ಕಚ್ಚೆ ಶೀಗಳ ಗಮ್ಮು-ಕೆಲವರಿಗೆ ಬ್ರೆಡ್ಡು ಜಾಮು

ಕಚ್ಚೆ ಶೀಗಳ ಗಮ್ಮು-ಕೆಲವರಿಗೆ ಬ್ರೆಡ್ಡು ಜಾಮು

ಅದಾಗಿ ಕಚ್ಚೆಶೀಗಳ ಸವಾರಿಯು ಉದ್ದೀಪಿತ ಹಾವುಗಳನ್ನು ಬುಲ್ ಪೀನದಲ್ಲಿ ಬಚ್ಚಿಡುತ್ತ ಕ್ಷೇಮದಿಂದ ಮಾಧ್ಯಮಗಳಲ್ಲಿ ಮಿಂಚುತ್ತಿದೆ. ಲೋಕ ಕಲ್ಯಾಣಾರ್ಥವಾಗಿ ಕಚ್ಚೆ ಶೀಗಳ ಪರವಾಗಿ ಕೆಲವು ಖಾಸಗಿ ಹಿತಾಸಕ್ತಿಯ ಜನ ಲೇಖನಗಳ ಮೇಲೆ ಲೇಖನಗಳನ್ನು ಬರೆಯುತ್ತ, ಬಣ್ಣಿಸುತ್ತ ವ್ಯಾಖ್ಯಾನ ಮಾಡಿ ಗುಣಗಾನ ಮಾಡುತ್ತಿದ್ದಾರೆ.

“ಕಚ್ಚೆ ಶೀಗಳು ಪೀಠವನ್ನು ಬಿಟ್ಟುಹೋಗುವಂತೆ ಷಡ್ಯಂತ್ರ ಮಾಡಲಾಗಿದೆ” ಎಂಬುದು ಅವರ ಆರೋಪ. ಶೀಗಳು ಆ ಕೆಲಸ ಮಾಡಿದರು, ಈ ಕೆಲಸ ಮಾಡಿದರು, ಎಲ್ಲವೂ ಸಮಾಜಮುಖಿ ಕೆಲಸವೇ ಅಂತಾರೆ. ಅದೆಲ್ಲವೂ ಸರಿಯಪ್ಪ..ಕಚ್ಚೆಹರುಕರು ತಮ್ಮ ಕಚ್ಚೆಬಿಚ್ಚುವ ತೆವಲನ್ನು ತೀರಿಸಿಕೊಳ್ಳಲು ಮಹಿಳೆಯರನ್ನು ಆಕರ್ಷಿಸಬೇಕಲ್ಲವೇ? ಅದಕ್ಕಾಗಿ ಹೆಚ್ಚಿನ ಕಚ್ಚೆಹರುಕರು ಉಳಿದೆಲ್ಲ ವಿಷಯಗಳಲ್ಲಿ ಸಮಾಜ ಮುಖಿಗಳಂತೆ ತೋರಿಸಿಕೊಳ್ತಾರೆ.

ಅಪ್ಪಿತಪ್ಪಿ ತಾವೆಲ್ಲಾದರೂ ಸಿಕ್ಕಿಹಾಕಿಕೊಂಡರೆ ತಮ್ಮ ಜನಪ್ರಿಯತೆಯನ್ನು ಅಡವಿಟ್ಟು, ಜನರನ್ನು ಕಲೆಹಾಕಿ ತಾನು ಅಂಥವನಲ್ಲ ಎಂದು ಬಿಂಬಿಸುವ ಸಲುವಾಗಿ ಕಚ್ಚೆಹರುಕರು ತಮ್ಮ ಸುತ್ತ ಸಾಕಷ್ಟು ಭದ್ರವಾದ ಜನರ ಕೋಟೆಯನ್ನು ಕಟ್ಟಿಕೊಳ್ತಾರೆ. ಮಠದಲ್ಲಿ ಇದಕ್ಕಿಂತ ಭಿನ್ನವಾದದ್ದೇನೂ ಇಲ್ಲ. ಭಿನ್ನವಾದದ್ದೊಂದೇ; ಧಾರ್ಮಿಕ ಶ್ರದ್ಧಾಕೇಂದ್ರವಾಗಿರಬೇಕಾದ ಮಠ ರೌಡಿಗಳ, ಲಂಪಟರ ಮತ್ತು ಧನದಾಹಿಗಳ ಆಡುಂಬೊಲವಾಗಿದೆ.

ಇತಿಹಾಸದಲ್ಲಿ ಶ್ರೀಧರ ಸ್ವಾಮಿಗಳಂತಹ ಮಹಾಪುರುಷರನ್ನು ನಾವು ಕಾಣ್ತೇವೆ. ಅವರು ಯತಿ ಧರ್ಮವನ್ನು ಚಾಚೂ ತಪ್ಪದೆ ಸಮಾಜ ಸೇವೆ ಮಾಡಿದರು, ಆರ್ತರನ್ನು ಸಂರಕ್ಷಿಸಿದರು. ಅವರ ನಡೆನುಡಿಗಳಲ್ಲಿ ಸದಾ ವೈರಾಗ್ಯವೇ ಎದ್ದುಕಾಣುತ್ತಿತ್ತು. ತೊನೆಯಪ್ಪನಿಗೂ ಮತ್ತು ಅವರಿಗೂ ಮುಖಭಾವದಲ್ಲಿರುವ ವ್ಯತ್ಯಾಸವನ್ನು ಗಮನಿಸಿ. ಅವರು ಕಂಡಲ್ಲೆಲ್ಲ ಹಲ್ಲುಕಿಸಿಯುತ್ತಿರಲಿಲ್ಲ, ಯಾರನ್ನೋ ಆಕರ್ಷಿಸಲು ಬೇಕಾಗಿ ಮಸಲತ್ತುಗಳನ್ನು ಮಾಡುತ್ತಿರಲಿಲ್ಲ. ತೊನೆಯಪ್ಪ ಹಾಗಲ್ಲ. ಸಮಾಜಮುಖಿ ತೊನೆಯಪ್ಪ ಮಹಿಳೆಯರತ್ತ ವಾಲಿಕೊಂಡೇ ಇರುತ್ತಾನೆ. ಮಹಿಳೆ ಕಣ್ಣಿಗೆ ಬಿದ್ದರೆ ಸಾಕು ಹಲ್ಲುಕಿಸಿಯುತ್ತಾನೆ.

ತೊನೆಯಪ್ಪನ ವೈವಿಧ್ಯಮಯ ರೀತಿಯ ಪೋಸ್ ಗಳನ್ನು ಮಾಧ್ಯಮಗಳೆಲ್ಲಿ ನೀವೆಲ್ಲ ನೋಡಿದ್ದೀರಿ. ಪೋಸ್ ಕೊಡುವುದಕ್ಕೆ ಅವನಷ್ಟು ನಿಷ್ಣಾತ ನಾಟಕ ಕಂಪನಿ ಸೂತ್ರಧಾರ ಬೇರೆ ಯಾರಿಲ್ಲ. ಯಾವ ಸನ್ಯಾಸಿಯೂ ಮಾಧ್ಯಮಗಳನ್ನು ಇಷ್ಟು ಬಳಸಿಕೊಳ್ಳೋದಿಲ್ಲ. ಇವ ಕಳ್ಳ ಸನ್ಯಾಸಿ ಎಂಬುದು ಅದರಿಂದಲೂ ಖಚಿತವಾಗುತ್ತದೆ.

ಪಾತಕಗಳನ್ನು ಮಾಡಿದ, ಯತಿನಿಯಮ ಉಲ್ಲಂಘಿಸಿದ, ಲಂಪಟನಾದ ’ಸನ್ಯಾಸಿ’ಯ ಕೈಲಿ ದೇವ ವಿಗ್ರಹವನ್ನು ಪ್ರತಿಷ್ಠೆ ಮಾಡಿಸಿದರೆ, ಪೂಜೆ ಮಾಡಿಸಿದರೆ ಭೂತಾವಾಸ ಆಗುತ್ತದೆ ಎನ್ನುತ್ತದೆ ಶಾಸ್ತ್ರ. ಈಗ ಆಗಿರುವುದು ಹಾಗೆಯೇ. ಇವನು ಮುಟ್ಟಿದ ದೇವವಿಗ್ರಹಗಳೆಲ್ಲ ದೇವರ ಬದಲಾಗಿ ದೆವ್ವಗಳು ಸೇರಿಕೊಂಡಿವೆ; ಮತ್ತೆ ದೈವೀಕಳೆಯನ್ನು ಆವಾಹಿಸಲಿಕ್ಕೆ ಪಂಚಗವ್ಯ ಹೋಮ ಮತ್ತು ಕಳಾವೃದ್ಧಿ ಹೋಮಗಳನ್ನು ಮಾಡಬೇಕಾಗುತ್ತದೆ. ಆದರೂ ದೇವವಿಗ್ರಹಗಳಲ್ಲಿ ಮೊದಲಿನ ಕಳೆ ಬರುವುದು ಡೌಟು!

ಇಂದು ಸಮಾಜ ಕೂಡ ತಪ್ಪು ಹಾದಿ ಹಿಡಿದಿದೆ. ಯಾಕೆಂದರೆ ಯಾರು ಕಳ್ಳರು ಮತ್ತು ಯಾರು ಕಳ್ಳರಲ್ಲ ಎಂಬುದನ್ನು ಅಳೆಯುವಲ್ಲಿ ಸಮಾಜ ಹಿನ್ನಡೆ ಅನುಭವಿಸಿ ಗೆದ್ದ ಎತ್ತಿನ ಬಾಲ ಹಿಡಿಯುತ್ತದೆ. ಹಣವಿದ್ದವರು ಏನೆಲ್ಲ ಮಾಡಿ ದಕ್ಕಿಸಿಕೊಳ್ತಾರೆ ಎಂಬುದನ್ನು ಕಣ್ಣಾರೆ ಕಂಡರೂ, ತಾವು ವಿರೋಧ ವ್ಯಕ್ತಪಡಿಸಿದರೆ, ನಾಳೆ ಹಣವಿದ್ದವರೇ ಗೆದ್ದು ಮುಂದೆ ತಮಗೆಲ್ಲಿ ತೊಂದರೆ ಕೊಟ್ಟಾರು ಎಂಬ ಸೇಫ್ಟಿ ಲೆಕ್ಕಾಚಾರದಲ್ಲಿ ಹಣದಿಂದ ತಮ್ಮ ಅನ್ಯಾಯ, ಅನೈತಿಕತೆಯನ್ನು ಮುಚ್ಚುವ ಜನರನ್ನೆ ಬೆಂಬಲಿಸುತ್ತಾರೆ.

ಇನ್ನೂ ಕೆಲವರಿರುತ್ತಾರೆ; ಅವರಿಗೆ ಅವರ ಶೀಘ್ರ ಲಾಭದ್ದಷ್ಟೆ ಎಣಿಕೆ; ಹೇಲಲ್ಲಿ ಬಿದ್ದ ನಾಣ್ಯವನ್ನೂ ಸಹ ನಾಲಿಗೆಯಲ್ಲಿ ಸರಿಸಿ ಎತ್ತಿಕೊಳ್ಳುವ ಪೈಕಿ. ಅಂತವರಿಗೆ ಸಮಾಜ, ಸಾಮಾಜಿಕ ಸ್ವಾಸ್ಥ್ಯ, ಯತಿ, ಯತಿ ನಿಯಮಗಳು, ಸನ್ಯಾಸಿಯ ಲಕ್ಷಣಗಳು ಇವೆಲ್ಲ ಅರ್ಥವಾಗೊಲ್ಲ. ಇಲ್ಲಿ ಇನ್ನೂರು, ಅಲ್ಲಿ ಸಾವಿರ, ಚುನಾವಣೆಗೆ ಬಸ್ಸು-ನಗದು ಐದು ಸಾವಿರ, ಗುಂಡು-ತುಂಡು ಇಂತಹ ಪದಗಳು ಅವರಿಗೆ ಬೇಗ ಅರ್ಥವಾಗುತ್ತವೆ. ಚಿನ್ನಾವರದ ಬಸ್ಸಣ್ಣನ ಬಳಗವೆಲ್ಲ ಇಂತದ್ದೆ. ಹಾಗಾಗಿ ಚಿನ್ನಾವರದ ಬಸ್ಸಣ್ಣ ಎಷ್ಟು ಬಸ್ಸುಗಳಲ್ಲಿ ಬೇಕಾದರೂ ತುಂಬಿಸಿಕೊಂಡು ಬರ್ತಾನೆ! ಇದೇ ಮಾಯಾಜಾಲ-ಮಹೇಂದ್ರಜಾಲದ ಹೋರಿ ಪವಾಡದಿಂದ ’ರಕ್ಕಸ ಬಳಗ’ ಗೆಲುವನ್ನು ಸಾಧಿಸಿತು.

ರಕ್ಕಸ ಗುರು ಶುಕ್ರಾಚಾರ್ಯನಿಗೆ ಒಂದು ಹಂತದವರೆಗೆ ಸಾಕಷ್ಟು ಬಲವಿತ್ತು. ಶುಕ್ರಾಚಾರ್ಯ ಶೀಘ್ರ ಮುಂಗೋಪಿ, ತಲೆಹಿಡುಕ. ಬಲಿಯ ದಾನದ ಸಮಯದಲ್ಲಿ ಕೊಂಬಿನ ಚಂಬಿನಲ್ಲಿ ಹೊಕ್ಕು ತೂತುಗಟ್ಟಿಸಿ ತುಳಿಸೀದಳದ ಮೇಲೆ ನೀರು ಹನಿಯದಂತೆ ತಡೆದಿದ್ದ. ಮಹಾವಿಷ್ಣುವಿನ ದರ್ಭಾಸ್ತ್ರ ಪ್ರಯೋಗದಿಂದ ಒಂದು ಕಣ್ಣನ್ನು ಕಳೆದುಕೊಂಡ; ಹೀಗಾಗಿ ಅವನಿಗೆ ಒಕ್ಕಣ್ಣ ಶುಕ್ರಾಚಾರ್ಯ ಎಂದೂ ಹೆಸರುಂಟು.

ಸಾಂದರ್ಭಿಕವಾಗಿ ಇಲ್ಲಿ ಕಚದೇವಯಾನಿಯ ಕಥೆ ನೆನಪಾಗುತ್ತದೆ. ದೇವತೆಗಳು ಅಮೃತವನ್ನು ಕುಡಿದು ಅಮರತ್ವವನ್ನು ಸಿದ್ಧಿಸಿಕೊಂಡಿರುತ್ತಾರೆ. ಆದರೆ ದೇವ-ದಾನವ ಕಾಳಗದಲ್ಲಿ ದೇವತೆಗಳು ವಿಜಯಿಗಳಾದರೂ ದಾನವರು ಮತ್ತೆ ಅಷ್ಟೇ ಸಂಖ್ಯೆಯಲ್ಲಿ ದೇವತೆಗಳ ಜೊತೆ ಯುದ್ಧಕ್ಕೆ ಬರುತ್ತಿರುತ್ತಾರೆ. ದಾನವರ ಗುರು ಶುಕ್ರಾಚಾರ್ಯರು ತಮ್ಮ ಸಂಜೀವನೀ ವಿದ್ಯೆಯಿಂದ ಹತರಾದ ದಾನವರನ್ನು ಬದುಕಿಸುತ್ತಿದ್ದದ್ದು ಇದಕ್ಕೆ ಕಾರಣವಾಗಿತ್ತು. ದೇವತೆಗಳಿಗೆ ಇದೊಂದು ತಲೆನೋವಾಗಿ ಪರಿಣಮಿಸಿತು.

ತಾವೂ ಹೇಗಾದರೂ ಮಾಡಿ ಸಂಜೀವನೀ ವಿದ್ಯೆಯನ್ನು ಪಡೆಯಬೇಕೆಂದು ಪ್ರಯತ್ನಿಸುತ್ತಾರೆ. ದೇವಗುರು ಬ್ರಹಸ್ಪತಿಗಳ ಮಗನಾದ ಕಚನನ್ನು ಶುಕ್ರಾಚಾರ್ಯರರ ಬಳಿಗೆ ಶಿಷ್ಯನಾಗಿ ಕಳುಹಿಸುತ್ತಾರೆ. ಕಚಾನು ತಮ್ಮ ವೈರಿ ಪಾಳೆಯದವನು ಎಂದು ಗೊತ್ತಿದ್ದರೂ ಶುಕ್ರಾಚಾರ್ಯರು ಕಚನ ನಡತೆಯಿಂದ ಸಂತಸಗೊಂಡು ಆತನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸುತ್ತಾರೆ.

ಕಚನು ಶುಕ್ರಾಚಾರ್ಯರ ಬಳಿ ಅಧ್ಯಯನ ಮಾಡುತ್ತಿದ್ದಾಗ ಶುಕ್ರಾಚಾರ್ಯರ ಪುತ್ರಿ ದೇವಯಾನಿ ಆತನಲ್ಲಿ ಮೋಹಗೊಳ್ಳುತ್ತಾಳೆ. ಆದರೆ ದಾನವರಿಗೆ ಕಚನು ತಮ್ಮ ಗುರುಗಳ ಬಳಿ ಬಂದು ವ್ಯಾಸಂಗ ಮಾಡುವುದು ಇಷ್ಟವಾಗುವುದಿಲ್ಲ. ಅವರು ಕಚನನ್ನು ಅಪಹರಿಸಿ, ಕೊಂದು, ಸುಟ್ಟು, ಶವದ ಭಸ್ಮವನ್ನು ದ್ರಾಕ್ಷಾರಸದಲ್ಲಿ ಸೇರಿಸಿ ಶುಕ್ರಾಚಾರ್ಯರಿಗೆ ಕುಡಿಸುತ್ತಾರೆ. ಇತ್ತ ದೇವಯಾನಿ ಕಚನನ್ನು ಕಾಣದೆ ತಳಮಳಗೊಳ್ಳುತ್ತಾಳೆ.

ಆಗ ಶುಕ್ರಾಚಾರ್ಯರು ತಮ್ಮ ದಿವ್ಯ ದೃಷ್ಟಿಯಿಂದ ಆದದ್ದನ್ನು ಊಹಿಸಿಕೊಳ್ಳುತ್ತಾರೆ. ಈಗ ಅವರಿಗೆ ಉಭಯ ಸಂಕಟ. ಕಚನು ತಮ್ಮ ಉದರಲ್ಲಿದ್ದಾನೆ; ಕಚನನ್ನು ಬದುಕಿಸಬೇಕಾದರೆ ತಾವು ಸಾಯಬೇಕು. ನಂತರ ತಾವು ಬದುಕಬೇಕಾದರೆ ಕಚನಿಗೆ ಸಂಜೀವನೀ ವಿದ್ಯೆಯ ಉಪದೇಶ ನಡೆದು, ಆತ ಹುಟ್ಟಿನ ನಂತರ ತಮ್ಮನ್ನು ಬದುಕಿಸಲು ಕೇಳಿಕೊಳ್ಳಬೇಕಾಗುತ್ತದೆ. ಇದು ಅವರಿಗೆ ಇಷ್ಟವಾಗುವುದಿಲ್ಲ. ಆದರೆ ತಮ್ಮ ಮುದ್ದಿನ ಮಗಳು ದೇವಯಾನಿಯ ಶೋಕವನ್ನು ನೋಡಲಾಗದೆ ಅವರು ತಮ್ಮ ಉದರದಲ್ಲಿದ್ದ ಕಚನಿಗೆ ಸಂಜೀವನೀ ವಿದ್ಯೆಯನ್ನು ಉಪದೇಶಿಸುತ್ತಾರೆ.

ಕಚನು ಮತ್ತೆ ಜೀವಗೊಂಡು ಎದ್ದು ಬಂದು ಸತ್ತು ಬಿದ್ದಿದ್ದ ಶುಕ್ರಾಚಾರ್ಯರನ್ನು ಮತ್ತೆ ಸಂಜೀವನೀ ವಿದ್ಯೆಯಿಂದ ಬದುಕಿಸುತ್ತಾನೆ. ಆಗ ದೇವಯಾನಿ ತನ್ನ ಪ್ರೀತಿಯನ್ನು ಕಚನಲ್ಲಿ ಹೇಳಿಕೊಳ್ಳುತ್ತಾಳೆ. ಆದರೆ ಕಚನು ದೇವಯಾನಿಯು ಗುರುಪುತ್ರಿಯಾದ ಕಾರಣ ಮತ್ತು ಈಗ ತಾನೂ ಶುಕ್ರಾಚಾರ್ಯರ ಮಗನಾದ ಕಾರಣ ಆಕೆಯ ಪ್ರೀತಿಯನ್ನು ತಿರಸ್ಕರಿಸಿ ದೇವಲೋಕಕ್ಕೆ ಹೊರಟು ಹೋಗುತ್ತಾನೆ.

ಮಠದ ಕಥೆಯಲ್ಲಿ ರಕ್ಕಸ ಬಳಗದವರು ನಂಬಿಕೆ ಎಂಬ ಸಂಜೀವಿನಿ ವಿದ್ಯೆಯನ್ನು ಬ್ರಹ್ಮಾಸ್ತ್ರದಂತೆ ಪ್ರಯೋಗಿಸುತ್ತಾರೆ. ಇಲ್ಲಿನ ಕಳ್ಳಗುರುವಿಗೆ ಮುಗ್ಧರನ್ನು ಸೆಂಟಿಮೆಂಟಲ್ ಫೂಲ್ಸ್ ಮಾಡಿ, ಅವರ ನಂಬಿಕೆಯನ್ನು ಹೇಗೆ ದಕ್ಕಿಸಿಕೊಳ್ಳಬೇಕೆಂಬ ಮಾಯಾವಿದ್ಯೆ ಗೊತ್ತಿದೆ. ನಮ್ಮಲ್ಲಿ ಯಾರಿಗೂ ಅದನ್ನು ಅರಿತುಬರುವ ಅಗತ್ಯವಿಲ್ಲ. ಆದರೆ ಇವ ಕಳ್ಳ ಗುರು ಎಂಬುದನ್ನು ಅನಾವರಣಗೊಳಿಸಬೇಕಾಗಿದೆ.

ಅಲ್ಲಿ ಮಗಳು ದೇವಯಾನಿಯ ಇಚ್ಛೆಗಾಗಿ ಶುಕ್ರಾಚಾರ್ಯ ಕಚನಿಗೆ ಸಂಜೀವಿನಿ ಉಪದೇಶ ನೀಡಿದ; ಇಲ್ಲಿ ಹಾದರ ಸಂಸ್ಕೃತಿಯ ರಕ್ಷಣೆಗಾಗಿ ಕಳ್ಳಗುರು, ನಂಬಿದವರಿಗೆ ನಾಮ ತೀಡುವ ವಿದ್ಯೆಯನ್ನು ತನ್ನ ಖೂಳ ಶಿಷ್ಯರಿಗೆ ಬೋಧಿಸುತ್ತಿದ್ದಾನೆ. ಧರ್ಮರಕ್ಷಣೆಗಾಗಿ ದೇವತೆಗಳೇ ಉಪಾಯ ಮಾಡಿ ಗೆದ್ದರಲ್ಲವೇ? ಇಲ್ಲಿಯೂ ಸಹ ಧರ್ಮರಕ್ಷಣೆಗಾಗಿ ತಿಳುವಳಿಕೆಯುಳ್ಳ ಸಜ್ಜನರು ಉಪಾಯದಿಂದ ಕಳ್ಳಗುರುವನ್ನು ಮಟ್ಟಹಾಕಬೇಕಾಗಿದೆ.

ಶುಕ್ರಚಾರ್ಯರನ್ನು ಈ ಕಳ್ಳಗುರುವಿಗೆ ಹೋಲಿಸಿದ್ದಕ್ಕೆ ಕ್ಷಮೆಯಿರಲಿ; ಈ ಕಳ್ಳನಿಗೆ ಅವರ ಹೋಲಿಕೆ ಕೊಡುವಷ್ಟು ಮೂರ್ಖತನವಲ್ಲ, ಕೇವಲ ಕತೆಯ ಭಾಗವಾಗಿ ಇದನ್ನು ಹೇಳಿದ್ದೇನಷ್ಟೆ. ಶುಕ್ರಾಚಾರ್ಯರು ರಕ್ಕಸಬಳಗವನ್ನು ಹೇಗೆಲ್ಲ ಪ್ರಚೋದಿಸುತ್ತಿದ್ದರು ಎಂಬುದು ಇಲ್ಲಿನ ಒಂದು ಅಂಶ.

ಮಠದ ಮಾಣಿ ನಾಯಿಗೆ ಹೇಗೆ ಬಿಸ್ಕಿಟ್ ಹಾಕಬೇಕೆಂಬ ವಿದ್ಯೆಯನ್ನು ಕರಗತಮಾಡಿಕೊಂಡ. ಬಿಸ್ಕೆಟ್ ತಿಂದ ನಾಯಿಗಳಿಗೆ ಅದರ ರುಚಿ ಹತ್ತಿತು; ಅವು ಸದಾ ಅದನ್ನೇ ಮತ್ತೆ ಮತ್ತೆ ಬಯಸಿದವು. ಸದಾ ಬಿಸ್ಕೆಟ್ ಬೇಡುವ ನಾಯಿಗಳೇ ನಾನು ಹೇಳಿದ ಹಾಗೆ ಕೇಳಿಕೊಂಡಿರುವುದಾದರೆ ನಿಮಗೆ ಪ್ರತಿನಿತ್ಯ ಬಿಸ್ಕೆಟ್ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ. ಮಠದ ನಾಯಿಗಳು ಯಜಮಾನಮಾಣಿ ಹೇಳಿದಂತೆ ನಡೆದುಕೊಂಡವು; ಅವ ಹೇಳಿದ್ದಕ್ಕೆಲ್ಲ ಬಾಲ ಅಲ್ಲಾಡಿಸಿದವು.

ಕಚ್ಚೆಹರುಕರಿಗೆ ಇನ್ನೊಂದು ವಿಧದ ವಿಚಿತ್ರ ಬೆಂಬಲವಿರುತ್ತದೆ. ಹಾರಿಸಿಕೊಂಡ ಸಖಿಯರೆಲ್ಲ ತಮಗೊಂದೇ ಆ ದಿವ್ಯ ಪುರುಷನ ಸ್ನೇಹ ಮತ್ತು ಸಂಭೋಗ ಎಂದು ತಿಳಿದುಕೊಂಡಿರುತ್ತಾರೆ. ಅದೊಂದು ರೀತಿಯ ವ್ಯಾಮೋಹ. ಮೇಲಾಗಿ ತಮ್ಮ ಅನೈತಿಕತೆ ಬೆಳಕಿಗೆ ಬರಬಾರದೆಂಬ ಕಾಳಜಿಯೂ ಅಡಕವಾಗಿರುತ್ತದೆ.

ದೇಶದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಅವಿರತವಾಗಿ ಶ್ರಮಿಸಿದ್ದರು. ಉಪವಾಸ ನಡೆಸಿದವರೆಷ್ಟೋ, ಸತ್ಯಾಗ್ರಹ ನಡೆಸಿದವರೆಷ್ಟೋ, ಉಗ್ರ ಚಳುವಳಿಗಳನ್ನು ನಡೆಸಿದವರೆಷ್ಟೋ. ರಾತ್ರಿ ಮಲಗಿದ್ದಾಗಲೆ ಲೇಡಿ ಮೌಂಟ್ ಬ್ಯಾಟನ್ ನಿಂದ ಹೇಳಿಸಿ, ಆ ರಾತ್ರಿಯಲ್ಲಿ ಮೌಂಟ್ ಬ್ಯಾಟನ್ ವರ ನೀಡಿದಂತೆ ಸ್ವಾತಂತ್ರ್ಯದ ಘೋಷಣೆ ಮಾಡಿದ್ದನ್ನು ಬಹಳ ಜನ ಹೇಳಿಕೊಂಡು ನಗುತ್ತಾರೆ!

ಮಹಾಲಂಪಾಟನಾಗಿದ್ದ ಮಾಜಿ ಪ್ರಧಾನಿಯೋರ್ವನ ಹುಟ್ಟು-ಸಾವುಗಳ ಬಗ್ಗೆ ಲಕ್ಷಾಂತರ ಜನ ಬರೆದಿದ್ದಾರೆ; ಬರೆಯುತ್ತಲೆ ಇದ್ದಾರೆ. ಅವನು ಸತ್ತಿದ್ದು ಗುನೋರಿಯಾದಿಂದ ಎಂದು ಹೇಳುತ್ತಾರೆ. ಆದರೆ ಅವನು ಕಚ್ಚೆಹರುಕನಾಗಿರುವುದನ್ನು ಹಲವು ಭಾವ ಚಿತ್ರಗಳು ಪುಷ್ಟೀಕರಿಸುತ್ತವೆ; ಘಟನೆಗಳು ಸಾಕ್ಷಿಯಾಗುತ್ತವೆ.

ಭಾರತದ ಇತಿಹಾಸವನ್ನು ತಿರುಚಿದ ಸತ್ಯ ಗೊತ್ತಿದ್ದೂ ಅದನ್ನೇ ಅವನು ಪುಷ್ಟೀಕರಿಸಿದ್ದರಿಂದ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಲ್ಲಿಂದಿಲ್ಲಿಗೂ ತಿರುಚಿದ ಇತಿಹಾಸವನ್ನೇ ನಾವೆಲ್ಲ ಓದಿದ್ದೇವೆ. “ಮೊಘಲರು ಕೆಡವಿಹಾಕಿದ್ದ ಗುಜರಾತ್ ನ ಸೋಮನಾಥ ದೇವಸ್ಥಾನವನ್ನು ಮತ್ತೆ ಹೊಸದಾಗಿ ಕಟ್ಟಿಸಲು ಒಪ್ಪಲಿಲ್ಲ-ಅವನು” ಎಂದು ಲಾಲ್ ಕೃಷ್ಣ ಅಡ್ವಾಣಿಯವರು ತಮ್ಮ ಲೇಖನದಲ್ಲಿ ಹೇಳಿದ್ದಾರೆ.

ಆದರೆ ನಮ್ಮ ಜನ ಅವನನ್ನು ವೈಭವೀಕರಿಸಿ ಮಾತನಾಡುತ್ತಾರೆ. ದೇಶದ ಬಹುದೊಡ್ಡ ಮುತ್ಸದ್ದಿ ಎಂಬಂತೆ ಬಣ್ಣಿಸುತ್ತಾರೆ. ಅವನ ನಿಜವಾದ ಚರಿತ್ರೆಯನ್ನು ಅರಿತುಕೊಳ್ಳುವ ಮತ್ತು ಒಪ್ಪುವ ಮನೋಭಾವ ಹಲವರಿಗಿಲ್ಲ. ಅವನಿಂದ ಪ್ರೇರಿತವಾದ ಭಾರತದಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಶ್ಚಂದ್ರ ಬೋಸ್ ಅವರು ಸತ್ತು ಬದುಕಬೇಕಾದ ಪ್ರಸಂಗ ಬರುತ್ತದೆ. ತಾಯ್ನಾಡಿನ ಜನ ತಾನು ಸತ್ತೆನೆಂದು ತಿಳಿದ ನಂತರವೂ, ’ಗುಮ್ನಾಮಿ ಬಾಬಾ’ ಎಂಬ ಹೆಸರಿನಲ್ಲಿ ಅವರು ಕಾಲು ಶತಕ ಬದುಕಿಯೇ ಇರುತ್ತಾರೆ ಮತ್ತು ಬಹಳಷ್ಟು ರಾಜಕಾರಣಿಗಳಿಗೆ ಇದು ಗೊತ್ತಿರುತ್ತದೆ; ಆದರೂ ಯಾರೂ ಅದನ್ನು ಬಹಿರಂಗ ಮಾಡೋದಿಲ್ಲ ಯಾಕೆಂದರೆ ಅದು ಬಹಿರಂಗಗೊಂಡರೆ ಇತಿಹಾಸ ಮತ್ತೆ ಬದಲಾಗುತ್ತದೆ; ಹಲವು ಹೇಳಿಕೆಗಳೆಲ್ಲ ಅರ್ಥಹೀನವಾಗುತ್ತವೆ.

ಈ ದೇಶದ ಇತಿಹಾಸದಲ್ಲಿ ಅದೆಷ್ಟೋ ದೇಶಭಕ್ತರು ಅಹಲ್ಯೆಯಂತೆ ಕಲ್ಲಾಗಿ ಬದುಕಿ ಬಾಳಿದ್ದಾರೆ; ಅವರ ನಿಸ್ವಾರ್ಥ ಜೀವನವೇ ಕೆಲವು ರಾಜಕಾರಣಿಗಳ ಖ್ಯಾತಿಗೆ ಕಾರಣವಾಯಿತು; ಆದರೆ ನಾವಿಂದು ಅಂಥವರನ್ನೆಲ್ಲ ಮರೆತು, ತೀರಾ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ಮಹತ್ಸಾಧನೆ ಮಾಡಿದವರಂತೆ ಪೋಸು ಕೊಟ್ಟಿದ್ದ ಕೆಲವರಿಗೆ ಜೈಕಾರ ಕೂಗುತ್ತೇವೆ. ಅವರ ಭಾವಚಿತ್ರಗಳಿಗೆ ಹಾರ ಹಾಕುತ್ತೇವೆ.

ಕಾಲ ಹಾಗೆಯೇ ಮುನ್ನಡೆದಿದೆ. ನೈಜ ಇತಿಹಾಸ ಒಂದೆಡೆ; ತಿರುಚಿದ ಇತಿಹಾಸ ಇನ್ನೊಂದೆಡೆ. ಮಠಗಳ ರಾಜಕೀಯದಲ್ಲೂ ತಿರುಚಿದ ಇತಿಹಾಸ ಸಾಕಷ್ಟಿದೆ. ಅವರು ವಿಗ್ರಹ ಕೊಟ್ಟರು, ಇವರು ಅಲ್ಲಿ ಬಂದು ನಿಂತಿದ್ದರು-ಹೀಗೆಲ್ಲ. ಮಠದ ಮೂಲ ಕೊಂಡಿ ಯಾವುದು? ಅದು ಮಾತ್ರವೇ ಸತ್ಯ ಎಂಬುದನ್ನು ಹಲವು ಜನ ಅರಿತಿಲ್ಲ. ಮಿಕ್ಕಿದ್ದೆಲ್ಲ ಕಟ್ಟುಕತೆಗಳನ್ನು ಕಟ್ಟಿಕೊಂಡು ನಮಗೇನಾಗಬೇಕಿದೆ? ಯಾರು ಎಲ್ಲಿ ಬಂದು ನಿಂತಿದ್ದರೋ ಅವರೇ ಖುದ್ದಾಗಿ ಮತ್ತೆ ಬರುವುದಿಲ್ಲವಲ್ಲ; ಅವರ ನೆಪದಲ್ಲಿ ಆ ಜಾಗವನ್ನು ಕಬಳಿಸುವ ಹುನ್ನಾರವೇಕೆ? ಅಸಲಿಗೆ ಅವರು ನಿಂತಿದ್ದೇ ಅಲ್ಲಿ ಎಂಬುದಕ್ಕೆ ಯಾವ ಆಧಾರಗಳೂ ಇಲ್ಲವಲ್ಲ.

ಕರ್ನಾಟಕದ ಹಂಪೆ ಹನುಮ ಜನಿಸಿದ ಭೂಮಿ ಎನ್ನುತ್ತದೆ ರಾಮಾಯಣ. ಅದನ್ನೇ ಅಲ್ಲಗಳೆಯುವ ಹೊಸ ಸೃಷ್ಟಿ ಏತಕ್ಕೆ? ಯಾವುದೋ ಅಷ್ಟಮಂಗಲದವ ಹೇಳಿದ ಎಂದ ಮಾತ್ರಕ್ಕೆ ಅದು ನಿಜವೆಂದು ಭಾವಿಸಿ ಕತೆಕಟ್ಟುವುದರ ಹಿನ್ನೆಲೆಯ ಹುನ್ನಾರವೇನು? ಅಲ್ಲಿ ಹನುಮನನ್ನು ನೆಟ್ಟು ಕಾಸು ಮಾಡಿಕೊಳ್ಳಲಿಕ್ಕಲ್ಲವೇ ಇದು? ಅದು ಅಲ್ಲಿನ ಶಿಲಾನ್ಯಾಸಕ್ಕೆ ಕರೆಸಿದ್ದು ಯಾರನ್ನ ಗೊತ್ತೋ? ಬಿಚ್ಚಮ್ಮನಾಗಿ ಹಲವು ಜನರೊಟ್ಟಿಗೆ ಮಲಗಿದ ಮಲ್ಲಿಕಾ ಶರಬತ್ತನ್ನು! ಎತ್ತಣ ಬ್ರಹ್ಮಚಾರಿ? ಎತ್ತಣ ಬಿಚ್ಚಮ್ಮ? ಹುಂಡು ನಾಚಿಕಯಾದರೂ ಬೇಡವೋ ಈ ಕಳ್ಳ ಸನ್ಯಾಸಿಗೆ?

ಇಂತದ್ದನ್ನೆಲ್ಲ ಮುಚ್ಚಿ ಮೇಲೆ ಕಮಲದ ಹೂವು ನಿರ್ಮಿಸಿ ಪೀಠ ಜಡಿದು ಕೂತುಬಿಟ್ಟರೆ ಕೆಳಗಿನ ತಿಪ್ಪೆಯ ನಾರುವಿಕೆ ಹಾರಿಹೋಗುವುದು ಎಂದುಕೊಂಡನೇ? ಎಂಟುನೂರು ಕಮಲದ ಹೂಗಳನ್ನು ಹಾಸಿ ಮಲ್ಲಿಕಾ ಶರಬತ್ತನ್ನು ಸ್ವಾಗತಿಸುವಾಗ ಹೋರಿಸ್ವಾಮಿಯ ಸಾಮಾನಿನಿಂದ ಹೊರಹರಿದ ಗಮ್ಮೆಷ್ಟು? ಅಂತಹ ಗಮ್ಮನ್ನೇ ತಮ್ಮ ಬ್ರೆಡ್ಡು-ಜಾಮಿಗೆ ಮೂಲವಸ್ತುವಾಗಿ ಬಳಕೆ ಮಾಡುವ ಬಳಕೆದಾರರ ಸಂಘವೊಂದಿದೆಯಲ್ಲ? ಅದು ನೈಜ ಘಟನೆಗಳನ್ನು ಹೊರಹಾಕಲಿಕ್ಕೆ ಬಿಡೋದಿಲ್ಲ.

ನೋಡಿ ಸರ್, ಏಕಾಂತ ಸೇವೆಯಲ್ಲಿ ಈ ಕಳ್ಳನನ್ನು ಹಾರಿಸಿಕೊಂಡ ಮಹಿಳೆಯರು ತಮ್ಮ ಅನೈತಿಕತೆ ಹೊರಬರುತ್ತದೆಂದು ಹೋರಿಯನ್ನೇ ಬೆಂಬಲಿಸುತ್ತಾರೆ. ಅಂತವರ ಗಂಡಂದಿರು ತಮ್ಮ ಹೆಂಡತಿಯರ ಹೆಸರುಗಳು ಬಹಿರಂಗಗೊಳ್ಳದಿರಲಿ ಎಂದು ಬಯಸುತ್ತಾರೆ. ನಡುವೆ ಉಂಡ ಮುಂಡೆಗಂಡರು ಈ ಕತೆ ಇಲ್ಲಿಗೆ ಮುಗಿದುಹೋಗಿ ಹೋರಿ ಜೈಲುಪಾಲಾಗಿಬಿಟ್ಟರೆ ತಮ್ಮ ಬ್ರೆಡ್ಡು ಜಾಮಿಗೆ ಆಧಾರವಾಗಿರುವ ಗಮ್ಮು ಇಲ್ಲದಂತಾಗುವುದಲ್ಲ ಎಂದರಿತಿದ್ದಾರೆ. ಹೀಗೆ ಈ ಮೂರುವರ್ಗ ಅರಿತೂ ಸಹ ದುರುದ್ದೇಶಪೂರ್ವಕವಾಗಿ ಮಠದ ಹೋರಿಯನ್ನು ಬೆಂಬಲಿಸುತ್ತಿವೆ.

ಕಳ್ಳಯ್ಯ ಕುಳ್ಳಯ್ಯ ಮಠವನ್ನು ಮುಕ್ಕಿದರು
“ಬೆಳ್ಳಗಿರುವುದು ಹಾಲು” ಎಂದು ತೋರಿ
ಮಳ್ಳಜನ ಕಾಣಿಕೆ ದೇಣಿಗೆ ನೀಡಿ ನಕ್ಕಿರಲು
ಗುಳ್ಳೆನರಿಗಳು ಏಕಾಂತದಿ ಹಾರಿ

Thumari Ramachandra

source: https://www.facebook.com/groups/1499395003680065/permalink/1754371408182422/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s