ತೊನೆಯಪ್ಪನ ಚಿಕ್ಕಪ್ಪ ಣಗಪತಿ ಭಟ್ಟ ಮತ್ತು ಇನ್ನಷ್ಟು ಕತೆಗಳು

ತೊನೆಯಪ್ಪನ ಚಿಕ್ಕಪ್ಪ ಣಗಪತಿ ಭಟ್ಟ ಮತ್ತು ಇನ್ನಷ್ಟು ಕತೆಗಳು

ಜಗದ್ಗುರು ತೊನೆಯಪ್ಪನ ದಶಾವತಾರಗಳನ್ನು ಎಲ್ಲರೂ ಅರಿತಿಲ್ಲ. ಅದು ’ಭುಜಂಗಯ್ಯನ ದಶಾವತಾರ’ದಷ್ಟು ಸಾಚಾ ಅಲ್ಲ. ಕೃತ್ರಿಮ ಹಸನ್ಮುಖಿ ನಾಟಕ ಮಂಡಳಿಯ ಪ್ರಥಮ ಪ್ರಜೆಯಾಗಿರುವ ಹಾವಾಡಿಗ ಶೋಭರಾಜಾಚಾರ್ಯನ ಡಿ.ಎನ್.ಎ ಯಲ್ಲೇ ಅಪರಿಮಿತ ಕಾಮವಾಂಛೆಯ ಮೊಹರು ಅಡಗಿದೆ. ತೊನೆಯಪ್ಪನ ನಗೆಗೆ ಮಾರುಹೋದವರು ಕೊನೆಗೆ ಆತನಿಗೆ ಮೈಮಾರಿಕೊಳ್ಳುವಂತಾಗುವುದು ಆತನ ಕರಾಳ ಕರಾಮತ್ತು. ಮಿಕ ಬಲೆಗೆ ಬೀಳುತ್ತದೆ ಎಂಬ ಸುಳಿವು ಸಿಕ್ಕರೆ ಸಾಕು ಏಕಾಂತಕ್ಕೆ ಕರೆಯುತ್ತಾನೆ.

ಏಕಾಂತಕ್ಕೆ ಹೋದ ಹೆಣ್ಣುಮಕ್ಕಳನ್ನು ಮತ್ತು ಹೆಂಗಸರನ್ನು ಕ್ಷಣಾರ್ಧದಲ್ಲಿ ಕಾಲಮೇಲೆ ಎಳೆದುಕೊಳ್ಳುವ ಕಾಮಾಚಾರ್ಯನಲ್ಲಿ ಅಂತದ್ದೊಂದು ಕಾಮಚಾತುರ್ಯವಿದೆ. “ಗುರುಗಳು ನನ್ನನ್ನು ತುಂಬಾ ಮುದ್ದು ಮಾಡ್ತ್ರು” ಎಂದು ಹೇಳಿಕೊಳ್ಳುತ್ತಿದ್ದ ಸ್ನಿಗ್ಧ ಮುಗ್ಧ ಹುಡುಗಿಯೋರ್ವಳಿಗೆ ಗುರುಗಳು ಯಾಕೆ ಮುದ್ದು ಮಾಡ್ತಾರೆ ಎಂಬುದು ಗೊತ್ತಿರಲಿಲ್ಲ. ಕಂಡಲ್ಲೆಲ್ಲ ಕೈಯಾಡಿಸುತ್ತ ಸೂರ್ಯಚಂದ್ರರನ್ನು ದರ್ಶಿಸಿ, ಸ್ಪರ್ಶಿಸಿ, ಮಾಡಬಾರದ್ದನ್ನೆಲ್ಲ ಮಾಡಿದ ನಂತರ ಹದಿಹರೆಯದ ಆಕೆಯಲ್ಲಿ ಕಾಮದ ತಹತಹ ಹೆಚ್ಚಿದೆ. ನಂತರ ಮಠದ ಹೋರಿ ಆ ಹುಡುಗಿಗೆ ಹಾರಿ ಕನ್ಯಾಪೊರೆಯನ್ನು ಹರಿದು ಕನ್ಯಾಸಂಸ್ಕಾರವಾಯಿತೆಂದು ಬೊಗಳಿದೆ. ಅಚಾನಕ್ಕಾಗಿ ಕೂಡಿ ಬಂದ ಸಂಬಂಧದಿಂದ ಅವಳು ಹೋರಿಯ ಸರ್ಕಲ್ಲಿನಿಂದ ಹೊರನಡೆಯುವುದಕ್ಕೆ ಸಾಧ್ಯವಾಯ್ತು.

ಆ ಹುಡುಗಿಯಷ್ಟೆ ಅಲ್ಲ. ಅವಳ ಅಮ್ಮನ ಮೇಲೂ ಹಾವಾಡಿಗ ಶೀಗಳಿಗೆ ಕಣ್ಣಿತ್ತು. ಅಮ್ಮ ಪಕ್ಕಕ್ಕಂತೂ ನಿಲ್ಲುತ್ತಿದ್ದಳು, ಬಲಿಯಾದಳೋ ಬಿಟ್ಟಳೋ ಎಂಬುದು ಅವಳಿಗೆ ಮತ್ತು ಹೋರಿಗೆ ಮಾತ್ರ ಗೊತ್ತು, ಬಿಟ್ಟರೆ ದೇವರಿಗೆ ಗೊತ್ತು. ಸರ್ಕಲ್ಲಿನಿಂದ ತಪ್ಪಿಸಿಕೊಂಡ ಆ ಮುದ್ದಿನ ಹುಡುಗಿಯ ತಂಗಿಯನ್ನು ಸಹ ಮುದ್ದಾಡಿ ಭೋಗಿಸಿದ ಮಠದ ಮಹಾಗೂಳಿ, ಅದನ್ನು ತನ್ನ ಗಿಂಡಿಗೆ ಕಟ್ಟಿ, ತನಗೆ ಬೇಕಾದಾಗೆಲ್ಲ ಸದಾ ಸಿಗುವಂತೆ ಮಠದಲ್ಲೆ ವ್ಯವಸ್ಥೆ ಕಲ್ಪಿಸಿಕೊಂಡಿದೆ. ಗುರುಗಳು ಏನು ಮಾಡುತ್ತಿದ್ದಾರೆ ಎಂಬ ಅರಿವಿರದ ಆ ಹುಡುಗಿ ದೊಡ್ಡ ಹುದ್ದೆಯನ್ನು ಪಡೆಯುವ ಕನಸು ಕಾಣುತ್ತಿದ್ದವಳು.

ಗಿಂಡಿಗೆ ಕಟ್ಟಿದ ಅವಳನ್ನು ಇಲ್ಲಿಯವರೆಗೆ ಸಾವಿರಾರು ಸಲ ಸಂಭೋಗಿಸಿದ ಹೋರಿಯ ಕಾಟದಿಂದ ಅವಳಿಗೆ ಜಿಗುಪ್ಸೆಯೂ ಬಂದಿರಬಹುದು. ಅವಳ ತಂದೆ-ತಾಯಿ ಅವಳನ್ನು “ತಮ್ಮ ಮಗಳಲ್ಲ” ಎಂದು ಬಿಟ್ಟುಬಿಟ್ಟಿದ್ದಾರಂತೆ. ಹೋರಿಯ ಗಿಂಡಿ ಅವಳನ್ನು ತಾನು ಲವ್ ಮಾಡಿದ್ದೇನೆ, ಮದುವೆ ಮಾಡಿಕೊಡೆಂದು ಅವಳ ತಂದೆ-ತಾಯಿಯರಿಗೆ ಅಪ್ಪಣೆ ಮಾಡಿದ.[ಮಠದಲ್ಲಿರುವವರೆಲ್ಲ ಉಳಿದವರಿಗೆ ಅಪ್ಪಣೆ ಮಾಡೋದೆ ಅಲ್ಲವೇ?] ಅವಳಪ್ಪ ಒಪ್ಪದಿದ್ದಾಗ ಅವನಿಗೆ ಕೊಲೆ ಬೆದರಿಕೆಯನ್ನೂ ಒಡ್ಡಿದ್ದು ಬಹಿರಂಗಗೊಂಡಿದೆ.

ಆರೆಂಟು ತಿಂಗಳುಗಳ ಹಿಂದೆ ಮಠದ [ಕತ್ತೆ]ಸವಾರಿಯೊಂದಿಗೆ ಸಾಗರದ ಹಳ್ಳಿಗೆ ಬಂದಿದ್ದ ಅವಳಿಗೆ ಅನಾರೋಗ್ಯವಾಗಿ ಆಂಬುಲೆನ್ಸ್ ಬಂದಿತ್ತಂತೆ. ಇತ್ತೀಚೆಗೆ ಶಿಖರ ನಗರದಲ್ಲೂ ಅವಳಿಗೆ ಆರೋಗ್ಯ ಸರಿಯಿಲ್ಲದೆ ಆಂಬುಲೆನ್ಸ್ ಬಂದಿತ್ತು ಎಂದು ಗುಮ್ಮಣ್ಣ ಹೆಗಡೇರು ತುಮರಿಗೆ ಬರೀತಾರೆ. ಹಾಗಾದ್ರೆ ಆಂಬುಲೆನ್ಸ್ ಕರೆಸುವಷ್ಟು ಅನಾರೋಗ್ಯ ಏನಿರಬಹುದು?ಗೊತ್ತಿಲ್ಲ. ಅಂತೂ ಆ ಪಾಪದ ಹುಡುಗಿ ಹೋರಿಯ ಕಾಮದ ಕ್ರೌರ್ಯಕ್ಕೆ ಬಲಿಯಾಗಿ ಯಾವುದೋ ಎಸ್.ಟಿ,ಡಿ ಅಂಟಿಸಿಕೊಂಡಿದ್ದಾಳೆ ಎಂಬುದು ಖಾತ್ರಿಯಾಗುತ್ತದೆ. ದೇವರೇ ಕಾಪಾಡಬೇಕು.

ಮಠದ ಹೋರೀಶನ ಚಿಕ್ಕಪ್ಪ ಣಗಪತಿ ಭಟ್ಟ ಭಯಂಕರ ಭಸ್ಮಾಸುರನೆಂದೆ ಮಲೆನಾಡಿನಾದ್ಯಂತ ಕುಪ್ರಸಿದ್ಧ. ಅಪ್ಪಿ ತಪ್ಪಿ ಆತ ಒಬ್ಬಂಟಿ ಸುಂದರಿಗೆ ಎದುರಾದರೆ ಕತೆ ಮುಗೀತು ಅಂತಲೇ ಲೆಕ್ಕ! ಹಸಿದ ಹೆಬ್ಬುಲಿ ಪಾಪದ ಹರಿಣವನ್ನು ಬೆನ್ನಟ್ಟಿದಂತೆ ಣಗಪತಿ ಭಟ್ಟ ಬೇಟೆಗೆ ನಿಂತು ಬಿಡ್ತಿದ್ದ. ಣಗಪತಿ ಭಟ್ಟ ಜೀವನದಲ್ಲಿ ಸಾವಿರಾರು ಹೆಂಗಸರ ಸಹವಾಸವನ್ನು ಮಾಡುವುದರಲ್ಲಿ ದಾಖಲೆ ಬರೆದವ.

ಪೌರೋಹಿತ್ಯ ಎಂಬುದೊಂದು ದಂಧೆ ಆ ಕುಟುಂಬಕ್ಕೆ ಜೋಳಿಗೆ ಹಾಕಿಕೊಂಡು ಊರು ಸುತ್ತಲು ಅವಕಾಶ ಕಲ್ಪಿಸಿತ್ತು. ಇಡೀ ಕುಟುಂಬವೇ ಅಪ್ಪಟ ಕಚ್ಚೆಹರುಕರ ಮಹಾಮಂಡಳಿ ಎಂದು ಗೊತ್ತಿದ್ದರೂ, ವಂಶಪಾರಂಪರ್ಯವಾಗಿ ಊರಿನ ಹಲವು ಕುಟುಂಬಗಳಿಗೆ ಆ ಕುಟುಂಬ ಪೌರೋಹಿತ್ಯ ನಡೆಸಿ ಬಂದ ಸಂಪ್ರದಾಯವನ್ನು ಮುರಿಯುವುದಕ್ಕೆ ಸದ್ಗೃಹಸ್ಥರು ಅಂಜುತ್ತಿದ್ದರು. ಪ್ರಾಯಶಃ ಇಂತಾ ಕೆಲವು ಕೆಟ್ಟ ಸಂಪ್ರದಾಯಗಳೆ ಹಲವು ಕುಟುಂಬಗಳನ್ನು ಹಾಳುಮಾಡಿರಲಿಕ್ಕೂ ಸಾಕು.

ಜಗದ್ಗುರು ಶೋಭರಾಚಾಚಾರ್ಯರೆ ಹೇಳಿಕೊಂಡಂತೆ ಕಚ್ಚೆಹರುಕ ’ಋಷಿಸದೃಷ’ರಾದ ಅವರ ಅಜ್ಜನಿಂದ ಹಿಡಿದು ಅಪ್ಪ-ಚಿಕ್ಕಪ್ಪಂದಿರವರೆಗೆ ಎಲ್ಲರೂ ಹಾರುವ ಹೋರಿಗಳೆ. ಬೆಳ್ಳಂಬೆಳಿಗ್ಗೆ ಎದ್ದು ಜೋಳಿಗೆ ಹಿಡಿದು ಹೊರಟುಬಿಟ್ಟರೆ ಊರ ಹೊರವಲಯದ ಊರುಗಳಲ್ಲೆಲ್ಲೋ ಯಾವುದೋ ಶ್ರಾದ್ಧ-ತಿಥಿ, ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡಲು ಹೋಗುವ ನೆಪದಲ್ಲಿ, ಅಲ್ಲಿ ಸೇರುವ ಸುಂದರ ಸ್ತ್ರೀಯರನ್ನೆಲ್ಲ ಅಪಾದಮಸ್ತಕ ನೋಡಿ ಜೊಲ್ಲು ಸುರಿಸಿದವರೇ. ಮತ್ತು ಸಲುಗೆಗೆ ಬಗ್ಗಿದವರಿಗೆ ಸಂತಾನ ಭಾಗ್ಯ ಕರುಣಿಸಿದವರೂ ಹೌದು. ತೊಳೆದ ಒಳಪಂಚೆ ರಟ್ಟಿನಂತೆ ನೆಟ್ಟಗೆ ನಿಲ್ಲುವಷ್ಟು ನಿತ್ಯ ವೀರ್ಯ ಸ್ರಾವಕರ ’ಸತ್ಪರಂತರೆ’ ಅವರದ್ದು.

ನಮ್ಮಲ್ಲಿ ಪುರೋಹಿತರಿಗೊಂದು ಒಳ್ಳೆಯ ಸ್ಥಾನಮಾನ ಮರ್ಯಾದೆ ಉಂಟಲ್ಲ? ಅದನ್ನೇ ದುರುಪಯೋಗಪಡಿಸಿಕೊಂಡು ವೈದಿಕ ಮಂತ್ರಾಕ್ಷತೆ ಅಥವಾ ಪ್ರಸಾದ ಕೊಡುವ ನೆಪದಲ್ಲಿ ಸುಂದರಿಯರ ಮೈಮುಟ್ಟೋದು, ಕಣ್ಣಲ್ಲೆ ಕಾಮದಾಟಕ್ಕೆ ಕರೆಯೋದು ಈ ಹಾವಾಡಿಗ ಕುಟುಂಬದಲ್ಲಿ ಸತತವಾಗಿ ನಡೆದುಬಂದ ಅಳಿಸಲಾರದ ಕಲೆ. ಲೆಕ್ಕ ಇಟ್ಟಿದ್ದರೆ ಗಿನ್ನೆಸ್ ದಾಖಲೆಗೂ ಕಳಿಸಬಹುದಾದಷ್ಟು ದೊಡ್ಡ ಕಲಾವಿದರು-ಈ ಕುಟುಂಬದ ಸದಸ್ಯರೆಲ್ಲರೂ.

ಹಿಂದೆ ನಿಟ್ಟೂರ ಕಡೆಗೆ ಸತ್ಯನಾರಾಯಣ ಕತೆ ಮಾಡಿಸಲಿಕ್ಕೆ ಹೋದಾಗ ಹೆಂಗಸೊಬ್ಬಳನ್ನು ತಬ್ಬಲು ಹೋಗಿ, ಅಲ್ಲಿನ ಜನರಿಂದ ಧರ್ಮದೇಟುಗಳನ್ನು ತಿಂದು ಹೈರಾಣಾದ ಚಿಕ್ಕಪ್ಪ ’ರಾಮಾಯಣ ಸ್ವಾಮಿ’ಗೆ, “ಇಲ್ಲಿದ್ರೆ ಜನ ಅಬ್ಬೇಪಾರಿ ಮಾಡ್ತಾರೆ, ಸದ್ಯ ತಪ್ಪಿಸಿಕೊಂಡು ಬೆಂಗಳೂರು ಸೇರು” ಎಂದು ಸ್ವಂತ ಅಣ್ಣನ ಮಗ ಶ್ರೀಶ್ರೀಶ್ರೀ ಹಾವಾಡಿಗ ಜಗದ್ಗುರುಗಳು ನೀಡಿದ ಪುಗಸಟ್ಟೆ ಸಲಹೆಯನ್ನು ಪಡೆದು ಸೀದಾ ಬೆಂಗಳೂರು ಸೇರಿದ ಕತೆಯನ್ನು ತುಮರಿಯ ಬಾಯಲ್ಲೆ ಕೇಳಿದ್ದು ನೆನಪಿರಬೇಕಲ್ಲ? ಬೆಂಗಳೂರು ಸೇರಿದ ನಂತರ ಅದೆಷ್ಟು ಹೆಣ್ಣುಗಳನ್ನು ಕಂಡುಂಡನೋ! ಚಪ್ಪಲಿ ಏಟು ತಿಂದು ಓಡಿಹೋಗಬೇಕಾದ ಪರಿಸ್ಥಿತಿ ಬರದಿದ್ದರೆ ಹೆಚ್ಚು.

ಮಠದ ಹೋರಿಯ ಇನ್ನೊಬ್ಬ ಚಿಕ್ಕಪ್ಪನೆ ಣಗಪತಿ ಭಟ್ಟ. ಎಲ್ಲಾದರೂ ಹಳ್ಳಿ ಬಸ್ಸಿನಲ್ಲಿ ಣಗಪತಿ ಭಟ್ಟನನ್ನು ಕಂಡರೆ ಮುಖವನ್ನು ಸೆರಗಿನಿಂದ ಮುಚ್ಚಿಕೊಳ್ಳುತ್ತಿದ್ದ ಹೆಂಗಸರೂ ಇದ್ದರಂತೆ. ಕಣ್ಣಲ್ಲೆ ಭೋಗಿಸಿಬಿಡುವ ಅತಿಕಾಮಿಯಾಗಿದ್ದ ಣಗಪತಿ ಭಟ್ಟ ಈಗ್ಗೆ ಐದಾರು ವರ್ಷಗಳ ಹಿಂದೆ ರಸ್ತೆಬದಿಯಲ್ಲಿ ಅನಾಥ ಶವದಂತೆ ಬಿದ್ದು ಸತ್ತ. ಹಾವಾಡಿಗ ಜಗದ್ಗುರುಗಳು ಆಗ ಎಲ್ಲೋ ಏಕಾಂತ ನಡೆಸುತ್ತಿದ್ದಿರಬೇಕು, ಹೀಗಾಗಿ ’ಋಷಿಸದೃಷ’ ಚಿಕ್ಕಪ್ಪ ಬೀದಿನಾಯಿಯೋಪಾದಿಯಲ್ಲಿ ಬೀದಿಯಲ್ಲಿ ಬಿದ್ದು ಸತ್ತಿದ್ದು ಅವರಿಗೆ ತಡವಾಗಿ ತಿಳಿದಿರಬೇಕು.

ತೊನೆಯಪ್ಪನ ಅಪ್ಪ ಸ್ತ್ರೀಯರಿಗೆಲ್ಲ ನಿವಾಸ. ಜುಗಾರಿ ಮಂಡಳ, ’ಅಂಬಾ ಸಾಲ ಮೇಳದ ಕತೆ’ ಮೊದಲಾದವುಗಳಿಂದ ಅತ್ಯಂತ ಕುಖ್ಯಾತ. ಅನ್ಯ ಸಮಾಜದ ಮಹಿಳೆಯೊಬ್ಬಳಿಗೆ ಅನಧಿಕೃತ ಕಾಯಂ ಗಂಡ! ಇಂತಾ ಜೋಳಿಗೆ ಹಿಡಿದು ಓಡುತ್ತಿದ್ದ ಕಚ್ಚೆಹರುಕರ ವಂಶದಲ್ಲಿ ’ಪರಮಪಾವನನಾದ’ ಜಗದ್ಗುರು ಶೋಭರಾಚಾಚಾರ್ಯರ ಜನನವಾಯ್ತು. ಮನೆಯ ಮಗ ಹದಿಹರೆಯಕ್ಕೆ ಕಾಲಿಡುವ ಸಮಯದಲ್ಲೆ ಮಠದ ಆಪದ್ಧನ ಮತ್ತು ಆಸ್ತಿಪಾಸ್ತಿಗಳ ಮೇಲೆ ಕಣ್ಣಿಟ್ಟಿದ್ದ ’ಋಷಿಸದೃಷ’ ಅಜ್ಜ-ಅಪ್ಪ ಎಲ್ಲ ಸೇರಿ ಮಠದ ಆಸ್ತಿಗೆ ಸ್ಕೆಚ್ ಹಾಕಿದರು, ಯಾರಿಗೂ ಇಲ್ಲದ ಯೋಗಾವಳಿಗಳನ್ನು ಸೇರಿಸಿದ ಜಾತಕ ಬರೆಸಿದರು.

ಕೆಲವೊಮ್ಮೆ ಯೋಚಿಸುವಾಗ ಹಿಂದೆ ಯಾರು ಮಾಡಿದ ಪಾಪದ ಫಲವಾಗಿ ಇಂತವರೆಲ್ಲ ಹುಟ್ಟುತ್ತಾರೆ ಎನಿಸುತ್ತದೆ. ಜಾತಕ ಹೇಗೂ ಬರೆಸಲಿ, ಮಠದ ಆಸ್ತಿಯ ಮೇಲೆ ಹೇಗೇ ಕಣ್ಣಿಡಲಿ, ಆ ಸ್ಥಾನಕ್ಕೆ ಆಯ್ಕೆಯಾಗುವುದಕ್ಕೊಂದು ಅವಕಾಶ ನಿರ್ಮಾಣವಾಗಬೇಕಲ್ಲ? ಇಂತ ಕಚ್ಚೆಹರುಕ ವಂಶದ ಕೆಟ್ಟಕುಡಿಯನ್ನು ಒಪ್ಪಿ ಗುರುವೆಂದು ಪೀಠಕ್ಕೆ ಆಯ್ಕೆ ಮಾಡುವ ಬುದ್ಧುಗಳ ಸಮಿತಿಯೊಂದು ಅಲ್ಲಿರಬೇಕಲ್ಲ? ಇದನ್ನೇ ಹೇಳೋದು ಗ್ರಹಚಾರ ಕೆಟ್ಟರೂ ಬುದ್ಧಿ ನೆಟ್ಟಗಿರಬೇಕು ಅಂತ. ಸಮಾಜದ ಗ್ರಹಚಾರ ಸರಿಯಿರಲ್ಲದಿದ್ದ ಕಾಲಕ್ಕೆ ಆಯ್ಕೆ ಸಮಿತಿಯ ಬುದ್ದುಗಳಿಗೆ ಬುದ್ಧಿ ಸರಿ ಇರಲಿಲ್ಲ.

ಹಲವು ಶತಮಾನಗಳಿಂದ ಸಂಚಯಗೊಂಡಿದ್ದ ಪುಣ್ಯ ಮಠದಲ್ಲಿದ್ದರೆ ಆ ಸ್ಥಾನಕ್ಕೆ ಇವ ಹೇಗೆ ಬಂದ? ಹಾಗಾದರೆ ಅಲ್ಲೆಲ್ಲೋ ಲೋಭದಿಂದ ಸಂಗ್ರಹಿಸಿದ ಧನಕನಕ ಇದ್ದಿತ್ತೇ? ಅದನ್ನು ಹರಾಜು ಹಾಕುವ ಸಲುವಾಗಿ ದೈವವೇ ಇವನನ್ನು ಕರೆತಂದಿತೇ? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗೋದಿಲ್ಲ.
ಹೋರಿಸ್ವಾಮಿಯ ಮೊದಲ ಸರ್ಕಲ್ ನಲ್ಲಿದ್ದವರಿಗೆ ಸೊಕ್ಕು ಎಂದರೆ ಸೊಕ್ಕು ಇರುತ್ತಿತ್ತು. ಸಮಾಜದ ಉಳಿದ ಜನರೆದುರು ತಾವು ಮಠದಲ್ಲಿ ಬಹಳ ಉತ್ತಮ ಸ್ಥಾನಮಾನದಲ್ಲಿರುವವರು ಎಂಬ ಬಿಂಕ ಮೆರೆಯುತ್ತಿದ್ದರು. ಅದೇ ಸರ್ಕಲ್ಲಿನವರ ಹೆಂಗಸರು ಮತ್ತು ಹೆಣುಮಕ್ಕಳ ಮೇಲೆ ಹೋರಿಯ ಮಾರಿ ಕಣ್ಣು ಸದಾ ನೆಟ್ಟಿರುತ್ತಿತ್ತು. ಮೊದಮೊದಲು ಹೋರಿಯ ಹಾರಾಟಕ್ಕೆ ಬಲಿಯಾದವರೆಲ್ಲ ಗಾಂಪರಂತೆ ಸುಮ್ಮನಿದ್ದರು; ಕೆಲವೊಮ್ಮೆ ಇಂಗುತಿಂದ ಮಂಗನಂತ ದುಗುಡದ ಮೋರೆ ಹೊರುತ್ತಿದ್ದರು.

ಯಾವಾಗ ಹೋರಿಸ್ವಾಮಿಯ ಒಂದು ಪ್ರಕರಣ ಬಯಲಾಗಿ ಅವ ಕಚ್ಚೆಹರುಕನೆಂಬುದು ಪಕ್ಕಾ ಆಯಿತೋ, ಮೊದಲ ಸರ್ಕಲ್ಲಿನವರು ಜಾಗೃತರಾದರು, ಮಠಕ್ಕೆ ಹೋಗುವುದನ್ನೆ ನಿಲ್ಲಿಸಿದರು, ಕೆಲವರು ಹೋರಿಯನ್ನೂ ಮತ್ತು ಮಠದ ಬಾವಯ್ಯನನ್ನೂ ಬೈಯತೊಡಗಿದರು. ಮೊದಲ ಸರ್ಕಲ್ಲಿನ ಜನ ದೂರವಾದ ಮೇಲೆ ಎರಡನೇ ಸರ್ಕಲ್ಲಿಗೆ ಮುಂಬಡ್ತಿ ನೀಡಿ ಮೊದಲ ಸರ್ಕಲ್ಲಿಗೆ ಅವರನ್ನೆಲ್ಲ ಬರಮಾಡಿಕೊಂಡಿತು ಹೋರಿ. ಮತ್ತೆ ಯಥಾವತ್ ಹೋರಿಯ ಹಾರಾಟ ಮುಂದುವರೀತು. ಹೀಗೆ ಹೊರವರ್ತುಲಗಳಲ್ಲಿದ್ದ ಜನ ಒಳವರ್ತುಲಕ್ಕೆ ಹೋಗುತ್ತ ಬಂದರು, ಒಳವರ್ತುಲದಲ್ಲಿದ್ದ ಜನ ಬಿಟ್ಟುಹೋಗತೊಡಗಿದರು. ಒಂದಂತೂ ಪರಮಸತ್ಯ-ಹೋರಿಮಠದ ಸಂಪರ್ಕದಲ್ಲಿರುವ ಅಷ್ಟೂ ಜನರಿಗೆ ಇನ್ನಿಲ್ಲದ ಸೊಕ್ಕು. ಇದಕ್ಕೇ ಅಲ್ಲವೇ ಸಹವಾಸ ದೋಷ ಎನ್ನುವುದು?

ಮೊನ್ನೆ ನಮ್ಮ ಗುಮ್ಮಣ್ಣ ಹೆಗಡೇರು ಸಾಗರ ಪ್ರಾಂತಗಳಲ್ಲಿ ಓಡಾಡುತ್ತಿದ್ದರು. ಅಲ್ಲಿನ ಹಳ್ಳಿಗಳಲ್ಲಿ ಮಹಿಳಾ ಸಮಾವೇಶವೊಂದನ್ನು ನಡೆಸಲು ಅಳಿದುಳಿದ ಹೋರಿಸ್ವಾಮಿ ಬಳಗ ವಿಶ್ವಪ್ರಯತ್ನ ನಡೆಸುತ್ತಿದೆ. ಮುಂದೆ ಅದರ ವರದಿಗಳಿಗೆ ಇಂದೇ ಜಾಗ ಮೀಸಲಾಗಿರಿಸಿದ ಇಮ್ಮಡಿಯವರು ಭುಜತಟ್ಟಿಕೊಂಡು ಹೋರೀಶನ ಬೆನ್ನು ತಟ್ಟಿದ್ದಾರೆ. ಇನ್ನುಮುಂದೆ ಕೋಟಿಗಳಲ್ಲಿ ಸಂದಾಯ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೋರಿ ಇಮ್ಮಡಿಯ ಮುಖ ನೋಡಿ ಪೇಲವ ನಗೆ ನಕ್ಕು ಆಟ ಮುನ್ನಡೆಸಿದೆ.

ಮೊನ್ನೆ ತೆಲಂಗಾಣದಲ್ಲಿ ನಡೆದ ಅಯುತ ಚಂಡಿ ಮಹಾಯಾಗದ ಪೂರ್ಣಾಹುತಿ ಸಂದರ್ಭವನ್ನು ಎತ್ತಿಕೊಂಡು ಹೋರಿಸ್ವಾಮಿ ಬಳಗ ವಿಚಿತ್ರ ಕತೆಯೊಂದನ್ನು ಕಟ್ಟಿ ಆಡಿಕೊಳ್ಳುತ್ತಿದೆ. ಅಲ್ಲಿನ ರಾಜಕೀಯ ಕ್ಷೇತ್ರದಲ್ಲಿನ ಕಲ್ಮಷಗಳನ್ನು ಇಡಿಯಾಗಿ ಆಹುತಿ ತೆಗೆದುಕೊಂಡದ್ದಕ್ಕೆ ದೇವಿ ಚಂಡಿಯಾಗಿ ಸಂಕೇತವನ್ನು ತೋರಿಸಿದ್ದಾಳೆ. ಮುಂದೆ ಚಂಡಿ ಹೋರಿ ಮಠದ ಮಾಣಿಯ ಹಾರಾಟವನ್ನು ನಿಲ್ಲಿಸಲಿಕ್ಕೆ ಬರುವವಳಿದ್ದಾಳೆ ಎಂಬುದನ್ನು ನಾವರಿಯಬೇಕು. ಆದರೆ ಮಠದ ಗಿಂಡಿಗಳು, ಹಳದೀ ತಾಲಿಬಾನಿಗಳು ಹಳ್ಳಿಹಳ್ಳಿಗಳಲ್ಲಿ ಶೃಂಗೇರಿಯ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ; ಕಾರ್ಯಕ್ರಮ ಸರಿಯಾಗಿ ನಡೆದರೆ ಹಾಗಾಗುತ್ತಿರಲಿಲ್ಲ, ಅಲ್ಲಿ ಎಲ್ಲವೂ ಸರಿಯಾಗಿರಲಿಲ್ಲ ಎಂದು ಟೀಕಿಸಿದ್ದಾರೆ.

ಅದಿರಲಿ, ಸುಂದರಿಯರನ್ನು ಮಠದ ಹೋರಿಯು ಮುದ್ದುಮಾಡುತ್ತದೆ ಎಂಬುದನ್ನು ಒಳಗೊಳಗೆ ನಡೆಯುತ್ತಿದ್ದ ಗುಸುಗುಸುವಿನಿಂದ ತಿಳಿದುಕೊಂಡ ಹದಿಹರೆಯದ ಪ್ರಿಯಬಾಂಧವಿಯೋರ್ವಳು ತಾನು ಎಣ್ಣೆಗಪ್ಪಿನವಳಾಗಿ ರೂಪವತಿಯಾಗಿಲ್ಲ ಎಂಬುದನ್ನರಿತರೂ ವಿಧವಿಧವಾದ ಲಂಗ ಧಾವಣಿ ಧರಿಸಿ ಹೋರಿಯ ಗಮನ ಸೆಳೆದು ’ಕೃಪಾಕಟಾಕ್ಷ’ ಗಿಟ್ಟಿಸಲು ನೋಡುತ್ತಿದ್ದಳಂತೆ. ಯಾರೂ ಸಿಗದ ಹೊತ್ತಿನಲ್ಲಿ ಹೋರಿಗೆ ಅವಳಾದರೂ ಆದೀತೆಂಬುದು ಅವಳಿಗೆ ಗೊತ್ತಿರಲಿಲ್ಲವೆನಿಸುತ್ತದೆ. ಹಾಗೆ ಯಾವುದೋ ಶೂನ್ಯವೇಳೆಯಲ್ಲಿ ಅವಳಿಗೂ ಹಾರಿದ್ದಾಗಿದೆ ಬಿಡಿ.

ಕಚ್ಚೆಹರುಕು ಸಂಕುಲದ ’ಪುಣ್ಯ’ಕತೆಯನ್ನು ಸವಿಸ್ತಾರವಾಗಿ ಬರೆದರೆ ಅದೊಂದು ಐತಿಹಾಸಿಕ ಕಾದಂಬರಿಯಂತೆ ಗೋಚರವಾಗಬಹುದು. ಆಮೇಲೆ, “ನಾನು ಬರೆಯಬೇಕೆಂದಿದ್ದದ್ದನ್ನು ನೀವು ಬರೆದುಬಿಟ್ಟಿರಲ್ಲ” ಎಂದು ಭೈರಪ್ಪನವರು ಬೇಸರಮಾಡಿಕೊಂಡು ಬರೆಯುವುದನ್ನೇ ನಿಲ್ಲಿಸಿಯಾರು! ಮಠದ ಹೋರಿಗೆ ಅರ್ಪಿಸಿಕೊಂಡ ಸ್ತ್ರೀಯರನ್ನೆಲ್ಲ [’ಸುಶೀಲೆ’ ಎಂದಂತೆ]”ಗುರುಶೀಲೆ” ಎಂದು ಕರೆದು ಗೌರವಿಸಬೇಕು. “ಗುರುಶೀಲೆ” ಎಂದರೆ ಸಮಾಜದಲ್ಲಿ ಎಲ್ಲರಿಗೂ ಗೊತ್ತಾಗಿಬಿಡಬೇಕಪ್ಪ ಅಷ್ಟು ಬಳಕೆಗೆ ಬಂದ ಶಬ್ದ ಅದಾಗಲಿ. ಗುರುಶೀಲೆ ಎಂದರೆ ನಾಯಿ ಮುಟ್ಟಿದ ಮಡಕೆ ಎಂಬುದು ಎಲ್ಲರಿಗೂ ಗುಪ್ತವಾಗಿ ಗೊತ್ತಾಗಬೇಕು.

ಅಂದಹಾಗೆ ಯೋಗ ಸನ್ಯಾಸಿಗಳ ದಿವ್ಯ ಕ್ಷೇತ್ರವೊಂದರ ಕಾರ್ಯದರ್ಶಿಗಳಿಗೆ ರಾಜೀನಾಮೆ ಕೊಡುವಂತೆ ಹೋರಿಯ ಬಳಗದ ಮಸಿಮಂಗವೊಂದು ಅಪ್ಪಣೆ ಮಾಡಿತಂತೆ. ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ನಡೆಸುತ್ತಿರುವ ಅವರಮೇಲೆ ಇಲ್ಲೀವರೆಗೆ ಯಾವ ಅಪವಾದವೂ ಬಂದದ್ದು ಕಾಣಲಿಲ್ಲ. ಹೀಗಾಗಿ ಸಮಾಜದ ಹಲವು ಮುಖಂಡರು ಕಾರ್ಯದರ್ಶಿಗಳ ಪರವಾಗಿ ನಿಂತು ಹೋರಿಮಠದಲ್ಲಿ ಸ್ಪಷ್ಟೀಕರಣ ಕೇಳಿದರಂತೆ. ಸ್ಪಷ್ಟೀಕರಣ ನೀಡುವುದಕ್ಕೆ ಲೆಟರ್‍ ಹೆಡ್ ರೆಡಿ ಇಟ್ಟುಕೊಂಡು ಕೂತ ಚೋರಗುರುಭಕ್ತ ಮಹಾಶಯರಿರುವ ಆ ಜಾಗದಿಂದ ಮ್ಯಾಂಗೋಕುಳಿಯ ಮೂಲಕ “ಹಾವಾಡಿಗ ಮಠಕ್ಕೂ ಮಸಿಮಂಗನ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟೀಕರಣ ದೊರಕಿದೆಯಂತೆ.

ಮಲೆನಾಡ ಪೇಟೆಗಳಲ್ಲಿ ಗುಮ್ಮಣ್ಣ ಹೆಗಡೇರು ಗಸ್ತುತಿರುಗುತ್ತಿದ್ದರೆ, ಪೇಟೆಮಂದಿ ಮಠದ ಹೋರಿಯತ್ತ ಬೆರಳುಮಾಡಿ, “ನೀವು ಅಂತ ಗುರುವಿನ ಶಿಷ್ಯಸಮಾಜ” ಎಂದು ಕೊಂಕು ಆರಂಭಿಸಿ ಕುಟುಕಿದ್ದು ಗೊತ್ತಾಗಿದೆಯಂತೆ. ಮನಸ್ಸಿಗೆ ನೋವು, ಅಪಮಾನ ಉಂಟಾದರೂ ತಾನು ಆ ಸಮಾಜದ ಭಾಗ ಎಂದು ಹೇಳಿಕೊಳ್ಳಲಾಗದೆ ಸುಮ್ಮನೆ ಬಂದಿದ್ದಾರಂತೆ ಗುಮ್ಮಣ್ಣ ಹೆಗಡೇರು.ಈಗೀಗ ಬುಲೆಟ್ ಭಟ್ಟರ ಕತೆಯೂ ಬಹಿರಂಗಗೊಂಡಿರುವುದರಿಂದ ಹಾವಾಡಿಗ ಮಠದ ಹುನ್ನಾರಗಳು ಹೊರಬೀಳದೆ ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ.

“ರಾಮು, ’ಗುರುಶೀಲೆ’ಯರ ಯಾದಿಲಿ ನಮ್ಮೂರ್ನವರೂ ಇಬ್ಬರಿದ್ವ” ಎಂದ ಕವಳದ ಗೋಪಣ್ಣ ಅನಿರೀಕ್ಷಿತವಾಗಿ ಮೊನ್ನೆ ಅಪರಾತ್ರೀಲಿ ಸ್ಕೈಪ್ ಮಾಡಿದ್ದ. “ಗುರುಶೀಲೆಯರು” ಎಂದು ಶುಲ್ಕ ತೆಗೆದುಕೊಳ್ಳದೆ ಹೆಸರು ಸೂಚಿಸಿದ್ದು ಈ ಗೋಪಣ್ಣನೇ. ಒಳವರ್ತುಲಗಳು ಖಾಲಿ ಹೊಡೆದಾಗ, ಹೊರವರ್ತುಲದಲ್ಲಿ ತುದಿಗಾಗಲ್ಲಿ ನಿಂತು ವೇದಿಕೆಯೇರುವ ಕನಸುಕಾಣುತ್ತಿದ್ದ ಐಡೆಂಟಿಟಿ ಕ್ರೈಸಿಸ್ ಮ್ಯಾನೇಜರ್ ಮ್ಯಾಂಗೋಕುಳಿಗಳಂತವರಿಗೆ ಮಠದ ಬಾವಯ್ಯ ಗ್ರೀನ್ ಕಾರ್ಪೆಟ್ ಹಾಸಿ ಕರೆಸಿಕೊಂಡಿದ್ದಾನೆ. ಈಗ ಅವರೆಲ್ಲ ಸೇರಿ ಎಲ್ಲೆಲ್ಲಿ ಏನೇನು ಸಮಾವೇಶ ನಡೆಸಬಹುದು ಎಂದು ಪ್ಲಾನು ಹಾಕುತ್ತಿದ್ದಾರೆ.

ಅಂದಹಾಗೆ ನಾಡಿದ್ದು ಒಂದು ಸಮಾವೇಶ/ಸಮ್ಮೇಳನ ಬರುತ್ತಿದೆ. ಹೋರಿಭಕ್ತ ಮಹಾಶಯರು ತಮ್ಮ ಬಂಧು-’ಭಗಿನಿ’ಯರನ್ನೆಲ್ಲ ಕರೆದುಕೊಂಡು ಮಠಕ್ಕೆ ಬರಬೇಕು. ಹೋರಿಗಳು ಹಸುಗಳಿಗೆ ಹಾರಲು ತಾಲೀಮು ನಡೆಸಿ ಸಿದ್ಧವಾಗಿ ನಿಂತಿವೆ. ಬೆದೆಗೆ ಬಂದ ಹಸುಗಳನ್ನು ಗುರುತಿಸಿ ಹೋರಿದೀಕ್ಷೆ ಕೊಡಿಸಿ ’ಗುರುಶೀಲೆ’ಯರನ್ನಾಗಿ ಮಾಡಲಾಗುತ್ತದೆ. ಮೊದಲು ಮಠದ ಮಹಾಹೋರಿ ಹಾರಿದ ಮೇಲೆ ಪ್ರಸಾದ ರೂಪವಾಗಿ ಪಡೆದು ಉಳಿದ ಹೋರಿಗಳು ಹಾರುತ್ತವೆ. ಅಲ್ಲಿ ನಾನಾ ಭಾಗದ ಗುರುಶೀಲೆಯರನ್ನು ಮತ್ತು ಗುರುಶೀಲೆಯರಾಗಲು ಬಂದ ’ಹಸು’ಗಳನ್ನು ಕಾಣಬಹುದು.

ಎಲ್ಲರೂ ಬನ್ನಿ, ಮುಖ್ಯವಾಗಿ ಸುಂದರ ಮಹಿಳೆಯರನ್ನು ಮತ್ತು ಹುಡುಗಿಯರನ್ನು ಕರೆತನ್ನಿ. ಅವರಿಗೆಲ್ಲ ಗುರುಶೀಲೆಯರು ಬಾಗಿಲಲ್ಲೆ ಬಾಗಿನ ಕೊಡುತ್ತಾರೆ. ಅವಿಚ್ಛಿನ್ನ ಹಾವಾಡಿಗ ಕಚ್ಚೆಹರುಕರ ಪರಂಪರೆಯನ್ನು ಜೀವಂತ ಉಳಿಸಿ ಎಂದು ಮ್ಯಾಂಗೋಕುಳಿಗಳು ಈ ಮೂಲಕ ಬಹಳ ಕಳಕಳಿಯಿಂದ ಬೇಡಿಕೊಂಡಿದ್ದಾರೆ. ಹಾವಾಡಿಗ ಹೋರಿ ಸಮಾವೇಶದ ದಿವ್ಯ ಭವ್ಯ ವರದಿಯನ್ನು ಕೋಣೆಮಾಣಿಯ ವಾಣಿಯಲ್ಲಿ ನಿರಂತರವಾಗಿ ಓದಬಹುದು ಎಂದು ಅಧಿಕೃತ ಮೂಲಗಳು ಅನಧಿಕೃತವಾಗಿ ತಿಳಿಸಿವೆ ಮತ್ತು ’ಒತ್ತುವವರ’ ಈ ಸುದ್ದಿಯನ್ನು ಎಲ್ಲೂ ಬಹಿರಂಗಗೊಳಿಸಬಾರದೆಂದು ಒತ್ತಿ ಹೇಳಿವೆ.

Thumari Ramachandra

source: https://www.facebook.com/groups/1499395003680065/permalink/1703005923318971/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s