ಕಳ್ಳರ ರಾಜ್ಯದಲ್ಲಿ ಕಳ್ಳರಿಗೇ ಅಭಯ

ಕಳ್ಳರ ರಾಜ್ಯದಲ್ಲಿ ಕಳ್ಳರಿಗೇ ಅಭಯ
ಬ್ರಿಟಿಷ್ ಮಂದಿ ಭಾರತವನ್ನು ಎರಡು ಶತಮಾನಗಳಿಗೂ ಹೆಚ್ಚು ಕಾಲ ಆಳಿದರು. ಅವರ ಆಳ್ವಿಕೆಯಲ್ಲಿ ದೇಶದ ಸಂಪತ್ತನ್ನು ಅವರು ಕೊಳ್ಳೆಹೊಡೆದರು ಎಂಬುದು ಬೇರೆ ಪ್ರಶ್ನೆ. ಆದರೆ ದೇಶವಾಸಿ ಕಳ್ಳ-ಕಾಕರಲ್ಲಿ ಒಂದು ನಮೂನೆಯ ಅವ್ಯಕ್ತ ಭಯ ಮನೆಮಾಡಿತ್ತು. ಕಳ್ಳತನಕ್ಕಿಳಿರುವವರು, ನೀತಿಗೆಟ್ಟವರು, ದೇಶದ್ರೋಹಿಗಳು, ಸಮಾಜ ದ್ರೋಹಿಗಳು ಎಲ್ಲರೂ ಶಿಕ್ಷೆಗೆ ಅಂಜಿಕೊಂಡು ಕಡಿಮೆ ಗುನ್ನೆಗಳಲ್ಲಿ ಭಾಗಿಯಾಗುತ್ತಿದ್ದರು.

ಕೊಡುವ ಶಿಕ್ಷೆ ಕಠಿಣ ಎಂಬ ಅರಿವಿದ್ದಾಗ ಅಂತಹ ಜನ ಭಯ ಬೀಳುತ್ತಾರೆ. ರಾಜಪ್ರಭುತ್ವ ಅಳಿದು ಪ್ರಜಾಪ್ರಭುತ್ವ ಬಂದಮೇಲೂ ಕೆಲವಷ್ಟು ವರ್ಷಗಳವರೆಗೆ ಅಂಥವರಿಗೆ ಭಯ ಇದ್ದೇ ಇತ್ತು. ನೆಹರೂ ಪರಂಪರೆಯವರು ರಾಜಕೀಯ ಸಾರಥ್ಯವನ್ನು ವಹಿಸಿಕೊಂಡ ಬಳಿಕ ದೇಶವ್ಯಾಪಿ ಹಲವು ಮಾರ್ಪಾಡುಗಳಾದವು.

ದೇಶದಲ್ಲಿ ಕಳ್ಳ-ಕಾಕರು ಹೆಚ್ಚುತ್ತ ನಡೆದರು. ಸ್ವಾರ್ಥಿಗಳು ವಿಪರೀತ ಹೆಚ್ಚಿದರು. ಮತಗಳಿಸುವ ರಾಜಕಾರಣದಿಂದಾಗಿ ಓಲೈಕೆಗಳು ಆರಂಭಗೊಂಡವು. ಚುನಾವಣೆಗಳನ್ನು ಗೆಲ್ಲಲು ಹಣ-ಹೆಂಡ, ತೋಳ್ಬಲ ಮೊದಲಾದ ಹಲವು ವಾಮಮಾರ್ಗಗಳನ್ನು ಅನುಸರಿಸತೊಡಗಿದರು. ಜನಸಂಖ್ಯೆಯೂ ವಿಪರೀತ ಹೆಚ್ಚಿ ಮೂಲಸೌಕರ್ಯಗಳು ಸಾಲದಾದವು, ಮೂಲವಸ್ತುಗಳು ಕೈಗೆಟುಕದ ಬೆಲೆಯಲ್ಲಿ ವಿಕ್ರಯಗೊಳ್ಳತೊಡಗಿದವು.

ಇನ್ವೆಸ್ಟ್ ಮೆಂಟ್ ಬ್ಯಾಂಕಿಗ್ ರೀತಿಯಲ್ಲಿ ರಾಜಕಾರಣ ಎಂಬುದು ಹೂಡಿಕೆಯ ವ್ಯಾಪಾರವಾಯಿತು; ದೇಶಸೇವೆ ಮತ್ತು ಜನಸೇವೆ ಎಂಬುದು ಪುಸ್ತಕದ ಬದನೆಕಾಯಿಯಾಗಿ ಆದರ್ಶಗಳೆಲ್ಲ ಮೂಲೆಗುಂಪಾದವು. ಪ್ರತಿಯೊಬ್ಬ ರಾಜಾಕಾರಣಿಗೂ ಕೋಟಿಗಳಲ್ಲೇ ಆದಾಯದ ನಿರೀಕ್ಷೆ ಅದಮ್ಯ ಆಕಾಂಕ್ಷೆಯಾಯಿತು; ಕೋಟಿಗಳನ್ನು ಬಾಚಿಕೊಳ್ಳಲು ಅಪವಿತ್ರ ಮೈತ್ರಿಗಳು, ಒಳ ಒಪ್ಪಂದಗಳು, ಗುಟ್ಟಿನ ಜಿದ್ದಾಜಿದ್ದಿ ಕುದುರೆ ವ್ಯಾಪಾರಗಳು ನಡೆಯತೊಡಗಿದವು.

ರಾಜಕೀಯಕ್ಕೆ ಬರಲು ಕೇವಲ ಓದಿನ ಅಥವಾ ಸ್ವಸ್ಥ-ಅಪರಾಧ ರಹಿತ ನಾಗರಿಕ ಅರ್ಹತೆ ಸಾಲದಾಯಿತು. ಕನಿಷ್ಠ ಒಂದೆರಡು ಹೆಣ ಉರುಳಿಸಿದ ಹಿನ್ನೆಲೆಯವನೇ ರಾಜಕಾರಣಕ್ಕೆ ಯೋಗ್ಯ ಎಂಬಂತ ಲಕ್ಷಣ ಕಂಡುಬಂತು. ಯಾರೋ ಒಂದಿಬ್ಬರು ಸಾಮಾನ್ಯ ಉತ್ತಮ ಎನಿಸಿಕೊಳ್ಳುವ ಹಿನ್ನೆಲೆಯ ಜನ ರಾಜಕಾರಣದಲ್ಲಿದ್ದರೆ ಅವರಿಗೆ ಟಿಕೆಟ್ ಸಿಗುವುದೇ ಕಷ್ಟವಾಯಿತು, ಗೆದ್ದರೂ ಮಂತ್ರಿಗಿರಿ ದುರ್ಲಭವಾಯಿತು. ಒಟ್ಟಾರೆ ಹೇಳೋದಾದರೆ ರಾಜಕಾರಣಕ್ಕೆ ರೌಡಿಗಳು ಸೇರಿಕೊಂಡರು. ಖೂಳರ ರಾಜ್ಯಭಾರದಲ್ಲಿ ಜನ ನೊಂದರು.

ಜನತೆಯಲ್ಲೂ ನೈತಿಕತೆ ಕುಸಿಯತೊಡಗಿತು. ತಮ್ಮ ತಮ್ಮ ಕೆಲಸಕಾರ್ಯಗಳಿಗಗಾಗಿ ಜನ ಲಾಬಿಗೆ ಇಳಿದರು; ಲಂಚ ಕೊಡತೊಡಗಿದರು. ಹೂಡಿಕೆ ಮಾಡಿ ಕೂಡಿಕೆ ಮಾಡಿಕೊಂಡವ ಲಕ್ಷಗಳಲ್ಲಿ ಎತ್ತುವಳಿ ನಡೆಸಿ ಕೋಟಿಗಳನ್ನು ಎಣಿಸತೊಡಗಿದ. ಎದುರು ಖರ್ಚಿಗೆ, ಮುಂದಿನ ಚುನಾವಣೆಯ ಖರ್ಚಿಗೆ, ಸ್ವಂತ ಚಟಗಳಿಗೆ ಮತ್ತು ಕುಟುಂಬ-ಬಂಧುವರ್ಗಗಳಿಗೆ ಅಂತ ಕೋಟಿಕೋಟಿ ಹಣವನ್ನು ಸೂರೆಗೈಯುವುದು ಮಾಮೂಲಾಗಿಬಿಟ್ಟಿತು.

ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಧಿಕಾರಿಗಳ ಮುಖಾಂತರ ಲಾಬಿಗೆ ಇಳಿಯತೊಡಗಿದರು. ನಿಯತ್ತಿನ ಅಧಿಕಾರಿಗಳೂ ಸಹ ಹಲವು ವಿಧದ ಒತ್ತಡಗಳಿಗೆ ಒಳಗಾಗಿ ಲಂಚಬಡುಕರಾದರು. ಕೆಲವರು ಮಾತ್ರ ತಮ್ಮ ನಿಯತ್ತನ್ನು ಕಾಯ್ದುಕೊಂಡರು. ನಿಯತ್ತನ್ನು ಕಾಯ್ದುಕೊಂಡವರ ಸಂಖ್ಯೆ ಕಡಿಮೆಯಾಗಹತ್ತಿತು; ಲಂಚಬಡುಕರ ಸಂಖ್ಯೆ ಹೆಚ್ಚುತ್ತಲೇ ನಡೆಯಿತು. ಲಂಚಬಡುಕರೆಲ್ಲ ಸೇರಿ ಸಂಬಂಧಿತ ಮಂತ್ರಿಗಳೊಡನೆ ಅನಾಮಧೇಯ ಸಂಘ ರಚನೆ ಮಾಡಿಕೊಳ್ಳತೊಡಗಿದರು. ಮಂತ್ರಿಯ ಪ್ರಚೋದನೆ ಮತ್ತು ಪ್ರೇರಣೆಯಂತೆ ಲಂಚಬಡುಕರು ಲಂಚಸ್ವೀಕಾರ ಮಾಡ ಹತ್ತಿದರು.

ಭ್ರಷ್ಟಾಚಾರ ವಿರೋಧಿ ಚಳುವಳಿಯನ್ನು ವೇದಿಕೆಗಳಲ್ಲಿ ಉದ್ಘಾಟಿಸಿ ದೀಪ ಬೆಳಗಿದಂಥವರಲ್ಲಿ ಹಲವರು ಲಂಚಬಡುಕರೇ ಇದ್ದರು! ಹೀಗಾಗಿ ಭ್ರಷ್ಟಾಚಾರ ಹೆಚ್ಚುತ್ತಲೇ ನಡೆಯಿತು. ಆಡಳಿತ ನಡೆಸುವ ಮಂದಿ ಹೊರಮುಖದಲ್ಲಿ ಎಲ್ಲವೂ ಸರಿಯಿದೆ ಎಂಬಂತೆ ಪೋಸುಕೊಡುತ್ತ ಒಳಗಿನಿಂದ ಭ್ರಷ್ಟ್ರರಾಗಿ ದುರ್ಬಲ ಆಡಳಿತಕ್ಕೆ ಕಾರಣರಾಗುತ್ತ ನಡೆದರು.

ಕದ್ದವ, ಕೊಲೆಗೈದವ, ಶೀಲಹರಣ ಮಾಡಿದವ, ಪರರ ಸ್ವತ್ತು ಹೊಡೆದುಕೊಂಡವ, ಮೋಸಗಾರ, ಲಂಚಕೋರ, ಸುಲಿಗೆಗೈದವ, ರೌಡಿ ಹೀಗೆ ಎಲ್ಲಾ ಢೋಂಗಿಗಳೂ ಸಮಾಜಸೇವಕರ ವೇಷದಲ್ಲಿ ಗುರುತಿಸಿಕೊಳ್ಳುತ್ತ ಎರಡೂ ಕೈಗಳಲ್ಲಿ ಮನಸೋ ಇಚ್ಛೆ ಹಣ ಮೆದ್ದರು. ಭ್ರಷ್ಟಾಚಾರದ ಮೂಲವನ್ನು ಹುಡುಕುತ್ತ ಹೋದರೆ ಅದು ಮಂತ್ರಿಯ ಖುರ್ಚಿಯವರೆಗೆ ಸಾಗುತ್ತದೆ. ಅಂತಹ ಭ್ರಷ್ಟರನ್ನು ಹಳಿದು ಹಿರಣ್ಣಯ್ಯನಂತವರು ’ಲಂಚಾವತಾರ’ ಮೊದಲಾದ ನಾಟಕಗಳನ್ನು ಆಡಿ ಸಮಾಜವನ್ನು ತಿದ್ದೋದಕ್ಕೆ ಪ್ರಯತ್ನಿಸಿದರು.

’ಯಥಾ ರಾಜಾ ತಥಾ ಪ್ರಜಾ’ ಎಂಬ ಸಂಸ್ಕೃತದ ಉಕ್ತಿ ಯಾವಾಗ ಉಲ್ಲೇಖಗೊಂಡಿತೋ ಗೊತ್ತಿಲ್ಲ; ಒಂದಂತೂ ಸತ್ಯ-ರಾಜನಂತೆ ಪ್ರಜೆಗಳು ಎಂಬುದು ಅಪ್ಪಟ ಸತ್ಯ. ರಾಜನೇ ಕಳ್ಳನಾದರೆ ನ್ಯಾಯದಾನ ಯಾವ ಮಾರ್ಗದಲ್ಲಿ ನಡೆದೀತು? ಅವನಿಗೆ ಬೇಕಾದ ಮಾರ್ಗದಲ್ಲಿ, ಸರಿಯಷ್ಟೇ? ಆಡಳಿತ ನಡೆಸುವವರೇ ಕಳ್ಳರಾದರೆ, ಹಗಲುದರೋಡೆಕೋರರಾದರೆ ಅವರ ಕೈಕೆಳಗೆ ಕೆಲಸ ಮಾಡುವವರೂ ಅವರನ್ನು ಅನುಸರಿಸಬೇಕಾಯ್ತು. ಅವರನ್ನು ಅನುಸರಿಸಲಾಗದವರು ಕೊಲೆಗೀಡಾದರು, ಆತ್ಮಹತ್ಯೆ ಮಾಡಿಕೊಂಡರು ಅಥವಾ ರಾಜೀನಾಮೆ ಬಿಸಾಕಿ ಹೋದರು ಎಂಬುದನ್ನೆಲ್ಲ ಗತ ದಿನಗಳು ನಮಗೆ ತೋರಿಸುತ್ತಿವೆ.

ಇಂತಹ ಕಳ್ಳರ ರಾಜ್ಯಭಾರದಲ್ಲಿ ನ್ಯಾಯ ನಿರೀಕ್ಷೆ ಸಾಧ್ಯವೇ ಎಂಬುದು ಯಕ್ಷಪ್ರಶ್ನೆಯಾಗಿದೆ. ತಮಾಷೆಯೆಂದರೆ ಯಾರಿಂದ ಆಯ್ಕೆಗೊಂಡು ಪೀಠಕ್ಕೆ ನೇಮಕಗೊಂಡನೊ ಅವರನ್ನೇ ಮುಗಿಸುವ, ದಂಡಿಸುವ, ಟೀಕಿಸುವ, ಜೀವಭಯ ಉಂಟುಮಾಡುವ ಮಟ್ಟಕ್ಕೆ ಬೆಳೆದ ತೊನೆಯಪ್ಪ ಕೂಡ ಇಂತಹ ಕಳ್ಳರ ಗ್ಯಾಂಗಿನ ಬೆಂಬಲವನ್ನು ಸದಾ ಪಡೆದೇ ಮುಂದಡಿ ಇಡುತ್ತಿದ್ದಾನೆ.

ಯಕ್ಕಶ್ಚಿತ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವವರಿಗೆ ಹಲವು ಕ್ರಿಮಿನಲ್ ಆರೋಪಗಳನ್ನು ಹೊತ್ತ ತೊನೆಯಪ್ಪ ಕಂಡರೂ ಕಾಣಿಸದಿರೋದು ಇದಕ್ಕೇ. ಐವತ್ತು ಕೋಟಿ ಪಡೆದವರ ಆಜ್ಞಾನುವರ್ತಿಗಳಾಗಿ ಕಾರ್ಯ ನಿರ್ವಹಿಸುವವರು ಇನ್ನೇನು ಮಾಡ್ತಾರೆ ಪಾಪ? ಕಚ್ಚೆ ಶೀಗಳು ಅಪರಾಧಿ ಹೌದೆಂದು ಗೊತ್ತಿದ್ದರೂ ಎಳೆದೊಯ್ಯುವಂತಿಲ್ಲ, ಸಂಬಂಧಿತ ಪರೀಕ್ಷೆಗಳನ್ನು ನಡೆಸುವಂತಿಲ್ಲ.

ಕ್ರಿಮಿನಲ್ ಅಪರಾಧದ ಆರೋಪಿಗಳು ಸಾಮಾನ್ಯವಾಗಿ ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು. ಪ್ರಚೋದನಕಾರಿ ಭಾಷಣಗಳನ್ನು ಮಾಡಬಾರದು, ಕಂಡಲ್ಲೆಲ್ಲ ಅಂಡಲೆಯುವಂತಿಲ್ಲ, ಸಂಬಂಧಿತ ಠಾಣೆಗೆ ಹೋಗಿ ಸಹಿ ಹಾಕುತ್ತಿರಬೇಕು; ಆದರೆ ಜಗದ್ಗುರು ಶೋಭರಾಜಾಚಾರ್ಯ ತೊನೆಯಪ್ಪ ಕಚ್ಚೆಶೀಗಳಿಗೆ ಮಾತ್ರ ಈ ನಿಯಮಗಳು ಅನ್ವಯವಾಗೋದಿಲ್ಲ!

ಕಾಳಿಂಗ ಸರ್ಪ ಮನೆಯೊಳಗೆ ಸೇರಿಕೊಂಡರೆ ಅದನ್ನು ಹುಡುಕೋದು ಕಷ್ಟವಂತೆ. ಚಿಕ್ಕವರಿದ್ದಾಗ ನಾವೆಲ್ಲ ಊರೂರು ಅಲೆಯುತ್ತಿದ್ದ ಸಮಯದಲ್ಲಿ ಹತ್ತು-ಹನ್ನೊಂದರ ಆಡುಬಾಲಕ ನೊಬ್ಬ ಬಚ್ಚಲ ಗೋಡೆಯ ಬಿಲವೊಂದರಲ್ಲಿ ಕೈಹಾಕಿಬಿಟ್ಟ. ಏನೋ ನೋವಾದ ಹಾಗಾಯಿತು ಸುಮ್ಮನಿದ್ದ. ಅರೆಕ್ಷಣದಲ್ಲೆ ಅವನಿಗೆ ಮಂಪರು ಬರುವಂತಾದಾಗ ಮನೆಯವರಿಗೆ ಗೊತ್ತಾಗಿ ದೂರದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೆ ಹುಡುಗ ಜೀವನಯಾತ್ರೆ ಮುಗಿಸಿದ್ದ!

ಹಾವೇ ಕಚ್ಚಿರಬೇಕೆಂದುಕೊಂಡು ಜನ ಗೋಡೆ ಅಗೆದರು, ಬಿಲ ಬಹಳ ಆಳವಾಗಿ ನೆಲದ ಒಳಕ್ಕೆ ಇಳಿದುಹೋಗಿತ್ತು. ಅಗೆದು ಅಗೆದು ಅಗೆದು ಕೊನೆಗೂ ಹಾವನ್ನು ಕಂಡರು! ಕರ್ರಗಿನ ಮಾರುದ್ದದ ಹಾವು-ಕಾಳಿಂಗ. ಕಾಳಿಂಗ ಬಂದಿದ್ದು ಹೇಗೆ? ಅಲ್ಲಿ ಸೇರಿಕೊಂಡಿದ್ದು ಹೇಗೆ? ಒಂದೂ ಗೊತ್ತಾಗಲಿಲ್ಲ. ಆಡುವ ಹುಡುಗ ಅಲ್ಲಿ ಕೈ ಹಾಕಿದ್ದೂ ಸಹ ವಿಧಿಯಿಚ್ಛೆಯೇ ಇರಬೇಕು. ಹಡೆದವರಿಗೆ ಪುತ್ರಶೋಕವನ್ನುಂಟು ಮಾಡಿದ ಕಾಳಿಂಗ ತಣ್ಣಗೆ ಒಳಗೆ ಮಲಗಿತ್ತು! ಹೊರಗೆಳೆದು ಹೊಡೆಯದಿದ್ದರೆ ಇನ್ನಾರನ್ನೋ ಕಚ್ಚುತ್ತಿತ್ತು.

ಮಠದೊಳಗೆ ಹೊಕ್ಕ ಕಾಳಿಂಗನದ್ದೂ ಇದೇ ಕತೆ. ಮಠದ ಕಾಳಿಂಗ ಜನಸಮುದಾಯದ ಭಾವನಾಲೋಕವನ್ನು ಆಕ್ರಮಿಸಿಕೊಂಡು ಕುಳಿತುಬಿಟ್ಟಿದೆ. ಕಚ್ಚಿಸಿಕೊಂಡ ಕೆಲವರಿಗಷ್ಟೆ ಅಲ್ಲಿ ಮಠದಲ್ಲಿ ಕಾಳಿಂಗವಿದೆ ಎಂದು ಗೊತ್ತಾಗಿದ್ದು. ಉಳಿದವರಿಗೆ ಕಾಳಿಂಗದ ಬದಲು ಕಾವಿ ಬಣ್ಣ ಕಾಣುತ್ತಿದೆ. ಹೀಗಾಗಿ ಕಾಳಿಂಗವಿಲ್ಲ ಎಂಬ ವಾದವನ್ನು ಕೆಲವರು ಮಂಡಿಸುತ್ತಾರೆ.

ಗಣಪತಿ ಭಟ್ಟರು ತೊನೆಯಪ್ಪನ ಭಾವಚಿತ್ರದ ಕತೆಯನ್ನು ವಿವರವಾಗಿ ಹೇಳಿದ್ದಾರೆ. ಆದರೆ ಒಂದನ್ನು ಮರೆತುಬಿಟ್ಟಿದ್ದಾರೆ. ತೊನೆಯಪ್ಪನ ಅಕ್ಕಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವವರ ಪೈಕಿ ಸುಂದರ ಹೆಣ್ಣುಮಕ್ಕಳು ಮತ್ತು ಮಹಿಳೆಯರೂ ಇರುತ್ತಾರೆ. ತೊನೆಯಪ್ಪನ ಭಕ್ತರಲ್ಲಿ ಬಹುತೇಕರಿಗೆ ಅವರನ್ನು ನೋಡುವ ಖಯಾಲಿಯೂ ಇರುತ್ತದೆ. ಬರೇ ಹೆಣ್ಣುಮಕ್ಕಳ ಫೋಟೋ ಇಟ್ಟುಕೊಂಡರೆ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಬೇಕಲ್ಲ? ಬದಲಿಗೆ ತೊನೆಯಪ್ಪ ಸಹಿತದ ಫೋಟೋ ಆದರೆ ಪರವಾಗಿಲ್ಲ.

ತುಮರಿಗೆ ಮತ್ತೆ ಮತ್ತೆ ಬಂದ ಸಂದೇಶಗಳ ಸಾಲಿನಲ್ಲಿ ಇಲ್ಲೊಂದು ಸಂದೇಶವಿದೆ ನೋಡಿ-“ಹೆಚ್ಚಿನ ಜನರುಕೇಳುವ ಪ್ರಶ್ನೆ ನೂರಾರು ಬಾರಿ ಅತ್ಯಾಚಾರವಾಗಲು ಸಾಧ್ಯವೇ? ಅದ್ದರಿಂದ ಇದುಕೇವಲ ಹಣಸುಲಿಯಲು ಮಾಡಿದ ಸಂಚು ಎಂಬುದುಹಲವುಜನರ‌ಅಭಿಪ್ರಾಯ. ಆದರೆ ಆಕೆಯನ್ನು ಬಹಳವರ್ಷಗಳಿಂದ ಬಲ್ಲ ನನಗೆ ಇದುಖಂಡಿತಾ ವಶೀಕರಣ ಎಂದೆನಿಸುತ್ತಿದೆ. ಏನೇ ಆಗಲಿ ಇದು ಶತಮಾನದ ಇತಿಹಾಸದಲ್ಲಿ ದಾಖಲಾಗಲು ಅರ್ಹತೆಯಿರುವ ವಿಷಯ!

ನ್ಯಾಯಾಲಯದತೀರ್ಪನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟು ಬುದ್ದಿಯಿರುವವರೂ, ಮಠ ಅಥವಾ ಹೋರಿಶನಿಂದ ಯಾವುದೇ ಲಾಭವನ್ನೂ ಪಡೆಯದವರು ಸಹ ಇನ್ನು ಅವನನ್ನು ನಿರಪರಾಧಿ ಎಂದು ಪರಿಗಣಿಸುತ್ತಿದ್ದಾರೆ ಎಂದರೆ ಇದೊಂದು ಸಮೂಹ ಸಂಮ್ಮೋಹನ ಎಂದೇ ಪರಿಗಣಿಸಬಹುದು. ನಮ್ಮಮೆದುಳು ಎರಡು ರೀತಿಯ ಆಲೋಚನೆಗಳಿಂದ ನಿರ್ಧಾರ ತೆಗೆದುಕೊಳ್ಳುವಸಾಮರ್ಥ್ಯ ಹೊಂದಿದೆ.

೧.ತಾರ್ಕಿಕ/ ವಿಮರ್ಶಾತ್ಮಕ ಆಲೋಚನೆಯಿಂದ.
೨.ಭಾವನಾತ್ಮಕ/ಸಂವೇದನಾತ್ಮಕ ಆಲೋಚನೆಯಿಂದ.

ಹೆಚ್ಚಿನ ಸಂದರ್ಭಗಳಲ್ಲಿ ಅದರಲ್ಲೂ ಧಾರ್ಮಿಕ/ಆಧ್ಯಾತ್ಮಿಕ ವಿಚಾರಗಳಲ್ಲಿ ಭಾವನಾತ್ಮಕ ಆಲೋಚನೆಗಳಿಂದಲೇ ನಾವುನಿರ್ಧಾರ ತೆಗೆದುಕೊಳ್ಳುವುದು. ಉದಾಹರಣೆಗೆ ದೇವಾಲಯ ಕಟ್ಟಲು ಯಾರಾದರೂ ಹಣ ಕೇಳಿದರೆ ಅಧ್ಯಾತ್ಮಿಕ ಒಲವುಳ್ಳ ವ್ಯಕ್ತಿ ಭಾವನಾತ್ಮಕವಾಗಿಯೇ ಯೋಚಿಸಿಯೇ ಹಣಕೊಡುತ್ತಾನೆ; ಅದು ಮುಂದೆ ದುರ್ವಿನಿಯೋಗವಾಗಲಾರದು ಎಂಬ ಭಾವನೆ ಹೊಂದಿರುತ್ತಾನೆ.

ಹಾಗೆಯೇ ಇಲ್ಲಿಯೂ ಸಹ ಅನೇಕರು ಸಂಮ್ಮೋಹನಕ್ಕೆ‌ಒಳಗಾಗಿದ್ದಾರೆ! ಕಾಕತಾಳಿಯವಾಗಿ ಕೆಲವರ ಸಮಸ್ಯೆಗಳು ಪರಿಹಾರವಾಗಿದ್ದರೂ ತೊನೆಯಪ್ಪನ ಪವಾಡದಿಂದಲೇ ಆಗಿದೆ ಎಂದು ಅವರೆಲ್ಲ ನಂಬಿದ್ದಾರೆ!! ಅಷ್ಟೇ ಅಲ್ಲ, ಸಮಾಜದಲಿ ಅವನಿಂದ ಆಕ್ರಮಣಕ್ಕೊಳಗಾದ ಹೆಂಗಳೆಯರಿಗಷ್ಟೇ ಇವನ ಮತ್ತೊಂದು ಮುಖದ ಪರಿಚಯವಾಗಿದೆ ವಿನಃ ಉಳಿದ ಮಹಿಳೆಯರಿಗೆ ತೊನೆಯಪ್ಪನವರು ಈಗಲೂ ದೇವತಾ ಸ್ವರೂಪಿಯೇ! ಹಾಗಾಗಿ ಕೆಲವರು ಅವನ ಪರವಾಗಿ ಹಿಡಿಂಬೆ- ಚಪ್ರಾಸಿ ಗಳಾಗಲು ತಯಾರಿದ್ದಾರೆ!”

ಮಠದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ನಮ್ಮ ಸಮಾಜದ ದೊಡ್ಡವರೆಲ್ಲ ಯಾಕೆಸುಮ್ಮನಿದ್ದಾರೆಂಬುದು ಕೆಲವರ ಪ್ರಶ್ನೆ. ಇಲ್ಲಿ ಒಂದನ್ನು ಗಮನಿಸಿ-ವ್ಯಾವಹಾರಿಕವಾಗಿ ವಯಸ್ಸಿನಲ್ಲಿ ದೊಡ್ಡವರು ಅಥವಾ ಸಣ್ಣವರು ಎಂಬ ಪ್ರಶ್ನೆ ಬರೋದಿಲ್ಲ, ಅಧಿಕಾರದ ಪ್ರಶ್ನೆ ಬರುತ್ತದೆ. ಅಧಿಕಾರ ಮತ್ತು ಹಣ ಯಾರಲ್ಲಿದೆ ಎಂದು ನೋಡಿ.

ಅದು ಧರ್ಮದ ಪ್ರಶ್ನೆಯೋ, ಮಠದ ಪ್ರಶ್ನೆಯೋ, ಬಿಟ್ಟಿ ಖರ್ಚು ಮಾಡೋದಕ್ಕೆ ಯಾರೂ ಸಿದ್ಧರಿಲ್ಲ; ವಾಸ್ತವದಲ್ಲಿ ಅದಕ್ಕೆಲ್ಲ ಪೋಲುಮಾಡುವಷ್ಟು ಧನಿಕರು ನಮ್ಮವರಲ್ಲ. ರಾಷ್ಟ್ರದ ಅನೇಕ ಜನರನ್ನು ಒಂದುಗೂಡಿಸುವ, ಜನರನ್ನುನಿಯಂತ್ರಿಸುವ ಸಾಮರ್ಥ್ಯವಿದೆ ಎಂದು ಕೆಲವುರಾಷ್ಟ್ರೀಯ ನಾಯಕರೆ ಬೊಟ್ಟುಮಾಡಿ ತೋರಿಸುವ ಸಂಘಟಕರಿಗೂ ತೊನೆಯಪ್ಪ ಮಾಡಿಸಿದ ಬ್ಲ್ಯಾಕ್ ಮ್ಯಾಜಿಕ್ ಕೆಲಸಮಾಡಿದೆ ಎಂಬುದರಲ್ಲಿ ಅನುಮಾನವಿಲ್ಲ!! ಮತ್ತು ಇದೊಂದು ವಿಪರ್ಯಾಸ ಕೂಡ.

ತೊನೆಯಪ್ಪನ ಬಗ್ಗೆ ಕೆಲವು ಸಂಘಟಕರ ಅಭಿಪ್ರಾಯ ಹೀಗಿದೆ-“ಈ ವಿಚಾರ ಎಲ್ಲರಿಗೂ ತಿಳಿದರೆ ಸಮಾಜ ಛಿದ್ರವಾಗುವುದು, ರಕ್ತಪಾತವಾಗುವುದು ಬೇಡ ಎಂಬ‌ಇರಾದೆಯಿಂದಲೇ ಈ ವಿಚಾರವನ್ನು ಗೌಪ್ಯವಾಗಿ ಬಗೆಹರಿಸುವ ಯೋಚನೆ/ ಯೋಜನೆ ಮಾಡಲಾಗಿತ್ತು. ಆದರೆ ಚಂದ್ರಮೌಳೀಶ್ವರನ ಇಚ್ಚೆಯಂತೆ ನಡೆಯುತ್ತಿದೆ. ಈ ಸಮಾಜಕ್ಕೆ ದುಷ್ಟ ಶಕ್ತಿಗಳೆಲ್ಲದರ ಪರಿಚಯ ಆಗಬೇಕು, ಮುಖವಾಡಗಳೆಲ್ಲ ಕಳಚಬೇಕು, ರಾವಣನ ಸಂಹಾರ ಆಗಬೇಕೆಂದರೆ ರಾಮಾಯಣ ನಡೆಯಲೇ ಬೇಕು ಎಂಬುದು ರಾಮನ ಇಚ್ಛೆ ಆಗಿರಬೇಕು!”

ಇನ್ನು ಪ್ರಭಾವಿಗಳೆನಿಸಿದ ಕೆಲವರಿಗೆ ತಮ್ಮ ಮನೆತನದ ಬಗ್ಗೆ ಅತೀವ ಕಾಳಜಿ, ತಮ್ಮ ಮನೆತನದ ಹೆಸರು ಇತಿಹಾಸವಾಗಿ ದಾಖಾಲಾಗುವ ಸಮಸ್ಯೆ ಎದುರಾಗಿ ಕೂತುಬಿಟ್ಟಿದೆ! ತೊನೆಯಪ್ಪನನ್ನು ಬಂಧಿಸುವ ತಂತ್ರ ಮಾಡಿದರೆ ಇತಿಹಾಸದ ಪುಟಗಳಲ್ಲಿ “ಇಂತಹ ಮನೆತನದವರಿಂದಲೇ ಮಠದ ಅಧಃಪತನ ನಡೆಯಿತು” ಎಂದು ದಾಖಲಾಗಿಬಿಡುತ್ತದೆ ಎಂಬ ಭಯ. ತುಮರಿಗೆ ಇಲ್ಲೊಂದು ಸಂದೇಹ ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಅಂತಹ ಸಂಘಟಕರು ದೇಶದ ಮತ್ತು ಸಮಾಜದ ಹಿತಕ್ಕಾಗಿ ತಾವು ಮತ್ತು ತಮ್ಮದು, ತಮ್ಮ ಮನೆ, ತಮ್ಮ ಮನೆತನ ಎಲ್ಲವನ್ನೂ ಮರೆತು ಕೆಲಸ ಮಾಡ್ತಾರೆ; ಆದರೆ ಅವರಲ್ಲಿ ಮಾತ್ರ ಅದೇಕೆ ಸಾಧ್ಯವಿಲ್ಲ? ಗೊತ್ತಿಲ್ಲ!! ಇದಕ್ಕೇ ಹೇಳೋದು ತೊನೆಯಪ್ಪನ ಮಾಂತ-ಮಂತ್ರಗಳು ಅವರಮೇಲೂ ಪರಿಣಾಮ ಬೀರಿವೆ ಅಂತ.

ಜನರೇ ಸಮ್ಮೊಹನದಿಂದ ಹೊರಬರುವವರೆಗೆ ಅವರು ಕಾಯುತ್ತಾರಂತೆ! ಜನತಾ ನ್ಯಾಯಾಲಯವೇ ತಿರ್ಮಾನಿಸಬೇಕಂತೆ! ಸಮೂಹ ಸನ್ನಿಯನ್ನು ನಡೆಸಲು ಗೊತ್ತಿರುವವರು ಪ್ರಕರಣದಿಂದ ಖುಲಾಸೆಗೊಳ್ಳುವವರೆಗೆ ಮರಳಿ ಮರಳಿ ಅದನ್ನು ನಡೆಸುತ್ತಲೇ ಇರುತ್ತಾರೆ. ಹೀಗಾಗಿ ಜನ ಸಮೂಹ ಸನ್ನಿಯಿಂದ ಹೊರಬರುವುದು ಅಷ್ಟು ಸುಲಭಸಾಧ್ಯವಲ್ಲ.

ಒಂದು ವಸ್ತುವಿನ/ಯಂತ್ರದ/ಉತ್ಪನ್ನದ ವ್ಯಾಪಾರವನ್ನು ಕೆಡಿಸಲು ಹೊಸ ಹೊಸದಾಗಿ ಹುಟ್ಟಿಕೊಳ್ಳುವ ವ್ಯಾಪಾರಿಗಳ ಪೈಪೋಟಿಯೇ ಸಾಕು. ಹೊಸಬರು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ; ಹುಟ್ಟಿಕೊಂಡವರು ಎಷ್ಟುದಿನ ನಡೆಸಿದರು ಎಂಬುದು ಮುಖ್ಯವಲ್ಲ; ಇರುವಷ್ಟು ದಿನ ಅವರ ಅನಾರೋಗ್ಯಕರ ಪೈಪೋಟಿಯಿಂದ ಹಳಬರಿಗೆ ಅದರ ಪರಿಣಾಮ ನಾಟುತ್ತ ನಡೆದು, ಲಾಭಾಂಶ ಇಲ್ಲದೇ ಹೋಗಬಹುದು! ಕೊನೆಗೊಮ್ಮೆ ಹಳೆಯ ವ್ಯಾಪಾರಿಗಳಿಗೆ ಮಾರುಕಟ್ಟೆಯಲ್ಲಿ ಜಾಗವೇ ಇಲ್ಲದಂತಾಗಬಹುದು.

ಶಿಷ್ಯಸಮುದಾಯ ಅಥವಾ ಪೀಠ ಹಳೆಯದು. ಪೀಠವನ್ನೇರಿದ ಹೋರಿ ಹೊಸದು. ಪೀಠದ ಉಳಿಯುವಿಕೆಗೆ ಹಳಬರು ನೀಡುವ ಪ್ರತಿಭಟನಾ ಶಕ್ತಿಗಿಂತ, ಮಾಂತ್ರಿಕರ ಮೂಲಕ, ಹಣಬಲ-ತೋಳ್ಬಲಗಳ ಮೂಲಕ, ಕಚ್ಚೆಶೀ ನಡೆಸುತ್ತಿರುವ ಹೋರಾಟ ಬಹಳ ಪ್ರಬಲವಾದುದು. ತೊನೆಯಪ್ಪನ ಪ್ರಾಬಲ್ಯ ಅಳಿಯಬೇಕೆಂದರೆ ಅವನೊಮ್ಮೆ ಅಂದರ್ ಆಗಬೇಕು. ಯಾರು ಅವನನ್ನು ಅಂದರ್ ಮಾಡಿಸಬಹುದೋ ಅವರೇ ಸುಮ್ಮನಾಗಿದ್ದು ಒಂದು ಚೋದ್ಯವಾಗಿ ಕಾಣುತ್ತಿದೆ; ಹಾಗಾದರೆ ಅವರಲ್ಲಿ ನಿಜವಾಗಿಯೂ ಅಂತಹ ತಾಕತ್ತು ಇತ್ತೇ? ಅಥವಾ ಇದೆಯೇ? ತುಮರಿಗಂತೂ ಸಂದೇಹ.

ಕಾಲದ ಹಲ್ಲಿಗೆ ಸಿಲುಕಿ ಕೆಲವು ಸಂಘಟನೆಗಳ ಧ್ಯೇಯಾದರ್ಶಗಳಲ್ಲೂ ಮಾರ್ಪಾಡುಗಳಾಗಿವೆ ಎಂದು ಕೇಳಿಬರುತ್ತಿದೆ. ಈಗ ಸಂಖ್ಯಾಬಲಕ್ಕಾಗಿ ಸ್ಲೇಟ್ ಹಿಡಿದವರನ್ನೂ ಅವರು ವಿರೋಧಿಸೋದಿಲ್ಲವಂತೆ. ಧರ್ಮಬಾಹಿರ ಚಟುವಟಿಕೆಗಳಲ್ಲಿ ನಿರತರಾದವರನ್ನೂ ಅಂತಹ ಸಂಘಟನೆಗಳವರು ಒಪ್ಪಿಕೊಳ್ಳುತ್ತಾರೆ ಅಂತಾದರೆ ಸಂಘಟನೆಗಳೂ ಕುಲಗೆಟ್ಟವೇ ಎಂಬುದು ಇನ್ನೊಂದು ಪ್ರಶ್ನೆ. ಅದಿಲ್ಲ ತುರ್ತಾಗಿ ಅಂತಹ ಸಂಘಟನೆಗಳು ಈ ಲೇಖನವನ್ನೋದಿ ಜಾಗೃತಗೊಂಡು ಸಮಾಜಘಾತುಕನಾದ ತೊನೆಯಪ್ಪನನ್ನು ಬಂಧಿಸುವಲ್ಲಿ ಮುಂದಾಗಬೇಕು.

ಎಲ್ಲಿಗೆ ನೀತಿ-ನಿಯತ್ತಿಗೆ ಬೆಲೆ ಇರುವುದಿಲ್ಲವೋ ಅಂತಹ ರಾಜ್ಯದಲ್ಲಿ ಅರೆಕ್ಷಣವೂ ನಿಲ್ಲಬೇಡ ಎಂಬುದು ಚಾಣಕ್ಯನ ಹೇಳಿಕೆ. ಹಾಗಾದರೆ ಒಕ್ಕಣ್ಣ ರಾಕ್ಷಸರ ರಾಜ್ಯದಂತಿರುವಲ್ಲಿ ಸಂಘಟನೆಗಳಾದರೂ ಮುಂದಾಗಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಬಹುದೇ? ಕಾದುನೋಡೋಣ.

Thumari Ramachandra

source: https://www.facebook.com/groups/1499395003680065/permalink/1789479051338324/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s