ತುಳಸೀ ದಳವೊಂದು ನಕ್ಕಿತು ತಾನಿಂದು ಸತ್ಯನಾರಾಯಣನ ಸೇರುವೆನೆಂದು

ತುಳಸೀ ದಳವೊಂದು ನಕ್ಕಿತು ತಾನಿಂದು ಸತ್ಯನಾರಾಯಣನ ಸೇರುವೆನೆಂದು

ಸ್ವಸ್ಥ ಸಮಾಜದಲ್ಲಿ ದಶಕಗಳ ಹಿಂದೆ ಐಡೆಂಟಿಟಿ ಕ್ರೈಸಿಸ್ ಅಷ್ಟಾಗಿ ಇರಲಿಲ್ಲ. ಆ ಕಾಲವೇ ಹಾಗಿತ್ತು. ಕುಟುಂಬದಲ್ಲಿ ಎಂಟೋ ಹತ್ತೋ ಮಕ್ಕಳು. ಹಿರಿಯ ಮಕ್ಕಳಿಗೂ ಅಪ್ಪ-ಅಮ್ಮಂದಿರಿಗೂ ಹದಿನೈದು ಹದಿನಾರು ವರ್ಷಗಳ ಅಂತರವಷ್ಟೆ. ನಂತರ ಜನಿಸುವುದು ಹೆಚ್ಚುಕಡಿಮೆ ವರ್ಷಕ್ಕೊಬ್ಬರಂತೆ ಸಾಲಾಗಿ.

ಅಮ್ಮ ದೊಡ್ಡ ಏದುಸಿರು ಬಿಡುವುದರೊಳಗೆ ಇನ್ನೊಂದರ ಜನನ ಆಗುತ್ತಿತ್ತು ಎನ್ನಬೇಕು. ಹಿರಿಯ ಮಕ್ಕಳನ್ನು ನೋಡಿ ಕಿರಿಯ ಮಕ್ಕಳು ಅವರನ್ನು ಅನುಸರಿಸುತ್ತಿದ್ದವು. ಇಂದಿನ ರೀತಿ ಊರೆಲ್ಲ ಸುತ್ತಿಸುತ್ತ ಊಟ ಮಾಡಿಸುವ ರಿವಾಜು ಇರಲೇ ಇಲ್ಲ; ಇದ್ದರೆ ಅಮ್ಮ ಬದುಕುವುದೂ ಸಾಧ್ಯವಿರಲಿಲ್ಲ. ಅರಳೀಕಟ್ಟೆಯಡೆಗೆ ಆದಾವುದೋ ಹಳೆಯ ಮಾವಿನ ಮರದಡಿಗೆ ಬೀಳುವ ಹುಳಿ-ಸಿಹಿ ಮಿಶ್ರಿತ ಗಡ್ಡದ ಮಾವಿನ ಹಣ್ಣುಗಳನ್ನು ಬೆಳ್ಳಂಬೆಳಿಗ್ಗೆಯೇ ಹೋಗಿ ಹೆಕ್ಕಿ ತರುತ್ತಿದ್ದವು-ಆ ಮಕ್ಕಳು. ಗಡ್ಡದ ಮಾವಿನ ಹಣ್ಣನ್ನು ಕೊಟ್ಟರೆ ಗಂಟೆಗಟ್ಟಲೆ ಅದನ್ನೇ ಚೀಪುತ್ತ ಅದರಲ್ಲೇ ಖುಷಿಗೊಳ್ಳುತ್ತಿದ್ದವು-ಆ ಮಕ್ಕಳು.

ಕಾಲ ಸರಿದಂತೆಲ್ಲ ಹಳ್ಳಿಗಳ ಆ ವಾತಾವರಣ ಬದಲಾಯಿತು. ಹೆಚ್ಚಿಗೆ ಮಕ್ಕಳಿದ್ದರೆ ಅವುಗಳನ್ನು ಬೆಳೆಸುವುದು ಕಷ್ಟವಾಯಿತು. ಓದಿಸುವುದಕ್ಕೆ, ಬಟ್ಟೆಬರೆಗೆ, ಔಷಧಗಳಿಗೆ ಎಲ್ಲದಕ್ಕೂ ಖರ್ಚಿಗೆ ಬೇಕಲ್ಲ? ಇರುವ ಕೃಷಿಭೂಮಿಯಲ್ಲಿ ಪಾಲು-ಪಟ್ಟಿ ಹಿಸ್ಸೆಗಳಾಗಿ ಜಮೀನು ಚಿಕ್ಕದಾಗುತ್ತ ಹೋಯಿತು; ಕೆಲವು ಜಮೀನುಗಳು ಕೈತಪ್ಪಿ ಹೋದವು.

ಕಷ್ಟದ ದಿನಗಳು ಬೇಡವೆಂದರಿತ ಜನ ಚಿಕ್ಕ ಕುಟುಂಬ ಮಾಡಿಕೊಳ್ಳುವುದಕ್ಕೆ ಮುಂದಾದರು, ಮಕ್ಕಳ ಸಂಖ್ಯೆ ಇಳಿಯಿತು. ಅವಿಭಕ್ತ ಕುಟುಂಬಗಳು ಮರೆಯಾಗಿ ವಿಭಕ್ತ ಕುಟುಂಬಗಳಾದವು. ಹೊರ ಪ್ರಪಂಚದ ಸಂಪರ್ಕ ಅಧಿಕಗೊಂಡಂತೆ ಅಂತಸ್ತಿನ ಚಪಲ ಹೆಚ್ಚುತ್ತ ಹೋಯಿತು. ಉಳ್ಳವನು ಕೊಳ್ಳೋದನ್ನು ಇಲ್ಲದವನು ಗುಟ್ಟಿನಲ್ಲಿ ಸಾಲದಲ್ಲಾದರೂ ಕೊಂಡು ತಾನೇನೂ ಕಡಿಮೆಯಿಲ್ಲ ಎಂದು ತೋರಿಸಿಕೊಳ್ಳುವ ಹಪಾಹಪಿ ಬೆಳೆಯತೊಡಗಿತು.

ಪಡೆದ ಭಾಗ್ಯ ಇದ್ದರೆ ಶ್ರೀಮಂತಿಕೆ, ಅನುಕೂಲ ಎಲ್ಲವೂ ಬರುತ್ತದೆ. ಅದಕ್ಕಾಗಿ ದೇವಸ್ಥಾನಗಳು ಮತ್ತು ಗುರುಮಠಗಳನ್ನು ಸುತ್ತಿ ಸೇವೆ ಮಾಡೋದನ್ನು ಮರೆಯಬಾರದು ಎಂಬುದು ಎಲ್ಲರ ಮನಸ್ಸಿನಲ್ಲೂ ಇತ್ತು. ಅದರಲ್ಲಂತೂ ಗುರುಮಠವೆಂದರೆ ಪೀಂಥ, ಪೀಠದ ಮಹಿಮೆ, ಶಾಪ, ಪವಾಡ, ಸರ್ವನಾಶ, ಬಹಿಷ್ಕಾರ ಇತ್ಯಾದಿ ಹಲವು ಪದಗಳಿಂದ ಬೆರಳು ಮಾಡಿ ತೋರಿಸಲ್ಪಡುತ್ತಿತ್ತು.

ಇದೆಲ್ಲ ಹಿಂದಿನ ಕತೆಯಾಯ್ತು. ತೊಂಬತ್ತರ ದಶಕದಲ್ಲಿ ಸಮಾಜದ ಮಠಕ್ಕೆ ವಟುವನ್ನು ಆಯ್ಕೆ ಮಾಡಬೇಕಾಗಿ ಬಂತು. ಆಯ್ಕೆಯಲ್ಲಿ ನಡೆದ ಅಚಾತುರ್ಯವೇ ಇಂದಿನ ಎಲ್ಲ ಅವಾಂತರಗಳಿಗೆ ಮೂಲ ಕಾರಣವಾಯ್ತು. ಪೀಠಕ್ಕೆ ಬಂದ ಶ್ರಾದ್ಧ ಭಟ್ಟನ ಮಗ ಒಂದೆರಡು ವರ್ಷ ಮಠದ ಬ್ರಾಂಚುಗಳನ್ನೆಲ್ಲ ಸುತ್ತಿ ಜನರನ್ನು ಅಳೆದುಕೊಂಡ; ಅಲ್ಲಲ್ಲಿ ಕಚ್ಚೆಹರುಕು ಶಿಷ್ಯರೂ ಇರುವುದನ್ನು ಕಂಡು “ಪರವಾಗಿಲ್ಲ ನಮಗೂ ಬೆಂಬಲ ಇದೆ” ಎಂದು ಮನದಲ್ಲೇ ಅಂದುಕೊಂಡ.

ಭಕ್ತಿಪರಾಕಾಷ್ಠೆಯಲ್ಲಿ ಮಠ ಸುತ್ತುವ ಹಲವರಿಗೆ ಮಠದ ಮಾಣಿ ಏನು ಮಾಡುತ್ತಿದ್ದಾನೆ ಎಂದು ನೋದುವುದಕ್ಕೂ ವ್ಯವಧಾನವಿರಲಿಲ್ಲ. ವಿಶೇಷ ಕಾರ್ಯಕ್ರಮಗಳಲ್ಲಿ ಅಪರೂಪಕ್ಕೆ ಕಂಡಾಗ ’ಮಹಾಮುನಿಗಳು’ ತಪೋಧನರ ಪೋಸು ಕೊಟ್ಟು, ಸರದಿಯಲ್ಲಿ ಬರುವವರಿಗೆ ಕೈಗೆ ಬಣ್ಣದ ಅಕ್ಕಿಹಾಕಿ ಕಳಿಸುತ್ತಿದ್ದರು. ಮಠದ ಗಿಂಡಿಗಳ ದೋಸ್ತಿ ಮಾಡಿಕೊಂಡು, ಗುರುಗಳನ್ನು ಖಾಸಗಿಯಾಗಿ ಕಂಡು, ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಕ್ರಮ ಮೊದಲಿಂದಲೂ ಇದ್ದಿತ್ತು; ಅದು ಈಗ ಚಿತ್ರ ವಿಚಿತ್ರ ತಿರುವುಗಳನ್ನು ಪಡೆದುಕೊಂಡಿತು.

ಮಠಕ್ಕೆ ಬರುವ ಭಕ್ತರಲ್ಲೂ ಹಲವರಲ್ಲಿ ಉಂಡುಟ್ಟು ಸುಖವಾಗಿರುವ ಮಂದಿ ಇದ್ದರು. ನೌಕರಿ-ಮಧ್ಯಮವರ್ಗದ ಜನರೊಗೆ ಸಂಬಳ ಬರುತ್ತಿತ್ತಾದರೂ ತಮ್ಮ ಸಮಾಜದಲ್ಲಿ ತಮಗೊಂದು ಗೌರವ ಸಿಗಬೇಕೆಂಬ ಬಯಕೆ ಹಲವರಲ್ಲಿತ್ತು. ಈ ಐಡೆಂಟಿಟಿ ಕ್ರೈಸಿಸ್ ಅನ್ನು ಶ್ರಾದ್ಧಭಟ್ಟನ ಪಿಂಡ ಬಹಳವಾಗಿ ಗಮನಿಸಿತ್ತು. ಗೌರವ ಬಯಸುವ ಮಂದಿಗೆ ಮಠದ ಕೆಲಸಕಾರ್ಯಗಳಲ್ಲಿ ಕೆಲವು ಹುದ್ದೆಗಳನ್ನು ನೀಡಿ ಅವರಿಗೆ ಗೌರವ ಕೊಟ್ಟಂತೆ ಮಾಡಿದ.

ಮಠದ ಕೆಲಸ ಕಾರ್ಯಗಳಿಗಾಗಿ ಬಹಳ ಸಂಪರ್ಕ ಇರಿಸಿಕೊಂಡು ಸತತವಾಗಿ ಮಠ ಸುತ್ತುವ ಕುಟುಂಬಿಕರಲ್ಲಿ ಯಾರು ತಾನು ಹೇಳಿದ್ದಕ್ಕೆಲ್ಲ ಬಗ್ಗುತ್ತಾರೆಂದು ಯೋಚಿಸಿದ. ಹೊರಮುಖದಲ್ಲಿ ಕುಲಪತ್ ಬಾವಯ್ಯ ಹೊರಡಿಸಿದ ಹಲವು ಧೂರ್ತ ಯೋಜನೆಗಳಿಗೆ ಭಕ್ತ ಜನ ಅರಿವಿಲ್ಲದೆ ಸ್ಪಂದಿಸುತ್ತಲೇ ನಡೆದರು. ಬರುವ ಆದಾಯಗಳ ಸಂಗ್ರಹಣೆ ಮತ್ತು ಅಷ್ಟಿಷ್ಟು ಕೆಲಸಗಳನ್ನು ಮಾಡಿದಂತೆ ತೋರಿಸುವುದಕ್ಕೆ, ಗೌರವ ಬಯಸಿ ಪುಕ್ಕಟೆಯಾಗಿ ಕೆಲಸಮಾಡಲು ಒಪ್ಪಿಕೊಂಡ ಐಡೆಂಟಿಟಿ ಬಯಸುವ ಜನರನ್ನು ಬಳಸಿಕೊಳ್ಳಲಾಯಿತು.

ಅಂತಹ ಹಲವು ಕುಟುಂಬಗಳಲ್ಲಿ ಗಂಡ ಮಠದಲ್ಲೇ ಬಹಳ ಹೊತ್ತು ಕಳೆಯುವಾಗ ಹೆಂಡತಿಗೂ ಕುತೂಹಲ ಹುಟ್ಟಿತು. ಶ್ರಾದ್ಧಭಟ್ಟನ ಪಿಂಡ ಮತ್ತವನ ಕುಳ್ಳ ಬಾವಯ್ಯ ಮೊದಲೇ ಯೋಚಿಸಿದಂತೆ ಗಂಡಂದಿರ ಜೊತೆಗೆ ಅವರವರ ಹೆಂಡಂತಿಯರೂ ಆಶೀರ್ವಾದ ಬಯಸಿ ಬಂದರು. ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗುವ ಸನ್ನಿವೇಶಕ್ಕೆ ಸರಿಯಾಗಿ ಮಠದ ಮಾಣಿ ಮತ್ತವನ ಬಾವಯ್ಯ ’ಮಹಿಳಾ ಸಬಲೆಕರಣ’ಕ್ಕೆ ತೊಡಗಿದರು. ಬಾಯಲ್ಲಿ “ಮಾತೆಯರು”, “ಮಾತೆಯರು” ಎನ್ನುತ್ತ ಸಮಯ ಸಿಕ್ಕಾಗಲೆಲ್ಲ ಅವರನ್ನು ಪ್ರತ್ಯೇಕವಾಗಿ ಮಾತನಾಡಿಸತೊಡಗಿದರು.

ಹಿಂದೆಂದೋ ಯಾವುದೋ ಭಟ್ಟನ ಕಾಲದಲ್ಲಿ ಮಠದ ಗುರುವಿಗೆ ಇಟ್ಟ ಹೆಸರು “ಸಂಸ್ಥಾನ” ಅಂತ. ಅಂದರೆ ಗುರುವೇ ಒಂದು ಚರ ಸಂಸ್ಥಾನ ಇದ್ದಂತೆ ಎಂಬುದು ಅದರ ದ್ಯೋತಕ. ಆ ಜಾಡಿನಲ್ಲಿ ಬಹಳ ಜನ ತೂನೆಯಪ್ಪನನ್ನೂ “ಸಂಸ್ಥಾನ” ಎಂದೇ ಕರೆದರು. “ಸಂಸ್ಥಾನ ನಮಗೆ ಬಾಳಾ ಕ್ಲೋಸು” ಎಂದುಕೊಳ್ಳುವುದು ಅನೇಕರ ಅಗ್ಗಳಿಕೆಯಾಯಿತು.

ಮ್ಯಾಡ್ ಕೌ ಡಿಸೀಸ್ ರೀತಿಯಲ್ಲಿ “ಸಂಸ್ಥಾನ ನಮಗೂ ಅಗ್ದಿ ಕ್ಲೋಸು” ಎನಿಸಿಕೊಳ್ಳಲು ಹಲವರು ಹವಣಿಸಿದರು. ಹಲವರ ಬಾಯಲ್ಲಿ “ಸಂಸ್ಥಾನ ನಮಗೆ ಬಹಳ ಕ್ಲೋಸು” ಎಂಡು ಹೇಳಿಸಿಕೊಳ್ಳುವ ಹಂತದಲ್ಲಿ, ಗಂಡ ಮಠದ ಹೊರಗೆಲಸಗಳಲ್ಲಿ ಬ್ಯೂಸಿ ಇದ್ದಾಗ, ತೊನೆಯಪ್ಪ ಮಹಿಳೆಯರತ್ತ[ಅಂತಹ ಗಂಡಂದಿರ ಹೆಂಡಿರು ಮತ್ತು ಹೆಣ್ಣುಮಕ್ಕಳ ಕಡೆಗೆ] ಸಂಪೂರ್ಣ ತೊನೆದ; ಹಲ್ಲು ಕಿಸಿದ. ಹಲವರ ಬೆನ್ನು ತಟ್ಟಿದ, ಕೆನ್ನೆ ತಟ್ಟಿದ, ಗಲ್ಲ ಹಿಡಿದ, ಸರ ಹಿಡಿದೆತ್ತಿ “ಚೆನ್ನಾಗಿದೆ” ಅಂದ.

ಒಂದರ್ಥದಲ್ಲಿ ದುರ್ದೈವವೋ ಎಂಬಂತೆ ಅದೇ ಸಮಯಕ್ಕೆ ಸರಿಯಾಗಿ ಮೊಬೈಲ್ ಬಳಕೆಗೆ ಬಂತು. ನಂತರ ಅಂತರ್ಜಾಲವೂ ಸಹ. ಇವೆರಡನ್ನೂ ಬಳಸಿಕೊಂಡ ತೊನೆಯಪ್ಪ ಮಹಿಳೆಯರೊಡನೆ ಅತಿಯಾಗಿ ಸಮಯ ಕಳೆಯ ತೊಡಗಿದ. ಸಾಮಾನ್ಯ ಹದಿಹರೆಯದ ಹುಡುಗ ಚೆಲ್ಲಾಟ ಆಡುವಂತೆ ಅವರೊಂದಿಗೆ ಒಳಗೊಳಗೇ ಚಕ್ಕಂದ ಆಡಲು ಆರಂಭಿಸಿದ. ಮೊದಮೊದಲು ಸಂಭಾಷಣೆ ಮತ್ತು ಪಕ್ಕದಲ್ಲಿ ನಿಂತುಕೊಂಡು ಫೋಟೋ ತೆಗೆಸಿಕೊಳ್ಳುವಿಕೆ ಇಂತದ್ದಕ್ಕೆ ಮಾತ್ರ ಅವಕಾಶವಾಗುತ್ತಿದ್ದು ಅದರ ವಿಸ್ತರಣೆಗೆ ಬೇಕಾಗಿ ಕನ್ಯಾಸಂಸ್ಕಾರ ಮತ್ತು ಮಹಿಳಾ ಪರಿಷತ್ತುಗಳು ಮೊದಲಾದವನ್ನೆಲ್ಲ ಸೃಷ್ಟಿಸಿದ.

ಮಠದಲ್ಲಿ ಆಗಾಗ ಲಲಿತಾ ಸಹಸ್ರನಾಮ-ಕುಂಕುಮ ಪೂಜೆಯ ನೆಪದಲ್ಲಿ ಮಹಿಳೆಯರು ಸೇರಿದಾಗ ಅವರಲ್ಲೇ ಕೆಲವರು “ಸಂಸ್ಥಾನ ನನಗೆ ತೀರಾ ಕ್ಲೋಸು” ಎನ್ನಿಸಿಕೊಳ್ಳಲು ಮುಂದಡಿ ಇಟ್ಟರು. ಐಡೆಂಟಿಟಿ ಕ್ರಿಸಿಸ್ ತಂದ ಹುಚ್ಚು ಹಣೆಬರಹವೇ ಹಾಗೆ ನೋಡಿ. ತೀರಾ ಖಾಸಗಿಯಾಗಿ ತನಗೆ ಹತ್ತಿರವಾಗತೊಡಗಿದ ಮಹಿಳೆಯರ ಹೇಗಲಮೇಲೆ ಕೈ ಹಾಕತೊಡಗಿದ ತೊನೆಯಪ್ಪ ಏಕಾಂತ ಸೇವೆಗೆ ಚಾಲನೆ ಕೊಟ್ಟ.

ಗುರುಸೇವಾ ದುರಂಧರರಾಗಿ ಸಮಾಜದಲ್ಲಿ ಮಿಂಚ ಬಯಸಿದ ಗಂಡಂದಿರಿಗೆ ತಮ್ಮ ಹೆಂಡತಿ ಮತ್ತು ಹರೆಯದ ಹೆಣ್ಣುಮಕ್ಕಳ ಬಗ್ಗೆ ಗಮನವಿರಲಿಲ್ಲ. ಮಠದ ವ್ಯವಸ್ಥೆಯಲ್ಲಿ ಅವರೆಲ್ಲ ಗಾಡ್ರೆಜ್ ಸೇಫ್ ಲಾಕರ್ ನಲ್ಲಿದ್ದಂತೆ ಹಾಯಾಗಿರ್ತಾರೆ ಅಂದುಕೊಂಡ ಅವರೆಲ್ಲ ಹೊರಗೆಲಸಗಳಲ್ಲಿ ಎಲ್ಲೆಲ್ಲೋ ಬ್ಯೂಸಿ ಇರುವಾಗ ಕಳ್ಳಯ್ಯ-ಕುಳ್ಳಯ್ಯ ಒಳಗೊಳಗೇ ನಕ್ಕರು! ತಮ್ಮ ಆಸೆ ಫಲಿಸುತ್ತಿರುವ ಸುಗ್ಗಿಹಬ್ಬದಲ್ಲಿ ಅವರು ’ಮಹಿಳಾ ಸಬಲೀಕರಣ’ಕ್ಕೆ ಇನ್ನಷ್ಟು ಯೋಜನೆಗಳನ್ನು ಹಾಕಿಕೊಂಡರು!!

ಭಕ್ತಿಪರಾಕಾಷ್ಠೆ ಹೇಗಿತ್ತೆಂದರೆ ಮಹಿಳೆಯರಿಗಾಗಲಿ ಅಥವಾ ಅವರ ಗಂಡಂದಿರಿಗಾಗಲಿ ಕಳ್ಳಯ್ಯ-ಕುಳ್ಳಯ್ಯರ ನಡತೆಯಲ್ಲಿ ತಪ್ಪುಗಳಿರುವುದು ಕಾಣಲೇ ಇಲ್ಲ. “ಸಂಸ್ಥಾನ” ಎಲ್ಲಿಗೇ ಹೋದರೂ ಅಲ್ಲಿ ಒಂದಷ್ಟು ಮಹಿಳೆಯರು ನಾ ಮುಂದು ತಾ ಮುಂದು ಎಂದು ಮುತ್ತಿಕೊಳ್ಳುವಂತೆ ಮಾಡಿದ ಐಡೆಂಟಿಟಿ ಕ್ರೈಸಿಸ್ ಗೆ ಬಲುದೊಡ್ಡ ನಮಸ್ಕಾರ. ಹಾಗೆ ತನ್ನನ್ನು ಅತಿಯಾಗಿ ಮುತ್ತುವ ಮಹಿಳೆರಲ್ಲಿ ಒಬ್ಬೊಬರನ್ನಾಗಿ ಎಲ್ಲರನ್ನೂ ಏಕಾಂತಕ್ಕೆ ಕರೆದು ಭೋಗಿಸಿದ ಈ ತೊನೆಯಪ್ಪ.

ಯತಿ ಎಂದರೆ ಯಾರು ಯತಿ ಧರ್ಮ ಅಂದರೆ ಏನು ಎಂಬುದು ಹಲವು ಮಹಿಳೆಯರಿಗೆ ತಿಳಿದಿರಲಿಲ್ಲ. ಕಾವಿ ತೊಟ್ಟವರು ಸಂಸಾರಿಗಳಿಂದಲೇ ದೂರವಿರಬೇಕೆಂಬ ಉದ್ದೇಶದಿಂದ ಹಿಂದೆಲ್ಲ ಕಾಡನ್ನು ಸೇರುತ್ತಿದ್ದರು. ಯಾವ ಗಳಿಗೆಯಲ್ಲೂ ಸುಖದ ಬಯಕೆ ತಮ್ಮನ್ನು ಸಂಸಾರದೆಡೆಗೆ ಸೆಳೆಯಬಹುದು ಎಂಬುದು ಅದಕ್ಕೆ ಕಾರಣ, ಮಠ ಎಂಬ ವ್ಯವಸ್ಥೆ ರೂಪಿತವಾದಮೇಲೂ ಸಹ ಹೆಂಗಸರು ಮಾಡಿದ ಅಡುಗೆಯನ್ನು ಸನ್ಯಾಸಿ ಊಟಮಾಡಬಾರದು ಎನ್ನುವುದಕ್ಕೆ ಕಾರಣವೇನೆಂದರೆ ಹೆಣ್ಣಿನ ಸಂಪರ್ಕ ಅಲ್ಲೆಲ್ಲೂ ಇರಬಾರದು ಎಂಬುದಕ್ಕೆ.

ಈ ಲೋಕದ ವ್ಯವಹಾರವೇ ಹಾಗಿದೆ-ಗಂಡಿಗೆ ಹೆಣ್ಣು ಮತ್ತು ಹೆಣ್ಣಿಗೆ ಗಂಡು ಪ್ರಾಣಿಜನ್ಯ ಮೂಲ ಸ್ವಭಾವದಿಂದ ಆಕರ್ಷಿತರಾಗುತ್ತಾರೆ. ಅದರಲ್ಲೂ ಗಂಡಿಗೆ ಆ ವಿಷಯದಲ್ಲಿ ತಾಳ್ಮೆ ಬಹಳ ಕಡಿಮೆ; ಟೆಮ್ಟೇಶನ್ [ಉದ್ರೇಕಗೊಳ್ಳುವಿಕೆ] ಅತಿ ಶೀಘ್ರದಲ್ಲಿ ನಡೆಯುತ್ತದೆ. ಸುಂದರವಾದ ಸ್ತ್ರೀಯನ್ನು ಕಂಡ ಹರೆಯದ [ಅಥವಾ ಹರೆಯ ಮೀರಿದ]ಯಾವುದೇ ಗಂಡಸಿನ ಮನಸ್ಸಿನಲ್ಲೂ ಸಹಜವಾಗಿ ಕೂಡುವ ಕಾಮನೆಗಳೇ ಮೊದಲು ಬರುತ್ತದೆ ಎನ್ನುತ್ತದೆ ವಿಜ್ಞಾನ!

ಮಮತಾಮಯಿಯರಾದ ಮಹಿಳೆಯರು ಅಷ್ಟು ಬೇಗ ಉದ್ರೇಕಕ್ಕೆ ಒಳಗಾಗುವುದಿಲ್ಲ. ಒಮ್ಮೆ ಉದ್ರೇಕಗೊಂಡರೆ ಉದ್ರೇಕ ಕಡಿಮೆಯಾಗಲೂ ಅವರಲ್ಲಿ ಸಮಯ ಹಿಡಿಯುತ್ತದೆ. ಮೇಲಾಗಿ ಅವರು ಹಡೆಯುವ ದೇಹವ್ಯವಸ್ಥೆ ಹೊಂದಿದವರು. ಮಹಿಳೆ ಎಂದರೆ ಭೂಮಿಯಂತೆ; ಪುರುಷನ ಬೀಜ ಅಲ್ಲಿ ಮೊಳೆಯುತ್ತದೆ. ತನ್ನಲ್ಲಿ ಬೆಳೆದ ಎಲ್ಲವನ್ನೂ ಎಲ್ಲರನ್ನೂ ಭೂತಾಯಿ ಕ್ಷಮಯಾಧರಿತ್ರಿಯಾಗಿ ಸಹಿಸಿಕೊಂಡಿಲ್ಲವೇ? ಮಹಿಳೆಗೂ ಹಾಗೆ-ಸೆಂಟಿಮೆಂಟ್ಸ್ ಜಾಸ್ತಿ.

ಮಹಿಳೆಯರ ಅಂಗಸೌಷ್ಠವಗಳನ್ನು ನೋಡಿ ಅನಂದಿಸದ ಗಂದೇ ಇಲ್ಲವಂತೆ. “ಬಹಳ ಚೆನ್ನಾಗಿದ್ದೀರಿ” ಎಂದು ಕುರೂಪಿ ಮಹಿಳೆಗೆ ಯಾರೋ ಪುರುಷರು ಹೇಳಿದರೂ ಆಕೆಯೂ ಸಹ ಪುಳಕಗೊಳ್ಳುವಳಂತೆ. ಚೆನ್ನಾಗಿದ್ದೇನೆ-ಸುಂದರಳಾಗಿದ್ದೇಬೆ ಎನಿಸಿಕೊಳ್ಳುವ ಬಯಕೆ ಎಲ್ಲಾ ಮಹಿಳೆಯರದ್ದು; ಹಾಗಾಗಿಯೇ ಈ ಫೇಸ್ ಬುಕ್ ವಾಟ್ಸಾಪ್ ಗಳಲ್ಲಿ ಎಲ್ಲಿ ನೋಡಿದರೂ ಅವರ ಫೋಟೋಗಳದ್ದೇ ಕಾರುಬಾರು.

ಯತಿಯಾದವ ಮನೋನಿಗ್ರಹ ಉಳಿಸಿಕೊಳ್ಳುವ ಸಲುವಾಗಿ ಮಹಿಳೆಯ ಚಿತ್ರ, ರೇಖಾಚಿತ್ರವನ್ನೂ ಸಹ ಆಸಕ್ತಿಯಿಂದ ನೋಡಲು ಮುಂದಾಗಬಾರದು ಎನ್ನುತ್ತದೆ-ಶಾಸ್ತ್ರ. ತೊನೆಯಪ್ಪ ಮಹಾಮುನಿಗಳು ಅಂತರ್ಜಾಲದಲ್ಲಿ ಮಹಿಳೆಯರ ಫೋಟೋ ಅಷ್ಟೇ ಅಲ್ಲ, ಸತತವಾಗಿ ನೀಲಿ ಚಿತ್ರಗಳನ್ನು ನೋಡುತ್ತಿದ್ದರು. ಮಹಿಳೆಯರಿಲ್ಲದ ಏಕಾಂತ ಸಮಯದಲ್ಲಿ ಅದೇ ಧ್ಯಾನ, ಅದೇ ನಿತ್ಯಾನುಷ್ಠಾನ. ಹೀಗಾಗಿ ತೊನೆಯಪ್ಪನವರಿಗೆ ಕುಗ್ರಾಮದ ಯಾವುದೋ ಮನೆಯಲ್ಲಿ ಭಿಕ್ಷೆ ಇದ್ದರೂ ಅಲ್ಲಿ ಅಂತರ್ಜಾಲದ ವ್ಯವಸ್ಥೆ, ಮಒಬೈಲ್ ವ್ಯವಸ್ಥೆ ಇರಲೇಬೇಕಾಗಿತ್ತು! “ಸಂಸ್ಥಾನ” ಏನು ಮಾಡ್ತಾರೆ ಎಂದರಿಯದ ಬಕರಾ ಭಕ್ತರು ಮಠದ ಬಹುದೊಡ್ಡ ವ್ಯವಹಾರಗಳಿಗೆ ಅದೆಲ್ಲ ಬೇಕೇ ಬೇಕು ಅಂದುಕೊಳ್ಳುತ್ತಿದ್ದರು.

’ಮಹಾಮುನಿ’ಗಳ ಸೇವೆಗೆ ನಿಂತ ಮಹಿಳೆಯರಿಗಾಗಲಿ ಮತ್ತು ಅವರೆಲ್ಲರ ಗಂಡಂದಿರಿಗಾಗಲಿ ತಾವೆಲ್ಲಿ ತಾಳ ತಪ್ಪುತ್ತಿದ್ದೇವೆ ಎಂಬುದರ ಅರಿವಿರಲಿಲ್ಲ. ಸರಿರಾತ್ರಿಯ ವರೆಗೂ ಮಠದಲ್ಲಿ ಮೀಟಿಂಗ್ ನಡೆಸುವ ಪದ್ಧತಿಯನ್ನು ಕಳ್ಳಯ್ಯ-ಕುಳ್ಳಯ್ಯ ಜಾರಿಗೆ ತಂದಿದ್ದರು. ಹೊರಗಡೆ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ನಾನಾ ಪ್ರಮುಖ ಮತ್ತು ಉಪ ಸಮಿತಿಗಳು ಸಭೇ ನಡೆಸುತ್ತಿದ್ದರೆ ಮಹಾಮುನಿಗಳು ಅದೇ ಸಮಯದಲ್ಲಿ ಏಕಾಂತ ನಡೆಸುತ್ತಿದ್ದರು!

ರುಳಸೀದಳವೊಂದು ದೇವ ಸತ್ಯನಾರಾಯಣನ ಪಾದ ಸೇರುತ್ತೇನೆ ಇಂದು ಎಂದುಕೊಂಡು ಗರ್ವದಿಂದ ನಕ್ಕಿತಂತೆ. ಅದೇ ಪರಿಯಲ್ಲಿ ಏಕಾಂತದಲ್ಲಿ ಎಲ್ಲವನ್ನೂ ತೊನೆಯಪ್ಪನಿಗೆ ಸಮರ್ಪಿಸಿಕೊಂಡವರು ಇಂತಹ ಮಹಿಳೆಯರು. ಹಾಗೆ ಮಾಡಬಾರದು ಎಂಬ ಅರಿವಿದ್ದರೂ ತೊನೆಯಪ್ಪ ನೀಡಿದ ಪ್ರಸಾದ ತಿಂದು ಗುಂಗಿನಲ್ಲಿ ನೆಶೆದಳೆಯುತ್ತಿದ್ದರು. ಚಂದ್ರನಾಡ್ಯುಜ್ಜೇಶ್ವರರು ಆ ಸಮಯದಲ್ಲಿ ಅವರನ್ನು ವಿವಸ್ತ್ರಗೊಳಿಸಿ ಚಂದ್ರನಾಡಿಯ ಪೂಜೆಯನ್ನು ಚಂದ್ರಮೌಳೀಶ್ವರನ ಪೂಜೆಗಿಂತ ಹೆಚ್ಚು ನಡೆಸುತ್ತಿದ್ದರು!

ಆಣೆ ಪ್ರಮಾಣಗಳ ಸರಹದ್ದುಗಳು, ಗುರುಶಾಪ-ಕುಟುಂಬ ಸರ್ವನಾಶ ಎಂಬ ಭಯವಿಹ್ವಲತೆಗಳು, ಹೇಳಿದರೆ ಕೌಟುಂಬಿಕ ಅಭದ್ರತೆ-ಸಾಮಾಜಿಕ ಅಭದ್ರತೆ ಇವೆಲ್ಲವುಗಳ ಫಲವಾಗಿ ಯಾವೊಬ್ಬ ಮಹಿಳೆಯೂ ಚಕಾರವೆತ್ತಲಿಲ್ಲ. ಅದು ಸಹಜ ಸೇವೆಯೆಂಬಂತೆಯೂ ತನಗೂ ಮತ್ತು “ಸಂಸ್ಥಾನ”ಕ್ಕೂ ಮಾತ್ರ ಗೊತ್ತಿದೆ ಎಂಬಂತೆ ಗೌಪ್ಯವಾಗಿದ್ದುಬಿಟ್ಟರು. ತೊನೆಯಪ್ಪ ಹೋದಲ್ಲೆಲ್ಲ ಜೈಕಾರ ಹಾಕುತ್ತಲೇ ಹೋದರು.

ಈಗೇನಾಗಿದೆ ಎಂದರೆ ಅಂತಹ ಮಹಿಳೆಯರಿಗೆಲ್ಲ ಮತ್ತೆ ಮಾನಸಿಕ ಅಭದ್ರತೆ ಉಂಟಾಗಿದೆ; ಎಲ್ಲಾದರೂ ಯಾವುದಾದರೂ ಪರೀಕ್ಷೆಯಲ್ಲಿ ತನ್ನ ಹೆಸರು ಬಹಿರಂಗಗೊಂಡರೆ ಎಂಬ ಆತಂಕದಲ್ಲೇ ಏಕಾಂತದ ಮಹಿಳೆಯರು ಕಾಲಹಾಕುತ್ತಿದ್ದಾರೆ. ಹೀಗಾಗಿ ಗುರುಗಳು ಹಾಗೆ ಮಾಡಿಯೇ ಇಲ್ಲ ಎಂದು ಅವರು ವಾದಿಸುತ್ತಲೇ “ನಾವಿದ್ದೇವೆ”ಗಳಲ್ಲಿ ಸೇರಿಕೊಂಡಿದ್ದಾರೆ. “ನಮ್ಮ ಸಂಸ್ಥಾನ ಹಾಗೆಲ್ಲ ಅಲ್ಲಪ್ಪ” ಅಂತಾರೆಯೇ ಹೊರತು ವಿರೋಧಿಸುವ ಶಕ್ತಿ ಅವರಲ್ಲಿಲ್ಲ.

ಅದು ಹೀಗೇ ಆಗುತ್ತದೆ ಎಂಬುದು ಕಳ್ಳಯ್ಯ-ಕುಳ್ಳಯ್ಯರಿಗೆ ಸ್ಪಷ್ಟವಾಗಿ ಗೊತ್ತಿತ್ತು; ಹಾಗಾಗಿಯೇ ಅವರು ತಮಗೆ ಬೇಕಾದ ರೀತಿಯಲ್ಲಿ ಎಲ್ಲವನ್ನೂ ಬಳಸಿಕೊಂಡರು. ಭಕ್ತರ ಹಣದಲ್ಲಿ ಹೇರಳ ಆಸ್ತಿಪಾಸ್ತಿ ಮಾಡಿಕೊಂಡರು, ಮನೆಗಳನ್ನು ಕಟ್ಟಿಸಿದರು, ಶೇರುಗಳನ್ನು ಕೊಂಡರು, ಬೇನಾಮಿ ಕಂಪನಿಗಳಲ್ಲಿ ತೊಡಗಿಸಿದರು, ರೀಯಲ್ ಎಸ್ಟೇಸ್ ವ್ಯವಹಾರ ನಡೆಸಿದರು, ಜೀವವೊಮೆ ಮಾಡಿಸಿಕೊಂಡರು, ತಮ್ಮ ಮೊಮ್ಮಕ್ಕಳ ಕಾಲದವರೆಗೂ ಖರ್ಚಾಗದಷ್ಟು ಖಜಾನೆ ಭರ್ತಿ ಮಾಡಿಕೊಂಡರು, ಮಠದ ಬಂಗಾರ ತಮ್ಮದಾಗಿಸಿಕೊಂಡರು, ಅನೇಕ ದಾನಪತ್ರಗಳಲ್ಲಿ ತಮ್ಮ ಖಾಸಗಿ ಹೆಸರು ಬರೆಸಿಕೊಂಡರು.

ವಿಪರ್ಯಾಸವೆಂದರೆ ಯಾವ ಆದರ್ಶ ಶೀಲ-ಸ್ವಭಾವದಿಂದ ಶ್ರೀರಾಮ ಜಗದ್ವಿಖ್ಯಾತನಾಗಿದ್ದನೋ, ಅದಕ್ಕೆ ತದ್ವಿರುದ್ಧ ಗುಣ-ನಡತೆಯುಳ್ಳ ಈ ತೊನೆಯಪ್ಪ ಅವನ ಹೆಸರನ್ನು ಬಳಸಿಕೊಂಡು ತಾನೇ ಅವತಾರಿಯೆಂದು ನಂಬಿಸಿದ, ಪೂಜೆ ಗಿಟ್ಟಿಸಿದ, ಧನ-ಕನಕ ಗಂಟುಕಟ್ಟಿ ಸಾಗಿಸಿದ, ಮಹಿಳೆಯರನ್ನು ಭೋಗಿಸಿದ…..ಇನ್ನೂ ಏನೇನೋ ಬಹಳ ಇದೆ ಬಿಡಿ. ಇಷ್ಟೆಲ್ಲ ನಡೆಯುತ್ತಲೇ ಇದ್ದರೂ ಏಕಾಂತದ ಮಹಿಳೆಯರು ಬಾಯಿ ಬಿಡಲಿಲ್ಲ, ಅವರ ಗಂಡಂದಿರಿಗೂ ವಿಷಯ ಗೊತ್ತಾಗಲಿಲ್ಲ. ಎತ್ತಣ ಸತ್ಯನಾರಾಯಣ? ಎಲ್ಲಿಯ ತುಳಸೀದಳ?. ಹೇಳಬೇಕೆಂದರೆ ಈ ದರ್ವೇಶಿಗೆ ತುಳಸೀ ಮಾಲೆಯನ್ನು ಧರಿಸುವ ಯೋಗ್ಯತೆಯೇ ಇಲ್ಲ.

ಇಂಥವನನ್ನು ಈ ಸಮಾಜ ಇನ್ನೂ ಪೀಠದಲ್ಲಿಟ್ಟು ಪೂಜೆ ಮಾಡುತ್ತದೆ, ಸುವರ್ಣ ಮಂತ್ರಾಕ್ಷತೆ ಪಡೆದ ಮೀಡಿಯಾಗಳು ಅವನ ಪರವಾಗಿ ವಕಾಕತ್ತು ನಡೆಸುತ್ತವೆ, ಏನೂ ಅರಿಯದ ಬಕರಾಗಳು ಜೈಕಾರದ ಬ್ಯಾಟಿಂಗ್ ನಡೆಸುತ್ತಾರೆ. ಹಳ್ಳಿಗಳಲ್ಲಿ ಈಗೀಗ ಎರಡು ಪಂಗಡಗಳಾಗಿವೆ, ಹೋರಿ ಬಳಗ ಒಂದು; ವಿರೋಧಿ ಬಳಗ ಇನ್ನೊಂದು. ಹೋರಿ ಬಳಗ ವಿರೋಧಿಬಳಗದವರನ್ನು ಕಾಡುಕೋಣ ಹೋಂಕರಿಸಿ ನೋಡಿದಂತೆ ದೂರದಿಂದಲೇ ನೋಡುತ್ತದೆ; ಕಂಡರೂ ಕಾಣದಂತೆ ಮಾತನಾಡದೆ ಸಾಗುತ್ತದೆ-ಇದು ಆ ’ಮಹಾಮುನಿಗಳು’ ಅನುಗ್ರಹಿಸಿದ ಸಂಸ್ಕಾರ.

ಕಳ್ಳಯ್ಯ-ಕುಳ್ಳಯ್ಯ ನಿರ್ಮಿಸಿದ ಈ ಯಂತ್ರಕ್ಕೆ ಯಾವ ಹೆಸರನ್ನು ಇಡೋಣ? ಈ ಯಂತ್ರವನ್ನು ಆ ಮಹಿಳೆ ಬಹಿರಂಗಗೊಳಿಸಿದ್ದು ಸಾಹಸವೆಂಬುದು ನಿಮಗೀಗ ಅರ್ಥವಾಗಬೇಕು. ಈ ಸಮಾಜದ ಬಳೆತೊಟ್ಟಂತಿರುವ ಗಂಡಸರಿಗಿಂತ ಬಳೆತೊಟ್ಟ ಅಂತಹ ಮಹಿಳೆಯಲ್ಲಿನ ದಿಟ್ಟತನಕ್ಕೆ ಸಮಸ್ತ ಸಮಾಜದ ಪರವಾಗಿ ತುಮರಿ ನಮನ ಸಲ್ಲಿಸುತ್ತಾನೆ. ಅಂತಹ ಸಹೋದರುಯರು ಈ ನಾಡಿನಲ್ಲಿ ಹೆಚ್ಚಬೇಕು; ಗುಪ್ರವಾಗಿ ಹೆಡೆಯಾಡಿಸುವ ಕಾಳೀಯಗಳನ್ನು ಮರ್ದಿಸಬೇಕು. ತ್ಯಾಗದ ಸಂಕೇತವಾದ ಕಾವಿಗೆ ಅಗೌರವ ತಂದೊಡ್ಡುವ ’ಮಹಾಮುನಿ’ ತೊನೆಯಪ್ಪನಂತವರ ಮಗ್ಗಲು ಮುರಿಯಲು ಮುಂದಾಗಬೇಕು, ಹಾಗಾಗಲಿ ಎಂಬ ಹಾರೈಕೆಯೊಂದಿಗೆ ಈ ವಿಸ್ತಾರವಾದ ಲೇಖನವನ್ನು ಮುಗಿಸುತ್ತೇನೆ.

Thumari Ramachandra

source: https://www.facebook.com/groups/1499395003680065/permalink/1758068697812693/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s