ತೊನೆಯಪ್ಪನ ಮೆರೆದಾಟದ ಕೊನೆಯ ದಿನಗಳು

ತೊನೆಯಪ್ಪನ ಮೆರೆದಾಟದ ಕೊನೆಯ ದಿನಗಳು

ತುಮರಿ ಹೇಳಿದರೆ ನೀವು ನಂಬೋದಿಲ್ಲ. ತಿರುಪತಿ ತಿಮ್ಮಪ್ಪನಿಗೆ ಮಲೆಯಪ್ಪ ಎಂದೂ ಹೇಳ್ತಾರೆ. ಜಗದ್ಗುರು ಶೋಭರಾಜಾಚಾರ್ಯರಿಗೆ ತೊನೆಯಪ್ಪ ಎಂದೂ ಹೇಳ್ತಾರೆ. ವೈಕುಂಠ ಏಕಾದಶಿ ಹಲವರಿಗೆ ಹಲವು ರೀತಿಯಲ್ಲಿ ಕಾಣ್ತದೆ ಮಾರಾಯ್ರೆ. ಈರುಳ್ಳಿ ಉಪ್ಪಿಟ್ಟಿನ ಉಪವಾಸದವರಿಗೆ ಶಾರೀರಿಕ ನಿಶ್ಶಕ್ತಿಯನ್ನೂ ಕೊಡುತ್ತದೆ. ಇಮ್ಮಡಿ ವಿಶ್ವೇಶ್ವರಯ್ಯನಂತವರನ್ನು ವಿಶ್ರಾಂತಿಯಿಂದ ಎಬ್ಬಿಸುತ್ತದೆ.
ರಾಂಗಾನುಗ್ರಹದಿಂದ ಇಮ್ಮಡಿ ಸೀಟು ಕಳೆದುಕೊಂಡ ಬಳಿಕದ ಇಷ್ಟುದಿನ ಹೋರಿ ಶೀಗಳ ಗುಣಗಾನ ಮಾಡಲು ನೂರಕ್ಕೆ ನೂರು ಸರಿಹೊಂದುವ ಸುದ್ದಿ ಸುರುಳಿಗಳಿರಲಿಲ್ಲ. ಲೂಸ್ ಮೋಶನ್ ಆದಂತೆ ಸಮಯದ ಮಿತಿಯಿಲ್ಲದೆ ಮಾತಾಡೋ ಲಾಂಗೂಲನ ವಾಹಿನಿಯಲ್ಲಿ ಕಾಸುಕೊಟ್ಟು ಒಂದಷ್ಟು ಬಿತ್ತರಿಸಿದ್ದು ಬಿಟ್ಟರೆ ಬೇರೆ ಯಾರೂ ಹತ್ತಿರ ಸೇರಿಸುತ್ತಿಲ್ಲ. ಕೋಣೆಮಾಣಿ ವಾಣಿಯಲ್ಲಿ ಓದಿದ್ದನ್ನೆ ಓದಿ ಜನ ಬೇಸತ್ತಿದ್ದಾರೆ.

ಭಕ್ಷೀಸು ಪಡೆದು ಹೋರಿಯ ’ಮಹಾಸಾಮರ್ಥ್ಯ’ದ ವರದಿಯನ್ನು ತಯಾರಿಸಿ, ಉಪ್ಪು-ಖಾರ ಸೇರಿಸಿ, ಒಗ್ಗರಣೆ ಹಾಕಿ ’ಮಹಾಪ್ರಸಾದ’ವೆಂದು ಜನತೆಗೆ ಒಪ್ಪಿಸುತ್ತಿದ್ದ ಇಮ್ಮಡಿ, ದಕ್ಷಿಣಾಯನದಲ್ಲಿ ವಿಶ್ರಾಂತಿಗೆ ತೆರಳಿದ್ದರಿಂದ ಇಷ್ಟುದಿನ ಅದೂ ಇರಲಿಲ್ಲ. ಈಗ ಉತ್ತರಾಯಣ ಬಂದಿರೋದರಿಂದ ಪರಪ್ಪ ವನಕ್ಕೆ ಹೋಗುವ ಮುನ್ನ ಮೆರೆದಾಟದ ಕೊನೆಯದಿನಗಳಲ್ಲಿದ್ದಾನೆ ತೊನೆಯಪ್ಪ.

ಇಷ್ಟೊಂದು ದಿನಗಳಲ್ಲಿ ಎಂದೂ ಈ ಮಹಾಜಗದ್ಗುರುವನ್ನು ಕನಸಿನಲ್ಲಿ ಕಾಣದ ತುಮರಿಗೆ ಮೊನ್ನೆ ಕನಸೊಂದು ಬಿತ್ತು. ಅದರಲ್ಲಿ ತೊನೆಯಪ್ಪ ಶೀಗಳು ಕಾವಿ ಬಿಟ್ಟಾಕಿ ಜೀನ್ಸ್ ಧರಿಸಿ ಅಡ್ಡಡ್ಡ ಮಲಗಿ ಯಾರೊಟ್ಟಿಗೋ ಪಟ್ಟಂಗ ಹೊಡೆಯುತ್ತಿದ್ದರು. ಅದು ಏಕಾಂತದಲ್ಲಿ ’ಶೋ’ ಮುಗಿದ ಮೇಲೆ ತೆಗೆದುಕೊಳ್ಳುತ್ತಿದ್ದ ವಿಶ್ರಾಂತಿಯೇ?ಗೊತ್ತಿಲ್ಲ. ಗಿಂಡಿಯೊಬ್ಬ ಮೊಬೈಲ್ ಮೆಸ್ಸೇಜ್ ಕಳಿಸಿ “ಯಾರೋ ದರ್ಶನಕ್ಕೆ ಬಂದಿದ್ದಾರೆ” ಎಂದಾಗ “ಗುರುಗಳು ಧ್ಯಾನಾವಸ್ಥೆಯಲ್ಲಿದ್ದಾರೆ ಎಂದು ತಿಳಿಸಿ ಸ್ವಲ್ಪ ಇರಲಿಕ್ಕೆ ಹೇಳು, ಕಾವಿ ಬದಲಾಯಿಸಿಕೊಂಡು ಬರ್ತೇವೆ” ಎಂದು ಹೇಳಿದ್ದು ಕಾಣುತ್ತಿತ್ತು.

ಅದೋ ನೋಡಲ್ಲಿ ಯಾರೋ ಹೋದಳಲ್ಲ ಸುಂದರಿ ಎಂದು ನೋಡುವಷ್ಟರಲ್ಲಿ ಸರಸರ ಸರಸರನೆ ಎದ್ದು ನಡೆದ ಹೆಣ್ಣಿನ ಹಿಂಭಾಗ ಮಾತ್ರ ಕಂಡಿತು; ಯಾವುದೆಂದು ನಿರ್ಧಾರಕ್ಕೆ ಬರಲಾಗಲಿಲ್ಲ. ಓಡಿಹೋಗಿ ಅವಳ್ಯಾರೆಂದು ನೋಡಬೇಕೆನ್ನುವ ಅವಸರದಲ್ಲಿದ್ದಾಗ ಕನಸಿನಿಂದಾಚೆಗೆ ಬಂದುಬಿಟ್ಟಿದ್ದೆ, ಛೆ ಪುಗಸಟ್ಟೆ ಸಿನಿಮಾ ಅರ್ಧಕ್ಕೆ ನಿಂತಿತಲ್ಲ ಅನ್ನಿಸಿತು.

ಸಂಭೋ ಹರಹರ ಮಹಾದೇವ. ಸಮಾಜಕ್ಕೆ ಈ ಸಲ ಹಲವು ಕೊಸ ಕಾವಿಧಾರಿಗಳ ಪರಿಚಯವಾಗಿದೆ. ಈ ಢೋಂಗಿ ತೊನೆಯಪ್ಪನ ರಕ್ಷಣೆಗಾಗಿ ಏನೂ ಅರಿಯದ ಅಂಧಾಭಿಮಾನಿ ಭಕ್ತರು ಕಂಡವರ ಕಾಲಿಗೆಲ್ಲ ಬಿದ್ದಿದ್ದಾಗಿದೆ. ಮೊನ್ನೆ ಮೊನ್ನೆ ಅಂತದ್ದೊಂದು ಸನ್ನಿವೇಶ ನಡೆಯಿತು. ಮತ್ತೆ ಡಾರ್ವಿನ್ ವಿಕಾಸ ವಾದ ನೆನಪಿಗೆ ಬಂತು. ’ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆ’ ಎಂಬ ಮಾತಿನಂತೆ ತಪ್ಪಿಸಿಕೊಳ್ಳುವ ಕೊನೆಯ ಕಂತಿನಲ್ಲಿ ನಡೆಯುತ್ತಿರುವ ವಿಶ್ವ ಪ್ರಯತ್ನದಲ್ಲಿ ಮೊನ್ನೆ ಸಿಕ್ಕಾಪಟ್ಟೆ ಗಟ್ಟಿ ಶರೀರದ ಇನ್ನೊಂದು ಹೋರಿಯನ್ನು ಕರೆಸಲಾಗಿತ್ತು. ಈಗ ನಡೀತಿರೋದೆಲ್ಲ ’ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ’ಯೇ. ಮೊನ್ನೆ ಬಂದವನಿಗೆ ಕಾಮಶಾಸ್ತ್ರ ಬಹಳ ಚೆನ್ನಾಗಿ ಗೊತ್ತಿದೆ; ಭಕ್ತರಿಗೆ ಟೋಪಿ ಇಕ್ಕುವ ಕಲೆಯೂ ಕರತಲಾಮಲಕವಾಗಿದೆ. ಹೀಗಾಗಿ ತೊನೆಯಪ್ಪ ಕಾಸುಕೊಟ್ಟು ರಕ್ಷಣೆಗೆ ಅವನನ್ನೆ ಕರೆಸಿಕೊಂಡ.

ಜನ ಒಂದನ್ನು ಗಮನಿಸಬೇಕು-ಈಗ ಸಂಘಟನೆಗಳ ಕಾಲ. “ಸಂಘೇ ಶಕ್ತಿ ಕಲೌ ಯುಗೇ” ಎಂಬುದನ್ನು ಕೇಳಿದ್ದೀರಲ್ಲ? ಬದುಕಿನಾಟಕ್ಕೆ ಸಂಘ ಕಟ್ಟಿಕೊಳ್ಳುವವರನ್ನು ಎಲ್ಲೆಲ್ಲೂ ಕಾಣಬಹುದು. ಮಾನವೀಯತೆ, ಸಂಸ್ಕೃತಿ, ಉತ್ತಮ ಗುಣನಡತೆ ಇವುಗಳಿಗೆಲ್ಲ ಬೆಲೆಯಿಲ್ಲ. ತಮ್ಮ ಹೊರಗೆ ಹೋದೋನು ನಡುರಾತ್ರಿ ಕಳೆದು ತೂರಾಡುತ್ತಾ ಮನೆ ಸೇರುತ್ತಿದ್ದರೆ ಪಾಲಕರು ಬೇಸರ ಪಡೋದಿಲ್ಲ. ಹುಡುಗ ಎಮ್.ಎನ್.ಸಿ [ಸಾಫ್ಟ್ ವೇರ್ ಎನ್ನಬೇಡಿ, ಕಾಲ ಹೋಯ್ತು!]ಯಲ್ಲಿದ್ದರೆ ಬೇಜ್ಜಾನ್ ಕಾಸು, “ಬಾಕಿ ಎಲ್ಲ ಓಕೆ, ಸ್ವಲ್ಪ ಎಣ್ಣೆ ಹಾಕ್ತಾನಷ್ಟೆ. ಮದುವೆಯಾದ ಮೇಲೆ ಎಮ್ಮನೆ ತಂಗಿ ತಿಳುವಳಿಕೆ ಹೇಳಿ ಸರಿಮಾಡ್ತಾಳೆ ಬಿಡು” ಎಂದುಕೊಂಡು ಮಗಳನ್ನು ಕೊಡ್ತಾರೆ. ಎಣ್ಣೆ ಹಾಕದ ಸಭ್ಯ ಹುಡುಗನಿದ್ದರೆ ಅವನಲ್ಲೇನೋ ಐಬಿರಬೇಕೆಂದು ಕೆಲವು ಶ್ರೀಮಂತರ ಲೆಕ್ಕಾಚಾರ!

ಇಂತಹ ಲೆಕ್ಕಾಚಾರಗಳು ಸುದ್ದಿಸುರಿಳಿ ಸುತ್ತುವವರಿಗೂ ಅನ್ವಯಿಸುತ್ತವೆ. ’ಪ್ರಸಾದ’ ತಿಂದುಕೊಂಡು ಕೊಟ್ಟವರಿಗೆ ಬೇಕಾದಂತೆ ವರದಿ ಬಿತ್ತರಿಸುವ ಅನಾಮಧೇಯ ಸಂಘಟನೆಗಳು ಸುದ್ದಿ ಹುಟ್ಟುವಲ್ಲೂ ಹುದುಗಿರುತ್ತವೆ. ಇದಕ್ಕೆಲ್ಲ ಸಾಕ್ಷಿಯನ್ನು ವರ್ಷಗಳಿಂದ ನೋಡುತ್ತಿದ್ದೀರಲ್ಲ? ಬೇರೆ ಏನು ಬೇಕು? ’ಮುಂಡೆ ಮದುವೇಲಿ ಉಂಡೋನೆ ಜಾಣ’ ಎಂಬಂತೆ ಪ್ಕಾಕೇಜ್ ಡೀಲಿಂಗ್ ನಡೆಸಿದೋನೆ ಜಾಣ ಇಲ್ಲಿ. ಪ್ಯಾಕೇಜ್ ಪಡೆಯಲು ಕಲಿಯದಿದ್ದರೆ ಅವನನ್ನು ಅಂಡೆಪಿರ್ಕಿ ಅಂತಾರೆ. ಕೆಲಸಕ್ಕೆ ಬಾರದೋನು ಅಂತ ಮೂಲೆಗುಂಪು ಮಾಡ್ತಾರೆ.

ಸುದ್ದಿಗಳ ಉಗಮ ಸ್ಥಾನದಲ್ಲಿ ಹವಾ ಮ್ಯಾಂಟೇನ್ ಮಾಡುವ ಕೆಲವರು ಎದ್ದುಹೋಗುವಾಗ ತಮ್ಮ ಖಾಸಾ ಶಿಷ್ಯರನ್ನೆಲ್ಲ ಕಟ್ಟಿಕೊಂಡೇ ಹೋಗ್ತಾರೆ. ಹೊರಗಿನಿಂದ ತತ್ಕಾಲಕ್ಕೆ ಅದು ಗೊತ್ತಾಗದಿದ್ದರೂ ಒಬ್ಬೊಬ್ಬರೇ ರಾಜೀನಾಮೆ ಎಸೆದು ಎಳೆಗರು ತಾಯಿಯ ಹಿಂದೆ ಓಡುವಂತೆ ಓಡ್ತಾರೆ. ಇರುವ ಸ್ಥಾನಕ್ಕೆ ರಾಜೀನಾಮೆ ಎಸೆದ ಸಂಘಟನೆಗಳ ಸದಸ್ಯರು ತಾವು ಎಲ್ಲೆಲ್ಲಿ ಕೆಲಸ ಮಾಡಿದ್ದೆವು, ಮುಂದೆ ತಾವು ಏನು ಮಾಡಲಿದ್ದೇವೆ ಎಂಬುದನ್ನೆಲ್ಲ ಸಾಮಾಜಿಕ ತಾಣಗಳಲ್ಲಿ ತರಾವರಿಯಾಗಿ ವರ್ಣಿಸಿ ಬರೆದುಕೊಳ್ತಾರೆ.ಅಂತೂ ತಾನೊಂದು ಪುನುಗು ಬೆಕ್ಕು ಎಂದುಕೊಳ್ಳುತ್ತ ಸಂಘಟನೆಗಳ ಮುಖ್ಯಸ್ಥರ ಪಾದಸೇವೆಗೆ ನಿಂತುಬಿಡ್ತಾರೆ.

ಕನ್ನಡದಲ್ಲಿ ಇಂತಹ ಸಂಘಟನೆಗಳ ಕಾಲ ರಾವಣನ ಸನಿಹಬಂಧುವಾಗಿದ್ದವನ ಕಾಲದಿಂದ ಜಾರಿಗೆ ಬಂದಿದೆ. ಅಲ್ಲಿಂದ ನಡೆದ ರೋಲ್ ಕಾಲ್ ಮತ್ತು ಹಳದಿ ವರದಿಗಳಿಗೆ ಲೆಕ್ಕವಿಲ್ಲ. ರಾವಣನ ಗರಡಿಯಲ್ಲಿ ಪಳಗಿದ ಖಾಸಾ ಶಿಷ್ಯನೊಬ್ಬ ತನ್ನದೇ ಸಂಘಟನೆಯನ್ನು ಕಟ್ಟಿಕೊಂಡು ಶಿಕಾರಿಗೆ ನಿಂತು, ಕೋಟಿಗಟ್ಟಲೆ ಗಳಿಸಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ; ಅದೀಗ ಮಾರ್ಕೆಟ್ಟಿನಲ್ಲಿ ಬೇಡಿಕೆ ಕಳಕೊಂಡ ಮುದಿಗತ್ತೆ; ಯಾವ ಮಡಿವಾಳನೂ ಅದನ್ನು ಬಳಸದಷ್ಟು ಹಡಾಲೆದ್ದು ಹೋಗಿದೆ, ಸಾಕಷ್ಟುಸಲ ರಿಪೇರಿ ಕಂಡಿದೆ.

ಹಾಡಹಗಲೆ ರೋಲ್ ಕಾಲ್ ನಡೆಸುತ್ತಿದ್ದ ಅವನ ಕಾಲದಲ್ಲೆ ಜಾಣತನದಿಂದ ಬೇಡಿಕೆ ಇಡದೆಯೇ ಭಕ್ಷೀಸು ಪಡಕೊಳ್ಳುವ ಇನ್ನೊಂದು ವಿಧಾನದ ಸಂಘಟನೆಗಳು ಜನ್ಮತಳೆದವು. ಕೇವಲ ಸಾರ್ವಜನಿಕ ಸಂಪರ್ಕ ಪ್ರತಿನಿಧಿಗಳಿಂದ ಅಷ್ಟಿಷ್ಟು ಪಡೆದು ಯಾವುದೋ ಬಿಕನಾಸಿ ಬರೆದ ಲಟ್ಕಾಸಿ ಲೇಖನಗಳನ್ನು ಪ್ರಕಟಿಸುತ್ತಿದ್ದದ್ದು ಬಹಳ ಜನರಿಗೆ ಗೊತ್ತಿರಬಹುದು. ಬಿಟಿ ಬದನೆಕಾಯಿಯಂತೆ ಅದರ ತಳಿ ಸಂಕರ್‍ಅಣದ ರೂಪವೇ ’ಪ್ರಸಾದ’ ಪಡೆಯುವ ವ್ಯವಹಾರ. ಪ್ರಸಾದ ನೀಡಿ ಬೇಕಾದ್ದನ್ನು ಬರೆಸಿಕೊಳ್ಳುವಲ್ಲಿ ಕರ್ನಾಟಕದ ಕೆಲವು ರಾಜಕಾರಣಿಗಳು ಕುಖ್ಯಾತರಾಗಿದ್ದಾರೆ.

ಮಾಲೀಕರಿಗೆ ಗೊತ್ತಿಲ್ಲದಂತೆ ಚಾಲಕರು ನಡೆಸುವ ಒಳಒಪ್ಪಂದ-ಒಳವ್ಯವಹಾರಗಳಿಗೆ ಯಾವುದೇ ಲಿಖಿತ ಆಧಾರಗಳಿರೋದಿಲ್ಲ. ’ಓಸಿ’ ಅಂತ ಹಿಂದೆಲ್ಲ ಹಳ್ಳಿಕಡೆಗಳಲ್ಲಿ ಮಟ್ಕಾ ಜೂಜು ದಂಧೆಯೊಂದನ್ನು ನಡೆಸುತ್ತಿದ್ದರಲ್ಲ? ಇದೂ ಹಾಗೇನೆ. ಲಿಖಿತ ಆಧಾರಗಳೆ ಪಕ್ಕಾ ಇದರಿದ್ದರೂ ’ಓಸಿ’ ಚೆನ್ನಾಗಿಯೇ ನಡೀತಿತ್ತು! ಹೋರಿ ಶೀಗಳು ಧರ್ಮದ ಹೆಸರಿನಲ್ಲಿ ನಾಮ ತೀಡಿದಂತೆ, ಕೂಲಿ ವರ್ಗದಿಂದ ಹಿಡಿದು ಕೆಳ ಮಧ್ಯಮ ವರ್ಗದ ಹಲವರ ನಂಬಿಕೆಗೆ ಪಾತ್ರವಾಗಿ ಸಂಘಟನೆಯನ್ನು ವಿಸ್ತರಿಸಿಕೊಂಡು ನಾಮ ಹಾಕುತ್ತಿತ್ತು. ಜನರಿಗೆ ಹೇಗೆ ನಾಮ ಬೀಳುತ್ತಿತ್ತು ಎಂದು ಇಂದೂ ಸರಿಯಾಗಿ ಅನೇಕರಿಗೆ ತಿಳಿದಿಲ್ಲ. ಜನ ಕನಸಿನಲ್ಲಿ ಕಂಡ ವಸ್ತುಗಳು, ಶಕುನಗಳು ಇಂತದ್ದನ್ನೆಲ್ಲ ಆಧಾರವಾಗಿಟ್ಟುಕೊಂಡು ನಾಳೆ ಇಂತಾ “ಫಿಗರ್ ಬತ್ತದೆ” ಎಂದುಕೊಂಡು ಹಣ ಕಟ್ಟುತ್ತಿದ್ದರು.

ಅದೆಲ್ಲ ಇಲ್ಯಾಕೆ ಬಿಡಿ, ಇದು ದುಡ್ಡಿನ ’ಗಣಿ’ಗೆ ಕೈಯಿಟ್ಟ ಜಾಗ; ಗಣಿ ಎಂದ ತಕ್ಷಣ ಝಣ ಝಣ ಸದ್ದುಮಾಡೋ ಜಾಗ. “ಆಶವಾದಿಗಳಾಗಿರಬೇಕು: ಒಂದು ಗಣಿ ಮುಚ್ಚಿದರೆ ಇನ್ನೊಂದು ಗಣಿ ತೆರೆದುಕೊಳ್ಳುತ್ತದೆ” ಎಂಬ ತತ್ವದಡಿಯಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಬಲವರ್ಧನೆ ಮಾಡಿಕೊಂಡು ನಡೆಸಿಬಂದ ಪರಂಪರೆ.

ಮಠದ ಮಾಣಿ ಕಚ್ಚೆಹರುಕನಾಗಿ ಹಲ್ಲುಗಿಂಜುತ್ತ ತನ್ನ ಕೊಂಡಾಟಕ್ಕೆ ಬೇಕಾದ್ದನ್ನು ವ್ಯವಸ್ಥೆ ಮಾಡಿಕೊಳ್ಳೋವಾಗ ಎಂದೂ ಮಠಕ್ಕೆ ಬಾರದವರೂ ಎದುರಿಗೆ ಬಂದರು. ತೊನೆಯಪ್ಪನಿಗೆ ಶರಣೆಂದರು. ಜಗತ್ತಿಗೆಲ್ಲ ತಾನೊಬ್ಬನೆ “ಜಗದ್ಗುರು”ವಾಗಲು ಬಯಸುತ್ತ ಹೆಣ್ಣುಬಾಕನಾದ ಮಠದ ಮಾಣಿ, ಬಂದವರಲ್ಲಿ ಹಳದಿ ಸ್ವಭಾವದವರನ್ನೆಲ್ಲ ಗುರುತಿಸಿತು; ಅವುಗಳಿಗೆಲ್ಲ ಭಕ್ಷೀಸು ನೀಡುತ್ತ ತನ್ನ ಸಂಘಟನೆಯನ್ನು ಬಲಪಡಿಸಿಕೊಂಡಿತು. ಹೀಗಾಗಿಯೇ ಅದು ಹಳದಿ ತಾಲೀಬಾನು; ಹೊರಗೂ ಒಳಗೂ ಒಂದೇ-ಅದೇ ಹಳದಿ!

ಜನ್ಮದಲ್ಲಿ ಎಂದೂ ಹೆಗಲಿಗೆ ಶಾಲು ಹೊದೆಯದಿದ್ದ, ಪಂಚೆ ಉಟ್ಟಿರದಿದ್ದ ಅನೇಕರು ಹಳದೀ ತಾಲಿಬಾನಿನ ಭಾಗವಾಗಿ ಸೇರಿಕೊಂಡ ತರುವಾಯ ಪಂಚೆ ಶಾಲುಗಳ ಭರಾಟೆ ಎಲ್ಲೆಲ್ಲೂ ಕಾಣಿಸತೊಡಗಿತು. “ಅಕ್ಕ”, “ತಂಗಿ” ಎಂದು ಸಂಬೋಧಿಸುತ್ತಲೇ ಒಳಗೊಳಗೆ ಸಂಭೋಗದ ಹುನ್ನಾರ ಇಟ್ಟುಕೊಳ್ಳುವ ಪರಿಪಾಟಕ್ಕೆ ಮಠ ಆಶ್ರಯತಾಣವಾಯಿತು. ಕಾಸೂ ಸಿಗುತ್ತದೆ, ಹೊತ್ತಿಂದೊತ್ತಿಗೆ ಮೃಷ್ಟಾನ್ನವೂ ಸಿಗುತ್ತದೆ, ಸಂಭೋಗಕ್ಕೆ ಸುಂದರಿಯರೂ ಸಿಗುತ್ತಾರೆ ಅಂದರೆ ಎಷ್ಟು ಜನ ಬೇಡ ಅಂತಾರೆ? ಕಂಡಲ್ಲೆಲ್ಲ ಸೆಟ್-ಅಪ್ ಗಳು ನಡೆದವು. ಹೋರಿ ಶೀಗಳಿಗೆ ಬೇಕಾದ್ದನ್ನು ಅವರು ಒದಗಿಸಿದರು; ತಾಲಿಬಾನಿಗಳಿಗೆ ಬೇಕಾದ್ದನ್ನು ಹೋರಿ ಶೀಗಳು ರಾಂಗಾನುಗ್ರಹದಿಂದ ಕರುಣಿಸಿದರು.

ನಂತರ ನಡೆದ ಬೆಳವಣಿಗೆಗಳಲ್ಲಿ ಮಠದಲ್ಲಿ ಹೊರಾವರಣವೊಂದು ಒಳಾವರಣ ಇನ್ನೊಂದು ಆಗಿ. ಹೊರಾವರಣದಲ್ಲಿ ಕಮರ್ಷಿಯಲ್ ಪೂಜೆ, ಹೋಮ, ಹವನಗಳು ಸಮಾಜ ಸುಧಾರಣೆಯ ಯೋಜನೆಗಳು ಭರದಿಂದ ಸಾಗತೊಡಗಿದವು. ಒಳಾವರಣದಲ್ಲಿ ಕಾಮದರಗಿಣಿಗಳನ್ನಾಗಿ ಪಳಗಿಸಿಕೊಂಡ ಹದಿಹರೆಯದ ಹುಡುಗಿಯರು ಹಾಗೂ ಅನೇಕರ ಹೆಂಡಂದಿರನ್ನು ಬೇಕು ಬೇಕಾದಂತೆ ಬಳಸಿಕೊಳ್ಳಲಾಗುತ್ತಿತ್ತು. ಇಂದಿಗೂ ನಿಜ ಸಂಗತಿ ಗೊತ್ತಾದರೆ ನೂರಾರು ಸಂಸಾರಗಳು ಒಡೆದು ಹೋಗುತ್ತವೆ ಎಂಬುದನ್ನು ನೀವೆಲ್ಲ ತಿಳಿದಿರಬಹುದು. ಹಾವಾಡಿಗ ಮಠಕ್ಕೆ ಹೆಂಡತಿಯನ್ನೂ ಹೆಣ್ಣುಮಕ್ಕಳನ್ನೂ ಕಳಿಸುತ್ತಿದ್ದವರೆಲ್ಲ ಈಗೀಗ ಕಂಗಾಲಾಗಿದ್ದಾರೆ; ಮರ್ಯಾದೆಯ ಪ್ರಶ್ನೆಯಿಂದ ಹೇಳಿಕೊಳ್ಳಲಾಗದೆ ಸುಮ್ಮನಾಗಿಬಿಟ್ಟಿದ್ದಾರೆ.

ಏಳನೇ ಕ್ಲಾಸು ಪಾಸಾಗದ ತೊನೆಯಪ್ಪ, ಮಠದ ಸ್ವಾಮಿಯ ಹುದ್ದೆಗೇರಿದ ’ಪುಣ್ಯಕತೆ’ಯನ್ನು ಹಿಂದೆ ತುಮರಿ ಮತ್ತು ಇತರ ಕೆಲವರ ಬಾಯಲ್ಲಿ ನೀವೆಲ್ಲ ಕೇಳಿದ್ದೀರಿ. “ಸಮಾನ ಶೀಲೇಷು ವ್ಯಸನೇಷು ಸಖ್ಯಮ್” ಎಂಬಂತೆ ದುಡ್ಡು, ಜೂಜು, ಹೆಣ್ಣು, ಹೆಂಡ ಇರುವಲ್ಲಿ ಅದನ್ನು ಬಯಸುವವರೆಲ್ಲ ಸೇರಿಕೊಳ್ತಾರೆ. ಅಂತವರದ್ದೆ ಒಂದು ಸಂಘಟನೆ ತಯಾರಾಗ್ತದೆ. ಉತ್ತರದ ರಾಂಪಾಲನನ್ನು ನೋಡಲಿಲ್ಲವೇ? ಇವ ರಾಮನಲ್ಲ ದಕ್ಷಿಣದ ರಾಂಪಾಲ; ಹೇಳಿಕೊಳ್ಳುವಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆಯಷ್ಟೆ.

ಹೊರಾವರಣದಲ್ಲಿ ಹೋರಿ ಶೀಗಳನ್ನು ವೇದಿಕೆಗಳಲ್ಲಿ ಕಂಡು, ಸರದಿಯಲ್ಲಿ ನಿಂತು. ಅಡ್ಡಬಿದ್ದು, ಸೆರಗು ಹಿಡಿದು ಬಣ್ಣದ ಅಕ್ಕಿ ಪಡೆದ ಮುಗ್ಧ ಭಕ್ತರಿಗೆ ಒಳಾವರಣದ ಅನೈತಿಕ ವ್ಯವಹಾರಗಳು ಕಾಣಿಸುವುದೆ ಇಲ್ಲ. ಒಳಾವರಣದಲ್ಲಿ ಹೀಗೆ ನಡೆಯುತ್ತಿದೆ ಎಂದು ಗೊತ್ತಿದ್ದರೂ ಪರಂಪರೆಯ ಘನತೆ ಹಾಳಾಗುತ್ತದೆಂದು ಬಚ್ಚಿಟ್ಟ ಕೆಲವು ಮಹನೀಯರು ಸಮಾಜಕ್ಕೆ ಒಂದು ಹಂತದಲ್ಲಿ ಅನ್ಯಾಯವನ್ನೆ ಮಾಡಿದ್ದಾರೆ ಎನ್ನಬಹುದು. ಅನ್ನ ಬೆಂದಿದ್ದನ್ನು ಪರೀಕ್ಷಿಸಲು ಅಗುಳು ಮುಟ್ಟಿನೋಡಿದರೆ ಸಾಕಲ್ಲವೇ? ಒಂದು ಘಟನೆಯ ಬಗ್ಗೆ ಗುಲ್ಲು ಎದ್ದಾಗ, ಸಂದೇಹ ಮೂಡಿದಾಗ ತಕ್ಷಣವೇ ಹಿರಿಯರು ಕ್ರಮ ಕೈಗೊಂಡಿದ್ದರೆ ಮಠದ ಮಾಣಿ ಯಾವಾಗಲೋ ಪರಪ್ಪವನವನ್ನು ಸೇರುತ್ತಿದ್ದ. ಅವರು ಅಷ್ಟೊಂದು ದಿನ ಸುಮ್ಮನಿದ್ದಿದ್ದು ನೋಡಿ “ಮೌನಂ ಸಮ್ಮತಿ ಲಕ್ಷಣಂ” ಎಂಬ ಹೇಳಿಕೆಗೆ ಸುಂದರಿಯರ ಸೀರೆ ಬಿಡಿಸಿ ಭಾಷ್ಯ ಬರೆಯುತ್ತಲೇ ಬಂದ.

ಹೊರಾವರಣದಲ್ಲಿ ತೀರ್ಥ-ಮಂತ್ರಾಕ್ಷತೆಗಾಗಿ ಹಂಬಲಿಸುತ್ತ ಪರಂಪರೆಯ ಸೊಬಗು-ಸೊಗಡನ್ನು ಕಾಪಿಡಲು ಹಾತೊರೆಯುತ್ತಿದ್ದ ಹಿರಿಯ ಭಕ್ತರು ಇದ್ದರಲ್ಲ? ಅವರನ್ನೆಲ್ಲ ಕ್ರಮೇಣ ಸಾಗಹಾಕಲಾಯ್ತು. ನಂತರ ಉಳಿದದ್ದು ಐಟಿಬಿಟಿಗಳ ಯುವ ಬಳಗ ಮಾತ್ರ. ಇಂದು ಒಳಾವರಣದಲ್ಲಿ ಸ್ವಕಾರ್ಯ-ಸ್ವಾಮಿಕಾರ್ಯ ನಿಷ್ಠರಾದ ಕೆಲವರನ್ನು ಬಿಟ್ಟರೆ ಹೊರಾವರಣದಲ್ಲಿ ಕೆಲವು ಐಟಿಬಿಟಿಗಳು ಮಾತ್ರ ಉಳಿದಿವೆ. ಯಾವಾಗ ಹಿರಿಯರು ಮಠದ ಮಾಣಿಯನ್ನು ವಿರೋಧಿಸುತ್ತಾರೆ ಎಂಬುದು ತಿಳಿದು, ದಾಖಲೆಗಳು ಅವನನ್ನು ಬಂಧಿಸುವುದಕ್ಕೆ ಪೂರಕವಾಗಿವೆ ಎಂದು ಪಕ್ಕಾ ಆಯಿತೋ, ಆಗಲೆ ಹಲವರು ಜಾಗ ಖಾಲಿಮಾಡಿದ್ದಾರೆ.

ಶತಮಾನಗಳಿಂದ ಪೂರ್ವಿಕರು ದೇಣಿಕೆ, ಕಾಣಿಕೆಗಳ ಮೂಲಕ ಸಂಗ್ರಹಿಸಿದ್ದ ಮಠದ ಆಪದ್ಧನವೆಲ್ಲ ನೀರಾಗಿರುವ ಸುದ್ದಿ ಹಲವರಿಗೆ ತಿಳಿದಿರಬಹುದು. ಮತ್ತೆ ಅಷ್ಟು ಆಪದ್ಧನವನ್ನು ಸೇರಿಸುವುದು ಬಹಳ ಕಷ್ಟದ ಕೆಲಸ. ಮಠಕ್ಕೆ ಬರುವವರ ಸಂಖ್ಯೆ ಅತ್ಯಂತ ಕ್ಷೀಣವಾಗಿ, ಯಾರೂ ಕಾಣಿಕೆ ನೀಡುತ್ತಿಲ್ಲವಾದ್ದರಿಂದ ಮಠದ ಮಾಣಿ ಮತ್ತು ಮಠದ ಬಾವಯ್ಯ ಹಲ್ಲುಮುರಿದ ಹಾವಿನಂತಾಗಿದ್ದಾರೆ; ಬುಸುಗುಟ್ಟುತ್ತ ಹೆಡೆಯೆತ್ತಿ ಬಡಿದರೂ ಕಚ್ಚುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ.

ಇಷ್ಟಿದ್ದೂ, ಬುಲ್ ಪೀನದ ಬುಸ್ಸಪ್ಪನಿಗೆ ಕಾಲಕಾಲಕ್ಕೆ ಲಲನೆಯರಿಂದ ಸೇವೆ ನಡೆಯುತ್ತಲೇ ಇದೆ ಎಂದು ಗುಮ್ಮಣ್ಣ ಹೆಗಡೇರು ಹೇಳಿದ್ದಾರೆ. ಸಮಾಜದ ಸ್ವತ್ತಾದ ಮಠವನ್ನು ಸ್ವಂತ ಆಸ್ತಿಯೆಂಬಂತೆ ಬಳಸಿಕೊಳ್ಳುತ್ತಿರುವ ಆ ಬಾವ-ನೆಂಟರ, ಕಳ್ಳ-ಕುಳ್ಳರ ಜೋಡಿಯನ್ನು ಬಡಿದೋಡಿಸುವ ಕಾಲ ಸನಿಹಕ್ಕೆ ಬಂದಿದೆ. ಇಮ್ಮಡಿ ವಾಣಿ ಏನನ್ನೇ ಬರೆದರೂ ಇಂದು ಮಠದ ಮಾಣಿಗೆ ದಮ್ಮಡಿ ಕಿಮ್ಮತ್ತಿಲ್ಲ. ಅವನ ಭಾವ ಚಿತ್ರಗಳು ಮತ್ತು ಬಾವನ ಚಿತ್ರಗಳು ಕಂಡಲ್ಲೆಲ್ಲ ಜನ ತೆಗೆದು ಎಸೆಯುತ್ತಿರುವುದನ್ನು ನೀವೀಗ ಕಾಣಬಹುದು. ಮಾಣಿಯ ಕತೆ ಮುಂದೇನು? ಎಂದು ಮಾಣಿಯ ಅಪ್ಪ ಬಾಯ್ಬಾಯ್ ಬಡಿದುಕೊಳ್ಳುತ್ತಿದ್ದಾನಂತೆ.

ಕಚ್ಚೆಹರುಕರ ವಂಶದಲ್ಲಿ ಹುಟ್ಟಿ, ಸರಿಯಾದ ವೇದ-ಶಾಸ್ತ್ರಗಳನ್ನು ಓದದೆ, ಅಧಿಕಾರ-ಹಣಕ್ಕಾಗಿ ಮಠ ಸೇರಿಕೊಂಡು ಕಾಮುಕನಾಗಿ ಪರಿವರ್ತಿತನಾಗಿ, ಸಮಾಜದ ಅನೇಕ ಹೆಣ್ಣುಮಕ್ಕಳು ಮತ್ತು ಹೆಂಗಸರ ಶೀಲಹರ್‍ಅಣ ಮಾಡಿದ ಪಾತಕಿಯನ್ನು, ಅನೇಕ ಸಂಸಾರಗಳನ್ನು ಒಡೆದ ಪಾಪಿಯನ್ನು ಮಠದಿಂದ ಹೊರಗೆ ದಬ್ಬಿ, ಆದಷ್ಟು ಶೀಘ್ರ ಮಠದಲ್ಲಿ ಉತ್ತಮ ಧಾರ್ಮಿಕ ವ್ಯವಸ್ಥೆ ಆಚರಣೆಗೆ ಬರುವಂತೆ ಶುದ್ಧೀಕರಣ ನಡೆಸಬೇಕು.

ಹಾವಾಡಿಗ ಜಗದ್ಗುರುವಿಗೆ ಮುಂದೆ ಇನ್ನೆಂದೂ ಯಾವ ಕಾವಿಯೂ ಕಾಮವನ್ನು ನೆನೆಪಿಸಿಕೊಳ್ಳದಷ್ಟು ಘೋರ ಶಿಕ್ಷೆಯಾಗಬೇಕು. ಅವನ ಜೊತೆಗೆ ಅವನ ಕಚ್ಚೆಹರುಕುತನಕ್ಕೆ ಸಹಕರಿಸುತ್ತಿರುವ ಎಲ್ಲಾ ಹಳದಿ ಹೈಕಳೂ ಒಂದಷ್ಟು ಕಾಲ ಮಾವನ ಮನೆಯಲ್ಲಿದ್ದು ಅಲ್ಲಿನ “ಮೃಷ್ಟಾನ್ನ”ವನ್ನೂ ಉಂಡು ಬರಲಿ ಎಂದು ತುಂಬು ಹೃದಯದಿಂದ ಹಾರೈಸೋಣ.

Thumari Ramachandra

source: https://www.facebook.com/groups/1499395003680065/permalink/1698630823756481/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s