ಮುನ್ನಾಭಾಯಿ ತೊನೆಯಪ್ಪನ ಮಠದ ಇನ್ನಷ್ಟು ಕರಾಳ ಚರಿತ್ರೆಗಳು!! [ಭಾಗ-ನಾಲ್ಕು]

ಮುನ್ನಾಭಾಯಿ ತೊನೆಯಪ್ಪನ ಮಠದ ಇನ್ನಷ್ಟು ಕರಾಳ ಚರಿತ್ರೆಗಳು!!
[ಭಾಗ-ನಾಲ್ಕು]

ನಂದಿ ಶೆಟ್ಟಿಯ ಮನೆಯ ಅಟ್ಟದ ಕೋಣೆಯ ಗೋಡೆಯಲ್ಲಿ ನೇತಾಡುತ್ತಿರುವ ಚಿತ್ರಪಟದಲ್ಲಿನ ಹದ್ದು ಜೀವದಳೆದು ಹಾರಿಬಂದು ಶೆಟ್ಟಿಯ ಮಗಳ ಕೊರಳಲ್ಲಿದ್ದ ಮುತ್ತಿನ ಸರವನ್ನು ನುಂಗಿ, ಮರಳಿ ತೆರಳಿ ಚಿತ್ರವಾಗಿ ಪಟದಲ್ಲಿ ಸೇರಿಕೊಂಡಿತು. ಅದನ್ನು ಸಾಕ್ಷಾತ್ಕರಿಸಿಕೊಂಡ ವಿಕ್ರಮಾದಿತ್ಯ ಕಳ್ಳನಾಗಿರಲಿಲ್ಲ; ಆದರೆ ಪರಿಸ್ಥಿತಿಯಲ್ಲಿ ಆತ ಕಳ್ಳನೆನಿಸಿದ್ದ!

ಕೈಕಾಲುಗಳನ್ನು ಕಳೆದುಕೊಂಡು ಬರೇ ಶರೀರದ ದುಂಡಿ ಎನಿಸುವ ನಡುಭಾಗವನ್ನು ಮಾತ್ರ ಉಳಿಸಿಕೊಂಡ ರಾಜಾ ವಿಕ್ರಮ ಗಾಣದ ನೊಗದ ಮಣೆಯಲ್ಲಿ ಕುಳಿತು ದೀಪಕ ರಾಗ ಹಾಡುತ್ತಿದ್ದರೆ ನಂದಿ ಶೆಟ್ಟಿಯ ಮನೆ-ಮನಗಳಲ್ಲಿ ದೀಪಗಳು ಜ್ವಲಿಸಿದವು; ಅಲ್ಲಿಂದಾಚೆಗೆ ಕಳ್ಳನೆನಿಸಿದ ನತದೃಷ್ಟ ವ್ಯಕ್ತಿ ಕಳ್ಳನಲ್ಲ ಅವನೊಬ್ಬ ಮಹಾಪುರುಷನೆಂಬುದು ನಿಧಾನವಾಗಿ ವಿಶ್ವಕ್ಕೆ ಅನಾವರಣೆಗೊಂಡಿತು.

ಕಾಲವೊಂದರಲ್ಲಿ ಸಾಮ್ರಾಟನಾಗಿ ಹೆಸರಾಂತ ನ್ಯಾಯಾಧೀಶನಾಗಿದ್ದ ವಿಕ್ರಮ ಚೋರನೆನಿಸಿಕೊಂಡು, ಕೈಕಾಲು ಕಳೆದುಕೊಂಡು, ಯಾರದೋ ಮನೆಯಲ್ಲಿ ಊಳಿಗದ ಆಳಿನಂತೆ ಆಶ್ರಯ ಪಡೆಯಬೇಕಾಗಿ ಬಂದದ್ದು ಒಂದು ಚೋದ್ಯ. ಮತ್ತದು ಕರ್ಮಬಂಧನಗಳಿಗೆ ಒಂದು ಸ್ಪಷ್ಟ ಉದಾಹರಣೆ.

ಮನುಷ್ಯನೆನಿಸಿದಮೇಲೆ ಜೀವನ ಅವನೊಬ್ಬನ ಜೀವನವಲ್ಲ. ಗರ್ಭಾದಾನದಿಂದ ಅಂತ್ಯೇಷ್ಟಿಯ ವರೆಗಿನ ಎಲ್ಲ ಹಂತಗಳಲ್ಲೂ ಅವನಿಗೆ ಸುತ್ತಲ ಪ್ರಪಂಚದ ಕನೆಕ್ಟಿವಿಟಿ, ಸಂಬಂಧ ಇದ್ದೇ ಇರುತ್ತದೆ. ವಾಸ್ತವದಲ್ಲಿ ಆತ್ಮರೂಪದಲ್ಲಿ ಯಾರೂ ಅಪ್ಪನೋ, ಮಗನೋ, ಅಮ್ಮನೋ ಯಾವುದೂ ಅಲ್ಲ. ಆದರೆ ಜೀವಾತ್ಮರಾಗಿ ಜನ್ಮ ತಳೆದಾಗ ಈ ಲೋಕದ ಎಲ್ಲ ಬಾಂಧವ್ಯಗಳು ಅಂಟಿಕೊಳ್ಳುವುದು ಅನಿವಾರ್ಯ ಸಹಜ.

ಭಿನ್ನವಾದ ಜೀವನಕ್ರಮದಿಂದ ಲೋಕೋಪಕಾರಿಗಳಾಗಿರುತ್ತ ಇಂತಹ ವ್ಯಮೋಹಗಳನ್ನು ಕಡಿದುಕೊಳ್ಳುವವನೇ ಸನ್ಯಾಸಿ. ಸನ್ಯಾಸಿಗೂ ಸಹ ಸಮಾಜದ ಹಂಗು ಒಂದು ಮಟ್ಟಕ್ಕಿರುತ್ತದೆ. ಸಚ್ಚಾರಿತ್ರ್ಯದಿಂದ ತನ್ನ ತಪಃಶಕ್ತಿಯನ್ನು ಸಜ್ಜನರ ತಾಪತ್ರಯಗಳ ನಿವಾರಣೆಗೆ ವಿನಿಯೋಗಿಸುವುದು ಸನ್ಯಾಸಿಯ ಒಂದು ಹಂತದ ಕರ್ತವ್ಯ. ಅದು ನಿಜವಾದ ಜೀವ ಸಹಾಯ; ಬರೇ ಬಾಯಲ್ಲಿ ಹಾಗೆ ಹೇಳುತ್ತ, ತನ್ನನ್ನು ವಿರೋಧಿಸುವವರ ಮೇಲೆ ಕಾರ್ಕೋಟಕದಂತೆ ವಿಷವುಗುಳುವುದು ಜೀವ ಸಹಾಯವಲ್ಲ.

ಸಮಷ್ಟಿ ಸಮಾಜದಲ್ಲಿ ಎಂತೆಂತಹ ಕಾರಣಗಳಿಗೆ ಅಂಜಿ ಜನಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾಣುವಾಗ ಆಶ್ಚರ್ಯವಾಗುತ್ತದೆ. ಯಾವುದೋ ಪರೀಕ್ಷೆಯಲ್ಲಿ ಉತ್ತೀರ್ಣರಾಗದ್ದಕ್ಕೆ, ಪ್ರೇಮವೈಫಲ್ಯವಾಗಿದ್ದಕ್ಕೆ, ಚುನಾವಣೆಯಲ್ಲಿ ಸೋತಿದ್ದಕ್ಕೆ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದಕ್ಕೆ, ಪಡೆದ ಸಾಲ ತೀರಿಸಲಾಗದ್ದಕ್ಕೆ, ಸಂಗಾತಿ ತ್ಯಜಿಸಿಹೋಗಿದ್ದಕ್ಕೆ, ಕಾಯಿಲೆಯಿಂದ ನೋವು ಅನುಭವಿಸುತ್ತಿರೋದಕ್ಕೆ, ಮರ್ಯಾದೆಯ ಭಂಗವಾಗಿದ್ದಕ್ಕೆ ಹೀಗೇ ಹಲವು ಕಾರಣಗಳು.

ಎಲ್ಲ ಕಾರಣಗಳ ಮೂಲ ಕಾರಣ ಸಂಚಿತ ಕರ್ಮವೇ ಎಂಬುದನ್ನು ಅರಿಯದ ದುರ್ಬಲ ಮನಸ್ಸಿನ ಮುಗ್ಧರು ಆ ಕ್ಷಣದಲ್ಲಿ ತಮ್ಮನ್ನೇ ತಾವು ಕೊಂದುಕೊಳ್ಳುವ ಘೋರಕೃತ್ಯಕ್ಕೆ ಇಳಿದುಬಿಡುತ್ತಾರೆ. ಅರೆಕ್ಷಣ ಅವರು ವಿಷಯವನ್ನು ಶಾಂತವಾಗಿ ವಿವೇಚಿಸುವಂತಾದರೆ ಬದಲಾವಣೆ ತಂದುಕೊಳ್ಳಲು ಸಾಧ್ಯವಾಗುತ್ತದೆ.

ಈ ಮೊದಲೇ ಹೇಳಿದಂತೆ ವ್ಯಕ್ತಿಯ ಜೀವನ ಅವನೊಬ್ಬನ/ಅವಳೊಬ್ಬಳ ಜೀವನವಲ್ಲ. ಅಲ್ಲಿ ಹುಟ್ಟಿಸಿದವರು, ಪೋಷಿಸಿದವರು, ಬೆಳೆಸಿದವರು, ವಿದ್ಯೆನೀಡಿದವರು, ಬೆಳವಣಿಗೆಯ ವಿವಿಧ ಹಂತಗಳಲ್ಲಿ ಸ್ಪಂದಿಸಿದ ಸುತ್ತಲ ಸಮಾಜ ಎಲ್ಲರ ಹಂಗುಗಳು ಹಾಗೆ ಮುಗಿಯುವುದಲ್ಲ. ಒಂದು ರಸ್ತೆಯನ್ನು ಹಿಡಿದು ಹೋಗುವಾಗಲೂ ಆ ರಸ್ತೆ ನಿರ್ಮಿಸಿದ ಕಾರ್ಮಿಕರ ಶ್ರಮದ ಹಂಗಿನಲ್ಲಿ ನಾವಿರುತ್ತೇವೆ. ನಿತ್ಯಬಳಕೆಯ ಒಂದೊಂದು ವಸ್ತು, ಉಪಕರಣಗಳ ತಯಾರಿಕೆಯಲ್ಲಿ ಎಷ್ಟೊಂದು ಜೀವಿಗಳ ಶ್ರಮ ಅಡಗಿದೆ! ಹೀಗೆ ಬಂದು ಹಾಗೆ ಹೋಗಿಬಿಟ್ಟರೆ ಅವರೆಲ್ಲರಿಗೆ ನಾವು ಸಲ್ಲಿಸುವ ಕೃತಜ್ಞತೆಯಾದರೂ ಯಾವುದು?

ಶರಣುವೊಗು ಜೀವನ ರಹಸ್ಯದಲಿ ಸತ್ತ್ವದಲಿ |
ಶರಣು ಜೀವನ ಸುಮವೆನಿಪ ಯತ್ನದಲಿ |
ಶರಣಂತರಾತ್ಮ ಗಂಭೀರಪ್ರಶಾಂತಿಯಲಿ |
ಶರಣು ವಿಶ್ವಾತ್ಮದಲಿ-ಮಂಕುತಿಮ್ಮ ||

ಕವಿ ಗುಂಡಪ್ಪನವರ 945ನೇ ಕಗ್ಗವಿದು ಅಂದರೆ ಮಂಕುತಿಮ್ಮನ ಕಗ್ಗದ ಮುಕ್ತಾಯದ ಮುಕ್ತಕ. ಒಬ್ಬ ವ್ಯಕ್ತಿಯ ಜೀವನವನ್ನು ಸುಗಮಗೊಳಿಸುವ ಸಲುವಾಗಿ ಅದೆಷ್ಟು ಜೀವಗಳು ಈ ಲೋಕದಲ್ಲಿ ಶ್ರಮಿಸಬೇಕಾಗುತ್ತದೆ ನೋಡಿ. ಜೇನುತುಪ್ಪವನ್ನು ತಿನ್ನುತ್ತೀರಿ-ಸಹಸ್ರ ಸಂಖ್ಯೆಯ ಹುಳಗಳ ವರ್ಷಗಳ ಪರಿಶ್ರಮ, ಹಸುವಿನ ಹಾಲನ್ನು ಕುಡಿಯುತ್ತೀರಿ-ಕರುವನ್ನು ತಪ್ಪಿಸಿ ಪೊರೆವವರಿಗೆ ಹಸು ನೀಡುವ ಔದಾರ್ಯದ ಅಮೃತವದು.

ಯಾವುದೋ ಸಂಶೋಧನಾಲಯದಲ್ಲಿ ಹಲವು ವರ್ಷಗಳ ತಪಸ್ಸಿನಿಂದ ವಿಜ್ಞಾನಿ ಏನನ್ನೋ ಕಂಡುಹಿಡಿಯುತ್ತಾನೆ. ಹಿಮಾಲಯದಂತಹ ಪರ್ವತಶ್ರೇಣಿಯ ಯಾವುದೋ ಮಜಲುಗಳಲ್ಲಿ ಮುಮುಕ್ಷುಗಳು ತಪಸ್ಸನ್ನು ನಡೆಸಿ ಈ ಜಗತ್ತಿನ ಕ್ಷೇಮವನ್ನು ಬಯಸುತ್ತಾರೆ. ಇದೆಲ್ಲ ಹಾಗಿರಲಿ, ವ್ಯಕ್ತಿ ತನಗೆ ನೇರವಾಗಿ ಸಂಬಂಧಿಸಿದ ವ್ಯಕ್ತಿಗಳಿಗೆ ಯಾವ ರೂಪದಲ್ಲಿ ಕೃತಜ್ಞನಾಗಿರಲು ಸಾಧ್ಯ? ಅಲ್ಲಿಗೆ ಅವರ ಋಣ ಹರಿಯುವುದೇ? ಇಲ್ಲ.

ಸಮಾಜದ ಋಣವನ್ನು ತೀರಿಸುವುದು ವಿವೇಕಿಗಳ ಜೀವನದ ಒಂದು ಕರ್ತವ್ಯ. ಅದನ್ನೇ “ಸೋಷಿಯಲ್ ರೆಸ್ಪಾನ್ಸಿಬಲಿಟಿ” ಎನ್ನುತ್ತಾರೆ. ಸೋಷಿಯಲ್ ರೆಸ್ಪಾನ್ಸಿಬಲಿಟಿ ತೆಗೆದುಕೊಳ್ಳೋದಕ್ಕೆ ಹಲವು ಮಾರ್ಗಗಳಿವೆ. ತುಮರಿಯ ಪರಿಚಯದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿದ್ದಾನೆ. ಚುಟುಕಾಗಿ ಅವನ ಕತೆಯನ್ನು ಹೇಳಿದರೆ ಅದು ಅಪಥ್ಯವೆನಿಸದು ಎಂದುಕೊಳ್ಳುತ್ತೇನೆ.

ಕಷ್ಟದಲ್ಲೇ ಬಾಲ್ಯ, ವಿದ್ಯಾಭ್ಯಾಸಗಳು ಮುಗಿದ ನಂತರ ಉದರಂಭರಣೆಗಾಗಿ ಬೆಂಗಳೂರು ಸೇರಿದ ಅವ ಕೆಲವು ಸಮಯದ ನಂತರ ಸ್ವತಂತ್ರ ಉದ್ಯಮವನ್ನೂ ಕೈಗೊಂಡ. ಉದ್ಯಮ ಅಭಿವೃದ್ಧಿಯಾಗುತ್ತ ನಡೆದಂತೆ ಆ ಸನ್ನಿವೇಶದಲ್ಲಿ ಅವನಿಗೆ ಜೀವ ಸಹಾಯ ಮಾಡಬೇಕೆನಿಸಿತು. ಆಗಿನ್ನೂ ಭಾರತದಲ್ಲಿ ಕಂಪ್ಯೂಟರ್ ಬಳಕೆ ಹೊಸದು. ಬ್ಯಾಂಕ್ ಗಳಲ್ಲಿ ಒಂದೊಂದನ್ನು ಖರೀದಿಸಿ, ಏಸಿ ರೂಮಿನಲ್ಲಿ ಭದ್ರವಾಗಿ ಮುಚ್ಹಿ ಬಾಗಿಲು ಹಾಕಿರಿಸಿಬಿಟ್ಟಿದ್ದರು; ಯಾರನ್ನು ಕೇಳಿದರೂ ಬಳಕೆಯ ಕುರಿತು ಇನ್ನೊಬ್ಬರ ಕಡೆಗೆ ಬೆರಳು ಮಾಡುತ್ತಿದ್ದರು-ಯಾರಿಗೂ ಸ್ಪಷ್ಟ ಗೊತ್ತಿರಲಿಲ್ಲ ಅಂತರ್ಥ.

ನಿವೃತ್ತಿಗೆ ಕೂಗಳತೆಯ ದೂರದಲ್ಲಿರುವ ಕೆಲವರು”ನಮಗ್ಯಾಕೆ ಅವೆಲ್ಲ ಬಿಡಿ ಸಾರ್, ಇಷ್ಟು ವರ್ಷ ಟೈಪ್ ರ್‍ಐಟರ್ ಗಳನ್ನ ಬಳಸಿದೀವಿ. ಈಗ ಇದನ್ನೇನು ಕಲಿಯೋದು” ಎಂದು ದೂರ ಇರಿಸಿದ್ದರೆ, “ಕಂಪ್ಯೂಟರ್ ಈಸ್ ಎ ಗ್ಲೋರಿಫೈಡ್ ಟೈಪ್ ರೈಟರ್” ಎಂದು ಕೆಲವರು ಘೋಷಿಸಿಬಿಟ್ಟಿದ್ದರು. ಒಟ್ಟಿನಲ್ಲಿ ಕಂಪ್ಯೂಟರು ಒಂದು ವ್ಯರ್ಥ ಯಂತ್ರ ಎಂಬುದು ಅವರೆಲ್ಲರ ತೀರ್ಮಾನವಾಗಿತ್ತು!

ಅದೇ ಸಮಯಕ್ಕೂ ಸ್ವಲ್ಪ ಮೊದಲೇ ಇನ್ನೊಂದೆಡೆಗೆ ನಾರಾಯಣ ಮೂರ್ತಿಗಳು ದೊಡ್ಡಮಟ್ಟದಲ್ಲಿ ಇನ್ಪ್ಕೋಸಿಸ್ ಬೆಳೆಸಲು ಸಾಲಕ್ಕಾಗಿ ಎಸ್.ಬಿ.ಐ ಮೊದಲಾದ ಬ್ಯಾಂಕ್ ಗಳ ಮೊರೆಹೋಗಿದ್ದರು. Project is alright Mr. Murthy, but can you show what is software? ಎಂಬ ಪ್ರಶ್ನೆಗೆ ಮೂರ್ತಿ ಹಲವು ರೂಪದಲ್ಲಿ ಸಾಫ್ಟ್ ವೇರ್ ಅನ್ನು ವರ್ಣಿಸಿದರೂ ಕಣ್ಣಿಗೆ ಕಾಣದ ವಸ್ತುವಿಗೆ ಸಾಲ ನೀಡೋದಕ್ಕೆ ಯಾವ ಬ್ಯಾಂಕೂ ಮುಂದೆ ಬಂದಿರಲಿಲ್ಲ!

“ನನ್ನಳಿಯ ದುಸ್ಸಾಹಸಕ್ಕೆ ಕೈಹಾಕಿದ್ದಾನೆ, ಇದೆಲ್ಲ ನಮಗೆ ಹೇಳಿಸಿದ್ದಲ್ಲ, ಅಪ್ಪಿತಪ್ಪಿ ನಷ್ಟವಾದರೆ ಸಹಿಸಿಕೊಂಡು ಬದುಕೋದು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ನೀವಾದರೂ ಸ್ವಲ್ಪ ಬುದ್ಧಿ ಹೇಳಿ ಅಂತ” ಅವರ ಹೆಣ್ಣುಕೊಟ್ಟ ಮಾವ ಒಬ್ಬ ಗಣ್ಯರಲ್ಲಿ ಪ್ರಾರ್ಥಿಸಿ, ನಾರಾಯಣ ಮೂರ್ತಿಗಳನ್ನು ಅವರಲ್ಲಿಗೆ ಕಳಿಸಿದ್ದರಂತೆ. ಗಣ್ಯವ್ಯಕ್ತಿಯ ವಯೋಮಾನ ಹಿರಿಯದುತ್ತು; ಆದರೆ, ಮೂರ್ತಿಯವರಿಗೆ ಮರದ ಕೊಂಬೆಯಲ್ಲಿ ನೇತಾಡುತ್ತಿದ್ದ ಹಕ್ಕಿಯ ಕಣ್ಣು ಕಂಡುಬಿಟ್ಟಿತ್ತು! ಹೀಗಾಗಿ ಹಿರಿಯರಿಗೆ ನಮಿಸಿ ಹೊರಟುಬಂದರೇ ಹೊರತು ಗುರಿತಲುಪುವ ಸಾಹಸಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ.

ಕೇಲವೇ ವರ್ಷಗಳ ನಂತರ ಯಾವ ಬ್ಯಾಂಕು ಸಾಲ ನೀಡುವುದಿಲ್ಲ ಎಂದಿತ್ತೋ ಅದೇ ಬ್ಯಾಂಕಿಗೆ ಬ್ಯಾಂಕಿಂಗ್ ಸಾಫ್ಟ್ ವೇರ್ ತಯಾರಿಸಿಕೊಡುವುದಕ್ಕೆ ಎಂಟುಕೋಟಿಯ ಆರ್ಡರು ಪಡೆದುಕೊಂಡಿದ್ದು ನಾರಾಯಣ ಮೂರ್ತಿಗಳ ಸಾಧನೆ. ಇಂದು ನಾವು ಯಾರೋ ತಯಾರಿಸಿದ ಕಂಪ್ಯೂಟರುಗಳು ಮತ್ತು ಆಪ್ ಗಳನ್ನೆಲ್ಲ ಬಳಸುತ್ತೇವೆ-ಅಲ್ಲಿಯೂ ಹಲವು ಶ್ರಮಿಕರ ಶ್ರಮದಾನವಿದೆ.

[ ಕಂಪ್ಯೂಟರ್ ಗಳನ್ನು ಹೇಗೆ ಬಳಸಿಕೊಂಡು ಯಾರನ್ನೆಲ್ಲ ಸಂಪರ್ಕಿಸಿ ಏನನ್ನೆಲ್ಲ ಸಾಧಿಸಬಹುದು, ಯಾರನ್ನೆಲ್ಲ ಏಕಾಂತಕ್ಕೆ ಕರೆಯಬಹುದು ಎಂಬುದೂ ಒಂದು ಸಂಶೋಧನೆ! ಅದರ ಸಂಶೋಧಕರು ಕಚ್ಚೆಶೀ ತೊನೆಯಪ್ಪನವರು.

]

ಆ ವಿಷಯ ಲ್ಲಿಗೆ ಬಿಡಿ, ಜೀವ ಸಹಾಯ ಮಾಡಬೇಕೆಂದುಕೊಂಡ ತುಮರಿಯ ಸ್ನೇಹಿತ ಸಮಾಜದಲ್ಲಿ ಹಲವು ಯುವಕ, ಯುವತಿಯರು ಹಳ್ಳಿಗಳಿಂದ ಬದುಕು ಕಟ್ಟಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಂದು ಎಲ್ಲೆಲ್ಲೋ ಉಳಿದುಕೊಂಡು ಶ್ರಮಪಡುವುದನ್ನು ಗಮನಿಸಿದ. ಅವರಲ್ಲಿ ಕೆಲವರು ವಿದ್ಯಾರ್ಥಿಗಳೂ ಇದ್ದರು. ಅವರೆಲ್ಲರಿಗೂ ಬೇಸಿಕ್ ಕಂಪ್ಯೂಟರ್ ಜ್ಞಾನ ಅಂದಿನ ಅಗತ್ಯವಾಗಿತ್ತು; ಕಲಿಕಾ ಕೇಂದ್ರಗಳಲ್ಲಿ ಅದಕ್ಕೆ ದುಬಾರಿ ಶುಲ್ಕವನ್ನು ಕೊಡಬೇಜಾಗಿತ್ತು.

ವಿದ್ಯಾರ್ಥಿಗಳು, ನೌಕರಿ ಹುಡುಕುತ್ತಿರುವವರು, ಚಿಕ್ಕಪುಟ್ಟ ನೌಕರಿಗಳಲ್ಲಿರುವವರು, ಗೃಹಿಣಿಯರು ಹೀಗೆ ಸಮಾಜದ ಮುನ್ನೂರಕ್ಕೂ ಅಧಿಕ ಜನರಿಗೆ ಶುಲ್ಕಮುಕ್ತವಾಗಿ ಬೇಸಿಕ್ ಕಂಪ್ಯೂಟರ್ ತರಬೇತಿ ಕೊಡಿಸಿದ. ಇಂದು ಅವರಲ್ಲಿ ಹಲವರು ಸಾಫ್ಟ್ ವೇರ್ ತಂತ್ರಜ್ಞರಾಗಿದ್ದಾರೆ, ಚಾರ್ಟರ್ಡ್ ಆಕೌಂಟಂಟ್ ಗಳಾಗಿದ್ದಾರೆ, ವೈದ್ಯರಾಗಿದ್ದಾರೆ, ಇನ್ನೂ ಯಾವ್ಯಾವುದೋ ಹುದ್ದೆ/ವೃತ್ತಿಗಳಲ್ಲಿದ್ದಾರೆ.

ಉಳಿದಂತೆ ಉದ್ಯಮಿಯಾಗಿದ್ದ ಆತನ ಉದ್ಯಮ ಚೆನ್ನಾಗಿ ನಡೆದಿತ್ತು. ವ್ಯವಹಾರ ಕೋಟಿಗಳ ಮಟ್ಟದಲ್ಲಿ ನಡೆದಿತ್ತು. ಉಂಡುಟ್ಟು ನೆಮ್ಮದಿಯ ಜೀವನ ನಡೆಸಿದ್ದ ಅವನ ಮನೆಯಲ್ಲಿ ಅನಾರೋಗ್ಯ ಕಾಣಿಸಿಕೊಂಡಿತು. ಮಾರ್ಕೆಟಿಂಗ್ ಮಾಡುವವರ ಮೂಲಕ ಬಂದ ಕೋಟಿಯ ಹತ್ತಿರದ ಒಂದು ಆರ್ಡರ್ ಪಡೆದುಕೊಂಡು ಉತ್ಪನ್ನಗಳನ್ನು ಒದಗಿಸಿದರೆ ಹಣವೇ ಬರಲಿಲ್ಲ!

ಆದರೂ ಬ್ಯಾಲೆನ್ಸಿಂಗ್ ಮಾಡಿಕೊಳ್ಳುತ್ತಿರುವಾಗ ಮನೆಯವರ ಅನಾರೋಗ್ಯದಿಂದ ಆಫೀಸಿನ ಕಡೆಗೆ ಗಮನ ಕೇಂದ್ರೀಕರಿಸಲಾಗಲಿಲ್ಲ. ಕಚೇರಿಯಲ್ಲಿ ಕಳ್ಳತನಗಳಾದವು; ನಗದು ಮತ್ತು ಕೆಲವು ಸುವಸ್ತುಗಳು, ಲ್ಯಾಪ್ ಟಾಪ್ ಗಳು ಎಲ್ಲ ಹೋದವು. ಕೊನೆಕೊನೆಗೆ ಸಣ್ಣ ಪುಟ್ಟ ಆರ್ಡರುಗಳಿಗೆ ಅಡ್ವಾನ್ಸ್ ಪಡೆದು ಎನ್ ಕ್ಯಾಶ್ ಮಾಡಿಟ್ಟ ಹಣವನ್ನೂ ಹೊಡೆದುಕೊಂಡರು. ಕಚೇರಿಯಲ್ಲಿ ಶಂಕಿತ ಕೆಲವರನ್ನು ಕೆಲಸದಿಂದ ತೆಗೆದುಹಾಕಿದಾಗ ಇವನ ವಿರುದ್ಧ ಅವರು ಅಪಪ್ರಚಾರ ನಡೆಸಿದರು.

ಒಂದು ಕಡೆ ಕೌಟುಂಬಿಕ ಅನಾರೋಗ್ಯ, ಇನ್ನೊಂದು ಕಡೆ ಆರ್ಥಿಕ/ವ್ಯಾವಹಾರಿಕ ನಷ್ಟ ಎರಡರ ಮಧ್ಯೆ ವ್ಯಕ್ತಿ ಮಾನಸಿಕವಾಗಿ ಜರ್ಜರಿತನಾದ. ಕಂಡವರು ತಲೆಗೊಂದು ಕತೆ ಕಟ್ಟಿದರು. ಕೆಲವರು ನೇರವಾಗಿ ಹೀಯಾಳಿಸಿದರು, ಅವಹೇಳನ ಮಾಡಿದರು. ವಿಷಯ ತಿಳಿದ ಸಂಬಂಧಿಕರು ದೂರ ಇರಲು ಪ್ರಯತ್ನಿಸಿದರು. ಕ್ಷುಲ್ಲಕ ಕಾರಣಗಳಿಗೆ ಕೇಸುಗಳು ದಾಖಲುಗೊಂಡವು. “ಗುಡ್ ವಿಲ್ ಕಳೆದುಕೊಂಡ ವ್ಯಕ್ತಿ” ಎನಿಸಿದ ಇವನಿಗೂ ವಿಕ್ರಮನದ್ದೇ ಪರಿಸ್ಥಿತಿ; ವಿಕ್ರಮನ ಕತೆಯನ್ನು ಕೇಳಿ ಸಮಾಧಾನಪಟ್ಟುಕೊಳ್ಳಬೇಕಾದ ಪರಿಸ್ಥಿತಿ. ಇಂತಹ ಆರ್ಥಿಕ ನಷ್ಟವನ್ನು ವಿಮಾ ಕಂಪನಿಗಳು “ಪೆರಿಲ್” ಎನ್ನುತ್ತಾರೆ.

ನಡುವಯಸ್ಸಿನವರೆಗೆ ಉತ್ತಮವಾಗಿ ವ್ಯವಹಾರ ನಡೆಸಿದ್ದ ವ್ಯಕ್ತಿ ಗಳಿಸಿದ್ದನ್ನೆಲ್ಲ ಕಳೆದುಕೊಂಡರೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ನೀಡುವ ಕೈಯನ್ನು ಯಾಚಿಸುವ ಅನಿವಾರ್ಯತೆ ಯಾವಾಗಲೂ ಬರಬಾರದು; ಆದರೆ ಅಂತಹ ವ್ಯಕ್ತಿಗಳನ್ನೇ ಭಗವಂತ ಪರೀಕ್ಷಿಸುವುದು. ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕಠಿಣ ಸನ್ನಿವೇಶಗಳಲ್ಲೂ ವ್ಯಕ್ತಿ ಭಗವಂತನ ದಯೆಯೆಂದುಕೊಂಡು ಸಹಿಸಿ ನಡೆದ.

ಸಮಾಜದಲ್ಲಿ ಮಹಾತ್ಮರಿರುತ್ತಾರೆ, ನಿಷ್ಕಾಮ ಕರ್ಮಿಗಳು ಅಲ್ಲಲ್ಲಿ ಇದ್ದೇ ಇರುತ್ತಾರೆ. ತೊಂದರೆಯನ್ನು ಅಂತವರಲ್ಲಿ ಹೇಳಿಕೊಂಡಾಗ ಅಂತಹ ಮನಹೀಯರು ಮನದುಂಬಿ ಸಹಕರಿಸಿದರು, ಹರಸಿದರು, ಶುಭ ಹಾರೈಸಿ ಶ್ರೇಯೋಭಿವೃದ್ದಿಯನ್ನು ಬಯಸಿದರು. ಬಲಗೈಯಲ್ಲಿ ಅವರು ನೀಡಿದ ಸಹಾಯ ಅವರ ಎಡಗೈಗೆ ತಿಳಿದಿಲ್ಲ! ಅದು ನಿಜವಾದ ಜೀವ ಸಹಾಯ.

ನಟ ವಿಷ್ಣುವರ್ಧನ್ ಅವರ ಮನೆಯ ಮುಂದೆ ಯಾರೋ ಮುದುಕ ಆಗಾಗ ಬಂದು ಕುಳಿತಿರುತ್ತಿದ್ದನಂತೆ. ಒಂದಾನೊಂದು ದಿನ ಅದನ್ನು ಕಣ್ಣಿಗೆ ಬೀಳಿಸಿಕೊಂಡ ಅವರು ತನ್ನಿಂದೇನಾಗಬೇಕೆಂದು ಕೇಳಿದರು. “ಕಣ್ಣುಗಳೆರಡೂ ಸರಿಯಾಗಿ ಕಾಣುತ್ತಿಲ್ಲ, ಅದಕ್ಕೊಂದು ಚಿಕಿತ್ಸೆ ಕೊಡಿಸಿದರೆ ಏನಾದರೂ ಕೆಲಸಮಾಡಿ ಬದುಕಿಕೊಳ್ಳುತ್ತೇನೆ, ಧಣಿಗಳು ಸಹಾಯಮಾಡಬೇಕು” ಎಂದನಂತೆ. ಸರಿ, ಮುದುಕನ ಕಣ್ಣುಗಳು ಆಪರೇಷನ್ ಕಂಡವು; ದೃಷ್ಟಿ ಮರಳಿಬಂತು. ವಿಷ್ಣುವರ್ಧನ್ ಮಾಡಿದ ಇಂತಹ ಹಲವು ಸಹಾಯಗಳು ಅವರ ಮನೆಮಂದಿಗೂ ಸಹ ತಿಳಿದಿರಲಿಲ್ಲ! ಅದು ನಿಜವಾದ ಜೀವ ಸಹಾಯ.

ಉದಾತ್ತ ವ್ಯಕ್ತಿಗಳಿಂದ ನೈತಿಕ ಬೆಂಬಲ ಪಡೆದ ನನ್ನ ಸ್ನೇಹಿತ ಉದ್ಯಮವನ್ನು ಬದಲಿಸಿಕೊಂಡು ಮುಂದಕ್ಕೆ ಹೆಜ್ಜೆ ಇಟ್ಟಿದ್ದಾನೆ. ಕೇಸುಗಳು ಖುಲಾಸೆಗೊಂಡಿವೆ. ಯಶಸ್ಸುಗಳಿಸುವುದು ಒಂದು ದಿನದ ಮಾತಲ್ಲ; ಅದಕ್ಕೊಂದು ತಪಸ್ಸು ಬೇಕು. ಅಂತಹ ತಪೋನಿರತನಾದ ಅವನು ಕೆಲವು ವರ್ಷಗಳಲ್ಲಿ ಪುನಃ ಯಶಸ್ಸನ್ನು ಗಳಿಸಿ, ತನಗೆ ಸಹಕರಿಸಿದವರಿಗೆಲ್ಲ ಕೃತಜ್ಞತೆ ಹೇಳುವ ಗುರಿ ಹೊತ್ತಿದ್ದಾನೆ.

ಒಬ್ಬ ಸಂಸಾರಿಗೇ ಎಷ್ಟೊಂದು ಸಾಮಾಜಿಕ ಜವಾಬ್ದಾರಿ ಇರುವಾಗ ಧರ್ಮಪೀಠದಲ್ಲಿ ಕುಳಿತು ಸಮಾಜದ ಮುಖಂಡನೆನಿಸಿದ ಸನ್ಯಾಸಿಗೆ ಎಂತಹ ಸಾಮಾಜಿಕ ಜವಾಬ್ದಾರಿ ಇರಬೇಕು? ಯಾವ ಸಮಾಜಿಕ ಬದ್ಧತೆ ಇರಬೇಕು? ಕನ್ಯಾಸಂಸ್ಕಾರದ ನೆಪದಲ್ಲಿ ಹೆಣ್ಣುಮಕ್ಕಳನ್ನು ಹಾಳುಮಾಡುವುದೇ? ಏಕಾಂತ ದರ್ಶನದ ನೆಪದಲ್ಲಿ ಮಹಿಳೆಯರ ಜೊತೆ ಸಂಭೋಗ ನಡೆಸುವುದೇ?

ತನ್ನ ಅಶ್ಲೀಲ ನಡತೆಗಳು, ಹಾದರದ ನಡತೆಗಳು ಗೊತ್ತಾಗಿ ವಿರೋಧಿಸುವವರನ್ನು ಹತ್ತಿಕ್ಕಲು ಬಹಿಷ್ಕಾರ ಹಾಕಿಸುವುದೇ? ಬೆದರಿಕೆ ಹಾಕಿಸಿ ಸಾವು ನೋವುಗಳಿಗೆ ಕಾರಣವಾಗುವುದೇ? ಸಮಾಜವನ್ನೇ ಇಬ್ಭಾಗ ಮಾಡಿ ಒಂದು ಭಾಗದ ಬೆಂಬಲ ಇರಿಸಿಕೊಂಡು ಮೆರೆಯುವುದೇ? ಶಿಷ್ಯ ಸಮುದಾಯದಿಂದ ಸಂಗ್ರಹಗೊಂಡ ಧನ-ಕನಕಗಳನ್ನು ಹಾದರದ ಕೇಸುಗಳನ್ನು ಮುಚ್ಚಿಸುವ ಸಲುವಾಗಿ ಬಳಸುವುದೇ?

ತನ್ನ ಕಚ್ಚೆ ಹರುಕುತನ ಸುಳ್ಳೆಂದು ಸಾರಲಿಕ್ಕೆ, ಸಾಧಿಸಲಿಕ್ಕೆ ಮಾಧ್ಯಮಗಳನ್ನೆಲ್ಲ ಬಳಸಿಕೊಳ್ಳುವುದೇ? ಮುಗ್ಧ ಜನರಿಗೆ ತಾನು ಹೇಳಿದ್ದೇ ಪರಮಸತ್ಯವೆಂದು ನಂಬಿಸಿ ಮೋಸ ಮಾಡುವುದೇ? ಪೂರ್ವಾಶ್ರಮದ ಹೆಸರಿನಲ್ಲಿ ವಿಮೆ ಇಳಿಸಿಕೊಳ್ಳುವುದೇ? ಬಂದ ದೇಣಿಗೆ, ಕಾಣಿಕೆಗಳನ್ನು ಖಾಸಗಿ ಖಾತೆಗಳಿಗೆ ವರ್ಗಾಯಿಸಿಕೊಳ್ಳುವುದೇ?

ಮಾಟ-ಮಂತ್ರಗಳಿಂದ ವಿರೋಧಿಗಳನ್ನು ಬಗ್ಗುಬಡಿಯಲು ಯತ್ನಿಸುವುದೇ? ತೀರ್ಪನ್ನು ತಾನೇ ಹಣದಿಂದ ನಿರ್ಧರಿಸುವುದೇ? ಪ್ರವಚನ ಎಂಬ ಐಪ್ಯಾಡ್ ಭಾಷಣಗಳನ್ನು ಪರೋಕ್ಷ ಬೆಂಬಲಿಗರನ್ನು ಪ್ರಚೋದಿಸಲಿಕ್ಕೆ ಬಳಸುವುದೇ? ವಿರೋಧಿಸುವವರನ್ನು ಆತ್ಮಹತ್ಯೆಗೆ ಪ್ರಚೋದಿಸುವುದೇ? ಇದೆಲ್ಲ ಜೀವ ಸಹಾಯವೇ?

ಯಾವ ಸ್ವಾಮಿಯೂ ತನ್ನ ಬಣ್ಣದ ಅಕ್ಕಿಯ ಮಹಿಮೆಯನ್ನು ತಾನೇ ಹೇಳಿಕೊಳ್ಳಬಾರದು; ಇಮ್ಮಡಿ ವಿಶ್ವೇಶ್ವರಯ್ಯನದು ಎಲ್ಲೋ ಹೇಳಿದಂತೆ ರೂಮಿನೊಳಗೆ ಕೂತು ಹೂಸು ಬಿಟ್ಟುಕೊಂಡು ತನ್ನ ಹೂಸಿನ ವಾಸನೆಯನ್ನು ತಾನೇ ಆಘ್ರಾಣಿಸಿದಷ್ಟೇ ಬೆಲೆ ಅದಕ್ಕೆ. ಬಣ್ಣದ ಅಕ್ಕಿಯ ಕುರಿತು ಬಣ್ಣಬಣ್ಣದ ಕತೆಗಳನ್ನು ದಂತಕತೆಗಳಂತೆ ಹೇಳುತ್ತ ಬೋಳೆಣ್ಣೆ ಹಚ್ಚಬಾರದು.

ಅಂದಹಾಗೆ ಈ ಮಠದಲ್ಲಿ ದಂತಕೆಗಳದ್ದೇ ಮಹಾಪೂರ! ಎಲ್ಲವೂ ದಂತದ್ದೇ ಕತೆಗಳು! ಹಿಂದಿನ ಸ್ವಾಮಿಗಳು ಹೆರಿಗೆಯವರನ್ನು ಕೂರಿಸಿ ಮಠದ ಮಹಿಮೆಯನ್ನು ಕೊಂಡಾಡುವ ಪುಸ್ತಕವೊಂದನ್ನು ಒಮ್ಮೆ ಬರೆಯಿಸಿ, ಮತ್ತೆ ಅದಕ್ಕೆ ಉಪ್ಪು-ಖಾರ ಸಾಲಲಿಲ್ಲ ಎಂದುಕೊಳ್ಳುತ್ತ ಇನ್ನೊಮ್ಮೆ ಹೊಸದಾಗಿ ಬರೆಸಿದರಂತೆ. ಬರೆದ ಕಲಾವಿದರಿಗೆ ’ಸುವರ್ಣಮಂತ್ರಾಕ್ಷಣೆ ’ಯನ್ನು ನೀಡಿದರಂತೆ. ಆ ಪುಸ್ತಕವೂ ಮತ್ತು ಅದರ ಮೇಲೆ ನಡೆದ ವಿಮರ್ಶಾ ಗ್ರಂಥಗಳೂ ಸಹ ತುಮರಿಗೆ ಲಭ್ಯವಾಗಿವೆ.

ಸಮರ್ಥ ಅಧ್ಯಯನ ನಡೆಸಿ ಮಠವನ್ನು ಹೊಗಳುವ ಪುಸ್ತಕವನ್ನು ವಿಮರ್ಶೆ ಮಾಡಿದ ಎಡಕ್ಕಿಲ್ಲ ಭಟ್ಟರು, ಅದರಲ್ಲಿನ ಸಂದೇಹಗಳನ್ನೆಲ್ಲ ಆಧಾರಸಹಿತವಾಗಿ ಎತ್ತಿ ತೋರಿಸಿದ್ದಾರೆ. ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಲು ಕಚ್ಚೆಹರುಕನಲ್ಲ, ಅವನನ್ನು ಹುಟ್ಟಿಸಿದ ಯಾವುದೋ ಅಪ್ಪ ಬಂದರೂ ಸಾಧ್ಯವಿಲ್ಲ; ಯಾಕೆಂದರೆ ಈ ಕಚ್ಚೆಹರುಕ ಅಪ್ಪನಿಗೇ ಹುಟ್ಟಿದವನು ಎನ್ನಲು ಸಾಧ್ಯವಾಗೋದಿಲ್ಲ. ಅವರ ವಂಶಾವಳಿಯೇ ಹಾಗಿದೆ.

ಪ್ರಾಯಶಃ ಸ್ಥಾನಮಾನಕ್ಕಾಗಿ ಹಾತೊರೆಯುತ್ತ ತೊನೆಯಪ್ಪನ ಹಾದರಕ್ಕೆ ಬಲಿಯಾದ ಹಲವು ಮಹಿಳೆಯರಿಗೆ ಇವ ನಾಲ್ಕನೇ ಕ್ಲಾನು ಓದಿದ, ಕಚ್ಚೆಹರುಕು ಶ್ರಾದ್ಧ ಭಟ್ಟನ ಪಿಂಡ ಎಂದು ತುಮರಿ ಹೇಳಿದ್ದನ್ನು ಓದಿಕೊಂಡಾಗ, ತಮ್ಮ ಮೇಲೇ ಅಸಹ್ಯ ಹುಟ್ಟಿರಬಹುದು. ಆದರೂ ಹೊರಗಡೆ ಹಾಗೆ ತೋರಿಸಲಾಗುವುದೇ? ಕಚ್ಚೆಶೀಗಳಿಗೇ ಜೈ ಎನ್ನಬೇಕು; ಇಲ್ಲದಿದ್ದರೆ ಯಾದಿಯಲ್ಲಿ ತಮ್ಮ ಹೆಸರೂ ಕಾಣಿಸಿಕೊಂಡರೆ ಸಮಾಜದಲ್ಲಿ ತಮಗೆ ಸಿಗುವ ಸನ್ಮಾನ ಎಂಥದು ಎಂದುಕೊಂಡು ಸುಮ್ಮನಾಗಿರುತ್ತಾರೆ.

ಪ್ರಾಪಂಚಿಕ ವಿಷಾದಕರ ನಡತೆಯನ್ನು ನೋಡಿ-ಆರ್ಥಿಕವಾಗಿ ನಷ್ಟ ಅನುಭವಿಸಿದ ಪ್ರಾಮಾಣಿಕ, ಸಚ್ಚಾರಿತ್ರ್ಯದ ವ್ಯಕ್ತಿಯನ್ನು ಜನ ದೂರ ಇರಿಸುತ್ತಾರೆ. ಹಾದರ ನಡೆಸುತ್ತ, ತನ್ನನ್ನು ವಿರೋಧಿಸುವ ಮಠದ ಕಳ್ಳ ಸನ್ಯಾಸಿಯನ್ನು ಹೊರೆಗಾಣಿಕೆಗಳನ್ನಿತ್ತು ಸನ್ಮಾನಿಸಿ ಬೆಂಬಲಿಸುತ್ತಾರೆ!!

ಪಂಚತಂತ್ರದ ದೀರ್ಘಕರ್ಣನಂತೆ ದೀರ್ಘ ದೀರ್ಘ ವೃತ್ತಾಂತಗಳನ್ನು ನಿಮಗೆಲ್ಲ ಬಡಿಸುತ್ತ ಸಾಗುವ ತುಮರಿಗೆ ಮಠದ ದಂತಕೆಗಳ ನೈಜತೆಯನ್ನು ಬಹಿರಂಗಗೊಳಿಸಲು ಇನ್ನೂ ಕೆಲವು ಸಮಯ ಬೇಕಾಗಬಹುದು. ಅಲ್ಲಿಯವರೆಗೆ ತಾಳ್ಮೆಯಿಂದ ಇಂತಹ ಸುದೀರ್ಘ ಲೇಖನಗಳನ್ನು ಓದಿಕೊಳ್ಳುವುದು ಸಮಾಜಕ್ಕೆ ಕ್ಷೇಮ ಅಂತ ಅಪ್ಪಣೆಯಾಗ್ತದೆ.

Thumari Ramachandra

Source: https://www.facebook.com/groups/1499395003680065/permalink/1770918529861043/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s