ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ ಭಾಗ-೨

ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ ಭಾಗ-೨

[[ವಿಡಂಬನೆಗೆ ಸಾಂದರ್ಭಿಕವಾಗಿ ಕುದುರೆ ಬ್ರೀಡಿಂಗ್ ವೀಡಿಯೋ ಲಿಂಕ್ ಕೊಡಲಾಗಿದೆ. ಇಲ್ಲಿ ಅಶ್ಲೀಲತೆಗೆ ಪ್ರಾಮುಖ್ಯತೆಯಿಲ್ಲ. ವಿಡಂಬನೆಗೆ ಮಾತ್ರ. ಯಾರೂ ತಪ್ಪು ತಿಳಿಯಬೇಕಾಗಿಲ್ಲ]

ಜಗದ್ಗುರು ತೊನೆಯಪ್ಪ ಕಚ್ಚೆಶೀಗಳು ಎಂದಿನಂತೆ ಗೂಂಡಾ ಸಭೆಯ ಮಧ್ಯದಿಂದ ಕೊಡೆಯಡಿಯಲ್ಲಿ ತೊನೆಯುತ್ತ ಸಾಗಿ, ಮಹಿಳೆಯರತ್ತ ಹಲ್ಲು ಕಿಸಿಯುತ್ತ ವೇದಿಕೆಯೆಡೆಗೆ ತೆರಳಿ ಪೀಠವನ್ನೇರಿದರು. ಹಳದಿ ವಂದಿಮಾಗಧರು ಮತ್ತು ಭಟ್ಟಂಗಿಗಳು ಭೋ ಪರಾಕು ಕೂಗಿದರು.

“ಮಂತ್ರಮೂಲೆ ಮಾವಿನಕಾಯಿ ತಂತ್ರಮೂಲೆ ಬಗಳಾಮುಖಿ
ನ್ಯಾಸ ಮೂಲೆ ಏಕಾಂತ ಸೇವಾ ಖುಲಾಸೆ ಮೂಲೆ ಕೋಟಿಃ ಕೋಟಿಃ

ಬರೇ ಕಾಮ
ಬರೇ ಕಾಮ

ಈ ಸಮಾಜ ಇಷ್ಟೇ ಅಂತ ನಮಗೆ ಮೊದಲೇ ತಿಳಿದಿತ್ತು. ನಾವು, ನಮ್ಮ ಬಾವಯ್ಯ ಎಲ್ಲವನ್ನೂ ಗಮನಿಸಿಯೇ ಕಚ್ಚೆಬಿಚ್ಚುವ ವ್ಯವಹಾರಕ್ಕೆ ಮುಂದಾಗಿದ್ದು. ಸಮಾಜ ಗಟ್ಟಿ ಇದ್ದರೆ, ಹಿರಿಯರು, ಕೇಳುವವರು, ಎಳೆದು ದಬ್ಬಿ “ಹೋಗಾಚೆ” ಎಂದು ಅಧಿಕಾರಯುತವಾಗಿ ಹೇಳುವ ಧೈರ್ಯವುಳ್ಳವರು ಇದ್ದರೆ ನಾವು ಬಾಲ ಬಿಚ್ಚುತ್ತಿರಲಿಲ್ಲ ಅಂತ. ಬಿಚ್ಚಿದ್ದರೂ ಒಂದೆರಡು ಎಲ್ಲೋ ಸುದ್ದಿಯಾಗದಂತೆ ಗುಪ್ತವಾಗಿರುತ್ತಿತ್ತು ಅಂತ. ಈಗ ಹಾಗಲ್ಲ ಅಂತ. ಈಗ ನಮ್ಮ ಕಚ್ಚೆಬಿಚ್ಚುವ ಕತೆ ದಂತಕತೆಯಾಗಿ ಸಾರ್ವಜನಿಕರಿಗೆ ರಂಜನೆಯ ಸರಕಾಗಿದೆ ಅಂತ.

ಹಣ, ಬಂಗಾರ, ಸ್ಥಿರಾಸ್ತಿ ಎಲ್ಲವೂ ಇವೆ, ನಮ್ಮ ಗೂಂಡಾಪಡೆಯನ್ನು ಕಟ್ಟಿಕೊಂಡರೆ ಮಠವನ್ನು ನಾವು ಹೇಳಿದ ಮಾರ್ಗದಲ್ಲಿ ಹೈಜಾಕ್ ಮಾಡಬಹುದು ಎಂದು ನಾವು ಮತ್ತು ನಮ್ಮ ಬಾವಯ್ಯ ಕಿಚನ್ ಕ್ಯಾಬಿನೆಟ್ಟಿನಲ್ಲಿ ಸಮಾಲೋಚನೆ ನಡೆಸಿದ್ದೆವು ಅಂತ. ಎಲ್ಲವೂ ಹಾಗೇ ಆಯಿತು ಅಂತ. ಈಗೆ ಮಠ ರಿಪೇರಿ ಮಾಡಲಾಗದಷ್ಟು ಅನಾಚಾರ ಮತ್ತು ಅನೈತಿಕತೆಯ ಮಾರ್ಗದಲ್ಲಿ ಸಾಗಿದೆ ಅಂತ. ಬಹಿರಂಗವಾಗಿ ನಾವು ಮಠವನ್ನು ಬಹಳ ಧಾರ್ಮಿಕ ಮಾರ್ಗದಲ್ಲಿ ಮುನ್ನಡೆಸುತ್ತಿದ್ದೇವೆ ಅಂತ ಹೇಳುತ್ತಲೇ ಇರ್ತೇವೆ.

ನಮ್ಮ ಉಳಿವಿಗೆ ನಾಲ್ಕು ವರ್ಗದವರು ಬೇಕು-ಒಂದು ಜೈಕಾರ ಹಾಕುವ ಗೂಂಡಾ ಬಳಗ. ಬುದ್ದಿಯನ್ನೇ ಉಪಯೋಗಿಸದ ಬಡ್ಡು-ಗೊಡ್ಡು ಬಕರಾ ಭಕ್ತ ಬಳಗ, ಕಾಸಿಗೆ ಕೈಯೊಡ್ಡುವ ಮಾಧ್ಯಮಗಳು ಮತ್ತು ನಾವು ಹೊರತೋರಿಕೆಗೆ ಬಿಂಬಿಸಿದ್ದನ್ನು ಒಪ್ಪಿಕೊಳ್ಳುವ ಆಳರಸರು, ಮಾಮೂಲಿ ಮಾವಂದಿರು ಮತ್ತು ತೀರ್ಮಾನಿಸುವವರು. ಇಲ್ಲಿಯವರೆಗೆ ನಾವು ಪ್ಲಾನು ರೆಡಿ ಮಾಡಿದ್ದು ಅದಕ್ಕೇ.

ಊರಲ್ಲಿಲ್ಲದ ನವನವೀನ ಯೋಜನೆಗಳ ಮೂಲಕ ಭಕ್ತರ ಹಣ ಪೀಕಿದೆವು. ಪ್ಯಾಕೇಜ್ ಕೊಟ್ಟು ಪ್ರಚಾರ ಮಾಡಿಸಿಕೊಂಡೆವು. ನಮಗೆ ಬೇಕಾದಂತೆಲ್ಲ ನಡೆದುಕೊಂಡೆವು. ತಪ್ಪು ಎಂದು ಗೊತ್ತಾಗಿ ವಿರೋಧಿಸಲು ತೊಡಗಿದವರನ್ನು ಮಟ್ಟ ಹಾಕಲು ಆಳರಸರಿಗೆ ಪ್ಯಾಕೇಜ್ ಕೊಟ್ಟೆವು. ಮಾಮೂಲಿ ಮಾವಂದಿರು ಗೊತ್ತಲ್ಲ? ಅದು ಅಷ್ಟೆ ಅದು. ತೀರ್ಮಾನಿಸುವವರಿಗೆ ’ಜೀವಮಾನ ಸಾಧನೆ’ಯೆಂಬಷ್ಟು ಕೊಟ್ಟೆವು.

ನಮ್ಮ ಭದ್ರತೆಗೆ ಮೂರು ಆಯಾಮಗಳನ್ನು ಬಳಸಿಕೊಂಡೆವು-ಮೊದನಯೆದು ಹಿಂದೂ ಸ್ವಾಮೀಜಿಗಳ ಮೇಲೆ ದಾಳಿ ಎಂದು ಹೇಳುತ್ತ ಹಿಂದೂಪರ ಸಂಘಟನೆಗಳ ಸಹಾಯ ಕೋರುವುದು. ಎರಡನೆಯದು ಸಾವಿರಗಟ್ಟಲೆ ವರ್ಷಗಳ ಪರಂಪರೆಯನ್ನು ಹೇಳಿಕೊಂಡು ವೈಭವೀಕರಿಸಿ ತಪ್ಪಿಸಿಕೊಳ್ಳುವುದು. ಮೂರನೆಯದು ವಿರೋಧಿಸುವವರನ್ನು ದಮನ ಮಾಡಲು ಗೂಂಡಾ ಬಳಗವನ್ನು ಛೂ ಬಿಟ್ಟು ಬೇಕಾಬಿಟ್ಟಿ ಕೇಸು ಜಡಿಸುವುದು, ಹೊಡೆಸುವುದು, ಬಡಿಸುವುದು, ಭಯೋತ್ಪಾದನೆ ಮಾಡುವುದು.

ಈಗ ಏನಾಗಿದೆ ಎಂದರೆ ಕೋಟಿಗಟ್ಟಲೆ ಹೊಲಸು ತಿಂದ ಆಳರಸರು ನಮಗೆ ಬೇಕಾದಂತೆ ನಡೆದುಕೊಳ್ತಾರೆ. ಮಾಮೂಲಿ ಮಾವಂದಿರು ನಾವು ಹೇಳಿದಂತೆ ನಡೆದುಕೊಳ್ತಾರೆ. ಕಾಸಿಗೆ ಕೈಯೊಡ್ಡುವ ಟಿ.ಆರ್.ಪಿ ಮಾಧ್ಯಮದವರು ನಾವು ಹೇಳುವುದನ್ನೇ ಏಕಮುಖದಲ್ಲಿ ಪ್ರಚಾರ ಮಾಡುತ್ತಾರೆ. ಆದರೆ ಇಲ್ಲೆಲ್ಲೂ ನಾವು ಕೊಟ್ಟ ಪ್ಯಾಕೇಜ್ ಬಗ್ಗೆ ಟ್ರೇಸ್ ಕೂಡ ಇರದಂತೆ ನಾವು ನೋಡಿಕೊಳ್ತೇವೆ. ಸಾಕ್ಷ್ಯ ನಾಶಮಾಡುವುದಕ್ಕೆ ನಮ್ಮ ಒಂದು ದೊಡ್ಡ ಪಡೆಯೇ ಇದೆ. ಕಾನ್ಕುಳಿಯಲ್ಲಿ ಏಕಾಂತ ನಡೆಸಿದ ರೂಮನ್ನೇ ಕೆಡವಿ ಹಾಕಲಿಲ್ಲವೆ?

ಭಕ್ತಿಯಲ್ಲಿ ಎರಡು ಬಗೆಯಂತೆ. ಒಂದು ಭಯದಿಂದ ಭಕ್ತಿ ಮತ್ತೊಂದು ಶ್ರದ್ಧೆಯಿಂದ ಭಕ್ತಿ. ನಮ್ಮ ಬಕರಾ ಶಿಷ್ಯರಲ್ಲಿ ಬುದ್ಧಿಯುಳ್ಳವರೂ ಸಹ ಇಂದು ನಮ್ಮ ಗೂಂಡಾ ಬಳಗಕ್ಕೆ ಹೆದರಿಕೊಂಡು ಭಕ್ತಿಯನ್ನು ಪ್ರಕಟಿಸುತ್ತಾರೆ. ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುತ್ತಾರೆ. ಅಂತರಂಗದಲ್ಲಿ ಅವರು ಏನನ್ನೇ ಹೇಳಿಕೊಂಡು ಹಾಳಾಗಿ ಹೋಗಲಿ, ಬಹಿರಂಗ ಸಭೆಗಳಲ್ಲಿ ಸಂಖ್ಯಾಬಲ ತೋರಿಸಲಿಕ್ಕೆ, ಸಹಿ ಹಾಕಲಿಕ್ಕೆ ಅವರು ಸಹಮತ ತೋರಿಸಿದರೆ ಸಾಕು.

ಅಂತಹ ಜನಜಾತ್ರೆಯನ್ನು ಚಿತ್ರೀಕರಿಸಿ ಆಳರಸರಿಗೆ ನಮ್ಮ ಬಲಾಬಲವನ್ನು ತೋರಿಸಿದ್ದೇವೆ. “ನಮ್ಮನ್ನು ವಿರೋಧಿಸುವವರು ಏನೊಂದು ಎಪ್ಪತ್ತೆಂಬತ್ತು ಜನ ಇದಾರೆ” ಅಂದಿದ್ದೇವೆ. ಹೀಗೆಲ್ಲಾ ಮಾಡಿ, ವಿರೋಧಿಗಳು ಪೀಠವನ್ನು ತಮ್ಮ ಅಧಿಕಾರಕ್ಕೆ ತೆಗೆದುಕೊಳ್ಳಲು ಹವಣಿಸುವ ದುರುದ್ದೇಶದಿಂದ ಹುಟ್ಟಿಕೊಂಡಿದ್ದಾರೆ ಎಂಬಂತೆ ಬಿಂಬಿಸುತ್ತಿದ್ದೇವೆ.

ನಮ್ಮ ಭಾಷಣಗಳನ್ನು ನೀವು ಕೇಳಬೇಕು. ಗೆಲುವು ನಮ್ಮದೇ ಅಂತೇವೆ ನಾವು. ಯಾವ ಆರೋಪಿಯೂ ಹಾಗೆ ಹೇಳಬಾರದು, ಹೇಳುವ ಹಾಗಿಲ್ಲ. ಆದರೆ ಆರೋಪಿ ಸ್ಥಾನದಲ್ಲಿ ನಿಂತ ದಿನದಿಂದಲೇ ನಾವು ಗೆಲುವು ನಮ್ಮದೇ ಎಂದು ಹೇಳಿಬಿಟ್ಟಿದ್ದೇವೆ; ಯಾಕೆಂದರೆ ನಮಗೆ ಮುಂದೆ ಗೆಲುವಿಗಾಗಿ ಏನೆಲ್ಲ ಮಾಡಬಹುದು ಎಂಬುದು ಮೊದಲೇ ತಿಳಿದಿತ್ತು ಎಂಬುದನ್ನು ನೀವರ್ಥಮಾಡಿಕೊಳ್ಳಬೇಕು. ಮೇಲಿನಿಂದ ನಮ್ಮಾತ್ಮಸಾಕ್ಷಿ ಅಂತೆಲ್ಲ ಬೊಬ್ಬೆ ಹೊಡೀತೇವೆ ನಾವು; ನಮಗೆ ಆತ್ಮಸಾಕ್ಷಿ ಎಂಬುದಿದ್ದರೆ ಇಷ್ಟೊತ್ತಿಗೆ ನಾವು ಕಂಬಿಗಳ ಹಿಂದೆ ಹೋಗಬೇಕಾಗಿತ್ತು. ನಮಗದಿಲ್ಲವೇ ಇಲ್ಲ; ಆದರೆ, ಭಕ್ತರನ್ನ, ನೋಡುವವರನ್ನು ನಂಬಿಸಬೇಕಲ್ಲ?

ಈಗಲೂ ಸಹ ಉದ್ರೇಕಕಾರಿ ಭಾಷಣಗಳನ್ನು ಮಾಡ್ತೇವೆ ನಾವು. ಇನ್ನೂ ಎರಡು-ಮೂರು ಕೇಸು ಬಾಕಿ ಇದ್ದದ್ದು ಮರೆತು ಹೋಗಿದೆ ನಮಗೆ. “ಈಗಲೂ ಬಂದು ನಮ್ಮ ಪಾದಕ್ಕೆ ಬಿದ್ದು ತಪ್ಪಾಯ್ತು ಅಂತ ಕೇಳಿಕೊಳ್ಳಿ, ಕ್ಷಮಿಸ್ತೇವೆ” ಅಂತೇವೆ ನಾವು. ಆದರೆ ಒಂದೂವರೆ ವರ್ಷದಿಂದ ನಮಗೆ ನಿದ್ದೆ ಮಾಡೋದೇ ಕಷ್ಟ ಆಗಿದೆ ಅನ್ನೋದು ನಮ್ಮ ಕಿಚನ್ ಕ್ಯಾಬಿನೆಟ್ಟಿಗೆ ಮಾತ್ರ ಗೊತ್ತಿದೆ. ನಾವು ಹಣವನ್ನೇನೋ ಕೊಡ್ತೇವೆ, ಆದರೆ ಅಂತಿಮ ಕ್ಷಣದಲ್ಲಿ ಹಣತೆಗೆದುಕೊಂಡವರು ಬದಲಾಗಿಬಿಟ್ಟರೆ ಎಂಬ ಭಯ ನಮ್ಮನ್ನು ಕಾಡುತ್ತಲೆ ಇರುತ್ತದೆ.

ಅಲ್ವೊ ರಾಮಚಂದ್ರ, ಎರಡು ವರ್ಷದ ಹಿಂದೆ ನಮ್ಮ ಭಕ್ತರ ಮನೇಲಿ ನಡೆದಿದ್ದ ಮೀಟಿಂಗಿನಲ್ಲಿ ಅಲ್ಲಿದ್ದವರ ಕಾಲಿಗೆ ಬಿದ್ದು ಗೋಳೋ ಎಂದು ಅತ್ತವರು ನಾವು. ನಾವು ಪರ್ವತದತ್ತ ತಪಸ್ಸಿಗೆ ಹೋಗ್ತೇವೆ ಅಂತ ಹೇಳಿದ್ದೆವು. ಆ ಕ್ಷಣದಲ್ಲಿ ಅಲ್ಲಿಂದ ನಾವು ತಪ್ಪಿಸಿಕೊಳ್ಳಬೇಕಾಗಿತ್ತು. ಹೀಗಾಗಿ ಗುಳ್ಳೆನರಿ ಉಪಾಯ ಮಾಡಿದೆವು ಅಂತ. ಅಲ್ಲಿಂದ ಎದ್ದು ಹೋದ ಮೇಲೆ ಬಾವಯ್ಯನನ್ನು ಕರೆದು ಹೊಸ ಯೋಜನೆ ಹಾಕಿಕೊಂಡೆವು. ಕುರಿವಾಡೆಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಸಭೆಯಲ್ಲಿ ನಾವು ತಪಸ್ಸಿಗೆ ಹೋಗುವುದಾಗಿ ಸ್ಟಂಟ್ ಮಾಡಿ, ಸೆಂಟಿಮೆಂಟ್ಸ್ ಕ್ರಿಯೇಟ್ ಮಾಡಿದೆವು. ಅಲ್ಲಿದ್ದ ಕುರಿಗಳನ್ನೆಲ್ಲ ಉಪಾಯಮಾಡಿ “ನಮ್ಮ ಜೊತೆಗೇ ಇರಿ” ಎಂದು ವಿಶ್ವಾಸಕ್ಕೆ ತೆಗೆದುಕೊಂಡೆವು.

ಮಠ, ಪರಂಪರೆ, ಗುರು, ಪವಾಡ, ಶಾಪ, ಬಹಿಷ್ಕಾರ, ಪರಲೋಕ, ಪಾಪ, ಪುಣ್ಯ, ಪುನರ್ಜನ್ಮ ಎಲ್ಲ ಪದಗಳನ್ನೂ ಶಕ್ತಿಯುಕ್ತಿಮೀರಿ ಯಥೇಚ್ಛವಾಗಿ ಬಳಸಿಕೊಂಡಿದ್ದೇವೆ. “ನಿಮ್ಮ ಗುರುಪೀಠವನ್ನು ಹಾಳು ಮಾಡಲು ಷಡ್ಯಂತ್ರ ನಡೆಯುತ್ತಿದೆ” ಎಂದು ಭೋಂಗು ಬಿಟ್ಟಿದ್ದೇವೆ. “ನಿಮ್ಮ ಗುರುಗಳ ಮರ್ಯಾದೆ ಹೋಗುವುದು ಮತ್ತು ನಿಮ್ಮೆಲ್ಲರ ಮರ್ಯಾದೆ ಹೋಗುವುದು ಎರಡೂ ಒಂದೇ” ಅಂತ ಮನಮುಟ್ಟುವಂತೆ ಹೇಳಿದ್ದೇವೆ. ಇದೆಲ್ಲದರಿಂದ ಮುಗ್ಧ ಭಕ್ತರನ್ನು ಎತ್ತಿ ಕಟ್ಟಿ ಜೊತೆಗೆ ಇರಿಸಿಕೊಂಡು, ನಾವು ನಡೆದದ್ದೇ ದಾರಿ ಎಂಬಂತೆ ಹಿಟ್ಲರ್ ರೀತಿಯಲ್ಲಿ ಸರ್ವಾಧಿಕಾರಿಯಾಗಿ ನಡೆದುಕೊಂಡು ನಮಗೆ ಬೇಕಾದ್ದನ್ನೆಲ್ಲ ಭೋಗಿಸಿದ್ದೇವೆ.

ಪಾಪ ಆ ಜನ ಇನ್ನೂ ಸಮಾಜದ ಮರ್ಯಾದೆ, ಮಠದ ಮರ್ಯಾದೆ, ಪೀಠದ ಮರ್ಯಾದೆ ಅಂದುಕೊಂಡು ತಿರುಗುತ್ತಿದ್ದರೆ, ಇತ್ತ ನಮ್ಮ ಸಾಮಾನು, ವೀರ್ಯಾಣು, ಚಡ್ಡಿ, ಹೆಣ್ಣಿನ ಪ್ಯಾಂಟಿ, ತೊಡೆಸಂದಿಯ ಕೂದಲು ಎಲ್ಲದರ ಬಗ್ಗೆ ಎಳೆ ಎಳೆಯಾಗಿ ಸಾರ್ವಜನಿಕರು ಆಡಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ನಮ್ಮದೇ ಹೌದೆಂದು ವೈಜ್ಞಾನಿಕ ವರದಿ ದೃಢೀಕರಿಸಿದೆ. ಏನೋ ನಡೆಯುತ್ತಿದ್ದದ್ದು ಹೌದೆಂದು ತನಿಖೆ ನಡೆಸುತ್ತಿದ್ದ ಎಲ್ಲರೂ ಹೇಳಿದ್ದಾರೆ. ಇಷ್ಟೆಲ್ಲ ಆದಮೇಲೂ ಮರ್ಯಾದೆ ಎಂಬುದನ್ನು ಕರಗದಂತೆ ಬೇರೆಡೆಗೆ ಸುರಕ್ಷಿತವಾಗಿಡಲು ಅದೇನು ಐಸ್ ಕ್ರೀಮೇ? ಮಂಜುಗಡ್ಡೆಯೇ? ಆದರೆ ನಾವು ಹೇಳ್ತೇವೆ-“ಅಂತದ್ದೇನೂ ನಡೆದೇ ಇಲ್ಲ” ಆಂತ. ನಾವು ಈಗಲೂ ಹೇಳ್ತೇವೆ ಅಂತದ್ದೆಲ್ಲ ನಡೆದೇ ಇಲ್ಲ ಅಂತ.

ಇಷ್ಟಾದರೂ ನಮ್ಮ ಭಯದ ಭಕ್ತರು ನಮ್ಮ ಗೂಂಡಾ ಮೇಳಕ್ಕೆ ಹೆದರಿ ತಗ್ಗಿಬಗ್ಗಿ ನಡೆದುಕೊಳ್ಳುತ್ತಲೆ ಇದ್ದಾರೆ. ಇನ್ನು ಪರಿಸ್ಥಿತಿಯ ಲಾಭ ಪಡೆದ ಗೂಂಡಾ ಭಕ್ತರು ಹೇಗೂ ನಮ್ಮ ಜೊತೆಗೇ ಇರುತ್ತಾರೆ. ಹೀಗಾಗಿ ನಮ್ಮನ್ನು ಎದುರಿಸಿ ಗೆಲ್ಲುವ ಛಾತಿ ಎಂಟೆದೆಯ ಬಂಟನಿಗೂ ಇಲ್ಲ ಎಂದು ನಾವು ಬಲವಾಗಿ ನಂಬಿದ್ದೇವೆ.

ಇತರರ ಸಂತುಷ್ಟಿಗಾಗಿ ಸನ್ಯಾಸಿ ಯಾವಾಗ ಹಲ್ಲು ಕಿಸಿಯಲು ಆರಂಭಿಸುತ್ತಾನೋ ಆಗಲೇ ಭಕ್ತರು, ಶಿಷ್ಯರು, ಸನ್ಯಾಸಿಯನ್ನು ಅನುಮಾನಿಸಬೇಕು. ಅದರಲ್ಲಂತೂ ಸಿನಿಮಾರಂಗದ ಬಿಚ್ಚಾಕೊ ಪಸುಗಳನ್ನೆಲ್ಲ ಇಪ್ಪತ್ತೈದು ಲಕ್ಷ ತೆತ್ತು ಕರೆಸಿಕೊಂಡು ಎಂಟುನೂರು ಕಮಲದ ಹೂಗಳನ್ನು ಹಾಸಿ ಸ್ವಾಗತಿಸಿದಾಗಲಾದರೂ ಜನ ಇದು ಸನ್ಯಾಸಿಯಲ್ಲ ಅಂತ ತೀರ್ಮಾನಿಸಬೇಕಾಗಿತ್ತು. ಕಣ್ಣಿಗೆ ಕಂಡ ಅಪ್ಪಟ ಸತ್ಯ ನಮ್ಮ ಬಾವಯ್ಯ ಬಡವರ ಮನೆಯ ಹರೆಯದ ಹುಡುಗಿಯರನ್ನು ಬಸಿರುಮಾಡಿದ್ದು ಮತ್ತು ನಾವು ಅವನನ್ನು ರಕ್ಷಿಸಿದ್ದು. ಬಾವಯ್ಯನನ್ನು ಮಠದಲ್ಲಿ ಇರಿಸಿಕೊಳ್ಳುವ ಕಾರಣಕ್ಕೆ ಸಮಿತಿಗಳ ಪದಾಧಿಕಾರಿಗಳನ್ನೆಲ್ಲ ವಿನಾಕಾರಣ ಬದಲಾಯಿಸಿದ್ದು.

ಇದೆಲ್ಲವನ್ನೂ ತಿಳಿದಾದರೂ ಜನ ಮಠದವ ಸರಿಯಿಲ್ಲ ಎಂಬ ತೀರ್ಮಾನಕ್ಕೆ ಬಂದು, ಮಠಕ್ಕೆ ನುಗ್ಗಿ ನಮ್ಮನ್ನು ಎಳೆದುಹಾಕಬೇಕಿತ್ತು. ಯಾವುದೂ ಆಗಲಿಲ್ಲ ಎಂಬುದನ್ನು ಗಮನಿಸಿಯೇ ಮುಂದೆ ನಾವು ಕನ್ಯಾಸಂಸ್ಕಾರದಿಂದ ಏಕಾಂತಕ್ಕೆ ಮುಂದಡಿ ಇಟ್ಟೆವು. ಸೆಂಟಿಮೆಂಟಲ್ ಫೂಲ್ಸ್ ಗಳನ್ನು ಮತ್ತಷ್ಟು ಸೆಂಟಿಮೆಂಟಿಗೆ ಒಳಪಡಿಸಿ ನಮ್ಮ ಬೇಳೆ ಬೇಯಿಸಿಕೊಳ್ಳುತ್ತಲೇ ಇದ್ದೇವೆ.

ಸುದ್ದಿ ಹಂಚುವವರು ಭಕ್ಷೀಸು ಕೊಟ್ಟ ಕಡೆಗಿರುತ್ತಾರೆ ಅಥವಾ ರಾಜಕೀಯವಾಗಿ ಪ್ರಬಲರಾದವರ ಕಡೆಗಿರುತ್ತಾರೆ ಎಂಬುದು ನಮಗೆ ಗೊತ್ತಾದಂದಿನಿಂದ ಅವರನ್ನು ಹೇಗೆ ನೋಡಿಕೊಳ್ಳಬೇಕೆಂಬುದು ನಮಗೆ ಗೊತ್ತು. ನಮ್ಮ ವಿರುದ್ಧ ಸತ್ಯವಿಷಯವನ್ನು ಹೇಳಿದ ಒಂದು ವಾಹಿನಿಗೆ ನಾವು ಗೂಂಡಾಗಳನ್ನು ಛೂ ಬಿಟ್ಟಿದ್ದು ಬಹಳ ದೊಡ್ಡಮಟ್ಟದಲ್ಲಿ ಸುದ್ದಿಯಾಗಿ ನಮ್ಮ ಕೆಲವು ಗುಟ್ಟು ರಟ್ಟಾಗಲು ಕಾರಣವಾಗಿ ಹೋಯ್ತು. ಇಲ್ಲದಿದ್ದರೆ ಮಹಾ ಸುಭಗನಂತೆ ನಟಿಸಿ ನಾವು ತೊನೆಯುತ್ತ ಹೊಡೆಯುವ ಭಾಷಣಗಳಿಗೆ ಪುಂಗಿಯ ಎದುರಿನ ಹಾವಿನಂತಾಗ್ತಾರೆ ನಮ್ಮ ಭಕ್ತರು.

ನಮ್ಮ ಗೂಂಡಾ ಶಿಷ್ಯರನ್ನು ಕಂಡು ’ಚೋರ ಗುರುವಿಗೆ ಚಾಂಡಾಲ ಶಿಷ್ಯ’ ಎಂಬ ಗಾದೆಯನ್ನು ಬಹಳ ಜನ ನೆನಪುಮಾಡಿಕೊಂಡಿರ್ತಾರೆ. ಮಧ್ಯದಲ್ಲಿ ಹಳ್ಳಕ್ಕೆ ಬಿದ್ದವರು ಮಾತ್ರ ಇವತ್ತಿಗೂ ನಿಜಸ್ಥಿತಿಯನ್ನು ಅರಿಯಲಾಗದ ಶಿಷ್ಯರು. ಅರಿಯದಂತೆ ನಾವು ತರಬೇತಿ ಕೊಟ್ಟಿದ್ದೇವಲ್ಲ. ನಮ್ಮ ಧೈರ್ಯ-’ಸಾಧನೆಗಳ’ ಕುರಿತು ನಾವೇ ನಮ್ಮ ಭಾಷಣಗಳಲ್ಲಿ ಬೇಕಷ್ಟು ಕೊಚ್ಚುತ್ತೇವಲ್ಲ; ಅದನ್ನು ಕಂಡು ಅವರೆಲ್ಲ ಹೌದು ಎಂದುಕೊಂಡಿದ್ದಾರೆ ಪಾಪ.

ಹತ್ತುಮಂದಿಗೆ ಸೇರಿದ ಪುಕ್ಕಲು ನಾಯಿಯೊಂದು ದೂರದಲ್ಲಿ ಯಾರೋ ಬರುತ್ತಿರುವುದನ್ನು ಕಂಡು ಕೂಗುತ್ತಿತ್ತಂತೆ. ಕತ್ತಲಲ್ಲಿ ಸಣ್ಣ ಪೆನ್ ಟಾರ್ಚ್ ಹಿಡಿದು ಅವ ಮುಂದೆ ನಡೆದರೆ, ನಾಯಿ ಹತ್ತಿರದ ಮನೆಯ ಅಂಗಳದೊಳಕ್ಕೆ ಹೋಯಿತಂತೆ. ಆ ಮನೆಯ ಅಂಗಳದ ಅಂಚಿನಲ್ಲಿ ನಿಂತು ಬೆಳಕು ಬಿಟ್ಟಾಗ ನಾಯಿ ಮನೆಯ ಹಿಂಭಾಗಕ್ಕೆ ತೆರಳಿ ಕೂಗತೊಡಗಿತಂತೆ. ಮನೆಯ ಪಕ್ಕದ ದಾರಿಯಲ್ಲಿ ಮನೆಯ ಹಿಂಭಾಗ ತಲುಪಿ ಬೆಳಕು ಬಿಟ್ಟರೆ ನಾಯಿ ಫರ್ಲಾಂಗು ದೂರ ಓಡಿ ಹೋಗಿ ಅಲ್ಲಿಂದ ಬೊಗಳ ಹತ್ತಿತಂತೆ. ನಮ್ಮ ಅವಸ್ಥೆ ಆ ನಾಯಿಯ ಅವಸ್ಥೆಗಿಂತ ಭಿನ್ನವೇನಲ್ಲ. ಅನ್ನ ಹಾಕಿದ ಹತ್ತುಮಂದಿ “ಓ ನಮ್ಮ ನಾಯಿ ರಾತ್ರಿ ಯಾರಿಗೋ ಜೋರಾಗಿ ಅಬ್ಬರಿಸುತ್ತಿತ್ತು” ಅಂದುಕೊಳ್ತಾರೆ; ನಾಯಿಗೆ ಚಡ್ಡಿ ಇದ್ದರೆ ಒದ್ದೆಯಾಗುವ ಪರಿಸ್ಥಿತಿ ಎಂಬುದು ಅವರಿಗೆ ಗೊತ್ತಿಲ್ಲ.

ಚಡ್ಡಿ ಒದ್ದೆ ಮಾಡಿಕೊಳ್ಳುವ ಪ್ರಕರಣದಲ್ಲೇ ಅಲ್ಲವೆ ನಾವು ನಿಸ್ಸೀಮರು? ಹಲವು ಲಂಗ-ಪ್ಯಾಂಟಿಗಳಿಗೆ ಲಿಂಗದ ಗಮ್ಮು ಹಚ್ಚಿ ಅದನ್ನು ಒದ್ದೆಮಾಡಿದವರು ನಾವು. ಮಹಿಳೆಯರನ್ನು ಕಂಡಾಗಲೆಲ್ಲ ಬುಲ್ ಪೀನವೆಂಬ ಚಡ್ಡಿಯಲ್ಲಿ ಸ್ಖಲನಗೊಂಡು ಒದ್ದೆಮಾಡಿಕೊಳ್ಳುವವರು. ನಮ್ಮಿಂದ ಹುಟ್ಟಿದ ಮಕ್ಕಳ ಸಂಖ್ಯೆ ನಮಗೇ ಗೊತ್ತಿಲ್ಲ; ಆದರೂ ನಾವು ಬ್ರಹ್ಮಚಾರಿಗಳು, ವೀರ್ಯವನ್ನು ಹೊರಗೆ ಹಾಕಬಾರದು ಎಂದು ಪರೀಕ್ಷೆಗಳನ್ನು ತಪ್ಪಿಸಿದ್ದೇವೆ. ನಮ್ಮ ಸತ್ಯಾನಂದ ಬಾವಾಯ್ಯನೂ ತಪ್ಪಿಸಿಕೊಳ್ಳಬಹುದಿತ್ತು; ಅವ ಸ್ವಲ್ಪ ಎಡವಟ್ಟಾಗಿ ಹೋಯ್ತು. ಈಗ ಸತ್ಯಾನಂದನ ಸಾಲಿನಲ್ಲಿ ಅವನ ಜೊತೆಗೆ ನಮ್ಮ ಭಾವಚಿತ್ರ ಕಾಣಿಸುತ್ತದೆ.

ಯಾರಾದರೂ ಏನಾದರೂ ಮಾಡಿಕೊಳ್ಳಲಿ, ಏನಾದರೂ ಹರಕೊಳ್ಳಲಿ; ನಮಗೆ ಕಾಗದದಲ್ಲಿ “ನೀವು ನಿರ್ದೋಷಿ” ಎಂದು ಮಾಡಿಕೊಟ್ಟು ಜೈಲಿಗೆ ಹೋಗದಂತೆ ಕೇಸು ನಿಭಾಯಿಸಿಕೊಟ್ಟರೆ ಸಾಕು. ಅದರಿಂದ ನಮ್ಮ ಪಟ್ಟ ಭದ್ರವಾಗುತ್ತದೆ; ಪೀಠವೂ ನಮಗೆ ದಕ್ಕುತ್ತದೆ. ಅದಿಲ್ಲದಿದ್ದರೆ ನಾವು ಯಾರಿಗೋ ಶರಣಾಗಬೇಕಾದ ಸ್ಥಿತಿ ಬರಬಹುದು. ಯಾರಿಗೋ ಶರಣಾಗಲು ನಾವು ಸಿದ್ದರಿಲ್ಲ. ನೀವೆಲ್ಲ ನಮ್ಮ ಜೊತೆಗೆ ಸದಾ ಇದ್ದು ರಕ್ಷಣೆ ಮಾಡಿ.

ನಮ್ಮ ಲಿಂಗ ಲಂಗದೊಳಕ್ಕೆ ಹೊಕ್ಕು ಲಿಂಗಾರಾಧನೆ ಮಾಡಲು ಎಲ್ಲ ರೀತಿಯಿಂದ ಸಹಕರಿಸಿ. ನಿಮಗೆ ಗುರುಕರುಣೆ ಸದಾ ಇರುತ್ತದೆ. ’ಹರ ಮುನಿದರೂ ಗುರು ಕಾಯ್ತಾನೆ’ ಅಂತಾರಲ್ಲ, ಗುರುವನ್ನು ನಂಬಿ ಆರಾಧಿಸುವುದರಿಂದ ನಿಮಗೆ ದೇವರೇ ಕೋಪಿಸಿಕೊಂಡು ತೊಂದರೆ ಕೊಟ್ಟರೂ ಗುರು ಕಾಯ್ತಾನೆ ಎಂಬುದು ತಿಳಿದಿರಲಿ. ಇದು ಇಷ್ಟಕ್ಕೇ ಮುಗಿಯೋದಿಲ್ಲ. ಇನ್ನಾವುದೋ ದೂರುಗಳು ಬರಬಹುದು. ದೂರುಗಳು ದಾಖಲಾಗುತ್ತ ನಾವು ಒಳಗೆ ಹೋದರೆ ಅಲ್ಲಿಗೂ ನೀವೆಲ್ಲ ಬಂದು ಸಹಕರಿಸಿ. ನೀವು ನಮ್ಮ ಹಾದರ ಚರಿತ್ರೆಯನ್ನು ಅರಿತು ಅನುಮೋದಿಸಿದ್ದಕ್ಕೆ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ನಾವು.

ಹಾದರ ಸಂಸ್ಕೃತಿಯನ್ನು ಬೆಬಲಿಸಿದ ಎಲ್ಲರಿಗೂ ಒಳ್ಳೇದಾಗಲಿ ಅಂತ ನಾವು ಹರಸ್ತೇವೆ.

ಬರೇ ಕಾಮ
ಬರೇ ಕಾಮ ”

ಪ್ರವಚನ ಮುಗಿಯುತ್ತಿದ್ದಂತೆ ಗಂಡು ಕತ್ತೆಗಳು ಇದ್ದಲ್ಲೆ ನೆಗೆನೆಗೆದು ಹಾರಿದವಿ. ಕೆನೆಯುವ ಗಂಡು ಕುದುರೆಗಳು ನಾ ಮೇಲು ತಾ ಮೇಲು ಎಂದು ಗಂಟಲು ಹರಿದುಕೊಂಡು ಶಾಮಿಯಾನ ಹರಿಹೋಗುವಂತೆ ಕೆನೆದವು.
“ಹಾವಾಡಿಗ ಮಹಾಸಂಸ್ಥಾನ ಜಗದ್ಗುರು ಶೋಭರಾಜಾಚಾರ್ಯ ಚಂದ್ರನಾಡ್ಯುಜ್ಜೇಶ್ವರ ತೊನೆಯಪ್ಪ ಕಚ್ಚೆಶೀ ಮಹಾರಾಜ್ ಕೀ ಜೇ ಯ್

…………… ಜೇ ಯ್

…………..ಜೇ ಯ್

[ವಿಡಂಬನೆಯ ಮೂರನೆ ಭಾಗವನ್ನು ಸ್ವಲ್ಪದಿನ ತಡವಾಗಿ ಬಿತ್ತರಿಸಲಾಗುವುದು]

Thumari Ramachandra

source: https://www.facebook.com/groups/1499395003680065/permalink/1749265932026303/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s