ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ…..

ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ…..

[ವಿಡಂಬನೆಗೆ ಸಾಂದರ್ಭಿಕವಾಗಿ ಕುದುರೆ ಬ್ರೀಡಿಂಗ್ ವೀಡಿಯೋ ಲಿಂಕ್ ಕೊಡಲಾಗಿದೆ. ಇಲ್ಲಿ ಅಶ್ಲೀಲತೆಗೆ ಪ್ರಾಮುಖ್ಯತೆಯಿಲ್ಲ. ವಿಡಂಬನೆಗೆ ಮಾತ್ರ. ಯಾರೂ ತಪ್ಪು ತಿಳಿಯಬೇಕಾಗಿಲ್ಲ]

ಗೂಂಡಾ ಜನಜಂಗುಳಿಯ ನಡುವೆ, ಜಗದ್ಗುರು ತೊನೆಯಪ್ಪನವರು ತೊನೆದಾಡುತ್ತ ಮಹಿಳೆಯರತ್ತ ಮುಖಹಾಕಿ ಹಲ್ಲು ಕಿಸಿಯುತ್ತ ನಡೆದು ಪೀಠವನ್ನೇರಿದರು. ಹಳದೀ ವಂದಿಮಾಗಧ ಭಟ್ಟಂಗಿಗಳು ಛಾವಣಿ ಹಾರಿಹೋಗುವಂತೆ ಭೋ ಪರಾಕು ಕೂಗಿದವು.

“ಮಂತ್ರಮೂಲೆ ಮಾವಿನಕಾಯಿ ತಂತ್ರಮೂಲೆ ಬಗಳಾಮುಖಿ
ನ್ಯಾಸ ಮೂಲೆ ಏಕಾಂತ ಸೇವಾ ಖುಲಾಸೆ ಮೂಲೆ ಕೋಟಿ ಕೋಟಿಃ

ಬರೇ ಕಾಮ
ಬರೇ ಕಾಮ

ವಿರೋಧಿಸುವವರನ್ನು ಬಗ್ಗುಬಡಿಯಲು ಮೈಯೆಲ್ಲ ವಿಷತುಂಬಿದ ನಾವು ಮತ್ತೆ ಬಂದಿದ್ದೇವೆ, ಹೌದು ಮತ್ತೆ ಬಂದಿದ್ದೇವೆ. ವಿರೋಧಿಸುವವರು ಯಾಕೆ ಹುಟ್ಟಿಕೊಂಡರು? ನಿಜವಾದ ಕಾರಣಗಳು ನಮಗೆ ಗೊತ್ತು. ಆದರೆ ಅದೆಲ್ಲ ಷಡ್ಯಂತ್ರ ಅಂತ ಹೇಳ್ತೇವೆ ನಾವು. ಇಲ್ಲಿ ಎಲ್ಲರು ನಮ್ಮ ವ್ಯವಸ್ಥೆಗಾಗೇ ಇರುವವರು. ಹೆದರಿಕೊಳ್ಳಬೇಕಾದ ಅಗತ್ಯವೇ ಇಲ್ಲವೆಂದು ನಮ್ಮ ಏಕಾಂತ ಭಕ್ತೆಯರಲ್ಲಿ ನಾವು ಹೇಳುತ್ತಲೇ ಇರುತ್ತೇವೆ.

ಬಹಳ ಸಮಯವಾಗಿತ್ತು. ವರ್ಷವೇ ಎಂದುಕೊಳ್ಳಿ. ನಾವು ನಿಂತಲ್ಲಿ ನಿಲ್ಲುವವರಲ್ಲ. ಓಡಾಡುತ್ತಲೇ ಏಕಾಂತ ನಡೆಸುತ್ತಲೇ ಇರುವವರು. ಏಕಾಂತದ ಮಹಿಳೆಯರಿಗೂ ನಮಗೂ ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್. ಆದರೂ ಕೆಲವರು ಮಾತ್ರ ಬೆನ್ನು ಬಿಡದೆ ಹಿಂದೆಯೇ ಬರುತ್ತಾರೆ. ಕೆಲವೊಮ್ಮೆ ಅಂತಹ ’ಮಹಿಳಾ ಭಕ್ತ’ರ ಅವಶ್ಯಕತೆಯೂ ನಮಗಿರುತ್ತದೆ.

ನಮ್ಮ ಪದಗ್ರಹಣವಾದಾಗಿನಿಂದ ಇಲ್ಲಿಯವರೆಗೆ ನಾವು ನಮಗೆ ಬೇಕಾದಂತೆ ನಡೆದುಕೊಂಡಿದ್ದೇವೆ. ಮನುಷ್ಯ ಜೀವನ ಚಿಕ್ಕದು, ಅದನ್ನು ಸಿಕ್ಕಲ್ಲೆಲ್ಲ ಸಿಕ್ಕಸಿಕ್ಕಹಾಗೆ ಎಂಜಾಯ್ ಮಾಡಬೇಕೆಂಬುದು ನಮಗೆ ಗೊತ್ತು. ಪರಲೋಕ, ಪರಮಾತ್ಮ ಅದೆಲ್ಲ ಆಮೇಲೆ ನೋಡಿಕೊಳ್ಳೋಣ. ಇಲ್ಲಿರುವವರೆಗೆ ಚೆನ್ನಾಗಿರಬೇಕು ಎಂಬುದಷ್ಟೆ ನಮ್ಮ ಧ್ಯೇಯ.

ನಮಗೂ ಭ್ರಷ್ಟ, ಅನೈತಿಕ, ಕೊಲೆಗಡುಕ ರಾಜಕಾರಣಿಗಳಿಗೂ ವ್ಯತ್ಯಾಸ ಕೇವಲ ಬಟ್ಟೆಗಳಲ್ಲಿ ಮಾತ್ರ. ಅವರು ಕಾವಿ ತೊಡುವುದಿಲ್ಲ. ಶೋಭರಾಜಾಚಾರ್ಯರಾಗಿ ನಾವು ಮಾತ್ರ ಕಾವಿ ತೊಡುತ್ತೇವೆ. ಅವರದ್ದು ಚುನಾವಣೆಯಲ್ಲಿ ಸಿಗುವ ಐದುವರ್ಷಗಳ ಅಧಿಕಾರದ ಗದ್ದುಗೆ. ಆದರೆ ನಮ್ಮದು ಒಮ್ಮೆ ಪೀಠ ಏರಿದರೆ ಜನ್ಮ ಪರ್ಯಂತ ಇರುವಂತದ್ದು. ನಮ್ಮದು ಕಳೆದುಹೋಗುವ ಅಧಿಕಾರವಲ್ಲ. ಯಾರು ಬಿದ್ದರೂ ಗೆದ್ದರೂ ನೆಗೆದುಬಿದ್ದರೂ ನಾವಂತೂ ಗೆದ್ದೇ ಇರುತ್ತೇವೆ.

ಪೀಠಕ್ಕೆ ಬಂದಾಗಿಂದ ನಾವು ನಡೆಸದ ಕಾಮಕಾಂಡಗಳು ಯಾವುದೂ ಬಾಕಿ ಇಲ್ಲ. ಅಬ್ಬಬ್ಬ ನಡುವಯಸ್ಸಿನ ಸುಂದರ ಮಹಿಳೆಯರು, ಅವರ ಹರೆಯದ ಹೆಣ್ಣುಮಕ್ಕಳು, ನಡುವಯಸ್ಸು ದಾಟಿದ ಮಹಿಳೆಯರು ಹೀಗೆ ಸುಮಾರು ಐದುನೂರಕ್ಕೂ ಹೆಚ್ಚು ಸ್ತ್ರೀಯರಿಗೆ ಹಾರಿ ಅದೆಷ್ಟು ಆನಂದ ಅನುಭವಿಸಿದೆವು ಗೊತ್ತೆ? ಅವರಲ್ಲಿ ಯಾರಾದರೂ ಯಾಕೆ ಹಾರುತ್ತೀರಿ ಎಂದು ಕೇಳಿದರೆ ನಮ್ಮದು ಭೋಗವರ್ಧನವಾಳ ಪೀಠ. ಹೀಗೇ ನಡೆಯಬೇಕೆಂದು ಶಾಸ್ತ್ರ ಹೇಳಿದೆ. ನಮ್ಮ ಹಿಂದಿನವರೆಲ್ಲ ಹೀಗೇ ಇದ್ದರು ಎಂದು ಹೇಳಿಬಿಟ್ಟಿದ್ದೇವೆ. ಹೌದೆಂದುಕೊಂಡು ದಿವ್ಯಾನುಗ್ರಹವೆಂಬ ರೀತಿಯಲ್ಲಿ ನಮಗೆ ಆಗಾಗ ಅರ್ಪಿಸಿಕೊಳ್ಳುತ್ತಲೆ ಬಂದಿದ್ದಾರೆ.

ನಮ್ಮ ಹಾರಾಟದ ಮಹಿಮೆಯನ್ನು ಪರೋಕ್ಷವಾಗಿ ಒಬ್ಬ ಪತ್ರಕರ್ತ ತನ್ನ ಹರಿತವಾದ ಲೇಖನಿಯ ಮೂಲಕ ಐದುವರ್ಷಗಳ ಹಿಂದೆಯೇ ಬರೆದಿದ್ದ. ಅವನನ್ನು ಕಂಡರೆ ನಮಗೆ ಎಲ್ಲಿಲ್ಲದ ಸಿಟ್ಟು. ನಾಲ್ಕು ಗೋಡೆಯ ಮಧ್ಯೆ ಮಾತಾಡಲು ಬರ ಹೇಳಿದೆವು, ಅವ ಬರಲಿಲ್ಲ. ಬಂದಿದ್ದರೆ ನಮ್ಮ ಭಕ್ತರು ಜೀವನದಲ್ಲಿ ಮತ್ತೆಂದೂ ಅವ ಬರೆಯಲು ಸಾಧ್ಯವಾಗದಂತೆ ವ್ಯವಸ್ಥೆ ಮಾಡಿಬಿಡುತ್ತಿದ್ದರು. ಗೊತ್ತಾಯ್ತನ ತುಮರಿ ರಾಮಚಂದ್ರ?

ನಾವೂ ಸಮಯಕ್ಕಾಗಿ ಕಾದೆವು. ಒಮ್ಮೆ ಅವನ ಮೇಲೆ ಕೆಲವರು ದೂರು ನೀಡುತ್ತಾರೆ ಎಂಬ ಸುದ್ದಿ ತಿಳಿದು ಮೀನ ಮಟ್ಟ ಮಾಡುವವನೊಡನೆ ಗುಟ್ಟಾಗಿ ಮಾತನಾಡಿದೆವು. ಅವನಿಗೊಂದಷ್ಟು ಭಕ್ಷೀಸು ಕೊಟ್ಟು “ನೋಡು, ಆ ಪತ್ರಕರ್ತನಿಗೆ ಶಿಕ್ಷೆಯಾಗಲೇಬೇಕು. ಯಾವ ಕಾರಣಕ್ಕೂ ಬಿಡಬಾರದು” ಎಂದೆವು. ಮೊದಲೇ ನಮ್ಮ ಸಮಾಜವನ್ನು ಕಂಡರಾಗದ ಅವ ಇದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ.

ನಾವಲ್ಲದಿದ್ದರೆ ಆ ಪತ್ರಕರ್ತನಿಗೆ ಯಾವುದೇ ಶಿಕ್ಷೆ ಆಗುತ್ತಿರಲಿಲ್ಲ. ಯಾಕೆಂದರೆ ಅವ ಅಷ್ಟೊಂದು ಜನಪ್ರಿಯತೆ ಗಳಿಸಿದ್ದ. ಯಾವಾಗ ಅವನ ವಿರುದ್ಧ ನಾವಿದ್ದೇವೆ ಎಂಬುದು ಗೊತ್ತಾಯ್ತೋ ನಮ್ಮ ಬಳಗವೆಲ್ಲ ನಮ್ಮ ಹಿಂದೆ-ಅಂದರೆ ಜಗದ್ಗುರು ಶೋಭರಾಜಾಚಾರ್ಯ ತೊನೆಯಪ್ಪನವರಾದ ನಮ್ಮ ಹಿಂದೆ ನಿಂತುಬಿಟ್ಟರು. ನಮ್ಮ ಪವಾಡ ಪುಸ್ತಕದಲ್ಲಿ ಇದನ್ನೂ ಹಾಕಲು ಹೇಳಿದ್ದೇವೆ ನಾವು. ಆ ಸಮಯದಲ್ಲಿ ಸಾಧ್ಯವಾದ ಎಲ್ಲ ಸುದ್ದಿಮಾಧ್ಯಮಗಳಲ್ಲಿ ಅವನ ವಿರುದ್ಧ ಮಾತನಾಡಿಸಿದೆವು; ಕಾನೂನಿಗೆ ವಿರುದ್ಧವಾದರೂ ಮೀನ ಮಟ್ಟ ಮಾಡುವವನೆ ಚಾನೆಲ್ಗಳಿಗೆ ಹೋಗಿ ಕುಳಿತು ಮಾತನಾಡಿದ. ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ಸಚಿತ್ರ ಸುದ್ದಿ ಹಾಕುವಂತೆ ಕೋಣೆಮಾಣಿಗೆ ಕೊಟ್ಟು ಬರೆಸಿದೆವು.

ನಾವು ಮಾಡಿದ ಆ ’ಪುಣ್ಯ ಕೆಲಸ’ಕ್ಕೆ ಶೀಘ್ರ ಪ್ರತಿಫಲವಾಗಿ ಕೆಲವೇ ದಿನಗಳಲ್ಲಿ ನಮ್ಮ ಕಚ್ಚೆಹರುಕುತನ ಬೆಳಕಿಗೆ ಬಂದು ಜಗತ್ತೇ ನಮ್ಮನ್ನು “ಸನ್ಮಾನಿಸಿತು”!-ಆ ಪ್ರಶ್ನೆ ಬೇರೆ. ಯಾರಾದರೂ ನಮ್ಮ ಪಾತಕಗಳ ವಿರುದ್ಧ, ಅನೈತಿಕ ವ್ಯವಹಾರಗಳ ವಿರುದ್ಧ ದನಿ ಎತ್ತಿದರೆ ಅವರ ಕೆಲಸ ಮುಗಿಯಿತು ಅಂತಲೇ ಅರ್ಥ. ಹಾಗೆ ಮಾಡುತ್ತೇವೆ ನಾವು. ನೀವು ನೋಡಲಿಲ್ಲವೆ? ಅಲ್ಲೊಬ್ಬ ಗುಂಡು ಹಾರಿಸಿಕೊಂಡು ಸತ್ತ ಅಂತ ಮಾಡಿದ್ದೇವೆ. ಅದು ಆತ್ಮಹತ್ಯೆಯಂತೆ ಕಂಡರೂ ಅದರ ಹಿಂದೆ ನಾವಿದ್ದೇವೆ ಎಂಬುದು ನಮ್ಮ ಬಕರಾ ಭಕ್ತರಿಗೆ ಅರಿವಿಲ್ಲ. ಭಕ್ಷೀಸು ಭಕ್ತರಿಗೆ ಅಂತದ್ದೇ ಬೇಕು. ಹೀಗಾಗಿ ನಾವು ನಮ್ಮ ನೇರಕ್ಕೇ ನಡೆಯುತ್ತಿದ್ದೇವೆ.

ದೀಕ್ಷೆ ಪಡೆದ ಮರುವಾರದಿಂದಲೆ ಆರಂಭವಾದ ನಮ್ಮ ಕೈಚಳಕಗಳು ಸದಾ ನಡೆಯುತ್ತಲೇ ಇವೆ. ಆಗಲೂ, ’ಕೊಟ್ಟವ ಕೋಡಂಗಿ ಇಸಗಂಡವ ಈರಭದ್ರ’ ಎಂಬಂತೆ ಹಿಂದಿನವರು ಬೊಕ್ಕಸಸದ ಕೀಲಿ ಕೊಡಲಿಲ್ಲ ಎಂದು ತಕರಾರು ತೆಗೆದಿದ್ದೆವು; ಯಾಕೆಂದರೆ ನಾವು ಕಣ್ಣಿಟ್ಟಿದ್ದೆ ಮಠದ ಆಸ್ತಿ, ಖಜಾನೆ, ಬ್ಯಾಂಕ್ ಅಕೌಂಟು ಇತ್ಯಾದಿಗಳಮೇಲೆ. ಪೂಜೆ, ಪುನಸ್ಕಾರ, ಅನುಷ್ಠಾನಗಳೆಲ್ಲ ಯಾವೋನಿಗೆ ಬೇಕು? ತೋರಿಕೆಗೆ ಒಂದಷ್ಟು ಇದ್ದರೆ ಸಾಕು.

ಹಸುವಿನಕಿವಿಯೂರಲ್ಲಿ ನಾವು ಹದಿಹರೆಯದಲ್ಲಿ ನಡೆಸಿದ ರತಿಕ್ರೀಡೆಗಳನ್ನು ಯಾರೂ ಅರಿತಿಲ್ಲ. ವರುಣರಾಜನ ಆಸ್ಥಾನದಲ್ಲಿ ವಿದೇಶೀ ಮಹಿಳೆಯರು ಕನಿಷ್ಠ ಉಡುಪಿನಲ್ಲಿ ಅಲುಗಾಡಿಸುತ್ತ ಬರುವಾಗ ನಾವು ನಮ್ಮ ಬಾವಯ್ಯ ಬೆಕ್ಕಸಬೆರಗಾಗಿ ಹಲ್ಕಿರಿದು ನೋಡುತ್ತ ನಿಲ್ಲುತ್ತಿದ್ದೆವು. ನಮ್ಮ ಬಾವಯ್ಯ ಗಾಳ ಹಾಕುವುದರಲ್ಲಿ ಮಹಾನಿಸ್ಸೀಮ. ಅಲ್ಲಿಯೇ ನಾವು ಮೇಯಲು ಆರಂಭ ಮಾಡಿದ್ದು.

ಹಣ, ಅಧಿಕಾರ ಯಾರಿಗೆ ಬೇಡ? ಮಠದಲ್ಲಿ ಕಾಲ್ ಫಾರ್ ಮಾಡ್ತಾರೆ ಅಂದಾಗ ಮೊದಲು ಸುದ್ದಿ ತಿಳಿದದ್ದು ನಮ್ಮ ಕುಳ್ಳ ಬಾವಯ್ಯನಿಗೆ. ಮಠದ ಹುದ್ದೆಯಲ್ಲಿ ಇಷ್ಟೆಲ್ಲ ಮಜವಿರುತ್ತದೆ ಎಂಬುದು ನಮಗಾಗ ತಲೆಗೆ ಹೋಗಿರಲಿಲ್ಲ. ನಮ್ಮ ಬಾವಯ್ಯ ಮಾತ್ರ ಎಲ್ಲವನ್ನೂ ಅರಿತಿದ್ದ. ಯಾಕೆಂದರೆ ಅವನ ಜೀನ್ಸ್ ನಲ್ಲಿ ಅಂತದ್ದಿದೆ. ಅವನ ಅಮ್ಮ ಈ ವಯಸ್ಸಿನಲ್ಲಿಯೂ ಊರಲ್ಲಿ ಜೀನ್ಸ್ ಹಾಕಿಕೊಂಡು ಓಡಾಡ್ತಾಳೆ ಎಂದರೆ ನೀವು ಊಹಿಸಿ. ಅಷ್ಟು ಫಾಸ್ಟ್ ಪಾರ್ವರ್ಡ್ ಬ್ರೀಡು ಅದು. ಅವನಿಗೆ ಹೋಲಿಸಿದರೆ ನಾವಿನ್ನೂ ಹಿಂದಿದ್ದೇವೆ ಅನಿಸುತ್ತದೆ.

ಬೊಗಳುವ ನಾಯಿ ಕಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ ಅಂತಾರಲ್ಲ? ನಮ್ಮ ಬಾವಯ್ಯ ಕಚ್ಚುವ ನಾಯಿ; ಬೊಗಳಿ ಹಾಳುಮಾಡಿಕೊಳ್ಳೋದಿಲ್ಲ. ಎಲ್ಲೆಲ್ಲು ನರಿ ಉಪಾಯ. ನಮ್ಮ ಬಾವಯ್ಯ ನಮಗಿಂತ ಹೆಚ್ಚು ಮಹಿಳೆಯರನ್ನು ಅನುಭವಿಸಿದ್ದಾನೆ.

ಕೆಲವು ತಲೆಯಿಲ್ಲದ ಭಕ್ತರು ಮಠದಲ್ಲಿ ಸಂಬಂಧಿಕರನ್ನು ಅಥವಾ ಮನೆಮಂದಿಯನ್ನು ಇರಿಸಿಕೊಳ್ಳಬಾರದು ಅಂತಾರೆ. ಆದರೆ ನಾವು ಒಟ್ಟಿಗೆ ಇದ್ದಾಗ ಏನೇನು ಮಾಡಿದ್ದೇವೆ ಎಂಬುದು ನಮ್ಮ ಕುಳ್ಳ ಬಾವಯ್ಯನಿಗೆ ಗೊತ್ತಿದೆ. ಒಮ್ಮೆ ಆತ ಕುಲಪತಿಯಾಗಿ ಇಪ್ಪತ್ತೈದು ಹೆಣ್ಣುಮಕ್ಕಳ ಕನ್ಯಾಪೊರೆಯನ್ನು ಅನಧಿಕೃತವಾಗಿ ಬಲಾತ್ಕಾರವಾಗಿ ಬಿಡಿಸಿದಾಗ, ಬಸಿರಾದ ಹುಡುಗಿಯ ಪಾಲಕರಾದ ’ಪಾನಿಪೂರಿಯವರ’ ದೂರು ದಾಖಲಾಯಿತು ನೋಡಿ. ನಾವಿಬ್ಬರೂ ಸೇರಿ ಮಾಸ್ಟರ್ ಪ್ಲಾನ್ ಮಾಡಿದೆವು. ತೀರ್ಮಾನ ನೀಡುವವನನ್ನು ಖರೀದಿಸಿಬ್ಬಿಟ್ಟರೆ ಎಲ್ಲವೂ ನಮಗೆ ಬೇಕಾದಂತಾಗುತ್ತದೆ ಎಂಬ ನಿರ್ಣಯಕ್ಕೆ ಬಂದು ಹಾಗೇ ಮಾಡಿದೆವು.

ನಮ್ಮ ಬಾವಯ್ಯ ಗೆದ್ದರೂ ಸಮಾಜ ಅವನನ್ನು ಸಂಶಯದಿಂದಲೇ ಕಳ್ಳಬೆಕ್ಕಿನಂತೆ ಕಂಡಿತು. ಕಣ್ಣಿಗೆ ಕಣ್ಣು ಕೊಟ್ಟು ಮಾತನಾಡದ ಅವನ ವರ್ತನೆಯಿಂದ ಹಲವರಿಗೆ ಅವನ ದುರ್ನಡತೆ ತಿಳಿದುಬಿಟ್ಟಿತು. “ನೀನು ಮಠದಿಂದ ದೂರ ಇರು” ಎಂದು ಹೇಳಿದಾಗ, ಆಗ ಅವ ಏನಂದ ಗೊತ್ತೇ? “ನನ್ನನ್ನು ಮಠದಿಂದ ಹೊರಹಾಕಿದರೆ ನಿನ್ನ ಸಿಡಿ ಬಿಡುಗಡೆ ಮಾಡ್ತೇನೆ” ಅಂದ. ಅವನಲ್ಲಿ ನಮ್ಮ ಭೋಗವರ್ಧನ ಕಾರ್ಯದ ಸಿಡಿ ಇದೆಯೆಂಬುದು ನಮಗೆ ಗೊತ್ತಿರಲಿಲ್ಲ. ಯಾವಾಗ ಅದೆಲ್ಲ ಅರ್ಥವಾಯ್ತೋ ಅಂದಿನಿಂದ ಅವನನ್ನು ಮತ್ತೆಂದೂ ಮಠದಿಂದ ಹೊರಕ್ಕೆ ಕಳಿಸುವ ಪ್ರಯತ್ನ ಮಾಡಲೇ ಇಲ್ಲ.

ನಮ್ಮ ಮೀಟಿಂಗು-ಭಕ್ಷೀಸು ಭಕ್ತರಲ್ಲಿ “ಒಗ್ಗಟ್ಟಿನಲ್ಲಿ ಬಲವಿದೆ” ಎನ್ನುತ್ತ ಬಂದೆವು. ಅವರೂ ನಂಬಿದರು. ಬಾವಯ್ಯ ಬಹಳ ಚಾಣಾಕ್ಷ, ಅವನು ಮಠದಲ್ಲಿರೋದರಿಂದ ನಮಗೆ ಹೆಚ್ಚಿನ ಭದ್ರತೆ ಬರುತ್ತದೆ. ಹೀಗಾಗಿ ಬಾವಯ್ಯನ ಮಾರ್ಗದರ್ಶನದಲ್ಲೇ ಎಲ್ಲರೂ ನಡೆದುಕೊಳ್ಳಿ ಎಂದೆವು. ನಾವು ಹೊರಗಡೆ ಏನನ್ನು ಹೇಳಬೇಕೆಂಬುದನ್ನು ಕಿಚನ್ ಕ್ಯಾಬಿನೆಟ್ಟಿನಲ್ಲಿ ಬಾವಯ್ಯ ಮೊದಲೇ ಹೇಳಿರುತ್ತಿದ್ದ. ಕನ್ಯಾಸಂಸ್ಕಾರದ ನೆಪದಲ್ಲಿ ಹರೆಯದ ಮತ್ತು ಹರೆಯಕ್ಕೆ ಕಾಲಿಡುತ್ತಿರುವ ಹುಡುಗಿಯರನ್ನು ಕರೆಸಿಕೊಳ್ಳುವ ಯೋಜನೆ ಹಮ್ಮಿಕೊಂಡಿದ್ದೂ ಬಾವಯ್ಯನೇ.

ಅಧಿಕಾರ, ಹಣ ಎರಡಿದ್ದರೆ ಏನು ತಾನೆ ಅಸಾಧ್ಯ? ಬಾವಯ್ಯ ಮತ್ತು ನಾವು ನಮ್ಮ ವಿವಿಧೋದ್ದೇಶ ಯೋಜನೆಗಳ ಮೂಲಕ ಹಣಮಾಡಿಕೊಂಡೆವು. ಹಣ ಸಂಗ್ರಹ ನಿಧಾನವಾದಾಗ ಕೆಲವರಿಗೆ ಹಣದ ರುಚಿ ತೋರಿಸಿ ಸಂಗ್ರಹಿಸಲು ಕಳಿಸಿದೆವು. ಕೋಟಿಗಟ್ಟಲೆ ಹಣ ಸಂಗ್ರಹವಾಗುತ್ತ ಬಂತು. ಹಣದ ರುಚಿ ನೋಡಿದವರೂ ಆಸ್ತಿಪಾಸ್ತಿ ಮಾಡಿಕೊಂಡರು. ನಮಗೆ ಸಾಕೆನಿಸಿದ ಮಹಿಳೆಯರನ್ನು ಅವರಿಗೆಲ್ಲ ಪ್ರಸಾದ ರೂಪದಲ್ಲಿ ಸಂಪರ್ಕ ಕಲ್ಪಿಸಿಕೊಟ್ಟೆವು. ಮಠವೆಂಬುದು ಮಹಾನಗರದ ಮಸಾಜ್ ಪಾರ್ಲರುಗಳಂತೆ ನಡೆಯಹತ್ತಿತು. ಹೊರಗೆ ಪೂಜೆ, ಭಜನೆ. ಒಳಗೆ ಅವರವರಿಗೆ ಬೇಕಾದ್ದು ಸಿಗುತ್ತಿತ್ತು.

ನೀವೆ ನೋಡಿ, ಇಂದಿನ ಕಾಲಕ್ಕೆ ಕೆಲವು ಶಿಷ್ಯರಿಗೆ ಗುಟ್ಕಾ ಬೇಕಾಗ್ತದೆ. ಗುಟ್ಕಾ ಸಿಗದಿದ್ದರೆ ಅವರು ನಮ್ಮ ಸೇವೆಯಲ್ಲಿ ಇರೋದಿಲ್ಲ. ಹೀಗಾಗಿ ಗುಟ್ಕಾ ಸೇವನೆಗೆ ನಮ್ಮ ಅನುಮತಿ ಇತ್ತು. ಕೆಲವರು ಅಫೀಮು ಮಸ್ತ್ ಮಜ ಕೊಡುತ್ತದೆ ಅಂದ್ರು. ಅದನ್ನು ತರಿಸಿ ನಾವೂ ಸೇವಿಸಿ ನೋಡಿದೆವು. ನಮ್ಮ ಮಹಿಳಾ ಭಕ್ತರಿಗೆ ಅದನ್ನು ಪ್ರಸಾದ ರೂಪದಲ್ಲಿ ಕೊಡುವ ನಿರ್ಧಾರಕ್ಕೆ ಬಂದೆವು. ಕೊಕೈನ್ ಹಾಕಿದರೆ ಎಲ್ಲರನ್ನೂ ನಿಯಂತ್ರಿಸಬಹುದು ಎಂದ ನಮ್ಮ ಬಾವಯ್ಯ. ಮೀಸೆರಹಿತ ಗಡ್ಡದ ಒಬ್ಬನನ್ನು ಹಿಡಿದೆವು. ಅವ ವಿದೇಶೀ ಮೂಲದಿಂದ ಗುಟ್ಟಾಗಿ ದೀರ್ಘ ಕಾಲದವರೆಗೆ ಹಲವು ಮಾದಕ ಪದಾರ್ಥಗಳನ್ನು ಒದಗಿಸುತ್ತಿದ್ದ.

ಪ್ರಸಾದ ಕಲೆಸುವಾಗ ಅದನ್ನಷ್ಟು ಹಾಕಿದರೆ ಅದು ಕೆಲಸ ಮಾಡತೊಡಗಿತು. ಏಕಾಂತದಲ್ಲಿ ನಮ್ಮ ತೆಕ್ಕೆಗೆ ಬಂದ ಮಹಿಳೆಯರು ಹುಡುಗಿಯರು ಮರುಮಾತಿಲ್ಲದೆ ನಮಗೆ ಬೇಕಾದ್ದನ್ನು ಕೊಡತೊಡಗಿದರು. ನಮ್ಮ ಹಾರಾಟ ಮುಗಿದರೂ ಅವರ ಮಂಪರು ಇಳಿಯುತ್ತಿರಲಿಲ್ಲ. ಕೆಲವೊಮ್ಮೆ ಗಂಟೆಗಟ್ಟಲೆ ಇರಿಸಿಕೊಂಡು, ಇನ್ನೆಂದೆರಡು ಸಲ ಹಾರಿ, ನಂತರ ಮಂಪರು ಇಳಿದಮೇಲೆ ಹೊರಗೆ ಕಳಿಸಿದ್ದಿದೆ.

ಅಲ್ವೋ ರಾಮಚಂದ್ರ ಇದೆಲ್ಲ ನಾವಷ್ಟೆ ಮಾಡಿದ್ದಲ್ಲ. ಹಿಂದಿನವರೂ ಮಾಡಿದ್ರು ಅಂತೇವೆ ನಾವು. ಮಠದ ಗೌರವಕ್ಕೆ ಧಕ್ಕೆ ಬರದ ಹಾಗೆ ನೀವು ನೋಡ್ಕಳ್ಬೇಕು. ಈಗಲೂ ಅಷ್ಟೆ. ನಮಗೆ ಬೇಕಾದ್ದನ್ನೆಲ್ಲ ನಾವು ಖರೀದಿಸುತ್ತಲೆ ಇದ್ದೇವೆ. ಚಾನೆಲ್ಗಳು ಮತ್ತು ಕೆಲವು ಪತ್ರಿಕೆಗಳೂ ಸಹ ಹಣವನ್ನು ಪಡೆದು ನಮ್ಮನ್ನು ಹೊಗಳುತ್ತವೆ. ಒಂದು ಪತ್ರಿಕೆಯಂತೂ ನಮ್ಮ ಮಠದ ಅಧಿಕೃತ ವಕ್ತಾರ ಪತ್ರಿಕೆಯಂತೆ ಇಡೀ ಪುರವಣಿಯನ್ನೆ ನಮಗೆ ಮೀಸಲಾಗಿ ಕೊಡುತ್ತದೆ.

ಅಲ್ಲಿ ನಮ್ಮ ಕೋಣೆಮಾಣಿ ಇದಾನಲ್ಲ. ಅವನ ತಲೆಯಲ್ಲಿ ಕೊಳೆತ ಆಲೂಗಡ್ಡೆ ಇರೋದು ನಮಗೆ ಗೊತ್ತೇ ಇದೆ. ಹೀಗಾಗಿ ಅವನಿಗೊಂದಷ್ಟು ತಳ್ಳಿದರೆ ಯಜಮಾನರನ್ನು ಹಿಡಿದು ಮಾತಾಡ್ತಾನೆ; ನಮಗೆ ಬೇಕಾದ ದಿನ ಬೇಕಾದ ರೀತಿಯ ಲೇಖನಗಳು ಬರ್ತವೆ. ಇತ್ಲಕಡೆಗೆ ನಮ್ಮ ಇಮ್ಮಡಿ ವಿಶ್ವೇಶ್ವರಯ್ಯ ಇದಾನಲ್ಲ. ಅವನ ಪತ್ರಿಕೆಯಲ್ಲೂ ಹಾಗೆ. ಇನ್ನು ರೇಡಿಯೋ ಚಾನೆಲ್ಗಳನ್ನೂ ಬುಕ್ ಮಾಡಿಕೊಂಡಿದ್ದೇವೆ. ಮಠದ ಶಾಖೆಯನ್ನು ದೇವಸ್ಥಾನ ಅಂತೆಲ್ಲ ಹೇಳಿಸಿ ಅದಕ್ಕಷ್ಟು ಕತೆ ಕಟ್ಟಿ ಪ್ರಚಾರ ಕೊಡಿಸುತ್ತಿದ್ದೇವೆ. ಹರಕೆ ಮಾಡಿಕೊಂಡ್ರೆ ಇಷ್ಟಾರ್ಥ ಸಿದ್ಧಿಯಾಗುತ್ತೆ ಅಂತ ಹೇಳಿಸುತ್ತೇವೆ; ಇದರಿಂದ ನಮಗೆ ಭಕ್ತರನ್ನು ಮತ್ತು ಹಣವನ್ನೂ ಸಂಹ್ರಹಿಸಲು ಸಾಧ್ಯವಾಗ್ತದೆ ಅಂತ ಬಾವಯ್ಯ ಹೇಳಿದ್ದಾನೆ.

ಕಾಮ ಮನುಷ್ಯನ ಸಹಜ ಕೆಲಸ. ಅವ ಸನ್ಯಾಸಿಯೇ ಆಗಿರಲಿ ಸಂಸಾರಿಯೇ ಆಗಿರಲಿ. ಆಹಾರ, ನಿದ್ರೆಯ ಜೊತೆಗೆ ಮೈಥುನವೂ ಬೇಕೇ ಬೇಕೆಂಬುದು ನಮ್ಮ ಹೇಳಿಕೆ. ನಿಮ್ಮ ಯತಿಧರ್ಮ ಗಿರ್ಮ ಎಲ್ಲ ಕಟ್ಕೊಂಡು ನಮ್ಗೇನಾಗ್ಬೇಕು? ನಮಗೆ ಭೋಗಿಸುವುದಕ್ಕೆ ಒಂದಷ್ಟು ಮಹಿಳೆಯರು ಬರ್ತಾನೇ ಇರ್ಬೇಕು. ನಮ್ಮನ್ನು ಅವರೆಲ್ಲ ಸೇರ್ಕಂಡು ಚೆನ್ನಾಗಿಡಬೇಕು. ನಮ್ಮ ಏಕಾಂತ ಸೇವೆ ಮಾಡಿದೋರನ್ನು ನಾವು ಚೆನ್ನಾಗಿಡಬೇಕು. ಅಷ್ಟೇ. ಇನ್ನೇನಿದೆ ಈ ಲೋಕದಲ್ಲಿ? ಎಷ್ಟೋ ಮಹಿಳೆಯರಿಗೆ ಅವರ ಮಕ್ಕಳು ನಮ್ಮಿಂದಲೇ ಹುಟ್ಟಿದ್ದು ಅನ್ನೋದು ಗೊತ್ತು; ಹೊರಜಗತ್ತಿನಲ್ಲಿ ಅವರ ಗಂಡಂದಿರು ತಮಗೆ ಹುಟ್ಟಿದ ಮಕ್ಕಳಲ್ಲ ಅನ್ನೋಹಾಗಿಲ್ಲ! ಹೀಗಾಗಿ ಹಲವು ಗ್ರಾಮಗಳಲ್ಲಿ ನಮ್ಮ ನಾಗ ಸಂತತಿಗಳು ಬೆಳೆಯುತ್ತಿವೆ!

“ಈ ಲೋಕದಲ್ಲಿ ನಾವು ಜಗದ್ಗುರುವಾದ ಮೇಲೆ ಬಹಳ ’ಪ್ರಸಿದ್ಧಿ’ಗೆ ಬಂದಿದ್ದೇವೆ. ನಮ್ಮ ಬೆಳವಣಿಗೆಗಳನ್ನು ಕಂಡರಾಗದ ಮಠಗಳವರು ನಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ” ಎಂದೆಲ್ಲ ಬರೆಸಿದ್ದೇವೆ ನಾವು. ನಾವು ಮನಸ್ಸು ಮಾಡಿದರೆ ನಾಲ್ಕು ಮಂತ್ರಾಕ್ಷತೆ ಒಗೆದೇ ಅವರ ಆಟಗಳನ್ನೆಲ್ಲ ನಿಲ್ಲಿಸಬಹುದು. ಯಾಕೆಂದರೆ ನಾವು ಅಷ್ಟುದೊಡ್ಡ ಪವಾಡ ಪುರುಷರು. ಪತ್ರಿಕೆಗಳಲ್ಲಿ ವರದಿ ಯಾರದೋ ಹೆಸರಿನಲ್ಲಿ ಪ್ರಕಟವಾದರೂ ಬರೆಯುವುದು ಮಾತ್ರ ನಮ್ಮ ಬಾವಯ್ಯನೇ.

ಕಾಂಚಿಮಠದಲ್ಲಿ ಮೊನ್ನೆ ಮೊನ್ನೆ ನಮ್ಮ ಕೇಸಿನ ಸಲುವಾಗಿ ದೊಡ್ಡ ಹವನವನ್ನು ನಡೆಸಿದ್ದೇವೆ. ಹಿಂದೆ ಕೇರಳದ ಮಾಂತ್ರಿಕರು, ಅಷ್ಟಮಂಗಲದವರು ಬಂದು, ಕೋಗಾರು ಘಾಟಿಯ ಕಾಡಿನ ನಡುಚೆ ಮಾರಣ, ಸ್ತಂಬನ, ಶತ್ರುಪರಾಜಯ, ರಕ್ತಾಕ್ಷಿ, ಬಗಳಾಮುಖಿ, ಪ್ರತ್ಯಂಗಿರಾ ಮೊದಲಾದ ಹಲವು ಕೃತ್ರಿಮಗಳನ್ನು ನಮ್ಮ ಅಪ್ಪಯ್ಯನ ಯಜಮಾನತ್ವದಲ್ಲಿ ನಡೆಸಿದ್ದಾರೆ.

ಮೊನ್ನೆಯ ವರೆಗೂ ನಾವು ಕೆಳಗೆ ಬಿದ್ದ ಮಂಗನಂತೆ ಸುಮ್ಮನಿದ್ದೆವು; ಆದರೆ ಒಳಗಿನಿಂದ ನಮ್ಮ ಬಾವಯ್ಯನನ್ನು ಇಟ್ಟುಕೊಂಡು ಕಿಚನ್ ಕ್ಯಾಬಿನೆಟ್ಟಿನ ಮೊಲಕ ಹೊರಜಗತ್ತನ್ನು ನಿಯಂತ್ರಿಸುತ್ತಿದ್ದೆವು. ಈಗ ನಮ್ಮ ದೋಸ್ತು ನೂಕನಕೆರೆ ಶುಂಠ ಮತ್ತೆ ಪಕ್ಷದ ನಾಯಕರಾಗಿ ಬಂದಿದ್ದಾರೆ. ಅವರು ಬಂದಿದ್ದು ನಮ್ಮ ಆಸೆಗೆ ಮತ್ತೆ ಗರಿಮೂಡಿದೆ. ಹಸುವಿನಕಿವಿಯೂರಿನಲ್ಲಿ ಕಿಲಾಡಿ ಮಾಡಲು ಅನುಮತಿ ಕೊಟ್ಟಿದ್ದೇ ಅವರು. ಅವರಿಗೆ ಬೇಕಾದ್ದನ್ನು ನಾವು ಕೊಡುತ್ತೇವೆಂದೆವೆವು; ಹೀಗಾಗಿ ನಮಗೆ ಬೇಕಾದ್ದನ್ನು ಅವರು ಕೊಟ್ಟರು.

ಅಲ್ವೊ ರಾಮಚಂದ್ರ, ಅಲ್ಲಿ ಕುಡಿಯುವ ನೀರು ಮದಗದ ಹಾಗೆ ಹರೀತಾ ಇದ್ರೂ, “ಬೇಡ” ಎನ್ನುವವರಿಗೂ ನಾವು ಒತ್ತಾಯ ಪೂರ್ವಕವಾಗಿ ಕುಡಿಯುವ ನೀರು ಕೊಡ್ತೇವೆ. ದೇವಸ್ಥಾನದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿದ್ದೇವೆ. ಅಲ್ಲೆಲ್ಲ ದೊಡ್ಡದೊಡ ಹುಂಡಿಗಳನ್ನು ಇಟ್ಟಿದ್ದೇವೆ ಬಿಡು. ಯಾಕೆಂದರೆ ಇವತ್ತು ಯಾರೂ ಕಾಣಿಕೆ ಹಾಕದೆ ಊಟ ಮಾಡೋದಿಲ್ಲ. ಆದರೂ ಕಾಣಿಕೆ, ದೇಣಿಗೆ ಸಾಕಷ್ಟಿಲ್ಲ ಅಂತ ಸುಳ್ಳು ಲೆಕ್ಕ ಕೊಡ್ತೇವೆ ನಾವು. ದೇವಸ್ಥಾನವನ್ನು ಹೊಡೆದುಕೊಂಡಿದ್ದೆ ಹಣ ಮಾಡಲಿಕ್ಕೆ ಅನ್ನೋದು ಬಹಳ ಜನರಿಗೆ ಗೊತ್ತಿಲ್ಲ!

“ಬಯಲುಸೀಮೆಯ ಕಡೆಗೆ ಬರಗಾಲ, ಹಸುಗಳಿಗೆ ಆಹಾರವಿಲ್ಲ” ಎಂಬ ಸುದ್ದಿ ಬಂದರೆ ಮಾಧ್ಯಮಗಳವರಿಗೆ ಹೇಳಿ ಎರಡು ಮೂರು ಹುಲ್ಲುತುಂಬಿದ ಲಾರಿಗಳು ಓಡುತ್ತಿರುವುದನ್ನು ತೋರಿಸಿ “ಹಾವಾಡಿಗ ಸಂಸ್ಥಾನ ಬಹಳ ಸ್ಪಂದಿಸಿದೆ” ಎಂದು ಹೇಳಿಸುತ್ತೇವೆ. ಎರಡು ಮೂರು ಲಾರಿ ಒಣಹುಲ್ಲಿಗೆ ತಗಲುವ ಖರ್ಚೆಷ್ಟು? ನಮ್ಮ ಕಚ್ಚೆಕೇಸಿನ ಲೆಕ್ಕದ ಮುಂದೆ ಅದೆಲ್ಲ ಯಾವ ಲೆಕ್ಕ?

ಬೇನಾಮಿ ಹೆಸರಿನಲ್ಲಿ ನೂಕನಕೆರೆ ಶುಂಠನ ಮಗ ಕೊಟ್ಟ ಹಣದಲ್ಲಿ ಎಲ್ಲೋ ಒಂದೆರಡು ಅಗ್ಗದ ಮನೆಗಳನ್ನು ಕಟ್ಟಿಸಿಕೊಟ್ಟು, ಗುಡ್ಡದ ಮೇಲಿನ ಗೋಮಾಳದಲ್ಲಿ ಮೇಯುತ್ತಿದ್ದ ಯಾರದೋ ದನವನ್ನು ನಮ್ಮ ದನವೆಂದು ದಾನ ಮಾಡಿದಂತೆ ಮಾಡಿದ್ದೇವೆ; ಅದಕ್ಕೆ ’ಹಾವಾಡಿಗ ಮಹಾಸಂಸ್ಥಾನದ ಕೊಡುಗೆ’ ಎಂದು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿದ್ದೇವೆ.

ಸಾಗರದ ಹತ್ತಿರ ಹಳ್ಳಿಯೊಂದರಲ್ಲಿ ದೇವಸ್ಥಾನ ಕಟ್ಟಿಸಿಕೊಂಡು ನಮ್ಮನ್ನು ಕರೆದು ಭಿಕ್ಷಾವಂದನೆ, ಪಾದ ಪೂಜೆ ನಡೆಸಿ, ಕತೆ ಮಾಡಿಸಿದ್ದ ಉತ್ತಮೋತ್ತಮನ ಮಗ ಮೊದಲು ಬೈಕ್ ಅಪಘಾತದಲ್ಲಿ ಮೃತನಾಗಿದ್ದ. ತೀರಾ ಇತ್ತೀಚೆಗೆ ಉತ್ತಮೋತ್ತಮನೂ ಮತ್ತೆ ಬೈಕ್ ಅಪಘಾತದಲ್ಲೆ ಮೃತಪಟ್ಟ. ಹೀಗೆ ಅಪ್ಪ-ಮಗ ಸಾವನ್ನಪ್ಪಿದ್ದು ನಮ್ಮ ಸೇವೆ ಮಾಡಿ ನಮ್ಮಿಂದ ಮಂತ್ರಾಕ್ಷತೆ ಪಡೆದ ಮೇಲೆಯೇ. ಈ ಎರಡೂ ಪವಾಡಗಳನ್ನು ರಾಂಗಾನುಗ್ರಹ ಭಾಗ-2ರಲ್ಲಿ ಅಚ್ಚುಹಾಕಿಸಬೇಕು.

ಷಡ್ಯಂತ್ರ ಹೇಗಿದೆಯೆಂದರೆ ನಮ್ಮಲ್ಲಿ ಬಹಳ ಕಾಲ ತನುಮನಧನ ಸಹಾಯ ಮಾಡಿ ಸೇವೆ ಸಲ್ಲಿಸಿದ್ದ ಹಲವರನ್ನು ನಮ್ಮ ವಿರೋಧಿಗಳು ತಮ್ಮ ಪಕ್ಷಕ್ಕೆ ಸೆಳೆದುಕೊಂಡಿದ್ದಾರೆ. ಈಗ ನಮಗೆ ಅವರನ್ನೆಲ್ಲ ಕಂಡರೆ ಕೆಂಡದಂತ ಕೋಪ. ಇತ್ತೀಚೆಗೆ ಸಭೆಯ ಕಟ್ಟಡದ ಉದ್ಘಾಟನೆಗೆ ನಮ್ಮನ್ನು ಸರಿಯಾಗಿ ಕರೆಯಲಿಲ್ಲ; ಭಿಕ್ಷಾವಂದನೆ, ಪಾದಪೂಜೆ, ಮೊಕ್ಕಾಂ, ಏಕಾಂತ ಎಲ್ಲದಕ್ಕೂ ಅನುಕೂಲ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಸದ್ಗುಣಿಯನ್ನು ದುರ್ಗುಣಿ ಎಂದು ಕೂಗಿ. ಕಬ್ಬರಿದು, ನಮ್ಮ ಹಳದೀ ಸೇವಕರನ್ನು ಅಟ್ಟಿ ಅವರ ಮನೆಗೆ ಘೇರಾವ್ ಹಾಕಿಸಿದ್ದೆವು. ನಂತರ ಅವ ಹೆದರಿಕೊಂಡು ಪೋಲೀಸರ ರಕ್ಷಣೆ ಪಡೆದುಕೊಂಡ. ಪೋಲೀಸರನ್ನು ಕರೆಸದಿದ್ದರೆ ದುರ್ಗುಣಿಗೆ ಕೈಕಾಲು ಮುರಿವಷ್ಟು ಏಟುಗಳು ಬೀಳುತ್ತಿದ್ದವು.

ಸಭೆಯ ವಿಷಯ ಗಮನದಲ್ಲಿಟ್ಟುಕೊಂಡು ಮುಂದೆ ನಮ್ಮ ಕಳ್ಳರ ಗುಂಪನ್ನೇ ಚುನಾವಣೆಯಲ್ಲಿ ಗೆಲ್ಲಿಸಿದೆವು ನಾವು. ಛೇ ಅದ್ಕೆಲ್ಲ ಎಷ್ಟ್ ಖರ್ಚಾಗಲೂ ಇಲ್ಲ. ಬರೇ ಐವತ್ತು ಬಸ್ಸು, ತಲೆಗೆ ಸಾವಿರ ಭಕ್ಷೀಸು, ಬೇಕಾದವರಿಗೆ ಬಾಟಲಿ ಇತ್ಯಾದಿ ಷೋಡಶೋಪಚಾರ. ನಮ್ಮ ಬಳಗದಲ್ಲಿ ಷೋಡಶೋಪಚಾರವೆಂದರೆ ಷೋಡಶಿಯರಿಂದ ’ಉಪಚಾರ’ಪಡೆದುಕೊಳ್ಳುವ ತರಗತಿಯವರೂ ಬಹಳ ಜನ ಇದ್ದಾರೆ. ಹೀಗಾಗಿ ಯಾರ್ಯಾರಿಗೆ ಯಾವ ಯಾವ ವಿಧದ ವ್ಯವಸ್ಥೆ ಬೇಕೋ ಅದೆಲ್ಲ.. ಅರ್ಥವಾಯ್ತಲ್ಲ ತುಮರಿ ರಾಮಚಂದ್ರ?

ಕಚ್ಚೆ ಕೇಸಿನಲ್ಲಿ ನಮ್ಮ ಗೆಲುವಿನಿಂದ ನಮ್ಮ ಹಳದೀ ಭಕ್ತರೆಲ್ಲ ಬಹಳ ಸಂತಸಗೊಂಡು ಸಂಭ್ರಮಾಚರಣೆ ನಡೆಸಿದಾಗ ಅದರ ವೆಚ್ಚ ಬರೀ ಹದಿನೈದಿಪ್ಪತ್ತು ಲಕ್ಷ ಆಗಿದೆ. ಕಚ್ಚೆ ಕೇಸಿಗೆ ಖರ್ಚು ಮಾಡಿದ ಕೋಟಿಗಳ ಮುಂದೆ ಅದು ಯಾವ ಮೂಲೆಗೆ ಅಲ್ಲವೇ? ಸುದ್ದಿಗಾರರು, ಅಡ್ಡಗೇಟುಗಳು, ನಿರ್ಣಾಯಕರು, ಮಧ್ಯವರ್ತಿಗಳು, ಜೈಕಾರದ ಬಳಗ ಎಲ್ಲಕ್ಕು ಸೇರಿ ಸುಮಾರು ಇನ್ನೂರು ಕೋಟಿ ಖರ್ಚಾಗದ್ಯ. ನಮ್ಮ ಬಾವಯ್ಯ ಸದ್ಯದಲ್ಲೆ ಯೋಜನೆ ಹಾಕ್ತಾನೆ. ಮತ್ತೆ ಹಣ ಸಂಗ್ರಹಕ್ಕೆ ಹಳದೀ ಭಕ್ತರು ಹೋಗ್ತಾರೆ.

ಅಂದಹಾಗೆ ರಾಮನವಮಿ ಸಲುವಾಗಿ ವೀಡಿಯೋ ಲಿಂಕು ಕೊಡ್ತೇನೆ ತುಮರಿ ರಾಮಚಂದ್ರ, ನೀನಂತೂ ನೋಡಲೇ ಬೇಕು. ನಮ್ಮ ಬಕರಾ ಭಕ್ತರಿಗೆಲ್ಲ ನೋಡಲು ಹೇಳು. ಇದೂ ಒಂದು ಸೇವೆಯೇ. ಇನ್ನು ನಾವು ಪಂಜರದಿಂದ ಬಿಟ್ಟ ಪಕ್ಷಿಯಂತೆ ಸ್ವತಂತ್ರರು. ಎಲ್ಲಿಗೆ ಬೇಕಾದರೂ ಹೋಗಬಹುದು. ಎಷ್ಟು ಏಕಾಂತ ಬೇಕಾದರೂ ಮಾಡಬಹುದು. ನಮಗೆ ಭಕ್ತರು ಭಿಕ್ಷಾ ಸೇವೆ ನಡೆಸೋದಕ್ಕಿಂತ ಏಕಾಂತ ಸೇವೆಗೆ ಅನುಕೂಲ ಒದಗಿಸಿಕೊಡುವುದು ಅವರ ಇಷ್ಟಾರ್ಥ ಸಿದ್ಧಿಗೆ ಕಾರಣವಾಗ್ತದೆ ಅಂತ ತಿಳಿಸಿಬಿಡು.

ಬರೇ ಕಾಮ
ಬರೇ ಕಾಮ ”

ಪ್ರವಚನ ಮುಗಿಯುತ್ತಿದ್ದಂತೆ ಗಂಡು ಕತ್ತೆಗಳು ಗರ್ದಭಗಾನ ನಡೆಸಿದವು. ಕೆನೆಯುವ ಕುದುರೆಗಳು ನಾ ಮೇಲು ತಾ ಮೇಲು ಎಂದು ಗಂಟಲು ಹರಿದುವಂತೆ ಕೆನೆದವು.
“ಹಾವಾಡಿಗ ಮಹಾಸಂಸ್ಥಾನ ಜಗದ್ಗುರು ಶೋಭರಾಜಾಚಾರ್ಯ ಚಂದ್ರನಾಡ್ಯುಜ್ಜೇಶ್ವರ ತೊನೆಯಪ್ಪ ಕಚ್ಚೆಶೀ ಮಹಾರಾಜ್ ಕೀ ಜೇಯ್

…………… ಜೇಯ್

…………..ಜೇಯ್

Thumari Ramachandra

source: https://www.facebook.com/groups/1499395003680065/permalink/1748850632067833/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s