ಜಗದ್ಗುರು ತೊನೆಯಪ್ಪ-ನಿನ್ನ ಕತೆ ಎಲ್ಲಿಗೆ ಬಂತಪ್ಪ?

ಜಗದ್ಗುರು ತೊನೆಯಪ್ಪ-ನಿನ್ನ ಕತೆ ಎಲ್ಲಿಗೆ ಬಂತಪ್ಪ?

[ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ ಭಾಗ-6, ಸಜ್ಜನರ ಕೋರಿಕೆಯ ಮೇರೆಗೆ ಕುದುರೆ ಬ್ರೀಡಿಂಗ್ ಬೀಡಿಯೋ ಲಿಂಕ್ ವಿಸರ್ಜಿಸಿ ವಿಡಂಬನೆಯನ್ನು ಮಾತ್ರ ಮುಂದುವರಿಸಲಾಗಿದೆ.]

ಜಗದ್ಗುರು ತೊನೆಯಪ್ಪ ಮಹಾಛತ್ರಿ ಕಚ್ಚೆಶೀಗಳು ಎಂದಿನಂತೆ ತೊನೆಯುತ್ತ ಸೇರಿದ ರೌಡೀಸಭೆಯ ಮಧ್ಯದಿಂದ ಛತ್ರಿಯಡಿಯಲ್ಲಿ ತೊನೆಯುತ್ತ ಸಾಗಿ, ಮಹಿಳೆಯರತ್ತ ಯಥೇಚ್ಛ ಹಲ್ಲು ಕಿಸಿಯುತ್ತ ವೇದಿಕೆಯೆಡೆಗೆ ತೆರಳಿ ಪೀಠವನ್ನೇರಿದರು. ಹಳದಿ ವಂದಿಮಾಗಧರು ಮತ್ತು ಭಟ್ಟಂಗಿಗಳು ಎಂದಿನಂತೆ ಗರ್ದಭ ಸ್ವರದಲ್ಲಿ ಜಗತ್ತಿಗೇ ಕೇಳಿತೋ ಎಂಬಂತೆ ಭೋ ಪರಾಕು ಕೂಗಿದರು. ತೊನೆಯಪ್ಪ ಶೀಗಳು ತಮ್ಮ ’ಕೋಗಿಲೆ’ಯ ಕಂಠದಲ್ಲಿ ಬಕರಾಗಳಿಗೆ ಬೋಳೆಣ್ಣೆ ಹಚ್ಚಲು ಆರಂಭಿಸಿದ್ದು ಕೆಲವರಿಗೆ ಜೋಗುಳ ಹಾಡಿದಂತಿತ್ತು!!

“ಮಂತ್ರಮೂಲೆ ಮಾವಿನಕಾಯಿ ತಂತ್ರಮೂಲೆ ಬಗಳಾಮುಖಿ
ನ್ಯಾಸ ಮೂಲೆ ಏಕಾಂತ ಸೇವಾ ಖುಲಾಸೆ ಮೂಲೆ ಕೋಟಿಃ ಕೋಟಿಃ

ಬರೇ ಕಾಮ
ಬರೇ ಕಾಮ

ಈ ತುಮರಿ ನಮ್ಮಲ್ಲಿ ಸೇರಿಕೊಂಡಮೇಲೆ ನಾವು ನಡೆಸಿದ ಹಲವು ’ಸಾಧನೆಗಳ’ ದಿವ್ಯ ’ಯಶೋಗಾಥೆ’ಯನ್ನು ನಿಮ್ಮ ಮುಂದೆ ಬಿಚ್ಚಿಟ್ಟಿದ್ದಾನೆ. ಕೈಗೆ ಸಿಕ್ಕರೆ ನಮ್ಮ ಭಕ್ತರು ಜೀವ ಸಹಿತ ಬಿಡುತ್ತಿರಲಿಲ್ಲ ಎಂಬುದರಲ್ಲಿ ನಮಗೆ ಸಂಶಯವಿಲ್ಲ; ಯಾಕೆಂದ್ರೆ ಯಾಕೆಂದ್ರೆ…. ಯಾಕೆಂದ್ರೆ ಅಷ್ಟೊಂದು ಭಕ್ತಿ ಪರಾಕಾಷ್ಠೆಯನ್ನು ಹೊಂದಿದ ರೌಡೀ ಭಕ್ತರನ್ನು ಬೆಳೆಸಿಕೊಂಡಿದ್ದೇವೆ ನಾವು. ನಮಗ್ಗೊತ್ತು ಒಂದಲ್ಲಾ ಒಂದು ದಿನ ಮಠದ ವ್ಯವಹಾರ ಹೀಗೇ ಆಗ್ತದೆ ಅಂತ. ಹಾಗಾಗದಂತೆ ರಕ್ಷಣೆಗಾಗಿ ಹಲವು ಸೇನೆಗಳ, ಯುವ ಪಡೆಗಳ ಹೆಸರಲ್ಲಿ ನಮ್ಮ ಭಕ್ತರು ಸಂಘಟನೆಗಳನ್ನು ರಚಿಸಿಕೊಂಡಿದ್ದಾರೆ.

ಇವತ್ತು ನಾವು ಇಂದ್ರಿಯ ನಿಗ್ರಹ ಮತ್ತು ಖರೀದಿ ಕಾಮಗಾರಿ ಎಂಬ ವಿಷಯಗಳ ಮೇಲೆ ಮಾತನಾಡಲಿಕ್ಕಿದ್ದೇವೆ. ನಿಮಗೆಲ್ಲ ಜೈನರು ಗೊತ್ತು. ಜೈನರನ್ನು ನೋಡಿದ್ದೀರಿ ನೀವು. ಜೈನರಲ್ಲಿ ದಿಗಂಬರರು ಅಂತ ಇರ್ತಾರೆ. ಅವರು ಮೈಮೇಲೆ ಬಟ್ಟೆಯನ್ನೇ ಧರಿಸೋದಿಲ್ಲ. ತರುಣಸಾಗರ ಜೀ ಎಂಬ ಜೈನ ಮುನಿಗಳ ಹೆಸರನ್ನು ನೀವು ಕೇಳಿರಬಹುದು. ಅವರ ವಯಸ್ಸು ನಮಗಿಂತ ಬಹಳ ಹೆಚ್ಚೇನಿಲ್ಲ. ಅವರು ನೇಕೆಡ್ ಆಗಿ ಕುಳಿತು ಸಭೆಗಳಲ್ಲಿ ನಡೆಸಿದ ಪ್ರವಚನಗಳ ವೀಡಿಯೋಗಳನ್ನು ನಾವೂ ನೋಡಿದ್ದೇವೆ.

ಆ ಮಹಾಸಭೆಯಲ್ಲಿ ಕೆಲವೊಮ್ಮೆ ಮಾರ್ವಾಡಿ ಜನಾಂಗದ ಸುಂದರ ತರುಣಿಯರು, ಸುಂದರ ಗೃಹಿಣಿಯರು ಎಲ್ಲರೂ ಇರ್ತಾರೆ. ಅವರೆಲ್ಲರ ಮಧ್ಯೆ ತನ್ನನ್ನೇ ತಾನು ಮರೆತಂತೆ ಪ್ರವಚನ ಮಾಡ್ತಾರೆ ತರುಣ ಸಾಗರರು. ತನ್ನ ವೈಯಕ್ತಿಕತೆಗಿಂತ ’ಮುನಿ’ ಎಂಬುದೊಂದು ಹುದ್ದೆ ಎಂಬಂತೆ ಪರಮ ವೈರಾಗ್ಯದಿಂದ ನಡೆದುಕೊಳ್ತಾರೆ. ಅವರ ಅಂಗಾಂಗಗಳಲ್ಲಿ ಯಾವ ಏರಿಳಿತಗಳೂ ಇರೋದಿಲ್ಲ.

ಅಲ್ಲಿರುವಂತಹ ಸುಂದರಿಯರು ಒಮ್ಮೆ ನಕ್ಕರೆ ಸಾಕು ನಮಗಂತೂ ಬುಲ್ ಪೀನ ಹರಿದುಕೊಂಡು ಸಾಮಾನು ಹೊರಗೆ ಬಂದುಬಿಡುತ್ತದೆ. ಹೊರಗಿನ ಕಾವಿ ಇರೋದರಿಂದ ಬಚಾವು, ಇಲ್ಲದಿದ್ರೆ ನಮ್ಮ ಮರ್ಯಾದೆಗೆ, ನಮ್ಮ ಮಠದ ಮರ್ಯಾದೆಗೆ ತೊಂದರೆ ಆಗಿಬಿಡ್ತಿತ್ತು.

ಅಲ್ಲ ತರುಣ ಸಾಗರರು ಮತ್ತು ಅದೇ ರೀತಿಯ ಇನ್ನಿತರ ದಿಗಂಬರ ಮುನಿಗಳು ಹೇಗೆ ಅದನ್ನೆಲ್ಲ ನಿಯಂತ್ರಿಸುತ್ತಾರೆ? ಸಾಮಾನು ನಿಮಿರದಂತೆ ಅದಕ್ಕೇನಾದರೂ ವ್ಯವಸ್ಥೆ ಇರಬಹುದೇ? ಎಂದು ಯೋಚಿಸಿದ್ದೇವೆ ನಾವು. ಹೇಗೆ ನಿಯಂತ್ರಿಸುತ್ತಾರೆ ಅನ್ನೋದು ಮಾತ್ರ ನಮಗಿನ್ನೂ ಆರ್ಥವಾಗಿಲ್ಲ! ಅಷ್ಟಾಂಗಯೋಗದಲ್ಲಿ ಪತಂಜಲಿ ಮಹರ್ಷಿ ಅದರ ನಿಯಂತ್ರಣ ಸಾಧ್ಯ ಅಂತ ಹೇಳಿದ್ದಾನಂತೆ. ಆದರೆ ಅಷ್ಟಾಂಗಯೋಗವನ್ನು ಕಂಡರೆ ನಮಗೆ ಮೊದಲಿನಿಂದಲೂ ಆಗೋದಿಲ್ಲ. ಅದು ಮಾನವನ ಕಾಮನೆಗಳನ್ನು ನಿಯಂತ್ರಿಸುತ್ತದೆ, ಮನುಷ್ಯ ವಿರೋಧಿ ಚಟುವತಿಕೆ ಅದು,
smile emoticon
smile emoticon
smile emoticon
ಹೀಗಾಗಿ…ಹೀಗಾಗಿ ನಾವದನ್ನು ವಿರೋಧಿಸ್ತೇವೆ.

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್”, “ಬರೇ ಕಾಮ್” ಎಂಬ ಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಅನ್ಯ ಸಮುದಾಯಗಳಿಗೆ ಹೋಲಿಸಿದರೆ ಮಾರ್ವಾಡಿ ಸಮುದಾಯ ಅತಿ ಚಿಕ್ಕ ಸಮುದಾಯವಂತೆ. ಅವರಲ್ಲಿ ಎಲ್ಲರೂ ಬುದ್ಧಿವಂತರು ಮತ್ತು ಸಮಾಜ ನಿಷ್ಠರು. ವ್ಯಾಪಾರವೇ ಅವರಿಗೆ ಜೀವನ. ಕೆಲವರು ಮಾತ್ರ ಕೈಗಾರಿಕೋದ್ಯಮಗಳಿಗೆ ಇಳಿದಿದ್ದಾರೆ. ಅವರಲ್ಲಿನ ಶ್ರೀಮಂತರೆಲ್ಲ ಸೇರ್ಕೊಂಡು ಕಮ್ಯೂನಿಟಿ ಫಂಡು ಅಂತ ಮಾಡ್ಕೊಂಡಿದಾರಂತೆ. ಸಮಾಜದಲ್ಲಿರುವ ಯುವಕರು ಯಾವುದೋ ವೃತ್ತಿಯಲ್ಲಿ ತೊಡಗುವಾಗ ಬಂಡವಾಳ ಸಾಲದಿದ್ದರೆ ಕಮ್ಯೂನಿಟಿ ಫಂಡಿನಿಂದ 0.25 ಪರ್ಸೆಂಟು ಬಡ್ಡಿದರದಲ್ಲಿ ಸಾಲ ಕೊಡ್ತಾರಂತೆ.

ಸಾಲ ಕೊಡುವಾಗ ದಾಖಲುಪತ್ರಗಳಿಗಿಂತ ವ್ಯಕ್ತಿಯ ನಿಯತ್ತಿಗೆ ಬೆಲೆ ಕೊಡ್ತಾರಂತೆ. ಸಾಲ ತೆಗೆದುಕೊಳ್ಳ ಬಯಸಿದ ವ್ಯಕ್ತಿ ಸಾಲದ ಮೊತ್ತಕ್ಕೆ ಅರ್ಹನೇ ಮತ್ತು ಅವನ ಉದ್ದೇಶಿತ ಉದ್ಯಮಗಳಿಂದ ಲಾಭವನ್ನು ಗಳಿಸಿ ಸಾಲ ಮರುಪಾವತಿಸಲು ಸಾಧ್ಯವೇ ಎಂಬುದನ್ನು ಕೋರ್ ಕಮಿಟಿಯವರು ಪರಿಶೀಲಿಸ್ತಾರಂತೆ. ಒಂದೊಮ್ಮೆ ಕೇಳಿದಷ್ಟು ಕೊಡದಿದ್ದರೂ ಸಾಕಷ್ಟು ಅನುಕೂಲ ಮಾಡಿಕೊಳ್ಳುವಷ್ಟು ಸಾಲ ಕೊಟ್ಟೇ ಕೊಡ್ತಾರಂತೆ.

ಸಾಲ ಪಡೆದ ವ್ಯಕ್ತಿ ವೃತ್ತಿಯಲ್ಲಿ ಚೆನ್ನಾಗಿ ಲಾಭ ಗಳಿಸಿದರೆ ಸಾಲ ಮರಳಿಸುವುದರ ಜೊತೆಗೆ ಕಮ್ಯೂನಿಟಿ ಫಂಡಿಗೆ ಒಂದಷ್ಟು ದೇಣಿಗೆ ಕೊಡ್ತಾನಂತೆ. ಸಾಲ ಪಡೆದವ ಒಮ್ಮೆ ಸೋತರೆ, ಇನ್ನೊಮ್ಮೆ ಮತ್ತೆ ಸಹಾಯ ಮಾಡಿ ನೋಡ್ತಾರಂತೆ. ಆಗಲೂ ಅವ ವೃತ್ತಿಯಲ್ಲಿ ಯಶಸ್ಸು ಪಡೆಯದಿದ್ದರೆ ಜೈನ ಮುನಿಗಳು ಹೇಳಿದ ಶ್ರೀಮಂತ ಕುಳಗಳ ಉದ್ಯಮಗಳಲ್ಲಿ ನೌಕರಿ ಮಾಡಬೇಕಂತೆ.

ಈ ನಿಯಮವನ್ನು ಅವರ ಇಡೀ ಸಮಾಜ ಒಪ್ಪಿಕೊಂಡಿದೆ. ಸಮಾಜದಲ್ಲಿ ಯಾರೇ ತಪ್ಪು ಮಾಡಿದರೂ ಮುಖಂಡರು ಅವರನ್ನು ತಿದ್ದಿ ಸರಿದಾರಿಗೆ ತರುತ್ತಾರಂತೆ. ದಾರಿಗೆ ಬರದವರನ್ನು ಸಮಾಜ ಕಡೆಗಣಿಸೋದರಿಂದ ಅವರಿಗೆ ಮುಖಭಂಗವಾಗುವುದೆಂದು ಗೊತ್ತಿರುತ್ತದಂತೆ. ಹೀಗಾಗಿ ಸಮಾಜವನ್ನು ಮರೆತು, ಹಿರಿಯರನ್ನು ಮರೆತು ಅವರು ತಮ್ಮದೇ ರಾಜ್ಯವೆಂಬಂತೆ ನಡೆದುಕೊಳ್ಳೋದಿಲ್ಲವಂತೆ.

ಇನ್ನು ಮುನಿಗಳಲ್ಲಿ ಅವರ ಸಂಪ್ರದಾಯದ ಪ್ರಕಾರ ಹಾಕಿರುವ ಯತಿನಿಯಮಗಳನ್ನು ಅವರು ಉಲ್ಲಂಘಿಸಿದ ದಾಖಲೆಯೇ ಇಲ್ಲವಂತೆ. ಮುನಿಗಳಲ್ಲಿ ಕೂದಲನ್ನು ಒಂದೊಂದನ್ನೇ ಹಿಡಿದು ಕಿತ್ತು ತೆಗೆಯುವ ಸಂಪ್ರದಾಯ ಇದೆಯಂತೆ. ಹಲವು ಮುನಿಗಳು ಮುಪ್ಪಿನಲ್ಲಿ ಸಲ್ಲೇಖನ ಎಂಬ ವ್ರತ ನಡೆಸಿ ನಿರಾಹಾರಿಗಳಾಗಿ ಕೊನೆಗೆ ದೇಹವನ್ನು ಬಿಡ್ತಾರಂತೆ. ಪ್ರತಿನಿತ್ಯ ಗೋಡಂಬಿ-ದ್ರಾಕ್ಷಿ ಮುಕ್ಕುವ ನಮಗೆ ಅದನ್ನೆಲ್ಲ ಕೇಳಿ ಮೈ ಜುಂ ಎಂದುಬಿಟ್ಟಿತು. ಹಾಗೆಲ್ಲ ಮಾಡಬಾರದಲ್ಲವೇ? ಅದು ಮನುಷ್ಯ ತನ್ನ ದೇಹಕ್ಕೆ ತಾನೇ ಮಾಡಿಕೊಳ್ಳುವ ಅಪಚಾರವಾಗುತ್ತದೆ ಎನಿಸಿತು ನಮಗೆ.
smile emoticon
smile emoticon

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್”, “ಬರೇ ಕಾಮ್” ಎಂಬ ಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಇನ್ನು ನಮ್ಮ ಸಮಾಜದಲ್ಲಿಯೂ ಹಲವರಿದ್ದಾರೆ; ಎಲ್ಲೋ ಹೆಸರಿಗೆ ಒಂದು ಸಭೆ, ಸಂಸ್ಥೆಯಲ್ಲಿ ಒಂದಿಪ್ಪತ್ತೈದು ಸಾವಿರ ಹಣ ಇದ್ದರೆ, “ಆಡಳಿತ ನಡೆಸಲು ಮುಂದಾದವರು ತಿಂದುಬಿಟ್ಟರು” ಎಂದು ಬೊಬ್ಬೆ ಹೊಡೀತಾರೆ. ಹೆಚ್ಚಿಗೆ ಇದ್ದರಲ್ಲವೇ ತಿನ್ನಲಿಕ್ಕೆ? ಎಲ್ಲೆಲ್ಲೂ ಕೈಯಿಂದ ಹಾಕಿ ಸಾಮಾಜಿಕ ಕೆಲಸಗಳನ್ನು ಮುಗಿಸಬೇಕಾದ ಸಾಧ್ಯತೆಗಳೇ ಹೆಚ್ಚು. ಹೀಗಿದ್ದರೂ. ಸಮಾಜದ ಸಾವಿರಾರು ಕೋಟಿ ಹಣ ಸೇರಿದ್ದೆಂದರೆ ಅದು ನಮ್ಮ ಮಠದಲ್ಲಿ ಮಾತ್ರ. ನಮ್ಮ ಶಿಷ್ಯರಲ್ಲಿ ಹಲವರು ಉದ್ಯಮಿಗಳಿದ್ದಾರೆ, ವ್ಯಾಪಾರಿಗಳಿದ್ದಾರೆ, ಸಾಫ್ಟ್ ವೇರ್ ನವರಿದ್ದಾರೆ, ಇಂತವರನ್ನೆಲ್ಲ ಹಿಡಿದು ನಾವು ಯೋಜನೆಗಳನ್ನು ತೋರಿಸಿದ್ದರಿಂದ ಅವರೆಲ್ಲ ನಮ್ಮನ್ನು ನಂಬಿ ಶಕ್ತ್ಯಾನುಸಾರ ಹಣವನ್ನು ಕೊಟ್ಟಿದ್ದಾರೆ.

ನಮ್ಮ ಬಾವಯ್ಯ ನಿಂತಲ್ಲಿ ಕುಂತಲ್ಲಿ ಒಂದೊಂದು ಯೋಜನೆಗಳನ್ನು ಹಾಕುತ್ತಲೇ ಹೋದ. ಅವ ಹಾಕಿದ ಯೋಜನೆಗಳಿಗೆಲ್ಲ ಮಠದ ಮೊಹರು ಹಾಕಿ ಭಕ್ತರ ಮುಂದಿಟ್ಟಾಗ ಅವರು ತಮ್ಮ ವೈಯಕ್ತಿಕ ಖರ್ಚುಗಳನ್ನೂ ಲೆಕ್ಕಿಸದೆ ಉದಾರಿಗಳಾಗಿ ದೇಣಿಗೆ ಕೊಡುತ್ತಲೇ ಬಂದಿದ್ದಾರೆ. ಎಷ್ಟೋ ಜನ ಸೈಟು. ಮನೆ ಖರೀದಿಗೆ ಇಟ್ಟುಕೊಂಡ ಹಣವನ್ನೂ ಸಹ ನಮ್ಮ ಮಠಕ್ಕೆ ನೀಡಿದ್ದಾರೆ; ಪರವಾಗಿಲ್ಲ ಬಿಡಿ ಅವರು ಅವರಿಗಾಗಿ ಸೈಟು ಖರೀದಿಸುವ ಬದಲು ಅವರ ಹಣದಲ್ಲಿ ನಾವು ನಮ್ಮ ಬಾವಯ್ಯ ನಮಗಾಗಿ ಸೈಟುಗಳನ್ನು ಖರೀದಿಸಿದ್ದೇವೆ.
smile emoticon
smile emoticon
smile emoticon
smile emoticon
smile emoticon
smile emoticon

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್”, “ಬರೇ ಕಾಮ್” ಎಂಬ ಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಸೈಟುಗಳ ವ್ಯವಹಾರದಲ್ಲಿ ಬೇರ್ಪಡುವ ಎಂಬವರು ಬಹಳ ಮುಂಚೂಣಿಯಲ್ಲಿದ್ದು ಅವರ ಮಡದಿಯನ್ನು ನಮ್ಮ ಸೇವೆಗೆ ತೊಡಗಿಸಿದ್ದಾರೆ. ಹೀಗಾಗಿ ನಾವು ಮತ್ತು ಬಾವಯ್ಯ ಬೇರ್ವಡುವ ಎಂಬವರಿಗೆ, ನಾವು ಭಕ್ತರಿಂದ ಹೊಡೆದುಕೊಂಡ ಹಣವನ್ನು ಹೆಚ್ಚಿನ ಮುತುವರ್ಜಿಯಲ್ಲಿ ಒದಗಿಸಿ ಬಂದ ಲಾಭದಲ್ಲಿ ಪಾಲುದಾರರಾಗುತ್ತಿದ್ದೆವು. ನಮ್ಮ ಉಚ್ಚೆ ಕೆಂಪಗಾಗಲು ತೊಡಗಿದ ಬಳಿಕ ಈಗೀಗ ಸ್ವಲ್ಪ ವ್ಯವಹಾರ ನಿಂತುಕೊಂಡಿದೆ.

ಸಮಾಜ ಮುಖಿಗಳು ಎಂದು ನಾವು ತಲೆಗಿಂತ ದೊಡ್ಡ ಮುಂಡಾಸು ಸುತ್ತಿದಂತೆ ಬೋರ್ಡು ಹಾಕ್ಕೊಂಡಿದ್ದರಿಂದ “ಓಹೊ ಗುರುಗಳು ಸಮಾಜ ಮುಖಿಗಳು” ಎಂದುಕೊಂಡವರೆ ಬಹಳಜನ. ’ಸಮಾಜ ಮುಖಿ’ಯಾದ ನಾವು ಕಮ್ಯೂನಿಟಿ ಫಂದ್ ಏರ್ಪಾಟು ಮಾಡಲಿಲ್ಲ. ಕಮ್ಯೂನಿಟಿಯಲ್ಲಿ ನಿರ್ಗತಿಕರಿಗೆ ಬೇಕಾದ ಸಹಾಯವನ್ನೂ ನಾವು ಒದಗಿಸಲಿಲ್ಲ.

ಸಮಾಜದಲ್ಲಿ ಹಳ್ಳಿಗಳಲ್ಲಿ, “ತಂಗಿ ಪರರ ಮನೆಗೆ ಹೋಗುವವಳು” ಎಂದುಕೊಂಡು ಪಾಲಕರು ಹೆಚ್ಚಿಗೆ ಓದಿಸಿದ್ದರಿಂದ ಇಂದು ಹೆಣ್ಣುಮಕ್ಕಳೆಲ್ಲ ಗಂಡುಮಕ್ಕಳಿಗಿಂತ ಹೆಚ್ಚಿಗೆ ಓದಿದ್ದಾರೆ; ದುಡಿಮೆ ಮಾಡ್ತಿದ್ದಾರೆ. ಸಮಾಜದಲ್ಲಿ ಅರ್ಹ ವರ ಸಂಪತ್ತು ಇದ್ದರೂ ಬೇರೆ ಸಮಾಜದ ಗಂಡುಗಳೊಂದಿಗೆ ಲವ್ ಮ್ಯಾರೇಜ್ ಮಾಡಿಕೊಳ್ಳುತ್ತಿರೋದರಿಂದ ನಮ್ಮ ಸಮಾಜದ ಹುಡುಗರು ಹೆಣ್ಣಿಗಾಗಿ ಪರದಾಡುವ ಸ್ಥಿತಿ ಹುಟ್ಟಿಕೊಂಡಿತು.

ಸಮಾಜದ ಮುಖಂಡರಾಗಿ ನಾವು ಹೆಣ್ಣುಹೆತ್ತವರನ್ನು ಮತ್ತು ವರರ ಪಾಲಕರನ್ನು ಕರೆಸಿ ಹೊಸ ಒಡಂಬಡಿಕೆಯನ್ನು ಮಾಡಬಹುದಿತ್ತು. ನಾವದಕ್ಕೆ ಮುಂದಾಗಲಿಲ್ಲ; ಸನ್ಯಾಸಿಗಳಿಗೆ ಮದುವೆ ಮಾಡಿಸುವ ವ್ಯವಹಾರ ಬೇಡ ಎಂದುಬಿಟ್ಟೆವು. ಆದರೆ ನೌಕರಿಯಲ್ಲಿರುವ ಹಲವು ಹುಡುಗಿಯರನ್ನೂ ನಾವು ಏಕಾಂತಕ್ಕೆ ಬಳಸಿಕೊಂಡಿದ್ದೇವೆ ಎಂಬ ಖುಷಿ ನಮಗಿದೆ.

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್”, “ಬರೇ ಕಾಮ್” ಎಂಬ ಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಮಠದ ಬ್ರಾಂಚು ನಿರ್ಮಾಣಕ್ಕೆ ಐದು ಕೋಟಿ ಕೈಯಿಂದ ಹೂಡಿದ್ದ ಸದ್ಗುಣಿಗಳು ಅಷ್ಟೆಲ್ಲ ದಿನ ನಾವು ಕಚ್ಚೆಹರುಕರಾದರೂ ಸುಮ್ಮನಿದ್ದರು ಯಾಕೆಂದರೆ ಅವರ ಹಣವನ್ನು ನಾವು ಮರಳಿಸಬೇಕಿತ್ತು. ಅವರಿಗೆಲ್ಲ ಉಂಡೆನಾಮ ತೀಡುವುದು ನಮಗೆ ಗೊತ್ತಿಲ್ಲವೇ? ಎಲ್ಲರೂ ಎದ್ದುಹೋದರೂ, ವೇದಿಕೆಯಲ್ಲಿದ್ದ ಅತಿಥಿಯ ಭಾಷಣ ಕೇಳುತ್ತಿದ್ದನಂತೆ ಒಬ್ಬ ಬಾಲಕ. ಕುತೂಹಲದಿಂದ ಆತಿಥಿ ಪ್ರಶ್ನಿಸಿದಾಗ ಹೇಳಿದನಂತೆ “ವೇದಿಕೆಯಲ್ಲಿ ನೆಲಕ್ಕೆ ಹಾಸಿರುವ ಜಮ್ ಖಾನ ಐತಲ್ರೀ, ಅದು ನಮ್ಮನೇದು, ಅದನ್ನು ತೆಗೆದುಕೊಂಡು ಹೋಗಾಕ ಇಲ್ಲೇ ಕುಂತೀನ್ರಿ. ಖಾಲೀ ಕೈನಾಗ ಮನೀಗ್ ಹೋದ್ರ ಅಪ್ಪಾರು ಹೋಡೀತಾರ, ಅದಕ್ಕ” ಅಂದನಂತೆ!
smile emoticon
smile emoticon
smile emoticon

ನದೀ ದಾಟಿದ ಮೇಲೆ ಏನನ್ನೂ ಕೊಡದೆ ಅಂಬಿಗನನ್ನು ಒದ್ದೋಡಿಸುವುದು ನಮ್ಮ ಕುಲದ ಜಾಯಮಾನ. ಅದರಲ್ಲಿ ನಾವು ಮತ್ತು ನಮ್ಮ ಬಾವಯ್ಯ ನಿಷ್ಣಾತರಾಗಿದ್ದೇವೆ. ನಮಗೆ ಮಠ ಕಟ್ಟಿಸಿಕೊಡಬೇಕಾಗಿತ್ತು ಹೇಳಿದೆವು. ಸದ್ಗುಣಿಗಳು ಮುಂದಾಗಿ ಕಟ್ಟಿಸಿದರು; ಕೆಲಸ ಮುಗೀತು-ಅವರಿಗೆ ಅಂಬಿಗನ ಸ್ಥಾನ! ಮಠದ ಎಲ್ಲಾ ಕೆಲಸಗಳಿಗೂ ಬಕರಾ ಭಕ್ತರನ್ನೆ ಆಯ್ಕೆಮಾಡಿಕೊಳ್ಳುತ್ತಿದ್ದೆವು. ಬಕರಾ ಭಕ್ತರು ಅಂದ್ರೆ ಮುಗ್ಧತೆಯಿಂದ ನಮ್ಮನ್ನೇ ನಂಬಿದವರು ಅಂತರ್ಥ. ಒಮ್ಮೆ ಸ್ವೀಕರಿಸಿದ ಮೇಲೆ ಮತ್ತೆ ಸಂದೇಹಿಸಬಾರದು, ಒಮ್ಮೆ ಒಪ್ಪಿಕೊಂಡ ಮೇಲೆ ಮತ್ತೆ ತೂಕಕ್ಕೆ ಹಾಕಬಾರದು ಅಂತ ಆಗಾಗ ನಾವು ಹೇಳುತ್ತಲೇ ಇರ್ತೇವೆ. ಅದಕ್ಕೆ ಬಕರಾ ಭಕ್ತರೆಲ್ಲ ಕೋಲೆಬಸವಣ್ಣಗಳಾಗಿ ತಲೆ ಅಲ್ಲಾಡಿಸ್ತಾನೆ ಇರ್ತಾರೆ.

ಹಿಂದೊಂದು ಕಾಲದಲ್ಲಿ ಮದುವೆ ಆದ ನಂತರ ಆಗೋಯ್ತು, ಗಂಡ ಕಳ್ಳ, ಸುಳ್ಳ, ಶುಂಠ, ಫಟಿಂಗ, ಕಚ್ಚೆಹರುಕ, ಲೋಭಿ, ಕೋಪಿಷ್ಠ, ಮಹಾಗರ್ವಿ, ಆಳಿನಂತೆ ನಡೆಸಿಕೊಳ್ಳೋನು ಹೀಗೆಲ್ಲ ಇದ್ದರೂ ಹೆಂಡತಿ ತಗ್ಗಿಬಗ್ಗಿ ನಡೆದುಕೊಳ್ಳುತ್ತ ಬಂಗಾರದ ಪಂಜರದಲ್ಲಿ ಬದುಕುವ ಅರಮನೆಯ ಗಿಳಿಯಂತೆ ಬದುಕಬೇಕಾಗುತ್ತಿತ್ತು. ಅಕಸ್ಮಾತ್ ಗಂಡ ಸತ್ತರೆ, ಆ ಸಮಯದಲ್ಲಿ ಮಕ್ಕಳಿನ್ನೂ ದೊಡ್ಡವರಾಗಿರದಿದ್ದರೆ ಹೆಂಡತಿಯ ಗೋಳನ್ನು ಕೇಳುವವರೇ ಇರುತ್ತಿರಲಿಲ್ಲ.

ಆಗ ನಮ್ಮಂತವರ ಮಠದ ಶಿಷ್ಯಗಣಗಳಲ್ಲಿ ಸೇರಿಕೊಂಡಿರುತ್ತಿದ್ದ ಕಚ್ಚೆಹರುಕರು ಅಂತಹ ಮಹಿಳೆಯ ಮನೆಗೆ ಲಗ್ಗೆ ಇಡುತ್ತಿದ್ದರು. ಸಮಾಜ ಹಳದಿ ಕಣ್ಣಿನಿಂದ ನೋಡಲು ಅರಂಭಿಸುತ್ತಿತ್ತು. ಒತ್ತಡಕ್ಕೆ, ಬಲಾತ್ಕಾರಕ್ಕೆ ಒಳಗಾಗಿ ಕೆಲವು ಮಹಿಳೆಯರು ಬಸಿರಾಗುತ್ತಿದ್ದದ್ದು ಉಂಟು. ಅದಕ್ಕಾಗಿಯೇ ಅವರು ಚೆನ್ನಾಗಿ ಕಾಣದಿರಲಿ ಎಂಬ ಕಾರಣಕ್ಕೆ ಅವರ ಮಂಗಲ ಚಿನ್ಹೆಗಳನ್ನೆಲ್ಲ ತೆಗೆಸಿಹಾಕಿ ಕೇಶಮುಂಡನ ಮಾಡಿಸಿ, ಬಿಳಿ ಅಥವಾ ಕೆಂಪು ಸೀರೆ ಉಡಲು ಹೇಳಲಾಗುತ್ತಿತ್ತು. ಆದರೆ ಸಮಾಜದಲ್ಲಿದ್ದ ಕಚ್ಚೆಹರುಕರ ನಿಯಂತ್ರಣವನ್ನು ಯಾವ ಮಠವೂ ಕೈಗೊಳ್ಳಲಿಲ್ಲ; ಯಾರೂ ಕೆಚ್ಚಹರುಕರಿಗೆ ಬಹಿಷ್ಕಾರ ಹಾಕಲಿಲ್ಲ. ಹೀಗಾಗಿ ಕಚ್ಚೆಹರುಕರು ಚೆನ್ನಾಗಿಯೇ ಬಾಳಿದರು.
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon
smile emoticon

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್”, “ಬರೇ ಕಾಮ್” ಎಂಬ ಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಇಂದು ಗಂಡ ಸರಿಯಿಲ್ಲ ಅನಿಸಿದರೆ ಮಹಿಳೆಯರು ಡೈವೋರ್ಸ್ ಕೊಡ್ತಾರೆ. ಮದುವೆಯಾದ ಮಹಿಳೆಯಲ್ಲಿ ಅಥವಾ ಪುರುಷನಲ್ಲಿ “ಒಮ್ಮೆ ಒಪ್ಪಿಕೊಂಡ ಮೇಲೆ ಮುಗೀತು. ಹೇಗಿದ್ದರೂ ಸಹಿಸಿಕೊಳ್ಳಿ” ಎನ್ನಲು ಸಾಧ್ಯವೇ? ಇಲ್ಲವಲ್ಲ? ಹಾಗಾದರೆ ಒಬ್ಬರ ಖಾಸಗಿ ಜೀವನದಲ್ಲೆ ಆಯ್ಕೆಗಳಿಗೆ ಅವಕಾಶ ಇರುವಾಗ ಸಮಾಜದ ಧಾರ್ಮಿಕ ಮುಖಂಡನ ಹುದ್ದೆಯಲ್ಲಿರುವವ ಸರಿ ಇರದಿದ್ದರೆ ಬದಲಾಯಿಸಿಕೊಳ್ಳುವ ಹಕ್ಕು ಸಮಾಜಕ್ಕಿಲ್ಲವೇ? ಅವನು ಹೇಳಿದ್ದನ್ನೇ ನಂಬಿಕೊಂಡು ಅವರೆಲ್ಲ ಬದುಕಬೇಕೇ? ಆದರೂ ನಾವು ಹಾಗೆ ಹೇಳ್ತೇವೆ; ಇಲ್ಲದಿದ್ದರೆ ಜನ ನಮ್ಮನ್ನು ಕಿತ್ತುಹೋದ ಚಪ್ಪಲಿಯಿಂದ ಬಾರಿಸಿ ಓಡಿಸ್ತಾರೆ.
smile emoticon
smile emoticon

ಪ್ರವಚನ ಬಹಳ ಸಮಯ ತೆಗೆದುಕೊಂಡಿತು. ಪಾಪ ನೀವೆಲ್ಲ ಬಹಳ ಹೊತ್ತು ಬಣ್ಣದ ಅಕ್ಕಿಗಾಗಿ ಕಾದಿದ್ದೀರಿ. ಇನ್ನು ಒಂದು ವಿಷಯ ಹೇಳೋದು ಬಾಕಿ ಇದೆ. ಭಕ್ತರ ಧನ-ಕನಕ ಬಂದಿದ್ದರಲ್ಲಿ ಇಲ್ಲಿಯವರೆಗೆ ಬದುಕಿಕೊಂಡೆವು. ಈಗೀಗ ನಮಾಮಿಯಂತಹ ಕೆಲವು ಶ್ರೀಮಂತ ಭಕ್ತರು ನಮ್ಮ ಸಂಪರ್ಕವನ್ನೆ ಕಡಿದುಹಾಕಿದ್ದಾರೆ. ಹಣ ಇರುವವರೆಗೆ ನಮ್ಮಿಂದ ಎರಡೂ ಕೈಗಳಲ್ಲಿ ಮೆದ್ದ ಜನ ಮತ್ತೆ ಹಣಪೀಕಲು ಹವಣಿಸುತ್ತಿದ್ದಾರೆ.

ಹಿಂದೆ ಹಲವು ದಿನಗಳಲ್ಲಿ ಕಂತೆಕಂತೆಗಳನ್ನು ಕೊಡುತ್ತಾ ತಪ್ಪಿಸಿಕೊಳ್ಳುತ್ತಾ ಬಂದೆವು. ನಾವು ಯಾರನ್ನು ಎಲ್ಲಿ ಸಂಪರ್ಕಿಸ್ತೇವೆ? ಹೇಗೆ ಹಿಡಿತೇವೆ? ಎಂಬುದು ಬಹಿರಂಗವಾಗಿ ಬಕರಾಭಕ್ತರಿಗೆ ಗೊತ್ತಾಗದಿದ್ದರೂ ನಮ್ಮ ವಿರೋಧಿಗಳಿಗೆ ಎಲ್ಲವೂ ಗೊತ್ತಾಗಿಬಿಟ್ಟಿದೆ. ತೀರ್ಪನ್ನು ನಮಗೆ ಬೇಕಾದಂತೆ ಪಡೆಯುವ ಪವಾಡದ ಬಗ್ಗೆ ಅವರಿಗೆ ಹೊಸದಾಗಿ ಏನನ್ನೂ ಹೇಳೋದು ಉಳಿದಿಲ್ಲ. ಗೊತ್ತಾಯ್ತನ ರಾಮಚಂದ್ರ?

ಮಠ ನಿಮ್ದು. ಮಠದ ಘನತೆ, ಮರ್ಯಾದೆ ನಿಮ್ಮೆಲ್ಲರ ಮುಂದಿದೆ. ನಿಮ್ಮೆಲ್ಲರ ರಕ್ಷಣೆ ನಮ್ಮ ಜವಾಬ್ದಾರಿ; ಆದರೆ ಮಠದ ರಕ್ಷಣೆ ನಿಮ್ಮ ಜವಾಬ್ದಾರಿ ಗೊತ್ತಾಯ್ತಲ?
smile emoticon
smile emoticon
smile emoticon

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್”, “ಬರೇ ಕಾಮ್” ಎಂಬ ಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಕೆಳದರ್ಜೆಯವರು ಒರೆಸಿ ಬಿಸಾಕಿದ್ದು ಸರಿಯಲ್ಲ ಅಂತ ಮೇಲ್ದರ್ಜೆಗೆ ಹೋಗಿದೆ ಈಗ. ಅವರಲ್ಲಿ ಯಾರನ್ನು ಎಲ್ಲಿ ಹಿಡೀಬೇಕು? ಎಷ್ಟಕ್ಕೆ ಬಗ್ಗಬಹುದು? ಎಂಬಿತ್ಯೇತ್ಯಾದಿ ವಿಷಯಗಳನ್ನು ನಮ್ಮ ಕೆಲವು ಪ್ರಾಯೋಜಿತ ರೌಡೀಭಕ್ತರು ಅಡ್ಡಗೇಟುಗಳನ್ನು ಹಾಕಿಕೊಂಡು ಪ್ರಯತ್ನಿಸ್ತಾ ಇದ್ದಾರೆ. ಆದ್ರೂ ಕೆಲವು ದಿನಗಳಿಂದ ನಮಗೆ ಉಚ್ಚೆ ಕೆಂಪಗಾದದ್ದು ಸತ್ಯ. ಆರು ಕೋಟಿ ಕೊಟ್ಟಿದ್ದು ನೀರಲ್ಲಿ ಹೋಮ ಮಾಡ್ದಾಂಗಾಯ್ತಲ ರಾಮಚಂದ್ರ.

ಇತ್ಲಗೆ ಈ ಮಾಧ್ಯಮದೋರೆಲ್ಲ ಖದೀಮರು. ಹನ್ನೆರಡು , ಹದಿಮೂರು ಅಂತ ಮೊಗೆಮೊಗೆದು ಲಕ್ಷ ಲಕ್ಷಗಳಲ್ಲಿ ಕೊಟ್ಟಿದ್ದನ್ನು ಗುಳುಂ ಸ್ವಾಹಾ ಮಾಡಿಕೊಂಡು ಈಗ ಮತ್ತೇನಾದರೂ ನಮ್ಮ ಪರವಾಗಿ ಮಹಿಮೆ ಬರೀಬೇಕು ಅಂದ್ರೆ ಮತ್ತೆ ಕೇಳ್ತಾರೆ. ನಮ್ಮ ಬಾವಯ್ಯ ಎಲ್ಲೀವರೆಗೆ ಬಂದು ಬಿಟ್ಟ ಅಂದ್ರೆ ಸಮ್ಮರ್ ಕ್ಯಾಂಪ್ ವರೆಗಿನ ಚಿಕ್ಕ ಯೋಜನೆಗೂ ತೊಡ್ಗಿಬಿಟ್ಟಿದ್ದಾನೆ-ಆದ್ರೂ ಕಾಸು ಬರ್ತಾ ಇಲ್ಲ. ಜನ ಎಲ್ಲ ಬುದ್ಧಿವಂತರಾಗ್ಬುಟ್ಟಿದ್ದಾರೆ, ಹಾವಾಡಿಗ ಮಠದ ಯೋಜನೆಯ ಪತ್ರ ಬಂದ್ರೆ ಸಾಕು ಎಲ್.ಐ,ಸಿ ಏಜೆಂಟ್ ಬಂದರೆ ಅಡಗಿ ತಪ್ಪಿಸಿಕೊಳ್ತಿದ್ರಂತಲ್ಲ? ಹಾಗೆ ಅಡಗಿ ತಪ್ಪಿಸಿಕೊಳ್ತಾರಂತೆ. ಪೈಸೇನೂ ಹುಟ್ತಾ ಇಲ್ಲ ಅಂತ ಕೆಲವು ಗುರಿಕಾರರು ಹೇಳಿದ್ದಾರಂತೆ.

ಇಲ್ಲೀವರೆಗೆ ಹೇಗೋ ಹಿಂದಿನವರು ಕೂಡಿಟ್ಟಿದ್ದು, ನಾವು ಹೊಡೆದುಕೊಂಡಿದ್ದು ಎಲ್ಲ ಇತ್ತು, ಕಳೀತು. ಇಡೀ ರಾಜ್ಯದಲ್ಲಿ, ದೇಶದಲ್ಲಿ ನಾವೆ ಗೆದ್ದೆವು ಎಂದು ಒಮ್ಮೆ ಹಾರಾಡಿ ತೋರಿಸಿದೆವು. ಇನ್ನು ಮುಂದೆ ನಮ್ಮ ಪ್ರಯೋಜಿತ ಮಸಾಜಣ್ಣ, ಚಿನ್ನಾವರ ಬಸ್ಸಣ್ಣ ಮೊದಲಾದವರಲ್ಲಿ ಯಾರಾದರೂ ನಮಗೆ ’ಖರೀದಿ ಭಾಗ್ಯ’ವನ್ನು ಕರುಣಿಸುವ ಮನಸ್ಸು ಮಾಡ್ತಾರೆಯೇ? ಇಲ್ಲಿಯವರೆಗೆ ನಾವು ದೇವರ ಹೆಸರನ್ನು ಹೇಳಿ ನಂಬಿಸಿದ್ದೆವು, ಇನ್ನು ಮುಂದೆ ಅದು ನಡೀಲಿಕ್ಕಿಲ್ಲ. ಎಲ್ಲೋ ಕೆಲವು ಬಕರಾಗಳು ಪರವಾಗಿ ಕುಣಿದಾವು; ಆದರೆ ಮೆಜಾರಿಟಿ ಜನರಿಗೆ ಈಗ ನಿಜದ ಅರಿವಾಗಿಬಿಟ್ಟಿದೆ; ಮಠದಿಂದ ನಮ್ಮನ್ನು ಹೊರಗಟ್ಟಿ ಮಠಕ್ಕೆ ಅರ್ಹನಾದ ವ್ಯಕ್ತಿಯನ್ನು ನೇಮಿಸಿಕೊಳ್ಳಬೇಕೆಂದು ಅವರೆಲ್ಲ ಒಳಗೊಳಗೇ ತೀರ್ಮಾನಕ್ಕೆ ಬಂದಿದ್ದಾರೆ.

ಹಾಗಾದರೆ ಮುಂದೆ ನಾವೇನು ಮಾಡಬೇಕು? ಹಿಮಾಲಯಕ್ಕೆ ಹೋಗೋಣವೇ? ಅಲ್ಲಿರುವವರು ಕಲ್ಲು ಹೊಡೆದಾರು. ಊರಕಡೆಗೆ ಹೋಗೋಣವೇ? ಅಧಿಕಾರ, ಹಣ ಇಲ್ಲದಿದ್ದರೆ ಯಾರು ಬಂದಾರು? ಹಸುವಿನ ಕಿವಿಯೂರಿನಲ್ಲಿ ಕಟ್ಟಿಸುತ್ತಿರುವ ಮನೆಯಲ್ಲಿ ಅಶ್ವಿನಿನಕ್ಷತ್ರವನ್ನಿಟ್ಟುಕೊಂಡು ಸಂಸಾರಿಯಗೋಣವೇ? ಅಶ್ವಿನಿನಕ್ಷತ್ರವೂ ನಮ್ಮನ್ನು ಕ್ರಮೇಣ ಬೇಡವೆಂದು ಕ್ಯಾಕರಿಸಿ ಥೂ ಮುಖದ ಮೇಲೆ ಉಗುಳೀತು.

ಅತ್ತ ನಕ್ಷತ್ರಿಕರಂತೆ ಬೆನ್ನಟ್ಟಿ ಬರುತ್ತಿದ್ದಾರಲ್ಲ ನಮ್ಮ ವಿರೋಧಿಗಳು, ಅವರ ಜೊತೆಗೆ ಮೆರವಣಿಗೆ ತೆಗೆಯಲು ಕರೆದೊಯ್ಯಲು ಬರುತ್ತಾಲ್ಲ ಮಾವಂದಿರು..ಶಿವನೇ… ಹಸುವಿನಕಿವಿಯೂರ ಕೇಸು, ಇನ್ನೊಂದು ರೇಪ್ ಕೇಸು, ಪಿ.ಆಯ್.ಎಲ್ ಕೇಸು, ನಮ್ಮ ಗೂಂಡಾಗಳಿಂದ ಶರ್ಟ್ ಹರಿಸಿಕೊಂಡು-ಹೊಡೆತ ತಿಂದ ವೈದ್ಯರು ಹಾಕಿದ ಕೇಸು, ಲ್ಯಾಂಡ್ ಡೀಲಿಂಗ ಕೇಸು, ಮಠದ ಆಸ್ತಿ ಅವ್ಯವಹಾರದ ಕೇಸು ಒಂದೆರಡು ಕೇಸುಗಳಲ್ಲ, ಸಾಲಾಗಿ ಸಾಲಾಗಿ ನೂರಾರು ದೊಡ್ಡ ದೊಡ್ಡ ಕೇಸುಗಳು ಬರುತ್ತಿವೆಯಲ್ಲ?

ಏನು ಮಾಡಬೇಕು ನಾವು? ನೀನೆ ಹೇಳೋ ರಾಮಚಂದ್ರ ದೇಹತ್ಯಾಗ ಮಾಡೋಣವೇ? ಅದಕ್ಕೂ ನಿರ್ಬಂಧ ಹೇರಬಹುದು. ದೇಹತ್ಯಾಗ ಮಾಡಲು ಮನಸ್ಸು ಒಪ್ಪಬೇಕಲ್ಲ? ಇನ್ನೂ ಸಾವಿರಾರು ಮಹಿಳೆಯರ ಜೊತೆಗೆ ಏಕಾಂತ ಮಾಡಬೇಕೆಂಬ ಯೋಜನೆ ಹಾಕಿಕೊಂಡಿದ್ದಾನೆ ನಮ್ಮೊಳಗಿನ ’ಯತಿ.’

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್”, “ಬರೇ ಕಾಮ್” ಎಂಬ ಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ವಿದೇಶಕ್ಕೆ ಓಡಿಹೋಗಲು ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಕಲಿ ಗುರುತಿನಲ್ಲಿ ಹಾರಿಹೋದರೂ ಇಂಟರ್ ಪಾಲ್ ಮೂಲಕ ನಾವೆಲ್ಲಿದ್ದರೂ ಹುಡುಕಿಸಿ ಮೆರವಣಿಗೆಗೆ ಕರೆತರ್ತಾರೆ. ನಾವು ಅದಕ್ಕೆ ಹೇಳಿದ್ದೆವು-“ಹೋಗಬೇಕೆಂದು ಹೇಳ್ತಾರೆ; ಆದರೆ ಎಲ್ಲಿಗೆ ಹೋಗಬೇಕೆಂದು ಹೇಳೋದಿಲ್ಲ” ಅಂತ. ಏನು ಮಾಡೋಣ ನಾವೀಗ?

ಮಠದೊಳಗಿನ ದೇವರು ಜಾಗೃತನಾಗಿಬಿಟ್ಟನೇ? ನಮ್ಮ ಅಧಿಕಾರದ ಅಂತ್ಯ ಸನಿಹಬಂದಿತೇ? ನಾವು ಪರಪ್ಪವನಕ್ಕೆ ಹೋಗಲು ಸಿದ್ಧರಾಗಬೇಕೇ? ಅಲ್ಲಿ ನಮಗೆ ಬೇಕಾದಂತೆ ಏಕಾಂತಕ್ಕೆಲ್ಲ ವ್ಯವಸ್ಥೆಯಾಗುವುದೇ? ಇದನ್ನೆಲ್ಲ ಯೋಚಿಸಿ ಯೋಚಿಸಿ ನಮ್ಮ ಉಚ್ಚೆ ಕೆಂಪಗಾಗಿದೆ ಈಗ.

ಇಲ್ಲಿಗೆ ನಮ್ಮ ಇಂದಿನ ಪ್ರವಚನವನ್ನು ಮುಗಿಸ್ತೇವೆ. ನಮ್ಮ ಭಟ್ಟಂಗಿಗಳು ಮತ್ತು ಬಕರಾ ಭಕ್ತರಿಗೆಲ್ಲ ಶುಭವಾಗಲಿ ಅಂತ ಕಚ್ಚೆ ಎತ್ತಿ ಹರಸ್ತೇವೆ.

ಬರೇ ಕಾಮ
ಬರೇ ಕಾಮ ”

ಪ್ರವಚನ ಮುಗಿಯುತ್ತಿದ್ದಂತೆ ಗಂಡು ಕತ್ತೆಗಳು ಹೆಣ್ಣುಕತ್ತೆಗಳನ್ನು ಕಂಡು “ಎಲ್ಲ ಸಿಗುವಷ್ಟು ದಿನ ಊಟಮಾಡ್ಕಳಿ” ಎನ್ನುತ್ತ ಜೋರಾಗಿ ಹಲ್ಲು ಕಿಸಿದವು. ಗಂಡು ಕುದುರೆಗಳು ನಾ ಮೇಲು ತಾ ಮೇಲು ಎಂದು ಗಂಟಲು ಹರಿದುಕೊಂಡು ಹಿಂದೆಂದಿಗಿಂತ ಅಗಾಧ ಉಚ್ಚ ಸ್ವರದಲ್ಲಿ ಹೇಷಾರವ ಹೊರಡಿಸಿದವು.
“ಹಾವಾಡಿಗ ಮಹಾಸಂಸ್ಥಾನ ಜಗದ್ಗುರು ಶೋಭರಾಜಾಚಾರ್ಯ ಚಂದ್ರನಾಡ್ಯುಜ್ಜೇಶ್ವರ ತೊನೆಯಪ್ಪ ಕಚ್ಚೆಶೀ ಮಹಾರಾಜ್ ಕೀ ಜೇ ಯ್

…………… ಜೇ ಯ್

…………..ಜೇ ಯ್
[ವಿಡಂಬನೆಯ ಮುಂದಿನ ಕಂತುಗಳನ್ನು ಸಮಯೋಚಿತವಾಗಿ ಪ್ರಕಟಿಸಲಾಗುವುದು]

Thumari Ramachandra

source: https://www.facebook.com/groups/1499395003680065/permalink/1756560741296822/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s