ಮುನ್ನಾಭಾಯಿ ತೊನೆಯಪ್ಪನ ಮಠದ ಇನ್ನಷ್ಟು ಕರಾಳ ಚರಿತ್ರೆಗಳು!!

ಮುನ್ನಾಭಾಯಿ ತೊನೆಯಪ್ಪನ ಮಠದ ಇನ್ನಷ್ಟು ಕರಾಳ ಚರಿತ್ರೆಗಳು!!
[ಭಾಗ-ಒಂದು]

ನೋಡಿಸ್ವಾಮಿ ನಾವಿರೋದೇ ಹೀಗೆ ಅನ್ನೋದಲ್ಲ “ಹೋರಿಸ್ವಾಮಿ ಅವನಿರೋದೇ ಹಾಗೆ” ಅಂತ ಜನಸಾಮಾನ್ಯರು ಬಾಯ್ಮಾತಿನಲ್ಲಿ ಗಾದೆ ಸೃಷ್ಟಿಸಿಬಿಟ್ಟಿದ್ದಾರೆ. ತೊನೆಯಪ್ಪ ಯಾಕೆ ಈ ರೀತಿ ಭಂಡ ಧೈರ್ಯ ತೋರುತ್ತುದ್ದಾನೆ ಎಂದು ಹುಡುಕುವಾಗ ನಮಗೆಲ್ಲ ಸಿಕ್ಕಿದ್ದು ತೊನೆಯಪ್ಪನ ಮಠದ ಕರಾಳ ಇತಿಹಾಸ; ಈ ಮಠದ ಇತಿಹಾಸದ ಕೆಲವು ಪುಟಗಳಲ್ಲಿ ನಾಗರಿಕ ಸಮಾಜ ತಲೆತಗ್ಗಿಸಲೇಬೇಕಾಗುತ್ತದೆ; ಅಂತಹ ಕೆಲವು ಸಂಗತಿಗಳು, ಘಟನೆಗಳು ಘಟಿಸಿಹೋಗಿವೆ ಅಲ್ಲಿ!

ನದಿ ಮೂಲ, ಸ್ತ್ರೀಮೂಲ ಮತ್ತು ಋಷಿಮೂಲಗಳನ್ನು ಕೆದಕಬಾರದು ಎಂನ ಹೇಳಿಕೆಯಿದೆ; ಯಾಕೆಂದರೆ ಅಲ್ಲೆಲ್ಲ ನಮಗೆ ಬೇಡದ್ದೇ ಸಿಗಬಹುದು. ಪ್ರಸಕ್ತ ಸ್ಥಿತಿಯಲ್ಲಿ ಎದುರಿಗಿರುವವರು/ಇರುವುದು ಹೇಗಿದೆ ಎಂದು ನೋಡಿಕೊಂಡರೆ. ಈಗ ಹರಿಯುವ ನದಿ ಶುದ್ಧವಾಗಿದ್ದರೆ, ಎದುರಿಗಿರುವ ಮಹಿಳೆ ಸುಶೀಲವಂತೆ ಎನಿಸಿದರೆ, ಎದುರಿಗೆ ಬರುವ ಸನ್ಯಾಸಿ ಯತಿಧರ್ಮವನ್ನು ತಪ್ಪದೆ ಪಾಲಿಸುತ್ತ ವಿರಾಗಿಯಾಗಿದ್ದರೆ, ಆಗ ಹಿನ್ನೆಲೆಗಳನ್ನೋ ಮೂಲಗಳನ್ನೋ ಹುಡುಕುವ ಪ್ರಶ್ನೆ ಹುಟ್ಟಿಕೊಳ್ಳೋದಿಲ್ಲ.

ಪರಿಶುದ್ಧ ಗಂಗೆಯೇ ಹೊಲಸು ತುಂಬಿ ನಾರಲು ಶುರುವಾದಾಗ ಅದಕ್ಕೆ ಕಾರಣವನ್ನು ಹುಡುಕಬೇಕಾಯ್ತು ಅಲ್ಲವೇ? ಗಂಗೆ ಪಾವನೆಯೆಂದು ಕಾಶಿಯಲ್ಲಿ ಸಿಗುವ ನೀರನ್ನು ಸೇವಿಸಿದರೆ ಆರೋಗ್ಯ ಹದಗೆಡಲು ಬಹಳ ಸಮಯ ಬೇಕಾಗಲಿಕ್ಕಿಲ್ಲ! ಸದ್ಯ ಈ ಹಾವಾಡಿಗ ಮಠದಲ್ಲಿ ಪೀಠದಲ್ಲಿರುವವನಲ್ಲಿ ಗುರುವನ್ನು ಕಂಡರೆ ಸಾಮಾಜಿಕ ಸ್ವಾಸ್ಥ್ಯ ಹದಗೆಡಲು ಬಹಳ ಕಾಲ ಬೇಕಾಗೋದಿಲ್ಲ!!

ಆರಂಭದಿಂದಲೂ ಹಾವಾಡಿಗ ಮಠದ ಹಲವು ಸನ್ಯಾಸಿಗಳು ಸುಳ್ಳನ್ನೇ ಹೇಳಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಮೆರೆಯುವಿಕೆಗಾಗಿ, ತಮ್ಮ ಘನತೆ-ಗೌರವಗಳಿಗಾಗಿ ತಮಗೆ ಬೇಕಾದ ದಾಖಲೆಗಳನ್ನೆಲ್ಲ ತಯಾರುಮಾಡಿಸಿಕೊಂಡಿದ್ದಾರೆ. ಹೇಳುತ್ತ ಹೋದರೆ ಅದು ಒಂದೇ ಲೇಖನದಲ್ಲಿ ಮುಕ್ತಾಯಗೊಳ್ಳೋದಿಲ್ಲ. ಕನ್ನಡದ ಇತ್ತೀಚಿನ ಬರಹಗಾರರೊಬ್ಬರು ಕಂಡುಕೊಂಡ ’ಪ್ರಗಾಥ’ದ ರೀತಿ ಅದಾಗುತ್ತದೆ. ಪ್ರಗಾಥ ಎಂಬುದಕ್ಕೆ ನಿಲುಗಡೆ ಇಂತಲ್ಲೇ ಎಂಬುದಿಲ್ಲ. ಅದು ನೂರು ಪೇಜುಗಳಲ್ಲೂ ಇರಬಹುದು ಸಾವಿರ ಪುಟಗಳಮೂ ಮೀರಬಹುದು! ಹಾಗಾಗೋದು ಬೇಡ ಒಂದು ಮಿತಿಯಲ್ಲಿ ಇದನ್ನು ಮುಗಿಸೋಣ ಎಂಬ ದಿಸೆಯಲ್ಲಿ ಕವಿ ಕಡೆಂಗೋಡ್ಲು ಶಂಕರ ಭಟ್ಟರ ಈ ಹಾಡನ್ನು ನೆನಪುಮಾಡಿಕೊಳ್ಳುತ್ತಿದ್ದೇನೆ.

ಪಡುವಣ ತೀರದ ಕನ್ನಡ ನಾಡಿನ
ಕಾರ್ಗಾಲದ ವೈಭವವೇನು?
ಚೆಲ್ಲಿದರೆನಿತೂ ತೀರದ ನೀರಿನ
ಜಡದೇಹದ ಕಾರ್ಮುಗಿಲೇನು?

ಕೆರೆಗಳನುಕ್ಕಿಸಿ ತೊರೆಗಳ ಸೊಕ್ಕಿಸಿ
ಗುಡ್ಡವ ಬೆಟ್ಟವ ಕೊರೆಕೊರೆದು
ಕಡಲಿನ ತೆರೆಗಳ ರಿಂಗಣಗುಣಿಯಿಸಿ
ಮೊರೆಮೊರೆವುದದೋ ಸುರಿಸುರಿದು

ಕುದುರೆ ಮೊಗದ ಕಡಿವಾಣದ ತೆರದಲಿ
ಮಿಂಚುಗಳವು ಥಳಥಳಿಸುವವು
ಗೊರಸಿನ ಘಟ್ಟನೆಯಂತಿರೆ ಥಟ್ಟನೆ
ಗುಡುಗುಗಳವು ಗುಡುಗಾಡಿಪವು

ಪಶ್ಚಿಮ ಕರಾವಳಿಯ ಮಳೆಗಾಲದ ಅಬ್ಬರವನ್ನು ಶಬ್ದಗಳಲ್ಲಿ ಸೆರೆಹಿಡಿಯೋದು ಬಹಳ ಕ್ಲೀಷೆಗೆ ಕಾರಣವಾಗಬಹುದು; ಆದರೂ ತಮ್ಮ ಬರಹದ ಓಘದಲ್ಲಿ ಸಲೀಸಾಗಿ ಪೋಣಿಸಲು ಸಿಕ್ಕ ಸಹಜ ಪದಗಳಲ್ಲಿ ಸೆರೆಸಿಕ್ಕಿದ್ದನ್ನು ರಸಘಟ್ಟಿ[ಕ್ಯಾಂಡಿ]ಯಂತೆ ಹೊರೆತೆಗೆದು ಬರೆದವರು ಈ ಕವಿ. ಆ ಮಳೆಗಾಲದಷ್ಟೆ ಅಬ್ಬರಗಳನ್ನು ಹೊಂದಿದೆ ಈ ಹಾವಾಡಿಗ ಮಠದ ಇತಿಹಾಸ. ಅಲ್ಲೆಲ್ಲಾ ನಿಮಗೆ ಕಾಣುವುದು ತಾವೇ ಎಲ್ಲರಿಗಿಂತ, ಆಮ್ಯಾಯ ಮಠಗಳಿಗಿಂತ ದೊಡ್ಡ ಜಗದ್ಗುರು ಎನಿಸಿಕೊಳ್ಳುವ ಹಪಾಹಪಿ! ಮತ್ತು ಆ ಧೂರ್ತ ಸಂಕಲ್ಪದಲ್ಲಿ ಮಾಡಿದ್ದೆಲ್ಲ ಸತ್ಯವೆಂಬ ಧೋರಣೆಯನ್ನು ಹೊಂದಿರುವುದು.

ಅಬ್ಬಬ್ಬ ಅಂದರೆ ಒಂದೈವತ್ತು ವರ್ಷ ಹಿಂದಕ್ಕೆ ಹೋಗಿ. ಹಳ್ಳಿಗಳಲ್ಲಿ ಎಷ್ಟು ಮನೆಗಳಲ್ಲಿ ಕಕ್ಕಸುಗಳಿದ್ದವು? ಊರಾಚೆಯ ಗುಡ್ಡ ಬದುವಿನಲ್ಲೋ, ಬೆಟ್ಟದ ಸೆರಗಿನಲ್ಲೋ ಪೊದೆಗಳ ಮರೆಯಲ್ಲಿ ಮಲವಿಸರ್ಜನೆ ನಡೆಸುವುದು ನಡೆಯುತ್ತಿತ್ತು; ಆ ಕಾಲ ಹಾಗಿತ್ತು, ಜನ ಬಡತನದಲ್ಲೇ ಇರುವುದರಲ್ಲಿ ತೃಪ್ತರಾಗಿದ್ದರು. ತೃಪ್ತಿ ಇಲ್ಲದವರೊಬ್ಬರಿದ್ದೇ ಇದ್ದರು-ಅದೇ ಈ ಹಾವಾಡಿಗ ಮಠದವರು.

ತುಮರಿ ಈ ಮೊದಲು ಹೇಳಿದ ಹಾಗೆ ಈ ಮಠ ಹುಟ್ಟಿಕೊಂಡದ್ದೇ ಕೆಲವು ಮುಖಂಡರ ಸ್ವಾರ್ಥದಿಂದ! ಶಂಕರರು ಬಂದರು, ಅಲ್ಲೆಲ್ಲೋ ನಿಂತರು, ಯಾರಲ್ಲೋ ವಿಗ್ರಹಗಳನ್ನು ಇಸಿದುಕೊಂಡರು, ಅದನ್ನು ತಮ್ಮ ಮಠಕ್ಕೆ ಪೂಜೆಗಾಗಿ ನೀಡಿದರು ಎಂಬುದೆಲ್ಲ ಯಾವ ಅಧಾರಗಳಿಗೂ ನಿಲುಕದ ಕಟ್ಟುಕಥೆ. ಅಷ್ಟೇ ಅಲ್ಲ; ಈ ಹಾವಾಡಿಗ ಮಠದ ದಾಖಲೆಗಳ ಪೈಕಿ ಬಹುತೇಕ ದಾಖಲೆಗಳೆಲ್ಲ ಕಟ್ಟುಕತೆಗಳಿಂದಲೇ ತುಂಬಿಹೋಗಿವೆ!!

ದಕ್ಷಿಣ ಕನ್ನಡದ ಮುಸುಕರೊಬ್ಬರು ಈ ಕುರಿತು ಅಧಿಕೃತವಾದ ಸಂದೇಹಗಳನ್ನು ಕಾಂಟ್ರಾ ಎಂಟ್ರಿ ದಾಖಲೆಗಳ ಸಮೇತ ಸಾಬೀತುಮಾಡಿ ತೋರಿಸಿದ್ದಾರೆ. ಇಂತಾ ಇಸವಿಯಲ್ಲಿ ವಿದ್ಯಾರಣ್ಯರು ಶಾಸನ ಕೊಟ್ಟರು ಅಂತಾರಲ್ಲ; ಆ ಕಾಲಕ್ಕೂ ಕನಿಷ್ಥ ಹದಿಮೂರು ವರ್ಷಗಳ ಮೊದಲೇ ವಿದ್ಯಾರಣ್ಯರು ಸಮಾಧಿ ತೆಗೆದುಕೊಂಡಿದ್ದರು! ಹಲವು ವಿಭಿನ್ನ ಪುಸ್ತಕಗಳಲ್ಲಿ ವಿದ್ಯಾರಣ್ಯರ ಕಾಲಮಾನ ಸಾಖಲಾಗಿರುವುದು ಕಾಣುತ್ತದೆ; ಆದರೆ ಈ ಮಠದವರ ಪ್ರಕಾರ ಅವರು ದೇಹಬಿಟ್ಟ ಹದಿಮೂರು ವರ್ಷಗಳ ಮೇಲೂ ಬದುಕಿದ್ದರು!!

ವಿದ್ಯಾರಣ್ಯರು ನೀಡಿದ ಶಾಸನಕ್ಕೆ ಯಾವುದೇ ಸಹಿ ಅಥವಾ ಮೊಹರುಗಳಿಲ್ಲ! ವಿದ್ಯಾರಣ್ಯರ ಹೆಸರನ್ನು ಬಳಸಿಕೊಳ್ಳಲಾಗಿದೆ. ಆ ಕಾಲದಲ್ಲಿ ಭಾರತದಲ್ಲಿ ಶಾಲಿವಾಹನ ಶಕೆ ಬಳಕೆಯಲ್ಲಿತ್ತು; ಆದರೆ ಆ ಮಠ ತೋರಿಸುವ ಶಾಸನದಲ್ಲಿ ಕ್ರಿಸ್ತ ಶಕ ಎಂದು ನಮೂದಾಗಿದೆ!

ವಿಜಯನಗರದ ಸಾಮಂತ ದೊರೆಯೋರ್ವನಿಂದ ಇನ್ನೊಂದು ಶಾಸನ ಪಡೆದಿಕೊಳ್ಳಲಾಗಿದೆಯಂತೆ; ಆದರೆ ಅದಕ್ಕೆ ಬ್ರಿಟಿಷ್ ಅಧಿಕಾರಿಯ ಸಹಿ ಇದೆ! ಮಠದ ಪರವಾಗಿ ಇಂತಾ ವಕೀಲರು ವಾದಿಸಿದ ಬಗ್ಗೆ ಹೇಳಿಕೆಗಳಿವೆ!

ಭೋಗವರ್ಧನವಾಲ ಎಂದರೇನು> ಭೋಗವನ್ನು ವರ್ಧಿಸಿಕೊಳ್ಳೋದು ಅಂತಲ್ಲವೇ? ಅಂದರೆ ಇಂದಿನ ತೊನೆಯಪ್ಪನ ಪ್ರಕಾರ ಸಂಭೋಗವನ್ನು ವರ್ಧಿಸಿಕೊಳ್ಳೋದು. ಮಹಿಳೆಯರ ಅದು ಹರಿದುಹೋದರೂ ಬಿಡದೆ ಭೋಗಿಸೋದು, ಯಾವ ಮಹಿಳೆಯರೂ ಸಿಗದಿದ್ದರೆ ಗಿಂಡಿಗಳನ್ನೇ ಮಲಗಿಸಿ ಅಂಡಿನಲ್ಲಿ ಜಡಿಯೋದು ಅಂತೆಲ್ಲ ಅರ್ಥ ಬರುತ್ತದೆ!

ಶಂಕರರು ತಮ್ಮ ಪರಂಪರೆಗೆ ಭೋಗವರ್ಧನವಾಲ ಪರಂಪರೆ ಅಂತ ಪದವನ್ನು ಬಳಸಲು ಹೇಳಲಿಲ್ಲ. ಅಸಲಿಗೆ ಶಂಕರರು ಪೀಠಕ್ಕೆ ಅಂಟ್ತಿ ಕುಳಿತುಕೊಳ್ಳಲೇ ಇಲ್ಲ! ಶಂಕರರ ಕಾಲಮಾನದಲ್ಲಿ ಕೇರಳದಲ್ಲಿ ರಾಜಾ ರಾಜಶೇಖರ ಆಳುತ್ತಿದ್ದ. ಅವ ಶಂಕರರಿಗೆ ಛತ್ರ, ಚಾಮರಾದಿಗಳ ಸಮೇತ ಪಲ್ಲಕ್ಕಿಯನ್ನು ಕಳುಹಿಸಿದ್ದ. ಅವೆಲ್ಲವನ್ನೂ ನಯವಾಗಿ ನಿರಾಕರಿಸಿಬಿಟ್ಟರು ಶಂಕರರು!!

ಅಪ್ಪ ಮಾಡಿಟ್ಟ ಆಸ್ತಿ ಇದ್ದರೆ ಮಕ್ಕಳು ಆಳಸಿಗಳಾಗ್ತಾರಂತೆ. ಅದರಂತೆ ಶಂಕರರು ಮಾಡಿಟ್ಟು ಹೋದ ಸಂಪ್ರದಾಯವನ್ನು ಬಳಸಿಕೊಳ್ಳೋದರಿಂದ ಜನರನ್ನು ನಂಬಿಸೋದು ಸುಲಭವಾಯಿತು. ಶಂಕರರು ಇರೋವಾಗ ಪೀಠ, ಶಾಪ, ಸರ್ವನಾಶ, ಬಹಿಷ್ಕಾರ ಇವೆಲ್ಲದರ ಬಳಕೆ ಇರಲಿಲ್ಲ. ಶಂಕರರ ಮೇಲೆ ಅದೆಷ್ಟು ದಾಳಿಗಳು ನಡೆಯಲಿಲ್ಲ? ಆದರೆ ಅಲ್ಲಿ ಯಾರ ವಿರುದ್ಧವೂ ಶಂಕರರು ತಾನಾಗಿ ಸೆಣಸಾಡುವ ಪ್ರಶ್ನೆಯೇ ಬರಲಿಲ್ಲ. ಅವರೆದೆಯಲ್ಲಿ ವೈರತ್ವ ಎಂಬುದೇ ಇರಲಿಲ್ಲ.

ಶಂಕರರು ಶ್ರೀಶೈಲದಲ್ಲಿದ್ದಾಗ ನಡುರಾತ್ರಿಯಲ್ಲಿ ಕಾಪಾಲಿಕನೊಬ್ಬ ಶಂಕರರನ್ನು ಕೊಲ್ಲಲು ಬಂದಾಗಲೂ ಶಂಕರರು ಎಂದಿನಂತೆ ಸಹಜ ಸ್ಥಿತಿಯಲ್ಲೇ ಇದ್ದರು. ಅವರ ಶಿಷ್ಯನಲ್ಲಿ ನಾರಸಿಂಹನನ್ನು ಕಂಡ ಕಾಪಾಲಿಕ ಅವನಿಂದ ನಿಗ್ರಹಿಸಲ್ಪಟ್ಟ. “ನನ್ನ ನಂತರ ನೀವಲ್ಲ ಹೀಗೆಲ್ಲ ನಡೆದಾಡಿಕೊಂಡು ತಿರುಗಾಡಬಾರದು. ಪೀಠ ಹತ್ತಿ ಕೂತುಕೊಂಡುಬಿಡಬೇಕು. ಶಾಪಾನುಗ್ರಹ, ಗುರುಪೀಠ, ಸರ್ವನಾಶ ಮೊದಲಾದ ಪದಗಳಿಂದ ಜನರಲ್ಲಿ ಭಯೋತ್ಪಾದನೆ ಉಂಟುಮಾಡುತ್ತ ದೇಣಿಗೆ ಮತ್ತು ಕಾಣಿಕೆಗಳನ್ನೂ ಬೆಳ್ಳಿ-ಬಂಗಾರಗಳನ್ನೂ ವಸೂಲಿ ಮಾಡಿಕೊಳ್ಳುತ್ತಿರಬೇಕು. ಸದಾ ಭೋಗನಿರತರಾಗಿ ಭೋಗವರ್ಧನೆ ಮಾಡಿಕೊಳ್ಳತಕ್ಕದ್ದು”ಅಂತೇನಾದರೂ ಹೇಳಿದರಾ? ಖಂಡಿತಾ ಸಾಧ್ಯವಿಲ್ಲ.

ಹಾಗಾದ್ರೆ ಈ ಮಠಕ್ಕೆ ಭೋಗವರ್ಧನವಾಲ ಪರಂಪರೆ ಎಂಬ ಹೆಸರನ್ನು ಯಾರು ಕೊಟ್ಟರು? ಹಿಂದಾವುದೋ ಕಾಲಘಟ್ಟದಲ್ಲಿ ಆಗಿಹೋದ ಒಬ್ಬ ’ಸನ್ಯಾಸಿ’ ಬಹುಶಃ ಇವನಂತೆ ಕಚ್ಚೆಹರುಕನಾಗಿದ್ದ ಅಂತ ಕಾಣ್ತದೆ. ಅವನ ಸೃಷ್ಟಿ ಅದು. ಶಾಸನದಲ್ಲಿ ತಮಗೆ ಬೇಕಾದದ್ದನ್ನೆಲ್ಲ ಬರೆಯಿಸಿಕೊಳ್ಳಬಲ್ಲ ಚಾಕಚಕ್ಯತೆ ಮೊದಲಿನಿಂದಲೊ ಈ ಮಠದಲ್ಲಿ ಹಲವು ’ಸನ್ಯಾಸಿ’ಗಳಿಗೆ ಇತ್ತು!

ಹನ್ನರಡನೆ ಶತಮಾನದ ಹೊತ್ತಿನಲ್ಲಿ ಈ ಮಠದ ಗುರುವಿಗೂ ಸ್ವೀಕರಿಸಿದ ಇಬ್ಬರು [ಒಬ್ಬರಾದ ಮೇಲೆ ಒಬ್ಬರು] ಶಿಷ್ಯರಿಗೂ ವೈಮನಸ್ಯ ಉಂಟಾಗಿ, ಜಗಳಗಳಾಗುತ್ತವೆ. ಒಬ್ಬ ಓಡಿಹೋಗಿ ಬಾಣಾವತಿ ತೀರದಲ್ಲಿ ಹೊಸ ಮಠ ಕಟ್ಟುತ್ತಾನೆ; ಇನ್ನೊಬ್ಬ ಕುರಿವಾಡೆಯಲ್ಲಿ [ಅದೇ ತೊನೆಯಪ್ಪನ ಪ್ರಕರಣ ಆರಂಭವಾಗುವಾಗ ಇದ್ದನಲ್ಲ ಆ ಮಠ]ಮಠ ಕಟ್ಟುತ್ತಾನೆ. ಒಂದೇ ಮಠದ, ಪೀಠದ ಇಬ್ಬರು ಶಿಷ್ಯಂದಿರು ಗುರುವನ್ನು ವಿರೋಧಿಸಿ ಕಿತ್ತಾಡುತ್ತಾರೆ ಅಂದರೆ ಅವರಿಗೆ ಗುರುಶಾಪ ತಟ್ಟಲಿಲ್ಲವೇ? ಪೀಠ ಅವರ ಕುಟುಂಬಗಳನ್ನು ಸರ್ವನಾಶ ಮಾಡಲಿಲ್ಲವೇ?

ವಿಚ್ಛಿನ್ನ ಅಂದರೆ ತುಂಡು ಅಂತ. ಪರಂಪರೆ ತುಂಡಾಗಲಿಲ್ಲ. ಒಬ್ಬರಾದಮೇಲೆ ಒಬ್ಬರು ಸತತವಾಗಿ ಪೀಠ ಏರಿದ್ದರು ಅಂತಾರೆ; ಹಾಗಾದರೆ ಇಬ್ಬರು ಜಗಳ ಮಾಡಿಕೊಂಡು ಬೇರೆ ಬೇರೆ ಮಠಗಳನ್ನು ಕಟ್ಟಿದರಲ್ಲ ಆಗಲೂ ತುಂಡಾಗಲಿಲ್ಲವೇ? ಯಾಕೆ ಸುಳ್ಳು ಹೇಳ್ತೀರಿ?

ಈ ಮಠದ ರಸಿಕತೆ ಎಷ್ಟಿತ್ತೆಂದರೆ ಇವರಲ್ಲಿ ಇಹಕ್ಕೆ ಅಂಟಿಕೊಂಡು ಮೆರೆಯುವುದೇ ಎಲ್ಲೆಲ್ಲೂ ಎದ್ದು ಕಾಣುತ್ತದೆ. ರಾಜಪ್ರಭುತ್ವದಲ್ಲಿ ರಾಜರುಗಳಿಗೆ ಬಳಸುತ್ತಿದ್ದ ಎಲ್ಲ ಐಶಾರಾಮಿ ವಸ್ತುಗಳನ್ನೂ ಇವರು ಬಳಸಲು ಮುಂದಾಗುತ್ತಾರೆ. ವಾಸ್ತವವಾಗಿ ಆಮ್ನಾಯ ಮಠ ಇರುವಾಗ ಮತ್ತು ಅದರ ಸುಪರ್ದಿಯಲ್ಲಿನ ತುಂಡು ಮಠ ಇದಾಗಿರೋವಾಗ ಅಲ್ಲಿನವರು ಅನುಮತಿಸಿದರೆ ಅದನ್ನೆಲ್ಲ ಪಡೆದುಕೊಳ್ಳಬಹುದಿತ್ತು; ಆದರೆ ಹಾಗಾಗಲಿಲ್ಲ.

ಹಿಂದೊಂದು ಸಂದರ್ಭದಲ್ಲಿ ಆಮ್ನಾಯ ಮಠದ ಶಿಷ್ಯನೊಬ್ಬ ಕೋಪ ತಾಳಲಾರದೆ ಈ ತುಂಡುಮಠದ ’ಜಗದ್ಗುರು’ವಿನ ಮೆರವಣಿಗೆ ನಿಲ್ಲಿಸಿ, ಅವನಿಂದ ಬಿರುದು ಬಾವುಲಿಗಳನ್ನೆಲ್ಲ ಕಿತ್ತುಕೊಳ್ಳುತ್ತಾನೆ. ನಂತರ ಹಾವಾಡಿಗ ಮಠದ ಅಂದಿನ ಸ್ವಾಮಿ ಅಂದಿನ ಮೈಸೂರು ಮಹಾರಾಜರಲ್ಲಿ ಗೋಗರೆದಾಗ ಶೃಂಗೇರಿಗೆ ಹೇಳಿ ಅವರು ಅದನ್ನು ಕರುಣೆಯಿಂದ ಮರಳಿಸುತ್ತಾರೆ. ಅಷ್ಟಾದರೂ ಬುದ್ಧಿ ಬರದ ಈ ಮಠ ಜಗತ್ತಿನಲ್ಲೆ ಎಲ್ಲೂ ಇಲ್ಲದ ಸಿಂಹಾಸನ ತನ್ನಲ್ಲಿರಲಿ ಎಂದು ಹೊರಡುತ್ತದೆ! ಯಾಕೆ ಬೇಕಿತ್ತು ಇವೆಲ್ಲ? ಆಧ್ಯಾತ್ಮ ಪಥಿಕರಿಗೆ ಸಿಂಹಾಸನ, ಪೀಠ ಇವೆಲ್ಲ ಮುಖ್ಯವೇ?

ರಾಜರುಗಳನ್ನು ಓಲೈಸಿ ತಾವು ದೊಡ್ಡವರಾಗೋದು ಈ ಮಠಕ್ಕೆ ಅಂಟಿಕೊಂಡೇ ಸಾಗಿಬಂದ ಕಲೆ. ಹೀಗಾಗಿಯೇ ಹಿಂದಾವುದೋ ಕಾಲದಲ್ಲಿ ಇದೇ ಮಠದಲ್ಲಿ ಕಚ್ಚೆಹರುಕ ಸನ್ಯಾಸಿಯಾಗಿ ಹುಟ್ಟಿರಬಹುದಾದ ಭೋಗವರ್ಧನ [ವಿಷ್ಣುವರ್ಧನ ಎಂಬಂತೆ]ಮತ್ತೆ ಮಹಾಲಂಪಟ ಶ್ರಾದ್ಧಭಟ್ಟನ ಪಿಂಡವಾಗಿ ಜನಿಸಿ ಇಂದು ಇದೇ ಮಠವನ್ನು ಸೇರಿಕೊಂಡಿದೆ.

ಇವನ ಹಿಂದಿದ್ದರಲ್ಲ? ಅವರು ಮಹಾಗರ್ವಿಷ್ಠರೂ ಮತ್ತು ಮಹಾಕೋಪಿಗಳೂ ಆಗಿದ್ದರು. ಶಿಷ್ಯವೃಂದದಲ್ಲಿ ನಂಬಿದವರ ಮೇಲೆ ಭೀತಿ ಹುಟ್ಟಿಸಿ ಕಿವಿಯ ಮೇಲೆ ಹೂವಿಡುವ ಪ್ರಯತ್ನದಲ್ಲಿ ಅವರೂ ಸಾಕಷ್ಟು ಮುಂದಿದ್ದರು. ಅವರೂ ಸಹ ಒಬ್ಬಳನ್ನೇ ಇಟ್ಟುಕೊಂಡಿದ್ದರಂತೆ! ಶ್ರೀಧರ ಸ್ವಾಮಿಗಳ ಸಾಧನೆಗಳನ್ನು ಕಂಡು ಅವರ ಹಿಂದೆ ಹಲ್ಲುಕಡಿಯುತ್ತಿದ್ದರು! ಶ್ರೀಧರ ಸ್ವಾಮಿಗಳು ಆ ಸ್ವಾಮಿಗೆ ಮಠದವರೆಂದು ದಂಡಪ್ರಣಾಮದ ಗೌರವವನ್ನೇ ಅರ್ಪಿಸಿದ್ದರಂತೆ. ಅವರಿಗೆ ಆ ಮನುಷ್ಯನೂ ಅಷ್ಟಕ್ಕಷ್ಟೆ ಎಂಬ ಅನಿಸಿಕೆ ಬಂದಿರಬಹುದು.

ಶಿಷ್ಯವೃಂದದಲ್ಲಿ ಅಪರೋಕ್ಷ ಜ್ಞಾನಿಗಳೆಂದು ಕರೆಸಿಕೊಂಡ ಅವರು “ಯೋಗ್ಯರಾದವರನ್ನು ಗುರಿತಿಸಿ ದೀಕ್ಷೆ ನೀಡಿದ್ದೇವೆ” ಎಂದಿದ್ದಾರೆ.. ಅಂದರೆ ಈ ಮಠಕ್ಕೆ ಯೋಗ್ಯರಾದವರು ಎಂದರ್ಥ! ಹೇಳಿಕೇಳಿ ಭೋಗವರ್ಧನವಾಲ ಪರಂಪರೆ; ಒಬ್ಬ ಒಬ್ಬಳನ್ನೇ ಇಟ್ಟುಕೊಂಡರೆ ಮುಂದಿನವ ಯಥಾ ಯೋಗ್ಯವಾಗಿ ಒಂದು ನೂರಾದರೂ ಮಹಿಳೆಯರನ್ನು ಭೋಗಿಸಬೇಡವೇ? ಹಾಗಾಗಿ ಶ್ರುತಿ, ಸ್ಮೃತಿ, ಪುರಾಣಗಳು ಅಥವಾ ಪ್ರಸ್ಥಾನತ್ರಯಗಳಲ್ಲಿ ಮುನ್ನಾಭಾಯಿಯಾದ ತೊನೆಯಪ್ಪನವರು ತಮ್ಮ ಮಠದ ಪರಂಪರೆಯ ಲೌಕಿಕ ಇತಿಹಾಸವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಓದಿ ತಿಳಿದುಕೊಂಡು, ಭೀತಿಯಿಂದ ನಡೆಸಿಬಂದ ಪ್ರೋಟೋಕಾಲ್ ಪದ್ಧತಿಯನ್ನು ಭಯೋತ್ಪಾದನೆಯಿಂದಲೇ ಮುಂದುವರಿಸಿಕೊಂಡು ಬಂದಿದ್ದಾರೆ.

ರಾಜಪ್ರಭುತ್ವ ಅಳಿದು ಎರಡುಶತಮಾನಗಳೇ ಕಳೆದಿದೆ ಎನ್ನಬಹುದು. ಯಾಕೆಂದರೆ ಬ್ರಿಟಿಷರು ಭಾರತವನ್ನು ಆಕ್ರಮಿಸಿದಮೇಲೆ ಕೇವಲ ನಾಮ್ ಕೇ ವಾಸ್ತೆ ಗಷ್ಟೇ ರಾಜರುಗಳು ಆಡಳಿತ ನಡೆಸುತ್ತಿದ್ದರು. ಆ ಕಾಲದಲ್ಲಿ ಪ್ರಜೆಗಳನ್ನು ಬೆದರಿಸಿದರೆ ಯಾರೂ ಸರಿಯಾಗಿ ಗಮನ ಹರಿಸುತ್ತಿದಲಿಲ್ಲ. ಎಲ್ಲೋ ಕೆಲವು ಕಡೆ ಬ್ರಿಟಿಷ್ ಸರಕಾರದ ಪೋಲೀಸರು ಕೆಲವರಿಗೆ ಸಹಕಾರ ನೀಡುತ್ತಿದ್ದರು. ಬ್ರಿಟಿಷರಿಗೆ ಸ್ಥಳೀಯ ಹಕ್ಕು-ಬಾಧ್ಯತೆಗಳ ಮಾಹಿತಿ ಇಡಿಯಾಗಿ ಅರ್ಥವಾಗುತ್ತಿರಲಿಲ್ಲ. ಮಧ್ಯೆ ಇರುವ ಕೆಲವರು ಅವರಿಗೆ ತಪ್ಪು ಗ್ರಹಿಕೆ ಉಂಟುಮಾಡುತ್ತಿದ್ದರು.

ಈ ಮಠದ ದರ್ಬಾರಿನಲ್ಲಿ ಹಲವು ಚಿಕ್ಕಪುಟ್ಟ ಆಶ್ರಮಗಳ, ಅತಿ ಸಣ್ಣ ಸಣ್ಣ ಮಠಗಳ ಆಸ್ತಿಪಾಸ್ತಿಗಳನ್ನು ಈ ಮಠ ಭಯಹುಟ್ಟಿಸಿ ಹೊಡೆದುಕೊಂಡಿದ್ದು ಕಂಡುಬರುತ್ತದೆ. ಚಿನ್ನಾವರದ ಪಕ್ಕದಲ್ಲಿ ಊರ್ವಶಿಕೊಂಡದ ಮಠವನ್ನು ಹೊಡೆದುಕೊಂಡದ್ದು ಹಾಗೇ. ಈಗಂತೂ ದೋರೆ ಮಠವೂ ಈ ಮಠದ ಸುಪರ್ದಿಗೇ ಬಂದಿದೆ ಅನಿಸುತ್ತದೆ. ಈ ಮಠದ ಹಲವು ಶಾಖೆಗಳ ಗತ ಇತಿಹಾಸ ನತ್ತು ಹಿಂದಿನ ಆಡಳಿರ್ತವನ್ನು ತೆಗೆದರೆ ಇದರ ಕರಾಳ ಮುಖಗಳು ಬಹಿರಂಗಗೊಳ್ಳುತ್ತವೆ. ಎತ್ತ ನೋಡಿದರೂ ಅಧಿಕಾರ, ಸಂಪತ್ತು, ಆಸ್ತಿ ಇವುಗಳ ಹಪಾಹಪಿ ಇರುವುದು ಗೋಚರವಾಗುತ್ತದೆ.

ಶೃಂಗೇರಿಯಂತ ಆಮ್ನಾಯ ಮಠದಲ್ಲಿ ಬಡ ವೈದಿಕರೋರ್ವರು ದೇವಸ್ಥಾನವೊಂದರ ಪೂಕೆಯನ್ನು ನೆರವೇರಿಸಿಕೊಂಡಿದ್ದರು. ಅವರಿಗೆ ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ಕಷ್ಟವಿತ್ತು. ಅಂತಹ ಬಡತನದಲ್ಲಿ ಹುಟ್ಟಿದ ಮಗ ವೇದ, ಶಾಸ್ತ್ರ, ಪುರಾಣಗಳಲ್ಲೆಲ್ಲ ಪ್ರಕಾಂಡ ಪಂಡಿತನಾದರೂ ಮನದಲ್ಲಿ ವೈರಾಗ್ಯವನ್ನು ತಾಳಿದ್ದ. ಇಹದ ಯಾವೊಂದೂ ಬಯಕೆಗಳು ಅವನನ್ನು ಬಾಧಿಸಲಿಲ್ಲ, ಬಂಧಿಸಲಿಲ್ಲ. ಸದಾ ಪಾರಮಾರ್ಥಿಕ ಚಿಂತನೆಯಲ್ಲೇ ಕಾಲ ಕಳೆಯುತ್ತುದ್ದ ಹುಡುಗ ಒಮ್ಮೆ ಪೀಠದ ಜಗದ್ಗುರುಗಳ ಕಣ್ಣಿಗೆ ಬಿದ್ದ.

ಕಾಲಕ್ರಮದಲ್ಲಿ ಅವನ ಚಹರೆ, ಚಲನವಲನ, ಜೀವನವಿಧಾನ, ವಿದ್ಯೆ, ಸಂಸ್ಕಾರ, ಸಂಸ್ಕೃತಿ ಎಲ್ಲವನ್ನೂ ಪರಾಮರ್ಶಿಸುತ್ತಲೇ ಹೋದ ಗುರುಗಳು, ಒಂದುದಿನ ಅವನನ್ನು ಕರೆದು ಸನ್ಯಾಸಿಯಾಗುತ್ತೀಯಾ ಎಂದು ಕೇಳಿದರು. ಸಂತೋಷವಾಗಿ ಆತ ಒಪ್ಪಿಕೊಂಡ. ಆಗ ಮಠದ ಲೌಕಿಕ ವ್ಯಾವಹಾರಿಕ ಜವಾಬ್ದಾರಿ ತನಗೆ ಬರುತ್ತದೆಂಬ ಭಾವನೆ ಅವನಲ್ಲಿರಲಿಲ್ಲ. ನಂತರ ದೀಕ್ಷೆ, ಪೀಠಾರೋಹಣವೆಲ್ಲ ನಡೆದು ಲೌಕಿಕ ವ್ಯವಹಾರಗಳು ತನ್ನ ನಿತ್ಯ ನೈಮಿತ್ತಿಕ ಜಪ-ತಪ ಅನುಷ್ಠಾನಗಳಿಗೆ, ಸಾಧನೆಗೆ ಅಡ್ಡಿಪಡಿಸುವಂತೆ ಕಂಡಿದ್ದರಿಂದ ಎರಡನ್ನೂ ತನ್ನಿಂದ ಏಕಕಾಲಕ್ಕೆ ನಿಭಾಯಿಸಲು ಸಾಧ್ಯವಾಗದೆಂದೂ ಮಠದ ವ್ಯವಹಾರವನ್ನು ಮೈಸೂರು ಮಹಾರಾಜರೇ ಉಸ್ತುವಾರಿ ವಹಿಸಿ ನೋಡಿಕೊಳ್ಳಬೇಕೆಂದೂ ಹೇಳಿದ ಆ ಮಹಾಗುರುವೇ ಜಗದ್ಗುರು ಚಂದ್ರಶೇಖರ ಭಾರತಿಗಳು.

ನೋಡಿ, ವೈರಾಗ್ಯ ಹೇಗೆಲ್ಲ ಇರುತ್ತದೆ ಎಂಬುದಕ್ಕೆ ಅವರೊಂದು ಸ್ಪಷ್ಟ ಉದಾಹರಣೆ. ಚಂದ್ರಶೇಖರ ಭಾರತಿಗಳು ಸದಾ ತಪೋಮಗ್ನರಾಗಿರುತ್ತಿದ್ದರು. ಕೆಲವೊಮ್ಮೆ ಅನ್ನಾಹಾರಗಳ ಪರಿವೆಯೂ ಇಲ್ಲದಷ್ಟು ದೀರ್ಘತಮ ತಪಸ್ಸು; ಪ್ರಾಯಶಃ ನಿಜವಾದ ಸಮಾಧಿಸ್ಥಿತಿ. ಅಪರೂಪಕ್ಕೊಮ್ಮೆ ಬಹಿರ್ಮುಖರಾದಾಗ ಮಠದಲ್ಲಿ ಯಾರೋ ದರ್ಶನಾಕಾಂಕ್ಷಿಗಳು ಕಾದಿದ್ದರೆ ದರ್ಶನ ನೀಡುತ್ತಿದ್ದರು. ಅಗಾಧ ಪಾಂಡಿತ್ಯವುಳ್ಳ ಅವರಿಗೆ ಪ್ರವಚನ ಮಾಡೋದೇನೂ ಕಷ್ಟವಾಗಿರಲಿಲ್ಲ. ಆದರೆ ಸಭೆ, ಸಮಾರಂಭಗಳಿಂದ, ಹಾರ, ತುರಾಯಿ, ಮೆರವಣಿಗೆಗಳಿಂದ ಅವರು ಬಹಳ ದೂರ ಇರಲು ಇಷ್ಟಪಡುತ್ತಿದ್ದರು.

ಇಂದಿಗೂ ಆಮ್ಯಾಯ ಮಠದವರ ಪ್ರವಚನಗಳನ್ನು ನೀವೆಲ್ಲ ಮಾಧ್ಯಮಗಳಲ್ಲಿ ನೋಡುತ್ತೀರಿ. ಅವರ ತೂಕದ ವಿದ್ವತ್ಪೂರ್ಣ ಸಹಜ ವಾಗ್ಝರಿಗೂ ಹಾವಾಡಿಗ ಮಠದ ತೊನೆಯಪ್ಪನ ಐಪ್ಯಾಡ್ ರೌಡಿ ಭಾಷಣಗಳಿಗೂ ಅಂತರವನ್ನು ಕಂಡುಕೊಳ್ಳಿ. ಸನ್ಯಾಸಿಗೆ ಯಾರಮೇಲೂ ದ್ವೇಷ ಇರಬಾರದು. ಸನ್ಯಾಸಿಯ ಬಾಯಲ್ಲಿ ಶಿಷ್ಯರಲ್ಲದವರಾದರೂ ಸಹ ವಿರೋಧಿಗಳು ಅಂತ ಬರಕೂಡದು-ಅದು ಸನ್ಯಾಸ. ಮೈಪೂರ್ತಿ ವಿಷಕಾರುವ ಕಾಳಿಂಗನಂತಿರುವ ತೊನೆಯಪ್ಪನನ್ನು ಇಲ್ಲೂ ನೀವು ಗುರುವೆಂದು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ ದೊರೆಗಳೇ.

ಶ್ರೀಧರ ಸ್ವಾಮಿಗಳು ಬದುಕಿನ ಎರಡು ಘಟನೆಗಳನ್ನು ಇಲ್ಲಿ ಹೇಳುವುದು ವಿಹಿತವಾಗುತ್ತದೆ. ಒಮ್ಮೆ ಭಾರತ ಮತ್ತು ಪಾಕಿಸ್ತಾನ ಯುದ್ಧ ಆರಂಭವಾದಾಗ ಯಾರೋ ಒಂದಷ್ಟು ಜನ ಭಾರತವೇ ಗೆಲ್ಲಬೇಕೆಂದು ಮಂತ್ರಾಕ್ಷತೆ ಬಯಸಿ ಶ್ರೀಧರರಲ್ಲಿಗೆ ಹೋದರಂತೆ. ಸಮಷ್ಟಿಯಲ್ಲಿ ಸನ್ಯಾಸಿಗಳಿಗೆ ಯಾರೂ ವಿರೋಧಿಗಳಿಲ್ಲ; ವಿರೋಧಿಸುವವರು ಅಜ್ಞಾನದಿಂದ ಹಾಗೆ ಮಾಡುತ್ತಾರೆ. ಯಾಕೆಂದರೆ ಯಾವ ವಿಷಯಗಳಿಗಾಗಿ ಅವರು ವಿರೋಧಿಸುತ್ತಾರೋ ಅದು ಯಾರದ್ದೂ ಅಲ್ಲ; ಭಗವಂತನದ್ದು.

’ಹಿಂದೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ, ನಾಳೆ ಇನ್ನಾರದೋ ಆಗಲಿಕ್ಕಿದೆ’ ಎಂಬ ಗೀತಾ ವಚನವನ್ನು ನೆನೆಪಿಸಿಕೊಳ್ಳಿ. ಹಿಂದೆ ನಮ್ಮಲ್ಲಿರದಿದ್ದ ಯಾವುದನ್ನೋ ನಾವಿಂದು ಪಡೆದಿರುತ್ತೇವೆ. ನಮ್ಮ ನಂತರ ನಮ್ಮ ಮುಂದಿನ ಪೀಳಿಗೆಗೆ ಅದು ಬೇಡವಾಗುತ್ತದೆ-ಇನ್ನಾರದೋ ಕೈಗೆ ಹೋಗುತ್ತದೆ. ಹಿಂದೆ ಯಾರದೋ ಆಗಿದ್ದ ಜಮೀನು ಇಂದು ಇನ್ನಾರಿಗೋ ಸಿಕ್ಕಿದೆ, ನಾಳೆ ಇನ್ನಾರದೋ ಆಗಲಿಕ್ಕಿದೆ.

ಶ್ರೀಧರ ಸ್ವಾಮಿಗಳು ಬಹಳ ಹೊತ್ತು ಮಂತ್ರಾಕ್ಷತೆಯನ್ನು ನೀಡಲಿಲ್ಲವಂತೆ. ಒಂದಷ್ಟು ಹೊತ್ತು ಧ್ಯಾನಕ್ಕೆ ತೊಡಗಿದರಂತೆ. ಧ್ಯಾನದಿಂದ ವಿಮುಖರಾದಾಗ ಹೇಳಿದರಂತೆ ” ನಾವು ಸನ್ಯಾಸಿಗಳು, ನಮಗೆ ಪ್ರಾಂತಭೇದವಿಲ್ಲ. ಹಿಂಸೆ ಆಗಕೂಡದು ಎಂಬುದೇ ನಮ್ಮ ಧ್ಯೇಯ. ಭಾರತ ಪಾಕಿಸ್ತಾನಗಳ ನಡುವಿನ ಕಲಹದಲ್ಲಿ ನೈತಿಕವಾಗಿ ಭಾರತ ಸರಿಯಿರುವುದರಿಂದ ಈ ಯುದ್ಧದಲ್ಲಿ ಭಾರತಕ್ಕೆ ಜಯವಾಗುತ್ತದೆ” ಎಂದರಂತೆ. ಅ ಯುದ್ಧದಲ್ಲಿ ಭಾರತಕ್ಕೆ ಜಯ ಲಭಿಸಿತು.

ಇನ್ನೊಮ್ಮೆ ಶಿವಮೊಗ್ಗದ ಬೀದಿಯಲ್ಲಿ ಅವರೊಮ್ಮೆ ಸಂಚಾರ ಹೊರಟಿದ್ದರಂತೆ. ಜೊತೆಗೆ ಒಂದಿಬ್ಬರು ಇದ್ದಿರಬಹುದಷ್ಟೆ. ರಸ್ತೆಬದಿಯಲ್ಲಿ ಒಂದೆಡೆ ಜನಜಂಗುಳಿಯೇ ಸೇರಿತ್ತಂತೆ. ಅಲ್ಲಿದ್ದವರನ್ನು ಕಾರಣ ಕೇಳಿದರೆ, “ಗುಂಪಿನ ಒಳಗೆ ಕೂತಿರುವ ವ್ಯಕ್ತಿಯ ಮೈಮೇಲೆ ಶ್ರೀಧರಸ್ವಾಮಿಗಳ ದರ್ಶನ ಬಂದಿದೆ” ಎಂದರಂತೆ. ಕೇಳಿದವರೂ ಶ್ರೀಧರರೇ, ಗುಂಪಿನ ನಡುವೆ ಜಾಗ ಮಾಡಿಕೊಂಡು ದರ್ಶನ ಬಂದ ವ್ಯಕ್ತಿಯನ್ನು ಸ್ವತಃ ಕಂಡವರೂ ಶ್ರೀಧರರೇ. ಆದರೆ ಶ್ರೀಧರ ಸ್ವಾಮಿಗಳೇ ಸ್ವತಃ ಅಲ್ಲಿದ್ದರೂ ಜನ ಅವರನ್ನು ನೋಡಲಿಲ್ಲ !! ಬದಲಾಗಿ ದರ್ಶನ ಬಂದಿದೆ ಎಂಬ ಢೋಂಗಿಯನ್ನು ನೋಡಿದರು.

ಅದನ್ನೆಲ್ಲ ನೋಡಿದರೂ ಶ್ರೀಧರ ಸ್ವಾಮಿಗಳು ಏನೂ ಅನ್ನಲಿಲ್ಲವಂತೆ. ಹೊಟ್ಟೆಪಾಡಿಗಾಗಿ ತಮ್ಮ ಹೆಸರನ್ನು ಹೇಳಿಕೊಂಡು ಬದುಕುತ್ತಿದ್ದಾನೆ ಎಂದುಕೊಂಡು ಸುಮ್ಮನಾದರಂತೆ. ನಮ್ಮ ತೊನೆಯಪ್ಪನವರೇನಾದರೂ ಆಗಿದ್ದರೆ ಅವನನ್ನು ಸ್ಥಳದಲ್ಲೇ ಗೂಂಡಾಗಳನ್ನು ಕಳಿಸಿ ಮುಗಿಸಿಬಿಡುತ್ತಿದ್ದರು! ಸನ್ಯಾಸಿಯ ಸಹನಶೀಲತೆಯನ್ನು ಇಲ್ಲಿಯೂ ಒರೆಗೆ ಹಚ್ಚಬಹುದು.

ತಲೆಯೂರಿನಲ್ಲಿ ಒಬ್ಬ ಸ್ವಾಮಿ ಸಂಚಿತ ಕರ್ಮ ವಶಾತ್ ಕಚ್ಚೆಹರುಕನಾಗಿ ಇದ್ದಬದ್ದದ್ದನ್ನೆಲ್ಲ ಅಡವಿಟ್ಟು, ಕಟ್ಟಿಕೊಂಡ ಮಠದ ಗೋಡೆಯ ಕಲ್ಲುಕಲ್ಲಿಗೂ ಲಕ್ಷಗಟ್ಟಲೆ ಸಾಲ ಎಂಬಷ್ಟು ಸಾಲ ಮಾಶಿದ್ದನಂತೆ. ಅದನ್ನು ತಿಳಿದ ತೊನೆಯಪ್ಪ ಸಾಲ ತೀರಿಸುವ ಆಫರ್ ಕೊಟ್ಟು ಸ್ವಾಮಿಗೆ ಛತ್ರಿ ತೋರಿಸಿ ಮಠವನ್ನು ಹೊಡೆದುಕೊಂಡದ್ದು ಈಗ ಹಳೇ ಕತೆ. ಮಠವನ್ನು ತೆಗೆದುಕೊಂಡ ಮರುದಿನವೇ ಪಂಚಗವ್ಯಾದಿ ಶುದ್ಧೀಕರಣ ಕಾರ್ಯಗಳು ನಡೆದವಂತೆ. ಅಂದರೆ ತಾನು ಏಕಾಂತ ಮಾಡೋ ಮೊದಲು ಮೊದಲಿದ್ದವ ಗಲೀಜು ಮಾಡಿದ ಕೋಣೆಗಳನ್ನೆಲ್ಲ ಸ್ವಚ್ಛಮಾಶಿಕೊಂಡದ್ದಷ್ಟೇ ಬದಲಾವಣೆಯಲ್ಲವೇ?

ದೇವಿ ಭಾಗವತದಂತೆ ಮುನ್ನಾಭಾಯಿ ಮಠದ ಚರಿತ್ರೆ ಇಷ್ಟಕ್ಕೇ ಮುಗಿಯೋದಿಲ್ಲ. ಒಂದೇ ಸಲ ಉಂಡರೆ ಅಜೀರ್ಣವಾಗಬಹುದಲ್ಲವೇ? ಮೊದಲೇ ಅಲ್ಲೆಲ್ಲ ಬೇಸಿಗೆ. ನೀರು ಕುಡಿದಷ್ಟೂ ಸಾಕಾಗ. ಹಾಗಾದರೆ ಮುಂದಿನ ಅಧ್ಯಾಯವೋ ಅಧ್ಯಾಯಗಳೋ ಅದನ್ನು ನಿಧಾನವಾಗಿ ನೋಡೋಣವಲ್ಲವೇ?

Thumari Ramachandra

source: https://www.facebook.com/groups/1499395003680065/permalink/1763962610556635/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s