ಮಹಾಭಾರತ ಕೊಟ್ಟ ಮಹಾ ಉಡುಗೊರೆಗಳಿಂದ ಕಲಿಯುವುದು ಬಹಳವಿದೆ.

ಮಹಾಭಾರತ ಕೊಟ್ಟ ಮಹಾ ಉಡುಗೊರೆಗಳಿಂದ ಕಲಿಯುವುದು ಬಹಳವಿದೆ.

ತುಮರಿ ಇನ್ನೇನೋ ಬರೆಯಬೇಕೆಂದು ಮಿತ್ರರೆಲ್ಲ ಕೇಳಿದ್ದರು. ಸಮಯ ಮತ್ತು ಸಂಯಮ ಎರಡೂ ಕಡಿಮೆ ಇರುವುದರಿಂದ ಸಾಧ್ಯವಾದಷ್ಟನ್ನು ಬರೆಯಲು ತೊಂದರೆಯಿಲ್ಲ. ಹೂವನ್ನು ಕೊಡಲಾಗದವರು ಹೂವಿನ ಪಕಳೆಯನ್ನು ಅದೇ ಶ್ರದ್ಧೆಯಿಂದ ಕೊಟ್ಟರೆ, ಬೆಲ್ಲವನ್ನು ಕೊಡಲಾಗದವರು ಬೆಲ್ಲ ದೊರಕುವ ಮನೆಯನ್ನು ತೋರಿಸಿದರೆ, ಅದನ್ನೆಲ್ಲ ಬಯಸಿದವರೆಲ್ಲ ಅಷ್ಟರಿಂದಲೆ ತೃಪ್ತರು ಎನ್ನುತ್ತಾರೆ ತಿಳಿದವರು.

DNA (deoxyribonucleic acid) is the cell’s genetic material, contained in chromosomes within the cell nucleus and mitochondria. Except for certain cells (for example, sperm and egg cells and red blood cells), the cell nucleus contains 23 pairs of chromosomes. A chromosome contains many genes.

ನರಿಯ ಹೊಟ್ಟೆಯಲ್ಲಿ ಹುಲಿ ಹುಟ್ಟಲು ಸಾಧ್ಯವೆ? ಅನುವಂಶೀಯತೆಯಿಂದ ಬರೋದು ಬಿಪಿ ಮತ್ತು ಸಕ್ಕರೆ ಕಾಯಿಲೆಗಳು ಮಾತ್ರ ಅಂತಾರೆ. ಆದರೆ ಕ್ರೋಮೋ ಸೋಮ್ ಗಳಲ್ಲಿರುವ ಜೀನ್ಸ್ ಗಳಲ್ಲಿ ಮನೆತನದ ಹಲವು ಬಳುವಳಿಗಳು ಇದ್ದೇ ಇರುತ್ತವೆಂಬುದು ಸುಳ್ಳಲ್ಲ. ಮಠದ ಮಾಣಿಯ ಅನುವಂಶೀಯ ’ಮಹಿಮೆ’ಯನ್ನು ಚೆನ್ನಾಗಿ ಬಲ್ಲ ತುಮರಿ, ಮಾಣಿ ಆಯ್ಕೆಗೊಂಡಾಗ ಸಂದೇಹ ಹೊಂದಿದ್ದ. ಹೇಳಿಕೊಳ್ಳಲು ಆಸ್ಪದವಿರಲಿಲ್ಲ; ಹೇಳಿಕೊಂಡು ಪ್ರಯೋಜನವೂ ಇರಲಿಲ್ಲ. ಏನೋ ಪೀಠದ ಮಹಿಮೆ ಅಂತಾರಪ್ಪ, ಅದರಿಂದಲಾದರೂ ಕಚ್ಚೆ ಸಡಿಲಿಸದೆ ಸರಿಯಗಿ ನಡೆದುಕೊಳ್ಳಬಹುದು ಎಂದು ತನ್ನನ್ನೇ ತಾನು ಸಮಾಧಾನಿಸಿಕೊಂಡಿದ್ದ.

ದೀಕ್ಷೆ ಪಡೆದ ವಾರದ ನಂತರವೇ ಆರಂಭವಾದ ಮಾಣಿಯ ಹಾರಾಟಗಳು ಮುಪ್ಪಡರಿ, ಕಾಯಿಲೆ ಅಮರಿಕೊಂಡು ಹಣ್ಣಾಗಿದ್ದ ಸ್ವಾಮಿಗಳನ್ನು ಇನ್ನಷ್ಟು ಹೈರಾಣಾಗಿಸಿದ್ದು ಆಗ ಹಲವಾರು ನಿಯತಕಾಲಿಕೆಗಳಲ್ಲಿ ಬರುತ್ತಲೇ ಇತ್ತು. ತನಗೆ ಬೇಕಾದವರನ್ನು ಮಂದಿಟ್ಟುಕೊಂಡು ಆಗಿನಿಂದಲೇ ಮಾಧ್ಯಮಗಳಲ್ಲಿ ತನಗೆ ಬೇಕಾದಂತೆ ಆಟವಾಡ ಹೊರಟಿದ್ದ ಈ ಕ್ರಿಮಿನಲ್ ಮಾಣಿ, ಹಿಂದಿನವರು ತನಗೆ ಖಜಾನೆ ಕೀಲಿ ಕೈ ಕೊಟ್ಟಿಲ್ಲ, ಮಠದ ಆಡಳಿತದ ದಾಖಲು ಪತ್ರ ಕೊಟ್ಟಿಲ್ಲ ಅಂತ ಎಲ್ಲೆಡೆಗೂ ಹೇಳುತ್ತ ತಿರುಗುತ್ತಿದ್ದ. ಅನಾರೋಗ್ಯದಿಂದ ಹಿಂದಿನವರು ಬಳಲುತ್ತಿದ್ದರೆ ತೊನೆಯಪ್ಪನವರು ಹಳ್ಳಿಕಡೆಗೆ ವಿಜಯಯಾತ್ರೆಗೆ ಹೊರಟುಬಿಟ್ಟಿದ್ದರು!

ಹಲವು ಹದಿನೆಂಟು ಜನಾಂಗದವರು ಎಂದೋ ಚೂರುಪಾರು ಕೈಮುಗಿದಿದ್ದನ್ನೆ ಬಂಡವಾಳ ಮಾಡಿಕೊಂಡ ಮಾಣಿ ನಾಮ್ ಕೇ ವಾಸ್ಥೆಗೆ ಯಾದಿಯಲ್ಲಿದ್ದ ಅವರನ್ನೆಲ್ಲ ಎತ್ತಿಕಟ್ಟಿ ತನ್ನ ಬಳಗವನ್ನು ಬೆಳೆಸಿಕೊಳ್ಳಲು ಯತ್ನಿಸಿದ. ಮೂರು ನಾಕು ಜಿಲ್ಲೆಗಳ ಕೇಬಲ್ ಚಾನೆಲ್ ಗಳಲ್ಲಿ ದಿನವಹಿ ಹಲವಾರು ಗಂಟೆಗಳ ಕಾಲ ಈಗಲೂ ಹೋರಿಸ್ವಾಮಿಗಳು ಪ್ರವಚನ ನಡೆಸುತ್ತಿರುತ್ತಾರೆ! ಅಧಿಕಾರಿಗಳ ಸಂಖ್ಯೆ ಟಾಟಾ ಕಂಪನಿಯ ನೌಕರರ ಸಂಖ್ಯೆಗಿಂತ ಜಾಸ್ತಿ ಇದೆ ಎಂಬರ್ಥದಲ್ಲಿ ಕಚ್ಚೆಶ್ರೀಗಳು ಹೇಳಿದ್ದಾರೆ; ಇರುವವರೆಲ್ಲ ತನ್ನ ರಕ್ಷಣೆಗಾಗಿ ಬೆಳೆಸಿಕೊಂಡ ಗೂಂಡಾಗಳೇ.

ಹಾಗೆ ಹೇಳೋದರಿಂದ ರಾಜಕಾರಣಿಗಳಿಗೆ ಪ್ರಬಲ ಸಂದೇಶವೊಂದು ರವಾನೆಯಾಗುವುದರ ಜೊತೆಗೆ ಇವ ಹೇಳಿಕೊಂಡ ಹಲವು ಹದಿನೆಂಟು ಜನಾಂಗದವರಿಗೂ ಸಹ ಸಂದೇಶ ತಲುಪುತ್ತದೆ. ಹೀಗಾಗಿ ಕಚ್ಚೆಶ್ಸೀಗಳು ಮಠದಲ್ಲಿ ತನ್ನುಳಿವಿಗಾಗಿ ಆ ರೀತಿಯ ಬಿಲ್ಡಪ್ ಕೊಡುತ್ತಿದ್ದಾರೆ.

ನಮ್ಮನ್ನೆಲ್ಲ ವಿರೋಧಿಸುವ ತಾಲಿಬಾನ್ ಬಳಗದವರೂ ಸಹ ಓದಿಕೊಳ್ಳಲಿ ಎಂಬ ಕಾರಣಕ್ಕೆ ಮಹಾಭಾರತದ ವಿದುರ ನೀತಿಯಿಂದ ಕೆಲವನ್ನು ಮಾತ್ರ ಆಯ್ದುಕೊಂಡು ಹೇಳುತ್ತೇನೆ. ಅವರೆಲ್ಲ ಕಾಪಿ ಮಾಡಿಟ್ಟುಕೊಳ್ಳಬಹುದು, ಯಾಕೆಂದರೆ ಕಚ್ಚೆಶ್ರೀಗಳಿಗೆ ಇವುಗಳನ್ನು ಬಳಸಿಕೊಂಡು ಪ್ರವಚನ ನೀಡಲು ಅನುಕೂಲವಾಗುತ್ತದೆ. ಇಮ್ಮಡಿ ವಿಶ್ವೇಶ್ವರಯ್ಯನ ಕಾಪಿ ಪೇಸ್ಟ್ ವರದಿಗಾರರು ಇದನ್ನು ಪೇಪರಿಗೆ ಕಾಪಿ ಪೇಸ್ಟ್ ಮಾಡುವ ಸಾಧ್ಯತೆ ಇದ್ದೇ ಇದೆ; ಕಚ್ಚೆ ಜಗದ್ಗುರುಗಳ ಬಗ್ಗೆ ಬರೆದ ಸಾಲುಗಳನ್ನು ತೆಗೆದುಹಾಕಿದರೆ ಅವರ ಕೆಲಸ ಪೂರ್ಣವಾಗಿಬಿಡುತ್ತದೆ!

ಆದಿಕವಿ ವಿರಚಿತ ಶ್ರೀಮದ್ರಾಮಾಯಣ ಮತ್ತು ವೇದವ್ಯಾಸ ವಿರಚಿತ ಶ್ರೀಮನ್ಮಭಾರತ ಭಾರತದ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತವೆ. ಜನಸಾಮಾನ್ಯರಿಗೆ ಜೀವನಧರ್ಮವನ್ನು ಅರ್ಥಮಾಡಿಕೊಳ್ಳುವುದಕ್ಕೆ ಇವೆರಡೇ ಸಾಕು. ಶ್ರೀಮದ್ರಾಮಾಯಣದಲ್ಲಿ ಯೋಗಾವಾಶಿಷ್ಠ ಮತ್ತು ಆದಿತ್ಯ ಹೃದಯಗಳ ಜೊತೆಗೆ ಸುಂದರಕಾಂಡ ನಮಗೆ ಹೆಚ್ಚಿನ ಬಳಕೆಗೆ ದೊರೆತ ಟೂಲ್ಸ್ ಎನ್ನಬಹುದು. ಅದೇ ವಿಧವಾಗಿ ಶ್ರೀಮನ್ಮಹಾಭಾರತದಲ್ಲಿ ಭಗವದ್ಗೀತೆ, ವಿಷ್ಣು ಸಹಸ್ರನಾಮ ಮತ್ತು ವಿದುರನೀತಿಗಳು ವಿಶೇಷ ಟೂಲ್ಸ್ ಆಗಿ ನಮಗೆ ದೊರೆತಿವೆ.

ವಿದುರ ನೀತಿಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ಮಾತ್ರ ನಾವಿಲ್ಲಿ ಗಣನೆಗೆ ತೆಗೆದುಕೊಳ್ಳೋಣ.

* ಅಗತ್ಯವಿದ್ದರೆ ಮಾತ್ರ ಸಲಹೆಕೊಡಿ
* ರಾಜನಾದವನು ರಾಜ್ಯಕ್ಕೆ ಏನುಬೇಕೆಂದು ಕೇಳಿಕೊಳ್ಳುತ್ತಿರಬೇಕು.
* ಈ ಪ್ರಪಂಚದಲ್ಲಿ ಯಾರೆಲ್ಲ ನಿದ್ರಿಸುವುದಿಲ್ಲ?
ಪ್ರೇಮಿಗಳು, ನೈತಿಕತೆಯನ್ನು ಕಳೆದುಕೊಂಡವರು, ತಜ್ಞರಾಗಿದ್ದರೂ ಮೂಲಸೌಕರ್ಯಗಳ ಕೊರತೆಯಿಂದ ಬಳಲುವವರು, ಸಂಚಿನಿಂದ ಇತರರ ಸಂಪತ್ತನ್ನು ಹೊಡೆದುಕೊಳ್ಳುವವರು.

* ಅನರ್ಹರನ್ನು ಪ್ರತಿನಿಧಿಗಳನ್ನಾಗಿ ನೇಮಿಸಿ ಅಧಿಕಾರ ಕೊಡುವವರು ನೆಮ್ಮದಿ ಮತ್ತು ಮನಶ್ಶಾಂತಿಯನ್ನು ಕಳೆದುಕೊಳ್ಳುವರು. [ಬೇರೆ ಉದಾಹರಣೆಯ ಅಗತ್ಯವಿಲ್ಲ ಅನಿಸುತ್ತದೆ!:)

* ಆಳರಸರಲ್ಲಿರಬೇಕಾದ ಅರ್ಹತೆಗಳು-
ತನ್ನರಿವು ಮತ್ತು ತನ್ನಮೇಲೆ ತನಗೆ ನಿಯಂತ್ರಣ, ಉದಾತ್ತ ಆದರ್ಶಗಳು, ಸ್ಪಷ್ಟ ಗುರಿ, ಶ್ರಮಶೀಲ ಸ್ವಭಾವ, ನೈತಿಕತೆ

* ಯಶಸ್ಸು ಮತ್ತು ನೆಮ್ಮದಿ–
ವ್ಯಕ್ತಿಯ ಯಶಸ್ಸನ್ನು ಸಮಾಜ ನಿರ್ಧರಿಸುತ್ತದೆ. ವ್ಯಕ್ತಿ ನಿರುಮ್ಮಳನಾಗಿರುವುದೇ ನೆಮ್ಮದಿ. ಮಾನಸಿಕ ಶಾಂತಿ ಮಾತ್ರ ನೆಮ್ಮದಿಯನ್ನು ನೀಡುತ್ತದೆ. [ಹಣ, ಸಂಪತ್ತು ಕೊಡುವುದರ ಮೂಲಕ ನೆಮ್ಮದಿಯನ್ನು ಖರೀದಿಸಲು ಸಾಧ್ಯವಿಲ್ಲ]

* ನೆಮ್ಮದಿಗಾಗಿ ಉತ್ತಮ ಆಡಳಿತಗಾರ ರೂಢಿಸಿಕೊಳ್ಳುವ ಸ್ವಭಾವ-
ಒಂದರಿಂದ ಎರಡನ್ನು ಪರೀಕ್ಷಿಸುತ್ತಾನೆ, ಮೂರನ್ನು ನಾಲ್ಕರಿಂದ ವ್ಯವಸ್ಥಾಪನೆಗೊಳಿಸುತ್ತಾನೆ, ಐದನೆಯದನ್ನು ಸೋಲಿಸುತ್ತಾನೆ, ಆರನೆಯದನ್ನು ಧರಿಸುತ್ತಾನೆ. ನೆಮ್ಮದಿಯಿಂದಿರಲು ಏಳನೆಯದನ್ನು ಬಿಟ್ಟು ಬಿಡುತ್ತಾನೆ.
[ಒಂದು-ವಿವೇಕ, ಎರಡು-ಒಳ್ಳೆಯದು ಮತ್ತು ಕೆಟ್ಟದ್ದು, ಮೂರು-ಶ್ನೇಹಿತರು, ವೈರಿಗಳು ಮತ್ತು ತಟಸ್ಥರು, ನಾಲ್ಕು-ಸಾಮ, ದಾನ, ಭೇದ, ದಂಡ, ಐದು-ಪಂಚೇಂದ್ರಿಯಗಳು, ಆರು-ಅರಿಷಡ್ವರ್ಗಗಳ ನಿಗ್ರಹ, ಏಳು- ಸ್ತ್ರೀವ್ಯಾಮೋಹ, ಜೂಜು, ಕುಡಿತ, ಬೇಟೆ, ಅವಾಚ್ಯ ವಾಗ್ಝರಿ, ಅತಿ ಕ್ರೂರ ಶಿಕ್ಷೆ, ಸಂಪನ್ಮೂಲಗಳನ್ನು ಆನಗತ್ಯವಾಗಿ ಪೋಲುಮಾಡುವಿಕೆ]

ಜಗದ್ಗುರು ತೊನೆಯಪ್ಪನವರು ಇದಕ್ಕೆಲ್ಲ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂಬುದು ಬೇರೆ ಪ್ರಶ್ನೆ.

* ಉತ್ತಮ ವ್ಯಕ್ತಿಯ ಸ್ವಭಾವಗಳು-
ನಿರ್ಜೀವ ಮತ್ತು ಸಜೀವ ಎರಡಕ್ಕೂ ಮೌಲ್ಯವಿರುವುದನ್ನು ಗಮನಿಸುತ್ತಾನೆ, ತನ್ನ ಮತ್ತು ಇತರರ ನಡಾವಳಿಗಳಿಂದ ಉಂಟಾಗುವ ಪರಿಣಾಮಗಳನ್ನು ಅರಿತಿರುತ್ತಾನೆ, ಅನ್ಯರು ಉತ್ತಮವಾದ ರೀತಿಯಲ್ಲಿ ನಡೆದುಕೊಂಡದ್ದನ್ನು ಸದಾ ಗ್ರಹಿಸುತ್ತ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೆ.

* ಒಳ್ಳೆಯ ಮುಖಂಡನ ಸ್ವಭಾವ ಹೀಗಿರುತ್ತದೆ-
ಜನರನ್ನು ಬಹಳಬೇಗ ಅರ್ಥಮಾಡಿಕೊಂಡು ಅತಿ ಸಮರ್ಥರು, ಸಾಮಾನ್ಯರಿಗಿಂತ ಹೆಚ್ಚಿಗೆ ಸಮರ್ಥರು ಮತ್ತು ಸಾಮಾನ್ಯರು ಎಂಬ ಮೂರು ತರಗತಿಯಲ್ಲಿ ಅವರನ್ನು ಮನದಲ್ಲಿ ವಿಂಗಡಿಸುತ್ತಾನೆ. ಅವರಿಗೆ ತಕ್ಕನಾಗಿ, ಮೊದಲ ವರ್ಗದವರಿಗೆ ಆಯಕಟ್ಟಿನ ಜವಾಬ್ದಾರಿಗಳು, ಎರಡನೆಯ ವರ್ಗದವರಿಗೆ ಮಧ್ಯಮ-ಸಂಕೀರ್ಣಗತಿಯ ಕೆಲಸಗಳು ಮತ್ತು ಮೂರನೆಯ ವರ್ಗದವರಿಗೆ ಮಾಮೂಲಿ ಕೆಲಸಗಳನ್ನು ನಿರ್ವಹಿಸಲು ಸೂಚಿಸುತ್ತಾನೆ. ಮೊದಲ ವರ್ಗದವರನ್ನು ಸಾಮದಿಂದ, ಎರಡನೆ ವರ್ಗದವರನ್ನು ದಾನದಿಂದ, ಮೂರನೆಯ ವರ್ಗದವರನ್ನು ಭೇದ ಮತ್ತು ದಂಡದಿಂದ ನಿಭಾಯಿಸುತ್ತಾನೆ.

* ಉತ್ತಮರು ಅಳವಡಿಸಿಕೊಳ್ಳುವ ಉತ್ತಮಾಂಶಗಳು-
ಜಾಗೃತ ಆಲೈಸುವಿಕೆ, ಪರರು ಹೇಳಲು ಯತ್ನಿಸುತ್ತಿರುವುದನ್ನು ಶೀಘ್ರವಾಗಿ ಅರ್ಥಮಾಡಿಕೊಳ್ಳುವಿಕೆ, ಬೇರೆಯವರ ಕಾರ್ಯಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡದಿರುವಿಕೆ, ಪ್ರತಿಫಲಕ್ಕಾಗಿ ಹಾತೊರೆಯದಿರುವಿಕೆ, ಒಣ ಪ್ರತಿಷ್ಠೆ ಇಲ್ಲದಿರುವಿಕೆ.

* ಒಳ್ಳೆಯವರು ಅಳವಡಿಸಿಕೊಳ್ಳುವ ಒಳ್ಳೆಯ ಅಭ್ಯಾಸಗಳು-
ಯಾವುದೇ ಒಂದು ಕ್ಷೇತ್ರ/ರಂಗದಲ್ಲಿ ಸಮರ್ಥನೆನಿಸಿಕೊಳ್ಳುವುದು ಅಥವಾ ನಿಪುಣನಾಗುವುದು, ಎಲ್ಲಾ ರಂಗಗಳಲ್ಲೂ ಒಟ್ಟಾರೆಯಾಗಿ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದು, ಗುರಿತಲುಪಲು ಒಳದಾರಿ ಅಥವಾ ವಾಮಮಾರ್ಗವನ್ನು ಅನುಸರಿಸದಿರುವುದು, ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಒಡನಾಟ ಇರಿಸಿಕೊಳ್ಳುವುದು, ಉತ್ತಮವಾದುದನ್ನು ಎಲ್ಲರಿಂದಲೂ ಕಲಿತುಕೊಳ್ಳುವ ಮನೋಭಾವ ಇರಿಸಿಕೊಳ್ಳುವುದು, ಸದಾ ವಿನಮ್ರನಾಗಿರುವುದು.
ಈ ನಾಲ್ಕು ತೆರನಾದ ಜನರಿಂದ ಸಲಹೆಗಳನ್ನು ಪಡೆಯದಿರುವುದು-ಅರ್ಧಂಬರ್ಧ ಜ್ಞಾನವುಳ್ಳವರು, ಕೆಲಸಗಳನ್ನು ಬಹಳ ನಿಧಾನಗತಿಯಲ್ಲಿ ನಡೆಸುವವರು, ಆಂತರಂಗದಲ್ಲಿ ಆಲಸ್ಯವನ್ನು ಹೊಂದಿರುವವರು, ಪ್ರಶಸ್ತಿ-ಪುರಸ್ಕಾರಗಳಿಗಾಗಿ ಹಾತೊರೆಯುವವರು.
ಈ ನಾಲ್ಕು ಜನರನ್ನು ಕಾಳಜಿ ನೋಡಿಕೊಳ್ಳುತ್ತಾರೆ-ಮುದುಕು ನೆಂಟರನ್ನು, ಬಡ ಸ್ನೇಹಿತರನ್ನು, ಅನಿವಾರ್ಯವಾಗಿ ನಷ್ಟಕ್ಕೆ ಸಿಲುಕಿ ಶ್ರೀಮಂತಿಕೆಯಿಂದ ಬಡತನಕ್ಕಿಳಿದವರನ್ನು, ಮಕ್ಕಳಿಲ್ಲದ ವಿಧನೆ ಸಹೋದರಿಯನ್ನು. ಪಂಚೇಂದ್ರಿಯಗಳ ಬಗ್ಗೆ ಸದಾ ನಿಗಾವಹಿಸಿ ನಿಗ್ರಹಿಸುತ್ತಾರೆ; ಮಡಕೆಯಲ್ಲಿ ಒಂದೇ ತೂತಿದ್ದರೂ ಸಹ ನೀರು ಹೊರ ಸುರಿದು ಪೋಲಾಗುತ್ತದಲ್ಲ ಎಂಬ ಧರ್ಮಸೂಕ್ಷ್ಮತೆಯಿಂದ.
ಈ ನಾಲ್ಕನ್ನು ಮುತುವರ್ಜಿ ವಹಿಸಿ ರಕ್ಷಿಸಿಕೊಳ್ಳದಿದ್ದರೆ ಅವು ತಮ್ಮನ್ನು ತೊರೆಯುತ್ತವೆ ಎಂಬುದು ಉತ್ತಮರಿಗೆ ಗೊತ್ತಿರುತ್ತದೆ-ದನ, ಹೆಂಡತಿ, ಕೆಲಸಗಾರರು(ನೌಕರರು), ಕೃಷಿ, ಕೆಳಹಂತದ ಜನರ ಸ್ನೇಹ, ಜ್ಞಾನ

* ಸರಿಯಾದ ಯೋಜನೆಗಳು ಮತ್ತು ಕೆಲಸ-ಉತ್ತಮರು ಕೆಲಸ ಮಾಡುವಾಗ ಕಡಿಮೆ ಸಂಪನ್ಮೂಲಗಳು ಮತ್ತು ಪ್ರಯತ್ನಗಳ ಮೂಲಕ ಹೆಚ್ಚಿನ ಲಾಭವನ್ನು ತಂದುಕೊಡುವ ಯೋಜನೆ ಮತ್ತು ಕೆಲಸಗಳನ್ನು ಮಾತ್ರ ಆಯ್ದುಕೊಳ್ಳುತ್ತಾರೆ ಮತ್ತು ಆದಷ್ಟು ಶೀಘ್ರಗತಿಯಲ್ಲಿ ಅದನ್ನು ಮಾದಿಮುಗಿಸುತ್ತಾರೆ.

* ಪ್ರಮುಖ ಯೋಜನೆಗಳ ವ್ಯವಸ್ಥಾಪನೆ-ಪ್ರಮುಖ ಯೋಜನೆಗಳನ್ನು ಆರಂಭಿಸುವ ಮುನ್ನ ಈ ಕೆಲವು ಅಂಶಗಳನ್ನು ಗಮನಿಸುತ್ತಾರೆ-ಸಂಬಂಧಿತ ಅಂಶಗಳು, ದೀರ್ಘಕಾಲದ ಸಂಭಾವ್ಯ ಆಯ-ವ್ಯಯ, ಲಭ್ಯವಾಗುವ ಸಂಪನ್ಮೂಲಗಳು, ಹೊಂದಿರುವ ಸಾಮರ್ಥ್ಯ, ಯೋಜನೆಗೆ ಎದುರಾಗುವ ಅಡ್ಡಿ-ಆತಂಕಗಳು. ಒಮ್ಮೆ ಸಮ್ಮತವೆನಿಸಿದರೆ ಹಮ್ಮಿಕೊಂಡ ಯೋಜನೆಯನ್ನು ಬಲುಬೇಗನೆ ಮುಗಿಸುತ್ತಾರೆ. ಇದೆಲ್ಲವನ್ನು ಗಮನಿಸದೆ ಹಠತ್ತಾಗಿ ಯಾವ ಯೋಜನೆಯನ್ನೂ ಕೈಗೊಳ್ಳಲಾರರು.

* ಪ್ರಮುಖ ಓಉದ್ಯೋಗಿಕ ನಿರ್ಧಾರಗಳು- ಕೆಲಸವನ್ನು ಮಾಡುವುದರಿಂದ ಆಗುವ ಪರಿಣಮ ಮತ್ತು ಮಾಡಿದಿರುವುದರಿಂದ ಆಗುವ ಪರಿಣಾಮ ಎರಡನ್ನೂ ಗಮನಿಸುತ್ತಾರೆ. ಸರಿಯಾದ ಸಮಯದಲ್ಲಿ ಸರಿಯಾದ ಶ್ರಮವಿನಿಯೋಗ ನಡೆಯಬೇಕು, ಪಕ್ವವಾಗದ ಹಣ್ಣು ಸಿಹಿಯಾಗಿರುವುದಿಲ್ಲ, ಆಯಕಟ್ಟಿನ ಕೆಲಸ ಯಶಸ್ಸಿನ ಹಂತಕ್ಕೆ ಬರುವವರೆಗೂ ಆರಂಭಿಕ ಹಂತಗಳನ್ನು ಬಹಿರಂಗಪಡಿಸಲಾಗದು.

* ನೌಕರರನ್ನು ನೇಮಿಸಿಕೊಳ್ಳುವ ಮೊದಲು ಗಮನಿಸಬೇಕಾದ ಅಂಶಗಳು-ಕೆಲಸದ ಅಗತ್ಯತೆ, ಅಗತ್ಯತೆಯನ್ನು ಪೂರೈಸಲಿಚ್ಛಿಸುವ ಕೆಲಸಗಾರನ ಅರ್ಹತೆ, ಸಮರ್ಪಕ ಸಂಭಾವನೆ ಅಥವಾ ಸಂಬಳ, ಮುಂಬರುವ ದಿನಗಳಲ್ಲಿ ಅವನಿಗೆ ವೇತನ ಕೊಡಬಲ್ಲ ಅರ್ಹತೆ.

* ಕೆಲವು ನಾಯಕರ ಲಕ್ಷಣಗಳು-ನಾಯಕನಾಗುವವ ಎದುರುವಾದಿಯಾಗಿರುವ, ಜವಾಬ್ದಾತಿ ತೆಗೆದುಕೊಳ್ಳದಿರುವ ಮತ್ತು ಸೋಮಾರಿಗಳಾಗಿರುವ ನೌಕರರ ಬಗ್ಗೆ ಎಚ್ಚರಿಕೆಯಿಂದಿರಬೇಕು, ಆಯಕಟ್ಟಿನ ನಿರ್ಧಾರಗಳನ್ನು ಕೈಗೊಳ್ಳುವಾಗ ಅರ್ಹ ತಂಡವನ್ನು ಮಾತುಕತೆಗೆ ಕೆಲಸದ ಸ್ಥಳದಿಂದ ದೂರವೆಲ್ಲದರೂ ಕರೆದುಕೊಂಡು ಹೋಗಬೇಕು, ಪರ್ವತದ ತುದಿ ಅಥವಾ ಕಾಡಿಗಾದರೂ ಆಗಬಹುದು.

* ರಾಜನಾದವನ ಕರ್ತವ್ಯಗಳು-ರಾಜನಾದವನು ಇವುಗಳ ಬಗ್ಗೆ ಸದಾ ನಿಗಾ ಇಡಬೇಕು-
ಹೊರರಾಜ್ಯಗಳಿಂದ ಸಂಭವಿಸಬಹುದಾದ ದಾಳಿಗಳು, ರಾಜ್ಯದ ಎಲ್ಲ ಭಾಗಗಳ ಆರ್ಥಿಕ ಸ್ಥಿತಿಗತಿ ಮತ್ತು ಜನಜೀವನ, ಖಜಾನೆಯಲ್ಲಿ ಆರ್ಥಿಕ ಸ್ಥಿತಿ, ಸೈನ್ಯದ ಸಾಮರ್ಥ್ಯ. ಎಲ್ಲಾ ಹಂತಗಳಲ್ಲೂ ನಿರ್ಧಾರಕ್ಕೆ ಬರುವ ಮುನ್ನ ಪರಮೋಚ್ಚ ಸತ್ಯ ಯಾವುದು ಎಂಬುದನ್ನು ಮನದಟ್ಟುಮಾಡಿಕೊಳ್ಳಬೇಕು.

* ಉತ್ತಮನ ಧನಾತ್ಮಕ ನಡತೆಗಳು- ತನ್ನನ್ನು ಪರರು ಹೇಗೆ ನಡೆಸಿಕೊಳ್ಳಬೇಕೋ ಅದೇ ರೀತಿಯಲ್ಲಿ ಪರರನ್ನು ನಡೆಸಿಕೊಳ್ಳುತ್ತಾನೆ. ಸಂಪನ್ಮೂಲಗಳನ್ನು ಅನಗತ್ಯವಾಗಿ ವ್ಯರ್ಥವಾಗಲು ಬಿಡುವುದಿಲ್ಲ. ಶಾಂತನಾಗಿರುತ್ತಾನೆ, ತೀರಾ ವಾಚಾಳಿಯಾಗಲಾರ-ಅಗತ್ಯವಿದ್ದಲ್ಲಿ ಮಾತ್ರ ಸತ್ಯವನ್ನೇ ನುಡಿಯುತ್ತಾನೆ. ತನ್ನ ಕೈಲಾಗದ ಯಾವುದೋ ದೊಡ್ಡ ಅವಕಾಶಕ್ಕಾಗಿ ಹಾತೊರೆಯುವುದಿಲ್ಲ. ಸೋಲು-ಗೆಲುವುಗಳನ್ನು ಸಮತೋಲನದಲ್ಲಿಟ್ಟುಕೊಳ್ಳುತ್ತಾನೆ.

* ಉತ್ತಮ ವ್ಯಕ್ತಿವದ ಗುಣಲಕ್ಷಣಗಳು- ವ್ಯಕ್ತಿಯು ವಸ್ತುವಿನ ವ್ಯಾಮೋಹವನ್ನು ಕಡಿದುಕೊಂಡರೆ ಅದರಿಂದ ಅವನಿಗೆ ಹಿನ್ನಡೆಯಾಗದು. ವ್ಯಕ್ತಿ ಎಲ್ಲದರ ವ್ಯಾಮೋಹವನ್ನು ಕಳೆದುಕೊಂಡರೆ ಅವನಿಗೆ ಯಾವುದರಿಂದಲೂ ಏನೂ ಪರಿಣಾಮವಾಗದು. ವ್ಯಕ್ತಿ ಕೆಲವು ಅಂಶಗಳಿಂದ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ-ಯಾರಜೊತೆಗೆ ಒಡನಾಟ ಇರಿಸಿಕೊಂಡಿದ್ದಾನೆ ಅನ್ನುವುದರ ಮೇಲೆ, ಯಾರ ಕೈಕೆಳಗೆ ಕೆಲಸ ಮಾಡುತ್ತಿದ್ದೇನೆ ಅನ್ನುವುದರ ಮೇಲೆ, ಯಾರನ್ನು ತನ್ನ ಆದರ್ಶ ಎಂದು ಹೃದಯಾಂತರಾಳದಲ್ಲಿ ಸ್ವೀಕರಿಸಿರುತ್ತಾನೆ ಎನ್ನುವುದರ ಮೇಲೆ.

* ಚಿನ್ನ ಚಿನ್ನವೆಂದು ಗುರುತಿಸಲ್ಪಡುವುದು ಕತ್ತರಿಸಲ್ಪಟ್ಟು, ಸ್ವಚ್ಛಗೊಳಿಸಲ್ಪಟ್ಟು, ಬೆಂಕಿಯಲ್ಲಿ ಸುಡಲ್ಪಟ್ಟಾಗ ಮಾತ್ರ. ಸನ್ಯಾಸಿಯು ಸನ್ಯಾಸಿಯೆಂದು ಗುರುತಿಸಲ್ಪಡುವುದು ಆತನ ವೈರಾಗ್ಯ/ವಿರಕ್ತ ಸ್ವಭಾವದಿಂದ ಮಾತ್ರ, ಕೆಚ್ಚೆದೆಯ ಮನುಷ್ಯನೆಂದು ಗುರುತಿಸಲ್ಪಡುವುದು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ವ್ಯಕ್ತಿ ಹೋರ್‍ಆಡುವುದರಿಂದ, ವ್ಯಕ್ತಿ ಅತ್ಯಂತ ಕಷ್ಟ ಅಥವಾ ಪ್ರತಿಕೂಲ ಕಾಲದಲ್ಲಿದ್ದಾಗ ಸುತ್ತಲಿನ ಜನ ಹೇಗೆ ಅಡೆದುಕೊಳ್ಳುತಾರೆ ಎಂಬುದರ ಮೇಲೆ ಸ್ನೇಹಿತರೋ ಅಥವಾ ವೈರಿಗಳೋ ಎಂದು ಗುರುತಿಸಲ್ಪಡುತ್ತಾರೆ.

* ಮುಪ್ಪು ಸೌಂದರ್ಯವನ್ನು ನಾಶಮಾಡುತ್ತದೆ, ಉದ್ವೇಗ ತಾಳ್ಮೆಯನ್ನು ಹಾಳುಮಾಡುತ್ತದೆ, ದುರಾಶೆ ದುರುದ್ದೇಶಪೂರಿತ ವ್ಯಕ್ತಿಯನ್ನು ಹಾಳುಗೆಡವುತ್ತದೆ, ಕೋಪವು ಸಂಪತ್ತನ್ನು ನಾಶಪಡಿಸುತ್ತದೆ, ದುಷ್ಟನ ಸೇವೆಯೆಂಬುದು ವ್ಯಕ್ತಿಯ ಒಳ್ಳೆಯತನಕ್ಕೆ ಹುಳಿಹಿಂಡುತ್ತನೆ, ಕಾಮವು ನಾಚಿಕೆಯನ್ನು ತೊಡೆದುಹಾಕುತ್ತದೆ, ಅಹಂಕಾರವು ಸರ್ವಸ್ವವನ್ನೂ ನಾಶಪಡಿಸುತ್ತದೆ.

* ಒಂಟಿಯಾಗಿ ತಿನ್ನೋದು, ಸಂಭ್ರಮಾಚರಣೆ ಮಾಡೋದು ಅಥವಾ ದೂರದೂರಕ್ಕೆ ತಿರುಗೋದನ್ನು ನಡೆಸಬಾರದು. ಎಲ್ಲರೂ ನಿದ್ದೆಮಾಡಿರುವಾಗ ಒಬ್ಬ ವ್ಯಕ್ತಿ ಮಾತ್ರ ಎಚ್ಚೆತ್ತುಕೊಂಡಿರಬಾರದು.

* ವಿಷವು ಒಬ್ಬನನ್ನು ಸಾಯಿಸಬಹುದು; ದೇಶದ್ರೋಹವು ದೇಶವನ್ನೆ ವಿನಾಶ ಮಾಡುತ್ತದೆ.

* ಸಂಸಾರಿಗಳು ಕೆಲಸ ಮತ್ತು ಪ್ರಯತ್ನಗಳಿಂದ ವಿಮುಖರಾಗಿದ್ದರೆ ಮತ್ತು ಸನ್ಯಾಸಿಗಳು ಪ್ರಾಪಂಚಿಕ ಸುಖಕ್ಕೆ ಹಾತೊರೆಯುತ್ತಿದ್ದರೆ ಅವರು ತಮ್ಮನ್ನೇ ನಾಶಪಡಿಸಿಕೊಳ್ಳುತ್ತಾರೆ.

* ಹಣದ ಅನಿವಾರ್ಯ ಅಗತ್ಯತೆ ಇರುವ ಅರ್ಹರನ್ನು ಬಿಟ್ಟು ಅಪಾತ್ರರಿಗೆ ಅದನ್ನು ಕೊಡುವುದರಿಂದ ಹಣ-ಸಂಪತ್ತು ವ್ಯರ್ಥವಾಗುತ್ತದೆ.

* ಯೋಗಿಯು ಯೋಗದ ಪರಮೋಚ್ಚ ಸ್ಥಿತಿಯಿಂದಲೂ ಯೋಧನು ಮಾತೃಭೂಮಿಗಾಗಿ ಯುದ್ಧದಲ್ಲಿ ಮಡಿಯುವುದರಿಂದಲೂ ಸ್ವರ್ಗವನ್ನು ಪಡೆಯುತ್ತಾರೆ.

* ಮೂರ್ಖನು ಆಹ್ವಾನವಿರದಿದ್ದರೂ, ತನ್ನ ಕರ್ತವ್ಯಗಳನ್ನು ಬದಿಗಿಟ್ಟು, ಇನ್ನೊಬ್ಬರ ಕಾರ್ಯಷೇತ್ರದಲ್ಲಿ ಮೂಗು ತೂರಿಸುತ್ತಾನೆ ಮತ್ತು ತನ್ನ ಸೋಲಿಗೆ ಪರರನ್ನು ಬಲಿಪಶುಗಳನ್ನಾಗಿಮಾಡುತ್ತಾನೆ.

ಮೇಲಿನ ನೀತಿಪಾಠಗಳು ಸಾರ್ವಕಾಲಿಕವಾದುದು. ವಿದುರನೇಕೆ ಹಾಗೆ ಹೇಳಿದ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಒಂದೊಂದು ನೀತಿವಾಕ್ಯಗಳನ್ನೂ ಸ್ಪಷ್ಟವಾಗಿ ಕೂಲಂಕಷವಾಗಿ ಅರ್ಥೈಸಿಕೊಂಡರೆ ಮಾತ್ರ ಅದರ ಸಾರ್ವಕಾಲಿಕತೆಯ ದರ್ಶನವಾಗುತ್ತದೆ. ಒಂದು ಉದಾಹರಣೆಯನ್ನಿ ನೋಡಿ-

“ತಿನ್ನುವಾಗ/ಊಟಮಾಡುವಾಗ, ಸಂಭ್ರಮಾಚರಣೆ ಮಾಡುವಾಗ ಮತ್ತು ದೂಪಪ್ರಯಾಣದಲ್ಲಿ ಒಂಟಿಯಾಗಿರಬಾರದು” ಎಂಬುದು. ಇಂದಿನ ಕಾಲದಲ್ಲಿ ಮುಂಬೈ ಯಂತಹ ಶಹರಗಳಲ್ಲಿ ಇರುವ ಕಡಿಮೆ ಜಾಗಗಳಲ್ಲಿ ಒಬ್ಬರೇ ಕುಳಿತು ಗೋಡೆಗೆ ಮುಖಹಾಕಿ ಊಟಮಾಡುವವರಿದ್ದಾರೆ. ಬಲ್ಲವರಿಗೆ ಊಟವೂ ಒಂದು ಯಜ್ಞ. ಗೀತೆಯಲ್ಲಿ ಕೃಷ್ಣ ಹೇಳ್ತಾನೆ-

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ||

“ಸಕಲ ಜೀವಿಗಳಲ್ಲಿಯೂ ವೈಶ್ವಾನರ ಎಂಬ ಅಗ್ನಿಯ ರೂಪದಲ್ಲಿ ನಾನಿದ್ದೇನೆ. ನಾಲ್ಕುವಿಧದ ಅನ್ನವನ್ನು ನಾನು ಜೀರ್ಣಿಸುತ್ತೇನೆ, ಕರಗಿಸುತ್ತೇನೆ.”

ಉದರದೊಳಗೆ ದುರ್ಬಲ ಗಂಧಕಾಮ್ಲದ ರೂಪದಲ್ಲಿ ಭಗವಂತನೇ ಸನ್ನಿಹಿತನಾಗಿರುತ್ತಾನೆ. ಅವನಿಗೆ ಹೇಗೆ ಅನ್ನವನ್ನು ಅರ್ಪಿಸಬೇಕೆಂಬುದನ್ನು ನಾವು ತಿಳಿದುಕೊಳ್ಳಬೇಕು. It is merely a science, if you eat alone in the public, others may feel they are not fed or sitting at home if you eat alone your mind will accumulate much unwanted things. Similarly if you celebrate alone it is not a celebration! If you are traveling far alone, you may need some kind help at some extent. Heart & mind are indirectly connected through nerve network, and Newton’s law ‘actions & reactions are equal & opposite” applies here. Brain & heart collectively reacts to you actions; sometimes you may become fully emotional, whether it is pleasure or grief. That may lead to failure of heart. To overcome, you must be accompanied by someone better known to you.

ಇನ್ನೊಂದು ಉದಾಹರಣೆ ನೋಡಿ- ಎಲ್ಲರೂ ಮಲಗಿರುವಾಗ ವಿದ್ಯಾರ್ಥಿ ಅವರ ಮಧ್ಯೆ ಅದೇ ಪ್ರದೇಶದಲ್ಲಿ ಓದಲು ಯತ್ನಿಸಿದರೆ ಅವನ ತಲೆಯೊಳಗೆ ಮಲಗಿ ನಿದ್ರಿಸುವ ಸುಖದ ಕನಸುಗಳೇ ಮೂಡುತ್ತವೆ. ಅವನು ಓದಿನಿಂದ ವಿಮುಖನಾಗುತ್ತಾನೆ. ಅಥವಾ ಎಲ್ಲರೂ ನಿದ್ದೆಮಾಡುತ್ತಿರುವಾಗ ಅದೇ ಸ್ಥಳದಲ್ಲಿ ಒಬ್ಬ ಎದ್ದು ಸದ್ದುಮಾಡುವುದರಿಂದ ಉಳಿದವರಿಗೆ ನಿದ್ರಾ ಭಂಗವಾಗುತ್ತದೆ; ಅದರಿಂದ ಅವರು ಕೋಪಗೊಳ್ಳಬಹುದು.

ಇಂದು ಶಾಸ್ತ್ರಗಳನ್ನೆಲ್ಲ ನಮ್ಮ ನೇರಕ್ಕೆ ನಾವು ಬದಲಾಯಿಸಿಕೊಳ್ಳಲು ಮುಂದಾಗಿದ್ದೇವೆ. ಅವುಗಳಲ್ಲಿನ ಹುರುಟು-ತಿರುಳುಗಳ ಬಗ್ಗೆ ನಮಗೆ ಅರಿವಿಲ್ಲ. ವಿದುರನ ಹೇಳಿಕೆಗಳಲ್ಲಿ ಉತ್ತಮರಲ್ಲದವರು ನಡೆದುಕೊಳ್ಳುವ ರೀತಿಯ ಹೇಳಿಕೆಗಳು ತೊನೆಯಪ್ಪನಿಗೆ ಹೇಗೆ ಸರಿಹೊಂದುತ್ತವೆ ಎಂದು ನೋಡಿ.

ತಾನು ತಪ್ಪೇ ಮಾಡಿಲ್ಲ ಎಂದು ಬೊಗಳೆ ಬಿಡುವ ತೊನೆಯಪ್ಪನವರನ್ನು ಮತ್ತು ಅವರ ಕುಳ್ಳ ಬಾವನನ್ನೂ ಕೆಲವು ಪ್ಯಾಟರ್ನಿಟಿ ತಲಶ್ ಗೆ ಈಡುಮಾಡಬಹುದು; ಆಗ ಸತ್ಯಾಸತ್ಯತೆ ಗೊತ್ತಾಗುತ್ತದೆ. ಅದೂ ಹಾಗಿರಲಿ, ಇಬ್ಬರನ್ನೂ ನಾರ್ಕೋ ಅನಲಿಸಿಸ್ [ಮಂಪರು ಪರೀಕ್ಷೆ]ಗೆ ಒಳಪಡಿಸಿದರೂ ಸಾಕು; ಹಾವಾಡಿಗ ಮಠದಲ್ಲಿ ನಡೆಯುತ್ತಿರುವ ಹಲವು ಅವ್ಯವಹಾರ ಮತ್ತು ಅನಿತಿಕ ವ್ಯವಹಾರಗಳ ಗುಟ್ಟುಗಳು ಬಹಿರಂಗಗೊಳ್ಳುತ್ತಚೆ. ಶ್ರೀಮಜ್ಜಗ್ಗ ಅದಕ್ಕೆ ತಯಾರಾಗಬೇಕು.

ಈ ಶ್ರೀಮಜ್ಜಗ್ಗ ಸಾವಿರಾರು ಕೋಟಿ ಇರುವುದರಿಂದ ಬದುಕಿಕೊಂಡಿದ್ದಾನೆಯೇ ಹೊರತು ಬೇರೇನೂ ಅಲ್ಲ. ಪರಂಪರೆಯ ಮೂಲ ಗುರುವಿನ ಹೆಸರು ಬಳಸಿಕೊಂಡು, ಅವರ ಹೆಸರಿಗಿರುವ ಮೌಲ್ಯದಿಂದ ಇಂತವರೆಲ್ಲ ಹೊಟ್ಟೆಹೊರೆದುಕೊಳ್ಳುತ್ತಿದ್ದಾರೆ. ಸದಾ ತಣ್ಣನೆಯ ತಲೆಬಿಸಿಯಿಲ್ಲದ ವಾತಾವರಣದಲ್ಲಿ ಮೃಷ್ಟಾನ್ನ ಉಂಡುಕೊಂಡು, ಮಂದಗಮನೆಯರ ಮೈಮೇಲೆ ಕೈಯಾಡಿಸಿಕೊಂಡು, ಆಡಂಬರದ ಪೂಜೆಗಳನ್ನು ಢಾಂಬಿಕವಾಗಿ ನಡೆಸುತ್ತ ಹಾಯಾಗಿದ್ದಾರೆ.

ಇವರನ್ನೆಲ್ಲ ಮಟ್ಟಹಾಕಬೇಕಾದರೆ ಸಮಾಜದಲ್ಲಿ ಜನಜಾಗೃತಿಯಾಗಬೇಕಿದೆ. ಜಜಾಗೃತಿಗೆ ಅವಕಾಶವಿರದಂತೆ ಖಾಸಗೀ ಚಾನೆಲ್ ಗಳು ಮತ್ತು ಇಮ್ಮಡಿ ವಿಶ್ವೇಶ್ವರಯ್ಯನ ಪತ್ರಿಕೆಯಂತಹ ಒಂದೆರಡು ಪೇಪರುಗಳು ಇವುಗಳನ್ನೆಲ್ಲ ಗುತ್ತಿಗೆಯ ಆಧಾರದಲ್ಲಿ ಹಿಡಿದು ಕಚ್ಚೆಶ್ರೀಗಳ ಪೂಜೆ-ಪ್ರವಚನಗಳೆ ಸದಾ ಕಾಣುತ್ತಿರುವಂತೆ ವ್ಯವಸ್ಥಿತವಾದ ಪಿತೂರಿಯನ್ನು ನಡೆಸಿಕೊಂಡಿದ್ದಾರೆ. ಅದನ್ನೆಲ್ಲ ನೋಡುತ್ತಿರುವ ಹಳ್ಳಿಗರಲ್ಲಿ ಶೋಭರಾಜಾಚಾರ್ಯನ ಅಸಲೀ ಮುಖ ಬಹಿರಂಗಗೊಳ್ಳೋದನ್ನು ಅವರು ಒಪ್ಪಲು ತಯಾರಾಗದಷ್ಟು ಮಾನಸಿಕ ಬೋಧೆ ಕುಳಿತುಬಿಟ್ಟಿದೆ! ಹೆಂಗಳೆಯರಿಗೆ ಹಾರುವಾಗಲೂ ಈ ಹಾವಾಡಿಗ ಇದೇ ರೀತಿ ಬ್ರೇನ್ ವಾಷ್ ಮಾಡುತ್ತಿದ್ದ ಎನ್ನಬಹುದು.

ತನ್ನ ವಿರೋಧಿಗಳು ಕೇವಲ ಐವತ್ತರಿಂದ ಎಪ್ಪತ್ತು ಜನ ಇದ್ದಾರೆ, ಅವರಿಗೆ ಮಠದ ಆಸ್ತಿ ಬೇಕಾಗಿದೆ, ಹೀಗಾಗಿ ತನ್ನನ್ನು ಪೀಠದಿಂದ ಕೆಳಗಿಳಿಸಲು ಸಂಚುಮಾಡಿದ್ದಾರೆ, ಷಢ್ಯಂತ್ರ ಮಾಡಿದ್ದಾರೆ ಎಂದೆಲ್ಲ ಹಲುಬುತ್ತಲೇ ಇರುವ ಢೋಂಗಿಗೆ ತಾನು ಎಂತಹ ಷಡ್ಯಂತ್ರಗಳಿಂದ ಇಷ್ಟೊಳ್ಳೆಯ ಸಮಾಜದ ಅಷ್ಟೂ ಜನರಿಗೆ ನಾಮ ಹಾಕಿದೆ ಅನ್ನೋದು ನೆನಪಿಗೆ ಬರುತ್ತಿಲ್ಲ. ಇಂತಹ ಸಮಾಜ ದ್ರೋಹಿಗಳು ಒಬ್ಬರಿಗೆ ವಿಷವುಣಿಸುತ್ತಿಲ್ಲ; ಇಡೀ ಸಮಾಜಕ್ಕೆ ವಿಷವುಣಿಸುತ್ತಿದ್ದಾರೆ.

ಇದನ್ನೆಲ್ಲ ಸಮಾಜದ ಸಂಬಂಧಪಟ್ಟ ಎಲ್ಲರಿಗೂ ವಿವರವಾಗಿ ತಿಳಿಸುವ ಜಾಗೃತ ದಳವೊಂದರ ಅಗತ್ಯ ಕಾಣುತ್ತಿದೆ. ರಕ್ಷಣೆಯನ್ನು ಪಡೆದು ಹಳ್ಳಿಹಳ್ಳಿಗೆ ತೆರಳಿ ಜನರಿಗೆ ಸಚಿತ್ರ ವಿವರಣೆಗಳನ್ನು ನೀಡಬೇಕು. ವೀಡಿಯೋ ತೋರಿಸಬೇಕು. ಆಗ ಕೆಲವರಾದರೂ ಬುದ್ಧಿ ತಿಳಿದು ತೊನೆಯಪ್ಪನನ್ನು”ಅಭೂತಪೂರ್ವ ಮೆರವಣಿಗೆ’ಯಲ್ಲಿ ’ಮಾವನ ಮನೆ’ಗೆ ಕಳಿಸಲು ಸಿದ್ಧರಾಗಬಹುದು.

ಒಂದೂರಲ್ಲಿ ಅನಾದಿಕಾಲದ ಮಹಿಷಾಸುರಮರ್ದಿನಿಯ ದೇವಸ್ಥಾನವೊಂದಿತ್ತು. ಗ್ರಾಮದ ಜನರೆಲ್ಲ ದಿನನಿತ್ಯ ಪೂಜೆ ಪುನಸ್ಕಾರ ನಡೆಸುತ್ತಿದ್ದರು. ದೇವರಂತಹ ಅರ್ಚಕರು ದೇವರನ್ನು ಮಾತನಾಡಿಸುವಂತಿದ್ದರು. ಬರುಬರುತ್ತ ಹೇಗೋ ವಿಗ್ರಹ ಶಿಥಿಲಾವಸ್ಥೆಗೆ ತಲುಪಿ ಒಂದೆಡೆಗೆ ಸ್ವಲ್ಪ ಮುಕ್ಕಾಗಿರೋದು ಕಂಡಿತು. ಜನರೆದುರು ವಿಷಯ ಮಂಡಿಸಿದರು.. ಜನರೆಲ್ಲ ಸಭೆ ಸೇರಿದರು.

ಸಭೆಯಲ್ಲಿ ಈಗಿರುವ ವಿಗ್ರಹವೇ ದೇವರು, ಅದನ್ನು ತೆಗೆದು ಹೊಸದನ್ನು ಪ್ರತಿಷ್ಠಾಪಿಸಿದರೆ ಅಲ್ಲಿ ದೇವರಿರುವುದಿಲ್ಲ ಎಂಬ ಭಾವನೆ ತಳೆದವರದ್ದು ಒಂದು ಗುಂಪು. ಆಗಮ ಶಾಸ್ತ್ರದಂತೆ ಭಿನ್ನವಾದ ವಿಗ್ರಹವನ್ನು ವಿಸರ್ಜಿಸಿ ನವವಿಗ್ರಹವನ್ನು ಸ್ಥಾಪಿಸಬೇಕೆನ್ನುವವರದ್ದು ಇನ್ನೊಂದು ಗುಂಪು.

ಬಹಳಕಾಲ ಇವೆರಡೂ ಗುಂಪುಗಳು ತಾವು ಹೇಳಿದ್ದೇ ಸರಿಯೆನ್ನಿತ್ತಿದ್ದರು. ಹಾಗಾದರೆ ಯಾವ ಗುಂಪು ಹೇಳಿದ್ದು ಸರಿ? ವಿಗ್ರಹ ಊನಗೊಂಡಿದ್ದರೂ ಅದನ್ನೇ ನೋಡುತ್ತ ಪೂಜಿಸುವುದು ಸರಿಯೋ? ಹೊಸ ವಿಗ್ರಹವನ್ನಿಟ್ಟು ಪೂಜಿಸುವುದೋ? ಇಲ್ಲೊಂದು ವಿಷಯವನ್ನ್ನು ಗಮನಿಸಿ-ಹಲವರಿಗೆ ಆ ಅಮ್ಮನವರ ವಿಗ್ರಹವನ್ನು ನೋಡಿ ನೋಡಿ ಅದನ್ನು ನೋಡದೆ ಇರಲಾರದಷ್ಟು ಭಾವನೆ ಬೆಳೆದುಬಿಟ್ಟಿತ್ತು; ಅದನ್ನು ವ್ಯಾಮೋಹ ಎನ್ನುತ್ತಾರೆ ಪ್ರಾಜ್ಞರು. ಈ ಲೋಕದ ಯಾವುದರ ಮೇಲೂ ಅತಿಯಾದ ವ್ಯಾಮೋಹ ಒಳ್ಳೆಯದಲ್ಲ ಎನ್ನುತ್ತದೆ ಧರ್ಮ.

ಮುಂದೆ ಯಾವುದೋ ಅನ್ಯ ಗ್ರಾಮದ ಪಂಡಿತರೊಬ್ಬರು ಆ ಗ್ರಾಮಕ್ಕೆ ಬಂದು ತಿಳಿಹೇಳಿ, ಹಳೆಯ ವಿಗ್ರಹವನ್ನು ವಿಸರ್ಜಿಸಿ ನೂತನ ವಿಗ್ರಹವನ್ನು ಪ್ರತಿಷ್ಠಾಪಿಸಿ, ಎಲ್ಲರೂ ಸಂತೋಷದಿಂದ ಪೂಜೆ-ಪುನಸ್ಕಾರಗಳನ್ನು ಮುಂದುವರಿಸಿದರು ಎಂಬಲ್ಲಿಗೆ ಉಪಕತೆ ಮುಗಿಯಿತು.

ಸದ್ಯಕ್ಕೆ ಮಠದಲ್ಲಿಯೂ ಇದೇ ಅವಸ್ಥೆ ಕಾಣುತ್ತಿದೆ. ವಿಷಯವನ್ನು ವಿಷಯವನ್ನಾಗಿ ನೋಡದೆ ವ್ಯಾಮೋಹದ ಕಣ್ಣಿನಿಂದ ನೋಡುವವರು ಕೆಲವರು. ಅವರ ವ್ಯಾಮೋಹ ಇನ್ನಷ್ಟು ಹೆಚ್ಚುವಂತೆ ಮಾಡುತ್ತ ಕಾಂಚಾಣ ಕುದುರಿಸಿಕೊಳ್ಳುವ ನಡುವಿರುವ ಗೂಂಡಾಗಳು ಹಲವರು. ಅವರಿಗೆಲ್ಲ ಮಠ ಅಥವಾ ಪೀಠ ಮುಖ್ಯವಲ್ಲ; ಕೇವಲ ವ್ಯಕ್ತಿ ಮುಖ್ಯ. ಹೀಗಾಗಿಯೇ ಹಾಗಾಗಿದೆ;ವ್ಯವಹಾರ ಹಾಳಾಗಿದೆ. ಇದನ್ನೆಲ್ಲ ವಿದುರನ ನೀತಿಯಿಂದ ಅವಲೋಕಿಸಿದರೆ ಅಂಧಕಾರದಿಂದ ಕೆಲವರಾದರೂ ಹೊರಬಂದಾರು.

Thumari Ramachandra

source: https://www.facebook.com/groups/1499395003680065/permalink/1745548202398076/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s