ಮಲಬದ್ಧತೆ ಪ್ರದರ್ಶನಕ್ಕೆ ಬನ್ನಿ

ಮಲಬದ್ಧತೆ ಪ್ರದರ್ಶನಕ್ಕೆ ಬನ್ನಿ

ತುಮರಿ ಬಾವಯ್ಯಂಗೆ ತ್ರಾಟಕಾಸುರ ವಧೆಗಿಂತ ಮೊದಲು ಮಲಬದ್ಧತೆ ಪ್ರದರ್ಶನ ಮಾಡಬೇಕಾಗಿ ಬಂದದ್ದು ಸಂಕೋಚವೂ ಹೌದು ವಿಷದವೂ ಹೌದು. ಯಾಕೆಂದರೆ ಅಷ್ಟು ದೊಡ್ಡ ಬಯಲು ತುಂಬ ಮಲಬದ್ಧತೆ ಆದವ್ರ್‍ಎ ತುಂಬಿರ್ತಾರೆ ಅಂದು! ಮಲಬದ್ಧತೆ ಆದವರು ಬೆಂಗಳೂರಿನ ಪದ್ಮನಾಭನಗರದ ಕಡೆ ರಾಜಕಾರಣಿಯೋರ್ವರ ಮುಖದಂತೆ ಚಡಪಡಿಕೆಯಲ್ಲಿರ್ತಾರೆ ಅಂತ ಅನುಭವಿಕರು ಹೇಳಿದ್ದಾರೆ.

ಇಲ್ಲಿ ಮಲಬದ್ಧತೆ ಸಮಸ್ಯೆ ಹೇಗೆ ಗೊತ್ತಾ? ಶರೀರದಲ್ಲಿ ಮಲ ಶೇಖರಣೆ ಆಗಿದ್ದು ಸ್ಪಷ್ಟವಾಗಿ ಗೊತ್ತಾಗ್ತಾ ಇದೆ; ಆದರೆ ಹೊರಹಾಕೋದಕ್ಕೆ ಆಗ್ತಾ ಇಲ್ಲ. ಹಾಗಾಗಿಯೇ ಈ ಮಲಬದ್ಧತೆ. ಮಲಬದ್ಧತೆ ಆದವರಿಗೆ ಎಲ್ಲ ತರದ ಕಾಯಿಲೆಗಳೂ ವಕ್ಕರಿಸುತ್ತವೆ ಎಂದು ಕೇಳಿದ್ದೇನೆ, ತುಮರಿಗೆ ಆ ವಿಷಯದಲ್ಲಿ ಅನುಭವ ಇಲ್ಲ. ಪರಕಾಯ ಪ್ರವೇಶ ಮಾಡಿದವರು ನಮ್ಮ ಆದಿ ಗುರು ಶಂಕರರು, ಅದು ತುಮರಿಯಿಂದ ಈ ಜನ್ಮದಲ್ಲಿ ಸಾಧ್ಯವಿಲ್ಲ. ಹೀಗಾಗಿ ಹಲವು ಅನುಭವೀ ಮಲಬದ್ಧತೆ ಪ್ರಕೃತಿಯವರೇ “ಯಾರಿಗೂ ಹೇಳಬೇಡ” ಎನ್ನುತ್ತ ಗುಟ್ಟಿನಲ್ಲಿ ಹೇಳಿದ್ದು “ಮಲಬದ್ಧತೆ ಎಂಬುದು ಕಣ್ಣಿಗೆ ಕಾಣಿಸದ ಪಿಶಾಚಿ ಕಾಟದಂತ ತೊಂದರೆ” ಎಂದು; ಹೇಳಿದವರ ಹೆಸರನ್ನು ಬಹಿರಂಗಗೊಳಿಸಿದರೆ ವಚನಭ್ರಷ್ಟನಾಗುತ್ತೇನೆ. ಮೇಲಾಗಿ ಅಂತವರು ಮಾನಹಾನಿ ಕಟ್ಲೆ ದಾಖಲಿಸಿದರೆ ತುಮರಿಗೇ ಮಲಬದ್ಧತೆ ಶುರು ಆಗಬಹುದಲ್ಲವೇ?

ಶರೀರದಲ್ಲಿ ಬೇಡದ ತ್ಯಾಜ್ಯಭಾಗವೇ ಮಲ. ಅದು ಶೇಖರಣೆಗೊಂಡು ಹೊರಗೆ ಹೋಗದಾಗ ಮಲಬದ್ಧತೆ ಅಲ್ಲವೇ? ಮಠಮಾನ್ಯಗಳಲ್ಲಿಯೂ ಬೇಡದ ತ್ಯಾಜ್ಯ ಭಾಗವೇ ಮಲ. ಅದು ಪೀಠಕ್ಕೆ ಮೆತ್ತಿಕೊಂಡು ಹೊರಗೆ ಹೋಗದಾಗ ಅದೂ ಒಂದು ನಮೂನಿಯ ಮಲಬದ್ಧತೆಯೇ. ಒಪ್ಪಲಾರದ ಮನಸ್ಸಿನಿಂದ ಆ ಮಲಬದ್ಧತೆಯನ್ನು ಒಪ್ಪಿಕೊಳ್ಳೋದು ಸಹ ಒಂದು ಮಲಬದ್ಧತೆಯೇ; ಯಾಕೆಂದರೆ ಮನಸ್ಸಿಗೆ ಬೇಡವಾದ ತ್ಯಾಜ್ಯ ಭಾಗ ಅದಾಗಿರುತ್ತದೆ. ಹೀಗಾಗಿ ಮಲಬದ್ಧತೆ ಎಂಬುದು ಮೂರ್ತಿ ಚಿಕದಾದ್ರೂ ಕೀರ್ತಿ ದೊಡ್ಡದು ಎಂಬಂತೆ ಚಿಕ್ಕದಾದರೂ ದೊಡ್ಡ ಸಂಗತಿಯೇ.

ಕನ್ನಡದ ಸತತ ಓದುಗನಾದ ನನಗೆ ಎಲ್ಲೋ ಓದಿದ ನೆನಪು. ರಾಮಾಯಣದ ಕಾಲದಲ್ಲಿ ಯಾರೋ ಪರದೇಶಿಗೆ ಪಾಪ ಮಲಬದ್ಧತೆ ಆಗಿಬಿಟ್ಟಿತ್ತಂತೆ. ಹಲವುದಿನ ಹೊರಗೆ ಬೀಳದ ಮಲ ಅಂತೂ ಹೇಗೋ ಕೊನೆಗೆ ಹೊರಬಿದ್ದಾಗ ಗರ್ಭಿಣಿಗೆ ಹಡೆದು ಹಗುರಾದಷ್ಟು ಸಂತೋಷವಾಗಿ “ಉಸ್ಸಪ್ಪಾ ರಾಮಾ..ರಾಮಾ” ಅಂದನಂತೆ. ಹೇಳಿದ್ದು ಅಲ್ಲೇ-ಬೈಲುಕಡೆಗೆ ಕೂತಲ್ಲಿ. ಹಿಂದೆಲ್ಲ ಟಯ್ಲೆಟ್ ಎಲ್ಲಿತ್ತು? ಬಂದರೆ ಚಂಬು ಹಿಡಿದೇ ಹೋಗಬೇಕಿತ್ತು. ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ಯಾವುದೋ ಸಿನಿಮಾದಲ್ಲೂ ನೋಡಿದೆ-ಪೋಲೀಸರು ಬೀಡಾಡಿಯಂತೆ ಓಡಾಡುತ್ತಿದ್ದ ಒಬ್ಬನನ್ನು ಹಿಡಿದು ವಿಚಾರಿಸ್ತಾರೆ.

“ಹೇಯ್ ನೀನು ಗಾಂಧಿ ಕಡೆಯವನೇನಪ್ಪಾ?”

“ಅಲ್ಲ ಸ್ವಾಮಿ ನಾನು ಬೈಲಕಡೆ ಹೊಂಟಿದ್ದೆ” ಎಂದು ಚಂಬು ತೋರಿಸ್ತಾನೆ.

ನಮ್ಮ ಸಾಗರದ ಪೈಮಾಮನ ಜೊತೆ ಕೆಲವೊಮ್ಮೆ ತಮಾಷೆ ಮಾಡೋದಿತ್ತು. ಅವರಲ್ಲೂ ಅಷ್ಟೆ. ಹಿಂದೆಲ್ಲ ಬೆಳಗಿನ ಜಾವ ಚಂಬಿಗೇ ಮೊರೆ. ಚಂಬು ಹಿಡಿದು ಹೊರಟವನಿಗೆ ನಸುಕಿನಲ್ಲಿ ಹಿರಿಯ ಕೊಂಕಣಿಗರೊಬ್ಬರು ಎದುರಾದಾಗ ಸಂಭಾಷಣೆ ನೋಡಿ-

ಚಂಬು ಹಿಡಿದ ಹುಡುಗ-“ಅರೇ ರಾಯಾನು” [“ಅರೇ ರಾಯರು”]

ಹಿರಿಯ[ಸರಿಯಾಗಿ ಕಾಣಿಸದೆ ಕೇಳ್ತಾನೆ]-“ಕೋಣು?” [“ಯಾರು?]

“ಹಾಂವು, ಉತ್ ಕಡೆ ವಸುನ್ ಯತ್ತ ಹಾಂ…” {“ನಾನೇ, ಬೈಲಕಡೆಗೆ ಹೋಗಿ ಬರ್ತೆ ಹಾಂ….”]

ಈಗ ನಾವು ರಾಮಾಯಣದ ಕಾಲದ ಕತೆಯ ಮುಂದಿನ ಭಾಗದ ಮಾರ್ಗವಾಗಿ ಮೂಲಕತೆಯತ್ತ ಧಾವಿಸೋಣ. ಬೈಲಕಡೆಗೆ ಕೂತ ಸನ್ನಿವೇಶದಲ್ಲಿ “ರಾಮಾ ರಾಮಾ” ಅಂದಿದ್ದು ಕೇಳಿಸಿಕೊಂಡ ಹನುಮಂತನಿಗೆ ಸರಿಬರಲಿಲ್ಲವಂತೆ. ಸೀದಾ ಒಂದೇ ಗುಪ್ಪಿಗೆ ನೆಗೆದು ಬೈಲಕಡೆಗೆ ಕೂತವನಲ್ಲಿಗೆ ಬಂದು ಅವನಿಗೆ ಇನ್ನೇನು ತಪರಾಕಿ ಕೊಟ್ಟು ಮುಗಿಸಬೇಕು, ಅಷ್ಟರಲ್ಲಿ ರಾಮ ಅಲ್ಲಿ ಕಾಣಿಸಿಕೊಂಡು “ಹನುಮ, ಅವನಿಗೆ ಮಲಬದ್ಧತೆಯಾಗಿತ್ತು, ಬಹಳದಿನಗಳಿಂದ ಬೈಲಕಡೆಗೆ ಹೋಗಿರಲಿಲ್ಲ. ಈಗ ಹೊರಗೆ ಹೋಗಿ ನಿರುಮ್ಮಳವಾಗಿದೆ. ಕಷ್ಟನಿವಾರಣೆಯಾದ ಸಂತಸದಲ್ಲಿ ನನ್ನ ಹೆಸರನ್ನು ಹೇಳಿದ್ದಾನೆ. ಹೊಡೀಬೇಡ ಪಾಪ” ಎಂದನಂತೆ.

ರಾಮ ಹಾಗೆ ಅಲ್ಲಿಗೆ ಜರೂರಾಗಿ ಬರದಿದ್ದರೆ ಬೈಲಕಡೆಗೆ ಕೂತವನ ಕತೆ ಏನಾಗ್ತಿತ್ತೋ ಗೊತ್ತಿಲ್ಲ. ಅಂತೂ ಈ ಮಲಬದ್ಧತೆ ಎಂಬುದಕ್ಕೆ ಭಾರೀ ಮಹತ್ವವಿದೆ ಎಂದಾಯ್ತು!

ಈಗ ನಮ್ಮ ಹಾವಾಡಿಗ ಸಂಸ್ಥಾನದಲ್ಲೂ ಇದೇ ಸುದ್ದಿ. ಮಲಬದ್ಧತೆ ಆದವರೆಲ್ಲ ಪ್ರದರ್ಶನ ಮಾಡಬೇಕು ಅಂತ. ಮತ್ತೆ ಹೋರಿಯ ಪ್ರಾಯೋಜಿತ ಬಸ್ಸುಗಳು ಹಳ್ಳಿಯಿಂದ ಮಹಾನಗರಕ್ಕೆ ಬುರ್ರನೆ ಓಡೋಡಿ ಬರುತ್ತವೆ. ಹಳ್ಳಿಯಜನ ಮತ್ತೊಂದೆರಡು ರಾತ್ರಿ ಮಲಬದ್ಧತೆ ಮಾಡಿಕೊಂಡೇ ಕಾಲಕಳೆಯಬೇಕಾಗುತ್ತದೆ. ಅದರ ಪೂರ್ವತಯಾರಿಯಾಗಿ 1008 ಶ್ರೀಮನ್ಮಹಾ ಹಾವಾಡಿಗ ಸಂಸ್ಥಾನದ ಪ್ರತಿನಿಧಿಗಳು ಊರೂರು ತಿರುಗಿ ಸಹಿ ಸಂಗ್ರಹಿಸಿ ಯಾರು ಮಲಬದ್ಧತೆಯವರು ಮತ್ತು ಯಾರು ಬಲಬದ್ಧತೆಯವರಲ್ಲ ಎಂದು ತಿಳಕೊಂಡಿದ್ದಾರೆ. ಮಲಬದ್ಧತೆಯಾದವರಿಗೆಲ್ಲ ಗುರುತುಪತ್ರ ನೀಡಿ ಕರೆಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ವೈದ್ಯಶಾಸ್ತ್ರದಲ್ಲಿ ಮಲಬದ್ಧತೆ ಎಂಬಲ್ಲಿ ಬದ್ಧತೆಗೆ ಬಾಲವಿಲ್ಲ; ಆದರೆ ಇಲ್ಲಿ ಬದ್ಧತೆಯವರಿಗೆಲ್ಲ ಬಾಲವೇ ಇರುವ ಅನುಭವ ಆಗಿದ್ದರಿಂದ ತುಮರಿ ಮಲಬದ್ಧತೆಗೆ ಬಾಲ ಹಚ್ಚಿದ್ದಾನೆ. ಮಲಶೋಧನೆಯಲ್ಲಿ ಏರುಪೇರಾದರೂ ಮಲಬದ್ದತೆ ಎನ್ನುತ್ತಾರಂತೆ ವೈದ್ಯರು. ಗೊತ್ತಿಲ್ಲ, ಅದೆಷ್ಟು ಸರಿ ಅಂತ. ಈಗೀಗ ನಮ್ಮ ಹೋರಿಸ್ವಾಮಿಗಳಿಗೂ ಮಲಬದ್ಧತೆ ಕಾಡ್ತಿದೆಯಂತೆ; “ರಾಮಾ” ಅಂದ್ರೂ ಬರೋದಿಲ್ವಂತೆ “ನಾನೇ ರಾಮ” ಅಂದ್ರೂ ಹೊರಬೀಳೋದಿಲ್ವಂತೆ. ಯಾಕೆ ಇದ್ದಕ್ಕಿದ್ದಲ್ಲೆ ಹಾಗಾಯ್ತು ಅಂತ ಯೋಚಿಸಿದ ತಾಲೀಬಾನಿಗಳು ಮಲಬದ್ಧತೆಯವರನ್ನೆಲ್ಲ ಸೇರಿಸಿ ಹರಕೆ ಪ್ರದರ್ಶನ ನಡೆಸಿದರೆ ಸ್ವಾಮಿಗಳಿಗೆ ಆರೋಗ್ಯ ಸರಿಹೋಗಬಹುದು ಎಂದುಕೊಂಡಿದ್ದಾರಂತೆ.

ಮಹಾಮಂತ್ರಿ ಮಠದ ಬಾವಯ್ಯನವರು ಮಲಬದ್ಧತೆಯಿಲ್ಲದ ಹಳ್ಳಿಗ ಶಿಷ್ಯರಲ್ಲಿ ಹಳೆಯ ಕಾಡತೂಸುಗಳಿಗೆಲ್ಲ ಎಣ್ಣೆ ಸವರಿ ರೆಡಿ ಮಾಡಿಟ್ಟುಕೊಳ್ಳಲು ಹೇಳಿದ್ದಾರಂತೆ. ಯಾವಾಗ ತಾವು ಬಹಿಷ್ಕಾರ ಹಾಕಿ ಪೀಡಿಸಲು ಆರಂಭಿಸುತ್ತೇವೋ ಆಗ ಜಾಸ್ತಿ ತೊಂದರೆ ಅನಿಸಿದರೆ, ಮಾನಸಿಕ ಯಾತನೆ ಹೆಚ್ಚಿದರೆ ತಲೆಗೆ ಗುರಿಹಿಡಿದುಕೊಂಡು “ಢಂ” ಎನಿಸಿಕೊಂಡುಬಿಡಿ, ಎಲ್ಲಾ ನಿವಾರಣೆಯಾಗ್ತದೆ ಎಂದು ಅಪ್ಪಣೆ ಕೊಡಿಸಿದ್ದಾರಂತೆ. ಹಳೆಯ ಕಾಡತೂಸು, ಬಹಿಷ್ಕಾರ, ಶಾಪ. ವಂಶ-ನಿರ್ವಂಶ ಪದಗಳಿಗೆ ಹೆದರಿ ಕೆಲವರಿಗೆ ಮತ್ತೆ ಮಲಬದ್ಧತೆಯಾದರೆ ಕೆಲವರು ದಿನಕ್ಕೆ ನಾಲ್ಕಾರು ಸಲ ಹೋಗಿಬರ್ತಿದ್ದಾರಂತೆ.

ತುಮರಿಗೊಬ್ಬ ಹಿರಿಯನಿದ್ದ, ಅವ ಹೇಳುತ್ತಿದ್ದ-“ತಮ್ಮ, ಒಂದು ಸುಳ್ಳು ಹೇಳಿದಮೇಲೆ ಆ ಸುಳ್ಳನ್ನು ಸತ್ಯ ಮಾಡುವ ಸಲುವಾಗಿ ಹಲವು ಸುಳ್ಳುಗಳನ್ನು ಹೇಳಕಾಗ್ತು. ಹೀಂಗಾಗಿ ಸುಳ್ ಹೇಳಡ.” ಹಾವಾಡಿಗ ಮಠದಲ್ಲಿ ಹೋರಿಸ್ವಾಮಿಗಳೇ ಮಹಾ ಸುಳ್ಳಗಾರರಾಗಿರೋದರಿಂದ, ಸುಳ್ಳನ್ನೇ ಸತ್ಯವೆನ್ನುವ ಚಾಳಿ ಅವರ ಶಿಷ್ಯರಲ್ಲಿ ಕೆಲವರಿಗಿದೆ. ಹಾಗಲಕಾಯಿ ಕಹಿಯಲ್ಲವೇ? ಅದಕ್ಕೆ ಬೇವಿಕಾಯಿ “ಹಾಗಲಕಾಯಿ ಕಹಿಯಲ್ಲ” ಎಂದು ಸಾಕ್ಷಿ ಹೇಳುತ್ತದಂತೆ; ಯಾಕೆಂದರೆ ಬೇವಿನಕಾಯಿಯ ಕತೆ ಇನ್ನೇನು? ಇಲ್ಲಿ ಈ ಮಲಬದ್ಧತೆ ವ್ಯವಹಾರದಲ್ಲೂ ಹಾಗೇ.

ಒಬ್ಬ ಮಾಡಿದ ತಪ್ಪಿಗೆ ಅವನನ್ನು ಹಿಡಿದು ತಕ್ಕ ಶಾಸ್ತಿ ಮಾಡೋದು ಬಿಟ್ಟು ಅವನನ್ನೇ ಧರ್ಮಗುರು ಎನ್ನುತ್ತ ತಿರುಗುತ್ತ ಜೈಕಾರ ಹಾಕುತ್ತಿರುವವರಿಗೆ ಇಲ್ಲಿಯವರೆಗೂ ಅವನನ್ನು ಎದುರಿಸುವ ತಾಕತ್ತು ಬರಲಿಲ್ಲ ನೋಡಿ!

ಪಂಚತಂತ್ರದಲ್ಲೊಂದು ಕಪಿಯ ಕತೆ ಬರುತ್ತದೆ. ರಾಜನ ಉದ್ಯಾನದಲ್ಲಿ ಕಾವಲಿಗೆ ಆ ಮಹಾಕಪಿ ನೇಮಕಗೊಂಡಿತ್ತಂತೆ. ರಾಜ-ರಾಣಿ ಒಮ್ಮೆ ಉದ್ಯಾನವನ್ನು ಹೊಕ್ಕು ವಿಹರಿಸಿ ನಿದ್ದೆಗೆ ಜಾರಿದರಂತೆ. ಹೇಗೂ ಕಪಿಯ ಕಾವಲಿತ್ತಲ್ಲ? ಮಲಗಿದ್ದ ರಾಜ-ರಾಣಿಯರತ್ತ ದೊಡ್ಡ ನೊಣವೊಂದು ಹಾರುತ್ತಿರುವುದನ್ನು ಕಂಡ ಕಪಿ ತಡಮಾಡದೇ ಕೈಯಲ್ಲಿ ಖಡ್ಗ ಹಿಡಿದು ಧಾವಿಸಿ ಬಂದಿದೆ. ರಾಜನ ಮುಖದಮೇಲೆ ನೊಣ ಕೂತಾಗ ಖಡ್ಗದಿಂದ ನೊಣವನ್ನು ಕತ್ತರಿಸಿದೆ. ಅದರ ಪರಿಣಾಮವಾಗಿ ರಾಜ ಕೈಲಾಸ ಕಂಡ!

ನಮ್ಮ ಹಾವಾಡಿಗ ಮಠದಲ್ಲಿ ಪೀಠಕ್ಕೆ ನಾವು ಕಪಿಯನ್ನೇ ಆಯ್ಕೆ ಮಾಡಿದ್ದೇವೆ. ಸಮಾಜವೆಂಬ ರಾಜ ಸಮಷ್ಟಿ ಸಮಾಜವೆಂಬ ಉದ್ಯಾನದಲ್ಲಿ ನಿದ್ದೆಗೆ ಜಾರಿದ್ದಾನೆ. “ಕಪಿಯ ಕಾವಲು ಸರಿಯಲ್ಲ ರಾಜರೇ” ಎಂದು ರಾಜನಿಗೆ ತಿಳುವಳಿಕೆ ಹೇಳಲು ಬಂದವರನ್ನು ಕಪಿ ಪೀಠದಿಂದಲೇ ಗುರಾಯಿಸಿ ನೋಡಿದೆ. ಬತ್ತಳಿಕೆಯಲ್ಲಿರುವ ಎಲ್ಲ ಶರಗಳ ಪ್ರಯೋಗವೂ ಮುಗಿದುಹೋಗಿದೆ. ರಾಜನ ಹತ್ತಿರ ಸುಳಿದಾಡುವ ನೀತಿ-ಧರ್ಮವೆಂಬ ನೊಣವನ್ನು ಅಧಿಕಾರದ ಖಡ್ಗದಿಂದ ಕತ್ತರಿಸಲು ಮುಂದಾಗಿದೆ. ರಾಜ ಬದುಕುವನೋ ಕೈಲಾಸ ಕಾಣುವನೋ ಕಾನೂನೆಂಬ ಪರಧಿಗೆ, ಸರದಿಗೆ ಬಿಟ್ಟ ಕತೆ.
ಮಲಬದ್ಧತೆಯಾದವರು ಅದಕ್ಕೆ ಚಿಕಿತ್ಸೆ ಪಡೆದುಕೊಂಡು ವಾಸಿಮಾಡಿಕೊಂಡಿದ್ದರೆ ಕಪಿಯ ಕೈಯಲ್ಲಿ ಕೊಟ್ಟ ಅಧಿಕಾರದ ಖಡ್ಗವನ್ನು ಇಸಿದುಕೊಳ್ಳಬಹುದಿತ್ತು. ಕೊಟ್ಟವರು ಕೋಡಂಗಿ ಇಸಗಂಡವ ಈರಭದ್ರ ಎಂಬ ಗಾದೆ ಯಾವ ಪುಣ್ಯಾತ್ಮರು ಸೃಷ್ಟಿಸಿದರೋ, ಯುಗಯುಗಗಳು ಕಳೆದರೂ ಅದರ ಮೌಲ್ಯ ಬದಲಾಗೋದಿಲ್ಲ ನೋಡಿ.

ಉತ್ತರಪ್ರದೇಶದಲ್ಲಿ ಬೀಜದ ಕುದುರೆ ಸಾಕಿಕೊಂಡವನೊಬ್ಬ ದಿನಕ್ಕೆ ಮೂವತ್ತು ಸಾವಿರ ದುಡೀತಾನಂತೆ. ಕುದುರೆಯ ಪೌಷ್ಟಿಕ ಆಹಾರಕ್ಕೆ ದಿನಕ್ಕೆ ಮೂರು ಸಾವಿರ ಖರ್ಚುಮಾಡ್ತಾನಂತೆ. ಚೆನ್ನಾಗಿ ತಿನ್ನೋದು ಹೆಣ್ಣುಕುದುರೆ ಆಕಾರಕ್ಕೆ ನೆಗೆಯೋದು ಅದರ ಕೆಲಸ. ಅಲ್ಲಿರುವ ತಟ್ಟೆಯಲ್ಲಿ ಅದರ ವೀರ್ಯಾಣು ಸಂಗ್ರಹಗೊಂಡು, ತಕ್ಷಣವೇ ಶೀತಲೀಕರಣಗೊಂಡು ಮಾರುಕಟ್ಟೆಗೆ ಸಾಗುವುದಂತೆ. ವರ್ಷಕ್ಕೆ ಬೀಜದ ಕುದುರೆಯ ದುಡಿಮೆ ಹದಿನೈದು ಕೋಟಿಯಂತೆ!

ವೀರ್ಯಸನ್ಯಾಸದ ಹೋರಿಸ್ವಾಮಿಗಳಿಗೂ ತಾಲೀಬಾನಿ ಶಿಷ್ಯರು ಇಂತದ್ದೊಂದು [ತ್ರಿಪುರ ಸುಂದರಿಯ ಆಕಾರದ ಬೊಂಬೆ]ಏರ್ಪಾಟು ಮಾಡಿಕೊಟ್ಟಿದ್ದರೆ ಸಮಾಜದ ಮಹಿಳೆಯರು/ಹೆಣ್ಣುಮಕ್ಕಳು ನೆಮ್ಮದಿಯಿಂದ ಬದುಕಬಹುದಿತ್ತಲ್ಲವೇ? ಮಹಾಸಂಸ್ಥಾದವರು ಮುದ್ದಾಗಿ ಮಾತನಾಡುತ್ತ, ಹಲ್ಲುಕಿಸಿಯುತ್ತ, ಉದ್ದಿನವಡೆ ಮೆಲ್ಲುತ್ತ, ಎದ್ದಾಗ ಬೊಂಬೆಗೆ ಹಾರಿದರೆ , ಅದರೊಳಗೆ ತಟ್ಟೆ ಇಟ್ಟು ವೀರ್ಯ ಸಂಗ್ರಹಿಸಿ ತಾಲಿಬಾನಿ ಶಿಷ್ಯರು ವೀರ್ಯಾಣು ಕೇಂದ್ರಗಳಿಗೆ ಮಾರಿಕೊಳ್ಳಬಹುದಿತ್ತು. ಪ್ರಸಾದರೂಪದಲ್ಲಿ ತಮ್ಮ ಹೆಂಗಸರಿಗೂ ಹೆಣ್ನುಮಕ್ಕಳಿಗೂ ಕೊಡಬಹುದಿತ್ತು! ಅಲ್ಲವೇ? ಮಾರ್ವಾಡಿ ತಳಿಯ ಕುದುರೆ ವೀರ್ಯಕ್ಕೆ ಅಷ್ಟೆಲ್ಲ ಬೆಲೆ ಇರುವಾಗ ಉರುಳುಭಟ್ಟನ ತಳಿಯ ಕಳ್ಳಸನ್ಯಾಸಿಯ ವೀರ್ಯಕ್ಕೆ ಇನ್ನೆಷ್ಟಿರಬೇಡ?

“ಅಂದಹಾಗೆ ಹಳದೀ ಬಾವಯ್ಯ, ಮಲಬದ್ಧತೆ ಪ್ರದರ್ಶನದ ದಿನ ಹತ್ತಿರಕ್ಕೆ ಬಂದೋತು ನೋಡು. ಎಲ್ಲ ಬನ್ನಿ. ನೀನು ನಿಮ್ಮ ಮನೆಕಡೆ ಅಕ್ಕ ಪಕ್ಕ ಯಾರಾರೂ ಬರವಿದ್ರೆ ಹೇಳು, ಬಸ್ಸಿನ ವ್ಯವಸ್ಥೆ ಇದ್ದು ಮತೆ. ಬಂದು-ಹೋಗವರಿಗೆ ಯಂಗ್ಳದ್ದೇ ಜವಾಬ್ದಾರಿ ಮತೆ. ಪೈಸೆ ಖರ್ಚೂ ಮಾಡದ್ ಬ್ಯಾಡ. ಆ ದಿನ ಬಂದವ್ಕೆ ಯಂಗ್ಳೇ ಮಠದಿಂದ ಸುವರ್ಣ ಮಂತ್ರಾಕ್ಷತೆ ಕೊಡುಸ್ತ್ಯ. ಎಲ್ಲ ಬನ್ನಿ ಪ್ಲೀಸ್, ಸಿಕ್ದೋರ್ನೆಲ್ಲ ಕರ್ಕಂಡ್ ಬನ್ನಿ. ಸಂಖ್ಯೆ ….ಸಂಖ್ಯೆ ಜಾಸ್ತಿ ಆಗವು. ಮೀಡಿಯಾದಗೆಲ್ಲ ನಮ್ಮ ಹಾವಾಡಿಗ ಜಗದ್ಗುರು ಜಾಮೀನಾಂದೇಶ್ವರರಿಗೆ ಭಾರೀ ಬೆಂಬಲ ಇದ್ದು ಹೇಳಿ ಪ್ರಚಾರ ಆಯಕು ನೋಡು. ಬರಲಾ?”

Thumari Ramachandra

source: https://www.facebook.com/groups/1499395003680065/permalink/1685244238428473/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s