ಹೇ, ನಾತ, ನಾರಾಯಣಾ, ವಾಸುದೇವ !

ಹೇ, ನಾತ, ನಾರಾಯಣಾ, ವಾಸುದೇವ !

ಎರಡು ವರ್ಷಗಳ ಹಿಂದೆ ಪುರೋಹಿತರೊಬ್ಬರ ಮನೆಗೆ ನಾವು ಹೋಗಿದ್ದಾಗ ಜಗುಲಿಯಲ್ಲಿ ಗಬ್ಬು ವಾಸನೆ ಹೊಡೆಯುತ್ತಿತ್ತು! ಕರ್ಪೂರ-ಶ್ರೀಗಂಧದ ಪರಿಮಳ ತುಂಬಿರಬೇಕಾದ ಜಗುಲಿ ಅಂತಹ ದುರ್ಗಂಧದಿಂದ ನಾರುತ್ತಿರುವುದಕ್ಕೆ ಕಣ್ಣು ಹೊರಳಿಸಿ ಕಾರಣ ಹುಡುಕಿದೆವು. ಸಾಂಪ್ರದಾಯಿಕತೆಯನ್ನು ಅತ್ಯಂತ ಕರಾರುವಾಕ್ಕಾಗಿ ನಡೆಸುತ್ತಿದ್ದ ಭಟ್ಟರ ಮನೆಯ ಜಗುಲಿಯನ್ನು ಆಗ ತಾನೇ ಸಗಣಿಯಿಂದ ಸಾರಿಸಿದ್ದರು-ಶುಚಿತ್ವಕ್ಕಾಗಿ.

ಭಟ್ಟರ ಕೊಟ್ಟಿಗೆಯಲ್ಲಿ ಈಗ ದೇಸಿ ತಳಿಯ ಆಕಳುಗಳಿಲ್ಲ. ಇರುವುದೊಂದೇ ಆಕಳು ಅದು ಹಾಲ್ ಸ್ಟೀನ್ ಎಂಬ ಪರ್ಶಿಯನ್ ಮಿಶ್ರತಳಿ, ಅತ್ಲಾಗೆ ಕತ್ತೆಯೂ ಅಲ್ಲ, ಇತ್ಲಾಗೆ ದನವೂ ಅಲ್ಲ ಅಂತದ್ದು! ನೆಟ್ಟಗೆ ಕೂಗಲೂ ಬಾರದು. ಐವತ್ತು ವರ್ಷಗಳ ಹಿಂದೆ ಭಟ್ಟರ ಮನೆಯಿದ್ದದ್ದು ಕಾಡಂಚಿನ ಗುಡ್ಡದ ಸೆರಗಿನಲ್ಲಿ. ಮನೆ ಇದ್ದಲ್ಲೇ ಇದೆ; ಇಂದು ಕಾಡಿಲ್ಲ, ಅಲ್ಲೆಲ್ಲ ಹಲವು ಕಾಂಪೌಂಡುಗಳು ಕಾಣುತ್ತವೆ.

ಸರಕಾರೀ ಅರಣ್ಯಕ್ಕೆ ಮೀಸಲಾದ ಜಾಗವಿದ್ದ ಕಾಲದಲ್ಲಿ ಸಾಕಷ್ಟು ಗೋಮಾಳಗಳಿದ್ದವು. ಅಂತಹ ಗೋಮಾಳವಿದ್ದಾಗ ಭಟ್ಟರ ಮನೆಯಲ್ಲಿ ಸಾಕಷ್ಟು ದನಕರುಗಳಿದ್ದವು. ದಿನನಿತ್ಯ ಅವುಗಳಿಗೆ ಕಲಗಚ್ಚು[ಅಕ್ಕಚ್ಚು]ಕೊಡೋದು, ಹುಲ್ಲು- ದಾಣಿ ಕೊಡೋದು, ಕಟ್ಟಿ ಹಾಕೋದು-ಬಿಟ್ಟಿ ಹಾಕೋದು ಇದಕೆಲ್ಲ ಏನಿಲ್ಲವೆಂದ್ರೂ ಒಂದು ತಾಸು ಹಿಡೀತಿತ್ತು.

ಮನೆಯಲ್ಲೂ ಸಾಕಷ್ಟು ಜನ ಇದ್ರು-ಅವಿಭಕ್ತ ಕುಟುಂಬ. ಯಾರೋ ಒಬ್ಬರು ಹೋಗಿ ಆ ಕೆಲಸ ಮಾಡ್ತಿದ್ರು. ಬಿಸಿಲಲ್ಲಿ ಅಲೆಯುತ್ತ ಗೋಮಾಳ ಸುತ್ತುತ್ತ ಹಸಿರುಸೊಪ್ಪು ತಿಂದು ಬರುವ ಆಕಳುಗಳು ಗೋವುಗಳಾಗಿದ್ದವು; ಹಾಲ್ ಸ್ಟೀನ್, ಜರ್ಸಿ ಮೊದಲಾದ ಹಾಲುಕೊಡುವ ಯಂತ್ರಗಳಾಗಿರಲಿಲ್ಲ. ಗೋವುಗಳ ಹಾಲು-ಹೈನ ಮತ್ತು ಸಗಣಿ-ಗಂಜಲಗಳಲ್ಲಿ ರೋಗನಿರೋಧಕ ಶಕ್ತಿ ಇರುತ್ತಿತ್ತು.

ಇಂದು ಗೋಮಾಳಗಳಿಲ್ಲ, ಮನೆಯಲ್ಲಿ ಹೆಸರಿಗೆ ಮೂರೋ ನಾಲ್ಕೋ ಮಂದಿ-ಯಾರೂ ಶ್ರಮದ ಕೆಲಸಕ್ಕಾಗುವವರಲ್ಲ. ದೇಸಿ ತಳಿಯ ದನಗಳು ಕಾಣಲೂ ಸಿಗೋದಿಲ್ಲ. ಮನುಷ್ಯರು ತಿನ್ನುವಂತ ಆಹಾರದ ಇನ್ನೊಂದು ರೂಪವನ್ನೇ ಮಿಶ್ರತಳಿಯ ಆಕಳುಗಳಿಗೆ ನೀಡ್ತಾರೆ. ಅವು ಹಾಲನ್ನಂತೂ ಕೊಡುತ್ತವೆ. ಆದರೆ ಅವುಗಳ ಮಲ-ಮೂತ್ರಗಳಲ್ಲಿ ಗೋವಿನ ಮಲ-ಮೂತ್ರಗಳಲ್ಲಿದ್ದ ಸಾರಾಂಶವಿಲ್ಲ; ಬ್ಯಾಕ್ಟೀರಿಯಾಗಳೇ ಇರೋದು ಜಾಸ್ತಿ.

ಭಟ್ಟರಿಗೆ ಸಂಪ್ರದಾಯ ಪಾಲನೆ ಆಗಬೇಕು. ಆದರೆ ಸಂಪ್ರದಾಯದಲ್ಲಿ ಅಡಗಿದ ವಿಜ್ಞಾನದ ಬಗ್ಗೆ ತಿಳುವಳಿಕೆಯಿಲ್ಲ. ಗೋಮಯ ಎಂಬುದು ಕರು ಹಾಕಿದ ಆರೋಗ್ಯವಂತ ದೇಸೀ ತಳಿಯ ದನದ ತಾಜಾ ಸಗಣಿಯಾಗಿರಬೇಕು-ಆ ಸಗಣಿಯಲ್ಲಿ ಬ್ಯಾಕ್ಟೀರಿಯ ನಿರೋಧಕ ಶಕ್ತಿ ಇರುತ್ತದೆ. ಬಿಸಿಯಾರಿದರೆ ಅದು ಗೋಮಯವಲ್ಲ-ಗೊಬ್ಬರ ಎನಿಸಿಕೊಳ್ಳುತ್ತದೆ. ದನದ ಬದಲಿಗೆ ಹೋರಿಯ ಅಥವಾ ಕರುಹಾಕಿರದ ದನದ, ಅನಾರೋಗ್ಯ ಪೀಡಿತ ದನದ ಸಗಣಿಯಾದರೆ ಒಪ್ಪತಕ್ಕದ್ದಲ್ಲ.

ಹಿಂದಿನಿಂದ ಬಂದ ಸಂಪ್ರದಾಯದಂತೆ ಭಟ್ಟರ ಮನೆಯಲ್ಲಿ ಮನುಷ್ಯರ ಸಗಣಿಗೆ ಸರಿಗಟ್ಟುವ ಹಾಲ್ ಸ್ಟೀನ್ ಆಕಳಿನ ಸಗಣಿಯನ್ನು ಹಾಕಿ ನೆಲ ಸಾರಿಸ್ತಾರೆ. ಮನುಷ್ಯರ ಸಗಣಿಯ ವಾಸನೆಗೆ ಸರಿಗಟ್ಟುವ ವಾಸನೆಯೇ ಅಲ್ಲೂ ಇರುತ್ತದೆ! ಹಾಗಾಗಿ ಭಟ್ಟರ ಜಗುಲಿಯಲ್ಲಿ ಹಾಲ್ ಸ್ಟೀನ್ ಆಕಳಿನ ಹಳೆಯ ಸಗಣಿಯ ದುರ್ನಾತ ತುಂಬಿತ್ತು.

ಸಗಣಿ ಹಳತಾದಾಗ ಅದರಲ್ಲಿ ನೈಸರ್ಗಿಕವಾಗಿ ಹುಳಗಳು ಹುಟ್ಟಿಕೊಳ್ಳುತ್ತವೆ! ತೀರಾ ಹುಳಗಳು ಹುಟ್ಟಿಕೊಳ್ಳುವ ಮೊದಲೇ ಬಳಸೋದರಿಂದ ಹುಳಗಳು ಕಾಣಿಸದಿರಬಹುದು ಆದರೆ ಕ್ರಿಮಿ-ಕೀಟಾಣುಗಳು ಇದ್ದೇ ಇರುತ್ತವೆ. ಅಂತಹ ಒಳ ಬಳಕೆಗೆ ಯೋಗ್ಯವಲ್ಲದ ಸಗಣಿಯಿಂದ ಮನೆಯ ಜಗುಲಿಯನ್ನು ಸಾರಿಸುತ್ತಾರೆ!

ಕಾವಿಯಲ್ಲೂ ಈಗೀಗ ಇದೇ ಬದಲಾವಣೆ ಕಾಣುತ್ತದೆ. ಒಂದು ದೇಸೀ ಋಷಿಮುನಿಗಳ ತಳಿ, ಇನ್ನೊಂದು ಕಾವಿವೇಷ ಧರಿಸುವ ಕ್ರಿಮಿನಲ್ ಗಳ ತಳಿ! ತೊನೆಯಪ್ಪ ಕಚ್ಚೆಶೀಗಳು ತಮ್ಮನ್ನು ಎರಡನೇ ವರ್ಗದಲ್ಲಿ ಗುರುತಿಸಿಕೊಂಡಿದ್ದಾರೆ. ಗೋಮಯದಲ್ಲಿ ಇರುವ ಶಕ್ತಿ ಮಿಶ್ರತಳಿ ಆಕಳುಗಳ ಸಗಣಿಯಲ್ಲಿ ಹೇಗೆ ಇರೋದಿಲ್ಲವೋ ಹಾಗೇನೆ ಕಾವಿಯಲ್ಲಿರುವ ಶಕ್ತಿ ಕಾವಿವೇಷದವರಲ್ಲಿ ಇರೋದಿಲ್ಲ. ಇಂತಹ ಕಾವಿವೇಷದವರನ್ನ ಧಾರ್ಮಿಕ ಮುಂದಾಳತ್ವಕ್ಕೆ ನಿಯೋಜಿಸಿಕೊಳ್ಳೋದು ಸಮಾಜದ ದೌರ್ಭಾಗ್ಯ.

ಸಾಹಿತ್ಯದಲ್ಲಿ ಮೂರು ಭಿನ್ನ ಪ್ರಮುಖ ಪ್ರಕಾರಗಳನ್ನು ವಿಂಗಡಿಸಿದ್ದಾರಂತೆ-ನಮ್ಮ ಮಿತ್ರರೊಬ್ಬರು ಹೇಳುತ್ತಿದ್ದರು. ಪ್ರಬೋಧ ಸಾಹಿತ್ಯ, ಪ್ರಮೋದ ಸಾಹಿತ್ಯ ಮತ್ತು ಪ್ರಮಾದ ಸಾಹಿತ್ಯ ಎಂದು ಮೂರು ಬಗೆಯಂತೆ. ಪ್ರಬೋಧ ಸಾಹಿತ್ಯ ಅಂದರೆ ಧಾರ್ಮಿಕ ಸಂವಿಧಾನಗಳು, ಶ್ರುತಿ-ಸ್ಮೃತಿ-ಪುರಾಣಗಳು; ಅವುಗಳಿಂದ ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು. ಅವುಗಳನ್ನೆ ತಿದ್ದಲು ನಮಗೆ ಅವಕಾಶವಾಗಲೀ ಅರ್ಹತೆಯಾಗಲೀ ಇಲ್ಲ. [ಇಲ್ಲದಿದ್ದರೆ ಇಷ್ಟುಹೊತ್ತಿಗೆ ಭೋಗವರ್ಧನವಾಳ ಪರಂಪರೆಯ ತೊನೆಯಪ್ಪ ಅವುಗಳನ್ನೆಲ್ಲ ತಿದ್ದಿಸಿಬಿಡುತ್ತಿದ್ದ!]

ಜೀವನದಲ್ಲಿ ಹೀಗೆ ನಡೆದರೆ ಸರಿ, ಹೀಗೆ ನಡೆಯೋದು ತಪ್ಪು ಎಂದು ಹೇಳೋದು ಪ್ರಬೋಧ ಸಾಹಿತ್ಯ. ತಪ್ಪು-ಒಪ್ಪು ಜೀವನದಲ್ಲಿ ಸಹಜ. ತಪ್ಪನ್ನು ತಿದ್ದಿಕೊಳ್ಳಲು ಹಲವು ದೃಷ್ಟಾಂತಗಳನ್ನು ಮನೋರಂಜನೆಯ ರೂಪದಲ್ಲಿ ಒದಗಿಸಿಕೊಡೋದು ಪ್ರಮೋದ ಸಾಹಿತ್ಯವಂತೆ. ಉತ್ತಮ ಗುಣಮಟ್ಟದ ಕತೆ, ಕವನ, ಕಾದಂಬರಿ, ಪ್ರಬಂಧ ಇಂತವೆಲ್ಲ ಆ ಸಾಲಿಗೆ ಸೇರುತ್ತವೆ ಎಂದಾಯ್ತು. ನಾಟಕ, ಹಾಸ್ಯ, ಯಕ್ಷಗಾನ, ಸಿನಿಮಾಗಳೂ ಸಹ ಆ ಸಾಲಿಗೆ ಸೇರುತ್ತವೆ. ಅವುಗಳ ರಸಾಸ್ವಾದನೆಯಿಂದ ಸಮಾಜ ತಪ್ಪನ್ನು ತಿದ್ದಿಕೊಳ್ಳುತ್ತದೆ ಎಂದರ್ಥ.

ಅನರ್ಥಕಾರಿ ವಿಷಯಗಳಿಂದ ಸಮಾಜದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುವುದು, ವಿನಾಶಕಾರಿ ಬೆಳವಣಿಗೆಗೆ ಕಾರಣವಾಗುವುದು, ವಿಪ್ಲವಗಳನ್ನೂ ದ್ವೇಷಾಸೂಯೆಗಳನ್ನೂ ಹುಟ್ಟಿಸೋದು, ವ್ಯಕ್ತಿಯ ತೇಜೋವಧೆ ಮಾಡೋದು ಇಂತಹ ಸರಕುಗಳನ್ನು ಪ್ರಮಾದ ಸಾಹಿತ್ಯ ಎನ್ನುತ್ತಾರೆ. “ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದ್ದೆ” ಎಂಬಂತಹ ’ಮೂತ್ರ ಸಾಹಿತ್ಯ’ ಈ ಸಾಲಿಗೇ ಸೇರುತ್ತದೆ.

ಇವು ಮೂರಕ್ಕೂ ಹೊರತಾಗಿ ನಿಲ್ಲುವ ಸಾಹಿತ್ಯ ಪ್ರಕಾರವೊಂದಿದೆ; ಅದು ವಾಣಿಜ್ಯ ಸಾಹಿತ್ಯ. ವಣಿಜೀಕರಣಕ್ಕೆ ಸಂಬಂಧಿಸಿದ ಸಾಹಿತ್ಯ; ವಣಿಜರು ತಮ್ಮ ಸ್ವಾರ್ಥಕ್ಕಾಗಿ ಹುಟ್ಟಿಸಿದ ಸಾಹಿತ್ಯ. ಮಹಾಸ್ವಾಮಿ ತೊನೆಯಪ್ಪನವರು ಅಂತದ್ದೊಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದರಿಂದ, ಸನ್ಯಾಸಿಯಾದವರಿಗೆ ಪ್ರಬೋಧ ಸಾಹಿತ್ಯಗಳು ಹೇಳಿರುವ ಮೇರೆಯನ್ನು ತೊನೆಯಪ್ಪನವರು ಮೀರಿದ್ದಾರೆ ಎಂದರ್ಥ.

ಶಂಕರರು ರಾಜಾಶ್ರಯ ಸಿಗುತ್ತಿದ್ದರೂ ತೊರೆದರು. ಆಡಂಬರಗಳನ್ನು ಸಹಿಸಲಿಲ್ಲ. ಯಾರ ಕೃಪೆಗಾಗಿ, ಬೆಂಬಲಕ್ಕಾಗಿ ಅವರು ಹೇಳಿದಲ್ಲೆಲ್ಲ ಅಂಡಲೆಯಲು ಹೋಗಲಿಲ್ಲ. ಶೋಭರಾಜಾಚಾರ್ಯರು ಹಾಗಲ್ಲ, ಶಿಷ್ಯಬಳಗದಲ್ಲಿ ಪೈಸೆ ಹುಟ್ಟಿತ್ತಿಲ್ಲ ಎಂದು ಗೊತ್ತಾದಾಗ. “ಹುಟ್ಟಿದಷ್ಟು ಮಕ್ಕಳ ಪುಣ್ಯ” ಅಂತಾರಲ್ಲ, ಹಾಗೆ ನೇರವಾಗಿ ಉತ್ತರಕ್ಕೆ ಹಾರಿದ್ದಾರೆ. ಕಚ್ಚೆಕೇಸುಗಳನ್ನು ಮುಚ್ಚೋದಕ್ಕೆ ಕೋಟಿಗಳಲ್ಲಿ ವಿನಿಯೋಗ ಮಾಡಬೇಕಲ್ಲ?

ಶಾಸ್ತ್ರ-ನೀತಿಗಳೆಲ್ಲ ಕುಲಗೆಟ್ಟಿರುವ ಉತ್ತರದಲ್ಲಿ ಒಂದೆರಡಲ್ಲ, ಇಂತಹ ಹಲವು ಕಾವಿವೇಷಗಳಿವೆ. ಅಲ್ಲಿನ ಉದ್ಯಮಿಗಳಿಗೂ ಕಳ್ಳ ಹಣ ಇಡೋದಕ್ಕೆ ಇಂತವರೇ ಬೇಕು. ಹಿಂದೆ ಚಂದ್ರಾಸ್ವಾಮಿ, ಧೀರೇದ್ರ ಬ್ರಹ್ಮಚಾರಿ ಇಂತವರೆಲ್ಲ ಇದ್ದರಲ್ಲ? ರಾತ್ರೋರಾತ್ರಿ ಅವರು ಪ್ರಖ್ಯಾತರಾಗಿದ್ದೇ ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳಿಂದ.

ಧರ್ಮಪೀಠದ ಒಬ್ಬ ಮುಂದಾಳು ಅಂತಹ ಬಕೀಟು ಹಿಡಿಯುವ ಕೆಲಸ ಮಾಡೋದು ಸಮಾಜದ ಅವನತಿಯನ್ನು ಸೂಚಿಸುತ್ತದೆ. ಇತ್ಲಕಡೆಗೆ “ನಾವು ಕೇವಲ ಕೆಲವೇ ಶ್ರೀಮಂತರಿಂದ ಮಠ ನಡೆಸಬಹುದು. ಅದೇನೂ ದೊಡ್ಡದಲ್ಲ” ಎಂಬ ಮಾತನಾಡೋದು ಮತ್ತು ಅತ್ಲಕಡೆಗೆ ಶ್ರೀಂತರಿಗೆ, ಹಣ ಕೊಡೋರಿಗೆ ಗಾಳ ಹಾಕಿ ಬಕೀಟು ಹಿಡಿಯೋದು ಕಾವಿವೇಷದ ವ್ಯಕ್ತಿಯ ದ್ವಂದ್ವ ನಿಲುವನ್ನು ತೋರಿಸುತ್ತದೆ. ನಮ್ಮಲ್ಲಿ ಕೆಲವರು ಮಂಗನನ್ನು ಹಿಡಿದು ಆಡಿಸುತ್ತಿರುತ್ತಾರೆ; ನಮಾಮಿಯ ಜನ ಮಠದ ಕೋತಿಯನ್ನು ಹಿಡಿದು ಆಡಿಸುತ್ತಿದ್ದಾರೆ; ಅದರರ್ಥ ಅವರಿಗೆ ವಿಷಯ ಗೊತ್ತಿಲ್ಲವೆಂದಲ್ಲ- ಕೋತಿ ಬೆಣ್ಣೆಯನ್ನು ತಾನು ತಿಂದು ಮೇಕೆ ಬಾಯಿಗೆ ಒರೆಸಿದೆ ಎಂಬುದನ್ನು ಅವರು ಬಲ್ಲರು; ಆದರೆ ಅವರ ಕಳ್ಳ ಹಣವನ್ನು ಅವರು ರಕ್ಷಿಸಿಕೊಳ್ಳಬೇಕಲ್ಲ?

ಕಚ್ಚೆಶೀಗಳು ಉತ್ತರಕ್ಕೆ ಹೋದಂತೆ ಒಂದೊಂದಾಗಿ ಎಲ್ಲವನ್ನೂ ಬಿಡುತ್ತ ಹೋಗುತ್ತಾರೆ; ಅವರಿಗೆ ಜೊತೆಗಾರರು ಜೊತೆಗೇ ಇರಬೇಕೆಂದಿಲ್ಲ, ಕೊಡೆ ಹಿಡಿಯೋದು ಬೇಡ, ಮುಂದುಗಡೆ ದಂಡ ಹಿಡಿಯೋದೂ ಬೇಡ, ಪೀಠವೂ ಬೇಡ; ಅಂತಹ ಆಡಂಬರಗಳ ಪ್ರೋಟೋಕಾಲ್ ಜಾರಿಯಲ್ಲಿರೋದು ಸ್ವಕ್ಷೇತ್ರದಲ್ಲಿ ಮಾತ್ರ! ಪರಸ್ಥಳದಲ್ಲಿ ಬಿಸ್ಕೆಟ್ಟಿಗೆ ಕಾಯ್ದಿರುವ ನಾಯಿಗೂ ಸ್ವಕ್ಷೇತ್ರದಲ್ಲಿ ಮಾತ್ರ ತನ್ನ ನೇರಕ್ಕೆ ಬೊಗಳುವ ಶಕ್ತಿ ತಾನೇ?

ಅದೆಲ್ಲ ಹಾಗಿರಲಿ, ಯೋಗಪಟ್ಟವಾಗುವಾಗ ಗುರು ಕೊಟ್ಟ ಯೋಗ ದಂಡ ಇರುತ್ತದಲ್ಲ? ಅದನ್ನು ಬಿಟ್ಟು ಮೂರು ಬಾಣಗಳ ಅಳತೆಯನ್ನೂ ಕ್ರಮಿಸಬಾರದು ಎನ್ನುತ್ತದೆ ಯತಿಧರ್ಮ[;ಕೌಪೀನವನ್ನೇ ಕಿತ್ತೆಸೆದು ದೂರ ಓಡಾಡಿ ಹೆಣ್ಣುಗಳ ಮೇಲೆ ಉಳ್ಳಾಡುವವರಿಗೆ ಅವರ ದಂಡವೊಂದೇ ಸಾಕು ಅಂತಾರೆ ತೊನೆಯಪ್ಪನೋರು!] ಇಲ್ಲೂ ಸಹ ಯತಿಧರ್ಮ ಮೀರಿದ್ದು ಢಾಳಾಗಿ ಕಾಣುತ್ತದೆ.

ಪೊರಕೆ ಮತ್ತು ಚಪ್ಪಲಿಗಳಿಂದ ಹೊಡೆಯುವ ಸಂಸ್ಕೃತಿ ಹಿಂದಕ್ಕೆ ಈ ಸಮಾಜದಲ್ಲಿ ಎಲ್ಲೂ ಇರಲಿಲ್ಲ. ಇದನ್ನು ಜಾರಿಗೆ ತಂದಿದ್ದೇ ಈ ಶೋಭರಾಜಾಚಾರ್ಯರು. ಅದರಲ್ಲೂ ಶಂಕರರ ಹೆಸರನಲ್ಲಿ ಧರ್ಮ ಬೋಧನೆ ಮಾಡುತ್ತೇನೆ ಎನ್ನುತ್ತ, ಸಾಕಿಕೊಂಡ ತಾಲೀಬಾನಿಗಳಿಗೆ ಇಂತದ್ದನ್ನು ನಡೆಸುವಂತೆ ಅಲಿಖಿತ ಫರ್ಮಾನು ಹೊರಡಿಸಿದ್ದು ಯತಿಧರ್ಮಕ್ಕೊಂದೇ ಅಲ್ಲ ಧರ್ಮಪೀಠವೆಂಬ ಸ್ಥಾನಕ್ಕೂ ಎಸಗಿದ ಅಪಚಾರ.

ವಿದೇಶದಲ್ಲಿ ಹರಿದ, ಚಿಂದಿಯಾದ ಜೀನ್ಸ್ ಗಳನ್ನು ಹಾಕಿಕೊಳ್ಳೋದೇ ಒಂದು ಪ್ಯಾಶನ್. ಆದರೆ ನಮ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಅದಕ್ಕೆ ಬಿನ್ನ ಸ್ಥಾನವಿದೆ. ನಾಳೆಯದಿನ ತನ್ನ ತಾಲಿಬಾನಿಗಳು ಬಯಸಿದರೆ “ಮಹಿಳೆಯರು ಹರಿದ ಜೀನ್ಸ್ ಧರಿಸಿ ದರ್ಶನಕ್ಕೆ ಬರಬೇಕು” ಎಂದು ತೊನೆಯಪ್ಪನವರು ಅಪ್ಪಣೆ ಕೊಡಿಸಿಯಾರು!

ತನ್ನ ಬಯಕೆಗಳಿಗೆ, ಆಸೆಗಳಿಗೆ, ಆಸೆಗಳಿಗೆ ಸಂಬಂಧಪಟ್ಟ ಕಾರ್ಯಯೋಜನೆಗಳಿಗೆ ಅಡ್ಡಿಪಡಿಸುವವರನ್ನು ವಿರೋಧಿಗಳು ಎಂದು ವ್ಯಕ್ತಿ ಗುರುತಿಸುತ್ತಾನೆ. ಸನ್ಯಾಸಿಯಾದವನಿಗೆ ಯಾವ ಆಸೆಗಳಾಗಲೀ ಬಯಕೆಗಳಾಗಲೀ ಇರಬಾರದು. ಶಿವರಾಮ ಕಾರಂತರು ಹೇಳುತ್ತಾರೆ-“ಸನ್ಯಾಸಿಗಿರೋದು ಒಂದೇ ಆಸೆ-ಅದು ಮೋಕ್ಷವನ್ನು ಸಂಪಾದಿಸೋದು”ಅಂತ. ಆದರೆ ಈ ’ಸನ್ಯಾಸಿ’ಗೆ ಅದೊಂದನ್ನು ಬಿಟ್ಟು ಉಳಿದೆಲ್ಲ ಆಸೆಗಳೂ ಇವೆ ಎಂಬುದು ಇಲ್ಲಿ ಸ್ಪಷ್ಟ. ತನ್ನ ಧೋರಣೆಗಳನ್ನು ವಿರೋಧಿಸುವ ಶಿಷ್ಯರೆಲ್ಲ ಇವನಿಗೆ ವಿರೋಧಿಗಳಾಗಿ ಕಾಣುತ್ತಿದ್ದಾರೆ.

ಮಠದಲ್ಲಿ ಹಿಂದೆ ಪ್ರಮುಖರಾಗಿ ಸೇವೆ ಸಲ್ಲಿಸಿದ ಗಣ್ಯರು ಇಂದು ಅಲ್ಲಿಲ್ಲ; ಅವರೆಲ್ಲ ಈಗ ವಿರೋಧಿಗಳು. ಅದಾವುದೋ ಹಲ್ಲು ಮೂಡದ ಹುಡುಗ ಅಂತವರನ್ನೆಲ್ಲ ಅವಾಚ್ಯ ಶಬ್ದಗಳಿಂದ ಟೀಕಿಸುತ್ತಾನೆ; ಅದಕ್ಕೆಲ್ಲ ಆ ಕಳ್ಳ ಸನ್ಯಾಸಿ ಪ್ರೇರಣೆ ನೀಡುತ್ತಾನೆ. ಇಂದು ಮಠದಲ್ಲಿರುವ ಪ್ರತಿಯೊಂದು ವಸ್ತುವೂ, ಕಟ್ಟಡವೂ ಅಂತಹ ಮಹನೀಯರ ಕೊಡುಗೆಗಳ ಫಲವೇ ಹೊರತು ಅವರಾರೂ ಆಗ ಬರದಿದ್ದರೆ ತೊನೆಯಪ್ಪ ತುತ್ತೂರಿ ಊದುತ್ತ ಕುಳಿತಿರಬೇಕಾಗ್ತಿತ್ತು.

ಶಿಖರನಗರದಲ್ಲಿ ಮಠದ ಕಟ್ಟಡ ಅಪೂರ್ಣವಾಗುತ್ತದೆ ಎಂದಾಗುವಾಗ ಸದ್ಗುಣಿಗಳು ತಮ್ಮ ಹಣ ಚೆಲ್ಲಿದರು, ಸನ್ಯಾಸಿಗೆ ಓಡಾಡಲು ತನ್ನ ಹೊಸ ಕಾರುಗಳನ್ನು ಕೊಟ್ಟವರು ಇನ್ನೊಬ್ಬರು, ಪೂಜೆಗೆ ಅನುಕೂಲವಾಗಲಿ ಅಂತ ಮಂಟಪವನ್ನೂ ಮಾಡಿಸಿ ಕೊಟ್ಟರು. ಹೀಗೆ ಒಬ್ಬೊಬ್ಬರೂ ಅವರವರಿಗೆ ತೋಚಿದ ರೀತಿಯಲ್ಲಿ ಅನುಕೂಲ ಕಲ್ಪಿಸಿಕೊಟ್ಟರು. ಸನ್ಯಾಸಿ ಕಳ್ಳ ಅಂತ ಆಗ ಅವರಿಗೆಲ್ಲ ಗೊತ್ತಾಗಲಿಲ್ಲ; ಊರು ಕೊಳ್ಳೆ ಹೊಡೆದಮೇಲೆ ಕೋಟೆಯ ದಿಡ್ಡಿಬಾಗಿಲು ಹಾಕಿದರಂತೆ ಅನ್ನೋ ಹಾಗೆ ಕಳ್ಳ ಸನ್ಯಾಸಿ ತನಗೆ ಬೇಕಾದದ್ದನ್ನೆಲ್ಲ ಪಡೆದುಕೊಂಡ ಮೇಲೆ ಅರ್ಥಮಾಡಿಕೊಂಡರು; ಸರ್ವಾಧಿಕಾರಿ ತೊನೆಯಪ್ಪ ಅವರನ್ನೆಲ್ಲ ವಿರೋಧಿಗಳು ಎನ್ನತೊಡಗಿದ.

ಯಾವುದೇ ಶಿಷ್ಟ ಸಮಾಜದಲ್ಲಿ ವಿರೋಧಿಗಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿರುತ್ತದೆ. ಅವರೇನು ಹೇಳ್ತಾರೆ ಅನ್ನೋದನ್ನು ಕೇಳುವ ಔದಾರ್ಯವಿರುತ್ತದೆ. ವಿರೋಧಿಗಳು ಎನಿಸಿಕೊಂಡವರ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳೋದು ರಾಕ್ಷಸರ ರಾಜ್ಯದಲ್ಲಿ ಮಾತ್ರ. ವಿರೋಧಿಗಳು ಕೇವಲ ನಲ್ವತ್ತೈವತ್ತು ಜನ ಇದ್ದಾರೆ ಎನ್ನುತ್ತಿದ್ದ ತೊನೆಯಪ್ಪ ಈಗ ವಿರೋಧಿಗಳ ಬಣದಲ್ಲೇ ಸಂಖ್ಯಾಬಲ ಹೆಚ್ಚುತ್ತಿದೆ ಎಂಬುದನ್ನರಿತು ವಿರೋಧಿಗಳು ಸಭೆಯನ್ನೇ ನಡೆಸದಂತೆ ದಮನಿಸ ಹೊರಟಿದ್ದು ಅವನೆಷ್ಟು ಕ್ರಿಮಿನಲ್ಲು ಎಂಬುದನ್ನು ತೋರಿಸುತ್ತದೆ. ಮತ್ತು ಜಾಮೀನಿನಲ್ಲಿರುವ ಇಂತಹ ಕ್ರಿಮಿನಲ್ಲು ಐವತ್ತು ಕೋಟಿ ಪಡೆದವರಿಂದ ರಕ್ಷಣೆಯಲ್ಲೇ ಇದ್ದಾನೆ ಎಂಬುದು ಸ್ಪಷ್ಟವಾಗುತ್ತದೆ.

ವಯೋವೃದ್ಧರಿಗೆ ಅವರದ್ದೇ ಆದ ಸ್ಥಾನಮಾನ ಗೌರವಗಳು ಇರುತ್ತವೆ. ಸಮಾಜದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿದ, ಮಠದ ಲೌಕಿಕ ಅಭಿವೃದ್ಧಿಯಲ್ಲೂ ಸಕಾರಾತ್ಮಕವಾಗಿ ಸ್ಪಂದಿಸಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋದು ಸನ್ಯಾಸಿ ವೇಷದ ಮಾಗಧನ ದುರಾಡಳಿತದ ಅಂತ್ಯ ಸಮೀಪಿಸಿದೆ ಎಂಬುದನ್ನು ಸೂಚಿಸುತ್ತದೆ. ಸಮಾಜದ ಜನ ಈಗಾಗಲೇ ಭೇರಿ ಬಡಿದಿದ್ದಾರೆ; ಕಳ್ಳ ಸನ್ಯಾಸಿ ಬಚಾವಾಗಲು ಹಲವು ಮಾರ್ಗಗಳನ್ನು ಹುಡುಕುತ್ತಿದ್ದಾನೆ.

ಈ ಸಮಾಜದ ಜನ ಸ್ವಾಭಾವಿಕವಾಗಿ ಪ್ರಭೋಧ ಸಾಹಿತ್ಯಗಳನ್ನು ತಾವೇ ಖುದ್ದಾಗಿ ಓದಿಕೊಳ್ಳಬೇಕಿತ್ತು. ಅದಾಗಲಿಲ್ಲ. ಈಗ ಯಾರೋ ಹೇಳಿದರೆ ಉಂಟು, ಅದಿಲ್ಲದಿದ್ದರೆ ಹೇಳಿದ್ದನ್ನು ಕೇಳಲ್ಲೂ ಅವಕಾಶವಿಲ್ಲ. ಸಂಸ್ಕೃತ ಭಾಷೆಯನ್ನಂತೂ ಮರೆತೇ ಬಿಟ್ಟಿದ್ದೇವೆ. ಹೀಗಾಗಿ ಪ್ರಬೋಧ ಸಾಹಿತ್ಯಗಳ ಓದು-ಪಚನ ಬಲು ದೂರದ ಮಾತು. ಸ್ವತಃ ಸನ್ಯಾಸಿ ವೇಷದ ಕಳ್ಳ ಕಾಮಿಯೇ ಪ್ರಬೋಧ ಸಾಹಿತ್ಯಗಳನ್ನು ಓದಲಿಲ್ಲ, ಇನ್ನು ಅವನ ಶಿಷ್ಯರಿಂದ ಹೇಗದನ್ನು ನಿರೀಕ್ಷಿಸಲು ಸಾಧ್ಯ? ಪ್ರಬೋಧ ಸಾಹಿತ್ಯವನ್ನು ಓದಿಕೊಂಡಿದ್ದರೆ ಇಷ್ಟು ಹೊತ್ತಿಗೆ ಕಳ್ಳ ಸ್ವಾಮಿಯ ರಟ್ಟೆ ಹಿಡಿದು ಎಳೆದು ಹೊರಬಿಟ್ಟಾಗುತ್ತಿತ್ತು.

ಪ್ರಮೋದ ಸಾಹಿತ್ಯದ ಬಗ್ಗೆ ಬರೆಯುವಾಗ ಶಿರಾಮ ಕಾರಂತರು ಮತ್ತು ಡಿವಿಜಿಯವರ ಹೆಸರುಗಳನ್ನು ಹೇಳಬೇಕಿತ್ತು, ಮರೆತಿದ್ದೆ. ಕಾರಂತರದು ಲೋಕಮುಖ, ಡಿವಿಜಿಯವರದ್ದು ಆಧ್ಯಾತ್ಮ ಮುಖ. ಒಬ್ಬರು ಜಗತ್ತನ್ನೆಲ್ಲ ಸುತ್ತಿ ಹೊತ್ತಗೆಗಳಲ್ಲಿ ಅನುಭವಗಳನ್ನು ದಾಖಲಿಸಿದರು; ಇನ್ನೊಬ್ಬರು ಇರುವಲ್ಲೇ ಸ್ವಾನುಭವಾಮೃತವನ್ನು ಪುಸ್ತಕಗಳ ರೂಪದಲ್ಲಿ ಬರೆಯಲು ಶಿಷ್ಯರಿಗೆ ಅನುಮತಿ ಕೊಟ್ಟರು.

’ಅಪೂರ್ವಪಶ್ಚಿಮ’ ಎಂಬುದು ಕಾರಂತರ ಒಂದು ಮೇರುಕೃತಿ; ಪಾಶ್ಚಿಮಾತ್ಯ ದೇಶಗಳಲ್ಲಿನ ಸ್ಥಿತಿಗತಿ, ಅಲ್ಲಿನ ಜನಜೀವನವನ್ನು ಖುದ್ದಾಗಿ ಕಂಡು, ಬರೆದುಕೊಂಡು ಸ್ವದೇಶದ ಸ್ಥಿತಿಗತಿ-ಜನಜೀವನಗಳನ್ನು ಅದಕ್ಕೆ ಹೋಲಿಸಿ ಇಲ್ಲಿನ ನ್ಯೂನತೆಗಳನ್ನು ಹೇಳಿದರು. ಕಾರಂತರದ್ದು ಬಹಳ ವೈಜ್ಞಾನಿಕ ಮನೋಭಾವ; ಯಾವುದನ್ನೂ ಆಧಾರ ಸಹಿತವಾಗಿ ನೋಡಿ ಒಪ್ಪುವ ವಾಂಛೆ; “ಮೊಲಕ್ಕೆ ಮೂರೇ ಕಾಲು ಕಾರಂತರೆ” ಎಂದರೆ, “ಅದನ್ನು ಹಿಡಿದು ತಾ, ನೋಡಿ ಒಪ್ಪಿಯೇನು” ಎನ್ನುವ ಸ್ವಭಾವ. ಕಡ್ಡಿ ಮುರಿದಂತೆ ನಿರ್ದಾಕ್ಷಿಣ್ಯವಾಗಿ ವಸ್ತುವಿಷಯಗಳನ್ನು ಹೇಳುತ್ತ ಹೋಗುತ್ತಾರೆ.

ಕಾರಂತರು ಅವರ ಪಾಡಿಗೆ ಅವರು ನಾಸ್ತಿಕರಾಗಿದ್ದರೂ ಅವರು ಅನುವಾದಿಸಿದ ರಾಮಾಯಣ ಮಹಾಭಾರತದ ಮಕ್ಕಳ ಪುಸ್ತಕಗಳನ್ನು ಗಮನಿಸಿದರೆ ನಾಸ್ತಿಕತೆಯನ್ನು ಅವರು ಇತರರ ಮೇಲೆ ಹೇರುತ್ತಿರಲಿಲ್ಲ ಎಂಬುದು ಗೊತ್ತಾಗುತ್ತದೆ. ಸರಕಾರದ ದಾನಕ್ಕಾಗಿ ಕಾಯದೆ ಸ್ವಂತ ಭೂಮಿಯನ್ನು ಮಾರಿ ವಿದೇಶಕ್ಕೆ ಹೋಗಿ ಬಂದವರವರು.

ಡಿವಿಜಿಯವರು ಇರುವಲ್ಲೇ ಬಡತನದಲ್ಲೇ ಜೀವಿಸಿದರೂ ಕಂಡುಂಡ ಅನುಭವಗಳು ಅಪಾರ ಮತ್ತು ಅಗಾಧ. ಸರ್. ಎಂ,ವಿ ಯಂತಹ ಪ್ರಪಂಚ ಮೆಚ್ಚಿದ ಮೇಧಾವಿ ಕೂಡ ಮೈಸೂರಿನ ದಿವಾನರಾಗಿದ್ದಾಗ ಡಿಬಿಜಿಯವರಲ್ಲಿ ರಾಜಕೀಯ ಮತ್ತು ಸಾಮಾಜಿಕ ಸಲಹೆಗಳನ್ನು ಕೇಳುತ್ತಿದ್ದರಂತೆ, ಅಷ್ಟು ಮೇಧಾವಿ ಡಿವಿಜಿ. ರಾಜಪ್ರಭುತ್ವದ ಶೇಖ್ ದಾರ್ ಮನೆತನದ ಶ್ರೀಮಂತಿಕೆಯಲ್ಲಿ ಹುಟ್ಟಿ ನಂತರ ಒಂದೊಂದಾಗಿ ಎಲ್ಲವನ್ನೂ ಕಳೆದುಕೊಂಡು ಸ್ವಯಾರ್ಜಿತದಲ್ಲಿ ಬದುಕು ಸಾಗಿಸಿದವರು ಡಿವಿಜಿ.

ಇವರೀರ್ವರ ಸಾಹಿತ್ಯಗಳನ್ನು ಒಂದೇ ನಾಣ್ಯದ ಎರಡು ಮುಖಗಳನ್ನಾಗಿ ಕಂಡು, ಓದಿ, ಅನುಭವಗಳನ್ನು ಅಳವಡಿಸಿಕೊಂಡರೆ ಪ್ರಮೋದ ಸಾಹಿತ್ಯದ ಔಚಿತ್ಯದ ಅರಿವು ಮೂಡುತ್ತದೆ. ಅರ್ಧ ದಶಕದ ಹಿಂದಿದ್ದ ಜನ ಇವರ ಕೃತಿಗಳನ್ನೆಲ್ಲ ಓದಿದರು. ನಂತರದ ತಲೆಗಳಿಯ ಜನರಿಗೆ ಪುಸ್ತಕಗಳ ಬದಲಿಗೆ ರೇಡಿಯೋ, ಸಿನಿಮಾ, ಟಿವಿ, ಕಂಪ್ಯೂಟರ್ ಮತ್ತು ಮಒಬೈಲುಗಳು ಬಂದವು; ಹೀಗಾಗಿ ಇವರು ಪುಸ್ತಕಗಳನ್ನು ಓದಲೇ ಇಲ್ಲ. ಕ್ರಿಕೆಟ್ ನಲ್ಲಿ ಆಸಕ್ತಿ ಇಲ್ಲದವರು ಯಾರಲ್ಲೋ ಸ್ಕೋರು ಕೇಳಿಕೊಂಡು ಇನ್ನಾರಿಗೋ ಉತ್ತರಿಸಿದಂತೆ, ಅವರಿವರು ಹೇಳಿದ್ದನ್ನು ಕೇಳಿಕೊಂಡು ಕಗ್ಗ ಅಂತಾರೆ, ಕಾದಂಬರಿ ಅಂತಾರೆ.

ಒಂದು ನಾಯಿ ದೂರದಲ್ಲಿ ವಿನಾಕಾರಣ ಬೊಗಳಿದರೆ ಉಳಿದೆಲ್ಲವೂ ತಲೆಯಿಲ್ಲದೆ ಕೂಗುವಂತೆ, ಕ್ರಿಮಿನಲ್ ಸ್ವಾಮಿ ಪ್ರವಚನವೆಂದುಕೊಂಡು ಬೊಗಳಿದ್ದನ್ನೆ ನಂಬಿಕೊಂಡು, ಮೂಲ ಕಾರಣವನ್ನೇ ಅರಿಯದೆ, ಜೈಕಾರ ಬೊಗಳುವ ತಲೆಯಿಲ್ಲದ ನಾಯಿಗಳನ್ನು ಕಂಡಾಗ ಸಮಾಜದ ಹೊಣೆಗಾರಿಕೆ ಎಲ್ಲಿಗೆ ಬಂದು ನಿಂತಿದೆ ಎಂಬ ಅರಿವಾಗುತ್ತದೆ.

ಅಂದಹಾಗೆ ಭಟ್ಟರ ಮನೆಯಲ್ಲಿ ಜಗುಲಿಯನ್ನು ಹಾಲ್ ಸ್ಟೀನ್ ಸಗಣಿಯಿಂದ ಸಾರಿಸಿ ಕೀಟಾಣುಗಳನ್ನು ವಿಪುಲವಾಗಿ ಬಿಟ್ಟುಕೊಂಡು ನಾತ ಎಬ್ಬಿಸಿ ಪ್ರಯಾಸ ಪಟ್ಟುಕೊಳ್ಳೋದಕ್ಕಿಂತ ಇಂದು ಲಭ್ಯವಿರುವ ಸಾಬೂನು-ಮಾರ್ಜಕಗಳನ್ನು ಬಳಸಿ ಸಾರಿಸುವುದು/ಒರೆಸುವುದು ಬಹಳ ಸೂಕ್ತ ಎಂದು ಭಟ್ಟರಿಗೆ ನಾವೇನೋ ಪುಗಸಟ್ಟೆ ಸಲಹೆ ಕೊಟ್ಟೆವು.

ಏಕಾಂತದ ನೆಪದಲ್ಲಿ ಸಂಭೋಗ ನಡೆಸುವ ಕಳ್ಳ ಸನ್ಯಾಸಿಯನ್ನೂ ಅವನ ಪರಿವಾರವನ್ನೂ ಮಠದಲ್ಲಿಟ್ಟು ಐಶಾರಾಮದಲ್ಲಿ ಪೊರೆದು, ಧರ್ಮ ಬೋಧನೆಗಾಗಿ ನಿರೀಕ್ಷಿಸುವುದಕ್ಕಿಂತ, ಯೋಗ್ಯ ವಟುವನ್ನು ಅಲ್ಲಿಗೆ ನೇಮಿಸಿ ಅಥವಾ ಶಂಕರರ ಭಾವಚಿತ್ರವನ್ನಷ್ಟೇ ಪೀಠದಲ್ಲಿರಿಸಿ ಮಠವನ್ನು ಸಮಿತಿಯೇ ನಿರ್ವಹಿಸುವುದು ಅತ್ಯಂತ ಸೂಕ್ತವೆನಿಸುತ್ತದೆ.

Thumari Ramachandra

source: https://www.facebook.com/groups/1499395003680065/permalink/1782175465402016/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s