ತತ್ಸರ್ವಂ ಭಸ್ಮಾಸುರಾರ್ಪಣಂ ಭವತು ಇತಿ ಸ್ವಾಹಾಃ

ತತ್ಸರ್ವಂ ಭಸ್ಮಾಸುರಾರ್ಪಣಂ ಭವತು ಇತಿ ಸ್ವಾಹಾಃ
ಒಬ್ಬ ಗಂಡನ ಜಾಗದಲ್ಲಿ ನಿಂತು ನೀವೆಲ್ಲ ಯೋಚಿಸಬೇಕು. ಯಾವ ಗಂಡನೂ ತನ್ನ ಹೆಂಡತಿಯನ್ನು ಇನ್ನೊಬ್ಬ ಗಂಡಸು ಮುಟ್ಟುವುದನ್ನು ಇಷ್ಟಪಡೋದಿಲ್ಲ [ಅಪವಾದಗಳಿರಬಹುದು.] ಅದರಂತೆಯೇ ಹೆಂಡತಿಯೂ ಸಹ ತನ್ನ ಗಂಡ ಪರಸ್ತ್ರೀ ಸಂಬಂಧ ಹೊಂದುವುದನ್ನು ಸಹಿಸುವುದಿಲ್ಲ. ಗಂಡ ತನ್ನ ಹೆಂಡತಿಯ ಶೀಲವನ್ನು ಶಂಕಿಸುವ ಪ್ರಕರಣಗಳು ಅದೆಷ್ಟಿಲ್ಲ? ಅನ್ಯ ಸಮಾಜಗಳಲ್ಲಿ ಅದಕ್ಕಾಗಿಯೇ ಕೊಲೆಗಳು ನಡೆದುಹೋಗುವುದು ಕಂಡುಬರುತ್ತದೆ.

ತನ್ನ ಹೆಂಡತಿಗೆ ನೂರಾರು ಬಾರಿ ಮಠದ ಹೋರಿ ಹಾರಿದೆ ಎಂಬ ವಿಷಯ ಗಂಡ ಎಂಬ ಆ ವ್ಯಕ್ತಿಗೆ ಗೊತ್ತಾದಾಗ ಅವನ ಪರಿಸ್ಥಿತಿ ಹೇಗಿರಬೇಡ? ಅದನ್ನು ಒಪ್ಪುವ ಮನಸ್ಥಿತಿ ಯಾವ ಗಂಡನಿಗಾದರೂ ಇರುವುದೇ? ಅದನ್ನೆಲ್ಲ ಸಹಿಸಿಯೂ ಮಡದಿಯನ್ನು ಎಂದಿನಂತೆ ಅಥವಾ ಅದಕ್ಕಿಂತ ಹೆಚ್ಚು ಸಹಿಷ್ಣುವಾಗಿ ಮಡದಿಯೆಂದೇ ಒಪ್ಪಿಕೊಳ್ಳುವುದು ಸಾಮಾನ್ಯ ಮಾತಾಗೋದಿಲ್ಲ. ಯಾವುದೇ ಆಗಲಿ-ಹೇಳೋದು ಸುಲಭ; ಆಚರಿಸೋದು ಕಷ್ಟ.

ಜನಸಾಮಾನ್ಯರಲ್ಲಿ ಕೋಪಿಷ್ಠರೇ ಇರುವುದು ಹೆಚ್ಚು. ಹೆಂಡತಿ ಅಂತಹ ವಿಷಯವನ್ನು ತಾನೇ ಖುದ್ದಾಗಿ ಬಾಯ್ದೆರೆದು ಹೇಳುವಾಗ ಅವಳನ್ನು ಶಿಕ್ಷಿಸದೇ ಇರುವವರು ತೀರಾ ತೀರಾ ಕಡಿಮೆ. ಹೀಗೊಂದು ಅಚಾತುರ್ಯ ನಡೆದು ಹೋಗಿದೆ ಎಂದು ಹೇಳಿದಾಗಲೂ ಅದನ್ನೆಲ್ಲ ಕೆಟ್ಟ ಇತಿಹಾಸ ಎಂಬಂತೆ ಕೇಳಿ, ಕ್ಷಮಿಸಿ, ಸಮಾಜದ ಒಳಿತಿಗಾಗಿ ವಿಷಯವನ್ನು ಸಮಾಜದ ಮುಂದಿಡಲು ಮನಸ್ಸು ಮಾಡುವುದು ಬಹಳ ದೊಡ್ಡ ಹೆಜ್ಜೆ. ಅದಕ್ಕೆ ಧೈರ್ಯ, ಸ್ಥೈರ್ಯ, ತಾಳ್ಮೆ ಮತ್ತು ಹೃದಯವಂತಿಕೆ ಎಲ್ಲವೂ ಬೇಕು.

ಪ್ರಾಯಕ್ಕೆ ಕಾಲಿಟ್ಟ ಹೆಣ್ಣುಮಕ್ಕಳಿವೆ. ಅವರ ಭವಿಷ್ಯ ಏನಾಗಬಹುದು? ಸಮಾಜದಲ್ಲಿ ತಮ್ಮನ್ನೆಲ್ಲ ಬಹಳ ಕೀಳಾಗಿ ನೋಡುವುದಿಲ್ಲವೇ? ದೇಶಾದ್ಯಂತ ಜನರ ಬಾಯಿಗೆ ತಮ್ಮ ಖಾಸಗಿ ವಿಷಯ ಆಹಾರವಾಗುವುದಿಲ್ಲವೇ? ಸಮಾಜದಲ್ಲಿ ಎಲ್ಲಿಗೇ ಹೋದರೂ ಮುಂದೆ ಈ ಘಟನೆಯನ್ನು ತಳುಕುಹಾಕಿ ಬೆರಳಿಟ್ಟು ತೋರದಿರುತ್ತಾರೆಯೇ? ಅಸಹನೆಯಿಂದ ಗಂಡ ಮನೆಯಿಂದ ಹೊರದೂಡಿಬಿಟ್ಟರೆ? ಅಮ್ಮ ಕೆಟ್ಟವಳೆಂದು ಮಕ್ಕಳು ಜರಿದರೆ? ಯಾರೂ ತನ್ನ ಸಹಾಯಕ್ಕೆ ಬಾರದಂತಾಗಿಬಿಟ್ಟರೆ? ತಾನು ನೀಡಬೇಕಾದ ಸಾಕ್ಷ್ಯಗಳೆಲ್ಲ ನಾಶವಾಗಿಬಿಟ್ಟರೆ? ಒತ್ತಡಕ್ಕೆ ಮಣಿದು ಯಾರೋ ತಮ್ಮ ಕುಟುಂಬದ ಮೇಲೆ ಹಲ್ಲೆ ನಡೆಸಿದರೆ? ನೋಡಿ, ಹೆಣ್ಮನದ ಮುಂದಿದ್ದ ಪ್ರಶ್ನೆ ಒಂದೆರಡಲ್ಲ. ಅದನ್ನು ನೀವಿಲ್ಲಿ ಮತ್ತೆ ಮತ್ತೆ ಅರ್ಥಮಾಡಿಕೊಳ್ಳಬೇಕು.

ಸಮಾಜದ ಧಾರ್ಮಿಕ ಮುಖಂಡ, ಮಾಧ್ಯಮಗಳನ್ನು ಯಥೇಚ್ಛ ಬಳಸಿಕೊಂಡು ಜನಪ್ರಿಯತೆಯ ಉತ್ತುಂಗಕ್ಕೇರಿದ ವ್ಯಕ್ತಿ, ಕಂಡವರೆದುರಲ್ಲೆಲ್ಲ ಹಲ್ಲು ಕಿಸಿಯುತ್ತ ಸದಾ ಹಸನ್ಮುಖಿಯೆಂದು ಹೆಸರು ಪಡೆದಿದ್ದ ಗೋಮುಖ ವ್ಯಾಘ್ರ, ರಾಜಕೀಯವಾಗಿ ಹಲವು ರಾಜ್ಯ, ರಾಷ್ಟ್ರ ನಾಯಕರ ಸಂಪರ್ಕ ಹೊಂದಿರುವ ಪ್ರಭಾವಶಾಲಿ, ದೇಶದ ಕೆಲವು ಪ್ರಮುಖ ಉದ್ಯಮಿಗಳ ಸಂಪರ್ಕವನ್ನೂ ಇರಿಸಿಕೊಂಡಿದ್ದ ’ಲೀಲಾ ಮಾಧವ,’ ಹಲವು ಬಕರಾಗಳಿಗೆ ಕನಸುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ’ಅತಿಮಾನುಷ’, ಇನ್ನೂ ಹಲವರಿಗೆ ’ಪವಾಡ ಪುರುಷ’ ಎಲ್ಲವೂ ಆಗಿದ್ದ ವ್ಯಕ್ತಿ, ಕಚ್ಚೆಹರುಕ ಎನ್ನುವುದನ್ನು ಸಮಾಜ ಅಷ್ಟು ಬೇಗ ಒಪ್ಪಿಕೊಳ್ಳುವುದೇ?

ಮಲ್ಲಿಕಾ ಶರಬತ್ತನ್ನು ತಯಾರಿಸಿದಾಗ, “ಅವಳು ಕೋಟಿ ಕೋಟಿ ದೇಣಿಗೆ ಕೊಡ್ತಾಳೆ, ನಿಮ್ಮನ್ನು ಕರೆಸಿದರೆ ನೀವು ಕೊಡ್ತೀರಾ?” ಎಂಬ ಉತ್ತರ ಬಂತು. ಬ್ರಹ್ಮಚಾರಿ ಹನುಮನ ಹೊಸ ಹುಟ್ಟಿದ ಜಾಗದ ಅನ್ವೇಷಣೆಮಾಡಿದ ಮಠದ ಕೋಲಂಬಸ್ ಬ್ರಹ್ಮಚಾರಿಯ ವಿಗ್ರಹ ಸ್ಥಾಪನೆಗೆ ಕರೆದಿದ್ದು ಬಿಚ್ಚಮ್ಮನನ್ನು! ಅದೂ 25ಲಕ್ಷ ಕೊಟ್ಟು! ಆದರೂ ಸಮಾಜ ಅದನ್ನೆಲ್ಲ ಸಂಬಂಧವೇ ಇಲ್ಲವೆಂಬಂತೆ ಒರೆಸಿಹಾಕಿಬಿಟ್ಟಿತು!!

ಕುಲಪತಿ ಬಾವಯ್ಯ ಹೆಣ್ಣುಮಕ್ಕಳನ್ನು ಬಸಿರು ಮಾಡಿದ ಆಪಾದನೆ ಬಂದಾಗ ಬಾವಯ್ಯನನ್ನು ಉಳಿಸಿಕೊಳ್ಳುವ ಸಲುವಾಗಿ ಪರಿಷತ್ತುಗಳನ್ನೇ ವಿಸರ್ಜಿಸಿ ಹೊಸ ಪರಿಷತ್ತುಗಳನ್ನು ಮಾಡಲಾಯಿತು! ಆಗಲೂ ಜನತೆ ಏಕೆಂದು ಕೇಳಲಿಲ್ಲ. ಯಾರೋ ಕೆಲವರು ಕೇಳಿದರೆ “ಹೇಳೋದಕ್ಕೂ ಕೇಳೋದಕ್ಕೂ ಈಗ ಸಮಯವಲ್ಲ” ಎಂದಿತು ಮಠ!

ಮಠದ ಹಣದಲ್ಲಿ ಅಪರಾತಪರಾ ಆಗುತ್ತಿದೆ. ಹಣ ಖಾಸಗಿ ಅಕೌಂಟುಗಳಿಗೆ ಜಮಾ ಆಗುತ್ತಿದೆ. ಮುಷ್ಠಿ ಹಾಕಿ ಒಟ್ಟಾದ ಅಕ್ಕಿ ಚೀಲಗಳು ಎಲ್ಲೆಲ್ಲೋ ಬಿಕರಿಗೊಳ್ಳುತ್ತಿವೆ. ರಾಸುಗಳನ್ನು ಗುಟ್ಟಾಗಿ ಮಾರಲಾಗುತ್ತಿದೆ-ಎಂಬಿತ್ಯಾದಿ ಹಲವು ಸುದ್ದಿಗಳು ಬಂದಾಗ ಸಮಾಜದ ಯಾವೊಬ್ಬನೂ ಹೆಚ್ಚಿಗೆ ತಲೆಕೆಡಿಸಿಕೊಳ್ಳದೆ ಜೈಕಾರ ಹಾಕುತ್ತಲೇ ಇದ್ದ! “ಮಠದಲ್ಲಿ ಬಾವಯ್ಯನನ್ನು ಏಕೆ ಇರಿಸಿಕೊಳ್ತೀಯ? ಅವನನ್ನು ಹೊರಗಟ್ಟು” ಎನ್ನುವ ಎದೆಗಾರಿಕೆ ಯಾರೊಬ್ಬರಲ್ಲೂ ಕಾಣಲಿಲ್ಲ.

ಪರಮ ವೈರಾಗ್ಯದ ಪರಬ್ರಹ್ಮ ಪ್ರತಿನಿಧಿಯೆನಿಸಿದ ಸನ್ಯಾಸಿಗೆ ಯಾವ ಪುರುಷಾರ್ಥಕ್ಕಾಗಿ ಜೀವವಿಮೆ? ಅದೂ ಒಬ್ಬ ಮಹಿಳಾ ಏಜೆಂಟಳಿಂದ? ಅದನ್ನು ರಶೀದಿಗಳ ಆಧಾರ ಸಹಿತ ತೆಗೆದು ತೋರಿಸಿದರೂ ಈ ಸಮಾಜದ ಯಾವೊಬ್ಬನೂ ತಕರಾರು ತೆಗೆಯಲಿಲ್ಲ!!

ಇಂತಿಪ್ಪ ಮೂರ್ಖರೇ ತುಂಬಿದ ಸಮಾಜದೆದುರಲ್ಲಿ ಯಾವ ಮಹತಾಯಿಗೆ ನ್ಯಾಯ ಲಭಿಸೀತು? ಯಾವ ತಾಯಿ ತನ್ನ ಶೀಲಹರಣವಾಯಿತು ಎಂದರೆ ಈ ಸಮಾಜ ಕಿವಿಗೊಟ್ಟೀತು? ಇಂತಹ ವಿಷಮ ವಿಷಮಯ ಸನ್ನಿವೇಶದಲ್ಲೂ ಸಾಮಾಜಿಕ ಜಾಗೃತಿ ಮೂಡಿಸಲು ಗಟ್ಟಿ ಮನಸ್ಸು ಮಾಡಿ, ಗಂಡನಲ್ಲಿ ನಡೆದ ವಿಷಯವನ್ನು ಹೇಳಿ, ಕಳ್ಳ ಸನ್ಯಾಸಿಯನ್ನು ಹಿರಿಯರೆದುರು ಮೀಟಿಂಗಿಗೆ ಕರೆಸಿ ಗುಪ್ರವಾಗಿ ಮಠ ಬಿಟ್ಟು ಹೋಗುವಂತೆ ಹೇಳಲಾಗುತ್ತದೆ.

ಹೊರಗೆ ಅಬ್ಬರದ ಜೈಕಾರದ ನಡುವೆ ಛತ್ರ-ಚಾಮರಾದಿ ಸೇವೆಗಳಲ್ಲಿ ರಜತ ಪೀಠದಲ್ಲಿ ತಲೆಯಮೇಲೆ ಕೊಡೆ ಅಲ್ಲಾಡಿಸುವಂತಿಟ್ಟುಕೊಂಡು ತನಗೆ ತಿಳಿದದ್ದು, ತಿಳಿಯದ್ದು ಎಲ್ಲದರ ಬಗೆಗೂ ಐಪ್ಯಾಡ್ ಭಾಷಣಗಳನ್ನು ಪ್ರವಚಿಸುತ್ತಿದ್ದ ಮಹಾಸ್ವಾಮಿಗಳು “ಲಂಗಕ್ಕೆ ಗಮ್ಮು ಅಂಟಿದೆ” ಎಂದಾಗ ತಪ್ಪಾಯ್ತೆಂದು ಕಾಲಿಗೆ ಬಿದ್ದಿದ್ದು ಹೊರಗೆ ಯಾರ ಕಣ್ಣಿಗೂ ಕಾಣಲಿಲ್ಲ! “ಯಾವ ಮಾಧ್ಯಮಕ್ಕೂ ಆ ವಿಷಯ ಗೊತ್ತಾಗದಂತೆ ಮತ್ತು ಯಾರೊಬ್ಬರಿಗೂ ಗೊತ್ತಾಗದಂತೆ ಗೌಪ್ಯವಾಗಿಡಬೇಕೆಂದು” ಕಳ್ಳ ಸನ್ಯಾಸಿ ಬಿನ್ನವಿಸಿಕೊಂಡಂತೆ ಎಲ್ಲರೂ ಸುಮ್ಮನಿದ್ದರು.

ಅಧಿಕಾರದ ಅಮಲಿನಲ್ಲಿ, ಬೇಕಾದ್ದನ್ನೆಲ್ಲ ಬೇಕಾದಂತೆ ಅನುಭವಿಸಿ ಹಾಯಾಗಿ ಮೆರೆಯುತ್ತಿದ್ದ ಶ್ರಾದ್ಧ ಭಟ್ಟನ ಪಿಂಡ ಮಠವನ್ನು ಬಿಟ್ಟು ಹೋಗುತ್ತೇನೆಂದು ಹೇಳಿದ್ದೇ ಸುಳ್ಳು ಎಂಬಂತೆ ವರ್ತಿಸಿತು. ಸಮಾಜದೆದುರು ಸೆಂಟಿಮೆಂಟ್ಸ್ ಕ್ರಿಯೇಟ್ ಆಗುವ ಕತೆ ಕಟ್ಟಿ ಹೇಳಿತು.

ಮೊದಲೇ ಮೂರ್ಖರು ತುಂಬಿದ ಸಮಾಜ, ಅದರಲ್ಲೂ ಶತಮೂರ್ಖರು ಸೇರಿದ್ದ ಕುರಿವಾಡೆಗೆ ತೆರಳಿ ಅಲ್ಲಿ ತನ್ನ ಕಿಚನ್ ಕ್ಯಾಬಿನೆಟ್ ಸೇರಿಸಿ, ಕಪಟ ಸೂತ್ರವೊಂದನ್ನು ಹೆಣೆಯಿತು. ಮಠದಲ್ಲೇ ಇದ್ದರೆ ಇಂದಲ್ಲ ನಾಳೆ ತನ್ನ ಕಚ್ಚೆಹರುಕುತನವನ್ನು ಬಯಲು ಮಾಡುವ ಗಂಡ-ಹೆಂಡತಿಯರ ವಿರುದ್ಧ ಇಲ್ಲದ ಘಟನೆಗಳ ಸೂತ್ರವೊಂದನ್ನು ಸೃಷ್ಟಿಸಿತು.

ಮಠದೊಳಗಿನ ಕಳ್ಳ ಬೆಕ್ಕು ಕಾವಿಯೋಳಗಿನಿಂದ ಹಾವು ಆಡಿಸುತ್ತದೆ ಎಂಬುದನ್ನು ಅರಿತವರು ಅದನ್ನೆಲ್ಲ ಕ್ರಮಾಗತವಾಗಿ ದಾಖಲಿಸಿಕೊಂಡಿದ್ದರು. ಆಪಾದನೆಯನ್ನು ಸಮಾಜದ ಮುಖಂಡರ ಮುಂದೆ ಇಡುವಾಗಲಾದರೂ ವಿಷಯ ಹೀಗೆಲ್ಲ ಇದೆಯೆಂಬ ಸ್ಪಷ್ಟೀಕರಣ ಇರಬೇಕಲ್ಲ?

“ಮಠವನ್ನು ಕೆಲವೇ ದಿನಗಳಲ್ಲಿ ಬಿಟ್ಟು ಹೋಗ್ತೇನೆ” ಎಂದವನು ಹೋಗಲಿಲ್ಲ. ತನ್ನ ಲಂಪಟತನವನ್ನು ಬಹಿರಂಗಗೊಳಿಸಬಲ್ಲ ದಂಪತಿಯ ವಿರುದ್ಧ ತನ್ನ ಕಿಚನ್ ಕ್ಯಾಬಿನೆಟ್ ಹೆಣೆದ ಕತೆಯಮೂಲಕ ದೂರು ದಾಖಲಿಸಿಬಿಟ್ಟ!

ನಂತರದ ಕತೆಗಳೆಲ್ಲ ನಿಮಗೆ ತಿಳಿದಿಲ್ಲವೇ? ಆದರೆ ನೀವೊಂದನ್ನು ನೆನಪಿಟ್ಟುಕೊಳ್ಳಬೇಕು-ಕನಿಷ್ಠ ಐದುನೂರು ಮಂದಿ ಹೋರಿಯ ಏಕಾಂತ ಸೇವೆಗೆ ಬಲಿಯಾಗಿದ್ದಾರೆ; ಆದರೆ ಯಾರೊಬ್ಬರೂ ಅದನ್ನು ಹೇಳಲಿಲ್ಲ, ಹೇಳುವ ಧೈರ್ಯ ಮಾಡಲಿಲ್ಲ, ಹೇಳುವ ಸಾಹಸಕ್ಕೆ ಇಳಿಯಲಿಲ್ಲ; ಯಾಕೆಂದರೆ ಅವರಿಗೆಲ್ಲ ಗೊತ್ತು-ಹೇಳಿದರೆ ಮೊದಲು ತಮ್ಮ ಮರ್ಯಾದೆ ಬೀದಿ ಪಾಲಾಗುತ್ತದೆ ಎಂಬುದು. ಎರಡನೆಯದಾಗಿ ಪೀಠ, ಶಾಪ, ಕುಟುಂಬ ಸರ್ವನಾಶ, ಆಣೆ-ಪ್ರಮಾಣ, ಸಮಾಜದಲ್ಲಿ ಅಂತಸ್ತು, ಮಕ್ಕಳ ಭವಿಹ್ಯ, ಕುಟುಂಬದ ಭವಿಷ್ಯ ಹೀಗೆ ಹಲವು ಸಮಸ್ಯೆಗಳು ಭೂತಾಕಾರ ತಾಳಿ ಎದುರು ನಿಲ್ಲುತ್ತಿದ್ದವು.

ಕಾಳಿಂದಿಯ ಮಡುವಿನಲ್ಲಿ ಬೀಡುಬಿಟ್ಟ ಕಾಳೀಯನ ದೆಸೆಯಿಂದ ಇಡೀ ಯಮುನಾ ನದಿ ವಿಷಮಯವಾಗಿತ್ತಂತೆ! ಅರಿಯದೇ ಆ ನೀರನ್ನು ಕುಡಿದ ಹಸುಗಳು ಅಸು ನೀಗುತ್ತಿದ್ದವು, ಜನ-ಜಾನುವಾರುಗಳು ತೊಂದರೆಗೆ ಒಳಗಾಗಿದ್ದವು. ವಿಷಮಯ ಸನ್ನಿವೇಶದಲ್ಲಿ ಕೃಷ್ಣನೊಬ್ಬನೇ ಎದೆಗಾರಿಕೆಯಿಂದ ಕಾಳಿಂದಿಯ ಮಡುವಿಗೆ ಧುಮುಕಿದ. ಕಾಳೀಯನೊಡನೆ ಸೆಣಸಿ ನೆತ್ತಿಯ ಮೇಲೆನಿಂತು ಮರ್ದಿಸಿದ; ಸೋತ ಕಾಳೀಯ ಅಲ್ಲಿಂದ ಕಂಬಿ ಕಿತ್ತ. ಇದು ಭಾರತ-ಭಾಗವತ ಕಥೆಯ ಉಪಕಥೆ.

ಮಠವೆಂಬ ಕಾಳಿಂದಿಯಲ್ಲಿ ಕಳ್ಳ ಸನ್ಯಾಸಿಯಾದ ಕಾಳೀಯ ಸೇರಿಕೊಂಡಿದ್ದು ಹಲವರಿಗೆ ಅರಿವಿಗೆ ಬರಲಿಲ್ಲ. ಅರಿವಿಗೆ ಬಂದವರು ಅಂತಹ ಮಹಾಪ್ರವಾಹದ ಎದುರು ಈಜುವ ಸಾಹಸ ಮಾಡಲೇ ಇಲ್ಲ. ಏಕಾಂತ ಸೇವೆಗೆ ತೊಡಗಿಕೊಂಡ ಒಬ್ಬೊಬ್ಬ ಮಹಿಳೆಗೂ ಇನ್ನೊಬ್ಬ ಮಹಿಳೆಯೊಡನೆ ಆತ ಸಂಬಂಧ ಇರಿಸಿಕೊಂಡಿದ್ದು ಗೊತ್ತಾಗುತ್ತಿರಲಿಲ್ಲ; ಅಂತಹ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದ ಈ ಚಾಲಾಕಿ ಕಾಳೀಯ!

“ಅಯ್ಯೋ ಗುರುಗಳಿಗೆ ನಾನು ಅಂದ್ರೆ ಬಹಳ ಪ್ರೀತಿ, ನಮ್ಮನೆಗೆ ಬರೋದು ಅಂದ್ರೆ ಬಹಳ ಪ್ರೀತಿ” ಎಂದುಕೊಳ್ಳುತ್ತಿದ್ದ ಏಕಾಂತ ಮಹಿಳೆಯರಲ್ಲಿ ಈ ಕಾಳೀಯನ ಪಕ್ಕ ನಿಂತು-ಫೋಟೋ ತೆಗೆಸಿಕೊಂಡು ಅದನ್ನು ಸಮಾಜದ ಜನರೆದುರು ತೋರಿಸಿಕೊಳ್ಳುವ ಫಾಲ್ಸ್ ಪ್ರೆಶ್ಟೀಜ್ ಮನೆಮಾಡಿತ್ತು; ತಮ್ಮೊಳಗಿನ ಅನೈತಿಕ ಸಂಬಂಧ ಯಾರಿಗೂ ಗೊತ್ತಾಗೋದಿಲ್ಲ ಎಂಬ ಭಂಡ ಧೈರ್ಯವೂ ಇತ್ತು.

ಅತಿಯಾಗಿ ಮಠ ಸುತ್ತುತ್ತಿದ್ದ ಬಕರಾ ಭಕ್ತರಿಗೆ ಬೋಳೆಣ್ಣೆ ಸವರುವುದರಲ್ಲಿ ಕಾಳೀಯ ಪಿ.ಎಚ್.ಡಿ ಮಾಡಿದ್ದ. ಊರಿನಲ್ಲಿ ಸಲೀಸಾಗಿ ಸಿಗದ ಯಾವುದೋ ಪರಿಕರಗಳನ್ನು ತಂದುಕೊಡುವಂತೆ ಕೋರುತ್ತಿದ್ದ. “ಮಹಾಸ್ವಾಮಿಗಳಿಗೆ ಭಯಂಕರ ನೇಮನಿಷ್ಠೆ,. ರಾಮಾಯಣ ಕಾಲದಲ್ಲಿ ವಾಲ್ಮೀಕಿಗಳು ಬಳಸಿದ್ದ ವಸ್ತುಗಳಂತದ್ದನ್ನೆಲ್ಲ ಬಳಸ್ತಾರೆ. ಮಹಾತಪಸ್ವಿ, ಅನುಷ್ಥಾನಕ್ಕೆ ಕುಳಿತ ಅರೆನಿಮಿಷದಲ್ಲಿ ಸಮಾಧಿಗೆ ಹೋಗಿಬಿಡ್ತಾರಂತೆ” ಎಂದೆಲ್ಲ ಮೂರ್ಖರು ಪರಸ್ಪರ ಹೇಳಿಕೊಂಡರು.

ಇನ್ನೂ ಅನೇಕರು “ಮಹಾಸ್ವಾಮಿಗಳ ತಪಸ್ಸನ್ನು ದೇವತೆಗಳೇ ಸಾಕ್ಷಾತ್ ವೈಕುಂಠ ಮತ್ತು ಕೈಲಾಸಗಳೆಲ್ಲೆಲ್ಲ ಮಾತಾಡಿಕೊಳ್ತಾರಂತೆ” ಅಂತ ಕತೆ ಕಟ್ಟಿದರು. ಹೀಗೆ ಈ ಕಾಳೀಯ ಬಹಳ ಕಾಲ ದಂತಗೋಪುರದಲ್ಲಿ ಮೆರೆಯುತ್ತಲೇ ಮುನ್ನಡೆದ.

ಇದು ಸರಿಯಲ್ಲ, ಇದು ಹೀಗೇ ಮುಂದುವರಿದರೆ ಮಠಕ್ಕೆ ಬರುವ ಇಡೀ ಶಿಷ್ಯಮಂಡಲದಲ್ಲಿ ಎಲ್ಲ ಮಹಿಳೆಯರ ಶೀಲವೂ ಹರಣವಾಗುತ್ತದೆ ಮತ್ತು ಸಮಾಜ ಅನೈತಿಕತೆಯಿಂದ ತುಂಬುತ್ತದೆ ಎಂಬುದನ್ನು ಮನಗಂಡ ಒಬ್ಬ ಮಹಿಳೆ ಮಾತ್ರ, ತನ್ನ ಮತ್ತು ತನ್ನ ಕುಟುಂಬದ ಗತಿ ಏನಾದರೂ ಪರವಾಗಿಲ್ಲ, ಸಮಾಜ ಸರಿಯಾಗಿರಲಿ ಎಂಬ ಉದ್ದೇಶದಿಂದ ವಿಷಯವನ್ನು ಪತಿಯ ಮೂಲಕ ಸಮಾಜದ ಹಿರಿಯ ಮುಖಂಡರ ಮುಂದಿಡುವ ಸಾಹಸ ಮಾಡಿದಳು.

ಅದಾಗಲೇ ಸಾವಿರಾರು ಕೋಟಿಗಳ ಒಡೆಯನಾಗಿದ್ದ ಈ ಕಾಳೀಯ ಬೇಕಾದ್ದನ್ನೆಲ್ಲ ಖರೀದಿಸಿ ಬದುಕಬಲ್ಲೆನೆಂಬ ಛಾತಿಯನ್ನು ಹೊಂದಿದ್ದ. ಅಧಿಕಾರ ಮತ್ತು ಹಣ ಅವನಲ್ಲಿದ್ದದ್ದರಿಂದ ಅವನನ್ನು ಎದುರುಹಾಕಿಕೊಳ್ಳುವ ಧೈರ್ಯ ಸಮಾಜದ ಮುಖಂಡರಲ್ಲೂ ಆ ಕ್ಷಣದಲ್ಲಿ ಇರಲಿಲ್ಲ ಎನಿಸುತ್ತದೆ. ತಮ್ಮ ಸಂಕಟವನ್ನು ಹಿರಿಯರೆದುರು ತೋಡಿಕೊಂಡು ಸಮಾಜ ಸುಧಾರಣೆಗೆ ಯತ್ನಿಸಿದ ದಂಪತಿಗೇ ಶಿಕ್ಷೆಯಾಯಿತು ಎಂಬುದು ನಾಗರಿಕ ಸಮಾಜದಲ್ಲಿ ಅತ್ಯಂತ ನಾಚಿಕೆಗೇಡಿನ ವಿಷಯ.

ನಂತರದ ಹಲವು ಹೆಜ್ಜೆಗಳೆಲ್ಲವೂ ಕುರುಡು ಕಾಂಚಾಣದ ಝಣತ್ಕಾರದ ಮಹಿಮೆಗೆ ಒಳಪಟ್ಟು ತಲೆಬಾಗಿದವು ಎಂಬುದನ್ನು ನೀವೆಲ್ಲ ಬಲ್ಲಿರಿ. ಕ್ರಮೇಣ ಈಗ ಸಮಾಜಕ್ಕೆ ಈ ಕಾಳೀಯದ ವೀರ್ಯಸನ್ಯಾಸದ ಗಮ್ಮಿನ ವಾಸನೆ ಬಡಿಯತೊಡಗಿ ಈಗ ಒಳಗಿಂದೊಳಗೆ ’ತುರ್ಯಾವರ್ಸ್ಥೆ’ಗೆ ಬಂದಿದೆ. ಆದರೂ ಮುಗ್ಗಲುಗೇಡಿಗಳಿಗೆ ಎದುರು ಬಂದು ಕಾಳೀಯನನ್ನು ವಿರೋಧಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಇನ್ನೊಂದು ವಿಪರ್ಯಾಸ.

ವಾಸ್ತವವಾಗಿ ಈ ಹಿಂದೆಯೂ ತುಮರಿ ಹೇಳಿದಂತೆ ಕಾನೂನು ಯಾವ ರೀತಿಯಲ್ಲೇ ಹೇಳಲಿ; ಅದು ಮುಖ್ಯವಲ್ಲ. ನೈತಿಕತೆಯನ್ನು ಕಾನೂನೆಂಬ ಥರ್ಮಾ ಮೀಟರ್ ನಿಂದ ಜ್ವರ ಅಳೆದಂತೆ ಅಳೆಯಲು ಸಾಧ್ಯವಿಲ್ಲ. ಅಮೆರಿಕದ ವಾತಾವರಣದಲ್ಲಿ ಅಲ್ಲಿನ ದೈಹಿಕ ಉಷ್ಣಾಂಶವನ್ನು ಅಳೆಯುವ ಕ್ರಮವನ್ನು ಬಣ್ಣಿಸುತ್ತ ಡಾ.ಬಿ.ಎಮ್ ಹೆಗಡೆಯವರು ಹೇಳುತ್ತಿದ್ದರು-“ಅಲ್ಲಿಗೂ ಭಾರತಕ್ಕೂ ಹವಾಮಾನದಲ್ಲಿ ಅಜಗಜಾಂತರವಿದೆ. ಅವರು ಪುಸ್ತಕದಲ್ಲಿ ಹೇಳಿದ್ದನ್ನೇ ಇಲ್ಲಿ ಪ್ರಾಕ್ಟಿಕಲ್ ಮಾಡಿದರೆ ಪರಿಣಾಮ ವಿಪರೀತಕ್ಕೆ ಎಡೆಮಾಡಿಕೊಡಬಹುದು” ಅಂತ. ಬಿರುಬೇಸಿಗೆಯಲ್ಲೂ ಭಾರತದಲ್ಲಿ ಕೋಟು-ಟೈ ಧರಿಸುವವರನ್ನು ಕಂಡಾಗ ಏಸಿ ರೂಮಿನ ಅನಿವಾರ್ಯತೆಯ ಅರ್ಥವಾಗುತ್ತದೆ ಅಂತಾನೆ ನಮ್ಮ ಕವಳದ ಗೋಪಣ್ಣ.

ಮಠವೆಂಬ ಕಾಳಿಂದಿಯಲ್ಲಿ ತೊನೆಯಪ್ಪನೆಂಬ ಕಾಳೀಯ ಇದ್ದಾನೆ ಎಂದು ಸಮಾಜಕ್ಕೆ ತೋರಿಸಿಕೊಟ್ಟಿದ್ದಕ್ಕೆ ಈ ಸಮಾಜ ಆ ದಂಪತಿಯನ್ನು ಸನ್ಮಾನಿಸಬೇಕಾಗಿದೆ. ಯಾಕೆಂದರೆ ಇದರಲ್ಲಿ ಅವರ ಯಾವ ಸ್ವಾರ್ಥವೂ ಅಡಗಿಲ್ಲ, ಕೇವಲ ಸಾಮಾಜಿಕ ಕಾಳಜಿಯಷ್ಟೇ ಇದೆ. ಅದರಲ್ಲೂ ಆಣೆ-ಪ್ರಮಾಣ-ಭೋಗವರ್ಧನವಾಳ ಪರಂಪರೆ ಇದೆಲ್ಲವನ್ನು ನಂಬಿ, “ಸರ್ವಂ ಬ್ರಹ್ಮಾರ್ಪಣಮಸ್ತು” ಎಂದು ಭಕ್ತಿಭಾವೋತ್ಕಟತೆಯಲ್ಲಿ ಆ ಮಹಿಳೆ ಅರ್ಪಿಸಿಕೊಂಡದ್ದರಿಂದ ತೊನೆಯಪ್ಪ ಶೀಗಳು ಪಾಪದ ಫಲವನ್ನು ಅನುಭವಿಸಲೇಬೇಕಾಗುತ್ತದೆಯೇ ಹೊರತು ಮಹಿಳೆಗೆ ಯಾವ ಪಾಪವೂ ತಟ್ಟುವುದಿಲ್ಲ.

ಬಹುಕಾಲ ಕಾಳಿಂದಿಯಲ್ಲಿ ಕಾಳೀಯ ಹಾಗೇ ಇದ್ದರೆ ಸಮಾಜ ಅಸಾಧ್ಯ ಅವಘಡಗಳನ್ನು ಅನುಭವಿಸುತ್ತ ಅತ್ಯಂತ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ; ಈಗಾಗಲೇ ಈ ಕಾಳೀಯನ ಕಚ್ಚೆಹರುಕುತನವನ್ನು ಮುಚ್ಚುವ ಪ್ರಯತ್ನದಲ್ಲಿ ಸಮಾಜದ ಇನ್ನೂರೈವತ್ತು ಕೋಟಿಗೂ ಅಧಿಕ ಹಣ ವಾಮಮಾರ್ಗದಲ್ಲಿ ಹರಿದುಹೋಗಿಬಿಟ್ಟಿದೆ. ಇನ್ನೂ ಇವನನ್ನೇ ಉಳಿಸಿಕೊಂಡರೆ ಹಾವಾಡಿಗ ಮಠ ಸರ್ವನಾಶವಾಗುತ್ತದೆ.

ಮಠದಲ್ಲಿ ಈ ಕಾಳೀಯ ಸೇರಿಕೊಂಡಾಗಿನಿಂದ ಸದಾ ಒಂದಿಲ್ಲೊಂದು ಕೆಟ್ಟ ಘಟನೆಗಳು ನಡೆಯುತ್ತಲೇ ಇವೆ. ಈ ಕಾಳೀಯನ ’ಸಾಧನೆ’ಗಳನ್ನೆಲ್ಲ ತುಲಾಭಾರಕ್ಕೆ ಹಾಕಿದರೆ ಇವ ಮಾಡಿದ ಒಳಿತಿಗಿಂತ ನಡೆಸಿದ ದುರಾಚಾರ, ಅತ್ಯಾಚಾರಗಳೇ ವಿಪರೀತ ಹೆಚ್ಚೆಂಬುದು ಗೊತ್ತಾಗುತ್ತದೆ. ಸಮಾಜದ ಮುಖಂಡರು ಇನ್ನಾದರೂ ಒಗ್ಗಟ್ಟಾಗಿ, ಕಾಳೀಯನನ್ನು ಹೊರಗೆಳೆದು ಮೆರವಣಿಗೆಯಲ್ಲಿ ಪರಪ್ಪವನಕ್ಕೆ ಕಳಿಸಿಕೊಡಬೇಕಾಗಿದೆ. ಕನಿಷ್ಠ ಹದಿನಾಲ್ಕು ವರ್ಷ ಸಜೆಯಾದರೆ ಸಮಾಜಕ್ಕೂ ಮತ್ತು ಮಹಿಳೆಯರಿಗೂ ಕ್ಷೇಮ ಎಂದು ಅನುಭವಿಗಳು ಅಭಿಪ್ರಾಯಪಟ್ಟಿದ್ದಾರೆ.

Thumari Ramachandra

source: https://www.facebook.com/groups/1499395003680065/permalink/1757650144521215/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s