ಯಾವುದೋ ಒಂದು ವಿಭಾಗಕ್ಕೆ ನಿಲ್ಲುವಂಥದ್ದಲ್ಲ. ಆ ಶಕ್ತಿ ಅವನೋ ಅಥವಾ ಅವಳೋ ಎಂಬುದೂ ಸಹ ಜಿಜ್ಞಾಸೆಯ ವಿಷಯ. ಬ್ರಹ್ಮ ನಿರಾಕಾರ ಎಂಬರ್ಥದಲ್ಲಿ ತೆಗೆದುಕೊಂಡರೆ ಸಾಕ್ಷಾತ್ಕಾರಕ್ಕೆ ಇರುವ ಅನೇಕ ಮಾರ್ಗಗಳಲ್ಲಿ ಶ್ರೀಚಕ್ರ ಉಪಾಸನೆಯೂ ಒಂದೆಂದು ತಿಳಿದುಬರುತ್ತದೆ.

ಶ್ರೀಚಕ್ರದ ಮೂಲ ಹುಟ್ಟು ಭಂಡಾಸುರ ಎಂಬ ರಾಕ್ಷಸನ ವಧೆಯ ಸಂದರ್ಭದಲ್ಲಿ ಎಂದು ಕೆಲವು ಕಡೆ ಹೇಳಲ್ಪಟ್ಟಿದೆ. ಹೇಳಿಕೇಳಿ ಅಸುರ, ಅಸುರರ ಲಕ್ಷಣಗಳ ಬಗ್ಗೆ ಹೇಳಬೇಕೇ? ಶಿವನನ್ನು ಕುರಿತು ತಪಸ್ಸುಗೈದು ವರ ಪಡೆದಿದ್ದ ಭಂಡಾಸುರನ ವಧೆ ಮಾಡುವುದೇ ಕಷ್ಟವಾಗಿತ್ತು. ಅದಕ್ಕಾಗಿ ದೇವತೆಗಳೆಂಬ ದೇವತೆಗಳೆಲ್ಲ ಮೇರು ಪರ್ವತದ ತಪ್ಪಲಿನಲ್ಲಿ ಯಜ್ಞಕ್ಕೆ ತೊಡಗಿದರಂತೆ. ಅಂತಹ ಯಜ್ಞ ನಡೆದಾಗ ಉದ್ಭವಿಸಿದ ಲಲಿತಾತ್ರಿಪುರ ಸುಂದರಿ ಎಂಬ ದೇವಿi ಹೆಬ್ಬರಳ ತುದಿಯಿದ್ದ ಬಿಂದುವೇ ಶ್ರೀಚಕ್ರ ಎಂದು ಹೇಳಿದ್ದಾರೆ.

ಹಾಗಾದರೆ ಅತ್ಯುತ್ತಮ ರಂಗೋಲಿಯ ಮನೋಹರ ಆಕಾರದಲ್ಲಿ ಇರುವ ಚಿತ್ತಾರಗಳು ಏನನ್ನು ಹೇಳುತ್ತವೆ? ಇದರಲ್ಲಿರುವ ೧೪ ತ್ರಿಕೋನಗಳು ಒಂದು ಕಲ್ಪದ ೧೪ ಮನ್ವಂತರದ ಪ್ರತೀಕವಾಗಿವೆ. ನಮ್ಮ ದೇಹದಲ್ಲಿರುವ ಷಟ್ ಚಕ್ರಗಳು + ಸಹಸ್ರಾರ + ಕುಲಸಹಸ್ರಾರ + ಅಕುಲಸಹಸ್ರಾರ ಸೇರಿ ೯ ಚಕ್ರಗಳು ನಮ್ಮ ದೇಹದಲ್ಲಿರುವ ಚಕ್ರಗಳ ಪ್ರತಿನಿಧಿಸುತ್ತವೆ. ಮಧ್ಯದಲ್ಲಿರುವ ಬಿಂದು ಶ್ರೀಚಕ್ರವೇ ಭಂಡಾಸುರ ವಧೆಗಾಗಿ ಉದ್ಭವಿಸಿದ ಶ್ರೀಲಲಿತಾ ದೇವಿ ಬಳಸಿದ ರಥದ ಪ್ರತೀಕವಾಗಿದೆ.

ಶ್ರೀಚಕ್ರದಲ್ಲಿದ್ದ ಬೀಜಾಕ್ಷರ ಮಂತ್ರಗಳ ಸಹಾಯದಿಂದ ಭಂಡಾಸುರನೆಂಬ ರಾಕ್ಷಸನ ವಧೆ ನಡೆಯಿತು. ಅಸುರನ ಸಂಹಾರವಾದ ನಂತರವೂ ಸಹ ಶ್ರೀಚಕ್ರದಲ್ಲಿದ್ದ ಘೋರ ಸಂಯುಕ್ತಾಕ್ಷರಗಳು ಹಾಗೆಯೇ ಉಳಿದುಬಿಟ್ಟವು! ಹೀಗಾಗಿ ಕೆಲವುಕಾಲ ಶ್ರೀಚಕ್ರವೆಂಬುದು ಉಗ್ರಶಕ್ತಿಯ ಆವಾಸಸ್ಥಾನವಾಗಿತ್ತು. ಅಂದರೆ ಭಂಡಾಸುರನ ವಧೆಯ ನಂತರ ಶ್ರೀಚಕ್ರವಿದ್ದ ದೇವಾಲಯಗಳಲ್ಲಿ ಕತ್ತಲು ಆವರಿಸುವ ವೇಳೆಗೆ ಸಾತ್ವಿಕ ಶಕ್ತಿ ಕುಗ್ಗಿ ಉಗ್ರ ಸ್ವರೂಪ ಮೈದಳೆಯುತ್ತಿತ್ತು. ಸೂರ್ಯಾಸ್ತದ ನಂತರ ಅಂತಹ ದೇವಸ್ಥಾನಗಳಿರುವ ಪ್ರದೇಶಗಳಲ್ಲಿ ಜನರ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿತ್ತು ಎಂಬುದು ಪ್ರತೀತಿ. ಅದೇರೀತಿ ಮಧುರೆಯ ಮೀನಾಕ್ಷಿ-ಸುಂದರೇಶ್ವರ ದೇವಸ್ಥಾನದಲ್ಲೂ ಸಹ ಹಾಗೊಂದು ವಾತಾವರಣ ಇತ್ತಂತೆ. ರಾತ್ರಿಯ ಹೊತ್ತು ಅಲ್ಲಿ ದೇವಿ ಕಾಳಿಯಾಗಿಬಿಡುತ್ತಿದ್ದಳಂತೆ!

ಕೆಲವರು ಶ್ರೀಚಕ್ರವನ್ನು ಶಂಕರಾಚಾರ್ಯರೇ ಬರೆದರು ಎಂದುಕೊಂಡಿದ್ದಾರೆ. ವಾಸ್ತವವಾಗಿ ಶಂಕರರು ೧೫೩ ಕೃತಿಗಳನ್ನು ಬರೆದದ್ದು ಬಿಟ್ಟರೆ ಹೊಸ ದೇವರುಗಳನ್ನು ಸೃಷ್ಟಿಸಲಿಲ್ಲ. ಹೊಸದಾದ ಸಿದ್ಧಾಂತವನ್ನೂ ಹುಟ್ಟಿಸಲಿಲ್ಲ. ಇರುವುದನ್ನೆಲ್ಲ ಪರಿಷ್ಕರಿಸಿ, ವೇದಯಾವುದು, ಧರ್ಮ ಯಾವುದು, ಮನುಷ್ಯ ಮನುಷ್ಯನಾಗಿ ಬದುಕಲಿಕ್ಕೆ ಉತ್ತಮವಾದ ಮಾರ್ಗ ಯಾವುದು ಇಂಥದ್ದನ್ನೆಲ್ಲ ಸಂಶೋಧಿಸಿ ಪರಿಷ್ಕರಿಸಿದರು.

ಶಂಕರರ ಸಂಶೋಧನೆಗಳು ಹಲವರಿಗೆ ಅರ್ಥವಾದವು; ಕೆಲವರಿಗೆ ಇಂದಿಗೂ ಕಬ್ಬಿಣದ ಕಡಲೆಗಳಾಗಿ ಜೀರ್ಣವಾಗಲಿಲ್ಲ! ಹೋಗ್ರಿ, ಕಾಡೊಳಗೆ ಹೋಗ್ತಾ ಇರುವಾಗ ಹುಲಿ ಬಂತಂತೆ, ಮಾಯಾವಾದ ಶಂಕರನ ಶಿಷ್ಯ ಅದ್ವೈತ ಅಂತ ನಿಂತ್ಕೊಂಡಿದ್ನಂತೆ. ಹುಲಿ ಅವನನ್ನು ತಿಂದು ಹಾಕಿತಂತೆ ಎಂದು ಟೀಕಿಸುವವರಿಗೆ ಕರ್ನಾಟಕದಲ್ಲಿ ಕೊರತೆಯಿಲ್ಲ.

ಶಂಕರರು ಹೇಳಿದ ಮಾಯಾವಾದದ ಅರ್ಥ ಬೇರೇನೇ ಇದೆ. ಹಿಂದೆ ತಮಗೊಂದು ಕತೆ ಹೇಳಿದ್ದೆ. ಸನ್ಯಾಸಿಯೊಬ್ಬ ಕನಸಿನಲ್ಲಿ ಇಲಿಯನ್ನು ಕಂಡು, ಓಡಿಸುವ ಸಲುವಾಗಿ ಹಿಟ್ಟಿನ ಮಡಕೆಗೆ ಕಾಲಿಂದ ಒದ್ದನಂತೆ. ಮಡಕೆಯೊಡೆದು ಬೇಡಿ ಸಂಗ್ರಹಿಸಿದ್ದ ಹಿಟ್ಟೆಲ್ಲ ಚೆಲ್ಲಿಹೋಯಿತಂತೆ. ಅದೇ ರೀತಿ ತಿರುಕನ ಕನಸು ಎಂಬ ಹಾಡನ್ನು ನೀವೆಲ್ಲ ಕೇಳಿರುತ್ತೀರಿ. ಮುಪ್ಪಿನ ಷಡಕ್ಷರಿಗಳ ಈ ಕವನ ಜಗತ್ತೆಷ್ಟು ಮಿಥ್ಯೆ ಎಂಬುದನ್ನು ಸೂಚಿಸುತ್ತದೆ.

ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟನಿಗಳ ಕೂಡಿನಲ್ಲ
ನಿಷ್ಟಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡುಮಕ್ಕಳಾದುವಾಗಲೇ

ಧನದ ಮದವು ರಾಜ್ಯ ಮದವು
ತನುಜ ಮದವು ಯುವತಿ ಮದವು
ಜನಿತವಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆಯಾಗಿ
ಕನಸು ಕಾಣಿತಿರ್ದು ಹೆದರಿ ಕಣ್ಣು ತೆರೆದನು

ಕವನ ದೀರ್ಘವಾಗಿದೆ, ರುಚಿಗಷ್ಟೆ ಭಾಗವನ್ನು ಆಯ್ದುಕೊಂಡಿದ್ದೇನೆ. ಹಾಗಾದರೆ ತಿರುಕ ಕನಸು ಕಂಡದ್ದು ಸುಳ್ಳೋ? ಅಲ್ಲ, ಕಂಡದ್ದೂ ನಿಜ, ಅದರಲ್ಲಿ ಪಟ್ಟದಾನೆಯಿಂದ ಮಾಲಾರ್ಪಣೆಗೊಳಗಾಗಿ ರಾಜನಾಗಿ ಅಯ್ಕೆಗೊಂಡು ಪಟ್ಟವೇರಿದ್ದೂ ನಿಜ, ಸುತ್ತಲ ರಾಜ್ಯಗಳರಸರು ಅವರ ಕನ್ಯೆಯರನ್ನು ಕೊಟ್ಟು ಮದುವೆ ನಡೆದದ್ದು, ಮಕ್ಕಳು ಹುಟ್ಟಿದ್ದು ಎಲ್ಲವೂ ನಿಜವೇ. ಆದರೆ ಕನಸಿನಾಚೆಯ ವಾಸ್ತವದಲ್ಲಿ ಅವೆಲ್ಲವೂ ಸುಳ್ಳು!

ಈ ಜಗತ್ತು ಎಂಬುದು ಸಹ ಒಂದು ಕನಸಿನಂತೆ ಎಂಬುದು ಶಂಕರರ ಅನುಭವದ ಮಾತು. ಸಮಸ್ಯೆಯೆಂದರೆ ಇದು ಕನಸೆಂದು ಅರಿವಾಗುವುದರೊಳಗೆ ಜೀವನ ಮುಗಿದುಹೋಗುತ್ತದೆ-ಮತ್ತೆ ಹುಟ್ಟು ಮತ್ತೆ ಸಾವಿನ ಚಕ್ರಬಂಧ ಚಲಿಸುತ್ತಲೇ ಇರುತ್ತದೆ!

ಇಂತಹ ಶಂಕರರ್ಯ್ ಶ್ರೀಚಕ್ರಗಳಿರುವ ದೇವಸ್ಥಾನಗಳಿಗೆ ಭೇಟಿ ಕೊಟ್ಟು, ತುಂಬಿದ್ದ ಉಗ್ರಶಕ್ತಿಯನ್ನು ನಿವಾಳಿಸಿ ಸಾತ್ವಿಕ ಶಕ್ತಿಯನ್ನು ಸ್ಥಾಪಿಸಿದರು ಎಂಬುದು ಅಪ್ಪಟ ಸತ್ಯ. ಅಂದಿಗಿದ್ದ ಹಲವು ಸಿದ್ಧಾಂತಗಳಲ್ಲಿ ಅದ್ವೈತ ಸಿದ್ಧಾಂತವೇ ನಿಜದ ನೆಲೆ ಎಂಬುದನ್ನು ಶಂಕರರು ಎತ್ತಿಹಿಡಿಯಬೇಕಾಗಿತ್ತು. ಆ ಹಿನ್ನೆಲೆಯಲ್ಲಿ ನಿರಾಕಾರ ಪರತತ್ವದ ಸ್ಥಾಪನೆ, ಪ್ರತಿಮಾ ಪೂಜೆಗಳಿಂದ ಹೊರತಾದ ಪರಬ್ರಹ್ಮ ಶಕ್ತಿಯ ಅರ್ಚನೆಯಾಗಬೇಕಿತ್ತು. ಜನಸಾಮಾನ್ಯರಿಗೆ ಸಗುಣಾರಾಧನೆಯೇ ರೂಢಿ. ಸಾಕಾರದ ಪ್ರತಿಮೆ, ನಿರಾಕಾರವಾಗಿರುವ ಪರಬ್ರಹ್ಮ ಎರಡರ ಮಧ್ಯದಲ್ಲಿ ಒಂದು ಸಾಧನ ಬೇಕಿತ್ತು. ಅದಕ್ಕಾಗಿ ಶಂಕರರು ಶ್ರೀಚಕ್ರವನ್ನು ಆಯ್ಕೆ ಮಾಡಿಕೊಂಡರು.

ಅಸುರನ ವಧೆಯಿಂದ ಉಗ್ರಶಕ್ತಿಯ ಆವಾಸವಾಗಿದ್ದ ಶ್ರೀಚಕ್ರದ ಯಥಾಸ್ಥಿತಿಯ ಉಪಾಸನೆ ಜನಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಉಗ್ರಶಕ್ತಿಯ ಶ್ರೀಚಕ್ರಗಳಿದ್ದ ದೇವಾಲಯಗಳ ಪೈಕಿ ಅತಿ ಉಗ್ರ ಶ್ರೀಚಕ್ರ ಇದ್ದದ್ದು ಮಧುರೆಯ ಮೀನಾಕ್ಷಿ ದೇವಾಲಯದಲ್ಲಿ. ಶ್ರೀಚಕ್ರವನ್ನು ಸಾತ್ವಿಕ ಸ್ವರೂಪವಾಗಿ ಪರಿಷ್ಕರಿಸಲು ಶಂಕರಾಚಾರ್ಯರು ಮಧುರೆಯ ಮೀನಾಕ್ಷಿ ದೇವಾಲಯವನ್ನೇ ಆಯ್ಕೆ ಮಾಡಿಕೊಂಡರು. ಸಂಖ್ಯಾಶಾಸ್ತ್ರ, ಅಕ್ಷರ ಶಾಸ್ತ್ರದ ಅನುಗುಣವಾಗಿ ಘೋರ ಮಂತ್ರಗಳನ್ನು ತೆಗೆದು ತ್ರಿಕೋನಗಳ ಸಹಿತ ಸಾತ್ವಿಕ ಅಕ್ಷರಗಳನ್ನು ರಚಿಸಿ, ಸಾತ್ವಿಕ ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಘೋರರೂಪವನ್ನು ನಿಗ್ರಹಿಸಿದರು. ಸಾತ್ವಿಕ ಶ್ರೀಚಕ್ರ ಸೃಷ್ಟಿಯಾಗಿದ್ದು ಹೀಗೆ.

ಶ್ರೀಚಕ್ರವನ್ನು ಮನುಷ್ಯನ ಶರೀರದಲ್ಲಿನ ವ್ಯವಸ್ಥೆಗೆ ಹೋಲಿಸಬಹುದು, ಮೇಲ್ಮುಖವಾಗಿರುವ ಚಕ್ರಗಳು ನಾಭಿಯ ಮೇಲ್ಭಾಗವನ್ನು ಪ್ರತಿನಿಧಿಸಿದರೆ, ಕೆಳಗಿನ ಚಕ್ರಗಳು ನಾಭಿಯ ಕೆಳಗಿನ ಚಕ್ರಗಳನ್ನು ಪ್ರತಿನಿಧಿಸುತ್ತದೆ. ಶಕ್ತಿಕೋನಗಳು ನಮ್ಮ ಚರ್ಮ, ರಕ್ತ, ಮೆದುಳು, ಮಾಂಸಖಂಡಗಳು ಮತ್ತು ಎಲುಬುಗಳನ್ನು ಪ್ರತಿನಿಧಿಸುತ್ತವೆ. ಶಿವಕೋನಗಳು ಆತ್ಮ, ಪ್ರಾಣ, ತೇಜಸ್ಸು ಮತ್ತು ವೀರ್ಯ ಕಣಗಳು ಅಥವಾ ಅಂಡಾಣುಗಳನ್ನು ಪ್ರತಿನಿಧಿಸುತ್ತವೆ.

ಶಕ್ತಿಕೋನಗಳು ಸ್ಥೂಲ ವಸ್ತುಗಳನ್ನು ಪ್ರತಿನಿಧಿಸಿದರೆ, ಶಿವಕೋನಗಳು ಸೂಕ್ಷ್ಮ ವಸ್ತುಗಳನ್ನು ಪ್ರತಿನಿಧಿಸುತ್ತವೆ. ಶ್ರೀಚಕ್ರ ನರ ಚಟುವಟಿಕೆಯ ವೈಜ್ಞಾನಿಕ ವಿವರಣೆಗೆ ಪ್ರೇರಕ ಸೂತ್ರವೂ ಹೌದು. ಈ ಚಕ್ರದ ಚೌಕಟ್ಟು, ಜ್ಞಾನೇಂದ್ರಿಯ ಮಟ್ಟದ ಆಧುನಿಕ ನರಶಾಸ್ತ್ರ ವಿವರಣೆಗೆ ಹೋಲಿಕೆ ಇದೆ ಎಂದು ಹೇಳಲಾಗಿದೆ. ಬಲ ಮೆದುಳು, ದೃಷ್ಟಿ, ಶ್ರವಣಶಕ್ತಿ ಚೇತಕವೆಂದು ನಂಬಿದ್ದ ಋಷಿಗಳು ಮಾನವ ದೇಹ ಕಾರ್ಯಶೀಲತೆಯ ವಿಸ್ತಾರ ಜ್ಞಾನ ಪಡೆದಿದ್ದರಂತೆ.

ಈಜಿಪ್ಟ್ ದೇಶದ ಪಿರಮಿಡ್ ರಚನಾ ಶಾಸ್ತ್ರಕ್ಕೂ ಸಹ ಶ್ರೀಚಕ್ರದ ರೇಖಾಗಣಿತ ರಹಸ್ಯದ ಸಾಮ್ಯತೆ ಇದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಶ್ರೀಚಕ್ರ ಕೇವಲ ಆಧ್ಯಾತ್ಮಿಕವಾಗಷ್ಟೇ ಅಲ್ಲದೇ ಮನಃಶಾಸ್ತ್ರಜ್ಞರಿಗೂ ಮತ್ತು ವಿದೇಶೀ ವಿಜ್ಞಾನಿಗಳಿಗೂ ಸಂಶೋಧನಾತ್ಮಕ ವಿಷಯವಾಗಿದೆ. ಇಲ್ಲಿ ಹಾಕಿದ ವೀಡಿಯೋ ನೋಡಿದವರಿಗೆ ಸ್ವಲ್ಪ ಇದರ ಗಂಧ ಗಾಳಿ ತಾಗುತ್ತದೆ.

ಈಗ ನಾವು ಕತೆಯ ಉತ್ತರಾರ್ಧದತ್ತ ತೆರಳೋಣ. ಹಣವಿದ್ದರೆ ಹೆಂಡಗುಡುಕ ವ್ಯಭಿಚಾರಿ ಸತ್ತರೂ ಸಂತನಂತೆ ಸಮಾಧಿ ಮಾಡುವುದನ್ನು ನಾವು ಇಂದು ಕಾಣಬಹುದು. ಹಣವಿಲ್ಲದ ಪುರುಷನನ್ನು ವೇಶ್ಯೆ ತೊರೆಯುತ್ತಾಳೆ. ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ. ಹಣ್ಣು ಬಿಡದ ಮರವನ್ನು ಪಕ್ಷಿಗಳು ತೊರೆಯುತ್ತವೆ.ನಿನ್ನಲ್ಲಿ ಸಾಮರ್ಥ್ಯ ಇರುವ ತನಕ ಮಾತ್ರ ನಿನಗೆ ಬೆಲೆ” ಎಂದು ಚಾಣಕ್ಯ ಹೇಳಿದ್ದಾನೆ.

ರಾಜ್ಯ ಅದೆಷ್ಟೋ ಉತ್ತಮ, ಸಾತ್ವಿಕ, ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ಕಳೆದುಕೊಳ್ಳುತ್ತಿದೆ. ಅಧಿಕಾರಿಗಳು ರಾಜಕಾರಣಿಗಳ ಊಳಿಗದ ಆಳುಗಳಂತೆ ವರ್ತಿಸಬೇಕಾದ ಪ್ರಮೇಯ ಬಂದಿದೆ! ಆದರೆ ಒಂದು ಸತ್ಯವನ್ನು ನಾವು ಮನಗಾಣಬೇಕಿಲ್ಲಿ-ಯಾರು ಏನೇ ಹೇಳಿದರೂ ನಿಗ್ರಹಿಸುವ ಶಕ್ತೊಯೊಂದು ಬೇರೆಯೇ ಇದೆ; ಅದು ಎಲ್ಲದರ ಲೆಕ್ಕವನ್ನೂ ಚೊಕ್ಕಾಗಿ ಬರೆದಿಟ್ಟುಕೊಳ್ಳುತ್ತದೆ ಮತ್ತು ಆಯಾಯ ಸಮಯಕ್ಕೆ ಸರಿಯಾಗಿ ಫಲಗಳನ್ನು ಅನುಭವಿಸುವಂತೆ ಮಾಡುತ್ತದೆ. ಯಾರೋ ಬರೆದರು “ಕಲಿಯುಗದಲ್ಲಿ ಈಗ ಡ್ರಾ ಈಗಲೇ ಬಹುಮಾನ್” ಅಂತ; ಅದು ಅಕ್ಷರಶಃ ಸತ್ಯ.

ಈ ದೇಶಕ್ಕೆ ಅನ್ನ ನೀಡುವ ರೈತಮಕ್ಕಳು ಸತ್ತರೆ ಕೇಳುವವರಿಲ್ಲ! ಕೆಲವರದ್ದು ಹುದ್ದೆಗೆ ರಾಜೀನಾಮೆ, ಇನ್ನೂ ಕೆಲವರವರದ್ದು ಜೀವಜಗತ್ತಿಗೇ ರಾಜೀನಾಮೆ! ನೀರಿಲ್ಲದೆ ಬಳಲಿ ಹಕ್ಕಿಗಾಗಿ ಹೋರಾಡಿದರೆ ಅವರಮೇಲೆ ಲಾಟಿ ಪ್ರಹಾರವಾಗುತ್ತದೆ. ಅವರ ಮನೆಗಳಿಗೆ ನುಗ್ಗಿ ಹೆಂಗಸರು, ಮಕ್ಕಳು, ಮುದುಕರು, ಬಸುರಿ-ಬಾಣಂತಿಯರೇ ಮೊದಲ್ಗೊಂಡು ಯಾರನ್ನೂ ಬಿಡದೆ ಎಲ್ಲರನ್ನೂ ವಿನಾಕಾರಣ ಥಳಿಸಲಾಗುತ್ತದೆ. ಇನ್ನೊಂದೆಡೆಗೆ ಈ ದೇಶದ ಗಡಿರಕ್ಷಣೆಗೆ ನಿಂತ ವೀರ ಸೈನಿಕರು ಸತ್ತರೆ ಅಂಥವರ ಬಗ್ಗೆ ನಮ್ಮ ಮಾಧ್ಯಮಗಳಿಗೆ ಸಮಯವಿಲ್ಲ. ಯಾರು ಕಾಂಚಾಣ ಕೊಡುತ್ತಾರೋ ಅವರ ಕಡೆಗೆ ಒಲವು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಇಂತಿಪ್ಪ ರಾಜ್ಯದಲ್ಲಿ ನ್ಯಾಯ ಯಾವುದೆಂದು ಹೇಳುತ್ತೀರಿ?

ದುಡ್ಡಿಗಾಗಿ ಮಾಧ್ಯಮಗಳು ಬಕೆಟ್ ಹಿಡಿಯುವ ಕೆಲಸ ಮಾಡಿದರೆ ಭಂಡಾಸುರನಂತಹ ರಾಕ್ಷಸರೂ ಸನ್ಯಾಸಿಗಳೆನಿಸಬಹುದು! ಹಾಗಾಗಿಯೇ ಅಲ್ಲವೇ? ಇಂದು ಮಾಧ್ಯಮಗಳಲ್ಲಿ ಹಲವು ಗುರೂಜಿಗಳು ಹುಟ್ಟಿಕೊಂಡಿದ್ದಾರೆ. ಜನಮರುಳೋ ಜಾತ್ರೆ ಮರುಳೋ ಎಂಬಂತೆ ಮಾಧ್ಯಮಗಳು “ಗುರೂಜಿ” ಎಂದು ಹೇಳಿದವರೆಲ್ಲ ಗುರೂಜಿಗಳಾಗಿ ಕೋಟಿ ಕೋಟಿ ಎಣಿಸಿಕೊಳ್ಳುತ್ತಿದ್ದಾರೆ; ಎದೆ ಸಿಗಿದರೆ ನಾಲ್ಕು ಅಕ್ಷರವಿಲ್ಲದವರಿಗೂ ಗುರೂಜಿಗಳಾಗುವ ಯೋಗ!

ನಮ್ಮ ಕಚ್ಚೆಶೀಗಳಿಗೂ ಸಹ ದುಡ್ಡಿನ ಮಹಿಮೆ ಚೆನ್ನಾಗಿ ಗೊತ್ತು; ಯಾಕೆಂದರೆ ಪಕ್ಕಾ ಕ್ರಿಮಿನಲ್ ಗಳೆಲ್ಲ ಅದನ್ನೇ ಮೊದಲು ಕಲಿಯೋದು! ನಾಲ್ಕನೇ ಕ್ಲಾಸಿನ ವರೆಗೆ ಓದಿರುವ ನಮ್ಮ ಕಚ್ಚೆಶೀಗಳು ’ಹಣ ಕಂಡರೆ ಹೆಣವೂ ಬಾಯ್ಬಿಡುತ್ತದೆ’ ಎಂಬುದನ್ನು ತಿಳಿದುಕೊಂಡಿದ್ದಾರೆ; ತಮ್ಮ ಭಾಷಣಗಳಲ್ಲಿ ಹೇಳಿದ್ದಾರೆ. ಹಣ ಕೊಟ್ಟರೆ ಏನನ್ನೇ ಆದರೂ ಖರೀದಿಸಬಹುದು ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಸುದ್ದಿ ಮಾಡುವವರನ್ನು, ರಾಜಕಾರಣಿಗಳನ್ನು, ಮಾವಂದಿರನ್ನು, ಹಳದೀ ತಾಲಿಬಾನಿಗಳನ್ನು ಶೋಭರಾಜಾಚಾರ್ಯರು ಚೆನ್ನಾಗಿ ನೋಡಿಕೊಂಡಿದ್ದಾರೆ.

ಮೊನ್ನೆ ನಮ್ಮ ಗುಮ್ಮಣ್ಣ ಹೆಗಡೇರ ಮನೆಗೆ ಅವರ ಸ್ನೇಹಿತರಾದರೂ ಹಳದೀ ಪಟಾಲಮ್ಮಿನ ಕೆಳಗೆ ಬಕರಾ ಭಕ್ತನಾಗಿ ಸೇವೆ ಸಲ್ಲಿಸುವ ವ್ಯಕ್ತಿಯೋರ್ವ ಸಿಕ್ಕಿದ್ದನಂತೆ. ಮಠಕ್ಕೆ ಧನ-ಕನಕ ದೇಣಿಗೆಗಳು ಮೊದಲಿಗಿಂತ ಚೆನ್ನಾಗಿ ಬರುತ್ತಿವೆ. ’ಬಿಂದು ಕುಂದು’ ಮೊದಲಿಗಿಂತ ಹೆಚ್ಚಿದೆ. ’ಅಧರ್ಮ ಹಾರುತಿ’ಯ ಚಂದಾದಾರರು ಹೆಚ್ಚಿದ್ದಾರೆ. ದೋಷವಿದ್ದರೆ ಆ ಪೀಠದಲ್ಲಿ ಇಲ್ಲಿಯವರೆಗೆ ಇರೋದಕ್ಕೆ ಸಾಧ್ಯವಾಗ್ತಾ ಇರ್ಲಿಲ್ಲ.” ಎಂದೆಲ್ಲ ಹೇಳಿದನಂತೆ. ’ಎಲ್ಲಿಯವರೆಗೆ ಬಕರಾಗಳಾಗಲು ತಯಾರಾಗುವ ಜನ ಇರ್ತಾರೋ ಅಲ್ಲಿಯವರೆಗೆ ಬಕರಾಗಳನ್ನು ಮಾಡುವ ಜನರೂ ಇರ್ತಾರೆ’ ಎಂಬ ಹಿಂದಿ ಮೂಲದ ನಾಣ್ನುಡಿ ನೆನಪಿಗೆ ಬಂತಂತೆ.

ಗೋಸುಂಬೆ ಸ್ವಾಮಿ ಗೋಸೇವೆ ಎಂಬ ಟಾಪಿಕ್ ಆರಿಸಿಕೊಂಡಿದ್ದು ಶ್ರೀಧರ ಸ್ವಾಮಿಗಳಿಂದ. ಅರ್ಧ ಶತಕದ ಹಿಂದೆಯೇ ಅವರು ದೇಸೀ ದನಗಳ ಬಗ್ಗೆ ಅಪಾರ ಅನುಕಂಪ ಹೊಂದಿದ್ದು ಗೋಶಾಲೆಯನ್ನು ನಡೆಸಿದ್ದರು. ನಿತ್ಯ ಗೋವುಗಳನ್ನು ಮಾತನಾಡಿಸಿ, ಕರುಗಳನ್ನು ಮುದ್ದಿಸಿ ಹಣ್ಣುಗಳನ್ನು ನೀಡುತ್ತಿದ್ದರು. ಶ್ರೀಧರರ ಅಪ್ಪಟ ಗೋಪ್ರೇಮಕ್ಕೂ ತೊನೆಯಪ್ಪನ ಗೋಸುಂಬೆ ಗೋಪ್ರೇಮಕ್ಕೂ ಅಜಗಜಾಂತರವಿದೆ!

ಸರಿಸುಮಾರು ನಲ್ವತ್ತು ವರ್ಷಗಳಿಂದೀಚೆಗೆ ಅಭಿವೃದ್ಧಿಯ ಹೆಸರಿನಲ್ಲಿ ದೇಶದಲ್ಲಿ ನಡೆದ ವಿಪರೀತ ಬದಲಾವಣೆಗಳಿಂದಾಗಿ ದೇಶದಲ್ಲಿ ದೇಸೀ ಗೋವುಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂಬುದು ಢಾಳಾಗಿ ಕಾಣುವ ಸತ್ಯ. ಅದರಲ್ಲೂ ಪ್ರಗತಿಪರರು ಎಂಬ ಹೆಸರಿನಲ್ಲಿ ಓರ್ವ ಜ್ಞಾನಪೀಠಿಯೂ [ಅದೂ ಹೊಡೆದುಕೊಂಡಿದ್ದು]ಸೇರಿದಂತೆ ಕೆಲವರು ದನದ ಮಾಂಸವನ್ನು ತಿನ್ನುವುದು ಹಲವರ ಆಹಾರದ ಅನಿವಾರ್ಯ ಕ್ರಮ ಎಂಬಂತೆ ಬಿಂಬಿಸಿದರು. ಹಾಲುಕೊಟ್ಟ ಹಸುವಿಗೆ ಇನ್ನಿಲ್ಲದ ವಿಧಗಳಲ್ಲಿ ಹಿಂಸೆ ನೀಡಿ ಕೊಲ್ಲಲಾಗುತ್ತಿದೆ. ಅಂತಹ ಕೆಲವು ವೀಡಿಯೋಗಳನ್ನು ನೀವೆಲ್ಲ ನೋಡಿರಬಹುದು.

ನಮ್ಮ ತೊನೆಯಪ್ಪ ಕಚ್ಚೆಶೀಗಳು ಸುಮಾರು ಷೋಡಶ ವರ್ಷಗಳ ಹಿಂದೆ ಗೋಪ್ರೇಮವೆಂಬ ಟಾಪಿಕ್ಕನ್ನು ಕದ್ದರು! ಆಗಲೇ ಸಮಾಜದ ಹಲವು ಮನೆಗಳಲ್ಲಿ ಜನರು ದನಗಳನ್ನು ಸಾಕಲಾರದೆ ಹೈರಾಣಾಗಿದ್ದರು. ದುಬಾರಿಗೊಂಡ ಪಶು ಆಹಾರ ಮತ್ತು ಗೋಮಾಳಗಳ ನಾಶದಿಂದ ದನಗಳನ್ನು ಸಾಕುವುದೇ ದುಸ್ಸಾಧ್ಯವೆನಿಸಿತು. ಗೋಮಯಕ್ಕಾಗಿ, ಪೂಜೆಗಾಗಿ ಒಂದೆರಡನ್ನು ಇಟ್ಟುಕೊಂಡಿದ್ದು ಬಿಟ್ಟರೆ ಹಿಂದೆಲ್ಲ ಇದ್ದಂತೆ ಹತ್ತಿಪ್ಪತ್ತು ದನಗಳನ್ನು ಸಾಕೋದು ಆಗಲೇ ನಿಂತುಹೋಗಿತ್ತು.

ಅದಾಗ ತೊನೆಯಪ್ಪನ ವಯಸ್ಸಿನ ಮತ್ತು ಅವನಿಗಿಂತ ಆರೆಂಟು, ಹತ್ತು ವರ್ಷ ಹಿರಿಯ ಮಹಿಳೆಯರು ಕೊಟ್ಟಿಗೆಯಲ್ಲಿ ಗೋವುಗಳನ್ನು ಸಾಕಲಾರದೆ ಬೇಸರದಲ್ಲಿದ್ದರು. ಜನರ ನಾಡಿಮಿಡಿತವನ್ನು ಅರಿತ ಗೋಸುಂಬೆ ಸ್ವಾಮಿಗಳು ’ಗೋಸೆವೆ’ಗೆ ಮುಂದಾದರು. ಟಾಪಿಕ್ ಇಟ್ಟುಕೊಂಡು ಹಲವು ಯೋಜನೆಗಳನ್ನು ಹರವಿ ಕುಳಿತರು. ನಮ್ಮ ಜನ ನಿಬ್ಬೆರಗಾಗಿ ನೋಡಿದರು. ತೊನೆಯಪ್ಪ ಕೆಮ್ಮಿದರೂ ದನವೇ ಕೆಮ್ಮುತ್ತಿದೆಯೋ ಎಂಬಂತೆ ಭಾವಪೂರಿತರಾದರು.

’ಗೋಸೆವೆ’ಗೆ ನಿಂತ ತೊನೆಯಪ್ಪನ ಆಂತರ್ಯದಲ್ಲಿ ವ್ಯಾಘ್ರ ಇರುವುದನ್ನು ಬಲ್ಲವರಾರು? ಅವರಿಗೆಲ್ಲ ಕಂಡಿದ್ದು ಗೋವು. ಗೋವು, ಗೋವು ಮತ್ತು ಗೋವು ಮಾತ್ರ. ಅದರೊಂದಿಗೆ ಮಾತೆತ್ತಿದ್ದರೆ ಹರೇರಾಮ ಎಂಬ ಪದದಿಂದ ಆರಂಭಿಸತೊಡಗಿದ ಕಳ್ಳ ಸನ್ಯಾಸಿಯ ಹೊರಮುಖಕ್ಕೆ ಜನ ಬಕರಾಗಳಾಗಿಬಿಟ್ಟರು. ’ಗೋಸೇವೆ’ಯ ಯೋಜನೆಗಳ ಜೊತೆಗೆ ಇನ್ನೂ ಹಲವಾರು ಯೋಜನೆಗಳು ಸೇರಿಕೊಂಡವು; ಎಲ್ಲವೂ ಹಣಮಾಡುವ ಯೋಜನೆಗಳು.

ಗೋಸುಂಬೆ ಸ್ವಾಮಿ ಹಣ ಮೇಯುತ್ತಿದೆ ಎಂಬುದನ್ನು ಯಾರೂ ಕಂಡಿರಲಿಲ್ಲ; ಕಂಡವರು ಹೇಳಿದರೂ ನಂಬುವ ಸ್ಥಿತಿಯಲ್ಲಿ ಅವರಿರಲಿಲ್ಲ. ಗುರುಪೀಠ, ಗುರುಶಾಪ, ಗುರುಸೇವೆ, ಸಾಮಾಜಿಕ ಗೌರವ, ಬಹಿಷ್ಕಾರ, ದೀಪಕಾಣಿಕೆ. ಪಾದಗಾಣಿಕೆ, ಬಿಂದು-ಕುಂದು, ಮುಷ್ಠಿ[ಮೈಥುನ?] ಸೇವೆ ಇತ್ಯಾದಿ ಹಲವು ಪದಗಳನ್ನು ಕಂಡ ಜನ ಮೆಜಾರಿಟಿ ಇರುವೆಡೆಗೆ ವಾಲಿಕೊಂಡರು. ಹಗಲಿರುಳೆನ್ನದೆ ಎಲ್ಲರೂ ಈ ಚೋರಗುರುವನ್ನು ಹೊಗಳಿಯೇ ಹೊಗಳಿದರು.

ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ನಡೆಸುವ ಸ್ವಭಾವದ ಚೋರಗುರುವಿಗೆ ಹತ್ತುವರ್ಷದವನಿದ್ದಾಗಿಂದಲೇ ಹಣದ ದಾಹ ಹತ್ತಿತ್ತು ಮತ್ತು ಅದರಿಂದ ಏನನ್ನೂ ಮಾಡಬಹುದು ಎಂಬುದು ಗೊತ್ತಿತ್ತು. ಇವನ ಯೋಜನೆಗಳು ಕೇವಲ ವೇದಿಕೆಯ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳಿಗೆ ಸೀಮಿತವಾಗಿದ್ದವು. ಅತ್ಲಕಡೆಗೆ ಪ್ರತಿನಿತ್ಯ ಗೋವುಗಳ ಕಗ್ಗೊಲೆ ಹೆಚ್ಚುತ್ತಲೇ ಇತ್ತು. ಗೋಸುಂಬೆಯ ಹಳದೀ ಶಿಷ್ಯರು ಪರರ ದುಡ್ಡಿನಲ್ಲಿ ಮಠದಲ್ಲಿ ಮೃಷ್ಟಾನ್ನ ಉಂಡು ಅಡ್ಡಡ್ಡ ಮಲಗುತ್ತ ಜೈಕಾರ ಕೂಗುವುದು ಬಿಟ್ಟರೆ ಯಾವೊಬ್ಬನೂ ಒಂದೇ ಒಂದು ಹಸುವನ್ನೂ ಕಟುಕರಿಂದ ತಪ್ಪಿಸಿದ್ದಿಲ್ಲ!

ಗುಮ್ಮಣ್ಣ ಹೆಗಡೇರು ಹೇಳುವಂತೆ ಘಟ್ಟದ ತಳಗಿನ ಎಮ್ಮೆ ವ್ಯಾಪಾರಿಯೊಬ್ಬ ಹಾಲುಕೊಡದ ಎಮ್ಮೆಗಳನ್ನೆಲ್ಲ ಲಾರಿಗಳಲ್ಲಿ ರಾತ್ರಿ ಕಾಲುಗಳನ್ನು ಕಟ್ಟಿ ಅಡ್ಡ ಮಲಗಿಸಿ ಕಸಾಯಿಖಾನೆಗೆ ಸಾಗಿಸುತ್ತ ದಶಕವೇ ಕಳೆದಿತ್ತು! ಇಂಥಾ ಪುಣ್ಯವಂತ ಸಮಾಜ ಬಾಂಧವನೂ ನಮ್ಮಲ್ಲಿ ಇದ್ದಾನೆ ಎಂಬುದು ಗೊತ್ತಾದದ್ದೇ ಅನ್ಯ ಸಮಾಜದವರು ಲಾರಿ ಸಮೇತ ಅವನನ್ನು ತಡೆದು ಹೊಡೆದಾಗ. ಆ ಪ್ರಕರಣ ಹೋರಿಸ್ವಾಮಿಯ ಹತ್ತಿರಕ್ಕೂ ಬಂದಿತ್ತಂತೆ. ಹೋರಿಸ್ವಾಮಿಗಳು ಅದನ್ನು ಅಲ್ಲೇ ಮುಚ್ಚಿಹಾಕಿಬಿಟ್ಟರು! ಈಗ ಅವನೂ ಸಹ ಹಳದೀ ಕಾರ್ಯಕರ್ತರ ಬಳಗಕ್ಕೆ ಸೇರಿದವನೇ; ಆಗಾಗ ಗೋಸುಂಬೆ ಸ್ವಾಮಿಗಳನ್ನು ಕಾಣುತ್ತಾನೆ.

ಬೆಂಗಳೂರಿನ ಮಿತ್ರರು ಹಲವು ಬಾರಿ ಹೇಳಿದ್ದರು-ಅಲ್ಲಿನ ಶಿವಾಜಿ ನಗರ, ಗೋರಿಪಾಳ್ಯ ಮತ್ತು ಮಹಾನಗರದ ಹಲವೆಡೆ ಮತ್ತು ಹೊರವಲಯಗಳಲ್ಲಿ ಅನಧಿಕೃತವಾಗಿ ದನಕರುಗಳನ್ನು ಕಡಿಯುತ್ತಾರಂತೆ. ಮಂಡ್ಯ-ಮೈಸೂರು ಪ್ರಾಂತ್ಯದ ಕಿಲಾರಿ ಮತ್ತು ಜವಾಹರ ತಳಿಯ ಬೆಳ್ಳನೆಯ ಮುದ್ದಾದ ಹಸುಕರುಗಳನ್ನು ರಾಜಾರೋಷವಾಗಿ ಹಾಡಹಗಲೇ ಕಡಿಯೋದನ್ನು ಕಾಣಬಹುದು, ಆದರೂ ಯಾರೂ ತಪ್ಪಿಸೋದಿಲ್ಲ. ಚೋರಗುರು ಮಹಾನಗರದಲ್ಲೇ ಠಿಕಾಣಿ ಹೂಡಿದ್ದರೂ ಅವನ ಯಾವೊಬ್ಬ ಶಿಷ್ಯನೂ ಆ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ-ಅಂತ. ಅವರು ಹೇಳುತ್ತಿರೋದು ನಿಜ.

ಬರೇ ಸೊಳ್ಳೆ ಬತ್ತಿ, ಗೋಮೂತ್ರ ಇತ್ಯಾದಿಗಳ ಬಗ್ಗೆ ಪುಂಕಾನುಪುಂಕವಾಗಿ ಶಂಖ ಹೊಡೆಯುವ ಡೂಪ್ಲಿಕೇಟ್ ಶಂಕರ ದನಗಳ ಜೀವ ಇದ್ದರಲ್ಲವೇ ಅವುಗಳನ್ನೆಲ್ಲ ತಯಾರಿಸೋದು? ಆ ಬಗ್ಗೆ ಕಿಂಚಿತ್ತೂ ಗಮನವೇ ಇಲ್ಲ. ಅವನೇನಾದರೂ ಕಸಾಯಿಖಾನೆಗೆ ಸಾಗಿಸುವ ದನಗಳನ್ನು ತಪ್ಪಿಸತೊಡಗಿದರೆ ಬಹಳ ಜನ ಅವನ ವಿರುದ್ಧ ಬೀಳುತ್ತಾರೆ ಮತ್ತು ಅಟ್ಯಾಕ್ ಮಾಡೋದಕ್ಕೂ ಮುಂದಾಗ್ತಾರೆ ಅನ್ನೋದು ತೊನೆಯಪ್ಪನಿಗೆ ಗೊತ್ತು. ಅವನ ಉದ್ದೇಶವೇ ಬೇರೆ-ಅದು ಗೋವುಗಳ ಹೆಸರಿನಲ್ಲಿ ಹಣ ಗುಮ್ಮೋದು.

ಗೋಸೆವೆ ಒಳಹರಿದ ಹಣದಲ್ಲಿ ಹಾದರಕ್ಕೆ ಅದೆಷ್ಟು ಅಂಧಾದುಂದಿ ಖರ್ಚಾಯಿತೋ ಕಾಮಧೇನುವೇ ಬಲ್ಲುದು. ಉಮೇರ್‍ ರೆಡ್ಡಿಯಂತಹ ವಿಕೃತ ಕಾಮಿ ಬಿಟ್ಟರೆ ಗೋವುಗಳಿಗೂ ಹಾರುವಷ್ಟು ಕಾಮೋದ್ದೀಪಿತ ಎಂಬುದನ್ನು ಹಲವರು ಬಲ್ಲರು; ಆದರೂ ಅದನನ್ನೇ ಇನ್ನೂ ಪೀಠದಲ್ಲಿರಿಸಿ, ಕೊಡೆ ಹಿಡಿದು ಆರಾಧಿಸೋದು ಮಾತ್ರ ಅಥರ್ವಣದ ಸಮೂಹ ಸನ್ನಿಯ ಪರಿಣಾಮ ಎಂಬುದು ಸತ್ಯ. ಸಮಾಜ ಹಿಂದೆಂದೂ ಇಷ್ಟು ಕೀಳಾಗಿ ನಡೆದುಕೊಂಡಿರಲಿಲ್ಲ.

ತಿಪ್ಪಾಭಟ್ಟರ ಚಂದ ಕೊಡೆ
ಸಾವಿರ ತೂತುಗಳಂದ ಕೊಡೆ
ಮಳೆ ನೀರೆಲ್ಲಾ ಒಳಗಡೆಗೆ
ಭಟ್ಟರು ಮಿಂದರು ಕೊಡೆಯೊಳಗೆ

ತಿಪ್ಪಾಭಟ್ಟರು ಕೊಡೆ ಹಿಡಿದು ಹೋಗ್ತಾ ಇದ್ರೆ ಆ ಕೊಡೆಯಲ್ಲಿ ಸಾವಿರ ತೂತುಗಳಂತೆ, ಪಾಪ, ಭಟ್ಟರ ಬಡತನವಿರಬೇಕು. ತನ್ನ ಮನಸ್ಸಿನ ತೃಪ್ತಿಗಾಗಿ ತಲೆಯಮೇಲೊಂದು ಕೊಡೆ ಅಂಬೋದನ್ನು ಹಿಡಿದು ನಡೆದರೂ ಸಾವಿರ ತೂರುಗಳ ಮೂಲಕ ಹಾರುವ ತುಂತುರು ತುಷಾರ ಕೆಲವೊಮ್ಮೆ ಬಿಡುಬೀಸಾಗಿ ಸುರಿವ ಮಳೆಗೆ ಭಟ್ಟರನ್ನು ಇಡಿಯಾಗಿ ಅಭಿಷೇಕ ಮಾಡಿಬಿಡುತ್ತಿತ್ತು.

ಇಲ್ಲೀಗ ಮಠವೆಂಬ ಧರ್ಮದ ಕೊಡೆಗೆ ಸಾವಿರ ತೂತುಗಳಾಗಿಬಿಟ್ಟಿವೆ! ಆ ತೂತುಗಳಲ್ಲಿ ತೊನೆಯಪ್ಪನ ಹಾದರದ ವೀರ್ಯದ ಹನಿಗಳೇ ತೂರಿಬರುತ್ತವೆ. ನಮ್ಮ ಗುರುಮಠ ಎಂಬ ಭಕ್ತಿಭಾವದ ಮನಸ್ಸಂತೋಷಕ್ಕಾಗಿ ಆ ಕೊಡೆಯೊಳಗೆ ನಡೆಯುತ್ತಿರುವ ಬಕರಾಭಕ್ತರಿಗೆಲ್ಲ ಹಾದರದ ವೀರ್ಯಮಳೆ ಹನಿಗಳ ಅಭಿಷೇಕ ನಡೆದು ಕಮಟು ವಾಸನೆ ಹೊಡೆಯುತ್ತಿದ್ದರೂ ಬಕರಾಭಕ್ತರು ಮಾತ್ರ ಇನ್ನೂ ಅದನ್ನೇ ಸಹಿಸಿಕೊಂಡಿದ್ದಾರೆ! ತಿಪ್ಪಾಭಟ್ಟರು ಬಡವರಾಗಿದ್ದರು-ಬೇರೆ ಕೊಡೆ ಕೊಳ್ಳಲು ಹಣವಿರಲಿಲ್ಲ; ಬಕರಾಭಕ್ತರು ಬಡವರಾಗಿದ್ದಾರೆ-ಇದ್ದುದನ್ನೆಲ್ಲ ತೊನೆಯಪ್ಪನ ಹಾದರಕ್ಕೆ ಕೊಟ್ಟಾಗಿದೆಯಲ್ಲ?-ಹೀಗಾಗಿ ಅವನ ವಿರುದ್ಧ ಹೋರಾಡುವ ಆರ್ಥಿಕ ಸಾಮರ್ಥ್ಯವಿಲ್ಲ.

ಭಕ್ತರಿಂದಲೇ ಹಲವು ರೂಪದಲ್ಲಿ ಧನಸಂಗ್ರಹಿಸಿ ಅವರನ್ನು ಹಣಿಯಲು ಅವರು ಕೊಟ್ಟ ಹಣವನ್ನೇ ಉಪಯೋಗಿಸುವ ಕಚ್ಚೆಸ್ವಾಮಿಗೆ ಇನ್ನುಮುಂದೆ “ಹಾದರಗಾಣಿಕೆ” ಎಂದು ಪ್ರತ್ಯೇಕ ನಿಧಿಯೊಂದನ್ನು ಸ್ಥಾಪಿಸಿಕೊಡುವುದು ಒಳಿತು. ಯಾಕೆಂದರೆ ಈ ಮಾರ್ಯಾದೆಗೆಟ್ಟ ಸಮಾಜ ಇನ್ನೂ ಅವನನ್ನು ಅಲ್ಲೇ ಉಳಿಸಿಕೊಳ್ಳುವಲ್ಲಿ ಮುಂದಾಗುತ್ತದೆ ಎಂದಾದರೆ ಅದಲ್ಲದೆ ಇನ್ನೇನು ಹೇಳಲಾದೀತು?

ಈ ಚೋರಗುರುವಿಗೆ ಗುಡ್ಡದಮೇಲಿನ ದನ [ಗೋಮಾಳದಲ್ಲಿ ಮೇಯುತ್ತಿರುವ ದನ]ವನ್ನು ಗೋದಾನ ಮಾಡೋದು ಕರಗತವಾಗಿಬಿಟ್ಟಿದೆ. ರಾಜಕಾರಣಿಯೋರ್ವ ಕಟ್ಟಿಸಿಕೊಟ್ಟ ಒಂದೆರಡು ಅಗ್ಗದ ಹಳ್ಳಿ ಮನೆಗಳನ್ನು ತಾನೇ ಮಠದಿಂದ ಕೊಟ್ಟೆ ಎಂದು ಬೀಗಿದ್ದಾನೆ. ಉತ್ತರ ಕರ್ನಾಟಕದಲ್ಲಿ ಬರ ಎಂಬ ಸುದ್ದಿ ಬಂದರೆ ರಾಜಕಾರಣಿಗಳಿಗೆ ಹೇಳಿ ಒಂದೆರಡು ಲಾರಿ ಒಣ ಹುಲ್ಲು ಕಳಿಸುತ್ತಾನೆ; ಮಾಧ್ಯಮಗಳಲ್ಲಿ ಏನು ಒಣಹುಲ್ಲು ತುಂಬಿದ ಲಾರಿಗಳು ಓಡುತ್ತಿರುವುದನ್ನೇ ಮತ್ತೆ ಮತ್ತೆ ತೋರಿಸಿ ಹಾವಾಡಿಗ ಮಠದ ಸಹಾಯ ಅಂತ ಹಾಕಿಸುತ್ತಾನೆ.

ಇವನ ಹಾದರಕ್ಕೆ ಬಲಿಯಾದ ಹೆಂಗಸರನೇಕರು ಮೊನ್ನೆ ಇವನ ಚತುರ್ಮೋಸದ ಆರಂಭದ ದಿನ ಬಂದಿದ್ದರು. ಮಾದಕ್ಕಿ ತಿಮ್ಮಕ್ಕನೂ ಖುದ್ದಾಗಿ ಹಾಜರಿದ್ದು ತಾನಿನ್ನೂ ತೊನೆಯಪ್ಪನ ಜೊತೆಗೇ ಇದ್ದೇನೆ ಎಂದು ಹೇಳಿದ ಹಾಗಿತ್ತು. ಗಂಡಸರಲ್ಲಿ ಕೆಲವರಾದರೂ ನಿಜ ಸ್ಥಿತಿಯನ್ನು ಹೇಳಿಯಾರು ಆದರೆ ಹೆಂಗಸರು ಮಾತ್ರ ತಮ್ಮ ಶೀಲದ ಬಗ್ಗೆ ಎಲ್ಲೂ ಮಾತನಾಡೋದಿಲ್ಲ. ತೊನೆಯಪ್ಪನ ಬಲೆಗೆ ಬಿದ್ದು ಮೊದಲ ಸಲ ಸಂಭೋಗಕ್ಕೆ ಒಳಗಾಗುವಾಗ ಎಲ್ಲರಿಗೂ ಸಹ “ನೀನು ದಿವ್ಯಳು, ಭವ್ಯಳು, ಮಾನ್ಯಳು, ರಾಮ ನಿನ್ನಿಂದ ಬಹುದೊಡ್ಡ ಸೇವೆಯೊಂದನ್ನು ಅಪೇಕ್ಷಿಸಿದ್ದಾನೆ” ಎನ್ನುತ್ತಲೇ ಹಾರಿದ್ದು.

’ಪ್ರಸಾದ’ ತಿಂದು ಮಂಪರು ಕವಿದಾಗ ಎದುರು ನಿಂತ ಹೋರೀಹ ರಾಮನಂತೆ ಕಂಡಿದ್ದರೂ ಆಶ್ಚರ್ಯವಿಲ್ಲ. ರಾಮನ ಭಕ್ತಿಯಲ್ಲಿ ಮೊದಲೊಮ್ಮೆ ಬಿಚ್ಚಿ ಅರ್ಪಿಸಿಕೊಂಡವರಿಗೆ ಆಮೇಲೆ ಅವನಾಡುವ ಆಟಗಳೇ ಇಷ್ಟವಾಗತೊಡಗಿದವು. ಎಷ್ಟೋದಿನಗಳಿಂದ ಬೇರೊಂದು ಉಪ್ಪಿನಕಾಯಿ ರುಚಿನೋಡುವ ತೆವಲು ಹೊಂದಿದ್ದವರಿಗೆ ಗುರುವಿನ ಏಕಾಂತ ಸುರಕ್ಷೆಯ ತಾಣವಾಗಿ ಕಂಡಿರಬಹುದು. ಗಂಡನೂ ಕೇಳಲ್ಲ, ಯಾರೂ ಸಂಶಯಿಸೋದಿಲ್ಲ, ದೂರದ ಹಳ್ಳಿ ಊರುಗಳಲ್ಲಿ ಇರೋರಿಗೆ ಗೊತ್ತೇ ಆಗೋದಿಲ್ಲ! ಹೇಗಿದೆ ಪ್ಲಾನು?

ಹೀಗಾಗಿ ಜಗತ್ತಿಗೆ ಕಂಡಿಲ್ಲ ಎಂಬ ಖಾತ್ರಿಯಿಂದ ತೊನೆಯಪ್ಪನೊಡನೆ ಏಕಾಂತ ನಡೆಸಿದ ಮಹಿಳೆಯರಲ್ಲಿ ಕೆಲವರು ಈಗಲೂ ಅದೇ ರೀತಿಯಲ್ಲೇ ಮುಂದುವರಿಸಿದ್ದಾರೆ. ಸೆರಗು ಜಾಸ್ತಿ ಮುಚ್ಚಿಕೊಂಡಷ್ಟೂ ಅವರು “ಸ್ವಾಮಿ ಗಿರಾಕಿ” ಎಂದು ಜನ ಗುರಿತಿಸುತ್ತಾರೆ-ಆದರೆ ಎದುರಿಗೆ ಹೇಳೋದಿಲ್ಲ ಅಷ್ಟೆ!

ಶಂಕರರು, ಅವರ ಪರಾತತ್ವದ ಜಾಡುಹಿಡಿದ ನಿರಾಕಾರ ಆರಾಧನೆ, ಸನ್ಯಾಸ ಧರ್ಮ, ಶಂಕರರ ಅನುಶಾಸನ ಇವೆಲ್ಲ ಗಾಳಿಗೆ ಎಲ್ಲೋ ಹಾರಿಹೋಗಿ, ಈಗ ತೊನೆಯಪ್ಪ ಮಾಡಿದ್ದೇ ಶಾಸನ ಎಂಬಂತಾಗಿದೆ.

ಚಾತುರ್ಮಾಸ ಎಂಬುದು ಸನ್ಯಾಸಿಗೆ ಆಧ್ಯಾತ್ಮಿಕ ಪರ್ವಕಾಲ. ಆದಷ್ಟೂ ಜನಸಂಪರ್ಕವನ್ನು ಕಡಿಮೆ ಇರಿಸಿಕೊಂಡು ಜಪ-ತಪ-ಅನುಷ್ಠಾನಗಳಲ್ಲಿ ನಿರತರಾಗಿರುತ್ತ, ಆಡಂಬರಗಳನ್ನು ನಡೆಸದೆ ಅತ್ಯಂತ ಸರಳವಾಗಿ ಆಚರಿಸಬೇಕಾದ ಕಾಲ. ಹಾವಾಡಿಗ ಮಠ ಅದಕ್ಕೆ ತದ್ವಿರುದ್ಧ ಇಲ್ಲಿ ಇಡೀ ಮಠವನ್ನು ಮದುವೆ ಮಂಟಪದಂತೆ ಅಲಂಕರಿಸಲಿಕ್ಕೇ ಲಕ್ಷಗಟ್ಟಲೆ ವ್ಯಯಿಸಲಾಗಿದೆ. ನಿತ್ಯ ನಡೆಯುವ ಹಲವು ಸಭಾ ಕಾರ್ಯಕ್ರಮಗಳಿಗೆ ಹಲವು ಕಾವಿ ವೇಷದವರನ್ನು ಒತ್ತಾಯಪೂರ್ವಕವಾಗಿ ಕರೆಸಲಾಗುತ್ತದೆ. ಬಂದವರಿಗೆ ಹಾರ-ತುರಾಯಿ-ಇನಾಮು ಎಲ್ಲವೂ ಉಂಟು.

ಹಾಡು, ಸುಂದರಾಂಗಿಯರ ನರ್ತನ, ಛದ್ಮವೇಷ, ಚಿತ್ರಕಲೆ ಚಾತುರ್ಮಾಸಕ್ಕೆ ಕುಳಿತ ಸನ್ಯಾಸಿಗೆ ಇವೆಲ್ಲವುಗಳ ಅಗತ್ಯವಿದೆಯೇ? ಜನರಿಗೆ ಅದನ್ನು ಬಡಿಸಬೇಕೆಂದು ಯತಿಧರ್ಮದಲ್ಲಾಗಲೀ ಶಂಕರ ಶಾಸನದಲ್ಲಾಗಲೀ ಹೇಳಿದೆಯೇ? ನಾಳೆಯದಿನ ಭಕ್ತರು ಚಾತುರ್ಮಾಸದಲ್ಲಿ ಈರುಳ್ಳಿ ಪಕೋಡ ಬಯಸಿದರೆ ಸನ್ಯಾಸಿಯಾದವ ಅದನ್ನೂ ಕೊಡಬಹುದೇ? ಅಥವಾ ಕೊಡಬೇಕೇ?

ಅನಗತ್ಯವಾದ ಹಲವು ಪುಸ್ತಕಗಳ ಬಿಡುಗಡೆ ಕಾಣುತ್ತದೆ. ಚಿತ್ರವಿಚಿತ್ರ ಪ್ರಶಸ್ತಿಗಳನ್ನು ತಮಗೆ ಬೇಕಾದವರಿಗೆ ಕೊಡುವ ಮೂಲಕ ಬಾಲಬಡುಕರ ಬಳಗವನ್ನು ಹೆಚ್ಚಿಸಿಕೊಳ್ಳುವ ವಿಶ್ವಪ್ರಯತ್ನದ ಸಾಕ್ಷಾತ್ಕಾರ ಕಣ್ಣಿದ್ದವರಿಗೆ ಆಗುತ್ತದೆ. ಇಷ್ಟಕ್ಕೆಲ್ಲ ಕಡಿಮೆಯೆಂದರೂ ತಿಂಗಳಿಗೆ ಕೋಟಿಯಂತೆ ಎರಡು ಕೋಟಿಗಳಾದರೂ ಬೇಕು; ಯಾರೋ ರಾಜಕಾರಣಿ ಕೊಡುತ್ತೇನೆ ಎಂದಿರಬಹುದು ಬಿಡಿ. ಅದೇ ಹಣವನ್ನು ಗೋವುಗಳಿಗಾಗಿ ಬಳಸಬಹುದಿತ್ತಲ್ಲ?

“ಒಳ್ಳೇ ಚೆನ್ನಾಗಾಯ್ತಲ್ಲ, ಗೋವುಗಳಿಗೆ ಬಳಸಿದರೆ ಅವುಗಳೇನು ಜೈಲ್ ಭರೋ ಚಳುವಳಿಗೆ ಸಹಾಯ ಮಾಡುತ್ತವೇನು?” ಎಂದು ಗುಮ್ಮಣ್ಣ ಹೆಗಡೇರು ಪ್ರಶ್ನೆ ಹಾಕಿದ್ದಾರೆ-ಎಂಬಲ್ಲಿಗೆ ಈ ಲೇಖನ ಸಾಂಗವಾಯಿತು ಎನ್ನುತ್ತಿದ್ದೇನೆ.

Thumari Ramachandra

source: https://www.facebook.com/groups/1499395003680065/permalink/1801386483480914/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s