ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ ಭಾಗ-3

ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ ಭಾಗ-3
[ವಿಡಂಬನೆಯ ಭಾಗ ಮೂರು. ಸಜ್ಜನರ ಕೋರಿಕೆಯ ಮೇರೆಗೆ ಕುದುರೆ ಬ್ರೀಡಿಂಗ್ ವೀಡಿಯೋ ಲಿಂಕ್ ಕೈಬಿಡಲಾಗಿದೆ]

ಜಗದ್ಗುರು ತೊನೆಯಪ್ಪ ಮಹಾಛತ್ರಿ ಕಚ್ಚೆಶೀಗಳು ಎಂದಿನಂತೆ ಗೂಂಡಾ ಸಭೆಯ ಮಧ್ಯದಿಂದ ಛತ್ರಿಯಡಿಯಲ್ಲಿ ತೊನೆಯುತ್ತ ಸಾಗಿ, ಮಹಿಳೆಯರತ್ತ ಹಲ್ಲು ಕಿಸಿಯುತ್ತ ವೇದಿಕೆಯೆಡೆಗೆ ತೆರಳಿ ಪೀಠವನ್ನೇರಿದರು. ಹಳದಿ ವಂದಿಮಾಗಧರು ಮತ್ತು ಭಟ್ಟಂಗಿಗಳು ಛಾವಣಿ ಹರಿದು ಅಂಬರಕ್ಕೆ ನೆಗೆಯಿತೋ ಎಂಬ ತಾರಕಸ್ವರದಲ್ಲಿ ಭೋ ಪರಾಕು ಕೂಗಿದರು.

“ಮಂತ್ರಮೂಲೆ ಮಾವಿನಕಾಯಿ ತಂತ್ರಮೂಲೆ ಬಗಳಾಮುಖಿ
ನ್ಯಾಸ ಮೂಲೆ ಏಕಾಂತ ಸೇವಾ ಖುಲಾಸೆ ಮೂಲೆ ಕೋಟಿಃ ಕೋಟಿಃ

ಬರೇ ಕಾಮ
ಬರೇ ಕಾಮ

ನೀವು ಕನ್ನಡದ ಸಿಲ್ಲಿಲಲ್ಲಿ ಸೀರಿಯಲ್ಲಿನಲ್ಲಿ ಒಂದು ಪಾತ್ರಧಾರಿ ಚುನಾವಣೆಗೆ ನಿಲ್ಲುತ್ತ ಕಂಡಕಂಡಲ್ಲೆಲ್ಲ “ನನ್ನನ್ನು ನಂಬಿ ಪ್ಲೀಸ್ ನನ್ನನ್ನು ನಂಬಿ” ಎಂದು ಹೇಳುತ್ತಿರುವುದನ್ನು ನೋಡಿದ್ದೀರಿ. ನಮ್ಮ ಅವಸ್ಥೆ ಕೂಡ ಈಗ ಹಾಗೇ ಆಗಿದೆ. ನಾವು ಕಾವಿ ತೊಟ್ಟು ಎಷ್ಟೆಲ್ಲ ಬಿಲ್ಡಪ್ಪು ಕೊಟ್ಟರೂ ಸಾರ್ವಜನಿಕರು ನಮ್ಮನ್ನು ನಂಬುತ್ತಿಲ್ಲ.

ಕಳೆದ ಕೆಲವು ಸಮಯದಿಂದ ಪತ್ರಿಕೆಗಳಲ್ಲಿ ಬಣ್ಣಬಣ್ಣಗಳಲ್ಲಿ ಮಿಂಚಿದ್ದೇ ಮಿಂಚಿದ್ದು ನಾವು. ನಮ್ಮ ಪರಂಪರೆಯ ಬಗ್ಗೆ, ನಮ್ಮ ಆದರ್ಶದ ಬಗ್ಗೆ, ನಮ್ಮ ದೀಕ್ಷೆಯ ಬಗ್ಗೆ, ನಮ್ಮ ಹಾವಾಡಿಗ ಮಠದ ಇತಿಹಾಸದ ಬಗ್ಗೆ ಇಲ್ಲದ ಕತೆಗಳನ್ನೂ ಕಟ್ಟಿ ಬರೆಸಿದ್ದೇವೆ ನಾವು. ಯಾಕೆಂದ್ರೆ ಸಾರ್ವಜನಿಕರಿಗೆ ಓದಿದೋರಿಗೆ ಓಹೋ ಇಷ್ಟೆಲ್ಲ ಘನತೆವೆತ್ತ ಮಠದ ಪೀಠಾಧ್ಯಕ್ಷರಾಗಿರುವ, ಇಷ್ಟೊಂದು ಕೆಲಸ-ಕಾರ್ಯ, ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಮಹಾಜನಾನುರಾಗಿ ತೊನೆಯಪ್ಪ ಸ್ವಾಮಿಗಳು ಕೆಚ್ಚೆಬಿಚ್ಚುತ್ತಾರೆ ಎಂಬುದನ್ನು ನಂಬಲಿಕ್ಕೆ ಸಾಧ್ಯವಾಗಬಾರದು; ಅದಕ್ಕಾಗಿ ನಮ್ಮ ಈ ಗೆಟಪ್ಪು, ಬಿಲ್ದಫ್ಫು ಎಲ್ಲವೂ.

ನಾವು ಹಾದು ಹೋಗುವಾಗ ಎಂತೆಂತೆವರೆಲ್ಲ ನಮ್ಮ ದರ್ಶನಕ್ಕೆ ಕಾದು ಹೂಮಾಲೆ, ಹಣ್ಣು-ಕಾಯಿ ಹಿಡಿದು ನಿಂತಿದ್ದರು ಎಂಬುದನ್ನು ನಾವು ಬಹಳ ವಿಶೇಷವಾಗಿ ಬಣ್ಣಿಸಿದ್ದೇವೆ. ಮಠದ ಗೂಂಡಾಗಳಿಂದ ತಮ್ಮ ಬ್ಯಿಸಿನೆಸ್ಸಿಗೆ ಕಲ್ಲು ಬೀಳದರಿರಲಿ ಎಂಬ ಭಯದಿಂದ ನಮ್ಮನ್ನು ಹಾಗೆ ಕಾಣಲು ಅವರೆಲ್ಲ ಬಂದಿದ್ದರು ಎಂಬುದನ್ನು ಬಿಡಿಸಿ ಹೇಳಬೇಕೇ? ಸಮಾಜದಲ್ಲಿ ನಮ್ಮ ಪಡೆಯ ಸಂಖ್ಯಾಬಲ ಜಾಸ್ತಿ ಕಾಣುತ್ತಿರುವಾಗ “ಓ ಅವರೂ ಬಂದಿದ್ದಾರೆ ನೋಡು, ಅವರಿಗೆ ಗುರುಗಳು, ಗುರುಪೀಠ ಅಂದ್ರೆ ಬಹಳ ಭಕ್ತಿ. ಅವರಿಗೊಂದಷ್ಟು ಗಿರಾಕಿ ಹುಡುಕಿಕೊಡಬೇಕು. ಅಂತವರನ್ನು ಬೆಳೆಸಬೇಕು” ಎಂದು ನಾವು ನಮ್ಮ ಗೂಂಡಾ ಪಡೆಗೆ ’ಮಾರ್ಗದರ್ಶನ’ ಮಾಡ್ತೇವೆ.

ಕೇಸು ದಾಖಲಾದಂದಿನಿಂದ ಇಲ್ಲಿವರೆಗೆ ನಮ್ಮ ಭಟ್ಟಂಗಿಗಳಿಗೆ ಪ್ರತಿಯೊಬ್ಬರಿಗೂ ನೂರಾರು ಪ್ರಶಸ್ತಿಗಳನ್ನು ನೀಡಿದ್ದೇವೆ ನಾವು. ಪ್ರಶಸ್ತಿ ತೆಗೆದುಕೊಂಡಷ್ಟೂ ಅವರು ಜೈಕಾರ ಹೆಚ್ಚಿಸ್ತಾರೆ. ಇದೆಲ್ಲ ನರಿ ಉಪಾಯ. ಪಾಪ ಅವರ ಮನೇಲಿ ಪ್ರಶಸ್ತಿ ಫಲಕದ ತಗಡು ಪ್ಲಾಸ್ಟಿಕ್ಕು ಇಟ್ಟುಕೊಳ್ಳಲಿಕ್ಕೆ ಜಾಗ ಇದ್ಯೋ ಇಲ್ವೋ. ಮಠದವರು ಸನ್ಮಾನಿಸಿದ್ದು ಎಂದು ಅವರು ಎಲ್ಲರಿಗೂ ಜೀವಮಾನ ಪರ್ಯಂತ ತೋರಿಸಿಕೊಳ್ಳಬಹುದು.

ನಮ್ಮ ದೇವರು ಪತ್ನಿ ಸಮೇತನಾಗಿಯೇ ಇದ್ದಾನೆ. ಹೀಗಾಗಿ ನಾವೂ ಸಹ ಮಹಿಳೆಯರನ್ನು ಬಿಟ್ಟಿರುವ ಪ್ರಶ್ನೆಯೇ ಇಲ್ಲ. ತೀರಾ ಮುದುಕಾಗಿ ಹಾರಲು ಸಾಧ್ಯವಾಗದಿದ್ರೆ ಪ್ಲೇವಿನ್ ಅಥವಾ ಸ್ಟೇ ಆನ್ ಕ್ಯಾಪ್ಸೂಲ್ ತೆಗೆದುಕೊಂಡಾದರೂ ನಾವು ಸದೃಢರಾಗುತ್ತೇವೆ. ಸಮಾಜಕ್ಕೆ ನಮ್ಮಿಂದ ಆದಷ್ಟೂ ಹೆಚ್ಚಿನ ಪ್ರಮಾಣದಲ್ಲಿ ’ಸೇವೆ’ ಸಲ್ಲಿಸುತ್ತೇವೆ. ಬೈದ್ಯನಾಥ್ ವಿಟಾ ಎಕ್ಸ್ ಗೋಲ್ಡ್, ಮುಸ್ಲಿ ಪವರ್ ಎಲ್ಲಾ ತರದ್ದನ್ನೂ ಇಟ್ಟುಕೊಳ್ತೇವೆ. ನಮ್ಮ ಪ್ರಸಾದಕ್ಕೆ ಹಾಕೋದದ್ಯಲ, ಅದನ್ನೇ ಸ್ವಲ್ಪ ಏರಿಸ್ಕಂಡ್ರೂ ಪ್ರಾಯ…ಪ್ರಾಯ ಬರ್ತದೆ. ಹೀಗಾಗಿ ನಾವು ಏಕಾಂತದ ಮೂಲಕ ’ಮಹಿಳಾ ಸಬಲೀಕರಣ’ ನಡೆಸೋದನ್ನು ಯಾವ ಕಾಲಕ್ಕೂ ಬಿಡೋದಿಲ್ಲ.

ನಾವು ನಮ್ಮ ಏಕಾಂತದ ಪ್ರತಿಯೊಬ್ಬ ಸಖಿಯಲ್ಲೂ ಹೀಗೆ ಹೇಳಿದ್ದೇವೆ-“ನೀನು ದಿವ್ಯಳು, ಭವ್ಯಳು. ನೀನು ನಮಗೆ ಅರ್ಪಿಸಿಕೊಳ್ಳೋದರಿಂದ ಸೀದಾ ಪರಮಾತ್ಮನಲ್ಲಿಗೆ ಹೋಗ್ತೀಯ. ಪರಮಾತ್ಮನಲ್ಲಿ ಒಂದಾಗುವ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ನೀನೂ ನಾವೂ ಪ್ರಸಾದದ ಮೂಲಕ ಪರಮಾತ್ಮನನ್ನು ನಮ್ಮೊಳಗೆ ಬಿಟ್ಟುಕೊಂಡು ಪರಸ್ಪರ ಐಕ್ಯವಾಗಬೇಕು. ನಾವು ಜೋರಾಗಿ ಅಪ್ಪಿಕೊಂಡಾಗ ಲಟ್ಟಣಿಗೆಯಂತದ್ದು ಜೋರಾಗಿ ಓಡಾಡಿದರೆ, ಮೇಲೆ ತಬಲೆ ಬಾರಿಸಿದ ಅನುಭವ ಉಂಟಾದರೆ ಆಗ ನೀನು ಪರಮಾತ್ಮನಲ್ಲಿ ಸಂಪೂರ್ಣ ಐಕ್ಯಳಾದೆ ಎಂದರ್ಥ. ಪರಮಾತ್ಮನಲ್ಲಿ ಐಕ್ಯವಾದ ವಿಷಯವನ್ನು ಯಾರಿಗೂ ಹೇಳಬರದು. ಅದಕ್ಕೊಂದಷ್ಟು ಆಣೆಪ್ರಮಾಣಗಳಿವೆ, ಅದನ್ನೆಲ್ಲ ಮುಗಿಸಿ ಸಾಧ್ಯವಾದಾಗಲೆಲ್ಲ ಪರಮಾತ್ಮನನ್ನು ಸೇರು. ಅದರಿಂದ ನಿನಗೆ ಸದ್ಗತಿ ಉಂತಾಗುತ್ತದೆ. ಪುನರ್ಜನ್ಮವೇ ಇರೋದಿಲ್ಲ.”

ನಮ್ಮ ಮಾತಿಗೆ ತೊನೆತಕ್ಕೆ, ಹಲ್ಲು ಕಿಸಿತಕ್ಕೆ ಮಳ್ಳುಬಿದ್ದು ಭಕ್ತಿಯ ಪರಾಕಾಷ್ಠೆಯಲ್ಲಿ ನಂಬಿ ಏಕಾಂತದಲ್ಲಿ ಪರಮಾತ್ಮನನ್ನು ಕಾಣಲು ಬಂದ ಸಖಿಯರಿಗೆ ನಮ್ಮಿಂದ ವಿಚಿತ್ರ ಅನುಭವಗಳಾಗಿವೆ. ನಮ್ಮ ಶಾಶ್ವತ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನದುವಯಸ್ಸು ಮೀರಿದ ಮಾದಕ್ಕಿ ತಿಮ್ಮಕ್ಕ ವಿಚಿತ್ರ ಗುಹ್ಯರೋಗವನ್ನು ಅಂಟಿಸಿಕೊಂಡು ಎದ್ದು ತಿರುಗಲೂ ಸಾಧ್ಯವಾಗದೆ, ಮಹಾನಗರವನ್ನು ಶಾಶ್ವತವಾಗಿ ತೊರೆದು ಈಗ ಹಳ್ಳಿಮೂಲೆಯಲ್ಲಿ ಹಾಸಿಗೆ ಹಿಡಿದಿದ್ದಾಳೆ.

ಕೆಲವು ಮಹಿಳೆಯರಿಗೆ ನಾವು ಪರಮಾತ್ಮನನ್ನು ತೋರಿಸುತ್ತಿರುವ ದಿನಗಳಲ್ಲೆ ಅವರ ಹರೆಯದ ಸುಂದರ ಹೆಣ್ಣುಮಕ್ಕಳು ಅಮ್ಮಂದಿರ ಜೊತೆಗೆ ಮಠಕ್ಕೆ ಬರುತ್ತಿದ್ದರು. ನಮ್ಮ ಹಲ್ಲು ಕಿಸಿತ, ತಲೆ ನೇವರಿಸುವಿಕೆಯಿಂದ ಗುರುಗಳು ದಿವ್ಯಾಶೀರ್ವಾದ ಮಾಡ್ತಾರೆ ಎಂದುಕೊಳ್ಳುತ್ತಿದ್ದರು. ಅಮ್ಮಂದಿರು ತಮಗಾದ ಅನುಭವವನ್ನು ಮಕ್ಕಳಲ್ಲಿ ಹೇಳಿಕೊಳ್ಳುವುದಕ್ಕೆ ಹಾಗೆಲ್ಲ ಸಾಧ್ಯವಾಗುವುದಿಲ್ಲ. ವಿಷಯ ಆ ಹಂತಕ್ಕೆ ಹೋಗುವ ಮೊದಲೆ ಕನ್ಯಾಸಂಸ್ಕಾರಕ್ಕಾಗಿ ಅವರನ್ನು ಕರೆದು, ಸುಗ್ರಾಸ ಭೋಜನದಂತೆ ಉಂಡು ಮುಗಿಸುತ್ತಿದ್ದೆವು. ಈಗ ಅದನ್ನೇ ನಮ್ಮ ಎಲ್ಲಾ ಶಿಷ್ಯವರ್ಗದ ಕಟ್ಟಕಡೆಯ ಹುಡುಗಿಗೂ ನೀಡಬೇಕೆಂದು ಭಗವತ್ಪ್ರೇರಣೆಯಾಗಿದೆ ನಮಗೆ.

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ” ಎಂಬ ಜಯಘೋಷ ಕೇಳಿಸಿತು]

ನಂಬಿಕೆಯ ಬಗ್ಗೆ ಆ ಅಬ್ಬೇಪಾರಿ ತುಮರಿ, ಕತೆಯೊಂದನ್ನು ಹೇಳಿದ್ದ. ಅದನ್ನು ಇನ್ನೊಮ್ಮೆ ನಾವಿಲ್ಲಿ ನೆನಪಿಸಿಕೊಳ್ಳುದಕ್ಕೆ ಇಷ್ಟಪಡ್ತೇವೆ ನಾವು. ಊರ ಹೊರಗಿನ ಕಾಡಿಗೆ ಸನ್ಯಾಸಿಯೊಬ್ಬ ಶಿಷ್ಯರ ಸಹಿತ ಬಂದು ಆಶ್ರಮ ಕಟ್ಟಿಕೊಂಡು ತಪಸ್ಸಿಗೆ ಕೂತನಂತೆ. ಸುದ್ದಿ ಯಾರಿಗೋ ಗೊತ್ತಾಗಿ ಜನ ಆಗಾಗ ಸ್ವಾಮಿಗಳನ್ನು ಕಾಣಲು ಕಾಡಿಗೆ ಹೋದರು.

ಯಾರನ್ನೂ ನಂಬದ ಗೋವಿಂದಯ್ಯ, “ಮನೆಯಲ್ಲಿ ನನ್ನೊಬ್ಬಳನ್ನೇ ಬಿಟ್ಟು ಹೋಗಬೇಡ’ ಎಂದು ಅಮ್ಮ ಹೇಳಿದರೂ ಕೇಳದೆ ಕಾಡಿನತ್ತ ಹೋದ. ಮನೆಯಲ್ಲಿ ಅಮ್ಮ ಒಬ್ಬಳೇ, ಬೇರೆ ಯಾರೂ ಇರಲಿಲ್ಲ. ಪಿತ್ರಾರ್ಜಿತವಾಗಿ ಬಂದ ಬಂಗಾರ ಸಾಕಷ್ಟಿತ್ತು. ಆ ಸನ್ಯಾಸಿ ಕಾಡಿಗೆ ತಪಸ್ಸಿಗೆ ಬಂದಾಗಿನಿಂದ ರಾತ್ರಿಯ ಹೊತ್ತಿನಲ್ಲಿ ಊರಲ್ಲಿ ಕಳ್ಳತನ ಜಾಸ್ತಿ ಆಯಿತು.

ಗೋವಿಂದಯ್ಯ ಸ್ವಾಮಿಗಳ ಹತ್ತಿರ ವಿಷಯ ಹೇಳಿಕೊಂಡು,”ಊರೊಳಗೆ ಕಳ್ಳತನ ಜಾಸ್ತಿಯಾಗಿಬಿಟ್ಟಿದೆ. ಮನೆಯಲ್ಲಿ ಬಂಗಾರವನ್ನು ಇಟ್ಟುಕೊಳ್ಳಲಿಕ್ಕೆ ಬಹಳ ಹೆದರಿಕೆಯಾಗುತ್ತಿದೆ. ತಪೋಧನರಾದ ತಮ್ಮ ಆಶೀರ್ವಾದದಿಂದ ಅದರ ರಕ್ಷಣೆಯಾಗಬೇಕು”

“ಹಾಗೇ ಆಗಲಿ ಗೋವಿಂದಯ್ಯ, ಮನೆಯಲ್ಲಿರುವ ಬಂಗಾರವನ್ನೆಲ್ಲ ಬಟ್ಟೆಯೊಂದರಲ್ಲಿ ಗಂಟು ಕಟ್ಟಿ, ನಮ್ಮಾಶ್ರಮಕ್ಕೆ ತಂದು ಅದನ್ನು ನೆಲದಲ್ಲಿ ಹೂತಿಡು. ನಮ್ಮಂತ ಸನ್ಯಾಸಿಗಳಿದ್ದಲ್ಲಿ ಕಳ್ಳರು ಬರೋದಿಲ್ಲ; ನಮ್ಮಲ್ಲೆನಿದೆ ಅಂತ ಬರ್ತಾರೆ? ತಂದು ಹೂತಿಟ್ಟು ನೀನು ನಿಶ್ಚಿಂತನಾಗಿರು. ನಾವೇ ಎಲ್ಲವನ್ನೂ ನೋಡಿಕೊಳ್ತೇವೆ. ಗುರುವನ್ನು ನಂಬಿದವನು ಕೆಡೋದಿಲ್ಲ. ಅಂತಹ ನಂಬಿಕೆಗೊಂದು ಶಕ್ತಿಯಿದೆ.”

ಗುರು ಹೇಳಿದ್ದನ್ನು ಅಕ್ಷರಶಃ ಪಾಲಿಸುವ ಮನಸ್ಸು ಮಾಡಿದ ಗೋವಿಂದಯ್ಯ, ಮನೆಯಲ್ಲಿ ಅಮ್ಮ ಬೇಡವೆಂದು ಎಷ್ಟು ಗೋಗರೆದರೂ ಕೇಳದೆ, ಇದ್ದ ಬಂಗಾರವನ್ನೆಲ್ಲ ಬಟ್ಟೆಯಲ್ಲಿ ಗಂಟುಕಟ್ಟಿ, ಕಾಡಿನ ಆ ಸನ್ಯಾಸಿಯ ಆಶ್ರಮಕ್ಕೆ ಕೊಂಡೊಯ್ದು ನೆಲದಲ್ಲಿ ಹೂತಿಟ್ಟು, ಸ್ವಾಮಿಗಳಿಗೆ ದೀರ್ಘದಂಡ ಪ್ರಣಾಮ ಮಾಡಿದ.

“ಒಂದೆರಡು ದಿನಗಳಲ್ಲೇ ನಾವು ನಿನ್ನ ಮನೆಗೆ ಬಂದು ಆಶೀರ್ವದಿಸಿ ಇಲ್ಲಿಗೆ ಮರಳುತ್ತೇವೆ” ಎಂದರು ಆ ಗುರುಗಳು. ಗೋವಿಂದಯ್ಯನಿಗೆ ಮೈಯೆಲ್ಲ ರೋಮಾಂಚನ.

ಹೇಳಿದಹಾಗೆ ಎರಡೇ ದಿನಗಳಲ್ಲಿ ಆ ಸನ್ಯಾಸಿ ಕೆಲವು ಶಿಷ್ಯರೊಡಗೂಡಿ ಗೋವಿಂದಯ್ಯನ ಮನೆಗೆ ಬಂದು ಭಿಕ್ಷಾದಿಗಳನ್ನೆಲ್ಲ ತೀರಿಸಿ ಹೊರಟು ಹೋದ. ಹೋದವ ಅರ್ಧದಾರಿಯಲ್ಲಿ ಮತ್ತೆ ಹಿಂದಿರುಗಿ ಗೋವಿಂದಯ್ಯನ ಮನೆಗೆ ಬಂದಾಗ ಗುರುಗಳು ಮತ್ತೆ ಯಾಕೆ ಮರಳಿರಬಹುದು ಎಂದು ಗೋವಿಂದಯ್ಯ ಚಕಿತಗೊಂಡ.

“ಇಗೋ, ನಾವು ಸನ್ಯಾಸಿಗಳು, ಪರರ ಯಾವ ವಸ್ತುವನ್ನೂ ನಾವು ಇಟ್ಟುಕೊಳ್ಳಬಾರದು” ಎನ್ನುತ್ತ ಜಡೆಗಟ್ಟಿದ್ದ ಕೂದಲಿನಿಂದ ಕಡ್ಡಿಯತುಂಡನ್ನು ತೆಗೆದುಕೊಡುತ್ತ, ಗೋವಿಂದಯ್ಯನ ಮನೆಯಲ್ಲೆಲ್ಲೋ ಅದು ಕೂದಲಿಗೆ ಸಿಕ್ಕಿಕೊಂಡಿತ್ತು ಎಂದು ವಿವರಿಸಿ ಮತ್ತೆ ಆಶ್ರಮದತ್ತ ಅವಸರವಸರವಾಗಿ ಹೆಜ್ಜೆಹಾಕಿದ.

ಹೊಸ ವೈದ್ಯನಿಗಿಂತ ಹಳೆಯ ಕಾಂಪೌಂಡರನ ಅನುಭವ ಮೇಲು ಎಂಬಂತೆ, ಗೋವಿಂದಯ್ಯನ ಮುಪ್ಪಿನ ಅಮ್ಮನಿಗೆ ಯಾಕೋ ಸನ್ಯಾಸಿಯ ನಡತೆಯೆ ಮೇಲೆ ಅನುಮಾನ ಬಂತು. “ಮಗನೇ, ನಿನ್ನ ತಾಯಿಯಾಗಿ ಹೇಳುತ್ತಿದ್ದೇನೆ, ಈ ಕ್ಷಣವೇ ಆಶ್ರಮಕ್ಕೆ ಹೋಗು. ಸನ್ಯಾಸಿ ಇದ್ದಾನೋ ಇಲ್ಲವೋ ಪರಿಶೀಲಿಸಿ, ಏನೋ ಕಾರ್ಯಕ್ಕೆ ಹೂತಿಟ್ಟ ಬಂಗಾರ ಬೇಕೆಂದು ತಂದುಬಿಡು” ಎಂದಳು.

ಗೋವಿಂದಯ್ಯ ಅಂದೇಕೋ ಅಮ್ಮನ ಮಾತಿನಲ್ಲಿ ವಿಶ್ವಾಸವಿಟ್ಟು ಕಾಡಿಗೆ ಓಡಿದ. ಆಶ್ರಮ ತಲುಪಿದಾಗ ಅಲ್ಲಿ ಯಾರೂ ಕಾಣಲಿಲ್ಲ. ಬಂಗಾರ ಹೂತಿಟ್ಟ ಜಾಗದಲ್ಲಿ ಮಣ್ಣೆಲ್ಲ ಹೊರಕ್ಕೆದ್ದು ಚೆಲ್ಲಿ ಗುಳಿಬಿದ್ದಿತ್ತು; ಬಂಗಾರದ ಗಂಟು ಅಲ್ಲಿರಲಿಲ್ಲ. ಆಕಾಶವೇ ತಲೆಯಮೇಲೆ ಕಳಚಿ ಬಿದ್ದ ಹಾಗಾಯ್ತು ಗೋವಿಂದಯ್ಯನಿಗೆ.

ಆಗ ಗೋವಿಂದಯ್ಯನಿಗೆ, “ಸಿಕ್ಕಸಿಕ್ಕ ಕಾವಿವೇಷದವರನ್ನೆಲ್ಲ ಸನ್ಯಾಸಿ ಎಂದು ನಂಬಬಾರದು” ಎಂದು ಮೊದಲು ಅಮ್ಮ ಹೇಳಿದ್ದು ನೆನಪಾಯ್ತು. ಸಮಯ ಸರಿದುಹೋಗಿತ್ತು; ಸ್ವತ್ತು ಕೈಮೀರಿ ಹೋಗಿತ್ತು. ಕಾಡಿನಲ್ಲಿ ಸನ್ಯಾಸಿಯ ವೇಷದಲ್ಲಿದ್ದವ ಮತ್ತು ಅವನ ಶಿಷ್ಯರೆಲ್ಲ ಕಳ್ಳರೇ ಆಗಿದ್ದರು. ಅದೊಂದು ಕಳ್ಳರ ಗ್ಯಾಂಗ್ ಎಂಬುದು ಗೋವಿಂದಯ್ಯನಿಗೆ ಗೊತ್ತಾಗುವ ಹೊತ್ತಿಗೆ ಗೋವಿಂದಯ್ಯ ಬಹಳ ಬೆಲೆ ತೆತ್ತುಬಿಟ್ಟಿದ್ದ!

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ” ಎಂಬ ಜಯಘೋಷ ಕೇಳಿಸಿತು, ಪ್ರವಚನ ಮುಂದುವರಿಯಿತು]

ನೀವು ನಮ್ಮನ್ನು ನಂಬಿ. ಆದರೆ ಬೇರೆ ಯಾರನ್ನೂ ನಂಬ ಬೇಡಿ. ನಾವು ಪರಂಪತೆಯೆ ಬ್ರಾಂಡಿನಲ್ಲಿ ಬೋಳೆಣ್ಣೆ ಸವರುತ್ತೇವೆ. ಹಾಗಾಗಿ, ಹಾಗಾಗಿ, ಹಾಗಾಗಿ ನಾವು ಬೋಳೆಣ್ಣೆ ಸವರಿದ್ದೂ ಕೂಡ ನಿಮಗೆ ಗೊತ್ತಾಗೋದಿಲ್ಲ. ನಾವು ಸರ್ವಸಂಗ ಪರಿತ್ಯಾಗಿಗಳು ನಮಗೇನೂ ಬೇಕಾಗಿಲ್ಲ, ನಾವು ಯಾರಿಗಾಗಿ ಮಾಡ್ಬೇಕು? ಎಂದೆಲ್ಲ ಹೇಳ್ತೇವೆ ನಾವು. ಆದರೆ ಒಬ್ಬ ಸಂಸಾರಿಗಿಂತ ಹೆಚ್ಚಿನ ಬಯಕೆಗಳು, ರಾಗ-ದ್ವೇಷಗಳು ನಮ್ಮಲ್ಲಿವೆ.

ನಾವೀಗ ಬಚಾವಾಗುವುದಕ್ಕಾಗಿ ಹಲವು ಬಿಲ್ಡಪ್ಪು, ಗೆಟಪ್ಪು ಎಲ್ಲವನ್ನೂ ಪ್ರದರ್ಶಿಸುತ್ತಿದ್ದೇವೆ. ರಾಜಕೀಯದವರ ಬಲಾಬಲ ಪ್ರದರ್ಶನದ ಸಮಾವೇಶಗಳಿಗೂ ನಮ್ಮ ಬಿಲ್ಡಪ್ಪುಗಳಿಗೂ ವ್ಯತ್ಯಾಸವೇ ಇಲ್ಲ. ಗಂಗಾವತಿ ಪ್ರಾಣೇಶ ಹೇಳಿದ ಹಾಗೆ ಏನೂ ಓದಿರದ ರೌಡಿಗಳು, ಗೂಂಡಾಗಳು ರಾಜಕೀಯ ಧುರೀಣರಾಗ್ತಾರೆ, ಮಂತ್ರಿಗಳಾಗ್ತಾರೆ. ಜಾಸ್ತಿ ಓದಿ ಐ.ಎ.ಎಸ್ ಮಾಡಿದೋರು ಅವರ ಪಕ್ಕ ಫೈಲು ಹಿಡ್ಕೊಂಡು ನಿಂತಿರ್ತಾರೆ.

ಇಲ್ಲಿ ನಮ್ಮದೂ ಅಷ್ಟೇ ಕತೆ. ನಾವು ವೇದಗೀದ ಇದನ್ನೆಲ್ಲ ಜಾಸ್ತಿ ಓದಿಲ್ಲ. ಆದರೂ ನಾವು ಪೀಠಾಧ್ಯಕ್ಷರಾಗಿದ್ದೇವೆ ನೋಡಿ. ನಮ್ಮ ಪಕ್ಕ ಎಂತೆಂತೋರು ನಿಂತ್ಕಂಡಿಲ್ಲ? ಅಂತವರೆಲ್ಲ ಬಂದು ನಿಂತ್ಕಂಡಿದ್ದನ್ನು ಫೋಟೋ, ವೀಡಿಯೋ ತೆಗೆದು ನಮ್ಮ ಸಖಿಯರಿಗೆ ತೋರಿಸ್ತೇವೆ ನಾವು. “ನಿಮಗೆ ನೂರು ಜನರ ಬಲ ಇದ್ದರೆ ನಮಗೆ ಸಾವಿರಾರು ಜನರ ಬಲ ಇದೆ. ಏನ್ ಹರ್ಕೋತಿಯೋ ಹರ್ಕೋ” ಅಂತ ವಿರೋಧಿಗಳಿಗೆ ಸವಾಲೊಡ್ತೇವೆ ನಾವು.

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ” ಎಂಬ ಜಯಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಈಗ ನಾವು ಹೇಳೋದು ಇಷ್ಟೇ-ಹಿಂದೂ ಸಂಸ್ಕೃತಿಯ ಮೇಲೆ ಆಕ್ರಮಣ ನಡೀತಾ ಇದೆ. ಪರಂಪರೆಯನ್ನು ಹಾಳುಮಾಡೋ ಸಂಚು ನಡೀತಾ ಇದೆ. ಪೀಠವನ್ನು ನುಂಗಿ ಹಾಕೋ ಷಡ್ಯಂತ್ರ ನಡೀತಾ ಇದೆ. ಮಠದ ಆಸ್ತಿಪಾಸ್ತಿ ಹೊಡೆದುಕೊಳ್ಳೋ ಪ್ರಯತ್ನ ನಡೀತಾ ಇದೆ. ನೀವು ಇದನ್ನೆಲ್ಲ ನಂಬಿ. “ಹೌದು”, “ಹೌದು” ಎಂದು ಕೋಲೆ ಬಸವಣ್ಣನಂತೆ ತೂಗಿ ಎಲ್ಲ ಮಾಧ್ಯಮಗಳಲ್ಲೊ ಬಣ್ಣಬಣ್ಣಗಾಲ್ಲಿ ವರದಿ ಹಾಕಿಸಿ. ಕಂದಕಂಡಲ್ಲೆಲ್ಲ ಬ್ಯಾನರ್ ಕಟ್ಟಿ. ಎಲ್ಲಿ ನೋಡಿದರೂ ಜನರಿಗೆ ನಾವೇ ಅಂದರೆ ಜಗದ್ಗುರು ತೊನೆಯಪ್ಪನವರೇ ಕಾಣಬೇಕು, ಅಷ್ಟು ಮಾಡಿ.

ಕೆಲವು ಪತ್ರಿಕೆಗಳವರು ಹೊರಗಿನಿಂದ ಎಲ್ಲರಿಗೂ ತಿಳಿಯಲೆಂಬಂತೆ ನಮ್ಮನ್ನು ಹೊಗಳಿ, ನಮ್ಮ ಹಾವಾಡಿಗ ಮಠದ ಪರಂಪರೆ ಬಗ್ಗೆ ಮತ್ತು ನಮ್ಮ ಬಗ್ಗೆ ಬರೆದಿದ್ದನ್ನು ನಾವು ಖುಷಿಪಟ್ಟು ಓದಿದೆವು ಎಂದೂ ಹಾಕಿಕೊಂಡಿದ್ದಾವೆ. ಅಂತರಂಗದಲ್ಲಿ ನಮ್ಮ ಮತ್ತು ಅವರ ನಡುವಿನ ’ವಿಶ್ವಾಸ’ಕ್ಕೆ ಧಕ್ಕೆಯಾಗದಂತೆ ನಡಕೊಂಡಿವೆ.

ನಮ್ಮನ್ನು ನಂಬಿದ ಮತ್ತು ಹಾದರ ಸಂಸ್ಕೃತಿಯನ್ನು ಬೆಂಬಲಿಸಿದ ಪತ್ರಿಕೆಗಳಿಗೆ, ವಾಹಿನಿಗಳಿಗೆ ಮತ್ತು ನಮ್ಮನ್ನು ಸತತವಾಗಿ ಬೆಂಬಲಿಸಿದ ನಿಮ್ಮೆಲ್ಲರಿಗೂ ಒಳ್ಳೇದಾಗಲಿ ಅಂತ ನಾವು ನಮ್ಮ ಹೃದಯಂತರಾಳದಿಂದ ಭಾವನೆ ತುಂಬಿಕೊಂಡು ನಮ್ಮ ಲಿಂಗದ ರಾಳ ತೆಗೆದು ಕೈಗಂಟಿಸಿಕೊಂಡು ನಿಮಗೆ ಹರಸ್ತೇವೆ.

ಬರೇ ಕಾಮ
ಬರೇ ಕಾಮ ”

ಪ್ರವಚನ ಮುಗಿಯುತ್ತಿದ್ದಂತೆ ಗಂಡು ಕತ್ತೆಗಳು ಇದ್ದಲ್ಲೆ ಕುಣಿಕುಣಿದಾಡಿದವು. ಗಂಡು ಕುದುರೆಗಳು ನಾ ಮೇಲು ತಾ ಮೇಲು ಎಂದು ಗಂಟಲು ಹರಿದುಕೊಂಡು ಛಾವಣಿ ಹರಿದುಬೀಳುವಂತೆ ಕೆನೆದವು.
“ಹಾವಾಡಿಗ ಮಹಾಸಂಸ್ಥಾನ ಜಗದ್ಗುರು ಶೋಭರಾಜಾಚಾರ್ಯ ಚಂದ್ರನಾಡ್ಯುಜ್ಜೇಶ್ವರ ತೊನೆಯಪ್ಪ ಕಚ್ಚೆಶೀ ಮಹಾರಾಜ್ ಕೀ ಜೇ ಯ್

…………… ಜೇ ಯ್

…………..ಜೇ ಯ್

[ವಿಡಂಬನೆಯ ಮೂರನೆ ಭಾಗವನ್ನು ಇಂದೇ ಬಿತ್ತರಿಸಲಾಯಿತು. ಮುಂದಿನ ಕಂತುಗಳನ್ನು ಸಮಯಾನುಸಾರ ಪ್ರಕಟಿಸಲಾಗುವುದು]

Thumari Ramachandra

source: https://www.facebook.com/groups/1499395003680065/permalink/1749754308644132/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s