ಕಚ್ಚೆಕತೆ ಮುಚ್ಚಲು ಬೋಳೆಣ್ಣೆ ಹಚ್ಚುವ ಅರ್ಜುನ ಸನ್ಯಾಸಿಗಳ-ಢೋಂಗಿ ಗುರೂಜಿಗಳ ಸಂಘ ಕಟ್ಟಿದ

ಕಚ್ಚೆಕತೆ ಮುಚ್ಚಲು ಬೋಳೆಣ್ಣೆ ಹಚ್ಚುವ ಅರ್ಜುನ ಸನ್ಯಾಸಿಗಳ-ಢೋಂಗಿ ಗುರೂಜಿಗಳ ಸಂಘ ಕಟ್ಟಿದ

ಇವ ದಕ್ಷಿಣದ ರಾಂಪಾಲ ಎಂದು ತುಮರಿ ಸಾಕಷ್ಟು ಸಲ ಹೇಳಿದ್ದಿದೆ. ಅಷ್ಟೇ ಅಲ್ಲ, ’ಅಖಿಲ ಭಾರತ ಪ್ರಸಾದ ತಯಾರಕ ಹಾವಾಡಿಗ ಮಹಾಮಂಡಳಿ’ಗೆ ಇವನೇ ಅಧ್ಯಕ್ಷನೆಂದೂ ಹಿಂದೆ ಹೇಳಿದ್ದಿದೆ; ಆ ಮಾತಿಗೆ ಈಗ ಬೆಲೆ ಬಂದಿದೆ! ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನವಿಟ್ಟು ನೋಡಿ, ಆಗ ನಿಮಗೆ ಈ ಮಾತು ಅರ್ಥವಾಗುತ್ತದೆ.

ಬದುಕೋದಕ್ಕೆ ಅರ್ಜುನ ಸನ್ಯಾಸಿಯ ವೇಷ ಧರಿಸೋರು ಬಹಳ ಮಂದಿ ಇದ್ದಾರೆ. ಅದು ಎಲ್ಲ ಕೆಲಸಕ್ಕಿಂತ ಸಲೀಸು. ಮೈಮೇಲೊಂದು ಕಾವಿ ಎಳೆದುಕೊಂಡು ಹೆಸರಿಗೊಂದು ಮಠ ಅಥವಾ ಆಶ್ರಮ, ದೇವಸ್ಥಾನ ಕಟ್ಟಿಕೊಂಡು, ಭಕ್ತಜನರಿಗೆ ದೇವರ ದಲ್ಲಾಳಿಗಳಾಗಿ ಉಂಡೆನಾಮ ತೀಡುತ್ತ ಕಾಸು ಪೀಕುತ್ತಾರೆ. ಜೀವನದಲ್ಲಿ ಏನೇನೋ ಆಗಬೇಕೆಂದು ಅಂದುಕೊಂಡೋರು ಅದೆಲ್ಲವನ್ನೂ ಪಕ್ಕಕ್ಕಿಟ್ಟು ಮಿಂಚಿನವೇಗದಲ್ಲಿ ’ಗುರೂಜಿ’ಗಳಾಗಿಬಿಡುತ್ತಾರೆ. ಕೆಲವರು ಭವಿಷ್ಯ ಹೇಳುತ್ತೇವೆನುತ್ತ ಗುರೂಜಿ ಎಂದು ಕರೆಸಿಕೊಳ್ಳುವುದಕ್ಕೆ ಆರಂಭಿಸುತ್ತಾರೆ, ಇನ್ನೂ ಕೆಲವರು ಸಮಾಜಸೇವೆ ಎಂಬ ಸೋಗಿನಲ್ಲಿ ಆಯುರ್ವೇದೀಯ ಔಷಧಗಳ ಬಗೆಗೆ ಮಾತನಾಡುತ್ತ ಗುರೂಜಿ ಎಂದು ಕರೆಸಿಕೊಳ್ಳುತ್ತಾರೆ. ಕೆಲವರು ಮಹರ್ಷಿಯಾಗಿಬಿಡುತ್ತಾರೆ!

ಪ್ರಾಚೀನ ಭಾರತದಲ್ಲಿ ಗುರು, ಗುರೂಜಿ, ಸನ್ಯಾಸಿ, ಋಷಿ, ಮಹರ್ಷಿ ಎಂಬೆಲ್ಲ ಶಬ್ದಗಳಿಗೆ ಅರ್ಥವಿವರಣೆ ಸ್ಪಷ್ಟವಾಗಿ ಕೊಟ್ಟಿದ್ದಾರೆ. ಅದರಲ್ಲಂತೂ ಆದಿಶಂಕರರು ತಮ್ಮ ಭಜಗೋವಿಂದ ಕೃತಿಯಲ್ಲಿ ಯಾರು ಯಾರೆಂದು ಕಣ್ಣಿಗೆ ಕಟ್ಟುವಂತೆ ಮನಕ್ಕೆ ತಟ್ಟುವಂತೆ ಚಿತ್ರಿಸಿದ್ದಾರೆ.

ಜಟಿಲೋ ಮುಂಡೀ ಲುಂಜಿತ ಕೇಶಃ
ಕಾಷಾಯಾಂಬರ ಬಹುಕೃತ ವೇಷಃ |
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರ ನಿಮಿತ್ತಂ ಬಹುಕೃತ ವೇಷಃ || ೧೫ ||

ತಲೆಬೋಳಿಸಿಕೊಂಡು ಕಾವಿ ಹೊದ್ದವರೆಲ್ಲ ಸನ್ಯಾಸಿಗಳ ರೂಪದಲ್ಲಿ ತೋರಬಹುದಷ್ಟೆ. ಹಾಗೆ ಮಾಡೋದು ಕೆಲವರಿಗೆ ಹೊಟ್ಟೆಪಾಡಿನ ಕಸುಬು. ಮೂಢರು ಅಂತವರನ್ನು ಕಂಡು ಅನುಯಾಯಿಗಳಾಗಿಬಿಡುತ್ತಾರೆ. ಸನ್ಯಾಸಿಯಲ್ಲಿ ವ್ಯಕ್ತಿ ಗೌರವಕ್ಕಿಂತ ಅವನ ಸಾಧನೆ ಅಥವಾ ವ್ಯಕ್ತಿತ್ವಕ್ಕೆ ಗೌರವ ನೀಡಬೇಕು. ಭಕ್ತನಾದವನು ಶಿಷ್ಯನಾಗುವ ಮೊದಲು ಸನ್ಯಾಸಿಯನ್ನು ಸಮಯ ನೋಡಿ ಪರೀಕ್ಷಿಸಬೇಕು.

ಅಂಗಂ ಗಲಿತಂ ಪಲಿತಂ ಮುಂಡಂ
ದಶನ ವಿಹೀನಂ ಜಾತಂ ತುಂಡಮ್ |
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾ ಪಿಂಡಮ್ || ೧೬ ||

ಅಂಗಾಂಗಗಳು ಬೆಳೆದು ಮಾಗುತ್ತವೆ, ತಲೆ ಬೆಳೆದು ಕೂದಲು ಕೆಲವರಿಗೆ ಬೆಳ್ಳಗಾಗುತ್ತದೆ ಇನ್ನು ಕೆಲವರಿಗೆ ಉದುರಿಹೋಗುತ್ತದೆ. ದಂತಪಂಕ್ತಿಗಳಲ್ಲಿ ಹಲ್ಲುಗಳು ಹೋಗಿ ಬೊಜ್ಜು ಬಾಯಿ ಆಗಿಬಿಡುತ್ತದೆ. ಆಧಾರಕ್ಕೆ ಕೈಲೊಂದು ದಂಡ/ದೊಣ್ಣೆ ಬರುತ್ತದೆ. [ದೊಣ್ಣೆಗೆ ಮುದುಕಪ್ಪ ಆಧಾರ ಮತ್ತು ಮುದುಕಪ್ಪನಿಗೆ ದೊಣ್ಣೆ ಆಧಾರ, ಅದೊಂದು ವಿಧದ ಋಣಾನುಬಂಧದ ಸಂಬಂಧ!]ಆದರೂ ಆಶೆಯೆಂಬುದು ಮನುಷ್ಯನಿಗೆ ಕಡಿಮೆಯಾಗೋದಿಲ್ಲ.

Anyone who is obsessively focused on money, or cares deeply about owning luxury goods can be described as materialistic. Material is a synonym for matter: anything that exists. Originally, materialism was a philosophy that “only matter exists.” But in 1851, American fiction writer Nathaniel Hawthorne tweaked the definition to mean “a way of life based entirely on consumer goods,” a meaning that endures.

ಜನಸಾಮಾನ್ಯ ಸಂಸಾರಿಗೆ ಲೌಕಿಕತೆಯಿಂದ ತಪ್ಪಿಸಿಕೊಳ್ಳೋದು ಕಷ್ಟವಾಗುತ್ತದೆ. ನಾಳೆ ಶಂಖ ಹೊಡೆಯುವ ಹಣ್ಣುಹಣ್ಣು ಮುದುಕಪ್ಪನಿಗೂ ತಾನು-ತನ್ನದು ಎಂಬುದತಲ್ಲಿ ವ್ಯಾಮೋಹ ಹೋಗೋದಿಲ್ಲ. ಆಸ್ತಿ-ಅಂತಸ್ತಿನ ಬಗ್ಗೆ ಆಸ್ಥೆ ಕಡಿಮೆಯಗೋದಿಲ್ಲ.

Today’s materialistic world often urges us to buy the coolest gadgets, the trendiest clothes, bigger and better things, but research shows that possessions and purchases don’t buy us happiness. According to an article on CNN:

By and large, money buys happiness only for those who lack the basic needs. Once you pass an income of living, more money doesn’t buy much more happiness, [according to happiness studies].

So while we are being pushed towards materialism, it’s for monetary gain by corporations, not for our own happiness. Unfortunately, it’s hard to escape the trap of materialism, and find happiness in other ways than buying stuff online or finding joy in the mall.

ಯಾವ ವ್ಯಕ್ತಿ ಇದು ಮಿಥ್ಯಾ ಪ್ರಪಂಚವೆಂಬುದನ್ನು ತನ್ನ ಬದುಕುವಿಕೆಯಿಂದ ಸಮಾಜಕ್ಕೆ ತಿಳಿಸಿ ಮಾರ್ಗದರ್ಶಿಸಬೇಕಿತ್ತೋ ಅವನೇ ಈ ಮಿಥ್ಯಾ ಪ್ರಪಂಚದ ಸುಖಲೋಲುಪತೆಗೆ ಬಲಿಯಾಗಿ ಸಮಾಜದ ಹೆಣ್ಣುಮಕ್ಕಳನ್ನೂ ಮಹಿಳೆಯರನ್ನೂ ಮತ್ತು ಒಟ್ಟಾರೆಯ ಸಮಾಜವನ್ನೂ ಹಾಳುಮಾಡಿದ್ದು ಮತ್ತು ಹಾಳು ಮಾಡುತ್ತಿರುವುದು ನಮ್ಮೆಲ್ಲರ ದುರ್ದೈವೆ.

ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕ ಸಮರ್ಪಿತ ಜಾನುಃ |
ಕರತಲ ಭಿಕ್ಷಸ್-ತರುತಲ ವಾಸಃ
ತದಪಿ ನ ಮುಂಚತ್ಯಾಶಾ ಪಾಶಃ || ೧೭ ||

Behold there lies the man who sits warming up his body with the fire in front and the sun at the back; at night he curls up the body to keep out of the cold; he eats his beggar’s food from the bowl of his hand and sleeps beneath the tree. Still in his heart, he is a wretched puppet at the hands of passions.[Stanza attributed to Subodha.]

ಅಗ್ನಿಯ ಮುಂದೆ ಕುಳಿತವನ ಹಿಂದೆ ಸೂರ್ಯನಿದ್ದಾನೆ. ರಾತ್ರಿಯ ಹೊತ್ತು ಚಳಿಯಿಂದ ರಕ್ಷಣೆಗೆ ವ್ಯಕ್ತಿ ಮುದುಡಿಕೊಳ್ಳುತ್ತಾನೆ. ಚಿಕ್ಷುಕನ ಆಹರದಂತೆ ಬಲ ಅಂಗೈ ಎಂಬ ಪಾತ್ರೆಯಲ್ಲಿ ಹಿಡಿಸಿದಷ್ಟು ಆಹಾರವನ್ನು ಮಾತ್ರ ಉಂಡು ಮರದ ಕೆಳಗೆ ಮಲಗಿ ನಿದ್ರಿಸುತ್ತಾನೆ. ಆಗಲೂ ಸಹ ಈ ಪ್ರಪಂಚದ ವ್ಯಾಮೋಹ ಅವನನ್ನು ಪೂರ್ತಿಯಾಗಿ ಬಿಡಲೊಲ್ಲದು!

ಕುರುತೇ ಗಂಗಾ ಸಾಗರ ಗಮನಂ
ವ್ರತ ಪರಿಪಾಲನಮ್-ಅಥವಾ ದಾನಮ್ |
ಙ್ಞಾನ ವಿಹೀನಃ ಸರ್ವಮತೇನ
ಭಜತಿ ನ ಮುಕ್ತಿಂ ಜನ್ಮ ಶತೇನ || ೧೮ ||

One may go to gangasagar(ganges), observe fasts, and give away riches in charity ! Yet, devoid of jnana, nothing can give mukthi even at the end of a hundred births. [Stanza attributed to Sureshwaracharya.]

ಒಬ್ಬನು ಗಂಗಾಸಾಗರಕ್ಕೆ ತೆರಳಿ ಉಒಅವಾಸ ವ್ರತಾದಿಗಳನ್ನು ಆಚರಿಸುತ್ತ ತನ್ನಲ್ಲಿರುವ ಧನ-ಕನಕ ಸಂಪತ್ತಿಯನ್ನು ದಾನಮಾಡಬಹುದು. ಜ್ಞಾನವನ್ನು ಪಡೆದ ವಿನಃ ನೂರು ಜನ್ಮ ಎತ್ತಿಬಂದರೂ ಮುಕ್ತಿ ಎಂಬುದು ಪ್ರಾಪ್ತವಾಗುವುದಿಲ್ಲ.

ಸುರಮಂದಿರ ತರು ಮೂಲ ನಿವಾಸಃ
ಶಯ್ಯಾ ಭೂತಲಮ್-ಅಜಿನಂ ವಾಸಃ |
ಸರ್ವ ಪರಿಗ್ರಹ ಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ || ೧೯ ||

Take your residence in a temple or below a tree, wear the deerskin for the dress, and sleep with mother earth as your bed. Give up all attachments and renounce all comforts. Blessed with such vairagya, could any fail to be content ? Stanza attributed to Nityananda of Adi Shankara’s Time .

ಯವುದೋ ದೇವಸ್ತ್ನಾವೋ ಮರದ ನೆರಳೋ ನಿನ್ನ ಮನೆಯೆಂದು ತಿಳಿ, ಕೃಷ್ಣಾಜಿನವನ್ನು ಉಡುಗೆಯಾಗಿ ಧರಿಸಿ ಭೂಮಿ ತಯಿಯ ಮಡಿಲೆ ಗಾದಿಯೆಂದು ತಿಳಿದು ನಿದ್ರಿಸು. ಜಗತ್ತಿನ ಸಕಲ ವ್ಯಾಮೋಹಗಳಿಂದ ಬಿಡಿಸಿಕೊಂಡು ಸುಖ ಸವಲತ್ತುಗಳನ್ನು ವರ್ಜಿಸು. ಅಂತಹ ವೈರಾಗ್ಯದಿಂದ ಆಶೀರ್ವಾದವನ್ನು ಪಡೆದುಕೊಂಡರೆ ಮನಸ್ಸನ್ನು ಜಯಿಸುವುದಕ್ಕೆ ಸಾಧ್ಯವಿಲ್ಲವೇ?

ಹೇಳುತ್ತ ಹೋದರೆ ಇಡೀ ಭಜ ಗೋವಿಂದಮ್ ಕೃತಿ ವೈರಾಗ್ಯವನ್ನು ಬೋಧಿಸುತ್ತದೆ. ಗೀತೆಯೆಂಬ ಮೊಸರನ್ನು ಮಥಿಸಿ ಈ ನವನೆತವನ್ನು ತೆಗೆದಿರಿಸಿದ್ದಾರೆ ಶಂಕರರು. ಹೊರನೋಟಕ್ಕೆ ಅದೊಂದು ಸ್ತುತಿಗೀತೆಯಾಗಿ ಕಂಡರೂ ಮುಕ್ತಿಗಾಗಿ ಹಂಬಲಿಸುವ ಮುಮುಕ್ಷುತ್ವವನ್ನು ಪಡೆಯುವುದು ಹೇಗೆಂದು ಅದರಲ್ಲಿ ವಿವರಿಸಿದ್ದಾರೆ. ಜೊತೆಜೊತೆಗೆ ಅರ್ಜುನ ಸನ್ಯಾಸಿಗಳ ಬಗೆಗೂ ಹೇಳಿಬಿಟ್ಟಿದ್ದಾರೆ.

ಕ್ಷೇತ್ರದ ದೇವಾಲಯವನ್ನು ಮಠವೆಂದು ಪರಿಗಣಿಸಿದವ ಅಲ್ಲಿ ಲೂಟಿ ಹೊಡೆಯುತ್ತಿದ್ದರು, ತಾನು ವಹಿಸಿಕೊಂಡು ಅದನ್ನೆಲ್ಲ ತಪ್ಪಿಸಿದೆ ಎಂದ. ನಂತರ ಇವನು ಮಾಡಿದ್ದು ಯಾವ ಘನಂದಾರಿ ಕಾರ್ಯ? ಅಲ್ಲಿನ ಕ್ಷೇತ್ರ ಪಿರೋಹಿತರುಗಳು ಬಳಸಿಕೊಳ್ಳುತ್ತಿದ್ದ ಹಣವನ್ನೆಲ್ಲ ಇವ ಹೊಡೆದುಕೊಳ್ಳತೊಡಗಿದ. ಸನ್ಯಾಸಿಗೆ ಈ ವ್ಯಾಮೋಹ ವೇಕೆ? ಇದಷ್ಟೇ ಅಲ್ಲ ಇಂತ ಕೆಲಸ ಒಂದೆರಡು ಕಡೆಗಳಲ್ಲಿಲ್ಲ; ಸಾಕಷ್ಟು ಕಡೆಗೆ ಉತ್ತಮ ಆದಾಯ ಬರುವ ದೇವಸ್ಥಾನಗಳು ಮತ್ತು ಸ್ಕೊಲುಗಳನ್ನು ಗುರುತಿಸಿ ಹೊಡೆದುಕೊಳ್ಳಲು ಯತ್ನಿಸಿದ; ಕೆಲವದರಲ್ಲಿ ಯಶಸ್ಸು ಕಂಡ, ಉಳಿದದ್ದರಲ್ಲಿ ಮುಖಕ್ಕೆ ಉಗಿಸಿಕೊಂಡು ಮರಳಿ ಬಂದ.

ಭಜಗೋವಿಂದಮ್ ಸೇರಿದಂತೆ ಸನಾತನ ವೈದಿಕ ಧರ್ಮದಲ್ಲಿ ಸನ್ಯಾಸಿಗಳಿಗೆ ಹಲವು ನಿಯಮಗಳಿವೆ. ಗುರೂಜಿಗಳಾಗುವವರಿಗೂ ಕೆಲವು ನಿಯಮಗಳಿವೆ. ಮಹರ್ಷಿಗಳಾಗುವುದಕ್ಕಂತೂ ಪ್ರಾಯಶಃ ಕಲಿಯುಗ ಯೋಗ್ಯವಲ್ಲ. ಮಹರ್ಷಿಗಳ ಒಂದು ಗುಣ-ಲಕ್ಷಣದ ಬಗ್ಗೆ ಒಂದೇ ಉದಾಹರಣೆಯನ್ನು ಹೇಳುವುದು ಸೂಕ್ತವೆನಿಸುತ್ತದೆ:

ತಪೋನಿರ್ಧೂತಪಾಪ್ಮಾನೋ ಯಾಥಾತಥ್ಯಾಭಿಧಾಯಿನಃ |
ವೇದವೇದಾಂಗತತ್ತ್ವಜ್ಞಾ ಋಷಯಃ ಪರಿಕೀರ್ತಿತಾ ||

ತಪೋಬಲದಿಂದ ಸಕಲ ಪಾಪಗಳನ್ನು ಕಳೆದುಕೊಂಡವರೂ, ಸತ್ಯವನ್ನೇ ನುಡಿಯುವವರೂ, ವೇದವೇದಾಂಗಗಳ ತತ್ತ್ವವನ್ನು ಬಲ್ಲವರೂ ಋಷಿಗಳೆನಿಸುವರು.

ವ್ಯಾಸರಿಗೆ ವೈಶಂಪಾಯನ ಎಂಬ ಶಿಷ್ಯರೊಬ್ಬರಿದ್ದರು. ಸಂಪಾದಕರಾದ ವ್ಯಾಸರು ತಾವು ಸಂಪಾದಿಸಿದ ಯಜುರ್ವೇದಕ್ಕೆ-ಅದರ ಉಸ್ತುವಾರಿಯನ್ನು ನೋಡಿಕೊಳ್ಳುವುದಕ್ಕೆ ವೈಶಂಪಾಯನರನ್ನು ಆಚಾರ್ಯರನ್ನಾಗಿ ನೇಮಿಸಿದ್ದರು. ವೈಶಂಪಾಯನರಿಗೆ ಇದ್ದ ಅನೇಕ ಶಿಷ್ಯರಲ್ಲಿ ಯಾಜ್ಞವಲ್ಕ್ಯರೂ ಒಬ್ಬರು. ಯಾವುದೋ ಕಠಿಣವಾದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿ ಋಷಿಗಳೆಲ್ಲರೂ ಸಭೆ ಸೇರಬೇಕೆಂದೂ, ಸಭೆಗೆ ಬಾರದಿದ್ದವರು ಬ್ರಹ್ಮಹತ್ಯಾ ದೋಷದಿಂದ ಬಳಲಬೇಕೆಂದು ಠರಾವುಮಾಡಿಕೊಂಡು ಸಭೆ ನಡೆಸಿದರು.

ಅದೇಕಾಲಕ್ಕೆ ಯಾಜ್ಞಿಕರಾಗಿ ಯಜ್ಞದೀಕ್ಷೆಯೊಂದರಲ್ಲಿ ನಿರತರಾಗಿದ್ದ ವೈಶಂಪಾಯನರಿಗೆ ಆ ಸಭೆಗೆ ಹೋಗಲಾಗಲಿಲ್ಲ. ಪರಿಣಾಮವಾಗಿ ಅವರು ಬ್ರಹ್ಮಹತ್ಯಾ ದೋಷವನ್ನು ಅನುಭವಿಸುವ ಬದಲು ಅದಕ್ಕೆ ಪ್ರಾಯಶ್ಚಿತ್ತ-ಪರಿಹಾರ ಮಾಡೋಣವೆಂದು ವೈಶಂಪಾಯನರ ಶಿಷ್ಯಂದಿರು ಗುರುವಿನ ಬಗೆಗೆ ಕಾಳಜಿ ವಹಿಸಿದರು. ಆ ಸಮಯದಲ್ಲಿ ಯಾಜ್ಞವಲ್ಕ್ಯರು “ದುರ್ಬಲರಾದ ಈ ಶಿಷ್ಯರೆಲ್ಲ ಏನು ಮಾಡಿಯಾರು? ಅವರೆಲ್ಲಾ ಸುಮ್ಮನಿದ್ದರೆ ತಾನೊಬ್ಬನೇ ಕಠಿಣ ವ್ರತವನ್ನು ನಡೆಸಿ ಗುರುಗಳಿಗೆ ಬಂದ ದೋಷವನ್ನು ಪರಿಹರಿಸುತ್ತೇನೆ” ಎಂದುಬಿಟ್ಟರು. ಇದರಿಂದ ವೈಶಂಪಾಯನರಿಗೆ ಬೇಸರವಾಯಿತು. “ನಮ್ಮಿಂದ ಕಲಿತ ವೇದವನ್ನು ನಮಗೇ ಮರಳಿಸಿ ನೀವು ಇಲ್ಲಿಂದ ಹೊರಡಿ” ಎಂದು ಯಾಜ್ಞವಲ್ಕ್ಯರಿಗೆ ಅಪ್ಪಣೆ ಮಾಡಿಬಿಟ್ಟರು. ಆಗ ಯಾಜ್ಞವಲ್ಕ್ಯರು ಅದನ್ನು ವಾಂತಿ ಮಾಡಿದರೆಂದೂ, ಉಳಿದ ಶಿಷ್ಯರು ತಿತ್ತಿರಿ ಎಂಬ ಹಕ್ಕಿಗಳಾಗಿ ಅದನ್ನು ತಿಂದು ಸಂಗ್ರಹಿಸಿಕೊಂಡರೆಂದೂ ಐತಿಹ್ಯವೊಂದು ಭಾಗವತದಲ್ಲಿ ಹೇಳಲ್ಪಟ್ಟಿದೆ.

ಈ ಘಟನೆಯ ನಂತರ ಸೂರ್ಯನ ಕುರಿತಾಗಿ ಘೋರ ತಪಸ್ಸನ್ನಾಚರಿಸಿದ ಯಾಜ್ಞವಲ್ಕ್ಯರು, ತಮ್ಮ ಗುರುಗಳಾದ ವೈಶಂಪಾಯನರಿಗೂ ತಿಳಿದಿರದ ವೇದಭಾಗಗಳನ್ನು ಸೂರ್ಯನಿಂದ ಪಡೆದರೆಂದು ಭಾಗವತ ಪುರಾಣದ ಶ್ಲೋಕಗಳು ಹೇಳುತ್ತವೆ. ತಾವು ಕಂಡ ವೇದವನ್ನು ತಮ್ಮ ಶಿಷ್ಯರ ಮೂಲಕ ಯಾಜ್ಞವಲ್ಕ್ಯರು ಪ್ರಚಾರಮಾಡಿದರು. ಪ್ರಥಮವಾಗಿ ವಶಂಪಾಯನರಿಂದ ಪ್ರಚುರಗೊಳ್ಳಲ್ಪಟ್ಟ ಯಜುರ್ವೇದದ ಭಾಗವನ್ನು ಕೃಷ್ಣಯಜುರ್ವೇದವೆಂದೂ ಯಾಜ್ಞವಲ್ಕ್ಯರಿಂದ ಪ್ರಚುರಗೊಂಡ ಭಾಗವನ್ನು ಶುಕ್ಲ ಯಜುರ್ವೇದವೆಂದೂ ಪರಿಗಣಿಸಲಾಗಿದೆ.

ಹೀಗೆ ಆ ಕಾಲದಲ್ಲೂ ಋಷಿಗಳು ಸೇರುತ್ತಿದ್ದರು. ಅದು ಧರ್ಮಸಂಕಟ ಎದುರಾದಾಗ ಮಾತ್ರ. ಪ್ರಬೋಧ ಸಾಹಿತ್ಯವಾದ ವೇದಗಳು ಆಜ್ಞಾಪಿಸಿದಂತೆ ನಡೆದುಕೊಳ್ಳಲಾಗದ ಸ್ಥಿತಿ ಎದುರಾದರೆ ಅದನ್ನು ಧರ್ಮಸಂಕಟ ಎನ್ನಲಾಗುತ್ತದೆ. ಧರ್ಮ ಸಂಕಟಕ್ಕೆ ತೀರಾ ಕ್ಷುಲ್ಲಕ ಲೌಕಿಕ ಉದಾಹರಣೆಯೆಂದರೆ ಪರಿಶುದ್ಧ ಹಾಗೂ ಉತ್ಕೃಷ್ಟವಾದ ಬಿಸಿ ತುಪ್ಪ; ನುಂಗಿದರೆ ಗಂಟಲು ಸುಡುತ್ತದೆ, ಉಗುಳಿದರೆ ತುಪ್ಪ ಹಾಳಾಗುತ್ತದೆ. ಇದು ಕೇವಲ ಹೋಲಿಕೆಯಷ್ಟೆ.

ಆದರೆ ಕಚ್ಚೆಹರುಕತನವನ್ನು ಮುಚ್ಚುವ ಸಲುವಾಗಿ ಕಾವೀ ಹೊದ್ದವರು ಸೇರಿದ ಯಾವುದೇ ದಾಖಲೆಯೂ ಇತಿಹಾಸದ ಯಾವ ಮೂಲೆಯಲ್ಲೂ ಸಿಗೋದಿಲ್ಲ. ಜೀವನಕ್ಕೆ ಬೇಕದಷ್ಟನ್ನೇ ನ್ಯಾಯಮಾರ್ಗದಲ್ಲಿ ಆರ್ಜಿಸು, ಅದರಲ್ಲಿ ದಾನ-ಧರ್ಮಕ್ಕೆ ಅಂತ ಒಂದಷ್ಟು ಭಾಗ ತೆಗೆದಿಟ್ಟು ಉಳಿದದ್ದನ್ನು ಬಳಸು. ಹೆಚ್ಚಿಗೆ ಏನನ್ನೂ ಗಂಟು ಕಟ್ಟಬೇಡ ಎನ್ನುತ್ತದೆ ವೈದಿಕ ಧರ್ಮ.

ಇಂದು ಹಲವು ಕಳ್ಳ ಗುರೂಜಿಗಳು ಅರ್ಜುನ ಸನ್ಯಾಸಿಗಳು ಬೋಳೆಣ್ಣೆ ತೆಗೆದುಕೊಂಡು ತೋರಿಸುತ್ತಾರೆ. ನವಿಲುಕೋಸಿನಂತೆ ಮೂರು ಮತ್ತೊಂದು ಕೂದಲುಳ್ಳ ಗುಂಡಗಿನ ಬೋಳಿನಲ್ಲಿ ಕಪ್ಪಗೆ ಹೆಜ್ಜೇನು ಕಟ್ಟಿದಂತೆ ಕೂದಲು ಬೆಳೆಯುತ್ತದೆ ಎಂದು ಭೋಂಗು ಬಿಡುತ್ತಾರೆ. ಯಾವ ಎಣ್ಣೆಗಳಿಂದಲೂ ಕೂದಲು ಹುಟ್ಟಿದ ದಾಖಲೆ ಇಲ್ಲ; ಮಾರುವವರಿಗೆ ಬೇಜ್ಜಾನ್ ಕಾಸು ಮಾತ್ರ ಹುಟ್ಟುತ್ತದೆ.

ಸರ್ವಸಂಗ ಪರಿತ್ಯಾಗಿಗಳಾದ ಸೋ ಕಾಲ್ಡ್ ಸನ್ಯಾಸಿಗಳೆನಿಸಿಕೊಂಡವರು ಸೌಂದರ್ಯವರ್ಧಕಗಳನ್ನು ತಯಾರಿಸಿ ಮಾರಲಿಕ್ಕೆ ನಿಂತುಬಿಡುತ್ತಾರೆ! ಯಾವ ಪ್ರಪಂಚ ಸ್ಥಿರವಲ್ಲ ಎಂದು ಹೇಳುತ್ತ ವಿರಾಗಿಗಳಾಗಿ ಮುಮುಕ್ಷುತ್ವ ಪಡೆಯಬೇಕಿತ್ತೋ ಅಂತವರೆಲ್ಲ ಪ್ರಾಪಂಚಿಕ ವ್ಯಾಮೋಹವನ್ನು ತಾವು ಮೈ-ಮನತುಂಬ ಹೆಚ್ಚಿಸಿಕೊಂಡು ಸಮಾಜಕ್ಕೂ ಅದನ್ನೇ ಬೋಧಿಸುತ್ತಾರೆ.

ಕಾಸಿಗೆ ಬಾಯ್ದೆರೆಯುವ, ಲೌಕಿಕ ಸುಖಕ್ಕೆ ಹಾತೊರೆಯುವ, ಇಂತಹ ಬೋಳೆಣ್ಣೆ ಹಚ್ಚುವ ಕಾವೀಧಾರಿಗಳನ್ನೆಲ್ಲ ಕಲೆಹಾಕಿದ ತೊನೆಯಪ್ಪ ಹಾವಾಡಿಗರ ಸಂಘವನ್ನು ಕಟ್ಟಿದ್ದಾನೆ. ಅಲ್ಲಿಗೆ ಬಂದವರಿಗೆ ಭಕ್ಷೀಸು ಎಷ್ಟು ಕೊಟ್ಟನೋ ಗೊತ್ತಿಲ್ಲ. ಬಂದು ಹೋಗುವ ಖರ್ಚು, ಆತಿಥ್ಯದ ಖರ್ಚು, ಸೌಂಡ ಸಿಸ್ಟಮ್, ಕಾರ್ಪೆಟ್ ಮತ್ತು ಆಸನಗಳು ಎಲ್ಲಾ ಸೇರಿ ಎಷ್ಟು ಖರ್ಚಾಗಿರಬಹುದೆಂದು ನೀವೇ ಊಹಿಸಿಕೊಳ್ಳಿ. ಬುದ್ಧಿಮಾಂದ್ಯ ಗುರಿಕಾರರು ಹಳ್ಳಿಯ ಮುಗ್ಧರನ್ನು ಬೆದರಿಸಿ ಅದೆಷ್ಟು ವಸೂಲಿ ಮಾಡಿದರೋ ಗೊತ್ತಿಲ್ಲ.

ಸಂಘ ಕಟ್ಟುವ ಸಭೆ ತನ್ನ ಆಯೋಜನೆಯೇ ಆಗಿದ್ದರೂ ಅದಕ್ಕೆ ಹಾವಾಡಿಗ ಮಠದ ಹೆಸರು ಎಲ್ಲೂ ಹಾಕಲಿಲ್ಲ. ಹಣ ತೆಗೆದುಕೊಂಡು ಬೆಂಬಲ ನೀಡುವ ಕಳ್ಳನೊಬ್ಬನನ್ನು ಗುರುತಿಸಿ ಸ್ನೇಹ ಸಂಪಾದಿಸಿಕೊಂಡು, ಅವನನ್ನು ಮಾತನಾಡಿಸಿದ್ದಾನೆ. ಅವನಿಗೆಷ್ಟು ಕೊಟ್ಟಿರಬಹುದು? ಗೊತ್ತಿಲ್ಲ; ಕನಿಷ್ಠ ಎರಡು ಲಕ್ಷ ಎಂದು ಭಾತ್ಮೀದಾರರು ಹೇಳುತ್ತಾರೆ.

ಹಾವಾಡಿಗ ಮಠದ ಹೆಸರು ಹಾಕಿದ್ದರೆ ಕೆಲವು ನಿಜವಾದ ಸನ್ಯಾಸಿಗಳು ಭಾಗವಹಿಸುತ್ತಿರಲಿಲ್ಲ ಎಂದೂ ಅವರು ಹೇಳುತ್ತಿದ್ದಾರೆ. ಪಕ್ಕಾ ಕ್ರಿಮಿನಲ್ ಮೈಂಡ್ ಹೇಗೆಲ್ಲ ಕೆಲಸ ಮಾಡುತ್ತದೆ ಅನ್ನೋದಕ್ಕೆ ಇದೇ ಉದಾಹರಣೆ ಸಾಕು. ತನ್ನ ಕಚ್ಚೆಹರುಕುತನವನ್ನು, ತನ್ನ ಹಾದರದ ಘಟನೆಗಳನ್ನು ಮುಚ್ಚಿ ತಿಪ್ಪೆ ಸಾರಿಸೋದಕ್ಕೆ ಅವರನ್ನೆಲ್ಲ ಕಲೆಹಾಕಿದ್ದಾನೆ. ಅವರಲ್ಲಿ ಅನೇಕರಿಗೆ ಇವನ ಅಸಲೀಯತ್ತು ಇನ್ನೂ ಸವಿವರವಾಗಿ ತಿಳಿದಿಲ್ಲ. ಹಿಂದನ ಕಾಲದಿಂದ ನಡೆದು ಬಂದಂತೆ ಪೀಠಕ್ಕೆ ಗೌರವ ನೀಡುವ ಸಲುವಾಗಿ ಕೆಲವರೆಲ್ಲ ಮನಸ್ಸಿಲ್ಲದ ಮನಸ್ಸಿನಿಂದಲೇ ಬಂದಿದ್ದರಂತೆ.

ಅಂತೂ ಹಾವಾಡಿಗರ ಸಂಘ ಉದ್ಘಾಟನೆಗೊಂಡಿತು. ಅದಕ್ಕೆ ಜಗದ್ಗುರು ತೊನೆಯಪ್ಪನವರೇ ಬೇನಾಮಿ ಅಧ್ಯಕ್ಢರು. ಅರ್ಜುನ ಸನ್ಯಾಸಿಗಳೇ ಕಾರ್ಯದರ್ಶಿಗಳು. ಕೃಷ್ಣ ಬಂದಾಗ ಕೌರವ ಪೀಠದಿಂದ ಇಳಿದಿರಲಿಲ್ಲ. ಕೊನೆಗೆ ಏನಾಯ್ತು? ಗೊತ್ತಲ್ಲ? ಹದಿನೆಂಟನೇ ದಿನದವರೆಗೂ ಸೋಲೊಪ್ಪದ ಕೌರವ ಜಲಸ್ತಂಭನ ಮಾಡಿದ್ದ. ನಾಯಿಯನ್ನು ಎಳೆದಂತೆ ಬೈದು ಹೊರಗೆ ಕರೆಸಿಕೊಂಡ ಭೀಮ ಊರು ಭಂಗ ಮಾಡಿ ಅವನನ್ನು ಮುಗಿಸಿದ. ಈ ಕೌರವನದ್ದೂ ಅಂತದ್ದೇ ಸ್ವಭಾವ. ಧರ್ಮವನ್ನುಳಿಸುವ ಲೋಕಪಾಲಕ ಶಕ್ತಿಯೇ ತಿಳಿದವರಿಗೆ ಬುದ್ಧಿ ಕೊಟ್ಟು ಶ್ರಾದ್ಧಭಟ್ಟನ ಈ ಪಿಂಡವನ್ನು ಮಟ್ಟಹಾಕಬೇಕು.

Thumari Ramachandra

Source: https://www.facebook.com/groups/1499395003680065/permalink/1715831872036376/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s