ಸ್ವಲ್ಪನಾದ್ರು ಮಾರ್ಯಾದೆ ಉಳಸ್ಕಳ್ಳೊದಾದ್ರೆ ತೊನೆಯಪ್ಪನ ಬಳಗವನ್ನು ದೂರ ಇಡಿ

ಸ್ವಲ್ಪನಾದ್ರು ಮಾರ್ಯಾದೆ ಉಳಸ್ಕಳ್ಳೊದಾದ್ರೆ ತೊನೆಯಪ್ಪನ ಬಳಗವನ್ನು ದೂರ ಇಡಿ

ಯಥಾ ರಾಜಾ ತಥಾ ಪ್ರಜಾ ಎಂದಂತೆ ಎಲ್ಲೀವರೆಗೆ ಆಡಳಿತ ನಡೆಸುವವರು ಎರಡೂ ಕೈಯಲ್ಲೂ ತಿನ್ನುವ ಕೆಲಸ ಮಾಡ್ತಾರೋ ಅಲ್ಲಿವರೆಗೆ ಅವರ ಕೈಗೆ ಬೇಕಾಗಿದ್ದನ್ನು ಹಾಕಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುವ ಬ್ರಷ್ಟಾಚಾರಿಗಳು, ಅತ್ಯಾಚಾರಿಗಳು, ಲಂಪಟರು, ಧರ್ಮದ್ರೋಹಿಗಳು, ಪೀಠದ್ರೋಹಿಗಳು, ಕಾವಿದ್ರೋಹಿಗಳು ಇದ್ದೇ ಇರ್ತಾರೆ.

ನಮ್ಮನ್ನು ಆಳುತ್ತಿರುವವರನ್ನು ನೋಡಿ. ಒಂದು ಲಕ್ಷದ ಸೀರೆ, ಅರುವತ್ತೈದು ಲಕ್ಷದ ವಾಚು. ವಾಚು ಎಲ್ಲಿಂದ ಬಂತು ಎಂಬ ಪ್ರಶ್ನೆ ಹುಟ್ಟಿದಾಗ ಅವನ್ಯಾವನೋ ಒಬ್ಬನುನ್ನು “ನಾನೇ ಕೊಟ್ಟಿದ್ದು” ಎಂದು ಹೇಳಲು ತಯಾರು ಮಾಡಿದರು. ಅವನೇ ಕೊಟ್ಟಿದ್ದಾದರೆ ಹೇಳೋದಕ್ಕೆ ಅಷ್ಟೆಲ್ಲ ದಿನ ಬೇಕಾಗಿತ್ತೇ? ಆಮೇಲೆ ಹೇಗೂ ಮೂಲಕ್ಕೇ ಕೈ ಇಡ್ತಾರೆ ಅಂತ ಗೊತ್ತಾದ ತಕ್ಷಣ ಅದು ರಾಜ್ಯದ ಸ್ವತ್ತು ಅಂತ ಹೇಳಿ ನುಣುಚಿಕೊಂಡಿದ್ದು ಯಾರಿಗೆ ಗೊತ್ತಿಲ್ಲ?

ಸಿಂಹಸ್ವಪ್ನವಾಗಿದ್ದ ಐ.ಏ.ಎಸ್. ಅಧಿಕಾರಿಯ ಕಥೆಯನ್ನೇ ಆತ್ಮಹತ್ಯೆ ಅಂತ ಮುಗಿಸಿ ಹಾಕಿದ್ರು. ಹೇಳೋರೂ ಇಲ್ಲ ಕೇಳೋರೂ ಇಲ್ಲ. ಆಗ್ಲೋ ಈಗಲೋ ಅವನ ಕುಟುಂಬದವರು ಮಾಧ್ಯಮಕ್ಕೆ ಬಂದರೆ ಏನಾದ್ರೂ ಹೇಳಿ ಕಳಿಸಿ ಸುಮ್ಮನಾಗಿಸಿದ್ದೇ ಬಿಟ್ರೆ ಅಧಿಕಾರಿ ಕೋಡಂಗಿ ಆಳರಸ ಈರಭದ್ರ ಆಗಿದೆ. ಒಬ್ಬರಿಬ್ಬರಲ್ಲ ನಿಯತ್ತಿನ ಹಲವು ಅಧಿಕಾರಿಗಳಿಗೆ ಧಮಕಿ ಹಾಕಿದ್ದು, ವರ್ಗಾವಣೆ ಮಾಡಿದ್ದು, ಹಲ್ಲುದುರಿಸಿದ್ದು ಎಲ್ಲವೂ ಮಹತ್ಸಾಧನೆಗಳೇ.

ಅನ್ನ ಕೊಡುವ ರೈತರು ತಮ್ಮ ಸಮಸ್ಯೆಗಳನ್ನು ಹೇಳ್ಕೊಳ್ಳೋಕೆ ಬಂದ್ರೆ ಅವರನ್ನೂ ಲಾಠಿ ಪ್ರಹಾರದಿಂದ ರಕ್ತ ಹರಿಸಿ ನೋಯಿಸಿದವರು ಆ ಜನ. ತಿನ್ನೋದಿಲ್ಲ ಅಂತ ಬಾಯಲ್ಲಿ ಭಕ ಹೇಳ್ತಾ ಇದ್ರೂ ಭಕವನ್ನು ನಂಬೋಕಾಗುತ್ಯ್ರೇ? ಯಾವ ಸಮಯದಲ್ಲೂ ಭಕ ಮೀನಿಗೆ ಬಾಯಿ ಹಾಕಬಹುದು; ತೋರಿಕೆಗೆ ಹೊರಗಿನಿಂದ ಅದು ಕಾಣದಿರಬಹುದಷ್ಟೆ.

ಕಳ್ಳರ ಖೂಳರ ಸರಕಾರ ಎಂದು ಯಾರೋ ಹೇಳಿದರಂತೆ. ರಾಜ್ಯದ ಬಹುತೇಕ ಜನರಿಗೆ ಈಗಿನ ಸರಕಾರ ಎಂಥದ್ದು ಎಂಬುದು ಗೊತ್ತೇ ಇದೆ. ಅಂತವರು ಈ ಕಚ್ಚೆಶ್ರೀ ತೊನೆಯಪ್ಪನಿಂದ ಕೈಗೊಂದಷ್ಟು ಪಡೆಯಲಿಲ್ಲ ಎಂಬುದನ್ನು ಹೇಗೆ ಅಲ್ಲಗಳೆಯುತ್ತೀರಿ. ಕುರಿವಾಡೆಯಲ್ಲಿ ಚಾತುರ್ಮಾಸಕ್ಕೆ ಕೂತಿದ್ದಾಗಲೇ ಚಂಬಿಗೆ ನೀರು ತುಂಬಿ ಡೀಲು ಕುದುರುಸಿಕೊಂಡು, ಅಲ್ಲಾಡಿಸಿಕೊಂಡು ಬೀರೂರಿನ ಮಾವನ ಹೆಣ್ಣುಮಕ್ಕಳ ಮನೆಯಲ್ಲಿ ಏಕಾಂತ ಮಾಡಿಕೊಂಡು. ನಂತರ ತುಮಕೂರಿನಲ್ಲಿ ಪಾದಪೂಜೆ ನೆಪದಲ್ಲಿ ಏಕಾಂತ ಮುಗಿಸಿ, ಜಗದ್ಗುರು ತೊನೆಯಪ್ಪನವರು ನಡುರಾತ್ರಿ ಮೀರಿ ಮಹಾನಗರಕ್ಕೆ ಬಿಜಯಂಗೈದರು ಎಂಬುದು ತಲೆ ನೆಟ್ಟಗಿರುವ ಎಲ್ಲರಿಗೂ ಗೊತ್ತಾಗಿಬಿಟ್ಟಿದೆ!!

ಬರೋಬ್ಬರಿ ಐವತ್ತು ಕೋಟಿಯನ್ನು ಪಡೆದ ನಿದ್ದಣ್ಣ ಅಷ್ಟು ಬೇಗ ಬಿಸಿ ಆರಿತು ಅಂತ ಮಾಡಲಿಕ್ಕೆ ಬರುತ್ಯೇ? ಹೀಗಾಗಿ ನಿದ್ದಣ್ಣನವರು ತಮ್ಮ ಮುಂದಿನ ನಡೆಗಳನ್ನು ಬೇಕಾದ ದೂತರ ಮೂಲಕ ಮುಂಚಿತವಾಗಿ ತಿಳಿಸುತ್ತಿರೋದರಿಂದ ಇಲ್ಲಿಯವರೆಗೆ ನ್ಯಾಯಾಂಗ-ಕಾರ್ಯಾಂಗ-ಶಾಸಕಾಂಗಗಳ ದಾರಿ ತಪ್ಪುತ್ತಿದೆ ಎಂಬುದು ಸುಸ್ಪಷ್ಟ. ಅದ್ಯಾರೋ ಹೇಳಿದಂತೆ ಇಂಥ ಬ್ರಷ್ಟರ ರಾಜ್ಯದಲ್ಲಿ ನ್ಯಾಯ ಕೇಳಿದರೆ ಸಿಗುತ್ತದೆ ಎಂದು ನಂಬಿಕೊಳ್ಳಬೇಕಾಗಿಲ್ಲ. ಆದಷ್ಟು ಶೀಘ್ರ ತೊನೆಯಪ್ಪನ ಕೇಸುಗಳನ್ನು ಹೊರರಾಜ್ಯಗಳ ಕೋರ್ಟುಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಬೇಕಾದ್ದು ಬುದ್ಧಿವಂತರ ಆಯ್ಕೆ.

ಅಲ್ಲೆಲ್ಲೋ ಕಬ್ಬಾಳಗುಡ್ಡ ಎಂಬ ಏಳುಸುತ್ತಿನ ಕೋಟೆ ಇದೆಯಂತಲ್ಲ; ದಳಪತಿಗಳಿಂದ ವಿದ್ರೋಹಕ್ಕೆ ಒಳಗಾಗಿ ಮೈಸೂರಿನ ಏಳನೇ ಚಾಮರಾಜ ಒಡೆಯರ್ ಮತ್ತವರ ಕುಟುಂಬ ಕಬ್ಬಾಳ ಪರ್ವತದ ಮೇಲಿನ ಏಳುಸುತ್ತಿನ ಕೋಟೆಯೊಳಗಿನ ಕಾರಾಗ್ರಹದಲ್ಲಿ ಅನ್ನಾಹಾರವಿಲ್ಲದೆ ನರಳಿ ನರಳಿ ಸತ್ತರಂತೆ. ನಿನ್ನೆ ತಡರಾತ್ರಿ ಕವಳದ ಗೋಪಣ್ಣ ಈ ಸುದ್ದಿ ಹೇಳಿದ್ದ. ಅದೇ ವಿಧವಾಗಿ ಈ ಪ್ರಕರಣದಲ್ಲಿ ಸರಿಯಾದ ದೈವ ಸಮ್ಮತ ತೀರ್ಪು ಸಿಕ್ಕಿದರೆ ಕಚ್ಚೆಶ್ರೀ ಜಗದ್ಗುರು ತೊನೆಯಪ್ಪ ಮುಂಡೆಗಂಡನನ್ನು ಕಬ್ಬಾಳ ಪರ್ವತದ ಅದೇ ಕಾರಾಗ್ರಹಕ್ಕೆ ಅಟ್ಟಿ ಅನ್ನ ನೀರು ಸರಿಯಾಗಿ ಕೊಡದೆ ಶಿಕ್ಷಿಸಬೇಕು.

ಸದ್ಯ ಚುನಾವಣೆ ಬಂದಿದೆಯಂತೆ. ಹಾಗಂತೆ ಹೀಗಂತೆ ಎಂಬ ಸುದ್ದಿ ಕೇಳಿಬರುತ್ತಿದೆ. ತೊನೆಯಪ್ಪ ಅಲ್ಲಿಗೆ ಹೋಗಿ ಕೂರಬೇಕು ಮತ್ತು ಅಲ್ಲಿನ ಆಸ್ತಿಯ ಮೇಲೆ ಅಧಿಕಾರ ಚಲಾಯಿಸಬೇಕು ಎಂಬ ಹುನ್ನಾರದಿಂದ ದೊಡ್ಡ ಪಂಗಡವೊಂದನ್ನು ಕಟ್ಟಿದ್ದಾನಂತೆ. ತೊನೆಯಪ್ಪನಿಂದ ಸುವರ್ಣ ಮಂತ್ರಾಕ್ಷತೆ ಪಡೆದ ಫಲಾನುಭವಿಗಳಲ್ಲಿ ಬಸ್ಸುಗಳ ವ್ಯವಹಾರದವರೂ ಇದ್ದಾರಂತಲ್ಲ? ಅವರನ್ನೆಲ್ಲ ಇಟ್ಟುಕೊಂಡು ಹಳ್ಳಿಗಳಿಂದ ಮಹಾನಗರಕ್ಕೆ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಬಸ್ಸುಗಳನ್ನು ಬಿಡಿಸುತ್ತಾನಂತೆ. ಇದೆಲ್ಲ ಹಿನ್ನೆಲೆಯ ವ್ಯವಹಾರ; ಮುಂದುಗಡೆ ’ಮಹಾಸ್ವಾಮಿಗಳ’ಮುಖ ಎಲ್ಲೂ ಕಾಣಿಸೊಲ್ಲ.

ಸಮಾಜದ ಜನರಿಗೆ ಸ್ವಲ್ಪನಾದ್ರೂ ಕಾಳಜಿ, ಎಚ್ಚರ ಮತ್ತು ಮರ್ಯಾದೆ ಎಂಬುದು ಇದ್ದರೆ ತೊನೆಯಪ್ಪನ ಬಳಗವನ್ನು ದೂರ ಇಡಬೇಕು. ಅವರು ಕೊಡುವ ಎಲ್ಲ ಸವಲತ್ತುಗಳನ್ನೂ ಪಡೆದು ನಿಮಗೆ ಬೇಕಾದಂತೆ ನಡೆದುಕೊಳ್ಳಬೇಕು. ಎಲ್ಲಿಯವರೆಗೆ ಈ ಕಚ್ಚೆಹರುಕ ಸ್ವಾಮಿಯೆನಿಸಿ ಪೀಠದಲ್ಲಿರುತ್ತಾನೋ ಅಲ್ಲಿಯವರೆಗೂ ಪೀಠಕ್ಕೂ ಕಳಂಕ ಮತ್ತು ಎಲ್ಲಿ ಹೋದರೂ ಸಮಾಜಕ್ಕೂ ಕಳಂಕ. ತೊನೆಯಪ್ಪನಿಂದ ಇನ್ನೂ ಬಣ್ಣದ ಅಕ್ಕಿ ಪಡೆದುಕೊಳ್ಳುತ್ತಿರುವ ಫಲಾನುಭವಿ ಹಳದೀ ಬಾವಯ್ಯಂದಿರ ಮನೆಗಳ ಹುಡುಗಿಯರನ್ನು ಸಮಾಜದ ಹುಡುಗರು ನಿಮಗೆ ಮದುವೆ ಎಂಬುದು ಇರದಿದ್ದರೂ ಚಿಂತೆಯಿಲ್ಲ, ದಯವಿಟ್ಟು ಅಂತವರನ್ನು ಮಾತ್ರ ಮದುವೆಯಾಗಬೇಡಿ. ಎಲ್ಲಾ ಕೋನಗಳಿಂದ ಅಂತಹ ಫಲಾನುಭವಿಗಳನ್ನು ದೂರ ಇಡುತ್ತ ನಡೆದರೆ ತೊನೆಯಪ್ಪನ ಬಳಗ ಕೊನೆಗೊಮ್ಮೆ ಸುಸ್ತಾಗಿ ಅವನನ್ನು ತೊರೆಯುತ್ತದೆ.

ದಯಮಾಡಿ ಇನ್ನುಮುಂದೆ ಕಚ್ಚೆಶ್ರೀ ಜಗದ್ಗುರು ತೊನೆಯಪ್ಪನಿಗೆ ಪೈಸೆ ಕಾಣಿಕೆಯನ್ನೂ ನೀಡಬೇಡಿ. ದನಗಳಿಗೆ ಕೊಡಬೇಕೆನಿಸಿದರೆ ನೇರವಾಗಿ ನಿಮ್ಮ ಜನರನ್ನು ಕಳಿಸಿ ಅವತ್ತಿಂದವತ್ತಿಗೇ ಆಹಾರ ಕೊಡಿ. ಮೂಟೆಗಳನ್ನು ಕೊಡಿಸಿದರೆ ಅದನ್ನೂ ಮಾರಿಕೊಂಡು ಬ್ರೇಸ್ ಲೆಟ್ ಖರೀದಿಸುವ ಮನೆಹಾಳರು ಅಲ್ಲಿದ್ದಾರೆ.

ತುಮರಿ ಬರಲಿಲ್ಲ, ಏನೂ ಹೇಳಲಿಲ್ಲ, ಏನೂ ಹೇಳುತ್ತಿಲ್ಲ ಎಂಬ ಶಂಕೆ ಬೇಕಾಗಿಲ್ಲ. ಇಲ್ಲಿ ನಿತ್ಯವೂ ಕ್ರೀಡಾ ನಿರತರಾಗಿ ತೊನೆಯಪ್ಪನನ್ನು ’ಕೊಂಡಾಡುತ್ತಿರುವ’ ಸಮಾಜದ ಎಲ್ಲ ಬಂಧುಗಳಿಗೂ ತುಮರಿಯ ವಿನಮ್ರ ವಂದನೆಗಳು. ತುಮರಿ ಬರೆಯೋದಕ್ಕಿಂತ ನಿಮ್ಮ ಸೇವೆ ಹೆಚ್ಚಿನದು ಎಂಬುದನ್ನು ತುಮರಿ ಎಂದೂ ಮರೆತಿಲ್ಲ, ಮರೆಯೋದೂ ಇಲ್ಲ. ಹೀಗಾಗಿ ಸಮಾಜದ ಒಳಿತಿಗಾಗಿ ನೀವೆಲ್ಲ ಸೇರಿ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ತುಮರಿಯ ಬೆಂಬಲ ಇದ್ದೇ ಇದೆ. ಸದ್ಯ ತೊನೆಯಪ್ಪನ ಬಳಗವನ್ನು ದೂರ ಇಡಲು ಯಾವೆಲ್ಲ ಕೆಲಸ ಕೈಗೊಳ್ಳಬೇಕೋ ಅದನ್ನು ದಯಮಾಡಿ ನಡೆಸಿಕೊಡಿ.

Thumari Ramachandra

source: https://www.facebook.com/groups/1499395003680065/permalink/1735573240062239/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s