ಜಗದ್ಗುರು ತೊನೆಯಪ್ಪ ಬಿದ್ರಾಮಪ್ಪಂಗೆ ಕೊಟ್ಟಿದ್ದು ಬರೀ ಐವತ್ತು ಕೋಟಿ!

ಜಗದ್ಗುರು ತೊನೆಯಪ್ಪ ಬಿದ್ರಾಮಪ್ಪಂಗೆ ಕೊಟ್ಟಿದ್ದು ಬರೀ ಐವತ್ತು ಕೋಟಿ!

ಶತಮಾನಗಳ ಹಿಂದೊಂದು ಕಾಲದಲ್ಲಿ ಕರಾಬು ರಾಜ್ಯವೊಂದರಲ್ಲಿ ಕಂತ್ರಿಗಳೆಲ್ಲ ಮಂತ್ರಿಗಳಾಗಿ, ರಾಜರಾಗಿ ಆಳ್ವಿಕೆ ನಡೆಸಿದ್ದರಂತೆ. ಅಲ್ಲಿ ನ್ಯಾಯದಾನವೆಂದರೆ ಧನಿಕರಿಗೆ ಬೇಕಾದಂತೆ ತೀರ್ಪು ನೀಡುವುದಾಗಿತ್ತಂತೆ. ಹಣವಿದೆಯೋ ಹಾಗಾದರೆ ನೀವು ಗೆದ್ದಂತೆ; ಇಲ್ಲವೋ ನೀವು ಸೋತಂತೆ ಅಥವಾ ಸತ್ತಂತೆ ಎಂದು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಇತ್ತಂತೆ. ಆ ರಾಜ್ಯದಲ್ಲಿ ಎಲ್ಲಿ ನೋಡಿದರೂ ಕಚ್ಚೆಹರುಕರು, ಜೂಜು ಕೋರರು, ಕುಡುಕರು, ಕೊಲೆಗಡುಕರೆಲ್ಲ ತುಂಬಿದ್ದರಂತೆ. ಸಜ್ಜನರು ಬದುಕುವುದೆ ಕಷ್ಟವಾಗಿ ಬದುಕು ಬೇಸರವಾಗಿ ರಾಜನನ್ನೂ ಅವನ ವಂದಿಮಾಗಧರನ್ನೂ ನಿತ್ಯ ಶಪಿಸುತ್ತಿದ್ದರಂತೆ.

ಇಂದೂ ಸಹ ಅಲ್ಲಲ್ಲಿ ನ್ಯಾಯದಾನದ ಸುದ್ದಿ ಬಂದಾಗ ಈ ಕಥೆಯನ್ನು ಹಲವರು ನೆನಪಿಸಿಕೊಳ್ಳುತ್ತಾರೆ. ಅಂದಹಾಗೆ ಜಗತ್ತಿಗೇ ಏಕಮಾತ್ರ ಜಗದ್ಗುರುವೆಂದು ಗುರುತಿಸಿಕೊಳ್ಳಲು ಹೊರಟಿದ್ದ ತೊನೆಯಪ್ಪ, ನಿತ್ಯ ವೀರ್ಯಸ್ರಾವಕ ಕುಟುಂಬದ ಹಿನ್ನೆಲೆಯಿಂದ ಬಳುವಳಿ ಪಡೆದ ತನ್ನ ಕಚ್ಚೆಹರುಕು ಸಾಹಸಗಾಥೆಗಳನ್ನು ಮುಚ್ಚಿಹಾಕಲು ಬಿದ್ರಾಮಪ್ಪನೊಡನೆ ಕೋಟಿಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದಾನಂತೆ. ಅದು ಬರೇ ಐವತ್ತು ಕೋಟಿಗೆ ಎಂದು ಗುಮ್ಮಣ್ಣ ಹೆಗಡೇರು ಡೈರಿಯಲ್ಲಿ ಗುರುತುಹಾಕಿಕೊಂಡು ತಿರುಗಾಡುತ್ತಿದ್ದಾರಂತೆ! ಹಾಹಾಕಾರ ನೀಗಲು ಬೆಣ್ಣೆತೂಗುವ ಮಂಗನಂತೆ ಸಮಯಕ್ಕೆ ಸರಿಯಾಗಿ ಬಂದ ಚಂಬಿಗೆ ನೀರು ತುಂಬಲು ತೆತ್ತಿದ್ದು ಬರೇ ಎಂಟತ್ತು ಕೋಟಿಗಳು. ಒಂದು ದಿನ ಕೇಸು ಮುಂದೆ ಹಾಕಿಸಿಕೊಟ್ಟರೆ ಒಂದು ಲಕ್ಷ ಎಂಬಂತಹ ಸ್ಕೀಮುಗಳು. ಚಂಬು ನುಂಗಿದ್ದೇ ನುಂಗಿದ್ದು! ಅದಕ್ಕೆ ಲೈಫ್ ಲಾಂಗ್ ಸಾಕಾಗುವಷ್ಟು ಸಿಕ್ಕಿದೆ ಬಿಡಿ.

ತೊನೆಯಪ್ಪ ಈ ಸಲವೂ “ವಿಶೇಷ ಪೂಜೆ”, “ಆಯಾಸ” ಎಂಬೆಲ್ಲ ನೆಪ ಒಡ್ಡಿದರೆ ಎಳೆದುಕೊಂಡು ಹೋಗ್ತಾರೆ ಎಂದು ವಕೀಲರು ಸಲಹೆ ನೀಡಿದ್ದರಂತೆ. ಹೀಗಾಗಿ ಜಗದ್ಗುರು ತೊನೆಯಪ್ಪನವರು ತಡಮಾಡದೆ ಕಟಕಟೆಯಲ್ಲಿ ಹಾಜರಾಗಿ ಕ್ಷೀಣ ದನಿಯಲ್ಲಿ ಮತ್ತೆ ಸಮಯ ಬೇಡಿದರು. “ಒಂದು ತಿಂಗಳು ಸಮಯ ಕೊಡಬೇಕೆಂದು ಅಪ್ಪಣೆಯಾಗ್ತದೆ” ಎಂದು ಯಾವ ಗಿಂಡಿಯೂ ಕೂಗುವ ಹಾಗಿರಲಿಲ್ಲ! ಹಾಗಾಗಿ ತಾವೇ ದಯನೀಯ ಮುಖ ಹೊತ್ತು ಸಮಯ ಬೇಡಿದರು ಎಂದು ಅಧಿಕೃತ ಏಜೆನ್ಸಿಗಳು ಅನಧಿಕೃತವಾಗಿ ತುಮರಿಗೆ ವರದಿಮಾಡಿವೆ.

ಅದಿರಲಿ, ತೊನೆಯಪ್ಪನ ಕೋರ್ಟ್ ವ್ಯವಹಾರಗಳಿಗೂ ಮತ್ತು ಹೊರಗಿನ ಕಾರ್ಯಕ್ರಮಗಳಿಗೂ ಹೋಲಿಸಿದಾಗ, ಯಾವ ನಂಬಿಕೆಯಿಂದ ಕಾರ್ಯಕ್ರಮಗಳನ್ನು ನಡೆಸುತ್ತಾನೆ ಎಂಬುದಕ್ಕೆ ಉತ್ತರವಾಗಿ ಯಾವುದೋ ಒಂದು ರೀತಿಯ ಸುಳಿವು ನಿಮಗೆ ಸಿಕ್ಕರೆ ಅದನ್ನು ಅಧಿಕೃತವೆಂದು ತೊನೆಯಪ್ಪನ ಬಳಗ ಒಪ್ಪಿಕೊಳ್ಳುವುದಿಲ್ಲ ಬಿಡಿ. ಆದರೂ, ಕುಡಿದು ಬಂದವ ಅಷ್ಟು ದೂರ ಕುಳಿತರೂ ಒಳಗಿನ “ಪರಮಾತ್ಮ” ಸತ್ಯವನ್ನೇ ನುಡಿಯುತ್ತಾನಲ್ಲ? ಆ ’ಸುಗಂಧ’ವನ್ನು ಯಾವುದರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ ಅಲ್ಲವೇ?

ಸ್ಲೀಪರ್‌ಗಳು ಸ್ಲ್ಯಾಪರ್‌ಗಳಾಗಿ ದಕ್ಕಿಸಿಕೊಳ್ಳುವ ಕಾಲದಲ್ಲಿ, ಪಡೆದ ಐವತ್ತು ಕೋಟಿಗೆ ಕೆಲವು ಕಾಲವಾದರೂ ಕೊಟ್ಟವನಿಗೆ ಬೇಕಾದಂತೆ ನಡೆದುಕೊಳ್ಳಬೇಕಲ್ಲ? ಕೊಟ್ಟಿದ್ದು ಮಾತ್ರ ಭಕ್ತರ ಹಣ ಎಂಬುದರಲ್ಲಿ ಎರಡು ಮಾತಿಲ್ಲ. ಸ್ಲ್ಯಾಪರ್‌ಗೆ ಮೀನು ಮಟ್ಟಸ ಮಾಡುವ ತಲೆಹಿಡುಕ ದೀವಟಿಗೆ ಹಿಡೀತಾನಂತೆ. ಅಂದಹಾಗೆ ಮೀನು ಮಟ್ಟಸ ಮಾಡುವನನಿಗೆ ಕೊಟ್ಟ ಭಕ್ಷೀಸು ಎಷ್ಟೋ ಗೊತ್ತಾಗಲಿಲ್ಲ. ಹೋರಿಸ್ವಾಮಿ ಅವನನ್ನು ಒಂದು ಕಡೆ ಛೂ ಬಿಟ್ಟಿದ್ದನಲ್ಲ. ನಂತರ ಒಂದೇ ತಿಂಗಳಲ್ಲಿ ಕಚ್ಚೆಹರುಕನ ’ಜಗದ್ಗುರುಗಾರಿಕೆ’ಯ ಬಣ್ಣ ಬಯಲಾಗಿಹೋಯ್ತಲ್ಲ!

ತಮಾಷೆಯನ್ನು ನೋಡಿ-ಭಕ್ತರಲ್ಲಿ ಬಡವರಿಂದ ಹಿಡಿದು ಅತಿ ಶ್ರೀಮಂತರೆನಿಸಿಕೊಂಡ ಎಲ್ಲ ರೀತಿಯ ಜನ ಇದ್ದಾರಲ್ಲ? ನಾನಾ ನಮೂನೆಯ ನೂರಾರು ಸ್ಕೀಮುಗಳನ್ನು ಹಾಕಿ ಎಲ್ಲರಿಂದಲೂ ಸಾಧ್ಯವಾದಷ್ಟನ್ನೂ ದೋಚಿದ ಕಳ್ಳ-ಕುಳ್ಳರ ಜೋಡಿ ತಮ್ಮ ತೆವಲು ತೀರಿಕೆಗೆ ಮತ್ತು ಪರಮ ಸ್ವಾರ್ಥ ಲಾಲಸೆಗೆ ಅದನ್ನು ಬಳಸಿಕೊಂಡಿದೆ.

ಹಾವಾಡಿಗ ಮಠದ ಯೋಜನೆಗಳಿಗೆ ದೂರದಿಂದ ಮಾರುಹೋಗಿ ಸಮಾಜದ ಬಡಶ್ರೇಣಿಯ ಜನ ತಮ್ಮ ಮಕ್ಕಳ ಸಮೇತ ಮಠಕ್ಕೆ ಭೆಟ್ಟಿ ನೀಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಏನಾದರೂ ಸಹಾಯವಾಗುವುದೋ ಎಂದು ವಿಚಾರಿಸಿದ್ದಾರೆ. ಹದಿಹರೆಯದ ಮುಗ್ಧ ಹೆಣ್ಣುಮಕ್ಕಳನ್ನು ಕಂಡ ಕಳ್ಳಯ್ಯ ಕುಳ್ಳಯ್ಯ ಒಳಗೊಳಗೆ ಗುರುಕುಲವೆಂಬ ಯೋಜನೆ ಹಾಕಿಕೊಂಡಿದ್ದಾರೆ. Jack of all master of sex ಖ್ಯಾತಿಯ ತೊನೆಯಪ್ಪ ನಿರ್ಮಿಸಿದ ಆ ಗುರುಕುಲಕ್ಕೆ ಹಿಂದಿಲ್ಲ ಮುಂದಿಲ್ಲ. ಸರಿಯಾದ ಪಠ್ಯಕ್ರಮವೇ ಅಲ್ಲಿರಲಿಲ್ಲ. ಅಲ್ಲಿ ಯಾವ ಪದವಿ ತರಬೇತಿಗಳನ್ನು ನೀಡಲಾಗುತ್ತಿರಲಿಲ್ಲ. ಅಸಲಿಗೆ ಅಲ್ಲಿನ ಅಧ್ಯಾಪಕರಿಗೆ ಯಾರ್ಯಾರಿಗೆ ಏನು ಪಾಠ ಹೇಳಬೇಕೆಂಬುದೇ ಗೊತ್ತಿರಲಿಲ್ಲ; ಇದ್ದಿದ್ದೇ ಒಂದಿಬ್ಬರು; ಮಠ ಗಟ್ಟಿ ಇದೆ ಸಂಬಳ ಬರುತ್ತದೆ ಎಂಬುದೊಂದೆ ಅವರಿಗಿದ್ದ ಭರವಸೆ.

ಗುರುಕುಲವೆಂಬ ಹೆಸರಿನಲ್ಲಿ ಹೊಡೆದುಕೊಂಡ ಜಾಗದಲ್ಲಿ ನ್ಯಾಷನಲ್ ಹೈವೇ ಪಕ್ಕದ ಡಾಬಾಗಳಲ್ಲಿರುವಂತೆ ಚಿಕ್ಕ ಚಿಕ್ಕ ಗುಡಿಗಳನ್ನು ಕಟ್ಟಿದ್ದರು. ಅವುಗಳೆಲ್ಲ ಪರ್ಣಕುಟೀರಗಳಂತೆ! ಅವುಗಳಲ್ಲಿಯೆ ವಿದ್ಯಾರ್ಥಿಗಳು ಕುಳಿತು ಕಲಿಯುವರಂತೆ! ಹಾಗೆಲ್ಲ ಸುದ್ದಿ ಹಬ್ಬಿಸಿ ಭಕ್ತರನ್ನು ನಂಬಿಸಿದ್ದರು.

ಯಾಣದಂತ ಹಲವು ಪ್ರದೇಶದಲ್ಲಿ ಇದ್ದಂತಹ ಕಗ್ಗಾಡಿನಲ್ಲಿ ಕರೆಂಟನ್ನೂ ಕಾಣದ ಕುಗ್ರಾಮಗಳಿವೆ. ಅಲ್ಲಿಗೆ ಹೋಗಿಬರುವುದೇ ಒಂದು ಹರಸಾಹಸ. ಮಳೆಗಾಲದಲ್ಲಂತೂ ಸುತ್ತ ಹರಿಯುವ ಹಳ್ಳ-ತೊರೆಗಳಿಂದ ಜಲಾವೃತವಾಗಿ ದ್ವೀಪಗಳಂತೆ ಕಾಣುವ, ಪಟ್ಟಣಗಳ ಸಂಪರ್ಕ ಅಥವಾ ಬಾಹ್ಯ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಳ್ಳುವ ದಟ್ಟಕಾನನಗಳ ಹಳ್ಳಿಗಳಲ್ಲಿ ಸಮಾಜದ ಬಡ ವರ್ಗ ಇನ್ನೂ ಸಹ ಕೃಷಿಯನ್ನವಲಂಬಿಸಿ ಜೀವನ ಸಾಗಿಸುತ್ತಿದೆ.

ಹರೆಯಕ್ಕೆ ಬರುವ ತಮ್ಮ ಮಕ್ಕಳನ್ನು ಮುಂದಕ್ಕೆ ಓದಿಸಿ ಏನಾದರೂ ನೌಕರಿ-ಗಿವ್ಕರಿ ಕೊಡಿಸಿ, ತಮ್ಮಂತಹ ಕಷ್ಟದ ಜೀವನದಿಂದ ಅವರನ್ನು ಪಾರುಮಾಡಬೇಕೆಂಬ ಉದ್ದೇಶದಿಂದ, ಅಂದು ಬಹಳ ಹೆಸರುವಾಸಿಯೆನಿಸಿದ್ದ ತೊನೆಯಪ್ಪ ಜಗದ್ಗುರುಗಳಲ್ಲಿಗೆ ಮನವಿ ಹಿಡಿದು ಬಂದವರು ಸಮಾಜದ ಅಂತಹ ಹಳ್ಳಿಗರು. ಬಂದ ಪಾಲಕರಿಗೆ ಹರೆಯದ ಸುಂದರ ಹೆಣ್ಣುಮಕ್ಕಳೂ ಇದ್ದರು. ಗುರುಪಾದದಲ್ಲಿ ಹಾಕಿಬಿಟ್ಟರೆ ಮುಂದೆ ಬರುತ್ತಾರೆ ಎಂಬ ಗಾಢಾಂಧಕಾರದಿಂದ ಈ ಲಂಪಟ ತೊನೆಯಪ್ಪನ ಸುಪರ್ದಿಗೆ ಮಕ್ಕಳನ್ನು ಒಪ್ಪಿಸಿದರು; ತಮ್ಮ ಮಕ್ಕಳು ಬೆಳೆದು ವಿದೇಶಗಳವರೆಗೆ ತೆರಳುವಷ್ಟು ಮಹದ್ವಿದ್ಯೆಯನ್ನು ’ತೊನೆಯಪ್ಪ ಮಿತ್ರ ಮಂಡಳಿ’ ದಯಪಾಲಿಸುತ್ತದೆ ಎಂದುಕೊಂಡುಬಿಟ್ಟರು, ಪಾಪ.

ಮಕ್ಕಳನ್ನು ಗುರುಕುಲಕ್ಕೆ ಸೇರಿಸಿ ತಮ್ಮ ತಮ್ಮ ಮನೆಗಳಿಗೆ ಮರಳಿದ ಆ ಹಳ್ಳಿಗರಿಗೆ ಮರಳಿ ಬರುವುದಕ್ಕೂ ಅಷ್ಟು ತ್ರಾಣವಿರಲಿಲ್ಲ. ಸಂಪರ್ಕಕ್ಕೆ ಫೋನು-ಮೊಬೈಲುಗಳು ಇರುವ ಜಾಗ ಅವರದ್ದಲ್ಲ. ಇಂಟರ್ನೆಟ್ ಹೆಸರನ್ನೇ ಕೇಳಿದವರಲ್ಲ! ಚೋರಗುರುವಿನ ಗುರುಕುಲಕ್ಕೆ ಚಾಂಡಾಲ ಬಾವಯ್ಯನೇ ಕುಲಪತಿ ಎಂದಮೇಲೆ ಕೇಳಬೇಕೆ? ಹಸಿರು ಹುಲ್ಲುಗಾವಲನ್ನು ಕಂಡ ಕುದುರೆ ಕೆನೆದಂತೆ ಕುಳ್ಳ ಬಾವಯ್ಯ-ಕಳ್ಳ ನೆಂಟಯ್ಯ ಇಬ್ಬರೂ ಒಳಗೊಳಗೇ ಕೆನೆದರು.

ಆ ಗುರುಕುಲದ ಪರಿಸರದಲ್ಲಿ ಇದ್ದ ನೀರಿನ ಟಾಕಿಯಲ್ಲಿ ಹುಳಗಳೆದ್ದು, ಅನಿವಾರ್ಯವಾಗಿ ಆ ನೀರನ್ನು ಬಳಸಿದ ವಿದ್ಯಾರ್ಥಿಗಳಿಗೆ ಮೈಯೆಲ್ಲ ಕಜ್ಜಿಯಾಗತೊಡಗಿದ್ದರೂ ಯಾರೂ ಕೇಳುವವರಿರಲಿಲ್ಲ. ಸಬಲವಾದ ಕಾರಣಗಳೇ ಇಲ್ಲದಿದ್ದರೂ ಕುಲಪತಿ ಬಾವಯ್ಯನವರು ವಿದ್ಯಾರ್ಥಿಗಳನ್ನು ಕೊಠಡಿಗಳೊಳಗೆ ಕರೆದು ಹಿಗ್ಗಾ ಮುಗ್ಗಾ ಬಡಿಯುತ್ತಿದ್ದರು. ತಾವು ಹೇಳಿದ್ದನ್ನು ಪಾಲಿಸದ ಹರೆಯದ ಹುಡುಗಿಯರ ತಲೆಗೂದಲನ್ನು ಹಿಡಿದೆಳೆದು ತಲೆಯನ್ನು ಗೋಡೆಗೆ ಅಪ್ಪಳಿಸುತ್ತಿದ್ದರು.

ಬೆದರಿ ಕಂಗಾಲಾದ ವಿದ್ಯಾರ್ಥಿಗಳದ್ದು ಅಕ್ಷರಶಃ ಅರಣ್ಯ ರೋದನವೇ. ಪಾಲಕರಿಗೆ ಸುದ್ದಿ ತಲುಪುವುದಿಲ್ಲ; ತಲುಪಿದರೂ ಮಕ್ಕಳು ಹೇಳಿದ್ದನ್ನು ಅವರು ನಂಬುತ್ತಿರಲಿಲ್ಲ. ಹೆಣ್ಣುಮಕ್ಕಳದ್ದಂತೂ ಚಿಂತಾಜನಕ ಸ್ಥಿತಿ. ರಜಸ್ವಲೆಯರಾದರೆ ಹೇಗೆ ಹೇಳಿಕೊಳ್ಳಬೇಕು? ಯಾವ ರೀತಿಯ ಹೈಜೀನಿಕ್ ವ್ಯವಸ್ಥೆ ಅಲ್ಲಿತ್ತು? ಇದನ್ನೆಲ್ಲ ಸಮಾಜದ ಮುಖಂಡರು ಕುಲಪತಿ ಬಾವಯ್ಯನನ್ನು ಹಿಡಿದೆಳೆದು ಕೇಳಬೇಕಾಗಿತ್ತು; ಯಾರೂ ಕೇಳಲಿಲ್ಲ.

ಹಾಗೆ ಗುರುಕುಲಕ್ಕೆ ಬಂದ ಹಲವು ಕನ್ಯೆಯರಲ್ಲಿ ಕನಿಷ್ಠ ಇಪ್ಪತ್ತೈದು ಕನ್ಯೆಯರ ಶೀಲಹರಣ ಮಾಡಿದ್ದಾರೆ ಈ ಜಗದ್ಗುರು ತೊನೆಯಪ್ಪ ಮತ್ತು ಅವನ ಕುಲಪತಿ ಬಾವಯ್ಯ. ಅಲ್ಲಿದ್ದ ಸುಂದರಿಯದ ಪೈಕಿ ಒಬ್ಬಳ ಕಥೆ ಈಗ ನಿಮಗೆಲ್ಲ ಬಹಿರಂಗಗೊಂಡಿದೆ. ಮುಂದಾಕೆ ಕಲಾವಿದೆಯಾದಳಂತೆ ಎಂದು ಗುಮ್ಮಣ್ಣ ಹೆಗಡೇರು ದಾಖಲಿಸಿದ್ದಾರೆ. ಅಂದು ಗುರುಕುಲದಲ್ಲಿ ಹಾರಲು ಆರಂಭಿಸಿದ ಹೋರಿ ನಂತರ ಹಾರುವುದನ್ನು ನಿಲ್ಲಿಸಲೇ ಇಲ್ಲ.

ಹೊರವೇಷಕ್ಕೂ ಒಳವೇಷಕ್ಕೂ ಅಜ-ಗಜಾಂತರವಿರೋದರಿಂದ ವೇದಿಕೆಯಲ್ಲಿ ಅಜನಂತಿರುವ ರೂಪ ಏಕಾಂತದಲ್ಲಿ ಗಜನಂತಾಗಿ ತನ್ನ ಗಜವನ್ನು ತೂರಿಸುತ್ತದೆ ಎಂದು ಅಲ್ಲಲ್ಲಿ ಗುಸುಗುಸು ಸುದ್ದಿ ಎದ್ದಿದ್ದರೂ ಬಹಳಕಾಲ ಯಾರೂ ನಂಬಲೇ ಇಲ್ಲ. “ನಿಮ್ಮ ಮಕ್ಕಳನ್ನು ಮುಂದೆ ತರಿಸುತ್ತೇವೆ” ಎಂದು ಆಶ್ವಾಸನೆ ಕೊಟ್ಟ ಚೋರಗುರುಗಳು ಬಾವಯ್ಯನೊಡಗೂಡಿ ಹಲವು ಹೆಣ್ಣುಮಕ್ಕಳಿಗೆ ಮುಂದೆ ತರಿಸಿದ್ದು ನಿಜ. ’ಮುಂದೆ ತರಿಸಿದ’ ಸುದ್ದಿ ಹೆಣ್ಣುಮಕ್ಕಳ ವಾರಸುದಾರರಿಗೆ ತಲುಪಿ, ಅವರು ನ್ಯಾಯ ಕೇಳಲು ಬಂದಾಗ ’ದರ್ಶನ’ವನ್ನೇ ನೀಡದೆ ಅವರನ್ನು ಸುತ್ತಾಡಿಸಿದರು.

ಪಾನೀ ಪೂರಿಯವರ ಪ್ರಕರಣ ಬಹಳ ದೊಡ್ಡ ಮಟ್ಟದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಪಾನಿ ಪೂರಿ ಮಾರುವ ಗಂಡ-ಹೆಂಡತಿ ಒಟ್ಟಿಗೇ ಇದ್ದರೆ ತಮಗೆ [ಜೈಲು]ಕಷ್ಟ ತಪ್ಪಿದ್ದಲ್ಲ ಎಂದುಕೊಂಡ ಹೋರಿ-ಬಾವಯ್ಯ ಆ ಕುಟುಂಬವನ್ನೇ ಒಡೆದರು. ಅಂದಿನಿಂದ ಕುಟುಂಬ ಒಡೆಯುವ ಕಲೆಯನ್ನೂ ಕರತಲಾಮಲಕ ಮಾಡಿಕೊಂಡರು. ಜೀವನ ಸಾಗಿಸುವುದೇ ಬಹಳ ಕಷ್ಟವಿರುವಾಗ ಪಾಪದ ಪಾನಿಪೂರಿ ವ್ಯವಸಾಯದವರು ನ್ಯಾಯ ಕೇಳಲು ಹೋದರೆ ಯಾರು ಅವರಿಗೆ ಸಹಾಯ ಮಾಡಿಯಾರು? ಹೀಗಾಗಿ ಸಾಕ್ಷಿಗಳ ಕೊರತೆಯಿಂದ ಕೇಸು ಖುಲಾಸೆಗೊಂಡಿತು ಎಂದು ಕುಲಪತಿ ಬಾವಯ್ಯನವರು ಮೀಸೆ ಇಲ್ಲದಿದ್ದರೂ ಇರಬೇಕಾದ ಜಾಗದಲ್ಲಿ ಮೀಸೆ ತಿರುವಿದಂತೆ ನಟಿಸಿ ಅಸುರ ಅಟ್ಟಹಾಸ ಬೀರಿದರು.

ಇದಾದ ಕೆಲವೇ ದಿನಗಳಲ್ಲಿ ಹೋರಿಸ್ವಾಮಿಗಳು ತಮ್ಮ ಕೋಲುಕಾರ, ಕೀಲುಕಾರ, ಗುರಿಕಾರ ಎಲ್ಲರನ್ನೂ ಏಕಾ ಏಕಿ ಬದಲಾಯಿಸಿಟ್ಟರು. ಗ್ರಾಮ ಗ್ರಾಮಗಳಲ್ಲಿ ರೂಪಿಸಿದ್ದ ಭಕ್ತ ಪರಿಷತ್ತುಗಳನ್ನು ವಿಸರ್ಜಿಸಿಬಿಟ್ಟರು. “ನಮಗೆ ಆಗದವರು ನಾಮ್ಮ ವಿರುದ್ಧ ದೊಡ್ಡ ಪಿತೂರಿ ಮಾಡಿದ್ದಾರೆ” ಎಂದು ಹಳ್ಳಿಹಳ್ಳಿಗಳ ಆಯಕಟ್ಟಿನ ಕೇಂದ್ರಗಳಲ್ಲಿ ನಿಂತು ಮೊಸಳೆ ಕಣ್ಣೀರು ಸುರಿಸಿದರು! ತನ್ಮೂಲಕ ಉಂಡೆನಾಮ ತೀಡಿ, ಗುರುಕುಲದಲ್ಲಿ ಅನಧಿಕೃತವಾಗಿ ಆರ್ರಂಗೇಟ್ರಂ ನಡೆಸುವ ಮೂಲಕ ಪ್ರಚುರಗೊಂಡ ತನ್ನ ಹಾಗೂ ತನ್ನ ಬಾವಯ್ಯನ ಕಚ್ಚೆಹರುಕುತನ,’ಪದವೀ ಪ್ರದಾನ ಸಮಾರಂಭ’ಕ್ಕೆ ಬಂದು ಮುಟ್ಟಿದ್ದನ್ನು ಅಲ್ಲಗಳೆದು ನಿವಾಳಿಸಿ ಎಸೆದುಬಿಟ್ಟರು!

ನಮ್ಮ ಮಲೆನಾಡಿನಲ್ಲಿ[ಮತ್ತು ಕರಾವಳಿಗಳಲ್ಲೂ ಇರಲು ಸಾಕು?] ಕಾಂಗ್ರೆಸ್ ಗಿಡ ಎಂಬುದು ಬೆಳೆಯುತ್ತದೆ. ಅದರ ಬೀಜ ಹಾರಿದಲ್ಲಿ ಮತ್ತೆ ಅದರ ವಂಶಾಭಿವೃದ್ಧಿ ನಡೆಯುತ್ತದೆ. ಅದನ್ನು ಬೇರು ಸಹಿತ ಕಿತ್ತು ಸುಟ್ಟು ಹಾಕ್ತಾರೆ ಕೃಷಿಕರು. ಆದರೂ ಅದರ ಕಸುವು ಹೋಗೋದಿಲ್ಲ. ಕಚ್ಚೆಹರುಕರ ವಂಶದ ಕುಡಿಗಳೂ ಹಾಗೆಯೇ. ಅವು ಎಲ್ಲೂ ಸಭ್ಯ ಜೀವನ ನಡೆಸಿದ ದಾಖಲೆ ಕಂಡು ಬರೋದಿಲ್ಲ. ಚೋರ ಗುರು ಮತ್ತು ಚಾಂಡಾಲ ಬಾವಯ್ಯ ಸಹ ತಮ್ಮ ಅನುವಂಶೀಯ ಚಾಳಿಯಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ಒಂದಷ್ಟು ದಿನ ಬಿಸಿ ಕಳೆದುಕೊಂಡ ಸುದ್ದಿಗಳು ಮತ್ತೆ ಬಿಸಿಯೇರಹತ್ತಿದರೂ ಕೆಂಡದ ರೂಪಕ್ಕೆ, ಜ್ವಾಲೆಯ ರೂಪಕ್ಕೆ ಬರಲು ದಶಮಾನವೇ ಕಳೆದುಹೋಯಿತು.

ಹೋರಿಯ ತೆವಲಿಗೆ ಬಲಿಯಾದ ಹಲವಾರು ಮಹಿಳೆಯರು ಇಂದು ವಿಚ್ಛೇದನ ನೀಡಿದ್ದಾರೆ. ಹೋರಿಯ ಹಾರುವಿಕೆಗೆ ಬಲಿಯಾದ ಶ್ರೀಮಂತರ ಮನೆಯ ಒಬ್ಬಳು ಹುಡುಗಿಯನ್ನು ಗಿಂಡಿಯೊಬ್ಬನಿಗೆ ಕಟ್ಟಬೇಕೆಂದು ಮಠದ ಹೋರಿ ಮ್ಯಾರೇಜ್ ಫಿಕ್ಸ್ ಮಾಡಿತ್ತು. ಮದುವೆಯ ದಿನದವರೆಗೂ ಹೊರಗೇನೂ ತೋರಿಸದಿದ್ದ ಆ ಶ್ರೀಮಂತರು, ಮಠದಹೋರಿಯ ಇಚ್ಛೆಗೆ ವಿರುದ್ಧವಾಗಿ ಮದುವೆಯ ದಿನ ಬೇರೊಂದು ಛತ್ರದಲ್ಲಿ ಇನ್ನೊಬ್ಬ ಉತ್ತಮ ವರನಿಗೆ ಆಕೆಯನ್ನು ಕೊಟ್ಟು ಮದುವೆ ಮಾಡಿದಾಗ ಹೋರಿ ಬಳಗ ಕಂಗಾಲಾದ ಘಟನೆಯನ್ನೂ ಗುಮ್ಮಣ್ಣ ಹೆಗಡೇರು ಚಿತ್ರಗುಪ್ತನಂತೆ ಬರೆದುಕೊಂಡಿದ್ದಾರೆ!

ನೀವು ಹೌದಾದರೆ ಹೌದೆನ್ನಿ, ಜಾತಿ ಯಾವುದಾದರೇನು? ಆರ್ಥಿಕ ನೀತಿ ಒಂದೇ. ಇಂದು ಸದ್ಗುಣಗಳಿಗೆ ಬೆಲೆಯಿಲ್ಲ; ಹಣಕ್ಕೊಂದೆ. ಬಡವ ಎಂಬ ಸುಳಿವು ಸಿಕ್ಕರೂ ಜನ ನೋಡುವ ರೀತಿಯೇ ಬೇರೆ. ಕೈಗೆ ಬಿಂಗ್ಲಿಟಿ ಬ್ರೇಸ್ ಲೆಟ್ಟು-ಉಂಗುರ ತೊಟ್ಟಾದರೂ ಸ್ಥಾನಮಾನ ಕಾಪಾಡಿಕೊಳ್ಳಲು ಕೆಳಮಧ್ಯಮ ವರ್ಗದ ಜನ ಹೆಣಗಾಡುತ್ತಾರೆ.

ತೊನೆಯಪ್ಪನ ಶಿಷ್ಯಸಮಾಜದಲ್ಲೂ ಸಹ ಬಡತನ ಮತ್ತು ಸಿರಿತನಗಳ ಅಂತರ ಬಹಳವೇ ಇದೆ. ಇದನ್ನು ಓದುತ್ತಿರುವ ಧನಿಕರೆಲ್ಲ ನಮ್ಮ ಕುಗ್ರಾಮಗಳಿಗೊಮ್ಮೆ ಭೇಟಿ ನೀಡಿ ಅಲ್ಲಿರುವ ಸಮಾಜ ಬಾಂಧವರನ್ನೊಮ್ಮೆ ನೋಡಬೇಕು. ಹೆಣ್ಣುಮಕ್ಕಳು ಹುಟ್ಟಿದರೆ ಮದುವೆ ಮಾಡೋದು ಕಷ್ಟ ಎಂಬಂತಿದ್ದ ಇಪ್ಪತ್ತು ವರ್ಷಗಳ ಹಿಂದಿನ ದಿನಮಾನಗಳಲ್ಲಿ ಸ್ಕ್ಯಾನಿಂಗ್ ಮಷಿನ್ ಗಳು ಬಂದಿದ್ದವು. ಹೆಣ್ಣು ಎಂದು ಗೊತ್ತಾದಕೂಡಲೇ ಅಲ್ಲಿಗೆ ಆ ವ್ಯವಹಾರಗಳು ಮುಗಿದುಹೋಗುತ್ತಿದ್ದವು. ಹಾಗಾಗಿ ಇಂದು ಸಮಾಜದಲ್ಲಿ ಹೆಣ್ಣು-ಗಂಡುಗಳ ಅನುಪಾತ ವ್ಯತ್ಯಾಸವಾಗಿ ಶ್ರೀಮಂತರೂ ಸಹ ತಮ್ಮ ಗಂಡುಮಕ್ಕಳಿಗಾಗಿ ಹೆಣ್ಣುಮಕ್ಕಳ ಪಾಲಕರು ಬಡವರಾದರೂ ಪರವಾಗಿಲ್ಲ ಎಂದು ಹೇಳುತ್ತಿದ್ದಾರೆ.

ಇಂತಿಪ್ಪ ಕಾಲದಲ್ಲೂ ಹೋರಿ ತನ್ನವಂಶಾಭಿವೃದ್ಧಿಯನ್ನು ನಡೆಸುತ್ತಿತ್ತು ಎಂದಾದರೆ, ಚೋರಗುರುವಿಗೆ ಇದ್ದದ್ದು ಯಾವ ಕಳಕಳಿ? ಸುಂದರ ಸ್ತ್ರೀಯರ ಮೇಲಿದ್ದ ಕಳಕಳಿಯೇ ಅಥವಾ ಒಟ್ಟಾರೆಯ ಸಮಾಜದ ಅಭಿವೃದ್ಧಿಯ ಮೇಲಿದ್ದ ಕಳಕಳಿಯೇ? ಅದು ಯಾವ ಕಳಕಳಿ ಎಂಬುದನ್ನು ಮೊದಲು ಉತ್ತರಿಸಬೇಕಾದ್ದು ಹಿರಿಯ ’ಮನ್ಮಥಕಲಾ’ ವಿದ್ವಾಂಸ ಕುಲಪತಿ ಬಾವಯ್ಯ.

ಇಂದು ಹಳ್ಳಿಗಳಲ್ಲಿ ಅಜ್ಜ-ಅಜ್ಜಿಯರು ಅಥವಾ ಆ ವಯಸ್ಸಿನವರನ್ನು ಬಿಟ್ಟರೆ ಎಳಬರಿಲ್ಲ. ಎಲ್ಲರೂ ಬೆಂಗಳೂರು, ಮುಂಬೈ, ಅಮೆರಿಕ, ಸಿಂಗಾಪೂರ. ಊರಕಡೆಗಿರುವ ಅಳಿದುಳಿದ ಗಂಡುಮಕ್ಕಳನ್ನು ಮನುಷ್ಯರಾಗಲಿಕ್ಕೇ ನಾಲಾಯ್ಕು ಎಂಬಂತೆ ಕಾಣುತ್ತಿರುವ ಸಮಾಜ. ಕೂಲಿಗಳಿಲ್ಲ, ಪಶು ಸಂಗೋಪನೆ ಸಾಧ್ಯವಿಲ್ಲ, ಹೊತ್ತಿಂದೊತ್ತಿಗೆ ಮನೆಯಲ್ಲಿ ದೀಪ ಹಚ್ಚುವವರಿಲ್ಲ. ವೃದ್ಧೆ ಅಡುಗೆ-ಆಸೆ ಮಾಡಬೇಕು, ವೃದ್ಧ ದೇವರ ಪೂಜೆ ಮಾಡಬೇಕು. ರಜಾದಿನಗಳಲ್ಲಿ ಊರುಮನೆಗಳಿಗೆ ತೆರಳಿ ಮಜಾ ಅನುಭವಿಸುವುದು ಮಾತ್ರ ನಗರವಾಸಿಗಳಿಗೆ ಬೇಕು! ಅಲ್ಲಿ ಸಿಗುವ ಹಣ್ಣು-ಹಂಪಲು ಖಾದ್ಯಗಳು ಬೇಕು. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕಳಕಳಿ ತೊನೆಯಪ್ಪನ ಬಳಗಕ್ಕೆ ಇತ್ತೇ? ಇದೆಯೇ? ಖಂಡಿತಕ್ಕೂ ಇಲ್ಲ.

ತೊನೆಯಪ್ಪನ ಬಳಗಕ್ಕೆ ಬಂದ ಫಸಲಿನಲ್ಲಿ ಪಾಲು ಬೇಕು ಅಂದರೆ ಅದಕ್ಕೆ ಇಂತಿಷ್ಟು ಎಂದು ಕಂದಾಯ ಕೊಡಬೇಕು. ದೀಪಗಂದಾಯ ಎಂಬ ಪದ್ಧತಿಗಷ್ಟೆ ಮೀಸಲಾಗಿದ್ದ ಆಚರಣೆ ಇಂದು ಕಂಡಿದ್ದಕ್ಕೆಲ್ಲ ಕಂದಾಯ ಕೊಡಬೇಕು. ಯಾವ ಪುಣ್ಯ-ಪುರುಷಾರ್ಥಕ್ಕಾಗಿ ಕೊಡಬೇಕು? ಮಠದಲ್ಲಿ ಕಚ್ಚೆಹರುಕನ ವಂಶಾಭಿವೃದ್ಧಿ ಚಟುವಟಿಕೆಗೆ ಸಂಬಂಧಿಸಿದ ಸೇವೆಗಾಗಿ ಕೊಡಬೇಕೇ? ಅಥವಾ ಅವನ ಮೇಲೆ ಗುಜರಾಯಿಸಲ್ಪಟ್ಟ ಕಟ್ಲೆಗಳ ನಿಭಾವಣಾ ಸೇವೆ ಎಂದು ಕೊಡಬೇಕೆ? ಕೇಳುವವರೂ ಇಲ್ಲ ಹೇಳುವವರೂ ಇಲ್ಲ.

ಮಹಾಸಭೆಯಂತೆ, ಅದರಲ್ಲಿರುವವರೆಲ್ಲ ಹೋರಿಬಳಗದವರೇ ಹೆಚ್ಚು. ಮೆಜಾರಿಟಿ ಬಂದರೆ ಅದೇ ಪರಮಸತ್ಯವೆಂಬ ತೀರ್ಮಾನಕ್ಕೆ ತಲೆಯೊಡ್ಡಿದ ಕುರುಡು ಸಮಾಜ ನಮ್ಮದು. ಹೀಗಾಗಿ ತೊನೆಯಪ್ಪನಿಗೆ ಅಲ್ಲಿಯೂ ಜೈಕಾರ. “ಚಾರಿತ್ರ್ಯ ಹನನ ಮಾಡುವ ಪ್ರಯತ್ನ ನಡೆಯುತ್ತಿದೆ” ಎಂದು ಸಭೆಯ ಪತ್ರಿಕೆಯ ಪ್ರತಿ ಸಂಚಿಕೆಯಲ್ಲೂ ಮತ್ತೆ ಮತ್ತೆ ಅದದೇ ಹಳಸಲು ಘರ್ಜನೆ. “ನಾವು ಪತ್ರಿಕೇಲಿ ಬರೆದಿದ್ದನ್ನೇ ಒಪ್ಪಿಕೊಳ್ಳಿ” ಎಂಬಂತ ಅಸಹ್ಯಕರ ಧೋರಣೆ. ಯಾಕೆ? ಅವ ಯಾರೆಂದು ಸಮಾಜಕ್ಕೀಗ ಗೊತ್ತಿಲ್ಲವೇ? ಅವನ ಕಚ್ಚೆಗಟ್ಟಿ ಇದ್ದರೆ ಇಷ್ಟೆಲ್ಲ ಅನಾಹುತ ಆಗುತ್ತಿತ್ತೇ?

ತೊನೆಯಪ್ಪನ ರಾಸಲೀಲೆಗಳೆಂಬ ಶರೀರದ ಕಿಬ್ಬದಿಯ ಕೀಲು ಮುರಿದು ಎಲ್ಲವೂ ಕಾಣಿಸುವಂತೆ ರಹಸ್ಯ ಬಹಿರಂಗ ಗೊಳಿಸೋದು ತುಮರಿಯ ಕೆಲಸ. ಗುಮ್ಮಣ್ಣ ಹೆಗಡೇರ ಚಿತ್ರಗುಪ್ತ ವರದಿಗಳನ್ನು ಉಪನದಿಗಳಂತೆ ತನ್ನೊಳಗೆ ಸೇರಿಸಿಕೊಂಡ ತುಮರೀನದಿ ತೊನೆಯಪ್ಪನ ’ಕಿರೀಟೋತ್ಸವ’ದ ದಿನಗಳವರೆಗೂ ಬತ್ತದೇ ಹರಿಯುತ್ತದೆ…ಆಪ್ ದೇಖಲೋಂಗೇ ಥೋಡಿ ದೇರ್ ಕೆ ಬಾದ್….

Thumari Ramachandra

source: https://www.facebook.com/groups/1499395003680065/permalink/1707526326200264/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s