ಚಂದ್ರನಾಡ್ಯುಜ್ಜೇಶ್ವರ ಭೋಗವರ್ಧನ ಜಗದ್ಗುರು ಕಚ್ಚೆಶೀಗಳಿಗೆ ಜೇ ಯ್ ಜೇ ಯ್

ಚಂದ್ರನಾಡ್ಯುಜ್ಜೇಶ್ವರ ಭೋಗವರ್ಧನ ಜಗದ್ಗುರು ಕಚ್ಚೆಶೀಗಳಿಗೆ ಜೇ ಯ್ ಜೇ ಯ್

ಇಪ್ಪತ್ತು ವರ್ಷಗಳಿಂದ ಎಪ್ಪತ್ತು ವರ್ಷ ವಯಸ್ಸಿನ ಐದು ದಶಕಗಳಲ್ಲಿ ಆ ಮೂತ್ರಿ ಚಂದ್ರನಾಡಿ ಉಜ್ಜಿದ್ದು ಎಷ್ಟು ಮಹಿಳೆಯರಿಗೆ ಎಂಬುದು ಲೆಕ್ಕವಿಲ್ಲ. ಒಬ್ಬ ಪತಿವ್ರತೆಯಂತೂ ಆ ಕಾಲಕ್ಕೆ ಐದಾರು ಮಕ್ಕಳ ತಾಯಿಯಾಗಿದ್ದಳು; ಬೆನ್ನಿಗೆ ಬಿದ್ದು, ಗಂಡನ ಕಣ್ತಪ್ಪಿಸಿ ಅವಳನ್ನು ಭೋಗಿಸಿಬಿಟ್ಟ! ಶೀಲಹರಣವಾದದ್ದು ಗಂಡನಿಗೆ ಗೊತ್ತಾದ ಗಳಿಗೆಯಲ್ಲೆ ಆಳದ ಬಾವಿಗೆ ಧುಮುಕಿ ಆಕೆ ಸತ್ತೇ ಹೋದಳು.

ಅಂದು ಹಳ್ಳಿಗಳಲ್ಲಿ ಮಾಧ್ಯಮಗಳಿರಲಿಲ್ಲ. ಚಿಕ್ಕಪುಟ್ಟ ಪಟ್ಟಣಗಳಿಗೆ ಪೇಪರು ಬಂದರೆ ಅದೇ ದೊಡ್ಡದು. ಊರಿಗೆಲ್ಲ ಈ ಕತೆಯ ಸುದ್ದಿ ಹಬ್ಬಿದರೂ ಯಾರೊಬ್ಬರಿಗೂ ಆತನ ರಟ್ಟೆ ಹಿಡಿದು ಕೇಳುವ ಧೈರ್ಯ ಇರಲಿಲ್ಲ. ಬಹುಶಃ ಅವಳ ಗಂಡನೂ ಸಹ ಅಷ್ಟು ಧೈರ್ಯ ಮಾಡಲಿಲ್ಲ. ಊರಲ್ಲಿ ಐನಾತಿ ಕುಳವೆಂದು ಹೆಸರು ಪಡೆದಿದ್ದ ಅವನಲ್ಲಿ ಹಣವಿದೆಯೆಂಬುದು ಎಲ್ಲರಿಗೂ ಗೊತ್ತಿತ್ತು. ಅಲ್ಲದೆ ಆತ ಚೆನ್ನಾಗಿ ಮಾತುಬಲ್ಲವ; ಮಾತಿನಿಂದ ಹಸಿಸುಳ್ಳನ್ನೂ ಅಪ್ಪಟಸತ್ಯವೆಂದು ತೋರಿಸಬಲ್ಲ ಜಾದೂಗಾರ.

ಕೆಲವರು ಹಾಗೇ ಇರ್ತಾರೆ; ಜನರಿಗೆ ಅವರು ಹೇಳಿದ್ದೇ ಪರಮ ಸತ್ಯ. ಅವರ ಮಾತಿನೆದುರು ಸತ್ಯ ನೇಣು ಹಾಕಿಕೊಳ್ಳುತ್ತದೆ. ಬಿಳಿಯ ಗೆರೆಗಳನ್ನು ಬರೆದರೂ ಬಣ್ಣದ ಗೆರೆಗಳೆಂದು ಎಲ್ಲರನ್ನೂ ರೈಲು ಹತ್ತಿಸುತ್ತಿದ್ದ ಪತ್ರಕರ್ತನೊಬ್ಬನ ಪರಿಚಯ ನಿಮಗಿರಬಹುದು. ಅಸ್ಖಲಿತ ವಾಗ್ಝರಿಯನ್ನು ಹರಿಸುವ ಹಲವರಿಗೆ ಕೆಳಗಡೆಗೆ ನಿರಂತರ ಸ್ಖಲನವಾಗುತ್ತಿರುತ್ತದೆ! ಅವರಲ್ಲಿ ಬಹುತೇಕ ಜನ ಕಚ್ಚೆಹರುಕರೇ.(ಕೆಲವು ಅಪವಾದಗಳಿರಬಹುದು)

ಮಾತಿನ ಮೋಡಿಗಾರ ಹಣ ತೆತ್ತು ತಮ್ಮಮೇಲೆ ತಿರುಗಿ ಬೀಳಬಹುದೆಂಬ ಕಾರಣದಿಂದ ಆ ಘಟನೆಯಲ್ಲಿ ದೂರು ದಾಖಲಾಗಲೇ ಇಲ್ಲ. ಪಾಪದ ಪತಿವ್ರತೆ ಅರ್ಧಾಯುಷ್ಯದಲ್ಲೇ ಸತ್ತು ಅದೆಲ್ಲಿಗೋ ಹೋದಳಷ್ಟೆ. ಈ ಕಚ್ಚೆಹರುಕ ಮೂತ್ರಿಗೂ ಹೋರಿಶೀಗಳ ಅಜ್ಜನಿಗೂ ಒಂದು ವಿಷಯದಲ್ಲಿ ಹೋಲಿಕೆಯಿದೆ; ಅದೇ ಕಚ್ಚೆಹರುಕುತನದ್ದು!

ಹೊರಗಿನಿಂದ ಮೂತ್ರಿ ಮಹಾನ್ ದೈವಭಕ್ತ. ಭಗವದ್ಗೀತೆ ಹೇಳುತ್ತಾನೆ. ದೇವಸ್ಥಾನ, ಊರುಮನೆಗಳಲ್ಲಿ ಏನಾದರೂ ವಿಶೇಷ ಕಾರ್ಯಕ್ರಮಗಳಿದ್ದರೆ ಆ ಕಾಲಕ್ಕೆ ಅದಕ್ಕೆ ಅವನೇ ಮುಖ್ಯಸ್ಥ. ಹಳ್ಳಿಯ ಪಂಚಾಯತಿಗೂ ಅವನೇ ಅಧ್ಯಕ್ಷ. ಸೂಜಿಭಟ್ಟ ವಿದ್ಯಾರ್ಥಿಯಾಗಿ ಕಲಿತು ಅದೇ ಸ್ಕೂಲಿನ ಪಾಂಶುಪಾಲಗಿರಿಗೆ ವಕ್ಕರಿಸಿಕೊಳ್ಳುವವರೆಗೂ, ಅದೇ ಮೂತ್ರಿಯೇ ಸ್ಕೂಲಿನ ಸಮಿತಿಯ ಅಧ್ಯಕ್ಷನೂ ಆಗಿದ್ದ. ಎಲ್ಲೆಲ್ಲೂ ಅವನದ್ದೇ ಹೆಸರು. ಸಾರ್ವಜನಿಕರಿಗೆ ಅವನ ಹೊರಮುಖವೇ ಬೇರೆ; ಸಮಯ ಸಾಧಿಸಿ ಆತ ಕಚ್ಚೆಬಿಚ್ಚುವ ಕತೆಗಳ ಮುಖವೇ ಬೇರೆ.

ಬಹಳ ಜನರಿಗೆ ಮೊದಲೆಲ್ಲ ಅದು ಗೊತ್ತೇ ಇರಲಿಲ್ಲ. ಅನೇಕಜನ ಅದನ್ನು ನಂಬುತ್ತಲೂ ಇರಲಿಲ್ಲ. ಆದರೆ ಹಲವು ’ದೇವಿ’ಯರಿಗೆ ಅವನ ಕತೆ ಗೊತ್ತು; ಪ್ರತಿಯೊಬ್ಬರಲ್ಲೂ ಅವ ಹೇಳಿದ್ದು “ನಿನ್ನನೊಬ್ಬಳನ್ನೆ ಅತಿಯಾಗಿ ಪ್ರೀತಿಸುತ್ತೇನೆ”: ಹಲವು ದೇವಿಯರು ಅವನಿಂದ ಬಂಗಾರದ ಒಡವೆಗಳನ್ನು ಮಾಡಿಸಿಕೊಂಡರು, ಆ ಕಾಲಕ್ಕೆ ಆರ್ಥಿಕ ಬಡತನದಲ್ಲಿದ್ದ ನಮ್ಮವರ ಮನೆಗಳಲ್ಲೆ ಅಪರೂಪವೆನಿಸಿದ್ದ ಗೋಡೆಗಡಿಯಾರ ಹಾಕಿಸಿಕೊಂಡರು, ಮರದ ಮಂಚ, ಅಲ್ಮೆರಾಗಳು ಅಲ್ಲಲ್ಲಿ ಕಂಡವು. ಇನ್ನೇನೇನು ಕೊಟ್ಟನೋ ಕೊಟ್ಟವನಿಗೂ ಪಡೆದವರಿಗೂ ಮಾತ್ರ ಗೊತ್ತು.

ಮಹಾಜುಗ್ಗನಾಗಿದ್ದ ಆತ ಕಚ್ಚೆ ಸಖಿಯರಿಗೆ ಮಾತ್ರ ಕೆಲವೊಮ್ಮೆ ಡಿಮಾಂಡ್ ಮಾಡಿದ್ದನ್ನು ಕೊಡಲೇಬೇಕಾಗಿ ಬರುತ್ತಿತ್ತು; ಇಲ್ಲದಿದ್ದರೆ ಹೊತ್ತಲ್ಲದ ಹೊತ್ತಲ್ಲಿ ಅವನಿಗೆ ನೆನಪಾದಾಗಲೆಲ್ಲ ಹಾರಾಟಕ್ಕೆ ಅನುಕೂಲ ಕಲ್ಪಿಸಿಕೊಟ್ಟು ಸಹಕರಿಸಬೇಕಲ್ಲ? ಅಲ್ಲಾ ಸ್ವಾಮೀ ಮೊಬೈಲ್ ಇಲ್ಲದ ಆ ಕಾಲದಲ್ಲೆ ಹೋದಲ್ಲೆ ಅಲ್ಲಲ್ಲೆ ಅಡ್ಜೆಸ್ಟ್ ಮಾಡಿಕೊಂಡು ಅದಾವಪರಿ ಸಂಕೇತ ಭಾಷೆಯಲ್ಲಿ ಅವರನ್ನೆಲ್ಲ ನಿಭಾಯಿಸುತ್ತಿದ್ದನೋ ದೇವರಿಗಷ್ಟೆ ಗೊತ್ತು.

ಈಗ ಅಜ್ಜನ ಮೊಮ್ಮಗ ಸಪಾದನಿಗೆ ನವನಗರದ ಹೋರಿಶೀಗಳ ಪ್ರಸಾದವನ್ನು ಕೊಟ್ಟು ಕಲ್ಯಾಣೋತ್ಸವವಂತೆ! ಮೂತ್ರಿಯ ಮೊಮ್ಮಗನಿಗೆ ಮದುವೆ ಎಂದರ್ಥ. ಸಪಾದ ಉಂಡಾಡಿಗುಂಡ. ಬೈಕು ಹತ್ತಿ ಊರೂರು ಸುತ್ತುವುದು ದೈನಂದಿನ ಮಹಾಕಾಯಕ. ಜೊತೆಗಾರ ಮಕ್ಕಳು ಕ್ರಿಕೆಟ್ ಆಡಲು ಬರದಿದ್ದರೆ ಬೈಕ್ ಹತ್ತಿ ಹೊರಡುತ್ತಾನೆ. ಅಜ್ಜನ ಅನುವಂಶೀಯತೆಯ ಒಳಹರಿವು ನೋಡಿ-ನಾಮ ಹಚ್ಚಿಕೊಳ್ಳುವ ಸಮಾಜದ ಹುಡುಗಿಯೋರ್ವಳನ್ನು ಈ ಸಪಾದ ಬಸಿರುಮಾಡಿದ್ದ.

ರೋಗಿ ಹೇಳಿದ್ದೂ ಹಾಲು ವೈದ್ಯ ಬಯಸಿದ್ದೂ ಹಾಲು; ಸಪಾದ ಮದುವೆಯಾಗಲು ಆಕೆಯನ್ನು ಬಸಿರುಮಾಡಿರಲಿಲ್ಲ; ಅಜ್ಜನಂತ ಅಲುಗಾಡಿಸಿದ್ದಕ್ಕೆ ಆಕೆ ಬಸಿರಾದರೆ ಅವನನ್ನೇಕೆ ಆಡಿಕೊಳ್ತೀರಿ?

ಪ್ರಕರಣ ಅಜ್ಜನಲ್ಲಿಗೆ ಬಂದಾಗ ಅಜ್ಜ ಕಣ್ಣುಬಿಟ್ಟು ಗದರಿಸಿದ. “ನಾವೆಂದರೇನು? ನಮ್ಮ ಮನೆತನ ಅಂದರೇನು?” ಜೋರಾಗಿ ಗುಟುರಿದ ಅಜ್ಜನ ಅಣತಿಗೆ ಮೊಮ್ಮಗ ಸಪಾದ ಥಂಡು ಹೊಡೆದ. ನವರತ್ನ ಹೇರ್ ಆಯಿಲ್ ಹಚ್ಚಿಕೊಂಡು ನಿದ್ದೆ ಮಾಡಿದನೇ? ಗೊತ್ತಿಲ್ಲ. ಎರಡು ಲಕ್ಷ ಕೊಟ್ಟು ಆ ಹುಡುಗಿಗೆ ಅಬಾರ್ಷನ್ ಮಾಡಿಸಿ ಕೈ ತೊಳೆದುಕೊಂಡರು ಕೆಲವು ದಿನ ಥಂಡು ಹೊಡೆದಿದ್ದ ಸಪಾದ ಮತ್ತೆ ಊರಲ್ಲೆಲ್ಲ ಹುಡುಕುತ್ತಿದ್ದ. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇದ್ದದ್ದರಿಂದ, ಅವ ಹಳ್ಳಿ ಮನೆಯಲ್ಲೆ ಇದ್ದದ್ದರಿಂದ ಯಾರೂ ಸಿಕ್ಕಿರಲಿಲ್ಲ.

ಈ ನಡುವೆ ಅಜ್ಜ ಮಾಡಿಟ್ಟ ಹಣದಲ್ಲಿ ಒಂದು ಭಾಗ ಖಾಲಿ ಮಾಡಿ ಮನೆಗೆ ಗ್ರಾನೈಟಿನ ನೆಲಹಾಸು, ಬಚ್ಚಲುಮನೆ, ಕಮೋಡ್ ಕಕ್ಕಸು ಎಲ್ಲವನ್ನೂ ಮಾಡಿಸಿದ. ಮುಕ್ಕಾಲು ಲಕ್ಷ ಕೊಟ್ಟು ಬೈಕ್ ಖರೀದಿಸಿದ. ಊರೆಲ್ಲ ಅಲೆಯುತ್ತಿದ್ದ. ಮದುವೆ ಬ್ರೋಕರುಗಳು ಬರತೊಡಗಿದರು. ಮಾಣಿಯನ್ನು ಕಂಡು ಮಾಣಿಯ ಅಪ್ಪನಿಂದ ಎಷ್ಟು ಹಡೆಯುತ್ತದೆ ಎಂದು ಅಂದಾಜಿಸಿಕೊಂಡು ಹೋದರು. ಸರಿಯಾಗಿ ಯಾವುದೂ ಕುದುರಲಿಲ್ಲ.

ಅಷ್ಟರಲ್ಲಿ ಕಚ್ಚೆಶೀಗಳ ’ಮಹಾಸಂಸ್ಥಾನ’ದಲ್ಲಿ ವಿಷಯ ನಿವೇದನೆಗೊಂಡು. ಶೀಗಳು ತಾವೇ ಒಂದನ್ನು ಅನುಗ್ರಹಿಸುವುದಾಗಿ ಹೇಳಿ ನವನಗರದ ಒಂದು ದಪ್ಪನೆಯ ಹುಡುಗಿಯನ್ನು ಒಪ್ಪಿಸಿದರು. ಸಪಾದ ತಕ್ಷಣಕ್ಕೆ ಒಪ್ಪಲಿಲ್ಲ. ಹೊರಮೇವಿಗೆ ಯಾರಾದರೂ ಸಿಗಬಹುದು, ಮನೆಯಲ್ಲಿರುವಾಕೆ ಸುಂದರಿಯಾಗಿರಲಿ ಎಂಬುದು ಅವನ ಅನಿಸಿಕೆ. ವರ್ಷಗಳೇ ಕಳೆದರೂ ಬೇರೆ ಯಾವ ಹುಡುಗಿಯೂ ಸಪಾದನನ್ನು ಒಪ್ಪಲಿಲ್ಲ. ಹೀಗಾಗಿ ಕಚ್ಚೆಶೀಗಳ ’ಪ್ರಸಾದ’ವೇ ಗತಿ ಎಂಬ ನಿರ್ಧಾರಕ್ಕೆ ಬಂದ.

ಫೇಸ್‍ಬುಕ್ ನಲ್ಲಿ ತನ್ನ ವಾಲ್ ಗಳಲ್ಲಿ ಕೆಚ್ಚೆಶೀಗಳನ್ನು ಸತತವಾಗಿ ಸ್ಮರಿಸುತ್ತ, ಅವರ ವೀಡಿಯೋ, ಫೋಟೋ ಶೇರ್‍ ಮಾಡುತ್ತ ಹಲವು ವರ್ಷಗಳಿಂದ ಅವರಿಗೆ ಜೈಕಾರ ಹಾಕುತ್ತಿರುವ ಸಪಾದ ಈಗ ಅದನ್ನು ಹೆಚ್ಚಿಸಿದ್ದೇಕೆಂದರೆ ಕಚ್ಚೆಶೀಗಳ ಪವಾಡದಿಂದ ಅವರ ಪ್ರಸಾದ ರೂಪದಲ್ಲಿ ನವನಗರದ ಹುಡುಗಿ ಸಿಕ್ಕಿದ್ದಕ್ಕೆ.

ಇಂತಹ ಕಚ್ಚೆ ಪವಾಡಗಳಿಂದ ಚಂದ್ರನಾಡ್ಯುಜ್ಜೇಶ್ವರ ಎಂಬ ಬಿರುದನ್ನು ಅನೌಪಚಾರಿಕವಾಗಿ ಗಳಿಸಿದ ಮಹಾಮಹಿಮ ತೊನೆಯಪ್ಪನನ್ನು ಸಪಾದನಂತರ ಮೂತ್ರಿಗಳು ಭಟ್ಟಂಗಿಗಳಾಗಿ ಭಜಿಸುತ್ತ ಬಹುಪರಾಕು ಹಾಕುವುದಕ್ಕೆ ಅವರದ್ದೆ ಆದ ಖಾಸಗಿ ಕಾರಣಗಳಿರುತ್ತವೆ. ಅಂತಹ ಪವಾಡಗಳು ಯಾರಿಗೂ ಗೋಚರವಲ್ಲ. ಗೋಚರವಾಗಿದ್ದರೆ ಇಷ್ಟೊತ್ತಿಗೆ ಅರ್ಧಸಾವಿರ ಕುಟುಂಬಗಳು ಒಡೆದುಹೋಗುತ್ತಿದ್ದವು.

ಹಾವಾಡಿಗ ಮಹಾಸಂತ್ಶಾನದ ಭೋಗವರ್ಧನವಾಳ ಜಗದ್ಗುರು ಶೋಭರಾಜಾಚಾರ್ಯ ಕಚ್ಚೆಶೀ ತೊನೆಯಪ್ಪ ಭಕ್ತಮಂಡಲಿಯಲ್ಲಿ ಇರುವವರೆಲ್ಲ ಇಂತಹ ಕಚ್ಚೆಹರುಕರೇ. ಬಸ್ಸಣ್ಣನ ಕತೆಯೂ ಇದಕ್ಕೆ ಹೊರತಾಗಿಲ್ಲ. ಮಸಾಜಣ್ಣ ಕಚ್ಚೆಹರುಕನಲ್ಲದಿದ್ದರೂ ಹೋರಿ ತೊಡಗಿಸಿದ ಹಣದ ಋಣಭಾರ ಬಹಳ ಇದೆ. ಇದನ್ನೆಲ್ಲ ಪಕ್ಕಾಮಾಡಿಕೊಳ್ಳಲು ನಮ್ಮ ಗುಮ್ಮಣ್ಣ ಹೆಗಡೇರು ಮತ್ತು ಚಿತ್ರಗುಪ್ತ ದೇಶಮುಖರು ಬಹಳ ಶ್ರಮದಾನ ಮಾಡಿದ್ದಾರೆ.

ಸಪಾದನಿಗೆ ನವನಗರದ ಕಚ್ಚೆಶೀ ಪ್ರಸಾದವನ್ನು ಲೈಸೆನ್ಸ್ ಸಹಿತ ಅನುಗ್ರಹ ಮಾಡುತ್ತಿರುವುದಕ್ಕೆ ಇಡೀ ಮಠ ಕಚ್ಚೆಶ್ರೀಗಳನ್ನು ಅತ್ಯಂತ ಸಂತೋಷದಿಂದ ಅಭಿನಂದಿಸುತ್ತಿದೆ.ದೇವತೆಗಳು ಮಳೆಗರೆಯುವುದೊಂದು ಬಾಕಿ ಇದೆ; ಅಷ್ಟರಲ್ಲಿ ’ಮಾವಂದಿರು ’ ಒಡ್ಡೋಲಗಕ್ಕೆ ಕರೆದುಬಿಟ್ಟರೆ ನಿರುಪಾಯ. ಹೀಗಾಗಿ ಕಚ್ಚೆಶೀ ಭಕ್ತರೆಲ್ಲ ಒಕ್ಕೊರನಿನಿಂದ ಘಟ್ಟಿಯಾಗಿ ಗಂಟಲು ಹರಿದುಹೋಗುವಂತೆ ಕೂಗಿ-
“ಚಂದ್ರನಾಡ್ಯುಜ್ಜೇಶ್ವರ ಭೋಗವರ್ಧನ ಜಗದ್ಗುರು ಕಚ್ಚೆಶೀ ಮಹಾರಾಜ್ ಕೀ ಜೇ ಯ್ ಜೇ ಯ್”

Thumari Ramachandra

source: https://www.facebook.com/groups/1499395003680065/permalink/1747931455493084/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s