ಪುಗಸಟ್ಟೆ ಪೇಪರು ಹಂಚಿದರೆ ಮಾಡಿದ ಗುನ್ನೆಯಿಂದ ಪಾರಾಗಲು ಸಾಧ್ಯವಿಲ್ಲ

ಪುಗಸಟ್ಟೆ ಪೇಪರು ಹಂಚಿದರೆ ಮಾಡಿದ ಗುನ್ನೆಯಿಂದ ಪಾರಾಗಲು ಸಾಧ್ಯವಿಲ್ಲ

ಪಂಚಾಂಗ ಸುಟ್ಟರೆ ಗ್ರಹಚಾರ ಹೋಗೋದಿಲ್ಲ ಅನ್ನೋದು ಹಳೇ ಗಾದೆ. ಯಾವುದೋ ಒಬ್ಬನಿಗೆ ಗ್ರಹಚಾರ ಕಾಡಿತ್ತಂತೆ. ಗ್ರಹಚಾರದ ಸಮಯವನ್ನು ಲೆಕ್ಕಹಾಕೋದಕ್ಕೆ ಬಳಸೋದು ಪಂಚಾಂಗ ತಾನೆ? ಪಂಚಾಂಗವೇ ಇಲ್ಲದೆ ಹೋದರೆ ಗ್ರಹಚಾರ ಲೆಕ್ಕಾಹಾಕೋ ಪ್ರಮೇಯನೇ ಇರೋದಿಲ್ಲ ಎಂದು ಯೋಚಿಸಿದ ಅವ ಪಂಚಾಂಗವನ್ನೇ ಸುಟ್ಟು ಹಾಕಿದನಂತೆ.

ಹೋರಿ ಸ್ವಾಮಿ ತೊನೆಯಪ್ಪನ ಕತೆಗೂ ಪಂಚಾಂಗ ಸುಟ್ಟವನ ಕತೆಗೂ ಒಂದು ಕೋನದಿಂದ ಮಾತ್ರ ಹೋಲಿಕೆಯಿದೆ. ಪಂಚಾಂಗ ಸುಟ್ಟಿದ್ದರಿಂದ ಅವನ ಗ್ರಹಚಾರವೇನೂ ಹೋಗೋದಿಲ್ಲ ಅಲ್ಲವೇ? ಅದರಂತೆ ಪುಗಸಟ್ಟೆ ಪೇಪರು ಹಂಚಿದರೆ ಮಾಡಿದ ಗುನ್ನೆಯಿಂದ ಪಾರಾಗಲು ಸಾಧ್ಯವಿಲ್ಲ.

ಹಾಗಾದರೆ ಪುಗಸಟ್ಟೆ ಪೇಪರು ಹಂಚಿದವರು ಯಾರು? ಹಳದೀ ತಾಲಿಬಾನ್ ಬಳಗದವರು. ಸೂಜಿ ಭಟ್ಟ ಮತ್ತವನ ಮಗ ಊರಕಡೆಗಳಲ್ಲಿ ಒಂದು ಬೆಳಿಗ್ಗೆ ಇಮ್ಮಡಿ ವಿಶ್ವೇಶ್ವರಯ್ಯನ ಪತ್ರಿಕೆಯನ್ನು ಹಂಚಿದ್ದೇ ಹಂಚಿದ್ದು. ತೊನೆಯಪ್ಪನ ಬಳಗದಿಂದ ಪೇಪರಿಗೆ ಗುತ್ತಿಗೆ ಹೋಗಿದೆ! ಓದುಗರೇ ಹೆಚ್ಚಿಗೆ ಇಲ್ಲದೆ ತೊಳಲಾಟದಲ್ಲಿರುವ ಪತ್ರಿಕೆಗೆ ತೊನೆಯಪ್ಪನ ಗುತ್ತಿಗೆಯೆ ದೊಡ್ಡ ಆರ್ಡರು! ಹೊರಗಿನಿಂದ ಸಿದ್ದಗಂಗೆ ಸ್ವಾಮೀಜಿಯವರ ಚಿತ್ರ ಹಾಕಿ ಒಳಗೆ ಬರೆದಿದ್ದು ಮಾತ್ರ ತೊನೆಯಪ್ಪನ ಕಚ್ಚೆ ಸಾಧನೆಗಳ ಕತೆ!

ಅಷ್ಟೇ ಅಲ್ಲ, ತನ್ನ ಸಾಧನೆಗಳನ್ನು ಕಂಡು ಸಹಿಸಲಾಗದ ಬೇರೆ ಒಂದಿಬ್ಬರು ಮಠಾಧೀಶರು ಬೇಕಂತಲೆ ಷಡ್ಯಂತ್ರ ನಡೆಸಿ ಕೇಸು ಹಾಕಿಸಿದ್ದಾರೆ ಎಂದು ಅವರ ಭಾವಚಿತ್ರಗಳನ್ನೆಲ್ಲ ಹಾಕಿಸಿದ್ದಾನೆ. ಯಾಕೆ? ಬೇರೆ ಮಠಾಧೀಶರಿಗೆಲ್ಲ ಮಾಡೋದಕ್ಕೆ ಬೇರೆ ಕೆಲಸಗಳಿಲ್ಲವೇ? ತೊನೆಯಪ್ಪನ ಕಾಲೆಳೆಯುವುದೇ ಅವರ ಕೆಲಸವೇ? ಅವರೇನಾದರೂ ಕೋರ್ಟಿಗೆ ಹೋದರೆ ತೊನೆಯಪ್ಪನ ಮೇಲೆ ಇನ್ನೊಂದೆರಡು ಕೇಸ್ ಗ್ಯಾರಂಟಿ. ಜೊತೆಗೆ ಇಮ್ಮಡಿಯ ಮೇಲೂ ಕೇಸ್ ಹಾಕಬಹುದು.

ಆರ್.ಎಸ್.ಎಸ್. ನವರಿಗೆ ತಾನು ಮಹಾನ್ ಜಗದ್ಗುರು ಎಂಬಂತೆ ಪೋಸು ಕೊಡುತ್ತಾನೆ. ಕೆಲವು ಮಾಧ್ಯಮಗಳಲ್ಲಿ ಹಿಂದೂ ವಿರೋಧಿಗಳು ಸೇರಿಕೊಂಡು ಷಡ್ಯಂತ್ರ ನಡೆಸಿದ್ದಾರೆ ಎಂದು ಹಾಕಿಸಿದ್ದಾನೆ. ಸಮಾನಶೀಲ ಕಾವಿಗಳನ್ನೆಲ್ಲ ಸೇರಿಸಿ, ಸಂಘಕಟ್ಟಿ ದಕ್ಷಿಣದ ರಾಂಪಾಲನಾಗಿದ್ದಾನೆ. ಅಲ್ಲಿಗೆ ಬಂದ ಕಳ್ಳ ಕಾವಿಗಳೂ ಸಹ ತೊನೆಯಪ್ಪನ ಹಣದ ಥೈಲಿ ಅಲುಗಾಡಿದ ಮೇಲೆಯೇ ಬಂದಿದ್ದರು. ಅತ್ತಿಬೆಲೆ, ಸೂಲಿಬೆಲೆ, ಮಂಚನಬೆಲೆಗಳ ಕೆಲವರನ್ನು ಗುತ್ತಿಗೆ ಆಧಾರದಲ್ಲಿ ಮಾತನಾಡುವುದಕ್ಕೆ ಒಪ್ಪಿಸಿದ್ದಾನೆ. ಹೋರಿಸ್ವಾಮಿ ಹೂಸು ಹೊಡೆದರೂ “ಮಹಾಪ್ರಸಾದ” ಎಂದು ಅವರು ಹೇಳುತ್ತಿರಬೇಕು-ಹಾಗೆ ಮಾಡಿಕೊಂಡಿದ್ದಾನೆ.

ಜಾಲತಾಣಗಳಲ್ಲಿ ತೊನೆಯಪ್ಪನ ಪರವಾಗಿ ತನ್ನ ಬೇನಾಮಿ ಅಕೌಂಟಿನಿಂದ ಹೊಗಳಿ ಬರೆದ ಭಟ್ಟಂಗಿಗಳು ಹಲವರಿದ್ದಾರೆ; ಎಲ್ಲೆಡೆಗೂ ಕಾಂಚಾಣಂ ಕಾರ್ಯಸಿದ್ಧಿಃ ಎಂಬಂತಾಗಿದೆ. ಇವರೆಲ್ಲ ದೇಶಭಕ್ತರು. ಯಾಕೆ ಸಂಘ ಇಂತವರನ್ನೆಲ್ಲ ಒದ್ದೋಡಿಸುವುದಿಲ್ಲ? ತಾಲತಾಣಗಳಲ್ಲಿ ಹೋರಿಯ ನೂರಾರು ಬೇನಾಮಿ ಅಕೌಂಟುಗಳಿವೆ. ತುಮರಿಯ ಬರಹಗಳನ್ನು ಹಾಕಿದ ತಕ್ಷಣ ಕದ್ದು ಓದೋದು ತೊನೆಯಪ್ಪನೇ. ಏನೂ ಮಾಡಲಾಗದ್ದಕ್ಕೆ ಹಲ್ಲು ಕಡಿದುಯುತ್ತ ಶತಪಥ ತಿರುಗುತ್ತಾನೆ,

ಹೋರಿ ಬಳಗ ಕೆಲವು ಬಕೆಟ್ ಚಾನೆಲ್ ಗಳನ್ನೂ ಇಮ್ಮಡಿಯ ಪತ್ರಿಕೆಯನ್ನೂ ಗುತ್ತಿಗೆ ಹಿಡಿದಿದೆ. ಹಿಂದೆ ಕುರಿವಾಡೆಯಲ್ಲಿದ್ದಾಗಲೂ ಇದೇ ರೀತಿ ಆಗಿತ್ತು. ಅಷ್ಟೇ ಅಲ್ಲ ನೊಂದವರು ಯಾವ ಮಾಧ್ಯಮಗಳಲ್ಲೂ ಏನನ್ನೂ ಹೇಳದಂತೆ ಮಾಡಿಸಲಾಗಿತ್ತು. ತಾನು ಜಗದ್ಗುರು ತನ್ನ ಮರ್ಯಾದೆಗೆ ಭಂಗ ಬರುತ್ತದೆ ಎಂದ ಹೋರಿ ತೊನೆಯಪ್ಪನ ಮಾತನ್ನೇ ಬಹಳಜನ ನಂಬಿದರು.

ಅಷ್ಟಾದರೂ ಒಂದು ಚಾನೆಲ್ ಮಾತ್ರ ನೊಂದವರ ಮಾತನ್ನು ಜನರಿಗೆ ತಲುಪಿಸುವಲ್ಲಿ ಅಷ್ಟಿಷ್ಟು ಕೆಲಸ ಮಾಡಿತು. ಅದನ್ನು ತನ್ನ ಭಕ್ತರು ನೋಡಿ ತನನ್ನು ಧಿಕ್ಕರಿಸಬಹುದು, ತನ್ನ ಗುಟ್ಟು ರಟ್ಟಾಗಬಹುದು ಎಂದರಿತ ತೊನೆಯಪ್ಪ, ಸ್ಥಳೀಯ ಶಾಸಕನ ಮೂಲಕ ಘಟ್ಟದ ಕೆಳಗಿನ ಹಲವು ತಾಲೂಕುಗಳಲ್ಲಿ ಕೇಬಲ್ ನಲ್ಲಿ ಆ ಚಾನೆಲ್ ಬರದಂತೆ ನೋಡಿಕೊಂಡ!

ಇದುವರೆಗೆ ಹಾವಾಡಿಗ ಮಠದಿಂದ ಕಚ್ಚೆಶ್ರೀಗಳ ಕಚ್ಚೆಹರುಕುತನದ ಕೇಸುಗಳನ್ನು ಮುಚ್ಚುವ ಯತ್ನದಲ್ಲಿ ಹೊರಹರಿದುಹೋದ ಭಕ್ತರ ಹಣ ನೂರಾರು ಕೋಟಿ! ನಿದ್ದಣ್ಣನಿಗೆ ಐವತ್ತು. ಆಮೇಲೆ ಅಡ್ಡಗೇಟುಗಳು, ತೀರ್ಮಾನಿಸುವವರು, ನಡುವೆ ಕೊಂಡಿಯಾಗಿರುವ ಸಂಬಂಧಿಕರು ಎಲ್ಲರಿಗೂ ಕೋಟಿಗಳಲ್ಲೆ ಸಂದಾಯವಾಗಿದೆ.

ನಮ್ಮ ಭಾತ್ಮೀದಾರರಾದ ಗುಮ್ಮಣ್ಣ ಹೆಗಡೇರು ಘಟ್ಟದ ಕೆಳಗೆ ಉತ್ತರದಲ್ಲಿ ಬಸ್ಸಿನಲ್ಲಿ ಓಡಾಡುತ್ತಿರುವಾಗ ಕೆಲವು ಮಂದಿ ಸಮಾಜದವರು ಮಾತುಕತೆ ನಡೆಸುತ್ತಿದ್ದುದನ್ನು ಕೇಳಿಸಿಕೊಂಡರು. ಎಲ್ಲೆಲ್ಲಿಗೋ ಹೊರಳಿದ ಮಾತು ಕೊನೆಗೆ ಬಂದು ನಿಂತಿದ್ದು ತೊನೆಯಪ್ಪನ ಕತೆಗೆ ಅಂತ ಹೇಳಿದರು. “ಕಾಲ ಬಹಳ ಕೆಟ್ಟೋಗಿದೆ. ಇಲ್ಲವಾಗಿದ್ರೆ ಇಂತಾ ಗುರುಗಳಮೇಲೆ ಆ ….ಳೆ ಕೇಸು ಹಾಕ್ತಾಳೆ ಅಂತಂದ್ರೆ ಜಗತ್ತಿನ ವಿನಾಶಕ್ಕೆ ಹೆಚ್ಚು ಕಾಲ ಇಲ್ಲವೇನೋ” ಅಂತೆಲ್ಲ ಮಾತಾಡ್ತಿದ್ರಂತೆ. ಅವರ ಬಾಯಲ್ಲಿ ನೊಂದ ಮಹಿಳೆಯ ಬಗೆಗೆ ಅವಾಚ್ಯ ಪದಗಳು ಬಂದಿದ್ದು ನೋಡಿ ಹೆಗಡೇರಿಗೆ ಬಹಳ ಬೇಸರವಾಯಿತಂತೆ. ಹಾಗಂತ ಹೆಗಡೇರು “ನಿಮ್ಮ ಸ್ವಾಮಿ ಕಚ್ಚೆಹರುಕ” ಅಂತೇನಾದ್ರೂ ಹೇಳಹೊರಟರೆ ಅಲ್ಲೆ ಅವರ ಶ್ರಾದ್ಧವಾಗುತ್ತಿತ್ತು!

ತೊನೆಯಪ್ಪ ಇರುವೆ ಬಿಟ್ಟುಕೊಂಡ ವಿಷಯ ಗೊತ್ತಿದೆಯಲ್ಲ? ಜಾಲತಾಣಗಳಲ್ಲಿ ಅವನ ಬಹುದೊಡ್ಡ ಪಡೆಯೇ ಇದೆ. ಚಾನೆಲ್ ಒಂದಕ್ಕೆ ಅವರು ಹಾಕಿರುವ ಕಾಮೆಂಟ್ ಗಳಲ್ಲಿ ಅವರ ’ಗುರು’ವಿನ ಸಂಸ್ಕಾರ ಢಾಳಾಗಿ ಕಾಣುತ್ತದೆ. ಜಾಲತಾಣದಲ್ಲಿ ತನ್ನನ್ನು ಬೆಂಬಲಿಸಲು ತೊನೆಯಪ್ಪ ತರಬೇತಿಯನ್ನು ನಡೆಸಿದ್ದೂ ತಿಳಿದುಬಂದಿದೆ. ರಕ್ಷಣಾಪಡೆಯ ಹೆಸರಿನಲ್ಲಿ ಗೂಂಡಾಗಳಿದ್ದಾರೆ. ಹಗಲೂರಾತ್ರಿ ಪಹರೆ ಕಾಯುತ್ತಾರೆ. ಏಕಾಂತ ಸೇವೆಗೆ ಬರುವವರನ್ನು ಬಿಟ್ಟು ಎಲ್ಲರನ್ನೂ ಹದ್ದಿನಕಣ್ಣಿಟ್ಟು ನೋಡುತ್ತಾರೆ.

ತೊನೆಯಪ್ಪನ ಸನ್ನೆಯ ಮೇಲೆಯೇ ಎಲ್ಲವೂ ನಡೆಯುತ್ತದೆ; ಆಮೇಲೆ ಕೇಳಿದರೆ, “ಮಠಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ”ಎಂಬ ಸ್ಪಷ್ಟೀಕರಣವನ್ನು ತಮ್ಮನಕಲ್ಲು ತಂಗೀಕಲ್ಲುಗಳು ನೀಡುತ್ತವೆ. ಹಾಗಾದರೆ ಶಿಷ್ಯರು ಎನ್ನಿಸಿದವರು ಬೀದಿನಾಯಿಗಳಿಗಿಂತ ಅತಿಯಾಗಿ ಆಡುತ್ತಿರುವಾಗ ’ಗುರು’ವೆನಿಸಿದವನಿಗೆ ಆ ಕಡೆಗೆ ಗಮನವೇ ಇಲ್ಲವೇ? ಇಲ್ಲ, ಇದೆಲ್ಲ ಬೇಕಂತಲೇ ಬೂಟಾಟಿಕೆ. ಎಲ್ಲವೂ ಗೊತ್ತಿದ್ದೇ ನಡೆಸುವ ನಾಟಕ.

ಈ ವಿಷಯಗಳ ಗಾಳಿ ಸುದ್ದಿ ಸಹ ಸುಳಿಯದ ಹಳ್ಳಿಗಳಲ್ಲಿ ಇನ್ನೂ ಎಷ್ಟೋ ಜನರಿಗೆ ಹಳೆಯ ಮಠ, ಗುರು, ಶಾಪ ಇದೆಲ್ಲದರ ಗುಂಗು ಹಾಗೇ ಇದೆ. ಒಂದನ್ನು ತಿಳ್ಕೊಳಿ, ಗುರು, ಪೀಠ, ಶಾಪ ಅಂತೆಲ್ಲ ಅನ್ನೋದು ಬರೇ ಸುಳ್ಳು. ಸನ್ಯಾಸಿಯಾದ ವ್ಯಕ್ತಿ ಮೂರ್ತಿರೂಪಕ್ಕೆ ಬಂದ ಕಲ್ಲಿನಂತೆ. ಮೂರ್ತಿಯಾಗುವುದಕ್ಕಿಂತ ಮೊದಲು ಅದು ಕಲ್ಲಾಗಿತ್ತು;ಶಿಲ್ಪಿಯ ಪರಿಶ್ರಮದಿಂದ ಆಕಾರ ಪಡೆದುಕೊಂಡು ಮೂರ್ತಿ ಎನಿಸಿತು.

ಮೂರ್ತಿಗಳಲ್ಲಿ ಹಲವಾರು ವಿಧಗಳಿವೆ. ಗರ್ಭಗುಡಿಯಲ್ಲಿರುವ ಮೂರ್ತಿಯೇ ಬೇರೆ, ಬಾಗಿಲು ಭಟರಾಗಿರುವ ಮೂರ್ತಿಗಳು ಬೇರೆ. ಬೇಲೂರಿನಂತಹ ದೇವಾಲಯಗಳಲ್ಲಿ ಶಿಲಾಬಾಲಿಕೆಗಳಿದ್ದಾವೆ-ಅವೂ ಮೂರ್ತಿಗಳೇ. “ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ”ಅಂತಾರಲ್ಲ? ಶಂಕರ ಭವತಿ ಶಿಲಾ ಆಗಬಾರದು ಅಲ್ವಾ? ಆದ್ರೆ ದೇವರು ಎಂಬುದು ಹಣ ಮಾಡೋ ಸರಕಾದರೆ ಶಂಕರನೂ ಶಿಲೆ ಅನ್ನಿಸಿಬಿಡ್ತಾನೆ.

ಶಿಲೆಯಲ್ಲಿ ದೇವರು ಸನ್ನಿಧಾನ ತಳೆಯುವುದು ಅರ್ಚಕನ ಶ್ರದ್ಧಾ-ಭಕ್ತಿ ಪುರಸ್ಸರ ಪೂಜೆಗಳಿಂದ ಅಂತಾಯ್ತಲ್ಲ? ಮಾನವ ಶರೀರದಲ್ಲಿ ಮುಮುಕ್ಷುವೊಬ್ಬ ಕಾಣುವುದು ಆಧ್ಯಾತ್ಮಿಕವಾಗಿ ಆತ ಮುನ್ನಡೆಯುವ ರೀತಿ-ನೀತಿಗಳಿಂದ ಮಾತ್ರ. ಹೊರಗಿನಿಂದ ಮುಂಡನ ಮಾಡಿಸಿಕೊಂಡು ಕಾಷಾಯ ವಸ್ತ್ರ, ಒಂದಷ್ಟು ಭಸ್ಮ,ಗಂಧ,ಕುಂಕುಮ ಇತ್ಯಾದಿಗಳನ್ನು ತೊಡೆದುಕೊಂಡು ಹಾರಗಳನ್ನು ಹಾಕಿ ಕುಳಿತುಬಿಟ್ಟರೆ ಒಳಗಿನ ತೀರದ ಲೌಕಿಕ ದಾಹ ಹೋಯಿತು ಎಂದರ್ಥವಲ್ಲ.

ಸಮಾಜದಲ್ಲಿ ಅನೇಕರಿಗೆ ಒಂದು ನಂಬಿಕೆಯಿದೆ. ಗುರುಕರಾರ್ಚಿತ ದೇವರುಗಳು. ಯಾವ ಗುರುಕರಾರ್ಚಿತ ವಿಗ್ರಹಗಳಾದರೂ ಗುರುವೆನಿಸಿದವ ಹಾದರಕ್ಕೆ ಇಳಿದುಬಿಟ್ಟರೆ ವಿಗ್ರಹಗಳಲ್ಲಿ ದೇವರು ತನ್ನ ಸನ್ನಿಧಾನವನ್ನು ತ್ಯಜಿಸಿ ಸ್ವಸ್ಥಾನಕ್ಕೆ ಹೋಗಿಬಿಡ್ತಾನೆ. ಆಗ ದಿನಕ್ಕೆ ಮೂರು ಹೊತ್ತು ಅಥವಾ ನೂರು ಹೊತ್ತು ತೊನೆಯುತ್ತ ಢಾಂಬಿಕವಾಗಿ ಆಡಂಬರದ ಪೂಜೆ ನಡೆಸುತ್ತಿದ್ದರೆ ನಂಬಿದ ಭಕ್ತರಿಗೆ ವ್ಯತ್ಯಾಸ ಕಾಣದೆ ಇರಬಹುದು, ಆದರೆ ಅದರಿಂದ ಗುರುವೆನಿಸಿದವನಿಗಾಗಲಿ ಅಥವಾ ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ.

ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ
ಸುತ್ತಿಬಂದಂತೆ ಸರ್ವಜ್ಞ

ಎತ್ತು ಗಾಣದ ನೊಗವನ್ನು ಹೊತ್ತು ಸುತ್ತುತ್ತದೆ; ಅದಿಲ್ಲದಿದ್ದರೆ ಅದಕ್ಕೆ ಯಜಮಾನನಿಂದ ಛಡಿಯೇಟು ಬೀಳುತ್ತದೆ. ಛಡಿಯೇಟಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅದು ಹಾಗೆ ಮಾಡುತ್ತಿರುತ್ತದೆಯೇ ಹೊರತು ತಾನು ಸುತ್ತುವುದರಿಂದ ಕಬ್ಬು ಅರೆದು, ಹಾಲು ಹರಿದು, ಬೆಲ್ಲ ತಯಾರಿಸಲ್ಪಡುತ್ತದೆ ಎಂಬ ಅರಿವು ಅದಕ್ಕಿರೋದಿಲ್ಲ.

ಸಮಾಜದಲ್ಲಿ ಶಾಪ, ಬಹಿಷ್ಕಾರ ಇಂತಾ ಛಡಿಯೇಟುಗಳಿಗೆ ಹೆದರಿ ಗುರು ಸೇವೆ ಎಂಬ ನೊಗವನ್ನು ಹೊತ್ತು ಕೆಲವರು ಆಧ್ಯಾತ್ಮದ ಗಾಣವನ್ನು ತಿರುಗಿಸುತ್ತಿರುತ್ತಾರೆ. ಭಕ್ತಿ-ಶ್ರದ್ಧೆ ಮತ್ತು ಜ್ಞಾನವಿಲ್ಲದ ಕೆಲಸ ಅದಾಗಿರುತ್ತದೆ. ಹಾಗೆ ನಡೆದುಕೊಳ್ಳುವವರು ಆಧ್ಯಾತ್ಮಿಕವಾಗಿ ಯಾವ ಫಲವನ್ನೂ ಪಡೆದಿಕೊಳ್ಳಲು ಸಾಧ್ಯವಾಗೋದಿಲ್ಲ. ಒಂದಷ್ಟು ದಿನ ತಂಡ ಕಟ್ಟಿಕೊಂಡು ಕುಣಿಯುತ್ತ ಜೈಕಾರ ಹಾಕುತ್ತ, ಮಠದಲ್ಲಿ ಮೃಷ್ಟಾನ್ನ ಮೆಲ್ಲುತ್ತ ಇರಬಹುದಷ್ಟೆ. ಅದು ಕ್ಷಣಿಕ.

ಇದೆಲ್ಲದರ ಪರಿವೆಯೇ ಇಲ್ಲದ ಜನ ವ್ಯಕ್ತಿ ಪೂಜೆಗೆ ನಿಂತು ಬಿಡುತ್ತಾರೆ. ವೇದಗಳಲ್ಲಿ ಹಲವು ಕಡೆ ಬ್ರಹ್ಮನ್ ಅಥವಾ ಬ್ರಹ್ಮ ಎಂಬ ಪದದ ಬಳಕೆಯಿದೆ. ಅದು ಪರಬ್ರಹ್ಮನ ಕುರಿತಾಗಿ ಹೇಳಿದ್ದು. ಪರಬ್ರಹ್ಮ ಅವನೇ? ಅಥವಾ ಅವಳೇ? ಎಂಬುದೂ ಊಹೆಗೆ ನಿಲುಕದ ಜಿಜ್ಞಾಸಾತೀತ ವಿಷಯ; ಪ್ರಾಯಶಃ ಅದು ಗೊತ್ತಾಗಿಬಿಟ್ಟರೆ ನಮ್ಮ ತೊನೆಯಪ್ಪನವರು ಅಡ್ಡಗೇಟುಗಳನ್ನು ಹಾಕಿ ಡೀಲು ಕುದುರಿಸಲು ಪ್ರಯತ್ನಿಸುತ್ತಿದ್ದರು!

ವೇದಗಳಲ್ಲಿ ಹೇಳಿದ ಪರಬ್ರಹ್ಮನನ್ನೇ ನಾವು ಗುರುವೆಂದು ಭಾವಿಸುತ್ತೇವೆ. “ಗುರುಃ ಸಾಕ್ಷಾತ್ ಪರಂಬ್ರಹ್ಮ” ಎಂಬ ಮಾತು ಹಾಗೆ ಹುಟ್ಟಿದೆ. ಪರಬ್ರಹ್ಮನ ಪ್ರತಿನಿಧಿಯಾದವ ಹೇಗೆ ವರ್ತಿಸಬೇಕು? ನಮ್ಮ ಗುಮ್ಮಣ್ಣ ಹೆಗಡೇರನ್ನೆ ತೆಗೆದುಕೊಳ್ಳಿ; ಅವರು ಶ್ರೀಮಂತರು ಮತ್ತು ಗುಣಾಢ್ಯರು. ಸಮಾಜದಲ್ಲಿ ಅವರಿಗೆ ವಿಶೇಷ ಸ್ಥಾನಮಾನವಿದೆ. ಯಾವುದೋ ಊರಿನ ಕಾರ್ಯಕ್ರಮದಲ್ಲಿ ಗುಮ್ಮಣ್ಣ ಹೆಗಡೇರು ಭಾಗವಹಿಸಬೇಕಾಗಿತ್ತು, ಅವರಿಗೆ ಹೋಗಲಾಗದ ಕಾರಣ ಮೊಮ್ಮಗನನ್ನು ಕಳಿಸುತ್ತಾರೆ.

ಹರೆಯದ ಮೊಮ್ಮಗ ಕಾರ್ಯಕ್ರಮಕ್ಕೆ ಹೋದವ ಹೇಗೆ ನಡೆದುಕೊಳ್ಳಬೇಕು? ತನ್ನಜ್ಜ ಗುಮ್ಮಣ್ಣ ಹೆಗಡೇರ ಘನತೆ ಗೌರವ, ತನ್ನ ಕುಟುಂಬದ ಘನತೆ ಇವುಗಳನ್ನೆಲ್ಲ ನೆನಪಿಟ್ಟುಕೊಂಡು ಅದಕ್ಕೆ ತಕ್ಕನಾಗಿ ನಡೆದುಕೊಳ್ಳಬೇಕು. ಬದಲಿಗೆ ಅವ ಹೋದಲ್ಲೆ ಯಾವುದೋ ಹುಡುಗಿಯನ್ನು ಚುಡಾಯಿಸಲು ಆರಂಭಿಸಿದರೆ ಆಗ ಊರ ಜನರೆಲ್ಲ ಅವನನ್ನು ಓಡಿಸಬೇಕಾಗಿ ಬರಬಹುದು.

[ಸತ್ಯನಾರಾಯಣ ಕತೆ ಮಾಡಿಸಲು ಹೋದ ಭಟ್ಟ ಅಲ್ಲಿರುವ ಹೆಂಗಸರ ಜೊತೆಗೆ ಹೇಗೆ ನಡೆದುಕೊಳ್ಳಬೇಕು? ಸೇರಿದ ಹೆಂಗಸರಲ್ಲಿ ಯಾರು ಸಿಗುತ್ತಾರೆ ಎಂದು ನೋಡಬೇಕು, ಸಮಯನೋಡಿ ಸಂಚುಮಾಡಿ ಅವರನ್ನು ಹಿಂಬಾಲಿಸಿ ಹಿಡಿಯಬೇಕು. ಕೊನೆಗೆ ಧರ್ಮದೇಟುಗಳು ಬೀಳುವುದೆಂದು ತಿಳಿದಾಗ ಊರನ್ನೇ ಬಿಡಬೇಕು-ಇದು ಸನ್ಮಾನ್ಯ ಕಚ್ಚೆಶ್ರೀ ಹೋರಿಸ್ವಾಮಿಯ ಹೋರಿ ಚಿಕ್ಕಪ್ಪ ತೋರಿಸಿಕೊಟ್ಟ ಪಾಠ.]

ಪರಬ್ರಹ್ಮನನ್ನು ಪ್ರತಿನಿಧಿಸುತ್ತೇನೆ ಎಂಬ ವ್ಯಕ್ತಿ ಹಾಗಾದರೆ ಹೇಗೆ ನಡೆದುಕೊಳ್ಳಬೇಕು? ಅತ್ಯಂತ ಆದರ್ಶಮಯ ಗುಣಗಳನ್ನು ಹೊಂದಿರಬೇಕು. ರಾಗ-ದ್ವೇಷಗಳಿಂದ ಮುಕ್ತನಾಗಿರಬೇಕು.[ಅರಿಷಡ್ವರ್ಗಗಳಿಂದ ಮುಕ್ತನಾಗಿರಬೇಕು ಎಂದರ್ಥ] ಲೌಕಿಕ ಪ್ರಲೋಭನೆಗಳನ್ನು ಇಟ್ಟುಕೊಳ್ಳಬಾರದು. ಇಂದ್ರಿಯಗಳನ್ನು ನಿಗ್ರಹಿಸಿ ಅಂತರ್ಮುಖವಾಗಿ ಪರಿವರ್ತಿಸಿ ಹೆಚ್ಚಿನ ಧಾರಣ ಶಕ್ತಿಯನ್ನು ಪಡೆದುಕೊಳ್ಳಬೇಕು. ಜಪ,ತಪ,ಯೋಗ ಇವುಗಳಲ್ಲಿ ನಿಮಗ್ನನಾಗಿ ಮಿತಾಹಾರಿಯಾಗಿ ಮಿತಭಾಷಿಯಾಗಿರಬೇಕು.

ಕಂಡಲ್ಲೆಲ್ಲ ಹಲ್ಲು ಕಿಸಿಯುತ್ತ ಹೆಂಗಳೆಯರ ಮುಂಗುರುಳು ನೇವರಿಸುತ್ತ, ಸರ ಎತ್ತಿ ಹಿಡಿದು ಚೆನ್ನಾಗಿದೆ ಎನ್ನುತ್ತ, ಐಪ್ಯಾಡು, ಮೊಬೈಲ್ ಮೂಲಕ ಅವರನ್ನು ಸಂಪರ್ಕಿಸುತ್ತ, ಸಾಂಕೇತಿಕವಾಗಿ ಅವರನ್ನು ಸಂಭೋಗಕ್ಕೆ ಕರೆಯುತ್ತ ಇರುವ ವ್ಯಕ್ತಿಯಾದರೆ ಅವ ಪರಬ್ರಹ್ಮನ ಹೆಸರನ್ನು ಬಳಸಲು ಯೋಗ್ಯನಲ್ಲ; ಅವ ಚಾಂಡಾಲನೇ.

ವಿಜಯೋತ್ಸವ ನಡೆಸಿ ಕುಣಿದಾಡಿದ ತಾಲಿಬಾನಿ ಮತ್ತವರ ಗುರುವನ್ನು ಕಂಡಾಗ ಕಾಳಿದಾಸನ ರಘುವಂಶ ಕಾವ್ಯದ ಆರನೇ ಸರ್ಗದ ಉಪಮೆಯೊಂದು ನೆನಪಿಗೆ ಬರುತ್ತಿದೆ. ಉಪಮೆಗೆ ಜಗತ್ತಿನಲ್ಲೇ ಅತ್ಯಂತ ಉತ್ತಮ ಕವಿಯೆಂದರೆ ಕಾಳಿದಾಸ ಎಂಬುದು ಬುಧಜನರಿಗೆ ಅರಿವಿರುವ ವಿಷಯ. ಷೇಕ್‍ಸ್ಪೀಯರ್ ನನ್ನು ಕಾಳಿದಾಸನ ಮಟ್ಟಕ್ಕೆ ಏರಿಸಲು ಸಾಧ್ಯವಿಲ್ಲ. ಸ್ವಯಂವರವೊಂದರ ಪ್ರಮುಖ ಘಟ್ಟವನ್ನು ನೆನೆದುಕೊಳ್ಳುವ ಕಾಳಿದಾಸ ಅದನ್ನು ಹೀಗೆ ಹೇಳುತ್ತಾನೆ-

संचारिणी दीपशिखेव रात्रौ
यम् यम् व्यतीयाय पतिंवरा सा ।
नरेन्द्रमार्गाट्ट इव प्रपेदे
विवर्णभावम् स स भूमिपालः ॥

ಸಂಚಾರಿಣೀ ದೀಪಶಿಖೇವ ರಾತ್ರೌ
ಯಮ್ ಯಮ್ ವ್ಯತೀಯಾಯ ಪತಿಂವರಾ ಸಾ ।
ನರೇಂದ್ರಮಾರ್ಗಾಟ್ಟ ಇವ ಪ್ರಪೇದೇ
ವಿವರ್ಣಭಾವಮ್ ಸ ಸ ಭೂಮಿಪಾಲಃ ॥

ರಾತ್ರಿಯಲ್ಲಿ ದೀವಟಿಗೆ ಹಿಡಿದು ಬೀದಿಯಲ್ಲಿ ಸಾಗುತ್ತಿದ್ದರೆ ಅದು ಸಮೀಪಿಸುತ್ತಿರುವಂತೆಯೇ ಆಯಾಯ ಬಂಗಲೆಗಳು ಫಳಫಳನೆ ಹೊಳೆಯುತ್ತವೆ; ದೀವಟಿಗೆ ಮುಂದೆ ಸಾಗುತ್ತ ನಡೆದಂತೆ ಬಂಗಲೆಗಳು ಹೊಳಪು ಕಳೆದುಕೊಂಡಂತೆ ಭಾಸವಾಗುತ್ತದೆ, ಅದೇರೀತಿಯಾಗಿ, ಸ್ವಯಂವರದಲ್ಲಿ ಸುಂದರಿಯಾದ ರಾಜಕುಮಾರಿ ಪುಷ್ಪಮಾಲಿಕೆಯನ್ನು ಹಿಡಿದು ಸಭೆಯಲ್ಲಿ ಸಾಗುತ್ತಿರುವಾಗ ಪ್ರತಿಯೊಬ್ಬ ರಾಜಕುಮಾರನ ಹತ್ತಿರ ಬಂದಾಗಲೂ ಅವನ ಮುಖ ತೇಜೋಮಯವಾಗಿ ಕಂಗೊಳಿಸುತ್ತಿತ್ತಂತೆ. ರಾಜಕುಮಾರಿ ಅವನನ್ನು ದಾಟಿ ಮುಂದೆ ಸಾಗಿದಾಗ ಅವನ ಮುಖ ಕಳಾಹೀನವಾಗಿ ಕಾಣುತ್ತಿತ್ತಂತೆ.

ಹಿಂದೆಲ್ಲ ಯತಿಗಳು ಅವರ ತತ್ತ್ವ ಪ್ರಸಾರಕ್ಕಾಗಿ ಯಾತ್ರೆ ನಡೆಸಿದರೆ ಅದನ್ನು ವಿಜಯಯಾತ್ರೆ ಎನ್ನುತ್ತಿದ್ದರಷ್ಟೆ. ಸನ್ಯಾಸಿಗೆ ಲೌಕಿಕವಾಗಿ ಸೋಲು ಗೆಲುವೆಂಬುದಿಲ್ಲ. ಅದು ಅವರ ಅನುಯಾಯಿಗಳ, ಶಿಷ್ಯರ ಅನಿಸಿಕೆಯಷ್ಟೆ. ಸನ್ಯಾಸಿಯ ನಿಜವಾದ ಗೆಲುವು ಜೀವನ್ಮುಕ್ತಿ. ಅದನ್ನೆಲ್ಲ ಬಿಟ್ಟು, ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡು ಲೌಕಿಕವಾದ ಅದರಲ್ಲೂ ವಾಮಮಾರ್ಗದ ಗೆಲುವನ್ನು ಪಡೆದುಕೊಂಡಿದ್ದಕ್ಕೆ ಹಾರಾಟ ನಡೆಸಿದಾಗ ಬಹಳ ಜನರಿಗೆ ಮಠ ಹಾಗೂ ಮಟ್ಟ ಎರಡರ ಸ್ಥಿತಿ ಅರ್ಥವಾಗಿದೆ.

ತೊಂಬತ್ತರ ದಶಕದಲ್ಲಿ ಹೆಸರಾಂತ ಯಕ್ಷಗಾನ ತಂಡವೊಂದು ಮುಂಬೈಗೆ ತೆರಳಿತ್ತಂತೆ. ಪ್ರಸಂಗದಲ್ಲಿ ಖಾಲಿಬೀಳುವ ಪಾತ್ರಕ್ಕೆ ಅನಿವಾರ್ಯವಾಗಿ ಕಲಾವಿದನೊಬ್ಬ ಬೇಕಾಗಿ ಬಂದು, ಪರಿಚಿತನಾದ ಕಲಾವಿದನೊಬ್ಬನನ್ನು ಅವರು ಕರೆದೊಯ್ದರಂತೆ. ಊರುಮನೆಗಳಲ್ಲಿ ಹಾದರದ ಚಾಳಿ ಇರಿಸಿಕೊಂಡಿದ್ದ ಆ ಕಲಾವಿದನಿಗೆ ಮುಂಬೈ ಅಂದಾಕ್ಷಣ ನೆನಪಿಗೆ ಬಂದಿದ್ದು ಕಾಮಾಟಿಪುರವಂತೆ. ಆಟ ಮುಗಿದು ತಂಡ ಮರಳಿ ಹೊರಟಾಗಲೂ ಆಸಾಮಿಯ ಪತ್ತೆ ಇರಲಿಲ್ಲವಂತೆ. ತಂಡ ಊರಿಗೆ ಮರಳಿಬಿಟ್ಟಿತು.

ದಿನವೆರಡು ಮೂರು ನಾಲ್ಕು ಕಳೆದರೂ ಮುಂಬೈಗೆ ಹೋದವ ಬರಲಿಲ್ಲವಲ್ಲ ಎಂದು ಮನೆಯಲ್ಲಿ ಆತಂಕಕ್ಕೀಡಾಗಿ ತಂಡದ ಯಜಮಾನರನ್ನು ಕೇಳಿದರಂತೆ. “ನಾವು ಅಲ್ಲೆಲ್ಲ ಹುಡುಕಿದೆವು. ಅವ ಎಲ್ಲಿಗೆ ಹೋಗಿದ್ದಾನೆ ಎಂಬ ಸುಳಿವೂ ಸಹ ಸಿಗಲಿಲ್ಲ. ದೇವರಿದ್ದಾನೆ, ಬರುತ್ತಾನೆ ಬಿಡಿ” ಎಂದರಂತೆ. ವಾರ ಕಳೆಯಿತು. ಎರಡನೇ ವಾರ ಕಾಲಿಟ್ಟಿತು. ಆಗೆಲ್ಲ ಲ್ಯಾಂಡ್ ಫೋನ್.

ಒಂದಾನೊಂದು ಬೆಳಿಗ್ಗೆ ತಂಡದ ಯಜಮಾನರ ಮನೆಗೆ ಫೋನ್ ಕರೆ ಬಂತು. ಕರೆಮಾಡಿದ ಅ ವ್ಯಕ್ತಿ ಅಳುತ್ತಿದ್ದನಂತೆ-“ನನ್ನ ಕೈಲಿದ್ದ ವಾಚು, ಉಂಗುರ ಎಲ್ಲವನ್ನೂ ಕಿತ್ತುಕೊಂಡರು. ನನ್ನನ್ನು ಹೊಡೆದು ಆಹಾರ ಕೊಡದೆ ಇರಿಸಿದ್ದಾರೆ. ಬಹಳ ನಿತ್ರಾಣ ಸ್ಥಿತಿಯಲ್ಲಿದ್ದೇನೆ, ದಯಮಾಡಿ ಕೂಡಲೆ ಹೊರಟುಬಂದು ಜೀವ ಉಳಿಸಿ, ಕರಕೊಂಡು ಹೋಗಿ.” ಯಜಮಾನರಿಗೆ ಕಣ್ಣಲ್ಲಿ ನೀರು ಬಂತು. ಪ್ರದರ್ಶನದಲ್ಲಿ ಬಂದ ಲಾಭವನ್ನೆಲ್ಲ ಸುರಿದು ಅಂತೂ ಅವನನ್ನು ಮರಳಿ ಕರೆಸಿಕೊಂಡಿರುವುದು ಅವರ ಮಾನವೀಯತೆಯ ಸೌಜನ್ಯ. ಯಾಕೆಂದರೆ ಆ ಮಾಯಾನಗರಿಯಲ್ಲಿ ಹೇಳದೆ ಕೇಳದೆ ಹಾದರದ ಚಾಳಿಯವ ಕಾಮಾಟಿಪುರಕ್ಕೆ ನುಗ್ಗಿದ್ದ! ಹಾದರದ ಚಟವಿರುವ ಜನ ಮನೆಮಠಗಳನ್ನೂ ಮಾರುತ್ತಾರೆ ಎಂಬುದಕ್ಕೆ ಈಗಂತೂ ಬೇರೆ ಉದಾಹರಣೆಯ ಅಗತ್ಯವೇ ಉಳಿದಿಲ್ಲ; ಕೋಟಿಗಳನ್ನು ಸುರಿಯುತ್ತಿರುವ ಹಾವಾಡಿಗ ಮಠವೇ ಇದೆಯಲ್ಲ !

ಆಧ್ಯಾತ್ಮಿಕ ಶಕ್ತಿಕೇಂದ್ರವಾಗಬೇಕಾಗಿದ್ದ ಮಠ ಗೂಂಡಾಗಳ, ಲಂಪಟರ ಆಶ್ರಯತಾಣವಾದರೆ ಅಲ್ಲಿ ದೈವ ಸಾನ್ನಿಧ್ಯ ಇರುವುದಿಲ್ಲ. ಎಷ್ಟೇ ಪೂಜೆ ಪುನಸ್ಕಾರಗಳನ್ನು ನಡೆಸಿದರೂ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ವ್ಯಭಿಚಾರ ಮತ್ತು ಬ್ರಷ್ಟಾಚಾರಗಳ ಋಣಾತ್ಮಕ ಶಕ್ತಿಯ ಮುಂದೆ ಧನಾತ್ಮಕ ಶಕ್ತಿ ಸೋಲುತ್ತದೆ. ಅಲ್ಲಿಗೆ ಹೋಗುವ ಶಿಷ್ಯಭಕ್ತರನ್ನೂ ಸಹ ಋಣಾತ್ಮಕ ಶಕ್ತಿಯೇ ಆವರಿಸಿಕೊಳ್ಳುತ್ತದೆ.

ಈರುಳ್ಳಿ ಉಪ್ಪಿಟ್ಟು ಮತ್ತು ಸಾದಾ ಉಫ್ಫಿಟ್ಟು ಎರಡರಲ್ಲಿ ಈರುಳ್ಳಿ ಹಾಕಿದ ಉಪ್ಪಿಟ್ಟು ಬೇಗ ಗಿರಾಕಿಗಳನ್ನು ಕರೆಯುತ್ತದೆ! ಈರುಳ್ಳಿ ಕಾಮೋತ್ತೇಜಕ, ತಿನ್ನಬಾರದು ಎಂದಿದ್ದರೂ ಸಹ ಜಿಹ್ವಾ ಚಾಪಲ್ಯ ಅದನ್ನು ಬಿಡೋದಿಲ್ಲ. ಈರುಳ್ಳಿಯ ಪಕೋಡ,ಬಜೆಗಳು ತಯಾರಾಗುತ್ತಿರುವಾಗ ದೂರದಿಂದಲೆ ಜನ ಬಾಯಿ ಚಪ್ಪರಿಸುತ್ತಾರೆ. ಸಾದಾ ಜನರ ರೀತಿನೀತಿ ಇದಾದರೆ ಸನ್ಯಾಸಿ ಇಂತಹ ನಡೆಗಳಿಂದ ಮುಕ್ತನಾಗಿರಬೇಕು. ಲೋಕಕ್ಕೆ ವಿಮುಖನಾಗುವುದರಿಂದ ವಿರಕ್ತನಾಗುವುದರಿಂದ ಅವನು ಸಂ-ನ್ಯಾಸಿಯಾಗುತ್ತಾನೆ.

ಕಳೆದ ದಶಕಗಳಿಂದ ಇಷ್ಟುದಿನಗಳ ವರೆಗೆ ಹಾವಾಡಿಗ ಮಠದಲ್ಲಿ ನಡೆದ ಸಂಪೂರ್ಣ ಅನೈತಿಕ ವ್ಯವಹಾರಗಳನ್ನು ಬಲ್ಲವರು ಗುಮ್ಮಣ್ಣ ಹೆಗಡೇರು. ಅವರ ಮೂಲಕ ತುಮರಿಗೂ ವಿಷಯ ಗೊತ್ತಾಗಿ ಸಮಾಜಕ್ಕೆ ವಿಷಯ ವೇದ್ಯವಾಗಲಿ ಎಂದು ಬರೆದಿದ್ದಾನೆ.

ಪರಬ್ರಹ್ಮನನ್ನು ಸಮೀಪಿಸುವ ಅಥವಾ ಅವನಲ್ಲಿ ಲೀನವಾಗುವ ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆಯಬೇಜಾದ ಸಮಾಜ ಇಂದು ವಿಘಟಿತವಾಗಿ, ಚೂರುಚೂರಾಗಿ, ಕೆಲವರು ತೊನೆಯಪ್ಪನನ್ನೆ ಆರಾಧ್ಯ ದೈವವೆಂದು ನೆಚ್ಚಿಕೊಂಡಿರುವುದು ಎಂತಹ ವಿಪರ್ಯಾಸ! ಗುರುಸ್ಥಾನದಲ್ಲಿರುವ ವ್ಯಕ್ತಿ ಗುರುವಿನ ಅರ್ಹತೆಯುಳ್ಳವನೇ ಎಂಬುದು ನೋಡಬೇಕಾದ ವಿಷಯ. ಗುರುವಿನ ಅರ್ಹತೆ ಕಾಗದ ಪತ್ರಗಳಲ್ಲಲ್ಲ; ಅದು ನೈತಿಕವಾಗಿರಬೇಕು, ಆಧ್ಯಾತ್ಮಿಕವಾಗಿರಬೇಕು.

ಸ್ವಸ್ಥಸಮಾಜದಲ್ಲಿ ನೆಟ್ಟಗಿರುವ ಗುರುವಿನ ಮೇಲೆ ಯಾರೂ ವಿನಾಕಾರಣ ಆರೋಪ ಮಾಡೋದಿಲ್ಲ. ಅಲ್ಲಿ ಗುಂಪುಗಾರಿಕೆ, ಖಾಸಗಿ ಹಿತಾಸಕ್ತಿಯ ಪ್ರಶ್ನೆಯೇ ಬರೋದಿಲ್ಲ. ಉತ್ತಮ ಗುರುವನ್ನು ವಿರೋಧಿಸಲು ಯಾವೊಬ್ಬನಿಗೂ ಮನಸ್ಸು, ಧೈರ್ಯ ಬರೋದಿಲ್ಲ. ಹಾಗೆ ವಿರ್‍ಓಧಿಗಳು ಹುಟ್ಟಿಕೊಂಡರು ಅಂದರೆ ಅಲ್ಲೇನೋ ನಡೆದಿದೆಯೆಂಬುದು ಖಚಿತ. ಇದನ್ನು ಜನಸಾಮಾನ್ಯರು ಗ್ರಹಿಸಬೇಕು. ಏನು ನಡೆದಿದೆ ಏನು ಬಿಟ್ಟಿದೆ ಅದನ್ನು ಶೋಧಿಸಬೇಕು. ಅರ್ಹತೆ ಕಳೆದುಕೊಂಡ ವ್ಯಕ್ತಿಯನ್ನು ಅಂತಹ ಸ್ಥಾನದಲ್ಲಿ ಮುಂದುವರಿಸಬಾರದು.

ಆದರೆ ಹಾವಾಡಿಗ ಮಠದಲ್ಲಿ ಹಾಗಾಗಲಿಲ್ಲ. ಹಾದರದ ವಿಷಯ ಬೆಳಕಿಗೆ ಬರುವ ಬಹಳ ಮೊದಲೆ ಸಾವಿರಾರು ಕೋಟಿಗಳಲ್ಲಿ ಧನ-ಕನಕ ಸಂಗ್ರಹವಾಗಿತ್ತು. ಹಣ ಒಟ್ಟುಮಾಡಿ ತರುವವರಿಗೆ ತೊನೆಯಪ್ಪ ಪಾಲನ್ನು ನೀಡುತ್ತಿದ್ದದ್ದರಿಂದ ಅವನ ಸುತ್ತ ಬೃಹತ್ ಪಡೆಯೊಂದು ಬೆಳೆದು ನಿಂತಿತ್ತು. ಅವರಿಗೆಲ್ಲ ಆಧ್ಯಾತ್ಮ, ಜಪ, ತಪ ಇತ್ಯಾದಿಯೆಲ್ಲ ಯಾಕೆ ಬೇಕು? “ಚೆನ್ನಾಗಿರಿ, ಚೆನ್ನಾಗಿಡಿ” ಎಂಬುದಷ್ಟೆ ಅವರ ಘೋಷವಾಕ್ಯ. ಅವರೂ ಮೆದ್ದರು; ತಮ್ಮ ’ಗುರು’ವನ್ನೂ ಮೇಯಿಸಿದರು. ಕಾಮವೆಂಬ ಹಸಿವು ಹೆಚ್ಚುತ್ತಲೇ ಹೋಯಿತು. ಅದರ ಭರ್ತಿಗಾಗಿ ಹಣದ ತೆವಲೂ ಹೆಚ್ಚಿತು.

ಮಠಮಾನ್ಯಗಳಲ್ಲಿ ಹಣ-ಆಸ್ತಿ ಹೆಚ್ಚಬಾರದು. ಹೆಚ್ಚಿದರೆ ಅದನ್ನು ಸದ್ವಿನಿಯೋಗ ಮಾಡಲು ಸನ್ಯಾಸಿಯ ನಿಯಂತ್ರಣಕ್ಕೆ ಹೊರತಾದ ಸಮಿತಿಯೊಂದು ಇರಬೇಕು. ತೊನೆಯಪ್ಪನ ಹಾವಾಡಿಗ ಮಠದಲ್ಲಿ ಹಾಗಿರಲಿಲ್ಲ. ಹೀಗಾಗಿ ಕಂಡವರೆಲ್ಲ ಬೇಕಷ್ಟು ಮೆಂದರು. ಉಂಡವರೆಲ್ಲ ಮುಂಡನಮಾಡಿಸುತ್ತ ಕಾವಿ ಎಳೆದುಕೊಂಡವನನ್ನೆ ಗುರುವೆಂದರು, ಜೈಕಾರ ಕೂಗಿದರು. ಈಗ ಆ ವ್ಯಕ್ತಿಯನ್ನು ಓಡಿಸಿದರೆ ಅವರೆಲ್ಲ ಅತಂತ್ರರಾಗುತ್ತಾರೆ. ಪಾಪ, ಬಹಳ ಖದೀಮರಿಗೆ ನಡುವಯಸ್ಸು ಮೀರಿಹೋಗಿದೆ. ದೈಹಿಕ, ಮಾನಸಿಕ ಮತ್ತು ಖಾಜಾನಿಕ ದಾಹಗಳು ಮಾತ್ರ ಹೆಚ್ಚುತ್ತಲೆ ಇವೆ. ಹೀಗಾಗಿ ಹಾದರ ಮಾಡಿದರೇನಾಯ್ತು? ಅವನೇ ನಮ್ಮ ಗುರು ಅಂತಾರೆ.

ಮಾರಾಟವರ್ಗದಲ್ಲಿ ಆಂಗ್ಲ ಗಾದೆಯೊಂದಿದೆ-convince them, if you can’t, confuse them
ಅಂತಹ ಚೋರಗುರುವನ್ನು ಉಳಿಸಿಕೊಳ್ಳುವ ಸಲುವಾಗಿ ಹಳ್ಳಿಗಳಲ್ಲಿ ಯಾರಿಗೂ ಸ್ಪಷ್ಟವಾಗಿ ಏನೂ ಅರಿವಾಗದಂತೆ ಕನ್ ಫ್ಯೂಸ್ ಮಾಡಿಟ್ಟಿದ್ದಾರೆ. ಆಗಾಗ ಬಕೇಟ್ ಮಾಧ್ಯಮಗಳನ್ನು ಬಳಸಿಕೊಂಡು ಚೋರಗುರುವನ್ನು ಹೊಗಳುವ ಮತ್ತು ಸಮರ್ಥಿಸಿಕೊಳ್ಳುವ ಕೆಲಸಮಾಡ್ತಾರೆ. ನೈಜ ಸ್ಥಿತಿಯ ಅರಿವುಳ್ಳ ಸಜ್ಜನರಿಗೆ ಮಠಕ್ಕೆ ಪ್ರವೇಶವಿಲ್ಲದಂತೆ ಮಾಡಿದ್ದಾರೆ. ಮಠ ಕಟ್ಟಿದವರು ಮಠದಲ್ಲಿಲ್ಲ; ಸಮಾನ ಶೀಲ ಲಂಪಟರು ಅಲ್ಲಿದ್ದಾರೆ. ಎಲ್ಲಿದೆ ಆಧ್ಯಾತ್ಮ? ಎಲ್ಲಿದೆ ಸಂಸ್ಕಾರ? ಗೂಂಡಾಗಿರಿಯೇ ಸಂಸ್ಕಾರ ಮತ್ತು ವ್ಯಕ್ತಿ ಪೂಜೆಯೇ ಸಂಸ್ಕೃತಿಯಾಗಿದೆ.

ಇಷ್ಟೆಲ್ಲ ನಡೆಯಬಾರದ್ದು ನಡೆಯುತ್ತಿದ್ದರೂ ಯಾಕೆ ಸಮಾದವರೆಲ್ಲ ಸುಮ್ಮನಿದ್ದಾರೆ? ಗೊತ್ತಿಲ್ಲ. ಬಹುಶಃ ಮಠದೊಳಗೆ ಅವರಿಗೆಲ್ಲ ಪವೇಶವಿಲ್ಲ. ಎಳೆದುಹಾಕಲು ಹೋದರೆ ಗೂಂಡಾ ಪಡೆಯಿಂದ ಹೊಡೆತ ತಿಂದು ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಬಹುದು ಅಥವಾ ಗೂಂಡಾಗಳ ಮೂಲಕ ಹೋರಿ ತೊನೆಯಪ್ಪ ಜಡಿಯುವ ಕೇಸುಗಳನ್ನು ಎದುರಿಸಬೇಕಾಗಿ ಬರಬಹುದು ಎಂಬ ಭಯದಿಂದ ಬಹಳ ಜನ ಮುಂದೆ ಬರುತ್ತಿಲ್ಲ ಎನಿಸುತ್ತಿದೆ. ಒಂದು ಮಾತು ನೆನಪಿಡಿ ಇದು ಹೀಗೇ ಇರುವುದಿಲ್ಲ;ಬದಲಾಗುವ ದಿನ ಬಹಳ ದೂರವಿಲ್ಲ.

ಈಗಿರುವುದು ಎರಡೇ ದಾರಿ ಒಂದೋ ಮಠವನ್ನೆ ಬಿಟ್ಟು ಬೇರೆ ಉತ್ತಮ ಮಠದ ಶಿಷ್ಯರಾಗಿ ಅಲ್ಲಿಗೆ ನಡೆದುಕೊಳುವುದು-ಅದು ಸರ್ವ ಯೋಗ್ಯ ಎನಿಸುತ್ತದೆ. ಅದಿಲ್ಲದಿದ್ದರೆ ತೊನೆಯಪ್ಪನನ್ನು ಎಳೆದುಹಾಕಿ ವೇದೋಕ್ತವಾಗಿ ಹೊಸವಟುವಿಗೆ ದೀಕ್ಷೆ ಕೊಡಿಸುವುದು.-ಇದನ್ನೂ ಮಾಡಲು ಸಾಧ್ಯ, ಆದರೆ ಸಮಾಜದ ಜನರಿಗೆ ಮನಸ್ಸು ಬರಬೇಕಷ್ಟೆ.

Thumari Ramachandra

source: https://www.facebook.com/groups/1499395003680065/permalink/1744640579155505/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s