ಕಚ್ಚೆಭಾಗ್ಯವನ್ನು ಪಡೆದವನೇ ಜಾಣ!

ಕಚ್ಚೆಭಾಗ್ಯವನ್ನು ಪಡೆದವನೇ ಜಾಣ!
[ಏಕಾಂಕ ಪ್ರಹಸನ]

ಅಲ್ಲ ಅಣ್ಣಯ್ಯ, ಹನ್ನೊಂದು ಲಕ್ಷದಲ್ಲಿ ಸದಸ್ಯರ ಬಲ ಹದಿನೇಳು ಸಾವಿರವಂತೆ. ಅದರಲ್ಲಿ ಭಾಗವಹಿಸಿದವರು ಮೂರು ಸಾವಿರದ ಎಂಟುನೂರಂತೆ. ಅದರಲ್ಲಿ ಮೂರು ಸಾವಿರಜನರನ್ನು ಇಟ್ಕಂಡು ಇಡೀ ಸಮಾಜವೇ ತಮ್ಮ ನೇರಕ್ಕಿದೆ ಅಂತಾರಲ ಕಚ್ಚೆ ಶ್ರೀ ತೊನೆಯಪ್ಪನ ಗೂಂಡಾ ಬಳಗದೋರು.

ಜಂಕಣ್ಣಕ್ಕ ಡಕ್ಕಣಕ್ಕ ಜಂಕಣ್ಣಕ್ಕ ಡಕ್ಕಣಕ್ಕ ಅಂತ ಸುಂದರಿಯರೊಡನೆ ನರ್ತಿಸಿದ ಗೂಂಡಾಪಡೆ ಮಾರನೇ ದಿನವೇ ಹವೆತೆಗೆದ ಟೈರಿನಂತಾದದ್ದು ಬಹಳ ನಗುವಿಗೆ ಕಾರಣವಾಯಿತು. ಅಂದಾಜು ಐವತ್ತು ಸಾವಿರಕ್ಕೆ ಕಮ್ಮಿ ಇರದಂತೆ ಪಟಾಕಿಗಳನ್ನು ಸುಡಲಾಗಿತ್ತು. ಹಲವರ ಮನೆಗಳ ಮೇಲೆ ದಾಳಿ ನಡೆಸಿ ಬೆದರಿಸಲಾಗಿತ್ತು. ಕಂಡಲ್ಲೆಲ್ಲ ಮನಸಿಗೆ ತೋಚಿದ ರೀತಿಯಲ್ಲಿ ಗೆದ್ದೆವೆಂದು ಟಾಂ ಟಾಂ ಹೊಡೆಯಲಾಗಿತ್ತು. ಕೊನೆಗೆ ಏನಾಯ್ತು?

ಇರುವುದೆಲ್ಲವ ಬಿಟ್ಟು ಇರುವೆಬಿಟ್ಟುಕೊಳ್ಳುವುದಕ್ಕೆ ಮೊದಲು ಮಾಡಿದ್ದೆ ಮಾಡಿದ್ದು ಕೆಂಗಣ್ಣನ ಉಗ್ರಜ್ವಾಲೆಗೆ ಕ್ಷಣಾರ್ಧದಲ್ಲಿ ತರಗೆಲೆಗಳಂತೆ ಆಹುತಿಯಾಯಿತು ಟಾಂ ಟಾಂ ಎಲ್ಲ. ಅಲ್ಲರೀ ತೊನೆಯಪ್ಪನಿಗೆ ಆರತಿಯೇನು ಜೈಕಾರವೇನು ಕಟ್ಟುಮಸ್ತಿನ ಬಸ್ಸಣ್ಣಗಳ ಮತ್ತು ಬಸಣ್ಣಗಳ ಬೆಂಗಾವಲೇನು, ಬಾಲಿವುಡ್ ಸ್ಟಾರ್ ಖದರ್ರಿನ ಚಂಬು ಚಮಚಾ ಮೊದಲಾದ ಅಡ್ಡಗೇಟುಗಳ ಘೋಷಣೆಗಳೇನು ಒಂದೇ? ಎರಡೇ?

ಈಗ ಸಮಸ್ಯೆ ಏನು ಗೊತ್ತೇ? ಹೇಗೆ ಗೆದ್ದೆವೆಂಬ ಸತ್ಯವನ್ನು ತೊನೆಯಪ್ಪ ಯಾವೊಬ್ಬ ಭಕ್ತನಿಗೂ ಹೇಳಲಿಲ್ಲ. ಅಸಲೀ ವಿಷಯ ಯಾರಿಗೂ ಅರಿವಿಗೆ ಬರಲೇ ಇಲ್ಲ! ತಮ್ಮದೇ ಸತ್ಯ, ತಾವು ಹೇಳುತ್ತಿರುವುದೇ ಸತ್ಯ ಎಂದುಕೊಂಡ ಅವರೆಲ್ಲ ಜಗದ್ಗುರು ಕಚ್ಚೆಶ್ರೀ ಹಾವಾಡಿಗ ತೊನೆಯಪ್ಪನವರು ಬಹಳ ಪರಿಶುದ್ಧರು ಎಂದೇ ಭಾವಿಸಿದರು, ಭಾವಿಸಿದ್ದಾರೆ.

ಅಸಲೀ ಹಕೀಕತ್ತು ಬಾವ-ನೆಂಟರ ಕಿಚನ್ ಕ್ಯಾಬಿನೆಟ್ಟು ಮತ್ತು ನಡುವೆ ಇರುವ ಕಚ್ಚೆಭಾಗ್ಯ ಪಡೆದ ಗೂಂಡಾಪಡೆಗೆ ಮಾತ್ರ ಗೊತ್ತಿದೆ, ಗೊತ್ತಿರುತ್ತದೆ. ಮಠ ಮಠವೆಂದು ಮಠಕ್ಕಾಗಿ ದೇಣಿಗೆ ಕಾಣಿಕೆ ಕಣ್ಮುಚ್ಚಿ ನೀಡುವ ಬಕರಾ ಭಕ್ತರಿಗೆ ಕಿಚನ್ ಕ್ಯಾಬಿನೆಟ್ಟಿನ ಅಂತರಂಗದ ವಿಷಯಗಳು ಗೊತ್ತಾಗೋದೇ ಇಲ್ಲ. ವಿಷಯದ ಬಗ್ಗೆ ಚಿಂತನ-ಮಂಥನ ಮಾಡಿದರಲ್ಲವೇ ಗೊತ್ತಾಗೋದು? ಅದಕ್ಕೆ ಆಸ್ಪದವನ್ನೇ ನೀಡದಂತೆ ಅಂತರವನ್ನು ಕಾಯ್ದುಕೊಳ್ಳುತ್ತಿರುವ ತೊನೆಯಪ್ಪನ ವ್ಯಾವಹಾರಿಕ ವೈಖರಿ ಬಗ್ಗೆ ನಿಖರವಾಗಿ ನಿಮಗೆ ಮೊದಲೇ ಹೇಳಿದ್ದೇನಲ್ಲ?

ಹಾವಾಡಿಗ ಮಠದ ಏಕಾಂತದಲ್ಲಿ ಹಾದರಗಳು ನಡೆಯುವಾಗ ರಂಗಮಂಚದಲ್ಲಿರುತ್ತಿದ್ದದ್ದು ಕಳ್ಳ ಬಾವ ಮತ್ತು ಕುಳ್ಳಬಾವ ಜೊತೆಗೆ ಅವರ ಬುಟ್ಟಿಗೆ ಬಿದ್ದ ಸಖಿಯರಷ್ಟೇ. ಉಳಿದವರಿಗೆ ನಿರ್ಧಾರಗಳನ್ನೆ ತೆಗೆದುಕೊಳ್ಳಲಿಕ್ಕೆ ಆಗ ಅವಕಾಶವೇ ಇರಲಿಲ್ಲ. ಯಾವಾಗ ಜಾರಿಬಿದ್ದೆ ಅಂತ ಗೊತ್ತಾಯ್ತೋ ಆಗ ತೊನೆಯಪ್ಪ ಮಠದಲ್ಲಿ ಕಿಚನ್ ಕ್ಯಾಬಿನೆಟ್ ಒಂದನ್ನು ತಯಾರಿಸಿಕೊಂಡ.

ಸಮಾಜದಲ್ಲಿ ಹಣದಾಸೆಗೆ ಬಲಿಬೀಳುವ ಸಮಾನ ಶೀಲ ಜನರನ್ನು ಹುಡುಕಿ ಯಾರು ಯಾರಿಂದ ಯಾವ ಯಾವ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಎಂದು ಕುಳ್ಳಬಾವನೊಡನೆ ಮಂತ್ರಾಲೋಚನೆ ಮಾಡಿದ. ಆಗಲೇ ಮಠಕ್ಕೆ ಚಂಬು, ಚಮಚ, ತಕ್ಕಡಿಗಳೆಲ್ಲ ಬಂದು ಸೇರಿದವು. ತಮ್ಮ ಹಿನ್ನೆಲೆ ವೃತ್ತಿಗೋತ್ರ ಪ್ರವರಗಳನ್ನು ಹೇಳಿಕೊಂಡು ತೊನೆಯಪ್ಪನ ಸಖ್ಯಕ್ಕೆ ಮುಂದಾದವು. “ನಮ್ಮಿಂದ ಕಚ್ಚೆಭಾಗ್ಯ ಪಡಕೊಂಡವರು ನಮಗೆ ಬೇಕಾದಂತೆ ನಡೆದುಕೊಳ್ಳಬೇಕು” ಎಂದು ತೊನೆಯಪ್ಪ ಹೇಳಿದ. ಹೀಗಾಗಿ ಕಚ್ಚೆ ಭಾಗ್ಯ ಪಡಕೊಂಡವರಲ್ಲೇ ಕೆಲವು ಜನರನ್ನು ಕಳ್ಳ-ಕುಳ್ಳ ಆರಿಸಿಕೊಂಡು ಕಿಚನ್ ಕ್ಯಾಬಿನೆಟ್ಟಿಗೆ ಸೇರಿಸಿಕೊಂಡರು.

ದೂರುದಾರರನ್ನು ಮಟ್ಟ ಹಾಕುವ ಸಕಲ ಕ್ರಿಮಿನಿಲ್ ಪ್ಲಾನುಗಳನ್ನು ಚಂಬು, ಲೋಟ, ಚಮಚ, ತಕ್ಕಡಿಗಳು ಹೇಳಿಕೊಟ್ಟವು. ಬೆರಳು ತೋರಿಸಿದರೆ ಹೋಗಿ ಕಡಿದು ತಲೆಯನ್ನು ತರುವ ಅಶ್ವತ್ಥಾಮನ ಪೌರುಷವನ್ನು ಪ್ರದರ್ಶಿಸುವ ಗೂಂಡಾಭಕ್ರರಿಗೆ ಹಣದಾದೆಯೂ ಇತ್ತು, ಹೆಂಡ, ಹೆಣ್ಣುಗಳ ಆಸೆಯೂ ಅಸಾಧ್ಯವಾಗಿ ಅಮರಿಕೊಂಡಿತ್ತು. “ನಿಮಗೆ ಬೇಕಾದ್ದನ್ನು ನಾವು ಕೊಡುತ್ತೇವೆ, ನಮಗೆ ಬೇಕಾದ್ದನ್ನು ನೀವು ಕೊಡಿ” ಎಂಬ ಬಾರ್ಟರ್ ಸಿಸ್ಟಮ್ ನಲ್ಲಿ ತೊನೆಯಪ್ಪ ಶ್ರೀಗಳಿಗೆ ಬೇಕಾದ್ದನ್ನು ಅವರು ಮಾಡಿಕೊಟ್ಟರು;ಅವರಿಗೆ ಬೇಕಾದ್ದನ್ನು ಕಳ್ಳ-ಕುಳ್ಳ ಒದಗಿಸಿಕೊಟ್ಟರು.

ಸಿನಿಮಾಗಳಲ್ಲಿ ಕೋರಸ್ ನರ್ತನ ಮಾಡುತ್ತಾರಲ್ಲ? ಅವರಿಗೆಲ್ಲ ನಾಯಕ ನಾಯಕಿಯರ ಸ್ಟಾರ್ ವ್ಯಾಲ್ಯೂ ಇರೋದಿಲ್ಲ. ಏನೋ ಪಾಪ ಸಿನಿಮಾ ಸೇರಿ ಹೀರೋ-ಹೀರೋಯಿನ್ ಆಗಬೇಕೆಂಬ ಆಸೆಗೆ ಬರುತ್ತಾರೆ. ಯವುದೂ ಕೈಗೆ ಹತ್ತದಾದಾಗ ಕಾಸ್ಟಿಂಗ್ ಕೌಚ್ ಗಳ ದಾಳಕ್ಕೆ ಬಲಿಯಾಗಿ ಅವರು ಹೇಳಿದಂತೆ ಮಾಡುತ್ತಾರೆ. ಸಹನರ್ತಕಿಯರ ಪಾಡು ಶಿವನೇ ಬಲ್ಲ. ಇದೆಲ್ಲ ಇದ್ದೇ ಇರುತ್ತದೆಂದು ಕೆಲವು ಸಿನಿಮಾ ಮಂದಿಯೇ ಹೇಳಿದ ದಾಖಲೆ ಇದೆ.

ಅದರಂತೆ, ಜಗದ್ಗುರು ಶೋಭರಾಜಾಚಾರ್ಯನ ಆಸ್ಥಾನದಲ್ಲಿ ಅವನ ತೀಟೆಗೆ ಯಾರೂ ಸಿಗದಾಗ, ಹೇಗೋ ಏಕಾಂತಕ್ಕೆ ಸಿಕ್ಕಿ ಶೀಲ ಕಳೆದುಕೊಂಡು, ಮುಂದೆ ತಮಗೇನೋ ದೊಡ್ಡ ಸುವರ್ಣ ಮಂತ್ರಾಕ್ಷತೆ ಸಿಗಬಹುದೆಂಬ ಆಸೆಯಿಂದ ಅನಿವಾರ್ಯವಾಗಿ ಒಪ್ಪಿಸಿಕೊಂಡ ಕೆಲವು ಮಹಿಳೆಯರನ್ನು ಕಳ್ಳಯ್ಯ-ಕುಳ್ಳಯ್ಯ ತಮಗೆ ಬೇಕಾದಷ್ಟು ಬಳಸಿಕೊಂಡು ಆಮೇಲೆ ಗಂಡು ಗೂಂಡಾಭಕ್ತರಿಗೆ ನೀಡುತ್ತಾರೆ.

ಭಾವುಕ ಭಕ್ತರು ತಮ್ಮ ಮಠವೆಂದು ಬಹಳ ಕಾಲದಿಂದ ಹರಕೆ, ಕಾಣಿಕೆಗಳ ಮೂಲಕ ಕೊಟ್ಟ ಧನ-ಕನಕವೆಲ್ಲ ಖಜಾನೆಯಿಂದ ಕೋಟಿ ಕೋಟಿಗಳ ಭಕ್ಷೀಸು ರೂಪದಲ್ಲಿ ಹೊರಗೆ ಹೋಗಿದ್ದು ಕಿಚನ್ ಕ್ಯಾಬಿನೆಟ್ಟಿಗೆ ಮಾತ್ರ ಗೊತ್ತಿದೆ. ಚಿನ್ನವೆಷ್ಟು ಕರಗಿದೆ ಅಂತ ಬೀರೂರು ಕಡೆಯ ಚಿನಿವಾರರಿಗೆ ಗೊತ್ತಿದೆ! ಅವರಿಗೆ ಗೊತ್ತಿಲ್ಲದ ಅದೆಷ್ಟೋ ಕೆಜಿ ಬಂಗಾರ ಇನ್ನಾವುದೋ ಭಾಗದಲ್ಲಿ ಬೇರೆ ಚಿನಿವಾರರಿಗೆ ಮಾರಲ್ಪಟ್ಟಿರುತ್ತದೆ.

ಹಣಕ್ಕಾಗಿ ಓಡಿಬಂದ ಶೀಲಗೆಟ್ಟ ಚಂಬು, ಚಮಚ, ಲೋಟ, ತಕ್ಕಡಿಗಳೆಲ್ಲ ಆಗಾಗ ಸಮಯ ನೋಡಿ ಹುಸಿ ಬಾಂಬು ಎಸೆದು, ತೊನೆಯಪ್ಪನಿಂದ ಕೋಟಿಗಳನ್ನು ಎರಡೂ ಕೈಗಳಲ್ಲಿ ಮೆದ್ದರು. ಜೀವಮಾನ ಪರ್ಯಂತ ಇನ್ನೆಂದೂ ಅವರು ಅಡ್ಡಗೇಟುಗಳಾಗಿ ಕೆಲಸ ಮಾಡದಿದ್ದರೂ, ಕುಳಿತೇ ತಿಂದರೂ ಕುಡಿಕೆಯಲ್ಲಿದ್ದುದು ಕರಗದಷ್ಟು ಹೊನ್ನು ಸಂಪಾದಿಸಿ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟರು.

ಮಾಡುವುದು ಮಾಡಿ ಸಿಕ್ಕಿಬೀಳುತ್ತೇನೆಂಬುದು ಖಾತ್ರಿಯಾಗಿ ಮರದ ಕೆಳಗೆ ಬಿದ್ದ ಮಂಗನಂತಾದ ತೊನೆಯಪ್ಪನವರಿಗೆ ಆಗಾಗ ಕಂಗಾಲು ಪರಿಸ್ಥಿತಿ ಎದುರಾದಾಗಲೆಲ್ಲ ಅಕ್ಕಪಕ್ಕದಲ್ಲಿ ಕುಳಿತು ಗಾಳಿ ಹಾಕುತ್ತ ದೀರ್ಘ ನಿಶ್ವಾಸ ಬಿಡುವಂತೆ ಸಲಹೆ ಮತ್ತು ಧೈರ್ಯ ನೀಡಲು ಈ ಅಡ್ಡಗೇಟುಗಳು ಸಹಾಯ ಮಾಡುತ್ತಲೇ ಬಂದರು. ಆಯಕಟ್ಟಿನ ದಿನಗಳ ಪ್ರಮುಖ ತೀರ್ಮಾನಗಳು ಹೊರಬೀಳುವ ತಿಂಗಳು ಅಥವಾ ವಾರಗಳ ಮೊದಲೆ ಡೀಲ್ ಕುದುರಿಸಲಿಕ್ಕೆ ಸಂಬಧಿಸಿದ ವ್ಯಕ್ತಿಗೆ ಕೊಡಬೇಕಾದುದೆಷ್ಟೋ ಅದಕ್ಕಿಂತ ಹೆಚ್ಚಿಗೆಯನ್ನೇ ಹೇಳಿಕೊಂಡು ಹಣ ಪೀಕಿದರು.

ಕೊಟ್ಟ ಹಣ ಕೆಲವು ಕಾಲ ಕೆಲಸ ಮಾಡಿದ್ದನ್ನು ಕಂಡು ಚಕಿತನಾಗಿ, ಎಲ್ಲವನ್ನೂ ಹಣದಲ್ಲೇ ಮುಚ್ಚುತ್ತೇನೆಂಬ ಹುಂಬುಧೈರ್ಯದಿಂದ ಮುಂದೆ ಸಾಗುತ್ತಿರುವ ತೊನೆಯಪ್ಪನಿಗೆ ಮಹಾಮಂತ್ರಿ ಕುಲಪತಿ ಕುಳ್ಳ ಬಾವಯ್ಯನವರು ಆಗಾಗ ಅನೌಪಚಾರಿಕ ಸಲಹೆಗಳನ್ನು ನೀದುವ ಮೂಲಕ ರಾಂಗ್ ಗೈಡನ್ಸ್ ಕೊಡುತ್ತಲೇ ಬಂದರು.

ತೆಗೆದುಕೊಳ್ಳುವ ಮಂದಿಯೂ ಕೂಡ ತಮ್ಮ ಸ್ಥಾನಕ್ಕೆ ಚ್ಯುತಿ ಬರದಂತೆ ಮರೆಯಲ್ಲೆ ಎಲ್ಲವನ್ನೂ ನಡೆಸಿ ಎಲ್ಲೂ ಏನೂ ನಡೆದೇ ಇಲ್ಲವೆಂಬಂತೆ ಪೋಸು ಕೊಡುತ್ತ ತೊನೆಯಪ್ಪ ಬಳಗಕ್ಕೆ ಬೇಕಾದಂತೆ ನಡೆದುಕೊಳ್ಳುತ್ತಲೇ ಬಂದರು. ಹತ್ತುಸಲ ಕದ್ದವ ಒಮ್ಮೆಯಾದರೂ ಸಿಕ್ಕಿ ಬೀಳಲೇಬೇಕೆಂಬ ನಿಯಮದಂತೆ ಯಾಕೋ ಗೆಲುವನ್ನು ಕರುಣಿಸಿದವ ಅಡ್ಡ ಬೆಣೆಯನ್ನೂ ಸಿಕ್ಕಿಸಿ ಕೈತೊಳೆದುಕೊಂಡುಬಿಟ್ಟನಲ್ಲ? ಕಿಚನ್ ಕ್ಯಾಬಿನೆಟ್ಟಿನಲ್ಲಿ ತೀರಾ ಲೇಟೆಸ್ಟ್ ನಡೆದ ಮಾತುಕತೆ ಹೀಗಿತ್ತು-

ಕಳ್ಳಯ್ಯ-“ಓ ಬಾವ, ಕೆಂಗಣ್ಣನ ಚಾನೆಲ್ ನಿಂದ ಎಲ್ಲ ಗೊತ್ತಾಗೊತಲ ಈಗ ಎಂತ ಮಾಡುದು ಮಾರಾಯ?”

ಕುಳ್ಳಯ್ಯ-“ಹೋಗಲಿ ಬಿಡು, ಇಮ್ಮಡಿ ವಿಶ್ವೇಶ್ವರಯ್ಯನನ್ನು ಹೇಗೂ ಬುಕ್ ಮಾಡಿಕೊಂಡಿದ್ದೇವಲ್ಲ. ಇನ್ನೂ ಕೆಲವು ಬಕೆಟ್ ಚಾನೆಲ್ ನವರನ್ನು ಹಿಡಿದು ನಮ್ಮ ಪರವಾಗಿ ಕಾರ್ಯಕ್ರಮ ಹಾಕ್ಸುವ”

ಕಳ್ಳಯ್ಯ-“ಅದೇನೋ ಸರಿ ಆದ್ರೆ ಎಲ್ಲರೂ ಹೊರಗೆ ವಿಜಯೋತ್ಸವ ಆಚರಿಸ್ತಾ ಇದ್ರೆ, ನನಗೆ ಏಕಾಂತದಲ್ಲೆ ಉರಿಹತ್ತಿತ್ತು ಮಾರಾಯ. ನಿದ್ದೆ ಇಲ್ಲೆ ಎನಗೆ. ಮುಂದೆ ಒಂದೊಮ್ಮೆ ಮರಳಿ ಮತ್ತೆ ಕೇಸು ಓಪನ್ ಆದರೆ ಎಂತ ಮಾಡುದು ಮಾರಾಯ”

ಕುಳ್ಳಯ್ಯ-“ಎನಗೆ ಗೊತ್ತಿಪ್ಪಂಗೆ ಮತ್ತೆಲ್ಲ ಕೇಸು ಓಪನ್ ಮಾಡ್ತ್ವಿಲ್ಲೆ. ಒಂದೊಮ್ಮೆ ಮಾಡಿರೂ
ಏನು ಮಾಡಕು ಹೇಳಿ ನಮ್ಮ ಚಂಬು, ಚಮಚ, ಲೋಟ, ತಕ್ಕಡಿಗಳನ್ನು ಸೇರ್ಸಿ ಮಾತಾಡ್ವ”

ಕಳ್ಳಯ್ಯ-“ಸಮಸ್ಯೆಗೆ ಪರಿಹಾರ ಸಿಗ್ತು ಅಂಬ್ಯಾ?”

ಕುಳ್ಳಯ್ಯ-” ಆಗದೆಲ್ಲ ಆಗ್ ಹೋಯ್ದು ಅದ? ಈಗೇನು ಮಾಡಲಾಗ್ತಲ್ಲೆ. ಪ್ರಯತ್ನ ಅಂತೂ ಮಾಡದೇಯ. ಎಷ್ಟು ಪ್ರಯತ್ನ ಮಾಡಲಾಗ್ತೊ ಅಷ್ಟೂ ಮಾಡನ. ಆದರೆ ನಾವು ಹೀಗೆಲ್ಲ ಪ್ರಯತ್ನ ಮಾಡಿದ್ದೊ ಹೇಳಿ ಭಕ್ತರಿಗಾಗಲೀ ಹೊರಗಡೆ ಯಾರಿಗೇ ಆಗಲಿ ಗೊತ್ತಾಗ್ದ ಹಾಂಗೆ ಇಟ್ಕಳವು.”

ಕಳ್ಳಯ್ಯ-“ಅಲ್ದ, ಅಂವ ದುಡ್ ತಗಂಡು ಎನಗೆ ನಾಮ ಹಾಕ್ಬುಟ್ನಲ. ನಮ್ಮ ಜನರನ್ನ ಕಳಸಿ ಅವನ ಮೇಲೆ ದಾಳಿ ಮಾಡ್ಸಬುಟ್ರೆ ಹ್ಯಾಂಗೆ?”

ಕುಳ್ಳಯ್ಯ-“ಅದೊಂದ್ ಕೆಲಸ ಮಾಡಡ ಮಾರಾಯ. ಅಂವ ಹೇಳಿಕೇಳಿ ಅಂತಾ ಸ್ಥಾನದಗಿದ್ದಂವ. ಏನಾರೂ ಆತು ಅಂದ್ರೆ ನಾಳೆನೇ ಆನು-ನೀನು ಒಳಗೋಪ್ದೇಯ.”

ಕಳ್ಳಯ್ಯ-“ಅಲ್ದ ಆ ಪಾಪಿ ದುಡ್ ತಗಂಡ್ ಹಾಂಗ್ಮಾಡಿದ್ದು ಸರಿಯನ?”

ಕುಳ್ಳಯ್ಯ-” ಆನು ನೀನು ಎಷ್ಟೆಲ್ಲ ದುಡ್ ತಗಂಡ್ ಎಂತೆಲ್ಲ ಮಾಡಲ್ಲೆ ಹೇಳು. ಏನೋ ಭಕ್ತರಿಗೆ ಇನ್ನೂ ನಂಬಿಕೆ ಇದ್ದು ಮಠ ಹೇಳಿ ನಡೀತಾ ಇದ್ದು. ಆನು ನೀನು ಮಾಡಿದ ಮೋಸಕ್ಕಿಂತ ದೊಡ್ಡ ಮೋಸ ಇದಲ್ಲ. ದುಡ್ಡು ಗೌರವ ಇದ್ದಂಗೇಯ ಕೊಟ್ಟು ಪಡಕಳವು. ಹಾಂಗೆ ಸ್ವಲ್ಪ ಖರ್ಚ್ ಮಾಡಿರೇ ಮುಂದೆ ಮತ್ತೆ ಜಾಸ್ತಿ ಬರ್ತು.”

ಕಳ್ಳಯ್ಯ-“ಅಲ್ಲ ಎನಗೀಗ ಏನಾಗ್ತಾ ಇದ್ದು ಹೇಳ್ ಗೊತ್ತಾಗ್ತಾ ಇಲ್ಲೆ ಮಾರಾಯ. ಈಗ ಬತ್ತಾ ಇಪ್ಪ ಭಕ್ತರೂ ವಿಷಯ ಗೊತ್ತಾಗಿ ಬರದೇ ಇದ್ರೆ ಮುಂದೆ ಖರ್ಚಿಗೆ ಎಲ್ಲಿಂದ ತರದು?”

ಕುಳ್ಳಯ್ಯ-“ನಮಾಮಿಗೆ ಫೋನ್ ಮಾಡು. ನಮ್ ಕೇಸು ಇನ್ನೇನು ಮುಗೀತಾ ಇದೆ. ಬರೇ ಇನ್ನೂರು ಕೋಟಿ ಕಡಿಮೆ ಬಿದ್ದದೆ. ನೀವು ಕಳಿಸಿ. ನಾವು ಗೆದ್ದ ಮೇಲೆ ಬೇರೆ ಬೇರೆ ಯೋಜನೆ ಹಾಕಿ ನಿಮಗೆ ಇನ್ನೂರೈವತ್ತು ಕೋಟಿ ಮಾಡಿ ವಾಪಸ್ ಕೊಡ್ತ್ಯ ಹೇಳಿ ಹೇಳು ನೋಡನ.”

ಕಳ್ಳಯ್ಯ-“ಆನ್ ಅಷ್ಟು ಯೋಚ್ನೆ ನಾಡ್ತ್ನಲ್ಯನ? ಆನು ವಾರದ ಹಿಂದೆ ಫೋನ್ ಮಾಡಿದ್ದಿ. ಮೊದಲ್ನೇ ಸಲ ರಿಂಗ್ ಆದಾಗ ಅವರ ಸೊಸೆ ತಗಂಡ. ಮಾವ ಸಂಡಾಸಿಗೆ ಹೋಗಿದಾರೆ ಅಂದ. ಎರಡನೇ ಸಲ ಮಡ್ದಾಗ್ “ಮೈ ಅಭೀ ಬಾಹರ್ ಹೂಂ ಜೀ ಫಿರ್ ಫೋನ್ ಕರತಾ ಹೂಂ” ಅಂದ. ಫೋನ್ ಮಾಡ್ಲೇ ಇಲ್ಯಲ ಹೇಳಿ ಮಾರನೇ ದಿನ ಮತ್ತೆ ಮಾಡಿರೆ ಫೋನ್ ರಿಸೀವೇ ಮಾಡಲ್ಲೆ. ಅವಂಗೂ ನಮ್ಮ ವಿಷಯ ಗೊತ್ತಾಗೋಯ್ದ ಹೇಳಿ.”

ಕುಳ್ಳಯ್ಯ-“ನೋಡನ ತಗ. ಅಂವ ಕೊಡದೇ ಇದ್ರೆ ಇನ್ಯಾರ್ ಸಿಗ್ತ ಹೇಳಿ ನೋಡವು. ಬಸ್ಸಣ್ಣ, ಮಸಾಜಣ್ಣ ಎಲ್ಲರಿಗೂ ಕೊಟ್ಟಿದ್ಯಲ ಅವರ ಹತ್ರ ಕೇಳು.”

ಕಳ್ಳಯ್ಯ-“ಅವ್ಕೆಲ್ಲ ಕೊಟ್ಟಿದ್ದಿ ಹೌದು, ಅವ್ಕಿನ್ನೂ ತೀರಾ ಲಾಭ ಹೇಳದೇ ಸಿಗಲ್ಲೆ. ಅಂತೂ ಹ್ಯಾಂಗೋ ನಡೀತಾ ಇದ್ದಡ. ವರ್ಷಕ್ಕೊಂದ್ ಸಲ ನಮ್ಮನ್ನ ಕರ್ದು ಭಿಕ್ಷ ಗಿಕ್ಷ ಎಲ್ಲ ಮಾಡ್ತಾ ಇದ್ವನ. ಬೇಕಾರೆ ಬತ್ತ, ಜೈಕಾರ ಕೂಗ್ತಾ ನಿತ್ಗತ್ತೊ ಬಿಟ್ರೆ ಹಣ ಕೊಡ ತಾಕತ್ತು ಇನ್ನೂ ಇಲ್ಲೆ. ಮೊನ್ನೆ ಬಸ್ಸು ಬಿಡ್ಸಿತ್ತಲ, ಪಾಪ ಅವಂಗಂತೂ ಈಗಲೂ ಅದರ ಬಾಕಿ ಕಟ್ಟಕಾಗಲ್ಯಡ.”

ಕುಳ್ಳಯ್ಯ-“ಇಂದು ಎನಗೆ ಯಾರೂ ಸಿಗಲ್ಲೆ. ಎನಗೀಗ ನಿದ್ದೆ ಬತ್ತಾ ಇದ್ದು. ಸ್ವಲ್ಪ ಏರ್ಸಿದ್ದಿ, ನೀನೂ ಸ್ವಲ್ಪ ತಗ. ಬೆಳಿಗ್ಗೆ ನೋಡನ. ಹ್ಯಾಂಗಾರೂ ಆನೊಂದ್ ಪ್ಲಾನ್ ಹಾಕ್ತಿ. ಭಕ್ತರು ಮಠ ಹೇಳಿ ಕೊಟ್ಟೇ ಕೊಡ್ತ. ನಮ್ಮ ಜನ ಇದ್ವನ ಅವರನ್ನೆಲ್ಲ ಪಾವತಿ ಬೂಕ್ ಕೊಟ್ಟು ಕಳ್ಸೀರಾತು. ಅವಕೂ ಬೇಕಲ? ತಗಂಬತ್ತ.”

ಬರೇ ಕಾಮ
ಬರೇ ಕಾಮ
————-

ಲಾಸ್ಟ್ ಪಂಚ್-ಕಾಕಾಲ್ ಬಾವಯ್ಯನ ನಗುವಿಗೆ ಅರ್ಪಣೆ
ಕವಳದ ಗೋಪಣ್ಣ ಹುಟ್ಟಿಸಿದ ಹೊಸಾಗಾದೆ-’ನೆಕ್ ನಲ್ಲೆ ಪಂಕ್ಚರ್ ಆದ ಟ್ಯೂಬಿಗೆ ತೇಪೆ[ಪ್ಯಾಚ್] ಹಚ್ಚೋದು ಸಾಧ್ಯವಿಲ್ಲ. ಹಚ್ಚಿದ್ರೂ ಅದು ನಿಲ್ಲೋದೇ ಇಲ್ಲ.’

Thumari Ramachandra

Source: https://www.facebook.com/groups/1499395003680065/permalink/1743320509287512/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s