ಮುನ್ನಾಭಾಯಿ ತೊನೆಯಪ್ಪನ ಮಠದ ಇನ್ನಷ್ಟು ಕರಾಳ ಚರಿತ್ರೆಗಳು!! [ಭಾಗ-ಮೂರು]

ಮುನ್ನಾಭಾಯಿ ತೊನೆಯಪ್ಪನ ಮಠದ ಇನ್ನಷ್ಟು ಕರಾಳ ಚರಿತ್ರೆಗಳು!!
[ಭಾಗ-ಮೂರು]

ಎಲ್ಲ ಸಮಾಜಗಳ ನ್ಯೂನತೆಗಳನ್ನು ಈ ಸಮಾಜವೂ ಹೊಂದಿದೆ ಎಂಬುದು ಒಪ್ಪಲೇಬೇಕಾದ ಮಾತು. ಯಾಕೆಂದರೆ ತೊನೆಯಪ್ಪ ಸ್ವಾಮಿಗಳೇ ಅಪ್ಪಣೆ ಕೊಡಿಸಿದ್ದಾರೆ-ನಾವು ಉಪ್ಪು ಖಾರ ತಿನ್ನುವವರು ಅಂತ. ಬೌದ್ಧಿಕವಾಗಿ ಒಂದಷ್ಟು ಮೇಲ್ ಸ್ತರದಲ್ಲಿ ಇರಬೇಕಾಗಿತ್ತು; ಆದರೆ ಅಲ್ಲಿಯೂ ಕುಂಟುವುದು ಆಗಾಗ ಕಾಣುತ್ತದೆ. ಯಾರು ಧರ್ಮಾಚರಣೆಯ ಮಾರ್ಗದರ್ಶನ ಮಾಡಬೇಕಾಗಿತ್ತೋ ಅವರೇ ಕಚ್ಚೆಬಿಚ್ಚಿಕೊಂಡು ಹಾರುತ್ತಾರೆ! [ಉಳಿದ ಸರಿಯಾದ ಮಠಗಳವರ ಕ್ಷಮೆಯಿರಲಿ-ಅವರಿಗೆ ಈ ಹೇಳಿಕೆ ಅನ್ವಯವಲ್ಲ.]

ದೇವರನ್ನೇ ನಂಬಿ ಬದುಕೋದು ಜೀವನದ ಒಂದು ವಿಧಾನ; ಆ ಜೀವನ ಅದ್ಧೂರಿಯದಾಗಿರೊಲ್ಲ. ಮೂಲ ಕರ್ತವ್ಯವನ್ನು ಮರೆತು ಬಹಳ ಕಾಲ ಸಂದಿದೆ; ಸಮಷ್ಟಿ ಸಮಾಜದ ಸರ್ವರ ಸಂಗ ಆಗಿರೋದರಿಂದ ಕೆಲವರು ಗುಂಡು-ತುಂಡುಗಳಿಗೂ ಒಗ್ಗಿದ್ದಾರೆ. ಹೀಗಿರುವಾಗ ದೇವರು ತನ್ನ ಹತ್ತಿರಕ್ಕೆ ಬಿಟ್ಟುಕೊಳ್ಳೋದು ದೂರದ ಮಾತಾಯ್ತು. ಆಳರಸರು ಏನಾದರೂ ಕೊಡ್ತಾರೆಯೇ? ಖಂಡಿತ ನಿರೀಕ್ಷೆ ಬೇಡ; ಈ ಸಮಾಜವೀಗ ನಿಜವಾಗಿ ಹಿಂದುಳಿದ ಸಮಾಜ. ನಿಜಕ್ಕೂ ದೇವರೇಗತಿ!!

ಈ ಸಮಾಜದಲ್ಲಿ ಎಂತೆಂತವರಿದ್ದರು ಎಂಬ ತೀರಾ ಪೂರ್ವೇತಿಹಾಸ ಬೇಡ. ತೊನೆಯಪ್ಪ ಅವತರಿಸಿದ ನಂತರ ನಡೆದ ಕೆಲವು ಘಟನೆಗಳನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಲೋಣ. ಹಸುವಿನ ಕಿರಿಯೂರಿನಲ್ಲಿ, ಪ್ರಸಾದದಲ್ಲಿ ವಿಷ ಬೆರೆಸಿ ಒಂದೇ ಕುಟುಂಬದ ಏಳು ಜನರನ್ನು ಕೊಲೆ ಮಾಡಿ ಸಮುದ್ರಕ್ಕೆ ಎಸೆಯಲಾಗಿತ್ತು. ಅರಣ್ಯಾಧಿಕಾರಿ ಅರವಿಂದ ಹೆಗಡೆ ಹತ್ಯೆ ಸಂಶಯಾಸ್ಪದವಾಗಿ ನಡೆದಿತ್ತು. ಸಿದ್ದಾಪುರದ ಕೊಲೆಯೊಂದರಲ್ಲಿ ದೊಡ್ಡ ರಾಜಕಾರಣಿಯ ಹೆಸರಿತ್ತು.-ಇದೆಲ್ಲ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಆಧರಿಸಿದೆ.

ಉತ್ತರ ಕನ್ನಡದಲ್ಲಿ “ಸಾವಾದ ಕೊಲೆ” ಎಂಬ ನಾಟಕವನ್ನು ನಡೆಸಿ ಸಮಾಜವನ್ನು ಎಚ್ಚರಿಸುವ ಕೆಲಸ ನಡೆಯಿತು. ಆದರೂ ಆ ಕೊಲೆ ಕೊಲೆಯಲ್ಲ ಸಾವೇ ಎಂದು ಜನತೆ ಮರೆತುಬಿಟ್ಟಿತು!! ಛೆ ಇದೆಲ್ಲ ಬೇಡಪ್ಪ, ಹಾವಾಡಿಗ ಮಠದ ಹಿಂದಿನವರ ಕಾಲದಲ್ಲಿ ಕುಲೀನ ಬಡ ಹುಡುಗಿಯನ್ನು ಮದುವೆಯಾಗಿದ್ದ ಶ್ರೀಮಂತ ಹುಡುಗನೊಬ್ಬ ತನ್ನ ಚಟಗಳನ್ನೆಲ್ಲ ಒಪ್ಪಿಕೊಳ್ಳದ್ದಕ್ಕೆ ಆ ಹುಡುಗಿಯನ್ನು ಕೊಲೆ ಮಾಡಿದ.

ಇನ್ನೇನು ಪೋಲೀಸ್ ಕೇಸ್ ಆಗಿ ಸಜೆ ಅನುಭವಿಸಬೇಕಾದ ಸಂದರ್ಭದಲ್ಲಿ ಹುಡುಗನ ಕಡೆಯವರು ಮಠಕ್ಕೆ ಬಂದು ಹಿಂದಿನವರನ್ನು ಕಂಡರು. ಹಿಂದಿನವರು ತಮ್ಮ ಸಂಪರ್ಕದ ಡಿ.ಐ.ಜಿ ಗೆ ಹೇಳಿ ಕೇಸನ್ನು ನಿರ್ನಾಮ ಮಾಡಿದರು! ಬಡವರ ಮನೆಯ ಹುಡುಗಿಯಲ್ಲವೇ? ಅವಳ ಕೊಲೆ ಎಲ್ಲೂ ದಾಖಲೆಗೆ ಸಿಗಲಿಲ್ಲ! ಶ್ರೀಮಂತ ಹುಡುಗ ಮಠಕ್ಕೆ ನಡೆದುಕೊಂಡು ಮಂತ್ರಾಕ್ಷತೆ ಪಡೆದು ನಿರುಮ್ಮಳವಾಗಿ ಚಟಭರಿತ ಜೀವನವನ್ನು ಮುಂದುವರಿಸಿದ.

ಚಿನ್ನಾವರದ ಅವಲಕ್ಕಿ ಹೈಸ್ಕೂಲು ಈಗ ಮುಚ್ಚುವ ಹಂತಕ್ಕೆ ಬಂದಿದೆ ಎಂದು ಗುಮ್ಮಣ್ಣ ಹೆಗಡೇರು ಹೇಳುತ್ತಿದ್ದರು; ಕಟ್ಟಡ ಮಾತ್ರ ಇದೆ, ಕಲಿಯುವ ಮಕ್ಕಳಿಲ್ಲ ಎನ್ನುತ್ತಾರೆ. ಕಚ್ಚೆ ಶೀಗಳ ಪ್ರಾಂತೀಯ ಕಾರ್ಯದರ್ಶಿ ಶೀಮಾನ್ ಶೀ ಶೀ ಶೀ ಸೂಜಿ ಭಟ್ಟರು ಅಲ್ಲಿ ಪ್ರಿನ್ಪಿಪಾಲರು; ಕುರುವಾಡೆಯಲ್ಲಿ ಚತುರ್ಮೋಸ ನಡೆದ ನಂತರ ಬಂದ ಸುವರ್ಣ ಮಂತ್ರಾಕ್ಷತೆಯಲ್ಲಿ ಹೊಸ ಕಾರು ಖರೀದಿಸಿದ್ದಾರೆ ಅವರು!

ಹಿಂದೆ ಅದೇ ಶಾಲೆಯಲ್ಲಿ ಸೂಜಿಭಟ್ಟ ಓದಿಕೊಂಡಿದ್ದಂತೆ; ಡಿಗ್ರಿ ಮುಗಿಸಿ ಮರಳಿ ಕಲಿಸಿದ ಶಿಕ್ಷಕರಿಗೇ ತಿರುಮಂತ್ರ ಹಾಕಿ, ಆಡಳಿತ ಮಂಡಳಿಯ ಒಂದಿಬ್ಬರು ಪ್ರಮುಖರ ಕಾಲು ಹಿಡಿದುಕೊಂಡು ರಾಜಕೀಯ ಮಾಡಿ ಅದೇ ಸ್ಕೂಲಿಗೆ ಪ್ರಿನ್ಸಿಪಾಲನಾದನಂತೆ. ಇದೆಲ್ಲ ಒತ್ತಟ್ಟಿಗಿರಲಿ, ಹಿಂದೆ ಅದೇ ಶಾಲೆಯಲ್ಲಿ ಬೊಂಬೆಯಂತಿದ್ದ ಸುಂದರಾಂಗ ಭಟ್ಟನೊಬ್ಬ ಹೆಡ್ ಮಾಸ್ಟರ್ ಆಗಿ ಕೆಲಸ ಮಾಡಿದ್ದ.

ಆಡಳಿತ ಮಂಡಳಿಯಲ್ಲಿರುವ ಒಂದಿಬ್ಬರು ಕಚ್ಚೆ ಹರುಕರು ಹರೆಯದ ಈ ಸುಂದರಾಂಗನಿಗೆ ಸ್ತ್ರೀಲೋಲುಪತೆಯನ್ನು ಅಂಟಿಸಿದರು. ಅಷ್ಟೊತ್ತಿಗೇ ಅವ ಮದುವೆಯಾಗಿದ್ದರೂ, ಹುಡುಗಿಯರ ಚಟ ನಿಲ್ಲಲಿಲ್ಲ. ಆ ದಿನಗಳಲ್ಲಿ ಸುತ್ತ ಇರುವ ಹಲವು ಗ್ರಾಮಗಳಿಗೆ ಅದೊಂದೇ ಹೈಸ್ಕೂಲು ಆಗಿದ್ದರಿಂದ ಕಲಿಯುವ ಮಕ್ಕಳ ಸಂಖ್ಯೆ ಸಾವಿರದಲ್ಲಿತ್ತು. ಹೆಣ್ಣುಮಕ್ಕಳೂ ಅರ್ಧಪ್ರಮಾಣದಲ್ಲಿದ್ದರು.

ಊರಮೇಲೆ ಮೇಯಲು ಹೋಗುವುದಕ್ಕಿಂತ ಹೈಸ್ಕೂಲಿನಲ್ಲೇ ಹರೆಯದ ಹುಡುಗಿಯರು ಕಣ್ಣಿಗೆ ಕಂಡಾಗ ಅವರನ್ನೇ ಬಳಸಿಕೊಳ್ಳತೊಡಗಿದ ಆ ಸುಂದರಾಂಗ ಭಟ್ಟ. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸ್ಪೆಷಲ್ ತರಬೇತಿ ನೀಡುವ ನೆಪದಲ್ಲಿ ಹುಡುಗಿಯರನ್ನು ಪ್ರತ್ಯೇಕವಾಗಿ ಕರೆಸಿಕೊಳ್ಳತೊಡಗಿದ. ಹುಡುಗಿಯರು ತನ್ನ ಚೇಂಬರಿಗೆ ಬಂದಾಗ ಅವರ ಅಂಗಾಂಗಗಳನ್ನು ಮುಟ್ಟಿ ಸಲಿಗೆ ಬೆಳೆಸಿಕೊಳ್ಳುತ್ತ ರಜಾದಿನಗಳಲ್ಲಿ ದೂರವೆಲ್ಲಿಗೋ ಕರೆದುಕೊಂಡು ಹೋಗುವ ಆಮಿಷ ಹುಟ್ಟಿಸುತ್ತಿದ್ದ.

ಮನೆಯಲ್ಲಿ ತರಬೇತಿಯ ಬಗ್ಗೆ ಹೇಳಿ ಅನುಮತಿ ಪಡೆದು, ಸುಂದರಾಂಗ ಭಟ್ಟನ ಜೊತೆಗೆ ದೂರದ ಯಾವುದೋ ಗೌಪ್ಯ ಜಾಗಗಳಿಗೆ ತೆರಳುತ್ತಿದ್ದ ಹುಡುಗಿಯರು ಮರಳುವಾಗ ಎಲ್ಲ ಮುಗಿದಿರುತ್ತಿತ್ತು! ನಂತರ ಅವರನ್ನು, ತೊನೆಯಪ್ಪ ಶೀಗಳು ಏಕಾಂತದ ಮಹಿಳೆಯರನ್ನು ಹೆದರಿಸಿದಂತೆ ಆಣೆ-ಪ್ರಮಾಣ ಮತ್ತು ಪರೀಕ್ಷೆಯ ಫಲಿತಾಂಶ ಮೊದಲಾದ ಹಲವು ಸಂಗತಿಗಳನ್ನು ಇಟ್ಟುಕೊಂಡು ಹೆದರಿಸುತ್ತಿದ್ದ.

ಶೀಲ ಕಳೆದುಕೊಂಡ ಹುಡುಗಿಯರಿಗೆ ತಮ್ಮ ಅವಸ್ಥೆ ಸಾರ್ವಜನಿಕರಿಗಾಗಲೀ ಅಥವಾ ಸಮಾಜದ ಜನರಿಗಾಗಲೀ ಬಹಿರಂಗವಾಗುವುದೋ ಎಂಬ ಭಯ. ಇನ್ನೊಂದೆಡೆ ತಾನು ಬಸಿರಾಗಿರಬಹುದೇ ಎಂಬ ಭಯ. ಕೆಲವು ಹುಡುಗಿಯರು ಬಸಿರಾಗಿದ್ದೂ ಆಯಿತು, ಮನೆಗೂ ಗೊತ್ತಾಗದಂತೆ ಭಟ್ಟನ ಜೊತೆಗೆ ಹೋಗಿ ಅಬಾರ್ಷನ್ ಮಾಡಿಕೊಂಡಿದ್ದೂ ಆಯಿತು! ಕೊನೆಕೊನೆಗೆ ಸುಂದರಾಂಗ ಭಟ್ಟನ ತೆವಲು ವಿಪರೀತವಾಗಿ ಆಡಳಿತ ಮಂಡಳಿಯ ಸದಸ್ಯನೊಬ್ಬನ ಮಗಳನ್ನೂ ಕೆಡಿಸಿಬಿಟ್ಟ!

ಈ ವಿಷಯ ಗೊತ್ತಾದ ಮರುಕ್ಷಣದಲ್ಲಿ ಅವಳ ತಂದೆ ರಾವಣನಂತೆ ಹಲ್ಲುಕಡಿದ. ಅಧ್ಯಕ್ಷ ಜಂಬುನಾತರನ್ನು ಕೂಡಿಕೊಂಡು ಆ ಕ್ಷಣವೇ ಸುಂದರಾಂಗ ಭಟ್ಟನನ್ನು ಸ್ಕೂಲಿನಿಂದ ಓಡಿಸುವ ಯೋಜನೆ ಮಾಡಿದ. ವಾಸ್ತವವಾಗಿ ಇವರಿಬ್ಬರೂ ಕಚ್ಚೆಹರುಕರೇ, ಆದರೆ ತಮ್ಮ ಕಾಲಬುಡಕ್ಕೆ ಬಂದಾಗ ಮಾತ್ರ ಅದರ ಬಿಸಿ ತಟ್ಟುತ್ತದೆ ಅಂತವರಿಗೆ.

ಜೋರು ಗಲಾಟೆಗಳು, ಪ್ರತಿಭಟನೆಗಳು ಎಲ್ಲ ನಡೆದವು. ಆ ಕಾಲದಲ್ಲಿ ಮಾಧ್ಯಮಗಳು ಇಷ್ಟೊಂದು ಬಿರುಸಾಗಿರಲಿಲ್ಲ. ಅಂತರ್ಜಾಲ ಇರಲೇ ಇಲ್ಲ. ಹೀಗಾಗಿ ವಿಷಯವೇನಿದ್ದರೂ ದಿನಪತ್ರಿಕೆಗಳ ಮೂಲಕವೇ ಜನರಿಗೆ ತಲುಪಬೇಕು. ಹೀಗಾಗಿ ಅಷ್ಟೊಂದು ದೊಡ್ಡಮಟ್ಟದಲ್ಲಿ ಸುದ್ದಿಯಾಗಲಿಲ್ಲ. ಆದರೂ ಕ್ರೈಂ ವರದಿಗಾರರು ಅವರ ವಾರ ಪತ್ರಿಕೆಗಳಲ್ಲಿ ಬರೆದುಕೊಂಡರು.

ಸುಂದರಾಂಗ ಭಟ್ಟ ಮಾಡಿದ್ದಕ್ಕೆ ಯಾವ ದಾಖಲೆಗಳೂ ಇರಲಿಲ್ಲ; ಆದರೂ ಅವನ ಕಚ್ಚೆಹರುಕು ಮನೆಹಾಳತನ ಜನತೆಗೆ ಗೊತ್ತಾದಾಗ ಅವನ ಮುಖದಲ್ಲಿ ತಪ್ಪಿನ ಭಾವನೆ ಎದ್ದು ಕಾಣುತ್ತಿತ್ತು. ಕೈಕಾಲು ನಡುಗುತ್ತಿತ್ತು. ಕಾಯ್ದೆಬದ್ಧವಾಗಿ ಅದು ಏಡೆಡ್ ಸ್ಕೂಲು-ಅವನನ್ನು ಹುದ್ದೆಯಿಂದ ತೆಗೆಯೋದಾದರೆ ಸರಕಾರದ ಮೂಲಕವೇ ಆಗಬೇಕಿತ್ತು. ಆದರೆ ಸರಕಾರಕ್ಕೆ ಅವನನ್ನು ತೆಗೆದು ಹಾಕಲು ಯಾವ ಆಧಾರಗಳೂ ಇರಲಿಲ್ಲ!

ಈ ಪ್ರಕರಣ ಹಾವಾಡಿಗ ಮಠದ ಅಂದಿನ ಮಹಾಸಂಸ್ಥಾನದವರು ಎನ್ನಿಸಿಕೊಳ್ಳುತ್ತಿದ್ದವರ ಎದುರಿಗೆ ಹೋಯಿತು. ಅಲ್ಲಿ ಅವನು ಹುದ್ದೆ ಬಿಡಬೇಕೆಂದೂ ಮತ್ತು ಮಠದಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದೂ ತೀರ್ಮಾನಿಸಿದರು. ಗೊತ್ತಾದ ದಿನ ಅವನಿಗೆ ಕೇಶಮುಂಡನ ಮಾಡಿಸಿ, ಪಂಚಗವ್ಯಾದಿಗಳನ್ನೆಲ್ಲ ಕೊಟ್ಟು ಅದೇನೋ ಹೋಮಗಳನ್ನೆಲ್ಲ ಮಾಡಿಸಿ ದುಡ್ಡು ಕಿತ್ತರು!

ಅಂದಿನ ಸಂಸ್ಥಾನದವರಿಗೆ “ಐದೂನೂರಾ ಒಂದು ರೂಪಾಯಿ ಸ್ವಾಮಿ” ಎಂಬ ಬಿರುದೂ ಸಹ ಇತ್ತು! ಯಾಕೆಂದರೆ ಆ ದಿನಗಳಲ್ಲಿ ಐದುನೂರು ಎಂದರೆ ಇಂದು ಒಂದು ಲಕ್ಷ ಇದ್ದಂತೆ. ತಾನು ಭಿಕ್ಷೆಗೆ ಬರಬೇಕೆಂದರೆ ಇಂತಿಷ್ಟು ಕೋಡಲೇ ಬೇಕೆನ್ನೋದು ಕರಾರು; ಅದಿಲ್ಲದಿದ್ದರೆ ಭಿಕ್ಷೆ-ಪಾದಪೂಜೆ ಇಲ್ಲ. ದೀಪಗಾಣಿಕೆ ಕೊಡಲಿಲ್ಲ ಅಂತ ಮಲೆನಾಡಿನ ಸಾಲ್ಕುಹಳ್ಳಿಗಳಿಗೆ ಮಂತ್ರಾಕ್ಷತೆಯನ್ನೇ ಕೊಡದಿದ್ದ ದೊಡ್ಡ ಸನ್ಯಾಸಿಗಳು ಅವರು!

ಸುಂದರಾಂಗ ಭಟ್ಟನ ತೇಜೋವಧೆ ಮಾಡಿಸಿದ್ದೇನೋ ಸರಿ, ಆದರೆ ಆಡಳಿತ ಮಂಡಳಿಯವರೇ ಕಚ್ಚೆಹರುಕರಾಗಿ ಹಲವು ಮಹಿಳೆಯರ ಶೀಲಹರಣ ಮಾಡಿದ್ದರಲ್ಲ, ಅವರಿಗೆ ಮಠದಿಂದ ಪ್ರಾಯಶ್ಚಿತ್ತ ಇರಲೇ ಇಲ್ಲ! ಮೇಲಾಗಿ ಜಾಸ್ತಿ ಕ್ಯಾತೆ ತೆಗೆದರೆ ತಾನು ಇಟ್ಟುಕೊಂಡಿದ್ದರ ಸುದ್ದಿ ಎಲ್ಲಿ ಬಹಿರಂಗವಾಗಬಹುದೋ ಎಂದು ಅಂದಿನ ಮಹಾಸಂಸ್ಥಾನದವರಿಗೂ ಸಂದೇಹವಿತ್ತು. ಅಂದಿನ ಮಾಧ್ಯಮಗಳವರು ಬಂದರೆ “ದರ್ಶನವೇ ಇಲ್ಲವಂತೆ” ಎಂದು ಕಳಿಸುತ್ತಿದ್ದುದು ಅದಕ್ಕೇ.

ಶಿಕ್ಷೆಯನ್ನು ತೀರ್ಮಾನಿಸುವ ಧರ್ಮಪೀಠದವನೇ ಅಡ್ಡಕಸುಬಿಗೆ ಕೈಹಾಕಿದ್ದಾಗ ಶಿಕ್ಷೆ ನೀಡಲು ಅವನಾರು? ಡಿಗ್ರಿ ಮುಗಿಸಿ ಬೇರೆಲ್ಲೋ ನೌಕರಿ ಹುಡುಕಿಕೊಂಡು ಹಾಯಾಗಿರುತ್ತಿದ್ದ ಸುಂದರಾಂಗ ಭಟ್ಟನನ್ನು ತಮ್ಮ ಸ್ಕೂಲಿಗೆ ಕರೆದು ನೌಕರಿ ಕೊಟ್ಟು, ಅವನಿಗೆ ಚಟಗಳನ್ನು ತಾವೇ ಅಂಟಿಸಿದ ’ಮಹಾನುಭಾವರು’ಗಳಾದ ಆಡಳಿತ ಮಂಡಳಿಯವರಿಗೆ ಶಿಕ್ಷೆ ಯಾಕೆ ಇಲ್ಲದಾಯಿತು? ಅದು ತಪ್ಪಲ್ಲವೇ?

ಮಲೆನಾಡಿನ ನಾಲ್ಕು ಹಳ್ಳಿಗಳಿಗೆ ಇವತ್ತಿಗೂ ಸಹ ಹಾವಾಡಿಗ ಮಠದ ಸಂಪರ್ಕ ಅಷ್ಟಕ್ಕಷ್ಟೆ. ಅಲ್ಲಿನವರು ಯಾವ ರಗಳೆಯೂ ಇಲ್ಲದೆ ಆರಾಮಾಗಿದ್ದಾರೆ. ಅಂದು ಮಂತ್ರಾಕ್ಷತೆ ಕೊಡದ ನಂತರ ಅವರು ಮಠವನ್ನೇ ದೂರ ಇರಿಸಿಬಿಟ್ಟಿದ್ದಾರೆ! ಅವರಿಗೆ ಯಾವ ಪೀಠದ, ಗುರುವಿನ ಶಾಪವಾಗಲೀ ತಾಪವಾಗಲೀ ತಾಗಲೇ ಇಲ್ಲ! ಯಾವ ಜ್ಯೋತಿಷಿಯೂ ಅಷ್ಟಮಂಗಲ ಹಾಕಿ “ನೀವು ಗುರುವಿಗೆ ಅವಮಾನ ಮಾಡಿದ್ದೀರಿ, ಶಾಪ ತಾಗಿದೆ” ಎಂದಾಗಲೀ ಅಥವಾ “ನೀವು ಮಠಕ್ಕೆ ನಡೆದುಕೊಳ್ಳುತ್ತಿಲ್ಲ” ಎಂದಾಗಲೀ ಹೇಳಲಿಲ್ಲ.

ಸ್ವತಃ ತುಮರಿ ಕಂಡಂತೆ ಹಾವಾಡಿಗ ಮಠದ ಶಿಷ್ಯಬಳಗದಲ್ಲಿ ಅಲ್ಲಿರುವಷ್ಟು ಸಂತೋಷ ಬೇರೆಲ್ಲೂ ಇಲ್ಲ! ಯಾಕೆಂದರೆ ಅಲ್ಲಿ ಯಾವ ವಸೂಲಾತಿಯೂ ಇಲ್ಲ. ಇರುವವರೆಲ್ಲ ಧರ್ಮ-ಕರ್ಮಗಳನ್ನು ಅರಿತ ಶುದ್ಧ ಸಂಸಾರಿಗಳು. ಮರ್ಕಟ ಸನ್ಯಾಸಿಯ ಪುರಪ್ರವೇಶದ ಗೋಜು, ಗೌಜು-ಗದ್ದಲ ಅಲ್ಲಿಲ್ಲ. ಅಲ್ಲಿನವರ ಮಕ್ಕಳೆಲ್ಲ ಬೆಳೆದು ದೊಡ್ಡವರಾಗಿ ಸತ್ಸಂತಾನಗಳನ್ನು ಪಡೆದು ಕುಟುಂಬವನ್ನು ಮುಂದುವರಿಸಿದ್ದಾರೆ.

ಜೀವಕ್ಕೆ ಸಹಾಯ ಮಾಡಬೇಕೆಂಬ ನಾಟಕದ ಮಾತುಗಳನ್ನಾಡುವ ತೊನೆಯಪ್ಪ ಶೀಗಳಿಗೆ ಅವರ ಮಠದ ಕರಾಳ ಇತಿಹಾಸದಲ್ಲಿ ಮಠ ನಡೆಸಿದ ಬಹಿಷ್ಕಾರ, ದುರಾಡಳಿತಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಜನಗಳ ಜೀವ ಗಮನಿಕ್ಕಿಲ್ಲವೇ? ತೀರಾ ಇತ್ತೀಚೆಗೆ ಕಚ್ಚೆಶೀಗಳ ಸ್ವಂತ ಪ್ರಕರಣದಲ್ಲಿ ಬಲಿಯಾದ ಅತ್ಯಂತ ಉತ್ತಮ ವ್ಯಕ್ತಿಯ ಜೀವಕ್ಕೆ ಬೆಲೆಯಿಲ್ಲವೇ? ಯಾಕಾಗಿ ಅವರು ಅಂತಹ ನಾಟಕೀಯ ನಡೆಯನ್ನು ಇಟ್ಟುಕೊಳ್ಳಬೇಕು?

ಚಿನ್ನಾವರದ ಸಮೀಪದ ಊರ್ವಶಿಕೊಂಡದ ಮಠವನ್ನು ಹೊಡೆದುಕೊಂಡು ಅಲ್ಲಿ ಶಿಷ್ಯರ ಜಮೀನನ್ನು ಮಠದ್ದೆಂದು ಬಡಿದಾಡಿ ಬೇಕಾದಲ್ಲೆಲ್ಲ ಸುವರ್ಣಮಂತ್ರಾಕ್ಷತೆ ಕೊಟ್ಟು ಗೆದ್ದುಕೊಂಡರು! ಆ ಜಮೀನಿನ ಮಾಲೀಕರು ವಿದ್ಯುತ್ ತಯಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡಿ ಈಗ ನಿವೃತ್ತರು. ಇದ್ದ ಪುಟ್ಟ ಆಸ್ತಿಯನ್ನು ಕಳೆದುಕೊಳ್ಳುವಾಗ ಬದುಕು ಬೇಸರ ಬಂದು ಅವರ ತಮ್ಮ ಮರಕ್ಕೆ ನೇಣು ಹಾಕಿಕೊಂಡು ಸತ್ತ. ಅವರ ಅಪ್ಪ ಕೊರಗಿ ಕೊರಗಿ ಸತ್ತರು. ಹಾಗಾದರೆ ಅವುಗಳೆಲ್ಲ ಜೀವಗಳಲ್ಲವೇ?

ಈಗ ತೊನೆಯಪ್ಪನವರು ಕಂಡಲ್ಲೆಲ್ಲ ಓಡುತ್ತಿದ್ದಾರೆ. ಎಲ್ಲಾದರೂ ಯಾರಾದರೂ ಕರೀತಾರಾ ಅಂತ ನೋಡಲಿಕ್ಕೆ ಸಮಿತಿಯೊಂದನ್ನು ನೇಮಿಸಿಕೊಂಡಿದ್ದಾರೆ. ಆ ಸಮಿತಿಯವರು ಊರೂರು ಸುತ್ತುತ್ತ ಅನ್ಯ ಸಮಾಜಗಳ ದೇವಸ್ಥಾನಗಳು, ಮಠ-ಮಂದಿರಗಳಿಗೆಲ್ಲ ಭೇಟಿ ನೀಡುತ್ತ “ನಮ್ಮ ಸ್ವಾಮಿಗಳು ನಿಮ್ಮನ್ನು ಕಾಣಬೇಕೆಂತೆ, ಬರಲಿಕ್ಲೆ ಸಿದ್ಧರಾಗಿದ್ದಾರೆ, ಕರೆತರಬಹುದೇ?” ಎಂದು ಬುಕ್ ಮಾಡಿಕೊಂಡು ಬರಲು ಹೋಗುತ್ತಿದ್ದಾರೆ. ಅವರೆಲ್ಲ ಯಾವ ಕಾಣಿಕೆಯನ್ನೂ ಕೋದೋದು ಬೇಕಾಗಿಲ್ಲ; ಮುಂದೆ ’ಜನಬೆಂಬಲಕ್ಕೆ ಸಹಕಾರ’ ನೀಡಿದರೆ ಸಾಕು, ಕಚ್ಚೆಶೀಗಳೇ ಭಕ್ಷೀಸು ಕೊಡುತ್ತಾರೆ! ಮಠಕ್ಕೆ ಈ ದುರ್ಗತಿ ಬರಲಿಕ್ಕೆ ಕಾರಣ ಹಲವು ಸದ್ಗೃಹಸ್ಥರ ಶಾಪ. ಅದು ಎದೆಯಾಳದ ಉರಿ; ಅವರ ಅಂದಿನ ನೋವು ಇಂದು ಈ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ.

ಸಮಾಜದಲ್ಲಿ ಇಂದು ಏನುಂಟು ಏನಿಲ್ಲ? ಹಳ್ಳಿಹಳ್ಳಿಗಳ ಮೂಲೆ ಮೂಲೆಗಳ ವರೆಗೂ ಸಂಪರ್ಕ ಮತ್ತು ಸಂವಹನ ವ್ಯವಸ್ಥೆಗಳಿವೆ. ರಸ್ತೆಗಳಾಗಿವೆ, ವಾಹನಗಳು ಓಡಾಡುತ್ತವೆ, ಪತ್ರಿಕೆ, ಟಿವಿ, ಅಂತರ್ಜಾಲ ಎಲ್ಲವೂ ಇವೆ. ಆದರೂ ಸಹ ವಯಸ್ಸಾದ ವೈದಿಕವರ್ಗದವರಿಗೆ ಅಂತರ್ಜಾಲದ ಬಳಕೆ ಗೊತ್ತಿಲ್ಲ. ಕೆಲವು ಪುಂಡು ಯುವ ವೈದಿಕರಿಗೆ ಗೊತ್ತಿದ್ದರೂ ಅದೆಲ್ಲ ಕೇವಲ ’ಪರ್ಸನಲ್’ ವ್ಯವಹಾರಗಳಿಗೆ ಸೀಮಿತ.

ವೈದಿಕರಿಗೆ ಅಂತರ್ಜಾಲದಲ್ಲಿ ಬರುವ ಮಾಹಿತಿ ಗೊತ್ತಾಗೋದಿಲ್ಲ ಅನ್ನೋದು ತೊನೆಯಪ್ಪನವರಿಗೆ ಗೊತ್ತಿದೆ. ಮೇಲಾಗಿ ತನ್ನ ಶಿಷ್ಯವರ್ಗ ಎನಿಸಿಕೊಂಡ ಜನಗಳು ಇರುವ ಹಳ್ಳಿಹಳ್ಳಿಗಳಲ್ಲೂ ಸಹ ಗುರಿಕಾರರು ಮತ್ತು ಉಳಿದ ಲೋಕಲ್ ಸೇವಕರಿಂದ ಬಂದೋಬಸ್ತು ಮಾಡಿಸುತ್ತಾರೆ. ಮಠದ ಪರವಾಗಿ ಮಾಧ್ಯಮಗಳಲ್ಲಿ ಹಾಕಿಸಿಕೊಂಡ ಎಲ್ಲ ವರದಿಗಳೂ ಮತ್ತು ಐಪ್ಯಾಡ್ ಭಾಷಣಗಳೂ ಅವರನ್ನೆಲ್ಲ ತಲುಪಲೇ ಬೇಕು-ಹಾಗೆ ನೋಡಿಕೊಳ್ಳುತ್ತಾರೆ. ಆದರೆ ಮಠದಲ್ಲಿ ನಿಜವಾಗಿ ನಡೀತಿರೋದೇನು ಅನ್ನೋದು ಯಾವೊಬ್ಬ ವೈದಿಕನಿಗೂ ಮನದಟ್ಟಾಗದಂತೆ ನಿರ್ವಹಿಸುತ್ತಿದ್ದಾರೆ.

ಜೊತೆಗೆ ಹಳ್ಳಿಗಳಲ್ಲಿರುವ ಮುಗ್ಧರನ್ನು ಜೈಕಾರಕ್ಕೆ ಬಳಸಿಕೊಳ್ಳಲಾಗುತ್ತದೆ. ತುಮರಿಯ ಸುದೀರ್ಘ ಲೇಖನವನ್ನು ಓದುವ ಪ್ರಯಾಸದ ದುಸ್ಸಾಹಸಕ್ಕೆ ಮುಂದಡಿ ಇಟ್ಟ ನಿಮಗೆ ಈ ಮುಗ್ಧರ ಬಗೆಗೊಂದು ಕತೆಯನ್ನು ಹೇಳುತ್ತೇನೆ. ಅವರೆಂಥ ಮುಗ್ಧರು? ಕೇಳಿ-

ಶ್ರೀರಾಮ ಪಟ್ಟಾಭಿಷೇಕದ ತರುವಾಯ ಒಂದಾನೊಂದು ದಿನ ಹನುಮಂತ ಅರಮನೆಯಲ್ಲೆಲ್ಲ ಸುತ್ತಾಡಿಕೊಂಡಿದ್ದನಂತೆ. ಹೇಳಿಕೇಳಿ ಬ್ರಹ್ಮಚಾರಿಯಾಗಿದ್ದ ಅವನಿಗೆ ಹೊತ್ತುಗೊತ್ತಿನ ಪರಿಮಿತಿಗಳು ಅಷ್ಟಾಗಿ ಇರಲಿಲ್ಲ. ರಾಮನಿರುವ ಕ್ಷೇತ್ರದಲ್ಲಿ ಅವನಿಷ್ಟಬಂದಂತೆ ಅವನಿರಬಹುದಿತ್ತು; ಹಾಗಂತ ಹನುಮ ಅವಿವೇಕಿಯಲ್ಲ.

ಸೂರ್ಯನಿಂದ ಸಕಲ ವೇದಗಳನ್ನೆಲ್ಲ ಓದಿಕೊಂಡ ಹನುಮನಿಗೆ ಕೆಲವೊಮ್ಮೆ ವಿಸ್ಮೃತಿ ಕಾಡುತ್ತಿತ್ತು. ಹುಟ್ಟಿದಂದಿನಿಂದಲೂ ಸ್ವಲ್ಪ ಆತುರ ಮತ್ತು ಹುಡುಗಾಟ-ಹುಡುಕಾಟಗಳಿಗೆ ಆಂಜನೇಯ ಹೆಸರು ಮಾಡಿದ್ದಾನೆ. ಸೂರ್ಯನೇ ಹೆಣ್ಣೆಂದು ಹಿಡಿಯಲು ಹಾರಿ ಇಂದ್ರನ ವಜ್ರಾಯುಧಕ್ಕೆ ಘಾಸಿಗೊಂಡು ಹನು[ದವಡೆ]ಮುರಿದುಕೊಂಡು “ಹನುಮ” ಎನಿಸಿದ.

ಅದೇರೀತಿ ಮುನಿಗಳು ಒಣಹಾಕಿದ್ದ ಕಾವಿಬಟ್ಟೆಗಳನ್ನೆಲ್ಲ ಕೋಲಿನಿಂದ ಎತ್ತಿ ಆಟವಾಡಿ ಅವರ ಕೋಪಕ್ಕೆ ಗುರಿಯಾಗಿ “ವಿಸ್ಮೃತಿಯುಂಟಾಗಲಿ” ಎಂಬ ಶಾಪ ಪಡೆದಿದ್ದ. ಮಹಾಸಾಗರವನ್ನು ಕಂಡಾಗ ತಾನು ಹಾರಿ ದಾಟಬಲ್ಲೆನೆಂಬ ಸಾಮರ್ಥ್ಯ ಇರುವುದನ್ನೇ ಮರೆತು ಸುಗ್ರೀವ, ಜಾಂಬವ, ಅಂಗದ, ನೀಲ, ವೃಷಕೇತು ಮೊದಲಾದವರಲ್ಲಿ ಏನುಮಾಡಬೇಕೆಂದು ಸಲಹೆ ಕೇಳುತ್ತಿದ್ದ.

ಇಲ್ಲೊಂದು ತಮಾಷೆಯ ಜಿಜ್ಞಾಸೆ–ಸೀತಾದೇವಿಯನ್ನು ಬಿಡಿಸಲು ರಾವಣನ ಜೊತೆ ಯುದ್ಧ ಅನಿವಾರ್ಯವಾದಾಗ, ಹನುಮನ ಪರಿಚಯದಿಂದ ರಾಮನ ಸಹಾಯಕ್ಕೆ ಬಂದದ್ದು ಸುಗ್ರೀವನ ಕಪಿಸೇನೆ. ಸುಗ್ರೀವನ ಸೈನ್ಯದಲ್ಲಿದ್ದ ಕಪಿಗಳ ಸಂಖ್ಯೆ ಎಷ್ಟಿದ್ದಿರಬಹುದು?-ಅದು ಒಂದು ಕೋಟಿ ಮಹೌಘ. ಒಂದು ಮಹೌಘ ಎಂದರೆಷ್ಟು? [ ಈ ಕೋಷ್ಟಕದಲ್ಲಿ * ಸಿಂಬಲ್ ಗುಣಾಕಾರವನ್ನು ಸೂಚಿಸುತ್ತದೆ, ಇಲ್ಲಿನ ಲೆಕ್ಕ ಕರಾರುವ್ವಾಕೆಂದೂ ಇದಮಿತ್ಥಂ ಎಂದೂ ಹೇಳೋದಿಲ್ಲ, ಸ್ವಲ್ಪ ಏರುಪೇರು ಇರಬಹುದು. ಅರಿಯುವಲ್ಲಿ ಒಂದು ಪ್ರಯತ್ನ ಇದಷ್ಟೆ]

1 ಲಕ್ಷ ಕೋಟಿ= 1 ಶಂಖ. 1000000000000
1 ಲಕ್ಷ ಶಂಖ.=1 ಮಹಾಶಂಖ. * 1000000000000
1 ಲಕ್ಷಮಹಾಶಂಖ=1 ಬೃಂದ * 1000000000000
1 ಲಕ್ಷ ಬೃಂದ= 1 ಮಹಾ ಬೃಂದ * 1000000000000
1 ಲಕ್ಷ ಮಹಾ ಬೃಂದ=ಒಂದು ಪದ್ಮ * 1000000000000
1 ಲಕ್ಷ ಪದ್ಮ= 1 ಮಹಾಪದ್ಮ * 1000000000000
1 ಲಕ್ಷ ಮಹಾಪದ್ಮ= 1 ಖರ್ವ * 1000000000000
1 ಲಕ್ಷ ಖರ್ವ= 1 ಮಹಾಖರ್ವ * 1000000000000
1 ಲಕ್ಷ ಮಹಾಖರ್ವ=1 ಸಮುದ್ರ * 1000000000000
1 ಲಕ್ಷ ಸಮುದ್ರ=1 ಔಘ * 1000000000000
1 ಲಕ್ಷ ಔಘ= 1 ಮಹೌಘ. * 1000000000000

ಹಹ್ಹಹ್ಹ, ಒಂದರ ಮುಂದೆ 132 ಸೊನ್ನೆಗಳನ್ನು ಬರೆದರೆ ಒಂದು ಮಹೌಘ ಆಗುತ್ತದೆ. ಇಂತಹ ಒಂದು ಕೋಟಿಯಷ್ಟು ಸಂಖ್ಯೆಯ ಕಪಿಗಳು ಆ ಸೈನ್ಯದಲ್ಲಿದ್ದವಂತೆ. ಒಂದು ಕೋಟಿ ಮಹೌಘವೆಂದರೆ ಇನ್ನೆಷ್ಟು ಸೊನ್ನೆಗಳು ಬೇಕೆಂದು ನೀವೇ ಲೆಕ್ಕಾಚರ ಮಾಡಿಕೊಳ್ಳಿ.

ಅಂದಿನ ಕಪಿಗಳ ಶಾರೀರಿಕ ವರ್ಣನೆಯೂ ರಾಮಾಯಣದಲ್ಲಿ ಹೇಳಲ್ಪಟ್ಟಿದೆ. ಅವು ಇಂದಿನ ಕಪಿಗಳಲ್ಲ ಮಹಾಕಪಿಗಳು, ಘಟೋತ್ಕಚನಂತಹ ಶರೀರವುಳ್ಳವು, ಹಾಗಾದರೆ ಅಷ್ಟೊಂದು ಕಪಿಗಳ ನಿತ್ಯದ ಖರ್ಚೆಷ್ಟು? ಅವುಗಳಿಗೆ ಆಹಾರ ಎಲ್ಲಿಂದ? ಮೇಲಾಗಿ ಕರ್ನಾಟಕದ ಹಂಪೆಯ ಸುತ್ತಮುತ್ತಲ ಭಾಗದಲ್ಲೇ ಇದ್ದವಲ್ಲವೇ? ಸುಸ್ತಾಗಿ ಮುಂದೆ ಯೋಚಿಸಲೂ ಅಗದೆ ಸುಮ್ಮನಾದೆ.

ಮರಳಿ ನಮ್ಮ ಕತೆಗೆ ಬರೋಣ-

ಜಾಂಬವನಂತಹ ವೃದ್ಧರೂ ಹಿರಿಯರೂ “ನೀನು ಸಮರ್ಥ” ನೆಂದು ಜ್ಞಾಪಿಸಿದ ಮೇಲೆ ಹನುಮ ಲಂಕೆಗೆ ಹಾರಿದ. ನಂತರದ ಘಟನೆಗಳೆಲ್ಲ ನಿಮಗೆ ತಿಳಿಯದ್ದೇನಲ್ಲ.

ಇಂತಹ ಹನುಮ ಓಡಾಡುತ್ತ ಓಡಾಡುತ್ತ ಸೀತಾಮಾತೆ ಕುಂಕುಮ ಹಚ್ಚಿಕೊಳ್ಳುತ್ತಿದ್ದ ಕೋಣೆಯ ಹೊರಗೆ ಬಂದನಂತೆ. ಅಚಾನಕ್ಕಾಗಿ ಕಿಟಕಿಯಲ್ಲಿ ಆ ದೃಶ್ಯ ಕಂಡ. ದೃಷ್ಟಿ ಅತ್ತ ಹೋಯಿತು. ಕನ್ನಡಿ ನೋಡಿಕೊಂಡು ಹಣೆಗೆ ಏನನ್ನೋ ಹಚ್ಚಿಕೊಳ್ಳುತ್ತಿದ್ದಾಳಲ್ಲ ಸೀತಾಮಾತೆ ಅಂತ ಚಕಿತನಾದ, ಅಲ್ಲೇ ಕಾದ. ಸೀತಾಮಾತೆ ಹೊರಗೆ ಬಂದಾಗ ” ಏನಮ್ಮಾ ಸೀತಮ್ಮ ಅದು? ಯಾಕೆ ಅದನ್ನು ಹಚ್ಚಿಕೊಳ್ಳಬೇಕು?” ಎಂದು ಪ್ರಶ್ನಿಸಿದನಂತೆ.

“ಹನುಮಾ, ಇದು ಸಿಂಧೂರ, ಇದನ್ನು ಹಚ್ಚಿಕೊಳ್ಳೋದರಿಂದ ಪತಿದೇವರ [ಶ್ರೀರಾಮನ] ಆಯುಸ್ಸು ಹೆಚ್ಚುತ್ತದೆ. ಹಾಗಾಗಿ ಹಚ್ಚಿಕೊಳ್ಳುತ್ತಿದ್ದೇನೆ” ಅಂದಳಂತೆ.

ಸೀತಾಮಾತೆಯನ್ನು ಕಾಡಿ ಬೇಡಿ ಸಿಂಧೂರದ ಬಗ್ಗೆ ತಿಳಿದುಕೊಂಡ ಹನುಮ ಯಾರಿಂದಲೋ ಅದನ್ನು ಬಹಳ ಪ್ರಮಾಣದಲ್ಲಿ ತರಿಸಿಕೊಂಡನಂತೆ. ಶೀಘ್ರದಲ್ಲೆ ಒಂದಷ್ಟನ್ನು ಪಾತ್ರೆಯುಲ್ಲೆತ್ತಿ ಮೈಮೇಲೆ ಕವುಚಿಕೊಂಡು ಮೈಗೆಲ್ಲಾ ಹಚ್ಚಿಕೊಂಶನಂತೆ. ಸೀತಮ್ಮ ಅತ್ತ ಮರಳಿ ಬಂದಾಗ ಆಂಜನೇಯನ ಈ ರೌದ್ರ ರಂಗಿನ ವೇಷವನ್ನು ಕಂಡು ದಂಗಾಗಿಬಿಡುತ್ತಾಳೆ!

ಅರಮನೆಯಲ್ಲೆಲ್ಲ ಹಾರುತ್ತ ಕುಣಿಯುತ್ತಲಿದ್ದ ಹನುಮನನ್ನು ತಡೆದು ಕೇಳಿದಳಂತೆ, “ಏನಪ್ಪ ಹನುಮ? ಏನಿದು ನಿನ್ನ ವೇಷ? ಯಾಕಾಗಿ ಮೈಮೇಲೆಲ್ಲ ಸಿಂಧೂರ ಹಾಕಿಕೊಂಡೆ?”

“ಅಮ್ಮಾ,, ನೀವು ಕೇವಲ ಹಣೆಗೆ ಇದನ್ನು ಹಚ್ಚಿಕೊಳ್ಳೋದರಿಂದ ಶ್ರೀರಾಮನ ಆಯುಸ್ಸು ಜಾಸ್ತಿ ಆಗುತ್ತದೆ ಅಂದಿದ್ದೀರಿ. ನನಗೆ ಅಷ್ಟಕ್ಕೆ ಸಮಾಧಾನವಿಲ್ಲ. ನನ್ನ ರಾಮ ಇನ್ನೂ ಬಹಳ ಹೆಚ್ಚು ಆಯುಸ್ಸನ್ನು ಪಡೆಯಬೇಕು. ಅದಕ್ಕಾಗಿ ಇಡೀ ಮೈಗೆಲ್ಲ ಹಚ್ಚಿಕೊಂಡೆ” ಎಂದನಂತೆ. ಇದು ಹನುಮನ ಮುಗ್ಧ ಮನಸ್ಸನ್ನು ಸೂಚಿಸುತ್ತದೆ. ಕಲ್ಮಷ ರಹಿತ ಮನಸ್ಸು ಕಳಂಕರಹಿತ ಶ್ರೀರಾಮನ ದೀರ್ಘಾಯುಸ್ಸಿಗಾಗಿ ಶ್ರದ್ಧಾಭಕ್ತಿಯಿಂದ ಮೈತುಂಬ ಸಿಂಧೂರವನ್ನು ಪೂಸಿಕೊಂಡಿತ್ತು! ಇಂದಿಗೂ ಈ ನೆನಪಿನಲ್ಲಿ ಹನುಮನಿಗೆ ಸಿಂಧೂರ ಲೇಪನ ಸೇವೆ ನಡೆಯುತ್ತದೆ. ಇದು ಕತೆ.

ಈಗ ವಾಸ್ತವಕ್ಕೆ ಬರೋಣ. ಹನುಮನಷ್ಟೇ ಮುಗ್ಧ ಮನವುಳ್ಳ ವೈದಿಕರು ಹಲವರಿದ್ದಾರೆ. ಅವರಿಗೆ ಹೊರಪ್ರಪಂಚದ ರಾಜಕೀಯ ಹಿಡಿಸೋದಿಲ್ಲ. ನಿತ್ಯ ವೇದ-ವೇದಾಂಗಗಳನ್ನು ಪಾರಾಯಣ ಮಾಡುತ್ತ, ಜಪತಪಾದಿ ನೈಷ್ಠಿಕ ಕರ್ತವ್ಯ ಕರ್ಮಗಳಲ್ಲಿ ವ್ಯಸ್ತರಾಗಿ, ಸರ್ವಜನರ ಸುಖಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಂತಹ ವೈದಿಕರಿಗೆ ಸಮಾಜದ ಅರ್ವರ ಪರವಾಗಿ ಸಾಷ್ಟಾಂಗ ವಂದನೆಗಳು.

ಆಸ್ತಿಕರಾಗಿ, ತಲೆತಲಾಂತರದಿಂದಲೂ ಸಾಂಪ್ರದಾಯಿಕರಾಗಿ ಗುರುಮಠಗಳ ಮೇಲೆ ಬಹಳ ಶ್ರದ್ಧೆ ಮತ್ತು ಭಕ್ತಿ ಉಳ್ಳವರಾಗಿದ್ದಾರೆ. ಅಂತಹ ವೈದಿಕರಲ್ಲಿ ಮಹನೀಯರೊಬ್ಬರು ಇತ್ತೀಚೆಗೆ ಕೆಲವು ವೈದಿಕರೊಂದಿಗೆ ಸೇರಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರಂತೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಹಾಗೊಂದು ಚರ್ಚೆ ವೈದಿಕರಲ್ಲಿ ನಡೆಯಿತಂತೆ.

ಯಾವ ವಾರ್ತೆಗಳನ್ನು ಅವರು ಕೇಳಬಾರದೋ, ಯಾವುದು ಅವರಿಗೆಲ್ಲ ಅಪಥ್ಯವೋ, ಅನಿವಾರ್ಯವಾಗಿ ಅಂತಹ ಸುದ್ದಿಗಳನ್ನು ನಿಖರವಾಗಿ ಹಲವು ಮೂಲಗಳಿಂದ ತಿಳಿಯಲ್ಪಟ್ಟು ವೈದಿಕ ಸಭೆಯಲ್ಲಿ ತೀರ್ಮಾನೆ ತೆಗೆದುಕೊಳ್ಳುವ ಮನಸ್ಸು ಮಾಡಿದರಂತೆ.

ಆದಿಗುರುಗಳು ಒಂದು ನಿಯಮವನ್ನು ಮಂಡಿಸಿದ್ದಾರೆ. ಅದೆಂದರೆ ಯಾವ ಸಮಯದಲ್ಲಾದರೂ ಪೀಠ ಪರಂಪರೆಗಳಲ್ಲಿ ಇರುವ ಯತಿ ಕೇವಲ ಸನ್ಯಾಸಿ ವೇಷದವನಾದರೆ, ಅವರು ಹಾಕಿದ ಯತುನಿಯಮಗಳನ್ನು ಉಲ್ಲಂಗಿಸಿದರೆ, ವಿಷಯಾಸಕ್ತನಾಗಿ ಸುಖಲೋಲುಪನಾಗಿ ಮೆರೆಯತೊಡಗಿದರೆ, ಆಗ ಅಂತಹ ಯತಿಯನ್ನು ಪೀಠದ ಗುರುವಿನ ಸ್ಥಾನದಿಂದ ವಜಾಗೊಳಿಸಿ ಆ ಸ್ಥಾನದಲ್ಲಿ ಯಥಾಯೋಗ್ಯ ವಟುವನ್ನು ಆಯ್ಕೆ ಮಾಡಿ ದೀಕ್ಷೆ ಕೊಡುವ ಹಕ್ಕು ವೈದಿಕ ವಿದ್ವಜ್ಜನರ ಕರ್ತವ್ಯದ ವ್ಯಾಪ್ತಿಗೆ ಬರುತ್ತದೆ.

ಇಂದು ನಡೆಯುತ್ತಿರುವ ಎಲ್ಲ ಘಟನೆಗಳೂ ಮಠದಲ್ಲಿ ಯಾವುದೊಂದೂ ಸರಿಯಾಗಿ ನಡೆಯುತ್ತಿಲ್ಲ ಎಂಬುದನ್ನು ಅವರಿಗೆ ಮನದಟ್ಟು ಮಾಡಿವೆ. ರಾವಣನ ಆಸ್ಥಾನದಲ್ಲೂ ವೈದಿಕರಿದ್ದರಲ್ಲವೇ? ಜೀವಭಯದಿಂದ ಅವರೆಲ್ಲ ರಾವಣಿಗೆ ಕೈಮುಗಿಯುತ್ತಿದ್ದರಷ್ಟೆ. ಅದರಂತೆ ಸಮಾಜದ ವೈದಿಕರೂ ಸಹ ಹೊರಗೆ ಜೀವಭಯದಿಂದ ತೊನೆಯಪ್ಪನಿಗೆ ಜೈಕಾರ ಹಾಕಿದರೂ ಅವರ ಮನಸ್ಸುಗಳಲ್ಲಿ ವಾಸ್ತವದ ಚಿಂತನೆಗಳಿವೆ.

ಯಾವುದೋ ಸಂಘ, ಲಕ್ಷ ಇವೆಲ್ಲದರೆಅ ಆಮಿಷ ವೈದಿಕರಿಗೆ ಬೇಕಾಗಿಲ್ಲ. ಕರ್ತವ್ಯದ ಕರೆ ಬಂದಾಗ ವೈದಿಕರು ಎಚ್ಚೆತ್ತುಕೊಳ್ಳಬೇಕಾದ ಸಮಯ ಇದಾಗಿದೆ; ಅದನ್ನವರು ಮಾಡುತ್ತಾರೆ ಎಂಬಲ್ಲಿಗೆ ಲೇಖನದ ಈ ಭಾಗಕ್ಕೆ ಸದ್ಯ ಮಂಗಳ ಹಾಡುತ್ತೇನೆ.

Thumari Ramachandra

source: https://www.facebook.com/groups/1499395003680065/permalink/1769643816655181/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s