ಮುನ್ನಾಭಾಯಿ ತೊನೆಯಪ್ಪನ ಮಠದ ಇನ್ನಷ್ಟು ಕರಾಳ ಚರಿತ್ರೆಗಳು!! [ಭಾಗ-ಎರಡು]

ಮುನ್ನಾಭಾಯಿ ತೊನೆಯಪ್ಪನ ಮಠದ ಇನ್ನಷ್ಟು ಕರಾಳ ಚರಿತ್ರೆಗಳು!!
[ಭಾಗ-ಎರಡು]

ಕಚ್ಚೆ ಜಗದ್ಗುರುಗಳು ಹುಡುಗಿಯರನ್ನು ಕಂಡ ನಂತರ, ಅವರನ್ನು ಮೊದಮೊದಲು ಆರ್ಕುಟ್ ನಲ್ಲಿ ಹುಡುಕುತ್ತಿದ್ದರು. ಹಲವು ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಂಡು ಹಾರಲು ಆರಂಭಿಸುವುದಕ್ಕೆ ಆರ್ಕುಟ್ ಅನುಕೂಲ ಕಲ್ಪಿಸಿತು. ಆರ್ಕುಟ್ ಮೂಲಕ ಸಂವಹನ ಆರಂಭಗೊಂಡ ನಂತರ ಜಂಗಮವಾಣಿಯ ಸಂಖ್ಯೆ ತೆಗೆದುಕೊಂಡು ಅವುಗಳಲ್ಲಿ ಪ್ರತಿಯೊಬ್ಬರಿಗೂ “ನಿನ್ನ ರೂಪವೇ ನಮ್ಮ ಕಣ್ಣಮುಂದೆ ಸದಾ ಇರುತ್ತದೆ” ಎಂದು ಮೆಸ್ಸೇಜು ಕಳಿಸುತ್ತಿದ್ದರು. ಆರ್ಕುಟ್ ನೆಗೆದುಬಿದ್ದ ಮೇಲೆ ಫೇಸ್ ಬುಕ್ ಪ್ರಾಮುಖ್ಯತೆ ಗಳಿಸಿತು-ಅಲ್ಲಿ ತಮ್ಮ ಆಟವನ್ನು ಮುಂದುವರಿಸಿದರು.

ಈ ಮೊದಲೇ ತುಮರಿ ಹೇಳಿದ ಹಾಗೆ ಎಂತಾ ಕುರೂಪಿಯಾಗಿದ್ದರೂ ಮಹಿಳೆಗೆ ತನ್ನ ರೂಪದ ಬಗ್ಗೆ ಹೊಗಳಿದಾಗ ಬಹಳ ಖುಷಿಯಾಗುತ್ತದೆ. ತನ್ನನ್ನು ಹೊಗಳುವವರನ್ನು ಅವಳು ಬಹಳ ಮೆಚ್ಚುತ್ತಾಳೆ. ಅದು ಸ್ತ್ರೀಸಹಜ ಸ್ವಭಾವ. ಈ ದಿನಗಳಲ್ಲಿ ನಲ್ವತ್ತು ದಾಟಿದ ಮಹಿಳೆಗೂ “ಆಂಟಿ” ಎನಿಸಿಕೊಳ್ಳೋದು ಇಷ್ಟವಾಗೋದಿಲ್ಲ; ವಯಸ್ಸಿನಲ್ಲಿ ಚಿಕ್ಕವರಾದವರೂ ಕೂಡ ಹೆಸರು ಹೇಳಿ ಕರೆದರೇ ಅವಳಿಗೆ ಖುಷಿ. ’ಮಹಾಮುನಿ’ಗಳಿಂದ ಆಶೀರ್ವಾದ ರೂಪದಲ್ಲಿ ದೊರೆತ ಸ್ನೇಹ ಕಾಮಕ್ಕೆ ತಿರುಗೋದಕ್ಕೆ ಬಹಳ ಕಾಲ ಬೇಕಾಗ್ತಿರಲಿಲ್ಲ.

“ಬಹಳ ಸುಂದರವಾಗಿದ್ದೀಯ” ಎಂಬ ಮೆಸ್ಸೇಜುಗಳನ್ನು ಸ್ವೀಕರಿಸಿದ ಹುಡುಗಿ ಅಥವಾ ಮಹಿಳೆ ಅಂದು ತಾನು ಹುಟ್ಟಿದ್ದು ಸಾರ್ಥಕವಾಯ್ತು ಎಂಬಷ್ಟು ಒಳಗೊಳಗೇ ಬೀಗುತ್ತಿದ್ದಳು. ಅಂತಹ ಪೀಠದ ಗುರುವಿನಿಂದ ಹಾಗೆ ಹೇಳಿಸಿಕೊಳ್ಳೋದೇ ಸೌಭಾಗ್ಯವೆಂಬಂತೆ ವರ್ತಿಸುವವರೂ ಇದ್ದರು. ಮೆಸ್ಸೇಜುಗಳಲ್ಲೇ ಮಸ್ಸಾಜು ಮಾಡತೊಡಗುತ್ತಿದ್ದ ಕಚ್ಚೆ ಶೋಭರಾಜಾಚಾರ್ಯರು ನಿಧಾನವಾಗಿ ಹಂತಹಂತವಾಗಿ ಅವರನ್ನೆಲ್ಲ ಒಬ್ಬೊಬ್ಬರನ್ನಾಗಿ ಏಕಾಂತಕ್ಕೆ ಬಳಸಿಕೊಳ್ಳುತ್ತಿದ್ದರು.

ಅದಿರಲಿ, ಗುರುವಾದವನಿಗೆ ವಿವೇಚನೆ ಅನ್ನೋದು ಇರಬೇಕು. ಯಾರೋ ಶುಷ್ಯ ಹೇಳಿದ ಅಂತ ಕನ್ಯೆಯರಿಗೆ ಸಂಸ್ಕಾರ ಕೊಡ್ತೇವೆ ಎಂದು ಸುರುಹಚ್ಚಿಕೊಳ್ಳಬಾರದು. ಎಲ್ಲಿಯ ಸನ್ಯಾಸ? ಎಲ್ಲಿಯ ಕನ್ಯಾಸಂಸ್ಕಾರ? ಕನ್ಯೆಯರಿಗೆ ಸಂಸ್ಕಾರ ಕೊಡಲು ಸಂಬಂಧಿಸಿದ ವಾರಸುದಾರರು ಮತ್ತು ಅವರ ಕುಲಪುರೋಹಿತರುಗಳು ಇರುವುದಿಲ್ಲವೇ? ಇದ್ದಾರೆ. ಇಷ್ಟೊಂದು ಶತಮಾನಗಳವರೆಗೆ ಸಾಗಿಬಂದ ನಮ್ಮ ತಾಯಂದಿರಲ್ಲಿ ಸಂಸ್ಕಾರದ ಕೊರತೆ ಇರುವುದು ಕಾಣಿಸಿತೇ? ಖಂಡಿತವಾಗಿಯೂ ಇಲ್ಲ.

ಗಂಡುಮಕ್ಕಳಿಗಾದರೆ ಉಪನಯನ ಉಂಟು ಹೆಣ್ಣುಮಕ್ಕಳಿಗೆ ಮಾತ್ರ ಯಾವ ಸಂಸ್ಕಾರವೂ ಇಲ್ಲ ಹಾಗಾಗಿ ಏನಾದರೂ ಮಾಡಬೇಕು ಅಂತಾರಲ್ಲ ಹೆಣ್ಣು-ಗಂಡು ಎಂಬುದೇಕೆ ಬೇಕು? ಅವರಲ್ಲಿನ ದೈಹಿಕ ರಚನೆ,ಪರಿಚಲನೆಗಳಲ್ಲಿ ಸಮಾನತೆ ಇದೆಯೇ? ಇಲ್ಲ. ಹಾಗಾದರೆ ಗಂಡಿಗೆ ಎಲ್ಲ ವಿಷಯಗಳಲ್ಲೂ ಹೆಣ್ಣು ಅದೇ ರೀತಿಯಲ್ಲಿ ಇದ್ದು ತೋರಿಸಬೇಕೆಂಬುದು ಕುಯುಕ್ತಿಯೆನಿಸುತ್ತದೆ. ಮಹಿಳೆ ಮಾಡಲಾಗದ್ದನ್ನು ದೈಹಿಕ ಬಲದಿಂದ ಪುರುಷ ಮಾಡಬಲ್ಲ.

ಕನ್ಯಾ ಸಂಸ್ಕಾರವನ್ನು ಮಾಡಬೇಕು ಎಂದು ತೀರ್ಮಾನಿಸಿದರೂ ಅದನ್ನು ಅವರವರ ಮನೆಗಳಲ್ಲಿ ಪಾಲಕರ ಮೂಲಕವೇ ಮಾಡಿಸಿಕೊಳ್ಳೋದಕ್ಕೆ ಸೂಚಿಸಬಹುದಾಗಿತ್ತು; “ಗುರುಗಳು ಹೇಳಿದ್ದಾರೆ” ಅಂತ ಒಪ್ಪಿಕೊಳ್ಳುತ್ತಿದ್ದರು. ಅದನ್ನೆಲ್ಲ ಬಿಟ್ಟು ತಾನೇ ಸ್ವತಃ ಕನ್ಯಾಸಂಸ್ಕಾರ ನೀಡುತ್ತೇನೆ ಎಂದು ಮುಂದಾಗಿದ್ದರಲ್ಲೇ ಗುಟ್ಟು ಅಡಗಿದೆ. ಏಕಾಂತ ಕೋಣೆಯಲ್ಲಿ ಮುನ್ನಾಭಾಯಿಗಳು ’ಉಮ್ಮಾ’ ಕೊಡುತ್ತಿದ್ದರು. ಉಮ್ಮಾಕೊಟ್ಟು ಅಪ್ಪಿಕೊಂಡು ಮುಂದೆ ತನಗೆ ಒದಗುವಂತೆ ತಯಾರಿ ನಡೆಸಿಕೊಳ್ಳುತ್ತಿದ್ದರು-ಅದೇ ಅವರು ನೀಡುತ್ತಿದ್ದ ದೊಡ್ಡ ’ಮಂತ್ರೋಪದೇಶ’!

ಈ ಮುನ್ನಾಭಾಯಿಯ ಮಠದಲ್ಲಿ ಹಿಂದಿನಿಂದಲೂ ನಡೆದುಬಂದ ದರ್ಪ ಮತ್ತು ದುರಾಡಳಿತಗಳ ಘಟನೆಗಳನ್ನು ಕಾಣಬಹುದು. ದಕ್ಷಿಣ ಕನ್ನಡದ ಹಲವು ಕುಟುಂಬಗಳ ಹಿರಿಯರು ಬಹಿಷ್ಕಾರಕ್ಕೆ ಒಳಗಾಗಿ ಮಾನಸಿಕವಾಗಿ ಕೊರಗುತ್ತ ಅಳಿದರು. ಯಾಕೆ ಬಹಿಷ್ಕಾರ? ಸ್ವಾಮಿಗಳ ಸಾಮಾಜಿಕ ನಿರ್ಣಯ ಅಥವಾ ನಡೆ ಸರಿಯಿಲ್ಲ ಎಂದು ಯಾವುದೋ ವಿಷಯದಲ್ಲಿ ಅವರನ್ನು ವಿರೋಧಿಸಿದವರಿಗೆ ಬಹಿಷ್ಕಾರ.

ಬಹಿಷ್ಕಾರ ಅನ್ನೋದು ಕಣ್ಣಿಗೆ ಕಾಣಿಸೋದಿಲ್ಲ. ಅದು ಕರೆಂಟ್ ಇದ್ದಹಾಗೆ. ಕರೆಂಟು ನೋಡಿ, ತೆಳ್ಳನ ತಂತಿಯಲ್ಲಿ ಹರಿದರೂ ವ್ಯಕ್ತಿಯನ್ನು ಸಾಯಿಸಲಿಕ್ಕೆ ಸಾಕು! ತಂತಿ ಬಿದ್ದುಕೊಂಡಿದ್ದಾಗ ಅದರಲ್ಲಿ ಕರೆಂಟು ಇದೆಯೆಂದು ಗೊತ್ತೇ ಆಗದು. ಅದು ಅನುಭವಕ್ಕೆ ಬರಬೇಕೆಂದರೆ ಮುಟ್ಟಿಯೇ ನೋಡಬೇಕು ಅಥವಾ ಮೀಟರ್ ಗಳಲ್ಲಿ ನೋಡಬೇಕು. ಬಹಿಷ್ಕಾರ ಅಳತೆಗೆ ಮೀಟರ್ ಗಳೇ ಇಲ್ಲ. ವಿಜ್ಞಾನಿಗಳು ಅದನ್ನು ಕಂಡುಹಿಡಿಯೋದು ಬಾಕಿ ಇದೆ!

ಮನುಷ್ಯ ಸಂಘ ಜೀವಿ. ಒಬ್ಬನೇ ಬಹಳಕಾಲ ಬದುಕಲಾರ. ಹಾಗಾಗಿಯೇ ಅವನಿಗೆ ಸರ್ವರ ಸಂಗ ಬೇಕು. ಅದಕ್ಕಾಗಿ ಸಂಘಗಳೂ ಸಂಘಟನೆಗಳೂ ಬೇಕು. ಸರ್ವರ ಸಂಗವನ್ನೂ ಪರಿತ್ಯಜಿಸಿದವ ಮಾತ್ರ ಸನ್ಯಾಸಿಯಾಗುತ್ತಾನೆ. ಅವನು ಏಕಾಂಗಿಯಾಗಿ ಬದುಕಬಲ್ಲ. ಅವನ ಒಡನಾಡಿಯೆಂದರೆ ದಿವ್ಯಶಕ್ತಿಯೇ. ಆದರೆ ಅರ್ಜುನ ಸನ್ಯಾಸಿಗಳಂತವರು “ನಾವು ಸರ್ವಸಂಗ ಪರಿತ್ಯಾಗಿಗಳು” ಅಂತ ಭೋಂಗು ಬಿಡುತ್ತಾರೆ; ಸಂಸಾರಿಗೆ ಇರೋದಕ್ಕಿಂತ ಹೆಚ್ಚಿನ ಸಂಗ-ಸಹವಾಸ ಅವರಿಗಿರುತ್ತದೆ.

ತೊನೆಯಪ್ಪನ ಹಿಂದಿನವರು ಮೊದಲು ಒಂದು ಪಂಚಾಂಗಕ್ಕೆ ಆಶೀರ್ವಾದ ನೀಡಿ ಸಮ್ಮತಿಸಿದರು. ನಂತರ ತಮ್ಮ ನೇರಕ್ಕೆ ಆ ಪಂಚಾಂಗ ಕರ್ತರು ಕುಣಿಯದಾದಾಗ ಕುರಿವಾಡೆಯೆಡೆಗಿನ ಅಡ್ಡಕಸುಬಿಗಳನ್ನಿಟ್ಟು ಹೊಸ ಪಂಚಾಂಗವನ್ನೇ ಸಿದ್ಧಪಡಿಸಿ ಮಠದ ಶಿಷ್ಯರೆಲ್ಲ ಅದನ್ನೇ ಬಳಸಬೇಕು ಎಂದು ಅಪ್ಪಣೆ ಮಾಡಿದರು. ಅಡ್ಡಕಸುಬಿಗಳ ಗೊಡ್ಡು ಕೆಲಸದ ಕರಡಿನಲ್ಲಿ ಹಲವು ಲೋಪದೋಷಗಳು ಇರುತ್ತಿದ್ದವು; ಕೆಲವು ತಿಥಿಮಿತಿಗಳ ಲೆಕ್ಕಾಚಾರ ಸರಿಯೇ ಇರುತ್ತಿರಲಿಲ್ಲ. ಕೆಲವೊಂದು ವರ್ಷ ಗ್ರಹಣಗಳನ್ನೇ ನುಂಗಿಹಾಕಿದ್ದೂ ಇದೆ! ಅದು ಮಠದ ಪಂಚಾಂಗ!

ತಾನು ತನ್ನದು ಎನ್ನುವುದನ್ನು ಎತ್ತಿ ತೋರಿಸಿಕೊಳ್ಳಬೇಕೆಂಬ ಪ್ರದರ್ಶನ ಕಲೆ ಈ ಮಠದಲ್ಲಿ ಮೊದಲಿನಿಂದಲೂ ಕಾಣುತ್ತದೆ. ಒಬ್ಬ ಸಿಂಹಾಸನ ಮಾಡಿಸಿದರೆ ಇನ್ನೊಬ್ಬ ವಿಧಾನಸೌಧದಂತಹ ಕಟ್ಟಡ ಕಟ್ಟಿಸಿದ್ದೇನೆ ಅಂತಾನೆ. ಆ ಕಾಲದಲ್ಲಿ ಸ್ವಾಮಿಗಳು ಹೇಳಿದರು ಅಂದರೆ ಮುಗಿದುಹೋಯ್ತು; ಶಿರಸಾವಹಿಸಿ ಮಾಡುತ್ತಿದ್ದರು. ದೂಸರಾ ಮಾತಿರಲಿಲ್ಲ. ಸಿಂಹಾಸನ ತಯಾರು ಮಾಡೋದಕ್ಕೆ ವರ್ಷಗಟ್ಟಲೆ ಹಿಡಿಯಿತಂತೆ; ಅದಕ್ಕೆ ಶ್ರಮಿಸಿದ ಕುಶಲ ಕರ್ಮಿಗಳ ಮಜೂರಿ ಮತ್ತು ಅವರೆಲ್ಲರಿಗೆ ಹೊತ್ತಿಂದೊತ್ತಿಗೆ ಊಟ-ತಿಂಡಿ ಇದನ್ನೆಲ್ಲ ಯೋಚಿಸಿದರೆ ಧಾರ್ಮಿಕ ಮುಖಂಡನಿಗೆ ಅಂಥದ್ದೊಂದು ಸಿಂಹಾಸನದ ಅಗತ್ಯ ಇತ್ತೇ ಎನಿಸುತ್ತದೆ.

ಎಳೆಯ ಪ್ರಾಯದ ಮಹಿಳೆಯರು ವಿಧವೆಯರಾದರೆ ಕೇಶ ಮುಂಡನ ಮತ್ತು ಆಭರಣಗಳ ವಿಸರ್ಜನೆ ಇವೆಲ್ಲ ಅನ್ಯ ಸಮಾಜಗಳಲ್ಲಿ ಇರಲಿಲ್ಲ. ಅವರೆಲ್ಲ ಬದುಕಲಿಲ್ಲವೇ? ಏನಾದ್ರೂ ತೊಂದರೆ ಆಯಿತೇ? ವಾಸ್ತವವಾಗಿ ಮೇಲ್ವರ್ಗದಲ್ಲಿ ಮಹಿಳೆಯಾಗಿ ಜನಿಸೋದೇ ಒಂದು ಶಿಕ್ಷೆ ಎಂಬಂತಿತ್ತು. ಮಠದಲ್ಲಿ ಠಿಕಾಣಿ ಹೂಡಿದ ಖೂಳರು ಗುರುವನ್ನು ಬುಕ್ ಮಾಡಿಕೊಂಡು ತಮಗೆ ಬೇಕಾದ ಹಾಗೆಲ್ಲ ಅಪ್ಪಣೆ ಕೊಡಿಸುತ್ತಿದ್ದರು. ಆ ಖೂಳರಿಗೆ ವಿರುದ್ಧವಾಗಿ ನಡೆದುಕೊಂಡರೂ ಸಹ ಬಹಿಷ್ಕಾರ ಹಾಕಲ್ಪಡುತ್ತಿತ್ತು.

ಆಚಾರ-ವಿಚಾರ ನೋಡಿಕೂಳ್ಳುವವರು ಅಂತ ಹಳ್ಳಿಗಳಲ್ಲಿ ಕೆಲವರನ್ನು ನೇಮಿಸುತ್ತಿದ್ದರು; ಅವರಲ್ಲಿಯೇ ಕೆಲವು ಜನ ಕಚ್ಚೆಹರುಕರಾಗಿರುತ್ತಿದ್ದು ತಮಗೆ ಬಗ್ಗದ ಮಹಿಳೆಯರ ಮೇಲೆ ಇಲ್ಲದ ಆಪಾದನೆ ಹೊರಿಸಿ ಮಠದವನಿಗೆ ದೂರು ಕೊಟ್ಟು, ಬಹಿಷ್ಕಾರ ಹಾಕಿಸುತ್ತಿದ್ದರು! ಸ್ವಸ್ಥ ಸಮಾಜದಲ್ಲಿ ಆಚಾರ-ವಿಚಾರ ನೋಡಿಕೊಳ್ಳೋದಕ್ಕೆ ಮಠದಿಂದ ಬೇರೆ ಇನ್‍ಸ್ಪೆಕ್ಟರ್ ಬೇಕೆ? ಇದೊಳ್ಳೆ ಅನಂತನಾಗನ ಕೌ-ಇನ್‍ಸ್ಪೆಕ್ಟರ್ ಪಾತ್ರವನ್ನು ನೆನಪಿಸುತ್ತದೆ! ನಿಜ ಹೇಳ್ತೇನೆ-ಇಂತಹ ಖದೀಮರಿಂದ ಸಮಾಜಕ್ಕಾದ ಅನ್ಯಾಯ ಬಹಳ.

ಯು.ಆರ್.ಅನಂತಮೂರ್ತಿಯವರನ್ನು ನಾನು ಮೆಚ್ಚೋದಿಲ್ಲ; ಆದರೆ ಅವರು ಹೇಳಿದ ಕೆಲವು ಸಂಗತಿಗಳು ಬಹಳ ಸತ್ಯವಾಗಿವೆ. ಘಟಶ್ರಾದ್ಧ ಮತ್ತು ಫಣಿಯಮ್ಮ ಸಿನಿಮಾಗಳನ್ನು ನೀವೆಲ್ಲ ಒಮ್ಮೆ ನೋಡಿದರೆ ಅಂದಿನ ಮಠಾಂಧತೆ ಮತ್ತು ಕುರುಡು ಸಂಪ್ರದಾಯಗಳ ಬಿಸಿ ನಿಮಗೆ ಗೊತ್ತಾಗುತ್ತದೆ. ಜನ್ಮಪೂರ್ತಿ ಸಂಹಾತಿಯಿರದೇ ಬದುಕೋದು ಬಹಳ ಕಷ್ಟ. ಅದರಲ್ಲೂ ಹೊರಗೆ ಪರಿವ್ರಾಜಕಿಯಂತಿದ್ದು ಒಳಗೆ ಮಠಾಂಧರ ಕಾಮತೃಷೆಯನ್ನು ತಣಿಸಬೇಕಾಗಿ ಬಂದರೆ ಮಹಿಳೆ ಜೀವಚ್ಛವವಾಗುತ್ತಾಳೆ.

ಅನ್ಯ ಸಮಾಜದ ಲೇಖಕರೊಬ್ಬರು ಮೇಲ್ವರ್ಗದ ಇಂತಹ ಅನಾಚಾರಗಳನ್ನು ನೋಡಿ ಬಹಳ ಬೇಸರದಿಂದ ಅವುಗಳನ್ನು ಬರಹಗಳಲ್ಲಿ ದಾಖಲಿಸಿದ್ದಾರೆ. “ದೇವರು ಪುನರ್ಜನ್ಮವನ್ನು ನೀಡೋದಾದರೆ ಮನುಷ್ಯರಲ್ಲಿ ಮೇಲ್ವರ್ಗದವರಲ್ಲಿ ಸ್ತ್ರೀಯಾಗಿ ಜನ್ಮ ನೀಡದಿರಲಿ ಎಂದು ಬೇಡಿಕೊಳ್ಳುತ್ತೇನೆ” ಅಂತ ಬರೀತಾರೆ.

ಕಾರಿರುರೊಳಾಗಸದಿ ತಾರೆ ನೂರಿದ್ದೇನು? |
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು |
ದೂರದಾ ದೈವವಂತಿರಲಿ ಮಾನುಷಸಖನ |
ಕೋರುವುದು ಬಡಜೀವ ಮಂಕುತಿಮ್ಮ ||

ದೇವರಿದ್ದಾನೆ, ಸಹಾಯಕ್ಕೆ ಬರ್ತಾನೆ ಅನ್ನೋದು ದೂರದ ಮಾತಾಯ್ತು. ಕಾಳರಾತ್ರಿಯ ಕಗ್ಗತ್ತಿನಲ್ಲಿ ಆಗಸದ ತಾರೆಗಳ ಬೆಳಕು ದಾರಿ ತೋರಿಸೋದಕ್ಕೆ ಉಪಯೋಗವೇ? ದೂರದಲ್ಲೆಲ್ಲೋ ಒಂದು ಮನೆಯ ದೀಪ ಉರಿಯೋದು ಕಂಡರೆ ಅಷ್ಟೇ ಸಾಕು, ಅದು ಮನುಷ್ಯ ಲೋಕದ ಜೀವಂತಿಕೆಯನ್ನು ಎತ್ತಿ ಹಿಡಿಯುತ್ತದೆ.

ಇಂದು ಪೀಠ ಹತ್ತಿ ಕೂತು ಭಾಷಣ ಬಿಗಿಯುವ ಮಂದಿ ನಿಜವಾಗಿಯೂ ಮಾನುಷ ಸಖರೇ? ಖಂಡಿತವಾಗಿಯೂ ಅಲ್ಲ. ಅವರು ಮಾನುಷ ಸಖರು ಹೌದು-ಅದು ಕೆಲವು ಫಲಾನುಭವಿ ಮಿತ್ರಮಂಡಳಿಗೆ ಮಾತ್ರ ಸೀಮಿತ. ತನಗೆ ದೈಹಿಕ ಆರೋಗ್ಯ ಸರಿಯಿಲ್ಲ, ಋತುಸ್ರಾವ ಆಗ್ತಿದೆ ಎಂದರೂ ಬಿಡದೆ ಭೋಗಿಸುವ ಭೋಗವರ್ಧನ ಯಾವ ಸೀಮೆಯ ಮಾನುಷ ಸಖ ಅಂತೀರಿ? ಹಿಂದೆ ಈ ಪೀಠದ ಇದೇ ರೀತಿಯ ’ಮುನಿ’ಗಳೆಲ್ಲ ಮಹಿಳೆಯರ ವಿಷಯದಲ್ಲಿ ಹಾಕಿದ ಬಹಿಷ್ಕಾರಗಳನ್ನು ಗಮನಿಸಿದರೆ ಅದು ಅಮಾನುಷ ಅನ್ನೋದು ಯಾವ ನರಪಿಳ್ಳೆಗಾದರೂ ಅರಿವಾದೀತು.

ವ್ಯಾಸರ ಯತಿನಿಯಮಗಳಿಗೆ ಕನ್ನಡದಲ್ಲಿ ಸಂಕ್ಷಿಪ್ತ ಭಾಷ್ಯವನ್ನು ಮಿತ್ರರು ಬರೆದು ಹಾಕಿದ್ದಾರೆ. ಅಲ್ಲಿರುವ ಯತಿನಿಯಮಗಳನ್ನು ನೋಡಿ; ಇಂದಿನ ವೈಭೋಗವನ್ನು ನೋಡಿ. ಕೈಗೊಂದಷ್ಟು ಆಳುಗಳು, ಕಾಲಿಗೊಂದಷ್ಟು ಆಳುಗಳು, ಮಲಗಲಿಕ್ಕೆ ಹಂಸತೂಲಿಕಾ ತಲ್ಪ, ಉಣ್ಣಲಿಕ್ಕೆ ಮೂರು ಹೊತ್ತು ಮೃಷ್ಟಾನ್ನ, ಓಡಾಟಕ್ಕೆ ಐಶಾರಾಮಿ ಕಾರು, ಸಂಪರ್ಕಕ್ಕೆ ಐಪ್ಯಾಡು, ಐಪ್ ಫೋನು, ಅಂತರ್ಜಾಲ, ಖರ್ಚಿಗೆ ಭಕ್ತರ ಹೇರಳ ಕಾಣಿಕೆ, ಬೇಕಾದ ರೀತಿಯಲ್ಲೆಲ್ಲ ಸೇವೆ ಇಷ್ಟೆಲ್ಲ ಇರುವಾಗ ಅವ ಸರ್ವಸಂಗ ಪರಿತ್ಯಾಗಿ ಅಥವಾ ಪರಿವ್ರಾಜಕಾಚಾರ್ಯ ಹೇಗಾಗ್ತಾನೆ? ಹಾಗಾಗಿಯೇ ಆಗ ಸಹಜವಾಗಿ ಮಹಿಳೆಯರ ಸಾಂಗತ್ಯ ಅಗತ್ಯ ಬೀಳುತ್ತದೆ.

ಶ್ರೀಧರಾಶ್ರಮದಲ್ಲಿ ಶ್ರೀಧರರು ಜೀವಿತದಲ್ಲಿದ್ದಾಗ ಹಲವು ಸಾಧು-ಸಂತರು ಇರುತ್ತಿದ್ದರು; ಅನೇಕರು ಸನ್ಯಾಸ ನೀಡಿ ಅಂತ ಕೇಳಿಕೊಂಡು ಬರ್ತಿದ್ದರಂತೆ. ದೀಕ್ಷೆ ನೀಡಿ ಎಂದವರಿಗೆಲ್ಲ ದೀಕ್ಷೆ ನೀಡಿದ್ದರೆ ಇಂದು ಕಚ್ಚೆಹರುಕು ಯತಿಗಳ ದೊಡ್ಡ ಸಂಘಟನೆ ಆ ಪ್ರದೇಶದಲ್ಲಿ ನಿರ್ಮಾಣವಾಗಿಬಿಡುತ್ತಿತ್ತು. ಸನ್ಯಾಸವನ್ನು ಪಡೆಯುವ ಉತ್ಕಟ ವೈರಾಗ್ಯ ಲಕ್ಷಣ ಜ್ವಲಂತವಾಗಿ ಕಂಡುಬಂದರೆ ಮಾತ್ರ, ಅಂತಹ ಜನರಿಗೆ ಶ್ರೀಧರರು ದೀಕ್ಷೆ ನೀಡಿದ್ದರಂತೆ. ಆ ಸಂಖ್ಯೆ ತೀರಾ ಕಡಿಮೆ ಇದೆ.

ಹನಿಯದ ಕಡೆಯ ಮಾಧ್ವ ಮತದ ವ್ಯಕ್ತಿಯೊಬ್ಬರು ತನಗೆ ಸನ್ಯಾಸ ನೀಡಿ ಎಂದು ಶ್ರೀಧರರನ್ನು ಕೋರಿದ್ದರಂತೆ. ಹೇಳಿಕೇಳಿ ಅವರ ಮತ-ಸಂಪ್ರದಾಯ ಬೇರೆ. ಶ್ರೀಧರರು ಅದ್ವೈತ ಸಂಪ್ರದಾಯವನ್ನು ಪಾಲಿಸಿದರು. ದೀಕ್ಷೆ ಕೋರಿದ ಆ ವ್ಯಕ್ತಿ ಶ್ರೀಧರರ ಹಲವು ಶಿಷ್ಯರ ಮನೆಗಳಿಗೆಲ್ಲ ಹೋಗಿ ಬರುತ್ತಿದ್ದರಂತೆ. ಶ್ರೀಧರರಿಗೆ ಯಾಕೋ ಮನಸ್ಸಾಗಲಿಲ್ಲ-ದೀಕ್ಷೆ ನೀಡಲಿಲ್ಲ.

ಶ್ರೀಧರರು ಸಮಾಧಿ ತೆಗೆದುಕೊಂಡ ಕೆಲವು ಸಮಯದ ನಂತರ ಶ್ರೀಧರಾಶ್ರಮದಲ್ಲಿ ತಾನೇ ಸನ್ಯಾಸಿಯಾಗಿ ಮುಂದುವರಿಯುವ ಇಚ್ಛೆಯನ್ನು ತೋರಿಸಿದ್ದರಂತೆ ಆ ವ್ಯಕ್ತಿ. ಸನ್ಯಾಸಿಯಾಗುವ ಲಕ್ಷಣಗಳು ಅಷ್ಟಾಗಿ ಕಾಣದ್ದರಿಂದ ಕೆಲವು ದಿನ ಅಲ್ಲಿರುವ ಆಡಳಿಯ ಮಂಡಳಿಯವರು ಸುಮ್ಮನಿದ್ದರಂತೆ. ದಿನಗಳೆದಂತೆ ಆ ವ್ಯಕ್ತಿಯಲ್ಲಿ ಲೌಕಿಕ ಭೋಗಪೇಕ್ಷೆಗಳು ಹೆಚ್ಚತೊಡಗಿದ್ದರಿಂದ ಆಡಳಿತ ಮಂಡಳಿಯವರು ಅವನನ್ನು ಅಲ್ಲಿಂದ ಓಡಿಸಿದರಂತೆ.

ಶ್ರೀಧರರ ಕೆಲವು ಶಿಷ್ಯರಿಗೆ ಆತ ಬೇಸರದಿಂದ ಪತ್ರ ಬರೆದು ತೋಡಿಕೊಂಡದ್ದರಿಂದ ಕೆಲವರು ಅವನನ್ನು ತಮ್ಮಲ್ಲಿಗೆ ಕರೆಸಿಕೊಂಡು ಕೆಲವು ದಿನಗಳ ಕಾಲ ಸತ್ಸಂಗ ನಡೆಸಲು ಯತ್ನಿಸಿದ್ದರಂತೆ. ಹೋದಲ್ಲೆಲ್ಲ ಮಹಿಳೆಯರ ಜೊತೆಗೆ ಗಂಟೆಗಟ್ಟಲೆ ಹರಟುವುದು, ಕೊಠಡಿಗೆ ಕರೆಯುವುದು ಇತ್ಯಾದಿ ಲಕ್ಷಣಗಳು ಕಾಣಿಸಿದಾಗ ಅವರೆಲ್ಲರೂ ಸಹ ಅವನನ್ನು ಒದ್ದೋಡಿಸಿದರಂತೆ!

ಶ್ರೀಧರರು ಎದುರಿಗೆ ಬಂದ ವ್ಯಕ್ತಿಯಲ್ಲಿ ಇಂತಹ ದೋಷವಿದೆಯೆಂದು ಜೊತೆಗಿರುವ ಸೇವಕರಲ್ಲಿ ಎದುರಾ ಎದುರೇ ಹೇಳುತ್ತಿದ್ದರಂತೆ. ಒಮ್ಮೆ ಒಬ್ಬ ಮ್ಲೇಚ್ಛ ವ್ಯಕ್ತಿ, “ಸ್ವಾಮೀಜಿ, ದುಡಿದದ್ದೆಲ್ಲ ಖರ್ಚಾಗುತ್ತಿದೆ, ಏನೂ ನಿಲ್ಲೋದಿಲ್ಲ, ತಾವು ಆಶೀರ್ವಾದ ಮಾಡಬೇಕು” ಅಂತ ಪ್ರಾರ್ಥಿಸಿದನಂತೆ. “ನೋಡಯ್ಯಾ, ಪರಸ್ತ್ರೀ ಸಹವಾಸ ಇಟ್ಟುಕೊಂಡಿದ್ದೀಯಲ್ಲ? ಅದನ್ನು ಇಂದಿನಿಂದ ನಿಲ್ಲಿಸಿಬಿಡು. ಎಲ್ಲವೂ ಸರಿಹೋಗುತ್ತದೆ” ಅಂತ ಖುದ್ದಾಗಿ ಕಂಡವರ ಹಾಗೆ ಹೇಳಿದರಂತೆ. ಆತ ತಪ್ಪನ್ನು ಒಪ್ಪಿಕೊಂಡು ಇನ್ನು ಹಾಗೆ ಮಾಡೋದಿಲ್ಲ ಅಂದನಂತೆ.

ಅದೆಲ್ಲ ಸರಿ, ಅಪರೋಕ್ಷ ಜ್ಞಾನಿಗಳಾಗಿ ಒಂದನ್ನು ಮಾತ್ರ ಮಡಗಿಕೊಂಡಿದ್ದ ಹಿಂದಿನವರಿಗೆ ಮುಂದೆ ಪೀಠಕ್ಕೆ ಆಯ್ಕೆ ಮಾಡುವಾಗ ಬಂದ ವ್ಯಕ್ತಿ ಕಚ್ಚೆಹರುಕನಾಗಿದ್ದಾನೆ ಎಂದು ಗೊತ್ತಾಗಲಿಲ್ಲವೇ? ಅಥವಾ ಗೊತ್ತಾದರೂ ಭೋಗವರ್ಧನವಾಳ ಪರಂಪರೆ ಮುಂದುವರೀಲಿ ಅಂತ ಇವನನ್ನೇ ತಂದು ಹಾಕಿದರೋ?

ಲೇಖನದ ಈ ಭಾಗ ಮುಗಿಸುವ ಮುನ್ನ ಒಂದು ಹೊಸ ವಿಷಯ ಹೇಳಬೇಕು. ತೀರಾ ಅವಲಕ್ಷಣದ ಹೊಸಬನೊಬ್ಬ ಸ್ನೇಹಾಕಾಂಕ್ಷಿಯಾಗಿ ಬಂದಿದ್ದಾನೆ. ತಾನು ಹಾವಾಡಿಗ ಮಠದ ದಿವಾನ, “ಕುಲಪತಿ ಬಾವಯ್ಯ”, “ಕುಳ್ಳಬಾವಯ್ಯ” ಅಂತೆಲ್ಲ ಕರೀತಾರೆ ಎಂದು ನನ್ನಲ್ಲಿ ಹೇಳಿಕೊಂಡು, ತನ್ನ ಚರಿತ್ರೆಯನ್ನು ಹೇಳೋದಕ್ಕಾಗಿ ಬಂದಿದ್ದೇನೆ ಎಂದಿದ್ದಾನೆ. ಅವನ ಕೋರಿಕೆಗೆ “ತಥಾಸ್ತು” ಎಂದಿದ್ದೇನೆ. ನಿಮ್ಮಲ್ಲೂ ಸ್ನೇಹಕೋರಿದರೆ, ನಿಮಗಿಷ್ಟವಾದರೆ ನೀವೂ ಅವನಿಗೆ ನಿಮ್ಮ ಸ್ನೇಹವನ್ನು ವಿಸ್ತರಿಸಬಹುದು..

Thumari Ramachandra

source: https://www.facebook.com/groups/1499395003680065/permalink/1766136197005943/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s