ಜಗದ್ಗುರು ತೊನೆಯಪ್ಪನವರ ಪವಾಡದಿಂದ ಕೆಲವರಿಗೆ ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ದೊರೆತಿದೆ!

ಜಗದ್ಗುರು ತೊನೆಯಪ್ಪನವರ ಪವಾಡದಿಂದ ಕೆಲವರಿಗೆ ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ದೊರೆತಿದೆ!

ಜಗದ್ಗುರು ತೊನೆಯಪ್ಪನವರು ಹೇಗೆ ಇದನ್ನು ಕೊಟ್ಟರು ಎಂಬುದಕ್ಕೂ ಮೊದಲು ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಅಂದರೇನು ಎಂದು ತಿಳಿಯಬೇಕು. ಕೆಲವುದಿನಗಳ ಹಿಂದೆ ಬೆಂಗಳೂರಿನ ಯಾವುದೋ ಖಾಸಗಿ ವಿಶ್ವವಿದ್ಯಾಲಯದ ಕುಲಪತಿಯೊಬ್ಬ ತೊನೆಯಪ್ಪನ ತಮ್ಮನಂತೆ ನಡೆದುಕೊಂಡ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಆ ಮನುಷ್ಯ ನಾಲ್ಕು ಮದುವೆಯಾಗಿದ್ದಾನಂತೆ, ಹಲವಾರು ಖಾಸಗಿ ಫ್ಲಾಟ್ ಗಳನ್ನು ಖರೀದಿಸಿ ಮಹಿಳೆಯರನ್ನು ಅಲ್ಲಲ್ಲಿಗೆ ಕರೆಸಿಕೊಂಡು ತೆವಲು ತೀರಿಸಿಕೊಳ್ಳುತ್ತಿದ್ದನಂತೆ. ಸುಮಾರು ಐವತ್ತು ಐಫೋನ್ ಗಳನ್ನು ಖರೀದಿಸಿ ತೆವಲಿಗೆ ಸಹಕರಿಸಿದ ಒಬ್ಬೊಬ್ಬ ಹುಡುಗಿಗೂ ಒಂದೊಂದು ಐಫೋನ್ ಕೊಟ್ಟಿದ್ದನಂತೆ. ದಿನಕ್ಕೊಂದು ಹೊಸ ಹುಡುಗಿಯೊಡನೆ ಮಜಾ ಉಡಾಯಿಸುವ ಖಯಾಲಿ ಅವನದಾಗಿತ್ತಂತೆ.

ಮೊನ್ನೆ ದೂರು ನೀಡಿದವಳು ಸ್ವತಃ ಅವನ ಅಕ್ಕನ ಮಗಳಂತೆ! ಮೂವತ್ತರ ಹರೆಯದ ಅವಳನ್ನು ಕಳೆದ ನಾಲ್ಕಾರು ವರ್ಷಗಳಿಂದ ಅವಳ ಮನಸ್ಸಿಗೆ ವಿರುದ್ಧವಾಗಿ ಸತತ ಸಂಭೋಗಿಸಿದ್ದನಂತೆ. ಐದಾರು ವರ್ಷಗಳಾದರೂ ಆ ಹುಡುಗಿ ಮನೆಯಲ್ಲಿ ಯಾರಲ್ಲೂ ಈ ವಿಷಯ ಹೇಳಿಕೊಳ್ಳಲಿಲ್ಲ. “ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು ಕೆಲಸದಿಂದ ವಜಾ ಗೊಳಿಸುತ್ತೇನೆ” ಎಂದು ಹೆದರಿಸಿದ್ದರಿಂದ, ತನಗೆ ಅತಿಯಾಗಿ ಹಿಡಿಸಿದ್ದ ವಿಶ್ವವಿದ್ಯಾಲಯದ ಅದೇ ಕೆಲಸವನ್ನು ಬಿಡಬಾರದೆಂಬ ಇಚ್ಛೆಯಲ್ಲಿದ್ದ ಹುಡುಗಿ, ಸೋದರಮಾವನ ವಿಕೃತಿಗಳನ್ನು ಸಹಿಸಲಾರದೆ ಸಹಿಸಿದಳು.

ಮನೆಯಲ್ಲಿ ಅವಳ ನಡತೆಯಲ್ಲಿ ವಿಚಿತ್ರ ವರ್ತನೆಗಳು ಕಾಣಿಸಿಕೊಂಡಮೇಲೆ ತಾಯಿಗೆ ಅನುಮಾನ ಬಂದು ವಿಚಾರಿಸಿಕೊಳ್ಳುತ್ತ ಮಾನಸಿಕ ತಜ್ಞರುಗಳಿಂದ ಚಿಕಿತ್ಸೆ ಮಾಡಿಸಿದ್ದಾಳೆ. ಹಲವಾರು ವೈದ್ಯರುಗಳು ಹೇಳಿದ ಒಂದೇ ಕಾರಣವೇ ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್. ಅಂದರೆ ಮನಸ್ಸಿನ ಒಳಗೊಳಗೆ ಹಲವು ವಿಷಯಗಳನ್ನು ಅನಿವಾರ್ಯವಾಗಿ ಬಚ್ಚಿಟ್ಟುಕೊಂಡು, ಯಾರಲ್ಲೂ ಹೇಳಲಾಗದೆ ಕೊರಗುತ್ತ ಕೊನೆಗೆ ತಮಗರಿವಿಲ್ಲದೆ ವಿಚಿತ್ರ ವರ್ತನೆಗಳಲ್ಲಿ ತೊಡಗುತ್ತಾರಂತೆ ಈ ಕಾಯಿಲೆಗೆ ಒಳಗಾದವರು.

ಮೇಲಿನ ಕತೆಯಲ್ಲಿನ ಹುಡುಗಿ ಅಕ್ಕಪಕ್ಕದ ಮನೆಗಳ ಮುಂಬಾಗಿಲಿಗೆ ಕಟ್ಟಿದ್ದ ಅಲಂಕಾರಿಕ ಹಾರಗಳನ್ನೆಲ್ಲ ಕಿತ್ತು ಬಿಸಾಕುತ್ತಿದ್ದಳಂತೆ. ಮನೆಗಳೆದುರು ಚಪ್ಪಲಿಗಳನ್ನು ಕಂಡರೆ ತೆಗೆದು ಹಾಕುತ್ತಿದ್ದಳಂತೆ. ಕೇಳಿದರೆ” ಕ್ಲೀನ್ ಇಲ್ಲ, ಎಲ್ಲವನ್ನೂ ಕ್ಲೀನ್ ಮಾಡಬೇಕು” ಎನ್ನುತ್ತಿದ್ದಳಂತೆ. ತೆಗೆದೆಸೆದ ಸಾಮಗ್ರಿಗಳು ತಮಗೆ ಸಂಬಂಧಿಸಿದ್ದಲ್ಲ, ಮುಟ್ಟಲು ಅಧಿಕಾರವಿಲ್ಲ ಎಂಬ ಪ್ರಜ್ಞೆಕೂಡ ಅವಳಿಗಿರಲಿಲ್ಲವಂತೆ.

ಕಾರಣಗಳನ್ನು ಸಂಶೋಧಿಸಿದಾಗ ತಿಳಿದದ್ದು, ಹಾದರದ ಸೋದರಮಾವ “ನೀನು ಬರುವಾಗ ಸ್ನಾನ ಮಾಡಿಕೊಂಡು ಕ್ಲೀನ್ ಆಗಿ ಬಾ, ಕ್ಲೀನ್ ಆಗಿ ಇರಬೇಕು, ಕ್ಲೀನ್ ಆಗಿ ಇಟ್ಟುಕೊಳ್ಳಬೇಕು” ಎಂದು ತಾಕೀತು ಮಾಡುತ್ತಿದ್ದನಂತೆ. ತಲೆಯೊಳಗೆ ಆ ಕಾನ್ಸೆಪ್ಟ್ ಹೊಕ್ಕು ಕುಳಿತು ಮಾನಸಿಕ ವಿಭ್ರಮೆಗೆ ಒಳಗಾಗಿದ್ದಳು.

ಸರಕಾರಿ ಕೆಲಸದಲ್ಲಿದ್ದ ಅಮ್ಮ ದೂರದ ಊರುಗಳಲ್ಲಿದ್ದದ್ದರಿಂದ ಜೊತೆಗಿರುವ ಅಜ್ಜ-ಅಜ್ಜಿಯರಲ್ಲಿ ಅತ್ಯಂತ ಖಾಸಗಿ ವಿಚಾರಗಳನ್ನು ಹೇಳಿಕೊಳ್ಳಲು ಆಕೆಗೆ ಸಾಧ್ಯವಾಗಲಿಲ್ಲವೇನೋ. ಕೊನೆಗೊಮ್ಮೆ ಅಮ್ಮನ ಜೊತೆ ಇರಲು ಆರಂಭಿಸಿದಮೇಲೂ ಸಹ ಬಹಳ ದಿನಗಳವರೆಗೆ ಅವಳು ವಿಷಯವನ್ನು ಹೇಳಲು ಸಾಧ್ಯವಾಗಲಿಲ್ಲವಂತೆ.

ಈ ಘಟನೆಯನ್ನು ನೋಡಿದಾಗ ಅನಿರೀಕ್ಷಿತವಾಗಿ ಅನಪೇಕ್ಷಿತವಾದ ಪ್ರಸ್ತಾಪದ ಮೂಲಕ ಅಧಿಕಾರ ಚಲಾಯಿಸಿ ದುರ್ಬಳಕೆ ಮಾಡಿಕೊಳ್ಳುವವರ ತೆವಲಿಗೆ ಬಲಿಯಾದ ಮಹಿಳೆಯರ ಮಾನಸಿಕ ವರ್ತನೆ ಹೇಗಿರುತ್ತದೆ ಎಂಬುದು ಗೊತ್ತಾಗುತ್ತದೆ. ಇಷ್ಟಿದ್ದೂ ಮೂರ್ನಾಲ್ಕು ವರ್ಷಗಳ ಹರವಿನಲ್ಲಿ ನೂರಿನ್ನೂರು ಸಲ ಸಂಭೋಗಕ್ಕೆ ಒಳಗಾಗಿದ್ದ ಸಂತ್ರಸ್ತ ಮಹಿಳೆ ಮಾನಸಿಕವಾಗಿ ಅತ್ಯಂತ ತೊಳಲಾಟಕ್ಕೆ ಒಳಗಾಗಿದ್ದರೂ, ಮದುವೆ ವಯಸ್ಸಿಗೆ ಬಂದ ತನ್ನ ಹೆಣ್ಣುಮಕ್ಕಳನ್ನು ನೆನೆದು ಈ ಕಾಯಿಲೆಯಿಂದ ಬಚಾವಾಗಿರಬಹುದು ಎನಿಸುತ್ತದೆ. ಆದರೂ, ಕೆಲಮಟ್ಟಿಗೆ ತಾನು ಮಾನಸಿಕ ತಜ್ಞರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದನ್ನು ಆಕೆ ಹೇಳಿಕೊಂಡಿದ್ದಾಳೆ.

ಹಣ, ಅಧಿಕಾರ ಸಲೀಸಾಗಿ ದೊರೆತರೆ ಸುರಾಪಾನ ಮಾಡಿದ ಮಂಗನಂತಾಗುವುದು ಸುಳ್ಳಲ್ಲ. ಹಣ ಮತ್ತು ಅಧಿಕಾರ ಇದ್ದರೂ ಸ್ವನಿಯಂತ್ರಣದಲ್ಲಿರುವ ಮಂದಿಗೆ ಕೊರತೆಯಿಲ್ಲ; ಅಂತವರೆಲ್ಲ ಸ್ಥಿತಪ್ರಜ್ಞರು ಎನ್ನಬಹುದು. ಈಗ ಕಾಯಿಲೆಯ ವಿವರಣೆಯನ್ನು ನೋಡಿ.

Obsessive-Compulsive Disorder
Definition

Obsessive-Compulsive Disorder (OCD) is a common, chronic and long-lasting disorder in which a person has uncontrollable, reoccurring thoughts (obsessions) and behaviors (compulsions) that he or she feels the urge to repeat over and over.

Signs and Symptoms

People with OCD may have symptoms of obsessions, compulsions, or both. These symptoms can interfere with all aspects of life, such as work, school, and personal relationships.

Obsessions are repeated thoughts, urges, or mental images that cause anxiety. Common symptoms include:

* Fear of germs or contamination
* Unwanted forbidden or taboo thoughts involving sex, religion, and harm
* Aggressive thoughts towards others or self
* Having things symmetrical or in a perfect order

Compulsions are repetitive behaviors that a person with OCD feels the urge to do in response to an obsessive thought. Common compulsions include:

* Excessive cleaning and/or handwashing
* Ordering and arranging things in a particular, precise way
* Repeatedly checking on things, such as repeatedly checking to see if the door is locked or that the oven is off
* Compulsive counting

Not all rituals or habits are compulsions. Everyone double checks things sometimes. But a person with OCD generally:

* Can’t control his or her thoughts or behaviors, even when those thoughts or behaviors are recognized as excessive
* Spends at least 1 hour a day on these thoughts of behaviors
* Doesn’t get pleasure when performing the behaviors or rituals, but may feel brief relief from the anxiety the thoughts cause
* Experiences significant problems in their daily life due to these thoughts or behaviors

Some individuals with OCD also have a tic disorder. Motor tics are sudden, brief, repetitive movements, such as eye blinking and other eye movements, facial grimacing, shoulder shrugging, and head or shoulder jerking. Common vocal tics include repetitive throat-clearing, sniffing, or grunting sounds.

Symptoms may come and go, ease over time, or worsen. People with OCD may try to help themselves by avoiding situations that trigger their obsessions, or they may use alcohol or drugs to calm themselves. Although most adults with OCD recognize that what they are doing doesn’t make sense, some adults and most children may not realize that their behavior is out of the ordinary. Parents or teachers typically recognize OCD symptoms in children.

If you think you have OCD, talk to your doctor about your symptoms. If left untreated, OCD can interfere in all aspects of life.

ಈಗ ಮೊದಲಿನ ಕತೆಗೊಮ್ಮೆ ಹೊರಳಿ ನೋಡೋಣ-ದೂರು ಕೊಟ್ಟ ಮರುದಿನವೇ ಆ ವಿಶ್ವವಿದ್ಯಾಲಯದ ಕುಲಪತಿಯನ್ನು ಪೋಲೀದರು ಬಂಧಿಸಿದ್ದಾರೆ. ಈಗಾತ ಪೋಲೀಸ್ ಕಸ್ಟಡಿಯಲ್ಲೆ ವಿಚಾರಣೆಗೆ ಒಳಗಾಗಿದ್ದಾನೆ. ಆದರೆ ಒಂದಲ್ಲ, ಹಲವು ಭಿನ್ನ ಭಿನ್ನ ದೂರುಗಳು ದಾಖಲಾದರೂ ಹೋರಿ ತೊನೆಯಪ್ಪನನ್ನು ಪೋಲೀಸರು ಎಳೆದೊಯ್ಯಲಿಲ್ಲ ಏಕೆ ಎಂಬುದು ಸಾರ್ವಜನಿಕರಲ್ಲಿ ಹುಟ್ಟಿಕೊಂಡಿರುವ ಪ್ರಶ್ನೆ; ಉದಕ್ಕೆ ಬಿದ್ದರಾಮಯ್ಯನ ಐವತ್ತಿ ಕೋಟಿ ಡೀಲಿನ ಕೃಪಾಕಟಾಕ್ಷವೇ ಕಾರಣ ಎಂದು ಬಹಳ ಜನ ಹೇಳಿಕೊಳ್ಳುತ್ತಿದ್ದಾರೆ.

ಈಗ ನಮ್ಮ ಮುಂದಿರುವ ಬಹುದೊಡ್ಡ ಪ್ರಶ್ನೆ- ಮಠ ದೊಡ್ಡದೋ ಸಮಾಜ ದೊಡ್ಡದೋ? ಎಂಬುದು. ಸಮಾಜದಿಂದ ಮಠವೇ ಹೊರತು ಮಠದಿಂದ ಸಮಾಜವಲ್ಲ. ಸಮಾಜದ ಜನ ತಮ್ಮ ಆತ್ಮೋನ್ನತಿಗಾಗಿ, ಮುಕ್ತಿಗಾಗಿ, ಪುಣ್ಯಪ್ರಾಪ್ತಿಗಾಗಿ ಸನ್ಮಾರ್ಗದಲ್ಲಿ ನಡೆಯಲು ಸನ್ಯಾಸಿಗಳ ಮಾರ್ಗದರ್ಶವಿರಲಿ ಎಂಬುದಕ್ಕಾಗಿ ಮಠವನ್ನು ಕಟ್ಟಿದರು. ಬೇಲಿಯೇ ಎದ್ದು ಹೊಲವನ್ನು ಮೆಂದಂತೆ ಸನ್ಯಾಸಿ ಎನಿಸಿಕೊಂಡವನೆ ಕಚ್ಚೆ ಹರಿದುಕೊಂಡು ಮಹಿಳೆಯರೊಡನೆ ತ್ರಿಕಾಲ ’ಏಕಾಂತ’ಕ್ಕೆ ತೊಡಗಿಬಿಟ್ಟರೆ ಅಂತ ಸನ್ಯಾಸಿಯಿಂದ ಸಮಾಜ ಏನನ್ನು ನಿರೀಕ್ಷಿಸಲಾದೀತು?

ಆಚಾರ್ಯ ಶಂಕರರು ಅಷ್ಟು ಹರೆಯದಲ್ಲೇ ಹೇಳಿದ ಎರಕದಂತಹ ಮಾತು-“ಕಾಮಾತುರಾಣಾಂ ನ ಭಯಂ ನ ಲಜ್ಜಾ. ವಿದ್ಯಾತುರಾಣಾಂ ನ ಸುಖಂ ನ ನಿದ್ರಾ” ಹೌದಲ್ಲವೇ? ಹಿಂದೊಮ್ಮೆ ಬೆಂಗಳೂರು ನಗರದ ಮೆಜೆಸ್ಟಿಕ್ ಭಾಗದ ನಗರಸಾರಿಗೆ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹೆಂಗಸೊಳ್ಳಳ ಎದುರು ತನ್ನ ಪ್ಯಾಂಟಿನ ಜಿಪ್ ಎಳೆದು ಹೊರತೆರೆದು ತೋರಿಸಿ ನಗುತ್ತಿದ್ದ! ಆ ದಾರಿಯಲ್ಲಿ ಹಾದುಹೋಗುತ್ತಿದ್ದ ನಮ್ಮಂತಹ ಗಂಡಸರೇ ಮುಜುಗರಕ್ಕೊಳಗಾಗಿದ್ದರೆ ಹೆಂಗಸರ ಕತೆ ಇನ್ನೇನಿರಬಹುದು?

ವಿದೇಶೀ ಕಾಂಡೋಮ್ ಕಂಪನಿ ನಡೆಸಿದ ಸರ್ವೇ ಒಂದು ಹೀಗಿದೆ-ನಗರ ಪ್ರದೇಶಗಳ ಪ್ರತಿಶತ 28ರಷ್ಟು ಭಾರತೀಯರು ಫೋನ್‌ನಲ್ಲಿ ಸೆಕ್ಸಿನ ವ್ಯವಹಾರ ನಡೆಸುತ್ತಾರೆ. ಇಷ್ಟೇ ಪ್ರಮಾಣದ ಮಂದಿ ಮೊಬೈಲಿನಲ್ಲಿ ಕಾಮ ಚುಟುಕು (ಎಸ್‌ಎಂಎಸ್‌) ಸಂದೇಶ ಕಳಿಸುತ್ತಾರೆ. ಇದೇ ಕೆಲಸವನ್ನು ಮಾಡುವ ಜಗತ್ತಿನ ಸರಾಸರಿ ಮಂದಿಯ ಸಂಖ್ಯೆಗೆ ಭಾರತೀಯ ಕಾಮಾಕಾಂಕ್ಷಿಗಳ ಸಂಖ್ಯೆ ಸಮನಾಗುತ್ತದೆ. ಅಷ್ಟೇ ಅಲ್ಲ , ಜಗತ್ತಿನಲ್ಲಿ ಸರಾಸರಿ ಪ್ರತಿಶತ 11ರಷ್ಟು ಜನ ಕಾಮತೃಷೆ ತಣಿಸಿಕೊಳ್ಳಲು ವೇಶ್ಯೆಯರ ಸಹವಾಸ ಮಾಡಿದ್ದರೆ, ಭಾರತದ ಪ್ರತಿಶತ 17ರಷ್ಟು ಜನ ಹಣ ಕೊಟ್ಟು ಸೆಕ್ಸು ಸುಖ ಪಡೆದಿದ್ದಾರೆ.

ಸಮೀಕ್ಷೆಗೊಳಗಾದವರ ಪೈಕಿ ಭಾರತದ ನಾಲ್ಕು ಪ್ರತಿಶತ ಹುಡುಗಿಯರು ತಮ್ಮ ಬಾಸ್‌ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಾರೆ. ಶೇ. 10ರಷ್ಟು ಗೆಳೆಯ/ಗೆಳತಿಯರು ದೈಹಿಕ ಸಂಬಂಧ ಹೊಂದಿದ್ದಾರೆ. ಕಾರ್ಪೊರೇಟ್‌ ಜಗತ್ತು ಸಂಬಂಧಗಳ ಸ್ವರೂಪಗಳನ್ನು ಬದಲಿಸುತ್ತಿದ್ದು, ಭಾರತದ ಸಾಂಪ್ರದಾಯಿಕ ಮನಸ್ಸುಗಳು ಹಳೆಯ ಕಟ್ಟುಪಾಡುಗಳನ್ನು ತೊರೆದು, ಮುಕ್ತ ಕಾಮಾಟಕ್ಕೆ ಇಳಿಯುತ್ತಿವೆ ಎನ್ನುತ್ತಾರೆ ಮನಃ ಶಾಸ್ತ್ರಜ್ಞರು. ಸಮೀಕ್ಷೆಗೆ ಒಳಪಡಿಸಿದವರಲ್ಲಿ ನಗರದ ಮಂದಿಯೇ ಹೆಚ್ಚು. ಸಾಮಾಜಿಕ ಬದಲಾವಣೆಯ ಗತಿ ವೇಗವಾಗಿರುವುದು ನಗರದಲ್ಲಿ, ಅದರಲ್ಲೂ ವಿಶೇಷವಾಗಿ ಕಾರ್ಪೊರೇಟ್‌ ವಲಯದಲ್ಲಾದ್ದರಿಂದ ಹೀಗೆ ಮಾಡಲಾಯಿತು ಎಂದು ವಿದೇಶೀ ಕಂಪನಿ ಹೇಳಿಕೊಂಡಿದೆ.

ಇನ್ನೊಂದನ್ನು ಗಮನಿಸಬೇಕು-ಕಚ್ಚೆಹರುಕರಿಗೆ ಜಾತಿ, ವರ್ಣಗಳ ಭೇದವಿಲ್ಲ, ಯಾವ ನೀತಿಯೂ ಅವರಿಗೆ ತಾಗುವುದಿಲ್ಲ. ಯಾರ ಬಾಯಿಮಾತು-ಸಲಹೆಗಳೂ ಅವರನ್ನು ತಡೆಯಲಾರವು. ಅವರನ್ನು ನಿಯಂತ್ರಿಸುವುದು ಕೇವಲ ಶಿಕ್ಷೆಯಿಂದ ಮಾತ್ರ ಸಾಧ್ಯ. ಶಿಕ್ಷೆಗೆ ಒಳಗಾದವರೂ ಜೈಲುಗಳಲ್ಲಿ ಮಾವಂದಿರಿಗೆ ಭಕ್ಷೀಸು ಕೊಟ್ಟು ಬೇಕಾದ್ದನ್ನಿ ಪಡೆದುಕೊಳ್ಳುತ್ತಿದ್ದ ಬಗ್ಗೆ ಅಲ್ಲಲ್ಲಿ ವರದಿ ಕೇಳಿಬರುತ್ತಿರುತ್ತದೆ.

ಉನ್ನತ ಮನೋಭಾವದಿಂದ ಕೃಶಕಾಯದ ಭಟ್ಟರು ಜಾಗ ಕೊಡದಿದ್ದರೆ ಇಂದು ಬೆಂಗಳೂರಿನಲ್ಲಿ ಮಠ ಕಟ್ಟಲು ಹೋರಿಯಿಂದ ಸಾಧ್ಯವಾಗುತ್ತಿರಲಿಲ್ಲ. ಸಿಕ್ಕ ಜಾಗದಲ್ಲಿ ಸಮಾಜದ ಮುಖಂಡರು ಸದ್ಗುಣಿಯವರ ನೇತೃತ್ವದಲ್ಲಿ ಕಟ್ಟಡಗಳನ್ನು ಕಟ್ಟದಿದ್ದರೆ ಮಠ ಇಷ್ಟು ಬೆಳೆಯುತ್ತಿರಲಿಲ್ಲ. ಜಾಗ ಕೊಟ್ಟವರೂ ಮಠ ಕಟ್ಟಿಸಿದವ್ರು ಇಬ್ಬರೂ ಈಗ ಹೋರಿ ತೊನೆಯಪ್ಪನ ವಿರೋಧಿಗಳು ಎನಿಸಿದ್ದಾರೆ!

’ದೋಣಿ ದಾಟಿದ ಮೇಲೆ ಅಂಬಿಗನ ಹಂಗೇಕೆ?’ ಎಂಬ ಗಾದೆಯಂತೆ, ಹೋರಿ ತೊನೆಯಪ್ಪನಿಗೆ ಇಂದು ಸದ್ಗುಣಿಗಳು ಬೇಕಾಗಿಲ್ಲ. ತನ್ನ ಕಚ್ಚೆಹರುಕು ವ್ಯವಹಾರಗಳನ್ನು ಮುಚ್ಚಿಹಾಕಲು ಸಹಕರಿಸದಿದ್ದುದಕ್ಕೆ ಅವರ ಮೇಲೆ ಎಲ್ಲಿಲ್ಲದ ದ್ವೇಷ. ಜೊತೆಗೆ ಸಮಾಜ ನಡೆಸುತ್ತಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ತಾಕೀತು, ದಬ್ಬಾಳಿಕೆ. ಅಂದರೆ ಸದ್ಗುಣಿಯವರ ಸ್ವಾತಂತ್ರ್ಯ ಹರಣ. ಅವರ ಮನೆಮಂದಿಗೆಲ್ಲ ಬೆದರಿಕೆ. ಇದನ್ನೆಲ್ಲ ನೋಡಿದರೆ ಇವನೊಬ್ಬ ಸನ್ಯಾಸಿಯಲ್ಲ ಎಂಬುದನ್ನು ಕಣ್ಣಿಲ್ಲದವರೂ ಹೇಳಬಹುದು.

ತುಮರಿಗೆ ಲಭ್ಯವಾದ ಮಾಹಿತಿಯಂತೆ ಮಠದ ಗಿಂಡಿಗೆ ಹೆಂಡತಿಯೆಂದು ಕಟ್ಟಿಟ್ಟು ತಾನು ಸಂಭೋಗಿಸುತ್ತಿರುವ ಮಹಿಳೆಯೊಬ್ಬಳು ಈಗ ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಗೆ ಒಳಗಾಗಿದ್ದಾಳೆ. ಆಗಾಗ ಆಂಬುಲೆನ್ಸ್ ಬಂದು ಎತ್ತಿಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದೆ! ಮಾನಸಿಕ ಕಾಯಿಲೆಗಳಿಗೆ ನೀಡುವ ಮಾತ್ರೆಗಳ ಬಳಕೆಯಿಂದ ಶರೀರ ದಪ್ಪಗಾಗಿದೆ. ಗುರುವೆಂದು ಅತಿಯಾಗಿ ನಂಬಿದ್ದ ಕುಟುಂಬದ ನಿತ್ಯ ಕಣ್ಣೀರಿಗೆ ಕಾರಣವಾದ ಈ ಕತೆ ಬಹಳ ಶೋಚನೀಯ.

ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಒಮ್ಮೆ ಶುರುವಾದರೆ ಜೀವನ ಪರ್ಯಂತ ಹಾಗೆ ಉಳಿದುಬಿಡುತ್ತದೆ; ಶರೀರಕ್ಕೆ ಆದ ಗಾಯ ಮಾಗಬಹುದು ಮನಸ್ಸಿಗೆ ಆಗುವ ಗಾಯ ಮಾಗುವುದು ಬಹಳ ಕಷ್ಟ, ಕೆಲವೊಮ್ಮೆ ಸಾಧ್ಯವೂ ಇಲ್ಲ. ಇತ್ತೀಚೆಗೆ ನಿಧನವಾದ ಅರುಣಾ ಶಾನಭಾಗ್ ಕತೆಯನ್ನು ನೀವು ಕೇಳಿರಬೇಕಲ್ಲ? ಹರೆಯದಲ್ಲಿ ಸುಂದರಿಯಾಗಿದ್ದ ಆಕೆಯನ್ನು ಅವಳು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಬಲಾತ್ಕಾರದಿಂದ ಭೋಗಿಸಿದ. ಅದರ ನಂತರ ಜೀವಚ್ಛವವಾಗಿ ಅದೇ ಆಸ್ಪತ್ರೆಯಲ್ಲಿ ಶುಶ್ರೂಷೆ ತೆಗೆದುಕೊಳ್ಳುತ್ತಿದ್ದ ಅರುಣಾ ನಂತರ ೪೨ ವರ್ಷಗಳವರೆಗೆ ಬದುಕಿದ್ದರೂ ಅವಳಿಗೂ ಅದು ಗೊತ್ತಿಲ್ಲದಿರಬಹುದು, ಅವಳ ಸಹೋದ್ಯೋಗಿಗಳು-ಕುಟುಂಬಿಕರು ಅನುಭವಿಸಿದ ಯಾತನೆ ಹೇಳತೀರದು.

ಭಕ್ತರ ದೇಣಿಗೆಯ ಹಣದಲ್ಲಿ ಬೇಕಷ್ಟು ಮಜಾ ಉಡಾಯಿಸುತ್ತಿರುವ ತೊನೆಯಪ್ಪ ಹೋಗದ ಜಾಗಗಳಿಲ್ಲ, ನಡೆಸದ ’ಏಕಾಂತ’ಗಳಿಲ್ಲ. ಭಸ್ನಾಸುರ ಅಥವಾ ಕೀಚಕ ಸುಂದರಿಯರನ್ನು ಕಂಡರೆ ಬಿಡುತ್ತಿರಲಿಲ್ಲವಂತೆ. ಅದೇರೀತಿ ಈ ಕೀಚಕನ ಕಣ್ಣಿಗೆ ಬಿದ್ದ ಸುಂದರಿಯರು ತಪ್ಪಿಸಿಕೊಳ್ಳುತ್ತಾರೆಂಬ ಯಾವ ಭರವಸೆಯೂ ಇಲ್ಲ. ಬೆರಳುಮಾಡಿದರೆ ತಂದೊಪ್ಪಿಸುವ ಜೊಲ್ಲುನಾಯಿಗಳಿಗೆ ಪ್ರಸಾದ ರೂಪದಲ್ಲಿ ಕೆಲವರನ್ನು ಅನುಗ್ರಹಿಸುವುದರಿಂದ ಹಣ-ಹೆಣ್ಣಿಗಾಗಿ ಆ ನಾಯಿಗಳು ಅವ ಹೇಳಿದಂತೆ ಕುಣಿಯುತ್ತವೆ.

ಕಾನೂನಿಗೆ ಕುಣಿಕೆಗೆ ಸಿಲುಕದಂತೆ ಎದುರುವಾದಿಗಳಿಗೆ ನಾಜೂಕಾಗಿ ಆದರೆ ಬಲವಾಗಿ ಕಂಬಳಿಯಲ್ಲಿ ಕಲ್ಲುಹಾಕಿಕೊಂಡು ಗುದ್ದುವ ಹಾಗೆ ಗುದ್ದುವ ಪಟಾಲಮ್ಮಿನ ಸದಸ್ಯರಿಗೆ ಸಮಾಜದ ಬಹುಭಾಗ ಹೆದರಿಕೊಂಡು ಇಲ್ಲಿಯವರೆಗೆ ಕಾಲ ಕಳೆಯಿತು; ಈಗ ಹಾಗಿಲ್ಲ, ಜನ ಮುಂದೆ ಬಂದಿದ್ದಾರೆ. ರೇಷ್ಮೆಯಲ್ಲಿ ಚಪ್ಪಲಿ ಸುತ್ತಿ ಬಾರಿಸುವ ತುಮರಿಯ ಲೇಖನಗಳು ತೊನೆಯಪ್ಪನ ಅಂಡಿಗೂ ಮಂಡೆಗೂ ಚೆನ್ನಾಗಿ ತಾಗಿ ಬಾಸುಂಡೆಗಳೆದ್ದಿವೆ ಎಂಬುದಕ್ಕೆ ಅವನ ಛೂ ನಾಯಿಗಳ ಹೇವರಿಕೆಯೇ ಸಾಕ್ಷಿ.

ತನ್ನ ಪಟಾಲಮ್ಮುಗಳ ಮೂಲಕ ಸಮಾಜದ ಮುಖಂಡರ ಚಲನವಲನಗಳನ್ನೂ ಹಿಡಿತದಲ್ಲಿಡುವ ಹುನ್ನಾರ ನಡೆಸುತ್ತ ತಾನು ನಿರ್ದೇಶಿಸಿದಂತೆ ನಡೆದುಕೊಳ್ಳಬೇಕೆಂದು ಹೇಳುತ್ತಿರುವ ಬೇಲ್ ಕುಮಾರನ ಬೇಲ್ ನಿರಾಕರಿಸಿ ಮಾವಂದಿರು ’ಬೇಲ್ ಪೂರಿ’ ತಿನ್ನಿಸಬೇಕಾದ ಕಾಲ ತೀರಾ ಹತ್ತಿರದಲ್ಲಿದೆ [ಅಂದಹಾಗೆ ಇದು ಸಾಗರದ ಬೇಲ್ ಪೂರಿ ಕುಟುಂಬದ ಶಾಪದ ಫಲವೂ ಆಗಿರಬಹುದು] ಮತ್ತು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ.

ಕೊಚ್ಚೆಯನ್ನು ಎಷ್ಟುದಿನ ಮುಚ್ಚಿಟ್ಟರೂ ಅದು ಸ್ವಚ್ಛವಾಗದು. ಸತ್ತವ್ಯಕ್ತಿಗೆ ಎಷ್ಟು ದಿನ ವೆಂಟಿಲೇಟರ್ ಹಾಕಿದರೂ ಮತ್ತೆ ಜೀವ ಬರದು. ಕೊಳೆತ ಕುಂಬಳಕಾಯಿ ಮತ್ತೆ ಹೊಸದರಂತೆ ಕಳೆಗಟ್ಟದು. ಅದರಂತೆ ಮಹಾನ್ ಲಂಪಟನೂ-ವಿಕೃತ ಕಾಮಿಯೂ, ಕ್ರಿಮಿನಲ್ಲೂ ಆಗಿರುವ ತೊನೆಯಪ್ಪ ಮಠದ ಅಧಿಕಾರದಲ್ಲೇ ಮುಂದುವರಿದರೆ ಸಮಾಜದಲ್ಲಿ ಇನ್ನಷ್ಟು ಹೆಣಗಳು ಉರುಳುವುದು ನಿಶ್ಚಿತ. ಇನ್ನೂ ಸಾವಿರಾರು ಮಹಿಳೆಯರು, ಹುಡುಗಿಯರು ಶೀಲ ಕಳಕೊಳ್ಳೋದು ಖಚಿತ. ಅಂತವನನ್ನು ಗುರುವೆನ್ನುವುದು ಅಸಂಗತ; ಬಹಳ ದೊಡ್ಡ ದುರಂತ. ಮಠದ ಹೋರಿಯ ಮಗ್ಗಲು ಮುರಿಯಲು ಸಮಾಜದಲ್ಲಿ ಜನರೇ ಇಲ್ಲವೇ? ಇದ್ದರೆ ಇನ್ನೂ ಯಾಕೆ ಸುಮ್ಮನೆ ಕುಳಿತಿದ್ದಾರೆ?

Thumari Ramachandra

source: https://www.facebook.com/groups/1499395003680065/permalink/1718135625139334/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s