ಹದಿನೈದು ಕೋಟಿ ಕೊಟ್ಟರೆ ಹೋರಿಸ್ವಾಮಿಗೆ ತುಮರಿಸ್ವಾಮಿಯು ದರ್ಶನ ಕೊಟ್ಟು ಹೋಗ್ತಾನೆ

ಹದಿನೈದು ಕೋಟಿ ಕೊಟ್ಟರೆ ಹೋರಿಸ್ವಾಮಿಗೆ ತುಮರಿಸ್ವಾಮಿಯು ದರ್ಶನ ಕೊಟ್ಟು ಹೋಗ್ತಾನೆ

ಈಗೆಲ್ಲ ಸ್ವಾಮಿ ಎಂಬುದಕ್ಕೆ ಬೆಲೆಯೇ ಇಲ್ಲ. ಹಾಗಾಗಿ ತುಮರಿ ತನ್ನ ಹೆಸರಿಗೂ ತುಮರಿಸ್ವಾಮಿಯಗಿಬಿಟ್ಟಿದ್ದಾನೆ. ಕಾವಿ ಎಳಕೊಳ್ಳೋದೊಂದೆ ಬಾಕಿ-ತುಮರಿ ತುರ್ಯಾನಂದರು. ತುಮರಿ ತುರ್ಯಾನಂದನ ಎರಡನೇ ಲೇಖನ ಬರುತ್ತಿದ್ದಂತೆ ಹೋರಿಸ್ವಾಮಿ ತೊನೆಯಪ್ಪನ ಕಿವಿ-ಕಣ್ಣುಗಳೆಲ್ಲ ನಿಮಿರಿ ನಿಂತಿವೆ. ಬಾಕಿ ಉಳಿದದ್ದು ನಿಮಿರುವುದಕ್ಕೆ ಅಡಚಣೆಯಾಗುತ್ತಿತ್ತು. ಅಂದೆ ತನ್ನ ಪಟಾಲಮ್ಮಿನ ಬೇಟೆ ನಾಯಿಗಳನ್ನು ಕರೆದು ಛೂ ಬಿಟ್ಟಿದ್ದಾನೆ. ಹೊರಗೆ ಹೊರಟ ನಾಯಿಗಳು ಅಖಂಡ ಸಮಾಜದ ಮೂಲೆ ಮೂಲೆಗಳನ್ನೆಲ್ಲ ಹುಡುಕುವಂತೆ ಗುರಿಕಾರರಿಗೆ ಅಪ್ಪಣೆ ತಿಳಿಸಿವೆ.

ತುಮರಿಯಲ್ಲಿ ಎಲ್ಲೆಲ್ಲಿ ಹುಡುಕಿದರೂ ತುಮರಿಸ್ವಾಮಿ ಸಿಗಲಿಲ್ಲ! ಯಾರ ಮನೆ, ಯಾರು ಅವ? ಏನು ಕೆಲಸಮಾಡ್ತಾನೆ? ಎಲ್ಲಿದ್ದಾನೆ? ಹಾವಾಡಿಗ ಮಠದ ನಾಲ್ಕುಗೋಡೆಯ ನಡುವೆ ನಡೆಸುವ ಮೀಟಿಂಗಿಗೆ ಬರುತ್ತಾನಾ? ಎಂದೆಲ್ಲ ತನಿಖೆ ಶುರುಹಚ್ಚಿಕೊಂಡಿವೆ. ಹೋರಿ ತೊನೆಯಪ್ಪನ ಪಟಾಲಮ್ಮಿನ ತನಿಖೆ ಎಂದರೆ ಅದು ಮಾವಂದಿರ ತನಿಖೆಗಿಂತ ದೊಡ್ಡ ತನಿಖೆ.

ಆರೆಂಟು ತಿಂಗಳುಗಳು ಅಲೆದಾಡಿದರೂ ಯಾರೊಬ್ಬರಿಗೂ ಎಲ್ಲ್ಯೂ ತುಮರಿಸ್ವಾಮಿಯ ಸುಳಿವೇ ಸಿಗಲಿಲ್ಲ ಪಾಪ! ತುಮರಿಸ್ವಾಮಿ ಅಲ್ಲಿದ್ದರಲ್ಲವೇ ಸಿಗೋದು? ತುಮರಿಸ್ವಾಮಿ ಎನ್.ಅರ್,ಐ ಎಂಬುದನ್ನು ಖಾತ್ರಿಪಡಿಸಿಕೊಂಡ ಹೋರಿಬಳಗದ ನೂರಾರು ಜನ ತುಮರಿಸ್ವಾಮಿಯನ್ನು ಸಂಪರ್ಕಿಸಲು ಹರಸಾಹಸ ಪಟ್ಟಿದ್ದಾರೆ. ತಮ್ಮ ಯಾವ್ಯಾವುದೋ ಕಾರ್ಯಕ್ರಮಗಳಿಗೆ ಅಲ್ಲಿ ಎನ್.ಆರ್.ಐ ಫಂಡ್ ದೊರೆಯುತ್ತದೋ ಎಂದೂ ಪ್ರಯತ್ನಿಸಿದ್ದಾರೆ. ತುಮರಿಸ್ವಾಮಿ ಅದಕ್ಕೆಲ್ಲ ಸೊಪ್ಪು ಹಾಕಲೇ ಇಲ್ಲ. ದೂರವಾಣಿ ಸಂಖ್ಯೆಯನ್ನು ನೀಡಲೇ ಇಲ್ಲ.

ಪಾಪ, ತುಮರಿಸ್ವಾಮಿಯನ್ನು ಹುಡುಕಲು ಹೊರಟು ಹುಳಿದ್ರಾಕ್ಷಿ ಎನ್ನುತ್ತ ಹೊರಟ ನರಿಯಂತೆ, ಹಾದಿಯಲ್ಲಿ ಪಾಪದ ಬನಾರಿ ಬಾವಯ್ಯ, ಕಡ್ತೋಕೆ ರಾಮಣ್ಣ ಮೊದಲಾದವರಿಗೆಲ್ಲ “ನೀನೇ ಬೇನಾಮಿ ಖಾತೆಯಲ್ಲಿ ಬರೆಯೋದು” ಎನ್ನುತ್ತ ಎಡತಾಕಿದ್ದಾರೆ. ಕಚ್ಚಲು ಬರುವ ನಾಯಿಗಳಿಂದ ತಪ್ಪಿಸಿಕೊಳ್ಳಲು ಅವರೆಲ್ಲ ಬಹಳ ಕಷ್ಟಪಟ್ಟರು. ಬೇಡದ ಕರೆಗಳನ್ನೆಲ್ಲ ಸ್ವೀಕರಿಸಿದರಂತೆ.

ಈ ಲಕ್ಷಣವನ್ನು ತುಮರಿಸ್ವಾಮಿ ಕಡ್ತೋಕೆ ರಾಮಣ್ಣನಿಗೆ ಮೊದಲೇ ಹೇಳಿದ್ದ. ಹೋರಿಸ್ವಾಮಿಯ ಅಂಡಿಗೆ ಉರಿಹತ್ತುವಂತೆ ಮಾಡ್ತೇನೆ ಎಂದಿದ್ದ. ಕೆಲವು ಲೇಖನಗಳ ನಂತರ ತೊನೆಯಪ್ಪನ ಪರಿಪೂರ್ಣ ಚರಿತ್ರೆ ಸಮಾಜದ ಎಲ್ಲರಿಗೂ ಹೀಗೇ ಅಂತ ನಿಚ್ಚಳವಾಗಿಬಿಟ್ಟಿದೆ. ಹಾಗಾಗಿ ಬಹಳಜನ ತೊನೆಯಪ್ಪನನ್ನು ದೂರಮಾಡಲು ಆರಂಭಿಸಿದ್ದಾರೆ. ಒಂದು ಹಂತದಲ್ಲಿ ದಕ್ಷಿಣದ ಕಡೆಯ ಅರ್ಧಕ್ಕಿಂತ ಹೆಚ್ಚುಭಕ್ತರು ತಿರುಗಿಬಿದ್ದು ಹೋರಿಸ್ವಾಮಿಯ ಬೀಜ ಒಡೆದು ಬರೆಹಾಕಲು ತಯರಾಗಿಬಿಟ್ಟಿದ್ದಾರೆ. ದೂರದಿಂದ ಇದೆಲ್ಲ ’ಪರಿಮಳ’ದ ರಸಗ್ರಹಣ ಮಾಡಿದ ಜಗದ್ಗುರು ತೊನೆಯಪ್ಪನವರು ಸಾಮಾನು ಕುಯ್ದ ಹಂದಿ ಕೂಗಿದಂತೆ ಕೂಗಾಡ ತೊಡಗಿದ್ದಾರೆ!

ಹಲವು ಸಮಾಜಗಳಲ್ಲಿ ಈ ರೀತಿಯ ಸ್ವಾಮಿ ಏನಾದರೂ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸ್ವಾಮಿ ಕೈಕಾಲು ತುಂಡುಮಾಡಿಕೊಂಡು “ಆ ಒಂದು…ಆ…ಎರಡು” ಎನ್ನುತ್ತ ತಿರುಗಬೇಕಾಗ್ತಿತ್ತು. ಗೋವಾಮೂಲದ ಯಾವುದೋ ಸಮಾಜದ ಮಠದಲ್ಲೂ ಕಚ್ಚೆ ಹರುಕನೊಬ್ಬ ತಯಾರಾಗಿದ್ದನಂತೆ. ಹಿರಿಸ್ವಾಮಿಗೂ ಕಿರಿಸ್ವಾಮಿಗೂ ಆ ವಿಷಯದಲ್ಲಿ ತಕರಾರು ಸುರುವಾಗಿ ಆ ಸಮಾಜದ ಮುಖಂಡರೆಲ್ಲ ಸಭೆ ಸೇರಿದರಂತೆ. ಸಭೆಯಲ್ಲಿ ಕೂತಿದ್ದ ಕಚ್ಚೆ ಹರುಕ-ಕಿರಿಯನಿಗೆ.”ನೋಡಪ್ಪಾ ನಿನ್ನ ಕಚ್ಚೆ ಗಟ್ಟಿಕಟ್ಟಿಕೋ ಇಲ್ಲಾ ಪೀಠ ಬಿಡು” ಎಂದು ಒಂದೇ ಸಲ ವಾರ್ನಿಂಗ್ ಕೊಟ್ಟರಂತೆ. ಅವತ್ತಿನಿಂದ ಆ ಕಚ್ಚೆಹರುಕ ತನ್ನ ಕಚ್ಚೆ ಗಟ್ಟಿಮಾಡಿಕೊಂಡು ಕೇವಲ ಒಬ್ಬಿಬ್ಬರನ್ನು ಕಾಯಂ ಇರಿಸಿಕೊಂಡಿದ್ದಾನಂತೆ, ಹೋಗಲಿ ಬಿಡಿ ನಮಗ್ಯಾಕೆ?

ಅವರದ್ದೆಲ್ಲ ಹಾಗೆ ಏಕ್ ಮಾರ್ ದೋ ಟುಕಡಾ. “ಇರ್ತೀಯೋ ಸರಿಯಾಗಿ ನಾವು ಹೇಳುದ ಹಾಗೆ ಇರು. ಹೊತ್ತಿಂದೊತ್ತಿಗೆ ದೇವರ ಪೂಜೆ ಮಾಡು, ಬಂದವರಿಗೆ ಬಣ್ಣದ ಅಕ್ಕಿ ಕೊಡು. ಅನ್ಯ ಸಮಾಜದಿಂದ ನಮ್ಮ ಸಮಾಜಕ್ಕೆ ಯಾವುದೇ ತೊಂದರೆಯಾಗದಂತೆ ಒಗ್ಗಟ್ಟಿನಿಂದ ಇರುವಂತೆ ನೋಡಿಕೋ. ಸಮಾಜ ಘಾತುಕ ಕೆಲಸ ಮಾಡಿದರೆ ಮಾತ್ರ ನಿನ್ನನ್ನು ಸುಮ್ಮನೇ ಬಿಡೋದಿಲ್ಲ” ಅಂತ ಕೋಣೇಲಿ ಹಾಕಿಕೊಂಡು ಸ್ವಾಮಿಯಾದವನಿಗೆ ನೀರಿಳಿಸ್ತಾರೆ. ನಮ್ಮಲ್ಲಿ ಹಾಗಿಲ್ಲ. ಕಚ್ಚೆಹರುಕನೇ ತನ್ನನ್ನು ವಿರೋಧಿಸುವವರನ್ನು ಕರೆಸಿ ಕೋಣೇಲಿ ಹಾಕಿಕೊಂಡು ತನ್ನ ರೌಡಿ ಪಡೆಯ ಮೂಲಕ ಶರ್ಟು ಪ್ಯಾಂಟು ಹರಿದು ಹಾಕಿಸಿ ತದುಕುತ್ತಾನೆ; ಇದನ್ನಲ್ಲವೇ ವಿಪರ್ಯಾಸ ಅನ್ನೋದು?

ಅಷ್ಟಕ್ಕೂ ತುಮರಿಸ್ವಾಮಿಯ ಬಗ್ಗೆ ಇತ್ತೀಚೆಗೆ ಅಪಾರ ಕಾಳಜಿ ವಹಿಸುತ್ತಿರುವ ಹೋರಿಸ್ವಾಮಿಯ ಪಟಾಲಮ್ಮಿಗೆ ತುರ್ಯಾನಂದರು ಹೇಳೋದೊಂದೇ-ಹದಿನೈದು ಕೋಟಿ ಕೊಟ್ಟರೆ ತುಮರಿಸ್ವಾಮಿ ಹೋರಿಸ್ವಾಮಿಗೆ ನಿಜರೂಪ ದರ್ಶನ ನೀಡಿ ಹೋಗ್ತಾನೆ. ತುಮರಿ ಸ್ವಾಮಿ ಅಮೆರಿಕದಲ್ಲಿ ಕೆಲಸ ಮಾಡ್ತಿರೋ ಕಚೇರಿಯಲ್ಲಿ ಹಾಗೆಲ್ಲ ರಜ ಕೊಡೋದಿಲ್ಲ. ರಜ ಹಾಕಿದರೆ ಅವರಿಗೆ ಕೋಟಿಗಳಲ್ಲಿ ವ್ಯಾವಹಾರಿಕ ನಷ್ಟ ಆಗ್ತದೆ. ಮೇಲಾಗಿ ವಿಮಾನಯಾನದಲ್ಲಿ ಹೋಗಿ ಬರೋ ಖರ್ಚು, ತುಮರಿಯ ಸಂಬಳ ಇರುತ್ತದಲ್ಲ. ಇದೆಲ್ಲ ಸೇರಿ ಕಡಿಮೆ ಎಂದರೂ ಹದಿನೈದುಕೋಟಿ ಆಗಬಹುದು.

ಹೋರಿ ತೊನೆಯಪ್ಪನ ಪಟಾಲಮ್ಮಿಗೆ ದಮ್ಮಿದ್ದರೆ ಹದಿನೈದು ಕೋಟಿಯನ್ನು ಕೊಡೋದಕ್ಕೆ ಮುಂದೆ ಬರಲಿ; ನಲ್ವತ್ತೆಂಟು ಗಂಟೆಗಳಲ್ಲಿ ತುಮರಿಸ್ವಾಮಿ ಹೋರಿಸ್ವಾಮಿಯ ಮುಂದೆ ಬಂದು ದರ್ಶನ ನೀಡಿ ಮರಳಿ ಹೋಗ್ತಾನೆ. ಶೋಭರಾಜಾಚಾರ್ಯನ ವೀರ್ಯಕರಗಳ ಬಣ್ಣದ ಅಕ್ಕಿ ತೆಗೆದುಕೊಳ್ಳೋದಿಲ್ಲ. ಮತ್ತು ಯಾವುದೇ ಕಾರಣಕ್ಕೂ ರಾಜೀ ಸಂಧಾನಕ್ಕೆ ಒಪ್ಪೋದಿಲ್ಲ.

ಇದನ್ನು ಓದಿದ ತೊನೆಯಪ್ಪನ ಬೀಡಾಡಿ ನಾಯಿಗಳು ಹದಿನೈದು ಕೋಟಿಗೆ ಡಿಮಾಂಡ್ ಇಟ್ಟು ಕರೆಮಾಡಿ ಬ್ಲ್ಯಾಕ್ ಮೇಲ್ ಮಾಡಿದರು ಎನ್ನುತ್ತ ತಿರುಗಬಹುದು. ಇಲ್ಲಿಂದ ಶಿಖರ ನಗರಕ್ಕೆ ತಮಗೆ ಬೇಕಾದ ಕರೆಗಳನ್ನು ಮಾಡಿಸಿಕೊಳ್ಳಲಿಕ್ಕೆ ಆದಿಮಾನವ ಮುಖದ ಯಾವೊಬ್ಬನೂ ಇಲ್ಲಿಲ್ಲ. ತಪ್ಪಲೆ ತಟ್ಟುವ ಚಂಬು ಸಹ ಇಲ್ಲ. ಹೀಗಾಗಿ ಏನು ಮಾಡೋದು? ತಲೆ ಕೆರೆದುಕೊಳ್ಳದೆ ಗತಿಯಿಲ್ಲ.

ತುಮರಿಸ್ವಾಮಿಯನ್ನು ಹುಡುಕಿ ಧಮಕಿ ಹಾಕುವ ಬಗ್ಗೆ ಹಲವು ಮಾರ್ಗಗಳಲ್ಲಿ ಹೋರಿ ಪಟಾಲಮ್ಮು ಭಗೀರಥ ಪ್ರಯತ್ನ ನಡೆಸಿತ್ತು. ಯಾವೊಂದೂ ಸುಳಿವೇ ಸಿಗದ್ದರಿಂದ ಅವರ ಪ್ರಯತ್ನ ಅರಣ್ಯರೋದನದಂತಾಯ್ತು. ತುಮರಿ ಸ್ವಾಮಿ ಖಾತೆ ತೆರೆಯೋವಾಗ ಹಲವು ದಾಖಲೆಗಳನ್ನು ಕೊಟ್ಟೇ ತೆರೆದಿದ್ದಾನೆ. ನಕಲಿ ಖಾತೆ ತೆರೆಯಬೇಕಾದ ಅನಿವಾರ್ಯತೆ ಅವನಿಗೆ ಬರಲಿಲ್ಲ. ಹಾಗೆ ಅನಿವಾರ್ಯತೆ ಬಂದು ಹಲವಾರು ಬೇನಾಮಿ ಖಾತೆಯಲ್ಲಿ ವ್ಯವಹರಿಸಲಿಕ್ಕೆ ಅವನೇನು ಹಾದರದ ಹೋರಿ ತೊನೆಯಪ್ಪನೇ?

ಈ ಹಿಂದೆ ಹಾವಿನಹಳ್ಳಿ ದೊಣ್ಣೆನಾಯಕನಲ್ಲಿ ಹೋರಿ ಸ್ವಾಮಿ ತುಮರಿಸ್ವಾಮಿಯ ಬಗ್ಗೆ ಮಾತನಾಡುತ್ತ, ಮುಳುಗಡೆ ಪ್ರದೇಶದಿಂದ ಬೇರೆ ಕಡೆಗೆ ವಲಸೆ ಹೋದವರಲ್ಲಿ ಶೀಲ ಮಾರಿ ಬದುಕುತ್ತಿದ್ದ ಹೆಂಗಸರೂ ಇದ್ದರಂತೆ, ಅಂತವರಲ್ಲಿ ಯಾರದೋ ಸಂತಾನ ತುಮರಿ ಸ್ವಾಮಿ ಎಂದಿದ್ದನಂತೆ. ಹೋರಿ ತೊನೆಯಪ್ಪ ಅಪ್ಪನಿಗೆ ಹುಟ್ಟಿದ ಮಗ ಹೌದಾದರೆ ತುಮರಿಸ್ವಾಮಿಯ ಸವಾಲನ್ನು ಸ್ವೀಕರಿಸಬೇಕು.

ಸಮಸ್ಯೆ ಹೇಗಿದೆ ನೋಡಿ, ಸಮಾಜ ಇಬ್ಭಾಗವಾಗಿದೆ. ರಾಜಕೀಯ ಪಕ್ಷಗಳವರು ಒಡೆದಂತೆ ಮನೆಮನೆಗಳಲ್ಲಿ ಅಪ್ಪ-ಅಮ್ಮ-ಮಕ್ಕಳ ನಡುವೆ ವಿಶ್ವಾಸದ ವ್ಯವಹಾರಗಳಿಲ್ಲ; ಹಾವಾಡಿಗ ಮಠದ ಬಗ್ಗೆ ಒಮ್ಮತವಿಲ್ಲ. ಸರಿಯಾದ ಹೆಂಗಸರಿರುವ ಬಹುತೇಕ ಮನೆಗಳಲ್ಲಿ ಮಠದ ಇಂದಿನ ವರ್ತನೆಗಳನ್ನು ಅವರು ಒಪ್ಪುತ್ತಿಲ್ಲ; ಸ್ಥಾನಮಾನದ ಹಪಾಹಪಿಯಲ್ಲಿದ್ದ ಗಂಡಂದಿರನ್ನು ತೊನೆಯಪ್ಪ ಓಲೈಸಿಕೊಂಡಿದ್ದಾನೆ. ಮಕ್ಕಳು ಒಂದೋ ಅಮ್ಮನ ಪರ ಅಥವಾ ಅಪ್ಪನ ಪರ.

ಇದನ್ನೆಲ್ಲ ನೋಡ್ತಿರೋವಾಗ ಇಂತ ಮಠಗಳ ಅಗತ್ಯವಾದರೂ ಎಷ್ಟು ಎನಿಸುತ್ತದೆ. ಪಾಪ ಅದೆಷ್ಟು ಮಹಿಳೆಯರು, ಹುಡುಗಿಯರು ಹೋರಿಯ ಕೆಳಗೆ ಸಿಲುಕಿ ನಲುಗಿದರೋ ಕನಲಿದರೋ. ಇಡೀ ಸಮಾಜ ಹೋರಿಯ ವೀರ್ಯದಿಂದ ಮೈಲಿಗೆ ಅನುಭವಿಸಿದೆ. ಹೋರಿಯ ತೀಟೆಯಿಂದ ಕಂಗೆಟ್ಟ ಗಂಡಂದಿರು ತಮ್ಮ ಹೆಂಗಸರ ರಕ್ಷಣೆಗೆ ಅವರು ಎಲ್ಲೇ ಹೋದರೂ ಜೊತೆಯಾಗುತ್ತಾರೆ. ಅಕ್ಕಪಕ್ಕದ ಮನೆಯ ಗಂಡಸರು ಮನೆಗ ಬಂದರೂ ಅವ ಯಾಕೆ ಬಂದ? ಇವ ಯಾಕೆ ಬಂದ? ಎಂದು ಚೌಕಾಶಿಗೆ ತೊಡಗುತ್ತಾರೆ. ಇಷ್ಟೆಲ್ಲ ಆಗೋದಕ್ಕೆ ಕಾರಣಗಳೇನು?

ಹೋರಿ ತೊನೆಯಪ್ಪ ಪೀಠದಿಂದ ಹೋಗಲೇಬೇಕಾಗ್ತದೆ ಬಿಡಿ, ಜಗದ್ಗುರು ತೊನೆಯಪ್ಪನವರು ಪರಪ್ಪಧಾಮಕ್ಕೆ ಬಿಹಯಂಗೈಯಲೇ ಬೇಕಾಗ್ತದೆ. ಆದರೆ ಅದರ ನಂತರ ಆ ಪೀಠದಲ್ಲಿ ಇನ್ನೊಬ್ಬನನ್ನು ಕೂರಿಸುವುದಕ್ಕೂ ಮುನ್ನ ಸಮಾಜ ತೆಗೆದುಕೊಳ್ಳಬೇಕಾದ ತೀರ್ಮಾನಗಳೇನು? ವಟುವಿನ ಆಯ್ಕೆ ಹೇಗೆ? ಒಂದೊಮ್ಮೆ ಆ ವಟುವೂ ಸಹ ಮುಂದೆ ದಾರಿತಪ್ಪಿದರೆ ಸರಿಪಡಿಸುವ ಕ್ರಮವೇನು? ಸಂಬಂಧಿಸಿದ ಸ್ಪರಂಪರೆಗೆ ಸೇರಿದ ಉತ್ತಮವಾದ ಬೇರೆ ಸನ್ಯಾಸಿಯಿಂದ ದೀಕ್ಷೆ ಕೊಡಿಸುವರೇ? ದೀಕ್ಷೆಯ ನಂತರ ದಾರಿ ತಪ್ಪದಂತೆ ನಿಗಾ ವಹಿಸುವ ಚೆಕ್ ಬಂದಿಗಳೇನು? ಸಮಾಜದ ಬಹುಮೌಲ್ಯದ ಆಸ್ತಿ-ಪಾಸ್ತಿ ಯಾರದೋ ಪಾಲಾಗದಂತೆ ರಕ್ಷಿಸುವ ಬಗೆ ಹೇಗೆ? ಈಗ ಮಠದಲ್ಲಿ ಉಂಡು-ತಿಂದು ಜೇಬುಗಳಲ್ಲಿ ತುಂಬಿಸಿಕೊಂಡು ’ಉಂಡೂ ಹೋದ ಕೊಂಡೂ ಹೋದ’ ಎಂಬಂತೆ ಉಂಡಾಡಿ ಧಾಂಡಿಗರಾಗಿರುವವರು ಮುಂದೆ ಮಠದ ಕಡೆ ತಲೆಹಾಕದಂತೆ ಕ್ರಮ ಜರಿಗಿಸುವ ಕುರಿತು ಆಲೋಚಿಸಿದ್ದಾರೋ?

ಈ ಎಲ್ಲ ಪ್ರಶ್ನೆಗಳಿಗೆ ನೈತಿಕ ಹೊಣೆ ಹೊತ್ತು ಸಮಾಜದ ಮುಖಂಡರು ಉತ್ತರಿಸಬೇಕು. ಉತ್ತರಿಸದಿದ್ದಲ್ಲಿ ಬೇತಾಳ ತ್ರಿವಿಕ್ರಮನ ಕತೆಯಲ್ಲಿರುವಂತೆ ಸಮಾಜದ ತಲೆ ಸಾವಿರ ಹೋಳಾಗುವುದರಲ್ಲಿ ಯಾವ ಅನುಮಾನವೂ ಇರುವುದಿಲ್ಲ.

Thumari Ramachandra

source: https://www.facebook.com/groups/1499395003680065/permalink/1716654931954070/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s