ತೊನೆಯಪ್ಪನ ಬುದ್ಧಿ ಉಂಡೆನಾಮದ ಮೇಲೆ-ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ

ತೊನೆಯಪ್ಪನ ಬುದ್ಧಿ ಉಂಡೆನಾಮದ ಮೇಲೆ-ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ

ಹಿಂದೊಂದು ಕಾಲದಲ್ಲಿ ಪತಿವ್ರತೆಯರು ಹಣೆಗೆ ಕಾಸಿನಗಲದ ಕುಂಕುಮ ಧರಿಸುತ್ತಿದ್ದರು.[ಈಗಲೂ ಕಾಸಿನಗಲದ ಕುಂಕುಮವನ್ನೇ ಧರಿಸಲಿ ಎನ್ನುತ್ತಿಲ್ಲ, ನೆನಪಿರಲಿ] ಕೊರಳಿಗೆ ಕರಿಮಣಿ, ಕಾಲಿಗೆ ಕಾಲುಂಗುರ, ಕಿವಿಗೆ ಬೆಂಡೊಲೆ, ಮೂಗಿಗೆ ಮೂಗುತಿ, ಕೈಗೆ ಗಾಜಿನ ಬಳೆ ಇವೆಲ್ಲ ಅಂದಿನ ವಿವಾಹಿತ ಸುಮಂಗಲಿಯರ ಸಲ್ಲಕ್ಷಣಗಳಾಗಿದ್ದವು. ಪರಪುರುಷರ ಗಮನ ಅಂತವರ ಮೇಲೆ ಬೀಳತೊಡಗಿದಾಗ “ಮದುವೆಯಾಗಿದೆ” ಎಂಬುದನ್ನು ಸಾಂಕೇತಿಕವಾಗಿ ಎತ್ತಿ ತೋರಿಸುತ್ತಿದ್ದವು. ಜೊತೆಗೆ ಧಾರಣೆಯಲ್ಲಿ ವೈಜ್ಞಾನಿಕತೆಯೂ ಅಡಗಿತ್ತು.

ಇಂದು ಮಹಾನಗರಗಳಲ್ಲಿ ಬಿಡಿ ಹಳ್ಳಿಯ ಕೊಂಪೆಗಳಲ್ಲಿಯೂ ನಿತ್ಯ ಸೀರೆ ಉಡುವವರೇ ಕಡಿಮೆ. ನಗರವಾಸಿ ಪತಿವ್ರತೆಯರು ಮೇಲೆ ಹೇಳಿದ ಮುತ್ತೈದೆಯರ ಲಕ್ಷಣಗಳಲ್ಲಿ ಬಹುತೇಕ ಯಾವುದನ್ನೂ ಇಟ್ಟುಕೊಳ್ಳುವುದಿಲ್ಲ. ಸೀರೆಯ ಜಾಗಕ್ಕೆ ತ್ರೀಪೋರ್ತ್ ಬಂದು ಕುಳಿತಿದೆ. ಕೂದಲು ಹಿಂದಕ್ಕೆ ಹರಡಿಕೊಂಡಿರುತ್ತಾರಷ್ಟೆ. ಕುಂಕುಮ, ಓಲೆ, ಮೂಗುತಿ, ಗಾಜಿನ ಬಳೆ ಇವೆಲ್ಲ ಹಿಂದುಳಿದವರ ಲಕ್ಷಣವೆಂದು ಭಾವಿಸಿದ್ದಾರೆ. ಕಾಲುಂಗುರ ಹಾಕಿಕೊಂಡರೆ ಬೆರಳುಗಳಲ್ಲಿ ಕಡಿತ ಉಂಟಾಗುತ್ತದೆ.

ನಗರವಾಸಿ ಮುತ್ತೈದೆಯರು ರಜದಲ್ಲಿ ಹಳ್ಳಿಗಳಿಗೆ ಬಂದಾಗ ಮತ್ತು ಧಾರಾವಾಹಿಯಲ್ಲಿನ ಮಹಿಳೆಯರು ಅದರಲ್ಲಿ ತೋರಿಸುವ ವಿಷಯಗಳನ್ನೆಲ್ಲ ಗಮನಿಸುವ ಹಳ್ಳಿಯ ’ಬುದ್ಧಿವಂತೆ’ಯರು ತಾವೇನೂ ಹಿಂದೆಬಿದ್ದಿಲ್ಲ ಎಂಬುದನ್ನು ತೋರಿಸುವ ಸಲುವಾಗಿ ಅವರನ್ನು ಅನುಕರಿಸಲು ಮುಂದಾಗುತ್ತಾರೆ. ನಗರಗಳಲ್ಲಿರಲಿ ಹಳ್ಳಿಗಳಲ್ಲಿರಲಿ ಎಲ್ಲ ವೇಷಭೂಷಣಗಳೂ ಎಲ್ಲರಿಗೂ ಸುಂದರವಾಗಿ ಕಾಣುತ್ತವೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಎಲರಿಗೂ ಪಸಂದಾಗೋದು ಭಾರತೀಯ ಉಡುಗೆ ಸೀರೆ ಮಾತ್ರ.

ನೆಟ್ಟಗೆ ಹೊಸ ರೇಷ್ಮೆ ಸೀರೆಯನ್ನೇ ಕೊಡಿಸಲಾಗದ ಬಡತನದಲ್ಲಿದ್ದ ಬಡ ಗಂಡನ ಜೊತೆಯೆ ಬಾಳ್ವೆ ಬೇಸರ ಮೂಡಿಸಿದ್ದಾಗ, ಧಾರವಾಹಿಗಳಲ್ಲಿ ಮಿಂಚುತ್ತಿರುವ ಕೆಲವು ನಿತ್ಯಸುಮಂಗಲಿಯರು ಸ್ಕ್ರೀನ್ ಶ್ರೀಮಂತಿಕೆಯಲ್ಲಿ ಕಂಗೊಳಿಸುವುದನ್ನು ನೋಡಿ ನಿರಾಶೆಗೀಡಾಗಿದ್ದ ಹಲವು ಮಹಿಳೆಯರಲ್ಲಿ ಒಬ್ಬೊಬ್ಬರಲ್ಲೂ “ನಿನಗೆ ಬೇಕಾದ್ದನ್ನೆಲ್ಲ ನಾವು ಕೊಡಿಸ್ತೇವೆ, ನಮಗೆ ಬೇಕಾದ್ದನ್ನು ನೀನು ಕೊಡಬೇಕು” ಎಂದು ಪದೇ ಪದೆ ಸಾಂಕೇತಿಕವಾಗಿ ಹೇಳುತ್ತಲೇ ಇದ್ದ ತೊನೆಯಪ್ಪ ನಿಧಾನವಾಗಿ ತನ್ನ ಪಾಶವನ್ನು ಬೀಸಿದ್ದಾನೆ.

ಹೆಂಗಸರಿಗೆ ಅನುವಂಶಿಕವಾಗಿ ಬಳುವಳಿಯಾಗಿ ಬರುವ ಒಂದು ಸಾಮಾನ್ಯ ಸ್ವಭಾವವೆಂದರೆ ಆರ್ಥಿಕ ಭದ್ರತೆಯ ಪ್ರಶ್ನೆ. ಹಿಂದೆಲ್ಲ ಮಹಿಳೆಯರ ಬೇಡಿಕೆಗಳು ಇತಿಮಿತಿಯಲ್ಲಿ ಇದ್ದದ್ದರಿಂದ ಬಡ ಗಂಡನ ಆರ್ಥಿಕತೆ ಅದಕ್ಕೆ ಸಾಲುತ್ತಿತ್ತು. ಬದಲಾದ ಕಾಲದಲ್ಲಿ ಹೊರವಲಯದೊಡನೆ ತೆರೆದುಕೊಂಡ ಸಮಾಜದ ಮಹಿಳೆಯರಿಗೆ ಶ್ರೀಮಂತಿಕೆಯ ಪರಿಚಯವಾಗಿದೆ. ಮಾನಸಿಕ ನೆಮ್ಮದಿ-ಸ್ವಾತಂತ್ರ್ಯದಲ್ಲಿದ್ದರೂ ’ಬಡತನ’ವೆಂಬ ಬಿಕ್ಕಳಿಕೆ ಹೊಂದಿದ್ದ ಅವರು ಸಿರಿತನದ ಬಂಗಾರದ ಪಂಜರವೇ ವಾಸಿ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ.

ಹಳ್ಳಿತೊರೆದು ನಗರಗಳತ್ತ ವಲಸೆ ಬಂದ ಹೊಸ ಹುಡುಗ ಪೀಳಿಗೆಯ ಜನರು ಹಳ್ಳಿಗರಿಗಿಂತ ಧನಿಕರಾಗಿ ಕಾಣುವುದನ್ನು ಗಮನಿಸಿದ ಹಳ್ಳಿಯ ಮಹಿಳೆಯರಿಗೆ ಬಡತನ ನಿವಾರಣೆಗೆ ತಾವೂ ಏನನ್ನಾದರೂ ಮಾಡಬೇಕೆಂಬ ಮನಸ್ಸು ಬಂದಿತ್ತು. ಇತ್ತಕಡೆ ಹೋರಿ-ತೊನೆಯಪ್ಪನೂ ಅದಕ್ಕಾಗಿ ಕಾದಿತ್ತು. ಹಸಿದ ಹಸುವಿನ ಮುಂದೆ ಹಸಿರು ಹುಲ್ಲನ್ನು ಹಿಡಿದು ಕರೆದರೆ ಬಾರದಿದ್ದೀತೇ?

ಅದರಲ್ಲಂತೂ ತೊನೆಯಪ್ಪ ದನದ ವಿಷಯದಲ್ಲಿ ಪಿ.ಎಚ್.ಡಿ ಮಾಡಿದ ಮಹಾನಿಪುಣ ಹೋರಿ[ಪ್ರಾಯಶಃ ಲಂಪಟರೆಲ್ಲರೂ ಹಾಗೆಯೇ]. ದನದ ಮೈಮೇಲೆ ಕುಳಿತು, ಒಂದು ತುದಿಯಲ್ಲಿ ಹುಲ್ಲಿನ ಕಂತೆ ನೇತಾಡಿಸಿದ ಕೋಲಿನ ಇನ್ನೊಂದು ತುದಿಯನ್ನು ಕೈಲಿ ತೆಗೆದುಕೊಂಡು ದನದ ಮುಂದೆ ಹಿಡಿಯುವ ತಂತ್ರಮಾಡಿದ್ದಾನೆ. ಎಷ್ಟು ನಡೆದರೂ ಹುಲ್ಲು ದನಕ್ಕೆ ದಕ್ಕುವುದಿಲ್ಲ; ಹುಲ್ಲಿನ ಆಸೆಗೆ ದನ ಕರೆದಲ್ಲಿಗೆ ಬರುವುದು ತಪ್ಪೋದಿಲ್ಲ. ಹೇಗಿದೆ ಪ್ಲಾನು? ಯಾರನ್ನೋ ಯಾಕೆ ಕೇಳ್ತೀರಿ? ಧೂರ್ತ ಮುಖದ ಕುಲಪತಿ ಕುಳ್ಳಬಾವಯ್ಯನ್ನ ಕೇಳಿ.

ಹೇಗೂ ದನಗಳ ವಿಷಯದಲ್ಲಿ ಮಮತೆಯಿರುವ ಮಂದಿ ಕಳಿಸುವ ಕಾಸು ಕೋಟಿಗಳಲ್ಲಿ ಸಂಗ್ರಹವಾಗುತ್ತಿತ್ತಲ್ಲ? ಅದರಲ್ಲಿ ಬಹುಪಾಲು ಹಣವನ್ನು ತೊನೆಯಪ್ಪ ಮತ್ತು ಮಠದ ಬಾವಯ್ಯ ತಮ್ಮ ಅಸಾಮಾನ್ಯ ಹಾವಾಡಿಗತನಕ್ಕೆ ಬಳಸಿಕೊಂಡರು! ಯಾವುದಕ್ಕೂ ಲೆಕ್ಕ ಕೊಟ್ಟು ಗೊತ್ತಿಲ್ಲ. ವಿಷಯದಲ್ಲಿ ಪ್ರೌಢಿಮೆಯಿರದ ಅಪ್ರಬುದ್ಧ ಶಿಕ್ಷಕರು ಅನಿರೀಕ್ಷಿತವಾಗಿ ಎದುರಾದ ಚತುರ ಪ್ರಶ್ನೆಗೆ “ಈಗ ಸಮಯವಾಗಿದೆ ನಾಳೆ ಹೇಳುತ್ತೇನೆ” ಂದು ತಪ್ಪಿಸಿಕೊಂಡಂತೆ ಶಾಸ್ತ್ರ-ಸಂಪ್ರದಾಯಗಳ ಬಗ್ಗೆ ಪ್ರಶ್ನಿಸಿದರೆ “ಇಪ್ಪತ್ನಾಲ್ಕು ಗಂಟೆಗಳಲ್ಲಿ ತಿಳಿಸ್ತೇವೆ” ಎಂದು ತಪ್ಪಿಸಿಕೊಳ್ಳುತ್ತಿದ್ದರು. ಐಪ್ಯಾಡ್ ಭಾಷಣಗಳಲ್ಲಿ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಲ್ಲಿ ಮಾತ್ರ ಪಾಕಿಸ್ತಾನಿ ಬೇಹುಗಾರರಿಗಿಂತ ಚತುರರು ಈ ಜೋಡಿ.

ಲಾಗಾಯ್ತಿನಿಂದ ನಡೆದುಬಂದಿದ್ದ ಸಾಮಾಜಿಕ ಮೌಲ್ಯಗಳೆಲ್ಲ ಬದಲಾಗಿ ಜನತೆ ದುಡ್ಡಿನ ಹಿಂದೆ ಬಿದ್ದಿತು. ಗಂಡಾಗುಂಡಿ ಮಾಡಿಯಾದರೂ ಗಡಿಗೆ ತುಪ್ಪ ಕುಡಿಯಲೇಬೇಕೆಂಬ ಗಾದೆ ಅನ್ವಯವಾಯಿತು. ಗಂಡನನ್ನ ಪೆದ್ದಗುಂಡನನ್ನಾಗಿ ಮಾಡಿಯಾದರೂ ಬಯಸಿದ ಮಹಿಳೆಯರನ್ನು ಭೋಗಿಸಲೇಬೇಕು ಎಂಬ ಹೊಸ ಗಾದೆ ಹಾವಾಡಿಗ ಮಠದಲ್ಲಿ ಹುಟ್ಟಿಕೊಂಡಿತು! ಭಟ್ಟತನಕೆ ಮಾಡುವ ಬಡ ಗಂಡುಗಳಿಗೆ ಹೆಣ್ಣನ್ನು ಕೊಡುವವರೇ ಇರೋದಿಲ್ಲ ಎಂಬ ಕಾರಣಕ್ಕೆ ವೇದಪಾಠಗಳನ್ನು ಓದುವ ಹುಡುಗರೂ ಕಡಿಮೆಯಾದರು. ಸತ್ಯನಾರಾಯಣ ಕತೆ ಮಾಡಿಸುವಷ್ಟು ಕಲಿತ ಮಂದಿ ಮಹಾನಗರಗಳಲ್ಲಿ ಗಂಟೆ ಅಲ್ಲಾಡಿಸುತ್ತ ಕಾಸು ಮಾಡಿದರು. ಅವರಲ್ಲಿ ಶ್ರಾದ್ಧದ ಭಟ್ಟನ ಸಂತಾನ ಮಾತ್ರ ಮಠವನ್ನು ಹೊಕ್ಕಿಬಿಟ್ಟಿತ್ತು!

ರಾಜಮಹಾರಾಜರ ಕಾಲದಿಂದಲೂ ನೋಡಿ, ಆರ್ಥಿಕ ಭದ್ರತೆ ಇಲ್ಲದ ವ್ಯಕ್ತಿಗಳಿಗಿಂತ ಆರ್ಥಿಕ ಔನ್ನತ್ಯ ಉಳ್ಳವರನ್ನು ಮಹಿಳೆಯರು ಆಶ್ರಯಿಸುತ್ತಾರೆ. ಕಾಸು ಕೊಡ್ತಾರೆ ಎಂಬ ಕಾರಣಕ್ಕೆ ಎಂತೆಂತಹ ಕೋತಿಮುಖದವರ ಜೊತೆಗೆ ನಟಿಸುವ ಸುಂದರಿಯರನ್ನು ನೋಡುವುದಿಲ್ಲವೇ? ಹಣ ಎಂದರೆ ಹೆಣವೂ ಬಾಯ್ಬಾಯ್ ಬಿಡುತ್ತದಂತೆ ಅನ್ನೋದು ಸುಳ್ಳಲ್ಲ.

ಹಣವೇ ಎಲ್ಲದಕ್ಕೂ ಪ್ರಧಾನವಾದಾಗ ಈ ಸಮಾಜದ ಹಲವು ಮಹಿಳೆಯರು ಅದರ ಹಿಂದೆ ಬಿದ್ದರು. ಭಕ್ತರ ದೇಣಿಗೆಯಿಂದ ಕೋಟ್ಯಾಧಿಪತಿಯಾಗಿ ಸಮಾಜದ ಮೇಲೆ ಅಧಿಕಾರ ಚಲಾಯುಸುತ್ತಿದ್ದ ಶೋಭರಾಜಾಚಾರ್ಯರು, ತನ್ನ ಅಂಧಾನುಯಾಯಿಗಳನ್ನು ಪ್ರೇರೇಪಿಸಿ ನಡುನಡುವೆ ಶೋಭಾಯಮಾನವಾದ ಶೋಭಾಯಾತ್ರೆಗಳನ್ನು ನಡೆಸಹತ್ತಿದರು. ಅಂತ ಯಾತ್ರೆಗಳಲ್ಲಿ ಎಷ್ಟು ಮಂದಿ ಶೋಭಾರಾಣಿಯರು ಶೋಭರಾಜಾಚಾರ್ಯರ ಬಲೆಗೆ ಬಿದ್ದರೋ ಶಿವನಿಗೇ ಗೊತ್ತು.

ಯಾವಾಗ ತನ್ನನ್ನು ವಿರೋಧಿಸುವವರನ್ನು ಮಟ್ಟಹಾಕಬಹುದೆಂಬ ಧಾಂಡಿಗತನ ಮಠದವನಲ್ಲಿ ಬೆಳೆಯಿತೋ ಆಗ ಏಕಾಂತ ಸೇವೆ ಆರಂಭವಾಯ್ತು. ಎದುರುವಾದಿಗಳಿಗೆ ಯಾರ ಬೆಂಬಲವೂ ಇರಲಿಲ್ಲ. ಗಂಡಂದಿರ ಮಾತನ್ನು ಪತಿವ್ರತೆಯರು ಕೇಳಲಿಲ್ಲ. ಶ್ರಾದ್ಧಭಟ್ಟನ ಪಿಂಡ ನೂರಾರು ಮಹಿಳೆಯರನ್ನು ಉಂಡು ತೇಗಿತು. ಏಕಾಂತಕ್ಕೆ ತೊಡಗಿದ ಮಹಿಳೆಯರಿಗೆ ಸಮೂಹ ಸನ್ನಿ ಆವರಿಸಿಕೊಂಡಿತು. ಮಠದಿಂದ ಆಗಾಗ ಧನಕನಕದ ಸಹಾಯವನ್ನೂ ಕೆಲವರಿಗೆ ನೀಡಲಾಯಿತು. ತೊನೆಯಪ್ಪನಿಗೆ ತೆವಲು ಹೆಚ್ಚಾದಾಗ ಹಡೆವ ಬಸುರಿಗೆ ತುರ್ತಾಗಿ ಕ್ಯಾಬ್ ವ್ಯವಸ್ಥೆ ಮಾಡಿದಂತೆ ಮಹಿಳೆಯರನ್ನು ಕರೆತರಲು ಕ್ಯಾಬ್ ಹೋಗತೊಡಗಿತು.

ಸಾಧ್ವಿಯರು ಕ್ಷಮಿಸಿ; ಇದು ನಿಮ್ಮ ಕುರಿತಾಗಿ ಹೇಳುತ್ತಿರೋದಲ್ಲ. ಹಿಂದೊಂದು ಕಾಲದಲ್ಲಿದ್ದ ಕೌಟುಂಬಿಕ ಪ್ರೀತಿ-ಪ್ರೇಮಗಳು ಇಂದು ಯಜಮಾನನ ಆರ್ಥಿಕತೆಯ ಮೇಲೆ ಅವಲಂಬಿಸಿವೆ. ಯಜಮಾನನಿಂದ ಸಾಧ್ಯವಾಗದ್ದು ಇನ್ನೊಬ್ಬನಿಂದ ಗುಪ್ತವಾಗಿ ಸಾಧ್ಯವಾಗುವುದಾದರೆ ಆಪ್ಶನ್ ತೆಗೆದುಕೊಳ್ಳುವುದಕ್ಕೆ ಹಿಂದೆಮುಂದೆ ನೋಡದ ಮಹಿಳೆಯರೂ ಇದ್ದಾರೆ. ಸುಂದರ ಮಹಿಳೆಯರ ಆರ್ಥಿಕತೆಯನ್ನು ಅವಲೋಕಿಸುವ ಶ್ರಾದ್ಧದ ಭಟ್ಟನ ಪಿಂಡದಂತಹ ಜನವೂ ಇದ್ದಾರೆ. ಅಲ್ಲಿ ನಾಯಿ ಹಸಿದಿತ್ತು ಅನ್ನ ಹಳಸಿತ್ತು ಗಾದೆ ಅನ್ವಯವಾಗುತ್ತದೆ.

ಆದರೆ ಮಠದ ನಾಯಿ ಕೆಲವು ಅಂಧಾನುಯಾಯಿ ಸುಂದರ ಮಹಿಳೆಯರನ್ನೂ ಉಂಡು ಮುಗಿಸಿತು. ಅಂತ ಅಂಧಾನುಯಾಯಿಗಳಿಗೆ ಆರ್ಥಿಕ ತೊಂದರೆಗಳಿರಲಿಲ್ಲ. ಗುರುಗಳೇ ಪರಬ್ರಹ್ಮನೆಂದು ನಂಬಿಕೊಂಡವರ ಕಿವಿಗಳಲ್ಲಿ “ನಮ್ಮದು ಭೋಗವರ್ಧನವಾಳ ಪರಂಪರೆ. ನಮ್ಮ ಹಿಂದಿನವರೂ ಹೀಗೇ ಇದ್ದರು, ನಮ್ಮ ಆದಿ ಗುರುಗಳೂ ಹೀಗೇ ಇದ್ದರು” ಎಂದೆಲ್ಲ ಭೋಂಗು ಬಿಟ್ಟ ಶ್ರಾದ್ಧದ ಭಟ್ಟ. ಹಿಂದೆ ಗೊತ್ತಿಲ್ಲ, ಮುಂದೆ ಗೊತ್ತಿಲ್ಲ. ಹೇಳಿದ್ದೆಲ್ಲ ಹೌದು ಎಂದುಕೊಂಡರು ಮಹಿಳೆಯರು. ಏಕಾಂತದಲ್ಲಿ ತೊನೆಯಪ್ಪ ಆಣೆಪ್ರಮಾಣಗಳನ್ನು ಮಾಡಿಸುತ್ತಿದ್ದ. ವಿಷಯ ಬಹಿರಂಗಗೊಂಡರೆ ಸಮಾಜದಲ್ಲಿ ತಮ್ಮ ಕುಟುಂಬದ ಗತಿ ಏನು ಎಂದುಕೊಂಡು ಎಲ್ಲರೂ ಮುಚ್ಚಿಟ್ಟುಕೊಂಡರು.

ಮಹಿಳೆಯರಿಗೆ ಮಕ್ಕಳೆಂದರೆ ಜಗತ್ತು. ಅದು ಕೇವಲ ಮನುಷ್ಯ ಪ್ರಾಣಿಗೆ ಮಾತ್ರವಲ್ಲ. ಅಮ್ಮ ಎಂಬ ಪಾತ್ರ ಎಲ್ಲ ಜೀವ ವರ್ಗಗಳಲ್ಲೂ ಹಾಗೆಯೇ. ಮೊಟ್ಟೆ ಇಡುವ ಹಕ್ಕಿ ಮರಿಬೆಳೆಸುವುದನ್ನು ನೋಡಿ. ಹೊಟ್ಟೆಗೆ ಅವುಚಿಕೊಂಡ ಮರಿಯನ್ನು ಹೊತ್ತೊಯ್ಯುವ ಮಂಗವನ್ನು ನೋಡಿ. ಅಮ್ಮನಿಗೆ ಮಕ್ಕಳ ಬಗ್ಗೆ ಅಪಾರ ಕಾಳಜಿ. ಹೀಗಿರುತ್ತ ಅಮ್ಮಂದಿರನ್ನು ಉಂಡು ಮುಗಿಸಿದ ತೊನೆಯಪ್ಪ ಅವರ ಹದಿಹರೆಯದ ಸುಂದರ ಹೆಣ್ಣುಮಕ್ಕಳಿಗೂ ಬೇಡಿಕೆ ಇಟ್ಟ. ಮಠಕ್ಕೆ ದರ್ಶನಕ್ಕೆ ಬಂದಾಗಲೆಲ್ಲ ಮೈ ಕೈ ಸವರಿದ. ತ್ರಾಟಕ-ಯೋಗ ಹೇಳಿಕೊಡುತ್ತೇನೆಂದ. ಕೆಲವು ಹೆಣ್ಣುಮಕ್ಕಳನ್ನು ಬಲಿಹಾಕಿದ್ದು ಇದೇ ತಂತ್ರದಿಂದ. ಇದರಿಂದ ಕ್ರುದ್ಧರಾದ ತಾಯಂದಿರು ಮಕ್ಕಳ ರಕ್ಷಣೆಗೆ ಮುಂದಾದರು; ಹೆಣ್ಣುಮಕ್ಕಳು ಮಠಕ್ಕೆ ಹೋಗದಂತೆ ನೋಡಿಕೊಂಡರು.

“ಸರ್ವತಂತ್ರ ಸ್ವತಂತ್ರ”ವೆಂಬ ಯೋಗಪಟ್ಟವನ್ನು ಆರ್ಥಿಕ ಮತ್ತು ರಾಜಕೀಯವಾಗಿ ತಾನು ಸರ್ವತಂತ್ರ ಸ್ವತಂತ್ರ, ಯಾರೂ ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದುಕೊಂಡ ತೊನೆಯಪ್ಪ ಮಠವನ್ನು ಭೋಗತಂತ್ರಕ್ಕೆ ಬಳಸಿಕೊಂಡ. ಮಠಕ್ಕೆ ಬರುವವರಲ್ಲಿ ಅಂಧಾನುಯಾಯಿಗಳು ಯಾರ್‍ಯಾರು ಮತ್ತು ಆರ್ಥಿಕವಾಗಿ ಬಲಹೀನರು ಯಾರ್‍ಯಾರು ಎಂದು ಸರ್ವೇ ಮಾಡಲು ಗಿಂಡಿಗಳನ್ನು ನಿಯೋಜಿಸಿದ. ಕುಮಾರಿಯರಿಗೆ ಕನ್ಯಾಸಂಸ್ಕಾರ ಮಾಡುತ್ತೇನೆಂದ. ಸನ್ಯಾಸಿಗೂ ಕನ್ಯಾಸಂಸ್ಕಾರಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ? ಗುರುಗಳೆಂಬ ಭಕ್ತಿಯಿಂದ ತಮ್ಮ ಎಳೆಗರುಗಳನ್ನು ಹೋರಿಗೆ ಅರ್ಪಿಸಿದವರು ಕೆಲವರು. ಎಳೆಗರುಗಳಿಗೆ ಏನೆಂದು ತಿಳಿಯುವ ಮೊದಲೇ ಎಲ್ಲವನ್ನೂ ಮುಗಿಸಿ ತೊಳೆದುಬಿಟ್ಟ ತೊನೆಯಪ್ಪ.

ಇಂತ ತೊನೆಯಪ್ಪನಿಗೆ ಇಂದಿಗೂ ಸಲಾಮು ಹೊಡೆಯುವ ಬುದ್ಧಿಮಾಂದ್ಯ ಗುರಿಕಾರರು ಇದ್ದಾರಂತೆ. ಮೂರ್ನಾಲ್ಕು ದಿನಗಳಿಂದ ಅವರಿಗೆಲ್ಲ ನಿದ್ದೆ ಇಲ್ಲವಂತೆ. ಸಮಾವೇಶ ನಡೆಸಬೇಕಲ್ಲ? ಸಮಾವೇಶಕ್ಕೆ ಬಂದವರಲ್ಲಿ ಕಚ್ಚೆಹರುಕನ ನಿಜ ಹಕೀಕತ್ತು ಅರಿಯದೆ ಬಂದವರು ಅಥವಾ ಹಣಕ್ಕಾಗಿ ಬಂದವರು ಅಥವಾ ಇವನ ಒತ್ತಡಕ್ಕೆ ಮಣಿದು ಬಂದ ಯತಿಗಳು ಎನ್ನಬಹುದಾದ ಕೆಲವು ಯತಿಗಳು ಅಥವಾ ತೊನೆಯಪ್ಪನಂತೆ ಕಚ್ಚೆಹರುಕರು. ಕಚ್ಚೆಹರುಕರ ಸಂಘದ ಬಲವರ್ಧನೆಗೆ ಬೇಕಾಗುತ್ತದೆ ಅಂತ ಬರುತ್ತಾರಷ್ಟೆ; ನಾಳೆ ಅವರ ಹೂರಣವೂ ಹೊರಬಂದರೆ ಬೆಂಬಲಕ್ಕೆ ಬೇಕಲ್ಲ?

ಜಗದ್ಗುರು ತೊನೆಯಪ್ಪ ಸಮಾವೇಶಗಳಿಂದಲೇ ಎಲ್ಲವನ್ನೂ ನಿಭಾಯಿಸಬಹುದು, ತನ್ನ ತಾಕತ್ತನ್ನು ಪ್ರದರ್ಶಿಸಬಹುದು ಎಂದುಕೊಂಡಿದ್ದಾನೆ. ವಾಸ್ತವವಾಗಿ ಈ ಶ್ರಾದ್ಧಭಟ್ಟನ ಪಿಂಡಕ್ಕೆ ಯಾವ ಮನ್ನಣೆ ಸಿಗಬೇಕು ಗೊತ್ತೇ? ಅಲ್ಲೆಲ್ಲೋ ರಾಷ್ಟ್ರಧ್ವಜವನ್ನು ಸುಟ್ಟ ಹುಡುಗನಿಗೆ ನೀಡಿದ ಪ್ರಾಥಮಿಕ ಮನ್ನಣೆಯೇ ಆಗಬೇಕು. ಕೈಕಾಲುಗಳಿಗೆ ಪ್ಲಾಸ್ಟರ್ ಹಾಕಿಸಿಕೊಳ್ಳಬೇಕು. ಮುಖದ ರಿಪೇರಿಗೆ ಪ್ಲಾಸ್ಟಿಕ್ ಸರ್ಜನ್ ಬರಬೇಕು. ಕುಳ್ಳ ಬಾವಯ್ಯನಿಗೂ ಇದೇ ಗೌರವ ಪ್ರಾಮಾಣಿಕವಾಗಿ ದೊರೆಯುವಂತಾಗಬೇಕು.

ಕೆಲವು ತಿಂಗಳುಗಳ ಹಿಂದೆ ಮಠಕ್ಕೆ ಕರೆಸಲ್ಪಟ್ಟಿದ್ದ ಅಷ್ಟಮಂಗಲದವರಾರೋ ಹಾಗೆ ಹೇಳಿದ್ದಾರಂತೆ. “ಪೀಠ ಬಿಟ್ಟು ಹೋಗಲೇಬೇಕಾಗುತ್ತದೆ, ಶಿಕ್ಷೆ ತಪ್ಪೋದಿಲ್ಲ” ಎಂದಾಗ ತಾಲಿಬಾನಿಗಳು ಅಷ್ಟಮಂಗಲದವರ ಮೇಲೆರಗಿ ಅವರನ್ನು ಹಿಗ್ಗಾಮುಗ್ಗಾ ಥಳಿಸಿದರಂತೆ. ಬದುಕಿದೆಯಾ ಬಡಜೀವವೆ ಎಂದುಕೊಳ್ಳುತ್ತ ಅಷ್ಟಮಂಗಲದವರು ಓಡಿಹೋದರಂತೆ. ಅಷ್ಟಮಂಗಲದವರ ಗತಿ ಹಾಗಾಗುತ್ತದೆಂದು ಅವರಿಗೇ ಗೊತ್ತಿತ್ತೋ ಇಲ್ಲವೋ ಪಾಪ! ಗುಮ್ಮಣ್ಣ ಹೆಗಡೇರು ಮತ್ತು ಕವಳದ ಗೋಪಣ್ಣ ತುಮರಿಗೆ ಭಾತ್ಮೀದಾರರಾಗಿ ಸಹಕರಿಸುತ್ತಿದ್ದಾರೆ ಎಂಬುದನ್ನಿಲ್ಲಿ ಕೃತಜ್ಞನಾಗಿ ಸಾದರ ಪಡಿಸುವುದಕ್ಕೆ ತುಮರಿ ಮರೆಯುವುದಿಲ್ಲ.

ಅಂತರ್ಜಾಲವನ್ನು ಹೋರಿ ತೊನೆಯಪ್ಪ ಬಳಸಿಕೊಂಡಷ್ಟು ಅತಿಯಾಗಿ ಯಾರೂ ಬಳಸಿಕೊಳ್ಳಲಿಲ್ಲ ಅಂತಾನೆ ಕವಳದ ಗೋಪಣ್ಣ. ಹೋರಿ ಸವಾರಿ ಬೀಡುಬೀಡುವ ಮನೆಯಲ್ಲಿ ಅಂತರ್ಜಾಲ ವ್ಯವಸ್ಥೆ ಕಡ್ಡಾಯವಾಗಿತ್ತಂತೆ. ಸನ್ಯಾಸಿಗೇಕೆ ಅಷ್ಟೊಂದು ಅಂತರ್ಜಾಲದ ಹುಚ್ಚು? ಅಲ್ಲಿ ಸಿಗುವ ಜಿಂಗಿಚಕ್ಕದ ವೀಡಿಯೋಗಳನ್ನು ನೋಡುವುದು ಜಗದ್ಗುರು ತೊನೆಯಪ್ಪನ ತ್ರಿಕಾಲ ಅನುಷ್ಠಾನವಾಗಿತ್ತಂತೆ. ಸುಂದರ ನಟಿಯರ, ಮಹಿಳೆಯರ ನಗ್ನ ಚಿತ್ರಗಳನ್ನು ನೋಡೋದು ಕೂಡ ನಡೀತಿತ್ತಂತೆ. ಎಲ್ಲ ಮಾಹಿತಿಗಳೂ ಸಿಕ್ಕಿವೆಯಂತೆ. ಸದ್ಯ ನಗರಬಂಧನದಲ್ಲಿರುವಂತೆ ಮಾಡಿದ ಮಹಿಳೆಯರಿಗೆ ಗೋಪಣ್ಣ ಅಭಿನಂದನೆ ತಿಳಿಸಿದ್ದಾನೆ.

ಮಠದಲ್ಲಿ ಈಗ ನದೆಯುತ್ತಿರೋದೆಲ್ಲ ಅಸುರೀ ಸಂಪ್ರದಾಯ. ಹಿರಣ್ಯ ಕಶಿಪುವಿನ ಮಗ ಪ್ರಹ್ಲಾದ ಅಪ್ಪನಿಗೆ ಬೇಕಾದಂತೆಯೇ ದೇವರನ್ನು ಧ್ಯಾನಿಸಬೇಕಿತ್ತು. ಹರನ ಬದಲಿಗೆ ಹರಿಯೆಂದಿದ್ದಕ್ಕೆ ಏನಾಗಿತ್ತು ನಿಮಗೆಲ್ಲ ಗೊತ್ತು. ದಂಬಾಸುರ, ಕಂಬಾಸುರ, ಕೋಲಾಸುರ, ಶುಂಭ-ನಿಶುಂಭ, ಮಧು-ಕೈಟಭ, ಸುಂದೋಪಸುಂದ, ರಾವಣ-ಕುಂಭಕರ್ಣ ಈ ಎಲ್ಲ ರಾಕ್ಷಸರ ಆಸ್ಥಾನಗಳಿಗೆ ಹೋಗುವ ಪುಕ್ಕಲು ಪುರೋಹಿತರು ಹೆದರಿಕೊಂಡೇ ಹೋಗುತ್ತಿದ್ದರು. ಅವರಿಗೆ ಬೇಕಾದಂತೆಯೇ ಹೇಳುತ್ತಿದ್ದರು; ಭಕ್ಷೀಸು ಕೊಟ್ಟರೆ ಉಂಟು ಇಲ್ಲದಿದ್ದರೆ ಖಾಲಿ ಕೈಲಿ ಜಾಗ ಖಾಲಿ ಮಾಡುತ್ತಿದ್ದರು. ಜೀವ ಬಿಡುತ್ತಿದ್ದುದೇ ದೊಡ್ಡ ಭಕ್ಷೀಸು ಎಂದುಕೊಂಡಿದ್ದರು.

ಕೋಟೆಕಟ್ಟಿ ಕೋಟ್ಯಾವಧಿ ಪ್ರಜೆಗಳನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದ ಅಸುರರು ಸುರರನ್ನು ಕೆಲಸಮಯ ಸದೆ ಬಡಿದರು. ರಾಕ್ಷಸರು ಪೂರ್ವದೇವತೆಗಳಂತೆ; ನಹುಷನಂತೆ ತಾವು ನಡೆಸಿದ ದುಷ್ಕರ್ಮಗಳಿಂದ ಶಾಪಗ್ರಾಸ್ತರಾಗಿ ಅಸುರರಾದರಂತೆ; ನಮ್ಮ ವಿದ್ವಾನ್ ನಡಹಳ್ಳಿ ರಂಗನಾಥ ಶರ್ಮರು ಬಹಳ ವಿಶದವಾಗಿ ಅದನ್ನು ಬಣ್ಣಿಸುತ್ತಿದ್ದರು. ಹಾಗೆಂದಮೇಲೆ ದೇವತೆಗಳ ಸೋದರರೇ ರಾಕ್ಷಸರು. ಮುಂಚಿನ ದೇವತೆಗಳೆಲ್ಲ ರಾಕ್ಷಸರಾದಮೇಲೆ ಹೊಸ ದೇವತೆಗಳ ಸೃಷ್ಟಿ ಭಗವಂತನಿಂದ ನಡೆಯಿತಂತೆ.

ಅಸುರರು ಮಠಗಳಲ್ಲಿ ಇರುತ್ತಿರಲಿಲ್ಲ ಎಂಬುದು ನಮ್ಮ ಅನಿಸಿಕೆಯಾಗಿತ್ತು. ಕಲಿ ಪ್ರವರ್ಧಮಾನಕ್ಕೆ ಬರುತ್ತಿರುವಾಗ ಮಠಗಳು ಭೋಗಕೇಂದ್ರಗಳಾಗಬಹುದು ಎಂಬುದಕ್ಕೆ ಶ್ರಾದ್ಧಭಟ್ಟನ ಪಿಂಡ ಜ್ವಲಂತ ಉದಾಹರಣೆಯನ್ನು ಒದಗಿಸಿಕೊಟ್ಟಿದೆ. ತಮಾಷೆಯೆಂದರೆ ಎಂತೆಂತಹ ಐ.ಏ.ಎಸ್, ಐ.ಪಿ.ಎಸ್ ಅಧಿಕಾರಿಗಳಿಗೂ ಸಹ ಉಂಡೆನಾಮ ತೀಡಿದ್ದು ಏಳನೇ ಕ್ಲಾಸು ಪಾಸುಮಾಡದ ಜಗದ್ಗುರು ತೊನೆಯಪ್ಪ ಎಂಬುದು.

ಅದಿರಲಿ ಹೆಂಸರ ಬಳಗದ ಬಹುತೇಕರಿಗೆಲ್ಲ ಈಗ ನಡೆದ ಘಟನೆಗಳು ನಿಜವೆಂಬುದು ಖಾತ್ರಿಯಾಗಿದೆ. ಅಷ್ಟಿದ್ದೂ ಹೆಂಗಸರಲ್ಲೇ ಕೆಲವರು ಹೋರಿಗೆ ಸೀರೆಯ ಸೆರಗಿನ ಮರೆಯಲ್ಲಿ ನಿಲ್ಲುವಂತೆ ಆಶ್ರಯ ನೀಡುತ್ತಿರುವುದು ಸಾಮಾಜಿಕ ವಿಪರ್ಯಾಸ ಮತ್ತು ಸಾಮಾಜಿಕ ವಿಪ್ಲವಕ್ಕೆ ಕಾರಣವಾಗಬಹುದಾದ ಸಂಗತಿ. ಯಾಕೆ? ಅವರಿಗೆಲ್ಲ ತಮ್ಮ ಹೂರಣ ಹೊರಗೆ ಬಂದೀತೆಂಬ ಭಯವೇ?

ನಂಬಿಕೆಯನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಕಳ್ಳಯ್ಯ-ಕುಳ್ಳಯ್ಯ ಸೇರಿ ಸಾಕ್ಷಾತ್ಕರಿಸಿ ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ. ಸಮಾಜ ಈಗ ಮುಖ್ಯವಾಗಿ ಇವರೀರ್ವರಿಗೆ, ಜೊತೆಗೆ ಕನಾತಣ್ಣ, ನಮೇಸ ಮೊದಲಾದ ಕೆಲವು ಗಿಂಡಿಗಳಿಗೆ ’ಸನ್ಮಾನ’ ಮಾಡಬೇಕು. ಐಡೆಂಟಿಟಿ ಕ್ರೈಸಿಸ್ ಮ್ಯಾನೇಜ್ ಮಾಡಿಕೊಂಡು ಪ್ರಸನ್ನವದನರಾದ ಮ್ಯಾಂಗೋ ಪುಕುಳಿಗೆ, ಅನೈತಿಕ ವ್ಯವಹಾರಕ್ಕೆ ಮಧ್ಯಸ್ಥರಾದವರಿಗೆ, ಕೋಟಿಗಳಲ್ಲಿ ಮಠದ ಹೋರಿಯ ಪಾಲುದಾರಿಕೆ ಪಡೆದ ಬಸ್ಸುಗಿಸ್ಸು ಮೊದಲಾದ ವ್ಯವಹಾರಸ್ಥರಿಗೆ ಎಲ್ಲರಿಗೂ ಯಥಾಯೋಗ್ಯ ಸನ್ಮಾನ ನಡೆಯಬೇಕು ಎಂದು ಮಹಾಸಭೆಯ ಹೊರಗಿರುವ ನಿಜವಾದ ಸಮಾಜ ಹೇಳುತ್ತಿದೆ.

Thumari Ramachandra

source: https://www.facebook.com/groups/1499395003680065/permalink/1714995888786641/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s