ಸಾಕ್ಷ್ಯ ನಾಶ ಮಾಡುವ ರಾಜಕಾರಣಿಗಳಿವರು

ಸಾಕ್ಷ್ಯ ನಾಶ ಮಾಡುವ ರಾಜಕಾರಣಿಗಳಿವರು
ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವ-ಮಾನಶುಃ ।
ಪರೇಣ ನಾಕಂ ನಿಹಿತಂ ಗುಹಾಯಾಂ ವಿಭ್ರಾಜ-ದೇತದ್ಯತಯೋ ವಿಶಂತಿ ॥ 12-3-4॥

ವೇದಂತವಿಜ್ಞಾನ-ಸುನಿಶ್ಚಿತಾರ್ಥಾಃ ಸನ್ಯಾಸ-ಯೋಗಾದ್ಯತಯ-ಶ್ಶುದ್ಧಸತ್ತ್ವಾಃ ।
ತೇ ಬ್ರಹ್ಮಲೋಕೇ ತು ಪರಾಂತಕಾಲೇ ಪರಾಮೃತಾತ್ಪರಿಮುಚ್ಯಂತಿ ಸರ್ವೇ ॥ 12-3-5॥

ದಹ್ರಂ ವಿಪಾಪಂ ಪರಮೇಽಶ್ಮಭೂತಂ ಯತ್ಪುಂಡರೀಕಂ ಪುರಮಧ್ಯಸಗ್ಗುಸ್ಥಮ್।
ತತ್ರಾಪಿ ದಹ್ರಂ ಗಗನಂ ವಿಶೋಕ-ಸ್ತಸ್ಮಿನ್ ಯದಂತಸ್ತ-ದುಪಾಸಿತವ್ಯಮ್ ॥ 12-3-6॥

ಯೋ ವೇದಾದೌ ಸ್ವರಃ ಪ್ರೋಕ್ತೋ ವೇದಾಂತೇ ಚ ಪ್ರತಿಷ್ಠಿತಃ ।
ತಸ್ಯ ಪ್ರಕೃತಿ-ಲೀನಸ್ಯ ಯಃ ಪರಸ್ಸ ಮಹೇಶ್ವರಃ ॥ 12-3-7॥

ನಾರಾಯಣೋಪನಿಷತ್ತಿನ ಈ ಶ್ಲೋಕ ಭಾಗಗಳನ್ನು ನೀವೆಲ್ಲ ಅರ್ಥಸಹಿತ ಬಲ್ಲಿರಿ ಎಂದು ಭಾವಿಸುತ್ತೇನೆ. ಈ ಶ್ಲೋಕಭಾಗಗಳು ಸನ್ಯಾಸಿಯ ಲಕ್ಷಣಗಳನ್ನು ಹೇಳುತ್ತವೆ. ’ದಹ್ರ’ ಎಂಬ ಪದವನ್ನು ಗಮನಿಸಿ. ಯಾವುದು ದಹ್ರ? ದಹ್ರ ಎಂಬುದು ಹೃದಯ ಕುಹರ. ಹೃದಯದಲ್ಲಿದ್ದೂ ಹೃದಯಕ್ಕೆ ಭಿನ್ನವಾದ ಯೋಗದ ಜಾಗವದು. ಶರೀರದಲ್ಲಿ ಯೋಗ ಚಕ್ರಗಳು ಹೇಗೆ ಮೇಲುನೋಟಕ್ಕೆ ಕಾಣವೋ ಹಾಗೆಯೇ ಈ ದಹ್ರ. ದಹ್ರದಲ್ಲಿಯೇ ಪರಮಾತ್ಮ ಆತ್ಮನ ರೂಪದಲ್ಲಿ ಚೆಕ್ ಪೋಸ್ಟ್ ಹಾಕಿರುತ್ತಾನಂತೆ!

ಶ್ರುತಿಯಲ್ಲಿ ದಹ್ರದ ರೂಪ ವಿವರಣೆಯನ್ನೂ ಕೊಟ್ಟಿದ್ದಾರೆ-ಅದು ತಲೆಕೆಳಗಾದ ಕಮಲದ ಮೊಗ್ಗಿನಂತಿರುತ್ತದಂತೆ! ದಹ್ರದಲ್ಲುಯೇ ಇದ್ದು ಎಲ್ಲವನ್ನೂ ಬಲ್ಲವನು ಪರಮಾತ್ಮ! ಅಲ್ಲಿಂದಲೇ ಅನಂತತ್ವ ಆರಂಭಗೊಳ್ಳುತ್ತದೆ. ಅನಂತತ್ವದ ಸೂತ್ರ ಅಲ್ಲಿದೆ. ಅದನ್ನು ದರ್ಶಿಸಿದರೆ ಮೋಹ ಕ್ಷಯ[ಅಂದರೆ ಮೋಕ್ಷ]ವಾಗಿ ಅನಂತತ್ವ ಪ್ರಾಪ್ತವಾಗುತ್ತದೆ.

ಮುಕ್ತಿಯ ಮಹತ್ವವನ್ನು ತಿಳಿಸುತ್ತಾ ಶ್ರೀ ಆದಿಶಂಕರರು ಬಹಳ ಧೀರೋದಾತ್ತ ಘೋಷಣೆಯನ್ನು ಹೀಗೆ ಮಾಡುತ್ತಾರೆ-

ಪಠಂತು ಶಾಸ್ತ್ರಾಣಿ ಯಜಂತು ದೇವಾನ್
ಕುರ್ವಂತು ಕರ್ಮಾಣಿ ಭಜಂತು ದೇವತಾಃ|
ಆತ್ಮೈಕ್ಯ ಬೋಧೇನ ವಿನಾ ವಿಮುಕ್ತಿ-
-ರ್ನ ಸಿಧ್ಯತಿ ಬ್ರಹ್ಮ ಶತಾಂತರೇಪಿ ||೬||

ಪಠಂತು ಶಾಸ್ತ್ರಾಣಿ [=ಶಾಸ್ತ್ರಗಳನ್ನು ಓದುವುದು], ಯಜಂತು ದೇವಾನ್ [=ದೇವತೆಗಳನ್ನು ಪೂಜಿಸುವುದು]
ಕುರ್ವಂತು ಕರ್ಮಾಣಿ [=ಕರ್ಮಗಳನ್ನು ಮಾಡುವುದು], ಭಜಂತು ದೇವತಾ: [=ದೇವತೆಗಳನ್ನು ಸ್ತುತಿಸುವುದು]
ಆತ್ಮ್ಯೆಕ್ಯ ಬೋಧೇನ ವಿನಾ ವಿಮುಕ್ತಿಃ [= ಆತ್ಮಜ್ಞಾನ[ಬ್ರಹ್ಮ ಸಾಕ್ಷಾತ್ಕಾರೆ] ವಿಲ್ಲದೆ ಮುಕ್ತಿಯಿಲ್ಲ]
ನ ಸಿಧ್ಯತಿ ಬ್ರಹ್ಮ ಶತಾಂತರೇಪಿ [= ನೂರು ಚತುರ್ಮುಖ ಬ್ರಹ್ಮರು ಆಗಿಹೋದರೂ ಸಿದ್ಧಿಸದು]

“ಕೇವಲ ಶಾಸ್ತ್ರಗ್ರಂಥಗಳನ್ನು ಓದುವುದರಿಂದ, ದೇವತೆಗಳನ್ನು ಪೂಜಿಸುವುದರಿಂದ, ಕರ್ಮಾನುಷ್ಠಾನಗಳನ್ನು ನಡೆಸುವುದರಿಂದ, ದೇವತೆಗಳನ್ನು ಸ್ತುತಿಸುವುದರಿಂದ, ಇದ್ಯಾವುದರಿಂದಲೂ ಮುಕ್ತಿಯು ದೊರೆಯುವುದಿಲ್ಲ ಎಂದು ಶಂಕರರು ಹೇಳುತ್ತಾರೆ. ಹಾಗಾದರೆ ಮುಕ್ತಿಯ ಮಾರ್ಗ ಯಾವುದು?

ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸಿ ಪರಮಾರ್ಥ ಜ್ಞಾನದೆಡೆಗೆ ಒಡ್ಡಿಕೊಳ್ಳದಿದ್ದಲ್ಲಿ ನೂರಾರು ಚತುರ್ಮುಖ ಬ್ರಹ್ಮರು ಬಂದು ಹೋದಷ್ಟು ಸಮಯ ಕಳೆದರೂ ಮೋಕ್ಷ ಪ್ರಾಪ್ತವಾಗುವುದಿಲ್ಲ ಎಂದು ಹೇಳುತ್ತಾರೆ. ಆತ್ಮ ಸಾಕ್ಷಾತ್ಕಾರದಿಂದ ಮಾತ್ರವೇ ನೆಮ್ಮದಿ, ಮುಕ್ತಿ ಎಂದಾದರೆ ನಾವು ದಿನವೂ ಮಾಡುವ ಪೂಜೆ, ಮಡಿ, ಸಾಂಪ್ರದಾಯಿಕ ಆಚರಣೆಗಳು, ಹವನಗಳು, ಪರೋಪಕಾರ, ದೇಶಸೇವೆ, ಪ್ರಾಮಾಣಿಕತೆ ಇದೆಲ್ಲಾ ವ್ಯರ್ಥವೇ? ಹಾಗಾದರೆ ಇದನ್ನೆಲ್ಲ ಯಾಕೆ ನಡೆಸಬೇಕು? ಎಂಬ ಪ್ರಶ್ನೆ ಅತ್ಯಂತ ಸಹಜ.

ನಾವು ನಿತ್ಯವೂ ಆಚರಿಸುವ-ಅನುಸರಿಸುವ ಈ ಎಲ್ಲಾ ಕರ್ಮಗಳೂ ನಮ್ಮ ನಿರ್ಧಾರಗಳನ್ನು ಬಲಗೊಳಿಸುವಂತಹುದು. ನಮ್ಮಲ್ಲಿ ಸಾಮರ್ಥ್ಯವನ್ನು ತುಂಬುವಂತಹುದು. ಹಾಗಾಗಿ ಕರ್ಮಗಳನ್ನು ಆಚರಿಸಲೇಬೇಕಾಗುತ್ತದೆ. ಕರ್ಮಗಳಿಂದ ದೊರೆಯುವ ಫಲವು ಇಲ್ಲಿ ನಗಣ್ಯ.

’ಕರ್ಮವನ್ನು ಮಾಡು ಅದರ ಫಲಾಫಲಗಳನ್ನು ನನಗೆ ಬಿಡು’ ಎಂದು ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ’ನನಗೆ ಬಿಡು’ ಎಂದರೆ ಫಲದ ಅಪೇಕ್ಷೆಯನ್ನು ಬಿಡು ಎಂದು ಅರ್ಥವೇ ಹೊರತು ಮಾಡಬಾರದ್ದನ್ನೆಲ್ಲಾ ಮಾಡಿ ಫಲಕ್ಕೆ ಮಾತ್ರ ಕೃಷ್ಣನನ್ನು ಹೊಣೆಯಾಗಿಸು ಎಂದರ್ಥವಲ್ಲ. ವೇದ-ಶಾಸ್ತ್ರ ಓದದ ನಮ್ಮ ’ಮಹಾಸ್ವಾಮಿಗಳು’ ಕೃಷ್ಣನ ಮಾತನ್ನು ಅರ್ಥಮಾಡಿಕೊಂಡ ರೀತಿ ಬೇರೆಯೇ ಇದೆ; ಹಾರೋದು ತನ್ನ ಕೆಲಸ, ಅದರಲ್ಲಿ ಪ್ರತಿಫಲಾಪೇಕ್ಷೆಯಿಲ್ಲ-ಮಕ್ಕಳನ್ನು ಕೊಡೋದು ಬಿಡೋದು ಮತ್ತು ಹಾರಿದ ನಂತರದ ಅಡ್ಡ ಪರಿಣಾಮಗಳು ಎಲ್ಲವೂ ಕೃಷ್ಣಾರ್ಪಣ ಎಂದು ಅವರು ಭಾವಿಸಿದ್ದಾರೆ ಪಾಪ!

ಕೃಷ್ಣನು ಇಲ್ಲಿ ಜ್ಞಾನದ ಸಂಕೇತವೇ ಆಗಿದ್ದಾನೆ. ವೈಜ್ಞಾನಿಕರು ಇಂದು ಮಂಗಳನ ಅಂಗಳಕ್ಕೆ ಹೆಜ್ಜೆಯಿಟ್ಟಿದ್ದಾರೆ; ಅದು ಅವರ ಸತತ ಪರಿಶ್ರಮದ ಕರ್ತವ್ಯಕ್ಕೆ ದೊರೆತ ಫಲ-ಭಗವಂತ ಕೊಟ್ಟ ಫಲ. ಪ್ರಯತ್ನವನ್ನೇ ಮಾಡದಿದ್ದರೆ ಅದು ಸಾಧ್ಯವೇ ಆಗುತ್ತಿರಲಿಲ್ಲ ಸರಿಯಷ್ಟೇ? ಲೌಕಿಕವಾಗಿ ನಾವು ಹಲವು ಸಾಧನೆಗಳನ್ನು ಕಂಡಂತೆ ಅಲೌಕಿಕವಾಗಿ ಆತ್ಮೋನ್ನತಿಗೆ ಸಾಧನೆ ಮಾಡಬೇಕಾಗುತ್ತದೆ. ಇಂದಿನ ನಿತ್ಯ ಜೀವನದ ಜಂಜಡದಲ್ಲಿ ಆತ್ಮಜ್ಞಾನ ಪಡೆಯೋದು ಈರುಳ್ಳಿ ಉಪ್ಪಿಟ್ಟು, ಉದ್ದಿನ ಬೋಂಡ ತಿಂದಷ್ಟು ಸುಲಭದ ಮಾತಲ್ಲ!

ಪ್ರಾಜ್ಞರು ಶ್ರುತಿ-ಸ್ಮೃತಿಗಳ ಆಧಾರದಲ್ಲಿ ಯಾವುದು ಪ್ರವೃತ್ತಿ ಮತ್ತು ಯಾವುದು ನಿವೃತ್ತಿ ಎಂದು ಹೀಗೆ ಹೇಳಿದ್ದಾರೆ-

ನಮ್ಮ ನಿತ್ಯ -ನೈಮಿತ್ತಿಕ-ಕಾಮ್ಯ ಕರ್ಮಗಳು. ಉಪಾಸನೆ, ಸಾಂಪ್ರದಾಯಿಕ ಆಚರಣೆಗಳು, ಹೊಟ್ಟೆಪಾಡಿನ ಕೆಲಸಗಳು ಮುಂತಾದುವು ಎಲ್ಲವೂ ಪ್ರವೃತ್ತಿ ಧರ್ಮ ಎನಿಸುತ್ತದೆ.

ವೈರಾಗ್ಯ, ಸನ್ಯಾಸ, ಅಷ್ಟಾಂಗ ಯೋಗಗಳು [ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ] ಮುಂತಾದುವು ನಿವೃತ್ತಿ ಧರ್ಮ ಎನಿಸುತ್ತದೆ.

ಬೃಹದಾರಣ್ಯಕ ಉಪನಿಷತ್ತಿನ ಭಾಷ್ಯ-ಯಾಜ್ಞವಲ್ಕ್ಯರು ಮೈತ್ರಾದೇವಿಗೆ ಹೇಳುತ್ತಾರೆ, ” ಕರ್ಮದಿಂದ ಫಲವು ಲಭಿಸುವುದು ಮತ್ತು ಆ ಫಲವು ಧನಕ್ಕೆ ಸಮಾನವಾದುದರಿಂದ ಕರ್ಮದಿಂದ ಮುಕ್ತಿ ಸಾಧ್ಯವಿಲ್ಲ.”

ತತ್ತ್ವ ಚಿಂತನೆಗಳನ್ನೆಲ್ಲ ಕಟ್ಟಿಕೊಳ್ಳುವ ಗೋಜಿಗೆ ನಮ್ಮ ’ಮಹಾಸ್ವಾಮಿ’ಗಳೇಕೆ ಹೋಗಬೇಕು? ಅವರು ಎಲ್ಲವನ್ನೂ ತಾವೇ ಬಲ್ಲರು; ಮಿಣುಕುಹುಳದಂತೆ ಅವರ ಅಂಡಿನಲ್ಲೇ ಬೆಳಕನ್ನು ಸೂಸಬಲ್ಲ ಅವತಾರಿಗಳು. ಸಮಸ್ಯೆಯೆಂದರೆ ಅವರ ಅಂಡಿನಲ್ಲಿ ಬೆಳಕು ಬರುವ ಬದಲು ಅವರ ಬುಸ್ಸಪ್ಪನ ಬಾಯಿಂದ ಬಿಳಿಯ ಲೋಳೆ ಸುರಿಸುವುದು!

ಈಗ ನಾವು ಲೌಕಿಕತೆಯತ್ತ ಮುಖ ಮಾಡೋಣ. ರಾಜಪ್ರಭುತ್ವದಲ್ಲಿ ರಾಜ್ಯವಾಳುವ ರಾಜನೇ ಕಳ್ಳನಾಗಿ ಮಾಡಬಾರದ ಕೆಲಸಗಳಲ್ಲಿ ಭಾಗಿಯಾದಾಗ ಪ್ರಜೆಗಳು ನ್ಯಾಯ ಕೇಳಲಿಕ್ಕೆ ಹೋದರೆ, ನ್ಯಾಯದಾನ ಅವನ ಅಧೀನದಲ್ಲೇ ಬರುವುದರಿಂದ ನ್ಯಾಯ ನೀಡುವವರು ರಾಜ ಹೇಳಿದಂತೆ ನಡೆದುಕೊಳ್ಳಬೇಕಾಗುತ್ತದೆ. ರಾಜ ತನಗೆ ಬೇಕಾದ್ದೇ ನ್ಯಾಯ ಎಂದರೆ ಪ್ರಜೆಗಳು ಅದನ್ನು ಒಂದೋ ತೆಪ್ಪಗೆ ಒಪ್ಪಿಕೊಳ್ಳಬೇಕು ಅಥವಾ ಬಹಳ ದೊಡ್ಡ ಮಟ್ಟದಲ್ಲಿ ದಂಗೆಯೆದ್ದು ರಾಜನನ್ನೇ ಆಲ್ಲಾಡಿಸಬೇಕು-ಎರಡೇ ಆಯ್ಕೆಗಳು ಸಿಗುತ್ತವೆ.

ಹಾಗೆಲ್ಲ ಆಗಬಾರದು ಎಂಬ ಕಾರಣಕ್ಕೇನೆ ಹಿಂದೆಲ್ಲ ರಾಜಗುರು ಎಂಬ ಸನ್ಯಾಸಿಯನ್ನು ಧರ್ಮಮಾರ್ಗ ಬೋಧನೆಗೆ ಇರಿಸಿಕೊಳ್ಳುತ್ತಿದ್ದರು. ರಾಜ ನಡತೆಗೆಟ್ಟ ಅಥವಾ ಕುಲಗೆಟ್ಟ ಅಥವಾ ಸರಿಯಾಗಿ ರಾಜ್ಯಭಾರ ನಡೆಸುತ್ತಿಲ್ಲ ಎಂಬ ಪ್ರಮೇಯ ಬಂದರೆ ಪ್ರಧಾನ ಮಂತ್ರಿ ರಾಜಗುರುವಿನ ಸಲಹೆ ಕೇಳಲು ಅವರನ್ನು ಕರೆಸಿಕೊಳ್ಳುತ್ತಿದ್ದ. ರಾಜಗುರುವು ತಪ್ಪು ಮಾಡೋದಿಲ್ಲ ಅಂತ ಯಾವ ಗ್ಯಾರಂಟಿ?

ಸಾಮಾನ್ಯವಾಗಿ ಸನ್ಯಾಸಿಗಳು ಜನವಿರಳ ಕಾಡಿನಲ್ಲಿ ಬದುಕಿ, ಯತಿನಿಯಮಗಳನ್ನು ಪಾಲಿಸುತ್ತಿದ್ದದ್ದರಿಂದ ಅವರಲ್ಲಿ ತಪ್ಪಿ ನಡೆಯುವ ಪ್ರಮೇಯ ಅತ್ಯಂತ ಕಡಿಮೆ ಇತ್ತು. ವ್ರತ, ನಿಯಮ, ಅನುಷ್ಠಾನಪರರಾಗಿರುತ್ತಿದ್ದ ಅವರಲ್ಲಿ ಸ್ವಾರ್ಥಪರತೆ ಇರುತ್ತಿರಲಿಲ್ಲ. ತಾನು-ತನ್ನದು ಎಂಬ ಭಾವ ಕಳೆದುಹೋಗುತ್ತಿತ್ತು.

ಪ್ರಜೆಗಳೆಲ್ಲ ದೇವರ ಮಕ್ಕಳೇ ಎಂಬ ಭಾವನೆ ಇರುತ್ತಿದ್ದು ಅವರೆಲ್ಲರ ಒಳಿತಿಗಾಗಿ ಧರ್ಮದ ನೆಲೆಗಟ್ಟಿನಲ್ಲಿ ಸಲಹೆಗಳನ್ನು ನೀಡುತ್ತಿದ್ದ ಆ ಸನ್ಯಾಸಿ. ರಾಜನ ಅಥವಾ ರಾಜ್ಯದ ಬಿಕ್ಕಟ್ಟು ಪರಿಹರಿಸಬಲ್ಲ ವ್ಯಕ್ತಿ ರಾಜಗುರುವೆನಿಸಬಲ್ಲನೇ ಹೊರತು ಅಡ್ಡಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುವ ಕಚ್ಚೆಹರುಕ ಕಿರಾತಕ ತೊನೆಯಪ್ಪ ರಾಜಗುರು ಎಂಬುದು ತೆಗೆದುಹಾಕಿದ ಸಂಗತಿ.

ಪ್ರಜಾಪ್ರಭುತ್ವದ ಒಂದು ಬಹುದೊಡ್ಡ ತೊಡಕೇನೆಂದರೆ ಇಲ್ಲಿಯೂ ಸಹ ಶಾಸಕಾಂಗದ ಅಧಿಕಾರ ವ್ಯಾಪ್ತಿಯಲ್ಲಿ ನ್ಯಾಯಾಂಗ ಕಾರ್ಯಾಂಗಗಳು ಕೆಲಸ ಮಾಡುವುದು. ನ್ಯಾಯಾಂಗ ಮತ್ತು ಕಾರ್ಯಾಂಗಗಳ ಕೆಲಸ ಕಾರ್ಯಗಳಲ್ಲಿ ಶಾಸಕಾಂಗದವರ ಹಸ್ತಕ್ಷೇಪ ಇಲ್ಲವೆಂದು ಸಾಬೀತು ಪಡಿಸಲಿಕ್ಕೆ ಸಾಧ್ಯವೇ ಆಗುವುದಿಲ್ಲ. ದಾಖಲೆಗಳು ಇಲ್ಲವೆಂದರೆ ನ್ಯಾಯಾಂಗ ಸರಿಯಾದ ನಿರ್ಣಯ ತೆಗೆದುಕೊಳ್ಳೋದು ಸಾಧ್ಯವಾಗೋದಿಲ್ಲ. ತಪ್ಪಿಲ್ಲವೆಂದೇ ಅನಿಸುತ್ತಿದ್ದರೆ ಕಾರ್ಯಾಂಗ ತನ್ನ ಪ್ರೊಸಿಜರ್ ನಡೆಸೋದಕ್ಕೆ ಸಾಧ್ಯವಾಗೋದಿಲ್ಲ.

ಕಣ್ಣೆದುರು ನಡೆಯುವ ಘಟನೆಗಳನ್ನು ನಡೆದೇ ಇಲ್ಲವೆಂದು ಹೇಳುವುದು ಹಸಿ ಸುಳ್ಳು ಮತ್ತು ಮಹಾಪರಾಧ. ಆದರೆ ನಡೆದೇ ಇಲ್ಲವೆಂಬಂತೆ ಬಿಂಬಿಸಿ ಸುಳ್ಳನ್ನೇ ಸತ್ಯ ಮಾಡೋದು ನವಯುಗದ ಹಲವು ರಾಜಕಾರಣಿಗಳ ಜಾಯಮಾನ. ರಾಜಕಾರಣಿಗಳ ಧೂರ್ತ ವರಸೆಗಳನ್ನೆಲ್ಲ ಕಲಿತುಕೊಂಡ ತೊನೆಯಪ್ಪನವರು ಅದನ್ನು ಅಗತ್ಯಕ್ಕಿಂತ ಹೆಚ್ಚಾಗಿ ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ.

ತನ್ನಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದ ತಕ್ಷಣ ಮೊದಲು ಅವ ಆರಂಭಿಸಿದ್ದು ಸಾಕ್ಷ್ಯ ನಾಶ. ಹೇಳಿಕೇಳಿ ತೊನೆಯಪ್ಪನವರು ಮಹಾಸ್ವಾಮಿಗಳು, ಅವರನ್ನು ಹಾಗೆಲ್ಲ ಏಕಾಏಕಿ ಎಳೆದೊಯ್ಯುವಂತಿಲ್ಲ; ಯಾಕೆಂದರೆ ಅವರು ಸಾರ್ವಜನಿಕ ವ್ಯಕ್ತಿ ಎಂದಾಗಿಬಿಟ್ಟಿತ್ತು. ತೊನೆಯಪ್ಪನವರು ’ಮಹಿಳಾ ಸಬಲೀಕರಣ’ದಲ್ಲಿ ಸಾರ್ವಜನಿಕ ವ್ಯಕ್ತಿ ಹೌದು!

ಹಲವರಿಗೆ ಹೋರಿ ಹಾರುತ್ತಲೇ ಇರುವುದರಿಂದ ಶೀಲಕ್ಕೆ ಸಂಬಂಧಿಸಿದಂತೆ ಅದನ್ನು ಖಾಸಗಿಯಾಗಿ ಯಾರದೋ ಒಬ್ಬರ ಹೋರಿ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ; ಹಲವರಿಗೆ ಮಿಂಡನಾಗಿ ಕೆಲಸ ಮಾಡಿದ್ದರಿಂದ ಸಾರ್ವಜನಿಕ ಹೋರಿ ಎಂದು ಒಪ್ಪದೇ ವಿಧಿಯಿಲ್ಲ. ಆದರೆ ಆಳರಸರ ಲೆಕ್ಕದಲ್ಲಿ ಸಾರ್ವಜನಿಕ ವ್ಯಕ್ತಿ ಎಂಬುದಕ್ಕೆ ಬೇರೆ ಅರ್ಥವ್ಯಾಪ್ತಿ ಇದೆ.

ಸಾರ್ವಜನಿಕ ಶೌಚಾಲಯವಿದ್ದಂತೆ ಈ ’ಮಹಾಸ್ವಾಮಿ’ಗಳೂ ಸಾರ್ವಜನಿಕವಾದ್ದರಿಂದ ಪೋಲೀಸರು ಹಾಗೆಲ್ಲ ಎಳೆದೊಯ್ಯಲು ಸಾಧ್ಯವಿಲ್ಲ ಎಂದಾಯ್ತು. ಮಾವಂದಿರು ಬರ್ತಾರೆ ಎಂಬುದನ್ನು ಮೊದಲೇ ತಿಳಿದುಕೊಂಡಿದ್ದ ತೊನೆಯಪ್ಪನವರು ಅವರನ್ನೆಲ್ಲ ನಿಗ್ರಹಿಸಬಲ್ಲವರಿಗೆ ಐವತ್ತು ಕೋಟಿಯ ಸೂಟ್ ಕೇಸ್ ತಳ್ಳಿದ್ದು ಈಗ ಇತಿಹಾಸ. ಐವತ್ತು ಕೋಟಿ ನುಂಗಿಕೊಂಡವರು ಹೆಬ್ಬಾವು ಕಡೆವೆ-ಜಿಂಕೆಗಳನ್ನು ನುಂಗಿ ಮಲಗಿದಂತೆ ಮಲಗಿಬಿಟ್ಟರು. ಅವರ ಅಪ್ಪಣೆಯಂತೆ ಉಳಿದ ವ್ಯವಹಾರಗಳು ಹೊರತೋರಿಕೆಗಷ್ಟೆ ನಡೆದವು.

ಹೀಗಾಗಿ ನೇರವಾಗಿ ಎಳೆದೊಯ್ಯಲಿಲ್ಲ, ಮಾವಂದಿರು ಬಂದಾಗಲೂ “ಚತುರ್ಮೋಸದಲ್ಲಿದ್ದೇವೆ, ಮುಗಿಸಿ ಬರ್ತೇವೆ” ಎಂದು ತಪ್ಪಿಸಿಕೊಂಡ, “ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ” ಎನ್ನುತ್ತ ವಿಚಾರಣೆಗೆ ಹಾಜರಾಗೋದನ್ನೂ ತಿಂಗಳುಗಟ್ಟಲೆ ಮುಂದಕ್ಕೆ ಹಾಕಿಸಿಕೊಂಡ.

ಈ ನಡುವೆ ದಾರಿಗುಂಟ ಏಕಾಂತ ನಡೆದ ಸ್ಥಳಗಳಲ್ಲಿ ಮತ್ತು ಮಠದ ಶಾಖೆಗಳಲ್ಲಿ ಎಲ್ಲೆಲ್ಲಿ ಏಕಾಂತ ನಡೆದಿತ್ತೋ ಅಲ್ಲೆಲ್ಲ ಹಲವು ಮಾರ್ಪಾಟುಗಳನ್ನು ಮಾಡಲಾಯ್ತು. ಏಕಾಂತ ನಡೆದಿದ್ದ ಕೋಣೆಗಳನ್ನೇ ಕೆಡವಿ ಹಾಕಿದ್ದೂ ನಡೆಯಿತು. ತಾವು ಹೇಳುವ ಚಹರೆಯ ಕೋಣೆಯೇ ಇಲ್ಲದಿದ್ದರೆ ಪರಿಶೀಲಕರಿಗೆ ದೂರುದಾರರು ಯಾವ ಕೋಣೆಯನ್ನು ತೋರಿಸ್ತಾರೆ? ಕಾನ್ಕುಳಿ ಮಠದಲ್ಲಿ, ದಕ್ಷಿಣದಲ್ಲಿ ಒಂದೆರಡು ಕಡೆ ನಡೆದದ್ದೆಲ್ಲ ಹಾಗೇನೆ. ತೋರಿಸಲು ಹೋದವರು ಬೇಸ್ತುಬಿದ್ದರು! ಅಲ್ಲಿ ಅವರು ಹೇಳಿದ ಕೋಣೆಗಳೇ ಕಂಡುಬರಲಿಲ್ಲ.

ಜಗದ್ಗುರು ತೊನೆಯಪ್ಪನವರು ತಮ್ಮ ಅಪರಾಧ ಸಾಬೀತಾಗುತ್ತದೆ ಎಂದು ಗೊತ್ತಾದ ಕ್ಷಣದಲ್ಲಿ ಕಿಚನ್ ಕ್ಯಾಬಿನೆಟ್ಟಿನಲ್ಲಿ ಚಂಬು-ಲೋಟ, ತಗಡುಗಳ ಜೊತೆಗೆ ಮಾತನಾಡಿಕೊಂಡು ತಮ್ಮಲ್ಲಿ ಆಧಾರವಾಗಿ ಸಿಗಬಹುದಾದ ಎಲ್ಲ ವಸ್ತು, ಉಪಕರಣಗಳನ್ನೂ ನಾಶ ಮಾಡಿದರು. ಸಮಸ್ಯೆ ಎಂದರೆ ಮೊಬೈಲ್ ಮತ್ತು ಅಂತರ್ಜಾಲದಲ್ಲಿ ಮಾತ್ರ ಕೆಲವು ಸಾಕ್ಷ್ಯಗಳು ಇರುವುದನ್ನು ಸಂಪೂರ್ಣವಾಗಿ ತೆಗೆಸಿ ಹಾಕಲಿಕ್ಕೆ ಅವರಿಂದ ಸಾಧ್ಯವಾಗಲಿಲ್ಲ.

ತುಮರಿಗೆ ಬಂದ ಮಾಹಿತಿಯಂತೆ ಹಸುವಿನ ಕಿವಿಯೂರಿನಲ್ಲಿ ಮಲ್ಲಿಕಾ ಶರಬತ್ತಿನ ಅತಿ ಹತ್ತಿರದಲ್ಲಿ ನೆಲದ ಕಟ್ಟೆಯಲ್ಲಿ ಕುಳಿತು ಕಣ್ಣರಳಿಸಿ ’ರಹಸ್ಯ’ ಮಾತನಾಡಲು ಪ್ರಯತ್ನಿಸಿದ ಕೆಲವು ಫೋಟೋಗಳು ಯಾವುದೋ ವೆಬ್ ಸೈಟಿನಲ್ಲಿ ಇದ್ದವಂತೆ! ಆ ವೆಬ್ ಸೈಟಿನವರಿಗೆ ಕಾಂಚಾಣ ಕೊಟ್ಟು ಅದನ್ನೂ ತೆಗೆಸಿಬಿಟ್ಟಿದ್ದಾರೆ ಮಹಾಸ್ವಾಮಿಗಳು!

ಆರೋಪಿ ’ಮಹಾಸ್ವಾಮಿ’ ಎಂಬ ಕಾರಣಕ್ಕೆ, ಆರೋಪಿಯಲ್ಲಿರುವ ಸಂವಹನ ಉಪಕರಣಗಳನ್ನು ಕಸಿದುಕೊಳ್ಳುವ ಬದಲು ದೂರುದಾರರ ಉಪಕರಣಗಳನ್ನು ಕಸಿದುಕೊಳ್ಳುವಂತೆ ಮಾಡಿದ್ದು ಇನ್ನೊಂದು ಆಕ್ರಮಣ! ಅಲ್ಲಿಯೂ ಕೂಡ ದೂರುದಾರರಲ್ಲಿರುವ ದಾಖಲೆಗಳನ್ನು ನಾಶಮಾಡಲಿಕ್ಕೆ ಒಳಸಂಚು ನಡೆಸಲಾಗಿತ್ತು ಎಂದು ತಿಳಿದುಬರುತ್ತದೆ.

ಭಕ್ತರ ಹಣದಲ್ಲಿ ಅದೆಷ್ಟು ಅಪವ್ಯಯಗಳು ನಡೆದವೋ ದೇವರೇ ಬಲ್ಲ. ಅಂತರ್ಜಾಲದಲ್ಲಿ ತನ್ನನ್ನು ಬೆಂಬಲಿಸುವುದಕ್ಕೆ ಬೇಕಾದವರದ್ದೇ ಒಂದು ಸಮಿತಿ, ಕಾನೂನು ನಿರ್ವಹಣೆಗೆ ಇನ್ನೊಂದು ಸಮಿತಿ, ರಕ್ಷಣೆ ಮಾಡಲು ಇನ್ನೊಂದು ಸಮಿತಿ, ಸಾಕ್ಷ್ಯ ನಾಶ ಮಾಡೋದಕ್ಕೆ ಮತ್ತೊಂದು ಸಮಿತಿ. ಪ್ರಚಾರಕ್ಕಾಗಿ ಬೇರೆ ಸಮಿತಿ, ನಗರವ್ಯಾಪ್ತಿಯಲ್ಲಿ ಎತ್ತುವಳಿಗಾಗಿ ಬೇರೆ ಸಮಿತಿ, ’ಮಹಿಳಾ ಸಬಲೀಕರಣ’ಕ್ಕೆ ಒಂದು ಸಮಿತಿ, ’ಕನ್ಯಾಸಂಸ್ಕಾರ’ಕ್ಕೆ ಸಜ್ಜುಗೊಳಿಸಲು ಬೇರೆ ಸಮಿತಿ, ಸವಾರಿ ಹೋಗುವ ದಾರಿಯಲ್ಲಿ ಏಕಾಂತಕ್ಕೆ ಭಂಗವಾಗದಂತೆ ನೋಡಿಕೊಳ್ಳಲು ಒಂದು ಸಮಿತಿ, ಖಾಸಗಿ ಹೆಸರುಗಳಲ್ಲಿ ರೀಯಲ್ ಎಸ್ಟೇಟ್ ನಡೆಸೋದಕ್ಕೆ ಇನ್ನೊಂದು ಸಮಿತಿ, ಮಠದ ಆಡಳಿತ ಯಂತ್ರ ಅಂದರೆ ಏನೆಂದು ತಿಳಿದಿದ್ದೀರಿ? ಅದರ ಹುದ್ದೆಗಳೂ ಕ್ಯಾಬಿನೆಟ್ ಮಂತ್ರಿಗಿರಿ ಇದ್ದಹಾಗೆ; ಎಲ್ಲ ಹುದ್ದೆಗೂ ’ಸುವರ್ಣ ಮಂತ್ರಾಕ್ಷತೆ’ಇದೆ.

ಪ್ರಕರಣಗಳು ದಾಖಲಾಗುತ್ತಿದ್ದಂತೆ ಗಿಂಡಿಗಳ ಮೂಲಕ ಏಕಾಂತ ಮಹಿಳೆಯರನ್ನೂ ಹುಡುಗಿಯರನ್ನೂ ಚರವಾಣಿಯಲ್ಲಿ ಸಂಪರ್ಕಿಸಿದ ತೊನೆಯಪ್ಪ ಎಲ್ಲರಿಗೂ ಬಾಯ್ಬಿಡದಂತೆ ಧಮಕಿ ಹಾಕಿಸಿದ್ದಾನೆ ಮತ್ತು ಹೇಗೆ ಸಾಕ್ಷ್ಯ ನಾಶ ಮಾಡಬೇಕೆಂದು ಹೇಳಿಕೊಟ್ಟಿದ್ದಾನೆ. ಎಲ್ಲಿ ತಮ್ಮ ಹೆಸರುಗಳು ಬಹಿರಂಗಗೊಂಡು ಮರ್ಯಾದೆ ಬೀದಿ ಪಾಲಾಗುವುದೋ ಎಂದು ಅಳುಕಿ ತೊನೆಯಪ್ಪನ ಆಜ್ಞೆಯನ್ನು ಅವರೆಲ್ಲ ಅಕ್ಷರಶಃ ಪಾಲಿಸಿದ್ದಾರೆ. ಕೆಲವರು ಮೊಬೈಲನ್ನೇ ಬದಲಿಸಿದ್ದಾರೆ, ಕೆಲವರು ಮೊಬೈಲಿಗೇ ಸಿಗುತ್ತಿಲ್ಲ!

ಅಷ್ಟೇ ಅಲ್ಲ. ’ಸಮಾನ ಶೀಲೇಷು ವ್ಯಸನೇಷು ಸಖ್ಯಂ’ ಎಂಬಂತೆ ಅಂತಹ ಜಾಯಮಾನದ ಮಹಿಳೆಯರಲ್ಲೂ ಸಾಕ್ಷ್ಯನಾಶದ ಸ್ವಭಾವ ಜಾಗೃತಗೊಂಡಿದೆ. ತಮ್ಮ ಮನೆಗಳಲ್ಲಿ ಕ್ಯಾಂಪ್ ಹಾಕುತ್ತಿದ್ದದ್ದೇ ಸುಳ್ಳು ಅನ್ನೋದು. ಬಂದಿದ್ದೇ ಸುಳ್ಳು ಅನ್ನೋದು, ಸಂಪರ್ಕವೇ ಕಡಿಮೆ ಎನ್ನೋದು ಎಲ್ಲವೂ ಕಾಣಿಸಿಕೊಂಡಿವೆ.

ಇನ್ನು ಜನಸಾಮಾನ್ಯರು ಮದುವೆ-ಮುಂಜಿ ಸಮಾರಂಭಗಳಲ್ಲಿ ಅಲ್ಲಲ್ಲಿ ಗುಟ್ಟಾಗಿ ಕೆಲವರು ಏಕಾಂತ ಮಹಿಳೆಯರ ಸುದ್ದಿ ಮಾತನಾಡ್ತಾರೆ. ಪರಸ್ಪರ “ವಿಷಯ ನಮ್ಮೊಳಗೇ ಇರಲಿ, ಯಾರಿಗೂ ಹೇಳ್ಬೇಡಿ” ಎಂದು ಮಾತು ಮುಗಿಸ್ತಾರೆ. ಅವರಿಗೆಲ್ಲ ಒಳಗಿನಿಂದ ಈ ಮಹಾಸ್ವಾಮಿಗಳ ಮತ್ತು ಅವರ ಹೆಂಗಸರ ಬಗ್ಗೆ ಖಚಿತವಾಗಿ ಗೊತ್ತಿದೆ. ಆಯಾಯ ಗ್ರಾಮ ಮತ್ತು ಹೋಬಳಿಗಳ ಜನರಿಗೆ ತೊನೆಯಪ್ಪ ಯಾವ ಯಾವ ಮನೆಗಳಲ್ಲಿ ಹೆಚ್ಚು ಕ್ಯಾಂಪ್ ಮಾಡುತ್ತಿದ್ದ ಎಂಬುದೂ ಸಹ ಗೊತ್ತಿದೆ. ಆದರೂ ಮಠದ ದಬ್ಬಾಳಿಕೆ-ಸಮಾಜಿಕ ಬಹಿಷ್ಕಾರಕ್ಕೆ ಹೆದರಿ, “ನಮಗ್ಯಾಕೆ ಉಸಾಬರಿ” ಎಂದುಕೊಂಡು ಸುಮ್ಮನಾಗ್ತಾರೆ.

ಎಷ್ಟೋ ಏಕಾಂತ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ತೊನೆಯಪ್ಪನವರ ಅಸಲೀಯತ್ತು, ಹೋರಿವಂಶದ ಲಕ್ಷಣ, ವಿದ್ಯಾಭ್ಯಾಸ ಯಾವುದರ ಬಗ್ಗೆಯೂ ನಿಖರವಾದ ಮಾಹಿತಿ ಇಲ್ಲ! ತೊನೆಯಪ್ಪ ಗುರುಗಳು ಮಹಾಪಂಡಿತರು, ಸಕಲ ವಿದ್ಯಾ ಪಾರಂಗತರು, ವೇದ-ಶಾಸ್ತ್ರಗಳನ್ನೆಲ್ಲ ಅರೆದು ಕುಡಿದವರು ಎಂದುಕೊಡುಬಿಟ್ಟಿದ್ದರು ಪಾಪ.

ತುಮರಿ ಬಾವಯ್ಯ ತೊನೆಯಪ್ಪನ ಬುಲ್ ಪೀನದ ಎಳೆಗಳನ್ನು ಬಿಡಿಸುತ್ತ ಹೋದಂತೆ ಕೆಲವರಿಗೆ ಕಾಮಣ್ಣನ ನಿಜರೂಪ ದರ್ಶನ ಆದಂತಾಗಿ ತಮ್ಮಮೇಲೆ ತಾವು ಅಸಹ್ಯಪಟ್ಟುಕೊಂಡಿದ್ದಾರಂತೆ. ಅಸಹ್ಯಕರ ಬಾಯಿ ವಾಸನೆಯನ್ನು ಹೇಗೆ ಸಹಿಸಿದರೋ ದೇವರೇ!!

ಮನುಷ್ಯ ಬದಲಾಗುತ್ತಿರುತ್ತಾನೆ. ಕಾಲಕ್ಕೆ ತಕ್ಕಂತೆ, ಪ್ರದೇಶಕ್ಕೆ ತಕ್ಕಂತೆ, ಸಮಾಜಕ್ಕೆ ತಕ್ಕಂತೆ, ಹವಾಮಾನಕ್ಕೆ ತಕ್ಕಂತೆ, ಆಳರಸರಿಗೆ ತಕ್ಕಂತೆ, ನೆಲದ ಕಾನೂನಿಗೆ ತಕ್ಕಂತೆ, ಹೀಗೆ ಹಲವು ಅಂಶಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಸ್ವಭಾವಗಳ ಮೇಲೆ ಗಾಢ ಪರಿಣಾಮ ಬೀರುತ್ತವೆ. ಸಜ್ಜನರ ಸಹವಾಸದಿಂದ ಇರುವುದರಲ್ಲಿಯೇ ಉತ್ತಮಾಂಶಗಳು ಲಭ್ಯವಾಗಲಿ ಎಂಬುದು ಗುಣಾಢ್ಯರ ಅನುಭವದ ಮಾತು.

ಹೋರಿಸ್ವಾಮಿಗಳಲ್ಲಿ ಸತ್ಸಂಗ ಬಯಸಿ ಬಂದವರಲ್ಲಿ ಹಲವರ ಬದುಕು ಹಳ್ಳಹಿಡಿದುಹೋಯಿತು. ಮನೆಮುರುಕನ ಉಪದೇಶ ಕೇಳಿದ ಎಷ್ಟೋ ಕುಟುಂಬಗಳು ವಿಚ್ಛೇದನಗಳನ್ನು ಕಂಡವು. ಏಕಾಂತದ ಎಷ್ಟೋ ಹುಡುಗಿಯರು ಮದುವೆಯಾಗೋದೇ ಬೇಡವೆಂದು ನಿರ್ಧಸಿದ್ದಾರಂತೆ! ಕಚ್ಚೆಹರುಕನ ಸಹವಾಸಕ್ಕೆ ಇಳಿದವರು ಚಪ್ಪಲಿ-ಪೊರಕೆ ಹಿಡಿದು ಬಡಿದಾಡುವ “ಉತ್ತಮ ಸಂಸ್ಕಾರ’ಗಳನ್ನು ಪಡೆದುಕೊಂಡರು!

ಮನುಷ್ಯ ಜೀವಿತಾವಧಿಯಲ್ಲಿ ತಾವು ತಮ್ಮ ಕಾಲಮೇಲೆ ನಿಂತುಕೊಳ್ಳೋದೇ ಕಷ್ಟದ ಕೆಲಸ. ಅಂಥದ್ದರಲ್ಲಿ ತನ್ನ ಖರ್ಚಿನಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿ ಇಂದು ವೃದ್ಧಾಪ್ಯಕ್ಕೆ ಅಡಿಯಿಟ್ಟ ಮಹನೀಯರಿಗೆಲ್ಲ ತೊನೆಯಪ್ಪನ ರಮ್ಮುಬಳಗ ಮಾರಣಾಂತಿಕ ಹಲ್ಲೆಯ ಸನ್ಮಾನ ಮಾಡುವ ಸಂಸ್ಕಾರ ಪಡೆದುಕೊಂಡಿದೆ.

ಇತ್ತೀಚೆಗೆ ನಡೆದ ಚಪ್ಪಲಿ-ಪೊರಕೆ ಕೃತ್ಯದ ಹಿಂದಿನ ರಾತ್ರಿ ಮಲೆನಾಡಿನ ಹಳ್ಳಿಯೊಂದರಲ್ಲಿ ರಮ್ಮುಬಳಗದ ಹಲವರು ರಮ್ಮು ಬಾಟಲಿಗಳ ಪಾರ್ಟಿ ನಡೆಸಿದ್ದನ್ನು ನಮ್ಮ ಚಿತ್ರಗುಪ್ತ ಗುಪ್ತವಾಗಿ ತನ್ನ ಡೈರಿಯಲ್ಲಿ ಚಿತ್ರಿಸಿಕೊಂಡು ತಿಳಿಸಿದ್ದಾನೆ!

ತಪ್ಪು ಮಾಡಿದವರು ತಮ್ಮ ಇತಿಹಾಸ ಸಮಾಜಕ್ಕೆ ಗೊತ್ತಾಗಬಾರದು ಎಂದು ಸಾಕ್ಷ್ಯನಾಶ ಮಾಡೋದು ಸಾಮಾನ್ಯವಾಗಿ ನಡೆದೇ ನಡೆಯುತ್ತದೆ. ಅದರಲ್ಲಂತೂ ಜಾರಿದ ಮಹಿಳೆಯರು, ಹುಡುಗಿಯರು ತಾವು ಜಾರಿದ ಬಗ್ಗೆ ಎಲ್ಲೂ ದಾಖಲೆ ಸಿಗದಂತೆ ನೋಡಿಕೊಳ್ಳುವುದು ನಿಶ್ಚಿತ; ಆದರೂ ಕೆಲವೊಮ್ಮೆ ಕೆಲವು ಚಹರೆಗಳು ದೊರೆತುಬಿಡುತ್ತವೆ! ಹೋರೀಶನ ಸಹವಾಸಕ್ಕೆ ಬಿದ್ದ ಮಹಿಳೆಯರಂತೂ ಸಾಕ್ಷ್ಯ ನಾಶ ಮಾಡೋದರಲ್ಲಿ ಎತ್ತಿದ ಕೈ ಎನಿಸಿಬಿಟ್ಟಿದ್ದಾರೆ.

ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು ಜೀವನದಲ್ಲಿ ಸ್ತ್ರೀಯರ ಹೆಜ್ಜೆಗಳನ್ನು ಗುರುತಿಸೋದು ಕಷ್ಟ ಅಂತಾರೆ ಅನೇಕರು. “ಸ್ತ್ರೀ ಬುದ್ಧಿ ಪ್ರಳಯಾಂತಕಃ” ಎನ್ನುವವರೂ ಇದ್ದಾರೆ. ತಾವು ಕೆಟ್ಟಿರೂ ಕೆಟ್ಟಿಲ್ಲವೆಂದು ಸಾಧಿಸುವ ಜಾಯಮಾನ ಅವರದ್ದು. ಹೀಗಾಗಿ ಏಕಾಂತ ಮಹಿಳೆಯರು ಹೋರಿಯ ಪರವಾಗಿ ವಾದಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಆರ್ಥಿಕ ಸ್ವಾತಂತ್ರ್ಯದಲ್ಲಿರೋ ಸಾಫ್ಟ್ ವೇರ್ ಉದ್ಯೋಗಿಗಳಾದ ಅನೇಕ ಹುಡುಗೀರು ಮದುವೆಯೇ ಬೇಡ ಎನ್ನುತ್ತಿದ್ದೋರು ಏಕಾಂತ ಕೋಣೆಗೆ ಹೋಗಿ ಬಂದವರೇ ಬದಲಾಗಿ ಮಠದ ಗಿಂಡಿಗಳನ್ನು ಮದುವೆಯಾಗಿದ್ದು ಈಗ ಸಾಕ್ಷ್ಯವಿಲ್ಲದ ಇತಿಹಾಸ! ಅವರ ಸೋ ಕಾಲ್ಡ್ ಗಂಡಂದಿರಿಗೆ ಮಹತ್ತಿನ ಪ್ಯಾಕೇಜ್ ಡೀಲಿಂಗ್ ನೀಡಿ ಸುಮ್ಮನಿರಿಸಿದ್ದೂ ಸಹ ಸಾಕ್ಷ್ಯ ರಹಿತ ಇತಿಹಾಸ. ಮಹಸ್ವಾಮಿಗಳು ಪರೋಕ್ಷ ಹೇಳ್ತಾರೆ, “ನೀವು ಏನಾದ್ರೂ ಅನಾಚಾರ ಮಾಡಿ ಆದರೆ ಸಿಕ್ಕಿಬೀಳದಂತೆ, ದಾಖಲೆ ಸಿಗದಂತೆ ಮಾಡಿ. ಚೆನ್ನಾಗಿರಿ, ಚೆನ್ನಾಗಿಡಿ”

ತಪ್ಪಿತಸ್ಥ ಎಂದು ತನಗೆ ಗೊತ್ತಿರುವಾಗ ತಪ್ಪಿಸಿಕೊಳ್ಳೋದು ಕಷ್ಟ ಎನಿಸಿದಾಗ ನಮ್ಮ ಕಚ್ಚೆಶೀಗಳಿಗೆ ಕೊಡೆ, ಪೀಠ, ಬೆಳ್ಳಿ ಗೂಟ ಯಾವುದೂ ಬೇಕಾಗೋದಿಲ್ಲ. ಯಾರ ಜೊತೆಗಾದರೂ ಅಕ್ಕಪಕ್ಕದಲ್ಲಿ ಕುರ್ಚಿಯ ಮೇಲೆ ಕುಳಿತು ಒಗ್ಗಟ್ಟಿನ ಪ್ರಮಾಣ ವಚನ ಬೋಧನೆ ನಡೆಸ್ತಾನೆ. ’ಹೊತ್ತು ಬಂದಾಗ ಕತ್ತೆಯ ಕಾಲನ್ನಾದರೂ ಹಿಡಿ’ ಎಂಬ ಗಾದೆ ಇಲ್ಲಿ ಅನಾವರಣಗೊಳ್ಳುತ್ತದೆ.

ಅಪರಾಧಗಳೆಲ್ಲ ಮುಚ್ಚಿ ತನಗೆ ಗೆಲುವಾಗಲಿ ಎಂದು ಹೇಳಿಕೊಂಡ ಹರಕೆ ತೀರಿಕೆಗಾಗಿ ಮಹಾಸ್ವಾಮಿಗಳು ಎತ್ತರಕ್ಕೆ ಏರುತ್ತಾರೆ. ಶತಚಂಡೀ ಹವನ, ಸಹಸ್ರ ಚಂಡೀ ಹವನ, ಪಾದಯಾತ್ರೆ, ಬೆಟ್ಟ ಹತ್ತೋದು, ತೀರ್ಥಕ್ಷೇತ್ರಗಳನ್ನು ಸುತ್ತೋದು ಎಲ್ಲವೂ ನಡೀತಾ ಇದೆ. ಈ ’ಮಹಾ ಯೋಗಿ’ಗೆ ಇಂತಹ ಸ್ಥಿತಿ ಬರಬಾರದಿತ್ತು, ಛೆ, ಪಾಪ!

ಈ ನಡುವೆ ಮ್ಯಾಂಗೋಕುಳಿಗಳಂತಹ ಕೆಲವರು ಯಾಕೆ ಡಲ್ ಹೊಡೀತಾ ಶ್ರೀಧರಾಶ್ರಮ ಸುತ್ತುತ್ತಾ ಇದ್ದಾರೆ ಎಂದು ಗುಮ್ಮಣ್ಣ ಹೆಗಡೇರಿಗೆ ನಮ್ಮ ಚಿತ್ರಗುಪ್ತ ಪ್ರಶ್ನೆ ಹಾಕಿದನಂತೆ. ಯಾರಿಗ್ಗೊತ್ತು! ಬುದ್ಧನಿಗೆ ಜ್ಞಾನೋದಯವಾಗುವಾಗ ಯಾರೂ ಅಲ್ಲಿರಲಿಲ್ಲವಲ್ಲ? ಹಾಗೆಯೇ ಕೆಲವರಿಗೆ ಒಳಗೊಳಗೇ ’ಜ್ಞಾನೋದಯ’ ಆಗಿರಬಹುದು. ಇಂತಹ ಸಗಣಿ ಸ್ವಾಮಿಯ ಶಿಷ್ಯ ಎನಿಸಿಕೊಂಡರೆ ಪಾರಮಾರ್ಥಿಕವೂ ಇಲ್ಲ, ಲೌಕಿಕವೂ ಇಲ್ಲ ಎಂದಾಗಬಹುದು ಎನಿಸಿರಬಹುದು ಅಲ್ಲವೇ?

ಇಂತಹ ’ಗಮ್ಮಿನ ಘನಮಹಿಮ’ನಿಂದ ಧರ್ಮೋಪದೇಶ ಮಾಡಿಸಿಕೋಳ್ಳೋದಕ್ಕೆ ಜನರಿಗೆ ಅದಾವಪರಿ ಮನಸ್ಸು ಬರುತ್ತದೋ ಗೊತ್ತಿಲ್ಲ! ಅವನೇ ಹೇಳುವ ಹಾಗೆ ದುಡ್ಡು ಸಂಗ್ರಹಿಸಬೇಕು, ಮಠ ನಡೆಸಬೇಕು, ಅಷ್ಟೇ; ಅಲ್ಲಿ ತತ್ತ್ವಗಳ ಚಿಂತನೆ ಸಾಧ್ಯವೇ ಇಲ್ಲ; ಅದಕ್ಕೆಲ್ಲ ಸಮಯವೂ ಇಲ್ಲ.

ಕೇವಲ ರಾಜಕೀಯ ಮತ್ತು ಕೆಟ್ಟ ಸಾಮಾಜಿಕ ದುರಾಡಳಿತದ ಯೋಜನೆಗಳ ಅನುಷ್ಠಾನ ಮಾತ್ರ ನಡೆಯುತ್ತದೆ. ನಡುನಡುವೆ ’ಮಹಾತಪಸ್ವಿ’ ಗಮ್ಮುಸ್ವಾಮಿ ಪೂಜೆಗೆ ಕುಳಿತು ಗುಮ್ಮನಂತೆ ಘನಗಾಂಭೀರ್ಯದ ನೋಟ ಬೀರಲು ಪ್ರಯತ್ನಿಸುತ್ತಾನೆ; ಅಂತರಂಗದಲ್ಲಿರುವ ಗೊಗ್ಗಯ್ಯ ಆಗಲೂ ಮಹಿಳೆಯರ ಪೂರ್ಣಕುಂಭಗಳನ್ನು ಹುಡುಕುತ್ತಾನೆ!

ಹೇಳ್ಕೋಳಕ್ಕೊಂದ್ ಮಠ ಎತ್ತೋದಕಷ್ಟ್ ಯೋಜನೆ
ಏಕಾಂತಕ್ಕೊಂದಷ್ಟು ಮಂಚ
ಮಠದಲ್ಲಿ ಭಕ್ತೇರು ಹಾಸ್ಟೆಲ್ ನ ಹುಡುಗೀರು
ಇದ್ರಾಯ್ತು ಹೋರಿ ಪ್ರಪಂಚ

“ಬೋಲೋ ಭಾರತ್ ಮಾತಾ ಕೀ”

“ಜೈ”

Thumari Ramachandra

source: https://www.facebook.com/groups/1499395003680065/permalink/1792319667720929/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s